ಹೊಂದಾಣಿಕೆ ಅನಿವಾರ್ಯ

ಒಂದು ರಾಜ್ಯದಲ್ಲಿ ರಾಜ ರಾಣಿ ಇಬ್ಬರೂ ಅನೋನ್ಯವಾಗಿ ಬಾಳುತ್ತಿದ್ದರು ಹೀಗೆ ಒಂದು ಸಾರಿ ವಾಯು ವಿಹಾರಕ್ಕೆಂದು ರಾಣಿ ಬಂದಳು ಒಂದು ಬೆಟ್ಟ ಕಾಣಿಸಿತು ಆ ಬೆಟ್ಟ ನೋಡುತ್ತಿದ್ದಂತೆಯೇ ಅಲ್ಲಿಯ ಸೌಂದರ್ಯಕ್ಕೆ ಮಾರುಹೋದಳು ಮತ್ತೆ ಹರ್ಷಗೊಂಡಳು.

 ನಾನು ದಿನ ಈ ಬೆಟ್ಟದ ಸೌಂದರ್ಯವನ್ನು ಸವಿಬೇಕು ಎಂದು ಹೇಳಿ ರಾಜನಿಗೆ ಆ ಬೆಟ್ಟ ನಮ್ಮ ರಾಜ್ಯಕ್ಕೆ ಬರಬೇಕೆಂದು ರಾಜನಿಗೆ ಹೇಳಿದಳು ಆಗ ರಾಜನು ಹೇಳಿದ ಬೆಟ್ಟ ಬರುವುದಿಲ್ಲ ಅದು ಬಿಟ್ಟು ಬೇರೆ ಏನಾದರೂ ಕೇಳು ಎಂದು ಹೇಳಿದನ್ನು ಅದರೆ ರಾಣಿ ಒಪ್ಪಲಿಲ್ಲಹಠ ಹಿಡಿದಳು.

 ನಾವೇ ಆ ಬೆಟ್ಟಕ್ಕೆ ಹೋದರೆ ಒಳ್ಳೆಯದು ಅಲ್ಲವೇ ಎಂದು ರಾಜ ವಿನಮ್ರತೆಯಿಂದ ಹೇಳಿದ ಅದಕ್ಕೆ ಮಹಾರಾಣಿಯು ನಮ್ಮ ರಾಜ್ಯಕ್ಕೆ ಆ ಬೆಟ್ಟ ಬರಲೇಬೇಕು ಎಂದು ಘೋಷಣೆಯನ್ನು ಘೋಷಿಸಿದಳು ಬೆಟ್ಟ ತರುವುದಕ್ಕೆ ಸಾಧ್ಯವೇ ಇಲ್ಲವಲ್ಲ ಆದುದರಿಂದ ಬೆಟ್ಟ ಯಾರು ತರಲಿಲ್ಲ ನಂತರ ರಾಜ ಮತ್ತು ರಾಣಿಯು ಬೆಟ್ಟಕ್ಕೆ ಹತ್ತಿ ಹೋದರು.

 ಯುವಕರಾಗಿದ್ದಾಗ ಅಸಾಧ್ಯವಾದುದನ್ನು ಸಾಧಿಸಬೇಕೆಂದು ಎಂದು ಎಲ್ಲರೂ ಸಹಜವಾಗಿ ಯೋಚಿಸುತ್ತಾರೆ.

 ಕಾಲ ಕಳೆಯುತ್ತಿದ್ದಂತೆ ಮಧ್ಯ ವಯಸ್ಸಿಗೆ ಬಂದಂತೆ  ವಯಸ್ಸು ಜಾಸ್ತಿ ಯಾಗುತ್ತಿದ್ದಂತೆ ಪ್ರಪಂಚದ ಆಗು ಹೋಗುಗಳು ನಮಗೇಕೆ ಪ್ರಪಂಚ ಹೇಗಾದರೂ ಇರಲಿ ನನ್ನಷ್ಟಕ್ಕೆ ನಾವು ಇರಬೇಕು ನಾವು ನೆಮ್ಮದಿಯಾಗಿ ಇದ್ದರೆ ಸಾಕು ಎನ್ನುವ ಮನೋಭಾವನೆ ಮನಸ್ಸಿನಲ್ಲಿ  ಸಹಜವಾಗಿ ಬೆಳೆಯುತ್ತದೆ.

 ಈ ಪ್ರಪಂಚಕ್ಕೆ ನಾವು ಹೊಂದಾಣಿಕೆ ಮಾಡಿಕೊಂಡು ಹೋಗಬೇಕೇ ವಿನಃ ಪ್ರಪಂಚ ನಮ್ಮನ್ನು ಹೊಂದಾಣಿಕೆ ಮಾಡಿಕೊಂಡು ಹೋಗಲಾರದು. ನಮ್ಮ ಮನೆಯವರು ನಮ್ಮ ಮಾತನ್ನು ಕೇಳಬಹುದು ಅಷ್ಟೆ ಆದರೆ ಇಡೀ ಪ್ರಪಂಚ ನಮ್ಮ ಮಾತು ಕೇಳಲ್ಲ ಆದ್ದರಿಂದ ನಾವು ಈ ಪ್ರಪಂಚವನ್ನು ಹೊಂದಾಣಿಕೆ ಮಾಡಿಕೊಂಡು ಬದುಕು ಮುನ್ನಡೆಸೋಣ.

