ಒಂದು ಸಾರಿ ನ್ಯಾಯಾಧೀಶರು ವರ್ಗಾವಣೆಯಾಗಿ ಬೇರೆ ಕೋರ್ಟಿಗೆ ಹೋಗುತ್ತಾರೆ. ಆವಾಗ ಅವರಿಗೆ ಮೊದಲನೇ ಪ್ರಕರಣವೇ ವಿಚ್ಛೇದನ ಪ್ರಕರಣ ಅಜ್ಜನಿಗೆ ಎಪ್ಪತ್ತು ವರ್ಷ ಅಜ್ಜಿಗೆ ಅರುವತ್ತೈದು ವರ್ಷ ವಾಗಿರುತ್ತದೆ ಈ ವಯಸ್ಸಿನಲ್ಲಿ ವಿಚ್ಛೇದನೆಗೆ ಕಾರಣಗಳೇನು ಎಂದು ಕೇಳಿದಾಗ ಅವರು ಕಾರಣಗಳು ಒಂದೊಂದಾಗಿ ಹೇಳುತ್ತಾ ಬಂದರು.
ಅಜ್ಜಿ ಮದುವೆಯಾಗಿ ಐವತ್ತು ವರ್ಷಗಳು ಆಗಿವೆ ಒಂದು ಸಾರಿಯೂ ನನ್ನನ್ನು ಖುಷಿಯಾಗಿದ್ದೀಯಾ ಎಂದು ಕೇಳಲಿಲ್ಲ, ನನ್ನನ್ನು ಎಷ್ಟು ಕೆಲಸ ಮಾಡಿದರೂ ಹೊಗಳಿಲ್ಲ, ಅಷ್ಟಾಗಿ ನನಗೆ ಹೊರಗಡೆ ಕರೆದುಕೊಂಡು ಹೋಗಿಲ್ಲ, ಅಡಿಗೆ ಮಾಡಿದಾಗ ತಿನ್ನುತ್ತಾರೆ ನಂತರ ಹೊರಟು ಹೋಗುತ್ತಾರೆ.
ನಂತರ ಅಜ್ಜರು ನಾನು ಹೊರಗಡೆಯಿಂದ ಕಷ್ಟಪಟ್ಟು ನನ್ನ ಪತ್ನಿ ಸಂತೋಷವಾಗಿ ಇರಲಿ ಎಂದು ನಾನು ಇಡೀ ಜೀವನವೇ ದುಡಿಯುತ್ತಿದ್ದೇನೆ ಎಲ್ಲ ಹಣವನ್ನು ನಾನು ಕೊಟ್ಟಿದ್ದೇನೆ ಪ್ರೀತಿ ಇದ್ದದ್ದಕ್ಕೆ ನಾನು ಬೇಕಾದಷ್ಟು ಸಾರಿ ನಾನು ಬಟ್ಟೆಗಳು ಸೀರೆ, ಬಳೆಗಳು ಹೂವುಗಳನ್ನು ತಂದು ಕೊಟ್ಟಿದ್ದೇನೆ, ಅವಳು ಸೌಂದರ್ಯವತಿ ಅದಕ್ಕಾಗಿ ನಾನು ಪ್ರೀತಿಸುತ್ತೇನೆ ಆರಾಧಿಸುತ್ತೇನೆ.
ನಾನು ಕೆಲವು ಕಡೆ ಕರೆದಾಗ ಬರಲಿಲ್ಲ ಆದ್ದರಿಂದ ನಾನು ಕರೆದುಕೊಂಡು ಹೋಗಿಲ್ಲ ಮತ್ತೆ ಅವರಾಗಿ ಎಂದೂ ಹೇಳಿಲ್ಲ ಎಷ್ಟೋ ಸಾರಿ ಅಡಿಗೆ ನಾನೇ ಮಾಡಿಕೊಂಡಿದ್ದೇನೆ ಅಡುಗೆಗೆ ಉಪ್ಪು ಖಾರ ಕಡಿಮೆಯಾಗಿದೆ ನಾನು ಒಂದು ಮಾತು ಕೂಡ ಹೇಳಿಲ್ಲ.
