Self Educatin – babakategalu.com https://babakategalu.com Mon, 10 Mar 2025 18:59:37 +0000 en-US hourly 1 https://wordpress.org/?v=6.7.2 ಸರಿಯಾಗಿ ಕಾಲ ತೊಳದಿಲ್ಲ https://babakategalu.com/%e0%b2%b8%e0%b2%b0%e0%b2%bf%e0%b2%af%e0%b2%be%e0%b2%97%e0%b2%bf-%e0%b2%95%e0%b2%be%e0%b2%b2-%e0%b2%a4%e0%b3%8a%e0%b2%b3%e0%b2%a6%e0%b2%bf%e0%b2%b2%e0%b3%8d%e0%b2%b2/ https://babakategalu.com/%e0%b2%b8%e0%b2%b0%e0%b2%bf%e0%b2%af%e0%b2%be%e0%b2%97%e0%b2%bf-%e0%b2%95%e0%b2%be%e0%b2%b2-%e0%b2%a4%e0%b3%8a%e0%b2%b3%e0%b2%a6%e0%b2%bf%e0%b2%b2%e0%b3%8d%e0%b2%b2/#respond Tue, 11 Mar 2025 04:40:00 +0000 https://babakategalu.com/?p=205 Read more]]> ಒಂದು ಊರಿನಲ್ಲಿ 2 ಮಹಿಳೆಯರು ಬರುತ್ತಾರೆ ಮೊದಲ ಮಹಿಳೆ ದೂರನ್ನು ಹೇಳುತ್ತಾಳೆ ಇನ್ನೊಂದು ಮಹಿಳೆ ನನಗೆ ನೂರು ಬಂಗಾರದ ನಾಣ್ಯಗಳನ್ನು ಕೊಡಬೇಕು ಎಂದು ಆ ಮಹಿಳೆ ಹೇಳುತ್ತಾಳೆ.

 ನಾನು ಇವರಿಗೆ ಯಾವುದೇ ರೀತಿಯ ಹಣವನ್ನು ಕೊಡಬೇಕಾಗಿಲ್ಲ ಆಗ ಮೊದಲನೇ ಮಹಿಳೆ ಹೇಳುತ್ತಾಳೆ ಈ ರೀತಿ ಆಗುತ್ತದೆ ಎಂದರೆ ನಾನು ಏನಾದರೂ ಬರೆಸಿಕೊಳ್ಳುತ್ತಿದ್ದೆ ಎಂದು ಹೇಳುತ್ತಾಳೆ   ಇಬ್ಬರ ಮಾತುಗಳನ್ನು ಕೇಳಿದಾಗ ಯಾವ ಮಹಿಳೆ ಒಳ್ಳೆಯವಳು ಯಾರೂ ಮೋಸಗಾರಳು ಎಂದು ತಿಳಿಯುವುದು ಬಹಳ ಕಷ್ಟವಾಯಿತು.

 ಈ ಸಮಸ್ಯೆಯನ್ನು ಬಗೆ ಹರಿಸುವುದು ಹೇಗೆ ಎಂದು ರಾಜನು ಯೋಚಿಸಿದ ನಂತರ ರಾಜನು ಬಾಬಾ ಅವರನ್ನು ಕರೆಸಿದ ಬಾಬಾ ಅವರು ಇಬ್ಬರನ್ನು ಕೂಲಂಕುಷವಾಗಿ ಪರೀಕ್ಷಿಸಿ ನಾಳೆ ನಿಮಗೆ ನಿಮ್ಮ ನಾಣ್ಯಗಳು ಸಿಗುತ್ತದೆ ಹೇಳಿ ಕಳಿಸಿದರು ನಂತರ ನಾಲ್ಕು ಕಾವಲುಗಾರರನ್ನು ಕಳುಹಿಸಿ ಇವರು ಎಲ್ಲಿ ಹೋಗುತ್ತಾರೆ ನೋಡಿ ಎಂದು ಇಬ್ಬರು ಕೂಡ ಒಂದೇ ಹಳ್ಳಿಗೆ ಹೋದರು.

 ಇದನ್ನು ಗುರುತಿಸಿಕೊಂಡು ಬಂದರು ಬಾಬಾ ಅವರು ಹೇಳಿದರು ಇವರು ಬರುವ ದಾರಿಯಲ್ಲಿ ಕೆಸರು ಇರುವಂತೆ ಮಾಡಿ ನೀರು ಹಾಕಿ ನಂತರ ಹೆಂಗಸರು ಸಭೆಗೆ ಬರಬೇಕಾದರೆ ಕಾಲು ತೊಳೆದುಕೊಂಡೇ ಬರಬೇಕು ಈ ರೀತಿ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.

 ಅದೇ ರೀತಿ ಇಬ್ಬರ ಕಾಲುಗಳು ಕೆಸರಾಯಿತು ಇಬ್ಬರೂ ಕೂಡ ನೀರಿನಿಂದ ಕಾಲು ತೊಳೆದುಕೊಂಡು ಬಂದರು ಬಾಬಾ ಅವರು ಗಮನಿಸಿ ಮೊದಲನೇ ಅವಳನನ್ನು ಕೇಳಿದರೂ ನೀನೇ ನೂರು ವರಹಗಳನ್ನು ಕೊಟ್ಟಿಲ್ಲ ಸರಿಯಾಗಿ ಹೇಳು ಇಲ್ಲದಿದ್ದರೆ ಜೈಲಿಗೆ ಕಳಿಸುತ್ತೇನೆಂದು ಹೇಳಿದಾಗ ಸತ್ಯವನ್ನು ಒಪ್ಪಿಕೊಂಡಳು.

 ಆಗ ರಾಜನಿಗೆ ಆಶ್ಚರ್ಯವಾಯಿತು ನೀವು ಹೇಗೆ ಇದನ್ನು ಕಂಡು ಹಿಡಿದಿದ್ದೀರಿ ಎಂದಾಗ ಬಾಬಾ ಅವರು ಹೇಳಿದರು ಮೊದಲನೆಯವಳು ಬರಬೇಕಾದರೆ ಕಾಲು ಕೆಸರಾಗಿತ್ತು ಅವಳು ಸರಿಯಾಗಿ ಕಾಲು ತೊಳೆದಿಲ್ಲ ಮತ್ತೆ ಇರೋ ಎಲ್ಲಾ ನೀರನ್ನು ಖರ್ಚುಮಾಡಿದ್ದಾಳೆ.

 ಎರಡನೆಯವಳು ಕಾಲು ಕೂಡ ಚೆನ್ನಾಗಿ ತೊಳೆದು ಕೊಂಡಿದ್ದಾಳೆ ನೀರನ್ನು ಕೂಡ ಸ್ವಲ್ಪವೇ ಖರ್ಚು ಮಾಡಿದ್ದಾಳೆ ಮೊದಲನೆಯವಳು ಅಂದಗಾತಿ ಮೋಸಗಾತಿ ಎರಡನೆಯವಳು ಅವಳು ಅವಳ ದುಡಿಮೆಯಲ್ಲಿ ಮಾತ್ರ ಬದುಕುವವಳು ಆದುದರಿಂದ ನಾನು ಹೀಗೆ ಕಂಡು ಹಿಡಿದೆನು ಎಂದು ಹೇಳಿದರು.

 ಆಗ ರಾಜನಿಗೆ ಸಂತೋಷವಾಗುತ್ತದೆ ಕೆಲವೊಂದು ಸಾರಿ ಕೆಲವು ಸಮಸ್ಯೆಗಳನ್ನು ಬಗೆಹರಿಸುವುದು ಕಷ್ಟ ನಿಧಾನವಾಗಿ ಕೂಲಂಕುಶವಾಗಿ ನೋಡಿದಾಗ ಆ ಸಮಸ್ಯೆ ಏನೆಂದು ಅರಿಯಬಹುದು.

ಗ್ರಾಹಕರಿಗೆ ಇಷ್ಟವಾಗುವಂತಹ

ಒಬ್ಬ ಯುವಕ ಬಾಬಾ ಅವರ ಆಶ್ರಮಕ್ಕೆ ಹೋಗಿ ಬಾಬಾ ಅವರಿಗೆ ಹೇಳಿದನು ಬಾಬಾ ಅವರೇ ನಾನು ಕೆಲಸ ಹುಡುಕುತ್ತಿದ್ದೇನೆ ನಿಮಗೆ ಗೊತ್ತಿರುವವರು ಯಾರಾದರೂ ಇದ್ದರೆ ಹೇಳಿ ನಾನು ಕೆಲಸ ಮಾಡುತ್ತೇನೆ ಎಂದಾಗ ಬಾಬಾ ಅವರು ಊರಿನ ಮಧ್ಯೆ ದೊಡ್ಡ ಅಂಗಡಿ ಇದೆಯಲ್ಲ ಅಲ್ಲಿ ಹೋಗಿ ಕೆಲಸ ಕೇಳು ನಿನಗೆ ಕೆಲಸ ಸಿಗುತ್ತದೆ ಎನ್ನುತ್ತಾರೆ ಆಗ ಯುವಕ ಹೇಳುತ್ತಾನೆ.

 ನಾನು ಹೋದ ವಾರದಲ್ಲಿ ನೋಡಿದ್ದೀನಿ ಅಲ್ಲಿ ಒಬ್ಬ ಒಳ್ಳೆಯ ಆಕರ್ಷಕ ವ್ಯಕ್ತಿತ್ವ ಇರುವ ಯುವಕ ಅಲ್ಲಿ ಕೆಲಸ ಮಾಡಿಕೊಂಡು ಇದ್ದಾನೆ ನೋಡುವುದಕ್ಕೆ ಚೆನ್ನಾಗಿದ್ದಾನೆ ಮಾತು ಕೂಡ ಚೆನ್ನಾಗಿ ಆಡುತ್ತಾನೆ ಅವನನ್ನು ತೆಗಿಯುತ್ತಾರೆಯೇ ಎಂದು ಹೇಳಿದನು ಆಗ ಬಾಬಾ ಅವರು ನೀನು ಹೇಳಿದ ಹಾಗೆ ಅವನು ತುಂಬಾ ಸುಂದರವಾಗಿದ್ದಾನೆ ಚೆನ್ನಾಗಿ ಮಾತನಾಡುತ್ತಾನೆ ಆದರೆ ಅವನು ಗ್ರಾಹಕರಿಗೆ ಇಷ್ಟವಾಗುವಂತಹ ವಸ್ತುಗಳನ್ನು ತರುತ್ತಿಲ್ಲ.

 ಅ ಯುವಕ ಶ್ರೀಮಂತ ಕುಟುಂಬದಿಂದ ಬಂದಿದ್ದಾನೆ   ತನ್ನ ಮಟ್ಟದಲ್ಲಿಯೇ ಆಲೋಚನೆ ಮಾಡುತ್ತಾನೆ ಗ್ರಾಹಕರ ಮಟ್ಟದಲ್ಲಿ ಆಲೋಚನೆ ಮಾಡುತ್ತಿಲ್ಲ ಇದರಿಂದಾಗಿ ಆ ಅಂಗಡಿಯೂ ಲಾಭದಲ್ಲಿ ನಡೆಯುತ್ತಿಲ್ಲ ನೀನು ಅಲ್ಲಿಗೆ ಹೋದ ಮೇಲೆ ಗ್ರಾಹಕರು ಇಷ್ಟಪಡುವಂತಹ ವಸ್ತುಗಳನ್ನು ಇಡಬೇಕು ಆಗ ವ್ಯಾಪಾರವು ಚೆನ್ನಾಗಿ ನಡೆಯುತ್ತದೆ ಎಂದು ಹೇಳುತ್ತಾರೆ.

 ಈ ಯುವಕನು ಹೋಗಿ ಗ್ರಾಹಕರಿಗೆ ಇಷ್ಟವಾಗುವಂತಹ ವಸ್ತುಗಳನ್ನೇ ತರುತ್ತಾನೆ ಹೆಚ್ಚಾಗಿ ಮಾರಾಟವಾಗುತ್ತದೆ ಲಾಭವು ಬರುತ್ತದೆ.

ಅದೇ ವಾಣಿ ಕೇಳಿಸಿತು

ಒಂದು ತುಂಬಾ ಹಳೆಯ ಊರು ಅದರಲ್ಲಿ ಮೂರು ಗುರುಗಳು ಇದ್ದರು ಒಬ್ಬೊಬ್ಬರು ಅವರದೇ ಆದ ಮಾರ್ಗವನ್ನು ಅನುಸರಿಸುತ್ತಿದ್ದರು. ಈ ಮೂರೂ ಗುರುಗಳಲ್ಲಿಯೂ ಕರುಣೆ ವಿದ್ಯೆ ಜ್ಞಾನ ಎಲ್ಲವೂ ಇತ್ತು ಆದರೆ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ದ್ವೇಷ ಹೀಗೆ ಬಹಳಷ್ಟು ಕಾಲ ಹೀಗೆ ಬದುಕಿದರು.

ಗುರುಗಳಿಂದ ಎಲ್ಲಾ ಜನರು ಸುಖ ಸಂತೋಷ ನೆಮ್ಮದಿ ಪಡುತ್ತಿದ್ದರು ಈ ಗುರುಗಳಿಗೆ ಎಲ್ಲರೂ ಸನ್ಮಾನಗಳನ್ನು ಮಾಡುತ್ತಿದ್ದರು ಇವರು ಯಾವುದೇ ಕಾರಣಕ್ಕೂ ಒಬ್ಬರು ಇನ್ನೊಬ್ಬರೊಂದಿಗೆ ಭೇಟಿಯಾಗಲೇ ಇಲ್ಲ ಹೀಗೆ ಕಾಲ ಕಳೆದಂತೆ ಗುರುಗಳಿಗೂ ತುಂಬಾ ವಯಸ್ಸಾಯಿತು.

 ಏನೋ ಕಾರಣದಿಂದ ಊರಿನ ಹೊರಗೆ ಬರಬೇಕಾದರೆ ಮಳೆ ಜೋರಾಗಿ ಬರುತಿತ್ತು ಆಗ ಒಬ್ಬ ಗುರುಗಳು ಬಂದು ಅಲ್ಲೇ ನಿಂತರು ನಂತರ ಇನ್ನೊಬ್ಬರು ನೋಡಿದಾಗ ಅವರು ಮಳೆಯಲ್ಲಿ ನೆನೆಯುತ್ತಾರಲ್ಲ ಎಂದು ಬರಮಾಡಿಕೊಂಡರು.

 ಸ್ವಲ್ಪ ಸಮಯದ ನಂತರ ಇನ್ನೊಬ್ಬರು ಗುರುಗಳು ಬಂದರು ಇಬ್ಬರೂ ಇನ್ನೊಬ್ಬರಿಗೆ ನೋಡಿದರು ಮಳೆಯಲ್ಲಿ ನೆನೆಯುತ್ತಾರೆ ಎಂದು ಇಬ್ಬರೂ ಆದರದಿಂದ ಬರಮಾಡಿಕೊಂಡರು ಇವರಿಬ್ಬರೂ ಕೂಡ ಇನ್ನೊಬ್ಬರಿಗೆ ಸ್ಥಳವನ್ನು ಮಾಡಿಕೊಟ್ಟರು.

 ಗುರುಗಳಲ್ಲಿ ದಯಾಗುಣ ಕರುಣೆ ಇದೆ ಆದರೆ ಮೂರು ಗುರುಗಳಿಗೂ ಗೊತ್ತಿಲ್ಲ ಪಕ್ಕದವನು ಯಾರು ಎಂದು ತಿಳಿಯಲಿಲ್ಲ  ಒಂದು ಸಾರಿ ಜೋರಾಗಿ ಸಿಡಿಲು ಬಡಿದಾಗ ಬೆಳಕು ಬಂತು ಆಗ ನೋಡಿದರೆ ಮೂವರು ಗುರುಗಳು ಒಂದೇ ಕಡೆ ಇದ್ದಾರೆ.

 ಇದು ಪ್ರಕೃತಿಯ ವಿಸ್ಮಯವಿರಬಹುದು ನಂತರ ಇನ್ನೊಂದು ಸಿಡಿಲು ಬಂದಾಗ ಇವರು ಯಾರನ್ನು ದೇವರು ಎಂದು ನಂಬಿದ್ದರು ಅದೇ ವಾಣಿ ಕೇಳಿಸಿತು ಸೂರ್ಯ ಒಂದೇ, ಚಂದ್ರ ಒಂದೇ, ಹಾಗೆ ಜಗತ್ತಿನಲ್ಲಿ ದೇವರು ಕೂಡ ಒಬ್ಬನೇ ಆದರೆ ನಾವು ಹಲವಾರು ಮಾರ್ಗಗಳಿಂದ ನೋಡುತ್ತೇವೆ ಅಷ್ಟೆ ಎಂದು ಕೇಳಿಸಿತು.

 ನಂತರ ಮೂವರು ಕೂಡ ಆಲಂಗಿಸಿಕೊಂಡರು ಸೂರ್ಯ ಚಂದ್ರ ಒಬ್ಬನೇ ಇರುವ ಹಾಗೆ ದೇವರು ಒಬ್ಬನೇ ಹೆಸರುಗಳು ಮಾತ್ರ ಬೇರೆ ಬೇರೆಯಾಗಿಯೇ ಇರುತ್ತವೆ ಎಂದು ಅರ್ಥಮಾಡಿಕೊಂಡರು.

 ನನ್ನ ಪ್ರಶಸ್ತಿಗೆ ಕಾರಣ

ಒಂದು ಕಂಪನಿಯಲ್ಲಿ ಇಬ್ಬರು ಯುವಕರು ಅಜಯ್ ವಿಜಯ್ ಎಂಬುವರು ಕೆಲಸಕ್ಕೆ ನಾಯಕರಾಗಿ ಸೇರುತ್ತಾರೆ ಇಬ್ಬರೂ ಕೂಡ ತುಂಬಾ ಚೆನ್ನಾಗಿ ಹಗಲು ರಾತ್ರಿ ಎನ್ನದೆ ಊಟ ತಿಂಡಿ ಮರೆತು  ಶ್ರಮಪಟ್ಟು ಕೆಲಸ ಮಾಡುತ್ತಾರೆ ಶ್ರಮ ಪಟ್ಟಿದ್ದರಿಂದ ಕಂಪನಿಗೆ ಹೆಚ್ಚು ಲಾಭ ಬರುತ್ತದೆ ಆಗ ಇಬ್ಬರನ್ನು ಕರೆದು ಪ್ರಶಸ್ತಿ ಪತ್ರ ನೀಡುತ್ತಾರೆ.

ನಾಯಕರಿಗೆ ಹೇಳುತ್ತಾರೆ ನೀವು ಯಾವ ರೀತಿ ಸಾಧನೆ ಮಾಡಿದ್ದೀರಿ ಎಂದು ಹೇಳಿ ಎಂದಾಗ ಅಜಯ್ ಎಂಬ ನಾಯಕನು ಹೇಳುತ್ತಾನೆ ನಾನು ಈ ಕಂಪನಿಗೆ ಬಂದು ಸೇರಿದಾಗ ಸೇಲ್ಸ್ ಮ್ಯಾನ್ ಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿರಲಿಲ್ಲ. ನಾನು ಅವರಿಗೆ ಸರಿಯಾದ ಮಾರ್ಗದರ್ಶನ ನೀಡಿದೆ ಕಂಪನಿಯ ವ್ಯವಸ್ಥೆಯನ್ನು ನಾನು ಸರಿಪಡಿಸಿದೆ ಇದರಿಂದ ಹೆಚ್ಚು ವಸ್ತುಗಳು ವ್ಯಾಪಾರ ಆದವು ಪ್ರತಿಯೊಂದು ಹಂತದಲ್ಲಿಯೂ ನಾನು ಸರಿಪಡಿಸಿದೆ ನಾನು ನಾನು ಎಂದು ಹೇಳಿದನು.

 ನಂತರ ವಿಜಯ್ ಗೆ ಕರೆದರು ವಿಜಯ್ ಎದ್ದುನಿಂತು ನನಗೆ ಪ್ರಶಸ್ತಿ ಬಂದದ್ದಕ್ಕೆ ಕಾರಣ ನನ್ನ ತಂಡದವರು ದಯಮಾಡಿ ನನ್ನ ತಂಡದವರರು ಎಲ್ಲರೂ ನಿಲ್ಲಬೇಕು ಎಂದು ಹೇಳಿ ಎಲ್ಲರನ್ನೂ ನಿಲ್ಲಿಸಿ ಇಂದು ನಾನು ಈ ಪ್ರಶಸ್ತಿಗೆ ಕಾರಣ ನನ್ನ ತಂಡದವರು ಇವರು ಕಷ್ಟಪಟ್ಟಿದ್ದಕ್ಕೆ ನಾನು ಈ ಪ್ರಶಸ್ತಿ ಪಡೆದಿದ್ದೇನೆ.

 ಈ ಪ್ರಶಸ್ತಿ ಸೇರಬೇಕಾದದ್ದು ನನ್ನ ತಂಡದವರಿಗೆ ಎಂದು ಹೇಳುತ್ತಾನೆ ನಾನು ಒಬ್ಬನೇ ಕಾರಣವಾಗಲು ಸಾಧ್ಯವಿಲ್ಲ ನನ್ನ ನೆರವಿಗೆ ಬಹುತೇಕ ಜನರು ಬಂದಿದ್ದಾರೆ ಎಲ್ಲರಿಗೂ ಧನ್ಯವಾದಗಳು ಎಂದು ಹೇಳುತ್ತಾನೆ ಆಗ ವಿಜಯ್ ತಂಡದವರು ಎಲ್ಲರೂ ಸಂತೋಷ ಪಡುತ್ತಾರೆ.

 ಇನ್ನು ಹೆಚ್ಚಾಗಿ ಎಲ್ಲರೂ ಸೇರಿ ಕಷ್ಟಪಡುತ್ತಾರೆ ನಾವು ಇನ್ನೂ ಹೆಚ್ಚಾಗಿ ಬೆಳೆಯಬೇಕಾದರೆ ನಮ್ಮ ತಂಡದವರುೊಂದಿಗೆ ಸೇರಿ ಇನ್ನಷ್ಟು ಬೆಳೆಯಬಹುದು ಅವರಿಗೂ ಗೌರವಿಸಬೇಕು ಆಗ ಇನ್ನಷ್ಟು ಬೆಳೆಯಬಹುದಾಗಿದೆ. ಎಲ್ಲರಿಗೂ ನಾನು ಗೌರವಿಸುತ್ತೇನೆಯೇ?

ತನ್ನ ಯೋಚನೆಯನ್ನು ಬದಲಿಸಿದ

ಪರಿಶ್ರಮಿ ರೈತನು ಈರುಳ್ಳಿಯನ್ನು ಬೆಳೆಯುತ್ತಿದ್ದನು ಊರಿನಲ್ಲಿಯೂ ಒಳ್ಳೆಯ ಹೆಸರು ಪಡೆದಿದ್ದನು  ವ್ಯಾಪಾರಿ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಮಾಡಿದನು ಮಾರುಕಟ್ಟೆಗೆ ಯಾರು ಬೇಗ ತೆಗೆದುಕೊಂಡು ಹೋಗುತ್ತಾರೋ ಅವರಿಗೆ ಹೆಚ್ಚಿನ ಬೆಲೆ ಕೊಡುತ್ತಾರೆ.

 ಈರುಳ್ಳಿಯಲ್ಲಿ ಒಂದು ಸಮಸ್ಯೆ ಏನು ಎಂದರೆ ಚಿಕ್ಕ ಈರುಳ್ಳಿಗಳನ್ನು ವಿಂಗಡಿಸಬೇಕು ಬೇರೆ ಮಾಡಬೇಕು ಮೀಡಿಯಂ ಆಗಿ ಇರುವಂತದ್ದು ಬೇರೆ ಮತ್ತೆ ದಪ್ಪವಾಗಿ ಇರುವುದನ್ನು ಬೇರೆಯೇ ಇಡಬೇಕು ಇದು ತುಂಬಾ ಕಷ್ಟದ ಕೆಲಸ ಏಕೆಂದರೆ ಸ್ವಲ್ಪವಾಗಿ ಇರುವುದಿಲ್ಲ ಟನ್ನುಗಟ್ಟಲೆ ಇರುತ್ತದೆ.

ಈರುಳ್ಳಿಗಳನ್ನು ವಿಂಗಡಿಸುವುದಕ್ಕೆ ಹೆಚ್ಚು ಸಮಯವನ್ನು ವ್ಯಯ ಮಾಡುತ್ತಿರುತ್ತಾರೆ ಏನೇ ಆದರೂ ಈ ರೈತ ಎಲ್ಲರಿಗಿಂತ ಮೊದಲು ಹೋಗಿ ವ್ಯಾಪಾರ ಮಾಡಿ ಬರುತ್ತಿದ್ದ ಇದು ಹೇಗೆ ಸಾಧ್ಯವಾಯಿತು ಎಂದು ಬೇರೆ ರೈತರು ಗಮನಿಸುತ್ತಿದ್ದರು ಆದರೆ ಇವನು ವಿಂಗಡನೆ ಮಾಡುತ್ತಿರಲಿಲ್ಲ ಎಲ್ಲರೂ ವಿಂಗಡನೆ ಮಾಡುತ್ತಿದ್ದರು.

ಮಾರಬೇಕಾದರೆ ಮಾತ್ರ ರೈತನದು  ಈರುಳ್ಳಿ ವಿಂಗಡನೆ ಆಗಿ ಇರುತ್ತಿತ್ತು ಇದರ ಗುಟ್ಟು ಏನೆಂದು ಹಿಂಬಾಲಿಸಿ ನೋಡಿದಾಗ ರೈತನು ಎಲ್ಲಾಈರುಳ್ಳಿ ಲಾರಿಯಲ್ಲಿ ಹಾಕುತ್ತಿದ್ದಾಗ ಎಲ್ಲವೂ ಸೇರಿಸಿ ಹಾಕುತ್ತಿದ್ದ ಮಾರುಕಟ್ಟೆಗೆ ಬರುವವರೆಗೆ ಎಲ್ಲಾ ವಿಂಗಡಣೆಯಾಗಿ ಇರುತ್ತಿತ್ತು.

ಕೆಲವು ರಸ್ತೆಗಳು ಅಷ್ಟೊಂದು ಚೆನ್ನಾಗಿ ಇರುವುದಿಲ್ಲ ಆದುದರಿಂದ ಹೆಚ್ಚಾಗಿ ಹಂಪ್ ಹಳ್ಳಗಳು ಜಾಸ್ತಿ ಇರುತ್ತದೆ ಲಾರಿಯೂ ಜಂಪ್ ಆಗುತ್ತದೆ ಆಗ ಈರುಳ್ಳಿಗಳು ತಾವಾಗಿಯೇ ದೊಡ್ಡದು ಚಿಕ್ಕದು ಬೇರೆಬೇರೆಯಾಗುತ್ತದೆ ರೈತನು ಈರುಳ್ಳಿಯನ್ನು ಮೂಟೆಯಲ್ಲಿ ತುಂಬಿಸುತ್ತಿದ್ದನು

ಚಿಕ್ಕ ಈರುಳ್ಳಿಗಳೆಲ್ಲವೂ ಬೇಗ ಬೇಗ ಮೇಲಕ್ಕೆ ಬರುತ್ತಿದ್ದವು ದೊಡ್ಡ ದೊಡ್ಡ ಈರುಳ್ಳಿಗಳು ಹಾಗೆ ಮೂಲೆಯಲ್ಲಿ ಸೇರುತಿದವು ರೈತನಿಗೆ ಈರುಳ್ಳಿ ವಿಂಗಡಣೆಯ ಖರ್ಚು ಕೂಡ ಉಳಿಯುತ್ತಿತ್ತು ಹಾಗೆಯೇ ಸಮಯವು ಉಳಿಯುತ್ತಿತ್ತು.

 ರೈತನು ಮಾಡಿದ್ದು ಇಷ್ಟೇ ತನ್ನ ಯೋಚನೆಯನ್ನು ಬದಲಿಸಿದ ವಿಮರ್ಶಾತ್ಮಕವಾಗಿ ಚಿಂತಿಸಿದನು ಕೆಲವು ಕ್ಷೇತ್ರಗಳಲ್ಲಿ ಕೆಲವು ಸಮಸ್ಯೆಗಳು ಬಂದಾಗ ವಿಮರ್ಶಾತ್ಮಕವಾಗಿ ಯೋಚಿಸಿ ಪರಿಹಾರ ಕಂಡುಕೊಳ್ಳೋಣ. ನಾನು ಯೋಚನೆ ಬದಲಿಸಿ ನನ್ನ ಕಷ್ಟವಾಗಿರುವ ಕೆಲಸವನ್ನು ಸುಲಭ ಮಾಡಿಕೊಂಡಿದ್ದೇನೆಯೇ?

]]>
https://babakategalu.com/%e0%b2%b8%e0%b2%b0%e0%b2%bf%e0%b2%af%e0%b2%be%e0%b2%97%e0%b2%bf-%e0%b2%95%e0%b2%be%e0%b2%b2-%e0%b2%a4%e0%b3%8a%e0%b2%b3%e0%b2%a6%e0%b2%bf%e0%b2%b2%e0%b3%8d%e0%b2%b2/feed/ 0
 ವಿಶೇಷತೆ ತಿಳಿದಾಗ https://babakategalu.com/%e0%b2%b5%e0%b2%bf%e0%b2%b6%e0%b3%87%e0%b2%b7%e0%b2%a4%e0%b3%86-%e0%b2%a4%e0%b2%bf%e0%b2%b3%e0%b2%bf%e0%b2%a6%e0%b2%be%e0%b2%97/ https://babakategalu.com/%e0%b2%b5%e0%b2%bf%e0%b2%b6%e0%b3%87%e0%b2%b7%e0%b2%a4%e0%b3%86-%e0%b2%a4%e0%b2%bf%e0%b2%b3%e0%b2%bf%e0%b2%a6%e0%b2%be%e0%b2%97/#respond Mon, 10 Mar 2025 04:40:00 +0000 https://babakategalu.com/?p=203 Read more]]> ಒಂದು ಮನೆ ಹರಾಜಿಗೆ ಇಡುತ್ತಾರೆ ಆ ಮನೆಯಲ್ಲಿ ಇರುವ ಎಲ್ಲಾ ವಸ್ತುಗಳು ಯಾರಿಗೆ ಏನೇನು ಬೇಕು ಅದಕ್ಕೆ ಬೆಲೆ ಕೊಟ್ಟು ಖರೀದಿಸುತ್ತಾರೆ ಈ ಮನೆಯಲ್ಲಿ ಇನ್ನೂ ಏನಾದರೂ ಉಳಿದಿದೆಯೇ ಎಂದು ನೋಡಲು ಮನೆಯಲ್ಲಿ ಹೋಗಿ ಎಲ್ಲವನ್ನೂ ಪರಿಶೀಲನೆ ಮಾಡಿದಾಗ ಕೊನೆಗೆ ಒಂದು ಕೊಳಲು ಸಿಗುತ್ತದೆ.

 ಕೊಳಲು ಕೂಡ ಹರಾಜು ಮಾಡಬೇಕು ಆ ಕೊಳಲನ್ನು ತೆಗೆದುಕೊಂಡು ಅದಕ್ಕೆ 5 ರೂಪಾಯಿ 10 ರೂಪಾಯಿ 20 ರೂಪಾಯಿ ಎಂದು ಕೂಗುತ್ತಾರೆ ಅಷ್ಟರಲ್ಲಿ ವಿದ್ವಾಂಸರು ಆ ಕೊಳಲನ್ನು ತೆಗೆದುಕೊಂಡು ಅದಕ್ಕೆ ಚೆನ್ನಾಗಿ ಒರೆಸಿ ನಂತರ ಅದರಲ್ಲಿ ಇಂಪಾದ ಧ್ವನಿಯನ್ನು ನುಡಿಸುತ್ತಾರೆ.

 ನುಡಿಸಿದ ನಂತರ ಕೊಳಲಿಗೆ ಎಷ್ಟು ಬೆಲೆ ಎಂದು ಕೇಳಿದಾಗ ಒಬ್ಬರು ಐನೂರು ರೂಪಾಯಿ ಇನ್ನೊಬ್ಬರು ಏಳು ನೂರು ರೂಪಾಯಿ 8ನೂರು ರೂಪಾಯಿ ನಂತರ ಸಾವಿರಕ್ಕೆ ಕೊಳಲು ಹರಾಜಾಗುತ್ತದೆ ಮೊದಲು ಇದ್ದಾಗ ಅದರ ಬೆಲೆ ಕೇವಲ ಹತ್ತು ರೂಪಾಯಿಗೆ ಸೀಮಿತವಾಗಿತ್ತು.

 ಈಗ ಅದೇ ಕೊಳಲು ಒಂದು ಸಾವಿರಕ್ಕೆ ನಿಗದಿ ಆಯಿತು ಸ್ವಲ್ಪ ಸಮಯದಲ್ಲಿಯೇ ಇದರ ಬೆಲೆ ಹೆಚ್ಚಾಯಿತು ಯಾವ ವಸ್ತು ಇದೆಯೋ ಅದರ ವಿಶೇಷತೆ ತಿಳಿದಾಗ ಮಾತ್ರ ಅದರ ಬೆಲೆ ಹೆಚ್ಚಾಗುತ್ತದೆ.

 ಹಾಗೆ ನಮಗೂ ಕೆಲವು ಸಾರಿ ಬೆಲೆ ಇಲ್ಲದಂತೆ ನೋಡುತ್ತಿರುತ್ತಾರೆ ಯಾರು ನಮ್ಮನ್ನು ಅರ್ಥಮಾಡಿಕೊಳ್ಳುತ್ತಾರೆ ಅವರಿಗೆ ಮಾತ್ರ ನಮ್ಮ ಬೆಲೆ ಗೊತ್ತಿರುತ್ತದೆ.

 ದಯನೀಯ ಅವಸ್ಥೆಯಲ್ಲಿ 

ಒಂದು ಸಾರಿ ರಾಜ ವಾಯು ವಿಹಾರಕ್ಕೆ ಬಂದನು ಆಗ ಬಾಬಾ ಅವರು ಸಿಕ್ಕಿದರು ಅವರೊಂದಿಗೆ ಮಾತನಾಡಿಕೊಂಡು ಬರುತ್ತಿದ್ದಾಗ ಒಬ್ಬ ವ್ಯಕ್ತಿ ದಯನೀಯ ಅವಸ್ಥೆಯಲ್ಲಿ ನಿಂತಿದ್ದನು ಇದನ್ನು ನೋಡಿದ ರಾಜನು ವಯಸ್ಸು ಇದ್ದರು ವ್ಯಕ್ತಿಗಳು ಬರಿ ಭಿಕ್ಷೆ ಬೇಡುತ್ತಾರೆ ಎಂದು ವ್ಯಂಗವಾಗಿ ಹೇಳಿದನು.

   ಬಾಬಾ ಅವರು ಏನು ಮಾತನಾಡಲಿಲ್ಲ ರಾಜನಿಗೆ ಬಿಟ್ಟು ಬಂದ ನಂತರ ಆ ವ್ಯಕ್ತಿಗೆ ಹೋಗಿ ಮಾತನಾಡಿಸಿದರು ನೀನು ಏಕೆ ಹೀಗೆ ನಿಂತಿದ್ದೀಯ ಎಂದು ಕೇಳಿದರು   ಆಗ ಆ ವ್ಯಕ್ತಿ ನನಗೆ ಸದ್ಯಕ್ಕೆ ಸಂಸಾರದ ತಾಪತ್ರೆ ತುಂಬಾ ಇದೆ ಆದುದರಿಂದ ಅಸಾಹಾಯಕನಾಗಿ ನಿಂತಿದ್ದೇನೆ ಎಂದು ಹೇಳಿದನು.

ವ್ಯಕ್ತಿಯ ಕಷ್ಟ ಅರ್ಥಮಾಡಿಕೊಂಡ ಬಾಬಾ ಅವರು ತನ್ನಲ್ಲಿದ್ದ ಸ್ವಲ್ಪ ಹಣವನ್ನು ಕೊಟ್ಟು ಹೇಳಿದರು ಇದು ನಿನ್ನ ಒಂದು ತಿಂಗಳ ಖರ್ಚಿಗೆ ಸಾಕಾಗುತ್ತದೆ ನಂತರ ನೀನು ಊರಿನ ಆಚೆ ಇರುವ ಆಲದ ಮರದ ಕೆಳಗೆ ಕುಳಿತು ದಿನನಿತ್ಯ ಬ್ರಹ್ಮ ಮುಹೂರ್ತದ ಸಮಯದಲ್ಲಿ ದಿನನಿತ್ಯ ಮಂತ್ರಗಳನ್ನು ಹೇಳಿ   ಧ್ಯಾನ ಮಾಡಿ ಎಂದು ಹೇಳಿದರು.

 ಆ ವ್ಯಕ್ತಿ ಶ್ರದ್ಧೆ ಭಕ್ತಿಯಿಂದ ದಿನನಿತ್ಯ ತನ್ನ ಕಾಯಕ  ಮಾಡಿದನು ಇದರಿಂದ ಅವನಲ್ಲಿ ತೇಜಸ್ಸು ಓಜಸ್ಸು ಬಂತು ನಂತರ ಇತರರು ಆಕರ್ಷಿತರಾದರು ಒಂದು ತಿಂಗಳಲ್ಲಿಯೇ ಹಲವಾರು ವ್ಯಕ್ತಿಗಳು ತಾವು ಮಂತ್ರಗಳನ್ನು ಕಲಿಯಲು ಹಾಗೂ ಧ್ಯಾನ ಮಾಡಲು ಬಂದರು ಇತರರು ಹೊರಡುವಾಗ ಸ್ವಲ್ಪ ದಕ್ಷಿಣೆಯನ್ನು ಇಟ್ಟು ಹೋಗುತ್ತಿದ್ದರು.

 ಸ್ವಲ್ಪ ದಿನಗಳಲ್ಲಿಯೇ ಒಳ್ಳೆಯ ಹೆಸರು ಪಡೆದನು ಯಾವ ರೀತಿ ಹೆಸರು ಪಡೆದನು ಎಂದರೆ ದೂರ ದೂರದ ಊರುಗಳಿಂದ ಬರುತ್ತಿದ್ದರು. ಕೊನೆಗೆ ಒಂದು ಸಾರಿ ರಾಜನು ಬಂದು ಈ ಸಾಧು ಅವರನ್ನು ಕಂಡು ಆಶೀರ್ವಾದ ಪಡೆದು ಬಂದನು.

  ನಂತರ ಬಾಬಾ ಅವರನ್ನು ಭೇಟಿಯಾದನು ಆಗ ಬಾಬಾ ಅವರು ಹೇಳಿದರು ನೀವು ದರ್ಶನ ಮಾಡಿ ಬಂದ ವ್ಯಕ್ತಿ ಯಾರು? ನಿಮಗೆ ಗೊತ್ತೇ ಎಂದಾಗ ರಾಜ ಗೊತ್ತಿಲ್ಲ ಎನ್ನುತ್ತಾನೆ ಬಾಬಾ ಅವರು ಕೆಲವು ದಿನಗಳ ಹಿಂದೆ ನೀವು ಆ ವ್ಯಕ್ತಿಯನ್ನು ವ್ಯಂಗವಾಗಿ ಮಾತನಾಡಿದ್ದೀರಿ ಅದೇ ವ್ಯಕ್ತಿಯಿಂದ ಇಂದು ನೀವು ಆಶೀರ್ವಾದ ಪಡೆದಿದ್ದೀರಾ ಎಂದಾಗ ರಾಜನು ಆಶ್ಚರ್ಯನಾದನು.