ಬಿದ್ದು ಬಿದ್ದು ನಗುತ್ತಿದ್ದರು

ಒಂದು ಶ್ರೀಮಂತ ಕುಟುಂಬ ಅಲ್ಲಿ ಅಜ್ಜಿಗೆ ಕ್ಯಾನ್ಸರ್ ನಿಂದಾಗಿ ತಲೆಕೂದಲುಗಳೆಲ್ಲವೂ ಉದುರಿ ಹೋಗಿರುತ್ತವೆ ಆದ್ದರಿಂದ ಅಜ್ಜಿ ಯಾದವರು ಎಲ್ಲಿಯೂ ಹೊಗುತ್ತಿರುವುದಿಲ್ಲ ಯಾರೊಂದಿಗೂ ಮಾತುಕತೆಯಿಲ್ಲ ಖಿನ್ನತೆಯಿಂದಾಗಿ ನರಳುತ್ತಿದ್ದರು.

 ಅಜ್ಜಿಯ ಬಗ್ಗೆ ಎಲ್ಲರಿಗೂ ಕಾಳಜಿ ಇತ್ತು ಆದರೆ ಅದರಲ್ಲಿ ಮೊಮ್ಮಗನಿಗೆ ಮಾತ್ರ ತುಂಬಾ ಜಾಸ್ತಿ ಕಾಳಜಿ ಇದ್ದು ಏನಾದರೂ ಮಾಡಿ ನನ್ನ ಅಜ್ಜಿಯನ್ನು ನಾನು ನಗಿಸಬೇಕು, ಸಂತೋಷಪಡಿಸಬೇಕು, ಖುಷಿಪಡಿಸಬೇಕು ಎಂದು ಏನೇನೋ ಕಸರತ್ತು ಮಾಡಿದ ಆದರೂ ಅಜ್ಜಿ ಯಾವುದಕ್ಕೂ ನಗುತ್ತಿರಲಿಲ್ಲ.

ಒಂದು ಹಬ್ಬ ಬಂತು ಆಗ ಅಜ್ಜಿಗಾಗಿಯೇ ಹೊಸ ಬಟ್ಟೆಗಳನ್ನು ತಂದನು ಬಟ್ಟೆಹೋಲಿಸಿ ಕೊಟ್ಟರೆ ಸಂತೋಷಪಡುತ್ತಾರೆ ಎಂದು ಟೈಲರ್ ನ ಬಳಿ ಹೋಗಿ ಬಟ್ಟೆ ಕೊಟ್ಟಿದ್ದನು ಟೈಲರ್ ಸಂಜೆ ಬನ್ನಿ ಎಂದು ಹೇಳಿದನು.

 ನಂತರ ಮೊಮ್ಮಗ ಸಂಜೆ ಹೋದಾಗ ಇನ್ನೂ ಸ್ವಲ್ಪ ಕೆಲಸ ಬಾಕಿ ಇತ್ತು ಆಗ ಟೈಲರ್ ಹೇಳಿದನು ನೀವು ಹತ್ತು ನಿಮಿಷ ಕುಳಿತುಕೊಳ್ಳಿ ಇನ್ನೇನು ನಾನು ನಿಮ್ಮ ಕೈಗೆ ಕೊಡುತ್ತೇನೆ ಎಂದಾಗ ಮೊಮ್ಮಗ ಕುಳಿತಿದ್ದವನು ಅದೇ ಬಟ್ಟೆಯ ತುಂಡುಗಳು ಬಿದ್ದಿದ್ದವು ಅದನ್ನು ನೋಡಿದಾಗ ಮೊಮ್ಮಗನಿಗೆ ಒಂದು ಉಪಾಯ ಬಂತು.

 ಏಕೆ ನಾನು ನನ್ನ ಅಜ್ಜಿಗೆ ಒಂದು ಹ್ಯಾಟನ್ನು ಹೋಲಿಸಬಾರದು ಎಂದು ಟೈಲರ್ ಗೆ ಹೇಳಿದ ನೀವು ಈ ಮಿಕ್ಕಿದ ಬಟ್ಟೆಯಲ್ಲಿ ಒಂದು ಹ್ಯಾಟ್ ಅನ್ನು ಹೊಲಿದುಕೊಡಿ ಎಂದನು ಆಗ ಟೈಲರ್ ತುಂಬ ನೀಟಾಗಿ ಹ್ಯಾಟನ್ನು ಹೋಲಿದರು ಹಾಟನ್ನು ಪಡೆದು.

