ಬೇರೆ ದಾರಿಯೇ ಇಲ್ಲ

ಒಂದು ಹಳ್ಳಿಯಲ್ಲಿ ಪರಿಶ್ರಮಿ  ರೈತನು ಒಂದು ಪಾರಿವಾಳವನ್ನು ಸಾಕಿರುತ್ತಾನೆ ಮಳೆ ಬರುವುದಿಲ್ಲ ಆದುದರಿಂದ ರೈತನ ಯೋಚನೆ ಮಾಡುತ್ತಾನೆ ನಾನೇ ಕಷ್ಟಪಡಬೇಕಾಗುತ್ತದೆ ಆದ್ದರಿಂದ ಪಾರಿವಾಳವನ್ನು ನಾನು ರಾಜರಿಗೆ ಕೊಟ್ಟರೆ ಅಲ್ಲಾದರೂ ನನ್ನ ಪಾರಿವಾಳ ಚೆನ್ನಾಗಿ ಬದುಕಲಿ ಎಂದು ಚಿಂತಿಸಿ ನೇರವಾಗಿ ರಾಜನ ಅರಮನೆಗೆ ಹೋಗಿ ಆ ಪಾರಿವಾಳವನ್ನುಅರ್ಪಿಸುತ್ತಾನೆ.  ಸ್ವಲ್ಪ ಯೋಚನೆ ಮಾಡಿ ರಾಜನು ಇರಲಿ ಎಂದು ಆ ಪಾರಿವಾಳವನ್ನು ಇಟ್ಟುಕೊಳ್ಳುತ್ತಾನೆ ರಾಜನು ಕೂಡ ಯೋಚನೆ ಮಾಡುತ್ತಾನೆ ಇಲ್ಲಿಂದ ಬೇರೆ ಕಡೆಗೆ ಸಂದೇಶವನ್ನು ಕಳಿಸಬೇಕಾದರೆ ಪಾರಿವಾಳ ನಮಗೆ ಉಪಯುಕ್ತವೆಂದು ತಿಳಿಯುತ್ತಾನೆ. … Read more

 ಮೌನ ಮುರಿದು ಹೋಯಿತು

ಒಂದು ಆಶ್ರಮಕ್ಕೆ ಧ್ಯಾನವನ್ನು ಕಲಿಯಲಿಕ್ಕೆ ಹಲವಾರು ಯುವಕರು ಬಂದರು ಗುರುಗಳು ಯುವಕರನ್ನು ಪ್ರೀತಿಯಿಂದ ಬರಮಾಡಿಕೊಂಡು ಆಶ್ರಮದ ನಿಯಮಗಳನ್ನು ತಿಳಿಸಿದರು  ನಂತರ ಒಂದು ಕೋಣೆಯಲ್ಲಿ 4ಜನರು ಮಾತ್ರ ಧ್ಯಾನ ಮಾಡಬೇಕು.  4 ಯುವಕರಲ್ಲಿ ಯಾರು ಕೂಡ ಮಾತನಾಡಬಾರದು ಮೊದಲು 7 ದಿನಗಳು ಮೌನವಾಗಿ ಇರಬೇಕು ಎಂದು ಹೇಳಿದರು ಅದರಂತೆಯೇ 4 ಯುವಕರು ಒಂದು ಕೊಠಡಿಯಲ್ಲಿ ಧ್ಯಾನಕ್ಕೆ ಕುಳಿತರು. 4 ಯುವಕರು ಪ್ರತಿಜ್ಞೆಮಾಡಿ ಚೌಕಾಕಾರದ ರೀತಿಯಲ್ಲಿ ಕುಳಿತುಕೊಂಡರು ಅದರಂತೆಯೇ ಮೌನವಾಗಿ ಇದ್ದರು 2 ದಿನಗಳು ಆದ ನಂತರ ಇವರು ಮೌನದಲ್ಲಿ … Read more

ನಾಳೆ ನಾನು ಏನೇನು ಮಾಡಬೇಕು?

