Sayed Akmal – babakategalu.com https://babakategalu.com Tue, 22 Apr 2025 18:01:44 +0000 en-US hourly 1 https://wordpress.org/?v=6.7.4 ಜೀವ ಉಳಿಸಿಕೊಂಡಿತು https://babakategalu.com/%e0%b2%9c%e0%b3%80%e0%b2%b5-%e0%b2%89%e0%b2%b3%e0%b2%bf%e0%b2%b8%e0%b2%bf%e0%b2%95%e0%b3%8a%e0%b2%82%e0%b2%a1%e0%b2%bf%e0%b2%a4%e0%b3%81/ https://babakategalu.com/%e0%b2%9c%e0%b3%80%e0%b2%b5-%e0%b2%89%e0%b2%b3%e0%b2%bf%e0%b2%b8%e0%b2%bf%e0%b2%95%e0%b3%8a%e0%b2%82%e0%b2%a1%e0%b2%bf%e0%b2%a4%e0%b3%81/#respond Tue, 15 Apr 2025 04:40:00 +0000 https://babakategalu.com/?p=280 Read more]]> ಒಂದು ಸಾರಿ ಹದ್ದು ಅವಕಾಶವನ್ನು ನೋಡಿ ಒಂದು ಕೋಳಿ ಮರಿಯನ್ನು ಹಿಡಿದುಕೊಂಡು ಹೋಯಿತು ಇದನ್ನು ನೋಡಿದ ಕಾಗೆಗೆ ತುಂಬಾ ಬೇಸರವಾಯಿತು.

 ಹದ್ದು ಸುಲಭವಾಗಿ ಹಿಡಿದುಕೊಂಡು ಹೋಯಿತು ನಾನು ಅದಕ್ಕಿಂತ ಕಡಿಮೆಯೇ ಎಂದು ನಾನು ಏಕೆ ಹಿಡಿಯಬಾರದು ಎಂದು ಯೋಚಿಸಿತು ನಂತರ ಕಾಗೆ ಕೋಳಿ ಮರಿಯನ್ನು ಹಿಡಿಯುವುದಕ್ಕಿಂತ ಕೋಳಿಯನ್ನೇ ಹಿಡಿಯುತ್ತೇನೆ ಎಂದು ದೊಡ್ಡದಾಗಿ ಹುಡುಕಿ ತಿನ್ನುತ್ತಿದ್ದ ಕೋಳಿಯನ್ನೇ ಹಿಡಿಯಲಿಕ್ಕೆ ಹೋಯಿತು.

 ಕಾಗೆ ಇರೋದು ಸ್ವಲ್ಪ ಕೋಳಿ ಭಾರವನ್ನು ಎತ್ತಲು ಆಗಲಿಲ್ಲ ಆಗ ಕೋಳಿ ಸರಿಯಾಗಿ ಕಾಗೆಗೆ ಕುಕ್ಕಿತು ನಂತರ ಗಲಿಬಿಲಿಯಾಗಿ ಹಾರಿ ಜೀವ ಉಳಿಸಿಕೊಂಡಿತು ನಂತರ ಎಲ್ಲಾ ಹದ್ದುಗಳು ನೋಡಿ ನಕ್ಕವು ಹದ್ದು ಶಕ್ತಿಶಾಲಿಯಾದುದು.

 ಹದ್ದಿಗೆ ಭಾರ ಎತ್ತುವ ಶಕ್ತಿ ಇದೆ ಚಾಣಾಕ್ಷತೆ ಇದೆ ಕಾಗೆ ಚಿಕ್ಕದು ಮತ್ತು ಅಷ್ಟೊಂದು ಭಾರ ಎತ್ತಲು ಸಾಧ್ಯವಿಲ್ಲ ಇದನ್ನು ಅರಿಯದ ಕಾಗೆ ದುರಾಸೆಪಟ್ಟು ಹೋಗಿ ಎಡವಟ್ಟು ಮಾಡಿಕೊಂಡಿತು.

ನಮ್ಮನ್ನು ನಾವು ಸ್ವಯಂ ವಿಶ್ಲೇಷಣೆ ಮಾಡಿಕೊಂಡು ನಮ್ಮ ಶಕ್ತಿ ಸಾಮರ್ಥ್ಯವನ್ನು ಅರಿತು ಸಾಧ್ಯವಾದುದನ್ನು ಮಾಡೋಣ. ಮಿತಿಮೀರಿದ ನಂಬಿಕೆಯಿಂದ ಸಾಧ್ಯವಾಗದೇ ಇರುವುದನ್ನು ಮಾಡಲು ಹೋಗಿ ನಷ್ಟ ಅನುಭವಿಸಿದ್ದೇನೆ?

 ಸ್ವಭಾವ ಬದಲಿಸಿಕೊಂಡಿತು

ಮುದ್ಗಲ್ ಬುದ್ಧಿವಂತ ರಾಜ ಇದ್ದನು ರಾಜ್ಯವು ತುಂಬ ಚೆನ್ನಾಗಿ ನಡೆಯುತ್ತಿತ್ತು ಹಾಗೆ ಒಂದು ಆನೆ ಇತ್ತು ಆನೆಯು ಯಾರಿಗೂ ತೊಂದರೆ ಕೊಡುತ್ತಿರಲಿಲ್ಲ ಆದರೆ ಒಂದು ದಿನ ಇದ್ದಕ್ಕಿದ್ದಂತೆಯೇ ಆನೆಯು ಕೋಪದಿಂದ ಮಾವುತನನ್ನು ಸೊಂಡಲಿನಲ್ಲಿ ಸುತ್ತಿ ಬಿಸಾಕಿತು.

ಬೇರೆ ಪರಿಣಿತಿ ಪಡೆದ ಮಾವುತನು ಹೋದನು ಅವನಿಗೂ ತುಳಿದು ಬಿಟ್ಟಿತು ಪರಿಸ್ಥಿತಿ ಯಾವ ರೀತಿ ಇತ್ತು ಎಂದರೆ ಯಾರೇ ಹೋಗಲಿ ಸಾವಿನ ಮನೆಗೆ ಹೋದಂತೆ ಈ ರೀತಿಯಾಗಿ ಆನೆಯ ಹತ್ತಿರ ಯಾರೂ ಹೋಗುತ್ತಿರಲಿಲ್ಲ ರಾಜನು ಇದೆ ಚಿಂತೆಯಲ್ಲಿ ಮುಳುಗಿದನು.

 ಶಾಂತಿ ಸ್ವಭಾವದಿಂದ ಇದ್ದ ಆನೆ ಈ ರೀತಿ ಸಿಟ್ಟಾಗಲು ಕಾರಣವೇನು ಇದಕ್ಕೆ ಬಾಬಾ ಅವರೇ ಪರಿಹಾರ ಸೂಚಿಸಬೇಕೆಂದು ಬಾಬಾ ಅವರಿಗೆ ಕೇಳಿದರು ಬಾಬಾ ಅವರು ಆನೆಯನ್ನು ಹೋಗಿ ನೋಡಿದಾಗ ಆನೆಯ ಕಣ್ಣುಗಳು ತುಂಬಾ ಕೆಂಪಾಗಿ ಇವೆ ತುಂಬಾ ಕೋಪವಿದೆ ಆನೆಯನ್ನು ಕಟ್ಟಿದ ಸ್ಥಳವನ್ನು ಸೂಕ್ಷ್ಮವಾಗಿ ಪರೀಕ್ಷಿಸಿದರು.

 ಆನೆಯ ಸ್ವಲ್ಪ ದೂರದಲ್ಲಿ ಯಾರೋ ಬಂದು ರಾತ್ರಿ ಕುಳಿತು ಮಾತಾಡಿ ಕೊಂಡು ಹೋಗುತ್ತಿದ್ದಾರೆ ಎನ್ನುವ ಸಂದೇಹ ಬಂತು ಅದನ್ನು ಮಾವುತರಿಗೆ ಕೇಳಿದಾಗ ಸಂಜೆ ಆದ ಮೇಲೆ ಯಾರೂ ಇರುವುದಿಲ್ಲ ಎಂದು ಹೇಳಿದರು ನಂತರ ರಾತ್ರಿ ಯಾರೂ ಬರುತ್ತಾರೆ ಎಂದು ಅವಿತುಕೊಂಡು ನೋಡಿದರೂ ರಾತ್ರಿ ಆಗುತ್ತಿದ್ದಂತೆಯೇ ಕೆಲವು ಕಳ್ಳರು ದರೋಡೆಕೋರರು ಬಂದರು ಅವರು ಕುಳಿತುಕೊಂಡು ಮಾತನಾಡುತ್ತಿದ್ದರು.

 ನಾವು ಇಂತಿಂಥವರಿಗೆ ಶಿಕ್ಷೆಯನ್ನು ಕೊಟ್ಟಿದ್ದೀವಿ ಹಿಂಸೆ ಮಾಡಿದ್ದೇವೆ ದರೋಡೆ ಮಾಡಿದ್ದೇವೆ ಅನ್ಯಾಯ ಮಾಡಿದ್ದೇವೆ ಇತರರಿಗೆ ಹಿಂಸೆ ಕೊಡಬೇಕು ಎಂದು ನಕರಾತ್ಮಕವಾಗಿ ಮಾತನಾಡಿಕೊಂಡು ಹೊರಟು ಹೋಗುತ್ತಿದ್ದರು.

 ನಕರಾತ್ಮಕ ಮಾತುಗಳನ್ನು ಅನೆಯು ದಿನನಿತ್ಯ ಕೇಳುತ್ತಿತ್ತು ಆದುದರಿಂದ ಆನೆಯು ಈ ರೂಪ ತಾಳುತ್ತಿತ್ತು ನಂತರ ಆ ಕಳ್ಳರು ದರೋಡೆಕೋರರನ್ನು ಹಿಡಿಸಿದರು ಮತ್ತೆ ಅದೇ ಸ್ಥಳಕ್ಕೆ ಒಳ್ಳೆಯ ಪಂಡಿತರು ಸಾಧುಗಳು ಋಷಿಗಳು ಕುಳಿತು ಅಲ್ಲಿ ಒಳ್ಳೆಯ ಮಾತನಾಡುವುದಕ್ಕೆ ಅವಕಾಶ ಮಾಡಿಕೊಟ್ಟರು.

 ಸಕಾರಾತ್ಮಕವಾದ ಮಾತುಗಳನ್ನು ಕೇಳಿದ ಸ್ವಲ್ಪ ದಿನದಲ್ಲಿಯೇ ಆನೆಯು ಕೂಡ ಸರಿದಾರಿಗೆ ಬಂತು ಇವರು ಮಾತನಾಡುತ್ತಿದ್ದ ಮಾತುಗಳು ಎಲ್ಲರಿಗೂ ಒಳ್ಳೆಯದಾಗಲಿ ಸಕರಾತ್ಮಕ ಚಿಂತನೆ ಇತರರಿಗೆ ಸಹಾಯ ಮಾಡುವ ಯೋಜನೆಗಳು ರೂಪಿಸುತ್ತಿದ್ದರು ಸಕಾರಾತ್ಮಕವಾದ ಮಾತುಗಳನ್ನು ಕೇಳಿ ಅನೆಯು ಕೂಡ ತನ್ನ ಸ್ವಭಾವವನ್ನು ಬದಲಿಸಿ ಕೊಂಡಿತು. ನಾನು ವಾತಾವರಣ ಬದಲಿಸಿಕೊಂಡು ನನ್ನ ಸ್ವಭಾವ ಬದಲಾಯಿಸಿಕೊಂಡಿದ್ದೇನೆಯೇ?

ನಕಲು ಶಾಶ್ವತವಾಗಿ ಇರುವುದಿಲ್ಲ

ಜಿ. ವಿ. ಅತ್ರಿ ಸುಗಮಸಂಗೀತ ಹಾಗೂ ಶಾಸ್ತ್ರೀಯ ಸಂಗೀತ ಎರಡರಲ್ಲೂ ಹೆಚ್ಚು ಸಾಧನೆ ಮಾಡಿದವರು ಒಳ್ಳೆಯ ಕಂಠವಿದೆ ಹಾಡುವ ಮೂಲಕ ಇವರು ತನ್ನ ಹೆಸರನ್ನು ಪ್ರಸಿದ್ಧಿಗೊಳಿಸಿದ್ದಾರೆ ಇವರು ಹಳೆಯ ಚಲನಚಿತ್ರ ಗೀತೆಗಳು ತುಂಬ ಇಂಪಾಗಿ ಹಾಡುತ್ತಿದ್ದರು.

 ಇವರ ಕಂಠ ಹಾಗೂ ಪಿಬಿ ಶ್ರೀನಿವಾಸ್ ಅವರ ಕಂಠ ತುಂಬಾ ಹತ್ತಿರವಿತ್ತು ಇವರು ಹಾಡುತ್ತಿದ್ದರೆ ಪಿ ಬಿ ಶ್ರೀನಿವಾಸ್ ರವರೆ ಹಾಡುತ್ತಿದ್ದಾರೆ ಎಂದು ಹಾಡು ಕೇಳುವವರು ಹೇಳುತ್ತಿದ್ದರು ನಂತರ ಅತ್ರಿಯವರು ಹೋದರೆ ಜೂನಿಯರ್ ಪಿ ಬಿ ಶ್ರೀನಿವಾಸ್ ಎಂದು ಕರೆಯುತ್ತಿದ್ದರು.

 ಅತ್ರಿಯವರು ತುಂಬಾ ಸಂತೋಷ ಪಡುತ್ತಿದ್ದರು ಇವರ ಕಾರ್ಯಕ್ರಮಗಳಿಗೆ ಜನರು ಹೆಚ್ಚಾಗಿ ಸೇರುತ್ತಿದ್ದರು ಒಂದು ದೊಡ್ಡ ಸಮಾರಂಭದಲ್ಲಿ ಅತ್ರಿಯವರು ಹಾಡುವಾಗ ಕನ್ನಡದ ಹೆಸರಾಂತ ಕವಿ ಲಕ್ಷ್ಮೀ ನಾರಾಯಣ ಭಟ್ಟರು ಮುಖ್ಯ ಅತಿಥಿಯಾಗಿ ಬಂದಿದ್ದರು ಅತ್ರಿಯವರ ಹಾಡು ಕೇಳಿ ತುಂಬ ಸಂತೋಷಪಟ್ಟರು ನಂತರ ಅತ್ರಿಯವರಿಗೆ ಹೇಳಿದರು.

 ನಿಮಗೆ ಒಳ್ಳೆಯ ಕಂಠ ಇದೆ ಶಾಸ್ತ್ರೀಯ ಸಂಗೀತ ಸುಗಮ ಸಂಗೀತ ಭಕ್ತಿ ಸಂಗೀತ ಎಲ್ಲವೂ ಚೆನ್ನಾಗಿ ಹಾಡುತ್ತೀರಿ ಜ್ಯೂನಿಯರ್ ಎಂದು ನೀವು ಏಕೆ ಗುರುತಿಸಲು ಇಷ್ಟಪಡುತ್ತೀರಿ ಪಿಬಿ ಶ್ರೀನಿವಾಸ್ ಅವರ ಬಗ್ಗೆ ಗೌರವ ಇರಬೇಕು ನಿಜ ಆದರೆ ಅವರ ಹೆಸರು ನಕಲು ಮಾಡಿ ಕರೆಸಿಕೊಳ್ಳುವುದು ಒಳ್ಳೆಯದಲ್ಲ.

 ನಿಮ್ಮ ಪ್ರತಿಭೆಗೆ ನೀವೇ ಅವಮಾನ ಮಾಡಿಕೊಂಡಂತೆ ಜಗತ್ತಿನಲ್ಲಿ ಯಾರೂ ಒಬ್ಬರಂತೆ ಒಬ್ಬರಿಲ್ಲ ಎಲ್ಲರ ಹೆಬ್ಬೆರಳ ಗುರುತು ಒಂದೇ ರೀತಿ ಇರುವುದಿಲ್ಲ ನಿಮ್ಮಲ್ಲಿ ಇರುವ ಶ್ರೇಷ್ಠತೆಯನ್ನು ಪ್ರದರ್ಶಿಸಿ ಕೊಳ್ಳಿ ಎಂದು ಹೇಳಿದರು ಇವರು ಹೇಳಿದ ಮಾತು ಅವರ ಮನಸ್ಸಿಗೆ ನಾಟಿತು ನಂತರ ಇತರರು ಜೂನಿಯರ್ ಪಿ ಬಿ ಶ್ರೀನಿವಾಸ್ ಎಂದು ಕರೆಯುವುದನ್ನು ನಿಲ್ಲಿಸಿದರು.

 ತಮ್ಮ ಹೆಸರಿನಿಂದಲೇ ಕಾರ್ಯಕ್ರಮಗಳು ಕೊಡಲು ಮುಂದಾದರು ನಂತರ ತಮ್ಮದೇ ಆದ ಒಂದು ಸಂಗೀತ ಶಾಲೆಯನ್ನು ಆರಂಭಿಸಿದರು ಹಲವಾರು ಧ್ವನಿ ಸುರುಳಿಗಳನ್ನು ಹೊರ ತಂದರು ಹೊಸ ಹೊಸ ಪ್ರಯೋಗಗಳನ್ನು ಮಾಡಿದರು.

 ಕನ್ನಡ ಸಂಗೀತ ಸಮ್ಮೇಳನಗಳನ್ನು ಸಂಘಟಿಸಿ ನಡೆಸಿಕೊಂಡು ಬಂದರು ನಂತರ ಇವರಿಗೆ ಗಾನರತ್ನ ಹಾಡಿನ ಕೋಗಿಲೆ ಎಂದು ಕರೆಸಿಕೊಂಡರು ಪ್ರತಿಯೊಬ್ಬರಿಗೂ ಒಂದೊಂದು ಕಲೆ ಇದ್ದೇ ಇರುತ್ತದೆ ಅದನ್ನು ಕಂಡು ಹಿಡಿದು ನಮ್ಮದೇ ಆದ ಸಾಧನೆ ಮಾಡೋಣ. ನಾನು ನನ್ನ ವಿಶೇಷತೆಯನ್ನು ಗುರುತಿಸಿಕೊಂಡು ಯಾವ ಸಾಧನೆ ಮಾಡಿದ್ದೇನೆ?

524. ಟೀಕೆ ಮಾಡಿದರೆ

ಒಂದು ಸಾರಿ ನಾಟಕದ ಕಂಪೆನಿಯವರು ಬೇರೆ ಊರಿಗೆ ಯಾವುದೋ ಕೆಲಸಕ್ಕೆ ಹೋಗಿರುತ್ತಾರೆ ಅಲ್ಲಿ ಒಂದು ನಾಟಕ ಪ್ರದರ್ಶನ ವಾಗುತ್ತಿರುತ್ತದೆ ಆ ನಾಟಕ ಹೊಸದಾಗಿ ಅಭಿನಯ ಮಾಡುತ್ತಿರುವ ಕಲಾವಿದರು ನಡೆಸುತ್ತಿರುತ್ತಾರೆ ನಾಟಕ ನೋಡೋಣ ಎಂದು ಎಲ್ಲರೂ ಹೋಗುತ್ತಾರೆ.

 ನಾಟಕ ನೋಡಿದರೆ ಹೊಸ ಕಲಾವಿದರು ನಾಟಕದಲ್ಲಿ ಸರಿಯಾಗಿ ನಟನೆ ಮಾಡುತ್ತಿರುವುದಿಲ್ಲ ಅದಕ್ಕೆ ಬೇಸತ್ತು ಹೋಗೋಣವೇ ಎಂದು ಕೇಳಿದರು ಅದರಲ್ಲಿ ಹಿರಿಯರಾದ ಕಲಾವಿದರು ಇಲ್ಲ ಸ್ವಲ್ಪ ಹೊತ್ತು ನೋಡೋಣ ಎಂದು ಹೇಳಿ ಕೊನೆಯವರೆಗೂ ನಾಟಕವನ್ನು ತಾಳ್ಮೆಯಿಂದ ನೋಡಿದರು.

 ನಾಟಕ ನೋಡಿ ಬರಬೇಕಾದರೆ ನಮ್ಮ ಸಮಯ ನಷ್ಟವಾಯ್ತು ಏಕೆಂದರೆ ಇಂಥ ಕಳಪೆ ನಾಟಕ ನೋಡಬಾರದು ಎಂದು ಹೇಳಿದರು ಆಗ ನಾಟಕದ ಮುಖ್ಯ ಕಲಾವಿದರು ಹೇಳಿದರು.

 ನಾವು ಕಿರಿಯರನ್ನು ಪ್ರೋತ್ಸಾಹಿಸಬೇಕು ಈಗ ಅವರು ತಪ್ಪು ಮಾಡುತ್ತಿದ್ದಾರೆ ಇದು ಸಹಜ ನಾವೇ ಇವರಿಗೆ ಟೀಕೆ ಮಾಡಿದರೆ ಮುಂದೆ ಬೆಳೆಯುವುದಿಲ್ಲ ಇವರನ್ನು ಪ್ರೋತ್ಸಾಹ ಕೊಟ್ಟು ಸರಿಯಾದ ಸಲಹೆ ನೀಡಿದರೆ ಹೊಸ ಕಲಾವಿದರು ಅರ್ಥಮಾಡಿಕೊಂಡು ಮುಂದೆ ಒಳ್ಳೆಯ ಕಲಾವಿದರಾಗುತ್ತಾರೆ ಎಂದು ಹೇಳಿದರು.

ಅನುಭವ ಇಲ್ಲದೆ ಯಾವುದೇ ಕೆಲಸ ಮಾಡಿದರೂ ಎಡವುದು ಸಹಜ ಆದುದರಿಂದ ಅವರನ್ನು ಪ್ರೋತ್ಸಾಹಿಸಿದರೆ ಒಂದಲ್ಲ ಒಂದು ದಿನ ಅವರು ಕೂಡ ಬೆಳೆಯುತ್ತಾರೆ ಇತರರಿಗೂ ಬೆಳೆಯುವುದಕ್ಕೆ ಅವಕಾಶ ಕಲ್ಪಿಸೋಣ.

ತಲೆನೋವು ಹೇಗೆ ಕಡಿಮೆ ಆಯಿತು

ಶಂಸನ್ ವೈದ್ಯರ ಮನೆಗೆ ನೆಂಟರು ಬರುತ್ತಾರೆ ಆಗ ಎಲ್ಲರೂ ಟಿಕೆಟ್ ಪಡೆದು ಸಿನಿಮಾಗೆ ಹೋಗುತ್ತಾರೆ ಇನ್ನೇನು ಕೆಲವೇ ನಿಮಿಷಗಳಲ್ಲಿ ಸಿನಿಮಾ ಆರಂಭವಾಗಬೇಕು ಆಗ ವೈದ್ಯರನ್ನು ಹಿಂದೆ ಒಬ್ಬ  ಸಬಲ್ ವ್ಯಕ್ತಿ ವೈದ್ಯರೇ ನನಗೆ ತುಂಬಾ ತಲೆ ನೋಯುತ್ತಿದೆ ಮಾತ್ರೆ ಕೊಡಿ ಎಂದು ಕೇಳುತ್ತಾನೆ.

 ವೈದ್ಯರು ಗಮನಿಸುವುದಿಲ್ಲ ನಂತರ ಹಿಂದೆ ಇರುವ ವ್ಯಕ್ತಿ ಹೆಗಲ ಮೇಲೆ ಕೈ ಹಾಕಿ ಹೇಳುತ್ತಾನೆ ಆಗ ವೈದ್ಯರು ಹಿಂತಿರುಗಿ ನೋಡಿದಾಗ ಇವರ ಹಳೆಯ ರೋಗಿ (ಪೇಷಂಟ್) ಆಗಿರುತ್ತಾನೆ ಆಗ ವೈದ್ಯರು ಏನು ಮಾಡಬಹುದು ಎಂದು ಯೋಚನೆ ಮಾಡುತ್ತಾರೆ.

 ತಕ್ಷಣ ವೈದ್ಯರು ಈಗ ನಾನು ನಿನಗೆ ಒಂದು ಮಾತ್ರೆಯನ್ನು ಕೊಡುತ್ತೇನೆ ಆದರೆ ಆ ಮಾತ್ರೆಯನ್ನು ನೀನು ನುಂಗಬಾರದು ಬರಿ ಚೀಪಬೇಕು ನಂತರ ಕಸದ ಬುಟ್ಟಿಗೆ ಉಗಿಯಬೇಕು ಎಂದು ಹೇಳಿ ತಮ್ಮ ಶರ್ಟಿನ ಒಂದು (ಬಟನ್) ಗುಂಡಿಯನ್ನು ಕಿತ್ತು ಕೊಡುತ್ತಾರೆ ಸಿನಿಮಾ ಮುಗಿಯುತ್ತದೆ.

 ನಂತರ ಈಚೆ ಬಂದಾಗ ಆ ಪೇಷಂಟ್ ನ ನೆನಪಾಗುತ್ತದೆ ಮತ್ತೆ ಪಕ್ಕದಲ್ಲಿ ಬಂದಿರುವ ನೆಂಟರು ಕೇಳುತ್ತಾರೆ ಅದು ಸರಿ ನೀವು ಅವನಿಗೆ ಯಾವ ಮಾತ್ರೆ ಕೊಟ್ಟಿರಿ ಎಂದು ಕೇಳಿದಾಗ ವೈದ್ಯರು ನಗುತ್ತಾ ಹೇಳುತ್ತಾರೆ.

 ನಾನು ಸಿನಿಮಾಗೆ ಬಂದಿದ್ದೆ ನಾನು ಯಾವುದೇ ರೀತಿಯ ಮಾತ್ರೆ ತಂದಿರಲಿಲ್ಲ ಆದರೆ ನಾನು ಒಂದು ಉಪಾಯ ಮಾಡಿ ಶರ್ಟಿನ ಒಂದು ಬಟನ್ ಅನ್ನು ಕೊಟ್ಟೆ ಇದನ್ನು ಚೀಪು ಎಂದು ಹೇಳಿದೆ

ಆದ್ದರಿಂದ ಅವನಿಗೆ ಕಡಿಮೆಯಾಗಿದೆ ಎಂದು ಹೇಳುತ್ತಾರೆ ತಲೆನೋವು ಹೇಗೆ ಕಡಿಮೆ ಆಯಿತು ಎಂದರೆ ವೈದ್ಯರ ಮೇಲೆ ಇರುವ ನಂಬಿಕೆ ವಿಶ್ವಾಸದಿಂದಾಗಿ ಕಡಿಮೆ ಆಗಿದೆ. ಅಚಲವಾಗಿ ನಂಬಿದಾಗ ಸಕಲವು ಸಾಧ್ಯವಿದೆ.

]]>
https://babakategalu.com/%e0%b2%9c%e0%b3%80%e0%b2%b5-%e0%b2%89%e0%b2%b3%e0%b2%bf%e0%b2%b8%e0%b2%bf%e0%b2%95%e0%b3%8a%e0%b2%82%e0%b2%a1%e0%b2%bf%e0%b2%a4%e0%b3%81/feed/ 0
ಅದಲು ಬದಲು ಮಾಡಿದ್ದೇನೆ https://babakategalu.com/%e0%b2%85%e0%b2%a6%e0%b2%b2%e0%b3%81-%e0%b2%ac%e0%b2%a6%e0%b2%b2%e0%b3%81-%e0%b2%ae%e0%b2%be%e0%b2%a1%e0%b2%bf%e0%b2%a6%e0%b3%8d%e0%b2%a6%e0%b3%87%e0%b2%a8%e0%b3%86/ https://babakategalu.com/%e0%b2%85%e0%b2%a6%e0%b2%b2%e0%b3%81-%e0%b2%ac%e0%b2%a6%e0%b2%b2%e0%b3%81-%e0%b2%ae%e0%b2%be%e0%b2%a1%e0%b2%bf%e0%b2%a6%e0%b3%8d%e0%b2%a6%e0%b3%87%e0%b2%a8%e0%b3%86/#respond Mon, 14 Apr 2025 04:40:00 +0000 https://babakategalu.com/?p=278 Read more]]> ಅವಂತಿಕ್ ಗುರು ಮತ್ತು ಚಂಚಲ್ ಶಿಷ್ಯ ಇಬ್ಬರೂ ಕೂಡ ಒಂದು ಉಪನ್ಯಾಸ ಮುಗಿಸಿ ತಮ್ಮ ಆಶ್ರಮಕ್ಕೆ ನಡೆದುಕೊಂಡು ಬರುತ್ತಿದ್ದರು ದಾರಿಯೂ ತುಂಬ ದೀರ್ಘವಾಗಿತ್ತು ಗುರು ಶಿಷ್ಯನಿಗೆ ಹೇಳುತ್ತಿದ್ದಾರೆ ಇವತ್ತು ಸ್ವಲ್ಪ ಬೇಗ ಹೋಗೋಣ ಕತ್ತಲೆಗಿಂತ ಮುಂಚೆ ನಮ್ಮ ಆಶ್ರಮ ಸೇರಿಕೊಳ್ಳೋಣ ಗುರುಗಳು ಹೀಗೇಕೆ ಹೇಳುತ್ತಿದ್ದಾರೆ ಎಂದು ಶಿಷ್ಯನಿಗೆ ಅರ್ಥವಾಗುತ್ತಿಲ್ಲ.

ಗುರುಗಳು ತಮ್ಮ ಒಂದು ಬ್ಯಾಗಿನಲ್ಲಿ ಏನೋ ವಸ್ತುಗಳನ್ನು ಇಟ್ಟುಕೊಂಡಿದ್ದಾರೆ ಅದನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ ಹೀಗೆ ಮುಂದೆ ಮುಂದೆ ಬೇಗಬೇಗ ಸಾಗುತ್ತಿದ್ದಾರೆ ಸಂಜೆಯ ಸಮಯ ಬಂತು ಗುರುಗಳು ಪ್ರಾರ್ಥನೆ ಮಾಡಿ ಬರುತ್ತೇನೆ ಎಂದು ಆ ಬ್ಯಾಗನ್ನು ಶಿಷ್ಯನ ಕೈಗೆ ಕೊಟ್ಟರು ಶಿಷ್ಯ ಬ್ಯಾಗನ್ನು ತೆಗೆದು ನೋಡಿದಾಗ ಬ್ಯಾಗಿನಲ್ಲಿ ಚಿನ್ನದ ನಾಣ್ಯದ ಚೀಲವೂ ಇತ್ತು ಆಗ ಶಿಷ್ಯನಿಗೆ ಅರ್ಥವಾಯ್ತು.

 ಗುರುಗಳು ಏಕೆ ಹೀಗೆ ವರ್ತಿಸುತ್ತಿದ್ದಾರೆ ಎಂದರೆ ಚಿನ್ನದ ಮೋಹದಿಂದ ಎಂದು ಅರಿತನು ನಂತರ ಗುರುಗಳು ಪ್ರಾರ್ಥನೆ ಮುಗಿಸುವುದಕ್ಕಿಂತ ಮುಂಚೆ ಚಿನ್ನದ ಆ ಚಿಕ್ಕ ಚೀಲವನ್ನು ಬಾವಿಯ ಹತ್ತಿರ ಅಡಗಿಸಿದನು ನಂತರ ಅಷ್ಟೇ ಭಾರವಾದ ಕಲ್ಲುಗಳನ್ನು ಹಾಕಿದನು.

ಗುರುಗಳು ಆ ಬ್ಯಾಗನ್ನು ಪಡೆದು ಅದೇ ರೀತಿ ಗಾಬರಿಯಾಗಿ ಹೋಗುತ್ತಿದ್ದರು ಕೊನೆಗೂ ಸೂರ್ಯಾಸ್ತವಾಯ್ತು ಆಗ ಗುರುಗಳು ಏನು ಮಾಡುವುದು ಆಶ್ರಮ ಸಿಗುತ್ತಿಲ್ಲವಲ್ಲ ಎಂದು ಚಡಪಡಿಸಿದರು.

 ಆಗ ಶಿಷ್ಯನು ತಾಳ್ಮೆಯಿಂದ ಹೇಳಿದನು ನೀವು ಚಡಪಡಿಸುವ ಅವಶ್ಯಕತೆ ಇಲ್ಲ ನಾವು ನೆಮ್ಮದಿಯಾಗಿ ಇಲ್ಲಿ ಇದ್ದು ಹೋಗಬಹುದು ಹೇಗೆ ಎಂದು ಗುರುಗಳು ಕೇಳಿದರು ನಾನು ಬ್ಯಾಗಿನಲ್ಲಿರುವ ಚಿನ್ನದ ನಾಣ್ಯವನ್ನು ಅದಲು ಬದಲು ಮಾಡಿದ್ದೇನೆ ಈಗ ನಾವು ನೆಮ್ಮದಿಯಾಗಿ ಇರಬಹುದು ಎಂದು ಹೇಳಿದನು.

 ಶಿಷ್ಯನಿಗೆ ಭಯವು ಇತ್ತು ಆಗ ಗುರುಗಳು ತುಂಬಾ ಸಂತೋಷಪಟ್ಟರು ಗುರುಗಳು ಹೆಚ್ಚಿನ ಮೋಹ ಇದ್ದಷ್ಟು ಅಪಾಯ ಜಾಸ್ತಿ  ಹೆಚ್ಚು ಪ್ರೀತಿ ಇದ್ದರೂ ಕೇಡು ತಪ್ಪಿದ್ದಲ್ಲ .

 ಇವು ಇರುವಷ್ಟು ದಿನ ಇದನ್ನು ಕಾಪಾಡಿಕೊಳ್ಳಬೇಕು ರಕ್ಷಣೆ ಮಾಡಬೇಕು ಎನ್ನುವ ಚಿಂತೆ ಇದ್ದೇ ಇರುತ್ತದೆ ಯಾವಾಗ ಈ ಚಿಂತನೆಗಳು ಮಾಯವಾಗುತ್ತದೋ ಆಗ ತಾಳ್ಮೆ ಸಹಜವಾಗಿ ಬರುತ್ತದೆ ಎಂದು ಶಿಷ್ಯನಿಗೆ ಹೇಳಿದರು ನಂತರ ಅಲ್ಲೆ ಮಲಗಿದ್ದು ಬೆಳಿಗ್ಗೆ ಹೋದರು.

ಬೆಲೆ ಕಟ್ಟಲು ಸಾಧ್ಯವೇ?

ನೇಕಾರ ಎಂಬುವ ವ್ಯಕ್ತಿ ಇದ್ದನು ಇವನ ವೃತ್ತಿ ಬಟ್ಟೆಯನ್ನು ನೇಯ್ದು ಅದೇ ಬಟ್ಟೆಯನ್ನು ಊರಿಗೆ ಹೋಗಿ ಮಾರಿಕೊಂಡು ಬರುವುದು ಇದರಿಂದಾಗಿ ಇವರ ಸಂಸಾರವು ಚೆನ್ನಾಗಿ ನಡೆಯುತ್ತಿತ್ತು ನೇಕಾರ ತಾಳ್ಮೆ ಸ್ವಭಾವದವರು ಬಂದ ಹಣದಲ್ಲಿಯೇ ಸಂತೃಪ್ತಿಯಾಗಿ ಬದುಕುತ್ತಿದ್ದರು.

 ನೇಕಾರರು ಬಟ್ಟೆಯನ್ನು ನೇಯ್ದು ದಿನನಿತ್ಯದಂತೆ ಮಾರಾಟ ಮಾಡಲು ಹೋದರು ಆಗ ಒಬ್ಬ ಧಡೂತಿ ಯುವಕ ಬಂದನು ಅವನ ಶೈಲಿ ನೋಡಿದರೆ ಕೋಪಿಷ್ಟ ನೆಂದು ಮುಖದಿಂದಲೇ ಗೊತ್ತಾಗುತ್ತಿದೆ ನೇಕಾರರ ಬಳಿ ಬಂದ ತಕ್ಷಣ ಒಂದು ಬಟ್ಟೆಯನ್ನು ತೆಗೆದು ಕೊಂಡನು ಇದರ ಬೆಲೆ ಎಷ್ಟು ಎಂದು ಗತ್ತಿನಿಂದ ಹೇಳಿದನು.

 ನೇಕಾರರು ವಿನಯದಿಂದ ಇಪ್ಪತ್ತು ರೂಪಾಯಿ ಎಂದು ಹೇಳಿದರು ಆಗ ಅವನು ಆ ಬಟ್ಟೆಯನ್ನು ಅರ್ಧಕ್ಕೆ ಹರಿದನು ಈಗ ಈ ಬಟ್ಟೆಗೆ ಎಷ್ಟು ಬೆಲೆ ಎಂದು ಕೇಳಿದನು ಹತ್ತುರೂಪಾಯಿ ಎಂದು ಹೇಳಿದರು ಮತ್ತೆ ಅದರಲ್ಲಿ ಒಂದು ತುಂಡನ್ನು ತೆಗೆದುಕೊಂಡು ಮತ್ತೆ ಅದನ್ನು ಹರಿದನು.

 ಈಗ ಇದಕ್ಕೆ ಬೆಲೆ ಎಷ್ಟು ಎಂದು ಕೇಳಿದನು 5 ರೂಪಾಯಿ ಎಂದು ಹೇಳಿದರು ನಂತರ ಹೀಗೆ ಆ ಬಟ್ಟೆಯನ್ನು ಹರಿದು ಹರಿದು ಚಿಕ್ಕದಾಗಿ ಮಾಡಿಬಿಟ್ಟನು ನಂತರ ಇದಕ್ಕೆ ಎಷ್ಟು ಬೆಲೆ ಎಂದು ಕೇಳಿದನು ಆಗ ನೇಕಾರರವರು ವಿನಯದಿಂದ ಹೇಳಿದರು ಇದಕ್ಕೆ ಯಾವುದೇ ಬೆಲೆ ಇಲ್ಲ ಎಸೆಯುವಂಥದ್ದು.

 ಹರಿದ ಬಟ್ಟೆ ಯಾವುದಕ್ಕೂ ಉಪಯೋಗವಾಗುವುದಿಲ್ಲ ಎಂದು ಹೇಳಿದರು ಬೇಕಾದರೆ ನೀನೆ ತೆಗೆದುಕೊಂಡು ಹೋಗು ಎಂದರು ಆಗ ಆ ಯುವಕನಿಗೆ ಇವರ ತಾಳ್ಮೆ ನೋಡಿ ಕ್ಷಮಿಸಬೇಕು ಎಂದು ಕೇಳಿದನು ಆಗ ನೇಕಾರ ಅವರು ಹೇಳಿದರು.

 ಬಟ್ಟೆಗೆ ಇಪ್ಪತ್ತು ರೂಪಾಯಿ ಬೆಲೆ ಇರಬಹುದು ಆದರೆ ಅದರ ನಿಜವಾದ ಬೆಲೆಯನ್ನು ಕಟ್ಟಲು ಸಾಧ್ಯವಿಲ್ಲ ಏಕೆಂದರೆ ತುಂಬಾ ಕಷ್ಟಪಟ್ಟು ಮಾಡಿರುತ್ತಾರೆ ಒಬ್ಬ ರೈತನಾದವನು ಬಿಸಿಲು ಮಳೆ ಗಾಳಿ ಎನ್ನದೆ ಬೆಳೆ ಬೆಳೆಸುತ್ತಾನೆ ಬಹಳ ಕಷ್ಟ ಪಡುತ್ತಾನೆ ಅದಕ್ಕೆ ಬೆಲೆ ಕಟ್ಟಲು ಸಾಧ್ಯವೇ ಎಂದು ಕೇಳುತ್ತಾರೆ.

 ಈ ರೀತಿ ನೀನು ತುಂಡು ತುಂಡು ಮಾಡಿದ್ದೀಯಾ ಎಂದರೆ ಆ ಶ್ರಮಕ್ಕೆ ಬೆಲೆ ಇಲ್ಲದಂತಾಯಿತು ಎಂದು ತಾಳ್ಮೆಯಿಂದಲೇ ಹೇಳಿದರು.

ಆಗ ಯುವಕನು ಹೇಳಿದನು ನಾನು ಬಟ್ಟೆ ಹರಿಯುತ್ತಿರಬೇಕಾದರೆ ನೀವೇಕೆ ಕೋಪಗೊಳ್ಳಲಿಲ್ಲ ಆವಾಗಲೇ ಯಾಕೆ ಹೇಳಲಿಲ್ಲ ಎಂದು ಕೇಳಿದನು ನಾನು ಇಷ್ಟು ತಾಳ್ಮೆಯಿಂದ ಏಕೆ ಇದ್ದೆ ಎಂದರೆ ನಿನ್ನ ಕೋಪ ಹರಿದು ಹೋಗಲಿ ಎನ್ನುವ ಉದ್ದೇಶದಿಂದ ನಾನು ತಾಳ್ಮೆಯಿಂದ ಇದ್ದೆ ಎಂದು ಮೃದುವಾಗಿ ಹೇಳಿದರು.

 ತಾಳ್ಮೆಯಲ್ಲಿ ಹೇಡಿಯ ತಾಳ್ಮೆ ಬೇರೆ ಧೀರರ ತಾಳ್ಮೆ ಬೇರೆ ತಾಳ್ಮೆಯಿಂದ ಇದ್ದು ಸರಿಯಾದ ಸಮಯಕ್ಕೆ ಸರಿಯಾಗಿ ಬಳಸಿಕೊಳ್ಳಬೇಕು ಒಂದು ಬುಟ್ಟಿ ಎಷ್ಟು ಬುದ್ಧಿ ಇರುವುದಕ್ಕಿಂತ ಒಂದು ಹಿಡಿಯಷ್ಟು ತಾಳ್ಮೆ ಇದ್ದರೆ ಸಾಕು ಸಂತೃಪ್ತಿಯಾಗಿ ಬದುಕಬಹುದು. ನನ್ನಲ್ಲಿ ತಾಳ್ಮೆ ಎಷ್ಟಿದೆ?

 ಅವರಂತೆ ಅವರ ಪ್ರಾರ್ಥನೆ

ಹರ್ ದೀಪ್ ಪ್ರಾಮಾಣಿಕ ವ್ಯಕ್ತಿ ಬೆಳಿಗ್ಗೆ ಎದ್ದ ನಂತರ ನನ್ನ ಬದುಕಿಗೆ ಎಷ್ಟು ಬೇಕೋ ಅಷ್ಟು ಸಿಕ್ಕರೆ ಸಾಕು ಎಂದು ಪ್ರಾರ್ಥನೆ ಮಾಡುತ್ತಿದ್ದನು.

ಒಂದು ಸಾರಿ ವ್ಯಾಪಾರ ಮುಗಿಸಿ ಬರಬೇಕಾದರೆ ಕೆಲವು ದರೋಡೆಕೋರರು ಅವನನ್ನು ತಡೆಹಿಡಿದು ನಿನ್ನಲ್ಲಿರುವ ಎಲ್ಲಾ ಹಣವನ್ನು ಕೊಟ್ಟರೆ ಸರಿ ಇಲ್ಲದಿದ್ದರೆ ನಿಮಗೆ ಗ್ರಹಚಾರ ತಪ್ಪಿದ್ದಲ್ಲ ಎಂದು ಹೇಳಿದರು.

 ಆ ವ್ಯಾಪಾರಿಯು ಏನೂ ಮಾತನಾಡದೆ ತನ್ನಲ್ಲಿ ಇಟ್ಟಿದ್ದ ಹಣ ಮತ್ತು ಪರ್ಸನ್ನು ಕೊಡುತ್ತಾನೆ ಮತ್ತೆ ಊರಿಗೆ ಬಂದ ತಕ್ಷಣ ಸ್ವಲ್ಪ ಹೊತ್ತು ಪ್ರಾರ್ಥನೆ ಮಾಡಿ ಬಂದನು ದಿನವೂ ಬೇಗ ಬರುತ್ತಿದ್ದೀರಿ

ಇಂದು ಏಕೆ ತಡವಾಗಿ ಬಂದಿದ್ದೀರಿ ಎಂದು ಹೆಂಡತಿ ಕೇಳಿದಳು.ನಡೆದ ಕಥೆಯನ್ನು ಹೇಳಿದನು ನೀವು ದೂರು ಕೊಡ ಬಹುದಾಗಿತ್ತು ಅದರ ಬದಲು ನೀವು ಪ್ರಾರ್ಥನೆ ಮಾಡಿ ಬಂದಿದ್ದೀರಿ ಎಂದು ಕೇಳಿದಳು.