 ಕೆಲವರು ವಿದ್ಯಾವಂತರು ಬುದ್ಧಿವಂತರು ಒಳ್ಳೆಯ ಜಾಣ್ಮೆ ಇರುತ್ತದೆ ಆದರೆ ಅವರಿಗೆ ಸರಿಯಾದ ವೇದಿಕೆ ಸಿಗುವುದಿಲ್ಲ ಆದ್ದರಿಂದ ಅವರು ಶೋಚನೀಯ ಸ್ಥಿತಿಯಲ್ಲಿ ಇರುತ್ತಾರೆ ಅವರಿಗೆ ಸರಿಯಾದ ವೇದಿಕೆ ಸಿಕ್ಕಿದರೆ ಅವರು ಕೂಡ ಬೃಹತ್ತಾಗಿ ಬೆಳೆಯುತ್ತಾರೆ ಎಂದು ಬಾಬಾ ಅವರು ಹೇಳಿದರು. ಮಾಡುವ ಕೆಲಸವನ್ನು ಪ್ರಾಮಾಣಿಕತೆಯಿಂದ  ಮಾಡೋಣ.

ನಾನೇ ಮೂರ್ಖನಾದೆ

ಚಾಣಾಕ್ಷ ರಾಜಣ್ಣ ಎಂಬುವನು ಇದ್ದನು ರಾಜಣ್ಣನು ದೇಶದ ಗಡಿಯಲ್ಲಿ ವಾಸಿಸುತ್ತಿದ್ದನು ಅಂದರೆ ಇಲ್ಲಿಂದ ಸ್ವಲ್ಪ ದೂರ ಹೋದರೆ ಬೇರೆ ದೇಶಕ್ಕೆ ಹೋಗಬಹುದು ಆದರೆ ಈ ದೇಶದಿಂದ ಬೇರೆ ದೇಶಕ್ಕೆ ಹೋಗಬೇಕಾದರೆ ಒಂದು ಚಿಕ್ಕ ದಾರಿಯಿದೆ.

 ಯಾವುದೇ ಕಾರಣಕ್ಕೂ ನುಗ್ಗಿ ಹೋಗುವುದಕ್ಕೆ ಆಗುವುದಿಲ್ಲ ಯಾರೇ ಹೋಗಬೇಕಾದರೂ ಅದಕ್ಕೆ ಒಂದು ಗೇಟ್ ಇದೆ ಅಲ್ಲಿ ಸೈನಿಕರು ಇರುತ್ತಾರೆ ಯಾರೇ ಹೋದರು ತಪಾಸಣೆ ಮಾಡುತ್ತಾರೆ ಕಾವಲುಗಾರರನ್ನು  ದಾಟಿಕೊಂಡು ಮುಂದೆ ಹೋಗಬೇಕು ಈ ದೇಶದಿಂದ ಆ ದೇಶಕ್ಕೆ ಹೋಗಬೇಕಾದರೆ ಎಲ್ಲರಿಗೂ ಸರಿಯಾಗಿ ಪರಿಶೀಲನೆ ಮಾಡುತ್ತಾರೆ.

ಕಳ್ಳಸಾಗಣೆ ಆಗಬಾರದು ಎಂದು ಪರಿಶೀಲಿಸುತ್ತಾರೆ ದಿನನಿತ್ಯದ ಕೆಲವು ವಸ್ತುಗಳು ತರಕಾರಿ ಹಾಲು ಮೊಸರು ಈ ಚಿಕ್ಕ ಚಿಕ್ಕ ವಸ್ತುಗಳು ತೆಗೆದುಕೊಂಡು ಈ ದೇಶದಿಂದ ಆದೇಶಕ್ಕೆ ಮಾರುತ್ತಿದ್ದರು ಆದರೆ ರಾಜಣ್ಣ ಎಂಬುವನು ತುಂಬಾ ಬುದ್ದಿವಂತ ಅವನು ದಿನನಿತ್ಯ ಈ ಗಡಿಗೆ ಬರುತ್ತಿದ್ದನು.

ರಾಜಣ್ಣನಿಗೆ ಹೇಗೆ ಪರಿಶೀಲನೆ ಮಾಡಿದರೂ ಕೂಡ ರಾಜಣ್ಣ ಸಿಕ್ಕಿಕೊಳ್ಳುತ್ತಿರಲಿಲ್ಲ ಆದರೆ ಇವನ ವ್ಯಾಪಾರವು ತುಂಬಾ ಚೆನ್ನಾಗಿ ನಡೆಯುತ್ತಿತ್ತು ಆದರೂ ಕಾವಲುಗಾರನಿಗೆ ಅನುಮಾನ ಇವನು ವ್ಯಾಪಾರ ಮಾಡುತ್ತಿದ್ದಾನೆ ವಿಧ ವಿಧವಾಗಿ ಪರಿಶೀಲಿಸುತ್ತಿದ್ದರು ಹೀಗೆ ಕೆಲವು ವರ್ಷಗಳು ಕಳೆದವು ಇಬ್ಬರು ಕೂಡ ನಿವೃತ್ತಿಯಾದರು.

 ಆಗ ಆ ಕಾವಲುಗಾರನು ಹೇಳಿದ ನೀನು ವ್ಯಾಪಾರದಲ್ಲಿ ತುಂಬಾ ಚೆನ್ನಾಗಿ ಉನ್ನತಿಯಾಗಿದ್ದೀಯಾ ಹೇಗೆ ಸಾಧ್ಯವಾಯಿತು ಎಂದಾಗ ರಾಜಣ್ಣ ಕಾವಲುಗಾರರಿಗೆ ಹೇಳುತ್ತಾನೆ ನೀನು ದಿನ ತಪಾಸಣೆ ಮಾಡಿದ್ದೀಯಾ ಆದರೆ ಸರಿಯಾಗಿ ಮಾಡಿಲ್ಲ ನಾನು ದಿನನಿತ್ಯವೂ ಹಿತ್ತಾಳೆಯ ಪಾತ್ರೆ ಬದಲಿ ಮಾಡಿ ತೆಗೆದುಕೊಂಡು ಹೋಗುತ್ತಿದ್ದೆ ಎಂದು ಹೇಳುತ್ತಾನೆ.

 ಇಲ್ಲಿಯ ಹೊಸ ಹಿತ್ತಾಳೆಯ ಪಾತ್ರೆಗೆ ಅಲ್ಲಿ ಒಳ್ಳೆಯ ಬೆಲೆ ಸಿಗುತ್ತದೆ ಅಲ್ಲಿಂದ ನಾನು ಬರಬೇಕಾದರೆ ಹಳೆಯ ಹಿತ್ತಾಳೆಯ ಪಾತ್ರೆ ತರುತ್ತಿದೆ ಇಲ್ಲಿಂದ ತೆಗೆದುಕೊಂಡು ಹೋಗಬೇಕಾದರೆ ನಾನು ಒಂದು ಹೊಸ ಹಿತ್ತಾಳೆಯ ಪಾತ್ರೆ ತೆಗೆದುಕೊಂಡು ಹೋಗಿ ಅಲ್ಲಿ ಮಾರುತ್ತಿದ್ದೆ ಇದರಿಂದ ನಾನು ತುಂಬಾ ಅಭಿವೃದ್ಧಿಯಾಗಿದ್ದೇನೆ ಎಂದು ಹೇಳಿದನು ಆಗ ಕಾವಲುಗಾರನು ತಲೆಯ ಮೇಲೆ ಕೈ ಇಟ್ಟುಕೊಂಡನು ನಾನೇ ಮೂರ್ಖನಾದೆ ಎಂದು ಅರ್ಥಮಾಡಿಕೊಂಡನು.

ರಾತ್ರಿ  ಎಚ್ಚರವಾಗಿ ಇರುತ್ತೇನೆ

ಮಾಲೀಕನು ಒಂದು ನಾಯಿಯನ್ನು ಸಾಕಿರುತ್ತಾನೆ ಆ ನಾಯಿಯು ಮಾಲೀಕ ಕೆಲಸ ಮಾಡಬೇಕಾದರೆ ನಾಯಿಯು ಮಲಗಿರುತ್ತದೆ ಮಾಲೀಕನಿಗೆ ಕೋಪ ಬಂದು ನಾಯಿಯನ್ನು ಎಚ್ಚರಿಸುತ್ತಾನೆ.

 ನಿನಗೆ ಕಣ್ಣು ಕಾಣುತ್ತಿಲ್ಲವೇ ನಾನು ಇಷ್ಟೊಂದು ಕಷ್ಟ ಪಡುತ್ತಿದ್ದೇನೆ ನೀನು ನೆಮ್ಮದಿಯಾಗಿ ಮಲಗಿದ್ದೀಯಾ ಎಂದಾಗ ನಾಯಿ ವಿನಮ್ರವಾಗಿ ಹೇಳುತ್ತದೆ.

 ನೀವು ರಾತ್ರಿ ಗೊರಕೆ ಹೊಡೆದು ಮಲಗಿರಬೇಕಾದರೆ ಎಚ್ಚರವಾಗಿ ನಾನೂ ಇರುತ್ತೇನೆ ಈಗ ನಾನು ಮಲಗಿಕೊಂಡರೆ ಏನು ನಷ್ಟ ಇದೇ ರೀತಿ ಕೆಲವು ಕಾರ್ಮಿಕರು ಬೇರೆ ಸಮಯದಲ್ಲಿ ತುಂಬ ಚೆನ್ನಾಗಿ ಕಷ್ಟಪಟ್ಟು ಕೆಲಸ ಮಾಡುತ್ತಾರೆ ಕೆಲವರು ಕೆಲಸಗಾರರನ್ನು ಅರ್ಥಮಾಡಿಕೊಳ್ಳುವುದಿಲ್ಲ ಕೆಲವು ಮಾಲೀಕರು ಸುಮ್ಮನೆ ನಿಂತಿದ್ದಾಗ ಕೆಲಸಗಾರರಿಗೆ ಬೇರೆ ಬೇರೆ ಕೆಲಸಗಳು ನೀಡುತ್ತಲೇ ಇರುತ್ತಾರೆ. ನಾನು ಕೆಲಸ ಮಾಡಿದವರ ಕಷ್ಟವನ್ನು ಅರ್ಥಮಾಡಿಕೊಳ್ಳುತ್ತೇನೆಯೇ?

 ಆತ್ಮಸಾಕ್ಷಿಗೆ ವಿರುದ್ಧವಾಗಿ

ಒಂದು ಶಾಲೆಯ ಕಾರ್ಯಕ್ರಮಕ್ಕೆ ಹೋಗಿದ್ದೆ ಆಗ ಪ್ರಾಂಶುಪಾಲರು ದೂರದಿಂದ ಒಂದು ಹುಡುಗನನ್ನು ತೋರಿಸಿ ಹೇಳಿದರು ಈ ಹುಡುಗ ಪ್ರತಿವರ್ಷದಲ್ಲಿಯೂ ಒಳ್ಳೆಯ ಅಂಕಗಳನ್ನು ಪಡೆದು ಉತ್ತೀರ್ಣನಾಗಿದ್ದಾನೆ ಆದರೆ ಈ ಸಾರಿ ಅರ್ಧವಾರ್ಷಿಕ ಪರೀಕ್ಷೆಯಲ್ಲಿ ತುಂಬಾ ಕಡಿಮೆ ಅಂಕ ಪಡೆದಿದ್ದ ಆದುದರಿಂದ ನಾನು ಆ ವಿದ್ಯಾರ್ಥಿಯನ್ನು ಬಂದು ಮಾತನಾಡಲು ಹೇಳಿದೆ ನನ್ನ ಕಚೇರಿಗೆ ಬಂದು ಹುಡುಗನಿಗೆ ಮೊದಲು ಕುಶಲೊಪರಿ ವಿಚಾರಿಸಿ ನಂತರ ಕೇಳಿದೆ.

 ನೀನು ಇಲ್ಲಿಯವರೆಗೂ ಒಳ್ಳೆಯ ಅಂಕಗಳನ್ನು ಪಡೆದಿದ್ದೀಯಾ ಆದರೆ ಈ ಅರ್ಥವಾರ್ಷಿಕ ಪರೀಕ್ಷೆಯಲ್ಲಿ ಅಂಕಗಳು ಏಕೆ ಕಡಿಮೆ ಪಡೆದಿದ್ದೀಯಾ ಎಂದಾಗ ಹುಡುಗನು ತನ್ನ ಕತ್ತನ್ನು ತಗ್ಗಿಸಿಕೊಂಡು ಮುಚ್ಚುಮರೆ ಇಲ್ಲದೆ ಪ್ರಾಮಾಣಿಕವಾಗಿ ಹೇಳಿದನು ನೀವು ನನ್ನನ್ನು ಈ ಶಾಲೆಯಿಂದ ಕಳಿಸಬಾರದು ಮತ್ತೆ ನಮ್ಮ ತಂದೆ ತಾಯಿಗೆ ಹೇಳಬಾರದು ಮತ್ತೆ ವಿದ್ಯಾರ್ಥಿಗಳಿಗೆ ಹೇಳಬಾರದು ಆಗ ನಾನು ಹೇಳುತ್ತೇನೆ ಎಂದು ಹೇಳಿದ.

ನಾನು ಆಗಲಿ ಎಂದು ಭರವಸೆ ನೀಡಿದೆ ಆಗ ಅವನು ಈ ಸಾರಿ ಅರ್ಧವಾರ್ಷಿಕ ಪರೀಕ್ಷೆ ಬರಿಯಬೇಕಾದರೆ ನಾನು ಹೆಚ್ಚಾಗಿ ಓದಿರಲಿಲ್ಲ ಹೆಚ್ಚು ಅಂಕಗಳು ಬರಬೇಕು ಎಂದು ನಾನು ಒಂದು ಚೀಟಿಯನ್ನು ಇಟ್ಟುಕೊಂಡಿದ್ದೆ ಆಗ ನೀವು ನೋಡಿದ್ದೀರಿ ಎಂದು ಗಾಬರಿಯಾಗಿ ಆ ಚೀಟಿಯನ್ನು ಎಸೆದು ಎಷ್ಟು ಗೊತ್ತಿದೆ ಅಷ್ಟು ಮಾತ್ರ ಬರೆದೆ ಆದುದರಿಂದ ನನಗೆ ಅಂಕಗಳು ಕಡಿಮೆ ಬಂದಿದೆ ಎಂದನು.

ಪ್ರಾಂಶುಪಾಲರು ನೀನು ಈ ಶಾಲೆಗೆ ಏಕೆ ಬಂದಿದ್ದೀಯಾ ವಿದ್ಯೆ ಕಲಿಯಲು ಪ್ರಪಂಚದ ಜ್ಞಾನ ಹೆಚ್ಚಿಸಿಕೊಳ್ಳಲು ಹೌದಲ್ಲವೇ ಹಾಗಾದರೆ ನೀನು ನಕಲು ಏಕೆ ಮಾಡುತ್ತೀಯಾ ಮತ್ತೆ ಇಂದು ನೀನು ಒಳ್ಳೆಯ ವಿದ್ಯಾರ್ಥಿ ಆಗಿದ್ದೀಯ ಏಕೆಂದರೆ ನಿನ್ನ ಆತ್ಮಸಾಕ್ಷಿಯಾಗಿ ನಡೆದುಕೊಂಡಿದ್ದೀಯಾ.

 ನೀನು ಒಳ್ಳೆಯ ವಿದ್ಯಾರ್ಥಿ ಆಗುತ್ತೀಯಾ ಎಂದು ಹೇಳಿ ಮತ್ತೆ ಹೇಳಿದರು ಬಹುತೇಕರು ತಪ್ಪು ಮಾಡಿರುತ್ತಾರೆ ಆದರೆ ಮಾಡಿದ ತಪ್ಪಿಗೆ ಒಂದು ಕುರುಹು ಕೂಡ ಬಿಟ್ಟಿರುವುದಿಲ್ಲ ಆದರೂ ಕೂಡ ಅವರ ಮನಸ್ಸಿನಲ್ಲಿ ಮಾಡಿದ ತಪ್ಪು ಕಾಡುತ್ತಿರುತ್ತದೆ.

 ಇತರರು ಬಂದಾಗ ಭಯವಾಗುತ್ತದೆ ಎಲ್ಲಿ ಸಿಕ್ಕಿ ಬೀಳುತ್ತೇನೆ ಮತ್ತೆ ಮನಸ್ಸಿನಲ್ಲಿ ತಪ್ಪು ಮಾಡಿದ ಭಯ ಇದ್ದಾಗ ತಪ್ಪು ಮಾಡಿದವರ ವರ್ತನೆ ಬದಲಾಗಿರುತ್ತದೆ. ಇದರಿಂದಾಗಿ ಸಿಕ್ಕಿ ಬೀಳುತ್ತಾರೆ ಪೊಲೀಸಿನವರು ಹೇಳುತ್ತಾರೆ ನಮ್ಮ ಮುಂದೆ ಹೋದಾಗ ಅವರ ವರ್ತನೆ ಸ್ವಲ್ಪ ಬದಲಾಗಿರುತ್ತದೆ ಆದುದರಿಂದ ನಾವು ಅವರನ್ನು ಸುಲಭವಾಗಿ ಹಿಡಿಯುತ್ತೇವೆ ಎಂದು ಹೇಳುತ್ತಾರೆ ಹಲವಾರು ವ್ಯಾಪಾರಸ್ಥರು ಕೂಡ ಹೀಗೆ ಮಾಡುತ್ತಾರೆ.

  ಗ್ರಾಹಕರಿಗೆ ಕಳಪೆ ವಸ್ತುಗಳನ್ನು ಮಾರುತ್ತಾರೆ ಆದರೆ ಗ್ರಾಹಕರಿಗೆ ಅದು ತಿಳಿಯುವುದಿಲ್ಲ ವ್ಯಾಪಾರಿಗೆ ಮಾತ್ರ ನಾನು ಕಳಪೆ ವಸ್ತುವನ್ನು ಕೊಟ್ಟಿದ್ದೇನೆ ಎನ್ನುವ ಗಾಬರಿ ಇರುತ್ತದೆ ಮುಂದೆ ಒಂದು ದಿನ ಗೊತ್ತಾದಾಗ ಆ ಗ್ರಾಹಕರು ಮತ್ತೆ ಬರಲಾರರು ಯಾವುದೇ ಕೆಲಸ ಮಾಡಿದರು ಆತ್ಮ ಸಾಕ್ಷಿಯಾಗಿ ಮಾಡುವುದು ಒಳ್ಳೆಯದು ಎಂದು ಹೇಳಿದೆ ನಂತರ ಹುಡುಗ ಬದಲಾದನು ನಂತರ ಇಡೀ ಶಾಲೆಗೆ ಇವನೇ ಹೆಚ್ಚು ಅಂಕಗಳನ್ನು ಪಡೆದನು. ನಾನು ಮಾಡಿದ ತಪ್ಪು, ನಾನು ಅರ್ಥ ಮಾಡಿಕೊಂಡಿದ್ದೇನೆಯೇ?

]]>
https://babakategalu.com/%e0%b2%b5%e0%b2%bf%e0%b2%b6%e0%b3%87%e0%b2%b7%e0%b2%a4%e0%b3%86-%e0%b2%a4%e0%b2%bf%e0%b2%b3%e0%b2%bf%e0%b2%a6%e0%b2%be%e0%b2%97/feed/ 0
ತದೇಕ ಚಿತ್ತದಿಂದ ಗಮನಿಸುತ್ತಿತ್ತು https://babakategalu.com/%e0%b2%a4%e0%b2%a6%e0%b3%87%e0%b2%95-%e0%b2%9a%e0%b2%bf%e0%b2%a4%e0%b3%8d%e0%b2%a4%e0%b2%a6%e0%b2%bf%e0%b2%82%e0%b2%a6-%e0%b2%97%e0%b2%ae%e0%b2%a8%e0%b2%bf%e0%b2%b8%e0%b3%81%e0%b2%a4%e0%b3%8d%e0%b2%a4/ https://babakategalu.com/%e0%b2%a4%e0%b2%a6%e0%b3%87%e0%b2%95-%e0%b2%9a%e0%b2%bf%e0%b2%a4%e0%b3%8d%e0%b2%a4%e0%b2%a6%e0%b2%bf%e0%b2%82%e0%b2%a6-%e0%b2%97%e0%b2%ae%e0%b2%a8%e0%b2%bf%e0%b2%b8%e0%b3%81%e0%b2%a4%e0%b3%8d%e0%b2%a4/#respond Sun, 09 Mar 2025 04:40:00 +0000 https://babakategalu.com/?p=201 Read more]]> ಒಂದು ಊರಿನಲ್ಲಿ ಒಂದು ಹಳೆಯ ಮನೆ ಇತ್ತು ಆ ಮನೆಯಲ್ಲಿ ಹಲವಾರು ಸಾಕು ಪ್ರಾಣಿಗಳು ಇದ್ದವು ಬೆಕ್ಕು ನಾಯಿ ಇಲಿ ಕಪ್ಪೆ ಇತ್ಯಾದಿ ಇಲಿಮರಿ ತನ್ನ ತಾಯಿಗೆ ಹೇಳಿತು ಅಮ್ಮ ಒಂದು ಬೆಕ್ಕು ಸತ್ತು ಹೋಗಿದೆ.

 ಆದುದರಿಂದ ನಾವು ಧೈರ್ಯವಾಗಿ ಓಡಾಡಬಹುದು ಎಂದಿತು ಆಗ ತಾಯಿ ಬೆಕ್ಕು ಸತ್ತು ಹೋಯಿತಾ? ಒಂದೆರಡು ನಿಮಿಷ ನೋಡು ನಂತರ ನನಗೆ ಹೇಳು ಎಂದಿತು ಸ್ವಲ್ಪ ಸಮಯ ತದೇಕ ಚಿತ್ತದಿಂದ ಗಮನಿಸುತ್ತಿತ್ತು ಅಷ್ಟರಲ್ಲಿ ಒಂದು ನಾಯಿಯೂ ಓಡುತ್ತಾ ಬರುತ್ತಿತ್ತು ಆಗ ಮಲಗಿದ ಬೆಕ್ಕು ದಿಕ್ಕು ದೆಸೆ ಇಲ್ಲದೆ  ಎದ್ದು ಓಡಿ ಹೋಯಿತು.

 ಆಗ ಅಮ್ಮ ಸತ್ತು ಹೋಗಿದೆ ಎಂದು ಹೇಳಿದೆ ಅದು ಸತ್ತು ಹೋಗಿಲ್ಲ ಬೆಕ್ಕು ನಾಟಕ ಮಾಡುತ್ತಿದೆ ಎಂದು ಹೇಳಿತು ತಾಯಿ ನಿರ್ಧಾರ ಮಾಡಬೇಕಾದರೆ ನಾವು ನೋಡಿದ ತಕ್ಷಣ ನಿರ್ಧಾರ ಮಾಡಬಾರದು ಎಂದು ಹೇಳಿತು.

ನಾವು ಕೂಡ ಎಷ್ಟೋ ಸಾರಿ ನಾವು ನೋಡಿದ್ದನ್ನು ಸುಲಭವಾಗಿ ನಂಬುತ್ತೇವೆ ಸ್ವಲ್ಪ ತಾಳ್ಮೆಯಿಂದ ಗ್ರಹಿಸಿ ಸರಿಯಾಗಿ ನೋಡಿ ಗಮನಿಸಿ ನಂತರ ನಿರ್ಧರಿಸೋಣ.

ಕಣ್ಣಿನ ಹತ್ತಿರ ಬರುತ್ತಿದ್ದಂತೆಯೇ

ಒಂದು ಊರಿನಲ್ಲಿ ಪ್ರಸಿದ್ಧ ಬಟ್ಟೆ ಹೊಲಿಯುವವನು ಇದ್ದನು ಒಳ್ಳೆಯ ಕೆಲಸಗಾರ ಮನಸ್ಸಿಗೆ ಒಪ್ಪುವಂತೆ ಚೆನ್ನಾಗಿ ಕೆಲಸ ಮಾಡಿಕೊಡುತ್ತಿದ್ದನು ಇದೇ ರೀತಿ ಇವನು ಪ್ರಸಿದ್ಧನಾಗುತ್ತಿದ್ದಂತೆಯೇ  ಕೆಲಸಗಳು ಹೆಚ್ಚಾಗಿ ಬರತೊಡಗಿದವು ಆದರೆ ಕೆಲಸ ಬೇಗ ಮಾಡಿ ಮುಗಿಸುವುದು ಕಷ್ಟವಾಯಿತು.

ಬಟ್ಟೆ ಹೊಲಿಯುವವನು ಚಿಂತಿಸಿದ ಏನಾದರೂ ಮಾಡಿ ಒಂದು ಹೊಲಿಗೆ ಯಂತ್ರವನ್ನು ಕಂಡು ಹಿಡಿಯಬೇಕು ಎಲ್ಲವನ್ನೂ ತಯಾರು ಮಾಡಿದ ಆದರೆ ಸೂಜಿ ಹೇಗೆ ತಯಾರಿಸಬೇಕು ಎಂದು ದಿನನಿತ್ಯ ಚಿಂತಿಸುತ್ತಿದ್ದ ಆದರು ಉಪಾಯ ಹೊಳೆಯುತ್ತಿರಲಿಲ್ಲಒಂದು ಸಾರಿ ಬಟ್ಟೆ ಹೊಲಿಯುವವನಿಗೆ ಕನಸು ಬೀಳುತ್ತದೆ.

 ಬಟ್ಟೆ ಹೊಲಿಯುವವನಿಗೆ ಕರೆದುಕೊಂಡು ಆಚೆ ಹಾಕಿ ಎಲ್ಲರೂ ಕೂಡ ಇವನನ್ನು ಬಯ್ಯುತ್ತಾರೆ ಹೀಯಾಳಿಸುತ್ತಾರೆ ಇವನನ್ನು ಮುಗಿಸಿಬಿಡಬೇಕು ಏಕೆಂದರೆ ಇವನು ಇಲ್ಲಿಯವರೆಗೆ ಒಂದು ಯಂತ್ರವನ್ನು ಕಂಡು ಹಿಡಿದಿಲ್ಲ ಎಂದಾಗ ಕೊನೆಗೆ ಒಬ್ಬ ಹೇಳುತ್ತಾನೆ.

 ಇವನಿಗೆ ಭರ್ಚಿಯಿಂದ ಸಾಯಿಸಿಬಿಡಿ ಎಂದಾಗ ಅವನು ಹೇಳಿದಂತೆಯೇ ಭರ್ಚಿ ತೆಗೆದು ಚುಚ್ಚಕ್ಕೆ ಬರುತ್ತಾನೆ ಕಣ್ಣಿನ ಹತ್ತಿರ ಬರುತ್ತಿದ್ದಂತೆಯೇ ಇವನಿಗೆ ಅಲ್ಲಿ ಒಂದು ಚಿಕ್ಕ ರಂದ್ರ ಇರುತ್ತದೆ ಇದನ್ನು ನೋಡಿದಾಗ ಬಟ್ಟೆ ಹೊಲಿಯುವವನಿಗೆ ಜ್ಞಾನೋದಯವಾಗುತ್ತದೆ ಗಾಬರಿಯಾಗಿ ಏಳುತ್ತಾನೆ ಆಗ ಅವನಿಗೆ ತಿಳಿಯುತ್ತದೆ.

ಸೂಜಿಯನ್ನು ಗಮನಿಸಿದಾಗ ಸಾಮಾನ್ಯ ಸೂಜಿ ಒಂದು ಕಡೆ ಚೂಪಾಗಿ ಇದ್ದು ಇನ್ನೊಂದು ಕಡೆ ದಾರ ಹಾಕುತ್ತಾರೆ ಅದೇ ಚೂಪಾಗಿರುವ ಪಕ್ಕದಲ್ಲಿ ದಾರ ಹಾಕಿದರೆ ಬೇಗ ಕೆಲಸವಾಗುತ್ತದೆ ಎಂದು ನಂಬಿದ್ದನು.

 ನಾನು ನೋಡಿದ್ದು ಕನಸು ಎಂದು ತಕ್ಷಣದಲ್ಲಿ ಅವನಿಗೆ ಒಂದು ಉಪಾಯ ಹೊಳೆಯುತ್ತದೆ ಸೂಚಿಯ ಸ್ವಲ್ಪ ಹಿಂದೆ ಒಂದು ರಂದ್ರ ಮಾಡಿದರೆ ಆ ಯಂತ್ರ ಉಪಯೋಗಿಸಬಹುದು ಎಂದು ಮುಂದೆ ಯಂತ್ರವನ್ನು ತಯಾರಿಸಿ ಪ್ರಸಿದ್ಧಿ ಪಡೆಯುತ್ತಾನೆ ನಾವೂ ಕೂಡ ಅಷ್ಟೆ ಹಗಲು ರಾತ್ರಿ ಚಿಂತನೆ ಮಾಡುತ್ತಿದ್ದರೆ ಹೊಸ ಉಪಾಯಗಳು ಉದ್ಭವವಾಗುತ್ತವೆ ಇದರಿಂದ ಮತ್ತಷ್ಟು ಸಾಧನೆ ಮಾಡಬಹುದಾಗಿದೆ.

ದುರಾಸೆಯ ಪರಿಣಾಮ

ಒಂದು ಊರಿನಲ್ಲಿ ದುರಾಸೆಯ ಒಬ್ಬ ಭಿಕ್ಷುಕ ಇರುತ್ತಾನೆ ಊರಿನ ಹೊರಗೆ ದೊಡ್ಡ ಮರವಿರುತ್ತದೆ ಅಲ್ಲಿ ದಿನನಿತ್ಯ ಭಿಕ್ಷೆ ಬೇಡುತ್ತಿರುತ್ತಾನೆ ಅಲ್ಲಿಗೆ ಒಂದು ಸಾರಿ ರಾಜ ಬರುತ್ತಾನೆ ಭಿಕ್ಷುಕನನ್ನು ನೋಡಿ ಮಾತನಾಡಿಸುತ್ತಾನೆ ಭಿಕ್ಷುಕನಲ್ಲಿ ಇರುವ ದುರಾಸೆಯನ್ನು ಅರ್ಥಮಾಡಿಕೊಳ್ಳುತ್ತಾನೆ.

ರಾಜನಾದವನು ನಾನು ನಿನಗೆ ಚಿನ್ನದ ನಾಣ್ಯಗಳನ್ನು ಕೊಡುತ್ತೇನೆ ನೀನು ಯಾವುದರಲ್ಲಿ ತೆಗೆದುಕೊಳ್ಳುತ್ತೀಯಾ ಎಂದು ಕೇಳುತ್ತಾರೆ ಆಗ ಭಿಕ್ಷುಕನು ತನ್ನ ಅಂಗಿಯನ್ನು ಬಿಚ್ಚಿ ಹಿಡಿದುಕೊಳ್ಳುತ್ತಾನೆ.

 ರಾಜರು ಹೇಳುತ್ತಾರೆ ನಾನು ಚಿನ್ನದ ನಾಣ್ಯವನ್ನು ನಿನ್ನ ಅಂಗಿಯಲ್ಲಿ ಹಾಕುತ್ತಿರುತ್ತೇನೆ ನೀನು ಎಲ್ಲಿಯ ವರೆಗೆ ಬೇಡ ಎನ್ನುವುದಿಲ್ಲ ಅಲ್ಲಿಯವರೆಗೂ ಹಾಕುತ್ತಿರುತ್ತೇನೆ ಆದರೆ ಒಂದು ಕಂಡಿಷನ್ ಅದು ಏನೆಂದರೆ ನಾಣ್ಯಗಳು ಕೆಳಗೆ ಬಿದ್ದರೆ ಅದು ನೀನು ತೆಗೆದುಕೊಳ್ಳುವ ಹಾಗಿಲ್ಲ ಎಂದಾಗ ಮೂರ್ಖ ಭಿಕ್ಷುಕನು ಆಗಲಿ ಎನ್ನುತ್ತಾನೆ.

 ರಾಜನು ಹೇಳಿದಂತೆ ನಾಣ್ಯಗಳನ್ನು ಅಂಗಿಯ ಮೇಲೆ ಹಾಕುತ್ತಲೇ ಇರುತ್ತಾನೆ ಭಿಕ್ಷುಕ ಸಾಕು ಎನ್ನುವುದಿಲ್ಲ ರಾಜನಾದವನು ನಾಣ್ಯಗಳನ್ನು ಹಾಕುತ್ತಲೇ ಇರುತ್ತಾನೆ ಇದರಿಂದ ಭಾರವಾಗಿ ಅಂಗಿ ಸಮೇತ ಚಿನ್ನದ ನಾಣ್ಯಗಳು ಕೆಳಗೆ ಬೀಳುತ್ತವೆ.

 ಆಗ ರಾಜನು ಎಲ್ಲಾ ನಾಣ್ಯಗಳನ್ನು ವಾಪಸ್ ಪಡೆದು ಕೊಳ್ಳುತ್ತಾನೆ ಭಿಕ್ಷುಕ ಮತ್ತೆ ಅದೇ ಸ್ಥಿತಿಯಲ್ಲಿ ಇರುತ್ತಾನೆ ಏಕೆ ಹೀಗೆ ಆಯಿತು ಎಂದರೆ ದುರಾಸೆಯ ಪರಿಣಾಮ ಎಷ್ಟು ತೂಕ ತಡೆದು ತಡೆದುಕೊಳ್ಳುತ್ತದೆಯೋ ಅಷ್ಟಕ್ಕೆ ಸಾಕು ಎನ್ನಬಹುದಿತ್ತು ಆದರೆ ದುರಾಸೆಯಿಂದ ಎಲ್ಲವನ್ನು ಕಳೆದುಕೊಂಡ.

ಇನ್ನೂ ಪರೀಕ್ಷೆ ಮಾಡುತ್ತಿದ್ದಾರೆಯೇ?

ಒಂದು ಊರಿಗೆ ಒಬ್ಬ ಪದವಿ ಪಾಸ್ ಮಾಡಿಕೊಂಡು ಹೋಗುತ್ತಾನೆ ಅವನಿಗೆ ಒಂದು ಕೆಲಸ ಸಿಗುತ್ತದೆ ಕೆಲಸ ಏನು ಎಂದರೆ ನದಿಯ ನೀರನ್ನು ಪ್ರತಿ 2 ಗಂಟೆಗೆ ಒಂದೊಂದು ಸಾರಿ ಚೆಕ್ ಮಾಡಬೇಕು ನಂತರ ಪ್ರಯೋಗ ಶಾಲೆಗೆ ಕಳಿಸಬೇಕು.

 ಇದು ಅಲ್ಲಿಯ ನಿಯಮ ಯುವಕನು ಕೂಡ ಅದರಂತೆಯೇ ಎರಡು ಗಂಟೆಗೆ ಸರಿಯಾಗಿ ಪರಿಶೀಲಿಸುತ್ತಾನೆ ಸರಿಯಾದ ಫಲಿತಾಂಶ ಬರುತ್ತಿರುತ್ತದೆ ನಂತರ ಯುವಕ ಯೋಚನೆಮಾಡಿ ಹೇಳುತ್ತಾನೆ ನಾವು ಪ್ರತಿ 2ಗಂಟೆಗೆ ಏಕೆ ಇದನ್ನು ಪರಿಶೀಲಿಸಬೇಕು ಇದು ಯಾಕೋ ಸರಿ ಇಲ್ಲ ಎಂದು ಯೋಚಿಸುತ್ತಾನೆ.

 ದಿನಕ್ಕೆ ಒಂದು ಸಾರಿ ಪರಿಶೀಲನೆ ಮಾಡಿದರೆ ಸಾಕು ಎಂಬ ಅನಿಸಿಕೆ ಆದರೆ ಆಫೀಸಿನಲ್ಲಿ ಇರುವವರು ಯಾರೂ ಕೂಡ ಒಪ್ಪುವುದಿಲ್ಲ ಇದು ನಿಯಮ ನಡೆಯಲೇ ಬೇಕು ಎಂದು ಹೇಳುತ್ತಾರೆ ಆಗ ಚಾಣಾಕ್ಷ ಯುವಕ ಯೋಚನೆ ಮಾಡುತ್ತಾನೆ ಇದನ್ನು ಯಾರು ಜಾರಿಗೆ ತಂದವರು ನಾನು ಅವರನ್ನು ಮಾತನಾಡಿಸಿ ಬರುತ್ತೇನೆ ಎಂದು ಅವರ ವಿಳಾಸವನ್ನು ಪಡೆಯುತ್ತಾನೆ.

 ಒಂದು ಹಳ್ಳಿಯಲ್ಲಿ ಹಿರಿಯರು ವಾಸವಾಗಿರುತ್ತಾರೆ ಆಗ ಈ ಹೊಸದಾಗಿ ಸೇರಿದವನು ತನ್ನ ಪರಿಚಯ ಮಾಡಿಕೊಂಡು ನೀವು ಪ್ರತಿ ಎರಡು ಗಂಟೆಗೆ ಏಕೆ ನೀರನ್ನು ನೀವು ಪರಿಶೀಲಿಸುತ್ತಿರಿ ಇದಕ್ಕೆ ಕಾರಣವೇನು ಎಂದು ಕೇಳುತ್ತಾನೆ.

ನೀವೇ ತಾನೆ ಜಾರಿಗೆ ತಂದವರು ಎಂದು ಹೇಳಿದಾಗ ಆ ಹಿರಿಯ ವ್ಯಕ್ತಿ ನಗುತ್ತಾರೆ ಮೂರ್ಖರು ಇನ್ನೂ ಪರೀಕ್ಷೆ ಮಾಡುತ್ತಿದ್ದಾರೆಯೇ   ಎಂದು ಕೇಳುತ್ತಾರೆ ಅದಕ್ಕೆ ಯುವಕ ಕೇಳುತ್ತಾನೆ ನೀವೇ ತಾನೆ ಅದನ್ನು ಪ್ರಾರಂಭಿಸಿದವರು  ಎಂದಾಗ  ಹೌದು ನಾನೇ ಇದನ್ನು ಪ್ರಾರಂಭಿಸಿದೆ

ಹಲವಾರು ವರ್ಷಗಳ ಹಿಂದೆ ಒಂದು ಕಂಪೆನಿಯ ಡ್ಯಾಂ ಒಡೆದು ಹೋಗಿ ನೀರಿಗೆ ಆಯಲ್ ಸೇರಿ ಮತ್ತೆ ಕಲುಷಿತ ನೀರು ಸೇರಿ ಬರುತ್ತಿತ್ತು ಆಗ ನಾನು ಪ್ರಾರಂಭಿಸಿದೆ ಜನರು ಒಳ್ಳೆಯ ನೀರು ಕುಡಿಯಬೇಕು ಕಲುಷಿತ ನೀರು ಕುಡಿಯಬಾರದು ಅದಕ್ಕೆ ನಾನು ಹೀಗೆ ಮಾಡಿದೆ ನೀರನ್ನು ತಪಾಸಣೆ ಮಾಡುತ್ತಿದೆ ಎಂದು ಹೇಳಿದನು.

 ಹಲವಾರು ವರ್ಷಗಳ ನಂತರ ನಾನು ನಿವೃತ್ತಿಯಾದೆ ನಂತರ ಏನಾಯ್ತು ನನಗೆ ಗೊತ್ತಿಲ್ಲ ಹಿರಿಯರು ನೀರನ್ನು ಪ್ರತಿ ಎರಡು ಗಂಟೆಗೆ ಪರಿಶೀಲನೆ ಮಾಡುತ್ತಿದ್ದೆ ಹೇಳುತ್ತಾರೆ ಯುವಕ ಸರ್ಕಾರದವರು ಇದನ್ನು ಅದೇ ರೀತಿ ಮಾಡುತ್ತಿದ್ದಾರೆ ಎಂದು ಹೇಳಿದನು ಈಗ ಎಲ್ಲವೂ ಅಭಿವೃದ್ಧಿಯಾಗಿದೆ ಒಳ್ಳೆಯ ನದಿಯಾಗಿದೆ ಅದಕ್ಕೆ ಶುದ್ಧೀಕರಿಸಿ ನೀರು ಬಿಡುತ್ತಾರೆ.