 ಮೊಮ್ಮಗ ಮತ್ತೆ ಹಲವಾರು ರೀತಿಯ ಹ್ಯಾಟುಗಳನ್ನು ಖರೀದಿಸಿದನು ನಂತರ ಮನೆಗೆ ಬಂದು ಅಜ್ಜಿಗೆ ಕಣ್ಣು ಮುಚ್ಚಿ ಎಂದನು ನಂತರ ಉಡುಗೊರೆಯಾಗಿ ಕೊಟ್ಟನು ನಂತರ ಅಜ್ಜಿಯನ್ನು ಕಣ್ಣು ತೆರೆಯಿರಿ ಎಂದನು ಅಜ್ಜಿಯಂತೂ ಆ ಬಟ್ಟೆಯಲ್ಲಿ ತುಂಬ ಸುಂದರವಾಗಿ ಕಂಡರೂ ಮತ್ತೆ ಅಜ್ಜಿಯ ತಲೆಗೆ ಹ್ಯಾಟ್ ಅನ್ನು ನೋಡಿ ಆಗ ಅಜ್ಜಿಯು ತುಂಬ ಸುಂದರವಾಗಿ ಕಾಣುತ್ತಿದ್ದರು.

 ಬೋಳುತಲೆ ಕಾಣಿಸುತ್ತಿರಲಿಲ್ಲ ಆಗ ಅಜ್ಜಿಯು ತುಂಬಾ ಸಂತೋಷದಿಂದ ಬಿದ್ದು ಬಿದ್ದು ನಗುತ್ತಿದ್ದರು ನಂತರ  ಮೊಮ್ಮಗ ಮತ್ತು ಅಜ್ಜಿಯ ಮನದಲ್ಲಿ ಬದಲಾವಣೆಯಾಯಿತು ಯಾಕೆ ನಾವು ಹ್ಯಾಟ್ ಗಳನ್ನೇ ಮಾಡಿ ಕ್ಯಾನ್ಸರ್ ಪೀಡಿತರನ್ನು ಕೊಡಬಾರದು ಎಂದು ಹೊಸ ಮಾದರಿಯಲ್ಲಿ ಯೋಚನೆ ಮಾಡಿದರು.

ನಂತರ ಅಜ್ಜಿ ಇರುವವರೆಗೆ ಅವರು ಇತರರಿಗೆ ಹ್ಯಾಟುಗಳನ್ನು ಕೊಟ್ಟಿ ಸಂತೋಷ ಪಡಿಸುತ್ತಿದ್ದರು ನಂತರ ಇವರು ಮತ್ತಷ್ಟು ಅಭಿವೃದ್ಧಿಯಾದರು ಅಂತಕರಣದಿಂದ ಮಾಡಿದ ಕೆಲಸ, ಒಳ್ಳೆಯ ಉದ್ದೇಶದಿಂದ ಮಾಡಿದ ಕೆಲಸದ ಪ್ರತಿಫಲವು ಯಾವತ್ತಿಗೂ ಒಳ್ಳೆಯದೇ ಆಗಿರುತ್ತದೆ.

  ತಲೆ ಮೇಲೆ ಕೈ ಇಟ್ಟು ಕುಳಿತರು

ಒಂದು ಗ್ರಾಮದಲ್ಲಿ ಒಬ್ಬ ಬುದ್ಧಿವಂತ ರೈತನು ಇದ್ದನು ಅವನ ಕೆಲಸ ಕೃಷಿಯೇ ಅವನ ಜೀವನ ಬೆಳಿಗ್ಗೆಯಿಂದ ಸಂಜೆಯವರೆಗೂ ಕೆಲಸ ಮಾಡಿ ದುಡಿಯುತ್ತಿದ್ದನು ಹೀಗೆಯೇ ದುಡಿದು ಹಲವಾರು ವರ್ಷಗಳ ನಂತರ ಮುದುಕನಾದನು ಇದ್ದಕ್ಕಿದ್ದ ಹಾಗೆ ಅವನ ಆರೋಗ್ಯ ಹದಗೆಡುತ್ತ ಬಂದಿತು.

 ಹಾಸಿಗೆ ಹಿಡಿಯುವ ಸ್ಥಿತಿಗೆ ಬಂದು ತಲುಪಿದನು ಆಗ ರೈತನು ತನ್ನ ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ ಮಾಡತೊಡಗಿದ ಒಂದು ವೇಳೆ ನಾನು ಸತ್ತರೆ ಮಕ್ಕಳ ಗತಿ ಏನಾಗಬೇಕು ಈಗ ನಾನು ಗಳಿಸಿದ್ದನ್ನು ಇವರು ತಿನ್ನುತ್ತಿದ್ದಾರೆ.

 ನನ್ನ ಮಕ್ಕಳು ಸೋಮಾರಿಗಳು ಇವರು ಹೇಗೆ ದುಡಿದು ತಿನ್ನುತ್ತಾರೆ ಎನ್ನುವ ಪ್ರಶ್ನೆ ಕಾಡುತ್ತಿತ್ತು ಕಷ್ಟಪಟ್ಟು ದುಡಿಯಬೇಕಾದರೆ ನಾನು ಏನು ಮಾಡಬಹುದು ಎಂದು ಚಿಂತಿಸಿದರು ಅದಕ್ಕೆ ಒಂದು ಒಳ್ಳೆಯ ಉಪಾಯ ಕಂಡುಕೊಂಡನರು.

