ನೆಲ್ಸನ್ ಮಂಡೇಲಾ ದಕ್ಷಿಣ ಆಫ್ರಿಕಾ ದೇಶಕ್ಕೆ ಪ್ರಥಮ ಸಾರಿ ರಾಷ್ಟ್ರಪತಿ ಅದ ನಂತರ, ನೆಲ್ಸನ್ ಮಂಡೇಲಾರವರು ತಮ್ಮ ಸೈನಿಕರ ಜೊತೆಯಲ್ಲಿ ಒಂದು ಹೋಟೆಲಿಗೆ ತಿಂಡಿ ತಿನ್ನುವುದಕ್ಕೆ ಬಂದರು. ಎಲ್ಲರೂ ತಮಗೆ ಬೇಕಾದ ತಿಂಡಿಯನ್ನು ಆರ್ಡರ್ ಮಾಡಿ ಕಾಯುತ್ತಿದ್ದರು.
ಮಂಡೇಲಾ ಅವರ ಕುರ್ಚಿಯ ಎದುರುಗಡೆ ಒಬ್ಬ ಮನುಷ್ಯನು ಕೂಡಾ ಆರ್ಡರ್ ಮಾಡಿ ಕಾಯುತ್ತಿದ್ದನು. ಎಲ್ಲರಿಗೂ ತಿಂಡಿ ಒಂದೇ ಸಾರಿಗೆ ಬಂತು ಎಲ್ಲರೂ ತಿಂಡಿ ತಿನ್ನಲು ಶುರು ಮಾಡಿದರು ಆ ವ್ಯಕ್ತಿಯೂ ಕೂಡ ತಿನ್ನಲು ಶುರು ಮಾಡಿದನು.
ಆ ವ್ಯಕ್ತಿಯ ಕೈಗಳು ನಡುಗುತ್ತಿದ್ದವು ಆತಂಕದಿಂದ ಬೆವೆತು ಹೋಗಿದ್ದನು ಬೇಗನೆ ತಿಂಡಿ ಮುಗಿಸಿ ಆ ಮನುಷ್ಯ ತಲೆ ಎತ್ತಿ ಯಾರನ್ನು ನೋಡದೆ ಆ ಹೋಟೆಲ್ ನಿಂದ ಬೇಗ ಅವಸರದಿಂದ ಹೋದನು. ಆ ಮನುಷ್ಯ ಹೋದ ನಂತರ ಮಂಡೇಲಾ ಅವರ ಸುರಕ್ಷೆಯ ಸೈನಿಕ ಮಂಡೇಲಾರನ್ನು ಕೇಳಿದನು ಸರ್ ಆ ಮುನುಷ್ಯನಿಗೆ ಚಳಿಜ್ವರ ಇರಬಹುದು ಆದುದರಿಂದ ಬೆವೆತು ಹೋಗಿದ್ದನು ಹಾಗಯೇ ಅವನ ಕೈಗಳು ನಡುಗುತ್ತಿದ್ದವು.
ಆಗ ನೆಲ್ಸನ್ ಮಂಡೇಲಾ ಮುಗುಳ್ ನಗುತ್ತಾ ಹೇಳಿದರು. ಚೆನ್ನಾಗಿ ಇದ್ದಾನೆ, ಯಾವ ಖಾಯಿಲೆಯು ಇಲ್ಲ. ನಾನು ಯಾವ ಜೈಲಿನಲ್ಲಿ ಇದ್ದೆನೋ, ಆ ಜೈಲಿನ ಜೈಲರ್ ಆ ಮನುಷ್ಯನೇ ಅಗಿದ್ದನು ಅವನು ನನಗೆ ಬಹಳ ಹಿಂಸೆ ಕೊಟ್ಟಿದ್ದನು.