ಒಬ್ಬ ಮನುಷ್ಯ ನಿದ್ದೆಯಿಂದ ಗಾಬರಿಯಾಗಿ ಏಳುತ್ತಿದ್ದನು ಇವನಿಗೆ ಒಂದು ಕನಸು ಬೀಳುತ್ತಿತ್ತು ಕನಸು ಯಾವ ರೀತಿ ಎಂದರೆ ಮರಳು ಗಾಡಿನಲ್ಲಿ ಎಲ್ಲಿಯೂ ಹಸಿರೂ ಇಲ್ಲ ಬರಿ ಮರಳು ಕಾಣಿಸುತ್ತಿತ್ತು ಯಾವ ಕಡೆ ನೋಡಿದರೂ ಬರೀ ಮರಳೆ ಮರಳಿನಲ್ಲಿ ಒಂದು ಜೊತೆ ಚಪ್ಪಲಿಗಳ ಗುರುತು ಇದೆ.  ಮುಂದೆ ನೋಡಿದರೆ ಎಲ್ಲಿಯೂ ಗುರುತುಗಳು ಸಿಗುತ್ತಿಲ್ಲ ಇವನಿಗೆ ಕನಸುಗಳು ಬರುತ್ತಿರುವುದರಿಂದ ಇವನ ನಿದ್ರೆ ಭಂಗವಾಗುತ್ತಿತ್ತು ತನ್ನ ಮನೆಯಲ್ಲಿ ಹೇಳಿದ ಗೆಳೆಯರಿಗೆ ಹೇಳಿದ ಆದರೂ ಇದಕ್ಕೆ ಅರ್ಥಗೊತ್ತಾಗುತ್ತಿಲ್ಲ ಕೊನೆಗೆ (ಕೌನ್ಸಿಲಿಂಗ್) ಆಪ್ತಸಲಹೆಗೆ ಹೋದನು. … Read more

ಹಡಗಿಗೆ ತೂತು ಮಾಡಿದನು

ಬಹಳಷ್ಟು ವರ್ಷಗಳ ಹಿಂದೆ ಈ ದೇಶದಿಂದ ವಿದೇಶಕ್ಕೆ ಹೋಗಬೇಕಾದರೆ ಹಡಗಿನಲ್ಲಿ ಮಾತ್ರ ಪ್ರಯಾಣಿಸಬೇಕಾಗಿತ್ತು  ಒಂದು ಸಾರಿ ಎಲ್ಲಾ ಪ್ರಯಾಣಿಕರು ಹಡಗಿನ ಒಳಗೆ ಬಂದರು ಪ್ರತಿಯೊಂದು ಧರ್ಮದವರು ಒಂದೊಂದು  ಕೊಠಡಿಯಲ್ಲಿ ಇರಲು ಆರಂಭಿಸಿದರು ಮುಸಲ್ಮಾನರು ಒಂದು ಕೊಠಡಿಯಲ್ಲಿ ಉಳಿದರು. ಮತ್ತೊಂದು ಕೊಠಡಿಯಲ್ಲಿ ಹಿಂದುಗಳು ಉಳಿದರು ಇನ್ನೊಂದು ಕೊಠಡಿಯಲ್ಲಿ ಕ್ರೈಸ್ತರು,  ಬೌದ್ಧರು, ಸಿಕ್ಕರು ,ಜೈನರು. ಹೀಗೆ ಒಂದೊಂದು ಧರ್ಮದವರು ಒಂದೊಂದು ಕೊಠಡಿಯಲ್ಲಿ ಉಳಿದರು ಪ್ರತಿಧರ್ಮದವರು ಅವರದೇ ಆದ ಆಚರಣೆಗಳನ್ನು ಆಚರಿಸುತ್ತಿದ್ದರು.  ಹಿಂದುಗಳು ಬ್ರಹ್ಮ ಮುಹೂರ್ತದಲ್ಲಿ ಎದ್ದು ಜಪ ಮಾಡುವುದು ಪ್ರಾರ್ಥನೆ … Read more

ಮೂರ್ಖರನ್ನೇ ಹುಡುಕುತ್ತಾರೆ

ಒಬ್ಬ  ಮೂರ್ಖ ರಾಜನು ಮಂತ್ರಿಗೆ ಹೇಳುತ್ತಾನೆ ಒಂದು ತಿಂಗಳಲ್ಲಿ 4 ಮೂರ್ಖರನ್ನು ಕರೆದುಕೊಂಡು ಬರಬೇಕು ಎಂದು ಆಜ್ಞೆ ಮಾಡುತ್ತಾನೆ ಅದಕ್ಕೆ ಮಂತ್ರಿ ಒಪ್ಪಿಕೊಂಡು ಒಂದು ತಿಂಗಳು ಕಳೆಯುತ್ತಿದ್ದಂತೆಯೇ ಇಬ್ಬರೂ ಮೂರ್ಖರನ್ನು ದರ್ಬಾರಿಗೆ ಕರೆದುಕೊಂಡು ಬರುತ್ತಾನೆ.   ರಾಜನು ಕೋಪದಿಂದ ಬರೀ ಎರಡು ಮೂರ್ಖರೇ ಇದ್ದಾರೆ ಎಂದು ಗದರಿಸುತ್ತಾನೆ ಆಗ ಮಂತ್ರಿ ನಾನು ವಿವರವಾಗಿ ಹೇಳುತ್ತೇನೆ ಒಬ್ಬ ಮನುಷ್ಯನನ್ನು ತೂರಿಸಿ ಇವನು ಮೊದಲನೆಯ ಮೂರ್ಖ ಏಕೆಂದರೆ ಕುದುರೆ ಗಾಡಿಯಲ್ಲಿ ಪ್ರಯಾಣ ಮಾಡುತ್ತಿರಬೇಕಾದರೆ ತನ್ನ ಲಗೇಜುಗಳನ್ನು ತಾನೇ ಹೊತ್ತುಕೊಂಡೂ ಇದ್ದನು.  ಇವನ … Read more