  ವ್ಯಾಪಾರಿಯು ನಾನು ಪ್ರಾರ್ಥನೆ ಸಲ್ಲಿಸುವುದಕ್ಕಾಗಿ ಕಾರಣಗಳು ಇವೆ ಇವತ್ತು ನಾನು ಮರೆತು ಹೆಚ್ಚಿನ ಹಣವನ್ನು ತೆಗೆದುಕೊಂಡು ಹೋಗಿರಲಿಲ್ಲ ಮತ್ತೆ ಇವತ್ತು ಅಷ್ಟು ವ್ಯಾಪಾರವು ಕೂಡ ಆಗಲಿಲ್ಲ ಮತ್ತೆ ದರೋಡೆಕೋರರು ಕೂಡ ನನ್ನನ್ನು ಯಾವುದೇ ರೀತಿಯ ಅನಾಹುತ ಮಾಡಲಿಲ್ಲ ಮರಳಿ ಮನೆಗೆ ಬಂದಿದ್ದೇನೆ ಆದುದರಿಂದ ಪ್ರಾರ್ಥನೆ ಸಲ್ಲಿಸಿದೆ ಎಂದನು.

ವೇಷಕ್ಕೆ ತಕ್ಕಂತೆ ನಿರ್ಧಾರ

ನಟರಾಜ್ ಎಂಬುವರು ನಾಟಕ ಕಂಪೆನಿಯ ಮಾಲೀಕರಾಗಿದ್ದರು ಇವರು ಎಲ್ಲಾ ಕೆಲಸಗಳನ್ನು ನಿಭಾಯಿಸುತ್ತಿದ್ದರು ಯಾವುದೇ ನಟನೆ ಕೊಟ್ಟರು ಅವರು ಅಷ್ಟೇ ಚೆನ್ನಾಗಿ ಅಭಿನಯಿಸುತ್ತಿದ್ದರು ಆದರೆ ಇವರು ಚಿಕ್ಕ ಚಿಕ್ಕ ಕೆಲಸಕ್ಕೂ ತುಂಬ ದೊಡ್ಡದಾಗಿ ಯೋಚನೆ ಮಾಡುತ್ತಿದ್ದರು ಹಾಗಾಗಿ ಇವರು ಕೆಲವು ಚಿಕ್ಕ ಚಿಕ್ಕ ಕೆಲಸಗಳನ್ನು ಕಳೆದುಕೊಂಡಿದ್ದರು.

 ಚಿಕ್ಕ ಚಿಕ್ಕ ಕೆಲಸಗಳಿಗೂ ತುಂಬಾ ಸಮಯವನ್ನು ತೆಗೆದುಕೊಳ್ಳುತ್ತಿದ್ದರು ಇವರ ಬಳಿ ಕೆಲಸ ಮಾಡುವವರು ಕೂಡ ತುಂಬಾ ಹೆದರಿಕೆಯಿಂದ ಇರುತ್ತಿದ್ದರು ಯಾವ ರೀತಿ ಕೆಲಸ ಮಾಡಿದರೆ ಇಷ್ಟಪಡುತ್ತಾರೋ ಇಲ್ಲವೋ ಎಂಬ ಭಯ ಇದ್ದೇ ಇತ್ತು. ಹೆಜ್ಜೆ ಹೆಜ್ಜೆಗೂ ತಪ್ಪು ಕಂಡು ಹಿಡಿಯುತ್ತಿದ್ದರು.

 ಒಂದು ಸಾರಿ ಒಂದು ನಾಟಕ ಮಾಡಬೇಕಾಗಿರುತ್ತದೆ ಆ ನಾಟಕದಲ್ಲಿ ಇವರೇ ಮುಖ್ಯ ನಟರು ಇವರ ಪಾತ್ರ ಏನು ಎಂದರೆ ಮಿಲಿಟರಿ ಜನರಲ್ ಮೆನೇಜರ್ ಇವರು ನಾಟಕಕ್ಕೆ ತುಂಬಾ ಚೆನ್ನಾಗಿ ಅಭ್ಯಾಸ ಮಾಡಿದರು ನಾಟಕಕ್ಕಾಗಿ ಸಿದ್ಧವಾದರು.

 ಇನ್ನೂ ಸ್ವಲ್ಪ ಸಮಯವಿದೆ ಎನ್ನುವಷ್ಟರಲ್ಲಿ ಮನೆಯಿಂದ ಒಂದು ದೂರವಾಣಿ ಕರೆ ಬಂತು ನಟರಾಜ್ ಅವರ  ಪತ್ನಿಯವರು ಒಂದು ಮನೆಯನ್ನು ನೋಡಿದ್ದೇನೆ ಅದನ್ನು ನೀವು ನೋಡಿ ಖರೀದಿ ಮಾಡಬೇಕು ಇಲ್ಲದಿದ್ದರೆ ಕೈತಪ್ಪಿ ಹೋಗುವ ಸಾಧ್ಯತೆ ಇದೆ ಆದುದರಿಂದ ನೀವು ಬರಲೇಬೇಕು ಎಂದು ಬೇಡಿಕೊಂಡರು.

 ಜನರಲ್ ಆಗಿದ್ದ ವ್ಯಕ್ತಿ ತಕ್ಷಣ ಮನೆಗೆ ಹೋಗಿ ಆ ಮನೆ ನೋಡಿ ಆಗಷ್ಟೇ ಮನೆಗೆ ಅಡ್ವಾನ್ಸ್ ನೀಡಿ ಮರಳಿ ಬಂದು ನಾಟಕವನ್ನು ಕೂಡ ಯಶಸ್ವಿಯಾಗಿ ಅಭಿನಯಿಸಿದರು ಆಗ ಪತ್ನಿಗೆ ಹಾಗೂ ಈ ಕೆಲಸದವರಿಗೆ ತುಂಬಾ ಆಶ್ಚರ್ಯವಾಯ್ತು.

 ನೀವು ಹೇಗೆ ಇಷ್ಟು ಬೇಗ ನಿರ್ಧಾರವನ್ನು ತೆಗೆದುಕೊಂಡಿದ್ದೀರಿ ಮೊದಲು ಒಂದು ಚಿಕ್ಕ ನಿರ್ಧಾರವನ್ನು ತೆಗೆದುಕೊಳ್ಳಿ ಎಂದರೆ ಬೇಕಾದಷ್ಟು ಸಮಯವನ್ನು ತೆಗೆದುಕೊಳ್ಳುತ್ತಿದ್ದಿರಿ ಈಗ ನೀವು ತಕ್ಷಣಕ್ಕೆ ನಿರ್ಧಾರವನ್ನು ಮಾಡಿದ್ದೀರಿ ಇದು ಹೇಗೆ ಸಾಧ್ಯ ಎಂದು ಕೇಳಿದರು.

 ನಾನು ಜನರಲ್ ವೇಷ ಧರಿಸಿ ಆ ವೇಷಕ್ಕೆ ತಕ್ಕಂತೆ ನಿರ್ಧಾರ ಮಾಡಿದ್ದೇನೆ ಮೇಜರ್ ಆದವರು ತಕ್ಷಣವೇ ನಿರ್ಧಾರ ತೆಗೆದುಕೊಳ್ಳಬೇಕು ಇಲ್ಲದಿದ್ದರೆ ತುಂಬಾ ನಷ್ಟವಾಗುತ್ತದೆ ಅದೇ ರೀತಿ ನಾನು ಹಾಕಿಕೊಂಡಿರುವ ಬಟ್ಟೆಯ ಪ್ರಭಾವ ಎಂದು ಹೇಳಿದರು.

ಕಷ್ಟಗಳು ಸಮಸ್ಯೆಗಳು ಬಂದಾಗ

ನಾವು ಹಲವಾರು ಆಶಾವಾದಿಗಳನ್ನು ನೋಡಿದ್ದೇವೆ ಕೇಳಿದ್ದೇವೆ ಆದರೆ ಅದರಲ್ಲಿ ನೆಲ್ಸನ್ ಮಂಡೇಲಾ ಅವರನ್ನು ಮರೆಯುವ ಹಾಗಿಲ್ಲ ಏಕೆಂದರೆ ಇವರು 27ವರ್ಷಗಳ ಕಾಲ ಜೈಲಿನಲ್ಲಿ ಕಳೆದವರು ಡಿ ವರ್ಗದ ಖೈದಿಯಾಗಿ ಜೀವಾವಧಿ ಶಿಕ್ಷೆಗೆ ಗುರಿಯಾದರು.

 ಒಂಟಿಯಾಗಿ ಇರಬೇಕು 6ತಿಂಗಳಿಗೆ ಒಂದು ಸಾರಿ ಮಾತ್ರ ಯಾರಾದರೂ ಭೇಟಿ ಮಾಡಬಹುದು ಬೇರೆ ವ್ಯಕ್ತಿಗಳು ಈ ಸ್ಥಿತಿಯಲ್ಲಿ ಇದ್ದಿದ್ದರೆ ಯಾವ ರೀತಿ ಇರುತ್ತಿದ್ದರು ಎನ್ನುವುದು ತಿಳಿಯದು ಆದರೆ ಮಂಡೇಲಾ ಅವರು ಸಕಾರಾತ್ಮಕ ಭಾವನೆ ಇತ್ತು (ಪಾಸಿಟಿವ್ ಥಿಂಕಿಂಗ್) ನಾನು ಈ ಜೈಲಿನಿಂದ ಹೊರಗೆ ಬಂದು ನಾನು ನೆಮ್ಮದಿಯಿಂದ ಒಳ್ಳೆಯ ಜೀವನ ನಡೆಸುತ್ತೇನೆ ಎಂಬ ಅಚಲವಾದ  ನಂಬಿಕೆ ಇತ್ತು ಆಶಾವಾದಿಯಾಗಿದ್ದರು.

ಇವರು ಜೈಲಿನಲ್ಲಿ ಇರಬೇಕಾದರೆ ಲಂಡನ್ ವಿಶ್ವವಿದ್ಯಾಲಯದಿಂದ ಕಾನೂನು ಅಧ್ಯಯನ ಮಾಡಿದರು ಅಂತರರಾಷ್ಟ್ರೀಯ ಮಟ್ಟದಲ್ಲಿ ಇವರು ಹೆಸರು ಮಾಡಿದರು ನಂತರ ಬಿಡುಗಡೆಯಾಗಿ ತಮ್ಮ ದೇಶಕ್ಕೆ ಸೇವೆಯನ್ನು ಸಲ್ಲಿಸಿದರು ಮಂಡೇಲಾ ಅವರು ಆರು ಅಡಿ ಎರಡು ಇಂಚ್ ಇದ್ದರು ಜೈಲಿನಲ್ಲಿ ಇದ್ದ ಕೊಠಡಿ ಆರು ಅಡಿ ಮಾತ್ರ ಇತ್ತು ಶಿಕ್ಷೆ ಮುಗಿಯುವವರೆಗೂ ಅಲ್ಲೇ ಕಳೆದಿದ್ದಾರೆ ಹೇಗೆ ಕಳೆದಿರಬಹುದು ಇದು ಸಾಧ್ಯವಾದುದು ಇವರ ಸಕಾರಾತ್ಮಕ ಆಲೋಚನೆಯಿಂದ ನಮಗೆ ಕಷ್ಟಗಳು ಸಮಸ್ಯೆಗಳು ಬಂದಾಗ ಸಕರಾತ್ಮಕವಾಗಿ ಆಲೋಚಿಸೋಣ.

1990 ರಲ್ಲಿ ದಕ್ಷಿಣ ಆಫ್ರಿಕಾದ ರಾಷ್ಟ್ರಪತಿ ಯಾದರು ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆದರು ತಾವು ಇರುವವರೆಗೂ ಎಲ್ಲರಿಗೂ ಸೇವೆಯನ್ನು ಸಲ್ಲಿಸಿದರು.

]]>
https://babakategalu.com/%e0%b2%85%e0%b2%a6%e0%b2%b2%e0%b3%81-%e0%b2%ac%e0%b2%a6%e0%b2%b2%e0%b3%81-%e0%b2%ae%e0%b2%be%e0%b2%a1%e0%b2%bf%e0%b2%a6%e0%b3%8d%e0%b2%a6%e0%b3%87%e0%b2%a8%e0%b3%86/feed/ 0
ಚಿಲ್ಲರೆ ಕಾಸಿನಲ್ಲಿಯೇ https://babakategalu.com/%e0%b2%9a%e0%b2%bf%e0%b2%b2%e0%b3%8d%e0%b2%b2%e0%b2%b0%e0%b3%86-%e0%b2%95%e0%b2%be%e0%b2%b8%e0%b2%bf%e0%b2%a8%e0%b2%b2%e0%b3%8d%e0%b2%b2%e0%b2%bf%e0%b2%af%e0%b3%87/ https://babakategalu.com/%e0%b2%9a%e0%b2%bf%e0%b2%b2%e0%b3%8d%e0%b2%b2%e0%b2%b0%e0%b3%86-%e0%b2%95%e0%b2%be%e0%b2%b8%e0%b2%bf%e0%b2%a8%e0%b2%b2%e0%b3%8d%e0%b2%b2%e0%b2%bf%e0%b2%af%e0%b3%87/#respond Sun, 13 Apr 2025 04:40:00 +0000 https://babakategalu.com/?p=276 Read more]]> ಏಳು ವರ್ಷ ತುಂಬಿದ ರಮನ್ ಹುಡುಗನ ಏಳನೇ ವರ್ಷದ ಹುಟ್ಟುಹಬ್ಬವೂ ತುಂಬಾ ಅದ್ದೂರಿಯಾಗಿ ಆಚರಿಸಿದರು. ನಂತರ ಹುಡುಗನು ಎಲ್ಲರ ಉಡುಗೊರೆಯನ್ನು ತೆಗೆದು ಒಂದೊಂದಾಗಿ (ಚೆಕ್ ಮಾಡುತ್ತಾ) ಪರಿಶೀಲಿಸುತ್ತಾ ಬಂದನು ಯಾರ್ಯಾರು ನನಗೆ ಏನು ಕೊಟ್ಟಿದ್ದಾರೆ ಎಂದು ನೋಡುತ್ತಿದ್ದನು ವಾರಿಜ್ ಅಜ್ಜನವರು ಒಂದು ಕವರ್ ನಲ್ಲಿ ಚಿಕ್ಕ ಪೇಪರ್ ಗಳನ್ನು ಇಟ್ಟಿದ್ದರು ಇದನ್ನು ನೋಡಿ ಹುಡುಗ ಕೋಪದಿಂದ ಬಿಸಾಕಿದನು.

 ಹುಡುಗನ ತಂದೆ ತಾಯಿ ಆ ಪೇಪರನ್ನು ನೋಡಿ ಹರ್ಷಗೊಂಡರು ಆಗ ಮಗುವಿಗೆ ಹೇಳಿದರೂ ಅಜ್ಜನಿಗೆ ಹೋಗಿ ನಮಸ್ಕಾರ ಮಾಡಿ ತಪ್ಪಾಯ್ತು ಎಂದು ಕೇಳು ಎಂದಾಗ ಹುಡುಗನು ತಂದೆ ತಾಯಿಯ ಮಾತು ಕೇಳಲೇಬೇಕು ಆದುದರಿಂದ ಅಜ್ಜನ ಹತ್ತಿರ ಹೋಗಿ ಸುಮ್ಮನೆ ನಿಂತನು.

 ಅಜ್ಜನವರು ಅರ್ಥಮಾಡಿಕೊಂಡು ಹುಡುಗನಿಗೆ ಒಂದು ಮುಷ್ಟಿಯಷ್ಟು ನಾಣ್ಯಗಳು ಕೊಟ್ಟರು ಈ ನಾಣ್ಯಗಳನ್ನು ಹಿಡಿದುಕೊಂಡು ತುಂಬ ಸಂತೋಷಪಟ್ಟನು ಹಿಗ್ಗಿ ಹಿಗ್ಗಿ ಕುಣಿದನು ತನ್ನ ಸ್ನೇಹಿತರಿಗೆ ಎಲ್ಲರಿಗೂ ಹೇಳಿದನು ನನಗೆ ನಮ್ಮ ಅಜ್ಜನವರು ಕೈ ತುಂಬಾ ನಾಣ್ಯಗಳು ಕೊಟ್ಟಿದ್ದಾರೆ ಏನು ಬೇಕಾದರೂ ನಾನು ತಿನ್ನಬಹುದು ಎಂದನು.

 ತಂದೆ ತಾಯಿ ಆ ಪೇಪರಲ್ಲಿ ಏನು ಇದೆ ಎಂದು ನೋಡಿದರೆ ಒಂದು ದೊಡ್ಡ ಬಿಲ್ಡಿಂಗನ್ನು ಹುಡುಗನ ಹೆಸರಿಗೆ ಬರೆದಿದ್ದರು. ಮಗುವಿಗೆ ಅರ್ಥವಾಗಲಿಲ್ಲ ಮಗುವಿಗೆ ಚಿಲ್ಲರೆ ಕಾಸಿನಲ್ಲಿಯೇ ತುಂಬಾ ಸಂತೋಷವಿದೆ. ನನಗೆ ಯಾವುದರಲ್ಲಿ ಸಂತೋಷವಿದೆ?

ಪ್ರಶ್ನೆಗಳನ್ನು ಕೇಳಲೇ ಬೇಕು

ಒಂದು ಶಾಲೆಯಲ್ಲಿ ವಿಜ್ಞಾನದ ಅಚ್ಚುಮೆಚ್ಚಿನ ಲಿಕುಲಿಶ್ ಶಿಕ್ಷಕರು ಇದ್ದರು  ತುಂಬಾ ಒಳ್ಳೆಯ ವ್ಯಕ್ತಿತ್ವ ಇವರು ಪಾಠ ಮಾಡಿದರೆ ಎಲ್ಲರೂ ಆಕರ್ಷಿತರಾಗುತ್ತಿದ್ದರು ಏನೇ ಹೇಳಿದರೂ ಅದು ಸರಿಯಾಗಿ ಅರ್ಥವಾಗುವಂತೆ ಹೇಳುತ್ತಿದ್ದರು.

  ಸಾಧ್ಯವಾದಷ್ಟು ಚಟುವಟಿಕೆ ಕೊಟ್ಟು ಹೊಸ ಹೊಸ ಪ್ರಯೋಗಗಳನ್ನು ಮಾಡಿಸುತ್ತಿದ್ದರು ಒಂದು ದಿನ ತರಗತಿಗೆ ಬಂದಾಗ ಅವರ ಕೈಯಲ್ಲಿ ಒಂದು ಚಿಕ್ಕ ತಲೆಬುರುಡೆ ಇತ್ತು ಇದನ್ನು ನೋಡಿದ ಎಲ್ಲರಿಗೂ ತುಂಬಾ ಆಶ್ಚರ್ಯವಾಯ್ತು ಆ ತಲೆಬುರುಡೆಯನ್ನು ತೋರಿಸಿ ಎಲ್ಲರಿಗೂ ಕೇಳಿದರು.

 ಇದು ಯಾವ ಪ್ರಾಣಿಯ ಬುರುಡೆ ಎಂದಾಗ ಒಬ್ಬ ಮನುಷ್ಯನದು ಇನ್ನೊಬ್ಬ ಕೋತಿಯದು ಮತ್ತೊಬ್ಬ ಕರಡಿಯದು ಹೀಗೆ ಅವರ ಮನಸ್ಸಿಗೆ ಬಂದಂತೆ ಉತ್ತರಗಳನ್ನು ಕೊಟ್ಟರು ಕೊನೆಗೆ ಶಿಕ್ಷಕರು ಹೇಳಿದರು ನೀವು ಹೇಳಿದ ಯಾವುದೇ ಪ್ರಾಣಿಯ ತಲೆಬುರುಡೆ ಅಲ್ಲ ಎಂದು ಹೇಳಿದರು.

  ಈ ಪ್ರಾಣಿಯ ಹೆಸರು ಡ್ರಾಗನ್ ಈ ಪ್ರಾಣಿ ಇಪ್ಪತ್ತು ಸಾವಿರ ವರ್ಷಗಳ ಹಿಂದೆಯೇ ಬದುಕುತ್ತಿತ್ತು ನಂತರ ನಂತರ ಇದರ ಸಂತತಿ ಕ್ರಮೇಣ ಕಡಿಮೆಯಾಗುತ್ತಾ ಬಂತು ಈ ಪ್ರಾಣಿಯ ಲಕ್ಷಣಗಳು ತುಂಬಾ ವಿಚಿತ್ರ ವಾಗಿವೆ ಈ ಪ್ರಾಣಿಗೆ 4 ಕಾಲುಗಳು ಇದ್ದರೂ ಇದಕ್ಕೆ ಬಾಲವು ತುಂಬಾ ಉದ್ದವಾಗಿತ್ತು.

 ಹಾಗೆಯೇ 2ರೆಕ್ಕೆಗಳು ಕೂಡ ಇತ್ತು ಗಾಳಿಯಲ್ಲಿಯೂ ಕೂಡ ಇದು ಹಾರಿ ಬೇಟೆ ಆಡುತ್ತಿತ್ತು ಇದರ ಕಣ್ಣುಗಳು ತುಂಬಾ ಸೂಕ್ಷ್ಮವಾಗಿ ಇರುತ್ತಿತ್ತು ರಾತ್ರಿಯೂ ತುಂಬ ಚೆನ್ನಾಗಿ ಬೇಟೆಯಾಡುತ್ತಿತ್ತು ಹೀಗೆ ಇನ್ನೂ ಹಲವಾರು ಗುಣ ಲಕ್ಷಣಗಳನ್ನು ಹೇಳಿದರು ನಂತರ ಆ ತಲೆ ಬುರುಡೆಯನ್ನು ನೋಡಲು ಮುಟ್ಟಲು ಅವಕಾಶ ಮಾಡಿಕೊಟ್ಟರು.

 ಎಲ್ಲಾ ವಿದ್ಯಾರ್ಥಿಗಳಿಗೂ ತುಂಬಾ ಸಂತೋಷವಾಯ್ತು ಹೊಸದಾದ ಪ್ರಾಣಿಯ ಬಗ್ಗೆ ತಿಳಿದುಕೊಂಡೆವು ಎಂದು ಆನಂದಿಸಿದರು ಮಾರನೇ ದಿನ ಶಿಕ್ಷಕರು ಬಂದು ಅದರ ಬಗ್ಗೆ ಮೂವತ್ತು ನಿಮಿಷದ ಪ್ರಶ್ನೆ ಪತ್ರಿಕೆಯನ್ನು ಕೊಟ್ಟು ಕೆಲವು ಪ್ರಶ್ನೆಗಳನ್ನು ಕೇಳಿದರು ಪಾಠವು ಚೆನ್ನಾಗಿ ಅರ್ಥಮಾಡಿಕೊಂಡಿದ್ದರಿಂದ ವಿದ್ಯಾರ್ಥಿಗಳು ಸರಿಯಾದ ಉತ್ತರವನ್ನು ಬರೆದಿದ್ದರು.

ಶಿಕ್ಷಕರು ಬಂದು ಎಲ್ಲಾ ಉತ್ತರ ಪತ್ರಿಕೆಗೆ ಸೊನ್ನೆ ಅಂಕವನ್ನು ಕೊಟ್ಟರು ಆಗ ಎಲ್ಲ ವಿದ್ಯಾರ್ಥಿಗಳು ಗಾಬರಿಯಾದರು ಏಕೆ ಸೊನ್ನೆ ಅಂಕಗಳು ನೀಡಿದ್ದೀರಿ ಎಂದಾಗ ಶಿಕ್ಷಕರು ಹೇಳಿದ್ರು ನೀವೆಲ್ಲಾ ಬುದ್ಧಿವಂತರು ಅಲ್ಲ ವಿಜ್ಞಾನ ಕಲಿಯುವವರು ಯಾವಾಗಲೂ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳುತ್ತಾರೆ.

ನೀವು ನಿನ್ನೆ ನನಗೆ ಒಂದು ಪ್ರಶ್ನೆಯು ಕೇಳಲಿಲ್ಲ ನಾನು ಏನೇನು ಹೇಳಿದನೋ ಅದನ್ನು ಎಲ್ಲವೂ ಕೇಳಿಸಿಕೊಂಡಿದ್ದೀರಿ ನಾನು ಹಳೆ ಪ್ರಾಣಿ ಎಂದು ಹೇಳಿದೆ ಗಿಳಿಯಂತೆ ಬಾಯಿಪಾಠ ಕೇಳಿದ್ದೀರಿ ಅದರ ಸಂತತಿ ನಶಿಸಿ ಹೋಯಿತು ಎಂದು ಕೇಳಲಿಲ್ಲ ಮತ್ತೆ ನಿಮಗೆ ಈ ತಲೆಬುರುಡೆ ಎಲ್ಲಿ ಸಿಕ್ಕಿತು ಎಂದು ಕೂಡ ಕೇಳಲಿಲ್ಲ.

 ವಿಜ್ಞಾನದಲ್ಲಿ ಬದುಕಿನಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಲೇಬೇಕು ಇಲ್ಲದಿದ್ದರೆ ಏನು ಕಲಿಯುವುದಿಲ್ಲ ಎಂದು ಹೇಳಿದರು ಯಾರು ಏನೇ ಹೇಳಿದರೂ ಯಾವುದು ಸರಿ ಯಾವುದು ತಪ್ಪು ಎಂಬ ವಿವೇಚನೆ ಬೆಳೆಸಿಕೊಳ್ಳೋಣ.

ಸಾವಿನಿಂದ ಗೆದ್ದು ಬಂದಿದ್ದೇನೆ

ಸದಮಲ್ ಆಚಾರ್ಯರು ತುಂಬಾ ಬಡತನದಲ್ಲಿ ಬೆಳೆದು ಕಷ್ಟಪಟ್ಟು ಸಂಪಾದನೆ ಮಾಡಿ ಒಂದು ಆಸ್ತಿಯನ್ನು ಖರೀದಿಸಿದರು ಮೊದಲು ಆಸ್ತಿ ಖರೀದಿಸಿದ ನಂತರ ಪಿಂಚಿನ್ ಕಟ್ಟಬೇಕು ಸುತ್ತ ಬೇಲಿ ಹಾಕಬೇಕು ಈ ಕೆಲಸ ಮಾಡಿಸಬೇಕು ಎಂದು ಹುಡುಕುತ್ತಿರುತ್ತಾರೆ.

 ಅಷ್ಟರಲ್ಲಿಯೇ ಒಲುಮಶ್ ಕಂಟ್ರ್ಯಾಕ್ಟರ್ ಬರ್ತಾನೆ ನಾನು ನಿಮ್ಮ ಕೆಲಸವನ್ನು ಮಾಡಿ ಕೊಡುತ್ತೇನೆ ನನಗೆ ಇಪ್ಪತ್ತೈದು ಪರ್ಸೆಂಟ್ ಹಣ ಕೊಡಿ ನಂತರ ಎಪ್ಪತ್ತೈದು ಕೊಡಿ ಎಂದು ನಯವಾಗಿ ಕೇಳುತ್ತಾನೆ ಆಚಾರ್ಯರು ಅದಕ್ಕೆ ಒಪ್ಪಿಕೊಳ್ಳುತ್ತಾರೆ ಮಾರನೆಯ ದಿನವೇ ಬಂದು ಸ್ವಲ್ಪ ಕೆಲಸವನ್ನು ಮುಗಿಸುತ್ತಾನೆ.

ಕಂಟ್ರ್ಯಾಕ್ಟರ್ ಕಣ್ಣಿಗೆ ಕಾಣುವುದೇ ಇಲ್ಲ ನಂತರ ವಿಚಾರಿಸಿದರೆ ಇವನು ನಂಬರ್ ವನ್ ಕಂತ್ರಿ ಆಗಿರುತ್ತಾನೆ ಕೆಲವು ತಿಂಗಳ ನಂತರ ಬರುತ್ತಾನೆ ಬಂದವನೇ ಇನ್ನೂ ಐವತ್ತು ಪರ್ಸೆಂಟ್ ಹಣವನ್ನು ಕೊಡಿ ನಾಳೆ ಕೆಲಸ ಆರಂಭಿಸುತ್ತೇನೆ ಎಂದು ಕೇಳುತ್ತಾನೆ. ನೀನು ಕೆಲಸವೇ ಮುಗಿಸಿಲ್ಲ ಹೇಗೆ ಹಣ ಕೊಡುವುದು ಎಂದು ಹೇಳಿದಾಗ  ಕಂಟ್ರ್ಯಾಕ್ಟರ್ ಗತ್ತಿನಿಂದ ನಾನು ಯಾರು ಗೊತ್ತೆ ನಾನು ಆ ಹಳ್ಳಿಯ ಶ್ರೀಮಂತನನ್ನು ಚಾಕು ಹಾಕಿದ್ದೇನೆ ಆ ಊರಿನ ವ್ಯಕ್ತಿಗೆ ಹೊಡೆದಿದ್ದೇನೆ ಯಾವ ಪೋಲಿಸ್ ಠಾಣೆಗೆ ಹೋದರು ನನ್ನದೇ ನಡೆಯುವುದು ಹೀಗೆಲ್ಲಾ ಹರಿಕಥೆ ಹೇಳಿದನು.

ಆಚಾರ್ಯರು ನಗುತ್ತಾ ನಿನ್ನ ಬಗ್ಗೆ ನನಗೆ ಈಗ ತಿಳಿಯಿತು ನಂತರ ತಮ್ಮ ಬ್ಯಾಗಿನಲ್ಲಿ ಚೂಪಾದ ಚಾಕುವನ್ನು ತೆಗೆದು ಹೇಳಿದರೂ ಇದು ಚೂಪಾಗಿ ಇದೆಯಾ ನೋಡು ನೀನು ಚಾಕುವೂ ಕೂಡ ತಂದಿಲ್ಲ ಮತ್ತೆ ಈಗಾಗಲೇ ನಾನು 3 ಸಾರಿ ಸಾವಿನಿಂದ ಗೆದ್ದು ಬಂದಿದ್ದೇನೆ.

 ಸಾವಿಗೆ ಅಂಜಬಾರದು ಅದೇ ರೀತಿ ನಾನು ಬದುಕುತ್ತಿರುವವನು ನಾನು ಇಲ್ಲಿಯವರೆಗೆ ಎಲ್ಲಾ ಕೆಲಸವನ್ನು ಮಾಡಿ ಮುಗಿಸಿದ್ದೇನೆ ಸತ್ತರೂ ನನಗೆ ಯಾವುದೇ ನಷ್ಟವಿಲ್ಲ ಎಂದು ಹೇಳಿ ಚಾಕು ತೆಗೆದುಕೊಂಡು ಚುಚ್ಚು ಎಂದರು ಇಷ್ಟು ನಿರ್ಭಯವಾಗಿ ಹೇಳಿದಾಗ ಕಂಟ್ರ್ಯಾಕ್ಟರ್ ಆಶ್ಚರ್ಯಚಕಿತನಾದ.

ಕಂಟ್ರ್ಯಾಕ್ಟರ್ ನನ್ನನ್ನು ಕ್ಷಮಿಸಿ ಎಂದು ಕೇಳಿದ ಬಾಕಿ ಕೆಲಸ ಆರಂಭಿಸಿದನು ನಾವು ಹೆದರಿದರೆ ಹೆದರಿಸುವವರು ತುಂಬಾ ಜಾಸ್ತಿ ಇರುತ್ತಾರೆ ಯಾರ ಜೊತೆ ಹೇಗೆ ಇರಬೇಕು ಎಂದು ಮೊದಲೇ ಅರಿತು ಎಚ್ಚರಿಕೆಯಿಂದ ಬದುಕೋಣ.

ಭಯಾನಕ ಪರಿಸ್ಥಿತಿಯಲ್ಲೂ

ಒಂದು ಊರಿನಲ್ಲಿ ಬಲ್ವಾನ್ ಅಗರ್ಭ ಶ್ರೀಮಂತ ಇರುತ್ತಾನೆ ಶ್ರೀಮಂತನಿಗೆ ಜಮೀನು ಹೊಲ ಗದ್ದೆ ತೋಟ ಮನೆ ಕೆಲವು ಪ್ರಾಣಿಗಳು ಕೂಡ ಇರುತ್ತವೆ ಇವನ ಹತ್ತಿರ ಕೆಲವು ದಿನ ಕೆಲಸ ಮಾಡಿದರೆ ಸಂಬಳ ಪಡೆದ ನಂತರ ಮತ್ತೆ ಕೆಲಸಗಾರರು ಬರುತ್ತಿರಲಿಲ್ಲ ಇವನು ಕೆಲಸಗಾರರಿಗೆ ಹುಡುಕುತ್ತಿರುತ್ತಾನೆ.

 ಇಂಥ ಪರಿಸ್ಥಿತಿಯಲ್ಲಿ ಒಬ್ಬ ಯುವಕ ಕೆಲಸವನ್ನು ಕೇಳಿಕೊಂಡು ಬರುತ್ತಾನೆ ಆಗ ಶ್ರೀಮಂತನು ಎಲ್ಲವನ್ನು ವಿವರಿಸುತ್ತಾನೆ ನಂತರ ಯುವಕ ಹೆಚ್ಚು ಸಂಬಳವನ್ನು ನಿರೀಕ್ಷೆ ಮಾಡುತ್ತಾನೆ ಆಗ ಶ್ರೀಮಂತ ಏನಾದರೂ ಹೋದರೆ ನಿನದೆ ಜವಾಬ್ದಾರಿ ನೀನು ಕಟ್ಟಿ ಕೊಡಬೇಕು ಎಂದಾಗ ಅದಕ್ಕೆ ಯುವಕನು ಭಯಾನಕ ಪರಿಸ್ಥಿತಿಯಲ್ಲಿ ನಾನು ಸುಖವಾಗಿ ಇರುತ್ತೇನೆ ನೀವು ಹೆದರಿಕೊಳ್ಳಬೇಡಿ ಎಂದು ಹೇಳುತ್ತಾನೆ.

ಶ್ರೀಮಂತ ಯಾರೂ ಕೆಲಸಕ್ಕೆ ಸಿಗುತ್ತಿಲ್ಲ ಇವನೆ ಗತಿಯೆಂದು ಯುವಕನನ್ನು ಬೇರೆ ದಾರಿ ಇಲ್ಲದೆ ಸೇರಿಸಿಕೊಳ್ಳುತ್ತಾನೆ. ದಿನನಿತ್ಯವೂ ಇವನ ಕೆಲಸವನ್ನು ಗಮನಿಸುತ್ತಾರೆ ಕೆಲಸವನ್ನು ಸಮಯಕ್ಕೆ ಸರಿಯಾಗಿ ಚಾಣಾಕ್ಷತನದಿಂದ ಪ್ರಾಮಾಣಿಕವಾಗಿ ಶ್ರದ್ಧೆ ಭಕ್ತಿಯಿಂದ ಕೆಲಸವನ್ನು ಮಾಡುತ್ತಿರುತ್ತಾನೆ.

ಒಂದು ರಾತ್ರಿ ತುಂಬಾ ಜೋರಾಗಿ ಬಿರುಗಾಳಿ ಜೊತೆಗೆ ಧಾರಾಕಾರವಾಗಿ ಮಳೆ ಬರುತ್ತಿರುತ್ತದೆ. ಯುವಕನನ್ನು ನೋಡಿದ್ರೆ ಆರಾಮಾಗಿ ಮಲಗಿರುತ್ತಾನೆ ಶ್ರೀಮಂತ ನೋಡಿ ಕೆಲಸ ಮಾಡುವ ಸಮಯದಲ್ಲಿ ನಿದ್ದೆ ಮಾಡುತ್ತಿದ್ದೀಯಾ ಎಂದು ಇವನನ್ನು ಕೆಲಸದಿಂದ ಓಡಿಸಬೇಕು ಎಂದು ಮನದಲ್ಲಿ ಅಂದುಕೊಳ್ಳುತ್ತಾನೆ ಆಗ ಯುವಕನು ನಿಶ್ಚಿಂತೆಯಿಂದ ಮಾಲೀಕರೇ ನೀವು ಯಾವುದಕ್ಕೂ ಚಿಂತೆ ಮಾಡಬೇಡಿ ನಾನು ಎಲ್ಲವನ್ನು ಭದ್ರಪಡಿಸಿದ್ದೇನೆ ಎಂದು ಹೇಳುತ್ತಾನೆ ನಂತರ ಹೋಗಿ ಶ್ರೀಮಂತನು ನೋಡಿದನು.

  ಮನೆಯ ಕಿಟಕಿ ಬಾಗಿಲುಗಳು ಸರಿಯಾಗಿ ಮುಚ್ಚಿದನು ಯಾವುದೇ ರೀತಿ ನೀರು ಬರಲು ಸಾಧ್ಯವಿರಲಿಲ್ಲ ಆಚೆ ಕುರಿಗಳು ಒಂದು ಕಡೆ ಭದ್ರವಾಗಿ ಕಟ್ಟಿದನು ನೀರು ಜಾಸ್ತಿ ಬಂದು ಸೇರಿದರು ಅದಕ್ಕೆ ಸರಿಯಾದ ವ್ಯವಸ್ಥೆ ಮಾಡಿದನು ನಂತರ ಶ್ರೀಮಂತನಿಗೆ ಅರ್ಥವಾಯ್ತು ಇವನು ಸಂಬಳ ಹೆಚ್ಚಾಗಿ ಏಕೆ ಕೇಳಿದನೆಂದು ಅರಿವಾಯಿತು. ಎಲ್ಲರು ಒಪ್ಪುವಂತೆ ನಾವು ಕೆಲಸ ಮಾಡೋಣ. ನಾನು ಸಂಬಳ ಪಡೆಯುವಷ್ಟು ನಿಯತ್ತಾಗಿ ಕೆಲಸ ಮಾಡುತ್ತಿದ್ದೇನೆಯೇ?

ನಾನು ಸ್ಟಾರ್ಟ್ ಮಾಡಬಲ್ಲೆ

ನಾವೆಲ್ಲರೂ ಸೇರಿ ಶಾಲೆಯ ವಾರ್ಷಿಕೋತ್ಸವಕ್ಕೆ ಹೋಗಿದ್ದೆವು ವಾರ್ಷಿಕೋತ್ಸವ ತುಂಬಾ ಚೆನ್ನಾಗಿ ನಡೆಯಿತು ಎಲ್ಲವೂ ಮುಗಿದ ಬಳಿಕ ನನ್ನ ಸ್ನೇಹಿತನ ಬೈಕ್ ನ್ನು ಸ್ಟಾರ್ಟ್ ಮಾಡಿದರೆ ಸ್ಟಾರ್ಟ್ ಆಗುತ್ತಿರಲಿಲ್ಲ ಅದರಲ್ಲಿ ಇನ್ನೊಬ್ಬನು ಆಟೊಮೊಬೈಲ್ ಇಂಜಿನಿಯರಿಂಗ್ ಆಗಿದ್ದನು.

 ಅವನಿಗೆ ಎಲ್ಲವೂ ಗೊತ್ತು   ಬೋರ್ ಎಂದರೇನು ಆಕ್ಸಲ್ ಅಂದರೇನು ಇಂಜಿನ್ ಹೇಗಿರುತ್ತೆ ಹೇಗೆ ಕೆಲಸ ಮಾಡುತ್ತೆ ಎಲ್ಲವೂ ಗೊತ್ತು ಆದರೆ ಬೈಕ್ ಸ್ಟಾರ್ಟ್ ಮಾಡಲು ಆಗುತ್ತಿಲ್ಲ ಶತ ಪ್ರಯತ್ನ ಪಟ್ಟಿದ್ದ ಮೇಲೂ ಆಗಲಿಲ್ಲ ಅಷ್ಟರಲ್ಲಿ ವಿಕ್ಷಾತ್ ವಿದ್ಯಾರ್ಥಿ ಬಂದನು.

  ಅವನು ಓದುವುದರಲ್ಲಿ ಗಣಿತದಲ್ಲಿ ಎಲ್ಲದರಲ್ಲೂ ಹಿಂದೆಯೇ ಎಂದು ಹೇಳಬೇಕು ಅವನ ಬಂದು ನೋಡಿದ ತಕ್ಷಣ ಸರ್ ನೀವು ಈ ಕಡೆ ಬನ್ನಿ ನಾನು ಸ್ಟಾರ್ಟ್ ಮಾಡಬಲ್ಲೆ ಎಂದನು ಅವನ ಉತ್ಸಾಹ ನೋಡಿ ನಾವು ಬಿಟ್ಟೆವು ಒಂದು ಕಡೆ ನೋಡಿದನು ನಂತರ ಒಂದು ವೈರನ್ನು ತೆಗೆದು ಡೈರಕ್ಟ್ ಮಾಡಿದನು.

 ನಂತರ ಸ್ಟಾರ್ಟ್ ಮಾಡಿದ್ರೆ ಸ್ಟಾರ್ಟ್ ಆಯ್ತು ಆಗ ಹುಡುಗನಿಗೆ ಕೇಳಿದರೆ ಹೇಗೆ ಸ್ಟಾರ್ಟ್ ಆಯಿತು ಎಂದು ಕೇಳಿದೆವು ಇಗ್ನೇಷನ್ ಹೋಗಿದೆ ಅದಕ್ಕೆ ನಾನು ಡೈರೆಕ್ಟಾಗಿ ಸ್ಟಾರ್ಟ್ ಮಾಡಿದ್ದೇನೆ ಎಂದು ಹೇಳಿದನು ತುಂಬ ಸುಲಭವಾಗಿ ಮಾಡಿದನು ನಿನಗೆ ಹೇಗೆ ಗೊತ್ತು ಎಂದು ಕೇಳಿದವು ಸರ್ ನಮ್ಮ ತಂದೆ ಮೆಕಾನಿಕ್ ಆಗಿರುವುದರಿಂದ ನನಗೆ ಈ ಕೆಲಸ ಗೊತ್ತು ಎಂದು ಹೇಳಿದನು.

ನನ್ನ ಸ್ನೇಹಿತ ಇಂಜಿನಿಯರ್ ಆಗಿದ್ದರೂ ಅವನಿಗೆ ಎಲ್ಲಾ ಗೊತ್ತಿದ್ದರೂ ಕೂಡ ಬೈಕನ್ನು ಸ್ಟಾರ್ಟ್ ಮಾಡಲು ಸಾಧ್ಯವಾಗಲಿಲ್ಲ ಆದರೆ ಹುಡುಗ ಅಷ್ಟು ಓದಿಲ್ಲದಿದ್ದರೂ ಐದೇ ನಿಮಿಷಕ್ಕೆ ಬೈಕನ್ನು ಸ್ಟಾರ್ಟ್ ಮಾಡಿದನು ಇವನಿಗೆ ವಿದ್ಯೆ ಇದೆ ಅವನಿಗೆ ಜ್ಞಾನ ಇದೆ ಅನುಭವವಿದೆ ಜ್ಞಾನವೇ ಬೇರೆ ವಿದ್ಯಾಭ್ಯಾಸವೇ ಬೇರೆ ವಿದ್ಯೆಯನ್ನು ಕಲಿಯುವುದರ ಜೊತೆ ಜೊತೆಗೆ ಜ್ಞಾನ ಹಾಗೂ ಕೌಶಲ್ಯಗಳನ್ನು ಕಲಿಯುತ್ತಿರೋಣ.