ಎಟು ತಿಂದೂ ತಿಂದೂ ಸುಸ್ತಾಗಿ ಬಾಯಾರಿಕೆ ಆಗುತ್ತಿದೆ ಎಂದು ನೀರು ಕೇಳಿದಾಗ, ಆ ಮನುಷ್ಯ ನೀರು ಬೇಕಾ? ಎಂದು, ನನ್ನ ಮುಖದ ಮೇಲೆ ಮೂತ್ರ ಮಾಡುತ್ತಿದ್ದನು. ಈಗ ನಾನು ರಾಷ್ಟ್ರಪತಿ ಆ ಮನುಷ್ಯನಿಗೆ ಅರ್ಥವಾಗಿದೆ ನಾನು ಮಾಡಿದ ಕೆಲಸಕ್ಕೆ ನನಗೆ ಈಗ ಭಯಂಕರವಾಗಿ ಶಿಕ್ಷೆ ಸಿಗಬಹುದು ಎಂದು ತಿಳಿದು ಅವನು ಮೊದಲು ಇಲ್ಲಿಂದ ಕಳಚಿಕೊಂಡಿದ್ದಾನೆ.
ಮಂಡೇಲಾ ಅವರು ಅವರ ಸಂಸ್ಕಾರವೇ ಬೇರೆ ನಮ್ಮ ಸಂಸ್ಕಾರವೇ ಬೇರೆ ಎಂದು ಹೇಳುತ್ತಾರೆ. ಮಾಹಾನ್ ವ್ಯಕ್ತಿಗಳ ವ್ಯಕ್ತಿತ್ವವೇ ಮಹಾನ್ ಆಗಿರುತ್ತದೆ. ಕ್ಷಮಾ ಗುಣ, ಉದಾರತೆಗಳೇ ಅವರನ್ನು ಉನ್ನತ ಮಟ್ಟಕ್ಕೆ ತಲುಪಿಸುತ್ತದೆ.
ನಾವು ಯಾರನ್ನೂ ಕೂಡ ವೇಸ್ಟ್ ಪೇಪರ್ ಎಂದು ತಿಳಿದುಕೊಳ್ಳಬಾರದು ಆ ವೇಸ್ಟ್ ಪೇಪರ್ ಪಟವಾದರೆ ನಾವೇ ತಲೆಯೆತ್ತಿ ನೋಡಬೇಕಾಗುತ್ತದೆ ಹಾಗೆಯೇ ಯಾರನ್ನು ನಾವು ಕಡೆಗಣಿಸಬಾರದು ಸಮಯ ಯಾವಾಗ ಬೇಕಾದರೂ ಬದಲಾಗುತ್ತದೆ.
ಅವರ ಮುಂದೆಯೇ ಕೈಕಟ್ಟಿ ನಿಲ್ಲುವ ಪರಿಸ್ಥಿತಿ ಬರಬಹುದು ಅದುದರಿಂದ ನಮ್ಮ ಹತ್ತಿರ ಅಧಿಕಾರ ಇದ್ದಾಗ ಹೇಗೆ ಇರುತ್ತೀವಿ ಮತ್ತು ಅಧಿಕಾರ ಇಲ್ಲದಿದ್ದಾಗ ಹೇಗೆ ಇರುತ್ತೀವಿ ಅನ್ನೋದು ಮುಖ್ಯ ನಮಗೆ ಅಧಿಕಾರವಿದ್ದರೂ ಇಲ್ಲದಿದ್ದರೂ ಸಮಾನತೆಯಿಂದ ಇರೋಣ.
ಎಲ್ಲರನ್ನು ಆಕರ್ಷಿಸುತ್ತಿತ್ತು.