ಅಜ್ಜಿ ನನಗಾಗಿ ನೀವು ನನ್ನನ್ನು ಮನಸಾರೆ ಪ್ರೀತಿಸಿದ್ದೀರಿ ಏಕೆ ನೀವು ರಹಸ್ಯವಾಗಿ ಇಟ್ಟಿದ್ದೀರಿ ಎಂದು ಅತ್ತರು ಅಜ್ಜನವರು ನೀನು ಹೇಳಿದರೆ ತಾನೆ ನನಗೆ ಗೊತ್ತಾಗುತ್ತದೆ ಎಂದು ಇಬ್ಬರು ಅತ್ತರು ಇಷ್ಟರಲ್ಲಿ ನ್ಯಾಯಾಧೀಶರು ನಿಮ್ಮ ವಿಚ್ಛೇದನೆಗೆ ಮುಖ್ಯ ಕಾರಣವೇ ನಿಮ್ಮ ಭಾವನೆಗಳನ್ನು ಹಂಚಿಕೊಂಡಿಲ್ಲ, ನಿಮ್ಮನ್ನು ಅರ್ಥಮಾಡಿಕೊಂಡಿಲ್ಲ ಎಂದು ತಿಳಿಹೇಳಿದರು.
ಗಂಡಸರಾದವರು ಹೇಳುವುದನ್ನು ಕಲಿಯಬೇಕು ಅವರಿಗಾಗಿ ತನ್ನ ಜೀವನವನ್ನೇ ಮುಡುಪಾಗಿ ಇಟ್ಟಿಸಿರುತ್ತಾನೆ ಆದರೆ ಅದು ಹೆಂಡತಿಗೆ ತಿಳಿಯಲಾರದು ಹೆಂಡತಿಯಾದವಳು ತನ್ನ ಕಷ್ಟ ನೋವುಗಳನ್ನು ಹೇಳಿದಾಗ ಮಾತ್ರ ಗಂಡಸಿಗೆ ಅರಿವಾಗುತ್ತದೆ ಇಲ್ಲದಿದ್ದರೆ ಇಲ್ಲ ಇಬ್ಬರೂ ಅನುಸರಿಸಿಕೊಂಡು ಹೋಗಬೇಕು ಇದೇ ಬದುಕು.
ನಿದ್ದೆಯಲ್ಲಿ ಮಾತನಾಡುತ್ತಾನೆ
ಒಂದು ರಾಜ್ಯದಲ್ಲಿ ಒಂದು ದೊಡ್ಡ ಸಮಾರಂಭವನ್ನು ವಿಜೃಂಭಣೆಯಿಂದ ಏರ್ಪಡಿಸಿದರು ಆ ಸಮಾರಂಭದಲ್ಲಿ ಅರಮನೆಯ ತೋಟದಲ್ಲಿ ಬೆಳೆದಿದ್ದ ಎಲ್ಲ ತರಕಾರಿಗಳ ಪಲ್ಯಗಳನ್ನು ಮಾಡಿ ಬಡಿಸಿದರು ಇದು ನಿಜಕ್ಕೂ ತುಂಬಾ ಚೆನ್ನಾಗಿತ್ತು ಮಂತ್ರಿಗೂ ಈ ಪಲ್ಯ ಹಿಡಿಸಿತು.
ನಂತರ ಮನೆಗೆ ಹೋದನು ಮನೆಗೆ ಹೋದ ನಂತರ ಹೆಂಡತಿಗೆ ಹೇಳಿದ ಅರಮನೆಯಲ್ಲಿ ಬೆಳೆದಿದ್ದ ತಾಜಾ ತರಕಾರಿಗಳಿಂದ ಪಲ್ಯಗಳು ಮಾಡಿದರು ತುಂಬ ರುಚಿಯಾಗಿತ್ತು ತೃಪ್ತಿಯಾಗುವಷ್ಟು ತಿಂದೆ ಎಂದನು ಆಗ ಹೆಂಡತಿ ಆದವಳು ಹೇಳಿದಳು ನೀವು ತಿಂದು ಬಂದಿದ್ದೀರಿ ವರ್ಣನೆ ಬೇಡ ನನಗೂ ಬೇಕು ಎಂದು ಹಠ ಹಿಡಿದಳು.
