ಬಹಳ ವರ್ಷಗಳ ಹಿಂದೆ ಇಬ್ಬರು ರಾಜರೂ ಇದ್ದರು ಇವರು ನೆರೆಯ ರಾಜರು ಎಂದು ಹೇಳಬಹುದು ಇವರು ತುಂಬಾ ಅಪ್ತರಾಗಿದ್ದರು ಯಾವುದೇ ಶತ್ರುತ್ವ ಇರಲಿಲ್ಲ ಮಿತೃತ್ವದಿಂದ ಬದುಕುತ್ತಿದ್ದರು.
ಇಬ್ಬರೂ ಆಗಾಗ ತಮ್ಮ ರಾಜ್ಯಕ್ಕೆ ಬಂದು ಉತ್ಸವಗಳಲ್ಲಿ, ಔತಣ ಕೂಟಗಳಲ್ಲಿ, ಒಂದಾಗುತ್ತಿದ್ದರು ಹೀಗೆ ಎರಡೂ ರಾಜ್ಯದವರು ಎಷ್ಟೋ ವರ್ಷಗಳಾದವು ಆದರೆ ಯಾವುದೆ ಯುದ್ಧ ನಡೆಯಲಿಲ್ಲ ಇವರಿಗೆ ಯುದ್ಧ ಅನ್ನೋದು ಮರೆತಿದ್ದರು.
ಈ ರೀತಿ ಇಬ್ಬರು ರಾಜರು ಬದುಕುತ್ತಿದ್ದಾಗ ಒಂದು ಸಾರಿ ಬೇರೆ ರಾಜ್ಯದವರು ಶಾಂತಿಯಿಂದ ಕೂಡಿದ ರಾಜ್ಯವನ್ನು ತನ್ನ ವಶಕ್ಕೆ ಪಡೆದುಕೊಳ್ಳಬೇಕು ಎಂಬ ಆಸೆಯಿಂದ ಬೇರೆ ರಾಜ್ಯದವರು ಸದ್ದಿಲ್ಲದಂತೆ ಯುದ್ಧಕ್ಕೆ ತಯಾರಾಗಿ ಊರಿನ ಆಚೆ ನಿಂತು ರಾಜನಿಗೆ ಹೇಳುತ್ತಾರೆ ಬಂದು ಯುದ್ಧಮಾಡು ಎಂದು ಸಂದೇಶ ಕಳಿಸುತ್ತಾರೆ.
ಶಾಂತಿಯುತವಾಗಿ ಇದ್ದ ಈ ರಾಜನು ಆತಂಕದಿಂದ ತನ್ನ ತಾಯಿಗೆ ಕಾಲು ಮುಗಿದು ನಮಸ್ಕಾರ ಮಾಡಿ ಯುದ್ಧದ ಕತ್ತಿ ಮತ್ತು ಶಿರಸ್ತ್ರಾಣವನ್ನು ತರಲು ಹೇಳಿದನು ಆದರೆ ತಾಯಿಯು ತರಲಿಲ್ಲ ಆಗ ರಾಜನು ಹೇಳಿದ ಅಮ್ಮ ನಾನೇ ಅದನ್ನು ತೆಗೆದುಕೊಂಡು ಬರುತ್ತೇನೆ ಎಂದನು.
ಆಗ ತಾಯಿ ಮಗನನ್ನು ತಡೆದು ಹೇಳಿದಳು ಮಗನೆ ಆ ಶಿರಸ್ತ್ರಾಣದಲ್ಲಿ ಪಾರಿವಾಳ ಗೂಡುಕಟ್ಟಿ ಪಾರಿವಾಳದ ಮರಿಗಳು ಇವೆ ತಾಯಿ ಪಾರಿವಾಳ ಇದನ್ನು ಸಹಿಸುವುದಿಲ್ಲ ಮತ್ತೆ ಮರಿ ಮಕ್ಕಳು ಕೂಡ ಸತ್ತು ಹೋಗುತ್ತವೆ ಇದರಿಂದ ನಮಗೆ ಒಳ್ಳೆಯದಾಗುವುದಿಲ್ಲ ಎಂದು ತಾಯಿ ಹೇಳಿದರು.