 ತನ್ನ ನಾಲ್ಕು ಮಕ್ಕಳನ್ನು ಕರೆದು ನಮ್ಮ ಫಲವತ್ತಾದ ಜಮೀನಿನಲ್ಲಿ ಒಂದು ನಿಧಿಯನ್ನು ಇಟ್ಟಿದ್ದೇನೆ ನೀವೇ ಹುಡುಕಿಕೊಳ್ಳಬೇಕು ನಿಮಗೆ ಅದು ಸಿಗಬೇಕಾದರೆ ಭೂಮಿಯನ್ನು ಅಗೆಯಬೇಕು ಆಗ ನಿಮಗೆ ಸಿಗಬಹುದು ಆ ನಿಧಿಯಿಂದ ನಿಮ್ಮ ಬದುಕಿಗೆ ಹಣವು ಸಿಗುತ್ತದೆ ಎಂದು ಹೇಳಿ ಸತ್ತರು.

 ಮಕ್ಕಳು ಅಂತ್ಯಸಂಸ್ಕಾರವನ್ನು ಮಾಡಿ ನಂತರ ಬಂದು ನಾಲ್ಕು ಮಕ್ಕಳು ಕುಳಿತುಕೊಂಡು ಭಿನ್ನ ಭಿನ್ನವಾಗಿ ಹಲವಾರು ರೀತಿಯಲ್ಲಿ ಯೋಚಿಸಿದರು ನಿಧಿ ಎಲ್ಲಿರಬಹುದು ಮತ್ತು ಎಲ್ಲಿ ಅಗೆಯಬೇಕು ಮತ್ತೆ ಬೇರೆ ಯಾರನ್ನು ಕರೆದುಕೊಂಡು ಬಂದು ಅಗೆಯುವ ಹಾಗಿಲ್ಲ ಏಕೆಂದರೆ ಅವರಿಗೂ ನಿಧಿಯ ರಹಸ್ಯ  ತಿಳಿಯುತ್ತದೆ.

ಒಬ್ಬ ಹಿರಿಯನು ಹೇಳಿದ ನಾವು ಒಂದು ಕಡೆಯಿಂದ ನೆಲವನ್ನು ಅಗೆಯುತ್ತಾ ಬರೋಣ ಎಲ್ಲೇ ಇದ್ದರೂ ನಮಗೆ ನಿಧಿ ಸಿಕ್ಕೇ ಸಿಗುತ್ತದೆ ಎಂದನು ಇದಕ್ಕೆ ಎಲ್ಲರೂ ಒಪ್ಪಿದರು ಅದರಂತೆಯೇ ಒಂದು ಕಡೆಯಿಂದ ನೆಲವನ್ನು ಅಗೆಯಲು ಪ್ರಾರಂಭಿಸಿದರು.

ನಾಲ್ಕು ಮಕ್ಕಳಿಗೂ ಅಗೆಯಲು ತುಂಬಾ ಕಷ್ಟವಾಗುತ್ತಿದೆ ಏಕೆಂದರೆ ಇವರು ಸಾಮಾನ್ಯವಾಗಿ ಕೆಲಸವೇ ಮಾಡಿಲ್ಲ ಆದುದರಿಂದ ಕಷ್ಡವಾಯಿತು ಆದರೂ ಈಗ ನಿಧಿ ಇರುವುದರಿಂದ ಅಗೆಯುವ ಕೆಲಸವನ್ನು ನಿಲ್ಲಿಸುತ್ತಿಲ್ಲ ಹೀಗೆ ಎಲ್ಲಾ ಕಡೆಯೂ ಅಗೆದಾಗ ಏನೂ ಸಿಗಲಿಲ್ಲ ತಲೆ ಮೇಲೆ ಕೈ ಇಟ್ಟು ಕುಳಿತರು.

ಒಬ್ಬ ಹಿರಿಯನು ಹೇಳಿದ ಇಷ್ಟೆಲ್ಲ ನಾವು ಅಗೆದು ಬಿಟ್ಟಿದ್ದೀವಿ ಅಗೆದುದು ನಷ್ಟವಾಗುವುದು ಬೇಡ ಅದಕ್ಕೆ ಸ್ವಲ್ಪ ಯಾವುದಾದರೂ ಬೀಜಗಳು ಹಾಕಿದರೆ ಅವು ಗಿಡವಾಗಿ ಬೆಳೆಯುತ್ತದೆ ಇದರಿಂದ ನಾವು ಹಣವನ್ನು ಸಂಪಾದಿಸಬಹುದು ಎಂದು ಹೇಳಿದನು.

ಹಿರಿಯನ ಮಾತಿಗೆ ಎಲ್ಲರೂ ಆಗಲಿ ಎಂದು ತಲೆ ಅಲ್ಲಾಡಿಸಿದರು ಬಿತ್ತನೆ ಮಾಡಿದ ಮೇಲೆ ಏನೇನು ಮಾಡಬೇಕು ಅದರಂತೆಯೇ ಮಾಡಿದರು ಕೆಲವು ದಿನಗಳ ನಂತರ ಫಸಲು ಬರಲು ಆರಂಭವಾಯಿತು ಏಕೆಂದರೆ ಇವರು ನಿಯತ್ತಿನಿಂದ, ಪ್ರಾಮಾಣಿಕತೆಯಿಂದ ಅಗೆದಿದ್ದರೂ ಮತ್ತೆ ಸ್ವಲ್ಪ ನೀರು, ಗೋಬ್ಬರ ಹಾಕಿದ್ದರು ಶ್ರಮಪಟ್ಟಿದ್ದರು.