]]>
https://babakategalu.com/%e0%b2%9a%e0%b2%bf%e0%b2%b2%e0%b3%8d%e0%b2%b2%e0%b2%b0%e0%b3%86-%e0%b2%95%e0%b2%be%e0%b2%b8%e0%b2%bf%e0%b2%a8%e0%b2%b2%e0%b3%8d%e0%b2%b2%e0%b2%bf%e0%b2%af%e0%b3%87/feed/ 0
ನಾನೇ ಹೆಚ್ಚು ಮಾತನಾಡುತ್ತಿದ್ದೆ https://babakategalu.com/%e0%b2%a8%e0%b2%be%e0%b2%a8%e0%b3%87-%e0%b2%b9%e0%b3%86%e0%b2%9a%e0%b3%8d%e0%b2%9a%e0%b3%81-%e0%b2%ae%e0%b2%be%e0%b2%a4%e0%b2%a8%e0%b2%be%e0%b2%a1%e0%b3%81%e0%b2%a4%e0%b3%8d%e0%b2%a4%e0%b2%bf%e0%b2%a6/ https://babakategalu.com/%e0%b2%a8%e0%b2%be%e0%b2%a8%e0%b3%87-%e0%b2%b9%e0%b3%86%e0%b2%9a%e0%b3%8d%e0%b2%9a%e0%b3%81-%e0%b2%ae%e0%b2%be%e0%b2%a4%e0%b2%a8%e0%b2%be%e0%b2%a1%e0%b3%81%e0%b2%a4%e0%b3%8d%e0%b2%a4%e0%b2%bf%e0%b2%a6/#respond Sat, 12 Apr 2025 04:40:00 +0000 https://babakategalu.com/?p=274 Read more]]> ಊರಿನಲ್ಲಿ ಒಬ್ಬ ವಜ್ರವೀರ್ ವಾಚಾಲಿ ವ್ಯಕ್ತಿ ಇದ್ದನು ದಿನನಿತ್ಯ ಪಕ್ಕದ ಮನೆಯವನ ಜೊತೆ ಜಗಳವಾಡುತ್ತಿದ್ದನು ಇದರಿಂದ ಬೇಸರಗೊಂಡು ವ್ಯಕ್ತಿ ಬಾಬಾ ಅವರ ಬಳಿಗೆ ಬಂದು ಹೇಳಿದನು ನನ್ನ ಪಕ್ಕದ ಮನೆಯವನು ದಿನನಿತ್ಯ ನನ್ನ ಜೊತೆ ಜಗಳವಾಡುತ್ತಾನೆ ಇದಕ್ಕೆ ಏನಾದರೂ ಪರಿಹಾರ ತಿಳಿಸಿ ಎಂದು ಬೇಡಿಕೊಂಡನು.

ಬಾಬಾ ಅವರು ನೀನು ಹೆದರುವ ಅವಶ್ಯಕತೆ ಇಲ್ಲ ನಾನು ನಿನಗೆ ಒಂದು ಔಷಧಿಯನ್ನು ಕೊಡುತ್ತೇನೆ ಯಾವಾಗ ಜಗಳ ಆಡಲಿಕ್ಕೆ ಬರುತ್ತಾನೋ ಆಗ ನೀನು ನಾನು ಕೊಟ್ಟ ಔಷಧಿಯನ್ನು ಬಾಯಲ್ಲಿ ಹಾಕಿಕೊಂಡಿರು.

 ಆ ವ್ಯಕ್ತಿ ಮಾತು ನಿಲ್ಲಿಸಿದಾಗ ಬಾಯಲ್ಲಿ ಇರುವ ನೀರನ್ನು ಮುಕ್ಕಳಿಸಿ ಮರದ ಕೆಳಗೆ ಉಗಿದು ಬಿಡು ಎಂದು ಹೇಳಿದರು ಈ ವ್ಯಕ್ತಿ ಔಷಧಿಯನ್ನು ಪಡೆದುಕೊಂಡು ಹೋದನು ನಂತರ ಆ ವ್ಯಕ್ತಿ ಮಾತನಾಡಲಿಕ್ಕೆ ಬಂದಾಗ ಔಷಧಿಯನ್ನು ಬಾಯಲ್ಲಿ ಹಾಕಿಕೊಂಡು ಇರುತ್ತಿದ್ದನು.

 ಪಕ್ಕದ ಮನೆಯವನು ಮಾತನಾಡಿ ಮಾತನಾಡಿ ಕೊನೆಗೆ ನಾನು ಮಾತನಾಡುವುದು ಒಳ್ಳೆಯದಲ್ಲ ಎಂದು ಅವನೇ ಸುಮ್ಮನಾಗಿ ಬಿಟ್ಟನು ಇದರಿಂದಾಗಿ ದಿನನಿತ್ಯದ ಜಗಳದ ಸಮಸ್ಯೆಯು ಪರಿಹಾರವಾಯಿತು ನಂತರ ಬಾಬಾ ಅವರಿಗೆ ಹೇಳಿದನು ನೀವು ಹೇಳಿದಂತೆ ನಾನು ಮಾಡಿದೆ ಈಗ ಜಗಳವಾಗುತ್ತಿಲ್ಲ ಎಂದು ಸಂತೋಷದಿಂದ ಹೇಳಿದನು.

ನನಗೆ ಇನ್ನೂ ಸ್ವಲ್ಪ ಔಷಧಿಯನ್ನು ಕೊಡಿ ಎಂದು ಕೇಳಿದನು. ಆಗ ಬಾಬಾ ಅವರು ನಗುತ್ತಾ ಹೇಳಿದರು ನಾನು ನಿನಗೆ ಕೊಟ್ಟಿದ್ದು ಉಪ್ಪಿನ ನೀರು ಮಾತ್ರ ನೀನು ಇದನ್ನು ಬಾಯಲ್ಲಿ ಹಾಕಿ ಮುಕ್ಕಳಿಸಿದರೆ ಬಾಯಲ್ಲಿ ಇರುವ ಕ್ರಿಮಿ ಕೀಟಗಳು ಸಾಯುತ್ತವೆ ಹಾಗೆಯೇ ನೀನು ಬಾಯಲ್ಲಿ ನೀರು ಹಾಕಿಕೊಂಡಿದ್ದರೆ ನೀನು ಮಾತನಾಡಲು ಸಾಧ್ಯವಿಲ್ಲ.

 ನೀನು ಕೂಡ ಹೆಚ್ಚಾಗಿ ಮಾತಿಗೆ ಮಾತು ಬೆಳೆಸಿಕೊಂಡು ಮಾತನಾಡುತ್ತಿದ್ದೆ ಇದರಿಂದ ಜಗಳವಾಗುತ್ತಿತ್ತು ಎಂದು ಹೇಳಿದರು ಆಗ ವಾಚಾಲಿಗೆ ಅರ್ಥವಾಯಿತು ನಾನೇ ಹೆಚ್ಚು ಮಾತನಾಡುತ್ತಿದ್ದೆ ಇದರಿಂದಾಗಿ ಜಗಳ ಆಗುತ್ತಿತ್ತು ಎಂದು ಅರ್ಥಮಾಡಿಕೊಂಡನು ಜಗಳ ಆದಾಗ ಯಾರಾದರೂ ಒಬ್ಬರು ಮೌನವಾಗಿದ್ದರೆ ಸಾಕು, ಜಗಳ ತಾನೇ ತಾನಾಗಿ ಕಡಿಮೆಯಾಗುತ್ತದೆ.

ನಿನ್ನ ಜೊತೆ ಬರಲಾರೆ

ಒಂದು ಆಶ್ರಮದಲ್ಲಿ ಮಂಥನ್ ಗುರು ಶಿಷ್ಯರು ಎಲ್ಲರೂ ಸೇರಿ ಚರ್ಚಿಸುತ್ತಿದ್ದರು ಆಗ ಮಂಥನ್ ಗುರುಗಳು ಒಂದು ಪ್ರಶ್ನೆಯನ್ನು ಕೇಳುತ್ತೇನೆ ಅದಕ್ಕೆ ಯಾರು ಸರಿಯಾದ ಉತ್ತರವನ್ನು ಹೇಳಬಲ್ಲಿರಾ ಎಂದು ಕೇಳಿದರು ಶಿಷ್ಯರು ಎಲ್ಲರೂ ನಾವು ಹೇಳುತ್ತೇವೆ ಎಂದು ಕೈಯೆತ್ತಿದರು.

 ಒಬ್ಬ ಮನುಷ್ಯ ಸ್ವಲ್ಪವೇ ದಿನ ಬದುಕುತ್ತಾನೆ ನಂತರ ಅವನು ಸಾಯುತ್ತಾನೆ ಅವನಿಗೆ ತುಂಬಾ ಭಯ ಆಗುತ್ತಿದೆ ಅದಕ್ಕಾಗಿ ಅವನು ನನ್ನ ಜೊತೆ ಯಾರು ಬರುತ್ತಾರೆ ಎಂದು ಮೊದಲಿಗೆ ಒಬ್ಬ ಸ್ನೇಹಿತನ ಬಳಿ ಹೋದ ಆಪ್ತಮಿತ್ರನೇ ನಾನು ಕೆಲವೇ ದಿನಗಳಲ್ಲಿ ಸಾಯುತ್ತಿದ್ದೇನೆ ಆದುದರಿಂದ ನನಗೆ ಭಯವಾಗುತ್ತಿದೆ ಎಂದು ಹೇಳಿದನು.

ಆಪ್ತಮಿತ್ರನ ಹೇಳಿದನು ನೀನು ಯಾವುದೇ ಕಾರಣಕ್ಕೂ ಹೆದರುವ ಅವಶ್ಯಕತೆ ಇಲ್ಲ ನಾನು ನಿನ್ನ ಜೊತೆಗೆ ಸದಾ ಇರುತ್ತೇನೆ ಎಂದು ಭರವಸೆ ನೀಡಿದನು ಆಪ್ತಮಿತ್ರನೇ ಹಾಗಲ್ಲ ನಾನು ಸಾಯುವುದು ನಿಜ ನನ್ನ ಜೊತೆಯೇ ನೀನು ಇರಬೇಕು ನೀನು ನನ್ನ ಜೊತೆ ಸಾಯಬೇಕು ಎಂದು ಬೇಡಿಕೊಂಡನು.

 ಸ್ನೇಹಿತ ಹೆದರಿಕೊಂಡು ಹೇಳಿದನು ನಾನು ನಿನ್ನ ಆಪ್ತಮಿತ್ರನೇ ಸರಿ ಆದ್ರೆ ನಾನು ನಿನಗೆ ಸ್ಮಶಾನದವರೆಗೂ ಬರಬಹುದು ನಿನಗೆ ಒಳ್ಳೆಯ ಒಂದು ಸಮಾಧಿಯನ್ನು ಕೂಡ ಕಟ್ಟಬಹುದು ಒಳ್ಳೆಯ ಸುಂದರವಾದ ಬಟ್ಟೆಯನ್ನು ಬೇಕಾದರೆ ಕೊಡಬಲ್ಲೆ ಆದ್ರೆ ನಾನು ನಿನ್ನ ಜೊತೆ ಬರಲಾರೆ ಎಂದು ಹೇಳಿದ.

ಈತನಿಗೆ ತುಂಬ ದುಃಖವಾಯಿತು ನಂತರ ಎರಡನೆಯ ಸ್ನೇಹಿತನ ಹತ್ತಿರ ಹೋದನು ಇದೇ ರೀತಿ ಹೇಳಿದನು ಆಗ ಆ ಸ್ನೇಹಿತನ ಹೇಳಿದನು ನಾನು ನೀನು ಸ್ನೇಹಿತನೇ ನಿಜ ಆದರೆ ನಾನು ನಿನ್ನನ್ನು ಸತ್ತ ಮೇಲೆ ಹೆಗಲ ಮೇಲೆ ಹಾಕಿಕೊಂಡು ಹೊತ್ತಿಕೊಂಡು ಸ್ಮಶಾನದ ವರೆಗೂ ಬರಬಹುದು.

 ನಿನ್ನ ಜೊತೆ ನಾನು ಹೇಗೆ ಬರಲು ಸಾಧ್ಯ ಎಂದು ಹೇಳಿದನು ಇವನ ದುಃಖ ಇನ್ನಷ್ಟು ಇಮ್ಮಡಿಯಾಯ್ತು ನಂತರ ಮೂರನೆಯ ಮಿತ್ರನ ಹತ್ತಿರ ಹೋದನು ಇವನು ಇದೆ ಹೇಳುವವನೆಂಬ ನಂಬಿಕೆ ಇತ್ತು ಇರಲಿ ಹೇಳೋಣ ಎಂದು ಇದೇ ರೀತಿ ಅವನು ವಿವರಿಸಿದನು.

 ಮೂರನೆಯ ಮಿತ್ರ ಹೇಳಿದನು ನೀನು ಯಾವುದೇ ಕಾರಣಕ್ಕೂ ಹೆದರುವ ಅವಶ್ಯಕತೆಯಿಲ್ಲ ನಾನು ನಿನ್ನ ಜೊತೆ ಜೊತೆಯಾಗಿ ಇರುತ್ತೀನಿ ಎಂದನು ಆಗ ಇವನಿಗೆ ತುಂಬ ಖುಷಿಯಾಯಿತು ಗುರುಗಳು ನಂತರ ಶಿಷ್ಯರಿಗೆ ಕೇಳಿದರು ಮೂರು ಸ್ನೇಹಿತರು ಯಾರು ಯಾರು ಎಂದು ಹೇಳಬಹುದೇ ಎಂದು ಕೇಳಿದರು ಶಿಷ್ಯರಿಗೆ ಅರ್ಥವಾಗಲಿಲ್ಲ ಗಡಿಬಿಡಿ ಆಯಿತು.

 ಯಾರು ನಿಜವಾದ ಸ್ನೇಹಿತರು ಇದ್ದಾರೆ? ಯಾರೂ ಉತ್ತರಿಸಲಿಲ್ಲ ಆಗ ಗುರುಗಳೇ ಇದಕ್ಕೆ ಉತ್ತರಿಸಿದರು ಮೊದಲನೆಯ ಸ್ನೇಹಿತ ಹಣ ನಿಮಗೋಸ್ಕರ ಸ್ಮಶಾನದಲ್ಲಿ ಒಳ್ಳೆಯ ಸ್ಥಳ ಬಟ್ಟೆ ಹೂವು ಕೊಡಿಸಬಹುದಾಗಿದೆ.

  ಎರಡನೆಯ ಸ್ನೇಹಿತ ಹೆಂಡತಿ ಮಕ್ಕಳು ಮತ್ತು ಸಂಸಾರ ಹಾಗೂ ಸಂಬಂಧಿಕರು ಇವರು ನೀವು ಸತ್ತಾಗ ಸ್ಮಶಾನದವರೆಗೆ ಹೊತ್ತುಕೊಂಡು ಬರಬಹುದು ಮೂರನೆಯ ಸ್ನೇಹಿತ ಯಾರು ಎಂದರೆ ನೀವು ಮಾಡಿದ ಕರ್ಮಗಳು ದಾನ ಧರ್ಮಗಳು ಪುಣ್ಯಗಳು ನೀವು ಸತ್ತ ನಂತರವೂ ನಿಮ್ಮನ್ನು ಹಿಂಬಾಲಿಸಿಕೊಂಡು ಬರುತ್ತದೆ ಎಂದು ಹೇಳಿದರು.

ಎಲ್ಲೆಲ್ಲೋ ಓಡಿಹೋಗುತ್ತಿದೆ

ನನ್ನ ಸ್ನೇಹಿತ ಹೇಳಿದ ಒಂದು ಘಟನೆ ಪಾನಿಪುರಿ ತಿನ್ನಲಿಕ್ಕೆ ಹೋದಾಗ ಬಿಲ್ಲನ್ನು ಪಡೆದು ಇವರ ಸರದಿಗಾಗಿ ಕಾಯುತ್ತಿದ್ದರು ಅಷ್ಟರಲ್ಲಿ ಎಂಬತ್ತು ವರ್ಷ ಇರುವ ಸುನೇಹ್ ವೃದ್ಧರು ಬಂದರು.

 ಅವರು ಏನೂ ಮಾತನಾಡದೆ ಪೂರಿಗಳನ್ನು ತೆಗೆದುಕೊಂಡು ತಿನ್ನುತ್ತಿದ್ದಾರೆ ಇದನ್ನು ನೋಡಿದಾಗ ಸ್ನೇಹಿತನಿಗೆ ತುಂಬಾ ಬೇಜಾರಾಯ್ತು ನೋಡಿದರೆ ಒಳ್ಳೆಯ ಬಟ್ಟೆ ಹಾಕಿಕೊಂಡಿದ್ದಾರೆ ಇಷ್ಟು ವಯಸ್ಸಾಗಿದೆ ಆದರೂ ಹೀಗೇಕೆ ಮಾಡುತ್ತಿದ್ದಾರೆ.

ಆ ಪಾನಿಪುರಿ ಮಾರುವವನನ್ನು ಕೇಳಿದರೆ ಅವನು ಸನ್ನೆಯಿಂದ ಹೇಳಿದ ಸುಮ್ಮನೆ ಇರಿ ಎಂದನು ನಮಗೆ ಏಕೆ ಬೇರೆಯವರ ವಿಚಾರ ಎಂದು ಸುಮ್ಮನಾದವು ನಂತರ ನಮ್ಮ ಸರದಿ ಬಂತು ಎಲ್ಲರೂ ಪಾನಿಪುರಿ ಮಸಾಲೆಪುರಿ ತೆಗೆದುಕೊಂಡು ತಿಂದು ಮುಗಿಸುತ್ತಿದ್ದೆವು.

 ಇನ್ನೇನು ಹೋಗಬೇಕು ಎನ್ನುವಷ್ಟರಲ್ಲಿ ಒಬ್ಬ ವ್ಯಕ್ತಿ ಸುಚಿರಾಯಸ್  ಕಾರಿನಲ್ಲಿ ಬಂದನು ಆ ವ್ಯಕ್ತಿಯು ಪಾನಿಪುರಿ ಮಾಲೀಕನ ಬಳಿಹೋಗಿ ದುಡ್ಡು ಎಷ್ಟಾಯ್ತು ಎಂದು ದುಡ್ಡನ್ನು ಕೊಟ್ಟನು.

 ಈ ವ್ಯಕ್ತಿ ವೃದ್ಧರು ನಿಮಗೆ ಏನಾಗಬೇಕು ಎಂದಾಗ ವ್ಯಕ್ತಿ ಹೇಳಿದನು ಅವರು ನಮ್ಮ ತಂದೆ ಅವರಿಗೆ ಮಾನಸಿಕ ಕಾಯಿಲೆ ಇದೆ ಆಗಾಗ ಅವರು ಮರೆತು ಬಿಡುತ್ತಾರೆ ಅಲ್ಜಿಮರ್ ಇದೆ ಇದಕ್ಕೆ ಸರಿಯಾದ ಔಷಧಿ ಇಲ್ಲ ನಾನೂ ಕೂಡ ಕೆಲಸ ಮಾಡಿಕೊಂಡು ಇದ್ದೇನೆ.

 ಫುಲ್ ಟೈಮ್ ಇವರಿಗೆ ನೋಡಿಕೊಳ್ಳಲು ನನಗೆ ಸಾಧ್ಯವಿಲ್ಲ ಕೆಲವು ಸಾರಿ ಹೀಗೂ ಆಗುವುದುಂಟು ಎಂದು ಹೇಳಿದರು ನಂತರ ಅದು ಸರಿ ನಿಮ್ಮ ತಂದೆಯನ್ನು ನೀವು ಹೇಗೆ ಹುಡುಕಿಕೊಂಡು ಇಲ್ಲಿಗೆ ಸರಿಯಾಗಿ ಬಂದಿದ್ದೀರಿ ಎಂದು ಕೇಳಿದರು ಆಗ ಅವರು ಹೇಳಿದರು ನಾನು ಚಿಕ್ಕವನಾಗಿ ಇದ್ದಾಗ ನಾನು ಮನೆ ಬಿಟ್ಟು ಆಟ ಆಡಲಿಕ್ಕೆ ಎಲ್ಲೆಲ್ಲೋ ಓಡಿಹೋಗುತ್ತಿದೆ ತಂದೆ ಮನೆಗೆ ಬಂದರೂ ನಾನು ಬರುತ್ತಿರಲಿಲ್ಲ.

 ನಾನು ಬರಲಿಲ್ಲ ಎಂದರೆ ತಾಯಿ ಆತಂಕದಿಂದ ಇದ್ದು ತಂದೆಗೆ ಹೇಳುತ್ತಿದ್ದರು ಆಗ ನಮ್ಮ ತಂದೆ ಡ್ಯೂಟಿ ಮಾಡಿ ಸುಸ್ತಾಗಿದ್ದರೂ ಕೂಡ ತಾಯಿಯ ಅಳು ನೋಡಲಾರದೆ ನನ್ನನ್ನು ಹುಡುಕಿಕೊಂಡು ಬರುತ್ತಿದ್ದರು.

 ನಾನು ತುಂಬಾ ತುಂಟನಾಗಿದ್ದೆ ಒಂದು ಸರಿ ಬೀದಿಯಲ್ಲಿ ಒಂದು ಸಾರಿ ಮಾರ್ಕೆಟ್ ನಲ್ಲಿ ಇನ್ನೊಂದು ಸರಿ ಸಂತೆಯಲ್ಲಿ ಇರುತ್ತದೆ ನಮ್ಮ ತಂದೆ ಸರಿಯಾಗಿ ನನ್ನನ್ನು ಹುಡುಕಿಕೊಂಡು ಬರುತ್ತಿದ್ದರು.

 ಅವರು ನನಗೆ ತುಂಬಾ ಕಷ್ಟದಿಂದ ಹುಡುಕುತ್ತಿದ್ದರು ಆದರೆ ಈಗ ನಾನು ತುಂಬಾ ಸುಲಭವಾಗಿ ತಂದೆಯವರನ್ನು ಹುಡುಕುತ್ತೇನೆ ಈಗ ಹೊಸ ಟೆಕ್ನಾಲಜಿ ಇದೆ ಅವರ ಹತ್ತಿರ ಒಂದು ಮೊಬೈಲನ್ನು ಫುಲ್ ಚಾರ್ಜ್ ಮಾಡಿ ಇಟ್ಟಿದ್ದೇನೆ ಇವರು ಎಲ್ಲೇ ಹೋದರೂ ನನಗೆ ಗೊತ್ತಾಗುತ್ತದೆ ಅದರಂತೆ ನಾನು ಬಂದು ಇವರನ್ನು ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿ ತಂದೆಯನ್ನು ಕಾರಿನಲ್ಲಿ ಕೂರಿಸಿಕೊಂಡು ಹೋದನು.

ಮೊಬೈಲ್ ಕಳ್ಳ

ಒಂದು ಶಾಲೆಯಲ್ಲಿ ನಡೆದ ಘಟನೆ ಶಾಲೆಗೆ ವಿದ್ಯಾರ್ಥಿಗಳು ಮೊಬೈಲ್ ತರಬಾರದು ಈ ನಿಯಮವನ್ನು ಎಲ್ಲರೂ ಸಾಮಾನ್ಯವಾಗಿ ಪಾಲನೆ ಮಾಡುತ್ತಾರೆ ಸಾಕೇತ್ ವಿದ್ಯಾರ್ಥಿ ಮಾತ್ರ ಒಂದು ದಿನ ಅವರ ತಾಯಿ ಕೆಲಸಕ್ಕೆ ಹೋಗುತ್ತಾರೆ ಬರಬೇಕಾದರೆ ಸ್ವಲ್ಪ ತಡವಾಗಬಹುದು ಎಂದು ವಿದ್ಯಾರ್ಥಿಗೆ ಮೊಬೈಲನ್ನು ಕೊಟ್ಟು ಕಳುಹಿಸುತ್ತಾರೆ.

 ಆಗ ಆ ವಿದ್ಯಾರ್ಥಿಯು ಶಿಕ್ಷಕರಿಂದ ಅನುಮತಿ ಪಡೆದು ತನ್ನ ಬ್ಯಾಗಿನಲ್ಲಿ ಮೊಬೈಲ್ ಇಟ್ಟಿರುತ್ತಾನೆ ಬೇರೆ ಚಟುವಟಿಕೆ ಇರುವುದರಿಂದ ಎಲ್ಲ ಬ್ಯಾಗುಗಳನ್ನು ಮೈದಾನಕ್ಕೆ ತೆರಬೇಕಾಗಿರುತ್ತದೆ ಆಗ ಆ ಹುಡುಗನ ಮೊಬೈಲ್ ಕೆಳಗೆ ಬೀಳುತ್ತದೆ ನಂತರ ಒಬ್ಬ ವಿದ್ಯಾರ್ಥಿ ಮೊಬೈಲ್ ನೋಡಿ ಆ ಮೊಬೈಲನ್ನು ಪ್ರಿನ್ಸಿಪಾಲರಿಗೆ ಕೊಡುತ್ತಾನೆ ಪ್ರಿನ್ಸಿಪಾಲ್ ಅವರು ಇವನ ಪ್ರಾಮಾಣಿಕತೆ ನೋಡಿ ಒಂದು ಬುಕ್ಕನ್ನು ಬಹುಮಾನವಾಗಿ ನೀಡುತ್ತಾರೆ.

  ಇದನ್ನು ನೋಡಿದ ಒಬ್ಬ ಹುಡುಗ ಇವನನ್ನು ಮೊಬೈಲ್ ಕಳ್ಳ ಎಂದು ಹೇಳುತ್ತಾನೆ ಕೆಲವರ ಗುಣ ಬೇರೆಯವರನ್ನು ಸಿಕ್ಕಿಸಿ ಆನಂದ ಪಡುವುದು ಅಷ್ಟರಲ್ಲಿ ಸುದ್ದಿ ಹಬ್ಬಿ ಮೊಬೈಲ್ ಕಳ್ಳ ಎಂದು ಹೇಳುತ್ತಿರುತ್ತಾರೆ ನಂತರ ಶಾಲೆಗೆ ಬರುತ್ತಾನೆ ಆವಾಗ ಶಿಕ್ಷಕರು ಕೂಡ ಮೊಬೈಲ್ ಕಳ್ಳ ಎಂದು ಹೇಳುತ್ತಾರೆ ಆಗ ಹುಡುಗನಿಗೆ ಕೋಪ ಬಂದು ನೀನು ದೊಡ್ಡ ಕಳ್ಳ ಎಂದು ಏಕ ವಚನದಲ್ಲಿ ಹೇಳುತ್ತಾರೆ.

 ಅದೇ ಕೊನೆಯ ದಿನ ನಂತರ ಅವನು ಶಾಲೆಗೆ ಬರುವುದಿಲ್ಲ ಪ್ರಿನ್ಸಿಪಾಲರು ಹುಡುಗ ಏಕೆ ಶಾಲೆಗೆ ಬರುತ್ತಿಲ್ಲ ಎಂದು ವಿಚಾರಿಸಿದಾಗ ಈ ಘಟನೆ ತಿಳಿಯುತ್ತದೆ.

 ಶಾಲೆ ಬಿಡಲು ಯಾರು ಕಾರಣಕರ್ತರು ಕೆಲವು ಸಾರಿ ಕೂಲಂಕುಷವಾಗಿ ಪರೀಕ್ಷೆ ಮಾಡದೆ ನೇರವಾಗಿ ಹೇಳುವುದು ತಪ್ಪಲ್ಲವೇ ಯಾರನ್ನೇ ನಾವು ಏನೇ ಹೇಳಬೇಕಾದರೂ ಸರಿಯಾದ ಮಾಹಿತಿ ತಿಳಿದು ಹೇಳುವುದು ಒಳ್ಳೆಯದು ಇಲ್ಲದಿದ್ದರೆ ವಿದ್ಯಾರ್ಥಿಗಳ ಭವಿಷ್ಯವೇ ಹಾಳಾಗುತ್ತದೆ.

ಶಿಕ್ಷಕರೇ ಆಗಿರಬಹುದು ವಿದ್ಯಾರ್ಥಿ ಗಳೇ ಆಗಿರಬಹುದು ಇತರರು ಯಾರೇ ಆಗಿರಬಹುದು ಯಾವುದೇ ಕಾರಣಕ್ಕೂ ಬಯ್ಯುವ ಮೊದಲು ಆರೋಪಿಸುವ ಮೊದಲು ಸರಿಯಾದ ಮಾಹಿತಿಯನ್ನು ತಿಳಿದ ನಂತರವೇ ಹೇಳೋಣ. 

ಉತ್ತಮ ಮನುಷ್ಯ ಯಾರು?

ಒಂದು ಊರಿನಲ್ಲಿ ಒಂದು ದೊಡ್ಡ ಆಶ್ರಮ ಇರುತ್ತದೆ ಆ ಆಶ್ರಮದಲ್ಲಿ ಹೋಗಿ ಸೇರಬೇಕಾದರೆ ಶುಭಗಿಂದ್ರ ಗುರುಗಳು ಕೆಲವು ಪ್ರಶ್ನೆಗಳನ್ನು ಕೇಳುತ್ತಿದ್ದರು ಆ ಪ್ರಶ್ನೆಗಳಿಗೆ ಉತ್ತರ ನೀಡಬೇಕು ಉತ್ತರ ಸರಿಯಾಗಿದ್ದರೆ ಅವರನ್ನು ಸೇರಿಸಿಕೊಳ್ಳುತ್ತಿದ್ದರು ಇಲ್ಲದಿದ್ದರೆ ಮತ್ತೆ ಬನ್ನಿ ಎಂದು ಕಳುಹಿಸುತ್ತಿದ್ದರು.

 ಚಾಣಾಕ್ಷ ಹಿರೇಂದ್ರ ವಿದ್ಯಾರ್ಥಿಗೆ ಉತ್ತಮ ಮನುಷ್ಯ ಯಾರು ಎಂದು ಕೇಳಿದರು ಉತ್ತಮ ಮನುಷ್ಯನು ತನ್ನ ಆತ್ಮವನ್ನು ಪ್ರೀತಿಸುತ್ತಾನೆ ಅಧಮನು ತನ್ನಲ್ಲಿ ಇರುವ ಐಶ್ವರ್ಯವನ್ನು ಸಂಪತ್ತನ್ನು ಪ್ರೀತಿಸುತ್ತಾನೆ ಹಾಗೆಯೇ ತನ್ನ ತಪ್ಪುಗಳಿಗೆ ತಾನೇ ಮಾಡಿದ್ದು ನಂತರ ಮಾಡುವುದಿಲ್ಲ ಎಂದು ನೆನಪಿನಲ್ಲಿಟ್ಟುಕೊಳ್ಳುತ್ತಾನೆ.

 ಅಧಮನು ತಾನು ಕೊಟ್ಟಿದ್ದು ಇವನಿಗೆ ಸಿಕ್ಕ ಚಿಕ್ಕ ಪ್ರಶಸ್ತಿಗಳು ನೆನಪಿನಲ್ಲಿ ಇಟ್ಟುಕೊಳ್ಳುತ್ತಾನೆ ಉತ್ತಮನು ಪ್ರಶಸ್ತಿ ಬಂದರೆ ಅದಕ್ಕೆ ನಾನು ಅರ್ಹನೆ ಎಂದು ಚಿಂತಿಸುತ್ತಾನೆ. ಉತ್ತಮನು ಬೇರೆಯವರಿಗೆ ಗೌರವಿಸುತ್ತಾನೆ ಅಧಮನು ಇತರರಿಗೆ ಹೀಯಾಳಿಸುತ್ತಾನೆ ಇದೆ ಇಬ್ಬರಿಗೂ ಇರುವ ವ್ಯತ್ಯಾಸ ಎಂದು ಹೇಳುತ್ತಾನೆ ಆಗ ಗುರುಗಳು ಸಂತೋಷದಿಂದ ವಿದ್ಯಾರ್ಥಿಯನ್ನು ಸೇರಿಸಿಕೊಳ್ಳುತ್ತಾರೆ.

]]>
https://babakategalu.com/%e0%b2%a8%e0%b2%be%e0%b2%a8%e0%b3%87-%e0%b2%b9%e0%b3%86%e0%b2%9a%e0%b3%8d%e0%b2%9a%e0%b3%81-%e0%b2%ae%e0%b2%be%e0%b2%a4%e0%b2%a8%e0%b2%be%e0%b2%a1%e0%b3%81%e0%b2%a4%e0%b3%8d%e0%b2%a4%e0%b2%bf%e0%b2%a6/feed/ 0
 ತ್ಯಾಗ ಮಾಡಿದ್ದಾರೆ https://babakategalu.com/%e0%b2%a4%e0%b3%8d%e0%b2%af%e0%b2%be%e0%b2%97-%e0%b2%ae%e0%b2%be%e0%b2%a1%e0%b2%bf%e0%b2%a6%e0%b3%8d%e0%b2%a6%e0%b2%be%e0%b2%b0%e0%b3%86/ https://babakategalu.com/%e0%b2%a4%e0%b3%8d%e0%b2%af%e0%b2%be%e0%b2%97-%e0%b2%ae%e0%b2%be%e0%b2%a1%e0%b2%bf%e0%b2%a6%e0%b3%8d%e0%b2%a6%e0%b2%be%e0%b2%b0%e0%b3%86/#respond Fri, 11 Apr 2025 04:40:00 +0000 https://babakategalu.com/?p=272 Read more]]> ಶಿಖರ್ ಪ್ರತಿಭಾವಂತ ಯುವಕ   ಎಂ ಎ ಪಾಸಾದ ನಂತರ ಕೆಲಸಕ್ಕಾಗಿ ಹಲವಾರು ಕಂಪನಿಗಳಲ್ಲಿ ಅರ್ಜಿ ಹಾಕಿದ್ದನು   ಒಂದು ಕಂಪೆನಿಯಿಂದ ಯುವಕನನ್ನು ಸಂದರ್ಶನಕ್ಕೆ ಕರೆದರು ಆ ಕಂಪನಿಯಲ್ಲಿ 3 ಸಾರಿ ಸಂದರ್ಶನ ಇರುತ್ತದೆ. ಮೊದಲ 2 ರೌಂಡ್ ಗಳನ್ನು ಪಾಸ್ ಮಾಡಿಕೊಂಡನು ಫೈನಲ್ ರೌಂಡ್ ಗೆ ಬಂದನು ‍ಆಗ ಮಾಲೀಕರೇ ಯುವಕನ ಸಂದರ್ಶನಕ್ಕೆ ಹಾಜರಾದರು ಮೊದಲು ಯುವಕನನ್ನು ಮೆಚ್ಚುಗೆ ವ್ಯಕ್ತಪಡಿಸಿದರು.

 ಕಷ್ಟಪಟ್ಟು ಓದಿದ್ದೀಯಾ ಎಲ್ಲದರಲ್ಲೂ ಒಳ್ಳೆಯ ಅಂಕಗಳನ್ನು ಪಡೆದಿದ್ದೀಯಾ ನಂತರ ಕೇಳಿದರು ನೀನು ಇಲ್ಲಿಯ ವರೆಗೂ ನಿನ್ನ ಶಿಕ್ಷಣಕ್ಕೆ ಹಣ ಎಲ್ಲಿಂದ ಬಂತು ಎಂದಾಗ ಯುವಕನು ವಿವರಿಸಿದನು. ಸ್ವಲ್ಪವಾಗಿ ಸ್ಕಾಲರ್ ಶಿಪ್ ದೊರೆಯಿತು ನಂತರ ನಮ್ಮ ತಂದೆ ತಾಯಿಯವರೆ ನನಗೆ ಹಣವನ್ನು ನೀಡಿದ್ದಾರೆ ಮಾಲೀಕ ನಿಮ್ಮ ಎರಡೂ ಕೈಗಳನ್ನು ನನಗೆ ತೋರಿಸಿ ಎಂದು ಕೇಳಿದರು.

 ಯುವಕನು ಕೈಯನ್ನು ಚಾಚಿದಾಗ ಕೈಗಳು ತುಂಬಾ ಮೃದುವಾಗಿದ್ದವು ನಂತರ ಮಾಲೀಕರು ಕೇಳಿದರು ನಿಮ್ಮ ತಂದೆ ತಾಯಿ ಏನು ಎಂದು ಪ್ರಶ್ನಿಸಿದರು ಯುವಕ ಹೇಳಿದನು ನಮ್ಮ ತಂದೆ ಡ್ರೈವರಾಗಿ ನಮ್ಮ ತಾಯಿ ಬಟ್ಟೆಗಳನ್ನು ಹೊಲೆದು ಇಸ್ತ್ರಿ ಮಾಡುತ್ತಾರೆ ಎಂದು ಹೇಳಿದ.

  ಮತ್ತೆ ಮಾಲೀಕರು ಇವತ್ತು ನೀನು ಮನೆಗೆ ಹೋಗಿ ನಿಮ್ಮ ತಂದೆ ತಾಯಿಯ ಕೈಗಳನ್ನು ಚೆನ್ನಾಗಿ ತೊಳೆದು ಅವರ ಕೈಗೆ ಎಣ್ಣೆಯನ್ನು ಹಚ್ಚಿ ನಂತರ ಆಶೀರ್ವಾದ ಪಡೆದು ಬನ್ನಿ ಎಂದು ಹೇಳಿದರು ಯುವಕನ ಸಂತೋಷಕ್ಕೆ ಪಾರವೇ ಇಲ್ಲ ನನಗೆ ಕೆಲಸ ಗ್ಯಾರಂಟಿ ಎಂದು ಮನೆಗೆ ಉತ್ಸಾಹದಿಂದ ಕುಣಿಯುತ್ತ  ನಲಿಯುತ್ತಾ ಬಂದನು.

 ಮೊದಲು ತಾಯಿಯ ಬಳಿ ಹೋಗಿ ನಿಮ್ಮ ಕೈಗಳನ್ನು ನೀಡಿಯೆಂದು ಸೋಪಿನಿಂದ ತೊಳೆದು ಕೈಗಳನ್ನು ನೋಡಿದ ಕೈಗಳು ತುಂಬಾ ಒರಟಾಗಿದ್ದವು ಅಲ್ಲಲ್ಲಿ ಸುಕ್ಕುಗಳಿದ್ದವು ಆಗ ಯುವಕನಿಗೆ ಅರ್ಥವಾಯಿತು.

 ನನ್ನ ತಾಯಿ ಎಷ್ಟು ಕಷ್ಟ ಪಟ್ಟಿದ್ದಾರೆ ನಂತರ ತಂದೆಯವರು ಬಂದರು ಅವರಿಗೂ ಅದೇ ರೀತಿ ಕೈಯನ್ನು ತೊಳೆದು ನೋಡಿದಾಗ ಅವರ ಕೈಗಳು ಸಹ ತುಂಬಾ ಒರಟಾಗಿದ್ದವು ಆಗ ಯುವಕನಿಗೆ ಅರ್ಥವಾಯ್ತು ನನ್ನ ಭವಿಷ್ಯಕ್ಕಾಗಿ ತಂದೆ ತಾಯಿ ಎಷ್ಟೊಂದು ಕಷ್ಟ ಪಟ್ಟಿದ್ದಾರೆ ಎಂದು ಅರ್ಥ ಮಾಡಿಕೊಂಡನು.

 ನಾನು ಬರೀ ಓದಬೇಕು ನನ್ನದೇ ಗುರಿ ಮುಟ್ಟಬೇಕು ಎಂದು ನಾನು ಮುಂದೆ ಹೋಗುತ್ತಿದ್ದೇನೆ ಹೊರತು ನಮ್ಮ ತಂದೆ ತಾಯಿಯ ಬಗ್ಗೆ ನಾನು ಗಮನಿಸಲೇ ಇಲ್ಲ ಎಂದು ಅರಿವಾಯಿತು ಯುವಕ ಹೇಳಿದನು ಇನ್ನು ಮುಂದೆ ನೀವು ಹೆಚ್ಚಾಗಿ ಕೆಲಸ ಮಾಡಬೇಡಿ ಇಲ್ಲಿಯವರೆಗೆ ನನಗೆ ಸಾಕಿದ್ದೀರಿ ಇನ್ನು ಮುಂದೆ ನಾನು ನಿಮ್ಮನ್ನು ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದನು.

 ಆಗ ತಂದೆ ತಾಯಿ ಅತ್ತರು ಮಾರನೆಯ ದಿನ ಕಂಪೆನಿಗೆ ಹೋದನು ನಡೆದ ಘಟನೆಯನ್ನು ವಿವರಿಸಿದನು ನಂತರ ನಿನಗೇನು ಅರ್ಥವಾಯಿತು ಎಂದು ಕೇಳಿದರು ನನಗಾಗಿ ತಂದೆ ತಾಯಿಯವರು ತುಂಬಾ ತ್ಯಾಗ ಮಾಡಿದ್ದಾರೆ ಎಂದು ಇರುವ ಸತ್ಯವನ್ನು ಹೇಳಿದನು.

ಮಾಲೀಕರು ಒಂದು ಕಂಪೆನಿಯು ಕೂಡ ಅಷ್ಟೆ ಹಲವಾರು ವರ್ಷಗಳ ಸಾಧನೆಯಿಂದ ಎತ್ತರಕ್ಕೆ ಬೆಳೆದಿದೆ ಇದರಲ್ಲಿ ಹಲವಾರು ಜನರು ಕೆಲಸ ಮಾಡುತ್ತಾರೆ ಅವರು ಕೂಡ ನಿನ್ನವರೇ ಎಂದು ತಿಳಿದುಕೋ ಎಂದು ಹೇಳಿದರು. ನಂತರ ಕೆಲಸಕ್ಕೆ ಸೇರಿಕೊಂಡನು ನಾನು ಉದ್ಯೋಗಿಯಾಗಿದ್ದರೆ ನನ್ನದೇ ಕೆಲಸ ಎಂದು ಮಾಡುತ್ತಿದ್ದೇನೆಯೇ? ನಾನು ವ್ಯಾಪಾರಿಯಾಗಿದ್ದರೆ ಸೇವಾ ಮನೋಭಾವನೆಯಿಂದ  ಕರ್ತವ್ಯವನ್ನು ನಿರ್ವಹಿಸುತ್ತಿದ್ದೇನೆಯೇ?

 ಮನಸ್ಸಿಗೆ ಒಪ್ಪುವಂತೆ ಹೇಳಿದೆ

ಒಂದು ಕಂಪೆನಿಯಲ್ಲಿ ಹಲವಾರು ಉದ್ಯೋಗಿಗಳು ಕೆಲಸ ಮಾಡಿಕೊಂಡಿದ್ದರು ಉದ್ಯೋಗಿಗಳಿಗೆ ಒಳ್ಳೆಯದಾಗಲಿ ಎನ್ನುವ ಆಲೋಚನೆಯಿಂದ ಒಂದು ಪಿಂಚಿನ್ ಪ್ಲಾನನ್ನು ಜಾರಿಗೆ ತಂದರು ಹಲವಾರು ಉದ್ಯೋಗಿಗಳು ಅರ್ಜಿಗೆ ಸಹಿಯನ್ನೂ ಮಾಡಿದರು ಆದರೆ ಅದರಲ್ಲಿ ಮೂವರು ಉದ್ಯೋಗಿಗಳು ಮಾತ್ರ ಸಹಿ ಮಾಡಲಿಲ್ಲ.

 ಯಾವ ರೀತಿ ಬಿಡಿಸಿ ಹೇಳಿದರು ಮೂವರು ಮಾತ್ರ ಆ ಪಿಂಚಿನ್ ಪ್ಲಾನನ್ನು ಒಪ್ಪುತ್ತಲೇ ಇರಲಿಲ್ಲ ಇದರಿಂದ ಹಲವಾರು ತಿಂಗಳು ಪಿಂಚಿನ್ ಪ್ಲಾನ್ ಜಾರಿಗೆ ಬರಲೇ ಇಲ್ಲ ನಂತರ ಕಂಪನಿ ಮಾಲಿಕರು ತನ್ನಅಂಜುಮನ್  ಸ್ನೇಹಿತನಿಗೆ ನಡೆದ ಘಟನೆಯನ್ನು ತಿಳಿಸಿದರು ಅದಕ್ಕೆ ಸ್ನೇಹಿತ ಹೇಳಿದನು ನಾಳೆ ನಾನು ಒಂದು ದಿನ ಕಂಪನಿಗೆ ಬರುತ್ತೇನೆ ಎಂದರು.

 ಮಾಲೀಕರು ಹೊಸದಾಗಿ ಮ್ಯಾನೇಜರ್ ಬರುತ್ತಿದ್ದಾರೆ ಎಂದು ಹೇಳಿದಾಗ ಅದಕ್ಕೆ ಎಲ್ಲಾ ಉದ್ಯೋಗಿಗಳು ಆಗಲಿ ಎಂದು ಒಪ್ಪಿದರು ಮಾರನೆ ದಿನ ಹೊಸ ಮ್ಯಾನೇಜರ್ ಆಗಿ ಬಂದರು ಮೂವರು ವ್ಯಕ್ತಿಗಳನ್ನು ಕರೆದರು ನಂತರ ಇವರ ಕೊಠಡಿಗೆ ಒಬ್ಬನನ್ನು ಕರೆದರು ಅವನು ಬಂದ ಮೇಲೆ ಬಾಗಿಲು ಕಿಟಕಿಗಳನ್ನು ಹಾಕಿದರು ನಂತರ ಹೇಳಿದರು.