ತಾಯಿಯ ಮಾತು ಕೇಳಿ ರಾಜನು ತಲೆಗೆ ಶಿರಸ್ತ್ರಾಣ ಇಲ್ಲದೆ ಯುದ್ಧಕ್ಕೆ ಹೋದ ಶಿರಸ್ತ್ರಾಣ ಇಲ್ಲದೆ ರಣರಂಗಕ್ಕೆ ಬಂದನ್ನು ಇದನ್ನು ನೋಡಿದ ರಾಜ ಕೇಳಿದ ಯುದ್ಧಕ್ಕೆ ಬರಬೇಕಾದರೆ ಶಿರಸ್ತ್ರಾಣ ಧರಿಸಿ ಬರಬೇಕು ಅದು ಬಿಟ್ಟು ನೀನು ಹೀಗೆ ಏಕೆ ಬಂದಿದ್ದೀಯಾ? ಎಂದು ಪ್ರಶ್ನಿಸುತ್ತಾನೆ.
ಆಗ ರಾಜನು ಹೇಳುತ್ತಾನೆ ನನ್ನ ಶಿರಸ್ತ್ರಾಣದಲ್ಲಿ ಪಾರಿವಾಳದ ಮರಿಗಳು ಇದೆ ಅದನ್ನು ತೆಗೆದರೆ ಪಾರಿವಾಳದ ಮರಿಗಳು ಸಾಯುತ್ತವೆ ಆದುದರಿಂದ ನಾನು ಹೀಗೆ ಬಂದೆ ಎಂದು ಶಾಂತಿಯುತವಾಗಿ ತಿಳಿಸಿದ ಇದನ್ನು ಕೇಳಿದ ಆ ರಾಜನಿಗೆ ಆಶ್ಚರ್ಯವಾಯಿತು ಬೆಣ್ಣೆಯಂತೆ ಕರಗಿದನು.
ಒಂದು ಯುದ್ಧ ಮಾಡಿದರೆ ಎಷ್ಟು ಜನರಿಗೆ ತೊಂದರೆಯಾಗುತ್ತಿತ್ತು ಎಂದು ಅರಿತು ಯುದ್ಧವನ್ನು ಮಾಡದೆ ಅವನು ಈ ರಾಜನನ್ನು ಮಿತೃತ್ವ ಬೆಳೆಸಿಕೊಂಡು ತನ್ನ ರಾಜ್ಯಕ್ಕೆ ಮರಳಿದನು.
ಎಲ್ಲಾ ಕಡೆ ನಾವು ಯುದ್ದಮಾಡಿ, ಹೋರಾಟ ಮಾಡಿ, ಜಗಳ ಮಾಡಿ, ಕೋಪ ಮಾಡಿಕೊಂಡು, ಗೆಲ್ಲಲು ಸಾಧ್ಯವಿಲ್ಲ ನಯ ವಿನಯತೆ ಪ್ರಾಮಾಣಿಕತೆಯಿಂದ ಬದುಕಿ ತಾಳ್ಮೆಯಿಂದ ಗೆಲ್ಲೋಣ.
ಮನಸ್ಸಿನಲ್ಲಿ ದ್ವಂದ್ವ ನಡೆಯುತ್ತಿತ್ತು
ಒಂದು ಸಾರಿ ಯುವತಿಯು ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಹೊಟ್ಟೆ ಹಸಿವು ತುಂಬಾ ಜಾಸ್ತಿ ಆಯಿತು ತಡೆಯಲು ಸಾಧ್ಯವಾಗಲಿಲ್ಲ ಅದಕ್ಕಾಗಿ ತನ್ನ ಬ್ಯಾಗಿನಿಂದ ಒಂದು ಬಿಸ್ಕೆಟ್ ಪಾಕೆಟ್ಟನ್ನು ಹೊರತೆಗೆದಳು ಅಷ್ಟರಲ್ಲಿ ದಪ್ಪವಾಗಿರುವ ಒಂದು ಹೆಂಗಸು ರೈಲನ್ನು ಹತ್ತಿ ಯುವತಿಯು ಸೀಟಿನ ಪಕ್ಕ ಬಂದು ಕುಳಿತರು.