ಆ ತೋಟಕ್ಕೆ ಕಾವಲುಗಾರರು ಕೂಡ ಇರುತ್ತಾರೆ ಆದರೂ ಈ ಮಂತ್ರಿಯು ಕಣ್ಣುತಪ್ಪಿಸಿ ಹೋಗಿ ಮುಂದೆಯೇ ಕಾಣುತ್ತಿದ್ದ ಆಕರ್ಷಕವಾಗಿ ಇದ್ದ ತರಕಾರಿಗಳನ್ನು ಕಿತ್ತುಕೊಂಡು ತರುತ್ತಾನೆ ನಂತರ ಹೆಂಡತಿಯು ಅದರ ಪಲ್ಯವನ್ನು ಮಾಡುತ್ತಾಳೆ.
ತಿನ್ನಲಿಕ್ಕೆ ಕೂರಬೇಕಾದರೆ ಗಂಡ ತನ್ನ ಮಗನನ್ನು ಎಬ್ಬಿಸುತ್ತಾನೆ ಮಗ ಕೊಠಡಿಯ ಮೇಲೆ ಗಾಢ ನಿದ್ರೆಯಲ್ಲಿ ಮಲಗಿರುತ್ತಾನೆ ಈ ಹುಡುಗನಿಗೆ ನೀರು ಚುಮುಕಿಸಿ ಮೈಮೇಲೆ ನೀರುಹಾಕಿ ಮಳೆ ಬರುತ್ತಿದೆ ಎಂದು ಹೇಳಿ ಬಟ್ಟೆಯನ್ನು ಬದಲಿಸಿ ನಂತರ ಅವನಿಗೆ ಪಲ್ಯವನ್ನು ತಿನ್ನಿಸಿ ಮಲಗಿಸುತ್ತಾರೆ.
ಈ ಕೆಲಸ ಏಕೆ ಮಾಡಿದ ಎಂದರೆ ರಾಜನಿಗೆ ತಿಳಿದರೆ ಯಾರೂ ತರಕಾರಿಯನ್ನು ಕಳ್ಳತನ ಮಾಡಿದರೆ ಅವರಿಗೆ ಶಿಕ್ಷೆ ತಪ್ಪಿದ್ದಲ್ಲ ಅದಕ್ಕೆ ಮಗನಿಗೆ ಈ ಉಪಾಯ ಮಾಡುತ್ತಾನೆ ಮಾರನೆ ದಿನ ತರಕಾರಿ ಕಳ್ಳತನವಾಗಿದೆ ಎಂದು ಸುದ್ದಿ ಹಬ್ಬುತ್ತದೆ ಆಗ ಮಂತ್ರಿಯ ಮೇಲೆಯೇ ಎಲ್ಲರೂ ಅನುಮಾನ ಪಡುತ್ತಾರೆ.
ಏಕೆಂದರೆ ಮಂತ್ರಿ ಒಬ್ಬನೇ ಮಾತ್ರ ತೋಟಕ್ಕೆ ಹೋಗಿ ಬರುವವನು ಇತರರು ಹೋಗಲಿಕ್ಕೆ ಅಷ್ಟು ಸುಲಭವಲ್ಲ ಮತ್ತೆ ಸಾಕ್ಷಿ ಇಲ್ಲದೆ ಹಿಡಿದು ಹೇಳುವುದು ಕೂಡ ತಪ್ಪು ಎಂದು ಬುದ್ಧಿವಂತ ರಾಜನು ಚಿಂತಿಸಿ ಒಂದು ಉಪಾಯವನ್ನು ಮಾಡುತ್ತಾನೆ.
ಮಂತ್ರಿಯ ಮಗನಿಗೆ ಕರೆಯುತ್ತಾನೆ ಆ ಹುಡುಗನಿಗೆ ಕರೆದು ನೀನು ಮನೆಯಲ್ಲಿ ತರಕಾರಿ ಪಲ್ಯವನ್ನು ತಿಂದೆಯಾ ಎಂದು ಕೇಳುತ್ತಾನೆ ಆಗ ಮಂತ್ರಿಯ ಮಗನು ಹೌದು ನಾನು ನಮ್ಮ ತಂದೆ ತಾಯಿ ಎಲ್ಲರೂ ಸೇರಿ ಪಲ್ಯವನ್ನು ತಿಂದೆವು ಎಂದು ಹೇಳುತ್ತಾನೆ ಆಗ ಮಂತ್ರಿಯು ನನ್ನ ಮಗ ಸುಳ್ಳು ಹೇಳುತ್ತಿದ್ದಾನೆ.