 ಸರದಿಯಂತೆ ಬೆಳಿಗ್ಗೆ ಮಧ್ಯಾಹ್ನ ಸಂಜೆ ರಾತ್ರಿ ಕಣ್ಣಿಟ್ಟು ಬೆಳೆದಿರುವ ಬೆಳೆಯನ್ನು ಜೋಪಾನ ಮಾಡಿದರು. ಬೆಳೆಯನ್ನು ಕಿತ್ತು ಮಾರಿದಾಗ ಹಣವೂ ಬಂತು ಆಗ ತಿಳಿದರೂ ತಂದೆಯ ಮಾತಿನ ಅರ್ಥ ತಂದೆಯವರು ನೇರವಾಗಿ ಹೇಳದೆ ಒಂದು ಉಪಾಯದಿಂದ ಹೇಳಿದರು ಇದನ್ನು ನಾಲ್ಕು ಮಕ್ಕಳು ಅರ್ಥ ಮಾಡಿಕೊಂಡರು.

 ನಮ್ಮ ತಂದೆ ನಮಗೆ ಕೃಷಿ ಕೆಲಸ ಮಾಡಿ ಎಂದರೆ ನಾವು ಖಂಡಿತವಾಗಿಯೂ ಮಾಡುತ್ತಿರಲಿಲ್ಲ ಆದ್ದರಿಂದ ನಮ್ಮ ತಂದೆ ಬುದ್ಧಿವಂತರು ಅವರು ಮಣ್ಣಿನಲ್ಲಿ ನಿಧಿ ಇದೆ ಎಂದು ಹೇಳಿದರು ಅದಕ್ಕಾಗಿ ನಾವು ಹೆಚ್ಚು ಆಸಕ್ತಿಯಿಂದ ಮಾಡಿದೆವು ದುಡಿದು ತಿನ್ನುವ ಜವಾಬ್ದಾರಿ ಬಂದಂತೆ ಮಾಡಿದ್ದಾರೆ ಎಂದು ಅರಿತರು.

  ಸಿಟ್ಟಿನಿಂದ ಹೇಳಿದನು

ತಂದೆಯವರು ಪ್ರತಿವಾರ ಮಂದಿರಕ್ಕೆ ಹೋಗಿ ಬರುತ್ತಾರೆ ಅದಕ್ಕೆ ತನ್ನ ಮಗನನ್ನು ಕೂಡ ಮಂದಿರಕ್ಕೆ ಕರೆದುಕೊಂಡು ಹೋದರು ಬಂದ ನಂತರ ಮಗನಿಗೆ ಕೇಳಿದರು ನೆಮ್ಮದಿ ಸಿಕ್ಕಿದೆಯಾ? ಎಂದು ಕೇಳಿದರು ಆಗ ಮಗ ಇದ್ದವನು ಇನ್ನು ಮುಂದೆ ನನಗೆ ಮಂದಿರಕ್ಕೆ ಕರೆಯಬೇಡಿ ಏಕೆಂದರೆ ನನ್ನ ತಲೆ ತಿರುಗಿದಂತೆ ಆಗಿದೆ ಎಂದು

ಹೇಳಿದನು.

 ತಂದೆಯವರು ನಿಧಾನವಾಗಿ ಮಂದಿರದಲ್ಲಿ ಏನಾಯ್ತು? ಏಕೆ ನೀನು ಹೀಗೆ ಹೇಳುತ್ತಿದ್ದೀಯ? ಎಂದು ಸಮಾಧಾನದಿಂದ ಕೇಳಿದರು ಆಗ ಮಗನಾದವನು ಮಂದಿರದಲ್ಲಿ ಯಾರಿಗೂ ಭಗವಂತನ ಮೇಲೆ ಭಕ್ತಿ ಇಲ್ಲ ತಮ್ಮ ತಮ್ಮ ಮನೋರಂಜನೆಯಲ್ಲಿ ಅಲಂಕಾರದಲ್ಲಿ ಮುಳುಗಿದ್ದಾರೆ ಕೆಲವರು ಹಾಡು ಹಾಡುತ್ತಾ ಇದ್ದಾರೆ ಕೆಲವರು ಮೊಬೈಲ್ ನಲ್ಲಿ ಏನೇನು ನೋಡುತ್ತಿದ್ದಾರೆ.

 ಕೆಲವರು ಫೋಟೋಗಳನ್ನು ಸೆರೆ ಹಿಡಿಯುತ್ತಿದ್ದಾರೆ ಭಗವಂತನ ಮೇಲೆ ಭಕ್ತಿ ಇರಬೇಕು ಆದರೆ ನಾನು ನೋಡಿದ್ದು ಯಾರು ಅಲ್ಲಿ ನಿಜವಾಗಿ ಭಕ್ತಿಯಿಂದ ಇರುವವರನ್ನು ನಾನು ನೋಡಲೇ ಇಲ್ಲ ಎಂದು ಹೇಳಿದನು ಆಗ ತಂದೆಯವರು ಎರಡು ನಿಮಿಷ ಯೋಚನೆ ಮಾಡಿ ನನ್ನದೊಂದು ಚಿಕ್ಕ ಕೆಲಸವಿದೆ ಅದೊಂದು ನೀನು ಮಾಡು ಎಂದು ಹೇಳಿದರು.