 ಹೆಚ್ಚಿನ ತೆರಿಗೆಯನ್ನು ವಿಧಿಸಿ

ಹಲವಾರು ಶತಮಾನಗಳ ಹಿಂದೆ ನಡೆದ ಕಥೆ ರಾಜ ವಿಶ್ರಾಂತಿ ಪಡೆಯುತ್ತಿದ್ದಾಗ ಯಾರೋ ವ್ಯಾಪಾರಿ ಹಣ್ಣು ಮಾರಿಕೊಂಡು ಹೋಗುವ ಶಬ್ದ ಕೇಳುತ್ತದೆ ಆಗ ರಾಜನು ತನ್ನ ಮಂತ್ರಿಯನ್ನು ಕರೆದು ಐದು ಚಿನ್ನದ ನಾಣ್ಯಗಳನ್ನು ಕೊಟ್ಟು ವ್ಯಾಪಾರಿಯಿಂದ ಹಣ್ಣುಗಳನ್ನು ಖರೀದಿ ಮಾಡಿ ಎಂದು ಕಳುಹಿಸುತ್ತಾನೆ.  ಐದು ನಾಣ್ಯದ ವ್ಯಕ್ತಿ ತನ್ನ ಕೈ ಕೆಳಗೆ ಇರುವ ವ್ಯಕ್ತಿಗೆ ನಾಲ್ಕು ನಾಣ್ಯ ಕೊಟ್ಟು ಹಣ್ಣನ್ನು ಖರೀದಿ ಮಾಡಿಕೊಂಡು ಬಾ ಎಂದು ಹೇಳುತ್ತಾನೆ ನಂತರ ನಾಲ್ಕು ನಾಣ್ಯದ ವ್ಯಕ್ತಿ ತನ್ನ ಕೈಕೆಳಗೆ ಇರುವವನನ್ನು ಮೂರು … Read more

ಇಬ್ಬರು ಜಗಳವಾಡಲಿ

ಒಂದು ಸಾರಿ ಒಂದು ಮತ್ಸರವುಳ್ಳ ಹೆಂಗಸು ಊರಿನ ಉತ್ಸವಕ್ಕೆ ಬರುತ್ತಾಳೆ ಈಗ ಫೋಟೋಗಳು ಇವೆ ಆದರೆ ಹಿಂದಿನ ಕಾಲದಲ್ಲಿ ಭಾವಚಿತ್ರಗಳು ಬೇಕು ಎಂದರೆ ಅವರಿಗೆ ಒಂದು ಕಡೆ ಕೂರಿಸಿ ಅವರು ಹೇಗಿದ್ದರೂ ಅದೇ ರೀತಿ ಭಾವ ಚಿತ್ರಗಳನ್ನು ಚಿತ್ರಿಸುತ್ತಿದ್ದರು.  ಈ ಹೆಂಗಸು ನನ್ನ ಚಿತ್ರವನ್ನು ಚಿತ್ರಿಸಿ ಎಂದು ಹೇಳಿದಳು ಅದಕ್ಕೆ ಚಿತ್ರ ಬಿಡಿಸುವವನು ಚೆನ್ನಾಗಿ ಚಿತ್ರಿಸಿದನು ನಂತರ ಹೆಂಗಸು ನನ್ನ ಕೊರಳಿಗೆ ಒಂದು ಮುತ್ತಿನ ಹಾರವನ್ನು, ಕಿವಿಗೆ ಓಲೆ ಮತ್ತು ಬೆರಳಿನಲ್ಲಿ ಉಂಗುರವನ್ನು ಚಿತ್ರಿಸಿ ಎಂದು ಕೇಳಿಕೊಂಡಳು … Read more