ಅವನಿಗೇನೂ ಗೊತ್ತಿಲ್ಲ ನನ್ನ ಮಗ ನಿದ್ದೆಯಲ್ಲಿ ಮಾತಾಡುತ್ತಾನೆ ಅವನಿಗೆ ಭ್ರಮೆ ಇದೆ ಎಂದು ಹೇಳುತ್ತಾನೆ ನಂತರ ಮಂತ್ರಿಯಾದವನು ಹೇಳುತ್ತಾನೆ ನಿನ್ನೆ ಮಳೆ ಬಂತು ಕೇಳಿ ಎಂದು ಹೇಳಿದಾಗ ರಾಜನು ನಿನ್ನೆ ಮಳೆ ಬಂತಾ ಎಂದರೆ ಹುಡುಗ ಹೌದು ನಿನ್ನೆ ತುಂಬಾ ಜೋರಾಗಿ ಮಳೆ ಬಂತು.
ನಾನು ಕೊಠಡಿ ಮೇಲೆ ಮಲಗಿದೆ ಬಟ್ಟೆ ಒದ್ದೆಯಾಯಿತು ನಂತರ ಬೇರೆ ಬಟ್ಟೆ ಬದಲಿಸಿಕೊಂಡು ಮಲಗಿದ್ದೇನೆ ಎಂದು ಹೇಳುತ್ತಾನೆ ಅಂದರೆ ಊರಿನಲ್ಲಿ ಮಳೆ ಬಂದಿರುವುದಿಲ್ಲ ಹುಡುಗ ಮಾತ್ರ ಜೋರಾಗಿ ಮಳೆ ಬಂತು ಎಂದು ಹೇಳುತ್ತಾನೆ ನಂತರ ಮಂತ್ರಿಯೂ ಕದ್ದಿಲ್ಲ ಎಂದು ತೀರ್ಮಾನವಾಗುತ್ತದೆ.
ಯಾರಿಗೂ ಹಿಂಸಿಸುವುದು ಬೇಡ
ಸಾಮ್ರಾಟ್ ಅಶೋಕ ಇವನು ಜೀವನದಲ್ಲಿ ಯಾರಿಗೂ ಸೋಲಲಿಲ್ಲ ಆದರೆ ಒಂದು ಚಿಕ್ಕ ಹುಡುಗಿಗೆ ಸೋತು ಬಿಟ್ಟನು ಅದು ದೊಡ್ಡ ಯುದ್ಧ ಕಳಿಂಗ ಯುದ್ಧ ಮುಗಿಸಿ ಅರಮನೆಗೆ ಬರುತ್ತಾನೆ ರಾಜ ಸೋತರೆ ಯಾರು ಗೆದ್ದಿರುತ್ತಾರೆ.
ಅವರ ಹೆಸರಿನಲ್ಲಿ ಜೈಕಾರ ಮಾಡುತ್ತಿರುತ್ತಾರೆ ಆದರೆ ಇಲ್ಲಿ ಒಂದು ಹುಡುಗಿ ಅಮಿತಾ ಎಂಬುವಳು ಯಾವುದೇ ಕಾರಣಕ್ಕೂ ಬೆಲೆ ಕೊಡುತ್ತಿಲ್ಲ ಅಮಿತಾ ನೀನು ಯಾರು? ಎಂದು ಕೇಳಿದಾಗ ಆಗ ನಾನು ಸಾಮ್ರಾಟ್ ಅಶೋಕ್ ಎಂದು ಉತ್ತರಿಸಿದನು.