ವೈಜ್ಞಾನಿಕವಾಗಿ ವ್ಯವಸ್ಥೆ ಮಾಡಿದ್ದಾರೆ ಆದರೆ ಈಗಲೂ ಸಹ ನೀರನ್ನು  ಪರಿಶೀಲನೆ ಮಾಡುತ್ತಲೇ ಇದ್ದಾರಂತೆ ಹೀಗೆ ಕೆಲವು ನಿಯಮಗಳನ್ನು ಈಗಲೂ ಪಾಲಿಸುತ್ತಾ ಬಂದಿದ್ದಾರೆ ವೈಜ್ಞಾನಿಕವಾಗಿ ಪರಿಶೀಲಿಸಿದರೆ ಅರ್ಥವಾಗುತ್ತದೆ. ಯಾವುದೇ ನಿಯಮವಿರಲಿ ವೈಜ್ಞಾನಿಕವಾಗಿ ವಿವೇಚನೆಯಿಂದ ಅರ್ಥಮಾಡಿಕೊಳ್ಳೋಣ.

ಗುಂಡು ಕಲ್ಲಿನ ಸಾಂಬಾರು

ಒಂದು ಸಾರಿ ಬಾಬಾ ಅವರು ಊರಿಂದ ಊರಿಗೆ ಹೋಗಿ ಉಪನ್ಯಾಸಗಳನ್ನು ನೀಡುತ್ತಿರುತ್ತಾರೆ ಆದುದರಿಂದ ಅವರಿಗೆ ಅಲ್ಲಿಯೇ ಊಟದ ವ್ಯವಸ್ಥೆಗಳು ಆಗುತ್ತಿರುತ್ತದೆ ಒಂದು ಊರಿಗೆ ಬರುತ್ತಾರೆ ಅಲ್ಲಿ ಉಪನ್ಯಾಸ ನೀಡುತ್ತಾರೆ.

 ಉಪನ್ಯಾಸ ಮುಗಿದ ನಂತರ ಯಾರೂ ಊಟ ತಿಂಡಿ ಕೊಡುವುದಿಲ್ಲ ಇರಲಿಕ್ಕೆ ಒಂದು ಶಾಲೆಯಲ್ಲಿ ಅವಕಾಶ ಮಾಡಿಕೊಡುತ್ತಾರೆ ಊಟ ಇಲ್ಲದೆ ನಾನು ಹೇಗೆ ಇರಬೇಕು ಎಂದು ಚಿಂತಿಸುತ್ತಾರೆ ಏನು ಮಾಡಬೇಕು ಎಂದು ಯೋಚಿಸಿದ ನಂತರ ಬಾಬಾ ಅವರು ಒಂದು ಉಪಾಯವನ್ನು ಕಂಡುಕೊಳ್ಳುತ್ತಾರೆ.

ಒಂದು ದೊಡ್ಡ ಪಾತ್ರೆ ಹಾಗೂ ಗುಂಡು ಕಲ್ಲನ್ನು ತರಿಸಿ ಅದರಲ್ಲಿ ನೀರು ಹಾಕಿ ಕಾಯಿಸುತ್ತಾ ಇರುತ್ತಾರೆ ಇದನ್ನು ನೋಡಿದ ಕೆಲವು ಹಿರಿಯರು ಹೇಳ್ತಾರೆ ಇದು ಏನು ಎಂದು ಕೇಳಿದಾಗ ಬಾಬಾ ಅವರು ಹೇಳುತ್ತಾರೆ ನಾನು ವಿಶೇಷವಾಗಿ ಗುಂಡು ಕಲ್ಲಿನ ಸಾಂಬಾರನ್ನು ಮಾಡುತ್ತಿದ್ದೇನೆ ಅದಕ್ಕೆ ತಾವುಗಳು ಇದಕ್ಕೆ ಏನು ಬೇಕಾದರೂ ಹಾಕಬಹುದು ಎಂದಾಗ ಈ ಮಾತು ಕೇಳಿದ ಎಲ್ಲರೂ ಕೂಡ ವಿಧವಿಧವಾದ ತರಕಾರಿ ಸೊಪ್ಪುಗಳು ಸಾಂಬಾರು ಮಾಡಲಿಕ್ಕೆ ಏನೇನು ಬೇಕು ಅದನ್ನು ತರುತ್ತಾರೆ. ಬಾಬಾ ಅವರು ಎಲ್ಲವನ್ನು ಸಮಪ್ರಮಾಣದಲ್ಲಿ ಹಾಕಿ ವಿಶೇಷ ಗುಂಡುಕಲ್ಲಿನ ಸಾಂಬಾರು ತಯಾರಿಸುತ್ತಾರೆ ಸಾಂಬಾರಿನಿಂದ ಘಮಘಮ  ವಾಸನೆ ಬರುತ್ತಿರುತ್ತದೆ.

ಅನ್ನವು ಬೇಕಲ್ಲ ಹಾಗೆ ಇನ್ನೊಂದು ದೊಡ್ಡ ಪಾತ್ರೆಯನ್ನು ತರಿಸಿ ಪಾತ್ರೆಯಲ್ಲಿ  ಎಲ್ಲರೂ ಒಂದು ಮುಷ್ಟಿಯಷ್ಟು ಅಕ್ಕಿಯನ್ನು ಹಾಕುತ್ತಾರೆ ನಂತರ ಅನ್ನ ತಯಾರಾಗುತ್ತದೆ  ನಂತರ ಗುಂಡು ಕಲ್ಲಿನ ಸಾಂಬಾರಿಗೆ ಮತ್ತು ಅನ್ನಕ್ಕೆ ಪ್ರಾರ್ಥನೆ ಮಾಡಿ ಕೃತಜ್ಞತೆ ಸಲ್ಲಿಸಿ ಊರಿಗೆ ಊರೇ ರುಚಿ ರುಚಿಯಾದ  ಊಟ ಮಾಡುತ್ತಾರೆ.

ಬಾಬಾ ಅವರು ಮಾಡಿದ ಉಪಾಯದಿಂದ ಬಾಬಾ ಅವರಿಗೆ ಒಳ್ಳೆಯ ಹೆಸರು ಬರುತ್ತದೆ ಮತ್ತೆ ಊಟವೂ ಸಿಗುತ್ತದೆ ನಂತರ ಊರಿನವರು ಹೊಗಳುತ್ತಾರೆ ಎಲ್ಲರೂ ಸೇರಿ ಒಂದೇ ಸಾರಿ ಊಟ ಮಾಡಿದಾಗ ಸಿಗುವ ಆನಂದ ವರ್ಣಿಸಲು ಸಾಧ್ಯವಿಲ್ಲ. ನನಗೆ ತುಂಬಾ ಹಸಿವಿದ್ದಾಗ ಚಾಲಾಕಿತನದಿಂದ  ತೃಪ್ತಿಯಿಂದ ಊಟ ಮಾಡಿದ್ದೇನೆಯೇ.

]]>
https://babakategalu.com/%e0%b2%a4%e0%b2%a6%e0%b3%87%e0%b2%95-%e0%b2%9a%e0%b2%bf%e0%b2%a4%e0%b3%8d%e0%b2%a4%e0%b2%a6%e0%b2%bf%e0%b2%82%e0%b2%a6-%e0%b2%97%e0%b2%ae%e0%b2%a8%e0%b2%bf%e0%b2%b8%e0%b3%81%e0%b2%a4%e0%b3%8d%e0%b2%a4/feed/ 0
ನೀರಿನಲ್ಲಿ ಮುಳುಗುತ್ತಿದ್ದೇನೆ ಕಾಪಾಡಿ https://babakategalu.com/%e0%b2%a8%e0%b3%80%e0%b2%b0%e0%b2%bf%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%ae%e0%b3%81%e0%b2%b3%e0%b3%81%e0%b2%97%e0%b3%81%e0%b2%a4%e0%b3%8d%e0%b2%a4%e0%b2%bf%e0%b2%a6%e0%b3%8d%e0%b2%a6/ https://babakategalu.com/%e0%b2%a8%e0%b3%80%e0%b2%b0%e0%b2%bf%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%ae%e0%b3%81%e0%b2%b3%e0%b3%81%e0%b2%97%e0%b3%81%e0%b2%a4%e0%b3%8d%e0%b2%a4%e0%b2%bf%e0%b2%a6%e0%b3%8d%e0%b2%a6/#respond Sat, 08 Mar 2025 04:40:00 +0000 https://babakategalu.com/?p=199 Read more]]> ಪಂಡಿತರು ದಿನನಿತ್ಯ ನದಿಗೆ ಹೋಗಿ ಸ್ನಾನ ಮಾಡಿ ಧ್ಯಾನ ಮಾಡಿ ಬರುತ್ತಿದ್ದರು ದಿನನಿತ್ಯದಂತೆ ಸ್ನಾನ ಮಾಡಲು ಹೋದಾಗ ಅಲ್ಲಿ ಒಬ್ಬ ವ್ಯಕ್ತಿ ಮಲಗಿದ್ದನು ಅವನ ಪಕ್ಕದಲ್ಲಿ ಒಂದು ಮಧ್ಯದ ಬಾಟಲ್ ಇತ್ತು ಇದನ್ನು ನೋಡಿದ ಪಂಡಿತರು ನಾಚಿಕೆಗೇಡಿನ ಕೆಲಸ ಎಂದು ಬಯ್ಯುತ್ತಾ ಮುಂದೆ ಹೋಗಿ ಸ್ನಾನ ಮಾಡಿ ಧ್ಯಾನಕ್ಕೆ ಕುಳಿತರು.

 ಸ್ವಲ್ಪ ಸಮಯದಲ್ಲಿಯೇ ಜೋರಾಗಿ ಕಿರಿಚುವ ಶಬ್ದ ಬಂತು ನೀರಿನಲ್ಲಿ ಮುಳುಗುತ್ತಿದ್ದೇನೆ ಕಾಪಾಡಿ ಕಾಪಾಡಿ ಎಂದಾಗ ಪಂಡಿತರು ನಿಧಾನವಾಗಿ ಕಣ್ಣು ಬಿಟ್ಟು ನೋಡಿದರು ಒಬ್ಬ ವ್ಯಕ್ತಿ ನೀರಿನಲ್ಲಿ ಮುಳುಗುತ್ತಿದ್ದಾನೆ ಏನು ಮಾಡುವುದು ಎಂದು ಯೋಚನೆ ಮಾಡುತ್ತಿದ್ದರು.

 ಅಷ್ಟರಲ್ಲಿ ಒಬ್ಬನು ನೀರಿನಲ್ಲಿ ಮುಳುಗುತ್ತಿದ್ದ ವ್ಯಕ್ತಿಯನ್ನು ನೀರಿನಿಂದ ಕಾಪಾಡಿ ದಡಕ್ಕೆ ತಂದು ಕೂರಿಸಿದರು ಇದನ್ನು ನೋಡಿದ ಪಂಡಿತರಿಗೆ ಬೇಸರವಾಯಿತು ಏಕೆಂದರೆ ನಾನು ಆ ವ್ಯಕ್ತಿಯನ್ನು ತಪ್ಪಾಗಿ ತಿಳಿದುಕೊಂಡೆ ಎಂದು ನಂತರ ಹೋಗಿ ಆ ವ್ಯಕ್ತಿಯನ್ನು ವಿಚಾರಿಸಿದರು.

 ಪಂಡಿತರು ನಿನ್ನನ್ನು ಕುಡುಕ ಎಂದು ಅರ್ಥ ಮಾಡಿಕೊಂಡಿದ್ದೆ ಎಂದು ಹೇಳಿದಾಗ ಆ ವ್ಯಕ್ತಿ ಹೇಳಿದನು ಪಂಡಿತರೆ ನಾನು ಕಳೆದ ಒಂದು ವಾರದಿಂದ ಬೇರೆ ಊರಿನಲ್ಲಿ ಕೆಲಸ ಮಾಡಿ ದಣಿದು ಬರುತ್ತಿದ್ದೆ.

ನಮ್ಮ ಮಾಲೀಕರು ದಾರಿಯಲ್ಲಿ ಬಾಯಾರಿಕೆ ಹಸಿವು ಆಗಬಹುದು ಎಂದು ಸ್ವಲ್ಪ ಬುತ್ತಿ ಹಾಗೂ ನೀರನ್ನು ಯಾವುದೋ ಬಾಟಲಿನಲ್ಲಿ ನೀರು ಕೊಟ್ಟರು ಅದನ್ನು ನಾನು ಜೊತೆಗಿಟ್ಟು ಕೊಂಡು ಬಂದೆ ನಂತರ ಅವರು ಹೇಳಿದಂತೆ ನನ್ನ ಊರಿಗೆ ಬರುತ್ತಿದ್ದಂತೆ ಆಯಾಸವು ಹೆಚ್ಚಾಯಿತು ಹಸಿವು ಹೆಚ್ಚಾಯಿತು ಆದ್ದರಿಂದ ತಂದಿದ್ದ ಬುತ್ತಿಯನ್ನು ತಿಂದು ಸ್ವಲ್ಪ ನೀರನ್ನು ಕುಡಿದು ಕುಳಿತುಕೊಂಡೆ.

 ಬೆಳಗಿನ ಜಾವ ಆದ್ದರಿಂದ ತಂಪಾದ ಗಾಳಿ ಬಂತು ಹಾಗೆ ನಿದ್ದೆಗೆ ಜಾರಿದೆ ಎಂದು ಹೇಳಿದನು ಆಗ ಪಂಡಿತರು ಇನ್ನು ಮುಂದೆ ನಾನು ಸರಿಯಾಗಿ ಗ್ರಹಿಸದೆ ಏನು ಹೇಳಬಾರದು ಎಂದು ಅರ್ಥ ಮಾಡಿಕೊಂಡರು ಕೆಲವು ಸಲ ನೋಡಿದ್ದು ಕೇಳಿದ್ದು ಎರಡು ಸುಳ್ಳಾಗಬಹುದು ಅದಕ್ಕೆ ಸರಿಯಾಗಿ ವಿಮರ್ಶೆ ಮಾಡಿ ನಿರ್ಧರಿಸೋಣ.

 ನಿನ್ನ ಆಟ ತೋರಿಸು

ಒಂದು ಸಾರಿ ಸರ್ಕಸ್ ನಿಂದ ಒಂದು ಸಿಂಹವು ತಪ್ಪಿಸಿಕೊಂಡು ಓಡುತ್ತಾ ಓಡುತ್ತಾ ಗಿಡಗಳ ಒಳಗೆ ಹೋಗಿ ಅಡಗಿಕೊಂಡಿರುತ್ತದೆ ಏನೇ ಮಾಡಿದರೂ ಸಿಂಹ ಆಚೆಗೆ ಬರುತ್ತಿರುವುದಿಲ್ಲ ಸಿಂಹ ಗಿಡಗಳ ಮಧ್ಯದಲ್ಲಿಯೇ ಇದೆ ಎಂದು ಖಚಿತಪಡಿಸಿಕೊಂಡು ಸರ್ಕಸ್ ನವರನ್ನು ಕರದು ಹೇಳುತ್ತಾರೆ.

 ನಿಮಗೆ ನಾವು ಒಂದು ದಿನದ ಅವಕಾಶವನ್ನು ಕೊಡುತ್ತೇನೆ ಅಷ್ಟೊರೊಳಗೆ ನೀವು ಆ ಸಿಂಹವನ್ನು ನೀವು ಕರೆದುಕೊಳ್ಳಿ ಇಲ್ಲದಿದ್ದರೆ ಗುಂಡಿಕ್ಕಿ ಕೊಲ್ಲಬೇಕು ಇಲ್ಲದಿದ್ದರೆ ಎಲ್ಲರಿಗೂ ತೊಂದರೆಯಾಗುತ್ತದೆ ಎಂದು ಹೇಳುತ್ತಾರೆ ಆಗ ಸರ್ಕಸ್ಸಿನವರಿಗೆ ಏನು ಮಾಡಬೇಕೆಂದು ತೋಚುವುದಿಲ್ಲ.

 ಸರ್ಕಸ್ಸಿನವರು ಸ್ವಲ್ಪ ಸಮಯ ಯೋಚಿಸುತ್ತಾರೆ ನಂತರ ಇವರಿಗೆ ಒಂದು ಉಪಾಯ ಬರುತ್ತದೆ ಸರ್ಕಸ್ ನಲ್ಲಿ ಇರುವ ಕೆಲವರು ತಮಟೆ ಬಾರಿಸುವರು ಆಟಕ್ಕೆ ಯಾರು ಬೇಕೋ ಅವರನ್ನು ಕರೆಸಿ ಆ ಗಿಡಗಳ ಮುಂದೆಯೇ ಸರ್ಕಸ್ಸನ್ನು ಆರಂಭಿಸುತ್ತಾರೆ.

ಈ ಸರ್ಕಸ್ಸನ್ನು ನೋಡಲು ಕೂಡ ಕೆಲವರು ಬಂದು ನೋಡುತ್ತಿರುತ್ತಾರೆ ಆಗ ಸರಿಯಾಗಿ ಅವರು ಹೇಳುತ್ತಾರೆ ಈಗ ನಿನ್ನ ಸಮಯ ಬಂದಿದೆ ನೀನು ಬಂದು ನಿನ್ನ ಆಟ ತೋರಿಸು ಎಂದಾಗ ಆ ಸಿಂಹವು ಮರೆತು ಅದರ ಆಟ ತೋರಿಸುತ್ತದೆ.

ಆಟ ಮುಗಿಸಿದ ನಂತರ ಸಿಂಹವು ತನ್ನ ಅಭ್ಯಾಸಬಲದಂತೆ ಪಂಜರದ ಒಳಗೆ ಹೋಗಿ ಕುಳಿತುಕೊಳ್ಳುತ್ತದೆ ಆಗ ಎಲ್ಲರೂ ಕೂಡ ಆ ಸರ್ಕಸ್ಸಿನವರಿಗೆ ಗೌರವಿಸುತ್ತಾರೆ.

 ಅಭ್ಯಾಸಗಳು ಒಳ್ಳೆಯದಿದ್ದರೂ ಸರಿ ಅಭ್ಯಾಸಗಳು ಕೆಟ್ಟದಿದ್ದರೂ ಅಭ್ಯಾಸಗಳೇ ಒಳ್ಳೆಯ ಅಭ್ಯಾಸಗಳಿಂದ ಅದೃಷ್ಟವೇ ಬದಲಾಗುತ್ತದೆ ಒಳ್ಳೆಯ ಅಭ್ಯಾಸಗಳನ್ನು ರೂಡಿಸಿಕೊಳ್ಳೋಣ.

 ಶಕ್ತಿ ಕಡಿಮೆ ಇತ್ತು

ಒಂದು ಕಾಗೆ ನದಿಯ ತೀರದಲ್ಲಿ ಆಹಾರ ಹುಡುಕುತ್ತಿತ್ತು ಅಂದು ಅದಕ್ಕೆ ಯಾವುದೇ ರೀತಿಯ ಆಹಾರವು ಸಿಗುತ್ತಿರಲಿಲ್ಲ ಕೊನೆಗೆ ಒಂದು ಚಿಪ್ಪು ಕಾಣಿಸಿತು ಕಾಗೆ ಅದಕ್ಕೆ ಕುಕ್ಕಿತು ಎಸೆಯಿತು ಏನೇ ಮಾಡಿದರು ಹುಳುವು ಈಚೆಗೆ ಬರುತ್ತಿರಲಿಲ್ಲ.

 ಕಾಗೆ ಇಷ್ಟೊಂದು ಪ್ರಯತ್ನ ಮಾಡುತ್ತಿರುವುದನ್ನು ನೋಡಿ ಇನ್ನೊಂದು ಹದ್ದು ಹೇಳಿತು ನೀನು ಹೀಗೆ ಎಷ್ಟೇ ಪ್ರಯತ್ನ ಪಟ್ಟರೂ ಹುಳು ಆಚೆಗೆ ಬರುವುದಿಲ್ಲ ಇದಕ್ಕೆ ಒಂದು ಉಪಾಯವಿದೆ.

 ಈ ಚಿಪ್ಪನ್ನು ಕೊಕ್ಕಿನಲ್ಲಿ ಹಿಡಿದುಕೊಂಡು ಮೇಲಕ್ಕೆ ಹೋಗಿ ಬಂಡೆಯ ಮೇಲೆ ಬೀಳಿಸು ಸಾಕು ಚಿಪ್ಪು ತಾನಾಗೇ ಒಡೆದುಹೋಗುತ್ತದೆ ಹುಳು ಈಚೆಗೆ ಬರುತ್ತದೆ ಅದನ್ನು ನೀನು ತಿನ್ನಬಹುದು ಎಂದಿತು.

ಕಾಗೆ ಅದೇ ರೀತಿಯಲ್ಲಿ ತೆಗೆದುಕೊಂಡು ಹಾರಿತು ಮೇಲಿನಿಂದ ಬಿಟ್ಟಿತು  ಚಿಪ್ಪು ಹೊಡೆಯಿತು ಹುಳವು ಆಚೆ ಬಂತು ಆದರೆ ಹುಳ ಸಿಕ್ಕಿದ್ದು ಹದ್ದಿಗೆ ಮಾತ್ರ ನಂತರ ಕಾಗೆಯೂ ಪರಿತಪಿಸಿತ್ತು.

 ಕಾಗೆಗೆ ಯಾವುದು ಸರಿ ಯಾವುದು ತಪ್ಪು ಎಂದು ಯೋಚನೆಯ ಮಾಡುವ ಶಕ್ತಿ ಕಡಿಮೆ ಇತ್ತು ಹಾಗಾಗಿ ಕಪ್ಪೆ ಕಷ್ಟಪಟ್ಟಿದ್ದು ಹದ್ದಿನ ಪಾಲಾಯಿತು ನಾನು ಬಹಳಷ್ಟು ಕಷ್ಟಪಟ್ಟಿದ್ದು ಬೇರೆಯವರ ಪಾಲಾಗಿದ್ದೆಯೇ? ಮುಂದಾಲೋಚನೆ ಯೊಂದಿಗೆ ಕೆಲಸ ಆರಂಭಿಸೋಣ.

ಸಮಯವು ಉಳಿಯುತ್ತದೆ

ಒಬ್ಬ ಹುಡುಗ ಹತ್ತು ವರ್ಷದವನಾಗಿರುತ್ತಾನೆ ಇವನಿಗೆ ಚಿಕ್ಕ ತಂಗಿ ತಮ್ಮ ಇರುತ್ತಾರೆ ಮನೆಯಲ್ಲಿ ತುಂಬಾ ಬಡತನ ಒಂದು ಸಾರಿ ಸಿಕ್ಕರೆ ಇನ್ನೊಂದು ಸಾರಿ ಊಟ ಸಿಗುತ್ತೆ ಎನ್ನುವ ಗ್ಯಾರಂಟಿ ಇರುವುದಿಲ್ಲ ಹೀಗೆ ಇದ್ದಾಗ ನಾನು ಏನು ಮಾಡಬಹುದು ಎಂದು ಯೋಚಿಸಿದಾಗ ಹುಡುಗನಿಗೆ ಕಂಡದ್ದು ದಿನಪತ್ರಿಕೆ ಬೆಳಿಗ್ಗೆ ಎಲ್ಲರೂ ದಿನಪತ್ರಿಕೆಯನ್ನು ಹಾಕುತ್ತಿರುತ್ತಾರೆ.

ನಾನೂ ಕೂಡ ದಿನಪತ್ರಿಕೆ ಹಾಕುತ್ತೇನೆ ಎಂದು ಪತ್ರಿಕೆಯವರನ್ನು ಕೇಳಿದಾಗ ಪತ್ರಿಕೆಯವರು ಪತ್ರಿಕೆ ಹಂಚುವುದಕ್ಕೆ ಸೈಕಲ್ ಬೇಕು ಏಕೆಂದರೆ ದೂರದೂರ ಮನೆಗಳು ಇರುತ್ತವೆ ಎಂದು ಹೇಳುತ್ತಾರೆ ಆಗ ಹುಡುಗ ಚಾಲಾಕಿತನದಿಂದ ಹೇಳುತ್ತಾನೆ ಹತ್ತಿರದಲ್ಲಿ ಇರುವಷ್ಟು ಕೊಡಿ ನಾನು ಹಾಕುತ್ತೇನೆ ಬಂದ ದುಡ್ಡಿನಲ್ಲಿ ನಾನು ಸೈಕಲ್ಲನ್ನು ಖರೀದಿಸುತ್ತೇನೆ ಎಂದು ಹೇಳುತ್ತಾನೆ.

 ಕೆಲವು ದಿನ ನಡೆದುಕೊಂಡು ದಿನಪತ್ರಿಕೆ ಹಂಚುತ್ತಾನೆ ನಂತರ ಒಂದು ಸೈಕಲನ್ನು ಖರೀದಿಸುತ್ತಾನೆ ಮತ್ತೆ ಹೊಸ ರೀತಿಯಲ್ಲಿ ಯೋಚಿಸುತ್ತಾನೆ ಸಾಕಷ್ಟು ಚಿಲ್ಲರೆ ಹಣವನ್ನು ಇವನೇ ಇಟ್ಟುಕೊಳ್ಳುತ್ತಾನೆ ಮನೆಮನೆಗೆ ಹೋಗಿ ದಿನನಿತ್ಯ ನೀಡುತ್ತಾನೆ ಚಿಲ್ಲರೆಯ ತುಂಬ ಅಭಾವ ಹೆಚ್ಚಾಗಿರುತ್ತದೆ ಅದಕ್ಕೆ ಈ ಹುಡುಗ ಚಿಲ್ಲರೆ ಇಲ್ಲದಿದ್ದರೆ ನಾಳೆ ಕೊಡಿ ಎಂದು ಹೇಳಿ ಹೊರಟು ಹೋಗುತ್ತಾನೆ.

ಸಾಕಷ್ಟು ಚಿಲ್ಲರೆಯನ್ನು  ಹುಡುಗನೇ ಇಟ್ಟುಕೊಂಡಿರುತ್ತಾನೆ ಇದರಿಂದಾಗಿ ಇವನಿಗೆ ಕೆಲಸವು ತುಂಬಾ ಸುಲಭವಾಗುತ್ತದೆ ನಂತರ ಹೇಳುತ್ತಾನೆ ನಾನು ಹತ್ತು ದಿನಗಳು ದಿನಪತ್ರಿಕೆ ಹಾಕುತ್ತೇನೆ ನಂತರ ಹಣವನ್ನು ಪಡೆದುಕೊಳ್ಳುತ್ತೇನೆ ಹತ್ತು ದಿನಗಳ ನಂತರ ಒಂದೇ ಸಾರಿ ಹೋಗಿ ಹಣವನ್ನು ಪಡೆಯುತ್ತಾನೆ.

ಕೆಲವು ದಿನಗಳ  ನಂತರ ಇವನು ತಿಂಗಳಿಗೆ ಒಂದು ಸಾರಿ ನೀವು ಹಣ ಕೊಟ್ಟರೆ ಸಾಕು ಅದಕ್ಕಾಗಿ ನಾನು ನಿಮ್ಮ ಮನೆಗೆ ಮೊದಲೇ ದಿನಪತ್ರಿಕೆ ಹಾಕಿರುತ್ತೇನೆ ಎಂದು ಹೇಳುತ್ತಾನೆ ಇದಕ್ಕೆ ಎಲ್ಲರೂ ಒಪ್ಪುತ್ತಾರೆ ಈ ರೀತಿ ಮಾಡಿದ್ದರಿಂದ ಇವನು ಒಳ್ಳೆಯ ಪ್ರಸಿದ್ಧಿಯಾಗುತ್ತಾನೆ.

 ಬೇರೆ ದಿನಗಳಲ್ಲಿ ಎಲ್ಲರಿಗೂ ಪೇಪರನ್ನು ತಲುಪಿಸಿ ಒಂದು ದಿನ ಮಾತ್ರ  ದಿನಪತ್ರಿಕೆಯ ಹಣವನ್ನು ಹೋಗಿ ಪಡೆಯುತ್ತಾನೆ ಇದರಿಂದ ಸಮಯವೂ ಉಳಿಯುತ್ತದೆ ಅಂದರೆ ಇಲ್ಲಿ ಹುಡುಗನಾದವನು ಸೃಜನಶೀಲತೆಯಿಂದ ಯೋಚಿಸಿದ ಇದಾದ ನಂತರವೇ ತಿಂಗಳಿಗೆ ಬಿಲ್ಲು ಪದ್ದತಿ ಬಂತೆಂದೂ ಹೇಳುತ್ತಾರೆ.

 ಎಂತಹ ಕಷ್ಟದ ಪರಿಸ್ಥಿತಿ ಬಂದರೂ ಕೂಡ ಧೈರ್ಯವಿದ್ದರೆ ಸಾಕು ಹೊಸದಾಗಿ ಯೋಚನೆ ಮಾಡಿದರೆ ಸಾಕು ಹೇಗೆ ಬೇಕಾದರೂ ಬೆಳೆಯಬಹುದು.

ಸುಲಭವಾಗಿ ಕಲಿಯಬಹುದು

ಒಂದು ಕಂಪನಿಯಲ್ಲಿ ಇಪ್ಪತ್ತು ಜನರನ್ನು ಆಯ್ಕೆ ಮಾಡುತ್ತಾರೆ ಹತ್ತು ಜನಕ್ಕೆ ಒಂದು ತಂಡದಂತೆ ಅವರು ಒಂದು ಹೊಸ ಚೈನೀಸ್ ಭಾಷೆಯನ್ನು ಕಲಿಯಬೇಕು ಅದಕ್ಕಾಗಿ ಕಂಪನಿಯವರು ಆ ಭಾಷೆಯಲ್ಲಿ ಪ್ರವೀಣರಾದ ಕೋಚ್ ಗಳನ್ನು ನೇಮಿಸುತ್ತಾರೆ.

 2 ತಂಡಗಳನ್ನು ಗಮನಿಸಿದಾಗ ಎರಡೂ ತಂಡದವರು ಕೂಡ ಸಮಾನ ಬುದ್ದಿವಂತರು ಆದರೆ ತರಬೇತಿ ಆದ ನಂತರ ನೋಡಿದಾಗ ಒಂದು ತಂಡದಲ್ಲಿ ತುಂಬಾ ಚೆನ್ನಾಗಿ ಕಲಿತಿರುತ್ತಾರೆ ಇನ್ನೊಂದು ತಂಡದಲ್ಲಿ ಅಷ್ಟೇನೂ ಚೆನ್ನಾಗಿ ಕಲಿತಿರುವುದಿಲ್ಲ ಇದಕ್ಕೆ ಕಾರಣ ಏನು ಎಂದು ಹುಡುಕಿದಾಗ ಮೊದಲನೆಯ ತಂಡದ ವಿದ್ಯಾರ್ಥಿಗಳು ಮೊದಲ ದಿನ ತರಗತಿಯನ್ನು ಆರಂಭಿಸಿದಾಗ ಕಲಿಸುವವರು ಹೇಳುತ್ತಾರೆ.

 ಅತ್ಯಂತ ಕಠಿಣ ಭಾಷೆ ಎಂದರೆ ಚೈನೀಸ್ ಭಾಷೆ ಇದನ್ನು ಕಲಿಯುವುದು ಬಹಳ ಕಷ್ಟ ಆದರೂ ನಾವು ಕಲಿಯುತ್ತಾ ಹೋಗೋಣ ಮತ್ತೆ ಇದಕ್ಕೆ ನನಗೆ ಕೊಟ್ಟಿರುವ ಸಮಯ ತುಂಬಾ ಕಡಿಮೆ ಆದುದರಿಂದ ಎಷ್ಟು ಸಾಧ್ಯವಾಗುತ್ತದೋ ಅಷ್ಟನು ಮಾತ್ರ ನಾನು ಕಲಿಸುತ್ತೇನೆ.

 ಈ ಮಾತುಗಳನ್ನು ಕೇಳಿದ ವಿದ್ಯಾರ್ಥಿಗಳು ಈ ಭಾಷೆ ನಾವು ಕಲಿಯುವುದು ಕಷ್ಟ ಎಂದು ಕೈಬಿಡುತ್ತಾರೆ ಬರೀ ತರಬೇತಿಯನ್ನು ಮುಗಿಸುತ್ತಾರೆ ಅಷ್ಟೆ ನಂತರ ಎರಡನೇ ತಂಡದ ಶಿಕ್ಷಕರು ಮೊದಲನೇ ದಿನವೇ ಹೀಗೆ ಹೇಳುತ್ತಾರೆ ಎಲ್ಲಾ ಭಾಷೆಗಳಲ್ಲಿ ಚೈನೀಸ್ ಭಾಷೆ ತುಂಬಾ ಸುಲಭವಾಗಿದ್ದು ಚೀನಾದವರು ಎಲ್ಲಿ ಬೇಕಾದರೂ ನಮಗೆ ಸಿಗುತ್ತಾರೆ.

 ಈ ಭಾಷೆ ತುಂಬ ಸುಂದರ ಹಾಗೂ ಸರಳವಾದ ಭಾಷೆ ಈ ಭಾಷೆ ಹೇಳಿಕೊಡಬೇಕು ಎಂದರೆ ನನಗೆ ಒಂದು ಅವಕಾಶ ಸಿಕ್ಕಿದೆ ತುಂಬ ಸುಲಭವಾಗಿರುವಂತ ಭಾಷೆಯಿದು ತುಂಬ ಚೆನ್ನಾಗಿ ನಾವು ಸುಲಭವಾಗಿ ಕಲಿಯಬಹುದು ಎಂದು ಹೇಳುತ್ತಾರೆ.

 ಸರಿಯಾಗಿ ಈ ಭಾಷೆ ಕಲಿಯಬೇಕು ಎಂದರೆ ನಾವು 2 ವಾರಗಳಲ್ಲಿ 3 ವಾರಗಳಲ್ಲಿ ಅರ್ಥಮಾಡಿಕೊಳ್ಳಬಹುದು ಸಾಕಷ್ಟು ನಾವು ಕಲಿಯಬಹುದು ನಮಗೆ ಒಂದು ತಿಂಗಳು ಇದೆ ಅಂದಮೇಲೆ ನಾವು ಇದರಲ್ಲಿ ಪರಿಣಿತಿಯನ್ನು ಪಡೆಯಬಹುದು ಎಂದು ಉತ್ಸಾಹ ತುಂಬುತ್ತಾರೆ.

ತರಗತಿಯನ್ನು ಆರಂಭಿಸಿದರು ಮೊದಲ ಬಾರಿಗೆ ನಾವು ಎರಡು ಮೂರು ವಾಕ್ಯಗಳು ಕಲಿತರೆ ಸಾಕು ನಮಸ್ಕಾರ ಹೇಗಿದ್ದೀರಿ ನಿಮ್ಮ ಹೆಸರೇನು ಊಟ ಆಯಿತೇ ತಿಂಡಿ ಆಯಿತೇ ಎಲ್ಲಿಂದ ಬಂದಿದ್ದೀರಿ ಎಲ್ಲಿಗೆ ಹೋಗುತ್ತೀರಿ ನಿಮ್ಮ ಪರಿಚಯ ನಮಗೆ ಹೇಳಿ ಈ ರೀತಿ ನಾವು ಕಲಿಯುತ್ತಾ ಹೋಗೋಣ ಎಂದು ಉತ್ಸಾಹ ತುಂಬಿದರು.

 ಎರಡನೇ ತಂಡದವರು ತುಂಬಾ ಚೆನ್ನಾಗಿ ಕಲಿತರು ಮೊದಲನೆಯ ತರಬೇತಿಯಲ್ಲಿ ನಕರಾತ್ಮಕವಾಗಿ ಇತ್ತು ಅದೇ ಎರಡನೆಯ ತಂಡದಲ್ಲಿ ಸಕಾರಾತ್ಮಕ ವಾತಾವರಣ ಇತ್ತು ಹೀಗಾಗಿ ಅವರು ತುಂಬ ಚೆನ್ನಾಗಿ ಕಲಿತರು.

]]>
https://babakategalu.com/%e0%b2%a8%e0%b3%80%e0%b2%b0%e0%b2%bf%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%ae%e0%b3%81%e0%b2%b3%e0%b3%81%e0%b2%97%e0%b3%81%e0%b2%a4%e0%b3%8d%e0%b2%a4%e0%b2%bf%e0%b2%a6%e0%b3%8d%e0%b2%a6/feed/ 0
ನಾನು ಸಹಿಸಿಕೊಳ್ಳುತ್ತಿದ್ದೇನೆ https://babakategalu.com/%e0%b2%a8%e0%b2%be%e0%b2%a8%e0%b3%81-%e0%b2%b8%e0%b2%b9%e0%b2%bf%e0%b2%b8%e0%b2%bf%e0%b2%95%e0%b3%8a%e0%b2%b3%e0%b3%8d%e0%b2%b3%e0%b3%81%e0%b2%a4%e0%b3%8d%e0%b2%a4%e0%b2%bf%e0%b2%a6%e0%b3%8d%e0%b2%a6/ https://babakategalu.com/%e0%b2%a8%e0%b2%be%e0%b2%a8%e0%b3%81-%e0%b2%b8%e0%b2%b9%e0%b2%bf%e0%b2%b8%e0%b2%bf%e0%b2%95%e0%b3%8a%e0%b2%b3%e0%b3%8d%e0%b2%b3%e0%b3%81%e0%b2%a4%e0%b3%8d%e0%b2%a4%e0%b2%bf%e0%b2%a6%e0%b3%8d%e0%b2%a6/#respond Fri, 07 Mar 2025 04:40:00 +0000 https://babakategalu.com/?p=197 Read more]]> ಒಂದು ಕಾಡಿನಲ್ಲಿ ಹುಲಿಯು ಬೇಟೆಗಾಗಿ ಅಲೆಯುತ್ತಿರುತ್ತದೆ ಅಂದು ಮಧ್ಯಾಹ್ನವಾದರೂ ಯಾವುದೇ ಬೇಟೆ ಸಿಗುವುದಿಲ್ಲ ನಂತರ ಏನು ಮಾಡುವುದು ಎಂದು ಯೋಚಿಸುತ್ತಾ ಮುಂದೆ ಹೋಗುತ್ತಿರುತ್ತದೆ ಆಗ ಒಂದು ಗೂಳಿ ಕಾಣಿಸುತ್ತದೆ.

 ಹುಲಿ ಇದೆ ನನಗೆ ಇವತ್ತಿನ ಬೇಟೆ ಎಂದು ಗೂಳಿಗೆ ಅಟ್ಟಿಸಿಕೊಂಡು ಮಿಂಚಿನಂತೆ ಬರುತ್ತದೆ  ಅಷ್ಟರಲ್ಲಿ ಗೂಳಿಯು ಎಚ್ಚೆತ್ತುಕೊಂಡು ಶರವೇಗದಲ್ಲಿ ಓಡುತ್ತದೆ ಮುಂದೆ ಸ್ವಲ್ಪ ಕಿರಿದಾದ ಮಾರ್ಗ ಇರುತ್ತದೆ ಅಲ್ಲಿ ಹೋಗಿ ಅವಿತುಕೊಳ್ಳುತ್ತದೆ ನಂತರ ಬಂದು ಹುಲಿ ನೋಡುತ್ತದೆ.