 ಇಂದು ನೀವು ಈ ಅರ್ಜಿಗೆ ಸಹಿ ಹಾಕದಿದ್ದರೆ ಎಲ್ಲರೂ ನಿನ್ನನ್ನು ನಿವೃತ್ತಿ ಮಾಡಲು ಎಲ್ಲರೂ ತಿಳಿಸಿದ್ದಾರೆ ಎಂದು ಫಾರಂನ್ನು ಇಟ್ಟರು ಅದಕ್ಕೆ ಸಹಿ ಮಾಡಿ ಹೊರಟು ಹೋದನು. ನಂತರ ಎರಡನೆಯವನನ್ನು ಕರೆದರು ನಾನು ಹಲವಾರು ಕಂಪೆನಿಗಳಲ್ಲಿ ಕೆಲಸ ಮಾಡಿದ್ದೇನೆ ನಿಮಗೆ ಒಬ್ಬರಿಗೇ ಅಲ್ಲ ನಿಮ್ಮ ಕುಟುಂಬಕ್ಕೂ ಎಲ್ಲರಿಗೂ ಪ್ರಯೋಜನವಾಗುತ್ತದೆ ಯೋಚನೆ ಮಾಡಿ ಎಂದು ತಿಳಿಸಿ ಹೇಳಿದರು.

ಎರಡನೆಯವನು ಮನಸ್ಸಿಗೆ ನಾಟುವಂತೆ ಹೇಳಿದಾಗ ಅರಿತನು ನಂತರ ಸಹಿ ಮಾಡಿದನು  ಮೂರನೆಯವನು ಕರೆದರು ಈಗ ಹೋದವರು ಎಲ್ಲರೂ ಸಹಿ ಮಾಡಿದ್ದಾರೆ ಈಗ ನೀನೊಬ್ಬನೇ ಉಳಿದಿದ್ದೀಯ ನೀನು ಈ ಅರ್ಜಿಗೆ ಸಹಿ ಮಾಡಿದರೆ ಸರಿ ಇಲ್ಲದಿದ್ದರೆ ನಿನ್ನನ್ನು ಪೊಲೀಸ್ ಠಾಣೆಗೆ ಕಳುಹಿಸುತ್ತೇನೆ ಎಂದು ಹೆದರಿಸಿದರು.

 ನಾನು ಜೈಲಿಗೆ ಹೋದರೂ ಪರವಾಗಿಲ್ಲ ನಿನ್ನ ಒಬ್ಬನಿಂದ ಇಡೀ ಉದ್ಯೋಗಿಗಳಿಗೆ ತೊಂದರೆಯಾಗಬಾರದು ಎನ್ನುವುದೇ ನನ್ನ ಉದ್ದೇಶ ಎಂದು ಕೋಪದಿಂದ ಹೆದರಿಸಿ ಹೇಳಿದರು.

ಕೊನೆಯವನು ಕೂಡ ಅರ್ಜಿಗೆ ಸಹಿ ಮಾಡಿ ಹೊರಟು ಹೋದನು ಹೀಗೆ ಯಾರಿಗೆ ಯಾವ ರೀತಿ ಹೇಳಬೇಕು ಅದೇ ರೀತಿ ಹೇಳಿದರು. ಯಾರಿಗೆ ಯಾವ ರೀತಿ ಹೇಳಬೇಕೂ ಅದೇ ರೀತಿ ಹೇಳಿದರೆ ಅರ್ಥವಾಗುತ್ತದೆ.

ಅನುಭವಿಸಲು ಸಾಧ್ಯವಿಲ್ಲ

ಉತ್ತೇಜನ್  ಗುಣವಂತ  ಯುವಕ ಚೆನ್ನಾಗಿ ಓದಿದ ನಂತರ ಅವನಿಗೊಂದು ಕೆಲಸ ಸಿಗುತ್ತದೆ ಯುವಕನು ವಿದೇಶಕ್ಕೆ ಹೋಗಬೇಕೆಂದು ತನ್ನ ಹಳ್ಳಿಯಿಂದ ಹೊರಡುತ್ತಾನೆ ದಾರಿಯಲ್ಲಿ ಜಗನ್ ಮಿತ್ರ ಹಿರಿಯರು ಖಾಲಿ ಜಾಗದಲ್ಲಿ ಮಾವಿನ ಚಿಕ್ಕ ಚಿಕ್ಕ ಗಿಡಗಳನ್ನು ನೆಡುತ್ತಿರುತ್ತಾರೆ.

 ಮಾವಿನ ಗಿಡಗಳಿಗೆ ನೀರು ಹಾಕುತ್ತಿರುವುದನ್ನು ನೋಡಿದ ಯುವಕನಿಗೆ ಓಂದು ಪ್ರಶ್ನೆ ಹುಟ್ಟುತ್ತದೆ ಈ ಚಿಕ್ಕ ಗಿಡಗಳನ್ನು ನೆಡುತ್ತಿದ್ದಾರೆ ಆದರೆ ಆ ಹಿರಿಯರು ಇದನ್ನು ಅನುಭವಿಸುವುದಿಲ್ಲವಲ್ಲ ಎಂದು ಯೋಚನೆ ಮಾಡಿ ಆ ಹಿರಿಯರಿಗೆ ನಮಸ್ಕಾರ ಮಾಡಿದನು.

 ಸ್ವಾಮಿ ನೀವು ಮಾಡುತ್ತಿರುವ ಕೆಲಸ ತುಂಬಾ ಚೆನ್ನಾಗಿದೆ ಆದರೆ ನೀವು ಈ ಗಿಡಗಳನ್ನು ನೆಡುತ್ತಿದ್ದೀರಿ ನೀವು ಬೆಳೆಸುತ್ತಿರುವ ಹಣ್ಣಿನ ರುಚಿಯನ್ನು ಅನುಭವಿಸುತ್ತಿರೋ ಇಲ್ಲವೋ ಎಂದು ನನಗೆ ಖಾತರಿ ಇಲ್ಲ ಎಂದಾಗ ಹಿರಿಯರು ನಗುತ್ತಾ ಹೇಳುತ್ತಾರೆ ನೀನು ಹೇಳಿದ್ದು ಸರಿಯೇ ಅಕ್ಷರಸ್ಥ ನಿಜ ನಾನು ಈಗ ಚಿಕ್ಕ ಗಿಡಗಳನ್ನು ನೆಡುತ್ತಿದ್ದೇನೆ.

 ನಾನಂತೂ ಅನುಭವಿಸಲು ಸಾಧ್ಯವಿಲ್ಲ ಎನ್ನುವುದು ನನಗೆ ಗೊತ್ತು ಆದರೆ ಇತರರು, ನನ್ನ ಮಕ್ಕಳು, ನನ್ನ ಮೊಮ್ಮಕ್ಕಳು, ಇದನ್ನು ಅನುಭವಿಸಿಯೇ ತೀರುತ್ತಾರೆ ಏಕೆಂದರೆ ನಾನು ಇಂದು ಏನು ಅನುಭವಿಸುತ್ತಿದ್ದೇನೆ ಅದು ನಮ್ಮ ಹಿರಿಯರು ನಮಗಾಗಿ ನೆಟ್ಟಿದ್ದಾರೆ. ಇಂದು ನಾವು ಅನುಭವಿಸುತ್ತಿದ್ದೇವೆ ಇತರರಿಗಾಗಿ ನನಗೆ ಸಾಧ್ಯವಾದಷ್ಟು ಸೇವೆ ಮಾಡೋಣ ಇತರರಿಗಾಗಿ ಬದುಕೋಣ ಎಂದು ಹೇಳುತ್ತಾರೆ.

 ಹಿರಿಯರು ಹೇಳಿದ ನಂತರ ಯುವಕ ಅಲ್ಲಿಂದ ಹೊರಡುತ್ತಾನೆ ವಿದೇಶದಲ್ಲಿ ಕೆಲಸ ಮುಗಿಸಿ ಕೆಲವು ವರ್ಷಗಳ ನಂತರ ಅದೇ ದಾರಿಯಲ್ಲಿ ಬರುತ್ತಿದ್ದಾಗ ಯುವಕನು ನೋಡಿದಾಗ ಆ ಮಾವಿನ ಮರಗಳು ತುಂಬಾ ಚೆನ್ನಾಗಿ ಫಸಲು ಬಂದಿರುತ್ತದೆ. ಮಾವಿನ ಹಣ್ಣುಗಳು ಸಮೃದ್ಧವಾಗಿ ಬೆಳೆದಿರುತ್ತದೆ ನೋಡಲು ತುಂಬಾ ಆಕರ್ಷಕವಾಗಿರುತ್ತದೆ.

 ಮಾವಿನ ಹಣ್ಣುಗಳನ್ನು ನೋಡುತ್ತಿದ್ದಂತೆಯೇ ಬಾಯಲ್ಲಿ ನೀರು ಬರುತ್ತದೆ.ಆಗ ಆ ತೋಟಕ್ಕೆ ಹೋಗಿ ಇಷ್ಟವಾದ ರುಚಿರುಚಿಯಾದ ಮಾವಿನ ಹಣ್ಣುಗಳನ್ನು ತಿನ್ನುತ್ತಾನೆ ಮಾವಿನ ಹಣ್ಣುಗಳನ್ನು ತಿಂದ ನಂತರ ಯುವಕ ಕೇಳುತ್ತಾನೆ ಇಲ್ಲಿ ಹಿರಿಯರು ಇದ್ದರಲ್ಲ ಅವರು ಕಾಣುತ್ತಿಲ್ಲ ಎಂದಾಗ ಅಲ್ಲಿಯವರು ಹೇಳುತ್ತಾರೆ.

 ಹಿರಿಯರು ತೀರಿ ಹೋಗಿದ್ದಾರೆ ಎಂದು ಹೇಳಿದಾಗ ಅವರ ಮಾತುಗಳು ನೆನಪಾಗುತ್ತವೆ. ಇಂದು ನಾವು ಇತರರು ಕಷ್ಟಪಟ್ಟಿದ್ದು ನಾವು ಇಂದು ಅನುಭವಿಸುತ್ತಿದ್ದೇವೆ ನಾವು ಇತರರಿಗಾಗಿ ನಮ್ಮಿಂದ ಸಾಧ್ಯವಾದಷ್ಟು ಇತರರಿಗಾಗಿ ಉಪಯೋಗವಾಗುವಂತಹ ಕೆಲಸವನ್ನು ಮಾಡೋಣ. ನಾನು ಇತರರಿಗೆ ಉಪಯೋಗವಾಗುವಂತಹ ಯಾವ ಕೆಲಸ ಮಾಡಿದ್ದೇನೆ?

ಸರಿಯಾದ ಗುರು ಅತಿ ಅವಶ್ಯಕ

ಅರಮನೆಯಲ್ಲಿ ಒಂದು ಚಿನ್ನದ ಪಂಜರದಲ್ಲಿ ಸುಂದರವಾದ ಗಿಣಿ ಇರುತ್ತದೆ ಗಿಳಿಯ ವಿಶೇಷತೆ ಎಂದರೆ ಗಿಣಿ ತುಂಬ ಚೆನ್ನಾಗಿ ಮನುಷ್ಯರಂತೆ ಮುದ್ದು ಮುದ್ದಾಗಿ ಮಾತನಾಡುತ್ತಿರುತ್ತದೆ ಆ ಅರಮನೆಯಲ್ಲಿ ಪ್ರಜೆಗಳೆಲ್ಲರೂ ಸಭೆ ಸೇರಿ ವಾರಕ್ಕೆ ಒಂದು ಸಾರಿ ಸತ್ಸಂಗಕ್ಕೆ ಸೇರುತ್ತಿದ್ದರು.

ಸತ್ಸಂಗಕ್ಕೆ ತುಷಿತ್ ಪಂಡಿತರು ಬಂದು ಸತ್ಸಂಗವನ್ನು ನಡೆಸಿಕೊಡುತ್ತಿದ್ದರು ಪಂಡಿತರು ಎಲ್ಲಾ ಮಂತ್ರಿಗಳು ಜಪಗಳು ಆದ ಮೇಲೆ ಯಾರೇ ಆಗಲಿ ಮಂತ್ರವನ್ನು ಜಪಿಸಿದರೆ ಸುಖವನ್ನು ಪಡೆಯಬಹುದು ಸ್ವತಂತ್ರವಾಗಿ ಇರಬಹುದು ಎಂದು ಹೇಳುತ್ತಾರೆ ಈ ರೀತಿ ಹೇಳಿದಾಗ ಗಿಣಿಯು ಮಾತ್ರ ನಗುತ್ತಾ ಹೇಳಿತು.

 ಇದು ಸುಳ್ಳು ಸುಳ್ಳು ಎಂದಿತು 4 ಸಾರಿ ಸತ್ಸಂಗ ನಡೆಸಿಕೊಟ್ಟರು ಗಿಣಿ ಮಾತ್ರ ಕೊನೆಯಲ್ಲಿ ಸುಳ್ಳು ಸುಳ್ಳು ಎಂದು ಹೇಳುತ್ತಿತ್ತು ಕೊನೆಗೆ ಪಂಡಿತರಿಗೆ ಏನೂ ತಿಳಿಯದೆ ನಂತರ ನಡೆದ ಘಟನೆಯನ್ನು ಬಾಬಾ ಅವರಿಗೆ ಹೇಳಿದರು ಆಗ ಬಾಬಾ ಅವರು ಮುಂದಿನ ಸಾರಿ ನಾನು ಪ್ರಾರ್ಥನೆಗೆ ಬರ್ತೇನೆ ಎಂದು ಹೇಳಿದರು ಅದರಂತೆಯೇ ಬಾಬಾ ಅವರು ಬಂದರು.

ಬಾಬಾ ಅವರು ಅದೇ ರೀತಿ ಪ್ರಾರ್ಥನೆಯನ್ನು ಮುಗಿಸಿದರು ಆಗ ಗಿಳಿಯು ಅದೇ ರೀತಿ ಹೇಳಿತು ಆಗ ಇದನ್ನು ಕೇಳಿದ ಬಾಬಾ ಅವರು ಗಿಣಿಗೆ ಕೇಳಿದರು ನೀನು ಈ ರೀತಿ ನಗುವುದಕ್ಕೆ ಕಾರಣವೇನು ಎಂದು ಕೇಳಿದರು ಆಗ ಗಿಳಿಯು ಹೇಳಲಾರಂಭಿಸಿತು ನಾನು ಮೊದಲು ಕಾಡಿನಲ್ಲಿ ಸ್ವತಂತ್ರವಾಗಿ ಇದೆ ಬೇಟೆಗಾರನೂ ನನ್ನನ್ನು ಹಿಡಿದು ಒಂದು ಪಂಜರದಲ್ಲಿ ಹಾಕಿದನು ನಂತರ ಮಾತನಾಡುವುದನ್ನು ನೋಡಿ ಇನ್ನೊಬ್ಬ ಸಾಹುಕಾರ ನನ್ನನ್ನು ಖರೀದಿಸಿದನು.

  ಅವನು ಬೆಳ್ಳಿಯ ಪಂಜರದಲ್ಲಿ ಇಟ್ಟನು ನಂತರ ನನಗೆ ರಾಜನೇ ಖರೀದಿ ಮಾಡಿ ಈಗ ಚಿನ್ನದ ಪಂಜರದಲ್ಲಿ ಇಟ್ಟಿದ್ದಾರೆ ನನಗೆ ಪಂಜರಗಳು ಬದಲಾಗಿದೆಯೇ ಹೊರತು ನಾನು ಮಾತ್ರ ಸ್ವತಂತ್ರವಾಗಿಲ್ಲ ನೀವು ಹೇಳುವ ಮಂತ್ರದಿಂದ ಸ್ವತಂತ್ರವಾಗಿ ಇರುತ್ತಾರೆ ಎಂದರೆ ಅದು ಹೇಗೆ ಸಾಧ್ಯ ನಾನು ಈಗಲೂ ಕೂಡ ಬಂಧಿಯಾಗಿ ಉಳಿದಿದ್ದೇನೆ ನಾನೂ ಕೂಡ ಮಂತ್ರ ಹೇಳಿದೆ ಆದರೂ ನಾನು ಬಿಡುಗಡೆಯಾಗಿಲ್ಲ ಏಕೆ ಎಂದು  ಗಿಳಿ ಪ್ರಶ್ನೆಸಿತು ನಂತರ ಬಾಬಾ ಅವರು ಅರ್ಥಮಾಡಿಕೊಂಡರು.

 ಬಾಬಾ ಅವರು ಗಿಣಿಯ ಕಿವಿಯಲ್ಲಿ ಏನೋ ಹೇಳಿ ಹೋದರು ಮಾರನೇ ದಿನ ಗಿಣಿಯನ್ನು ನೋಡಿದಾಗ ಗಿಣಿಯು ಸತ್ತು ಹೋಗಿದೆ ಎನ್ನುವ ರೀತಿ ಇತ್ತು ಇದನ್ನು ನೋಡಿ ಸಿಪಾಯಿಗಳು ರಾಜನಿಗೆ ಹೇಳಿದರು ಎಲ್ಲರೂ ಓಡೋಡಿ ಬಂದರು ಎಲ್ಲರೂ ನೋಡಿ ಗಿಣಿ ಸತ್ತು ಹೋಗಿದೆ ಇದನ್ನು ಅಂತ್ಯ ಸಂಸ್ಕಾರ ಮಾಡೋಣ ಎಂದು ಗಿಣಿಯನ್ನು ಪಂಜರದಿಂದ ಆಚೆ ತೆಗೆದರು.

  ಗಿಣಿಯು ಹೊರಗೆ ಬಂದ ತಕ್ಷಣ ಮೇಲೆ ಹಾರಿತು ಹೋಗುತ್ತಿರಬೇಕಾದರೆ ಒಂದು ಮಾತು ಹೇಳಿ ಹೋಯ್ತು ನಾವು ಸ್ವತಂತ್ರರಾಗಬೇಕಾದರೆ ಸರಿಯಾದ ಗುರು ಅತಿ ಅವಶ್ಯಕ ಗುರುವಿನ ಮಾರ್ಗದರ್ಶನ ಬೇಕೇ ಬೇಕು ಸರಿಯಾದ ಮಾರ್ಗದಲ್ಲಿ ಹೋದರೆ ಯಶಸ್ಸು ಖಂಡಿತ ಎಂದು ಹೇಳಿ ಹಾರಿತು ಹೋಯಿತು ಇದನ್ನು ಎಲ್ಲರೂ ಆಶ್ಚರ್ಯಕರವಾಗಿ ನೋಡುತ್ತಿದ್ದರು. ನಮಗೂ ಸರಿಯಾದ ಗುರುಗಳು ಇದ್ದರೆ ನಾವು ಕೂಡ ಬಂಧನದಿಂದ ಪಾರಾಗಬಹುದು.

ಮಗು ಬಿಸಿಲಿನಲ್ಲಿ ಮಲಗಿದೆ

ತಕ್ಷಕ್  ಕಾರ್ಪೆಂಟರ್ ತನ್ನ ಮನೆಯ ಮುಂದೆ ಕೆಲಸ ಮಾಡುತ್ತಿದ್ದನು. ಮರದ ಒಂದು ಬಾಗಿಲು ತಯಾರಿಸಬೇಕು ಅದಕ್ಕಾಗಿ ಬೆಳಿಗ್ಗಿನಿಂದಲೇ ಕೆಲಸವನ್ನು ಆರಂಭಿಸುತ್ತಾನೆ ಮಧ್ಯಾಹ್ನ ಆಗುತ್ತಿದ್ದಂತೆ ಬಿಸಿಲು ಜಾಸ್ತಿ ಆದುದರಿಂದ ಬೆವರು ಕೂಡ ಬರಲು ಆರಂಭವಾಗುತ್ತದೆ ಆಗ ವಯಸ್ಸಾದ ಪ್ರಕರ್ಶ್ ತಂದೆ ಹೇಳುತ್ತಾರೆ ನಿನ್ನ ಕೆಲಸವನ್ನು ನೆರಳಿನಲ್ಲಿ ಮಾಡು ಎಂದು ಹೇಳುತ್ತಾರೆ.

ಮಗನು ಸ್ವಲ್ಪ ಸಮಯದಲ್ಲಿಯೇ ಮುಗಿಯುತ್ತದೆ ಎಂದು ಕೆಲಸವನ್ನು ಮತ್ತೆ ಮುಂದುವರಿಸಿದನು ಮತ್ತೆ ಸ್ವಲ್ಪ ಸಮಯದ ನಂತರ ತಂದೆಯಾದವರು ಬಿಸಿಲಿನ ತಾಪ ಜಾಸ್ತಿಯಾಗಿದೆ ನೆರಳಿನಲ್ಲಿ ಕೆಲಸ ಮಾಡಿಕೋ ಇಲ್ಲದಿದ್ದರೆ ಟೋಪಿಯನ್ನಾದರೂ ಹಾಕು ಬಿಸಿಲು ಸುಡುತ್ತಿದೆ ಎಂದು ಎಚ್ಚರಿಸಿದರು.

ಕೆಲಸ ಮಾಡುತ್ತಿದ್ದವನು ಹೇಳಿದ ಅಪ್ಪಾ ನನಗೆ ಮೊದಲೇ ಕೆಲಸ ಆಗಲಿಲ್ಲ ಎಂದು ಚಿಂತೆಯಾಗಿದೆ ಅದ್ರಲ್ಲಿ ನೀವು ಕೂಡಾ ಬಂದು ನನ್ನನ್ನು ಹೀಗೆ ಪೀಡಿಸಬೇಡಿ ಎಂದು ಹೇಳಿದನು ಮತ್ತೆ ಅವನ ಕೆಲಸವನ್ನು ಶುರು ಮಾಡಿದನು ಸ್ವಲ್ಪ ಹೊತ್ತು ಕೂತಿದ್ದ ವಯಸ್ಸಾದ ತಂದೆಯವರು ಮನೆ ಒಳಗೆ ಹೋದರು.

ಸದ್ಯ ಒಳಗೆ ಹೋಗಿದ್ದಾರಲ್ಲ ಇರಲಿ ಎಂದು ನಿಟ್ಟುಸಿರು ಬಿಟ್ಟನು ನಂತರ ಸ್ವಲ್ಪ ಸಮಯದಲ್ಲಿ ನೋಡಿದರೆ ತನ್ನ ಒಂದು ವರ್ಷದ ಮಗು ಬಿಸಿನಲ್ಲಿ ಮಲಗಿದೆ ಆಗ ಕೋಪ ಬಂತು ಈ ಮಗುವಿಗೆ ಇಲಿ ಹಾಕಿದವರು ಯಾರು ಇಷ್ಟು ಬಿಸಿಲು ಇದೆ  ತಿಳಿದಿಲ್ಲವೇ ಎಂದು ಕೋಪದಿಂದ ಹೇಳಿದನು.

  ವಯಸ್ಸಾದ ತಂದೆ ವಿನಯವಾಗಿ  ಹೇಳಿದರು ನನ್ನ ಮಗ ಬಿಸಿನಲ್ಲಿ ಇರಬೇಕಾದರೆ ನನಗೂ ಇಷ್ಟೇ ಸಂಕಟವಾಗುತ್ತದೆ ಅದನ್ನು ನಿನಗೆ ತಿಳಿಯಲಿ ಎಂದು ನಾನು ಹೀಗೆ ಮಾಡಿದೆ ಎಂದರು ತಂದೆ ತಾಯಿಗಳು ನಮ್ಮ ಜೀವಗಳು ಅವರ ಪ್ರೀತಿ ಎಂದೆಂದಿಗೂ ಅಜರಾಮರ.

]]>
https://babakategalu.com/%e0%b2%a4%e0%b3%8d%e0%b2%af%e0%b2%be%e0%b2%97-%e0%b2%ae%e0%b2%be%e0%b2%a1%e0%b2%bf%e0%b2%a6%e0%b3%8d%e0%b2%a6%e0%b2%be%e0%b2%b0%e0%b3%86/feed/ 0
ತತ್ವಗಳುಪಾಲಿಸಬೇಕು https://babakategalu.com/%e0%b2%a4%e0%b2%a4%e0%b3%8d%e0%b2%b5%e0%b2%97%e0%b2%b3%e0%b3%81%e0%b2%aa%e0%b2%be%e0%b2%b2%e0%b2%bf%e0%b2%b8%e0%b2%ac%e0%b3%87%e0%b2%95%e0%b3%81/ https://babakategalu.com/%e0%b2%a4%e0%b2%a4%e0%b3%8d%e0%b2%b5%e0%b2%97%e0%b2%b3%e0%b3%81%e0%b2%aa%e0%b2%be%e0%b2%b2%e0%b2%bf%e0%b2%b8%e0%b2%ac%e0%b3%87%e0%b2%95%e0%b3%81/#respond Thu, 10 Apr 2025 04:40:00 +0000 https://babakategalu.com/?p=268 Read more]]> ಒಂದು ಊರಿನಲ್ಲಿ ಒಂದು ಗುರುಕುಲ ಇರುತ್ತದೆ ಅಲ್ಲಿ ಒಬ್ಬ ತಂದೆ ತಾಯಿಯನ್ನು ಕಳೆದುಕೊಂಡ ಕರವೀರ್ ಹುಡುಗ ಇರುತ್ತಾನೆ, ಹುಡುಗ ಒಳ್ಳೆಯ ವಿದ್ಯಾಭ್ಯಾಸ ಪಡೆಯುತ್ತಾನೆ ನಂತರ ಹುಡುಗ ಯುವಕನಾಗುತ್ತಾನೆ ಆಗ ಗುರುಗಳು ಯುವಕನನ್ನು ಕರೆದು ಸಾಕಷ್ಟು ನಿನ್ನಲ್ಲಿ ವಿದ್ಯೆ ಬಂದಿದೆ ನೀನು ಕೂಡ ಯುವಕನಾಗಿದ್ದೀಯ ಈಗ ನೀನು ಸ್ವತಂತ್ರವಾಗಿ ಜೀವನ ನಡೆಸಬಹುದು ಎಂದು ಹೇಳುತ್ತಾರೆ.

ಯುವಕನು ಹೇಳುತ್ತಾನೆ ನೀವು ಹೇಳಿದ ಮೇಲೆ ನಾನು ಹಾಗೆಯೇ ಮಾಡುತ್ತೇನೆ ಆದರೆ ಗುರುಕುಲದಲ್ಲಿ ಬದುಕಿ ನನಗೆ ಅಭ್ಯಾಸವಾಗಿದೆ ಈಗ ನಾನು ಹೊರಗೆ ಬದುಕಬೇಕು ಹೊರಗೆ ಹೇಗೆ ಬದುಕಬೇಕು ಎನ್ನುವ ಅನುಭವ ಇಲ್ಲ ಆದುದರಿಂದ ನಾನು ಹೇಗೆ ಬದುಕಬೇಕು ಅದಕ್ಕೆ ಸಂದೇಶವನ್ನು ನೀಡಿ ಎಂದು ವಿನಂತಿಸಿಕೊಳ್ಳುತ್ತಾನೆ.

 ಗುರುಗಳು ಪಂಚ ತತ್ವಗಳನ್ನು ಹೇಳುತ್ತಾರೆ 1 ಮಂಗಳಾರತಿ ಆರಂಭಿಸಿದರೆ ಮಂಗಳಾರತಿ ನೋಡಿ ಪಡೆದು ಹೋಗಬೇಕು. 2 ಸಮಯ ಸಿಕ್ಕಿದಾಗ ಪ್ರಾರ್ಥನೆ ಮಾಡಬೇಕು. 3 ಇತರರ ತಪ್ಪುಗಳು ನೋಡಿದರೆ ಮರೆ ಮಾಡಬೇಕು ಅಥವಾ ಮುಚ್ಚಬೇಕು. 4 ಪ್ರಸಾದ ನೀಡುತ್ತಿದ್ದರೆ  ಪ್ರಸಾದ ಸ್ವೀಕರಿಸಬೇಕು 5 ಹೆಣಕ್ಕೆ ಹೆಗಲು ಕೊಡಬೇಕು. ಇದರಂತೆ ನೀನು ಬದುಕು ಎಂದು ಆಶೀರ್ವಾದ ಮಾಡಿ ಕಳುಹಿಸುತ್ತಾರೆ.

ಯುವಕನು ಕೆಲಸ ಹುಡುಕುತ್ತಾ ಕೊನೆಗೆ ರಾಜನ ಅರಮನೆಗೆ ಬರುತ್ತಾನೆ ಆಗ ರಾಜರು ಯುವಕನ ನಡುವಳಿಕೆ ಮಾತು ವರ್ತನೆ ಎಲ್ಲವೂ ಗ್ರಹಿಸಿ ನಂತರ ಕೆಲಸಕ್ಕೆ ಸೇರಿಸಿಕೊಳ್ಳುತ್ತಾರೆ.

 ಮೊದಲಿಗೆ ಸಹಾಯಕನಾಗಿ ಕೆಲಸ ಮಾಡುತ್ತಾನೆ ನಂತರ ಈ ಯುವಕ ಚೆನ್ನಾಗಿ ಪ್ರಾಮಾಣಿಕತೆಯಿಂದ ಕೆಲಸ ಮಾಡಿದನು ನಂತರ ಸಿಪಾಯಿಯಾದನು ನಂತರ ಇವನೇ ಮುಖ್ಯಮಂತ್ರಿಯಾದನು ಹೀಗೆ ಕೆಲವು ವರ್ಷಗಳು ಕಳೆದವು ನಂತರ ಒಂದು ದಿನ ರಾಜ ಊರಿಗೆ ಮೆರವಣಿಗೆ ಹೋಗಬೇಕಾಗಿತ್ತು. ಆಗ ರಾಜನು ತನ್ನ ಕತ್ತಿಯನ್ನು ಮರೆತಿದ್ದನು ರಾಜನು ಯುವಕನಿಗೆ ಹೇಳಿದನು.

 ನಾನು ಕತ್ತಿಯನ್ನು ಮರೆತಿದ್ದೇನೆ ನೀನು ತೆಗೆದುಕೊಂಡು ಬಾ ಎಂದನು ಆಗ ಯುವಕನು ಅರಮನೆಗೆ ಬಂದನು ಕತ್ತಿಯನ್ನು ತೆಗೆದು ಕೊಂಡಾಗ ಪಕ್ಕದಲ್ಲಿ ನೋಡಿದರೆ ರಾಣಿ ಕಾವಲುಗಾರನ ಜೊತೆ ಸರಸ ಸಲ್ಲಾಪ ನಡೆಯುತ್ತಿತ್ತು ಇದನ್ನು ನೋಡಿದ ಯುವಕ ಅದಕ್ಕೆ ಒಂದು ಪರದೆಯನ್ನು ಹಾಕಿ ಈಚೆ ಬಂದನು.

ಕತ್ತಿಯನ್ನು ರಾಜನಿಗೆ ಕೊಟ್ಟನು ರಾತ್ರಿ ರಾಜ ಬಂದ ನಂತರ ರಾಣಿಯು ಯುವಕನ ಮೇಲೆ ಆಪಾದನೆ ಹೋರಿಸಿದಳು ಯುವಕ ಸರಿ ಇಲ್ಲ ಯುವಕನ ವರ್ತನೆ ಸರಿ ಇಲ್ಲ ನನ್ನನ್ನು ಬಲವಂತ ಮಾಡಿದನು ಎಂದು ಸುಳ್ಳು ಹೇಳಿದಳು ಇದನ್ನು ಕೇಳಿದ ರಾಜನಿಗೆ ತಲೆ ಕೆಟ್ಟು ಹೋಯಿತು ಆಗ ಏನು ಮಾಡಬೇಕು ಎಂದು ರಾಣಿಗೆ ಕೇಳಿದಾಗ ರಾಣಿ ಹೇಳಿದಳು.

 ಯುವಕನನ್ನು ಕೊಂದುಬಿಡುವುದೇ ಒಳ್ಳೆಯದು ಎಂದಾಗ ರಾಜನು ರಾಣಿಯ ಎಂದು ಹೇಳಿದಾಗ ರಾಣಿಯೇ ಅದಕ್ಕೆ ಒಂದು ಉಪಾಯವನ್ನು ಹೇಳಿದಳು ನಾಲ್ಕು ಸಿಪಾಯಿಗಳನ್ನು ಊರಿನ ಆಚೆ ಇರುವ ಬಾವಿಯ ಹತ್ತಿರ ಇರಲು ಹೇಳಿ ನಂತರ ಯುವಕನಿಗೆ ಕಳಿಸೋಣ ಯುವಕನಿಗೆ ಅವರು ಕೊಲ್ಲುತ್ತಾರೆ ಇದು ಸರಿಯಾದ ದಾರಿ ಎಂದು ಹೇಳಿದಳು.

 ರಾಜನು ಆಗಲಿ ಎಂದು ಹೇಳಿ ನಾಳೆ ಮಧ್ಯಾಹ್ನಕ್ಕೆ ಕಳಿಸೋಣ ಎಂದು ಹೇಳುತ್ತಾಳೆ ಮಾರನೆಯ ದಿನ ಮಧ್ಯಾಹ್ನ ವಾದ ನಂತರ ಯುವಕನನ್ನು ಊರಿನ ಆಚೆ ಬಾವಿ ಇದೆ ಅಲ್ಲಿ ಕೆಲಸ ಆಯಿತೇ ಎಂದು ಕೇಳಿ ಬನ್ನಿ ಎಂದು ಕಳುಹಿಸುತ್ತಾರೆ.

 ಯುವಕ ಆಗಲಿ ಎಂದು ಅರಮನೆಯಿಂದ ಸ್ವಲ್ಪ ದೂರ ಬರುತ್ತಾನೆ ಆಗ ಒಂದು ಮಂದಿರದಲ್ಲಿ ಮಂಗಳಾರತಿ ಆರಂಭವಾಗುತ್ತದೆ ಅದಕ್ಕೆ ಆ ಮಂಗಳಾರತಿಯನ್ನು ಪಡೆದು ತೀರ್ಥವನ್ನು ಕುಡಿದು ನಂತರ ಬರುತ್ತಾನೆ ಇನ್ನು ಸ್ವಲ್ಪ ದೂರ ಮುಂದೆ ಹೋದಾಗ ಅಲ್ಲಿ ಒಂದು ಮಂದಿರ ಇರುತ್ತದೆ ಯೋಚನೆ ಮಾಡುತ್ತಾನೆ ಹೇಗೋ ಸಮಯ ಇದೆ ಸ್ವಲ್ಪ ಪ್ರಾರ್ಥನೆ ಮಾಡಿಕೊಂಡು ಹೋಗಬಹುದು ಎಂದು ಯೋಚನೆ ಮಾಡಿ ಸ್ವಲ್ಪ ಸಮಯ ಪ್ರಾರ್ಥನೆಯನ್ನು ಮಾಡಿ ನಂತರ ಮುಂದೆ ಹೋಗುತ್ತಾನೆ.

 ಯುವಕನು ಹೋಗುತ್ತಿದ್ದ ದಾರಿಯಲ್ಲಿ ಒಂದು ಮಾವಿನ ತೋಟ ಇರುತ್ತದೆ ಮಾವಿನ ತೋಟದಲ್ಲಿ ಮಾಲೀಕನಿಗೆ ಗೊತ್ತಿಲ್ಲದಂತೆ ಮಾವಿನ ಹಣ್ಣುಗಳನ್ನು ಕಳ್ಳತನ ಮಾಡುತ್ತಿರುತ್ತಾರೆ ಇದನ್ನು ನೋಡಿದ ಯುವಕ ನಮಗೆ ಏಕೆ ಅವರು ಮಾಡಿದ್ದು ಅವರಿಗೆ ಎಂದು ಪಕ್ಕದಲ್ಲಿ ಇದ್ದ ಹುಲ್ಲನ್ನು ಮರೆಮಾಡಿ ಯಾರಿಗೂ ಗೊತ್ತಾಗದಿರಲಿ ಎಂದು ಬೇರೆ ದಾರಿಯಿಂದ ಬಳಸಿಕೊಂಡು ಹೋಗುತ್ತಾನೆ.

ಸ್ವಲ್ಪ ದೂರ ಹೋದ ನಂತರ  ಒಂದು ಮಂದಿರದ ಉದ್ಘಾಟನೆ ಯಾಗುತ್ತದೆ ಪ್ರಸಾದವನ್ನು ಹಂಚುತ್ತಿರುತ್ತಾರೆ ಆಗ ಪ್ರಸಾದವನ್ನು ಪಡೆದು ಹಾಗೆ ಇವನು ಕೂಡ ಸ್ವಲ್ಪ ಸಹಾಯ ಮಾಡಿ ಮುಂದೆ ಹೊರಡುತ್ತಾನೆ ಸ್ವಲ್ಪ ದೂರ ಹೋದ ನಂತರ ಒಬ್ಬ ವ್ಯಕ್ತಿ ಸತ್ತಿರುತ್ತಾನೆ ಹೆಣ ಇನ್ನೇನು ಎತ್ತಿಕೊಂಡು ಹೋಗಬೇಕು ಇದನ್ನು ನೋಡಿದ ಯುವಕ ತಾನು ಕೂಡ ಹೆಣಕ್ಕೆ ಹೆಗಲು ಕೊಡಬೇಕು ಎಂದು ನಾಲ್ಕು ಕಡೆ ಹೇಗಲು ಕೊಟ್ಟು ನಡೆಯುತ್ತಾನೆ,

ಮುಂದೆಯೇ ಸುಡುಗಾಡು (ಸ್ಮಶಾನ) ಇರುತ್ತದೆ ಅಂತಕ್ರಿಯೆ ಮುಗಿಸಿ ಪ್ರಾರ್ಥನೆ ಸಲ್ಲಿಸಿ ಬರುತ್ತಾನೆ ಊರಿನ ಕೊನೆಗೆ ಬಾವಿಯ ಹತ್ತಿರ ಬಂದು ಕೆಲಸ ಆಯಿತೇ ಎಂದು ಕೇಳುತ್ತಾನೆ ಕೆಲಸ ಆಗಿದೆ ಎಂದು ಹೇಳುತ್ತಾರೆ ಆಗ ಮರಳಿ ನೇರವಾಗಿ ಅರಮನೆಗೆ ಬರುತ್ತಾನೆ ಅರಮನೆಗೆ ಬಂದ ನಂತರ ರಾಜ ಹಾಗೂ ರಾಣಿ ಇಬ್ಬರು ದಿಗ್ಭ್ರಮೆಯಾಗುತ್ತಾರೆ.

 ಏಕೆ ಇಷ್ಟು ನಿಧಾನವಾಗಿ ಬಂದಿದ್ದೀಯಾ ಎಂದಾಗ ಯುವಕನು ನಮ್ಮ ಗುರುಗಳು ಪಂಚತತ್ವಗಳನ್ನು ಪಾಲನೆ ಮಾಡು ಎಂದು ಹೇಳಿದ್ದಾರೆ ಅದನ್ನು ಪಾಲನೆ ಮಾಡಿ ಬಂದಿದ್ದೇನೆ ಎಂದು ನಡೆದ ಕಥೆಯನ್ನು ವಿವರಿಸುತ್ತಾನೆ ಆಗ ಯುವಕನ ಮಾತಿನ ಮೇಲೆ ರಾಜನಿಗೆ ಭರವಸೆ ಬರುತ್ತದೆ.

ರಾಣಿಗೆ ಕೇಳುತ್ತಾನೆ ಸತ್ಯ ಏನು ಎಂದು ಕೇಳಿದಾಗ ರಾಣಿ ಇರುವ ಸತ್ಯವನ್ನು ಹೇಳುತ್ತಾಳೆ ಊರಿನ ಆಚೆ ಮೊದಲು ಯಾರು ಹೋಗಿ   ಕೇಳುತ್ತಾರೆ ಅವರನ್ನು ಕೊಲ್ಲುತ್ತಾರೆ ಅದಕ್ಕೆ ರಾಣಿ ಯುವಕ ಹೋದ ಸ್ವಲ್ಪ ಸಮಯದ ನಂತರ ಕಾವಲುಗಾರನನ್ನು ಕಳಿಸುತ್ತಾಳೆ.

ಮೊದಲು ಕವಾಲುಗಾರ ಹೋಗುತ್ತಾನೆ ಕಾವಲುಗಾರನನ್ನು ಕೊಲ್ಲುತ್ತಾರೆ ಯುವಕ ನಿಧಾನವಾಗಿ ಹೋಗುತ್ತಾನೆ ಯುವಕ ಮರಳಿ ವಾಪಸ್ ಬರುತ್ತಾನೆ ಆಮೇಲೆ ರಾಜ ರಾಣಿಗೆ ಏನೂ ಮಾಡಿದನು ತಿಳಿಯದು ಆದರೆ ನಾವು ನಮ್ಮ ಹಿರಿಯರು ಹೇಳಿರುವ ತತ್ವಗಳನ್ನು ಪಾಲನೆ ಮಾಡೋಣ.

ಎಸೆಯಲು ಮನಸ್ಸು ಒಪ್ಪುವುದಿಲ್ಲ

 

ಒಂದು ಶ್ರೀಮಂತರ ಮನೆಯಲ್ಲಿ ಒಂದು ಹೆಂಗಸು ಕೆಲಸ ಮಾಡಿಕೊಂಡು ಇರುತ್ತಾಳೆ ದಿನ ನಿತ್ಯವೂ ಕೆಲಸ ಮುಗಿಸಿ ಹೋಗಬೇಕಾದರೆ ಸೆರಗಿನಲ್ಲಿ ಒಂದು ಡಬ್ಬ ಇಟ್ಟುಕೊಂಡು ಹೋಗುತ್ತಿರುತ್ತಾಳೆ ಇದನ್ನು ಒಂದೆರಡು ದಿನ ಗಮನಿಸಿದ ಹೊಸ ಸೊಸೆ ಅತ್ತೆಗೆ ಹೇಳುತ್ತಾಳೆ.

 ಅಮ್ಮ ನಮ್ಮ ಮನೆ ಕೆಲಸದವಳು ಸೆರಗಿನಲ್ಲಿ ಏನೋ ತೆಗೆದುಕೊಂಡು ಹೋಗುತ್ತಿದ್ದಾಳೆ ಎಂದಾಗ ಅತ್ತೆಯವರು ಕೆಲಸದಾಕೆ ಬಹಳಷ್ಟು ವರ್ಷಗಳಿಂದ ಕೆಲಸ ಮಾಡುತ್ತಿದ್ದಾಳೆ ಅವಳ ಮೇಲೆ ಅನುಮಾನ ಪಡುವುದು ತಪ್ಪು ಎಂದು ಹೇಳುತ್ತಾರೆ ನಂತರ ಸೊಸೆಯು ಹೇಳುತ್ತಾಳೆ.

 ಇಲ್ಲ ಏನೋ ನನಗೆ ಅನುಮಾನ ಕಾಡುತ್ತಿದೆ ನಂತರ ಇವರು ಮನೆಯಲ್ಲಿ ಇದ್ದ ಎಲ್ಲಾ ವಸ್ತುಗಳನ್ನು ದಿನನಿತ್ಯ ಪರಿಶೀಲಿಸುತ್ತಾರೆ ಅಡಿಗೆ ಮನೆಯಲ್ಲಿ ಇದ್ದ ಎಲ್ಲಾ ವಸ್ತುಗಳು ಹಾಗೆಯೇ ಇರುತ್ತದೆ ಯಾವುದೇ ವಸ್ತುಗಳು ಕೂಡ ಕಡಿಮೆ ಆಗಿರುವುದಿಲ್ಲ ಆದರೂ ಏಕೋ ಏನೋ ಸೊಸೆಗೆ ಅನುಮಾನ ಹೋಗುವುದೇ ಇಲ್ಲ ಸೊಸೆ ಅತ್ತೆಗೆ ಹೇಳುತ್ತಾಳೆ.

ಏನಾದರೂ ಆಗಲಿ ನಾವು ಒಂದು ಸಿಸಿ ಕ್ಯಾಮೆರಾವನ್ನು ಅಳವಡಿಸಿ ಏನು ಮಾಡುತ್ತಾಳೆ ನೋಡೋಣ ಎಂದು ಹೇಳಿದಾಗ ಸೊಸೆಯ ಮಾತಿಗೆ ಬೆಲೆಕೊಟ್ಟು ಸಿಸಿ ಕ್ಯಾಮರಾ ವನ್ನು ಅಳವಡಿಸುತ್ತಾರೆ. 

