ನಿನ್ನ ಸೇವೆ ಅಮೂಲ್ಯವಾದದ್ದು

ಹೊಸದಾಗಿ ಮದುವೆಯಾದ ಜಗಪಾಲ್ ಪತಿ ದಮತಿ ಪತ್ನಿ ಇಬ್ಬರು ಹೊಂದಾಣಿಕೆ ಮಾಡಿಕೊಂಡು ಬದುಕುತ್ತಿರುತ್ತಾರೆ ಸ್ವಲ್ಪ ಕಾಲ ಕಳೆದಂತೆ ಸಮಸ್ಯೆಗಳು ಬರುತ್ತವೆ ಆಗ ಪತಿ ಪತ್ನಿ ಇಬ್ಬರು ಕುಳಿತುಕೊಂಡು ಪರಸ್ಪರ ಮಾತನಾಡಿಕೊಳ್ಳುತ್ತಾರೆ ಪತ್ನಿ ಹೇಳುತ್ತಾಳೆ ನಿಮಗೆ ಸಾಕಷ್ಟು ಹೇಳಬೇಕು ಆದರೆ ಹೇಳುವುದಕ್ಕೆ ಸಾಧ್ಯವಾಗುತ್ತಿಲ್ಲ.

 ನಾಳೆಯೇ ಹೊಸ ವರ್ಷ ಅದಕ್ಕೆ ಇಬ್ಬರು ಎರಡು ಡೈರಿಗಳನ್ನು ಖರೀದಿ ಮಾಡೋಣ ನಂತರ ಅದರಲ್ಲಿ ದಿನನಿತ್ಯ ಮನಸ್ಸಿನಲ್ಲಿರುವ ಭಾವನೆಗಳನ್ನು ಬರೆಯೋಣ ಒಂದು ವರ್ಷವಾದ ನಂತರ ಒಟ್ಟಾಗಿ ಕುಳಿತುಕೊಂಡು ಓದೋಣ ಎಂದು ಪತ್ನಿ ಹೇಳುತ್ತಾಳೆ.

 ಮನಸ್ಸಿನಲ್ಲಿ ಅಡಗಿರುವ ಮಾತುಗಳನ್ನು ಹಂಚಿಕೊಳ್ಳೋಣ ಎಂದು ಪತಿಯಾದವನು ಎರಡು ಡೈರಿಗಳನ್ನು ಬರೆಯಲು ಶುರು ಮಾಡುತ್ತಾರೆ ಮಾತು ಮಾತಿನಲ್ಲಿಯೇ ಒಂದು ವರ್ಷ ಕಳೆದು ಹೋಗುತ್ತದೆ ನಂತರ ಇಬ್ಬರು ಡೈರಿಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ ಮೊದಲು ಪತ್ನಿಯ ಡೈರಿಯನ್ನು ಓದಲು ಪ್ರಾರಂಭಿಸುತ್ತಾನೆ.

  ಮೊದಲನೇ ಪುಟದಲ್ಲಿ ಇಂದು ಹೊಸ ವರ್ಷ ನನಗಾಗಿ ಉಡುಗೊರೆ ತರಲಿಲ್ಲ ಎರಡನೇ ಪುಟದಲ್ಲಿ ನನಗೆ ಹೂವು ತಂದು ಕೊಡಲಿಲ್ಲ ನಂತರದ ಪುಟಗಳಲ್ಲಿ ನನಗೆ ಹೋಟೆಲ್ ಗೆ ಕರೆದುಕೊಂಡು ಹೋಗಲಿಲ್ಲ ಸಿನಿಮಾಗೆ ಕರೆದುಕೊಂಡು ಹೋಗಲಿಲ್ಲ ನನಗೆ ಬಟ್ಟೆ ಕೊಡಿಸಲಿಲ್ಲ ನನ್ನ ತವರು ಮನೆಗೆ ಕಳಿಸಲಿಲ್ಲ ನನ್ನ ಸಂಬಂಧಿಕರು ಬಂದಾಗ ಅಷ್ಟಾಗಿ ಮಾತನಾಡಲಿಲ್ಲ.