 ಎಲ್ಲಿಯೂ ಕಾಣುತ್ತಿರುವುದಿಲ್ಲ ಆಗ ಗೂಳಿಯು ನಿಶ್ಚಿಂತೆಯಿಂದ ಸ್ವಲ್ಪ ಇಲ್ಲೇ ವಿಶ್ರಾಂತಿ ಪಡೆಯೋಣ ಎಂದು ಯೋಚಿಸುತ್ತದೆ ಅಷ್ಟರಲ್ಲಿ ಅದೇ ಸ್ಥಳದಲ್ಲಿ ಸ್ವಲ್ಪ ದೂರ ಇದ್ದ ಜಿಂಕೆಯು ಗೂಳಿಗೆ ತನ್ನ ಕೊಂಬಿನಿಂದ ತಿವಿಯುತ್ತಿದೆ.

 ಆಚೆ ಹೋಗು ಎಂದು ತಿವಿಯುತ್ತಲೇ ಇರುತ್ತದೆ. ಗೂಳಿಯು ಎಷ್ಟೇ ತಿವಿಯುತ್ತಿದ್ದರು ಸಹಿಸಿಕೊಳ್ಳುತ್ತದೆ ಇದನ್ನು ಅರ್ಥಮಾಡಿಕೊಂಡ ಜಿಂಕೆ ಮತ್ತಷ್ಟು ತನ್ನ ಕೊಂಬಿನಿಂದ ತಿವಿಯುತ್ತಲೇ ಇರುತ್ತದೆ ಜಿಂಕೆಗೆ ಅಹಂಕಾರ ಬಂದಿರುತ್ತದೆ.

 ನಾನು ಗೂಳಿಯನ್ನೇ ಸೋಲಿಸುತ್ತಿದ್ದೇನೆ ಜಂಬ ಕೊಚ್ಚಿಕೊಳ್ಳುತ್ತಾ  ಜಿಂಕೆ ಹೇಳುತ್ತದೆ ಆಗ ಗೂಳಿ ನೀನು ಸಾಕಷ್ಟು ತಿವಿಯುತ್ತಿದ್ದರು ನಾನು ಸಹಿಸಿಕೊಳ್ಳುತ್ತಿದ್ದೇನೆ ಏಕೆಂದರೆ ಹುಲಿ ಆಚೆ ಕಾಯುತ್ತಿದೆ ನಾನು ತೊಂದರೆಯಲ್ಲಿದ್ದೇನೆ ಮತ್ತೆ ನಾನು ನಿನ್ನ ಸ್ಥಳಕ್ಕೆ ಬಂದಿದ್ದೇನೆ.

 ನಾನು ನಿನ್ನ ಆಸರೆಯಲ್ಲಿದ್ದೇನೆ ಎನ್ನುವ ಕಾರಣದಿಂದಾಗಿ ಇಲ್ಲದಿದ್ದರೆ ನಾನು ಒಂದು ಸಾರಿ ನಿನಗೆ ತುಳಿದರೆ ಸತ್ತೆ ಹೋಗುತ್ತೀಯಾ ಎಂದು ಗೂಳಿ ಹೇಳುತ್ತದೆ ಪ್ರತಿಯೊಬ್ಬರಿಗೂ ಯಾವುದಾದರೂ ಸಂದರ್ಭದಲ್ಲಿ ಕಷ್ಟ ಬರುತ್ತದೆ ಆವಾಗ ಅವರಿಗೆ ಸಹಾಯ ಮಾಡಬೇಕೆ ಹೊರತು ಅವರನ್ನೇ ಹಿಂಸಿಸಬಾರದು ಎಂದು ಗೂಳಿ ಹೇಳುತ್ತದೆ ಆಗ ಜಿಂಕೆ ಅರ್ಥಮಾಡಿಕೊಳ್ಳುತ್ತದೆ. ನನಗೆ ಯಾರಾದರೂ ನಾನು ತೊಂದರೆಯಲ್ಲಿದ್ದೇನೆ ಎಂದು ಅರಿತು ಸತಾಯಿಸಿದ್ದಾರೆಯೇ?

 ಪಲ್ಲಕ್ಕಿಂದ ಶಬ್ದ ಬಂತು

ಇಬ್ಬರು ಮೃದು ಸ್ವಭಾವದ ಪ್ರವಾಸಿಗರು ಪ್ರವಾಸ ಮಾಡುತ್ತಾ ಒಂದು ಹಳ್ಳಿಗೆ ಬಂದು ತಲುಪುತ್ತಾರೆ ತಲುಪುತ್ತಿದ್ದಂತೆಯೇ ಸಂಜೆಯಾಗುತ್ತದೆ ಮತ್ತೆ ಬೇರೆ ಹಳ್ಳಿಗೆ ಹೋಗೋಣ ಎಂದರೆ ತುಂಬಾ ದೂರ ಇರುತ್ತದೆ ಆದುದರಿಂದ ಆ ಹಳ್ಳಿಯಲ್ಲಿಯೇ ಇದ್ದ ಒಂದು ಸಮುದಾಯ ಭವನದಲ್ಲಿ ಉಳಿದುಕೊಳ್ಳಲು ಯೋಚನೆ ಮಾಡುತ್ತಾರೆ.

ಸಮುದಾಯ ಭವನದ ಕಾವಲು ಗಾರರಿಗೆ ಹೇಳುತ್ತಾರೆ ನೋಡಿ ನಾವು ರಾತ್ರಿ ಇದ್ದು ಬೆಳಿಗ್ಗೆ ಇಲ್ಲಿಂದ ಹೊರಟು ಹೋಗುತ್ತೇವೆ. ಆದ್ದರಿಂದ ಈ ರಾತ್ರಿ ಉಳಿದುಕೊಳ್ಳುವುದಕ್ಕೆ ಅವಕಾಶ ಮಾಡಿಕೊಡಿ ಎಂದು ಕೇಳುತ್ತಾರೆ ಆ ಕಾವಲುಗಾರರು ಯಾತ್ರಿಕರ ಬಳಿ ಹಣ ಇದ್ದೇ ಇದೆ ಹೇಗಾದರೂ ಮಾಡಿ ಹಣ ಕದಿಯಬಹುದು ಎಂದು ಆಗಲಿ ನೀವು ನಿಶ್ಚಿಂತೆಯಿಂದ ಇರಬಹುದು ಎಂದು ಹೇಳಿದರು.

 ಯಾತ್ರಿಕರಿಗೆ ಒಂದು ಸ್ಥಳವನ್ನು ತೋರಿಸಿ ನೀವು ಇಲ್ಲಿ ಆರಾಮಾಗಿ ಇರಬಹುದು ಎಂದು ಹೇಳಿದರು ಇಬ್ಬರು ಯಾತ್ರಿಕರು ಯೋಚನೆ ಮಾಡಿದರು ನಮ್ಮ ಹತ್ತಿರ ಸ್ವಲ್ಪ ಹಣ ಇದೆ ಯಾರಾದರೂ ಕದ್ದರೆ ನಮಗೆ ಕಷ್ಟವಾಗುತ್ತದೆ ಹಾಗಾಗಿ ನಮ್ಮ ಹಣವನ್ನು. ನಾವು ತಂದಿರುವ ಗ್ರಂಥಗಳಲ್ಲಿ ಅಡಗಿಸೋಣ ಎಂದು ಮಾತನಾಡಿ ಗ್ರಂಥದಲ್ಲಿ ಹಣವನ್ನು ಅಡಗಿಸುತ್ತಾರೆ.

ಈ ಮಾತನ್ನು ಅಲ್ಲಿ ಇರುವ ಕಾವಲುಗಾರರು ಕೇಳಿಸಿಕೊಳ್ಳುತ್ತಾರೆ ಯಾತ್ರಿಕರು ಮಲಗಿದ ನಂತರ ಗ್ರಂಥದಿಂದ ಹಣವನ್ನು ಕಳ್ಳತನ ಮಾಡಿಬಿಡುತ್ತಾರೆ. ಬೆಳಿಗ್ಗೆ ಎದ್ದು ಯಾತ್ರಿಕರು ನಮ್ಮ ಹಣವನ್ನು ಒಂದು ಸಾರಿ ಪರಿಶೀಲಿಸಿಕೊಳ್ಳೋಣ ಎಂದರೆ ಹಣವೇ ಇರುವುದಿಲ್ಲ ಆಗ ಯಾತ್ರಿಕರಿಗೆ ತುಂಬಾ ಬೇಸರವಾಗುತ್ತದೆ.

ಕಾವಲುಗಾರರಿಗೆ ವಿನಯವಾಗಿ ಹೇಳುತ್ತಾರೆ ನೋಡಿ ನಮ್ಮ ಆ ಹಣ ಬಂಡವಾಳದ್ದು ಅದರಲ್ಲಿ ಸ್ವಲ್ಪ ಹಣ ನೀವು ಇಟ್ಟುಕೊಂಡು ಇನ್ನು ಮಿಕ್ಕಿದ್ದು ಹಣವಾದರೂ ನಮಗೆ ನೀಡಿ ಏಕೆಂದರೆ ರಾತ್ರಿ ಇಲ್ಲಿ ಯಾರು ಬಂದಿಲ್ಲ ಆದ್ದರಿಂದ ಆ ಹಣವನ್ನು ನೀವೇ ತೆಗೆದುಕೊಂಡು ಇದ್ದೀರಿ ಎಂದು ಹೇಳುತ್ತಾರೆ ಆದರೆ ಇಬ್ಬರು ಕಾವಲುಗಾರರು ಇಲ್ಲ ಇಲ್ಲ ನಾವು ನಿಮ್ಮ ಹಣವನ್ನು ಕಳ್ಳತನ ಮಾಡಿಲ್ಲ ಎಂದು ಹೇಳಿ ದಬಾಯಿಸುತ್ತಾರೆ.

 ಯಾತ್ರಿಕರಿಗೆ ತುಂಬಾ ಬೇಸರವಾಗುತ್ತದೆ ನಂತರ ಹಳ್ಳಿಯ ಹಿರಿಯರಿಗೆ ಹೇಳುತ್ತಾರೆ ಹಳ್ಳಿಯ ಹಿರಿಯರು ಯಾತ್ರಿಕರ ಮಾತುಗಳನ್ನು ಕೇಳಿ ಯಾತ್ರಿಕರಿಗೆ ನ್ಯಾಯ ಒದಗಿಸಲೇಬೇಕು ಇಲ್ಲದಿದ್ದರೆ ನಮ್ಮ ಹಳ್ಳಿಯ ಹೆಸರು ಹಾಳಾಗುತ್ತದೆ ಎಂದು ಯೋಚನೆ ಮಾಡಿ ಯಾತ್ರಿಕರು ಹಾಗೂ ಕಾವಲುಗಾರರನ್ನು ಕರೆಯುತ್ತಾರೆ.

 ನಮ್ಮ ಊರಿನಲ್ಲಿ ಒಂದು ನಿಯಮವಿದೆ ನಮ್ಮ ಮಂದಿರದಲ್ಲಿ ಒಂದು ಪಲ್ಲಕ್ಕಿ ಇದೆ, ಆ ಪಲ್ಲಕ್ಕಿಯನ್ನು ಹೊತ್ತುಕೊಂಡು ಒಂದು ಸುತ್ತು ಸುತ್ತಿ ಮತ್ತೆ ಮಂದಿರದಲ್ಲಿ ಇಟ್ಟಾಗ ಅದರಿಂದ ಶಬ್ದ ಬಂದಾಗ ಹಣ ಸಿಗುತ್ತದೆ ಎಂದು ಹೇಳಿದರು ಹಾಗಾಗಿ ಯಾತ್ರಿಕರಿಗೆ ಪಲ್ಲಕ್ಕಿಯನ್ನು ಹೊತ್ತುಕೊಂಡು ಹೋಗಿ ಎಂದು ಹೇಳಿದರು.

 ಯಾತ್ರಿಕರು ಪಲ್ಲಕ್ಕಿಯನ್ನು ಹೊತ್ತುಕೊಂಡರು ಪಲ್ಲಕ್ಕಿ ತುಂಬಾ ಭಾರವಾಗಿದೆ ಒಂದು ಸುತ್ತನ್ನು ಸುತ್ತಿದರು ಇಡಬೇಕಾದ ಸಮಯದಲ್ಲಿ ಯಾತ್ರಿಕರು ನಮ್ಮ ಹಣವು ಹೋಯಿತು ಈ ಹಳ್ಳಿಯ ಪದ್ಧತಿ ಏನು ತಿಳಿಯದು ಪಲ್ಲಕ್ಕಿ ಬೇರೆ ತುಂಬಾ ಭಾರವಾಗಿದೆ ಇದನ್ನು ಹೊತ್ತುಕೊಂಡು ಹೋಗಬೇಕಲ್ಲ ಇದು ನಮ್ಮ ಹಣೆಬರ ಎಂದು ಇಬ್ಬರು ಪ್ರವಾಸಿಗರು ಮಾತನಾಡಿಕೊಂಡರು.

 ಪಲ್ಲಕ್ಕಿಂದ ಶಬ್ದ ಬಂತು ಆಗ ಯಾತ್ರಿಕರು ಸಂತೋಷ ಪಟ್ಟರು ನಂತರ ಅದೇ ಪಲ್ಲಕ್ಕಿಯನ್ನು ಕಾವಲುಗಾರರು ಹೊತ್ತುಕೊಂಡು ಹೋಗಿ ಬರಲು ಹೇಳಿದರು ಕಾವಲುಗಾರರು ಕೂಡ ಪಲ್ಲಕ್ಕಿಯನ್ನು ಹೊತ್ತು ಕೊಂಡರು.

ಇಬ್ಬರು ಕಾವಲುಗಾರರು ಮಾತನಾಡಿಕೊಂಡರು ನಾವು ಕಳ್ಳತನ ಮಾಡಬಾರದಾಗಿತ್ತು ಕಳ್ಳತನ ಮಾಡಿದ್ದಕ್ಕೆ ಎಷ್ಟು ಬಾರ ಇರುವ ಪಲ್ಲಕ್ಕಿಯನ್ನು ಹೋರಬೇಕಾಗಿದೆ ಎಂದು ಹೇಳಿ ನಂತರ ಪಲ್ಲಕ್ಕಿಯನ್ನು ಇಳಿಸಿದರು ಆಗ ಯಾವುದೇ ರೀತಿಯ ಶಬ್ದ ಬರಲಿಲ್ಲ ನಂತರ ಹಿರಿಯರು ಕಾವಲುಗಾರರನ್ನು ಕರೆದರು ನೀವು ಕಳ್ಳತನ ಮಾಡಿರುವ ಹಣವನ್ನು ಯಾತ್ರಿಕರಿಗೆ ಕೊಟ್ಟು ಕಳುಹಿಸಿ ಎಂದು ಹೇಳಿದರು.

 ಕಾವಲುಗಾರರು ನಿಮಗೆ ಹೇಗೆ ತಿಳಿಯಿತು ಎಂದು ಕೇಳಿದರು ಆಗ ಪಲ್ಲಕ್ಕಿಯಲ್ಲಿ ನಾನು ಕುಳಿತಿದ್ದೆ ನೀವು ಹೇಳಿದ ಮಾತನ್ನು ನಾನು ಕೇಳಿಸಿಕೊಂಡಿದ್ದೇನೆ ಎಂದು ಹೇಳಿದರು ನಂತರ ಯಾತ್ರಿಕರ ಹಣವನ್ನು ಕೊಟ್ಟು ಕಳುಹಿಸಿದರು.

 ಆಕರ್ಷಿತರಾಗಬೇಡಿ

ಒಂದು ಊರಿನಲ್ಲಿ ಬುದ್ಧಿವಂತ ಯುವಕ ವ್ಯಾಪಾರಿಗಳು ವಾಸವಾಗಿರುತ್ತಾರೆ ಯುವಕರು ಎಲ್ಲರೂ ಸೇರಿ ಯೋಚನೆ ಮಾಡುತ್ತಾರೆ ಇನ್ನಷ್ಟು ನಾವು ಹೆಚ್ಚಾಗಿ ಸಂಪಾದನೆ ಮಾಡಬೇಕಾದರೆ ಬೇರೆ ಊರಿಗೆ ಹೋದರೆ ಸಂಪಾದನೆ ಯಾಗುತ್ತದೆ ಅದಕ್ಕಾಗಿ ಎಲ್ಲರೂ ಸಿದ್ಧತೆ ಮಾಡಿಕೊಂಡು ಹೊರಡುತ್ತಿದ್ದಾಗ ಹಿರಿಯ ಅನುಭವಿ ವ್ಯಾಪಾರಿಯೊಬ್ಬರು ಹೇಳುತ್ತಾರೆ.

ಮುಂದಿನ ಊರಿನಲ್ಲಿ  ನಿಮ್ಮ ವ್ಯಾಪಾರ ಚೆನ್ನಾಗಿ ನಡೆಯುತ್ತದೆ ಆದರೆ ಆ ದಾರಿಯಲ್ಲಿ ಅರಣ್ಯ ಇದೆ ಅದನ್ನು ನೀನು ದಾಟಿಹೋಗಬೇಕು ಮತ್ತೆ ಆ ಅರಣ್ಯದಲ್ಲಿ ಹೋಗುತ್ತಿದ್ದಂತೆ ನಿಮಗೆ ಕೆಲವು ಆಕರ್ಷಣೆಗಳು ಸಿಗುತ್ತವೆ ಅದಕ್ಕೆ ನೀವು ಯಾವುದೇ ಕಾರಣಕ್ಕೂ ಆಕರ್ಷಿತರಾಗಬೇಡಿ ಆಗ ಎಲ್ಲಾ ಯುವಕ ವ್ಯಾಪಾರಿಗಳು ನಾವು ಆಕರ್ಷಣೆಗೆ ಒಳಗಾಗದಿದ್ದರೆ ಸಾಕು ಆಗುವುದು ಬೇಡ ಎಂದು ತಿಳಿದು ಹೊರಡುತ್ತಾರೆ.

 ಸಂಜೆಯಾದ ನಂತರ ಹೋಗುತ್ತಿದ್ದಾಗ ಒಂದು ಸುಂದರ ಮನೆ ಕಾಣಿಸಿತು ಆ ಮನೆಯ ಮುಂದೆ ಎಲ್ಲಾ ಒಳ್ಳೆಯ ಹೂವುಗಳಿಂದ ಆ ಮನೆಯನ್ನು ಅಲಂಕರಿಸಿದ್ದಾರೆ ನೋಡುವುದಕ್ಕೆ 2 ಕಣ್ಣು ಸಾಲದು ಆ ರೀತಿ ಇದೆ ಆಗ ಅಲ್ಲಿ ಬನ್ನಿ ನೀವು ಇಲ್ಲಿ ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಹೋಗಬಹುದು ಎಂದು ಹೇಳುತ್ತಾರೆ.

 ಈ ಕಣ್ಣಿನ ಸೌಂದರ್ಯವನ್ನು ನೋಡಿದ ಯುವಕ ನಾನು ಇಲ್ಲಿಯೇ ವಿಶ್ರಾಂತಿ ಪಡೆದು ಬರುತ್ತೇನೆ ಎಂದು ಒಬ್ಬನು ಅಲ್ಲಿಯೇ ಉಳಿದು ಬಿಡುತ್ತಾನೆ ಉಳಿದ 5 ಯುವಕರು ಮುಂದೆ ಹೋಗುತ್ತಿದ್ದಾಗ ಅಲ್ಲಿ ಒಳ್ಳೆಯ ವಾದ್ಯಗೋಷ್ಟಿ ನಡೆಯುತ್ತದೆ ಸುಂದರ ಯುವತಿಯರು ಸಂಗೀತವನ್ನು ಹಾಡುತ್ತಿದ್ದಾರೆ.

 ಈ ರೀತಿ ಸಂಗೀತ ಮೊದಲ ಬಾರಿಗೆ ಕೇಳಿದ್ದರಿಂದ ಒಬ್ಬನು ಅಲ್ಲಿಯೇ ಉಳಿದ ನಂತರ ಇನ್ನೂ ಸ್ವಲ್ಪ ಮುಂದೆ ಹಸಿವು ಶುರುವಾಯಿತು ನಂತರ ಮುಂದೆ ನೋಡುತ್ತಿದ್ದಂತೆಯೇ ಒಂದು ಹೊಟೇಲ್ ಇತ್ತು ಆ ಹೋಟೆಲ್ ನಲ್ಲಿ ತುಂಬಾ ರುಚಿ ರುಚಿಯಾದ ಅಡಿಗೆಗಳು ಹಾಗೂ ಘಮಘಮ ವಾಸನೆ ಬರುತ್ತಿದೆ.

 ಈ ಆಕರ್ಷಣೆಗೆ ಒಬ್ಬ ಅಲ್ಲಿಯೇ ಉಳಿದನು ಹಾಗೆಯೇ ಇನ್ನು ಮುಂದೆ ಹೋಗುತ್ತಿದ್ದಾಗ ಸುಗಂಧವನ್ನು ಮಾರುತ್ತಿದ್ದರು ಮೂಸಿದರೆ ಎಂತಹ ವಾಸನೆ ಎಂದರೆ ಮತ್ತು ಭರಿಸುತ್ತಿತ್ತು ಇನ್ನೊಬ್ಬ ಸುಗಂಧಕ್ಕೆ ಪರಿಮಳಕ್ಕೆ ಸೋತುಹೋದ ಹೀಗೆ ಇಬ್ಬರೂ ಸ್ವಲ್ಪ ಮುಂದೆ ಹೋದರು.

 ಆಗ ಅದೇ ರೀತಿ ಇನ್ನೊಂದು ಮನೆ ಕಾಣಿಸಿತು ಅಲ್ಲಿ ನೋಡಿದರೆ ಒಂದು ಸುಂದರವಾದ ಯುವತಿ ನಿಂತಿದ್ದಾಳೆ ಈ ರೀತಿಯ ಸುಂದರಿಯನ್ನು ಮೊಟ್ಟ ಮೊದಲ ಬಾರಿಗೆ ಕಂಡನು ಅವಳ ರೂಪಕ್ಕೆ ಮಾರುಹೋದನು.  ಸ್ವಲ್ಪ ವಿಶ್ರಾಂತಿ ಪಡೆದು ಹೋಗಿ ಎಂದಾಗ ಒಬ್ಬ ಉಳಿದ ಇಷ್ಟೆಲ್ಲ ಮುಗಿದ ಮೇಲೆ ಒಬ್ಬ ಮಾತ್ರ ಹೋಗಿ ತಲುಪಿದನು ಇವನು ಮಾತ್ರ ಪ್ರಸಿದ್ಧ ವ್ಯಾಪಾರಿಯಾದನು.

 ಪಂಚೇಂದ್ರಿಯಗಳು ಕಣ್ಣು ಕಿವಿ ನಾಲಗೆ ಮೂಗು ಮತ್ತು ಚರ್ಮ ಇವುಗಳ ಆಕರ್ಷಣೆ ನಮಗೆ ಸೆಳೆದುಬಿಡುತ್ತದೆ ಹಾಗಾಗಿ ನಾವು ತುಂಬಾ ಎಚ್ಚರಿಕೆಯಿಂದ ಇರಬೇಕು ಇಲ್ಲದಿದ್ದರೆ ನಮ್ಮ ಗುರಿ ತಲುಪಲು ಸಾಧ್ಯವಾಗುವುದಿಲ್ಲ ಪಂಚೇಂದ್ರಿಯಗಳು ಮೀರಿ ಸಾಧನೆ ಮಾಡೋಣ. ನಾನು ಪಂಚೇಂದ್ರಿಯಗಳನ್ನು ಮೀರಿ ಯಾವ ಸಾಧನೆ ಮಾಡಿದ್ದೇನೆ?

ಒಳ್ಳೆಯ ತಂದೆಯಾಗಿ

ಒಂದು ಸಾರಿ ತಂದೆ ಯಾದವರು ಬೆಳಿಗ್ಗೆ ಮಗ ಮಾಡುವ ಕೆಲಸಗಳಿಂದ ಬೇಸರವಾಗಿ ಬೈಯುತ್ತಾರೆ ಬೈಯುವುದಕ್ಕೆ ಕಾರಣ ಸರಿಯಾಗಿ ಬಟ್ಟೆ ಹಾಕಿಕೊಂಡಿರುವುದಿಲ್ಲ ನಂತರ ತಿಂಡಿ ತಿನ್ನಬೇಕಾದರೆ ತನ್ನ ಬಟ್ಟೆಗೆ ಹೆಚ್ಚು ಬೆಣ್ಣೆ ಹಾಗೂ ಸಕ್ಕರೆಯನ್ನು ಹಾಕಿಕೊಂಡಿರುತ್ತಾನೆ.

ಕೈ ತೊಳೆದುಕೋ ಎಂದಾಗ ಕೈ ತೊಳೆದು ತನ್ನ ಕೈಯನ್ನು ಪರದೆಯಿಂದ ಒರೆಸಿಕೊಳ್ಳುತ್ತಾನೆ ನಂತರ ಮನೆಗೆ ಬಂದ ಮೇಲೆ ತನ್ನ ಸ್ನೇಹಿತರ ಜೊತೆ ಆಟ ಮಾಡುತ್ತಿರುತ್ತಾನೆ ಬಟ್ಟೆ ಬದಲಿಸಿ ಇರುವುದಿಲ್ಲ ಒಳ್ಳೆಯ ಬೆಲೆ ಬಾಳುವ ಬಟ್ಟೆಯೊಂದಿಗೆ ಆಟ ಆಡುತ್ತಿರುತ್ತಾನೆ. ನಂತರ ಹಲವಾರು ಸರಿ ಮಾಡಿದ ಕೆಲಸಗಳಿಗೆ ಬಯ್ಯುತ್ತಾರೆ ಮಗನ ವರ್ತನೆಯಿಂದ ಬೇಸರಗೊಂಡಿರುತ್ತಾರೆ.

ತಂದೆಯವರು ಲೈಬ್ರರಿಗೆ ಹೋಗಿ ಪುಸ್ತಕಗಳನ್ನು ಓದಿಕೊಂಡು ರಾತ್ರಿ ಬರುತ್ತಾರೆ ಆಗ ಮಗು ಏನು ಮನಸ್ಸಿನಲ್ಲಿ ಇಟ್ಟುಕೊಳ್ಳದೆ ತಂದೆಗೆ ಹೆಗಲಿನಲ್ಲಿ ಕೈ ಹಾಕಿಕೊಂಡು ಮುತ್ತು ಕೊಟ್ಟು ಹೋಗುತ್ತದೆ. ಆಗ ತಂದೆಯವರಿಗೆ ತುಂಬಾ ಬೇಸರವಾಗುತ್ತದೆ.

 ಇಂದು ನಾನು ಮಗನಿಗೆ ಬೆಳಿಗ್ಗೆ ಸಂಜೆ ಬೈದರು ಕೂಡ ನನ್ನ ಮಗ ಮನಸ್ಸಿನಲ್ಲಿ ಇಟ್ಟುಕೊಂಡಿಲ್ಲ ನನ್ನನ್ನು ಶುಭರಾತ್ರಿ ಎಂದು ಹೇಳಿದ್ದಾನೆ ಎಂದು ಹೇಳಿ ಸಂತೋಷ ಪಡುತ್ತಾರೆ ಹಾಗೆ ನಾನು ಮಾಡಿದ್ದು ತಪ್ಪು ಎನ್ನುವ ಅಪರಾಧಿ ಭಾವನೆ ಬರುತ್ತದೆ ನಂತರ ಮಗು ಮಲಗಿರುತ್ತದೆ.

ಮಗನನ್ನು ನೋಡಿ ಇಂದು ನನ್ನಿಂದ ತಪ್ಪಾಗಿದೆ ಇನ್ನು ಮುಂದೆ ನಾನು ಈ ರೀತಿ ತೊಂದರೆ ಕೊಡುವುದಿಲ್ಲ ಎಂದು ಹೇಳಿ ಮಾರನೆಯ ದಿನದಿಂದ ನಾನು ಒಳ್ಳೆಯ ತಂದೆಯಾಗಿ ನಿನ್ನನ್ನು ನೋಡುತ್ತೇನೆ ಎಂದು ಹೇಳಿಕೊಳ್ಳುತ್ತಾರೆ. ಆಗಿದ ತಪ್ಪನ್ನೇ ಯೋಚಿಸಿ ಸಮಯ ವ್ಯರ್ಥ ಮಾಡುವ ಬದಲು ನಂತರ ಸಾಧ್ಯವಾದಷ್ಟು ಆಗದಂತೆ ಎಚ್ಚರಿಕೆ ವಹಿಸೋಣ.

ದಾನದಲ್ಲಿ ಇರುವ ಸುಖ

ಒಂದು ಹಳ್ಳಿಯಲ್ಲಿ ಕೆಲವು ದಯಾಳು ಯುವಕರು ಸೇರಿ ಹಳ್ಳಿಯ ಬುದ್ಧಿವಂತ ಯುವಕರು ಸೇರಿ ಎಲ್ಲಾ ಜನರಿಗೆ ಅನ್ನದಾನ ಮಾಡಬೇಕು ಎಂದು ಯೋಚನೆ ಮಾಡುತ್ತಾರೆ ಎಲ್ಲರೂ ಆಗಲಿ ಎಂದು ಒಪ್ಪಿಕೊಳ್ಳುತ್ತಾರೆ. ಆದರೆ ಅನ್ನದಾನಕ್ಕೆ ಮುಖ್ಯವಾಗಿ ದೇಣಿಗೆ ಬೇಕು  ಹೇಗೆ ಅಷ್ಟೊಂದು ದೇಣಿಗೆ ಕೂಡಿಸುವುದು ಎಂದು ಯೋಚಿಸುತ್ತಾರೆ.

 ಅಷ್ಟರಲ್ಲಿ ಒಬ್ಬ ಬುದ್ಧಿವಂತ ಯುವಕ ಯೋಚನೆ ಮಾಡುತ್ತಾನೆ ನಮ್ಮ ಊರಿನಲ್ಲಿ ಶ್ರೀಮಂತರಿದ್ದಾರೆ ಅವರು ಮಹಾ ಜಿಪುಣರನ್ನು ಮಾತನಾಡೋಣ ಬನ್ನಿ ಎನ್ನುತ್ತಾನೆ ಶ್ರೀಮಂತ ಜಿಪುಣಗೆ ಹೋಗಿ ಎಲ್ಲಾ ಯುವಕರು ಹೇಳುತ್ತಾರೆ.

 ನಾವು ಊರಿಗೆ ಅನ್ನದಾನ ಮಾಡಬೇಕು ಎಂದು ತೀರ್ಮಾನ ಮಾಡಿದ್ದೇವೆ ಅದಕ್ಕಾಗಿ ಹಣ ಬೇಕಾಗಿದೆ ನೀವು ನಮಗೆ ಸಾಲದ ರೂಪದಲ್ಲಿ 500 ರೂಪಾಯಿ ನೀಡಿ ನಂತರ ನಿಮ್ಮ ಹೆಸರು ಬೀದಿ ಬೀದಿಯಲ್ಲಿ ಡಂಗೂರ ಕೊಡೆಸಿ ಹೇಳುತ್ತೇವೆ ನಂತರ ಇತರರು ದೇಣಿಗೆಯನ್ನು ನೀಡುತ್ತಾರೆ ಎಲ್ಲಾ ಹಣ ಒಟ್ಟಾದ ನಂತರ ನಿಮ್ಮ ಹಣವನ್ನು ನಾವು ಮರಳಿ ಕೊಡುತ್ತೇವೆ ಎಂದು ಹೇಳಿದರು.

 ನನ್ನ ಹೆಸರು ಬರುತ್ತದೆ ಎಂದು ಯೋಚಿಸಿ ಶ್ರೀಮಂತ ಜಿಪುಣ ಹಣವನ್ನು ಕೊಟ್ಟನು ಮಾರನೆಯ ದಿನವೇ ಊರಿನಲ್ಲಿ ಡಂಗೂರ ಸಾರಿದರು ಶ್ರೀಮಂತರು ದೊಡ್ಡ ದಾನಿಗಳು ಮಹಾದಾನಿಗಳು ಕರುಣಾಮಯಿ  ಇವರು ನಮಗೆ 500 ಕೊಟ್ಟಿದ್ದಾರೆ ತಾವುಗಳು ಕೂಡ ದೇಣಿಗೆ ನೀಡಬೇಕಾಗಿ ವಿನಂತಿ ಎಂದು ಕೇಳಿಕೊಂಡರು.

ಹಳ್ಳಿಯವರು ಮಹಾಜೀಪುಣನೆ ದೇಣಿಗೆನೀಡಿದ್ದಾನೆ ಎಂದು ಯೋಚಿಸಿ, ಹಳ್ಳಿಯವರು ಸಾಕಷ್ಟು ಹಣವನ್ನು ನೀಡಿದರು  ಯುವಕರು ಮಾತಿನಂತೆ 500 ರೂಪಾಯಿ ಮತ್ತೆ ಕೊಡಲು ಹೋದರು ಆಗ ಶ್ರೀಮಂತ ಜಿಪುಣ ಹೇಳಿದನು ದಾನದಲ್ಲಿ ಇರುವ ಸುಖ ನನಗೆ ಗೊತ್ತೇ ಇರಲಿಲ್ಲ ಹಣ ಕೊಟ್ಟಿದ ನಂತರ ನನಗೆ ತುಂಬಾ ತೃಪ್ತಿ ಆನಂದವಾಗಿದೆ.

 ಬಹಳಷ್ಟು ಜನರು ನನಗೆ ದಾನಿ ಮಹಾದಾನಿ ಎಂದು ಹೊಗಳಿದ್ದಾರೆ  ಇದರಿಂದ ನನಗೆ ತುಂಬಾ ಗೌರವ ಸಿಕ್ಕಿದೆ ಆದ್ದರಿಂದ ಈ ಹಣ ನನಗೆ ಬೇಡ ಎಂದು ಕಳುಹಿಸುತ್ತಾನೆ.

ಶ್ರೀಮಂತ ಜಿಪುಣ ಕಾರ್ಯಕ್ರಮಕ್ಕೆ ತಾನು ಭಾಗಿಯಾದನು ನಂತರ ಮಹಾಜೀಪುಣನ ಮನಸೇ ಬದಲಾಯಿತು ಜಿಪುಣನಾಗಿದ್ದ ಶ್ರೀಮಂತ ಈಗ ಮಹಾದಾನಿಯಾಗಿ ಹೆಸರು ಪಡೆದನು ನಂತರ ಅದೇ ರೀತಿ ದಾನ ಮಾಡಲು ಆರಂಭಿಸಿದನು.

]]>
https://babakategalu.com/%e0%b2%a8%e0%b2%be%e0%b2%a8%e0%b3%81-%e0%b2%b8%e0%b2%b9%e0%b2%bf%e0%b2%b8%e0%b2%bf%e0%b2%95%e0%b3%8a%e0%b2%b3%e0%b3%8d%e0%b2%b3%e0%b3%81%e0%b2%a4%e0%b3%8d%e0%b2%a4%e0%b2%bf%e0%b2%a6%e0%b3%8d%e0%b2%a6/feed/ 0
ಬೇರೆ ದಾರಿಯೇ ಇಲ್ಲ https://babakategalu.com/%e0%b2%ac%e0%b3%87%e0%b2%b0%e0%b3%86-%e0%b2%a6%e0%b2%be%e0%b2%b0%e0%b2%bf%e0%b2%af%e0%b3%87-%e0%b2%87%e0%b2%b2%e0%b3%8d%e0%b2%b2/ https://babakategalu.com/%e0%b2%ac%e0%b3%87%e0%b2%b0%e0%b3%86-%e0%b2%a6%e0%b2%be%e0%b2%b0%e0%b2%bf%e0%b2%af%e0%b3%87-%e0%b2%87%e0%b2%b2%e0%b3%8d%e0%b2%b2/#respond Thu, 06 Mar 2025 04:40:00 +0000 https://babakategalu.com/?p=195 Read more]]> ಒಂದು ಹಳ್ಳಿಯಲ್ಲಿ ಪರಿಶ್ರಮಿ  ರೈತನು ಒಂದು ಪಾರಿವಾಳವನ್ನು ಸಾಕಿರುತ್ತಾನೆ ಮಳೆ ಬರುವುದಿಲ್ಲ ಆದುದರಿಂದ ರೈತನ ಯೋಚನೆ ಮಾಡುತ್ತಾನೆ ನಾನೇ ಕಷ್ಟಪಡಬೇಕಾಗುತ್ತದೆ ಆದ್ದರಿಂದ ಪಾರಿವಾಳವನ್ನು ನಾನು ರಾಜರಿಗೆ ಕೊಟ್ಟರೆ ಅಲ್ಲಾದರೂ ನನ್ನ ಪಾರಿವಾಳ ಚೆನ್ನಾಗಿ ಬದುಕಲಿ ಎಂದು ಚಿಂತಿಸಿ ನೇರವಾಗಿ ರಾಜನ ಅರಮನೆಗೆ ಹೋಗಿ ಆ ಪಾರಿವಾಳವನ್ನುಅರ್ಪಿಸುತ್ತಾನೆ.

 ಸ್ವಲ್ಪ ಯೋಚನೆ ಮಾಡಿ ರಾಜನು ಇರಲಿ ಎಂದು ಆ ಪಾರಿವಾಳವನ್ನು ಇಟ್ಟುಕೊಳ್ಳುತ್ತಾನೆ ರಾಜನು ಕೂಡ ಯೋಚನೆ ಮಾಡುತ್ತಾನೆ ಇಲ್ಲಿಂದ ಬೇರೆ ಕಡೆಗೆ ಸಂದೇಶವನ್ನು ಕಳಿಸಬೇಕಾದರೆ ಪಾರಿವಾಳ ನಮಗೆ ಉಪಯುಕ್ತವೆಂದು ತಿಳಿಯುತ್ತಾನೆ.

ಪಾರಿವಾಳಕ್ಕೆ ಒಂದು ಮರದಲ್ಲಿ ಬಿಟ್ಟು ಅದಕ್ಕೆ ಬೇಕಾದ ತಿಂಡಿ ತಿನಿಸುಗಳನ್ನು ಗೋಡಂಬಿ, ದ್ರಾಕ್ಷಿ. ಎಲ್ಲವೂ ಒಳ್ಳೆಯ ಆಹಾರವನ್ನು ಕೊಡುತ್ತಾರೆ ಇದರಿಂದ ಪಾರಿವಾಳವು ದಷ್ಟಪುಷ್ಟವಾಗಿ ಬೆಳೆಯುತ್ತದೆ ನಂತರ ಅದು ಒಂದು ಕೊಂಬೆ ಮೇಲೆ ಕೂತಿದ್ದು ಬೇರೆ ಕಡೆ ಹಾರುವುದೇ ಇಲ್ಲ.

 ರಾಜನಾದವನು ಸ್ವಲ್ಪ ದಿನದ ನಂತರ ಕೇಳುತ್ತಾನೆ ನಮ್ಮ ಪಾರಿವಾಳ ತುಂಬ ಚಟುವಟಿಕೆಯಾಗಿ ಇದ್ದೀಯಾ ಎಂದಾಗ ನೋಡಿಕೊಳ್ಳುವವರು ಹೇಳುತ್ತಾರೆ ಇಲ್ಲ ಆ ಪಾರಿವಾಳ ಏನೇ ಮಾಡಿದರೂ ಹಾರುವುದೇ ಇಲ್ಲ ಎಂದಾಗ ರಾಜನಾದವನು ಬೇರೆ ವೈದ್ಯರನ್ನು ಕರೆಸಿ ಅದಕ್ಕೆ ಏನು ಕಾರಣ ಇದೆ ಎಂದು ಕಂಡು ಹಿಡಿಯಿರಿ ಎಂದು ಹೇಳುತ್ತಾನೆ.