 ಇದೊಂದು ಸಾರಿ ಮಾತ್ರ ಮಾಡುತ್ತೇನೆ ಎಂದು ಹೇಳಿದನು ಆಗಲಿ ಎಂದು ಒಂದು ಗಾಜಿನ ಲೋಟದಲ್ಲಿ ಪೂರ್ತಿಯಾಗಿ ನೀರನ್ನು ತುಂಬಿ ಹೇಳಿದರು ಇದನ್ನು ಕೈಯಲ್ಲಿ ಇಟ್ಟುಕೊಂಡು ಮಂದಿರಕ್ಕೆ ಹೋಗಿ ಒಂಬತ್ತು ಸುತ್ತುಗಳನ್ನು ಹಾಕಿಕೊಂಡು ಬಾ ಆದರೆ ಗಾಜಿನ ಲೂಟದಲ್ಲಿ ತುಂಬಿರುವ ಒಂದು ಹನಿ ನೀರನ್ನು ಕೂಡ ಕೆಳಗೆ ಬೀಳಿಸುವ ಹಾಗಿಲ್ಲ ಎಂದು ಎಚ್ಚರಿಕೆ ನೀಡಿ ಕಳುಹಿಸಿದರು.

 ಸ್ವಲ್ಪ ಸಮಯದ ನಂತರ ಮಗ ಬರುತ್ತಾನೆ ನೀರನ್ನು ನಾನು ಚೆಲ್ಲಿಲ್ಲ ಎಂದು ಎದೆ ಉಬ್ಬಿಸಿಕೊಂಡು ಹೇಳುತ್ತಾನೆ ಆಗ ತಂದೆಯವರು ಕೆಲವು ಪ್ರಶ್ನೆಯನ್ನು ಕೇಳುತ್ತಾರೆ?  ನೀನು ಒಂದು ಗಾಜಿನ ಲೋಟವನ್ನು ಹಿಡಿದುಕೊಂಡು ಹೋಗಬೇಕಾದರೆ ಎಷ್ಟು ಜನರು ಹಾಡು ಹೇಳುತ್ತಿದ್ದರು.

ಎಷ್ಟು ಜನರು ಮೊಬೈಲ್ ನಿಂದ ಫೋಟೋ ಸೆರೆ ಹಿಡಿಯುತ್ತಿದ್ದರು ಎಷ್ಟೋ ಜನರು ಮೊಬೈಲ್ ನೋಡುತ್ತಿದ್ದರು ಎಷ್ಟೋ ಜನರು ಅರ್ಥವಿಲ್ಲದ ಮಾತುಗಳನ್ನು ಆಡುತ್ತಿದ್ದರು ಬಹಳಷ್ಟು ಜನರು ಭಕ್ತಿ ಇಲ್ಲದೆ ಬೇಕಾದಂತೆ ಇದ್ದರು ಆಗ ಮಗನಾದವನು ನನಗೆ ಏನು ಗೊತ್ತಿಲ್ಲ.

 ನನ್ನ ಗಮನವೆಲ್ಲ ಗಾಜಿನ ಲೋಟದ ನೀರಿನ ಮೇಲೆ ಇತ್ತು ಏಕೆಂದರೆ ನೀರು ಬೀಳಬಾರದು ಎನ್ನುವ ಏಕಾಗ್ರತೆ ಇತ್ತು ಎಂದು ಹೇಳುತ್ತಾನೆ ಮಂದಿರಕ್ಕೆ ಹೋಗುವ ಕೆಲವು ವ್ಯಕ್ತಿಗಳು ಭಕ್ತಿಯಿಂದ ಇದ್ದೆ ಇರುತ್ತಾರೆ ಅದಕ್ಕೆ ನೀನೇ ಸಾಕ್ಷಿ ಇದ್ದೀಯ ಎಂದು ಹೇಳುತ್ತಾರೆ ನಂತರ ತಂದೆಯ ಮಾತುಗಳನ್ನು ಅರ್ಥಮಾಡಿಕೊಳ್ಳುತ್ತಾನೆ.

ಮಾನವೀಯತೆ ಇನ್ನೂ ಜೀವಂತವಾಗಿದೆ


ಒಬ್ಬ ಹಳ್ಳಿಯ ಸಾಮಾನ್ಯ ಮನಷ್ಯ ಅವನು ಧರಿಸಿದ ಪ್ಯಾಂಟು ಅಲ್ಲಲ್ಲಿ ಹೊಲಿಗೆ ಬಿಚ್ಚು ಹೋಗಿದೆ ಮತ್ತು ಅವನ ಅಂಗಿ ಸ್ವಲ್ಪ ಹರಿದಿದೆ ಸುಮಾರು 45-50 ವರ್ಷ ಅಸುಪಾಸಿನಲ್ಲಿರಬಹುದು.