ಅತ್ತೆ ಸೊಸೆಗೆ ಉತ್ಸಾಹ ಏಕೆಂದರೆ ಸಾಕ್ಷಿ ಸಮೇತವಾಗಿ ಹಿಡಿಯಬಹುದು ಎಂದು ನೋಡುತ್ತಿರುತ್ತಾರೆ ಕೆಲಸದಾಕೆ ತನ್ನ ಎಲ್ಲಾ ಕೆಲಸವನ್ನು ಮುಗಿಸುತ್ತಾಳೆ ನಂತರ ತಿಂದ ತಟ್ಟೆಗಳು ಹಾಗೂ ಲೋಟಗಳು ಎಲ್ಲವನ್ನು ಸಿಂಕ್ ಹತ್ತಿರ ಇಡಬೇಕಾದರೆ ತಟ್ಟೆಯಲ್ಲಿ ಉಳಿದಿದ್ದ ಎಂಜಲು ಅನ್ನವನ್ನು ತಾನು ಮಡಗಿದ್ದ ಸೆರಗಿನಿಂದ ಒಂದು ದೊಡ್ಡ ಡಬ್ಬವನ್ನು ತೆಗೆದು ಅದರಲ್ಲಿ ಚಿಕ್ಕ ಚಿಕ್ಕ ಡಬ್ಬಗಳಿಗೆ ಹಾಕಿ ಅದನ್ನು ಮತ್ತೆ ತನ್ನ ಸೆರಗಿನಲ್ಲಿ ಕಟ್ಟಿಕೊಂಡು ಎಲ್ಲಾ ಕೆಲಸ ಮುಗಿಸಿ ನಾನು ಹೋಗಿ ಬರುತ್ತೇನೆ ಎಂದು ಹೇಳಿ ಹೊರಡುತ್ತಾಳೆ.

ಕೆಲಸದಾಕೆಯನ್ನು ನೋಡಿದ ಅತ್ತೆ ಸೊಸೆಯರಿಗೆ ಕರುಳು ಹಿಸುಕಿದಂತೆ ಆಗುತ್ತದೆ ಆಗಲಿ ಎಂದು ಮಾರನೆಯ ದಿನವು ಚೆಕ್ ಮಾಡುತ್ತಾರೆ ಆದರೂ ಇದೇ ರೀತಿ ಉಳಿದ ಎಂಜಲು ಅನ್ನವನ್ನು ಸೆರಗಿನಲ್ಲಿ ಇಟ್ಟ ಡಬ್ಬದಲ್ಲಿ ಹಾಕಿಕೊಂಡು ಹೋಗುತ್ತಿರುತ್ತಾಳೆ ನಂತರ ಅತ್ತೆ ಸೊಸೆಗೆ ಅನುಮಾನ ಬರುತ್ತದೆ.

 ಈ ಎಂಜಲು ಅನ್ನವನ್ನು ಏಕೆ ತೆಗೆದುಕೊಂಡು ಹೋಗುತ್ತಿದ್ದಾಳೆ ಅದಕ್ಕೆ ತನ್ನ ಮಗನನ್ನು ಹೇಳುತ್ತಾರೆ ಹೋಗಿ ಈ ಕೆಲಸದವಳು ಈ ಎಂಜಲು ಅನ್ನವನ್ನು ಏನು ಮಾಡುತ್ತಾಳೆ ನೋಡು ಎಂದಾಗ ಕೆಲಸದಾಕೆಯ ಹಿಂದೆ ನಿದಾನವಾಗಿ ಹೋಗುತ್ತಾನೆ ಕೆಲಸದಾಕೆ ಮನೆಗೆ ಹೋಗಿ ತಾನು ತಂದಿದ್ದ ಎಂಜಲು ಅನ್ನವನ್ನು ತನ್ನ ಗಂಡನಿಗೆ ಹಾಗೂ ಮಕ್ಕಳಿಗೆ ತಿನಿಸುತ್ತಾಳೆ.

ಕಣ್ಣಾರೆ ಕಂಡ ದೃಶ್ಯವನ್ನು ಮಗ ನೋಡಿ ವಿಡಿಯೋವನ್ನು ಮಾಡುತ್ತಾನೆ ನಂತರ ತಂದು ತಾಯಿಗೆ ತೋರಿಸುತ್ತಾನೆ ಆಗ ತಾಯಿಯ ಕಣ್ಣಲ್ಲಿ ಸೊಸೆಯ ಕಣ್ಣಿನಲ್ಲಿ ನೀರು ಬರುತ್ತದೆ.

 ಮಾರನೇ ದಿನ ಎಂದಿನಂತೆ ಕೆಲಸದಾಕೆ ಕೆಲಸ ಮಾಡುತ್ತಾಳೆ ಎಂಜಲು ಅನ್ನವನ್ನು ಇಟ್ಟಾಗ ಕೆಲಸದವಳನ್ನು ಹೇಳುತ್ತಾರೆ ನೀನು ಕಸಗುಡಿಸು ನಾನು ಇದನ್ನು ನೋಡುತ್ತೇನೆ ಎಂದು ಉಳಿದ ಎಲ್ಲಾ ಅನ್ನವನ್ನು ಕಸದ ಬುಟ್ಟಿಗೆ ಹಾಕುತ್ತಾರೆ.

ಕೆಲಸದಾಕೆ ಬಂದು ನೋಡುತ್ತಾಳೆ ಎಂಜಿಲು ಅನ್ನ ಕಸದ ಬುಟ್ಟಿಗೆ ಹಾಕಿರುತ್ತಾರೆ ಇದನ್ನು ನೋಡಿದ ಕೆಲಸದಾಕೆ ಕಣ್ಣಲ್ಲಿ ನೀರು ಬರುತ್ತದೆ ಏಕೆಂದರೆ ಇವತ್ತು ನನ್ನ ಗಂಡ ಮಕ್ಕಳು ಉಪವಾಸ ಇರಬೇಕಲ್ಲ ನಂತರ ಕೆಲಸದಾಕೆ ಯೋಚಿಸುತ್ತಾಳೆ ಎಲ್ಲಾ ಕೆಲಸವು ಮುಗಿಸಿ ಕಣ್ಣಲ್ಲಿ ನೀರು ಹಾಕಿಕೊಂಡು ಮನೆಯಿಂದ ಈಚೆ ಬರುತ್ತಾಳೆ.

ಯಜಮಾನಿ ಗಡಸು ಧ್ವನಿಯಲ್ಲಿ ಕರೆಯುತ್ತಾಳೆ ಆಗ ಕೆಲಸದವಳು ಏನು ಅಮ್ಮ ಎಂದು ಒಳಗೆ ಬರುತ್ತಾಳೆ ಒಂದು ಬ್ಯಾಗನ್ನು ಕೊಡುತ್ತಾರೆ ಇದರಲ್ಲಿ ಅನ್ನವಿದೆ ನಿಮ್ಮ ಮನೆಯವರೆಲ್ಲರಿಗೂ ಅನ್ನವನ್ನು ಕೊಡು ಎಂಜಲು ಅನ್ನವನ್ನು ಕೊಡಬೇಡ ಎಂದು ಹೇಳುತ್ತಾಳೆ.

 ಕೆಲಸದಾಕೆಗೆ ಇನ್ನೂ ಹೆಚ್ಚಾಗಿ ಕಣ್ಣಿನಲ್ಲಿ ನೀರು ಬರುತ್ತದೆ ಕೆಲಸದಾಕೆ ನಮಗೆ ಕಳ್ಳತನ ಮಾಡಲು ಮನಸ್ಸು ಬರುವುದಿಲ್ಲ ಹಾಗೆಂದು ಇಷ್ಟು ರುಚಿಯಾದ ಅಡಿಗೆ ಮಾಡಿರುತ್ತೀರಾ ಅದಕ್ಕೆ ಸಾಕಷ್ಟು ಬಾದಾಮಿ ತುಪ್ಪ ಹಾಕಿರುತ್ತೀರಿ ಅದನ್ನು ಎಸೆಯಲು ಮನಸ್ಸು ಒಪ್ಪುವುದಿಲ್ಲ ಅದಕ್ಕೆ ನಾನು ತೆಗೆದುಕೊಂಡು ಹೋಗುತ್ತಿದ್ದೇನೆ ಎಂದು ಇರುವ ಸತ್ಯವನ್ನು ಹೇಳುತ್ತಾಳೆ.

 ಇರುವ ಊಟವನ್ನು ನಾನು ಕಳ್ಳತನ ಮಾಡಿದಾಗ ನೀವು ನೋಡಿದ್ದರೆ ನನಗೆ ಕೆಲಸದಿಂದ ತೆಗೆಯುತ್ತಿದ್ದೀರಿ ಆಗ ನನಗೆ ಇರುವ ಕೆಲಸವು ಹೋಗುತ್ತಿತ್ತು ಎಂದು ಹೇಳುತ್ತಾಳೆ ನಂತರ ಯಜಮಾನಿ ಇನ್ನು ಮುಂದೆ ಅವರಿಗೆ ಇಲ್ಲಿಂದಲೇ ಅಡಿಗೆ ಮಾಡಿ ತೆಗೆದುಕೊಂಡು ಹೋಗು ಎಂದು ಹೇಳುತ್ತಾರೆ.

 ನಾವು ಬಹಳಷ್ಟು ಉದಾಹರಣೆಗಳನ್ನು ನೋಡಿದ್ದೇವೆ ಯಾರೋ ಹಸಿವು ತಾಳಲಾರದೆ ಬ್ರೆಡ್ಡು ಕದ್ದಿದ್ದಾರೆ ಅವರಿಗೆ ಹಿಗ್ಗಾಮುಗ್ಗ ಹೊಡೆದಿದ್ದಾರೆ ಎಷ್ಟೋ ಜನ ಹಸಿವು ತಾಳಲಾರದೆ ಯಾವುದೋ ಸಮಾರಂಭಗಳಿಗೆ ಮದುವೆಗಳಿಗೆ ಗೊತ್ತಿಲ್ಲದಂತೆ ಹೋಗಿ ಊಟ ಮಾಡುತ್ತಾರೆ.

 ಎಲ್ಲಿ ಪ್ರಸಾದ ಹಂಚುತ್ತಾರೋ ಅಲ್ಲಿ ಸಾಲಾಗಿ ನಿಂತು ಪ್ರಸಾದವನ್ನು ಪಡೆಯುತ್ತಾರೆ ಹಸಿವಿನಿಂದ ಯಾರೂ ಬಳಲಿ ಇರುತ್ತಾರೋ ಅವರಿಗೆ ಮಾತ್ರ ಹಸಿವು ಗೊತ್ತು ಬೇರೆ ಏನೇ ಕದಿಯಲ್ಲಿ ಅದು ತಪ್ಪು ಆದರೆ ಹೊಟ್ಟೆ ಹಸಿವು ಇದ್ದಾಗ ಅನ್ನ ಕದ್ದರೆ ಅವರಿಗೆ ಹೊಡೆಯುವ ಬದಲು ಬೈಯುವ ಬದಲು ಸ್ವಲ್ಪ ಆಹಾರ ನಿಡೋಣ.

ನನ್ನ ಕೆಲಸದಲ್ಲಿ ನಾನು ಮಗ್ನನಾದೆ

ಒಂದು ಆಶ್ರಮದಲ್ಲಿ  ಕಮಲಿನ್ ಗುರು  ತೇಜಾ ಶಿಷ್ಯ ಮಾತ್ರ ಇರುತ್ತಾರೆ ಗುರುಗಳು ಚಿತ್ರ ಬರೆಯುವುದರಲ್ಲಿ ನಿಪುಣರು ಅದಕ್ಕಾಗಿ ಅವರಿಗೆ ಒಂದು ಒಳ್ಳೆಯ ಚಿತ್ರವನ್ನು ಬರೆದು ಕೊಡುವಂತೆ ಅಲ್ಲಿಯ ರಾಜನು ಹೇಳಿರುತ್ತಾನೆ ಅದಕ್ಕಾಗಿ ಚಿತ್ರಕಾರರು ಚಿತ್ರವನ್ನು ಬರೆಯುತ್ತಿರುತ್ತಾರೆ.

 ಚಿತ್ರ ಬರೆದ ನಂತರ ಶಿಷ್ಯ ನೋಡುತ್ತಾನೆ ಗುರುಗಳೆ ಇದು ಅಷ್ಟೊಂದು ಚೆನ್ನಾಗಿಲ್ಲ ಬೇರೆಯದನ್ನು ಬರಿಯಿರಿ ಎನ್ನುತ್ತಾನೆ ನಂತರ ಗುರುಗಳು ಬೇರೆಯ ಚಿತ್ರವನ್ನು ಬರೆಯುತ್ತಾರೆ ಅದು ಕೂಡ ಚೆನ್ನಾಗಿ ಮೂಡಿ ಬಂದಿರುವುದಿಲ್ಲ ಹೀಗಾಗಿ ಅನೇಕ ಬಟ್ಟೆಗಳು ಇರುತ್ತದೆ ಹೀಗೆ ನಿಧಾನವಾಗಿ ಎಲ್ಲವೂ ಖಾಲಿಯಾಗುತ್ತಾ ಬರುತ್ತದೆ.

 ಕೊನೆಗೆ ಒಂದೇ ಒಂದು ಬಟ್ಟೆ ಇರುತ್ತದೆ ಕೊನೆಗೆ ಗುರುಗಳಿಗೂ ಬೇಸರವಾಗಿರುತ್ತದೆ ಆಗ ಶಿಷ್ಯನಿಗೆ ಹೇಳುತ್ತಾರೆ ನೀನು ಪೇಟೆಗೆ ಹೋಗಿ ಕೆಲವು ಬಟ್ಟೆಗಳನ್ನು ಖರೀದಿಸಿಕೊಂಡು ಬಾ ಅದರಲ್ಲಿ ಚಿತ್ರ ಬರೆಯಬೇಕಾಗಿದೆ ಎಂದು ಕಳಿಸುತ್ತಾರೆ ಆಗ ಶಿಷ್ಯನಾದವನು ಬಟ್ಟೆ ತರಲೆಂದು ಪೇಟೆಗೆ ಹೋಗುತ್ತಾನೆ.

  ಇದ್ದ ಒಂದು ಬಟ್ಟೆಯಲ್ಲಿ ಒಂದು ಚಿತ್ರವನ್ನು ಚಿತ್ರಸುತ್ತಾರೆ ಅದು ತುಂಬಾ ಕಡಿಮೆ ಸಮಯದಲ್ಲಿ ಬರೆಯುತ್ತಾರೆ ಆ ಚಿತ್ರವು ನಿಜಕ್ಕೂ ತುಂಬಾ ಚೆನ್ನಾಗಿ ಮೂಡಿ ಬಂದಿರುತ್ತದೆ ಶಿಷ್ಯ ಬಂದು ನೋಡಿ ಬೆರಗಾಗುತ್ತಾನೆ.

 ಗುರುಗಳೇ ಇಷ್ಟೊಂದು ಒಳ್ಳೆಯ ಚಿತ್ರವನ್ನು ಹೀಗೆ ಬರೆದದ್ದು ಇದರ ರಹಸ್ಯವೇನು ಎಂದು ಕೇಳಿದನು ಆಗ ಗುರುಗಳು ಹೇಳಿದರು ಇಷ್ಟು ದಿನವೂ ನಾನು ಬರೆಯುತ್ತಿದ್ದುದು ನನ್ನಲ್ಲಿ ಬೇರೆಯ ಆಲೋಚನೆಯೂ ಇತ್ತು ಬೇರೆಯವರಿಗೆ ಮೆಚ್ಚಿಸಲು ಚೆನ್ನಾಗಿ ಬರೆಯಬೇಕು ಎಂದು ಬರೆಯುತ್ತಿದ್ದೆ.

ಇಂದು ನೀನು ಕೂಡ ಇರಲಿಲ್ಲ ನಾನು ಚಿತ್ರ ಬರೆಯಲಿಕ್ಕೆ ಆರಂಭಿಸಿದಾಗ ನನ್ನನ್ನೇ ನಾನು ಮರೆತೆ ಚಿತ್ರ ಬರೆಯುವುದರಲ್ಲಿ ಮಗ್ನನಾದೆ ನಂತರ ನನ್ನ ಆತ್ಮ ಸಂತೋಷಕ್ಕಾಗಿ ಈ ಕೆಲಸ ಮಾಡಿದೆ ಅದಕ್ಕಾಗಿ ಒಳ್ಳೆಯ ಚಿತ್ರ ಮೂಡಿದೆ ಎಂದು ಹೇಳಿದರು

ನಾವು ಮಾಡಿದ ಕೆಲಸ ನಮಗೆ ಮೆಚ್ಚುಗೆ ಆದರೆ ಸಾಕು ಈ ರೀತಿ ನಾವು ಕೆಲಸ ಮಾಡಿದೆ ಆದರೆ ಯಶಸ್ಸು ಖಂಡಿತ ಹಾಗೆ ನಮಗೂ ಆತ್ಮತೃಪ್ತಿ ಸಿಗುತ್ತದೆ. ನನ್ನ ಆತ್ಮ ತೃಪ್ತಿಗಾಗಿ ಯಾವ ಸಾಧನೆ ಮಾಡಿದ್ದೇನೆ?

 ವಿಶ್ರಾಂತಿ ನೀಡಬೇಡಿ

ಒಂದು ಊರಿನಲ್ಲಿ ಒಬ್ಬ ಕಠೋರ ಹೃದಯ ಮಧುರಂಕ್ ಮಾಲೀಕ ಇದ್ದನು ಸಾಕಷ್ಟು ಕೆಲಸಗಾರರು ಇದ್ದರು ಕೆಲಸಗಾರರನ್ನು ಕರುಣೆ ಇಲ್ಲದೆ ಬೆಳಿಗ್ಗೆ ಸಂಜೆ ದುಡಿಸಿಕೊಳ್ಳುತ್ತಿದ್ದನು ಹಾಗೆಯೇ ಊಟವು ಸರಿಯಾಗಿ ನೀಡುತ್ತಿರಲಿಲ್ಲ.

ಹೊಲದಲ್ಲಿ ಬೆಳೆದ ಎಲ್ಲಾ ಪೈರುಗಳನ್ನು ಕಿತ್ತು ಒಂದು ಕಡೆ ಹಾಕಿದರು ನಂತರ ಮಾಲೀಕನಿಗೆ ಅದೇ ದಿನ ನೀವು ಈ ಫೈರುಗಳ ಕಾಳುಗಳನ್ನು ಬೇರ್ಪಡಿಸಿ ಎಂದು ಆಜ್ಞೆ ಮಾಡಿದನು ಆಗಲೇ ಸಂಜೆಯಾಗಿತ್ತು ಮಧ್ಯಾಹ್ನದ ಊಟವು ಸರಿಯಾಗಿ ನೀಡಲಿಲ್ಲ ಹಾಗಾಗಿ ಎಲ್ಲಾ ಕೆಲಸಗಾರರು ಹೇಳಿದರು.

 ಇಂದು ನಮಗೆ ತುಂಬಾ ಆಯಾಸವಾಗಿದೆ ನಾಳೆ ಈ ಕೆಲಸವನ್ನು ಮಾಡುತ್ತೇವೆ ಎಂದಾಗ ಮಾಲೀಕ ಇವತ್ತೇ ಮಾಡಬೇಕು ಇಲ್ಲದಿದ್ದರೆ ನಿಮಗೆ ರಾತ್ರಿಯ ಊಟವು ಸಿಗುವುದಿಲ್ಲ ಎಂದು ಹೆದರಿಸಿದನು ಆಗ ಮತ್ತೆ ಕೆಲಸದವರು ಹೇಳಿದರು.

 ನಮಗೆ ಒಂದು ಎತ್ತನ್ನಾದರೂ ಕೊಡಿ ಕಾಲಿನಿಂದ ತುಳಿಸಿದರೆ ಕಾಳುಗಳು ಬೇರ್ಪಡುತ್ತವೆ ಕೆಲಸವು ಬೇಗ ಆಗುತ್ತದೆ ನಿಮಗೂ ಸುಲಭವಾಗುತ್ತದೆ ಹಾಗೂ ನಾಳೆಯ ಕೆಲಸ ಎಂದಿನಂತೆ ನಡೆಯುತ್ತದೆ ಎಂದು ವಿನಮ್ರವಾಗಿ ಹೇಳಿದರು.

ಮಾಲೀಕನು ಕೋಪಿಸಿಕೊಂಡು ನಿಮಗೆ ಎತ್ತು ಕೊಡಬೇಕೇ ನೀವೇ ಮಾಡಬೇಕು ಇಲ್ಲದಿದ್ದರೆ ಎತ್ತಿಗೆ ಹೊಡೆಯುವಂತೆ ಹೊಡೆಯುತ್ತೇನೆ ಎಂದು ಹೇಳಿ ಹೊರಟು ಹೋದನು ನಂತರ ಮಾಲೀಕನು ಮಲಗಿದನು ಕನಸು ಕಂಡನು ಎಲ್ಲಾ ಕೆಲಸದವರು ಒಂದು ಕಡೆ ಕುಳಿತುಕೊಂಡು ಶ್ರದ್ಧೆ ಭಕ್ತಿಯಿಂದ ಅಳುತ್ತಾ ಪ್ರಾರ್ಥನೆ ಮಾಡಿದರು. ಹೇಗೆ ಈ ಕೆಲಸ ಮುಗಿಸುವುದು ಎಂದಾಗ ಒಂದು ಶಬ್ದ ಬಂತು.

 ನಿಮ್ಮ ಪ್ರಾರ್ಥನೆಗೆ ನಾನು ಬಂದಿದ್ದೇನೆ ನಾನು ನಿಮಗೆ ಒಂದು ಎತ್ತನ್ನು ಕೊಡುತ್ತೇನೆ ಇದರಿಂದ ನೀವು ಸಾಕಷ್ಟು ಕೆಲಸವನ್ನು ಮಾಡಿಸಿಕೊಳ್ಳಬಹುದು ಈ ಎತ್ತಿಗೆ ವಿಶ್ರಾಂತಿ ನೀಡಬೇಡಿ ಎಷ್ಟು ಸಾಧ್ಯವೋ ಅಷ್ಟು ಕೆಲಸ ಮಾಡಿಸಿ ಮತ್ತೆ ಕೆಲಸ ಮಾಡದಿದ್ದರೆ ಚೆನ್ನಾಗಿ ಹೊಡೆಯಿರಿ.

ಒಂದೇ ಒಂದು ನಿಯಮ ಏನೆಂದರೆ ತಲೆಯ ಮೇಲೆ ಮಾತ್ರ ಹೊಡೆಯಬೇಡಿ ಎನ್ನುವ ಶಬ್ದ ಬಂತು ನಂತರ ನೋಡಿದರೆ ಒಂದು ಎತ್ತು ಬಂದಿದೆ. ಕೆಲಸಗಾರರಿಗೆ ತುಂಬಾ ಸಂತೋಷವಾಯಿತು ನಮ್ಮ ಕಷ್ಟಕ್ಕೆ ದೇವರು ನಮಗೆ ಸಹಾಯ ಮಾಡಿದ್ದಾರೆ ಹಾಗಾಗಿ ಎತ್ತಿನಿಂದ ಕೆಲಸ ಕೆಲಸ ಮಾಡಿಸೋಣವೆಂದು ಎಲ್ಲಾ ಕೆಲಸಗಾರರು ಎತ್ತಿನಿಂದ ಕೆಲಸ ಮಾಡಿಸಿದರು ಕೆಲವು ಸಾರಿ ಎತ್ತು ಕೆಲಸವೇ ಮಾಡುವುದಿಲ್ಲ ಎನ್ನುತ್ತಿದೆ ಅದಕ್ಕೆ ಕೆಲಸದವರು ಬೆನ್ನಿಗೆ ಚೆನ್ನಾಗಿ ಬಾಸುಂಡೆ ಬರುವಂತೆ ಹೊಡೆದರು.

ಕೆಲಸ ಮಾಡಲು ಆರಂಭಿಸಿತು ಏನೇನು ಕೆಲಸ ಮಾಡಿಸಬೇಕಾಗಿತ್ತೋ ಆ ಕೆಲಸಗಳನ್ನು ಮಾಡಿಸಿದರು ಆಗ ಕೆಲಸಗಾರರಿಗೆ ಸ್ವಲ್ಪ ವಿಶ್ರಾಂತಿ ಸಿಗುತ್ತಿತ್ತು ಕೆಲಸದವರು ಕೆಲವು ಸಾರಿ ಆಹಾರವೇ ನೀಡುತ್ತಿರಲಿಲ್ಲ ಏಕೆಂದರೆ ಮಾಲೀಕನು ನಮಗೆ ನೀಡುತ್ತಿರಲಿಲ್ಲ ನೀನು ಹಾಗೆಯೇ ಹಸಿದುಕೊಂಡು ಕೆಲಸ ಮಾಡು ಎಂದು ಎತ್ತಿಗೆ ಆಗಾಗ ಹೊಡೆಯುತ್ತಿದ್ದರು.

  ಕೆಲವು ಸಾರಿ ಎತ್ತು ಓಡಿ ಹೋಗುವುದಕ್ಕೆ ಪ್ರಯತ್ನಪಟ್ಟಿತು ಆದರೂ ಎಲ್ಲರೂ ಹಿಡಿದು ಕಟ್ಟಿ ಹಾಕುತ್ತಿದ್ದರು ಎತ್ತು ಬಂದ ನಂತರದಿಂದ ಮಾಲೀಕನು ಕಣ್ಮರೆಯಾಗಿದ್ದನು ಎಲ್ಲಿ ಹುಡುಕಿದರೂ ಸಿಗಲಿಲ್ಲ ಏನಾದರೂ ಆಗಲಿ ಎಂದು ಎಲ್ಲಾ ಕೆಲಸಗಾರರು ನೆಮ್ಮದಿಯಿಂದ ಇದ್ದರು.

 ಒಂದು ವಾರ ಆಗುತ್ತಿದಂತೆ ಎತ್ತು ನಿಶಕ್ತಿ ಯಾಗ ತೊಡಗಿತು ನಡೆಯಲು ಓಡಾಡಲು ಕಷ್ಟ ಪಡುತ್ತಿತ್ತು ಕೊನೆಗೆ ಕುಳಿತುಕೊಂಡಿತು ಕೆಲಸಗಾರರು ಬದುಕಿದ್ದೀಯೋ ಸತ್ತು ಹೋಗಿದೆಯೋ ಎಂದು ಸ್ವಲ್ಪ ನೀರು ಕುಡಿಸಿದರು ನಂತರ ನಿಧಾನವಾಗಿ ನಡೆಯಿತು.

ಕೆಲಸಗಾರರು ಹಗ್ಗ ಕಟ್ಟುವುದನ್ನು ಮರೆತರು ಆಗ ಎತ್ತಿಗೆ ತುಂಬಾ ಹಸಿವು ಆಗಿತ್ತು ಹಾಗಾಗಿ ನಿಧಾನವಾಗಿ ಮನೆಯ ಅಂಗಳದ ಹತ್ತಿರ ಹೋಗಿ ಗಿಡಗಳನ್ನು ತಿನ್ನುವುದಕ್ಕೆ ಆರಂಭಿಸಿತು ಇದನ್ನು ನೋಡಿದ ಮಾಲೀಕನ ಹೆಂಡತಿಗೆ ಕೋಪ ಬಂತು ದೊಣ್ಣೆಯನ್ನು ತೆಗೆದುಕೊಂಡು ಬಂದು ಎತ್ತಿನ ತಲೆಯ ಮೇಲೆ ರಫ್ ಎಂದು ಹೊಡೆದಳು.

 ನಂತರ ಎಲುಬು ಮೂಳೆಗಳು ಮಾತ್ರ ಕಾಣಿಸುತ್ತಿದೆ ಒಣಕಲ ಮನುಷ್ಯನಾಗಿದ್ದನು ಯಾರು ಎಂದು ನೋಡಿದರೆ ತನ್ನ ಗಂಡನೇ ಆಗಿದ್ದನು ಏನು ನಿಮ್ಮ ಅವಸ್ಥೆ ಏಕೆ ಹೀಗಾಯ್ತು ಇಷ್ಟು ದಿನ ನೀವು ಎಲ್ಲಿದ್ದೀರಿ ಎಂದು ಕೇಳಿದಾಗ ನಾನು ಕೆಲಸದವರನ್ನು ಹೆಚ್ಚು ದುಡಿಸಿಕೊಳ್ಳುತ್ತಿದ್ದೆ ಅದಕ್ಕಾಗಿ ಸರಿಯಾದ ಪಾಠ ಕಲಿತಿದ್ದೇನೆ ಎಂದು ಹೇಳಿದನು.

 ನೀನು ತಲೆಯ ಮೇಲೆ ಹೊಡೆದಿದ್ದರಿಂದ ನನಗೆ ಮರುಜನ್ಮ ಬಂದಿದೆ ಈಗ ನನಗೆ ಅರ್ಥವಾಗಿದೆ ಕೆಲಸಗಾರರು  ಬಹಳಷ್ಟು ಕೆಲಸ ಮಾಡುತ್ತಿದ್ದಾರೆ ಎಂದು ಅರಿತನು ಮುಂದೆ ನಾನು ಕೆಲಸಗಾರರನ್ನು ಹೆಚ್ಚಾಗಿ ದುಡಿಸಿಕೊಳ್ಳುವುದಿಲ್ಲ ಒಳ್ಳೆಯ ಮನುಷ್ಯನಾಗುತ್ತೇನೆ ಎಂದು ಹೆಂಡತಿಗೆ ಹೇಳಿದನು. ನಂತರ ಗಾಬರಿಯಾಗಿ ಮಾಲೀಕ ಎದ್ದನು ನಂತರ ತಿಳಿಯಿತು ನಾನು ಕನಸು ಕಂಡೆ ಎಂದು ಅರಿತನು.

ಬೆಂಕಿ ಹಚ್ಚಿದರು

ಬಹಳಷ್ಟು ವರ್ಷಗಳ ಹಿಂದೆ ಒಂದು ಊರಿನಿಂದ ಉಪನ್ಯಾಸ ಮಾಡಿ ಬಾಬಾ ಅವರು ಬೇರೆ ಊರಿಗೆ ಹೋಗುತ್ತಿದ್ದರು ಸಂಜೆಯಾಗುತ್ತಿತ್ತು ಊರಿಗೆ ಹೋಗುವ ಮುನ್ನವೇ ಒಂದು ದೊಡ್ಡ ಗುಹೆ ಇತ್ತು ಆ ಕಡೆ ಹೋದರೆ ಅರಣ್ಯಕ್ಕೆ ದಾರಿ ಈ ಕಡೆ ಬಂದರೆ ಊರಿಗೆ ದಾರಿ ಸ್ವಲ್ಪ ವಿಶ್ರಾಂತಿ ಪಡೆಯೋಣ ಎಂದು ಕುಳಿತರು.

 ಆಗ ಊರಿನಿಂದ ಒಬ್ಬ ಬಲಾಂಬ್ ವ್ಯಕ್ತಿ ಒಂದು ದೊಡ್ಡ ಪಾತ್ರೆಯಲ್ಲಿ ಅನ್ನ ಸಾರು ತೆಗೆದುಕೊಂಡು ಬಂದು ಗುಹೆಯ ಮುಂದೆ ನಿಂತು ಆಹಾರ ಬಂದಿದೆ ಎಂದು ಕೂಗಿದನು ನಂತರ ಒಬ್ಬ ವ್ಯಕ್ತಿ ಆಹಾರವನ್ನು ತೆಗೆದುಕೊಂಡು ಒಳಗಡೆ ಹೋದನು.

 ಮತ್ತೆ ಆಹಾರ ತಂದ ವ್ಯಕ್ತಿ ಊರಿಗೆ ಹೋಗುತ್ತಿದ್ದಾಗ ಬಾಬಾ ಅವರು ಗುಹೆಯಲ್ಲಿ ಯಾರಿಗೆ ಆಹಾರವನ್ನು ನೀಡಿದ್ದೀರಿ ಎಂದು ಕೇಳಿದರು ಆಗ ಊರಿನವನು ಹೇಳಿದ ಬಾಬಾ ಅವರೇ ನಿಮಗೆ ತಿಳಿದಿಲ್ಲ ಈ ಊರಿನಲ್ಲಿ ಒಬ್ಬ ರಾಕ್ಷಸ ಇದ್ದನು ಅವನು ಬಹಳಷ್ಟು ತೊಂದರೆ ನೀಡುತ್ತಿದ್ದನು ಇದರಿಂದ ಊರೆಲ್ಲವೂ ಬೇಸತ್ತು ಹೋಗಿತ್ತು.

ಊರಿನ ಮುಖ್ಯಸ್ಥರು ರಾಕ್ಷಸನೊಂದಿಗೆ ಮಾತನಾಡಿ ದಿನನಿತ್ಯ ಬೇಕಾದ ಆಹಾರವನ್ನು ನೀಡಿದರೆ ಊರಿನ ಜನಕ್ಕೆ ಯಾವುದೇ ರೀತಿಯ ತೊಂದರೆ ಕೊಡುವುದಿಲ್ಲ ಎಂದು ಆಶ್ವಾಸನೆ ನೀಡಿದ್ದಾರೆ ಅದರಂತೆಯೇ ನಾವು ದಿನನಿತ್ಯ ಇವರಿಗೆ ಆಹಾರವನ್ನು ನೀಡುತ್ತಿದ್ದೇವೆ ಎಂದು ಹೇಳಿದರು.

 ಬಾಬಾ ಅವರು ರಾಕ್ಷಸರು ಇರುತ್ತಾರೆಯೇ? ಎಂದು ಯೋಚನೆ ಮಾಡಿದರು ನಂತರ ಏನಾದರೂ ಆಗಲಿ ಎಂದು ನಿಧಾನವಾಗಿ ಗುಹೆಯ ಒಳಗೆ ಸದ್ದಿಲ್ಲದಂತೆ ಹೋದರು ಅಲ್ಲಿ ಕುದುರೆ ಒಂದು ಸಂಸಾರ ವಾಸ ಮಾಡಿಕೊಂಡಿದ್ದಾರೆ ಈಗ ಕೊಟ್ಟಿದ್ದ ಆಹಾರವನ್ನು ತಿನ್ನುತ್ತಿದ್ದಾರೆ ಬಾಬಾ ಅವರು ಎಲ್ಲವನ್ನು ಗಮನಿಸಿ ನಿಧಾನಕ್ಕೆ ಮತ್ತೆ ಊರಿಗೆ ಬಂದರು ನಂತರ ಊರಿನವರಿಗೆ ಹೇಳಿದರು.

 ನೀವೇನು ಭಯಪಡುವ ಅವಶ್ಯಕತೆ ಇಲ್ಲ ರಾಕ್ಷಸ ನೆನ್ನೆಯೇ ಸತ್ತುಹೋಗಿದ್ದಾನೆ ಈ ಮಾತು ಕೇಳಿದ ಊರಿನವರಿಗೆ ಗಲಿಬಿಲಿ ರಾಕ್ಷಸ ಏನಾದರೂ ಮಾಡಿದರೆ ಎನ್ನುವ ಹೆದರಿಕೆ ಮತ್ತೊಂದು ಕಡೆ ಬಾಬಾ ಅವರು ಯಾವುದೇ ಕಾರಣಕ್ಕೂ ಸುಳ್ಳು ಹೇಳುವುದಿಲ್ಲ ನಂತರ ಇರುವ ಎಲ್ಲಾ ಕತೆಯನ್ನು ಕೇಳಿದರು.

 ಮೊದಲು ಬಹಳಷ್ಟು ಜನ ರಾಕ್ಷಸನನ್ನು ಹೆದರಿಸಲು ಹೋದರು ಆದರೆ ಅವರೆಲ್ಲರೂ ಬರಲಿಲ್ಲ ಕೊನೆಗೆ ಊರಿನ ಮುಖ್ಯಸ್ಥರ ಕುಟುಂಬವೇ ಹೋಯಿತು ಆದರೆ ಕುಟುಂಬದಲ್ಲಿ ಇರುವ ಎಲ್ಲರೂ ನಾಪತ್ತೆಯಾದರೂ ಅದಕ್ಕಾಗಿ ಮುಖ್ಯಸ್ಥರೇ ಹುಡುಕಿಕೊಂಡು ಹೋದಾಗ ರಾಕ್ಷಸ ದಿನನಿತ್ಯ ನನಗೆ ಇಷ್ಟು ಕೊಟ್ಟರೆ ನಾನು ನಿಮಗೆ ಏನು ಮಾಡುವುದಿಲ್ಲ ಎಂದು ರಾಕ್ಷಸ ಹೇಳಿತು ಎಂದು ಹೇಳಿದರು.

ಈ ಊರಿನ ಮುಖ್ಯಸ್ಥರು ಕೂಡ ನಮಗಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿ ನಮ್ಮನ್ನು ಉಳಿಸಿಕೊಂಡಿದ್ದಾರೆ ಎಂದು ಹೇಳಿದರು ಇದನ್ನು ಅರಿತ ಬಾಬಾ ಅವರು ಈಗ ನೀವೇನು ಭಯಪಡಬೇಡಿ ರಾಕ್ಷಸ ಸತ್ತು ಹೋಗಿದ್ದಾನೆ ಅಲ್ಲಿ ಇರುವುದು ಮನುಷ್ಯರು ಮಾತ್ರವೇ ಆದ್ದರಿಂದ ನಾವೆಲ್ಲರೂ ಸೇರಿ ಹೋಗೋಣ ನಾನು ಮುಂದೆ ಹೋಗುತ್ತೇನೆ ನಾನು ಹೇಳಿದಂತೆ ಮಾಡಿ ಎಂದು ಹೇಳಿದರು.

ಊರಿನವರು ಆಗಲಿ ಎಂದು ಬಾಬಾ ಅವರ ಜೊತೆ ಗುಹೆಯ ಹತ್ತಿರ ಬಂದರು ದೊಡ್ಡ ಗುಹೆಗೆ ಎರಡು ದಾರಿಗಳಿದ್ದವು ಸ್ವಲ್ಪ ಜನಕ್ಕೆ ಒಂದು ಕಡೆ ನಿಲ್ಲಿಸಿ ಗುಹೆಯ ಸುತ್ತಲೂ ಸೌದೆಯನ್ನು ಜೋಡಿಸಿದರು ಮತ್ತೆ ಈ ಕಡೆ ಗುಹೆಯ ಬಾಗಿಲ ಬಳಿ ಬಾಬಾ ಅವರು ಊರಿನ ಜನರು ಕಾಯುತ್ತಿದ್ದರು ಆ ಕಡೆ ಬೆಂಕಿ ಹಚ್ಚಿದರು.

 ಬೆಂಕಿ ಹತ್ತಿಸುತ್ತಿದ್ದಂತೆ ಹೊಗೆ ಜಾಸ್ತಿ ಆಯ್ತು ಒಳಗಡೆ ಇರಲು ಸಾಧ್ಯವಾಗಲಿಲ್ಲ ಆಗ ಕಾಪಾಡಿ ಕಾಪಾಡಿ ಎಂದು ಓಡಿ ಬಂದರು ಯಾರು ಓಡಿ ಬಂದರೂ ಎಂದು ನೋಡಿದರೆ ಊರಿನ ಮುಖ್ಯಸ್ಥರ ಸಂಸಾರವೇ ಇತ್ತು.

 ಆಗ ಊರಿನವರಿಗೆ ಎಲ್ಲರಿಗೂ ಊರಿನ ಮುಖ್ಯಸ್ಥರ ಬಂಡವಾಳ ತಿಳಿಯಿತು ಮುಖ್ಯಸ್ಥನೇ ಈ ರೀತಿ ಎಲ್ಲರಿಗೂ ಮೋಸ ಮಾಡುತ್ತಿದ್ದಾನೆ ಎಂದು ಊರಿನವರು ಬೈದರು ಆಗ ಮುಖ್ಯಸ್ಥನು ತನ್ನ ತಪ್ಪನ್ನು ಅರಿತುಕೊಂಡನು ನಂತರ ನಾನು ಈ ಊರಿನಲ್ಲಿ ಇರುವುದಿಲ್ಲ ಎಂದು ಹೇಳಿ ಬೇರೆ ಊರಿನಲ್ಲಿ ಹೋಗಿ ಬದುಕಿದರು.

]]>
https://babakategalu.com/%e0%b2%a4%e0%b2%a4%e0%b3%8d%e0%b2%b5%e0%b2%97%e0%b2%b3%e0%b3%81%e0%b2%aa%e0%b2%be%e0%b2%b2%e0%b2%bf%e0%b2%b8%e0%b2%ac%e0%b3%87%e0%b2%95%e0%b3%81/feed/ 0
ಕಂಟಕ ಬರಲಿದೆ https://babakategalu.com/%e0%b2%95%e0%b2%82%e0%b2%9f%e0%b2%95-%e0%b2%ac%e0%b2%b0%e0%b2%b2%e0%b2%bf%e0%b2%a6%e0%b3%86/ https://babakategalu.com/%e0%b2%95%e0%b2%82%e0%b2%9f%e0%b2%95-%e0%b2%ac%e0%b2%b0%e0%b2%b2%e0%b2%bf%e0%b2%a6%e0%b3%86/#respond Wed, 09 Apr 2025 04:40:00 +0000 https://babakategalu.com/?p=266 Read more]]> ಒಂದು ಕಾಡಿನಲ್ಲಿ ಒರಟು ಸ್ವಭಾವದ ಹುಲಿ ಇರುತ್ತದೆ. ಇತರರಿಗೆ ತೊಂದರೆ ಕೊಡುತ್ತಿರುತ್ತದೆ ಸ್ವಲ್ಪ ದೂರದಲ್ಲಿ ತಾಯಿ ಜಿಂಕೆ ಒಂದು ಮರಿಗೆ ಜನ್ಮ ನೀಡಿರುತ್ತದೆ ಆ ಮರಿ ನಲಿಯುತ್ತಾ ಕುಣಿಯುತ್ತ ಓಡಾಡಿಕೊಂಡು ಇರುತ್ತದೆ.

 ಈ ಜಿಂಕೆಮರಿಯನ್ನು ನೋಡಿ ಎಲ್ಲಾ ಪ್ರಾಣಿಗಳು ಸಂತೋಷ ಪಡುತ್ತವೆ ಹುಲಿ ತನ್ನ ಆಹಾರ ಹುಡುಕಲು ಬರುತ್ತದೆ ಚಿಕ್ಕ ಜಿಂಕೆಮರಿಯನ್ನು ನೋಡಿ ಆ ಮರಿಯನ್ನು ಹಿಡಿದುಕೊಳ್ಳುತ್ತದೆ ಜಿಂಕೆಮರಿ ವಿಲವಿಲ ಒದ್ದಾಡುತ್ತಿರುತ್ತದೆ ಆಗ ಜಿಂಕೆಯ ತಾಯಿ ಪರಿಪರಿಯಾಗಿ ಕೇಳಿಕೊಳ್ಳುತ್ತದೆ ದಯವಿಟ್ಟು ಬಿಟ್ಟುಬಿಡು ಎಂದು ಅಳುತ್ತದೆ.

 ಈ ಘಟನೆ ಎಲ್ಲಾ ಪ್ರಾಣಿಗಳು ನೋಡುತ್ತಿದ್ದರೂ ಕೂಡ ಹುಲಿಗೆ ಹೆದರಿ ಎಲ್ಲಾ ಪ್ರಾಣಿಗಳು ಸುಮ್ಮನಿರುತ್ತವೆ ನಂತರ ಚಿಕ್ಕ ಜಿಂಕೆಮರಿಯನ್ನು ತಿಂದು ಹೋಗುತ್ತದೆ ಮತ್ತೆ ಹುಷಾರಾಗಿರಿ ಮತ್ತೆ ನಾನು ಬರುತ್ತೇನೆ ಎಂದು ಹೇಳಿ ಹೊರಟು ಹೋಗುತ್ತದೆ ಜಿಂಕೆ ತಾಯಿ ತುಂಬಾ ದುಃಖಿಸುತ್ತದೆ.