ವೈದ್ಯರು ಕೂಡ ಕಾರಣ ಏನೆಂದು ತಿಳಿಯಲು ಸಾಧ್ಯವಾಗುವುದಿಲ್ಲ ನಂತರ ಪಾರಿವಾಳ ಕೊಟ್ಟ ಆ ರೈತನಿಗೆ ಕರೆಯುತ್ತಾರೆ ಆಗ ರೈತನು ನೋಡುತ್ತಾನೆ ಕೇವಲ ಒಂದು ಗಂಟೆಯಲ್ಲಿಯೇ ಹಾರುವಂತೆ ಮಾಡಿ ಬರುತ್ತಾನೆ ಆಗ ರಾಜರು ಕೇಳುತ್ತಾರೆ ಹೇಗೆ ನೀವು ಈ ಸಮಸ್ಯೆಯನ್ನು ಪರಿಹರಿಸಿದ್ದೀರಿ ಎಂದಾಗ ರೈತನು ಹೇಳುತ್ತಾನೆ.

 ರಾಜರೇ ಅಲ್ಲಿ ನಾನು ಸಾಕುತ್ತಿದ್ದಾಗ ತುಂಬಾ ಕಷ್ಟವಿತ್ತು ಇಲ್ಲಿ ನೀವು ಅದಕ್ಕೆ ಒಳ್ಳೆಯ ಆಹಾರವನ್ನು ಕೊಟ್ಟಿದ್ದೀರಾ ಆದುದರಿಂದ ಅದು ತನ್ನ ಕೆಲಸವನ್ನೇ ಮರೆತು ಹಾಯಾಗಿ ಕುಳಿತು ಬಿಟ್ಟಿದೆ.

 ಅದು ಕೊಂಬೆಮೇಲೆ ಕುಳಿತಿರುವುದರಿಂದ ಆ ಕೊಂಬೆಯನ್ನು ಕತ್ತರಿಸಿ ಬಿಟ್ಟೆ ಈಗ ಆ ಪಾರಿವಾಳಕ್ಕೆ ಬೇರೆ ದಾರಿಯೇ ಇಲ್ಲ ಹಾರಲೇ ಬೇಕು ಅದಕ್ಕಾಗಿ ಹಾರಿದೆ ಇನ್ನು ಮುಂದೆ ಅದಕ್ಕೆ ಎಷ್ಟು ಬೇಕೋ ಅಷ್ಟೇ ಆಹಾರವನ್ನು ಕೊಡಿ ಎಂದು ಹೇಳಿ ಹೊರಟು ಹೋಗುತ್ತಾನೆ. ನಾನು ಸದಾ ಚಟುವಟಿಕೆಯಿಂದ ಇದ್ದೇನೆ ಯೇ?

ಹಗ್ಗವನ್ನು ಮುಖ್ಯ ದಾರಿಗೆ ಕಟ್ಟುತ್ತಾನೆ

ಒಂದು ಊರಿನಲ್ಲಿ ಒಬ್ಬ ಸುಸಂಕೃತ ರಾಜ ಇರುತ್ತಾನೆ ಆ ರಾಜ್ಯದಲ್ಲಿ ಎಲ್ಲಾ ಕಡೆಯು ಸುಭಿಕ್ಷವಾಗಿ ನಡೆಯುತ್ತಿರುತ್ತದೆ ಮಂತ್ರಿ ತುಂಬಾ ಬುದ್ಧಿವಂತನಾಗಿರುತ್ತಾನೆ ಯಾರಾದರೂ ಬುದ್ಧಿವಂತರೂ ಇದ್ದಾರೆ ಎಂದರೆ ಇತರರು ಅವನನ್ನು ಬೀಳಿಸಲಿಕ್ಕೆ ಸದಾ ಕಾಯುತ್ತಿರುತ್ತಾರೆ.

 ಇದೇ ರೀತಿಯಾಗಿ ರಾಜನಿಗೆ ಆಗಾಗ ಮಂತ್ರಿಯ ಮೇಲೆ ಚಾಡಿಯನ್ನು ಹೇಳುತ್ತಲೇ ಇರುತ್ತಾರೆ ರಾಜನು ಒಂದು ಸಲ ಯೋಚನೆ ಮಾಡುತ್ತಾನೆ ಎಲ್ಲರಿಗೂ ಅರ್ಥವಾಗಬೇಕು ಆ ರೀತಿ ಏನು ಮಾಡಬಹುದೆಂದು ಎಲ್ಲರಿಗೂ ಸಭೆಗೆ ಕರೆಯುತ್ತಾನೆ.

 ಯಾರು ಯಾರು ಮಂತ್ರಿಯ ಮೇಲೆ ಚಾಡಿ ಹೇಳುತ್ತಿರುತ್ತಾರೆ ಅವರೆಲ್ಲರನ್ನು ಕರೆದು ಹೇಳುತ್ತಾನೆ ಸುಮಾರು ನೂರು ಅಡಿ ಇರುವ ಒಂದು ಹಗ್ಗವನ್ನು ಕೊಡ್ತಾನೆ ಹಗ್ಗವನ್ನು ಬಳಸಿಕೊಂಡು ನೀವು ಸಾವಿರ ಚಿನ್ನದ ನಾಣ್ಯಗಳನ್ನು ಪಡೆದು ಒಂದು ದಿನದಲ್ಲಿ ಯಾರಾದರೂ ಸರಿ ಬರಬೇಕು ಎಂದು ಹೇಳುತ್ತಾನೆ.

 ಒಂದು ದಿನದಲ್ಲಿ ಹೇಗೆ ತರಬೇಕು ಏನು ಮಾಡುವುದೆಂದು ತಿಳಿದಿರುವುದಿಲ್ಲ ಅದಕ್ಕಾಗಿ ಎಲ್ಲರೂ ಸೋಲನ್ನು ಒಪ್ಪಿಕೊಳ್ಳುತ್ತಾರೆ ಅದೇ ರೀತಿ ಬುದ್ಧಿವಂತನಾದ ಮಂತ್ರಿ ಅವನಿಗೆ ಇದೇ ಹಗ್ಗವನ್ನು ಕೊಟ್ಟು ರಾಜ ಅದೇ ರೀತಿ ಹೇಳುತ್ತಾನೆ ಮಂತ್ರಿ ನಾನು ಸಾವಿರ ಚಿನ್ನದ ನಾಣ್ಯವನ್ನು ತರುತ್ತೇನೆ ಎಂದು ಹೇಳುತ್ತಾನೆ ನಂತರ ಈ ಮಂತ್ರಿಯು ಊರಿನ ಹೊರಗೆ ಹೋಗಿ ಈ ಹಗ್ಗವನ್ನು ಮುಖ್ಯದಾರಿಗೆ ಕಟ್ಟುತ್ತಾನೆ.

 ಈ ಹಗ್ಗವನ್ನು ಏಕೆ ಕಟ್ಟಿದ್ದೀರಾ ಎಂದು ಕೇಳಿದಾಗ ಮಂತ್ರಿಯು ಹೇಳುತ್ತಾನೆ ನಮ್ಮ ಊರಿನಲ್ಲಿ ಇರುವ ರಸ್ತೆಗಳು ದೊಡ್ಡದಾಗಿ ಮಾಡಬೇಕಾಗಿದೆ ಬರುವ ಎಲ್ಲಾ ಗಾಡಿಗಳು ವಾಹನಗಳು ಚಿಕ್ಕಚಿಕ್ಕ ದಾರಿಯಲ್ಲೇ ಬರುತ್ತವೆ ಆದುದರಿಂದ ನಿಮ್ಮ ಕೈಲಾದಷ್ಟು ಸಹಾಯ ಮಾಡಿದರೆ ಸುಸಜ್ಜಿತವಾದ ರಸ್ತೆಯನ್ನು ನಿರ್ಮಾಣ ಮಾಡುತ್ತಾರೆ.

 ನೀವು ರಾತ್ರಿಯಾದರೂ ನಿಶ್ಚಿಂತೆಯಿಂದ ಓಡಾಡಬಹುದು ಎಂದು ಹೇಳುತ್ತಾನೆ ಆಗ ಎಲ್ಲರೂ ಯೋಚನೆ ಮಾಡಿ ತಮ್ಮ ಕೈಯಲ್ಲಿ ಸಾಧ್ಯವಾದಷ್ಟು ಎಲ್ಲರೂ ಹಣವನ್ನು ನೀಡುತ್ತಾರೆ ಈ ರೀತಿ ಮಾಡಿರುವುದರಿಂದ ಈ ಮಂತ್ರಿಗೆ 5ಸಾವಿರ ಚಿನ್ನದ ನಾಣ್ಯಗಳನ್ನು ತೆಗೆದುಕೊಂಡು ಬಂದು ಕೊಡುತ್ತಾನೆ.

 ಮಂತ್ರಿಯು ಕೇವಲ ಅರ್ಧ ದಿನವೂ ತೆಗೆದುಕೊಳ್ಳುವುದಿಲ್ಲ ನಂತರ ಆ ಬಂದ ಹಣದಲ್ಲಿ ಊರಿನ ಒಳ್ಳೆಯ ದಾರಿಗಾಗಿಯೇ ಉಪಯೋಗಿಸುತ್ತಾರೆ ಆಗ ಈ ಮಂತ್ರಿ ಬುದ್ಧಿವಂತನೆಂದು ಎಲ್ಲರೂ ಒಪ್ಪಿಕೊಳ್ಳುತ್ತಾರೆ ಸಮಯಕ್ಕೆ ತಕ್ಕ ಹಾಗೆ ಬುದ್ಧಿವಂತಿಕೆ ಉಪಯೋಗಿಸೋಣ.

ನ್ಯಾಯ ಎಲ್ಲರಿಗೂ ಒಂದೇ

ಒಂದು ಊರಿನಲ್ಲಿ ರಾಜನಿಗೆ ಒಬ್ಬ ಅಯೋಗ್ಯ  ಮಗನಿರುತ್ತಾನೆ ಈ ಮಗನಿಗೆ ಕೆಲವು ವರ್ಷಗಳ ನಂತರ ಯುವರಾಜ ಮಾಡಬೇಕೆಂದು ಎಲ್ಲರೂ ತೀರ್ಮಾನ ಮಾಡಿರುತ್ತಾರೆ ನಂತರ ಯುವರಾಜ ನೋಡಿದರೆ ಎಲ್ಲಾ ಕೆಟ್ಟ ಕೆಲಸಗಳೇ ಮಾಡುತ್ತಿರುತ್ತಾನೆ.

 ತನಗೆ ಅಧಿಕಾರ ಇದೆ ಎಂದು ಎಲ್ಲರಿಗೂ ದರ್ಪ ತೋರಿಸುತ್ತಾನೆ ಊರಿನಲ್ಲಿ ಆಚೆ ಇರುವ ಬಡವರಿಗೆ ತೊಂದರೆ ಕೊಡುವುದು ಸಾಧುಸಂತರಿಗೆ ಕಷ್ಟಕೊಡುವುದು ಹೀಗೆಲ್ಲ ಮಾಡುತ್ತಿರುತ್ತಾನೆ ಮೊದಮೊದಲು ಎಲ್ಲರೂ ತಪ್ಪುಗಳನ್ನು ಯುವರಾಜ ಎಂದು ಕ್ಷಮಿಸಿಬಿಡುತ್ತಾರೆ.

 ಯುವರಾಜನ ತಪ್ಪುಗಳು ಮಿತಿಮೀರಿ ಮಾಡುತ್ತ ಹೋಗುತ್ತಾನೆ ಆಗ ಊರಿನವರು ಬಂದು ರಾಜನನ್ನು ಹೇಳುತ್ತಾರೆ ರಾಜನು ರಾಣಿಗೆ ಮಗ ತುಂಬಾ ತಪ್ಪು ಮಾಡುತ್ತಿದ್ದಾನೆ ಇತರರಿಗೆ ಬಹಳಷ್ಟು ತೊಂದರೆ ನೀಡುತ್ತಿದ್ದಾನೆ ಅವನಿಗೆ ಶಿಕ್ಷೆ ಆಗಲೇಬೇಕು ಎಂದು ರಾಣಿಗೆ ಹೇಳುತ್ತಾನೆ.

 ರಾಣಿ ಏನೇ ತಪ್ಪು ಮಾಡಿದರು ಇವನೇ ಮುಂದಿನ ರಾಜ ಮತ್ತೊಂದು ಸಾರಿ ಅವಕಾಶ ನೀಡಬೇಕೆಂದು ರಾಣಿ ಕೇಳಿಕೊಳ್ಳುತ್ತಾಳೆ ಅದಕ್ಕೆ ಸ್ವಲ್ಪ ದಿನಗಳ ಸಮಯವನ್ನು ರಾಜನಾದವನು ತೆಗೆದುಕೊಳ್ಳುತ್ತಾನೆ ನಂತರವೂ ಮಗನಾದವನು ತುಂಬ ತಪ್ಪುಗಳನ್ನೇ ಮಾಡುತ್ತಿರುತ್ತಾನೆ.

 ಕೆಲವು ದಿನಗಳ ನಂತರ ಒಂದು ದೊಡ್ಡ ಸಭೆಯನ್ನು ಕರೆದು ಎಲ್ಲರನ್ನೂ ಕೇಳುತ್ತಾನೆ ಏನು ಮಾಡಬೇಕು ಎಂದಾಗ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಹೇಳ್ತಿರುತ್ತಾರೆ ಕೊನೆಗೆ ರಾಜನಾದವನು ಮಗನನ್ನು ಮುಂದೆ ನಿಲ್ಲಿಸಿ ಕತ್ತಿಯನ್ನು ತೆಗೆದುಕೊಂಡು ಮಗನಿಗೆ ಕತ್ತರಿಸಿಯೇ ಬಿಡುತ್ತಾನೆ ಏಕೆಂದರೆ ಇವನ ತಪ್ಪುಗಳು ನಾನು ಮೊದಲಿನಿಂದಲೇ ಗಮನಿಸಿ ಕೊಂಡು ಬರುತ್ತಿದ್ದೇನೆ.

ಯಾರಿಗೆ ರಾಜನಾಗುವ ಅರ್ಹತೆ ಇದೆಯೋ ಅವರೇ ರಾಜ್ಯಭಾರವನ್ನು ಮಾಡಬಹುದಾಗಿದೆ ನ್ಯಾಯ ಎಲ್ಲರಿಗೂ ಒಂದೇ ಎಂದು ಹೇಳುತ್ತಾನೆ.  

  ಸದಾ ಅದೇ ಚಿಂತೆ

ಹಲವಾರು ವರ್ಷಗಳ ನಂತರ ಇಬ್ಬರು ಸ್ನೇಹಿತೆಯರು ಒಂದು ಕಾರ್ಯಕ್ರಮಕ್ಕೆ ಬಂದಿರುತ್ತಾರೆ ಇಬ್ಬರು ಭೇಟಿಯಾದ ನಂತರ ತಮ್ಮ ಕಷ್ಟ ಸುಖಗಳನ್ನು ಮಾತನಾಡಿಕೊಳ್ಳುತ್ತಾರೆ ನಂತರ ಒಬ್ಬಳು ನಗು ಮುಖದಿಂದ ಇರುತ್ತಾಳೆ ಇವಳು ಸ್ನೇಹಿತೆಗೆ ಕೇಳುತ್ತಾಳೆ.

 ಏನೋ ಸದಾ ಚಿಂತೆಯಲ್ಲಿ ಇರುವಂತೆ ಕಾಣುತ್ತಿದೆ ಏನು ಹೇಳು ಎಂದು ಕೇಳಿದಾಗ ಅವಳು ಹೇಳುತ್ತಾಳೆ ನಾನು ನನ್ನ ಮಗಳಿಗೆ ಮದುವೆ ಮಾಡಿಕೊಟ್ಟಿದ್ದೇನೆ ನನ್ನ ಮಗಳೇ ಸಾಕಷ್ಟು ಕೆಲಸಗಳನ್ನು ಮಾಡಬೇಕು ಬೆಳಿಗ್ಗೆ ಎದ್ದರೆ ರಾತ್ರಿಯವರೆಗೂ ಕೆಲಸ ಮಾಡಬೇಕು ಸ್ವತಂತ್ರವಿಲ್ಲ.

 ಯಾರು ಕೂಡ ಬಂದು ಸಹಾಯ ಮಾಡುವುದಿಲ್ಲ ಹಾಗೆ ಗಂಡನಾದವನು ಕೂಡ ಅಷ್ಟಾಗಿ ಕೆಲಸಗಳಿಗೆ ಸಹಕರಿಸುವುದಿಲ್ಲ ಎಂದು ತನ್ನ ಚಿಂತೆಗಳನ್ನು ಹೇಳಿಕೊಂಡಳು.

ಇವಳ ಸ್ನೇಹಿತೆ ಹೇಳಿದಳು ನನಗೇನು ಚಿಂತೆ ಇಲ್ಲ ನಾನು ತುಂಬಾ ಸುಖವಾಗಿ ಇದ್ದೇನೆ ಏಕೆಂದರೆ ನನ್ನ ಮಗಳಿಗೆ ಮದುವೆ ಮಾಡಿಕೊಟ್ಟಿದ್ದೇನೆ ನನ್ನ ಮಗಳು ಯಾವುದೇ ರೀತಿಯ ಕೆಲಸ ಮಾಡುವ ಅವಶ್ಯಕತೆ ಇಲ್ಲ ಗಂಡನಾದವನು ಕೆಲಸ ಮಾಡಿಕೊಡುತ್ತಾನೆ ಹಾಗೆ ಅತ್ತೆ ಮಾವಂದಿರು ನಾದಿನಿಯರು ನನ್ನ ಮಗಳು ಹೇಳಿದಂತೆಯೇ ಕೆಲಸ ಮಾಡುತ್ತಾರೆ ಎಂದು ನಗುನಗುತ್ತಾ ಹೇಳಿದಳು ಒಂದೇ ಸಮಸ್ಯೆ ಇದ್ದರೂ ಕೂಡ ನೋಡುವ ದೃಷ್ಟಿಕೋನ ಬದಲಾಗಿರುತ್ತದೆ.

ತನಗೆ ಬೇಕಾದಂತೆ

ಒಂದು ಹಳ್ಳಿಯಲ್ಲಿ ಒಂದು ಮಧ್ಯಮ ವರ್ಗದ ಕುಟುಂಬ ಇತ್ತು ಅವರ ಕೆಲಸ ಸಮಾರಂಭಗಳಿಗೆ ಹೋಗಿ ತಮಟೆ, ಜಾಗಟೆ, ನಾಗರಿ, ವಾದ್ಯಗಳನ್ನು ನುಡಿಸುವುದು ಯಾವುದೇ ಊರಿನಲ್ಲಿ ಸಮಾರಂಭವಾದರೂ ಇವರೇ ಅಲ್ಲಿ ಹೋಗಿ ನುಡಿಸಿ ಬರುವುದು ಇವರ ಕಾಯಕ.

ತಂದೆಯಾದವರು ಒಂದು ಸಾರಿ ತನ್ನ ಮಗನನ್ನು ಬೇರೆ ಊರಿಗೆ ಕರೆದುಕೊಂಡು ಹೋಗುತ್ತಾರೆ ಬೆಳಿಗ್ಗೆಯಿಂದ ಸಂಜೆಯವರೆಗೂ ಕಾರ್ಯಕ್ರಮ ನಡೆಯುತ್ತದೆ ಒಳ್ಳೆಯ ಸಂಭಾವನೆಯೂ ಬರುತ್ತದೆ ನಂತರ ಊರಿನಿಂದ ಹಳ್ಳಿಗೆ ಬರಬೇಕು ಬರುವ ದಾರಿಯಲ್ಲಿ ದರೋಡೆಕೋರರು ರಾತ್ರಿಯ ಸಮಯದಲ್ಲಿ ಇದ್ದೇ ಇರುತ್ತಾರೆ ಇದು ತಂದೆಗೆ ತಿಳಿದಿತ್ತು.

ತಂದೆ ಮಗನಿಗೆ ಹೇಳಿದರು ನಮ್ಮ ಹತ್ತಿರ ಹಣವಿದೆ ಆದುದರಿಂದ ನಾವು ತಮಟೆ ಬಾರಿಸುತ್ತಾ ಹೋಗೋಣ ಈ ಸದ್ದಿನಿಂದ ಕಳ್ಳರು ಯಾರೂ ಬರುವುದಿಲ್ಲ ಎಂದು ತಂದೆ ಮಗನಿಗೆ ಹೇಳಿದರು.

 ನಾವು ಶ್ರೀಮಂತರ ಮೆರವಣಿಗೆಯಲ್ಲಿ ಹೊರಟಾಗ ನಾವು ಏನು ತಮಟೆಯನ್ನು ಬಾರಿಸುತ್ತೇವೆ ಅದನ್ನು ಮಾತ್ರ ಬಾರಿಸಬೇಕು ಬೇರೆ ಯಾವುದೂ ಕೂಡ ಬಾರಿಸಬಾರದು ಎಚ್ಚರಿಕೆ ನೀಡುತ್ತಾರೆ.

 ಮಗ ಮತ್ತೆ ಪ್ರಶ್ನೆ ಮಾಡಿದ ಹೋದ ಸರಿ ಶ್ರೀಮಂತರ ಮನೆಯಲ್ಲಿ ನಾವು ನುಡಿಸಿದ್ದೇನೆ ಅದೇ ಅಲ್ಲವೇ ಬಿಟ್ಟುಬಿಟ್ಟು ಸದ್ದು ಮಾಡುವುದು ತಂದೆ ಹೌದು ಇದರಿಂದ ಕಳ್ಳರು ದೂರ ಹೋಗುತ್ತಾರೆ.

 ಯಾಕೆಂದರೆ ಶ್ರೀಮಂತರ ಸಮಾರಂಭಗಳಲ್ಲಿ ಹೆಚ್ಚಿನ ಆಳುಗಳು ಇರುತ್ತಾರೆ ಆದುದರಿಂದ ಯಾವ ಕಳ್ಳರು ಬರುವುದಿಲ್ಲ ಎಂಬುದು ಅವರ ನಂಬಿಕೆ ಕಳ್ಳರು ಹತ್ತಿರ ಸುಳಿಯುವುದಿಲ್ಲ ಆಗ ಮಗನಾದವನು ಸ್ವಲ್ಪದೂರ ಇದೇ ರೀತಿ ಬಾರಿಸಿಕೊಂಡು ಹೋದ ನಂತರ ಅವನಿಗೆ ನುಡಿಸುವುದು ಸರಿ ಅನಿಸಲಿಲ್ಲ ತನಗೆ ಬೇಕಾದಂತೆ ನುಡಿಸಲು ಶುರು ಮಾಡಿದ ನಂತರ ಕಳ್ಳರಿಗೆ ತಿಳಿಯಿತು.

 ಇವರು ಸಮಾರಂಭಕ್ಕೆ ಹೋಗುತ್ತಿಲ್ಲ ಬೇರೆ ಯಾರೋ ಹೋಗುತ್ತಿದ್ದರೆ ಇವರನ್ನು ದಾಳಿ ಮಾಡಿದರೆ ಹಣ ಸಿಗುತ್ತದೆ ಎಂದು ದಾಳಿ ಮಾಡಿದರು ಇರುವ ಹಣವನ್ನು ದೋಚಿಕೊಂಡು ಹೋದರು ಆಗ ತಂದೆ ಹೇಳಿದ ಮಾತು ಮಗನಿಗೆ ಅರ್ಥವಾಯಿತು ಮುಂದೆ ಮುನ್ನೆಚ್ಚರಿಕೆಯಿಂದ ಇರಬೇಕು ಎಂದು ಮಗನಿಗೆ ಅರಿವಾಯಿತು. ನಿಯಮಗಳನ್ನು ಪಾಲನೆ ಮಾಡದೆ ನಷ್ಟ  ಮಾಡಿಕೊಂಡಿದ್ದೇನೆಯೇ?

]]>
https://babakategalu.com/%e0%b2%ac%e0%b3%87%e0%b2%b0%e0%b3%86-%e0%b2%a6%e0%b2%be%e0%b2%b0%e0%b2%bf%e0%b2%af%e0%b3%87-%e0%b2%87%e0%b2%b2%e0%b3%8d%e0%b2%b2/feed/ 0
 ಮೌನ ಮುರಿದು ಹೋಯಿತು https://babakategalu.com/%e0%b2%ae%e0%b3%8c%e0%b2%a8-%e0%b2%ae%e0%b3%81%e0%b2%b0%e0%b2%bf%e0%b2%a6%e0%b3%81-%e0%b2%b9%e0%b3%8b%e0%b2%af%e0%b2%bf%e0%b2%a4%e0%b3%81/ https://babakategalu.com/%e0%b2%ae%e0%b3%8c%e0%b2%a8-%e0%b2%ae%e0%b3%81%e0%b2%b0%e0%b2%bf%e0%b2%a6%e0%b3%81-%e0%b2%b9%e0%b3%8b%e0%b2%af%e0%b2%bf%e0%b2%a4%e0%b3%81/#respond Wed, 05 Mar 2025 04:40:00 +0000 https://babakategalu.com/?p=193 Read more]]> ಒಂದು ಆಶ್ರಮಕ್ಕೆ ಧ್ಯಾನವನ್ನು ಕಲಿಯಲಿಕ್ಕೆ ಹಲವಾರು ಯುವಕರು ಬಂದರು ಗುರುಗಳು ಯುವಕರನ್ನು ಪ್ರೀತಿಯಿಂದ ಬರಮಾಡಿಕೊಂಡು ಆಶ್ರಮದ ನಿಯಮಗಳನ್ನು ತಿಳಿಸಿದರು  ನಂತರ ಒಂದು ಕೋಣೆಯಲ್ಲಿ 4ಜನರು ಮಾತ್ರ ಧ್ಯಾನ ಮಾಡಬೇಕು.

 4 ಯುವಕರಲ್ಲಿ ಯಾರು ಕೂಡ ಮಾತನಾಡಬಾರದು ಮೊದಲು 7 ದಿನಗಳು ಮೌನವಾಗಿ ಇರಬೇಕು ಎಂದು ಹೇಳಿದರು ಅದರಂತೆಯೇ 4 ಯುವಕರು ಒಂದು ಕೊಠಡಿಯಲ್ಲಿ ಧ್ಯಾನಕ್ಕೆ ಕುಳಿತರು. 4 ಯುವಕರು ಪ್ರತಿಜ್ಞೆಮಾಡಿ ಚೌಕಾಕಾರದ ರೀತಿಯಲ್ಲಿ ಕುಳಿತುಕೊಂಡರು ಅದರಂತೆಯೇ ಮೌನವಾಗಿ ಇದ್ದರು 2 ದಿನಗಳು ಆದ ನಂತರ ಇವರು ಮೌನದಲ್ಲಿ ಚೆನ್ನಾಗಿ ಸಾಧನೆ ಮಾಡಿದರು ಸ್ವಲ್ಪ ಸ್ವಲ್ಪವಾಗಿ ಧ್ಯಾನ ಏನೆಂದು ಅರಿವು ಆಗತೊಡಗಿತು.

  ಮೂರನೇ ದಿನ ಸಂಜೆಯಾದ ನಂತರ ಕತ್ತಲೆ ಆಗುತ್ತಾ ಬರುತ್ತಿತ್ತು ಆದರೆ ದೀಪದಲ್ಲಿ ಎಣ್ಣೆ ಕಡಿಮೆ ಯಾಗುತ್ತಾ ಹೋಯಿತು ಇನ್ನು ಸ್ವಲ್ಪ ಹೊತ್ತಿನಲ್ಲಿ ಎಣ್ಣೆ ಹಾಕದಿದ್ದರೆ ದೀಪವೂ ಆರಿ ಹೋಗುತ್ತದೆ ಈ ಸ್ಥಿತಿಗೆ ಬಂತು ಮೊದಲನೆಯ ಯುವಕ ಗಮನಿಸಿ ಧ್ವನಿ ಏರಿಸಿ ಆಶ್ರಮ ನೋಡಿಕೊಳ್ಳುವವನನ್ನು ಜೋರಾಗಿ ಕೂಗಿ ಹೇಳಿದ ದೀಪದಲ್ಲಿ ಎಣ್ಣೆ ಮುಗಿಯುತ್ತ ಬರುತ್ತಿದೆ ಬೇಗ ತಂದು ಎಣ್ಣೆ ಹಾಕು ಎಂದು ಹೇಳಿದನು.

 ಹೇಳಿದ ನಂತರ ಕಣ್ಣು ಬಿಚ್ಚಿ ನೋಡಿದಾಗ ಅವನಿಗೆ ತಿಳಿಯಿತು ನನ್ನ ಮೌನ ಮುರಿದೆ ಎಂದು ಅರಿತನು ಎದುರುಗಡೆ ಎರಡನೆಯವನು ಇವನನ್ನೇ ಭಯಂಕರವಾಗಿ ನೋಡಿದ ಮತ್ತೆ ಮೊದಲನೆಯವನು ಎರಡನೆಯವನಿಗೆ ಕೋಪ ಬರುವ ರೀತಿಯಲ್ಲಿ ಹೇಳಿದ.

 ನಾವು ಎಲ್ಲರೂ ಮೌನವಾಗಿ ಇರಬೇಕೆಂದು ಪ್ರತಿಜ್ಞೆ ಮಾಡಿದ್ದೇವೆ ನೀನು ಪ್ರತಿಜ್ಞೆಯನ್ನು ಮರೆತುಬಿಟ್ಟಿದ್ದೀಯಾ. ತಪ್ಪು ಮಾಡಿದರೆ ಅವರಿಗೆ ಸರಿಯಾದ ರೀತಿಯಲ್ಲಿ ಹೇಳುವುದು ನನ್ನ ಕರ್ತವ್ಯ ಎಂದು ಹೇಳಿದನು ಎರಡನೆಯವನು ಮೌನ ಮುರಿದನು.

ಮೂರನೆಯವನು ಹೇಳಿದ ಅವನು ತಪ್ಪು ಮಾಡಿದ ಆ ತಪ್ಪು ನೀನೇಕೆ ಎತ್ತಿ ತೋರಿಸಿದೆ ನಿನ್ನ ಮೌನವು ಹೋಯಿತು ಎಂದು ಮೂರನೆಯವನು ಹೇಳಿದ.

 ನಾಲ್ಕನೆಯವನು ನಗು ನಗುತ್ತಾ ಹೇಳಿದ ನೀವೆಲ್ಲರೂ ಮೌನ ಮುರಿದಿದ್ದೀರಿ ನಾನು ಒಬ್ಬನೇ ಮೌನ ವ್ರತವನ್ನು ಪಾಲಿಸುತ್ತಿದ್ದೇನೆ ಎಂದು ಕೂಗಿ ಹೇಳಿದ ಈ ರೀತಿಯಾಗಿ ತಾನೂ ಕೂಡ ಮೌನ ಮುರಿದನು ನಂತರ 4ಯುವಕರಿಗೆ ನಾಚಿಕೆಯಾಯಿತು. ಮೊದಲನೆಯವನು ಗೊತ್ತಿಲ್ಲದೆ ಮಾಡಿದ ಎರಡನೆಯ.

ವನು ಮೊದಲನೆಯವನಿಗೆ ಬೈದನು ನಾನೇ ಸರಿ ಎಂದು ತೋರಿಸಿಕೊಳ್ಳುವವನು ಎರಡನೆಯವನು ನಾನೇ ಬುದ್ಧಿವಂತ ಎಂದು ಹೇಳಿಕೊಳ್ಳುವುದು ಮೂರನೆಯವನು ಇಬ್ಬರಿಗೂ ಉಪನ್ಯಾಸ ಕೊಡುವವನು ಇತರರಿಗೆ ಬುದ್ಧಿ ಹೇಳುವವರು. ನಾಲ್ಕನೆಯವನು ಇತರರಿಗಿಂತ ನಾನೇ ಶ್ರೇಷ್ಠ ಎಂದು ಹೊಗಳಿಕೊಳ್ಳುವವನು. ನಾನೇ ಶ್ರೇಷ್ಠ ಎಂದು ಪ್ರದರ್ಶಿಸಿ ನಾನೇ ದಡ್ಡನಾಗಿದ್ದೇನೆಯೇ?

 ವಿಚಿತ್ರ ವ್ಯಾಪಾರಿ

ಒಬ್ಬ ವಿಚಿತ್ರ ವ್ಯಾಪಾರಿ ಇದ್ದನು ವ್ಯಾಪಾರಿಯು ಕಾಲಕ್ಕೆ ತಕ್ಕಂತೆ ಹಣ್ಣು ಹಂಪಲುಗಳನ್ನು ಮಾರುತಿದ್ದನು ಒಬ್ಬರಿಗೆ ಕಡಿಮೆ ಬೆಲೆಯಲ್ಲಿ ಇನ್ನೊಬ್ಬರಿಗೆ ಹೆಚ್ಚು ಬೆಲೆಯಲ್ಲಿ ಕೆಲವರಿಗೆ ಉಚಿತವಾಗಿ ಕೊಟ್ಟು ಕಳುಹಿಸುತ್ತಿದ್ದನು ಯಾರೇ ಹೋಗಿ ಹಣ್ಣು ಕೇಳಿದರೆ ನಿಮಗೆ ಎಷ್ಟು ಬೇಕು? ಏಕೆ ಬೇಕು? ಎಂದು ಕೇಳುತ್ತಿದ್ದನು ನಂತರ ಹಣ್ಣು ಮಾರುತಿದ್ದನು.

 ಒಂದು ಸಾರಿ ಸರ್ಕಾರಿ ವ್ಯಕ್ತಿ ಹೋಗಿ ನನಗೆ ಹಣ್ಣು ಕೊಡಿ ಎಂದು ಕೇಳಿದನು ಅದಕ್ಕೆ ಆ ವ್ಯಾಪಾರಿ ನಿಮಗೆ ಏತಕ್ಕೆ ಬೇಕು ಎಷ್ಟು ಬೇಕು ಎಂದು ವಿವರ ಕೇಳಿದನು ಆಗ ವಿಚಿತ್ರ ವ್ಯಾಪಾರಿ ಹೇಳಿದ 10 ಸೇಬುಗಳು ತೆಗೆದುಕೊಂಡರೆ ಬೇರೆ ಬೆಲೆ 50 ತೆಗೆದುಕೊಂಡರೆ ಬೇರೆ ಬೆಲೆ 100 ತೆಗೆದುಕೊಂಡರೆ ಬೇರೆ ಬೆಲೆ.

ವೃದ್ಧಾಶ್ರಮಕ್ಕೆ ನೀವು ಕೊಡುತ್ತಿದ್ದಾರೆ ಅದಕ್ಕೆ ಬೇರೆ ಬೆಲೆ ಸರ್ಕಾರಿ ಶಾಲೆ ಮಕ್ಕಳಿಗೆ ನೀಡುತ್ತಿದ್ದರೆ ಬೇರೆ ಬೆಲೆ, ಖಾಸಗಿ ಶಾಲಾ ಮಕ್ಕಳಿಗೆ ಕೊಡಬೇಕಾದರೆ ಬೇರೆ ಬೆಲೆ, ಮನೆಗೆ ತಿನ್ನಲಿಕ್ಕೆ ಬೇಕಾದರೆ ಬೇರೆ ಬೆಲೆ ಎಂದು ಹೇಳಿದನು.

 ಸರ್ಕಾರಿ ವ್ಯಕ್ತಿ ಕೇಳಿದನು ನಿನಗೆ ಅದೆಲ್ಲ ಏಕೆ ನಾನು ಏತಕ್ಕಾದರೂ ಖರೀದಿಸುತ್ತೇನೆ ಎಂದು ಹೇಳಿದನು. ಆಗ ವಿಚಿತ್ರ ವ್ಯಾಪಾರಿ ಹೇಳಿದನು. ನೋಡಿ ಸಾರ್ ಒಂದೇ ಕಂಬದಿಂದಲೇ ಮನೆಗೆ ಕರೆಂಟ್ ಬರುತ್ತದೆ. ಮನೆಗೆ ಬಂದರೆ ಒಂದು ಬೆಲೆ ಅದೇ ಅಂಗಡಿಗೆ ಬೇರೆ ಬೆಲೆ. ಫ್ಯಾಕ್ಟರಿ ಅಥವಾ ಕಂಪನಿಗೆ ಆದರೆ ಮತ್ತೊಂದು ಬೆಲೆ ಯಾಕೆ? ಎಲ್ಲವೂ ಒಂದೇ ಕರೆಂಟ್ ತಾನೇ ಎಂದು ಹೇಳುತ್ತಾನೆ.

ಅದೇ ರೀತಿ ಗ್ಯಾಸ್ ಗು ಹೀಗೆ ಇದೆ ಮನೆಗೆ ಒಂದು ರೀತಿ ಅದೇ ಹೋಟೆಲ್ಗೆ ಆದರೆ ಬೇರೆ ಬೆಲೆ ಇದೆ ಹೋಗಲಿ ಟ್ಯಾಕ್ಸ್ ಅಲ್ಲು ಅದೇ ರೀತಿ ಇದೆ ಇದಕ್ಕೆ ಬೇರೆ ಟ್ಯಾಕ್ಸ್ ಅದಕ್ಕೆ ಬೇರೆ ಟ್ಯಾಕ್ಸ್ ಅಲ್ಲವೇ ಎಂದು ಕೇಳುತ್ತಾನೆ.

 ಇವನ ಮಾತನ್ನು ಕೇಳಿದ ಸರ್ಕಾರಿ ವ್ಯಕ್ತಿ ಏನು ಮಾತನಾಡದೆ ಸುಮ್ಮನಾಗುತ್ತಾನೆ ಕೆಲವೊಂದು ವಿಷಯಗಳು ವಿಚಿತ್ರವಾಗಿ ಕಂಡರೂ ಅದರಲ್ಲಿ ಕೂಡ ಸತ್ಯ ಅಡಗಿರುತ್ತದೆ.

ಒಂದು ದಿನದ ಚಿಂತೆಯನ್ನು

ಬಹಳಷ್ಟು ವರ್ಷಗಳ ಹಿಂದೆ ಒಂದು ಸಾರಿ ಯುದ್ಧವಾಯಿತು ಆ ಯುದ್ಧದಲ್ಲಿ ಹಲವಾರು ಜನರು ಸತ್ತರು ಹಲವಾರು ಜನರಿಗೆ ಪೆಟ್ಟಾಯಿತು ಆಗ ಅದರಲ್ಲಿ ಒಬ್ಬ ನಾಯಕನ ಸ್ನೇಹಿತನು ಸತ್ತಿದ್ದನು ಆಗ ಮಿಕ್ಕಿದವರಲ್ಲಿ ಆತ್ಮವಿಶ್ವಾಸ ಕಡಮೆಯಾಗುತ್ತಿತ್ತು.

 ನಾಯಕನಾದವನು ಸಾಂತ್ವನ ಹೇಳುವ ಬದಲು ಮತ್ತೆ ನಾಯಕ ಆಜ್ಞೆಯನ್ನು ನೀಡಿದ ನಾಳೆ ಬೆಳಿಗ್ಗೆ 9 ಗಂಟೆಗೆ ಎಲ್ಲರೂ ಸೇರಬೇಕು ಮತ್ತು ಯೂನಿಫಾರ್ಮ್ ನೊಂದಿಗೆ ಎಂದು ಹೇಳಿದಾಗ ಎಲ್ಲರೂ ಅವನ ಮುಂದೆ ಹೌದು ಎಂದರು.