 ನನಗೆ ಆಯಾಸವಾಗಿದೆ ಎಂದು ಮಲಗಿ ಬಿಟ್ಟಿರಿ ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತೇನೆ ಎಂದು ಕರೆದುಕೊಂಡು ಹೋಗಲಿಲ್ಲ ನಾನು ನಿಮಗೆ ಚಿಕ್ಕ ಚಿಕ್ಕದನ್ನೇ ಕೇಳಿದ್ದೇನೆ ಅದನ್ನು ಕೂಡ ನೀವು ಮಾಡಿಲ್ಲ ಹೀಗೆ ಇನ್ನು ಹಲವಾರು ದೂರುಗಳು ಬರೆದಿದ್ದಳು ಇದನ್ನು ಓದಿದ ಪತಿಗೆ ಬೇಸರವಾಯಿತು.

ಪತಿ ದೈನ್ಯದಿಂದ ಹೇಳಿದನು ನಾನು ನಿನ್ನ ಆಸೆಗಳು ಪೂರೈಸಬೇಕು ಎಂದು ಇದ್ದೆ ಆದರೆ ಕೆಲಸದ ಒತ್ತಡದಿಂದ ನನಗೆ ಸಮಯ ಸಿಗಲಿಲ್ಲ ಮತ್ತೆ ಇಷ್ಟು ತಪ್ಪುಗಳು ಮಾಡಿದ್ದೇನೆ ಎಂದು ನನಗೆ ಈಗ ಅರ್ಥವಾಗಿದೆ ಮುಂದೆ ಸಾಧ್ಯವಾದಷ್ಟು ನಾನು ನಿನ್ನ ಕೂರಿಕೆಗಳನ್ನು ಈಡೇರಿಸುತ್ತೇನೆ ಸಾಧ್ಯವಾದಷ್ಟು ತಪ್ಪುಗಳು ಆಗದಂತೆ ಪ್ರಯತ್ನಿಸುತ್ತೇನೆ ದಯವಿಟ್ಟು ನನ್ನನ್ನು ಕ್ಷಮಿಸು ಎಂದು ಕೇಳುತ್ತಾನೆ.

  ನಂತರ ಪತಿ ಬರೆದ ಡೈರಿಯನ್ನು ಪತ್ನಿ ಓದುತ್ತಾಳೆ ಮೊದಲನೇ ಪುಟದಲ್ಲಿ ಏನು ಬರೆದಿಲ್ಲ ಎರಡನೆಯ ಪುಟದಲ್ಲೂ ಏನು ಬರೆದಿಲ್ಲ ಹಾಗೆ ಪುಟಗಳು ತಿರುವಿದರೆ ಏನೂ ಬರೆದಿಲ್ಲ ಆಗ ಪತ್ನಿಯು ತುಂಬಾ ಕೋಪದಿಂದ ಕೆಂಡವಾಗುತ್ತಾಳೆ ಮತ್ತೆ ಹೇಳುತ್ತಾಳೆ.

ತಕ್ಷಣ ಚಿಕ್ಕ ಆಸೆಯನ್ನು ಕೂಡ ನೀವು ಪೂರೈಸಿಲ್ಲ ಎಂದು ಬೇಸರ ಪಟ್ಟುಕೊಳ್ಳುತ್ತಾಳೆ ಆಗ ಪತಿಯಾದವನು ನಾನು ನನ್ನ ಮನಸ್ಸಿನಲ್ಲಿ ಇರುವುದನ್ನು ಬರೆಯಲು ಪ್ರಯತ್ನಿಸಿದೆ ಆದರೆ ಬರೆಯಲು ಸಾಧ್ಯವಾಗಲಿಲ್ಲ ಎಲ್ಲವನ್ನು ಕೊನೆಯ ಪುಟದಲ್ಲಿ ಬರೆದಿದ್ದೇನೆ ಎಂದು ಹೇಳುತ್ತಾನೆ.

 ಆಗ ಪತ್ನಿ ಕುತೂಹಲದಿಂದ ಕೊನೆಯ ಪುಟವನ್ನು ಓದಲಿಕ್ಕೆ ಶುರು ಮಾಡುತ್ತಾಳೆ ಮದುವೆಯಾದ ನಂತರದಿಂದ ನಿನ್ನ ತ್ಯಾಗ, ಪ್ರೀತಿ, ಸೇವೆ. ಅಮೂಲ್ಯವಾದದ್ದು ಎಲ್ಲರನ್ನೂ ತ್ಯಾಗ ಮಾಡಿ ನಮ್ಮ ಮನೆಗೆ ಬಂದು ನಮ್ಮೆಲ್ಲರನ್ನು ಪ್ರೀತಿಯಿಂದ ನೋಡಿಕೊಂಡಿದ್ದೀಯ.