  ಮಗಳ ಜೊತೆ ದೊಡ್ಡ ಹೋಟೆಲ್ ಗೆ ಬಂದರು. ಅಪ್ಪ ಮಗಳು ಇಬ್ಬರೂ ಕುರ್ಚಿಯ ಮೇಲೆ ಕುಳಿತಿದ್ದನ್ನು ನೋಡಿ, ವೇಟರ್ ಬಂದು ಕೇಳಿದ. ನಿಮಗೇನು ಬೇಕು? ಆಗ ಆ ಮನಷ್ಯ ನನ್ನ ಮಗಳಿಗೆ ಹತ್ತನೇ ತರಗತಿಯಲ್ಲಿ ಹೆಚ್ಚಿನ ಅಂಕಗಳಲ್ಲಿ ಪಾಸಾದರೆ ನಗರದ ಅತಿದೊಡ್ಡ ಹೋಟೆಲ್ ನಲ್ಲಿ ಮಸಾಲೆ ದೋಸೆ ತಿನ್ನಿಸುತ್ತೇನೆ ಎಂದು ಹೇಳಿದ್ದೆ.

 ಇಂದು ನನ್ನ ಮಗಳು ಪಾಸಾಗಿದ್ದಾಳೆ ದಯವಿಟ್ಟು ಮಗಳಿಗಾಗಿ ಒಂದು ಮಸಾಲೆ ದೋಸೆ ಸಾಕು ಎಂದ ವೇಟರ್ ಕೇಳಿದ ಆಯಿತು ನಿಮಗೇನು ಬೇಕು?  ನನ್ನ ಹತ್ತಿರ ಕೇವಲ ಒಂದು ಮಸಾಲೆ ದೊಸೆ ಸಾಕಾಗುವಷ್ಟು ಮಾತ್ರ ದುಡ್ಡು ಇದೆ.

  ಮಗಳಿಗಷ್ಟೆ ಕೊಟ್ಟರೆ ಸಾಕು ಎಂದರು ಈ ಮಾತು ಕೇಳಿದ ವೇಟರ್ ನ ಮನಸು ಬೆಣ್ಣೆಯಂತೆ ಕರಗಿತು. ಹೋಟೆಲ್ ಮಾಲೀಕನ ಬಳಿ ಹೋಗಿ ವೇಟರ್ ಹಳ್ಳಿಯ ಸಾಮಾನ್ನ ಮನುಷ್ಯನ ಮತ್ತು ಮಗಳ ಕಥೆ ಹೇಳಿದ ನಂತರ ಇವರಿಬ್ಬರಿಗೂ ನನ್ನ ಪರವಾಗಿ ತಿಂಡಿ ನೀಡಬೇಕೆಂದು ನಿರ್ಧರಿಸಿದ್ದೇನೆ.

 ನೀವು ಅವರ ಬಿಲ್ ಹಣವನ್ನು ನನ್ನ ಸಂಬಳದಿಂದ ಕಡಿತಗೊಳಿಸಿ ಈ ಮಾತನ್ನು ಕೇಳಿದ ಹೊಟೆಲ್ ಮಾಲಿಕನಿಗೂ ಅವರಿಬ್ಬರ ಮೇಲೆ ಮನಸು ಕರಗಿತ್ತು ಅದುದರಿಂದ ಇಬ್ಬರಿಗೂ ನಾವೇ ಪಾರ್ಟಿ ಕೊಡೋಣ ಎಂದು ಮಾಲೀಕರು ಹೇಳಿದರು ಹೋಟೆಲ್ ಮಾಲೀಕರು ಹಾಗೂ ಎಲ್ಲ ಸಿಬ್ಬಂದಿಯವರನ್ನು ಸೇರಿಸಿ ಟೇಬಲ್ ನ್ನು ಅಲಂಕರಿಸಲು ಹೇಳಿದರು.

ಬಡ ಹುಡುಗಿಯ ಯಶಸ್ಸನ್ನು ಹೊಟೆಲ್ ಗೆ ಬಂದ   ಗ್ರಾಹಕರೊಂದಿಗೆ ಸಂಭ್ರಮಿಸಿ ಇಬ್ಬರಿಗೂ ಸಾಕಾಗುವಷ್ಟು ತಿಂಡಿ ನೀಡಿ ನಂತರ ಇತರರಿಗೂ ಸಿಹಿ ಹಂಚಿದರು ಜೊತೆಗೆ ಮಾಲೀಕರೆ ದೊಡ್ಡ ಡಬ್ಬದಲ್ಲಿ ಸಿಹಿ ತಿಂಡಿ ಪ್ಯಾಕ್ ನೀಡಿ ನೆರೆಹೊರೆಯಲ್ಲಿ ಹಂಚಲು ಕೊಟ್ಟರು.