 ನಾಳೆ ಮತ್ತೆ ಕಮಾಂಡರ್ ಬರುತ್ತಿದ್ದಾರೆ ಎಂದಾಗ ಎಲ್ಲಾ ಸೈನಿಕರೂ ಶಿಸ್ತಾಗಿ ಇರಬೇಕು ಎಂದು ಹೇಳಿದನು ಆಗ ಎಲ್ಲ ಸೈನಿಕರು ಬೈದುಕೊಂಡು ಕೆಲಸ ಮಾಡುತ್ತಿದ್ದರು ಇವನಿಗೆ ಕರುಣೆಯೇ ಇಲ್ಲ ಕಠೋರ ಹೃದಯವುಳ್ಳವನು ನಾಳೆಯ ತಯಾರಿಗಾಗಿ ತಮ್ಮ ಶೂಗಳು, ಬೆಲ್ಟುಗಳು, ಯೂನಿಫಾರಂಗಳು, ಇಸ್ತ್ರಿ ಮಾಡಿ ಕೊಳ್ಳುತ್ತಿದ್ದರು ಎಲ್ಲಾ ಕೆಲಸಗಳು ಬೈಯುತ್ತಲೇ ಶಾಪ ಹಾಕುತ್ತಲೇ ಮಾಡುತ್ತಿದ್ದರು.

 ಮಾರನೆ ದಿನ ಬೆಳಿಗ್ಗೆಯೇ ಬಂದು ಸಭೆಯನ್ನು ಸೇರಿದರು ನಂತರ ಎಲ್ಲರ ಜೊತೆ ಇವರು ಕೂಡ ಸೇರಿಕೊಂಡು ಸ್ನೇಹಿತನ ಸಾವಿನ ದುಃಖವನ್ನು ಹೇಳಿದರು ಮತ್ತು ನಾಯಕರು ಹೇಳಿದರು ನಿಮಗೆ ನನ್ನ ಮೇಲೆ ಕೋಪವಿದೆ ನಾನು ಒಪ್ಪುತ್ತೇನೆ.

 ನಾನು ಯಾಕೆ ಹೀಗೆ ಮಾಡಿದೆ ಎಂದರೆ ಎಲ್ಲರೂ ದುಃಖದಲ್ಲಿ ಇದ್ದೀರಾ ನಾನು ಮತ್ತೆ ನಿಮಗೆ ಸಾಂತ್ವನ ಹೇಳಿದರೆ ಮತ್ತಷ್ಟು ದುಃಖ ಇಮ್ಮಡಿಯಾಗುತ್ತದೆ ಅದಕ್ಕೆ ಈ ರೀತಿ ನಿಮಗೆ ಆಜ್ಞೆ ಕೊಟ್ಟೆ ನನ್ನನ್ನ ಬೈಯ್ಯುತ್ತೀರಿ ಆದರೆ ನಿಮ್ಮ ಮನಸ್ಸು ಬೇರೆ ಕಡೆಗೆ ಡೈವರ್ಟ್ ಆಗಿರಲಿ ಎಂದು ಈ ರೀತಿ ಮಾಡಿದೆ ಎಂದು ಹೇಳಿದರು.

ನಾಯಕನು ಕೂಡ ಸ್ವಲ್ಪ ಹೊತ್ತು ಸೈನಿಕರ ದುಃಖದಲ್ಲಿ ಭಾಗಿಯಾದರು ನಾನು ನಿಮಗೆ ಆಜ್ಞೆ ಕೊಟ್ಟಿದ್ದಕ್ಕಾಗಿ ಒಂದು ದಿನದ ಚಿಂತೆಯನ್ನು ನೀವು ಮರೆತಿದ್ದೀರಿ ಎಂದು ಹೇಳಿದರು ಬನ್ನಿ ಎಲ್ಲರೂ ಹೋಗಿ ಹುತಾತ್ಮರಿಗೆ ಗೌರವವನ್ನು ಸಲ್ಲಿಸಿ ಬರೋಣ ಎಂದು ಎಲ್ಲರೂ ಸೇರಿ ಗೌರವ ಸಲ್ಲಿಸಿದರು.

ಸಭೆಗೆ ಬರಲೇ ಇಲ್ಲ

ಕಲಾತ್ಮಕ ರಾಜ ಒಂದು ಸಾರಿ ವಾಯು ವಿಹಾರಕ್ಕಾಗಿ ಹೋಗುತ್ತಿರುತ್ತಾನೆ ನಂತರ ಹಾಗೆ ಊರಿನ ಆಚೆ ಹೋಗುತ್ತಿದ್ದಾಗ ಮಧುರವಾದ ಇಂಪಾದ ಸಂಗೀತ ಕೇಳಿ ಬರುತ್ತಿರುತ್ತದೆ ಈ ರಾಜನಿಗೆ ಸಂಗೀತ ಎಂದರೆ ಎಲ್ಲಿಲ್ಲದ ಹುಚ್ಚು ಆದ್ದರಿಂದ ಹಾಡು ಎಲ್ಲಿಂದ ಬರುತ್ತಿದೆ ಹಾಗೆ ಹುಡುಕಿ ಕೊಂಡು ಹೋಗೋಣ ಎಂದು ಹೋದನು.

 ಆ ಸಮಯವು ಮುಸ್ಸಂಜೆಯಾಗಿರುತ್ತದೆ ಕಾಡಿನ ಸುಂದರ ಹೂವುಗಳು ಅಲ್ಲಿಯ ವಾತಾವರಣ ಎಲ್ಲವೂ ಮಂತ್ರ ಮುಗ್ಧನಾಗಿ ಮಾಡಿದವು ನಂತರ ಶಬ್ದವನ್ನು ಕೇಳಿ ಕೊಂಡು ಹೋದನು ಅಲ್ಲಿ ನೋಡಿದರೆ ಒಂದು ಮರದ ಕೆಳಗೆ ಕುಳಿತುಕೊಂಡು ಒಬ್ಬ ಮಹಾನ್ ಸಂಗೀತಗಾರರು ಕಣ್ಣು ಮುಚ್ಚಿಕೊಂಡು ತಲ್ಲೀನರಾಗಿ ಹಾಡನ್ನು ಹಾಡುತ್ತಿರುತ್ತಾರೆ.

 ರಾಜನಾದವನು ಸಂಗೀತಗಾರ ಸ್ವಲ್ಪ ದೂರದಲ್ಲಿ ಕುಳಿತು ಸಂಗೀತವನ್ನು ಆಲಿಸಿದ ಈ ರೀತಿಯ ಸಂಗೀತ ರಾಜನಾದವನು ಜೀವನದಲ್ಲಿಯೇ ಎಂದೂ ಕೇಳಿರಲಿಲ್ಲ ನಂತರ ಸಂಗೀತಗಾರ ಕಣ್ಣು ತೆರೆದು ನೋಡಿದರೂ ಮಹಾರಾಜ ಕೇಳುತ್ತಿದ್ದಾರೆ.

ಮಹಾರಾಜರು ಸಂಗೀತಗಾರರಿಗೆ ನಿಮ್ಮ ಸಂಗೀತ ನಿಜಕ್ಕೂ ತುಂಬಾ ಅದ್ಭುತವಾಗಿದೆ ಎಂದು ಹೊಗಳಿದರು ಮತ್ತೆ ಒಂದು ಕೋರಿಕೆಯನ್ನು ಹೇಳಿದರು ಸಂಗೀತಗಾರರೆ ನೀವು ಒಂದೇ ಒಂದು ಸಾರಿ ನಮ್ಮ ಅರಮನೆಯಲ್ಲಿ ಬಂದು ಸಂಗೀತವನ್ನು ಹಾಡಿ ನನ್ನ ಅರಮನೆಯಲ್ಲಿ ಸಂಗೀತ ಪ್ರಿಯರು ಬಹಳಷ್ಟು ಜನ ಇದ್ದಾರೆ.

ಎಲ್ಲರು ಇಂಪಾದ ಸಂಗೀತ ಕೇಳಲಿ ಎನ್ನುವುದೆ ನನ್ನ ಆಸೆ ಎಂದು ಬೇಡಿಕೊಂಡರು ಸಂಗೀತಗಾರರು ಸ್ವಲ್ಪ ಯೋಚನೆ ಮಾಡಿ ಹೇಳಿದರು ಆಗಬಹುದು ಆದರೆ ನನ್ನದು ಒಂದು ನಿಯಮ (ಕಂಡಿಷನ್) ಇದೆ ನಾನು ನಿಮ್ಮ ಅರಮನೆಯಲ್ಲಿ ಹಾಡಬೇಕಾದರೆ ಯಾರು ಮಲಗಬಾರದು ಮಲಗಿದರೆ ಬೇರೆ ಸೈನಿಕರು ಕತ್ತಿಯನ್ನು ಹಿಡಿದು ಸಿದ್ಧವಾಗಿ ನಿಂತಿರಬೇಕು.

 ಯಾರು ಮಲಗುತ್ತಾರೋ ಅವರನ್ನು ತಲೆ ಕತ್ತರಿಸಬೇಕು ಈ ಕಂಡಿಷನ್ ಇದ್ದರೆ ಮಾತ್ರ ನಾನು ಹಾಡುತ್ತೇನೆ ಇಲ್ಲದಿದ್ದರೆ ಇಲ್ಲ ಮತ್ತೆ ಈ ನಿಯಮ ಎಲ್ಲರಿಗೂ ಅನ್ವಯವಾಗುತ್ತದೆ ಎಂದು ಹೇಳಿದರು ಅದಕ್ಕೆ ರಾಜರು ಕೊಂಚ ಯೋಚಿಸಿ ಆಗಬಹುದು ಎಂದು ಒಪ್ಪಿಕೊಂಡರು ನಂತರ ಇದೇ ವಿಷಯವನ್ನು ಅರಮನೆಯಲ್ಲಿ ಎಲ್ಲರಿಗು ತಿಳಿಸಿದರು.

 ಕೇಳಿದ ಎಷ್ಟೋ ಸೈನಿಕರು ಸಂಗೀತ ಸಭೆಗೆ ಬರಲೇ ಇಲ್ಲ ಮತ್ತೆ ಕೆಲವರು ಸ್ವಲ್ಪ ದೈರ್ಯ ಮಾಡಿ ಬಂದರು  ನಿದ್ದೆ ಬಂದರೆ ಆಚೆ ಬರಬಹುದು ಕೆಲವು ಜನ ಎದ್ದು ಹೊರಟು ಹೋದರು ಕೆಲವರು ಏನಾಗುತ್ತದೆ ಆಗಲಿಯೆಂದು ಎಂದು ಧೈರ್ಯದಿಂದ ಸಭೆಗೆ ಬಂದರು ಸಂಗೀತಗಾರರು ಸಂಗೀತ ಆರಂಭಿಸಿದಂತೆ ಸಂಗೀತ ಪ್ರಿಯರು ಮೈಮರೆತರು.

 ಮೊಟ್ಟಮೊದಲು ರಾಜರೇ ಮೈಮರೆತು ಸ್ವಲ್ಪ ಹೊತ್ತಿನ ನಂತರ ಎದ್ದರು ಬೇರೆ ಸೈನಿಕರು ನೋಡಿದರೆ ಎಲ್ಲರೂ ಸಂಗೀತದಲ್ಲಿ ತಲ್ಲೀನರಾಗಿದ್ದಾರೆ ಇದನ್ನು ನೋಡಿ ಗಾಬರಿಯಾಗಿ ಸಂಗೀತಗಾರರಿಗೆ ಹೇಳಿದರು ಏನು ಮಾಡಬೇಕು ಎಂದಾಗ ಸಂಗೀತಗಾರರು ಮುಗುಳ್ನಗುತ್ತ ಹೇಳಿದರು.

 ನಾನು ಇಲ್ಲಿ ಎಷ್ಟು ಜನ ಸೇರಿದ್ದೀರೋ ಅವರಿಗೆ ಮಾತ್ರ ನಾನು ಹಾಡಲು ಇಷ್ಟ ಪಡುತ್ತೇನೆ ಏಕೆಂದರೆ ಸಾವಿನ ಭಯ ಇದ್ದೂ ಕೂಡ ಅವರು ಬಂದಿದ್ದಾರೆ ಎಂದರೆ ಅವರಿಗಾಗಿಯೇ ನನ್ನ ಸಂಗೀತ ಎಂದು ಹೇಳಿದರು ಇವರನ್ನೇ ನಾನು ಸಂತೃಪ್ತಿ ಪಡಿಸಬೇಕು ಎನ್ನುವ ಉದ್ದೇಶದಿಂದ ಹೀಗೆ ಹೇಳಿದೆ ಎಂದು ಸಂಗೀತಗಾರರು ಹೇಳಿದರು.

ಹೇಳುವ ಹಕ್ಕು ನಿನಗೆ ಇಲ್ಲ

ಒಂದು ಕಾಡಿನಲ್ಲಿ ಒಂದು ಮರದ ಕೆಳಗೆ ಹಲವಾರು ಪಾರಿವಾಳಗಳು ವಾಸವಾಗಿರುತ್ತವೆ ಪಾರಿವಾಳಗಳು ಆಹಾರ ತರಲಿಕ್ಕೆ ಹೋಗಬೇಕಾದರೆ ಮರದ ಮೂರು ಸುತ್ತು ಸುತ್ತಿ ನಂತರ ಆಹಾರ ಹುಡುಕಲು ಹೋಗುತ್ತಿದ್ದವು ಇದು ಪಾರಿವಾಳಗಳ ಸಂಪ್ರದಾಯ ನಂತರ ಒಂದು ಬೇರೆ ಪಕ್ಷಿ ಬಂದು ಮರದ ಮೇಲೆ ಕುಳಿತುಕೊಂಡಿತು.

 ಪ್ರತಿಯೊಂದು ಪಾರಿವಾಳವು ಹೊರಗೆ ಹೋಗಬೇಕಾದರೆ ಮರದ ಮೂರು ಸುತ್ತು ಸುತ್ತಿ ಹೋಗುತ್ತಿತ್ತು ಇದನ್ನು ನೋಡಿದ ಹೊಸ ಪಕ್ಷಿಗೆ ಕುತೂಹಲ ಉಂಟಾಯಿತು ಎಲ್ಲಾ ಪಾರಿವಾಳ ಗಳು ಏಕೆ ಮರವನ್ನು ಸುತ್ತು ಹಾಕಿ ಹೋಗುತ್ತಿದೆ ಎಂದು ಕೇಳಿದಾಗ ಒಂದು ಪರಿವಾಳ ಹೇಳಿತು ಇದು ನಮ್ಮ ಸಂಪ್ರದಾಯ ಎಲ್ಲಾ ಪಾರಿವಾಳಗಳು ಹೀಗೆ ಮಾಡುತ್ತವೆ ಎಂದು ಹೇಳಿತು.

ಹೊಸದಾಗಿ ಬಂದ ಪಕ್ಷಿ ಹೇಳಿತು ಹೀಗೆ ಮಾಡುವುದು ಸರಿಯಲ್ಲ ಎಂದು ಹೇಳಿತು ಆಗ ಪಾರಿವಾಳಗಳಿಗೆ ಕೋಪ ಬಂತು ಹೊಸ ಪಕ್ಷಿಯನ್ನು ಬೈಯುತ್ತಿದ್ದವು ಅಷ್ಟರಲ್ಲಿ ಹಿರಿಯ ಪಾರಿವಾಳ ಬಂದು ಹೊಸ ಪಕ್ಷಿಗೆ ನಿಮ್ಮ ಸಂಪ್ರದಾಯ ಏನಿದೆಯೋ ಅದು ನಮಗೆ ತಿಳಿಯದು ಆದರೆ ಬಹಳಷ್ಟು ವರ್ಷಗಳಿಂದ ನಮ್ಮ ಸಂಪ್ರದಾಯವನ್ನು ಪಾಲಿಸುತ್ತಿದ್ದೇವೆ.

  ಇನ್ನೊಬ್ಬರ ಸಂಪ್ರದಾಯವನ್ನು ನಾವು ಎಂದಿಗೂ ತಪ್ಪು ಎಂದು ಹೇಳುವ ಹಕ್ಕು ನಿನಗೆ ಇಲ್ಲ ಇನ್ನೊಬ್ಬರ ಸಂಪ್ರದಾಯವನ್ನು ಅರಿತುಕೊಳ್ಳಬೇಕು ನಮ್ಮ ಸಂಪ್ರದಾಯವನ್ನು ಪ್ರೀತಿಸಬೇಕು ಎಂದು ಹೇಳಿತು ಆಗ ಹೊಸ ಪಕ್ಷಿ ಅರ್ಥಮಾಡಿಕೊಂಡಿತು ಈಗಲೂ ಬಹಳಷ್ಟು ಸಂಪ್ರದಾಯಗಳು ಇವೆ ಅವುಗಳನ್ನು ಅರ್ಥ ಮಾಡಿಕೊಂಡು ಅವರ ಜೊತೆ ಪ್ರೀತಿಯಿಂದ ಬದುಕೋಣ. ಎಲ್ಲಾ ಸಂಪ್ರದಾಯಗಳ ಬಗ್ಗೆ ನಾನು ಎಷ್ಟು ಅರ್ಥ ಮಾಡಿಕೊಂಡಿದ್ದೇನೆ?

]]>
https://babakategalu.com/%e0%b2%ae%e0%b3%8c%e0%b2%a8-%e0%b2%ae%e0%b3%81%e0%b2%b0%e0%b2%bf%e0%b2%a6%e0%b3%81-%e0%b2%b9%e0%b3%8b%e0%b2%af%e0%b2%bf%e0%b2%a4%e0%b3%81/feed/ 0
ನಾಳೆ ನಾನು ಏನೇನು ಮಾಡಬೇಕು? https://babakategalu.com/%e0%b2%a8%e0%b2%be%e0%b2%b3%e0%b3%86-%e0%b2%a8%e0%b2%be%e0%b2%a8%e0%b3%81-%e0%b2%8f%e0%b2%a8%e0%b3%87%e0%b2%a8%e0%b3%81-%e0%b2%ae%e0%b2%be%e0%b2%a1%e0%b2%ac%e0%b3%87%e0%b2%95%e0%b3%81/ https://babakategalu.com/%e0%b2%a8%e0%b2%be%e0%b2%b3%e0%b3%86-%e0%b2%a8%e0%b2%be%e0%b2%a8%e0%b3%81-%e0%b2%8f%e0%b2%a8%e0%b3%87%e0%b2%a8%e0%b3%81-%e0%b2%ae%e0%b2%be%e0%b2%a1%e0%b2%ac%e0%b3%87%e0%b2%95%e0%b3%81/#respond Tue, 04 Mar 2025 04:40:00 +0000 https://babakategalu.com/?p=191 Read more]]> ಒಬ್ಬ ಮನುಷ್ಯ ನಿದ್ದೆಯಿಂದ ಗಾಬರಿಯಾಗಿ ಏಳುತ್ತಿದ್ದನು ಇವನಿಗೆ ಒಂದು ಕನಸು ಬೀಳುತ್ತಿತ್ತು ಕನಸು ಯಾವ ರೀತಿ ಎಂದರೆ ಮರಳು ಗಾಡಿನಲ್ಲಿ ಎಲ್ಲಿಯೂ ಹಸಿರೂ ಇಲ್ಲ ಬರಿ ಮರಳು ಕಾಣಿಸುತ್ತಿತ್ತು ಯಾವ ಕಡೆ ನೋಡಿದರೂ ಬರೀ ಮರಳೆ ಮರಳಿನಲ್ಲಿ ಒಂದು ಜೊತೆ ಚಪ್ಪಲಿಗಳ ಗುರುತು ಇದೆ.

 ಮುಂದೆ ನೋಡಿದರೆ ಎಲ್ಲಿಯೂ ಗುರುತುಗಳು ಸಿಗುತ್ತಿಲ್ಲ ಇವನಿಗೆ ಕನಸುಗಳು ಬರುತ್ತಿರುವುದರಿಂದ ಇವನ ನಿದ್ರೆ ಭಂಗವಾಗುತ್ತಿತ್ತು ತನ್ನ ಮನೆಯಲ್ಲಿ ಹೇಳಿದ ಗೆಳೆಯರಿಗೆ ಹೇಳಿದ ಆದರೂ ಇದಕ್ಕೆ ಅರ್ಥಗೊತ್ತಾಗುತ್ತಿಲ್ಲ ಕೊನೆಗೆ (ಕೌನ್ಸಿಲಿಂಗ್) ಆಪ್ತಸಲಹೆಗೆ ಹೋದನು.

 ಅಲ್ಲಿ ಮನೋಚಿಕಿತ್ಸಕರು ಇವನ ಬಗ್ಗೆ ಎಲ್ಲವೂ ವಿವರವಾಗಿ ಕೇಳಿದರು ಮನೋಚಿಕಿತ್ಸಕರು ಕೇಳಿದರು ನಿನ್ನ ಚಪ್ಪಲಿಯ ಗುರುತು ಸಿಗುತ್ತಿಲ್ಲ ವೆಂದು ನೀನು ಹೇಳ್ತಿದಿಯಾ ಅಲ್ಲವೇ ಹೌದು ಎಂದನು ಇದಕ್ಕೆ ಕಾರಣವೇನು ನಿನಗೆ ಗೊತ್ತಾಗಲಿಲ್ಲ ಅಲ್ಲವೇ ಎಂದು ಹೇಳಿದಾಗ ಹೌದು ಅದಕ್ಕಾಗಿ ನಾನು ಎಲ್ಲೆಲ್ಲೂ ಕೇಳಿ ಬಂದಿದ್ದೇನೆ ಆದರೂ ಅರ್ಥವಾಗುತ್ತಿಲ್ಲ ಎಂದನು.

ಮನು ಚಿಕಿತ್ಸೆಕರು ಹೇಳಿದರು ರಾತ್ರಿ ಮಲಗುವುದಕ್ಕಿಂತ ಮುಂಚೆ ನಾಳೆ ಏನೇನು ಕೆಲಸ ಮಾಡಬೇಕು ಎಂದು ಏನಾದರೂ ನೀವು ಪ್ಲಾನ್ ಮಾಡುತ್ತೀರೋ? ಎಂದಾಗ ಇವನು ಇಲ್ಲ ಎಂದನು ಎಲ್ಲೆಲ್ಲಿ ಹೋಗಬೇಕು ಏನೇನು ಮಾಡಬೇಕು ಎಂದು ಅದಕ್ಕೂ ಇಲ್ಲ ಎಂದನು.

ಮನೋಚಿಕಿತ್ಸಕರು ಹೇಳಿದರು ನಿನ್ನ ಬದುಕಿಗೆ ಅರ್ಥ ಇಲ್ಲ ಅಂದ ಮೇಲೆ ನಿಮ್ಮ ಕನಸಿಗೆ ಹೇಗೆ ಅರ್ಥಸಿಗುತ್ತದೆ ಎಂದು ಹೇಳಿದರು ನಂತರ ಅವನಿಗೆ ತಿಳಿಯಿತು ಹೌದು ಇವರು ಹೇಳಿರುವುದರಲ್ಲಿ ಸತ್ಯಾಂಶವಿದೆ ನಾಳೆ ನಾನು ಏನೇನು ಮಾಡಬೇಕು? ಎಂದು ಮಲಗಿದನು ಚಿಂತನೆ ಮಾಡಿ ಮಲಗಿದ ನಂತರ ಕನಸು ಬೀಳಲಿಲ್ಲವಂತೆ ನಾನು ಮಲಗುವುದಕ್ಕಿಂತ ಮುಂಚೆ ನಾಳೆ ಏನೇನು ಮಾಡಬೇಕೆಂದು ಯೋಚಿಸುತ್ತೇನೆಯೇ?

 ಇಂತಹ ಪ್ರದರ್ಶನವೇ

ಸಮುದ್ರದ ತೀರದಲ್ಲಿ ಒಂದು ದಿನ ಅರ್ಚಕರು ಬೆಳಗಿನ ವಾಕಿಂಗ್ ಮಾಡೋಣವೆಂದು ಬಂದರು ಆಗ ಎಳೆಯ ಬಿಸಿಲು ತಂಪಾದ ಗಾಳಿ ಬಿಸುತ್ತಿತ್ತು ಅರ್ಚಕರು ನಡೆದುಕೊಂಡು ಬರುತ್ತಿದ್ದಂತೆಯೇ ಒಂದು ವಿಚಿತ್ರ ದೃಶ್ಯವನ್ನು ನೋಡಿದರು ಒಬ್ಬ ಯುವಕ ಒಂದು ಯುವತಿಯನ್ನು ತನ್ನ ಬೆನ್ನ ಮೇಲೆ ಕೂರಿಸಿಕೊಂಡು ಬರುತ್ತಿದ್ದಾನೆ.

 ಇದನ್ನು ನೋಡಿದ ಅರ್ಚಕರಿಗೆ ಅಸಹ್ಯವೆನಿಸಿತು ಬಲು ಸಿಟ್ಟು ಬಂತು ಎಲ್ಲರೂ ಓಡಾಡುವ ಜಾಗದಲ್ಲಿ ಇಂತಹ ಪ್ರದರ್ಶನವೇ ಎಂದು ಮನದಲ್ಲಿ ಕೋಪಿಸಿಕೊಂಡರು ನಂತರ ಆ ಯುವಕ ಯುವತಿಯನ್ನು ಕೆಳಗೆ ಇಳಿಸಿ ಸೊಂಟದಮೇಲೆ ಕೂರಿಸಿಕೊಂಡು ನಂತರ ಸ್ವಲ್ಪ ದೂರ ನಡೆದನು.

 ಮತ್ತೆ ಕೆಳಗೆ ಇಳಿದು ತರುಣಿಯ ಕಾಲುಗಳನ್ನು ಚೆನ್ನಾಗಿ ಒತ್ತಿದನು ಇದನ್ನು ನೋಡಿದ ಅರ್ಚಕರಿಗೆ ತಡೆಯಲು ಆಗಲಿಲ್ಲ ಬೆಳಿಗ್ಗೆ ಬೆಳಿಗ್ಗೆಯೇ ಇಂತಹ ಅಶ್ಲೀಲ ಪ್ರದರ್ಶನ ನೋಡಿ ರಕ್ತ ಕೊತ ಕೊತ ಕುದಿಯಿತು ಬೇರೆ ಯಾರು ನೋಡಬಾರದು ಎಂದು ನಂತರ ವಾಕಿಂಗ್ ಮಾಡುವುದನ್ನು ಬಿಟ್ಟು ಅಲ್ಲಿ ಇದ್ದ ಹಿರಿಯರಿಗೆ ಕರೆದುಕೊಂಡು ಬಂದರು.

 ಸಹಾಯಕ್ಕೆ ಸ್ವಲ್ಪ ಜನರನ್ನೂ ಕೂಡ ಕರೆತಂದರು ಮೊದಲೇ ಅರ್ಚಕರು ಅರ್ಚಕರಿಗೆ ಎಲ್ಲರೂ ಗೌರವಿಸುತ್ತಾರೆ ನಂಬುತ್ತಾರೆ ನಂತರ ಇಬ್ಬರೂ ನೀರಿನಲ್ಲಿ ಕಾಲು ಹಾಕಿ ಕುಳಿತಿದ್ದರು ನಂತರ ಮರಳಿನ ಮೇಲೆ ಕೂರಿಸಿ ಕಾಲುಗಳನ್ನು ಒತ್ತುತ್ತಿದ್ದನು.

 ಒಂದು ಬಾಟಲಿನಿಂದ ಏನೋ ಕುಡಿಯುತ್ತಿದ್ದನು ಇದು ಕಣ್ಣಾರೆ ನೋಡಿದಾಗ ಆ ಯುವಕನ ಮೇಲೆ ತಡೆಯಲಾರದೆ ಮತ್ತಷ್ಟು ಕೋಪ ಬಂದು ಬಂದಿದ್ದವರು ಎಲ್ಲರೂ ಸೇರಿ ಇವನನ್ನು ಹಿಗ್ಗಾಮುಗ್ಗ ಹೊಡೆದರು  ನಂತರ ಒಬ್ಬ ಕೇಳಿದ ಬೆಳಿಗ್ಗೆ ಬೆಳಿಗ್ಗೆ ಈ ರೀತಿ ಅಶ್ಲೀಲ ಕೆಲಸ ಮಾಡುವುದು ನಿನಗೆ ಸರಿ ಎನಿಸುತ್ತಿದೆ ಎಂದು ಕೇಳಿದ ಆಗ ಯುವಕನು ದುಃಖದಿಂದ ಹೇಳಿದ ಹೇಳಿದ.

 ಹಿರಿಯರೇ ಇವಳು ನನ್ನ ತಂಗಿ ನನ್ನ ತಂಗಿಯ ಕಾಲುಗಳು ಬಿದ್ದುಹೋಗಿವೆ ನಮ್ಮನ್ನು ಊರಿನಲ್ಲಿ ಯಾರೂ ಮುಟ್ಟುವುದಿಲ್ಲ ಯಾರು ಕುದುರೆಗಾಡಿಯು ಸಹ ಕೊಡಲಿಲ್ಲ ಆದುದರಿಂದ ಇವಳನ್ನು ನಾನು ಹೊತ್ತುಕೊಂಡೆ ಬೇರೆ ವೈದ್ಯರ ಬಳಿಗೆ ಕರೆದುಕೊಂಡು ಹೋಗುತ್ತಿದ್ದೇನೆ.

 ಕಾಲನ್ನು ಅಮುಕಿದರೆ ಅವಳಿಗೆ ಸ್ವಲ್ಪ ನೋವು ಕಡಿಮೆಯಾಗುತ್ತದೆ ನಾನು ಗಂಗೆಯ ನೀರನ್ನೂ ಕುಡಿಯುತ್ತಿದ್ದೇನೆ ಎಂದು ಹೇಳಿದನು ತಪ್ಪಾಗಿದ್ದರೆ ದಯವಿಟ್ಟು ಕ್ಷಮಿಸಬೇಕು ಎಂದು ವಿನಮ್ರವಾಗಿ ಕೇಳಿಕೊಂಡನು.

 ಅಲ್ಲಿ ಬಂದಿದ್ದ ಹಿರಿಯರು ಕೂಡ ತಲೆಬಾಗಿದರು ಅದು ಅಶ್ಲೀಲತೆ ಇರಲಿಲ್ಲ ಆದರೆ ನೋಡುವವರ ದೃಷ್ಟಿಯಲ್ಲಿ, ಮನಸ್ಸಿನಲ್ಲಿ ಅಶ್ಲೀಲತೆ ತುಂಬಿ ತುಳುಕಾಡುತ್ತಿತ್ತು ಅಷ್ಟೆ ನಮ್ಮ ದೃಷ್ಟಿ ಶುದ್ಧವಾಗಿದ್ದರೆ ಶುದ್ಧವಾಗಿರುವುದನ್ನೇ ನೋಡುತ್ತೇವೆ ನಮ್ಮ ದೃಷ್ಟಿ ಪರಿಶುದ್ಧವಾಗಿಟ್ಟುಕೊಳ್ಳೋಣ. ನಾನು ಇತರರನ್ನು ನೋಡಿದಾಗ ಯಾವ ದೃಷ್ಟಿಯಿಂದ ನೋಡುತ್ತೇನೆ?

 ನಿನಗೆ ತಾಕತ್ತಿದ್ದರೆ ನೀನು ಮಾಡಿ ತೋರಿಸು

ಒಂದು ಕೆರೆಯ ದಡದಲ್ಲಿ ಒಂದು ಚಿಕ್ಕ ಪಕ್ಷಿ ತನ್ನ ಮೊಟ್ಟೆಗಳನ್ನು ಜೋಪಾನ ಮಾಡಿ ಮರದ ಕೆಳಗೆ ಜೋಪಾನವಾಗಿ ಇಡುತ್ತಿತ್ತು ಇದನ್ನು ನೋಡಿಕೊಳ್ಳಲು ಕೆರೆಗೆ ಹೇಳಿತು ಕೆರೆ ಆ ಮೊಟ್ಟೆಗಳನ್ನು ತೆಗೆದುಕೊಂಡಿತು ಕೆಲವು ದಿನಗಳ ನಂತರ ಮೊಟ್ಟೆಗಳು ನೋಡಿದರೆ ಯಾವುದೇ ಮೊಟ್ಟೆಗಳು ಇರಲಿಲ್ಲ.

ಚಿಕ್ಕಪಕ್ಷಿ ಕೆರೆಗೆ ಹೇಳಿತು ನೀನು ನೋಡಿಕೊಳ್ಳಬೇಕು ಎಂದು ಹೇಳಿದೆ ಮಾತಿಗೆ ತಪ್ಪಿದ್ದೀಯಾ ನೀನೇ ಮೊಟ್ಟೆಗಳನ್ನು ತೆಗೆದುಕೊಂಡಿದ್ದೀಯಾ ದಯಮಾಡಿ ನನ್ನ ಮೊಟ್ಟೆಗಳನ್ನು ಕೊಟ್ಟುಬಿಡು ಅಂಗಲಾಚಿತು ಕೇಳಿತು ಆಗ ನದಿಯು ಅಹಂಕಾರದಿಂದ  ಹೇಳಿತು ನೀನು ಅಲ್ಲಿ ಇಟ್ಟಿದ್ದೆ ತಪ್ಪು ಈಗ ನಿನಗೆ ಯಾವ ಮೊಟ್ಟೆಗಳು ಸಿಗುವುದಿಲ್ಲ ಹೋಗು ಎಂದು  ಹಾಸ್ಯದಿಂದ ಅಣಿಕಿಸಿತು.

  ಚಿಕ್ಕಪಕ್ಷಿಯು ಹೇಳಿತು ನಾನು ಮನಸ್ಸು ಮಾಡಿದರೆ ನದಿಯ ಪೂರ್ತಿ ನೀರನ್ನು ಒಣಗಿಸಿ ಬಿಡುತ್ತೇನೆ ಎಂದು ಹೇಳಿತು ಆಗ ನಿನಗೆ ತಾಕತ್ತಿದ್ದರೆ ನೀನು ಮಾಡಿ ತೋರಿಸು ಎಂದು ನದಿ ಹೇಳಿತು ಆಗ ಚಿಕ್ಕಪಕ್ಷಿಯು ನಿಧಾನವಾಗಿ ತನ್ನ ಚುಂಚಿನಿಂದ ಕೆಲವು ನೀರಿನ ಹನಿಗಳನ್ನು ತೆಗೆದು ಆಚೆ ಹಾಕಲು ಆರಂಭಿಸಿತು.

 ಇದನ್ನು ನೋಡಿದ ಕೆಲವು ಪಕ್ಷಿಗಳು ಕೇಳಿದವು ಏನು ಮಾಡುತ್ತಿದ್ದೀಯಾ ಎಂದಾಗ ಪಕ್ಷಿ ಹೇಳಿತು ನನ್ನ ಕಷ್ಟ ನನಗೆ ಮಾತ್ರ ಅರ್ಥವಾಗುತ್ತದೆ ಇತರರಿಗೆ ಅರ್ಥವಾಗುವುದಿಲ್ಲ ನಂತರ ತನ್ನ ಕಷ್ಟ ಹೇಳಿಕೊಂಡಿತು ಎಲ್ಲಾ ನೀರನ್ನು ಬತ್ತಿಸಬೇಕು ಎಂದು ನಾನು ಶಪಥ ಮಾಡಿದ್ದೇನೆಎಂದು ತಿಳಿಸಿತು.

ಪಕ್ಷಿಗಳು ಒಂದೊಂದಾಗಿ ಬಂದು ಸೇರಿದವು ಸ್ವಲ್ಪ ಸ್ವಲ್ಪವೇ ನೀರನ್ನು ತೆಗೆದು ಕೊನೆಗೆ ಕೆರೆಯ ನೀರನ್ನು ಇನ್ನು ಸ್ವಲ್ಪದಲ್ಲಿಯೇ ಸಂಪೂರ್ಣವಾಗಿ ಕಡಿಮೆಯಾಗಬೇಕು ಈ ಮಟ್ಟಕ್ಕೆ ಬಂತು ಆಗ ಇತರರು ಬುದ್ಧಿ ಹೇಳಿದಾಗ ನದಿಯು ಪಕ್ಷಿಯ ಮೊಟ್ಟೆಗಳನ್ನು ಹಿಂತಿರುಗಿಸಿತು ನಂತರ ನದಿ ತನ್ನ ತಪ್ಪನ್ನು ಅರಿತುಕೊಂಡಿತು.

ಸೂಕ್ಷ್ಮವಾಗಿ ಗಮನಿಸಿದ್ದೀಯಾ?

ಸಿನಿಮಾ ರಂಗದಲ್ಲಿ ಹೆಚ್ಚು ಸಿನಿಮಾಗಳು ಹೆಸರು ಮಾಡಿದೆ ಅದರಲ್ಲಿ ಟೆನ್ ಕಮಾಂಡ್ ಮೆಂಟ್ಸ್ ಈ ಸಿನೆಮಾವು ಕೂಡ ಲೋಕದಲ್ಲೇ ಹೆಸರೂ ವಾಸಿಯಾಗಿದೆ ಇದಕ್ಕೆ ನಿರ್ದೇಶನ ನೀಡಿದವರು ಡೆಮಿಲ್ಲೆ ಇವರು ನೋಡುವುದಕ್ಕೆ ತುಂಬಾ ಕೋಪಿಷ್ಟ ಮತ್ತೆ ಡೆಮಿಲ್ಲೆ ವಿರುದ್ಧವಾಗಿ ಯಾರೂ ಮಾತನಾಡುತ್ತಿರಲಿಲ್ಲ.

 ಡೆಮಿಲ್ಲೆ ಏನು ಹೇಳುತ್ತಾರೋ ಅದನ್ನು ಪಾಲಿಸುತ್ತಿದ್ದರು ಅಷ್ಟೆ ಆದರೆ ಇವರ ವೃತ್ತಿ ಒಂದು ಚಿಕ್ಕ ಚಿಕ್ಕ ಅಂಶಗಳನ್ನು ಸಹ ಸೂಕ್ಷ್ಮವಾಗಿ ಗಮನಿಸುತ್ತಿದ್ದರು ಟೆನ್ ಕಮಾಂಡ್ ಮೆಂಟ್ಸ್ ನಲ್ಲಿ ಒಂದು (ಸೀನ್) ದೃಶ್ಯ ಇದೆ ಸಹಸ್ರಾರು ಜನರು ಸಮುದ್ರ ತೀರಕ್ಕೆ ಹೋಗಿರುತ್ತಾರೆ.

 ಆಗ ಸಮುದ್ರ 2 ಭಾಗವಾಗುತ್ತದೆ ಎಲ್ಲರೂ ಈ ಕಡೆಯಿಂದ ಆ ಕಡೆಗೆ ನಡೆದುಕೊಂಡು ಹೋಗುತ್ತಾರೆ ಈ ಒಂದು ಸೀನು ತುಂಬ ರೋಮಾಂಚನಕಾರಿಯಾಗಿದೆ ಇದು ರಿಲೇ ಹೇಗೆ ಬರುತ್ತದೆ ಎಂದು ಕುಳಿತುಕೊಂಡು ವೀಕ್ಷಿಸುತ್ತಿದ್ದರು ಅದರಲ್ಲಿ ಇದ್ದಕ್ಕಿದ್ದ ಹಾಗೆ ಲೈಟ್ ಹಿಡಿವ ಒಬ್ಬ ಹುಡುಗ ತಪ್ಪು ಇದೆ ಎಂದು ಜೋರಾಗಿ ಕೂಗಿದನು.