ಚಿಕ್ಕ ಹುಡುಗಿ ಒಂದು ಮಾತು ಕೇಳುತ್ತಾಳೆ ನಿನ್ನ ಹತ್ತಿರವೂ ಚಿನ್ನ ಬೆಳ್ಳಿ ವಜ್ರ ವೈಡೂರ್ಯ ಮನೆ ಎಲ್ಲವೂ ಇದೆ ಆದರೂ ಯಾಕೆ ಇವರನ್ನು ಹಿಂಸೆ ಮಾಡುತ್ತೀಯಾ ನೀನು ಮೂರ್ಖನೋ ಎಂದು ಕೇಳುತ್ತಾಳೆ ಈ ಒಂದು ಚಿಕ್ಕ ಹುಡುಗಿಯ ಮಾತಿಗೆ ಅಶೋಕ ಏನೂ ಮಾತನಾಡದೆ ಕೇಳುತ್ತಾನೆ .
ಈ ರಾಜ್ಯದಿಂದ ನಿನಗೆ ಏನು ಬೇಕಾಗಿತ್ತು ನೀನು ಯುದ್ಧ ಏಕೆ ಮಾಡಿದೆ ಹೇಳು ಎಂದಾಗ ಅಶೋಕ ರಾಜ್ಯ ಬೇಕಾಗಿತ್ತು ಎಂದಾಗ ಅದಕ್ಕೆ ಆ ಹುಡುಗಿ ಹೇಳಿದಳು ನಿನಗೆ ರಾಜ್ಯ ಬೇಕಿದ್ದರೆ ನನಗೆ ಬಂದು ಕೇಳಿದ್ದರೆ ನಾನೇ ನಿನಗೆ ಕೊಡುತ್ತಿದ್ದೆ.
ನಿನಗೆ ಬೇಕಾದ ಧನದ ರಾಶಿ ಏನು ಬೇಕೋ ಅದು ಇದೆ ಎಲ್ಲ ತೆಗೆದುಕೋ ಆದರೆ ಯಾರನ್ನು ಹಿಂಸೆ ಕೊಡಬೇಡ ಮತ್ತೆ ಹೇಳುತ್ತಾಳೆ ಏನು ಬೇಕು ಎಂದಾಗ ಅಶೋಕ ನನಗೆ ರಾಜ ಸಿಂಹಾಸನ ಬೇಕು ಎನ್ನುತ್ತಾನೆ.
ಹುಡುಗಿ ಅಷ್ಟೇ ತಾನೆ ನಿನಗೆ ಬೇಕಾದದ್ದು ಸಿಂಹಾಸನ ತಗೋ ಇದನ್ನು ತೆಗೆದುಕೊಂಡು ಹೋಗು ಎಂದು ಹೇಳಿದಳು ಆಗ ಅಶೋಕನು ಸೋತನು ನಂತರ ಆ ಹುಡುಗಿಯನ್ನು ಎತ್ತಿಕೊಂಡು ಹೇಳಿದ ಇನ್ನು ಮುಂದೆ ನಾನು ಯಾವುದೇ ಕಾರಣಕ್ಕೂ ಯುದ್ಧ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದನು.
ಈಗ ನಾನು ಏನು ಮಾಡಬೇಕು ಎಂದಾಗ ಅಮಿತಾಇನ್ನು ಮುಂದೆ ಯಾರಿಗೂ ಹಿಂಸಿಸುವುದು ಬೇಡ ಅದೇ ನನ್ನ ಇಚ್ಛೆ ಎಂದು ಹೇಳಿದಳು ಅಂದಿನಿಂದ ಅಶೋಕ ಸಾಯುವವರೆಗೂ ಯುದ್ಧವನ್ನು ಮಾಡಲಿಲ್ಲ. ಯಾರು ಯಾವಾಗ ಅವರ ಪಾಠ ಕಲಿಯುತ್ತಾರೋ ಗೊತ್ತಿಲ್ಲ.
ಗಂಡನನ್ನು ಪೀಡಿಸಿದಳು
ಒಬ್ಬ ಬೇಟೆಗಾರರನ್ನು ಚಿಕ್ಕ ಮನೆಯಲ್ಲಿ ವಾಸವಾಗಿರುತ್ತಾನೆ ಅವನ ಕೆಲಸ ಬೇಟೆಗೆ ಹೋಗಿ ಏನಾದರೂ ತಂದು ಹೆಂಡತಿ ಮಕ್ಕಳಿಗೆ ಕೊಡುವಂತದ್ದು ನೆಮ್ಮೆದಿಯಾಗಿ ಸುಖದಿಂದ ಬಾಳುತ್ತಿದ್ದರು.