ಬಂದವರು ಸುಮ್ಮನೆ ಇರದೆ ಬಿಸ್ಕೆಟ್ ಅನ್ನು ಹೇಳದೆ ಕೇಳದೆ ತಿನ್ನುತ್ತಿದ್ದಾರೆ ಯುವತಿಗೆ ತುಂಬಾ ಭಯಂಕರ ಕೋಪ ಬಂತು ನನ್ನ ಬಿಸ್ಕೆಟ್ ಅವರು ತಿನ್ನುತ್ತಿದ್ದಾರೆ ಎಂದು ಮತ್ತೆ ನನ್ನನ್ನು ನೋಡಿ ನಾನು ಬಿಸ್ಕೆಟ್ ಎತ್ತಿ ತಿನ್ನಲು ಶುರುಮಾಡಿದೆ ಮನಸಲ್ಲೇ ಅಂದುಕೊಂಡಳು ನಾನು ಆಗಿರುವುದರಿಂದ ಇವಳನ್ನು ಕ್ಷಮಿಸಿದ್ದೇನೆ.
ಇತರರು ಯಾರೇ ಆಗಿದ್ದರೂ ಅವರ ಜೊತೆ ಜಗಳವಾಡುತ್ತಿದ್ದರು ಎಂದು ಮನಸಿನಲ್ಲೇ ಅಂದುಕೊಂಡಳು ಮತ್ತೆ ಹೀಗೆ ಬಿಸ್ಕೆಟ್ ತೆಗೆದುಕೊಂಡು ತಿನ್ನುತ್ತಿದ್ದರೆ ಹೆಂಗಸು ಮತ್ತೆ ಇವಳು ಒಂದು ಬಿಸ್ಕೆಟನ್ನು ತೆಗೆದುಕೊಂಡಳು.
ಹೀಗೆ ತಿನ್ನುತ್ತಾ ತಿನ್ನುತ್ತಾ ಕೊನೆಗೆ ಒಂದು ಬಿಸ್ಕೆಟ್ ಮಾತ್ರ ಉಳಿದಿತ್ತು ಆಗ ಯುವತಿಗೆ ಕುತೂಹಲ ಹೆಂಗಸು ಏನು ಮಾಡಬಹುದು ಎಂದು ಅದನ್ನು ಮುರಿದು ಅರ್ಧ ಅರ್ಧ ಮಾಡಿ ನಗುತ್ತಾ ನನಗೆ ಕೊಟ್ಟಳು ಆಗ ನನಗೆ ಅನಿಸಿತು ಅವಳಿಗೆ ತುಂಬಾ ಅಹಂಕಾರವಿದೆ.
ಕೊಬ್ಬು ಜಾಸ್ತಿ ಇದೆ ಇವಳು ನನ್ನ ಬಿಸ್ಕೆಟ್ಟನ್ನು ಎಲ್ಲಾ ಖಾಲಿ ಮಾಡಿದ್ದಾರಲ್ಲ ಎಂತಹ ಹೆಂಗಸು ನಾಚಿಕೆಯಿಲ್ಲದವರು ಎನ್ನುತ್ತಾ ಮನಸ್ಸಿನಲ್ಲಿ ಹೇಳಿಕೊಂಡಳು. ಮನಸ್ಸಿನಲ್ಲಿ ಇದೆ ದ್ವಂದ್ವ ನಡೆಯುತ್ತಿತ್ತು.
ಸ್ವಲ್ಪ ಸಮಯದಲ್ಲೇ ಈ ಯುವತಿಯ ಸ್ಟೇಷನ್ ಬರುತ್ತಿದ್ದಂತೆ ಹೆಂಗಸು ಎದ್ದು ಹೋದಳು ಬ್ಯಾಗಿನಲ್ಲಿ ಕೈಹಾಕಿದರೆ ನನ್ನ ಬಿಸ್ಕೆಟ್ ಪ್ಯಾಕೆಟ್ ತನ್ನ ಬ್ಯಾಗಿನಲ್ಲಿ ಇತ್ತು ಆದರೆ ನಾನು ತಿಂದಿದ್ದು ಅವರ ಬಿಸ್ಕೆಟ್ ಎಂದು ಈಗ ನನಗೆ ಅರ್ಥವಾಯಿತು.