 ಸಮಯಕ್ಕೆ ಏನು ಬೇಕು ಆ ಸೇವೆಯಲ್ಲ ನನಗೆ ನಮ್ಮ ಮನೆಯವರಿಗೆ ಮಾಡಿದ್ದೀಯಾ ಇದರ ಮುಂದೆ ನೀನು ಏನೇ ತಪ್ಪು ಮಾಡಿದರೂ ಅವು ಚಿಕ್ಕದೇ ಎಂದು ನನಗೆ ಅನಿಸಿದೆ ಎಂದು ಬರೆದಿದ್ದನು ನಂತರ ಪತ್ನಿ ತನ್ನ ತಪ್ಪುಗಳನ್ನು ಅರಿತುಕೊಂಡು ನಂತರ ಪತಿಗೆ ಹೇಳುತ್ತಾಳೆ.

 ನಾನು ಬಹಳಷ್ಟು ನಿಮ್ಮ ತಪ್ಪುಗಳನ್ನೇ ಕಂಡು ಹಿಡಿದಿದ್ದೇನೆ ನೀವು ನನಗೆ ಆಸರೆಯಾಗಿ ಇದ್ದೀರಿ ನನ್ನನ್ನು ಇಷ್ಟೊಂದು ಪ್ರೀತಿಸುತಿದ್ದೀರಿ ಇದು ನಾನು ಅರ್ಥಮಾಡಿಕೊಳ್ಳಲೇ ಇಲ್ಲ ದಯವಿಟ್ಟು ಕ್ಷಮಿಸಿ ಎಂದು ಎರಡು ಡೈರಿಗಳನ್ನು   ಬೆಂಕಿಗೆ ಹಾಕುತ್ತಾರೆ ನಂತರ ಇಬ್ಬರು ಪರಸ್ಪರ ಅರ್ಥಮಾಡಿಕೊಂಡು ಬದುಕುತ್ತಾರೆ. ನನ್ನ ತಪ್ಪು ನಾನು ಅರ್ಥಮಾಡಿಕೊಂಡಿದ್ದೇನೆಯೇ?

ಏನೋ ಮೋಸ ಇದೆ

ಕುಡುಕರ ಒಂದು ಗುಂಪಿನಲ್ಲಿ4 ಜನರು ಇರುತ್ತಾರೆ ಇವರ ಕೆಲಸ ಬೆಳಿಗ್ಗೆ ಬೀದಿ ಬೀದಿ ಅಲೆಯುವುದು ಏನಾದರೊಂದು ಕೆಲಸ ಮಾಡಿಕೊಂಡು ಬಂದ ಹಣದಿಂದ ಕುಡಿಯುವುದು  ಇವರ ನಿತ್ಯ ಜೀವನವಾಗಿತ್ತು.

ಒಂದು ಸಾರಿ ಕುಡಿಯಲಿಕ್ಕೆ ದುಡ್ಡು ಇರಲಿಲ್ಲ ಆಗ ಇವರ ಗುಂಪು ಯೋಚನೆ ಮಾಡಿತ್ತು ಏನಾದರೂ ಮಾಡಿ ಇವತ್ತು ನಾವು ಕುಡಿಯಬೇಕಲ್ಲಾ ಎಂದು ಯೋಚಿಸಿದರು ಅದಕ್ಕೆ ಮೊದಲು ಹಣ ಬೇಕು ಏನು ಮಾಡುವುದು ಎಂದು ಚಿಂತಿಸಿದರು.

 ಏನಾದರೂ ಮಾಡಿ ಯಾರನ್ನಾದರೂ ನಾವು ಮೋಸ ಮಾಡಬೇಕು ಎಂದು ಸ್ವಲ್ಪ ಮದ್ಯವನ್ನು ತೆಗೆದುಕೊಂಡು ಅದರಲ್ಲಿ ನಿದ್ದೆ ಬರುವಂತಹ ಔಷಧಿಯನ್ನು ಬೆರೆಸಿ ಯಾರಿಗಾದರೂ ಕುಡಿಸಿ ಬಿಟ್ಟರೆ ಸ್ವಲ್ಪ ಸಮಯದಲ್ಲಿಯೇ ಮಲಗಿ ಬಿಡುತ್ತಾರೆ.