ಒಂದು ಸರಿ ಬೇಟೆಗೆ ಹೋದಾಗ ಪ್ರಾಣಿ ಬಲೆಗೆ ಬೀಳುತ್ತದೆ ನಂತರ ನೋಡಿದರೆ ಆಕಸ್ಮಿಕ ಪ್ರಾಣಿ. ಆಗ ಆಕಸ್ಮಿಕವಾಗಿ ಸಿಕ್ಕ ಪ್ರಾಣಿ ಹೇಳುತ್ತದೆ ನಿನಗೆ ಏನು ಬೇಕು ನಾನು ಅದನ್ನು ಕೊಡುತ್ತೇನೆ ಎಂದು ಹೇಳುತ್ತದೆ.
ಬೇಟೆಗಾರನು ನನಗೆ ಒಂದು ಮನೆ ಬೇಕು ಮನೆಗೆ ತಕ್ಕಂತೆ ಸ್ವಲ್ಪ ದವಸಧಾನ್ಯ ಇರಬೇಕು ಎಂದು ಕೇಳುತ್ತಾನೆ ಮತ್ತೆ ನಿನಗೆ ಏನಾದರೂ ಬೇಕಾದರೆ ಮತ್ತೆ ಬಾ ನಿನಗೇನು ಬೇಕೋ ಅದನ್ನು ನಾನು ನೀಡುತ್ತೇನೆ ಎಂದು ಆಶ್ವಾಸನೆ ನೀಡುತ್ತೆ.
ಅದರಂತೆಯೆ ಅವನು ಮನೆಗೆ ಬರುತ್ತಾನೆ ಮನೆ ಅಂದವಾಗಿ, ಚಂದವಾಗಿ, ಚೊಕ್ಕವಾಗಿ ತಕ್ಕಮಟ್ಟಿಗೆ ಇರುತ್ತದೆ ಬೇಟೆಗಾರನು ಸಂತೋಷ ಪಡುತ್ತಾನೆ ನಂತರ ಬಂದು ಹೆಂಡತಿಗೆ ಹೇಳುತ್ತಾನೆ ನೋಡು ಒಂದು ವೃಕ್ಷದೇವತೆ ನಮಗೆ ಸಿಕ್ಕಿದೆ ಅದರಿಂದ ಏನು ಬೇಕಾದರೂ ನಾವು ಪಡೆಯಬಹುದು ಎಂದು ಹೇಳುತ್ತಾನೆ ಆಗ ಹೆಂಡತಿ ಇದ್ದವಳು ಹೋಗಿ ಹೋಗಿ ಚಿಕ್ಕ ಮನೆ ಕೇಳಿದಿರಲ್ಲ ದೊಡ್ಡ ಅರಮನೆ ಕೇಳಬಾರದೆ ಎಂದು ಹೆಂಡತಿ ಹಿಂಸೆ ಮಾಡಿದಳು.
ನಂತರ ಬೇಟೆಗಾರನು ಹೋಗಿ ಆ ಆಕಸ್ಮಿಕ ಪ್ರಾಣಿಯನ್ನು ಕೇಳಿದ ನಂತರ ಹಾಗೆ ಅರಮನೆ ಸಿದ್ಧವಾಯಿತು ಹೆಂಡತಿಯ ಆನಂದ ಹೇಳಲಿಕ್ಕೆ ತೀರದು ಆಗ ಹೆಂಡತಿ ಮಲಗಿರಬೇಕಾದರೆ ಬಿಸಿಲಿನ ಕಿರಣಗಳು ಇವಳ ಮೇಲೆ ಬಿದ್ದಿತು ಆಗ ಸ್ವಾರ್ಥ, ಅಹಂಕಾರ, ಎಲ್ಲವೂ ಬಂದುಬಿಟ್ಟಿತು.