 ಏನು ತಪ್ಪು ಎಂದು ಯಾರಿಗೂ ತಿಳಿಯಲಿಲ್ಲ ಶೀಘ್ರ ಕೋಪಿ ನಿರ್ದೇಶಕನಿಗೆ ಭಯಂಕರವಾಗಿ ಸಿಟ್ಟು ಬಂತು ಯಾರು ಹೇಳಿದ್ದು ಎಂದು ಜೋರಾಗಿ ಕೇಳಿದರು ಹುಡುಗ ಇದ್ದವನು ನಾನೇ ಎಂದು ಎದೆ ಉಬ್ಬಿಸಿಕೊಂಡು ಹೇಳಿದ ಇತರರು ಎಲ್ಲರೂ ಗಡಗಡ ನಡುಗಿದರು ಏಕೆಂದರೆ ಡೆಮಿಲ್ಲೆ ಎದುರು ಮಾತನಾಡುವವರೇ ಇಲ್ಲ ಅಂತಹದರಲ್ಲಿ ಈ ಹುಡುಗ ಈ ರೀತಿ ಹೇಳಿದ್ದಾನೆ.

 ಹುಡುಗ ಸರ್ ದಯಮಾಡಿ ಹಿಂದಿನ ಒಂದು ಸನ್ನಿವೇಶವನ್ನು ನೋಡಿ ಅಲ್ಲಿ ಒಂದು ಚಿಕ್ಕ ತಪ್ಪು ಇದೆ ಎಂದು ಹೇಳಿದನು ಡೆಮಿಲ್ಲೆ ತಪ್ಪು ಎಲ್ಲಿದೆ ಎಂದು ಜೋರಾಗಿ ಕೇಳಿದರು ಆಗ ಹುಡುಗನು ದಯವಿಟ್ಟು ಸಹನೆಯಿಂದ ನೋಡಿ ಒಬ್ಬ ವ್ಯಕ್ತಿಯ ತೋಳಿನ ಮೇಲೆ ಸ್ಪಷ್ಟವಾಗಿ ಚುಚ್ಚುಮದ್ದಿನ ಗುರುತು ಕಾಣಿಸುತ್ತಿದೆ.

 ನಮ್ಮ ಸಿನಿಮಾದ ಕಥೆಯು ಬಹಳಷ್ಟು ವರ್ಷ ಹಿಂದೆ ನಡೆದಿರುವಂತದ್ದು ಚುಚ್ಚುಮದ್ದು ಈಗ ಶುರುವಾಗಿದೆ ಎಂದು ಹೇಳಿದನು ಇದನ್ನು ಕೇಳಿದ ಮೇಲೆ ಡೆಮಿಲ್ಲೆ ಅವರಿಗೆ ಅಪಾರ ಸಂತೋಷವಾಯಿತು ನನಗಿಂತ ಸೂಕ್ಷ್ಮವಾಗಿಗಮನಿಸಿದ್ದೀಯಾ?ಎಂದು ತುಂಬಾ ಮೆಚ್ಚಿಕೊಂಡರು.

 ನಂತರ ಇವನನ್ನೇ ಸಹಾಯಕ ನಿರ್ದೇಶಕನಾಗಿ ನೇಮಕ ಮಾಡಿಕೊಂಡರು ನಾವು ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಸೂಕ್ಷ್ಮವಾಗಿ ಗಮನಿಸಬೇಕು ಆಗ ಮಾತ್ರ ಅದರಲ್ಲಿರುವ ಒಳ್ಳೆಯದು ಕೆಟ್ಟದ್ದು ಎರಡೂ ತಿಳಿಯುತ್ತದೆ ನಂತರ ಸರಿ ಮಾಡಲು ಸಾಧ್ಯವಿಲ್ಲ ಕೆಲಸವಾದ ನಂತರ ಸೂಕ್ಷ್ಮವಾಗಿ ಒಂದು ಸಾರಿ ಗಮನಿಸುವ ಅಭ್ಯಾಸ ಮಾಡಿಕೊಳ್ಳೋಣ. ನಾನು ಸೂಕ್ಷ್ಮವಾಗಿ ಗಮನಿಸಿ ಹಿರಿಯರಿಂದ ಶಬ್ಬಾಶ್ ಎಂದು ಹೊಗಳಿಸಿಕೊಂಡಿದ್ದೇನೆಯೇ?

ತೊಂದರೆ ಕೊಡಲು ಬರುತ್ತಾರೆ

ಒಂದು ಸಾರಿ ದಾರಿಯಲ್ಲಿ ಸಹನಶೀಲ  ಸಾಧುರವರು ಹೋಗುತ್ತಿದ್ದರು ಆಗ ಒಬ್ಬ ದೈತ್ಯಾಕಾರದ ವ್ಯಕ್ತಿ ಬಂದು ಇವರನ್ನು ನೋಡಿ ತಕ್ಷಣ ಒಂದು ಏಟನ್ನು ಕೆನ್ನೆಗೆ ಬಾರಿಸಿಬಿಟ್ಟ ಸಾಧು ಅವರು ಏನೂ ಗೊತ್ತಿಲ್ಲದ ತಪ್ಪು ಮಾಡಿದ್ದಾನೆಂದು ಎರಡನೇ ಕೆನ್ನೆಯನ್ನು ತೋರಿಸಿದರು.

ಎರಡನೆಯ ಕೆನ್ನೆಗೂ ಅವನು ಹೊಡೆದು ಬಿಟ್ಟ ನಂತರ ಎರಡೂ ಕೆನ್ನೆಯನ್ನು ಒರೆಸಿಕೊಂಡು ಸಾಧುರವರು ಬಲ ಬಿಟ್ಟು ಒಂದೇ ಏಟು ದೈತ್ಯಾಕಾರದ ವ್ಯಕ್ತಿಯ ಕೆನ್ನೆಗೆ ಹೊಡೆದರು ಆಗ ಆ ದೈತ್ಯಾಕಾರದ ವ್ಯಕ್ತಿ ಹೊಡೆದ ರಭಸಕ್ಕೆ ಕೆಳಗೆ ಬಿದ್ದನು ನಂತರ ಕೇಳಿದ ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸಬೇಕು ಎಂದು ಹೇಳಿದ್ದಾರೆ ಅದನ್ನು ನಾನು ಪರೀಕ್ಷಿಸಿದೆ ಎಂದನು.

 ಸಾಧು ರವರೇ ನೀವು ಏಕೆ ಈ ರೀತಿ ಮಾಡಲಿಲ್ಲ ಎಂದು ಸಾಧುವಿಗೆ ಕೇಳಿದನು ಸಾಧು ಅವರು ವಿನಯದಿಂದ ಹೇಳಿದರು ನನಗೆ ಮೂರನೇ ಕೆನ್ನೆ ಇಲ್ಲ ಮೂರನೇ ಕೆನ್ನೆ ಇರುವುದೇ ನಿಮಗೆ ಆದುದರಿಂದ ತಕ್ಷಣ ನನಗೆ ಏನು ತೋಚಲಿಲ್ಲ ಇದಕ್ಕೆ ರೀತಿ ಮಾಡಿದ್ದೇನೆ ಎಂದು ಹೇಳುತ್ತಾರೆ.

 ನಾನು ನನ್ನ ನಿಯಮವನ್ನು ಪಾಲಿಸಿದ್ದೇನೆ ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆಗೆ ತೋರಿಸಬೇಕು ಎಂದು ಅದೇ ರೀತಿ ಮಾಡಿದ್ದೇನೆ ಎಂದರು ಕೆಲವರು ನಾವು ಒಳ್ಳೆಯವರು ಎಂದರೆ ವಿನಾಕಾರಣ  ತೊಂದರೆ ಕೊಡಲು ಬರುತ್ತಾರೆ ಅವರಿಗೆ ಸರಿಯಾಗಿ ಒಂದು ಸರಿ ಪಾಠ ಕಲಿಸಿದರೆ ಮಾತ್ರ ನಮ್ಮ ತಂಟೆಗೆ ಬರುವುದಿಲ್ಲ

]]>
https://babakategalu.com/%e0%b2%a8%e0%b2%be%e0%b2%b3%e0%b3%86-%e0%b2%a8%e0%b2%be%e0%b2%a8%e0%b3%81-%e0%b2%8f%e0%b2%a8%e0%b3%87%e0%b2%a8%e0%b3%81-%e0%b2%ae%e0%b2%be%e0%b2%a1%e0%b2%ac%e0%b3%87%e0%b2%95%e0%b3%81/feed/ 0
ಹಡಗಿಗೆ ತೂತು ಮಾಡಿದನು https://babakategalu.com/%e0%b2%b9%e0%b2%a1%e0%b2%97%e0%b2%bf%e0%b2%97%e0%b3%86-%e0%b2%a4%e0%b3%82%e0%b2%a4%e0%b3%81-%e0%b2%ae%e0%b2%be%e0%b2%a1%e0%b2%bf%e0%b2%a6%e0%b2%a8%e0%b3%81/ https://babakategalu.com/%e0%b2%b9%e0%b2%a1%e0%b2%97%e0%b2%bf%e0%b2%97%e0%b3%86-%e0%b2%a4%e0%b3%82%e0%b2%a4%e0%b3%81-%e0%b2%ae%e0%b2%be%e0%b2%a1%e0%b2%bf%e0%b2%a6%e0%b2%a8%e0%b3%81/#respond Mon, 03 Mar 2025 04:40:00 +0000 https://babakategalu.com/?p=189 Read more]]> ಬಹಳಷ್ಟು ವರ್ಷಗಳ ಹಿಂದೆ ಈ ದೇಶದಿಂದ ವಿದೇಶಕ್ಕೆ ಹೋಗಬೇಕಾದರೆ ಹಡಗಿನಲ್ಲಿ ಮಾತ್ರ ಪ್ರಯಾಣಿಸಬೇಕಾಗಿತ್ತು  ಒಂದು ಸಾರಿ ಎಲ್ಲಾ ಪ್ರಯಾಣಿಕರು ಹಡಗಿನ ಒಳಗೆ ಬಂದರು ಪ್ರತಿಯೊಂದು ಧರ್ಮದವರು ಒಂದೊಂದು  ಕೊಠಡಿಯಲ್ಲಿ ಇರಲು ಆರಂಭಿಸಿದರು ಮುಸಲ್ಮಾನರು ಒಂದು ಕೊಠಡಿಯಲ್ಲಿ ಉಳಿದರು.

ಮತ್ತೊಂದು ಕೊಠಡಿಯಲ್ಲಿ ಹಿಂದುಗಳು ಉಳಿದರು ಇನ್ನೊಂದು ಕೊಠಡಿಯಲ್ಲಿ ಕ್ರೈಸ್ತರು,  ಬೌದ್ಧರು, ಸಿಕ್ಕರು ,ಜೈನರು. ಹೀಗೆ ಒಂದೊಂದು ಧರ್ಮದವರು ಒಂದೊಂದು ಕೊಠಡಿಯಲ್ಲಿ ಉಳಿದರು ಪ್ರತಿಧರ್ಮದವರು ಅವರದೇ ಆದ ಆಚರಣೆಗಳನ್ನು ಆಚರಿಸುತ್ತಿದ್ದರು.

 ಹಿಂದುಗಳು ಬ್ರಹ್ಮ ಮುಹೂರ್ತದಲ್ಲಿ ಎದ್ದು ಜಪ ಮಾಡುವುದು ಪ್ರಾರ್ಥನೆ ಭಜನೆ ಮಾಡುವುದು ಸೂರ್ಯ ಉದಯಿಸುತ್ತಿದ್ದಂತೆ ಸೂರ್ಯ ನಮಸ್ಕಾರ ಮಾಡುವುದು  ಮುಸಲ್ಮಾನರು ಸಮಯಕ್ಕೆ ಸರಿಯಾಗಿ ನಮಾಜ್ ಮಾಡುವುದು ಉಪವಾಸ ಆಚರಿಸುವುದು  ಕ್ರೈಸ್ತರು  ಪ್ರಾರ್ಥನೆ ಮಾಡುವುದು ಹೀಗೆ ಪ್ರತಿಯೊಂದು ಧರ್ಮದವರು ಅವರದೇ ಆದ ರೀತಿಯಲ್ಲಿ  ದೇವರನ್ನು ಧ್ಯಾನಿಸುತ್ತಿದ್ದರು ಪೂಜಿಸುತ್ತಿದ್ದರು.

  ಹಡಗಿನಲ್ಲಿ ಒಬ್ಬ ಕಿಡಿಗೇಡಿ ಇದ್ದನು ಇವನು ಒಂದು ಕಡೆಯಿಂದ ಯಾವ ಯಾವ ಧರ್ಮವಾದವರು ಯಾವ ರೀತಿ ಆಚರಣೆ ಮಾಡುತ್ತಿದ್ದಾರೆ ಎಂದು ಗಮನಿಸಿದನು ಪ್ರತಿಯೊಬ್ಬರು ಅವರದೇ ಆದ ರೀತಿಯಲ್ಲಿ ಆಚರಿಸುತ್ತಿದ್ದಾರೆ ಒಂದು ಧರ್ಮದವರಿಗೆ ಹೇಳಿದ ನೀವು ಮಾಡುತ್ತಿರುವುದು ತಪ್ಪು. ನಾವು ಮಾಡುತ್ತಿರುವುದೇ ಸರಿ ಎಂದು ವಾದ ಮಾಡಿದನು.

 ಬೇರೆ ದರ್ಮದವರು ಇಲ್ಲ ನಾವು ಬಹಳಷ್ಟು ವರ್ಷಗಳ ಕಾಲದಿಂದ ಪಾಲನೆ ಮಾಡುತ್ತಾ ಬಂದಿದ್ದೇವೆ ಇದರಲ್ಲೇ ನಾವು ಸದ್ಗತಿಯನ್ನು ಹೊಂದುತ್ತೇವೆ ಎಂದು ವಿನಯವಾಗಿ ಹೇಳಿದರು ಕಿಡಿಗೇಡಿ ಕೇಳಲಿಲ್ಲ ನಾನು ಮಾಡುವುದೇ ಸರಿ ನನ್ನಂತೆ ನೀವು ಮಾಡಬೇಕು ಎಂದು ವಾದಿಸಿದನು.

 ಬೇರೆ  ಧರ್ಮದವರು ನೀನು ನಿನ್ನ ರೀತಿಯಲ್ಲಿ ಬದುಕು ನಾವು ನಮ್ಮ ರೀತಿಯಲ್ಲಿ ಬದುಕುತ್ತೇವೆ ಎಂದು ಹೇಳಿದರು ಕಿಡಿಗೇಡಿ ಇದ್ದವನು ಯೋಚನೆ ಮಾಡಿದ ಈ ಒಂದು ಧರ್ಮದವರು ನನಗೆ ಇಷ್ಟವಿಲ್ಲ ನಮ್ಮ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಆದ್ದರಿಂದ ಇವರನ್ನು ಏನಾದರೂ ಮಾಡಿ ಗತಿ ಕಾಣಿಸಬೇಕು ಎಂದು ಒಂದು ದುಷ್ಟ ಚಿಂತನೆ ಮಾಡಿದನು.

ಸೂರ್ಯ ಮುಳುಗುವಾಗ ಕೆಂಪು ಸೂರ್ಯನಾಗಿ ಕಾಣುತ್ತಾನೆ ನೋಡಲು ರೋಮಾಂಚನವಾಗುತ್ತದೆ ಹಾಗಾಗಿ ಎಲ್ಲರೂ ಕೋಣೆಯಿಂದ ಹೊರಬಂದು ವೀಕ್ಷಿಸುತ್ತಿರುತ್ತಾರೆ ಆಗ ನಾನು ಆ ಧರ್ಮದವರ ಕೊಠಡಿಗೆ ಒಂದು ತೂತು ಮಾಡಿಬಿಟ್ಟರೆ ಅವರು ಸಾಯುತ್ತಾರೆ ಎಂದು ಯೋಚನೆ ಮಾಡಿ ಎಲ್ಲರೂ ಕೊಠಡಿಯಿಂದ ಹೊರಗೆ ಹೋದಾಗ ಕೊಠಡಿಗೆ ಚಿಕ್ಕದಾದ ತೂತು ಮಾಡುತ್ತಾನೆ.

ಕಿಡಿಗೇಡಿ ಆಲೋಚನೆ ಕೊಠಡಿಗೆ ನಾನು ತೂತನ್ನು ಮಾಡಿದರೆ ಅವರು ಮಾತ್ರ ಸಾಯುತ್ತಾರೆ ಎಂದು ನಂಬಿರುತ್ತಾನೆ ಹಡಗಿನಲ್ಲಿ ನೀರು ಬರಲು ಆರಂಭವಾದರೆ ಇಡೀ ಹಡಗು  ಮುಳುಗುತ್ತದೆ ಎಂಬ ಆಲೋಚನೆ ಅವನಿಗಿಲ್ಲ ಹಡಗು ಎನ್ನುವುದು ಒಂದು ಪ್ರಪಂಚ ವಿದ್ದಂತೆ ದೇಶವಿದ್ದಂತೆ ರಾಜ್ಯವಿದ್ದಂತೆ ಜಿಲ್ಲೆ ಇದ್ದಂತೆ  ಇನ್ನೊಬ್ಬರಿಗೆ ನಾನು ಕೇಡನ್ನು ಮಾಡುತ್ತೇನೆ ಎಂದಾಗ ಆ ಕೇಡು ನನಗೂ ಸಂಭವಿಸುತ್ತದೆ. ನಾನು ಎಲ್ಲರನ್ನೂ ಸಮನಾಗಿ ನೋಡುತ್ತೇನೆಯೇ?

 ವಸ್ತುಗಳನ್ನು ನೋಡಿ ಹೀಯಾಳಿಸಿದನು

ಒಂದು ಹಳ್ಳಿಯಲ್ಲಿ ಒಬ್ಬ ಶ್ರೀಮಂತ ಹಾಗೂ ಇನ್ನೊಬ್ಬ ಬಡವ ಇದ್ದನು ಒಂದು ಸಾರಿ ಸಂತೆಗೆ ಹೋಗಿದ್ದಾಗ ಇಬ್ಬರು ವಸ್ತುಗಳನ್ನು ತರಲಿಕ್ಕೆ ಹೋಗಿದ್ದರು ಶ್ರೀಮಂತನ ಬಹಳಷ್ಟು ದುಬಾರಿಯಾದ ವಸ್ತುಗಳನ್ನು ಖರೀದಿ ಮಾಡಿದನು ಬಡವನು ಸಾಮಾನ್ಯ ವಸ್ತುಗಳನ್ನು ಖರೀದಿ ಮಾಡಿದನು.

ಶ್ರೀಮಂತನು ಬಡವನಿಗೆ ವಸ್ತುಗಳನ್ನು ನೋಡಿ ಹೀಯಾಳಿಸಿದನು ನೋಡು ನಾನು ಬೆಲೆಬಾಳುವ ಸಾಮಾನುಗಳನ್ನು ಖರೀದಿ ಮಾಡಿದ್ದೇನೆ ನೀನು ಸಾಮಾನ್ಯ ವಸ್ತುಗಳನ್ನು ಖರೀದಿ ಮಾಡಿದ್ದೀಯಾ ಎಂದು ಜಂಬ ಕೊಚ್ಚಿಕೊಂಡನು ಬಡವನು ಏನು ಮಾತನಾಡಲಿಲ್ಲ ಮುಖ ಸಪ್ಪಗೆ ಮಾಡಿಕೊಂಡು ನಂತರ ಇಬ್ಬರೂ ಊರಿಗೆ ಬರಬೇಕು ಜೊತೆಯಲ್ಲಿಯೇ ಮಾತನಾಡಿಕೊಂಡು ಬರುತ್ತಿದ್ದರು.

 ದಾರಿಯ ಮಧ್ಯದಲ್ಲಿ ಸಂಚಾರ ಕಡಿಮೆ ಇತ್ತು ಆಗ ಇದ್ದಕ್ಕಿದ್ದ ಹಾಗೆ ದರೋಡೆಕೋರರು ಬಂದರು ಚಾಕು ತೋರಿಸಿ ಇರುವುದೆಲ್ಲವೂ ಕೊಡಬೇಕು ಇಲ್ಲದಿದ್ದರೆ ನಿಮಗೆ ಗ್ರಹಚಾರ ಬಿಡಿಸುತ್ತೇವೆ  ಹೊಡೆಯುತ್ತೇವೆ ಬಡೆಯುತ್ತೇವೆ ಕೊಡಲ್ಲ ಎಂದರೆ ಚೂಪಾದ ಚಾಕುವಿನಿಂದ ಚುಚ್ಚುತ್ತೇವೆ ಎಂದು ಹೆದರಿಸಿದರು.  ಬಡವನು ತನ್ನಲ್ಲಿರುವ ವಸ್ತುಗಳನ್ನು ತೋರಿಸಿದನು ಬಡವನ ವಸ್ತುಗಳು ನೋಡಿ ಈ ವಸ್ತುಗಳಿಂದ ನಮಗೆ ಏನು ಪ್ರಯೋಜನವಿಲ್ಲ ಎಂದು ವಸ್ತುಗಳನ್ನು ಮುಟ್ಟಲಿಲ್ಲ.

ಶ್ರೀಮಂತನ ಚೀಲದಲ್ಲಿ ನೋಡಿದರೂ ಬೆಲೆಬಾಳುವ ವಿಧವಿಧವಾದ ವಸ್ತುಗಳು ಇದ್ದವು ಅದನ್ನೆಲ್ಲವನ್ನು ತೆಗೆದುಕೊಂಡು ಪರಾರಿಯಾದರೂ ಆಗ ಶ್ರೀಮಂತನು ನನ್ನಲ್ಲಿ ಇದ್ದ ಎಲ್ಲಾ ಬೆಲೆಬಾಳುವ ವಸ್ತುಗಳು ದೂಚಿಕೊಂಡು ಹೋದರು ಎಂದು ನಿರಾಶನಾದನು ನಂತರ ಶ್ರೀಮಂತ ಅರ್ಥಮಾಡಿಕೊಂಡನು. ನನ್ನನ್ನು ಯಾರಾದರೂ ಹೀಯಾಳಿಸಿದ್ದಾರೆಯೇ?

 ಏನೇನು ಅಡೆತಡೆಗಳು ಬರಬಹುದು

ಮೌಂಟ್ ಎವರೆಸ್ಟ್ ಅನ್ನು ತೇನ್ ಸಿಂಗ್ ಮತ್ತು ಹಿಲರಿ ಹತ್ತಿದರು ಇದು ಎಲ್ಲರಿಗೂ ತಿಳಿದಿರುವ ವಿಚಾರವೇ ಸುಮಾರು ನಲವತ್ತು ವರ್ಷ ವಯಸ್ಸು ಆಗಿತ್ತು ಆಗ ಸ್ವಾಗತ ಕೋರಲು ಅಭಿನಂದನೆಗಾಗಿ ಬಂದರು. ಅದರಲ್ಲಿ ಒಬ್ಬ ಪತ್ರಕಾರನು ತೇನ್ ಸಿಂಗ್ ರವರನ್ನು ಪ್ರಶ್ನೆ ಕೇಳಿದ ನೀವು ನಲವತ್ತರ ವಯಸ್ಸಿನಲ್ಲಿ ಮಹತ್ಸಾಧನೆ ಮಾಡಿದ್ದೀರಾ ನಿಮ್ಮ ಮನದಾಳದ ಮಾತು ಹೇಳಿ ಮತ್ತು ಮೌಂಟ್ ಎವರೆಸ್ಟ್ ಹತ್ತಬೇಕು ಎಂದು ನಿಮಗೆ ಪ್ರೇರಣೆ ಹೇಗೆ ಬಂತು ಆಗ ತೇನ್ ಸಿಂಗ್ ಅವರು ಮುಗುಳ್ನಗುತ್ತಾ ಹೇಳುತ್ತಾರೆ.

ನನಗೆ 10 ವರ್ಷ ವಯಸ್ಸಾಗಿತ್ತು ಆಗಲೇ ನಾನು ಮೌಂಟ್ ಎವರೆಸ್ಟ್ ಮಾನಸಿಕವಾಗಿ ಹತ್ತಿದ್ದೇನೆ ಆದರೆ ಇಂದು ದೈಹಿಕವಾಗಿ ಹತ್ತಿದ್ದೇನೆ ಎಂದು ಹೇಳಿದರು. ಮುಂದುವರಿಯುತ್ತಾ ನಾವು ಬಡ ಕುಟುಂಬದಲ್ಲಿ ಬೆಳೆದವರು ನಮ್ಮ ಕೆಲಸ ಏನೆಂದರೆ ಮೇಕೆಗಳು ಕುರಿಗಳನ್ನು ಮೇಯಿಸಿಕೊಂಡು ಇರುವುದು ನಮ್ಮ ತಾಯಿ ನನಗೆ ಬೆಟ್ಟದ ಕೆಳಗೆ ತಂದು ಬಿಡುತ್ತಿದ್ದರು ಮತ್ತೆ ಮಧ್ಯಾಹ್ನಕ್ಕೆ ಸ್ವಲ್ಪ ನೀರು ಊಟ ಕೊಡುತ್ತಿದ್ದರು.

 ಇರುವ ಮೇಕೆ ಕುರಿಗಳನ್ನು ಸರಿಯಾಗಿ ಸಾಕಬೇಕಾಗಿತ್ತು ಸಂಜೆಯವರೆಗೆ ನೋಡಿಕೊಳ್ಳಬೇಕಾಗಿತ್ತು ನಂತರ ಹೋಗಬೇಕಾದರೆ ನಮ್ಮ ತಾಯಿಯವರು ಶಿಖರವನ್ನು ತೋರಿಸಿ ಹೇಳುತ್ತಿದ್ದರು.

 ಈ ಶಿಖರ ಯಾರು ಹತ್ತಿಲ್ಲವಂತೆ ಎಂದು ಕೈ ತೋರಿಸಿ ಹೇಳುತ್ತಿದ್ದರು ನಾನು ಆವಾಗ ಚಿಕ್ಕ ಹುಡುಗನಾಗಿದ್ದೆ ಇಡೀ ದಿನ ಹಗಲು ರಾತ್ರಿ ಕುಳಿತುಕೊಂಡು ಏನೇನು ಅಡೆತಡೆಗಳು ಬರಬಹುದು ಯೋಚಿಸುತ್ತಿದ್ದೆ ನಾನು ಹೇಗೆ ಹತ್ತಬೇಕು ಎಂದು ಚಿಂತಿಸುತ್ತಿದ್ದೆ ಕನಸು ಕಾಣುತ್ತಿದ್ದೆ ಅಷ್ಟೇ ಎಂದು ಹೇಳಿದರು.

ತಾಯಿ ಧೈರ್ಯವನ್ನು ತುಂಬಿದರು ಮತ್ತೆ ಇವರು ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು ಇವರು ಬಹಳಷ್ಟು ಸಾರಿ ಸೋತು ನಂತರ ಹತ್ತಿದ್ದಾರೆ.

ಯಾವುದೇ ಹೊಸ ಕೆಲಸ ಮಾಡಲು ಮಾಡಲು ತಂದೆತಾಯಿಗಳು ಸಾಧ್ಯವಾದಷ್ಟು ಮಕ್ಕಳಿಗೆ ಮಹತ್ತರವಾದ ಸಾಧನೆ ಮಾಡಲು ಪ್ರೇರಣೆ ನೀಡಬೇಕು ಅಥವಾ ಪ್ರೋತ್ಸಾಹ ನೀಡಿದರೆ ಖಂಡಿತ ಒಂದಲ್ಲ ಒಂದು ದಿನ ಅವರ ಕನಸು ನನಸು ಮಾಡಿಕೊಳ್ಳುತ್ತಾರೆ. ನನ್ನ ಅಭಿವೃದ್ಧಿಗಾಗಿ ಯಾರು ಉತ್ಸಾಹ ತುಂಬಿದ್ದಾರೆ?

  ಕೆಲಸದಿಂದ ತೆಗೆಯಬೇಡಿ

ಒಂದು ಕಂಪನಿಯಲ್ಲಿ ಹಲವಾರು ಕಾರ್ಮಿಕರು ಕೆಲಸ ಮಾಡಿಕೊಂಡಿರುತ್ತಾರೆ  ಅದರಲ್ಲಿ ಒಂದು ದಿನ ಒಬ್ಬ ಕಾರ್ಮಿಕ ಕುಡಿದು ಬಂದಿರುತ್ತಾನೆ. ಆಗ ಎಲ್ಲಾ ಕಾರ್ಮಿಕರು ಇವನನ್ನು ಬೈದು ಒಂದು ಕಡೆ ನಿಲ್ಲಿಸಿರುತ್ತಾರೆ ತಕ್ಷಣಕ್ಕೆ ಹೊಸದಾಗಿ ನೇಮಕಗೊಂಡಿರುವ ಮ್ಯಾನೇಜರ್ ಅವರು ಬರುತ್ತಾರೆ.

ಕುಡಿದಿರುವ ಕಾರ್ಮಿಕನನ್ನು ನೋಡಿ ನಂತರ ಕುಡುಕ ಕಾರ್ಮಿಕನನ್ನು ತನ್ನ ಕಾರಿನಲ್ಲಿ ಕೂರಿಸಿಕೊಂಡು ನೇರವಾಗಿ ಮನೆಗೆ ಹೋಗಿ ಬಿಡುತ್ತಾರೆ ಮತ್ತೆ ಅವರ ಮನೆಯವರಿಗೆ ಹೇಳುತ್ತಾರೆ ಇವರನ್ನು ಚೆನ್ನಾಗಿ ನೋಡಿಕೊಳ್ಳಿ ಎಂದಾಗ ಮನೆಯಲ್ಲಿ ಹೆಂಡತಿ ಅಳುತ್ತಾರೆ ಮತ್ತು ಹೇಳುತ್ತಾರೆ.

 ದಯವಿಟ್ಟು ಕೆಲಸದಿಂದ ತೆಗೆಯಬೇಡಿ ಆಗ ಮ್ಯಾನೇಜರ್ ಅವರು ಹೇಳುತ್ತಾರೆ ಇವನನ್ನು ಕೆಲಸದಿಂದ ತೆಗೆಯುವುದಿಲ್ಲ ನಾಳೆ ಇವನನ್ನು ಸಹಜವಾಗಿ ಕಳುಹಿಸಿ ಎಂದು ಹೇಳಿ ಪ್ರಶಂಸೆ ಮಾಡಿ ಕಳುಹಿಸುತ್ತಾರೆ ಮತ್ತೆ ಕಂಪನಿಗೆ ಬಂದು ಎಲ್ಲಾ ಕಾರ್ಮಿಕರನ್ನು ಸೇರಿಸಿ ಹೇಳುತ್ತಾರೆ.

 ಇವತ್ತು ಏನೋ ಒಂದು ಸಾರಿ ಗೊತ್ತಿಲ್ಲದೆ ತಪ್ಪು ಮಾಡಿರಬಹುದು ಆದ್ದರಿಂದ ಒಂದು ಸಾರಿ ಇವನನ್ನು ಕ್ಷಮಿಸಿ ನಂತರ ನಾವು ಎಲ್ಲರೂ ಸೇರಿ ಕೆಲಸ ಮಾಡೋಣ ಎಂದು ಹೇಳುತ್ತಾರೆ   ನಂತರ ಇದಕ್ಕೆ ಎಲ್ಲಾ ಕಾರ್ಮಿಕರು ಕುಡಿದ ಕಾರ್ಮಿಕನನ್ನು ಎಲ್ಲರೂ ಒಂದೇ ದೃಷ್ಟಿಯಿಂದ ನೋಡುತ್ತಾರೆ.

 ಕೆಲವು ವರ್ಷಗಳ ನಂತರ ಬೇರೆ ಪಕ್ಷದವರು ಬಂದು ಮ್ಯಾನೇಜರ್ ಅವರನ್ನು ಬದಲಾವಣೆ ಮಾಡಬೇಕೆಂದು ಹೇಳುತ್ತಾರೆ ಆಗ ಕುಡಿದಿದ್ದ ಕಾರ್ಮಿಕನು ನಾಯಕನಾಗಿ ಇರುತ್ತಾನೆ ಆಗ ಈ ನಾಯಕ ಎಲ್ಲರನ್ನು ಹೇಳುತ್ತಾನೆ ಇವರು ನಮಗೆ ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ ಇವರೇ ನಮ್ಮ ಮ್ಯಾನೇಜರ್ ಆಗಿರಲಿ ಎಂದು ಬಹಳಷ್ಟು ಶ್ರಮ ಪಡುತ್ತಾನೆ.

 ನಂತರ ಇದೇ ಮ್ಯಾನೇಜರ್ ಆಯ್ಕೆಯಾಗುತ್ತಾರೆ ಎಂದಿನಂತೆ ಮತ್ತೆ ಕಾರ್ಯ ಮುಂದುವರಿಸಿಕೊಂಡು ಹೋಗುತ್ತಾರೆ ನಮ್ಮ ಅಧೀನದಲ್ಲಿ ಇರುವವರಿಗೆ ನಾವು ಯಾವತ್ತೂ ಒಳ್ಳೆಯವರಾಗಿ ಯೋಚನೆ ಮಾಡಬೇಕು ಇದು ನಮ್ಮ ಬೆಳವಣಿಗೆಗೆ ಮುಖ್ಯ ಕಾರಣವಾಗುತ್ತದೆ ಏನೇ ಬದಲಾವಣೆ ಆಗಬೇಕಾದರೂ ಮೇಲಿಂದ ಕೆಳಗೆ ಬದಲಾವಣೆ ಆಗುತ್ತದೆ ಹೊರತು ಕೆಳಗಿನಂದ ಮೇಲೆ ಬದಲಾವಣೆ ಆಗುವುದಿಲ್ಲ ಉದಾಹರಣೆಗೆ ಒಂದು ಕಂಪನಿಯ ಮಾಲೀಕ ಅಥವಾ ಮ್ಯಾನೇಜರ್ ಚೆನ್ನಾಗಿ ಇದ್ದರೆ ಅವರ ಕೈ ಕೆಳಗೆ ಇರುವ ಎಲ್ಲರೂ ಕೂಡ ಹಾಗೆಯೆ ಚೆನ್ನಾಗಿ ವರ್ತಿಸುತ್ತಾರೆ.

 ಉದಾಹರಣೆಗೆ ಒಂದು ಶಾಲೆಯಲ್ಲಿ ಪ್ರಾಂಶುಪಾಲರು ಚೆನ್ನಾಗಿ ಅವರ ಕರ್ತವ್ಯ ನಿರ್ವಹಿಸುತ್ತಿದ್ದರೆ ಮಕ್ಕಳು ಕೂಡ ಅವರಂತೆಯೇ ಡೂಪ್ಲಿಕೇಟ್ ಆಗಿ ನಕಲುಗಳಾಗಿ ಪರಿವರ್ತನೆ ಆಗುತ್ತಾರೆ. ನಾನು ಸಮಾನತೆಯಿಂದ ವರ್ತಿಸುತ್ತಿದ್ದೇನೆಯೇ?

ಕೈ ಸನ್ನೆಯಿಂದ ಎಚ್ಚರಿಸುತ್ತಿದ್ದರು

ನಾವು ಶಾಲೆಯಲ್ಲಿ ಓದುತ್ತಿದ್ದಾಗ ಸ್ವಾತಂತ್ರ್ಯ ದಿನಾಚರಣೆ ದಿನ ಬಂದಾಗ ಹಲವಾರು ರೀತಿಯಲ್ಲಿ ವಿಭಿನ್ನವಾಗಿ ಆಚರಣೆ ಮಾಡುತ್ತಾರೆ ಹದಿನೈದು ದಿನದ ಮುಂಚಿತವಾಗಿ ಅಭ್ಯಾಸ  ಆರಂಭಿಸುತ್ತೇವೆ ಅದರಲ್ಲಿ ಹಲವಾರು ಕಾರ್ಯಕ್ರಮಗಳು ಹಮ್ಮಿಕೊಳ್ಳುತ್ತಾರೆ ಹಾಡು ಹೇಳುವುದು ನೃತ್ಯ ಸಂಗೀತ ಆಗಿರಬಹುದು ಯೋಗ ಮಾರ್ಚ್ ಫಾಸ್ಟ್ ಹೀಗೆ ಹಲವಾರು ಕಾರ್ಯಕ್ರಮಗಳು ಇದ್ದೇ ಇರುತ್ತವೆ.

ಕಾರ್ಯಕ್ರಮಗಳಲ್ಲಿ ಸಾರೇ ಜಹಾಂಸೆ ಅಚ್ಚಾ ಹಾಡು ಹಾಡಬೇಕಾದರೆ ಗುಂಪಾಗಿ ಎಲ್ಲಾ ವಿದ್ಯಾರ್ಥಿಗಳು ಸೇರಿ ಹಾಡುತ್ತಾರೆ ಇದನ್ನು ಹೇಳಿಕೊಟ್ಟ ಶಿಕ್ಷಕಿ ದೂರದಲ್ಲಿ ನಿಂತು ನಮ್ಮನ್ನು ಸರಿಯಾಗಿ ಬ್ಯಾಲೆನ್ಸ್ ಮಾಡಿ ಎಂದು ಕೈ ಸನ್ನೆಯಿಂದ ಹೇಳುತ್ತಿರುತ್ತಾರೆ.

ನಮ್ಮ ಪಾಡಿಗೆ ನಾವು ಹಾಡುತ್ತೀವಿ ಎಂದರೆ ಅವರು ಒಪ್ಪುವುದಿಲ್ಲ ಎಲ್ಲರ ಧ್ವನಿಯೂ ಸಮತೋಲನದಲ್ಲಿ ಇರಬೇಕು ಬ್ಯಾಲೆನ್ಸ್ ಆಗಿ ಇರಬೇಕು ಕೈ ಸನ್ನೆಯಿಂದ ಎಚ್ಚರಿಸುತ್ತಿದ್ದರು ಒಬ್ಬರು ಜಾಸ್ತಿ ಹೇಳಿದರೆ ಇನ್ನೊಬ್ಬರು ಧ್ವನಿ ಕಡಿಮೆಯಾಗಿಬಿಡುತ್ತದೆ ಗುಂಪಿನಲ್ಲಿದ್ದಾಗ ಎಲ್ಲರ ಧ್ವನಿಯೂ ಸಮವಾಗಿ ಇರಬೇಕು ಆಗಲೇ ಅದು ತುಂಬಾ ಚೆನ್ನಾಗಿ ಮೂಡಿ ಬರುತ್ತದೆ.

ಈ ರೀತಿ ಸಾಮಾನ್ಯವಾಗಿ ಎಲ್ಲರೂ ಅವರವರ ಜೀವನದಲ್ಲಿ ಅನುಭವಿಸುತ್ತಾರೆ ಅಥವಾ ನೋಡಿರುತ್ತಾರೆ ನಾವು ಮಾತನಾಡಬೇಕಾದರೆ ನಮ್ಮ ಮಾತನ್ನೇ ದೊಡ್ಡ ಧ್ವನಿಯಲ್ಲಿ ಮಾತನಾಡುತ್ತೇವೆ.

 ಅದು ಮನೆಯಾಗಿರಬಹುದು ಶಾಲೆ ಕಾಲೇಜು ಅಥವಾ ಕೆಲಸದಲ್ಲಿ ಆಗಿರಬಹುದು ನಮ್ಮದೇ ಜಾಸ್ತಿ ಇದ್ದಾಗ ಇತರರು ನಮ್ಮನ್ನು ದೂರಕ್ಕೆ ಇಡುತ್ತಾ ಬರುತ್ತಾರೆ ಆಗ ನಾವು ಒಂಟಿಯಾಗಿ ಕೊರಗಬೇಕಾಗುತ್ತದೆ ಆದುದರಿಂದ ಎಲ್ಲಾ ಕಡೆಗಳಲ್ಲಿಯೂ ಬ್ಯಾಲೆನ್ಸ್ ಮಾಡಿಕೊಂಡು ಹೋಗೋಣ . ಸಮತೋಲನವೇ  ಬದುಕಿನ ರಹಸ್ಯ. ನಾನು ಎಲ್ಲರೊಂದಿಗೆ ಹೊಂದಿಕೊಳ್ಳುತ್ತೇನೆಯೇ?