ಪ್ರಯತ್ನಪಟ್ಟು ಬಿದ್ದು ಹೋಯಿತು
ಒಂದು ಸಾರಿ ಎಲ್ಲಾ ಕಪ್ಪೆಗಳು ಸೇರಿ ಸುತ್ತಾಡಿಕೊಂಡು ಬರೋಣವೆಂದು ಹೊರಟವು ಹೀಗೆ ಸುತ್ತಾಡಿಕೊಂಡು ಬರಬೇಕಾದ ಸಮಯದಲ್ಲಿ ಎರಡು ಕಪ್ಪೆಗಳು ಮಾತ್ರ ಒಂದು ದೊಡ್ಡ ಬಾವಿಯಲ್ಲಿ ಜಾರಿ ಬಿದ್ದವು.
ಆ ಬಾವಿಯೂ ತುಂಬಾ ದೊಡ್ಡದಾಗಿರುವುದರಿಂದ ಹತ್ತುವುದು ಅಸಾಧ್ಯವೇ ಆಗಿತ್ತು ಎಲ್ಲಾ ಕಪ್ಪೆಗಳು ಹೇಳಿದವು ನಿನಗೆ ಬರಲು ಸಾಧ್ಯವಿಲ್ಲ, ಹತ್ತುವುದು ಬೇಡ ಹತ್ತುವುದು ಬೇಡ, ಒಂದು ಕಪ್ಪೆ ಸ್ವಲ್ಪ ಪ್ರಯತ್ನಪಟ್ಟು ಬಿದ್ದು ಹೋಯಿತು.
ಇನ್ನೊಂದು ಕಪ್ಪೆ ಮಾತ್ರ ಹಾಗೆ ನಿಧಾನವಾಗಿ ಹತ್ತುತ್ತಾ ಹತ್ತುತ್ತಾ ಬರುತ್ತಿದೆ ಯಾರು ಏನೇ ಹೇಳಿದರೂ ಆ ಕಪ್ಪೆ ನಿಲ್ಲುತ್ತಿಲ್ಲ ಅದರ ಕೆಲಸ ಅದು ಮಾಡುತ್ತಿದೆ ನಿಧಾನವಾಗಿ ಬರುತ್ತಿದೆ ಪ್ರಯತ್ನಪಟ್ಟು ನಿಧಾನವಾಗಿ ಬಾವಿಯನ್ನು ಹತ್ತಿ ಬಂತು.
ಆಗ ಎಲ್ಲ ಕಪ್ಪೆಗಳೂ ಹೇಳಿದವು ನಾವು ಬೇಡ ಬೇಡ ಎಂದರೂ ನೀನು ಹೇಗೆ ಹತ್ತಿದೆ ಎಂದು ಕೇಳಿದಾಗ ಆ ಕಪ್ಪೆಯು ಹೇಳಿತು ನಾನು ಕೆಳಗಡೆ ಇದ್ದೆ ನೀವು ಏನು ಹೇಳುತ್ತಿದ್ದರು ನನಗೆ ಕೇಳಿಸದು ನಾನು ಕಿವುಡು ಕಪ್ಪೆ ನೀವು ಬೇಡ ಬೇಡ ಎನ್ನುತ್ತಿದ್ದರೂ ನನಗೆ ಮಾತ್ರ ಬಾ ಬಾ ಬರಬಹುದು ಬರಬಹುದು ಎಂದು ನನಗೆ ಹೇಳಿದಂತಾಯಿತು.
ಅದಕ್ಕೆ ನಾನು ಹತ್ತಿದೆ ಎಂದಿತು ಕೆಲವು ಸಾರಿ ನಾವು ಯಾವುದೇ ಸಾಧನೆಯನ್ನು ಮಾಡಲಿಕ್ಕೆ ಹೋದಾಗ ಬಹಳಷ್ಟು ಜನರು ನಮಗೆ ನಿನ್ನ ಕೈಯಲ್ಲಿ ಆಗಲ್ಲ, ಸಾಧ್ಯವಿಲ್ಲ ಎಂದು ಹೇಳುತ್ತಾರೆ ಆಗ ನಾವು ಕಿವುಡನಂತೆ ಮುಂದೆ ಮುಂದೆ ಸಾಗಿ ನಾವು ಯಶಸ್ವಿಯಾಗೋಣ.