 ತನ್ನ ಕಷ್ಟ ಇತರ ಪ್ರಾಣಿಗಳಿಗೆ ಹೇಳುತ್ತದೆ ಎಲ್ಲಾ ಪ್ರಾಣಿಗಳು ಕೇಳಿ ಸಮಾಧಾನ ಪಡಿಸುತ್ತವೆ ನಂತರ ಗೋರಿಲ್ಲ ಎಲ್ಲವೂ ನೋಡಿದ ನಂತರ ಜಿಂಕೆಗೆ ಹೇಳುತ್ತದೆ ನೀನೇನು ಭಯ ಬೇಡ ಅದಕ್ಕೆ ಸರಿಯಾದ ವ್ಯವಸ್ಥೆ ಮಾಡುತ್ತೇನೆ ಎಂದು ಹೇಳುತ್ತದೆ ನಂತರ ಹುಲಿ ತನ್ನ ಮರಿಗಳ ಜೊತೆ ಸಂತೋಷದಿಂದ ಹಾಯಾಗಿ ಆಟ ಆಡಿಕೊಂಡು ಇರುತ್ತದೆ.

 ಗೋರಿಲ್ಲ ಹೋಗಿ ಹುಲಿಗೆ ಮಾತನಾಡಿಸುತ್ತದೆ ನಿನ್ನ ಮಕ್ಕಳು ತುಂಬಾ ಮುದ್ದು ಮುದ್ದಾಗಿದೆ ನಿನ್ನ ಮಕ್ಕಳು ನಿನ್ನ ಜೊತೆ ಎಷ್ಟು ಚೆನ್ನಾಗಿ ಆಟ ಆಡುತ್ತಿದ್ದಾರೆ ಎಂದಾಗ ಹುಲಿಯು ಹೌದು ಎಂದು ಹಿಗುತ್ತದೆ ನಂತರ ಗೋರಿಲ್ಲ ಒಂದು ನಿಮಿಷ ಯೋಚನೆ ಮಾಡಿ ಇದನ್ನು ನೋಡಿದರೆ ನನಗೆ ತುಂಬಾ ಬೇಸರವಾಗುತ್ತಿದೆ ಎಂದು ಹೇಳುತ್ತದೆ.

ಹುಲಿಯು ಕೇಳುತ್ತದೆ ಏಕೆ ಹೀಗೆ ಹೇಳುತ್ತಿದ್ದೀಯಾ ಆಗ ಗೊರಿಲ್ಲಾ ಹೇಳುವುದಕ್ಕೆ ಮನಸಾಗುತ್ತಿಲ್ಲ ಹೇಳುವುದು ಬೇಡವೋ ತಿಳಿಯುತ್ತಿಲ್ಲ ಎಂದು ಹೇಳುತ್ತದೆ ಆಗ ಹುಲಿಯು ನೀನು ಹೇಳಲೇಬೇಕು ಎಂದಾಗ ನೆನ್ನೆ ನಾನು ಬರುತ್ತಿರಬೇಕಾದರೆ ಊರಿನ ಆಚೆ ಬಾಬಾ ಅವರು ಬರುತ್ತಿದ್ದರು ಅವರು ಹೇಳಿದರು.

 ಇಲ್ಲಿ ಇರುವ ಹುಲಿ ಮತ್ತು ಮಕ್ಕಳಿಗೆ ಕಂಟಕ ಬರಲಿದೆ ಪ್ರಾಣವು ಹೋಗಬಹುದು ಎಂದು ಹೇಳಿದರು ನಂತರ ಕೇಳಿದೆ ಇದಕ್ಕೆ ಏನಾದರೂ ಉಪಾಯ ಇದೆಯೇ ಎಂದು ಕೇಳಿದಾಗ ಎರಡು ನಿಮಿಷ ಯೋಚನೆ ಮಾಡಿ ಇದೆ ಹುಲಿಯ ಸಂಸಾರ ಇಲ್ಲಿಂದ 7 ನದಿಗಳು ದಾಟಿ ಬೇರೆ ಕಾಡಿಗೆ ಹೋದರೆ ಅಲ್ಲಿ ಹುಲಿಗೆ ಯಾವುದೇ ರೀತಿಯ ತೊಂದರೆ ಬರುವುದಿಲ್ಲ ಎಂದು ಹೇಳಿದರು.

 ನಾನು ನಂಬಿದೆ ಏಕೆಂದರೆ ಬಾಬಾ ಅವರು ಹೇಳಿದ ಹಾಗೆಯೇ ಆಗುತ್ತದೆ ಎಂದು ಹೇಳಿತು ಆಗ ಹುಲಿಯು ಯೋಚನೆ ಮಾಡಿ ತನ್ನ ಸಂಸಾರ ಸಮೇತ ಬೇರೆ ಕಾಡಿಗೆ ಹೋಗಿ ನೆಲೆಸಿತು ಆಗ ಈ ಕಾಡಿನಲ್ಲಿ ಇರುವ ಎಲ್ಲಾ ಪ್ರಾಣಿಗಳು ನೆಮ್ಮದಿಯಿಂದ ಬದುಕಿದವು ಜಿಂಕೆ ತಾಯಿಗೆ ತುಂಬಾನೇ ಸಂತೋಷವಾಯಿತು ಕೆಲವು ಸಾರಿ ಶಕ್ತಿಯಿಂದ ಕೆಲಸ ಮಾಡಲಿಕ್ಕೆ ಸಾಧ್ಯವಿಲ್ಲದಿದ್ದರೂ ಬುದ್ಧಿವಂತಿಕೆಯಿಂದ ಮಾಡಬಹುದಾಗಿದೆ.

ಮಕ್ಕಳು ಪಕ್ಷಿಗಳಂತೆ

ಒಂದು ಒಳ್ಳೆಯ ಸಂಸಾರ ಆ ಸಂಸಾರದಲ್ಲಿ ತಂದೆ ತಾಯಿ ಮೂವರು ಮಕ್ಕಳು ಇರುತ್ತಾರೆ ಮೊದಲನೆಯ  ಮಗ ರೋಚಕ್ ಡಿಗ್ರಿ ಮಾಡುತ್ತಿದ್ದಾನೆ ಎರಡನೆಯವಳು ಅರಿಪ್ರಾ ಪಿಯುಸಿ ಓದುತ್ತಿರುತ್ತಾಳೆ. ಕಡೆಯ ಮಗ ಅಂಚಲ್ ಹತ್ತನೇ ತರಗತಿಯಲ್ಲಿ ಓದುತ್ತಿರುತ್ತಾನೆ ಈ 3 ಮಕ್ಕಳು ಮನೆಯಲ್ಲಿ ಸೇರಿ ಇದ್ದರೆ ಇವರ ವರ್ತನೆಗಳು ಹೇಗೆ ಇರುತ್ತೆ ಎಂದರೆ ಯಾರು ಈ ರೀತಿ ಸಂಭಾಳಿಸುತ್ತಾರೋ ಅವರಿಗೆ ಗೊತ್ತು.

 ಸಾಮಾನ್ಯವಾಗಿ ಮಕ್ಕಳು ಕೆಲಸವೇ ಮಾಡುವುದಿಲ್ಲ ತಾಯಿಯೇ ಎಲ್ಲಾ ಕೆಲಸವನ್ನು ಮಾಡಬೇಕಾಗುತ್ತದೆ ಬೆಳಿಗ್ಗೆ ತಿಂಡಿಯಿಂದ ಹಿಡಿದು ರಾತ್ರಿ ಊಟದ ವರೆಗೆ ಬಟ್ಟೆಗಳು ಕೊಳೆಯಾಗಿದ್ದರೆ ಒಂದು ಕಡೆ ಇರುವುದಿಲ್ಲ ಎಲ್ಲೋ ಬಿಸಾಕಿರುತ್ತಾರೆ.

 ಶೂಗಳು ತದ್ವಿರುದ್ಧವಾಗಿ ಬಿದ್ದಿರುತ್ತವೆ ನೀರು ಕುಡಿದ ಲೋಟಗಳು ಎಲ್ಲೋ ಚೆಲ್ಲಾಪಿಲ್ಲಿಯಾಗಿರುತ್ತದೆ ಹಾಸಿಗೆ ಮೇಲೆ ಇದ್ದ ದಿಂಬು ಬೆಡ್ ಶೀಟ್ ಹಾಗೆ ಇರುತ್ತೆ ಮಕ್ಕಳು ವಿದ್ಯಾಭ್ಯಾಸಕ್ಕೆ ಹೋದ ನಂತರ ತಾಯಿಗೆ ಇದೇ ಕೆಲಸ ಬೆಳಿಗ್ಗೆಯಿಂದ ಸಂಜೆಯವರೆಗೂ ಈ ಕೆಲಸ ಮಾಡುವುದರಲ್ಲಿ ಸಾಕು ಸಾಕಾಗಿ ಹೋಗಿರುತ್ತದೆ.

 ಗಂಡನಿಗೆ ಹೇಳಿದರೆ ಗಂಡ ಹೇಳುತ್ತಾನೆ ಇಂದಲ್ಲ ನಾಳೆ ಮಕ್ಕಳಿಗೆ ಒಳ್ಳೆ ಬುದ್ಧಿ ಬರುತ್ತದೆ ಬಿಡು ಎಂದು ಸಮಾಧಾನಪಡಿಸುತ್ತಾರೆ ಮತ್ತೆ  ಮಕ್ಕಳಿಗೆ ಕೆಲಸ ಮಾಡಲಿಕ್ಕೆ ಬಿಟ್ಟಾಗ ಮಕ್ಕಳು ಮಾಡುತ್ತಾರೆ ಎಂದು ಹೇಳುತ್ತಾರೆ ತಾಯಿಯ ಅನಿಸಿಕೆ ಏನು ಅಂದ್ರೆ ನಾನು ಇದ್ದರೆ ಮಾತ್ರ ಈ ಮನೆ ನೀಟಾಗಿ ಇರುತ್ತದೆ.

  ನಾನು ಇಲ್ಲದಿದ್ದರೆ ಮನೆಯೇ ನಡೆಯುವುದಿಲ್ಲ ಎನ್ನುವ ಭಾವನೆ ಮನಸ್ಸಿನಲ್ಲಿ ಅಡಗಿರುತ್ತದೆ ಇರುತ್ತದೆ ಬಂದು ಲಗ್ನಪತ್ರಿಕೆ ಕೊಟ್ಟು ಎಲ್ಲರೂ ಮದುವೆಗೆ ಬರಲೇಬೇಕು ಎಂದು ವಿನಂತಿಸಿಕೊಳ್ಳುತ್ತಾರೆ ಕೊನೆಗೆ ತೀರ್ಮಾನವಾಗುತ್ತದೆ.

 ಮದುವೆಗೆ ಗಂಡ ಹೆಂಡತಿ ಇಬ್ಬರು ಹೋಗಿ ಬರುವುದು ಏಕೆಂದರೆ ಮಕ್ಕಳಿಗೆ ಪರೀಕ್ಷೆಯ ಸಮಯ ಇರುತ್ತದೆ ಈಗಲೂ ಮದುವೆಗೆ ಹೋಗಲಿಲ್ಲವೆಂದರೆ ಸಂಬಂಧಗಳು ಕಡಿದು ಹೋಗುತ್ತೆ ಹೋಗಲೇ ಬೇಕು ಎಂದಾಗ ಮಕ್ಕಳೆಲ್ಲರೂ ನೀವು ಆರಾಮಾಗಿ ಹೋಗಿದ್ದು ಬನ್ನಿ ನಾವೆಲ್ಲರೂ ಮನೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.

 ತಾಯಿ ಹೇಗೋ ಒಪ್ಪಿದರು ಮದುವೆಗೆ ಎಲ್ಲವೂ ತಯಾರಿ ಮಾಡಿದ ನಂತರ ಹೊರಡುವ ಸಮಯದಲ್ಲಿ ಮಕ್ಕಳಿಗೆ ತಾಯಿ ಉಪನ್ಯಾಸ ಹೇಳಿದ್ದೇ ಹೇಳಿದ್ದು ಮನೆ ಸರಿಯಾಗಿ ನೋಡಬೇಕು ಮಲಗುವುದಕ್ಕಿಂತ ಮುಂಚೆ ದೀಪವನ್ನು ಆರಿಸಬೇಕು ಬಾಗಿಲು ಭದ್ರವಾಗಿ ಹಾಕಬೇಕು ಹೀಗೆ ಇತ್ಯಾದಿ ಬಹಳಷ್ಟು ಹೇಳಿ ಹೊರಟರು.

 ತಾಯಿ ನಾನು ಮನೆಗೆ ಬಂದರೆ ನನ್ನ ಮನೆ ಎಷ್ಟು ವಿಚಿತ್ರವಾಗಿ ಅಸ್ವಸ್ಥವಾಗಿ ಇರುತ್ತದೋ ಎಲ್ಲಾ ನಾನು ಮಾಡಬೇಕಲ್ಲ ಎಂಬುವ ಮನಸ್ಸಿನಿಂದ ಮನೆಗೆ ಬರುತ್ತಾರೆ ಮನೆಗೆ ಬಂದು ನೋಡಿದರೆ ತಾಯಿ ಹೋದ ಸಮಯದಲ್ಲಿ ಮನೆ ಹೇಗೆ ಸ್ವಚ್ಛವಾಗಿ ಇತ್ತೋ ಅದೇ ರೀತಿ ಅಷ್ಟೇ ಸ್ವಚ್ಚವಾಗಿ ಮನೆ ಇದೆ ಗಂಡ ನೋಡಿ ಸಂತೋಷಪಟ್ಟರು.

 ನೋಡು ನಾನು ಹೇಳಲಿಲ್ಲವೇ ಮಕ್ಕಳಿಗೆ ಜವಾಬ್ದಾರಿ ನೀಡಿದರೆ ಮಕ್ಕಳೇ ಮಾಡುತ್ತಾರೆ ಎಂದಾಗ ಹೆಂಡತಿಗೆ ಸಂತೋಷವಾಗುವುದರ ಬದಲು ಕುಸಿದಳು ಕೊರಗಿದಳು ನಾವು ಇದ್ದರು ಬದುಕುತ್ತಾರೆ ನಾನು ಇಲ್ಲದೇ ಹೋದರೂ ಮಕ್ಕಳು ಬದುಕುತ್ತಾರೆ ಎನ್ನುವ ಮನೋಭಾವನೆ ಬಂತು ಅಂದರೆ ನನ್ನ ಅವಶ್ಯಕತೆ ಇಲ್ಲ ಎನಿಸಿತು.

ನಮ್ಮ ಮಕ್ಕಳು ಪಕ್ಷಿಗಳು ಇದ್ದ ಹಾಗೆ ಯಾವುದೇ ಪಕ್ಷಿಗಳು ಹಾರುವ ತನಕ ನೋಡಿಕೊಳ್ಳುತ್ತೇವೆ ನಂತರ ಅವು ಅವರ ಇಚ್ಛೆಯಂತೆ ಇರುತ್ತವೆ ನೊಂದು ಕೊಳ್ಳುವುದಿಲ್ಲ ಅದೇ ರೀತಿ ನಾವು ಕೂಡ ಮಕ್ಕಳನ್ನು ಸ್ವಂತವಾಗಿ ಬದುಕುವ ಮಾರ್ಗದರ್ಶನ ಮಾಡೋಣ.

ಒಂದು ದೀಪ ಸೃಷ್ಟಿಸಿದರೆ ಸಾಕು

ಬಹುಮುಖ ಪ್ರತಿಭೆ ಯುಳ್ಳ ಫ್ರಾಂಕ್ಲಿನ್ ಎಂಬುವರು ಇದ್ದರು ಇವರು ವಿಜ್ಞಾನಿ ಸಂಶೋಧಕ ಬರಹಗಾರರು ಹಾಗೂ ಪತ್ರಕರ್ತರು ಇವರು ಮಾಡಿರುವ ಹಲವಾರು ಸಾಧನಗಳು ಇವೆ ಹಲವಾರು ವರ್ಷಗಳ ಹಿಂದೆ ದೂರದೃಷ್ಟಿ ಮತ್ತು ಸಮೀಪ ದೃಷ್ಟಿ ಉಳ್ಳವರು ದೂರದ ಬರಹವನ್ನು ಓದಲು ಒಂದು ಕನ್ನಡಕ ಇಟ್ಟುಕೊಳ್ಳುತ್ತಿದ್ದರು.

 ಹತ್ತಿರದ ಬರವಣಿಗೆಯನ್ನು ಅಥವಾ ದೂರದ ಬರಹವನ್ನು ಓದಲು ಮತ್ತೊಂದು ಕನ್ನಡಕ ಇಟ್ಟುಕೊಳ್ಳುತ್ತಿದ್ದರು ಇದನ್ನು ಫ್ರಾಂಕ್ಲಿನ್ ಎರಡೂ ಗಾಜುಗಳನ್ನು ಒಂದೇ ಕನ್ನಡಕದಲ್ಲಿ ಬೈಫೋಕಲ್ ಕನ್ನಡಕಗಳನ್ನು ಕಂಡುಹಿಡಿದರು.  ದೊಡ್ಡ ಕಟ್ಟಡಗಳಿಗೆ ಸಿಡಿಲು ಹೊಡೆದರೆ ಮನೆಗಳು ಸುಟ್ಟು ಹೋಗುತ್ತಿತ್ತು ಇದನ್ನು ರಕ್ಷಣೆ ಮಾಡುವುದಕ್ಕಾಗಿ ಲೈಟಿಂಗ್ ರಾಡನ್ನು ಸಂಶೋಧನೆ ಮಾಡಿದರು.

 ಕಟ್ಟಡದ ಮೇಲೆ ಉದ್ದನೆಯ ತ್ರಿಶೂಲ ಆಕಾರವಾಗಿರುವ ಕಂಬಿಯನ್ನು ಇಟ್ಟು ಅದನ್ನು ತಂತಿಯ ಮೂಲಕ ಭೂಮಿಗೆ ಸಂಪರ್ಕವನ್ನು ಹೋಗುವಂತೆ ಮಾಡಿದರು ಸಿಡಿಲು ಬಡಿದಾಗ ಲೈಟಿಂಗ್ ರಾಡ್ ಸಿಡಿಲಿನಿಂದ ಬಂದ ವಿದ್ಯುತ್ತನ್ನು ಸ್ವೀಕರಿಸಿ ತಾಮ್ರದ ತಟ್ಟೆಗೆ ರವಾನೆ ಮಾಡುತ್ತಿತ್ತು ಆಗ ಕಟ್ಟಿದ ಕಟ್ಟಡಗಳು ಸಿಡಿಲಿನಿಂದ ರಕ್ಷಣೆ ಪಡೆದೆವು.

 ಇದಕ್ಕಿಂತ ಇನ್ನೂ ಮುಖ್ಯವಾದುದು ಎಂದರೆ ಆಗಿನ ಕಾಲದಲ್ಲಿ ರಾತ್ರಿಯಾದರೆ ರಸ್ತೆಗಳೆಲ್ಲವೂ ಕತ್ತಲೆಯಿಂದ ಇರುತ್ತಿದ್ದವು ಇದರ ಬಗ್ಗೆ ಬೀದಿಗಳಲ್ಲಿ ಬೆಳಕು ಇರಬೇಕು ಎಂದು ಮನಸ್ಸಿನಲ್ಲಿ ಯೋಚಿಸಿದರು ಇದಕ್ಕಾಗಿ ಫ್ರಾಂಕ್ಲಿನ್ ಒಂದು ರಾತ್ರಿ ತಮ್ಮ ಮನೆಯ ಮುಂದೆ ಒಂದು ಉದ್ದವಾಗಿ ಇರುವ ಒಂದು ಕಂಬವನ್ನು ನೆಟ್ಟರು ನಂತರ ಒಂದು ಲ್ಯಾಟಿನನ್ನು ಹಚ್ಚಿ ಆ ಕಂಬದ ಮೇಲೆ ನೇತು ಹಾಕಿದರು.

 ಮಾರನೆಯ ದಿನವೂ ಲ್ಯಾಟಿನನ್ನು ಕೆಳಗೆ ಇಳಿಸಿ ಅದಕ್ಕೆ ಎಣ್ಣೆ ಹಾಗೂ ಬತ್ತಿಯನ್ನು ಹಾಕಿ ಮತ್ತೆ ದೀಪ ಹತ್ತಿಸಿ ಕಂಬಕ್ಕೆ ಲಾಟೀನನ್ನು ಯಥಾ ಪ್ರಕಾರ ಕಂಬದ ಮೇಲೆ ಲ್ಯಾಟಿನ್ ನನ್ನು ನೇತು ಹಾಕಿದರು ಮೊದಲ ದಿನ ನೋಡಿದಾಗ ಸುತ್ತ ಮುತ್ತ ಇರುವವರಿಗೆ ಇವರಿಗೇನೋ ಮನಸು ಸರಿ ಇಲ್ಲ ಆದುದರಿಂದ ಈ ರೀತಿ ಮಾಡುತ್ತಿದ್ದರೆ ಎನಿಸಿತು ಆದರೆ ಜನರು ಬೆಳಕು ಇರುವುದರಿಂದ ಸರಾಗವಾಗಿ ನಡೆದು ಹೋಗುತ್ತಿದ್ದರು.

 ಸ್ವಲ್ಪ ತಡವಾದರೂ ಹೋಗಬಹುದು ಎನ್ನುವ ಭರವಸೆ ಬೀದಿಯ ಜನರಲ್ಲಿ ಮೂಡಿತು ನಂತರ ಇದೇ ರೀತಿಯ ಕೆಲಸವನ್ನು ಅಕ್ಕ ಪಕ್ಕ ಇರುವವರು ತಮ್ಮ ಮನೆಯ ಮುಂದೆಯೂ ಲ್ಯಾಟಿನ್ ಕಂಬಕ್ಕೆ ನೇತು ಹಾಕಿದರು ಆಗ ಆ ಬೀದಿಯು ಬೆಳಕಿನಿಂದ ಹೊಳೆಯುತ್ತಿತ್ತು ಇದನ್ನು ಗಮನಿಸಿ ಬೇರೆ ಬೀದಿಯವರು ಸಹ ಒಬೊಬ್ಬರಾಗಿ ಇದೇ ಕೆಲಸವನ್ನು ಅನುಕರಣೆ ಮಾಡತೊಡಗಿದರು.

 ಸ್ವಲ್ಪ ದಿನಗಳಲ್ಲಿಯೇ ಎಲ್ಲಾ ಬೀದಿಗಳಲ್ಲೂ ರಾತ್ರಿಹೊತ್ತು ಲ್ಯಾಟಿನ್ ಹಚ್ಚುವ ಅಭ್ಯಾಸವೇ ಆಗಿ ಹೋಯ್ತು ನಂತರ ಎಷ್ಟು ರಾತ್ರಿ ಆದರೂ ಕೂಡಾ ಎಲ್ಲರೂ ಓಡಾಡುತ್ತಿದ್ದರು ಎಲ್ಲಾ ಕಾರ್ಯಕ್ರಮಗಳು ನಡೆಯುತ್ತಿದ್ದವು ಇದನ್ನು ನೋಡಿ ಅಕ್ಕ ಪಕ್ಕದ ಹಳ್ಳಿಗಳಲ್ಲಿಯೂ ಸಹ ಲ್ಯಾಟಿನನ್ನು ಉರಿಸಲು ಆರಂಭಿಸಿದರು.

 ಊರಿಗೆ ಊರೇ ಬೆಳಕಾಯ್ತು ಒಬ್ಬ ವ್ಯಕ್ತಿ ಸೃಜನ ಶೀಲತೆಯಿಂದ ಮಾಡಿದ ಕೆಲಸವು ಎಲ್ಲರೂ ಅನುಕರಣೆ ಮಾಡತೊಡಗಿದರು ಇವರು ಇಂದಿಗೂ ಜನರ ಮನಸ್ಸಿನಲ್ಲಿ ಇದ್ದಾರೆ.

ನಾವು ಕೂಡ ಕೆಲವು ಸಮಸ್ಯೆಗಳು ಇದ್ದಾಗ ಸಮಸ್ಯೆಯನ್ನೇ ಚಿಂತಿಸುತ್ತಿರುತ್ತೇವೆ ಅದರ ಬದಲು ಸಮಸ್ಯೆಗೆ ಸೂಕ್ತವಾದ ಪರಿಹಾರವನ್ನು ಕಂಡು ಹಿಡಿದರೆ ಆ ಪರಿಹಾರ ಎಲ್ಲರಿಗೂ ಉಪಯೋಗವಾಗುತ್ತದೆ. ನಾನು ಎಲ್ಲರಿಗೂ ಉಪಯೋಗವಾಗುವಂತಹ ಪರಿಹಾರ ಕಂಡುಹಿಡಿದಿದ್ದೇನೆಯೇ?

ಬೆಂಕಿ ಹಚ್ಚಿದನು

ಆನಾಮಿತ್ರ ನಾಡಿನಿಂದ ಬೇಸರಗೊಂಡು ಕಾಡಿನ ಕೊನೆಯಲ್ಲಿ ತನಗೆ ಬೇಕಾದಂತೆ ಒಂದು ಮನೆಯನ್ನು ಕಟ್ಟಿಕೊಂಡು ವಾಸವಾಗಿದ್ದನು ಸ್ವಲ್ಪ ದಿನಗಳ ನಂತರ ಒಂದು ಕುದುರೆ ಬಂದು ಆ ಮನೆಯಲ್ಲಿ ನೆಲೆಸಿತು ಮನುಷ್ಯ ಹೇಳಿದನು ಈ ಮನೆಯನ್ನು ನಾನು ಕಟ್ಟಿದ್ದೇನೆ ಇದು ನನ್ನ ವಾಸಕ್ಕಾಗಿ ಎಂದು ಹೇಳಿದಾಗ ಆ ಕುದುರೆಯು ಹೇಳಿತು ಇಲ್ಲ ನಾನು ಕೂಡ ಈ ಮನೆಯಲ್ಲಿ ಇರುತ್ತೇನೆ ಮನೆ ದೊಡ್ಡದಾಗಿದೆ ಎಂದು ವಾದ ಮಾಡಿತು.

 ಕುದುರೆ ಹೇಳಿತು ನಡಿ ಇದಕ್ಕೆ ನಾವು ನ್ಯಾಯ ಕೇಳೋಣ ಎಂದು ಸಿಂಹದ ಬಳಿ ಬಂದು ಮೊದಲು ಕುದುರೆ ಸಿಂಹಕ್ಕೆ ಹೇಳಿತು ನಾನು ಕೂಡ ಈ ಮನೆಯಲ್ಲಿ ಇರಬೇಕು ನಂತರ ಎಲ್ಲಾ ಪ್ರಾಣಿಗಳು ಮಾತನಾಡಿಕೊಂಡು ನಂತರ ತೀರ್ಪು ನೀಡಿದರು ನೀನು ಮನುಷ್ಯನಾದವನು ಬೇರೆ ಮನೆಯನ್ನು ಕಟ್ಟಿಕೊಂಡು ಇರಬಹುದು ಎಂದಾಗ ಮನುಷ್ಯನಿಗೆ ಬೇಸರವಾಯಿತು.

 ಸ್ವಲ್ಪ ದೂರ ಹೋಗಿ ದೊಡ್ಡದಾದ ಮನೆಯನ್ನು ಕಟ್ಟಿದನು ನಂತರ ಗೆಂಡಮೃಗ ಬಂದಿತ್ತು ಈ ಮನೆಯಲ್ಲಿ ನಾನು ಇರುತ್ತೇನೆ ಎಂದಾಗ ಮನುಷ್ಯ ಹೇಳಿದನು.

 ಇಷ್ಟು ಕಷ್ಟಪಟ್ಟು ನಾನು ಮನೆಯನ್ನು ಕಟ್ಟಿದ್ದೇನೆ ನೀನು ಹೋಗಿ ಬೇರೆ ಕಡೆ ಇರು ಎಂದಾಗ ಮತ್ತೆ ರಾಜನ ಬಳಿಗೆ ಹೋಗೋಣ ಎಂದು ಗೆಂಡಾಮೃಗ ಹೇಳಿತು ನಂತರ ತೀರ್ಮಾನ ರಾಜನ ಬಳಿಗೆ ಹೋಗಿ ಹೇಳಿದಾಗ ಎಲ್ಲ ಪ್ರಾಣಿಗಳು ಒಂದೇ ಅಲ್ಲವೇ ಆದ್ದರಿಂದ ತೀರ್ಮಾನವನ್ನು ಪ್ರಾಣಿಯ ಕಡೆಗೆ ಮಾಡಿದವು.

 ನೀನು ಇನ್ನೊಂದು ಮನೆಯನ್ನು ಕಟ್ಟಿಕೊಂಡು ಇರು ಎಂದು ಹೇಳಿದವು ಇದಕ್ಕೆ ಬೇಸರವಾಗಿ ಇನ್ನು ಸ್ವಲ್ಪ ದೂರ ಹೋಗಿ ದೊಡ್ಡ ಮನೆಯನ್ನು ಕಟ್ಟಿದನು ಆಗ ಒಂದು ಆನೆ ಬಂತು ಈ ಮನೆ ನನ್ನದು ಎಂದು ಆನೆಯೂ ಹೇಳಿತು.

ರಾಜರು ತೀರ್ಪು ನೀಡುತ್ತಾರೆ ನಡೆ ಎಂದು ಮನುಷ್ಯನನ್ನು ಜೊತೆಗೆ ಕರೆದುಕೊಂಡು ಹೋದವು ರಾಜನಿಗೆ ಎಲ್ಲಾ ವಿಷಯವು ತಿಳಿಸಿದರು ನಂತರ ಆನೆಯೂ ರಾಜನಿಗೆ ಕರೆದುಕೊಂಡು ಹೇಳಿತು ಈ ಮನೆಯಲ್ಲಿ ನಾವು ವಾಸವಾಗಿರುತ್ತೇವೆ.

 ಬೇರೆ ಮನೆ ಕಟ್ಟಿಕೊಳ್ಳಲು ಹೇಳಿ ಎಂದಾಗ ಮನುಷ್ಯನಾದವನು ಹೇಳಿದ ನಾನು ಹೀಗೆಯೇ ಎಲ್ಲಾ ಮನೆಗಳನ್ನು ಕಟ್ಟಿಕೊಂಡರೆ ನೀವೆಲ್ಲ ಬಂದು ಇರುತ್ತೀರ ಇದು ನ್ಯಾಯವೇ ಎಂದು ಕೇಳಿದಾಗ ಆನೆಯು ಹೇಳಿತು ಮನುಷ್ಯನಿಗೆ ಬುದ್ಧಿ ಕಡಿಮೆ ಇದೆ ಆದ್ದರಿಂದ ನಾವು ಹೇಳಿದಂತೆ ನೀನು ಕೇಳಿಕೊಂಡು ಇದ್ದರೆ ಒಳ್ಳೆಯದು ಇಲ್ಲದಿದ್ದರೆ ನಿನಗೆ ಕಷ್ಟ ಎಂದು ಹೆದರಿಸಿ ಹೇಳಿದವು.

 ಮನುಷ್ಯನಾದವನು ಯೋಚನೆ ಮಾಡಿದನು ಇಲ್ಲಿ ಇರುವವರು ಎಲ್ಲಾ ಕಾಡು ಪ್ರಾಣಿಗಳೇ ಪ್ರಾಣಿಗಳು ಪ್ರಾಣಿಗಳ ಕಡೆಯೇ ತೀರ್ಮಾನ ಮಾಡುತ್ತವೆ ನನಗೆ ನ್ಯಾಯ ನೀಡಲಾರವು ಎಂದು ಯೋಚನೆ ಮಾಡಿದನು.

ಮನುಷ್ಯನಿಗೆ ಬುದ್ಧಿ ಇಲ್ಲ ಎಂದು ಹೇಳುತ್ತಿದ್ದಾರೆ ಸರಿಯಾಗಿ ಬುದ್ಧಿ ಕಲಿಸುತ್ತೇನೆಂದು ಇನ್ನೊಂದು ದೊಡ್ಡ ಮನೆಯನ್ನು ಕಟ್ಟಿದನು ನಂತರ ಕಟ್ಟಿದ ಚಿಕ್ಕ ಚಿಕ್ಕ ಮನೆಗಳೆಲ್ಲವೂ ಬೀಳಿಸುತ್ತಾ ಬಂದನು ಆಗ ಎಲ್ಲಾ ಪ್ರಾಣಿಗಳು ಒಂದೇ ಮನೆಯಲ್ಲಿ ಇದ್ದವು.

 ಆ ಮನೆಯಲ್ಲಿ ಸಾಕಷ್ಟು ಹುಲ್ಲು ಸೌದೆಗಳು ಜೋಡಿಸಿದನು ನಂತರ ಅದಕ್ಕೆ ದೂರದಿಂದಲೇ ಬೆಂಕಿ ಹಚ್ಚಿದನು ಆಗ ಎಲ್ಲಾ ಪ್ರಾಣಿಗಳು ಪ್ರಾಣ ಉಳಿಸಿಕೊಳ್ಳಲು ದಿಕ್ಕು ದಿಸೆಯಿಲ್ಲದೆ ಓಡಿದವು ನಂತರ ನಾನು ಈ ಕಾಡಿನಲ್ಲಿ ಇರುವುದು ಒಳ್ಳೆಯದಲ್ಲ ಎಂದು ಮತ್ತೆ ನಾಡಿಗೆ ಬಂದು ನೆಲೆಸಿದನು.

 ಇದು ಒಂದು ಹಳೆಯ ಕಥೆ ಕಾಡಿನಲ್ಲಿ ಇದ್ದರೆ ಕಾಡಿನ ಪ್ರಾಣಿಗಳು ಹೇಳಿದಂತೆ ಕೇಳಿಕೊಂಡು ಇರಬೇಕು ಇಲ್ಲದಿದ್ದರೆ ಪ್ರಾಣಕ್ಕೆ ಅಪಾಯ ಅದೇ ರೀತಿ. ನಾವು ಕೂಡ ಎಲ್ಲಿದ್ದೇವೆ ಯಾವ ವಾತಾವರಣದಲ್ಲಿ ಇದ್ದೇವೆ ಅಲ್ಲಿ ನಾವು ಹೇಗೆ ಇರಬೇಕು ಎಂದು ಯೋಚನೆ ಮಾಡಿ ಹೊಂದಾಣಿಕೆ ಮಾಡಿಕೊಂಡು ಇರಬೇಕು ತೊಂದರೆಯಲ್ಲಿ ಸಿಲುಕಿದಾಗ ಜಾಗರೂಕತೆಯಿಂದ ಹೊರಗೆ ಬರೋಣ.

ಚುಚ್ಚಿದ ತಕ್ಷಣ

ಬಹಳ ವರ್ಷಗಳ ಹಿಂದೆ ಒಂದು ಊರಿನಲ್ಲಿ ಒಬ್ಬ ಅಭಯಂಕರಿ ಮಂತ್ರವಾದಿ ಇದ್ದನು ಊರಿನಲ್ಲಿ ಪ್ರಸಿದ್ಧನಾಗಿದ್ದನು ಯಾವುದೇ ರೋಗ ರುಜಿನ ಗಳು ಬಂದರೂ ಮಂತ್ರವಾದಿಯನ್ನೇ ಕೇಳುತ್ತಿದ್ದರು ಸಣ್ಣಪುಟ್ಟ ಕಾಯಿಲೆಗಳಿಗೆ ಮಂತ್ರದಿಂದ ಹಾಗೂ ತನಗೆ ಗೊತ್ತಿರುವ ಕೆಲವು ಔಷಧಿಗಳನ್ನು ತಾನೇ ತಯಾರಿಸಿ ಕೊಡುತ್ತಿದ್ದನು.

 ಕೆಲವರಿಗೆ ತಾಯಿತ ಕಟ್ಟುತ್ತಿದ್ದನು ಮಂತ್ರವಾದಿಗೆ ಸ್ವಲ್ಪ ಹೊಗಳಿದರೆ ಸಾಕು ತನ್ನನ್ನು ತಾನೇ ಮರೆತುಬಿಡುತ್ತಿದ್ದನು ಮತ್ತೆ ಊರಿನ ಮುಂದೆ ಕಾಡು ಇರುವುದರಿಂದ ಕಾಡಿನ ಬಗ್ಗೆಯೂ ನನಗೆ ಗೊತ್ತು ಎಂದು ಹೇಳುತ್ತಿದ್ದನು ಆದರೆ ಇವನಿಗೆ ಗೊತ್ತಿದ್ದು ಅಲ್ಪ ಸ್ವಲ್ಪ ಮಾತ್ರ ಕಾಡಿನಿಂದ ಊರಿಗೆ ಒಂದು ಸಾರಿ ಹುಲಿ ಬಂದು ಕುರಿಯನ್ನು ಹಿಡಿದುಕೊಂಡು ಹೋಯಿತು.

 ಸ್ವಲ್ಪ ದಿನಗಳ ನಂತರ ಒಂದು ಹಸುವನ್ನು ಹಿಡಿದುಕೊಂಡು ಹೋಯಿತು ಆಗ ಏನು ಆಗುತ್ತಿದೆ ಎಂದು ಕಾದು ನೋಡಿದರೆ ಹುಲಿ ಬಂದು ಹೋಗಿದೆ ಆಗ ಊರಿನವರು ಹೆದರಿದರು ಹೀಗೆ ಮುಂದುವರೆದರೆ ನಮ್ಮ ಊರಿನಲ್ಲಿ ನಾವು ಬದುಕುವುದು ಕಷ್ಟವಾಗುತ್ತದೆ ಆಗ ಮಂತ್ರವಾದಿಗೆ ಹೋಗಿ ಕೇಳುತ್ತಾರೆ.

 ಮಂತ್ರವಾದಿಗೆ ಅಷ್ಟೇನೂ ಗೊತ್ತಿರುವುದಿಲ್ಲ ಆದರೂ ಕೂಡ ಮಂತ್ರವಾದಿ ಹೇಳುತ್ತಾನೆ ಹುಲಿಯನ್ನು ಹಿಡಿದು ಕೊಂದರೆ ಆಯ್ತು ಎಂದು ಸೊಕ್ಕಿನಿಂದ ಹೇಳುತ್ತಾನೆ ಆಗ ಹೇಗೆ ಹಿಡಿಯುವುದು ಎಂದಾಗ ಅದಕ್ಕೆ ಒಂದು ಸರಳವಾದ ಉಪಾಯವನ್ನು ಹೇಳುತ್ತಾನೆ.

 ಒಂದು ಕಡೆ ಒಂದು ಮೇಕೆ, ಕರು, ಕುರಿ ಒಂದು ಕಡೆ ಕಟ್ಟಿ ಅದರ ಸ್ವಲ್ಪ ಮುಂದೆ ಹಳ್ಳವನ್ನು ತೋಡಿ ಅದರ ಮೇಲೆ ಹುಲ್ಲು ಹಾಕಿರಬೇಕು ಹುಲಿಯು ಹುಲ್ಲಿನ ಮೇಲೆ ನಡೆದುಕೊಂಡು ಬಂದ ಮೇಲೆ ಕುರಿ, ಮೇಕೆ ಸಿಗಬೇಕು ಹಾಗೆ ಮಾಡಬೇಕು ಮತ್ತೆ ಹುಲಿ ಬೇರೆ ಕಡೆಯಿಂದ ಬರಲಿಕ್ಕೆ ಯಾವುದೇ ರೀತಿಯ ದಾರಿ ಇರಬಾರದು ಇದೇ ದಾರಿಯಿಂದ ಬರಬೇಕು ಹಾಗೆ ಮಾಡಿದರೆ ಸುಲಭವಾಗಿ ಹುಲಿಯು ಹಳ್ಳದಲ್ಲಿ ಬೀಳುತ್ತದೆ ಎಂದು ಹೇಳಿದನು.

 ಅದೇ ರೀತಿ ಹಳ್ಳಿಯ ಕೆಲವು ಜನರು ಸ್ವಲ್ಪ ಹಳ್ಳವನ್ನು ತೆಗೆದು ಅದರ ಮೇಲೆ ಸೇತುವೆಯಂತೆ ಹುಲ್ಲು ಹಾಸಿದರು ಸಮಯ ನೋಡಿ ನಿಧಾನವಾಗಿ ಹುಲಿ ಬಂತು, ಸರಿಯಾಗಿ ಹಳ್ಳದಲ್ಲಿ ಬಿತ್ತು ಆಗ ಊರಿನವರು ಎಲ್ಲರೂ ಸಂತಸ ಪಟ್ಟರು.

ಮಂತ್ರವಾದಿಯು ನಾನು ಹೇಳಲಿಲ್ಲವೇ ಎಂದು ಹಿಗ್ಗಿ ಹೀರೆಕಾಯಿ ಆದನು ನಂತರ ಈ ಹುಲಿಯನ್ನು ಏನು ಮಾಡುವುದು ಎಂದಾಗ ಸಾಯಿಸುವುದು ಒಳ್ಳೆಯದು ಎಂದು ಹೇಳಿದನು.

 ಹೇಗೆ ಸಾಯಿಸಬೇಕು ಎಂದು ಕೇಳಿದರೆ ಅದಕ್ಕೆ ನಮ್ಮ ಹತ್ತಿರ ಇರುವ ಬರ್ಜಿಗಳಿಂದ ಕೂಲುಗಳಿಂದ ಹೊಡೆಯಿರಿ ಎಂದು ಹೇಳಿದನು ಆದರೂ ಹುಲಿ ಸಾಯಲಿಲ್ಲ ನಂತರ ಊರಿನವರು ತಮ್ಮಲ್ಲಿ ಇರುವ ಎಲ್ಲಾ ಆಯುಧಗಳಿಂದ ಎಸೆದು ಎಸೆದು ತಮ್ಮ ಆಯುಧಗಳು ಖಾಲಿ ಮಾಡಿಕೊಂಡರು.

 ಮಂತ್ರವಾದಿಗೆ ಹೇಳಿದರು ಏನೇ ಮಾಡಿದರು ಹುಲಿ ಸಾಯುತ್ತಿಲ್ಲ ಏನು ಮಾಡುವುದು ಎಂದಾಗ ಮಂತ್ರವಾದಿಯೂ ಒಂದು ದೊಡ್ಡದಾದ ಬಂಬುವನ್ನು ತೆಗೆದುಕೊಂಡು ಅದರ ತುದಿಯನ್ನು ಚೂಪು ಮಾಡಿ ಬಂಬುವಿನಿಂದ ಚುಚ್ಚಿದರೆ ಅದು ನರಳಿ ನರಳಿ ಸಾಯುತ್ತದೆ ಎಂದ ಹೇಳಿದನು.

ಒಂದು ಬಂಬುವನ್ನು ಚೂಪು ಮಾಡಿ ಹುಲಿಗೆ ಚುಚ್ಚಿದರೂ ಹುಲಿಗೆ ಚುಚ್ಚಿದ ತಕ್ಷಣ ನೋವು ಜಾಸ್ತಿ ಆಯಿತು ಚೀರಿಕೊಂಡು ಕೆಂಗಣ್ಣಿನಿಂದ ನೋಡಿ ಹೇಗೋ ಹಳ್ಳದಿಂದ ಆಚೆ ಬಂತು ನಂತರ ಮಂತ್ರವಾದಿಯನ್ನು ನೋಡಿತು.

 ಹುಲಿಗೆ ಮೊದಲೇ ತಲೆ ಕೆಟ್ಟಿತ್ತು ಹಸಿದಿತ್ತು ನಾನು ಹೇಗಾದರೂ ಪಾರಾಗಬೇಕೆಂದು ಓಡಿ ಬಂದು ಅಡ್ಡ ನಿಂತಿದ್ದ ಮಂತ್ರವಾದಿಯ ಕೈಗೆ ಪರಚಿ ಕಾಡಿಗೆ ಓಡಿಹೋಯಿತು ಅದೃಷ್ಟವಶಾತ್ ಯಾರಿಗೂ ಏನು ತೊಂದರೆ ಆಗಲಿಲ್ಲ ಮಂತ್ರವಾದಿ ನರಳಿ ನರಳಿ ಸಾಯಬೇಕು ಎಂದು ಹುಲಿಗೆ ಹೇಳಿದ ಆದರೆ ಆ ಸ್ಥಿತಿ ಈ ಮಂತ್ರವಾದಿಗೆ ಬಂತು.

ಮಂತ್ರವಾದಿಯ ಬಂಡವಾಳ ಎಲ್ಲಾ ಊರಿಗೂ ತಿಳಿಯಿತು ಗೊತ್ತಿದ್ದರೆ ಮಾತ್ರ ಹೇಳಬೇಕು ಇಲ್ಲದಿದ್ದರೆ ಆ ಸಮಸ್ಯೆಗೆ ನಾವೇ ಬಲಿಪಶು ಆಗುತ್ತೇವೆ ಎಂದು ಮಂತ್ರವಾದಿ ಅರಿತನು.