 ನಾನು ಅನಾಥನಾಗಿದ್ದೇನೆ

ಆಶ್ರಮದಲ್ಲಿ ಒಬ್ಬರು ಗುರುಗಳು ಇದ್ದರು ಆ ಆಶ್ರಮಕ್ಕೆ ಹಲವಾರು ಭಕ್ತರು ಬರುತ್ತಿದ್ದರು ಒಂದು ಸಾರಿ ಒಬ್ಬ ಭಕ್ತ ಬಂದು ಹೋಗಿದ್ದನು ನಂತರ ಆಶ್ರಮಕ್ಕೆ ಆಗಾಗ ಕಾಗದಗಳು ಬರುತ್ತಿದ್ದವು ನಾನು ಈಗ ವಿದ್ಯಾರ್ಥಿಯಾಗಿದ್ದೇನೆ ನನಗೆ ಈ ಸಾರಿ ಪಾಸ್ ಆಗಬೇಕು ಚೆನ್ನಾಗಿ ಬರಿದಿದ್ದೇನೆ.  ದಯವಿಟ್ಟು ನನಗೆ ಪಾಸ್ ಆಗುವುದಕ್ಕೆ ಆಶೀರ್ವದಿಸಿ ಮತ್ತೆ ಕೆಲವು ದಿನಗಳ ನಂತರ ನನಗೆ ಒಂದು ಒಂದು ಒಳ್ಳೆಯ ಕೆಲಸ ಸಿಕ್ಕಿದರೆ ಸಾಕು ಅದಕ್ಕೆ ಆಶೀರ್ವಾದ ಮಾಡಿ ಮತ್ತೆ ಕೆಲವು ದಿನಗಳ ನಂತರ ಕಾಗದ ಬಂತು … Read more

ಗೆಲ್ಲಲಿಕ್ಕೆ ತಾಕತ್ತು ಇದೆಯೇ?

ಒಂದು ಸಾರಿ ಒಬ್ಬ ಚಾಣಾಕ್ಷ ಕಳ್ಳ ಒಂದು ಮನೆಯೊಳಗೆ ನುಗ್ಗಿ ತನಗೆ ಬೇಕಾಗುವಂತಹ ಬೆಲೆ ಇರುವಂತಹ ವಸ್ತುಗಳೆಲ್ಲವೂ ಒಂದು ಚೀಲಕ್ಕೆ ಹಾಕುತ್ತಿದ್ದನು ಸುತ್ತ ಎಲ್ಲ ಕಡೆ ನೋಡಿದರೆ ಹಲವಾರು ಪ್ರಶಸ್ತಿಗಳು ಪದಕಗಳು ಇದ್ದವು.  ಏನಾದರೂ ಇರಲಿ ನನಗೇನು ಎಂದು ಕಳ್ಳ ತನಗೆ ಬೇಕಾದ್ದನ್ನು ಎಲ್ಲಾ ಚೀಲಕ್ಕೆ ಹಾಕಿಕೊಂಡು ಇನ್ನೇನು ಹೊರಡಲು ಸಿದ್ಧನಾದನು ಅಷ್ಟರಲ್ಲಿ ಆ ಮನೆಯವನು ಎದ್ದನು ಕಳ್ಳ ಓಡುತ್ತಿದ್ದಾನೆ ಹಿಂದೆ ಮಾಲೀಕ ಓಡಿ ಬಂದ ಮಾಲೀಕನ ಓಟ ನೋಡಿದರೆ ಕಳ್ಳನಗಿಂತ ವೇಗವಾಗಿ ಓಡಲಾರಂಭಿಸಿದ ಆಗ ಕಳ್ಳ … Read more

ಕಾಲು ಜಾರಿ ಬಿದ್ದನು

ಒಲಿಂಪಿಕ್ ಕ್ರೀಡೆಗಳು ನೋಡಿದ್ದೀರಾ ಅದರಲ್ಲಿ ಹಲವಾರು ಸ್ಪರ್ಧೆಗಳು ಇರುತ್ತವೆ ಇದನ್ನು ನೋಡಲು ಲೆಕ್ಕವಿಲ್ಲದಷ್ಟು ಜನ ನೋಡುತ್ತಾರೆ ಇದು 4ವರ್ಷಕ್ಕೆ ಒಮ್ಮೆ ನಡೆಯುತ್ತದೆ ಆ ಕಾಲಕ್ಕೆ ಆ ರೀತಿಯ ಸ್ಪರ್ಧೆಗಳು ನಡೆಯುತ್ತದೆ ನೂರು ಮೀಟರ್ ಓಟದ ಸ್ಪರ್ಧೆ ಇತ್ತು ಇದು ವಿಶೇಷವಾಗಿ ಆಯೋಜಿಸಲಾಗಿತ್ತು.  ವಿಶೇಷ ಚೇತನ ಇರುವ ಮಕ್ಕಳು ಎಲ್ಲಾ ಮಕ್ಕಳು ಓಡಲಿಕ್ಕೆ ಸಿದ್ಧರಾದರು ಸ್ಪರ್ಧೆ ಎಂದರೆ ಎಲ್ಲರೂ ಗೆಲ್ಲಲೇ ಬೇಕು ಎಂದು ಯೋಚಿಸುವುದು ಸಹಜ ಹಾಗೆ ಎಲ್ಲರಲ್ಲೂ ತುಂಬ ಉತ್ಸಾಹ ಕಳೆ ಇತ್ತು ಸನ್ನೆ ಮಾಡಿದಾಗ ಎಲ್ಲರೂ … Read more