ಒಂದು ಹಣ್ಣುಗಳ ಅಂಗಡಿ ಕಾಣಿಸಿತು ಅಂಗಡಿಯಲ್ಲಿ ಹಲವಾರು ರೀತಿಯ ಹಣ್ಣುಗಳು ಇವೆ ಆದರೆ ಅಂಗಡಿಯಲ್ಲಿ ಮಾಲಿಕ ಎಲ್ಲಿ ನೋಡಿದರೂ ಇಲ್ಲ. ಹಣ್ಣುಗಳ ಬೆಲೆಯನ್ನು ಪೇಪರ್ ನಲ್ಲಿ ಬರೆದು ಅಂಟಿಸಿದ್ದಾರೆ. ಅಂಗಡಿಯ ಟೇಬಲ್ ಮೇಲೆ ಒಂದು ಚೀಟಿ ಎಲ್ಲರಿಗೂ ಕಾಣುವಂತ್ತಿತ್ತು.
ಅದು ಎಲ್ಲರನ್ನು ಆಕರ್ಷಿಸುತ್ತಿತ್ತು ಅದನ್ನು ಓದಿದೆ ನನ್ನ ತಾಯಿಯ ಆರೋಗ್ಯ ಸರಿಯಿಲ್ಲ ಅದುದರಿಂದ ಸೇವೆ ಮಾಡಲೇಬೇಕು ಆದ್ದರಿಂದ ನೀವುಗಳು ನಿಮಗೆ ಬೇಕಾದ ಹಣ್ಣುಗಳನ್ನು ಎತ್ತಿಕೊಳ್ಳಿ ಅದರ ಸರಿಯಾದ ಬೆಲೆಯನ್ನು ಹಣದ ಡಬ್ಬದಲ್ಲಿ ಹಾಕಿ ಎಂದು ಬರೆದಿತ್ತು.
ಒಬ್ಬನಿಗೆ ಆಶ್ಚರ್ಯವಾಯಿತು ಹೀಗೂ ಉಂಟೆ ಈ ಕಾಲದಲ್ಲಿ ಈ ರೀತಿಯ ಪ್ರಾಮಾಣಿಕರು ಇರುತ್ತಾರೆಯೇ ಸಂಜೆ ಬಂದು ಇವನ ಜೊತೆ ಮಾತಾಡೋಣವೆಂದು ಮನಸಲ್ಲೇ ಅಂದುಕೊಂಡನು ಸಾಯಂಕಾಲ ಅಂಗಡಿಯ ಬಳಿ ಬರುತ್ತಾನೆ.
ಅಂಗಡಿಯವನ್ನು ಹಣವನ್ನು ತೆಗೆದುಕೊಂಡು ಅಂಗಡಿಯನ್ನು ಮುಚ್ಚುತ್ತೀರುತ್ತಾನೆ ಆಗ ನೀನು ಎಂತಹ ಬುದ್ಧಿ ಇಲ್ಲದ ಕೆಲಸ ಮಾಡುತ್ತಿರುವೆ ನೀನು ನಿನ್ನ ಹಣವನ್ನು ಯಾರಾದರೂ ಕಳ್ಳರು ದೋಚಿದರೆ? ಹಣ್ಣುಗಳನ್ನು ತೆಗೆದುಕೊಂಡರೆ? ಎಂದು ಕೇಳಿದನು.
ಆಗ ಅಂಗಡಿಯವನು ನಾನು ಮೊದಲು ನಿಮ್ಮ ಹಾಗೆಯೇ ಯೋಚಿಸಿದೆ ನಂತರ ನನ್ನ ತಾಯಿಯನ್ನು ಕೇಳಿದೆ ನಾನು ನಿನ್ನ ಸೇವೆಯಲ್ಲಿ ಇದ್ದಾಗ ಅಂಗಡಿಯ ಪರಿಸ್ಥಿತಿ ಎಂದಾಗ ಅದಕ್ಕೆ ತಾಯಿ ನಾನು ಗಂಭೀರ ಸ್ಥಿತಿಯಲ್ಲಿ ಇದ್ದೇನೆ.