ಅವರ ಸುಖ ಅವರಿಗೆ
ಒಂದು ಹಳ್ಳಿಯ ಹುಡುಗಿ ಶ್ರೀಮಂತರ ಮನೆಯಲ್ಲಿ ಕೆಲಸ ಮಾಡಿಕೊಂಡು ಇತ್ತು ತನ್ನ ಯಜಮಾನಿ ಸೋಫಾ ಮೇಲೆ ಕುಳಿತು ಟಿವಿ ನೋಡುತ್ತಿದ್ದರೆ ಹುಡುಗಿಗೆ ಅನಿಸುತ್ತಿತ್ತು ನಾನು ಕೂಡ ಯಜಮಾನಿ ಟಿವಿ ನೋಡುವ ಹಾಗೆ ನಾನು ನೋಡಬೇಕು ಎಂದು ಮನದಲ್ಲಿ ಆಸೆ ಇತ್ತು ಉಕ್ಕಿತು.
ಒಂದು ಸಾರಿ ಯಜಮಾನಿ ಮತ್ತು ಮಕ್ಕಳು ಎಲ್ಲರೂ ಹಬ್ಬದ ಬಟ್ಟೆ ತರಲಿಕ್ಕೆ (ಶಾಪಿಂಗ್ ಗೆ) ಬಟ್ಟೆ ಅಂಗಡಿಗೆ ಹೋದರು ಆಗ ಈ ಹುಡುಗಿ ಯೋಚಿಸಿತು ಇವತ್ತು ನನ್ನ ಕನಸು ನನಸು ಮಾಡಿಕೊಳ್ಳುತ್ತೇನೆ ಎಂದು ತನ್ನ ಮನೆಯ ಎಲ್ಲಾ ಕೆಲಸಗಳನ್ನು ಮುಗಿಸಿ ಅಂದರೆ ಪಾತ್ರೆ ತೊಳೆಯುವುದು, ನೆಲ ಒರೆಸುವುದು, ತನ್ನ ಎಲ್ಲಾ ಕೆಲಸಗಳನ್ನು ಮಾಡಿ, ಟೀ ಯನ್ನೂ ಮಾಡಿದಳು.
ಗಾಜಿನ ಲೋಟದಲ್ಲಿ ಹಾಕಿಕೊಂಡು ಬಂದು ಮೆಲ್ಲಗೆ ಸ್ಪಂಜಿನ ಮೃದುವಾದ ಸೋಫಾ ಮೇಲೆ ಹಾಯಾಗಿ ಕುಳಿತುಕೊಳ್ಳೋಣ ಎಂದುಕೊಂಡಳು ಆಗ ಅವಳು ಕುಳಿತುಕೊಳ್ಳುವುದಕ್ಕೆ ಮುಂಚೆ ಯಜಮಾನಿ ಯಾವ ರೀತಿ ಕೆಂಗಣ್ಣಿನಿಂದ ನೋಡುತ್ತಾಳೆ ಎಂದು ನೆನೆಸಿಕೊಂಡಳು.
ಆಗ ಆ ಹೆದರಿಕೆಯಿಂದ ಹೆದರಿ ಕೈಯಲ್ಲಿ ಇದ್ದ ಗಾಜಿನ ಲೋಟವನ್ನು ಬಿಟ್ಟಳು ಗಾಜಿನ ಲೋಟ ಹೊಡೆದು ಚೂರುಚೂರಾಯಿತು ನಂತರ ಆ ಕಪ್ಪನ್ನು ಬಿಸಾಕಿ ನಂತರ ಚಿಕ್ಕ ಕಪ್ ನಲ್ಲಿ ಮತ್ತೆ ಕುಳಿತುಕೊಳ್ಳುವುದಕ್ಕೆ ಎಂದು ಸೋಫಾ ಮೇಲೆ ಹೋದಳು ಆದರೆ ಅವಳಿಗೆ ಕೂರಲಾಗಲಿಲ್ಲ ಎಷ್ಟೇ ಪ್ರಯತ್ನಿಸಿದರೂ ಆಗಲಿಲ್ಲ ತನ್ನ ಯಜಮಾನಿ ನೆನಪಿಗೆ ಬರುತ್ತಿದ್ದಳು.