]]>
https://babakategalu.com/%e0%b2%95%e0%b2%82%e0%b2%9f%e0%b2%95-%e0%b2%ac%e0%b2%b0%e0%b2%b2%e0%b2%bf%e0%b2%a6%e0%b3%86/feed/ 0
 ಮಹಾತ್ಮರಂತೆ ನೋಡಿದರೆ ಸಾಕು https://babakategalu.com/%e0%b2%ae%e0%b2%b9%e0%b2%be%e0%b2%a4%e0%b3%8d%e0%b2%ae%e0%b2%b0%e0%b2%82%e0%b2%a4%e0%b3%86-%e0%b2%a8%e0%b3%8b%e0%b2%a1%e0%b2%bf%e0%b2%a6%e0%b2%b0%e0%b3%86-%e0%b2%b8%e0%b2%be%e0%b2%95%e0%b3%81/ https://babakategalu.com/%e0%b2%ae%e0%b2%b9%e0%b2%be%e0%b2%a4%e0%b3%8d%e0%b2%ae%e0%b2%b0%e0%b2%82%e0%b2%a4%e0%b3%86-%e0%b2%a8%e0%b3%8b%e0%b2%a1%e0%b2%bf%e0%b2%a6%e0%b2%b0%e0%b3%86-%e0%b2%b8%e0%b2%be%e0%b2%95%e0%b3%81/#respond Tue, 08 Apr 2025 04:40:00 +0000 https://babakategalu.com/?p=264 Read more]]> ನಿಲೋತ್ಕಲ್ ತರುಣನಿದ್ದನು ಅವನು ತುಂಬ ಶ್ರೀಮಂತ ವ್ಯಕ್ತಿಯ ಮಗ ಅವರ ಹಲವಾರು ವ್ಯಾಪಾರಗಳು ಇದ್ದವು ತರುಣನಿಗೆ ಯಾವುದೇ ಕೆಲಸ ಮಾಡಬೇಕಾದ ಅವಶ್ಯಕತೆ ಇರಲಿಲ್ಲ ಏನೇ ಹೇಳಿದರೂ ಎಲ್ಲರೂ ಕೆಲಸ ಮಾಡಿ ಕೊಡುತ್ತಿದ್ದರು ಬಹಳಷ್ಟು  ಸೇವಕರು ಕೂಡಾ ಇದ್ದರು.

 ಕೆಲವು ದಿನಗಳಲ್ಲಿ ತಂದೆ ತೀರಿಕೊಂಡರು ನಂತರ ಶ್ರೀಮಂತರ ವ್ಯವಹಾರ ತರುಣನೆ ಸಂಭಾಳಿಸಬೇಕಾಗಿತ್ತು ಆದರೆ ಬರ್ತಾ ಬರ್ತಾ ವ್ಯವಹಾರ ಸರಿಯಾಗಿ ನಡೆಯುತ್ತಿರಲಿಲ್ಲ ಮತ್ತೆ ಈ ತರುಣನಿಗೆ ಅಹಂಕಾರ ದರ್ಪ ಎಲ್ಲರನ್ನು ಕೀಳಾಗಿ ನೋಡುವ ಸ್ವಭಾವವಿತ್ತು ನಂತರ ತರುಣನು ಏನಾದರೂ ಮಾಡಿ ವ್ಯವಹಾರವನ್ನು ಸರಿಪಡಿಸಬೇಕು ಎಂದು ಚಿಂತಿಸುತ್ತಿದ್ದಾಗ ಯಾರೋ ಅವನಿಗೆ ಸಲಹೆ ನೀಡಿದರು.

 ಊರಿನ ಆಚೆ ಒಂದು ಆಶ್ರಮ ಇದೆ ಅಲ್ಲಿ ಬಾಬಾ ಅವರು ಇದ್ದಾರೆ ಅವರನ್ನು ಭೇಟಿಯಾದರೆ ಎಲ್ಲದಕ್ಕೂ ಪರಿಹಾರ ಸಿಗುತ್ತದೆ ಎಂದು ಸೂಚಿಸಿದರು ಅದಕ್ಕೆ ತರುಣನು ಅದೇ ರೀತಿ ಊರಿನಿಂದಾಚೆಗೆ ಹುಡುಕಿಕೊಂಡು ಹೋದನು ಸುಮಾರು ದೂರ ನಡೆದ ಮೇಲೆ ಒಂದು ಆಶ್ರಮ ಕಂಡಿತು ಇದೇ ಆಶ್ರಮವೆಂದು ಆಶ್ರಮದ ಹತ್ತಿರ ಹೋದನು ಅಲ್ಲಿ ಹಿರಿಯ ವ್ಯಕ್ತಿ ಕಸವನ್ನು ಗುಡಿಸುತ್ತಿದ್ದರು.

ಹಿರಿಯ ವ್ಯಕ್ತಿಯವರ ಬಟ್ಟೆ ಸಾಧಾರಣವಾಗಿತ್ತು ಆಗ ಆ ತರುಣನು ಏ ಕೆಲಸದವನೇ ಎಲ್ಲಿ ಮಹಾತ್ಮರು ಎಂದು ಗರ್ವದಿಂದ ಕೇಳಿದನು ಇದನ್ನು ಅರ್ಥಮಾಡಿಕೊಂಡು ಹಿರಿಯರು ಒಳಗೇ ಇದ್ದಾರೆ ಎಂದು ಹೇಳಿದರು ನಾನು ಅವರನ್ನು ಕಾಣಬೇಕು ಎಂದು ಮೆಲು ಧ್ವನಿಯಲ್ಲಿ ಹೇಳಿದನು.

ಹಿರಿಯ ವ್ಯಕ್ತಿ ಆಗಲಿ ಮಹಾಸ್ವಾಮಿಗಳೇ ಎಂದು ವಿನಯವಾಗಿ ಹೇಳಿದರು ಮತ್ತೆ ಆದಷ್ಟು ನಿಮ್ಮ ಕೋಪ ಕಡಿಮೆ ಮಾಡಿಕೊಂಡರೆ ಒಳ್ಳೆಯದು ಎಂದು ಹಿರಿಯ ವ್ಯಕ್ತಿ ಹೇಳಿದರು ಆಶ್ರಮದ ಒಳಗೆ ಬಂದರು ನಿಮ್ಮ ವ್ಯವಹಾರ ಹೇಗೆ ನಡೆಯುತ್ತಿದೆ ಏನೇನು ಸಮಸ್ಯೆ ಇದೆ ಎಂದು ಎಲ್ಲವೂ ವಿಚಾರಿಸಿದರು ಆದರೆ ಈ ತರುಣನು ಎಲ್ಲಾ ವಿಚಾರಗಳನ್ನು ಗತ್ತಿನಿಂದ ಹೇಳುತ್ತಿದ್ದನು.

 ಕೊನೆಗೆ ತರುಣನಿಗೆ ಕೋಪ ಬಂತು ದರ್ಶನ ಮಾಡಿಸು ನೀನೇ ಎಲ್ಲಾ ಕೇಳುತ್ತಿದ್ದೀಯಾ ಎಂದು ಗದರಿಸಿದನು ಅಷ್ಟರಲ್ಲಿ ಹಿರಿಯ ವ್ಯಕ್ತಿ ಆಶ್ರಮದ ಮುಖ್ಯ ಸಭಾಂಗಣಕ್ಕೆ ಬಂದರು ನಂತರ ಹೇಳಿದರು ಈಗ ನೀನು ಇಲ್ಲಿಂದ ಹೋಗಬಹುದು ಎಂದು ಹಿರಿಯ ವ್ಯಕ್ತಿ ಹೇಳಿದರು ಆಗ ತರುಣನು ನೀನು ಮಹಾತ್ಮರ ದರ್ಶನ ಮಾಡಿಸಲಿಲ್ಲ ಎಂದು ಕೇಳಿದನು.

ಎಲ್ಲರೂ ಮಹಾತ್ಮರೇ ಇರಬೇಕು ಎಂದು ಏನೂ ಇಲ್ಲ ವೇಷ ಧರಿಸಿ ಬಂದಿದ್ದರು ವೇಷ ಧರಿಸದೆ ಬಂದಿದ್ದರು ಸಾಮಾನ್ಯ ಜನರನ್ನು ಮಹಾತ್ಮರಂತೆ ನೋಡಿದರೆ ಸಾಕು ನಮ್ಮ ವ್ಯವಹಾರ ಎಲ್ಲವೂ ಚೆನ್ನಾಗಿ ನಡೆಯುತ್ತಿದೆ ಎಂದು ಹೇಳಿದರು.

ಈ ಆಶ್ರಮದಲ್ಲಿ ಇರುವವನು ನಾನೇ ಇತರರು ನನಗೆ ಬೇರೆ ಬೇರೆ ಗುರು, ಮಹಾತ್ಮ ಬಾಬಾ ಏನೇನೋ ಹೆಸರಿಂದ ಕರೆಯುತ್ತಾರೆ ಎಂದು ಹೇಳಿದರು ಆಗ ಹಿರಿಯ ವ್ಯಕ್ತಿ ಸಾಧ್ಯವಾದಷ್ಟು ನಿನ್ನ ಪ್ರಶ್ನೆಗಳಿಗೆ ನಾನು ಉತ್ತರವನ್ನು ಕೊಟ್ಟಿದ್ದೇನೆ ಆಗ ತರುಣ ಆಶ್ಚರ್ಯದಿಂದ ಕುಸಿದನು ನಿನಗೆ ಒಳ್ಳೆಯದಾಗಲಿ ಹೋಗಿ ಬಾ ಎಂದು ಆಶೀರ್ವದಿಸಿದರು.

ಯಾವುದೋ ಊರಿಗೆ ಹೋಗಬೇಕು ಎಂದರೆ ಮಹಾತ್ಮರೇ ದಾರಿ ತೋರಿಸಬೇಕು ಎಂದು ಏನೆಲ್ಲ ಯಾರು ಬೇಕಾದರೂ ದಾರಿ ತೋರಿಸಬಹುದಾಗಿದೆ ನಾವು ಕೂಡ ಯಾರನ್ನೇ ನೋಡಿದರೂ ಅವರನ್ನು ಗೌರವದಿಂದ ನೋಡುವ ಗುಣ ಬೆಳೆಸಿಕೊಳ್ಳೋಣ. ನಾನು ಇತರರಿಗೆ ಗೌರವಿಸುತ್ತೇನೆಯೇ?

ಕೆಲವು ಕ್ಷಣಗಳು ಬದುಕಿರುತ್ತೇನೆ

ಒಂದು ಊರಿನಲ್ಲಿ ಒಂದು ಶ್ರೀಮಂತರ ಮನೆ ಇತ್ತು ಆ ಮನೆಯಲ್ಲಿ ಕೋಹಲ್ ಚಿಕ್ಕಹುಡುಗನಿಗೆ ಯಾವುದೂ ಕಾಯಿಲೆಯಿಂದಾಗಿ ಬಲಗಾಲು ಸ್ವಾಧೀನದಲ್ಲಿ ಇರಲಿಲ್ಲ ಆದುದರಿಂದ ಅವನು ಅಲ್ಲಿ ಇಲ್ಲಿ ಓಡಾಡಬೇಕಾದರೆ ಗಾಲಿ ಕುರ್ಚಿಯ ಮೇಲೆ ಕುಳಿತು ಓಡಾಡುತ್ತಿದ್ದನು.

 ಮನೆಯಲ್ಲಿ ಇವನಿಗಾಗಿ ನೋಡಿಕೊಳ್ಳುವವರು ಇದ್ದರು ಹಾಗೆಯೇ ತಂದೆ ತಾಯಿ ಇಬ್ಬರೂ ಕೂಡ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು ಇವನಿಗೆ ಖುಷಿ ಕೊಡುವ ಸ್ಥಳವೆಂದರೆ ಮನೆಯ ಕೊನೆಯ ಕಿಟಕಿ ಬಳಿ ಕುಳಿತು ಮಕ್ಕಳು ಆಡುತ್ತಿರುವುದನ್ನು ನೋಡಿ ಸಂತೋಷಪಡುವುದು.

ಕೆಲವು ಸಾರಿ ನಾನು ಅದೇ ರೀತಿ ಆಡುವುದಕ್ಕೆ ನಡೆಯುವುದಕ್ಕೆ ಓಡುವುದಕ್ಕೆ ಆಗಲಿಲ್ಲವಲ್ಲ ಎಂದು ತನ್ನ ಬಗ್ಗೆ ಕೀಳರಿಮೆ, ಹತಾಶೆ, ಕೋಪ, ದುಃಖ. ಉಲ್ಬಣಗೊಳ್ಳುತ್ತಿತ್ತು ಒಂದು ದಿನ ಇವನು ನೋಡುತ್ತಿದ್ದಂತೆಯೇ ಕಾಮನಬಿಲ್ಲು ಬಂತು ಸ್ವಲ್ಪ ಸಮಯ ಇದ್ದು ಮಾಯವಾಯ್ತು.

ತಂದೆಗೆ ಕೇಳಿದನು ಕಾಮನಬಿಲ್ಲು ಬಂದದ್ದು ಹೇಗೆ ಎಲ್ಲಿ ಹೋಯಿತು ಎಂದಾಗ ತಂದೆಯವರು ಒಂದೇ ಸಮಯದಲ್ಲಿ ಮಳೆ ಮತ್ತು ಸೂರ್ಯನ ಬೆಳಕು ಸೇರಿದಾಗ ಕಾಮನಬಿಲ್ಲು ಉದ್ಭವವಾಗುತ್ತದೆ ಎಂದರು ನಂತರ ಹೀಗೆ ಮನೆ ಯವರೆಲ್ಲರೂ ಪ್ರವಾಸಕ್ಕೆ ಹೋಗಿದ್ದರು.

 ಒಂದು ದೊಡ್ಡದಾದ ಮೈದಾನದಲ್ಲಿ ಇದ್ದರು ಆಗಲೂ ಇದೇ ರೀತಿಯ ಕಾಮನಬಿಲ್ಲು ನೋಡಿದನು ಆಗ ಇವನ ಸಂತೋಷ ಇಮ್ಮಡಿಯಾಯ್ತು ಹುಡುಗನು ವಿಸ್ಮಯ ವಾಗಿರುವ ಕಾಮನಬಿಲ್ಲೇ ನೀನು ಇಷ್ಟು ಸುಂದರವಾಗಿ ಹೊಳೆಯುತ್ತಿದ್ದೀಯಾ ಇದರ ರಹಸ್ಯವೇನು ಎಂದು ಕೇಳಿದನು.

ಕಾಮನಬಿಲ್ಲು ಹುಡುಗನಿಗೆ ಉತ್ತರ ಕೊಟ್ಟಿತು ನಾನು ಇರುವುದೇ ಕೆಲವು ನಿಮಿಷಗಳು ಅಥವಾ ಕೆಲವು ಕ್ಷಣಗಳು ಬದುಕಿರುತ್ತೇನೆ ಎಂಬ ಅರಿವು ನನಗೆ ಇದೆ ನಾನು ಹೆಚ್ಚಾಗಿ ಚಿಂತೆ ಮಾಡುವುದಿಲ್ಲ ಇದ್ದಷ್ಟು ಸಮಯ ನಾನು ಇತರರಿಗೆ ಹೆಚ್ಚು ಸಂತೋಷ ಸಂತೃಪ್ತಿ ನೀಡಲು ಬಯಸುತ್ತೇನೆ ಎಂದು ಮಾಯವಾಯಿತು.

 ಆಗ ಹುಡುಗನಿಗೆ ಜ್ಞಾನೋದಯವಾಯ್ತು ನಾನು ಹೇಗಿದ್ದೇನೆ ಎಷ್ಟು ಕಾಲ ಇರುತ್ತೇನೆ ಎಂದು ಕೊರಗುವ ಬದಲು ಇರುವಷ್ಟು ದಿನ ನನ್ನ ಸುತ್ತಮುತ್ತ ಇರುವವರಿಗೆ ಖುಷಿ ನೀಡುತ್ತೇನೆ ಎಂದು ಬದುಕಿದನು. ಬದುಕಿರುವವರೆಗೂ ನಾವು ಖುಷಿಯಾಗಿದ್ದು ಇತರಿಗೂ ಖುಷಿ ನೀಡೋಣ.

ನಿನ್ನ ನೆರಳೇ ನಿನಗೆ

ಒಂದು ಊರಿನಲ್ಲಿ ಒಬ್ಬ ದಯಾಳು ದಿಲಾವರ್ ಶ್ರೀಮಂತ ಇದ್ದನು ಆದರೆ ಹೆಂಡತಿ ಅಂಗೂರಿ ಮಾತ್ರ ತುಂಬಾ  ಜಿಪುಣಿ ಯಾಗಿದ್ದಳು.

 ಹೆಂಡತಿ ಬೇರೆಯವರಿಗೆ ಯಾವುದೇ ರೀತಿಯ ಸಹಾಯ ಮಾಡಲು ಇಚ್ಛಿಸುತ್ತಿರಲಿಲ್ಲ ಗಂಡ ಹೇಗಾದರೂ ಮಾಡಿ ಇವಳಿಗೆ ಅರ್ಥಮಾಡಿಸಬೇಕು ಎಂದು ಯೋಚಿಸಿದನು. ಪಕ್ಕದ ಊರಿನಲ್ಲಿ ಯಾವುದೋ ಒಂದು ಸಮಾರಂಭಕ್ಕೆ ಆಮಂತ್ರಣ ನೀಡಿದ್ದರು ಆದುದರಿಂದ ಗಂಡ ಹೇಳಿದನು.

 ನಾವು ನಡೆದುಕೊಂಡು ಹೋದರೆ ನಮಗೆ ಹಣ ಉಳಿತಾಯವಾಗುತ್ತದೆ ಎಂದನು ಆಗ ಹೆಂಡತಿ ಹೌದು ನಡೆಯುತ್ತಾ ಹೋಗೋಣ ಎಂದು ಉತ್ಸಾಹದಿಂದ ಹೇಳಿದಳು. ಸ್ವಲ್ಪ ದೂರ ನಡೆದಳು ಹಾಗೆಯೇ ಬಿಸಿಲಿನ ತಾಪ ಹೆಚ್ಚಾಗಿತ್ತು ಮುಂದೆ ಇವಳಿಗೆ ನಡೆಯಲು ಸಾಧ್ಯವಾಗುತ್ತಿಲ್ಲ ಸುಸ್ತಾಗಿ ಕುಳಿತಳು ಆಯಾಸವಾಗುತ್ತಿದೆ ಎಂದು ಹೇಳಿದಳು.

  ಆಗ ಗಂಡ ಹೇಳಿದನು ನಿನ್ನ ನೆರಳಿನ ಸಹಾಯ ತೆಗೆದುಕೋ ಆಗ ಸುಡುವುದು ಕಡಿಮೆಯಾಗುತ್ತದೆ ಎಂದನು ನನ್ನ ನೆರಳಿನ ಮೇಲೆ ನಾನು ಹೇಗೆ ನಿಲ್ಲಲು ಸಾಧ್ಯವಾಗುತ್ತದೆ ಎಂದು ಕೋಪದಿಂದ ಹೆಂಡತಿ ರೇಗಿದಳು.

ಗಂಡನು ವಿನಯವಾಗಿ ನಿನ್ನ ನೆರಳೆ ನಿನಗೆ ಸಹಾಯ ಮಾಡದಿದ್ದರೆ ನೀನು ಮನೆಯಲ್ಲಿ ಮಡಗಿರುವ ಹಣ ಯಾವ ರೀತಿ ನಿನಗೆ ಸಹಾಯವಾಗುತ್ತದೆ ಎಂದು ಕೇಳಿದನು ನಂತರ ಹೆಂಡತಿಗೆ ಅರ್ಥವಾಯಿತು ನಂತರ ಅವಳು ಕೂಡ ಗಂಡನಂತೆ ದಾನ ಧರ್ಮ ಮಾಡಲು ಮುಂದಾದಳು.

ಹೋರಾಟ ಮಾಡುವುದಿಲ್ಲ

ದೀಪಾಂಕರ್ ಸಂಸಾರದ ತಾಪತ್ರಯದಿಂದ ಬೇಸತ್ತು ಬಾಬಾ ಅವರಿಗೆ ಸಂಪರ್ಕಿಸುತ್ತಾನೆ ತನ್ನ ಕಷ್ಟಗಳೆಲ್ಲವೂ ಹೇಳಿಕೊಳ್ಳುತ್ತಾನೆ ಬಾಬಾ ಅವರು ಎಲ್ಲವನ್ನೂ ಕೇಳಿದ ನಂತರ ಹೇಳುತ್ತಾರೆ.

 ನೀನು ಹೆಬ್ಬಾವು ನೋಡಿದ್ದೀಯಾ ಹೌದು ಎಂದು ಹೇಳುತ್ತಾನೆ ಹೆಬ್ಬಾವು ಜಾಸ್ತಿ ಹೋರಾಟ ಮಾಡುವುದಿಲ್ಲ ತನ್ನ ಬಳಿ ಯಾವ ಪ್ರಾಣಿಗಳು ಬಂದು ಸಿಕ್ಕಿಬೀಳುತ್ತವೆ ಅದನ್ನೇ ತಿಂದು ತೃಪ್ತಿಯಾಗಿರುತ್ತದೆ ಅದರಂತೆಯೇ ನಾವು ಕೂಡ ನಮ್ಮ ಪಾಲಿಗೆ ಬಂದದ್ದನ್ನು ಸ್ವೀಕರಿಸುತ್ತಾ ಮುನ್ನಡೆಯುವುದು ಒಳ್ಳೆಯದು ಎಂದು ಹೇಳುತ್ತಾರೆ.

ಸಂಸಾರಿಗೆ ಅರಿವಾಗುತ್ತದೆ ಕೆಲವೊಂದು ಸಾರಿ ನಾವು ಬಹಳಷ್ಟು ಶ್ರಮಪಟ್ಟರು ಅದು ಸಿಗುವುದಿಲ್ಲ ನಮಗೆ ಬೇಡ ಬೇಡ ಎಂದರೂ ಅದೇ ಸಿಗುತ್ತಿರುತ್ತದೆ.

ತಕ್ಷಣಕ್ಕೆ ನಮ್ಮ ಪಾಲಿಗೆ ಏನು ಬರುತ್ತದೋ ಅದನ್ನು ಇದ್ದಂತೆ ಅನುಭವಿಸುವುದು ಒಳ್ಳೆಯದು ಎಂದಾಗ ಸಂಸಾರಿಯೂ ಅರ್ಥಮಾಡಿಕೊಂಡನು.

ಇತರರನ್ನು ಟೀಕಿಸುವುದು ಸುಲಭ

ಬಲ್ಬೀರ್ ಯುವಕ ಹಳ್ಳಿಯಲ್ಲಿ ಇದ್ದನು ನಂತರ ಅವನಿಗೆ ನಾನು ಏನಾದರೂ ಸಾಧನೆ ಮಾಡಬೇಕು ಎಂದು ತಂದೆ ತಾಯಿಯರ ಆಶೀರ್ವಾದ ಪಡೆದು ನಗರಕ್ಕೆ ಬಂದನು ಅವನಿಗೆ ಆಸಕ್ತಿ ಇದ್ದಿತು ಚಿತ್ರ ಬರೆಯುವುದರಲ್ಲಿ ಹಾಗಾಗಿ ಯುವಕನು ಪ್ರಸಿದ್ಧ ಚಿತ್ರಕಾರರ ಬಳಿ ಹೋಗಿ ಕೆಲಸಕ್ಕೆ ಸೇರಿದನು 4 ವರ್ಷ ಕೆಲಸ ಮಾಡಿದ ಮೇಲೆ ಯುವಕನಿಗೆ ಅನಿಸಿತು ನಾನು ಕೂಡ ಒಂದು ಚಿತ್ರ ಬರೆಯಬಹುದಲ್ಲ ಎಂದು ಯೋಚಿಸಿದನು.

 ಅದೇ ರೀತಿ ಯುವಕ ಗುರು ಹೀಗೆ ಬರೆಯುತ್ತಾರೆ ಹಾಗೆ ಒಂದು ಬಟ್ಟೆಯ ಮೇಲೆ ಸುಂದರವಾದ ಚಿತ್ರವನ್ನು ವಿಶೇಷವಾಗಿ ಚಿತ್ರಿಸಿದನು ಆ ಚಿತ್ರವನ್ನು ತನ್ನ ಊರಿನ ಕೊನೆಯಲ್ಲಿ ಯಾರು ಬಂದರೂ ಚಿತ್ರ ಕಾಣುವಂತೆ ಇಟ್ಟನು ಮತ್ತು ಶೀರ್ಷಿಕೆಯನ್ನು ಬರೆದನು ಮೊಟ್ಟ ಮೊದಲನೆಯ ಬಾರಿ ಈ ಚಿತ್ರವನ್ನು ನಾನು ಬರೆದಿದ್ದೇನೆ ಇದರಲ್ಲಿ ಏನಾದರೂ ತಪ್ಪುಗಳು ಕಂಡುಬಂದರೆ ತಪ್ಪು ಎಂದು ಬರೆಯಿರಿ ಎಂದು ಬಣ್ಣದ ಬ್ರಷ್ ಗಳನ್ನು ಇಟ್ಟಿದ್ದನು.

 ಯುವಕನು ಸಂಜೆ ಬಂದು ಚಿತ್ರ ನೋಡಿದರೆ ಯುವಕನಿಗೆ (ಶಾಕ್) ಆಘಾತವಾಯಿತು ಚಿತ್ರವೇ ಕಾಣಲಿಲ್ಲ ಅಷ್ಟು ತಪ್ಪುಗಳನ್ನು ಬರೆದಿದ್ದರು ಯುವಕನಿಗೆ ತುಂಬಾ ಬೇಸರವಾಯಿತು ಮತ್ತೆ ನಾನು ಏನೂ ಕಲಿತೇ ಇಲ್ಲ ಇಷ್ಟು ತಪ್ಪು ಮಾಡಿದ್ದೇನೆ ಎಂದು ಯುವಕನು ತುಂಬಾ ರೋಸಿಹೋದ ಮತ್ತೆ ನೊಂದುಕೊಂಡನು.

ಯುವಕನು ನಿರ್ಧರಿಸಿದ ನಾನು ಬೇರೆ ಉದ್ಯೋಗವನ್ನು ಹುಡುಕಿಕೊಳ್ಳುವುದು ಒಳ್ಳೆಯದು ಎಂದು ಗುರುಗಳಿಗೆ ಹೋಗಿ ಹೇಳಿದನು ಆಗ ಗುರುಗಳು ಹೇಳಿದರು ಇನ್ನೊಂದು ಚಿತ್ರವನ್ನು ಚಿತ್ರಿಸು ನೀನು ಒಳ್ಳೆಯ ಕಲಾವಿದ ನಿನ್ನಲ್ಲಿ ಆ ಎಲ್ಲ ಕೌಶಲ್ಯಗಳು ಇದೆ ಎಂದಾಗ ಏನು ಹೇಳಿದರು ಯುವಕನಿಗೆ ಅರ್ಥವಾಗುತ್ತಿಲ್ಲ.

  ಗುರುಗಳು ಒಂದು ಸಾರಿ ಮಾತ್ರ ಒಂದು ಚಿತ್ರವನ್ನು ಬರೀ ಅದಕ್ಕೆ ನಾನು ಒಂದು ಶೀರ್ಷಿಕೆ ಹೇಳಿಕೊಡುತ್ತೇನೆ ಎಂದರು ಆಗಲಿ ಎಂದು ಯುವಕ ಒಂದು ಚಿತ್ರವನ್ನು ಬರೆದು ತಂದು ತೋರಿಸಿದನು ಆಗ ಗುರುಗಳು ಹೇಳಿದರು.

 ಇದು ನಾನು ಬರೆದಿರುವ ಮೊದಲ ಚಿತ್ರ ಈ ಚಿತ್ರ ದಯವಿಟ್ಟು ವೀಕ್ಷಿಸಿ ಇದರಲ್ಲಿ ಏನಾದರೂ ತಪ್ಪು ಕಂಡುಬಂದಲ್ಲಿ ಕೆಳಗೆ 2 ಬಣ್ಣದ ಬ್ರಷ್ ಗಳನ್ನು ಇಟ್ಟಿದ್ದೇನೆ ನೀವು ಸರಿ ಮಾಡಬೇಕಾಗಿ ವಿನಂತಿ ಎಂದು ಬರೆದಿದ್ದನು ಮತ್ತೆ ಮುಸ್ಸಂಜೆ ಬಂದಾಗ ಚಿತ್ರ ಹೇಗಿದೆಯೋ ಹಾಗೆಯೇ ಇದೆ ಒಂದು ಗೆರೆಯೂ ಯಾರೂ ಕೂಡ ಬರೆದಿರಲಿಲ್ಲ.

 ಯುವಕನಿಗೆ ಆಶ್ಚರ್ಯವೇ ಆಶ್ಚರ್ಯ ಇದರ ಮರ್ಮವೇನು ಎಂದು ಗುರುಗಳಿಗೆ ಕೇಳಿದನು ಜಗತ್ತಿನಲ್ಲಿ ಟೀಕೆ ಮಾಡಿ ಎಂದು ಹೇಳಿದರೆ ಸಾಕು ಎಲ್ಲರೂ ಟೀಕಿಸುತ್ತಾರೆ ಬೇರೆಯವರ ತಪ್ಪು ಕಂಡು ಹಿಡಿಯುವುದು ಎಂದರೆ ತುಂಬಾ ಸುಲಭ ಅದೇ ತಪ್ಪನ್ನು ಸರಿ ಮಾಡಿ ಎಂದರೆ ಯಾರೂ ಮುಂದೆ ಬರುವುದಿಲ್ಲ ಎಂಬ ರಹಸ್ಯ ಹೇಳಿದರು.

ನಾವು ಏನೇ ಸಾಧನೆ ಮಾಡಿದರು ಟೀಕೆ ಮಾಡುತ್ತಲೇ ಇರುತ್ತಾರೆ ಆದ್ದರಿಂದ ಅದನ್ನು ಕೇಳಿಸಿಕೊಳ್ಳದೆ ನಮ್ಮ ಸಾಧನೆಯನ್ನು ಮಾಡಿ ತೋರಿಸುವುದೇ ಉತ್ತಮ ದಾರಿಯಲ್ಲಿ ದೊಡ್ಡ ಆನೆ ಹೋಗುತ್ತಿದ್ದರೆ ನಾಯಿ ಬೊಗಳುವುದು ಸಹಜ ಆನೆ ಕಪ್ಪು ನಾಯಿ, ಬಿಳಿ ನಾಯಿ, ಬೊಗುಳಿದ ನಾಯಿ ಯಾವುದು ಎಂದು ನೋಡುವುದಿಲ್ಲ ಅದರ ಪಾಡಿಗೆ ನಡೆಯುತ್ತಿರುತ್ತದೆ ಹಾಗೆಯೇ ನಾವು ಕೂಡ ಹಿಡಿದ ಸಾಧನೆಯಲ್ಲಿ ಮುನ್ನುಗ್ಗುತ್ತಿರೋಣ. 

]]>
https://babakategalu.com/%e0%b2%ae%e0%b2%b9%e0%b2%be%e0%b2%a4%e0%b3%8d%e0%b2%ae%e0%b2%b0%e0%b2%82%e0%b2%a4%e0%b3%86-%e0%b2%a8%e0%b3%8b%e0%b2%a1%e0%b2%bf%e0%b2%a6%e0%b2%b0%e0%b3%86-%e0%b2%b8%e0%b2%be%e0%b2%95%e0%b3%81/feed/ 0
ಹೆದರಿಕೆಯನ್ನು ಮೆಟ್ಟಿನಿಂತಾಗ https://babakategalu.com/%e0%b2%b9%e0%b3%86%e0%b2%a6%e0%b2%b0%e0%b2%bf%e0%b2%95%e0%b3%86%e0%b2%af%e0%b2%a8%e0%b3%8d%e0%b2%a8%e0%b3%81-%e0%b2%ae%e0%b3%86%e0%b2%9f%e0%b3%8d%e0%b2%9f%e0%b2%bf%e0%b2%a8%e0%b2%bf%e0%b2%82%e0%b2%a4/ https://babakategalu.com/%e0%b2%b9%e0%b3%86%e0%b2%a6%e0%b2%b0%e0%b2%bf%e0%b2%95%e0%b3%86%e0%b2%af%e0%b2%a8%e0%b3%8d%e0%b2%a8%e0%b3%81-%e0%b2%ae%e0%b3%86%e0%b2%9f%e0%b3%8d%e0%b2%9f%e0%b2%bf%e0%b2%a8%e0%b2%bf%e0%b2%82%e0%b2%a4/#respond Mon, 07 Apr 2025 04:40:00 +0000 https://babakategalu.com/?p=262 Read more]]> ಒಂದು ಊರಿನಲ್ಲಿ ಒಬ್ಬ ಬಹದ್ದೂರ್ ಆಕ್ರಾಂತ್ ರಾಜ ಇದ್ದನು ರಾಜನ ಬಳಿ ಒಳ್ಳೆಯ ಸೈನ್ಯ ಇತ್ತು ಅದರಲ್ಲಿ ಒಂದು ಆಕರ್ಷಕ ಬಿಳಿ ಕುದುರೆಯೂ ಇತ್ತು ಕಾರಣ ಗೊತ್ತಿಲ್ಲ ಆ ಕುದುರೆಯು ಒಂದು ವಾರವಾದರೂ ಎದ್ದು ನಿಲ್ಲುತ್ತಲೇ ಇಲ್ಲ ಕಷ್ಟಪಟ್ಟು ನಿಲ್ಲಿಸಿದರೂ ಕೂಡ 3 ಕಾಲುಗಳಲ್ಲಿ ಮಾತ್ರ ನಿಲ್ಲುತ್ತಿದೆ.

 ಒಂದು ಕಾಲನ್ನು ಭೂಮಿಯ ಮೇಲೆ ಇಡುವುದೇ ಇಲ್ಲ ಕುಸಿದು ಬೀಳುತ್ತಿತ್ತು ಆಗ ರಾಜನು ಕುದುರೆಯ ಚಿಂತೆಯಲ್ಲಿ ಮುಳುಗಿದನು ಮತ್ತೆ ಕುದುರೆ ನೋಡಿಕೊಳ್ಳುವವನು ಕರೆದನು ಈ ಕುದುರೆ ಹೀಗೆ ಇರಲು ಕಾರಣವೇನು? ಎಂದು ವಿಚಾರಿಸಿದನು ಕುದುರೆ ನೋಡಿಕೊಳ್ಳುವವನಿಗೂ ತಿಳಿಯಲಿಲ್ಲ ನಂತರ ಊರಿನ ಆಚೆ ಬಾಬಾ ಅವರು ಇದ್ದರು ಬಾಬಾ ಅವರಿಗೆ  ಈ ವಿಷಯವನ್ನು ತಿಳಿಸಿದಾಗ ಬಾಬಾ ಅವರು ಬಂದರು.

 ಕುದುರೆಯನ್ನು ನೋಡಿದ ತಕ್ಷಣ ಅವರಿಗೆ ಅರಿವಾಯ್ತು. ಏನಾಗಿದೆಯೆಂದು ಸೂಕ್ಷ್ಮವಾಗಿ ಗಮನಿಸಿದರು ನಂತರ ಈ ಕುದುರೆಯನ್ನು ಒಂದು ದೊಡ್ಡ ಮೈದಾನಕ್ಕೆ ಕರೆದುಕೊಂಡು ಹೋದರು ನಂತರ ಮೂವತ್ತು ಗುಂಪು ಇರುವ ಕುದುರೆಗಳನ್ನು ನಿಲ್ಲಿಸಿದರು ಇದಕ್ಕೂ ಆ ಸಾಲಿನಲ್ಲಿ ನಿಂತುಕೊಳ್ಳುವಂತೆ ಹೇಳಿದರು.

 ಈ ಕುದುರೆ ಕುಸಿದು ಬಿದ್ದಿತು ನಂತರ ಜೋರಾಗಿ ನಗಾರಿ ಶಬ್ದವನ್ನು ಬಾರಿಸಲಾಯಿತು ಮತ್ತೆ ತೋಪುಗಳು ಫಿರಂಗಿಗಳಿಂದ ಜೋರಾದ ಶಬ್ದವನ್ನು ಮಾಡಿದರು ಈ ಶಬ್ದವನ್ನು ಕೇಳಿದ ತಕ್ಷಣ ಎಲ್ಲಾ ಕುದುರೆಗಳುಓಡಿದವು  ಆದರೆ ಈ ಕುದುರೆ ಮಾತ್ರ ಎಲ್ಲರಿಗಿಂತ ಮುಂದೆ ಬಂದಿತು.

 ಕುದುರೆ ಕುಂಟುತ್ತಿರಲಿಲ್ಲ ಮತ್ತೆ ಎಲ್ಲಾ ಕುದುರೆಗಳಿಗಿಂತ ಮುಂಚೆ ಇದೇ ಕುದುರೆ ಇತ್ತು ಇದನ್ನು ಕಂಡ ರಾಜನಿಗೆ ಬಹಳ ಸಂತೋಷವಾಯ್ತು ಕುದುರೆ ಈ ರೀತಿ ಮಾಡಲು ಕಾರಣವೇನು ಎಂದಾಗ ಬಾಬಾ ಅವರು ವಿವರಿಸಿದರು.

 ಕುದುರೆ ಯಾವುದೋ ಕನಸು ಕಂಡಿರಬೇಕು ಅಥವಾ ನನಗೆ ಒಡಲು ಸಾಮರ್ಥ್ಯವಿಲ್ಲ ಎಂದು ತಿಳಿದಿತ್ತು ಯಾವಾಗ ನಾವು ನಗಾರಿಯನ್ನು ಬಾರಿಸಲಾಯಿತು ಆಗ ಅದು ಮರೆತು ಓಡಲಾರಂಭಿಸಿತು ಎಂದರು.

ಯಾವುದೋ ಕಾರಣಕ್ಕೆ ಹೆದರಿಕೆಯಿಂದ ಇರುತ್ತೇವೆ ಆಗ ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ ಹೆದರಿಕೆಯನ್ನು ಮೆಟ್ಟಿನಿಂತಾಗ ಏನು ಬೇಕಾದರೂ ಮಾಡಬಹುದು ಎಂದು ಹೇಳಿದರು. ನಾವು ಕೂಡ ಕೆಲವುಗಳಲ್ಲಿ ಹೆದರಿಕೊಂಡು ಇರುತ್ತೇವೆ ಅದನ್ನು ಮೆಟ್ಟಿ ನಿಂತಾಗ ಮಾತ್ರ ನಾವು ಗೆಲ್ಲಬಹುದು. ನಾನು ಹೆದರಿಕೆಯನ್ನು ಹಿಮ್ಮೆಟ್ಟಿಸಿ ಯಾವ ಸಾಧನೆ ಮಾಡಿದ್ದೇನೆ?

ನಾನೇ ಸರಿಯಾಗಿ ನಡೆಯುತ್ತಿಲ್ಲ

ಏಡಿಯು ನಡೆಯಬೇಕಾದರೆ ದೇಹದ ಅರ್ಧಭಾಗ. ಒಂದು ಕಡೆ ಬಗ್ಗಿದಂತೆ ನಡೆಯುತ್ತದೆ ಇದನ್ನು ಸೂಕ್ಷ್ಮವಾಗಿ ಗಮನಿಸಿದಾಗ ನೋಡಬಹುದಾಗಿದೆ ಚಿಕ್ಕ ಚಿಕ್ಕ ಏಡಿಗಳು ಎಲ್ಲವೂ ಸೇರಿ ಆಟ ಆಡುತ್ತಿರುತ್ತವೆ ತಂದೆ ಏಡಿಯು ನೋಡಿ ಖುಷಿಪಡುತ್ತದೆ ಆಟ ಮುಗಿದ ಮೇಲೆ ಎಲ್ಲಾ ಚಿಕ್ಕ ಏಡಿಗಳು ಹೋದ ಮೇಲೆ ನಿಧಾನವಾಗಿ ತಂದೆ ಏಡಿ ಹೋಗುತ್ತಿರುತ್ತದೆ.

 ಸ್ವಲ್ಪ ಇಕ್ಕಟ್ಟಾದ ಮಾರ್ಗ ಬರುತ್ತದೆ ಆಗ ಏಡಿಯು ಒಂದು ಕಡೆ ಬಗ್ಗಿದಂತೆ ನಡೆಯುತ್ತದೆ ನಂತರವೂ ಹಾಗೆ ನಡೆಯುತ್ತದೆ ಆಗ ತಂದೆ ಏಡಿಯು ನೀನು ಸರಿಯಾಗಿ ನಡೆಯುತ್ತಿಲ್ಲ ಎಂದು ಹೇಳುತ್ತದೆ ಮರಿಏಡಿಯು ಹೇಗೆ ನಡೆಯಬೇಕೆಂದು ನಡೆದು ತೋರಿಸಿ ಅದೇ ರೀತಿ ನಾನು ನಡೆಯುತ್ತೇನೆ ಎಂದು ವಿನಂತಿಸಿಕೊಳ್ಳುತ್ತದೆ.

ತಂದೆ ಏಡಿಯೂ ಅರ್ಧ ಬಗ್ಗಿದಂತೆಯೇ ನಡೆಯುತ್ತದೆ ಆಗ ಮರಿಏಡಿಯು ನೀವು ಹೇಗೆ ನಡೆಯುತ್ತಿದ್ದೀರೋ ಅದೇ ರೀತಿ ನಾನು ನಡೆಯುತ್ತಿದ್ದೇವೆ ಎಂದು ಹೇಳುತ್ತದೆ ತಂದೆ ಏಡಿಯೂ ತನ್ನನ್ನು ತಾನು ಸೂಕ್ಷ್ಮವಾಗಿ ಗಮನಿಸುತ್ತದೆ ನಂತರ ತಂದೆ ಏಡಿಗೆ ನಾನೇ ಸರಿಯಾಗಿ ನಡೆಯುತ್ತಿಲ್ಲ ಎಂದು ಅರ್ಥವಾಗುತ್ತದೆ.

ಯಾವುದರಲ್ಲಿ ಸಂತೋಷವಿದೆ?

 ಹಲವಾರು ದಿನಗಳ ನಂತರ ನಾವು ಗೆಳೆಯರೆಲ್ಲರೂ ಸೇರಿದವು ಆಗ ಮಾತಾಡುತ್ತಿದ್ದಂತೆಯೇ ಒಬ್ಬ ಸ್ನೇಹಿತ ಹೇಳಿದ ನೋಡಿ ನಾನು ತುಂಬ ಚೆನ್ನಾಗಿ ಹಣವನ್ನು ಗಳಿಸಿದ್ದೇನೆ ಇದರಿಂದ ನಾನು ತುಂಬಾ ಸಂತೋಷವಾಗಿದ್ದೀನೆ ನೀವುಗಳೆಲ್ಲ ಅಷ್ಟು ಹಣಗಳಿಸಿಲ್ಲ ಎಂದು ಹೇಳಿದನು.

 ಇದಕ್ಕೆ ಏನು ಹೇಳಬೇಕು ಎಂದು ನಾನು ಯೋಚಿಸುತ್ತಿದ್ದೆ ಅಷ್ಟರಲ್ಲಿ ನನ್ನ ಸ್ನೇಹಿತನ ಹೇಳಿದ ನೀನು ಹೆಚ್ಚಿನ ಹಣವನ್ನು ಗಳಿಸಿದ್ದೀಯಾ ನಾನು ಹೆಚ್ಚಿನ ಸ್ನೇಹಿತರನ್ನು ಮನುಷ್ಯರನ್ನು ಗಳಿಸಿದ್ದೇನೆ ಇದರಲ್ಲಿಯೇ ನಮಗೆ ತುಂಬಾ ತೃಪ್ತಿ ಇದೆ ಎಂದು ಹೇಳಿದನು. ಸಂತೋಷಕ್ಕೆ ಹಲವಾರು ಮಾರ್ಗಗಳಿವೆ:-ಹಣ ಗಳಿಸುವುದರಿಂದ, ಕುಟುಂಬದೊಂದಿಗೆ ಬೆರೆತು ಚರ್ಚೆ ಮಾಡುವುದರಿಂದ,

ಸ್ನೇಹಿತರೊಂದಿಗೆ ಸೇರಿ ಕಾಲ ಕಳೆಯುತ್ತಿದ್ದಾಗ, ಪ್ರೇಯಸಿಯ ಜೊತೆ ಸುತ್ತಾಡುವುದರಿಂದ.