ನಿನ್ನನ್ನು ನೋಡದೇ ಇರಲು ಸಾಧ್ಯವಿಲ್ಲ ದೇವರನ್ನು ಪ್ರಾರ್ಥಿಸುತ್ತೇನೆ ನಾನು ಹೇಳಿದ ಹಾಗೆ ಮಾಡು ಎಂದರು ಅಂದಿನಿಂದ ಇಲ್ಲಿಯವರಗೂ ನಡೆಯುತ್ತಿದೆ ಎಂದನು ನಿನಗೆ ನಷ್ಟವಾಗಿಲ್ಲವೆ ಎಂದು ಕೇಳಿದನು.
ಅದಕ್ಕೆ ಅವನು ಹಣದ ಡಬ್ಬವನ್ನು ತೆಗೆದು ತೋರಿಸುತ್ತಾನೆ ಆಶ್ಚರ್ಯ ಅದರ ತುಂಬಾ ಹಣವು ಇದೆ. ಅಂಗಡಿಯ ಹಣ್ಣಿನ ಬೆಲೆಗಿಂತ ಸ್ವಲ್ಪ ಜಾಸ್ತಿ ಹಣವೇ ಇದೆ ಅದು ಸಾಲದೆ ಅಂಗಡಿಯಲ್ಲಿ ತರತರವಾದ ವಸ್ತುಗಳನ್ನು ಇದೆ.
ತಾಯಿಗೆ ಬೇಕಾದ ವಸ್ತುಗಳು ಸೀರೆಗಳು, ಸ್ವೆಟರುಗಳು, ಆಗಲೇ ತಯಾರಿಸಿದ ಬಿಸಿ ಬಿಸಿ ಇಡ್ಲಿ, ಯಿಂದ ಘಮಘಮ ವಾಸನೆ ಬರುತ್ತಿದೆ ಅನೇಕ ತಿಂಡಿ ತಿನಿಸುಗಳು ಇವೆ, ಅದರ ಮೇಲೆ ಹೀಗೆ ಬರೆದಿದೆ ತಾಯಿಯವರಿಗೆ ಇವುಗಳನ್ನು ನನ್ನ ಕಡೆಯಿಂದ ತಲುಪಿಸಿ ಕೆಲವರು ತಾಯಿಯವರನ್ನು ನಮ್ಮ ಹಾಸ್ಪಿಟಲ್ಗೆಗೆ ಕರದುಕೊಂಡು ಬನ್ನಿ ನಾನು ಅವರಿಗೆ ಉಚಿತವಾಗಿ ಚಿಕಿತ್ಸೆ ನೀಡುವೆನು .ಎಂದು ಬರೆದಿತ್ತು.
ಅವರ ವಿಸಿಟಿಂಗ್ ಕಾರ್ಡ್ ಇತ್ತು ಇದನ್ನು ನೋಡಿದ ನಂತರ ಅರಿವಾಯಿತು ಮೊದಲು ನಾವು ನೊಡುವ ದೃಷ್ಟಿಯನ್ನು ಬದಲಾಯಿಸಿಕೊಳ್ಳಬೇಕು. ತಾಯಿಯ ಸೇವೆ ಮಾಡುವುದರಿಂದಲೆ ಬಗವಂತನೇ ಅಂಗಡಿಯನ್ನು ಕಾಯುತ್ತಿದ್ದಾನೆ ಎಂದು ಉದಾಹರಣೆ ಸಮೇತ ತೋರಿಸಿದನು.