ತಂದೆ ಮಗಳಿಗೆ ಹೊಟೆಲನವರ ಬಗ್ಗೆ ಏನೂ ಹೇಳಬೇಕು ಎಂದು ತೋಚದೆ ಕಣ್ಣಲ್ಲಿ ನೀರು ಬಂತು ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸಿ ಹೊರಟರು ಹಲವು ವರುಷದ ನಂತರ ಅದೇ ಹುಡುಗಿ I.A.S. ಪರೀಕ್ಷೆಯಲ್ಲಿ ಪಾಸಾಗಿ ಅದೇ ಊರಿಗೆ ಬಂದಳು.

 ಮೂದಲು ಮಾಡಿದ ಕೆಲಸ ಅದೇ ಹೋಟೆಲ್ ಗೆ ಸಂದೇಶ ಕಳಿಸಿದಳು ಈ ಸಾರಿ ಆಯ್ಕೆಯಾದ ಕಲೆಕ್ಟರ್ ಊಟಕ್ಕೆ ಬರುತ್ತಾರೆ ಎಂದು ಹೊಟೆಲ್ ಮಾಲಿಕರಿಗೆ ತಿಳಿಸುವಂತೆ ಹೇಳಿದರು. ಹೋಟೆಲ್ ಮಾಲೀಕರು ತಕ್ಷಣ ಚೆನ್ನಾಗಿ ಅಲಂಕರಿಸಿದರು.

ಈ ಸುದ್ದಿ ಕೇಳಿದ ನಂತರ ಇನ್ನು ಹೆಚ್ಚು ಗ್ರಾಹಕರಿಂದ ಹೋಟೆಲ್ ತುಂಬಿ ತುಳುಕಾಡುತ್ತಿತು. ಕಲೆಕ್ಟರ್ ಹಾಗೂ ತನ್ನ ಮನೆಯವರು ಹೋಟೆಲ್ ಹೋಟೆಲ್ ಗೆ ಬಂದರು ಎಲ್ಲರೂ ಅವರ ಗೌರವಿಸಲಿಕ್ಕೆ ಬಂದರು. ಹೋಟೆಲ್ ಮಾಲೀಕರು ಅವರಿಗೆ ಪುಷ್ಪಗುಚ್ಛ ನೀಡಿ ಸ್ವಾಗತ ಮಾಡಿದರು ಕಲೆಕ್ಟರ್ ನೇರವಾಗಿ ಹೋಟೆಲ್ ಮಾಲೀಕ ಮತ್ತು ವೆಟರ್ ನ ಕಾಲಿಗೆ ಮುಟ್ಟಿ ನಮಸ್ಕರಿಸಿದಳು.

ನಂತರ ಬಹುಶಃ ನೀವಿಬ್ಬರೂ ನನ್ನನ್ನು ಗುರುತಿಸಲಿಲ್ಲ. ಮಸಾಲೆ ದೋಸೆಗೆ ಹಣ ಇರಲಿಲ್ಲ ನನ್ನ ತಂದೆ ಬಳಿ ಅದೇ ಹುಡುಗಿ ನಾನು ಎಂದು ಹೇಳಿದಳು. ಇಂದಿಗೂ ಮಾನವೀಯತೆಯು ಇನ್ನೂ ಜೀವಂತವಾಗಿದೆ ಎನ್ನುವದಕ್ಕೆ ನೀವಿಬ್ಬರೂ ನೈಜ ಉದಾಹರಣೆ ನೀಡಿದ್ದಿರಿ.

ಮತ್ತೆ ನನ್ನ ನೆರೆಹೊರೆಗೆ ಹಂಚಲು ಸಿಹಿತಿಂಡಿಯ ಸಹಾ ಪ್ಯಾಕ್ ಮಾಡಿ ನೀಡಿ ಗೌರವ ನೀಡಿದ್ದೀರಿ ಇಂದು ನಾನು ಈ ಹಂತಕ್ಕೆ ಬರಲು ಕಾರಣವೇ ನಿಮ್ಮಿಬ್ಬರು ನಾನು ಎಂದಿಗೂ ನಿಮ್ಮನು ಮರೆಯಲಾರೆ ಇವತ್ತು ಈ ಪಾರ್ಟಿ ನನ್ನಿಂದ. ಎಲ್ಲಾ ಗ್ರಾಹಕರು ಮತ್ತು ಹೋಟೆಲ್ ಸಿಬ್ಬಂದಿಗಳ ಬಿಲ್ ನಾನು ನೀಡುತ್ತೇನೆ.

 ಇಂದಿನಿಂದ ನಿಮ್ಮ ಸುಖ ದುಃಖಗಳಿಗೆ ನಾನೂ ಭಾಗಿ ಎಂದು ಹೇಳಿದಳು ಆ ಸಮಯದಲ್ಲಿ ಹೊಟೆಲ್ ಮಾಲಿಕ ಹಾಗೂ ವೇಟರ್ ಕಣ್ಣುಗಳಲ್ಲಿ ಆನಂದ ಭಾಷ್ಪಬಂತು   ಬಡವರ ಬಡತನವನ್ನು ನೋಡಿ ಅಪಹಾಸ್ಯ ಮಾಡುವ ಬದಲು ಅವರ ಪ್ರತಿಭೆಯನ್ನು ಗೌರವಿಸೋಣ.

Leave a Comment