ಆದ್ದರಿಂದ ಕೊನೆಗೆ ಅವಳು ಸೋಫಾ ಮೇಲೆ ಕೂರದೆ ತನ್ನ ಮಾಮೂಲಿ ಜಾಗ ಇತ್ತಲ್ಲ ಅಲ್ಲೆ ಮುದುರಿ ಕುಳಿತುಕೊಂಡು ಟಿವಿಯನ್ನು ವೀಕ್ಷಿಸಿದಳು ಹುಡುಗಿಗೆ ಕೆಳಗೆಯೇ ತುಂಬ ಸುಖ ಅನ್ನಿಸಿತು ಕೆಲವರಿಗೆ ಯಾವುದರಲ್ಲಿ ಸುಖ ಸಿಗಬೇಕು ಅದರಲ್ಲಿಯೇ ಸಿಗುತ್ತದೆ.
ಎಲ್ಲರಿಗೂ ಬೆಳಕು ನೀಡುತ್ತೀಯಾ
ಒಂದು ಸಲ ಹಾಲು ದೇವರನ್ನು ಶ್ರದ್ಧೆ ಭಕ್ತಿಯಿಂದ ಕುರಿತು ತಪಸ್ಸು ಮಾಡಿತಂತೆ. ಭಗವಂತ ಪ್ರತ್ಯಕ್ಷನಾಗಿ ಬಂದು ಕೇಳಿದ ಹಾಲು ಹೇಳಿತು. ಭಗವಂತ ನಾನು ಹಾಲು ಎಮ್ಮೆಯಿಂದ ಬಂದಾಗ ಶುದ್ಧವಾಗೇ ಇರುತ್ತೇನೆ ಆದರೆ ಈ ಮನುಷ್ಯರು ನನಗೆ ಹುಳಿ ಹಿಂಡಿ ನನ್ನ ಮನಸ್ಸನ್ನು ಕೆಡಿಸಿಬಿಡುತ್ತಾನೆ.
ನಾನು ಹಾಲಾಗೇ ಇರುವಂತೆ ವರ ನೀಡಿ ಆಗ ಭಗವಂತ. ಹಾಲಿನಂತೆಯೇ ಇರಬೇಕು ಎಂದು ಆಸೆ ಪಟ್ಟರೆ ಹಾಲಾದರೆ ಕನಿಷ್ಠ ಒಂದು ದಿನ ಮಾತ್ರ ಬದುಕಬಹುದಾಗಿದೆ ಅದೇ ಹಾಲಿಗೆ ಹೆಪ್ಪಾಕಿದರೆ ಎರಡು ದಿನಗಳವರೆಗೆ ಬದುಕಬಹುದಾಗಿದೆ.
ಮೊಸರಾಗಿ ಕಡೆದರೆ ಮೂರ್ನಾಲ್ಕು ದಿನ ಬದುಕುತ್ತೀಯಾ ಬೆಣ್ಣೆಯಾದರೆ ವಾರಗಳವರೆಗೆ ಬದುಕುತ್ತೀಯಾ.
ಬೆಣ್ಣೆಯನ್ನು ಹದವಾಗಿ ಕಾಯಿಸಿ ಒಂದೆರೆಡು ಲವಂಗ ಏಲಕ್ಕಿ ಹಾಕಿದರೆ ಘಮಘಮಿಸುವ ತುಪ್ಪವಾಗುವೆ ಆ ತುಪ್ಪದಿಂದ ದೀಪ ಹಚ್ಚಿದರೆ ಎಲ್ಲರಿಗೂ ಬೆಳಕು ನೀಡುತ್ತೀಯಾ. ಹಾಲಾಗಿಯೇ ಹುಟ್ಟಿ ಹಾಲಾಗಿಯೇ ಸಾಯುತ್ತೀಯಾ ಅಥವಾ ಬದಲಾಗುತ್ತಿಯೋ ಆಯ್ಕೆ ನಿನ್ನದು ಎಂದಾಗ ಹಾಲು ಸುಮ್ಮನಾಯಿತು.
.