]]>
https://babakategalu.com/%e0%b2%b9%e0%b2%a1%e0%b2%97%e0%b2%bf%e0%b2%97%e0%b3%86-%e0%b2%a4%e0%b3%82%e0%b2%a4%e0%b3%81-%e0%b2%ae%e0%b2%be%e0%b2%a1%e0%b2%bf%e0%b2%a6%e0%b2%a8%e0%b3%81/feed/ 0
ಮೂರ್ಖರನ್ನೇ ಹುಡುಕುತ್ತಾರೆ https://babakategalu.com/%e0%b2%ae%e0%b3%82%e0%b2%b0%e0%b3%8d%e0%b2%96%e0%b2%b0%e0%b2%a8%e0%b3%8d%e0%b2%a8%e0%b3%87-%e0%b2%b9%e0%b3%81%e0%b2%a1%e0%b3%81%e0%b2%95%e0%b3%81%e0%b2%a4%e0%b3%8d%e0%b2%a4%e0%b2%be%e0%b2%b0%e0%b3%86/ https://babakategalu.com/%e0%b2%ae%e0%b3%82%e0%b2%b0%e0%b3%8d%e0%b2%96%e0%b2%b0%e0%b2%a8%e0%b3%8d%e0%b2%a8%e0%b3%87-%e0%b2%b9%e0%b3%81%e0%b2%a1%e0%b3%81%e0%b2%95%e0%b3%81%e0%b2%a4%e0%b3%8d%e0%b2%a4%e0%b2%be%e0%b2%b0%e0%b3%86/#respond Sun, 02 Mar 2025 04:40:00 +0000 https://babakategalu.com/?p=187 Read more]]> ಒಬ್ಬ  ಮೂರ್ಖ ರಾಜನು ಮಂತ್ರಿಗೆ ಹೇಳುತ್ತಾನೆ ಒಂದು ತಿಂಗಳಲ್ಲಿ 4 ಮೂರ್ಖರನ್ನು ಕರೆದುಕೊಂಡು ಬರಬೇಕು ಎಂದು ಆಜ್ಞೆ ಮಾಡುತ್ತಾನೆ ಅದಕ್ಕೆ ಮಂತ್ರಿ ಒಪ್ಪಿಕೊಂಡು ಒಂದು ತಿಂಗಳು ಕಳೆಯುತ್ತಿದ್ದಂತೆಯೇ ಇಬ್ಬರೂ ಮೂರ್ಖರನ್ನು ದರ್ಬಾರಿಗೆ ಕರೆದುಕೊಂಡು ಬರುತ್ತಾನೆ.

  ರಾಜನು ಕೋಪದಿಂದ ಬರೀ ಎರಡು ಮೂರ್ಖರೇ ಇದ್ದಾರೆ ಎಂದು ಗದರಿಸುತ್ತಾನೆ ಆಗ ಮಂತ್ರಿ ನಾನು ವಿವರವಾಗಿ ಹೇಳುತ್ತೇನೆ ಒಬ್ಬ ಮನುಷ್ಯನನ್ನು ತೂರಿಸಿ ಇವನು ಮೊದಲನೆಯ ಮೂರ್ಖ ಏಕೆಂದರೆ ಕುದುರೆ ಗಾಡಿಯಲ್ಲಿ ಪ್ರಯಾಣ ಮಾಡುತ್ತಿರಬೇಕಾದರೆ ತನ್ನ ಲಗೇಜುಗಳನ್ನು ತಾನೇ ಹೊತ್ತುಕೊಂಡೂ ಇದ್ದನು.

 ಇವನ ಅನಿಸಿಕೆ ಏನೆಂದರೆ ನನ್ನ ಭಾರ ನಾನೇ ಹೊತ್ತುಕೊಂಡಿದ್ದೇನೆ ಕುದುರೆಗೆ ಭಾರ ಹಾಕುತ್ತಿಲ್ಲ ಎಂದು ಇವನು ತಿಳಿದಿದ್ದಾನೆ. (ಸಾಮಾನ್ಯವಾಗಿ ಆಗುವ ಕೆಲಸಗಳನ್ನು ನಾನು ಮಾಡುತ್ತೇನೆ ನಾನು ಮಾಡಿದ್ದೇ ಸರಿ ಹಾಗೂ ಅನಾವಶ್ಯಕವಾಗಿ ಇತರರ ಹೊರೆಗಳನ್ನು ತಾನೆ ಹೊರುವವನು) ಮತ್ತೊಂದು ವ್ಯಕ್ತಿಯನ್ನು ತೋರಿಸಿ ಇವನೇ ಎರಡನೇ ಮೂರ್ಖ.

ಇವನು ತನ್ನ ಮನೆಯ ಮೇಲೆ ಚೆನ್ನಾಗಿರುವ ಹುಲ್ಲು ಬೆಳೆದಿದೆ ಅದಕ್ಕೆ ತನ್ನ ಕುರಿಯನ್ನು ಏಣಿಯ ಮೇಲೆ ಹೋಗು ಒಳ್ಳೆಯ ಹುಲ್ಲು ತಿನ್ನು ಎಂದು ಬಲವಂತ ಮಾಡುತ್ತಿದ್ದಾನೆ (ಬೇರೆ ಯಾರೋ ಸಾಧನೆ ಮಾಡಿರುತ್ತಾರೆ ಅದಕ್ಕಾಗಿ ನೀವು ಅದೇ ರೀತಿ ಸಾಧನೆ ಮಾಡಬೇಕು ಎಂದು ಒತ್ತಾಯಿಸುವವರು)

ಮೂರನೇ ಮೂರ್ಖ ನಾನೇ ಏಕೆಂದರೆ ನನಗೆ ಹಲವಾರು ಕೆಲಸಗಳು ಇದ್ದವು ಅದು ಬಿಟ್ಟು ಒಂದು ತಿಂಗಳು ನಾನು ವ್ಯರ್ಥ ಮಾಡಿಕೊಂಡಿದ್ದೇನೆ (ಯಾರೋ ಹೇಳಿದರು ಅಥವಾ ಅವರ ಗೌರವಕ್ಕೆ ಮರುಳಾಗಿ ಸರಿ ತಪ್ಪು ಯೋಚಿಸದೆ ಸುಮ್ಮನೆ ಸಮಯ ವ್ಯರ್ಥ ಮಾಡಿಕೊಳ್ಳುವುದು)

ರಾಜನು ನಾಲ್ಕನೆಯ ಮೂರ್ಖ ಯಾರು ಎಂದು ಕೇಳುತ್ತಾನೆ ಆಗ ಮಂತ್ರಿಯು ಸ್ವಲ್ಪ ಸಮಯ ತಡೆದು ದಯವಿಟ್ಟು ನನ್ನನ್ನು ಕ್ಷಮಿಸಬೇಕು ನೀವೇ ಆ ನಾಲ್ಕನೆಯ ಮೂರ್ಖರು ಎನ್ನುತ್ತಾನೆ ಏಕೆಂದರೆ ನಮ್ಮ ರಾಜ್ಯದಲ್ಲಿ ಎಲ್ಲರ ಯೋಗಕ್ಷೇಮವನ್ನು ನೋಡಿ ಕೊಳ್ಳಬೇಕಾದವರು ನೀವೇ ನಿಮಗೆ ಬುದ್ಧಿವಂತರು ಬೇಕಾಗಿದ್ದಾರೆ ವಿನಃ ಮೂರ್ಖರು ಬೇಕಾಗಿಲ್ಲ.

 ನೀವು ಬುದ್ಧಿವಂತರನ್ನು ಹುಡುಕಿಸುವ ಬದಲು ಮೂರ್ಖರನ್ನು ಹುಡುಕು ಎಂದು ಎಂದು ಹೇಳಿದ್ದೀರಿ (ಮೂರ್ಖರು ಯಾವಾಗಲೂ ಮೂರ್ಖರನ್ನೇ ಹುಡುಕುತ್ತಾರೆ ನಾನು ಹೇಳಿದಂತೆ ನಡೆಯಬೇಕು ಏನೆ ಹೇಳಿದರು ಕೇಳಿಕೊಂಡು ಇರಬೇಕು ಎನ್ನುವ ಮಾಲೀಕರು ಅಥವಾ ನಾಯಕರು) ಇದನ್ನು ನಾವು ಅರ್ಥ ಮಾಡಿಕೊಂಡು ಯಾರ ಜೊತೆ ಹೇಗಿರಬೇಕು ಎಂದು ನಮ್ಮ ಅಮೂಲ್ಯ ಸಮಯವನ್ನು ಒಳ್ಳೆಯ ಸಾಧನೆಗಾಗಿ ಉಪಯೋಗಿಸೋಣ.

ನಮ್ಮ ಹುಡುಗ ಮೂರ್ಖ

ಒಬ್ಬ ತರಲೆ ಮಾಲಿಕನು ಚಿಲ್ಲರೆ ಅಂಗಡಿಯನ್ನು ಇಟ್ಟುಕೊಂಡು ಇರುತ್ತಾನೆ ತನ್ನ ಸಹಾಯಕ್ಕಾಗಿ ಒಂದು ಹುಡುಗನನ್ನು ನೇಮಿಸಿಕೊಂಡಿರುತ್ತಾನೆ ಯಾರೇ ಗ್ರಾಹಕರು ಬಂದರೂ ನಮ್ಮ ಹುಡುಗ ಮೂರ್ಖ ಎಂದು ಕಿವಿಯಲ್ಲಿ ಹೇಳುತ್ತಾನೆ.

 ಗ್ರಾಹಕರು ನೀವು ಹೇಗೆ ಮೂರ್ಖ ಎಂದು ಹೇಳುತ್ತೀರಿ ಎಂದು ಹೇಳಿದಾಗ ನೀವು ಒಂದು ಕೈಯಲ್ಲಿ 5 ರೂಪಾಯಿಯ ನೋಟು ಹಾಗೂ ಐವತ್ತು ರೂಪಾಯಿಯ ನೋಟನ್ನು ಇಟ್ಟಿದ್ದರೆ ಅವನು ಬರೀ 5ರೂಪಾಯಿಯನ್ನು ಮಾತ್ರ ತೆಗೆದುಕೊಳ್ಳುತ್ತಾನೆ ಎಂದು ಮಾಲೀಕ ಹಾಸ್ಯವಾಗಿ ಹೇಳುತ್ತಾನೆ.

 ಮಾಲೀಕನು ಹೇಳಿದಂತೆ ಗ್ರಾಹಕ ತನ್ನ ಕೈಯಲ್ಲಿ ಐವತ್ತು ಹಾಗೂ 5 ರೂಪಾಯಿಯ ನೋಟನ್ನು ಇಟ್ಟರೆ ಹುಡುಗ 5 ರೂಪಾಯಿಯ ನೋಟನ್ನು ತೆಗೆದುಕೊಳ್ಳುತ್ತಾನೆ ಹೀಗೆ ಎಲ್ಲರಿಗೂ ಮಾಲೀಕ ಹೇಳುತ್ತಿರುತ್ತಾನೆ.

 ಒಬ್ಬ ಸಾತ್ವಿಕ ಸ್ವಭಾವದ ಗ್ರಾಹಕನಿಗೆ ಸಂದೇಹ ಉಂಟಾಗುತ್ತದೆ ಆದರೂ ಅವನು ಹೇಳಿದಂತೆ ಕೈಯಲ್ಲಿ ಐವತ್ತು ರೂಪಾಯಿಯ ನೋಟು ಹಾಗೂ 5 ರೂಪಾಯಿಯ ನೋಟನ್ನು ಇಟ್ಟಾಗ ಹುಡುಗ 5 ರೂಪಾಯಿಯ ನೋಟನ್ನು ಮಾತ್ರ ತೆಗೆದುಕೊಳ್ಳುತ್ತಾನೆ ನಂತರ ಗ್ರಾಹಕನಿಗೆ ಸಂದೇಹ ಆದರೂ ಏನೇ ಆಗಲಿ ಕೆಲಸ ಮುಗಿದ ನಂತರ ಹುಡುಗನಿಗೆ ಮಾತನಾಡಿಸಲೇಬೇಕು ಎಂದು ಹುಡುಗನು ಕೆಲಸ ಮುಗಿಸಿ ಬಂದ ನಂತರ ಕೇಳುತ್ತಾರೆ.

 ನೀನು ನನ್ನ ಪ್ರಕಾರ ಬುದ್ದಿವಂತನೇ ನಿಮ್ಮ ಮಾಲೀಕರು ನಿನಗೆ ಮೂರ್ಖ ಎನ್ನುತ್ತಾರೆ ಇದರಿಂದ ನಿನಗೆ ಏನು ಪ್ರಯೋಜನ ಎಂದು ಕೇಳುತ್ತಾರೆ ಆಗ ಹುಡುಗ ವಿನಮ್ರವಾಗಿ ಹೇಳುತ್ತಾನೆ ಸ್ವಾಮಿ ನಾನು 5 ರೂಪಾಯಿ ತೆಗೆದುಕೊಂಡಾಗ ಅದು ನನಗೆ ಬಕ್ಷೀಷ್ ಆಗಿ ಸಿಗುತ್ತದೆ.

ನಾನು ಐವತ್ತು ರೂ ತೆಗೆದುಕೊಂಡರೆ ನೀವು ಕೂಡ ಆವತ್ತೇ ಬುದ್ಧಿವಂತ ಎಂದು ಮತ್ತೆ ಹಣವನ್ನು ಕೊಡುವುದಿಲ್ಲ ಅಲ್ಲವೇ ಎನ್ನುತ್ತಾನೆ ಮತ್ತೆ ನಾನು ಮೂರ್ಖನಾಗಿ ಇರುವುದರಿಂದ ನನಗೆ ಸರಿಯಾದ ಸಂಬಳವೂ ಬರುತ್ತಿದೆ ಇದರಿಂದ ನನ್ನ ಜೀವನ ಹೇಗೋ ನಡೆಯುತ್ತಿದೆ.

 ನಾನು ಬುದ್ಧಿವಂತ ಎಂದು ತೋರಿಸಿಕೊಂಡರೆ ಆವತ್ತೇ ನನ್ನನ್ನು ಕೆಲಸದಿಂದ ತೆಗೆಯಬಹುದು ಆದ್ದರಿಂದ ನಾನು ಹೀಗೇ ಇದ್ದರೆ ಒಳ್ಳೆಯದು ಎಂದು ಹೇಳಿ ಹೊರಟು ಹೋಗುತ್ತಾನೆ ನಾವು ಕೆಲಸ ಮಾಡುವ ಉದ್ಯೋಗಿಯಾಗಿದ್ದರೆ ಅಥವಾ ನಮ್ಮ ಕೆಲಸ ಆಗುವವರೆಗೂ ಹುಡುಗನಂತೆ ಇದ್ದರೆ ಒಳ್ಳೆಯದಲ್ಲವೇ ನನಗೆ ಎಲ್ಲಾ ತಿಳಿದು ಏನು ಗೊತ್ತಿಲ್ಲದಂತೆ ನಟಿಸಿದ್ದೇನೆಯೇ?

ಶಬ್ದ ಬರುತ್ತಿಲ್ಲ

 

ಒಬ್ಬ ಸಂಸ್ಕಾರವಂತ ರಾಜನಿರುತ್ತಾನೆ ಅವನು ತುಂಬಾ ಚೆನ್ನಾಗಿ ರಾಜ್ಯವನ್ನು ಆಳುತಿರುತ್ತಾನೆ ರಾಜನಿಗೆ ಐವತ್ತು ವರ್ಷದ ಸಮಯದಲ್ಲಿ ರಾಜನಿಗೆ ಒಂದು ಕಾಯಿಲೆ ಬರುತ್ತದೆ ಆ ಕಾಯಿಲೆ ಏನೂ ಮಾಡಿದರು ವಾಸಿಯಾಗುತ್ತಿರುವುದಿಲ್ಲ ಆಗ ವೈದ್ಯರನ್ನು ಕರೆಸುತ್ತಾನೆ ಆಗ ವೈದ್ಯರು ಹೇಳುತ್ತಾರೆ.

 ನಿಮಗೆ ಚರ್ಮದ ಕಾಯಿಲೆ ಇದೆ ನಿಮಗೆ ಈಗ ಕಾಣಿಸಿಕೊಂಡಿದೆ ಅದಕ್ಕೆ ನೀವು ಅರಿಶಿನ ಮತ್ತೆ ಕೆಲವು ಎಲೆಗಳನ್ನು ಅರೆದು ದೇಹಕ್ಕೆ ಲೇಪಿಸಿದರೆ ಕೆಲವು ದಿನಗಳ ನಂತರ ವಾಸಿಯಾಗುತ್ತದೆ ಎಂದು ಸಲಹೆ ನೀಡುತ್ತಾರೆ.

 ವೈದ್ಯರು ಹೇಳಿದಂತೆ ಈ ಕೆಲಸವನ್ನು ಕೆಲವು ಸೇವಕಿಯರಿಗೆ ಹೇಳುತ್ತಾರೆ ಸೇವಕಿಯರು ಬಂದು ಮಸಾಜ್ ಮಾಡಲು ಆರಂಭಿಸುತ್ತಾರೆ ಆದರೆ ಮಸಾಜ್ ಮಾಡುತ್ತಿದ್ದಾಗ ಬಳೆಗಳ ಶಬ್ದವು ಹೆಚ್ಚಾಗಿ ಬರುತ್ತಿರುತ್ತವೆ ಆಗ ರಾಜನಿಗೆ ಸ್ವಲ್ಪ ಮುಜುಗರವಾಗುತ್ತದೆ ಮತ್ತೆ ಬಳೆಗಳ ಶಬ್ದದಿಂದ ಕಿರಿಕಿರಿ ಉಂಟಾಗುತ್ತದೆ ಆಗ ರಾಜನು ಹೇಳುತ್ತಾನೆ.

 ನನಗೆ ಮಸಾಜ್ ಮಾಡಿ ಆದರೆ ಎಲ್ಲಾ ಬಳೆಗಳನ್ನು ತೆಗೆದು ಬಿಡಿ ಎಂದು ಹೇಳಿದಾಗ ಅದರಲ್ಲಿ ಮುಖ್ಯ ಸೇವಕಿಯೂ ಹೀಗೆ ಹೇಳುತ್ತಾಳೆ ನಾವೆಲ್ಲ ಮುತ್ತೈದೆಯರು ಎಲ್ಲಾ ಬಳೆಯನ್ನೂ ತೆಗೆಯಲು ಸಾಧ್ಯವಿಲ್ಲ ಒಂದೊಂದೇ ಬಳೆ ಇಟ್ಟುಕೊಂಡು ಇನ್ನು ಮಿಕ್ಕಿದ್ದು ತೆಗೆದುಬಿಡೋಣ ಎಂದು ಎಲ್ಲಾ ಸೇವಕಿಯರು ಒಂದು ಬಳೆಯನ್ನು ಉಳಿಸಿಕೊಂಡು ಮಿಕ್ಕಿದ್ದ ಬಳೆಗಳನ್ನು ತೆಗೆದುಬಿಡುತ್ತಾರೆ ಮತ್ತೆ ಮಸಾಜ್ ಮಾಡಲು ಶುರು ಮಾಡುತ್ತಾರೆ.

ರಾಜನು ಹಾಯಾಗಿ ನಿದ್ರೆಗೆ ಜಾರುತ್ತಾನೆ ಆದರೆ ಇವರು ಮಸಾಜ್ ಮಾಡುತ್ತಲೇ ಇರುತ್ತಾರೆ ಎದ್ದು ಕಣ್ಣು ಬಿಟ್ಟು ನೋಡಿದಾಗ ಶಬ್ದ ಬರುತ್ತಿರುವುವುದಿಲ್ಲ ಮಸಾಜ್ ಮಾಡುತ್ತಲೇ ಇರುತ್ತಾರೆ ಆಗ ರಾಜನಿಗೆ ಅರಿವಾಗುತ್ತದೆ.

 ಒಂದೇ ಬಳೆ ಇದೆ ಇದ್ದರೆ ಶಬ್ದ ಬರುತ್ತಿಲ್ಲ ಹಲವಾರು ಬಳೆಗಳು ಇದ್ದಾಗ ಶಬ್ದ ಬರುತ್ತದೆ ಅಂದರೆ ಒಂದೇ ಒಂದು ಗುರಿಯನ್ನು ಇಟ್ಟು ಅದರಂತೆ ನಾವು ಮುನ್ನಡೆದರೆ ನಾವು ಯಶಸ್ವಿ ಆಗಬಹುದು ಎಂದು ರಾಜನು ಅರಿತುಕೊಳ್ಳುತ್ತಾನೆ ಆರೋಗ್ಯ ಸುಧಾರಿಸಿದ ನಂತರ ಒಂದೊಂದೇ ಗುರಿಯನ್ನು ತಲುಪುತ್ತಾನೆ.ನಾನು ಒಂದೇ ಗುರಿಯ ಬಗ್ಗೆ ಕೇಂದ್ರೀಕರಿಸಿದ್ದೇನೆಯೇ?

ನಾನು ಅಷ್ಟೇ ಕೊಡುತ್ತಿದ್ದೆ

ಒಬ್ಬ ಬಡ ಮನುಷ್ಯನು ಹಳ್ಳಿಯಲ್ಲಿ ಇದ್ದು ಕೆಲಸ ಮಾಡಿದ ನಂತರ ಇನ್ನಷ್ಟು ಅಭಿವೃದ್ಧಿ ಆಗಬೇಕೆಂದು ನಗರಕ್ಕೆ ಬಂದು ಒಂದು ಬಹಳಷ್ಟು ನೌಕರಿಗಳನ್ನು ಮಾಡಿದ ನಂತರ ತನ್ನದೇ ಸ್ವಂತ ಬೇಕರಿಯನ್ನು ತೆರೆದನು ಅಲ್ಲಿ ಚೆನ್ನಾಗಿ ಕಷ್ಟಪಟ್ಟು ದುಡಿದು ಅಭಿವೃದ್ಧಿಯಾದನು.

 ಸಾಕಷ್ಟು ಗಳಿಸಿದ ನಂತರ ತನ್ನ ಹಳ್ಳಿಯ ನೆನಪಾಗುತ್ತದೆ ಆದ್ದರಿಂದ ನನ್ನ ಹಳ್ಳಿಯನ್ನು ನೊಡಬಹುದು ಮತ್ತೆ ನನ್ನ ಸ್ನೇಹಿತರಿಗೆ ಮಾತನಾಡಿಸಿ ಬರೋಣವೆಂದು ಹಳ್ಳಿಗೆ ಬಂದು ಎಲ್ಲರನ್ನು ಮಾತನಾಡಿಸುತ್ತಾನೆ ಆದರೆ ಇವನ ಎಲ್ಲಾ ಸ್ನೇಹಿತರು ಹಾಗೆ ಇರುತ್ತಾರೆ ಅದರಲ್ಲಿ ಇಬ್ಬರು ಮೂವರು ಮಾತ್ರ ಸ್ವಲ್ಪ ಉನ್ನತಿ ಪಡೆದಿರುತ್ತಾರೆ.

 ಬಹಳಷ್ಟು ಸ್ನೇಹಿತರಲ್ಲಿಒಬ್ಬ ಸ್ನೇಹಿತ ಮಾತ್ರ ಹಾಲು ಮಾರುವವನು ಅಭಿವೃದ್ಧಿಯಾಗಿರುತ್ತಾರೆ ಬೇಕರಿಯವನು ತುಂಬಾ ಸ್ಪೆಷಲ್ ಆಗಿ ಬಿಸ್ಕೆಟ್ ತಯಾರಿಸಿರುತ್ತಾನೆ ಬೇಕರಿಯವನ ಪರಿಣಿತಿ ನೈಪುಣ್ಯತೆ ಎಂದರೆ ವಿಶಿಷ್ಟವಾಗಿ ರುಚಿಯಾದ  ಬಿಸ್ಕೆಟ್ ತಯಾರಿಸುವುದು ಅದೇ ಬಿಸ್ಕೆಟ್ ಎಲ್ಲರಿಗೂ ಹೋಗಿ ಹಂಚುತ್ತಾನೆಎಲ್ಲರೂ ತಿಂದು ಸಂತೋಷಪಡುತ್ತಾರೆ.

 ಬೇಕರಿಯವನಿಗೆ ಮೊಸರು ಬೇಕಾಗಿರುತ್ತದೆ ಅದಕ್ಕೆ ಬೇಕರಿಯವನು ಹಾಲು ಮಾರುವವನ ಬಳಿ ಮಾತನಾಡಿಕೊಳ್ಳುತ್ತಾನೆ ನೀನು ಚೆನ್ನಾಗಿ ಬೆಳೆದಿದ್ದೀಯಾ ದಿನನಿತ್ಯ ನನಗೆ ಮೊಸರು ಬೇಕು ನೀನು ಎಲ್ಲರಿಗೂ ಸ್ವಲ್ಪ ಸ್ವಲ್ಪ ಮೊಸರು ಕೊಡುತ್ತಿದ್ದೀಯಾ ನನಗೆ ಒಟ್ಟಾಗಿ ಕೊಡು ನಿನಗೂ ಸುಲಭವಾಗುತ್ತದೆ ಎಂದು ಹೇಳುತ್ತಾನೆ.

 ನೀನು ಮೊಸರು ಕೊಟ್ಟರೆ ನಾನು ನಿನಗೆ ನನ್ನ ಬಿಸ್ಕೆಟ್ ಗಳನ್ನು ಕೊಡುತ್ತೇನೆ ನೀನು ಕೂಡ ಬಿಸ್ಕೆಟ್ಟನ್ನು ಮಾರಬಹುದು ನಿನಗೂ ಲಾಭ ನನಗೂ ಲಾಭ ಎಂದು ವಿವರಿಸಿ ಹೇಳಿದಾಗ ಇಬ್ಬರು ಒಪ್ಪಿಕೊಂಡು ದಿನನಿತ್ಯ ಅದರಂತೆ ಐದು ಕೆ ಜಿ ಮೊಸರು ಕೊಟ್ಟರೆ ಬೇಕರಿಯವನು 5 ಕೆ ಜಿ ಬಿಸ್ಕೆಟ್ ಕೊಡುವುದು ಈ ರೀತಿ ಒಪ್ಪಂದವಾಗಿರುತ್ತದೆ ಹಾಗೆ ಕೆಲವು ತಿಂಗಳುಗಳು ನಡೆಯುತ್ತದೆ.

 ಕೆಲವು ತಿಂಗಳಗಳ ನಂತರ 4 ಕೆಜಿ ಮೊಸರು ಮಾತ್ರ ಬಂದಿರುತ್ತದೆ ಇದನ್ನು ನೋಡಿದ ಬೇಕರಿಯವನು ಕೆಂಡಮಂಡಲವಾಗುತ್ತಾನೆ ಕೋಪಿಸಿಕೊಂಡು ನೇರವಾಗಿ ಹಳ್ಳಿಗೆ ಬಂದು ಪಂಚಾಯಿತಿ ಸೇರಿಸಿ ನನ್ನ ಸ್ನೇಹಿತ ನನಗೆ ಮೋಸ ಮಾಡುತ್ತಿದ್ದಾನೆ ನೋಡಿ ನಾನು 5 ಕೆಜಿ ಬಿಸ್ಕೆಟ್ ಕೊಟ್ಟೆ ಇವನು 4ಕೆ ಜಿ ಮೊಸರು ಕೊಡುತ್ತಿದ್ದಾನೆ ಎಂದು ಹೇಳುತ್ತಾನೆ.

 ಆಗ ಸಭೆಯ ಮುಖ್ಯಸ್ಥರೂ ಹಾಲು ಮಾರುವವನನ್ನು ಕರೆತರಲು ಹೇಳುತ್ತಾರೆ ಹಾಗೆ ಇವನ ತಕ್ಕಡಿ ತೆಗೆದುಕೊಂಡು ಬರುವಂತೆ ಹೇಳುತ್ತಾರೆ ಹಾಲು ಮಾಡುವವನು ಗಾಬರಿಯಾಗಿ ಹಾಗೆ ಆ ತಂದಿದ್ದ ಬಿಸ್ಕೆಟ್ ಡಬ್ಬವನ್ನು ಜೊತೆಗೆ ತರುತ್ತಾನೆ.

ಪಂಚಾಯಿತಿಯವರು ಹಾಲು ಮಾರುವವನಿಗೆ ಕೇಳುತ್ತಾರೆ ನೋಡಪ್ಪ ನೀನು ಈ ರೀತಿ ಏಕೆ ಮೋಸ ಮಾಡುತ್ತೀಯಾ ಈ ರೀತಿ ನೀನು ಮೋಸ ಮಾಡುತ್ತಿದರೆ ನಮ್ಮ ಹಳ್ಳಿಯ ಹೆಸರು ಏನಾಗಬೇಕು ಎಂದು ಹೇಳಿದಾಗ ಹಾಲು ಮಾರುವವನು ಗೊಂದಲಕ್ಕೆ ಸಿಲುಕಿಕೊಳ್ಳುತ್ತಾನೆ ನಂತರ ಹಾಲು ಮಾರುವವನು ಹೇಳುತ್ತಾನೆ ಸ್ವಾಮಿ ನಾನು ಇಲ್ಲಿಯವರೆಗೆ ಅವನು ಏನು ಒಂದು ಬಾಕ್ಸ್ ನಲ್ಲಿ ಕಳಿಸುತ್ತಿದ್ದನು ಅಷ್ಟನ್ನು ತೂಕ ಮಾಡಿ ನಾನು ಅಷ್ಟೇ  ಮೊಸರನ್ನು ಕೊಟ್ಟಿದ್ದೇನೆ ಎಂದು ಪ್ರಾಮಾಣಿಕವಾಗಿ ಹೇಳುತ್ತಾನೆ.

ಎಲ್ಲರೂ ನೋಡುತ್ತಿದ್ದಂತೆ ತಕ್ಕಡಿಯಲ್ಲಿ ಅವನು ಕಳಿಸಿದ ಬಿಸ್ಕೆಟ್ ನೋಡಿದರೆ ನಾಲಕ್ಕೇ ಕೆ ಜಿ ಇರುತ್ತದೆ ಅದರ ಬದಲಾಗಿ ಹಾಲು ಮಾರುವವನು ಯಾವುದೇ ರೀತಿಯ ತೂಕದ ಬಟ್ಟುಗಳು ಇವನ ಹತ್ತಿರ ಇರುವುದಿಲ್ಲ ಸ್ವಾಮಿ ನಾನು ಅವನು ಎಷ್ಟು ಕೊಡುತ್ತಿದ್ದನೂ ನಾನು ಅಷ್ಟೇ ಕೊಡುತ್ತಿದ್ದೆ ಎಂದು ಅಲ್ಲೆ ತೂಕ ಮಾಡಿ ತೋರಿಸುತ್ತಾನೆ.

ಸ್ವಾಮಿ ನನ್ನ ಹತ್ತಿರ ತೂಕ ಮಾಡುವುದಕ್ಕೆ ಬಟ್ಟುಗಳು ಇಲ್ಲ ಬೇಕರಿಯವನು ಕೊಡುತ್ತಿದ್ದ (ಡಬ್ಬ) ಬಾಕ್ಸ್ ಅನ್ನು ಒಂದು ಕಡೆ ಇಟ್ಟು ಅಷ್ಟೇ ತೂಕದ ಮೊಸರು ನೀಡುತ್ತಿದ್ದೆ ಎಂದಾಗ ಬೇಕರಿಯವನಿಗೆ ಎಲ್ಲರೂ ಸೇರಿ ಬೈಯ್ದು ಕಳಿಸುತ್ತಾರೆ ನಾವು ಮಾಡಿದ್ದು ನಮಗೆ ಹಿಂತಿರುಗಿ ಬರುತ್ತದೆ ಆಕಾಶಕ್ಕೆ ತಲೆಮಾಡಿ ಉಗಿದರೆ ಅದು ನಮ್ಮ ಮೇಲೆ ಬೀಳುತ್ತೆ ಹೊರತು ಬೇರೆಯವರ ಮೇಲಲ್ಲ.

ವಿಶೇಷವಾದ ಹುಟ್ಟು ಹಬ್ಬದ ಕೊಡುಗೆ

 

ಒಂದು ಸಾರಿ ಗಂಡ ಹೆಂಡತಿಗೆ ಹುಟ್ಟುಹಬ್ಬದ ಉಡುಗೊರೆ ಹೊಸ ರೀತಿಯಲ್ಲಿ ಕೊಡಬೇಕೆಂದು ವಿಚಾರ ಮಾಡಿದನು ಮದುವೆಯಾಗಿ ಸುಮಾರು ಹದಿನೈದು ವರ್ಷಗಳು ಕಳೆದಿದ್ದವು ಒಂದೆರಡು ಸಾರಿ ಹುಟ್ಟುಹಬ್ಬಕ್ಕೆ ಉಡುಗೊರೆ ಕೊಟ್ಟಿದ್ದೇನೆ ಹೊರತು ಎಲ್ಲಾ ಹುಟ್ಟು ಹುಟ್ಟು ಹಬ್ಬಗಳಿಗೆ ಕೊಡಿಸಿರಲಿಲ್ಲ ಅದಕ್ಕಾಗಿ ಈ ಬರುವ ಹುಟ್ಟು ಹಬ್ಬವು ಸ್ಪೆಷಲ್ ಆಗಿ ನೀಡಬೇಕು ಎಂದು ಹೆಂಡತಿಗೆ ಹೇಳಿದ.

 ಇವತ್ತು ಹುಟ್ಟು ಹಬ್ಬದ ದಿನ ನಾವು ಆಚೆ ಹೋಗಿದ್ದು ಬರೋಣ ಎಂದು ಕರೆದುಕೊಂಡು ಬಂದನು ಎಲ್ಲಿಗೆ ಹೋಗುತ್ತಿದ್ದೀರಿ ಎಂದು ಕೇಳಿದಾಗ ಗಂಡನಾದವನು ಏನೂ ಹೇಳಲಿಲ್ಲ ನಂತರ ಒಂದು ದೊಡ್ಡ ಬಿಲ್ಡಿಂಗ್ ಇತ್ತು ಅದರಲ್ಲಿ ಕರೆದುಕೊಂಡು ಹೋದನು.

 ಅಲ್ಲಿ ನೋಡಿದರೆ ಹೋಟೆಲ್ ನ ಹೆಸರು ಇತ್ತು ಅದಕ್ಕೆ ಹೆಂಡತಿ ತಿಳಿದುಕೊಂಡಳು ಇವತ್ತು ನನಗೆ ಹೋಟೆಲ್ ನಲ್ಲಿ ಊಟ ಮಾಡಿಸಬಹುದು ಎಂದು ಹೆಂಡತಿ ಬೇಡ ಮನೆಗೆ ಹೋಗೋಣ ಎಂದು ಒತ್ತಾಯ ಮಾಡಿದಾಗ ಪಾರ್ಸಲ್ ಬೇಕಾದರೆ ತೆಗೆದುಕೊಳ್ಳಿ ಎಂದು ಹೇಳಿದಳು ನಂತರ ಬಿಲ್ಡಿಂಗ್ ನ ಒಳಗಡೆ ಹೋದಾಗ ಹೆಂಡತಿಗೆ ಆಶ್ಚರ್ಯ ಕರೆಂಟ್ ಇರುವುದಿಲ್ಲ ಸಂಪೂರ್ಣ ಕತ್ತಲೆಯಿಂದ ಕವಿದಿರುತ್ತದೆ.

 ಸ್ವಾಗತ ಸುಸ್ವಾಗತ ಸುಜಾತರವರಿಗೆ ಮೆನಿ ಮೆನಿ ಹ್ಯಾಪಿ ರಿಟರ್ನ್ಸ್ ಆಫ್ ದ ಡೇ ಹುಟ್ಟು ಹಬ್ಬದ ಶುಭಾಶಯಗಳು ಎಂದು ಹೇಳುತ್ತಾರೆ ಹೆಂಡತಿ ನಿಬ್ಬೆರಗಾದಳು. ಒಂದು ಸೀಟಿನಲ್ಲಿ ಕುಳಿತುಕೊಂಡರು ನಂತರ ಒಳ್ಳೆಯ ಸುಮಧುರ ಸಂಗೀತ ಹಾಡುಗಳು ಶುರುವಾದವು.

ಹೆಂಡತಿಗೆ ಯಾವ ಹಾಡು ಇಷ್ಟವಿತ್ತೋ ಅದೇ ಹಾಡು ಬಂತು ಎಂಜಾಯ್ ಮಾಡಿದರು ಕತ್ತಲಲ್ಲಿ ಹೇಗೆ ಊಟ ಮಾಡುವುದು ಎಂದಾಗ ಸ್ವಲ್ಪ ಇರು ಎಂದು ಗಂಡ ಹೇಳಿದನು ನಂತರ ದೀಪ ಮಿಂಚಿನಂತೆ ಬೆಳಗಿತು ಎಲ್ಲರೂ ಒಂದೇ ದೊಡ್ಡ ರೌಂಡ್ ಟೇಬಲ್ ನಲ್ಲಿ ಕುಳಿತಿದ್ದಾರೆ ಆ ಟೇಬಲ್ ನಲ್ಲಿ ಎಲ್ಲರೂ ಅಂಧರು ಇದ್ದರು.

 ಎಲ್ಲರೂ ಸೇರಿ ಊಟ ಮಾಡಿದರು ನಂತರ ಹೆಂಡತಿಯ ಕೈಯಿಂದ ಎಲ್ಲರಿಗೂ ಒಂದೊಂದು ಉಡುಗೊರೆಯನ್ನು ಕೊಟ್ಟು ಬಂದರು ಆಗ ಹೆಂಡತಿಗೆ ಕಣ್ಣಿನಲ್ಲಿ ನೀರು ಬಂತು ಅಲ್ಲಿಯ ಅಂಧರು ಕೂಡ ತುಂಬಾ ಸಂತೋಷಪಟ್ಟರು ಈ ಹುಟ್ಟು ಹಬ್ಬದ ಸಂದರ್ಭವನ್ನು ಹೆಂಡತಿಯಾದವಳು ಸಾಯುವವರೆಗೂ ಮರೆಯಲಿಲ್ಲಈ ರೀತಿಯಾಗಿಯೂ ವಿಶೇಷವಾದ ಹುಟ್ಟು ಹಬ್ಬದ ಕೊಡುಗೆಯನ್ನು ನಾವು ಕೂಡ ನೀಡಬಹುದಲ್ಲವೇ. ಹುಟ್ಟು ಹಬ್ಬದ ಆಚರಣೆ ವಿಶೇಷವಾಗಿ ಆಚರಿಸಿದ್ದೇನೆಯೇ?

]]>
https://babakategalu.com/%e0%b2%ae%e0%b3%82%e0%b2%b0%e0%b3%8d%e0%b2%96%e0%b2%b0%e0%b2%a8%e0%b3%8d%e0%b2%a8%e0%b3%87-%e0%b2%b9%e0%b3%81%e0%b2%a1%e0%b3%81%e0%b2%95%e0%b3%81%e0%b2%a4%e0%b3%8d%e0%b2%a4%e0%b2%be%e0%b2%b0%e0%b3%86/feed/ 0