ಒಂದೇ ಒಂದು ವರ ಮಾತ್ರ
ಒಂದಾನೊಂದು ಕಾಲದಲ್ಲಿ ಒಬ್ಬ ಮನುಷ್ಯನು ತಾನು ದೊಡ್ಡ ಶ್ರೀಮಂತನಾಗಬೇಕು ಎಂಬ ಆಸೆಯಿಂದ ಕಠಿಣವಾಗಿ ಶ್ರದ್ಧೆ ಭಕ್ತಿಯಿಂದ ದೇವರನ್ನು ತಪಸ್ಸು ಮಾಡಿದ ಆಗ ದೇವರು ಪ್ರತ್ಯಕ್ಷರಾಗಿ ದೇವರು ನಿನ್ನ ತಪಸ್ಸಿಗೆ ನಾನು ಮೆಚ್ಚಿದ್ದೇನೆ ಆದ್ದರಿಂದ ನಿನಗೆ ಏನು ಬೇಕು ವರ ಕೇಳು ಎಂದು ಹೇಳಿದರು.
ಈ ಮನುಷ್ಯ ಮೊದಲು ನನ್ನ ತಾಯಿಗೆ ಕೇಳುತ್ತೇನೆ ನಂತರದಲ್ಲಿ ನನ್ನ ಹೆಂಡತಿಯನ್ನು ಕೇಳಿ ಬರುತ್ತೆನೆಂದು ಹೋಗಿ ತಾಯಿಗೆ ಕೇಳಿದ ನನ್ನ ದೃಷ್ಟಿ ಮತ್ತೆ ಬರಬೇಕು, ಹೆಂಡತಿ ನನಗೆ ಒಬ್ಬ ಮುದ್ದಾದ ಮಗು ಬೇಕು, ಇವನಿಗೆ ಧನ, ಸಂಪತ್ತು, ಮನೆ, ಬೇಕು ಮನುಷ್ಯನಾದವನು ಮೂರು ವರಗಳನ್ನು ಕೇಳಿದ.
ಅದಕ್ಕೆ ದೇವರು ನಾನು ನಿನ್ನ ಮೂರು ವರಗಳನ್ನು ಕೊಡಲು ಸಾಧ್ಯವಿಲ್ಲ ಯಾವುದಾದರೂ ಒಂದು ವರವನ್ನು ಕೇಳು ಎಲ್ಲದಕ್ಕೂ ಒಪ್ಪಿಗೆ ಯಾಗುವಂತೆ ತಾಯಿ ತನ್ನ ಹೆಂಡತಿ ಇವರಲ್ಲಿಗೆ ಹೇಳಿದ ತಮ್ಮ ಆಸೆಗಳನ್ನು ಬದಲಿಸಿಕೊಳ್ಳಿ ಯಾವುದಾದರೂ ಒಂದು ಕೇಳಿ ಎಂದು ಹೇಳಿದನು ಆದರೆ ಅವರೆಲ್ಲರೂ ಒಂದು ಸಾರಿ ಹೇಳಿದ ಮೇಲೆ ಅದು ಮುಗಿಯಿತು.
ಯಾವುದೇ ಕಾರಣಕ್ಕೂ ನಾವು ಬದಲಾಯಿಸುವುದು ಇಲ್ಲ ಎಂದು ಹೇಳಿದರು ಏನು ಮಾಡುವುದು ಎಂದು ಚಿಂತಿಸುತ್ತಾನೆ ನಂತರ ಬಾಬಾ ಇರುವ ನೆನಪಾಗುತ್ತದೆ ಬಾಬಾ ಅವರನ್ನು ಹೋಗಿ ಕೇಳುತ್ತಾನೆ ಒಂದು ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಂಡಿದ್ದೇನೆ ನಾನು ಹೇಗೆ ಪಾರಾಗಬಹುದು ಎಂದಾಗ ಬಾಬಾ ಅವರು ಒಂದು ಗುಟ್ಟನ್ನು ಹೇಳಿದರು.