ಮಕ್ಕಳೊಂದಿಗೆ ಆಟ ಆಡುತ್ತಾ, ದಿನನಿತ್ಯ ವ್ಯಾಯಾಮ ಮಾಡುವುದರಿಂದ,  ನನಗೆ ಕೊಟ್ಟ ಜವಾಬ್ದಾರಿಯನ್ನು ಪೂರ್ಣಗೊಳಿಸುವುದರಿಂದ,  ಕೆಲಸವನ್ನು ಇಷ್ಟಪಟ್ಟು ಮಾಡುವುದರಿಂದ, ಮುಂದಿನ ಭವಿಷ್ಯದ ಸಿದ್ಧತೆಗಾಗಿ ಆಲೋಚಿಸುತ್ತಿದ್ದಾಗ, ಪ್ರಕೃತಿ ಸೌಂದರ್ಯವನ್ನು ಆನಂದಿಸುವುದರಿಂದ,  ಪ್ರವಾಸಗಳಿಗೆ ಭೇಟಿ ನೀಡುವುದರಿಂದ, ಇತರರಿಗೆ ಸಹಾಯ ಮಾಡುವುದರಿಂದ, ಸ್ವಯಂ ಸೇವಕರಾಗಿ ಸೇವೆ ಸಲ್ಲಿಸುವುದರಿಂದ, ನಾನು ಕಲಿತಿದ್ದು ಇತರರಿಗೆ ಕಲಿಸುವುದರಿಂದ,ಹೊಸ ಹೊಸ ಕೌಶಲ್ಯಗಳನ್ನು ಕಲಿಯುವುದರಿಂದ ರುಚಿ ರುಚಿಯಾದ ತಿಂಡಿ ತಿನಿಸು ಆಹಾರಗಳನ್ನು ತಿನ್ನುವುದರಿಂದ, ಬಹುಮಾನ ಸಿಕ್ಕಿದಾಗ, ಇತರರು ಗೌರವಿಸಿದಾಗ, ಪ್ರಶಸ್ತಿ ಸಿಕ್ಕಿದಾಗ, ಸಮಾಜ ಸೇವೆ ಮಾಡಿದಾಗ, ಪ್ರಾರ್ಥನೆ ಮಾಡುತ್ತಿದ್ದಾಗ, ಸಂತೋಷವೆನ್ನುವುದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ನನಗೆ ಯಾವುದರಲ್ಲಿ ಸಂತೋಷವಿದೆ?

ಸುಲಭ ಪರಿಹಾರ

ನಯಾಗರದ ತೂಗು ಸೇತುವೆ ಅತ್ಯಂತ ವಿಸ್ಮಯವಾದುದು ಸೇತುವೆ ಹೇಗೆ ಕಟ್ಟಿದ್ದಾರೆ ಎಂದು ತಿಳಿದರೆ ಅಚ್ಚರಿಯಾಗುತ್ತದೆ ಕೆನಡಾ ಮತ್ತು ಅಮೆರಿಕಾ ದೇಶಗಳಿಗೆ ಮಧ್ಯೆ ಇರುವ ಎರಡೂ ದೇಶಗಳಿಗೂ ಒಂದು ನದಿ ಸಾಗಿದೆ ಅದೇ ನಯಾಗರ ಅದು ತುಂಬಾ ದೊಡ್ಡ ಜಲಪಾತ ಈ ಜಲಪಾತ ಮಾತ್ರ ಎರಡೂ ದೇಶಗಳಿಗೆ ಸೇರಿದೆ.

 ಅಮೇರಿಕಾ ಮತ್ತು ಕೆನಡಾದ ಪ್ರವಾಸಿಗಳು ವ್ಯಾಪಾರಿಗಳು ರೈತರು ನಯಾಗರ ನದಿಯ ಮೇಲೆ ಒಂದು ಸೇತುವೆ ಇದ್ದರೆ ತುಂಬಾ ಚೆನ್ನಾಗಿರುತ್ತಿತ್ತು ಎಂದು ಕನಸು ಕಂಡರು.

 ಸುತ್ತಿ ಬಳಸಿ ಹೋಗುವುದಕ್ಕಿಂತ ನೇರವಾಗಿ ಹೋಗಬಹುದು ಎಲ್ಲರಿಗೂ ಸುಲಭವಾಗುತ್ತದೆ ಎಂದು ಯೋಚಿಸುತ್ತಿದ್ದರು ಆದರೆ ಸೇತುವೆ ನಿರ್ಮಿಸುವುದು ಮಾತ್ರ ತುಂಬ ಕಷ್ಟದ ಕೆಲಸ ಏಕೆಂದರೆ ಈ ನದಿಗೆ ಒಂದು ವ್ಯವಸ್ಥಿತ ದಡ ಎನ್ನುವುದೇ ಇಲ್ಲ ಬಂಡೆಗಳು ಇರುವಂತಹ ಪ್ರಪಾತ ಈ ದಡದಿಂದ ಆ ದಡಕ್ಕೆ ಹಗ್ಗ ಕಟ್ಟುವುದಕ್ಕೂ ಸಾಧ್ಯವಿರಲಿಲ್ಲ.

 ಹಗ್ಗವೇ ಕಟ್ಟಲಿಕ್ಕೆ ಸಾಧ್ಯವಿಲ್ಲ ಎಂದರೆ ಸೇತುವೆ ಹೇಗೆ ಕಟ್ಟುವುದು ಆಗ ಎಲಿಯೇಟ್ ಎಂಬ ಇಂಜಿನಿಯರ್ ಸೇತುವೆ ನಿರ್ಮಿಸಿ ತೋರಿಸಬೇಕೆಂದು ಯೋಚಿಸಿದನು ಆದರೆ ನಿರ್ಮಿಸುವುದು ಹೇಗೆ ಇದು ತುಂಬಾ ದೊಡ್ಡ ಸಮಸ್ಯೆಯಾಯಿತು ಎಲಿಯೇಟ್ ಗೆ ಸವಾಲಾಯಿತು.

ಸೇತುವೆಯನ್ನು ನಿರ್ಮಾಣ ಮಾಡುವ ಯೋಚನೆಯಲ್ಲಿ ಕೆಲವು ದಿನ ಕಳೆದ ನಂತರ ಅವನಿಗೆ ಒಂದು ಯೋಚನೆ ಬಂತು ಎಲಿಯೇಟ್ ಗಾಳಿಪಟ ಹಾರಿಸುವ ಸ್ಪರ್ಧೆಯನ್ನು ಏರ್ಪಡಿಸಿದನು ಈ ತುದಿಯಿಂದ ಆ ತುದಿಯವರೆಗೂ ಯಾರೂ ಗಾಳಿಪಟ ಹಾರಿಸುತ್ತಾರೆ ಅವನಿಗೆ ಬಹುಮಾನವನ್ನು ಕೊಡುತ್ತೇನೆ ಎಂದು ಪ್ರಕಟಣೆ ಪ್ರಕಟಿಸಿದನು.

 ಪ್ರಕಟಣೆಯನ್ನು ಓದಿ ಹಲವಾರು ಪೋಷಕರು ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು ಗಾಳಿಪಟ ಹಾರಿಸಿದರು ಆ ದೃಶ್ಯ ಮನೋಹಕರವಾಗಿ ಕಂಡಿತು ಏಕೆಂದರೆ ಬಣ್ಣಬಣ್ಣದ ಪಟಗಳು ಹಾರಾಡುತ್ತಿವೆ ಆದರೆ ಒಂದು ಪಟ ಕೂಡ ಆ ದಡಕ್ಕೆ ಸೇರಲಿಲ್ಲ ಅದರಲ್ಲಿ ಒಬ್ಬ ಹನ್ನೊಂದು ವರ್ಷದ ಹುಡುಗ ಇವನು ಒಳ್ಳೆಯ ಬುದ್ಧಿವಂತ ಆದರೆ ಅವನು ಎಲ್ಲಾ ಗಾಳಿ ಪಟವನ್ನು ಗಮನಿಸಿದನು ಒಂದು ವಿಶೇಷವಾದಪಟ ತಯಾರಿಸಿಕೊಂಡನು.

 ಬುದ್ಧಿವಂತ ಹುಡುಗ ಜೋರಾಗಿ ಗಾಳಿ ಯಾವಾಗ ಬರುತ್ತದೆ ಎಂದು ಕಾದನು ಒಂದು ಸಾರಿ ಈ ಕಡೆಯಿಂದ ಗಾಳಿ ತೀವ್ರ ಜೋರಾಗಿ ಬಂತು ಆಗ ತಾನು ತಯಾರು ಮಾಡಿ ಇಟ್ಟಿದ್ದ ಪಟವನ್ನು ಹಾರಿಸಿದನು ಅದು ಹಾರಿ ಸರಿಯಾಗಿ ಆ ದಡಕ್ಕೆ ತಲುಪಿತು ಆಗ ಎಲ್ಲರೂ ಸಂತೋಷಪಟ್ಟರು ಎಲಿಯಟ್ ಗೆ ರೋಮಾಂಚನವಾಯಿತು.

 ಎಲಿಯೇಟ್ ಅಲ್ಲಿಯ ಒಂದು ಮರಕ್ಕೆ ಆ ಪಟದ ದಾರವನ್ನು ಕಟ್ಟಿದನು ನಂತರ ಆ ಸಣ್ಣ ದಾರಕ್ಕೆ ಸ್ವಲ್ಪ ದಪ್ಪನಾದ ದಾರವನ್ನು ಕಟ್ಟಿ ಆ ತುದಿಗೆ ಎಳೆದುಕೊಂಡನು ನಂತರ ಇನ್ನಷ್ಟು ದಪ್ಪವಾದ ದಾರವನ್ನು ಕಟ್ಟಿ ಎಳೆದನು ನಂತರ ಕಬ್ಬಿಣದ ತೆಳುವಾದ ತಂತಿಯನ್ನು ಎಳೆದನು.

ನಂತರ ದಪ್ಪವಾದ ಹಗ್ಗ ಹಾಗೂ ಕಬ್ಬಿಣದ ಹಗ್ಗಗಳನ್ನು ಎಳಸಿದನು ನಂತರ ಇತರ ಯಂತ್ರಗಳನ್ನು ಬಳಸಿ ಕಬ್ಬಿಣದ ಹಗ್ಗದ ಮೇಲೆ ಕಟ್ಟಲಿಕ್ಕೆ ಏನೇನು ಬೇಕೋ ಅದನ್ನು ಬುಟ್ಟಿಯಲ್ಲಿ ಹಾಕಿ ಈ ಕಡೆಯಿಂದ ಆ ಕಡೆಗೆ ಹೋಗುವಂತೆ ಮಾಡಿದನು.

ಕಬ್ಬಿಣದ ಹಗ್ಗಗಳಿಂದ ತೂಗು ಸೇತುವೆಯನ್ನು ನಿರ್ಮಿಸಿದನು ಅದು ಇಂದಿಗೂ ವಿಸ್ಮಯವಾಗಿ ಕಾಣುತ್ತದೆ. ಕೆಲವು ಸಾರಿ ಸಮಸ್ಯೆಗಳಿಗೆ ಪರಿಹಾರ ಇಲ್ಲ ಎನ್ನುತ್ತವೆ ಆದರೆ ಅಷ್ಟು ದೊಡ್ಡ ಸೇತುವೆ ಕಟ್ಟಲು ಗಾಳಿ ಪಟದ ದಾರವೇ ಪರಿಹಾರ ನೀಡಿತು. ಯಾವುದೇ ಸಮಸ್ಯೆಗಳಿಗೆ ಪರಿಹಾರ ಇದೆ ಸೂಕ್ಷ್ಮವಾಗಿ ಗಮನಿಸಿದಾಗ ಅರ್ಥವಾಗುತ್ತದೆ  ಬದುಕಿನಲ್ಲಿ ಬರುವ ಸವಾಲುಗಳನ್ನು ಎದುರಿಸಲು ಸಜ್ಜಾಗೋಣ.

ಇಲಿಯನ್ನು ಬಿಟ್ಟಿತು

ಒಂದು ಪಕ್ಷಿಯು ತನ್ನ ಕಾಲಿನಲ್ಲಿ ಒಂದು ಇಲಿಯನ್ನು ಹಿಡಿದು ಕೊಂಡು ಹಾರುತ್ತಿತ್ತು ಇಲಿಗಾಗಿ ಒಂದು ದೊಡ್ಡ ಹದ್ದು ಬೆನ್ನಟ್ಟಿ ಬರುತ್ತಿತ್ತು ಪಕ್ಷಿಯು ತಾನು ಇನ್ನೂ ವೇಗದಿಂದ ಹಾರಿತು ಆದರೆ ಅದರ ಹಿಂದೆ ಹದ್ದು ಇನ್ನೂ ವೇಗವಾಗಿ ಹಿಂಬಾಲಿಸುತ್ತಿತ್ತು.

 ಕೊನೆಗೆ ಆ ಪಕ್ಷಿಯು ತನ್ನ ಕಾಲಿನಲ್ಲಿರುವ ಇಲಿಯನ್ನು ಬಿಟ್ಟಿತು ಆಗ ಹದ್ದು ಪಕ್ಷಿಯನ್ನು ಬಿಟ್ಟು ಬಿದ್ದ ಇಲಿಯ ಕಡೆಗೆ ಗಮನ ಹರಿಸಿತು ಪಕ್ಷಿಯು ಹದ್ದಿನಿಂದ ಬಿಡುಗಡೆ ಹೊಂದಿತು ಹೀಗೆಯೇ ನಮ್ಮ ಬದುಕಿನಲ್ಲಿ ನಾವು ಕೆಲವು ಪರಿಸ್ಥಿತಿಗಳಲ್ಲಿ ಎಷ್ಟು ಗಟ್ಟಿಯಾಗಿ ಸಿಕ್ಕಿ ಹಾಕಿಕೊಂಡಿರುತ್ತೇವೆ ಎಂದರೆ ಆ ವಿಷಯ ಬಿಟ್ಟರೆ ಎಲ್ಲವೂ ಸರಿಯಾಗುತ್ತದೆ.

ನಾವು ಕೆಲವೊಂದು ಹವ್ಯಾಸ ಚಟ ಬಿಡುವುದೇ ಇಲ್ಲ ಇಂತಹ ಪರಿಸ್ಥಿತಿಗಳಲ್ಲಿ ನಮ್ಮನ್ನು ನಾವೇ ಏನನ್ನು ಬಿಟ್ಟರೆ ನಾವು ಮುಂದುವರಿಯುತ್ತೇವೆ ಎನ್ನುವುದನ್ನು ನಾವೇ ಸ್ವಯಂ ವಿಶ್ಲೇಷಣೆ ಮಾಡಿಕೊಳ್ಳೋಣ. ನಾನು ಏನು ಬಿಟ್ಟರೆ ಸಂತೋಷವಾಗಿರುತ್ತೇನೆ?

]]>
https://babakategalu.com/%e0%b2%b9%e0%b3%86%e0%b2%a6%e0%b2%b0%e0%b2%bf%e0%b2%95%e0%b3%86%e0%b2%af%e0%b2%a8%e0%b3%8d%e0%b2%a8%e0%b3%81-%e0%b2%ae%e0%b3%86%e0%b2%9f%e0%b3%8d%e0%b2%9f%e0%b2%bf%e0%b2%a8%e0%b2%bf%e0%b2%82%e0%b2%a4/feed/ 0
ದುಶ್ಚಟಗಳು ಏನು ಮಾಡುತ್ತವೆ https://babakategalu.com/%e0%b2%a6%e0%b3%81%e0%b2%b6%e0%b3%8d%e0%b2%9a%e0%b2%9f%e0%b2%97%e0%b2%b3%e0%b3%81-%e0%b2%8f%e0%b2%a8%e0%b3%81-%e0%b2%ae%e0%b2%be%e0%b2%a1%e0%b3%81%e0%b2%a4%e0%b3%8d%e0%b2%a4%e0%b2%b5%e0%b3%86/ https://babakategalu.com/%e0%b2%a6%e0%b3%81%e0%b2%b6%e0%b3%8d%e0%b2%9a%e0%b2%9f%e0%b2%97%e0%b2%b3%e0%b3%81-%e0%b2%8f%e0%b2%a8%e0%b3%81-%e0%b2%ae%e0%b2%be%e0%b2%a1%e0%b3%81%e0%b2%a4%e0%b3%8d%e0%b2%a4%e0%b2%b5%e0%b3%86/#respond Sun, 06 Apr 2025 04:40:00 +0000 https://babakategalu.com/?p=260 Read more]]> ಒಂದು ಊರಿನಲ್ಲಿ ಒಂದು ಸಂಸಾರ ಇತ್ತು ಆ ಸಂಸಾರದಲ್ಲಿ ಗಂಡ ಹೆಂಡತಿ ಮಗ ಎಲ್ಲರೂ ಸೇರಿ ಇದ್ದರು ತಂದೆಯ ಕೆಲಸ ಏನೆಂದರೆ ಉಪನ್ಯಾಸಗಳನ್ನು, ಕಥೆಗಳನ್ನು ಹಾಸ್ಯವಾಗಿ ಹೇಳುವುದು ಇವರ ಉದ್ಯೋಗವಾಗಿತ್ತು ಇವರ ಕೀರ್ತಿ ಹಲವಾರು ಊರುಗಳಿಗೆ ಹರಡಿತು ನಂತರ ಮಧ್ಯಪ್ರಿಯ ರಾಜನು ಒಂದು ದಿನ ಗೊತ್ತು ಮಾಡಿ ಆಮಂತ್ರಣ ನೀಡಿದನು.

ಇವರು ಆ ದರ್ಬಾರಿನಲ್ಲಿ ತಮ್ಮ ಉಪನ್ಯಾಸವನ್ನು ನೀಡಲು ಆರಂಭಿಸಿದರು ಉಪನ್ಯಾಸಗಳು ಕೇಳುತ್ತಿದ್ದಂತೆಯೇ ಮಗ್ನರಾಗುತ್ತಿದ್ದರು ಒಳ್ಳೆಯ ಚಟಗಳು ಏನು ಮಾಡುತ್ತವೆ ದುಶ್ಚಟಗಳು ಏನು ಮಾಡುತ್ತವೆ ಎಂಬ ಒಂದು ಉಪನ್ಯಾಸವನ್ನು ಸೊಗಸಾಗಿ ನೀಡುತ್ತಿದ್ದಾಗ ಉದಾಹರಣೆಗೆ ಒಂದು ಹನಿಯಷ್ಟೂ ಮದಿರೆ ನಾಲಿಗೆಗೆ ಬಿದ್ದರೆ ಸಾಕು ಇರುವ ಪುಣ್ಯಗಳು ಕರಗಿ ನರಕ ಪ್ರಾಪ್ತಿಯಾಗುತ್ತದೆ ಎಂದು ಹೇಳುತ್ತಿದ್ದಂತೆಯೆ ದುರಾಚಾರಿ ರಾಜ ಸಿಟ್ಟಿನಿಂದ ಎದ್ದುನಿಂತು ತೊದಲುತ್ತಲೇ ಇವನಿಗೆ ಜೈಲಿಗೆ ಹಾಕಿ ಎಂದನು.

  ಏಕೆಂದರೆ ರಾಜನೇ ಎಲ್ಲರಿಗಿಂತ ಹೆಚ್ಚಾಗಿ ಕುಡಿದಿದ್ದು ವಾಲಾಡುತ್ತಿರುತ್ತಾನೆ ನಂತರ ಈ ಸುದ್ದಿ ಮನೆಯವರಿಗೆ ತಿಳಿಯಿತು ಆಗ ಮಗನಿಗೆ ತಾಯಿ ಹೇಳಿದರು ರಾಜನ ವರ್ತನೆ ಸರಿಯಿಲ್ಲ ಮುಂಗೋಪಿ ನೀನು ಹೋಗು ಎಂದು ಕಳಿಸಿದರು.

 ಹಿರಿಯ ಚಣಾಕ್ಷ ಮಗ ತಂದೆಯ ರೀತಿ ಭಾಷಣ ಉಪನ್ಯಾಸ ಆಗಾಗ ನೀಡುತ್ತಿದ್ದನು ತಕ್ಷಣ ಚಣಾಕ್ಷ ಮಗನು ನೇರವಾಗಿ ತಂದೆಯ ಬಳಿಗೆ ಹೋದನು ತಂದೆಗೆ ಹೇಳಿದನು ನೀವು ಈ ರೀತಿ ಹೇಳಿ ಎಂದು ಏನೋ ಕಿವಿಯಲ್ಲಿ ಪಿಸುಗುಟ್ಟಿದನು ನಂತರ ರಾಜನ ಬಳಿಗೆ ಬಂದು ಮಗ ಹೇಳಿದನು ಸ್ವಾಮಿ ನೀವು ಕಥೆಯನ್ನು ಸರಿಯಾಗಿ ಕೇಳಲಿಲ್ಲ ಒಂದು ಸಾರಿ ಕಥೆಯನ್ನು ಕೇಳಿ ನಂತರ ನೀವು ಏನು ಬೇಕಾದ್ರೂ ಶಿಕ್ಷೆ ಕೊಡಬಹುದು ಎಂದು ವಿನಂತಿಸಿಕೊಂಡನು.

 ರಾಜನು ಎಲ್ಲಿಂದ ನಿಲ್ಲಿಸಿದ್ರು ಅಲ್ಲಿಂದನೇ ಹೇಳಬೇಕು ಎಂದು ಆಜ್ಞೆ ಕೊಟ್ಟನು ಆಗಲಿ ಮಹಾಪ್ರಭು ಎಂದನು ಮತ್ತೆ ಉಪನ್ಯಾಸ ಶುರುಮಾಡಿದಾಗ ನಾಲಿಗೆಯ ಮೇಲೆ ಒಂದು ಹನಿ ಮದಿರೆ ನರಕ ಪ್ರಾಪ್ತವಾಗುತ್ತದೆ ಎಂದು ಎರಡು ಸಾರಿ ಹೇಳಿದರು ಆದರೆ ತಂಬಿಗೆಗಳಷ್ಟು ಬಿದ್ದರೆ ಅಲ್ಲಿಯೇ ಸ್ವರ್ಗ ಪ್ರಾಪ್ತಿಯಾಗುತ್ತದೆ.

 ಆ ಕ್ಷಣದಲ್ಲಿಯೇ ಸ್ವರ್ಗದ ಅನುಭವವಾಗುತ್ತದೆ ನಮ್ಮ ಕನಸು ನನಸಾಗುವಂತೆ ಸುಮಧುರ ಅನುಭವವಾಗುತ್ತದೆ ಎಂದು ಹೇಳಿದರು ನಂತರ ರಾಜನು ಸಂತೋಷಪಟ್ಟು ಆನಂದದಲ್ಲಿ ತೇಲಿ  ಸನ್ಮಾನ ಮಾಡಿ ಪ್ರಶಸ್ತಿ ನೀಡಿ ಬಹಳಷ್ಟು ಚಿನ್ನದ ನಾಣ್ಯಗಳನ್ನು ಕೊಟ್ಟು ಕಳುಹಿಸಿದನು.  ದಾರಿಯಲ್ಲಿ ಬರಬೇಕಾದರೆ ಮಗನಿಗೆ ಹೇಳಿದರು ಮಗನೇ ರಾಜನಿಗಾಗಿ ಸುಳ್ಳು ಹೇಳಿದಂತಾಯಿತು ಎಂದು ಹೇಳಿದಾಗ ಮಗ ಹೇಳಿದನು.

 ಹೌದು ನೀವು ಹೇಳಿದ್ದರಲ್ಲಿ 2 ಮಾತಿಲ್ಲ ಆದರೆ ಮೂರ್ಖರಿಗೆ ನೀಡುವ ಉಪದೇಶ ಒಳ್ಳೆಯದಲ್ಲ ಇಲ್ಲದಿದ್ದರೆ ನಮ್ಮ ಪ್ರಾಣವೇ ಹೋಗುತ್ತದೆ ದುಷ್ಟರನ್ನು ನೋಡಿದರೆ ದೂರ ಇರಬೇಕು ಎಂದು ನೀವೇ ಹೇಳಿದ್ದೀರಿ ಅದಕ್ಕಾಗಿ ಈ ಸಂದರ್ಭಕ್ಕೆ ನಾನು ಬದಲಾದೆ ಎಂದು ಹೇಳಿದನು.

ತಂದೆಯವರು ಮಗನನ್ನು ಅಪ್ಪಿಕೊಂಡರು. ಅಧಿಕಾರದಲ್ಲಿ ಇರುವವರಿಗೆ ಬುದ್ಧಿಮಾತು ಕೇಳುವ ಪ್ರಜ್ಞೆ ಇದ್ದರೆ ಹೇಳಬೇಕು ಇಲ್ಲದಿದ್ದರೆ ಹೇಳುವುದು ಒಳ್ಳೆಯದಲ್ಲ ಎಂದು ಅರಿತುಕೊಂಡರು. ನಾನು ಹೇಳಬಾರದನ್ನು ಹೇಳಿ ಪೇಚಾಟಕ್ಕೆ ಸಿಲುಕಿಕೊಂಡ ಅನುಭವ ನೆನಪಿದೆಯೇ?

ಇದು ಮಹಾ ದಾನವಲ್ಲವೇ

ಒಂದು ಊರಿನಲ್ಲಿ ಬರಗಾಲ ಬಂದು ಎಲ್ಲರೂ ಕಂಗಾಲಾದರು ಆಗ ಇದನ್ನು ತಿಳಿದ ಅಲ್ಲಿಯ ಅಭಿವಚನ್ ಗುರುಗಳು ಎಲ್ಲರಿಗೂ ಸುದ್ದಿ ಮುಟ್ಟಿಸುವಂತೆ ಹೇಳಿದರು ಈ ಊರಿನಲ್ಲಿ ಬರಗಾಲ ಬಂದಿದೆ ತಾವು ದಯಮಾಡಿ ಎಷ್ಟು ಸಾಧ್ಯವೋ ಅಷ್ಟನ್ನು ನೀವು ದಾನ ಮಾಡಬಹುದು ಎಂದು ಹೇಳಿದರು.

ಮಹಾದಾನಿ ಎಂದು ಹೆಸರು ಪಡೆದ ಕೆಲವು ಶ್ರೀಮಂತರು ಅವನೂ ಕೂಡ ಎಲ್ಲರಿಗಿಂತ ಹೆಚ್ಚಾಗಿ ದಾನ ಮಾಡಿದನು ಗುರುಗಳು ಎಲ್ಲರನ್ನು ಗ್ರಹಿಸುತ್ತಿದ್ದರು ನಂತರ ಒಬ್ಬ ಹಿರಿಯ ವ್ಯಕ್ತಿ ತನ್ನ ಚೀಲದಿಂದ 5 ನಾಣ್ಯವನ್ನು ಮಾತ್ರ ಹಾಕಿದನು.

ಐದು ನಾಣ್ಯ ಹಾಕಿದ ವ್ಯಕ್ತಿಯನ್ನು ಸೂಕ್ಷ್ಮವಾಗಿ ಗಮನಿಸಿದ ಗುರುಗಳು ಹಿರಿಯ ವ್ಯಕ್ತಿಯನ್ನು ಮೇಲಿನ ಆಸನದಲ್ಲಿ ಕುಳಿತುಕೊಳ್ಳಲು ಶಿಷ್ಯರಿಗೆ ಹೇಳಿದರು ಶಿಷ್ಯರಿಗೆ ಏಕೆ ಎಂದು ಅರ್ಥವಾಗಲಿಲ್ಲ ಆಗ ಗುರುಗಳು ಹೇಳಿದರು ಇವರೆಲ್ಲರೂ ದಾನ ಮಾಡುವವರೆ ಆದರೆ ಇವರಿಗೆ ಹೆಚ್ಚು ಐಶ್ವರ್ಯಾ ಇದೆ ಅದರಲ್ಲಿ ಕೊಟ್ಟಿದ್ದಾರೆ.

ಈ ಹಿರಿಯ ವ್ಯಕ್ತಿ ಬಳಿ ಇರುವುದು 10 ನಾಣ್ಯಗಳು ಆದರೆ ತನ್ನ ಅವಶ್ಯಕತೆಗೆ 5ನಾಣ್ಯಗಳನ್ನು ಇಟ್ಟುಕೊಂಡು ಇನ್ನೂ ಉಳಿದ 5ನಾಣ್ಯಗಳನ್ನು ಹಾಕಿದ್ದಾನೆ ಎಂದರೆ ಇದು ಮಹಾದಾನವಲ್ಲವೇ ಎಂದು ತಿಳಿಸುತ್ತಾರೆ.

ದಾನಿ ಎನಿಸಿ ಕೊಳ್ಳಲು ಶ್ರೀಮಂತರೇ ಬೇಕಾಗಿಲ್ಲ ಎಷ್ಟು ಇದೆಯೋ ಅದರಲ್ಲಿ ಸ್ವಲ್ಪ ಭಾಗವನ್ನು ನೀಡೋಣ.

ಒಂದು ಕಾಡಿನಲ್ಲಿ ಹಲವಾರು ಕುರಿಗಳು ಇದ್ದವು ಅದರಲ್ಲಿ ನಾಯಕ ಕುರಿ ಎಲ್ಲಾ ಕುರಿಗಳಿಗೆ ಧೈರ್ಯವನ್ನು ನೀಡುತ್ತಿದ್ದನು ತೋಳಗಳು ಆಗಾಗ ಬಂದು ಕುರಿಗಳಿಗೆ ತೊಂದರೆ ಕೊಡುತ್ತಿತ್ತು ಆದುದರಿಂದ ನಾಯಕ ಕುರಿ ಕುರಿಗಳಿಗೆ ಆತ್ಮಶಕ್ತಿ ತುಂಬಿದನು.

 ನೋಡಿ ತೋಳಕ್ಕೆ ಕೊಂಬುಗಳಿವೆ ಹೌದು ಆದರೆ ನೀವು ಸಂಖ್ಯೆಯಲ್ಲಿ ಹೆಚ್ಚಾಗಿದ್ದೀರಾ ಆದುದರಿಂದ ನೀವೆಲ್ಲರೂ ಒಟ್ಟುಗೂಡಿ ಒಂದೇ ಸಾರಿ ನೀವು ಹೋರಾಟ ಮಾಡಿದರೆ ಆ ತೋಳಗಳು ಹೆದರಿ ದಿಕ್ಕು ದಿಸಯಿಲ್ಲದೆ ಪ್ರಾಣ ಉಳಿಸಿಕೊಳ್ಳಲು ಓಡಿ ಹೋಗುತ್ತವೆ ಎಂದು ಭಾಷಣ ನೀಡಿತು.

ಕುರಿಗಳು ಹೇಳಿದವು ಸರಿ ಇದೇ ರೀತಿ ನಾವು ಮುಂದೆ ತೋಳ ಬಂದಾಗ ಧೈರ್ಯದಿಂದ ಹೋರಾಡಬೇಕು ಎಂದು ಹೇಳಿಕೊಂಡವು ಸ್ವಲ್ಪ ಸಮಯದ ನಂತರ ಏನೋ ಸದ್ದು ಕೇಳಿ ಬಂತು ಅಲ್ಲಿ ನೋಡಿದರೆ ತೋಳ ಕುರಿಗಳ ಕಣ್ಣಿಗೆ ಕಂಡಿತು ತಕ್ಷಣ ಮುಂದೆಯೇ ಇದ್ದ ನಾಯಕ ಕುರಿ ಅಡ್ಡ ದಿಡ್ಡಿ ಓಡಿಹೋಯಿತು.

 ಇನ್ನೂ ಹಿಂದೆ ಇದ್ದ ಕುರಿಗಳಿಗೆ ಹೇಳಬೇಕೆ ದಿಕ್ಕಾ ಪಾಲಾಗಿ ಓಡಿ ಹೋದವು ನಾಯಕ ಕುರಿ ಹೇಳಿದ ಮಾತು ಗಾಳಿಗೆ ಹೋಯಿತು.

ಶಕ್ತಿಯಿದೆ ಎಂದು ಮೈಮರೆತಾಗ

ಒಂದು ಊರಿನಲ್ಲಿ ವಿಶಾಲವಾದ ಆಶ್ರಮ ಇರುತ್ತದೆ ಆಶ್ರಮದಲ್ಲಿ ಹಲವಾರು ಶಿಷ್ಯರು ಇರುತ್ತಾರೆ ಬಾಬಾ ಅವರು ವಾರಕ್ಕೆ ಒಂದು ಸಾರಿಯಾದರೂ ಎಲ್ಲಾ ಶಿಷ್ಯರೊಂದಿಗೆ ಒಂದು ಸಾರಿ ಊರನ್ನು ಸುತ್ತಾಡಿಕೊಂಡು ಬರುವುದು ವಾಡಿಕೆ ಆ ಊರಿನಲ್ಲಿ ಜಾತ್ರೆ ಇತ್ತು ಜಾತ್ರೆಯಲ್ಲಿ ಮನೋರಂಜನೆಯ ಹಲವು ಆಟಗಳು ಆಕರ್ಷಿಸುತ್ತಿದ್ದವು.

 ಶಿಷ್ಯರಿಗೆ ಒಂದು ಆಟವಂತೂ ಮನಸೆಳೆಯಿತು ಅದು ಏನು ಎಂದರೆ ಬಿಲ್ಲು ಬಾಣಗಳ ಸ್ಪರ್ಧೆ ಹೇಗೆ ಎಂದರೆ ಐವತ್ತು ಅಡಿ ದೂರದಿಂದ ಗುರಿಯಿಟ್ಟು ವೃತ್ತದ ಒಳಗೆ ಹೊಡೆಯುವಂತದ್ದು ಆಗ ಶಿಷ್ಯರಾದವರು ಬಾಬಾ ಅವರಿಗೆ ಹೇಳಿದರು.

 ನಾವು ಈ ಆಟವನ್ನು ಆಡುತ್ತೇವೆ ಎಂದು ಒಬ್ಬೊಬ್ಬರಾಗಿ ಆಟ ಆಡಿ ಹಲವಾರು ಶಿಷ್ಯರು ಸೋತರು ಆಟದಲ್ಲಿ ಒಂದು ವಿಶೇಷತೆ ಇತ್ತು ಗುರಿ ಇಟ್ಟು ಸರಿಯಾಗಿ ಹೊಡೆದರೆ 2 ಪಟ್ಟು ಹಣ ಸಿಗುತ್ತಿತ್ತು ಆಗ ಗುರುಗಳು ನಾನು ಹೊಡೆಯುತ್ತೇನೆ ಎಂದು ನಿಂತರು.

ಬಾಬಾ ಅವರು ಬಾಣವನ್ನು ಹೊಡೆಯುತ್ತಿದ್ದಾರೆ ಎಂದು ಅಕ್ಕಪಕ್ಕದವರು ಎಲ್ಲರೂ ಕೂಡ ನೋಡಲು ನಿಂತರು ಬಾಬಾ ಅವರು ನಿಂತು ಬಾಣ ಬಿಟ್ಟರು ಇಪ್ಪತ್ತು ಅಡಿಗಿಂತ ಮುಂದೆ ಹೋಗಿ ಬಿದ್ದಿತ್ತು ಇದನ್ನು ನೋಡಿದ ಎಲ್ಲರೂ ಗೊಳ್ಳೆಂದು ನಕ್ಕರು ಆಗ ಬಾಬಾ ಅವರು ಹೇಳಿದರು.

 ಈಗ ನಾನು ತೋರಿಸಿದ್ದು ಕೀಳರಿಮೆ ಇದ್ದು ಬಾಣ ಬಿಟ್ಟರೆ ಹೇಗಿರುತ್ತದೆ ಎಂದು ಪ್ರದರ್ಶಿಸಿದೆ ತನ್ನಲ್ಲಿ ತನಗೆ ಶಕ್ತಿ ಇರುವುದಿಲ್ಲ ಕೌಶಲ್ಯದಲ್ಲಿ ಮತ್ತೆ ಜ್ಞಾನ ನಂಬಿಕೆ ಇರುವುದಿಲ್ಲ

ಇನ್ನೊಂದು ಬಾಣ ತೆಗೆದುಕೊಂಡರು ತಯಾರಾಗಿ ನಿಂತರು ತುಂಬಾ ಶಕ್ತಿ ಪ್ರಯೋಗಿಸಿ ಬಿಟ್ಟರು ಎಲ್ಲಿ ಗುರಿ ಇತ್ತೋ ಅದಕ್ಕಿಂತ ಬಾಣ ಮುಂದೆ ಎಲ್ಲೋ ಹೋಗಿ ಬಿದ್ದಿತು ಇದನ್ನು ನೋಡಿದಾಗ ಸಹ ಜನರು ನಕ್ಕರು ಆಗ ಮತ್ತೆ ಗುರುಗಳು ಹೇಳಿದರು.

ಇದಕ್ಕೆ {ಓವರ್ ಕಾಂಫಿಡೆನ್ಸ್) ಮಿತಿಮೀರಿದ ನಂಬಿಕೆ ಅಂತ ಹೇಳ್ತೀವಿ ಹೆಚ್ಚು ನಂಬಿಕೆ ಇಟ್ಟು ತುಂಬಾ ಶಕ್ತಿಯಾಗಿ ಕೆಲಸ ಮಾಡಿದರೆ ನನಗೆ ತುಂಬಾ ಶಕ್ತಿಯಿದೆ ಎಂದು ಮೈಮರೆತಾಗ ಹೀಗೆ ಗುರಿ ತಪ್ಪುತ್ತದೆ ಎಂದು ಹೇಳಿದರು. 

ಬಾಬಾ ಅವರು ಮೂರನೆಯ ಬಾಣವನ್ನು ಸರಿಯಾಗಿ ಗುರಿ ಇಟ್ಟು ಬಾಣ ಬಿಟ್ಟರು ಅದು ಸರಿಯಾಗಿ ಗುರಿ ಮುಟ್ಟಿತು ಆಗ ಶಿಷ್ಯರು ಹಾಗೂ ಇತರರು ಸೇರಿದವರು ತುಂಬಾ ಸಂತೋಷಪಟ್ಟರು ನಾವು ಯಾವ ಕೆಲಸಕ್ಕೆ ಎಷ್ಟು ಶಕ್ತಿಯನ್ನು ಉಪಯೋಗಿಸಬೇಕು ಅಷ್ಟೇ ಶಕ್ತಿಯನ್ನು ಸರಿಯಾಗಿ ಉಪಯೋಗಿಸಬೇಕು ಎಂದು ವಿವರಿಸಿದರು. ನಾನು ಕೀಳರಿಮೆ ಅಥವಾ ಅತಿಯಾದ ಆತ್ಮವಿಶ್ವಾಸದಿಂದ ಯಾವ ಕೆಲಸ ಮಾಡಿದ್ದೇನೆ>

ಈ ಯಾತನೆ ತಡೆಯಲು ಆಗಲಿಲ್ಲ

ಒಂದು ಸಾರಿ ಸೊಳ್ಳೆ ತನ್ನಷ್ಟಕ್ಕೆ ತಾನು ಹಾಡು ಹಾಕಿಕೊಂಡು ಅರಾಮಾಗಿ ಇತ್ತು ಆಗ ಸಿಂಹವು ಜೋರಾಗಿ ಶಬ್ದ ಮಾಡಿಕೊಂಡು ಬಂತು ಆಗ ಸೊಳ್ಳೆಯೂ ಹೇಳಿತ್ತು ನೀನು ಕಾಡಿಗೆ ರಾಜನಾಗಿ ಇದ್ದೀಯ ನನಗೂ ಗೊತ್ತಿದೆ ಆದರೆ ಈ ರೀತಿ ಇತರರಿಗೆ ತೊಂದರೆ ಕೊಡುವುದು ಸರಿಯಲ್ಲ ಎಂದು ವಿನಂತಿಸಿತು.

 ಸಿಂಹವು ಹೇಳಿತು ನಾನು ಕಾಡಿನ ರಾಜ ನನಗೆ ಗೊತ್ತು ನನ್ನ ಇಷ್ಟದಂತೆ ನಾನು ಇರುತ್ತೇನೆ ಅದನ್ನು ಕೇಳಲು ನೀನು ಯಾರು? ಎಂದು ಹೇಳಿತು ಸೊಳ್ಳೆಯು ವಿನಯವಾಗಿ ಹಾಗಾದರೆ ನೀನು ನಾನು ಯುದ್ಧ ಮಾಡೋಣ ಯಾರು ಗೆಲ್ಲುತ್ತಾರೆ ನೋಡೋಣ ಎಂದಿತು.

ಸಿಂಹವು ನೀನು ಜುಜುಬಿ ಸೊಳ್ಳೆ ಉಫ್ ಎಂದು ಊದಿದರೆ ಎಲ್ಲೋ ಹೋಗಿ ಬೀಳುತ್ತಿಯ ನನಗೆ ಯುದ್ಧಕ್ಕೆ ಕರೆಯುತ್ತೀಯಾ ಎಂದು ಒಪ್ಪಿಕೊಂಡಿತು ಆಗಲಿ ಯುದ್ಧ ಶುರುವಾಗಲಿ ಎಂದು ಸಿಂಹದ ಮೇಲೆ ಸೊಳ್ಳೆಯೂ ಕುಳಿತುಕೊಂಡಿತು.

 ಸಿಂಹವು ದೊಡ್ಡದಾಗಿ ಬಾಯಿ ಬಿಚ್ಚಿತು ತಕ್ಷಣ ಸೊಳ್ಳೆಯು ಬಾಯಿ ಮುಚ್ಚುವುದರೊಳಗೆ ಆಚೆ ಬಂದು ಮೂಗಿನ ಒಳಕ್ಕೆ ಹೋಯಿತು ಮೂಗಿನಲ್ಲಿ ಹೋಗಿ ಕಚ್ಚಲಿಕ್ಕೆ ಶುರುಮಾಡಿತ್ತು ಸಿಂಹಕ್ಕೆ ಈ ಯಾತನೆ ತಡೆಯಲು ಆಗಲಿಲ್ಲ ಸಿಂಹ ಸೀನಿತು ತಲೆ ಮೇಲೆ ಕೆಳಗೆ ಅಕ್ಕ ಪಕ್ಕಕ್ಕೆ ತಲೆ ಅಲ್ಲಾಡಿಸಿತ್ತು ಕುಣಿಯಿತು ಕೊಂಬೆಗೆ ಹೋಗಿ ಡಿಕ್ಕಿ ಹೊಡೆಯಿತು.

 ಏನೇ ಆದರೂ ಸೊಳ್ಳೆ ಮಾತ್ರ ಕಚ್ಚುವುದನ್ನು ನಿಲ್ಲಿಸಲೇ ಇಲ್ಲ ಕೊನೆಗೆ ಸಿಂಹ ಹೇಳಿತು ರಾಜಾ ನಾನಲ್ಲ ನೀನೆ ರಾಜ ಎಂದು ಹೇಳಿದಾಗ ಸೊಳ್ಳೆಯೂ ಕಚ್ಚುವುದನ್ನು ಕಡಿಮೆ ಮಾಡಿತು ನಂತರ ಸೊಳ್ಳೆ ಹೇಳಿತು ಇನ್ನು ಮುಂದೆ ಈ ರೀತಿ ಯಾರಿಗೂ ಅಹಂಕಾರ ತೂರಿಸಬಾರದು ಎಂದು ಹೇಳಿದಾಗ ಸಿಂಹವು ಬಾಲವನ್ನು ಮುದುರಿಕೊಂಡು ಹೋಯಿತು.

]]>
https://babakategalu.com/%e0%b2%a6%e0%b3%81%e0%b2%b6%e0%b3%8d%e0%b2%9a%e0%b2%9f%e0%b2%97%e0%b2%b3%e0%b3%81-%e0%b2%8f%e0%b2%a8%e0%b3%81-%e0%b2%ae%e0%b2%be%e0%b2%a1%e0%b3%81%e0%b2%a4%e0%b3%8d%e0%b2%a4%e0%b2%b5%e0%b3%86/feed/ 0