ಕೋಪದಿಂದ ಎದ್ದಳು ಅವಳು ಹೇಳಿದಳು ನನಗೆ ಸೂರ್ಯನ ಕಿರಣ ಬೀಳುತ್ತಿದೆ ನಂತರ ಗಂಡನನ್ನು ಪೀಡಿಸಿದಳು ನಾನೇ ಈ ಭೂಲೋಕದ ರಾಣಿಯಾಗಬೇಕು ಇಲ್ಲದಿದ್ದರೆ ನಾನು ನಿನ್ನನ್ನು ಬಿಡುವುದಿಲ್ಲ ಎಂದು ಹೇಳಿದಳು.
ಮತ್ತೆ ಬೇಟೆಗಾರ ಹೋದ ಆಗ ಪ್ರಾಣಿ ಕೇಳಿತು ನಿನಗೆ ಏನು ಬೇಕು ಎಂದಾಗ ಸಾಷ್ಟಾಂಗ ನಮಸ್ಕಾರ ಮಾಡಿ ಕೈಮುಗಿದು ಬೇಡಿದನು ನನಗೆ ಯಾವುದೇ ರೀತಿಯ ಹಣ, ಸಂಪತ್ತು, ಅರಮನೆ. ಯಾವುದೂ ಬೇಡ ಬೇಸತ್ತು ಹೋಗಿದೆ ನಾನು ಮೊದಲು ಇದ್ದಂತೆ ಚಿಕ್ಕಮನೆಯಲ್ಲೇ ಇರುತ್ತೇನೆ ಮಕ್ಕಳ ಪ್ರೀತಿ ಹೆಂಡತಿಯ ಮಮತೆ ಕೊಡು ಎಂದು ಕೇಳಿದನು.
ಮುಂದೆ ಹಾಗೆಯೇ ಅವರು ಸುಖದಲ್ಲಿ ಬದುಕಿದರು ಆಸೆ ಇರುವುದು ತಪ್ಪಲ್ಲ ಆದರೆ ದುರಾಸೆ ಬೇಡ ಕೆಲವರಿಗೆ ಒಂದೊಂದು ಹಂತಕ್ಕೂ ಹೋದಂತೆ ದುರಾಸೆ ತುಂಬ ಜಾಸ್ತಿಯಾಗಿ ಬಿಡುತ್ತದೆ ದುರಾಸೆ ಪಡುತ್ತಿರುವವರಿಗೆ ಗೊತ್ತಾಗುವುದಿಲ್ಲ ಅದರ ಸಂಕಟ ಆದರೆ ಅವರ ಜೊತೆ ಬದುಕುತ್ತಿರುತ್ತಾರೆ ಅವರಿಗೆ ತುಂಬಾ ಹಿಂಸೆಯಾಗುತ್ತದೆ.
ಸಾವಿಗೆ ತಡೆಯುವ ಶಕ್ತಿ ಯಾರಿಗೂ ಇಲ್ಲ
ಒಬ್ಬ ಮಹಾನ್ ರಾಜ ಇಡೀ ಪ್ರಪಂಚವನ್ನೇ ಗೆಲ್ಲುತ್ತೇನೆ ಎಂದು ಹೊರಟಿದ್ದ ಆದರೆ ಸಾವಿಗೆ ಸೋತು ಮರಣವನ್ನು ಒಪ್ಪಿದ ಇವನು ಯಾರೆಂದು ಎಲ್ಲರಿಗೂ ಗೊತ್ತು ಇವನೇ ಅಲೆಕ್ಸಾಂಡರ್ ಇವನು ಒಂದೊಂದೇ ದೇಶವನ್ನು ಗೆಲ್ಲುತ್ತಾ ಬರುತ್ತಿದ್ದನು.
ಅದರಂತೆಯೇ ಭಾರತಕ್ಕೂ ಬಂದ ಆವಾಗ ಅವನಿಗೆ ಆರೋಗ್ಯ ಕ್ಷೀಣಿಸುತ್ತಾ ಬಂತು ಆಗ ಅವನಿಗೆ ಅರಿವಾಯಿತು. ನಂತರ ನನ್ನ ಸಮಾಧಿ ನನ್ನ ನಾಡಿನಲ್ಲೇ ಆಗಬೇಕೆಂದು ಹೇಳಿದನು ಆಗ ಯುದ್ಧವನ್ನು ನಿಲ್ಲಿಸಿ ತನ್ನ ಊರಿಗೆ ಮರಳಿದರು ಆಗ ಅಲೆಗ್ಸಾಂಡರ್ ತನ್ನ ಕೊನೆಯ ಇಚ್ಛೆಯನ್ನು ವ್ಯಕ್ತಪಡಿಸಿದ್ದ.