ನನ್ನ ಮಗ ಬಂಗಾರದ ತೊಟ್ಟಿಲಲ್ಲಿ ಚಿನ್ನದ ಬಟ್ಟಲಿನಲ್ಲಿ ಹಾಲು ಇದ್ದು ಬೆಳ್ಳಿಯ ಚಮಚದಿಂದ ಹಾಲು ಕುಡಿಯುವುದನ್ನು ನನ್ನ ತಾಯಿ ನೋಡಬೇಕಂತೆ ಈ ಒಂದು ವರವನ್ನು ದಯಪಾಲಿಸಿ ಎಂದನು ಇದಕ್ಕೆ ದೇವರು ನಕ್ಕು ವರವನ್ನು ನೀಡಿದರು ಎಲ್ಲರ ಆಸೆಗಳು ಪೂರ್ಣಗೊಂಡವು. ನಮ್ಮ ಬದುಕಿನಲ್ಲಿ ಕೆಲವು ಸಾರಿ ಸಮಸ್ಯೆಗಳು ಬಂದೇ ಬರುತ್ತವೆ.
ಅದನ್ನು ಹೇಗೆ ಪರಿಹರಿಸಬೇಕು ಎಂದರೆ ಕೆಲವು ಸಾರಿ ನಮಗೆ ಅಷ್ಟು ಬೇಗ ತಿಳಿಯುದಿಲ್ಲ ಹೇಗೆ ಎಂದರೆ ನಮ್ಮ ಬೆನ್ನು ನಮಗೆ ಕಾಣುವುದಿಲ್ಲ ಅದೇ ರೀತಿ ನಮ್ಮ ಸಮಸ್ಯೆಗಳಿಗೆ ಪರಿಹಾರ ನಮಗೆ ತಿಳಿದಿರುವುದಿಲ್ಲ ಇತರರಿಗೆ ಗೊತ್ತಿರುತ್ತದೆ ಹಾಗೆಯೇ ನಾವು ಗುರು ಹಿರಿಯರನ್ನು ಆಗಾಗ ಭೇಟಿಯಾಗುತ್ತಿದ್ದಾಗ ನಮ್ಮ ಸಮಸ್ಯೆಗಳಿಗೆ ಪರಿಹಾರವೂ ಸಿಗುತ್ತದೆ.
ನಿದ್ದೆಯೇ ಬರುತ್ತಿಲ್ಲ
ಇಬ್ಬರು ಆತ್ಮೀಯ ಸ್ನೇಹಿತರು ಇದ್ದರು ಅವರು ಇಬ್ಬರೂ ಕೂಡ ಒಂದೊಂದು ರಾಜ್ಯಕ್ಕೆ ಪ್ರವಾಸ ನೀಡಿದರು ಅಲ್ಲಿಂದ ಅವರಿಗೆ ಇಷ್ಟವಾದ ಕೆಲವು ವಸ್ತುಗಳನ್ನು ಹಾಗೂ ತಿಂಡಿಗಳನ್ನು ತಂದಿದ್ದರು ಒಬ್ಬನು ಹೆಚ್ಚು ವಿಶೇಷವಾದ ಚಾಕಲೇಟುಗಳನ್ನು ತಂದನು.
ಇನ್ನೊಬ್ಬ ವಿಶೇಷವಾದ ಕೇಕುಗಳನ್ನು ತಂದನು ಇಬ್ಬರೂ ನೋಡಿ ಸಂತೋಷಪಟ್ಟರು ಇಬ್ಬರೂ ಮಾತನಾಡಿಕೊಂಡರು ನನ್ನ ಹತ್ತಿರ ಇರುವ ಚಾಕಲೇಟನ್ನು ಕೊಡುತ್ತೇನೆ ನೀನು ನನಗೆ ಕೇಕನ್ನು ಕೊಡು ಹಾಗೇ ಆಗಲಿ ಎಂದು ಇಬ್ಬರೂ ಪರಸ್ಪರ ವಿನಿಮಯ ಮಾಡಿಕೊಂಡರು.
ಆದರೆ ಅದರಲ್ಲಿ ಒಬ್ಬ ಚಾಕಲೇಟ್ ಕೊಡುವವನು ಒಂದು ಚಾಕ್ಲೇಟನ್ನು ಹಾಗೆಯೇ ಗೊತ್ತಿಲ್ಲದಂತೆ ಒಂದು ತನ್ನ ಜೇಬಿನಲ್ಲಿ ಇಟ್ಟುಕೊಂಡನು ಆದರೆ ಇನ್ನೊಬ್ಬ ಪ್ರಾಮಾಣಿಕತೆಯಿಂದ ಎಲ್ಲವೂ ಸರಿಯಾಗಿ ನೀಡಿದ ಆದರೆ ಸಂಜೆ ಯಾರು ತನ್ನ ಚಾಕ್ಲೇಟನ್ನು ಕದ್ದು ಇಟ್ಟುಕೊಂಡವನಿಗೆ ನಿದ್ದೆಯೇ ಬರುತ್ತಿಲ್ಲ.
ಕಾರಣವೇನೆಂದರೆ ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಂಡಿದ್ದನು ಇದರ ಫಲವಾಗಿ ನಿದ್ದೆಯೇ ಬರಲಿಲ್ಲ ಇನ್ನೊಬ್ಬನು ನಿಶ್ಚಿಂತೆಯಿಂದ ನಿದ್ದೆ ಮಾಡಿದನು.
ನಿನ್ನ ಪರಿಚಯ ಹೇಳು
ಒಬ್ಬ ಸಾಧುವಿಗೆ ತಾನು ಮಹಾಜ್ಞಾನಿಯೆಂಬ ಗರ್ವ ಜಾಸ್ತೀ ಇತ್ತು ಒಂದು ಸಾರಿ ಒಂದು ಹಳ್ಳಿಯ ಬಳಿ ಬಂದಾಗ ಬಹಳ ಬಾಯಾರಿಕೆ ಆಯಿತು. ಹಳ್ಳಿಯ ಹೊರಗಿನ ಬಾವಿಯ ಬಳಿ ಹಿರಿಯ ಅಜ್ಜಿ ನೀರು ಸೇದುತ್ತಿದ್ದರು.
ಸಾಧು ನನಗೆ ತುಂಬ ಬಾಯಾರಿಕೆಯಾಗಿದೆ ಕುಡಿಯಲು ನೀರು ಕೊಡಿ? ಎಂದು ಕೇಳಿದನು ಅಜ್ಜಿಯು ನನಗೆ ನಿನ್ನ ಪರಿಚಯ ನನಗೆ ಇಲ್ಲ ನಿನ್ನ ಪರಿಚಯ ಹೇಳು ಎಂದರು ಸಾಧು ನಾನೊಬ್ಬ ಪ್ರವಾಸಿ. ಅಜ್ಜಿ ಲೋಕದಲ್ಲಿ ಪ್ರವಾಸಿಗರು ಇಬ್ಬರೇ. ಒಬ್ಬ ಸೂರ್ಯ, ಮತ್ತೊಬ್ಬ ಚಂದ್ರ. ಇಬ್ಬರೂ ಹಗಲು ರಾತ್ರಿಯಲ್ಲಿ ಬರುತ್ತಾರೆ.
ಸಾಧು ನಾನೊಬ್ಬ ಅತಿಥಿ, ಅಜ್ಜಿ ಲೋಕದಲ್ಲಿ ಅತಿಥಿಗಳೂ ಇಬ್ಬರೇ. ಒಂದು ಧನ, ಮತ್ತೊಂದು ಯೌವ್ವನ. ಇಬ್ಬರೂ ಬರುತ್ತಾರೆ ಹೋಗುತ್ತಾರೆ.
ಶಾಶ್ವತವಾಗಿ ಇರಲ್ಲ. ಎಂದಾಗ ಸಾಧು ನಾನು ಸಹನಶೀಲ. ಅಜ್ಜಿ ಲೋಕದಲ್ಲಿ ಸಹನಶೀಲರೂ ಇಬ್ಬರೇ ಒಂದು ಭೂಮಿ, ಇನ್ನೊಂದು ವೃಕ್ಷ. ಎಲ್ಲವನ್ನು ಸಹಿಸುತ್ತಾರೆ.