ನನ್ನ ಶವಯಾತ್ರೆಯ ಮೆರವಣಿಗೆಯಲ್ಲಿ 1) ವೈದ್ಯ 2) ಜ್ಯೋತಿಷಿ 3) ಮುಖ್ಯ ಸೇನಾಧಿಪತಿ ಈ ಮೂರು ಜನರು ನನ್ನ ಜೊತೆಯಲ್ಲೇ ಇದ್ದರು ನಾನು ಮಾತ್ರ ಸಾಯುತ್ತಿದ್ದೇನೆ ಎಂದು ಎಲ್ಲರಿಗೂ ತಿಳಿಯಬೇಕು ಎಂದನು.
ವೈದ್ಯರಾದವರು ನನ್ನ ಆರೋಗ್ಯದ ಬಗ್ಗೆ ಜವಾಬ್ದಾರಿಯನ್ನು ಹೊತ್ತು ನೂರಾರು ವರ್ಷ ಬಾಳುತ್ತೀರಿ ಎಂದು ಕೆಲವು ಎಲೆಗಳು ಕೆಲವು ಔಷಧಿಗಳನ್ನು ಸೇವಿಸಿ ಎಂದು ಹೇಳಿದರು ಆದರೂ ಇವತ್ತು ನನ್ನನ್ನು ಉಳಿಸಲಿಕೆ ಸಾಧ್ಯವಾಗಲಿಲ್ಲ.
ಜ್ಯೋತಿಷ್ಯಿಯವರು ನಿನ್ನ ಎಲ್ಲಾ ಗ್ರಹ ಗತಿಗಳು ಚೆನ್ನಾಗಿವೆ ನಿಮ್ಮ ಜಾತಕ ಒಳ್ಳೆಯದು ನಿಮಗೆ ಆಯುಸ್ಸು ಜಾಸ್ತಿ ಇದೆ ನೂರಾರು ವರ್ಷ ಬಾಳುತ್ತೀರಿ ಎಂದು ಹೇಳಿ ಕೆಲವು ಪೂಜೆ, ಪ್ರಾರ್ಥನೆ, ಹೋಮಗಳನ್ನು ಮಾಡಿಸಿದರು ಆದರೆ ನನ್ನ ಆಯಸ್ಸು ತಡೆಯುವ ಶಕ್ತಿ ಜ್ಯೋತಿಷಿ ಅವರಿಗೆ ಇಲ್ಲ.
ಮುಖ್ಯ ಸೇನಾಧಿಪತಿ ನನ್ನ ರಕ್ಷಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು ಯಾವ ಶತ್ರುವು ಹೊರಗಡೆಯಿಂದ ಬಂದರೆ ನಾನು ನಿಮ್ಮನ್ನು ಕಾಪಾಡುತ್ತಾನೆ ಎಂಬ ನಂಬಿಕೆ ಮೂಡಿಸಿದ್ದರು ಆದರೆ ಈವತ್ತು ನನಗೆ ಸಾವು ಸಹಜವಾಗಿ ಬರುತ್ತಿದೆ ಇದನ್ನು ತಡೆಯುವ ಶಕ್ತಿ ನನ್ನ ಸೇನಾಧಿಪತಿಗೆ ಇಲ್ಲ ಎಂದನು.
ಇವನ ಕೊನೆ ಆಸೆಯೂ ಪೂರೈಸಿತು ಮತ್ತೆ ಎರಡೂ ಕೈಗಳು ಕಾಣುವಂತೆ ಇರಬೇಕು ಎಂದಿದ್ದನು ಇದರ ಅರ್ಥ ಬಂದಾಗಲೂ ಖಾಲಿ ಕೈ ಹೋಗಬೇಕಾದರೂ ಖಾಲಿ ಕೈ ಪ್ರಪಂಚದಿಂದ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ನೀಡಿದನು.