ಹಾಗೆಯೇ ಮರಕ್ಕೆ ಕಲ್ಲೆಸೆದರೂ ಸಿಹಿಯಾದ ಹಣ್ಣನ್ನೇ ಕೊಡುತ್ತದೆ ಸಾಧುವು ಏನು ಹೇಳಬೇಕೆಂದು ತಿಳಿಯಲಿಲ್ಲ ನಾನು ಹಠಮಾರಿ. ಅಜ್ಜಿ – ಇಲ್ಲ, ನೀನು ಹಠಮಾರಿ ಆಗಲು ಹೇಗೆ ಸಾಧ್ಯ? ಲೋಕದಲ್ಲಿ ಹಠಮಾರಿಗಳೂ ಇಬ್ಬರೇ. ಒಂದು ಉಗುರು, ಇನ್ನೊಂದು ಕೂದಲು. ಎಷ್ಟು ಬಾರಿ, ಕತ್ತರಿಸಿದರೂ ಮತ್ತೆ ಬೆಳೆಯುತ್ತವೆ.
ಸಾಧು- ನಾನೊಬ್ಬ ಮೂರ್ಖ ಅಜ್ಜಿ – ಅದು ಹೇಗೆ ಸಾಧ್ಯ? ಲೋಕದಲ್ಲಿ ಮೂರ್ಖರೂ ಸಹ ಇಬ್ಬರೇ ಒಬ್ಬ ರಾಜ ಯೋಗ್ಯತೆ ಇಲ್ಲದಿದ್ದರೂ ಎಲ್ಲರ ಮೇಲೂ ಅಧಿಕಾರನಡೆಸುತ್ತಾನೆ. ಇನ್ನೊಬ್ಬ ಆ ರಾಜನ ಆಸ್ಥಾನ ಪಂಡಿತ. ರಾಜನನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುವುದಕ್ಕಾಗಿ, ಸುಳ್ಳು ಕಥೆಗಳನ್ನು ನಿಜವೆಂದು ಬಿಂಬಿಸುತ್ತಾನೆ.
ಸಾಧು ಏನೂ ಹೇಳುವ ಮನಸ್ಥಿತಿಯಲ್ಲಿ ಇರಲಿಲ್ಲ. ಆ ಅಜ್ಜಿಯ ಕಾಲಿಗೆ ಬಿದ್ದು ನಾನು ಸೋತೆ ದಯವಿಟ್ಟು ನೀರು ಕೊಡಿ ಎಂದು ಬೇಡತೊಡಗಿದ ಆಗ ಏಳು ಮಗೂ ಎಂಬ ಧ್ವನಿ ಕೇಳಿ ತಲೆ ಎತ್ತಿ ನೋಡಿದ. ಆಗ ಅಜ್ಜಿ ಹೇಳಿದರು.
ವಿದ್ಯೆಯಿಂದ ಜ್ಞಾನ ಸಂಪಾದನೆ ಮಾಡಿಕೊಳ್ಳಬೇಕು, ಗರ್ವ ಅಹಂಕಾರವಲ್ಲ. ನಿನ್ನ ವಿದ್ಯೆಗೆ ದೊರೆತ ಸನ್ಮಾನ ಪ್ರಶಸ್ತೀಗಳನ್ನೇ ನೀನು ಸರ್ವಸ್ವವೆಂದು ಭಾವಿಸಬಾರದು. ಎಂದಾಗ ಸಾಧುವಿಗೆ ತನ್ನ ತಪ್ಪಿನ ಅರಿವಾಯಿತು. ಕ್ಷಮೆ ಯಾಚಿಸಿ, ನೀರು ಕುಡಿದನು.