ಮಲಗಿದ ವ್ಯಕ್ತಿಯ ಬಳಿ ಇರುವುದನ್ನೆಲ್ಲ ದೋಚಬಹುದು ಎಂದು ಪ್ಲಾನ್ ಹಾಕಿಕೊಳ್ಳುತ್ತಾರೆ ಮಧ್ಯದಲ್ಲಿ ನಿದ್ದೆಯ ಔಷಧಿಯನ್ನು ಬೆರೆಸಿ ಇಟ್ಟಿರುತ್ತಾರೆ ಅದೇ ದಾರಿಯಲ್ಲಿ ಒಬ್ಬ ಬುದ್ಧಿವಂತ ವ್ಯಾಪಾರಿ ಬರುತ್ತಿರುತ್ತಾನೆ ಬುದ್ಧಿವಂತ ವ್ಯಾಪಾರಿಗೆ  4 ಜನರು ಹೇಳುತ್ತಾರೆ ಬನ್ನಿ ಸ್ವಾಮಿ ದಯಮಾಡಿ ಮದ್ಯವನ್ನು ಕುಡಿಯಿರಿ ಅದು ಉಚಿತವಾಗಿ ಎಂದು ಹೇಳುತ್ತಾರೆ.

  ಆ ವ್ಯಾಪಾರಿಗೆ ಸ್ವಲ್ಪ ಅನುಮಾನ ಬರುತ್ತದೆ ಉಚಿತವಾಗಿ ಇಷ್ಟೊಂದು ಗೌರವಯುತವಾಗಿ ಕೊಡುತ್ತಿದ್ದಾರೆಂದರೆ ಏನೋ ಮೋಸ ಇರಬೇಕು ಎಂದು ಅರಿತು ತಕ್ಷಣ ಹೇಳುತ್ತಾನೆ ನಾನು ಊರಿನ ಶ್ರೀಮಂತರನ್ನು ಭೇಟಿಯಾಗಲು ಹೋಗುತ್ತಿದ್ದೇನೆ ಶ್ರೀಮಂತರು ನನಗೆ ಹಣ ನೀಡಬೇಕಾಗಿದೆ.

ಶ್ರೀಮಂತರನ್ನು ಭೇಟಿಯಾಗಿ ಬಂದು ನಾನು ಖಂಡಿತವಾಗಿ ಕುಡಿಯುತ್ತೇನೆ ಉಚಿತವಾಗಿ ಕೊಡ್ತಿದ್ದೀರಲ್ಲ ಎಂದು ಉತ್ಸಾಹದಿಂದ ಹೇಳಿ ಹೋಗುತ್ತಾನೆ ವ್ಯಾಪಾರಿಯು ಸ್ವಲ್ಪ ತಡವಾಗಿ ಬರ್ತಾನೆ ಬರುವವರೆಗೆ ಕಾದು ಕಾದು ನಿರಾಶರಾಗಿರುತ್ತಾರೆ ಮತ್ತೆ ಆ ವ್ಯಾಪಾರಿಯು ಬಂದು ನೋಡುತ್ತಾನೆ.

 ತನಗೆ ಇಟ್ಟಿದ್ದ ಗ್ಲಾಸಿನಲ್ಲಿ ಆ ಮದ್ಯ ಹಾಗೇ ಇರುತ್ತದೆ ಇದನ್ನು ನೋಡಿ ಹೇಳುತ್ತಾನೆ ನೀವು ನನಗೆ ಮೋಸ ಮಾಡುವುದಕ್ಕೆ ಸಂಚು ಮಾಡಿಕೊಂಡಿದ್ದೀರಿ ಎಂದು ಅನಿಸುತ್ತದೆ ಏಕೆಂದರೆ ಆಗ ಕ್ಲಾಸಿನಲ್ಲಿರುವ ಮದ್ಯ ಇಲ್ಲಿವರೆಗೂ ಹೀಗೆ ಇದೆಯೆಂದರೆ ಏನೋ ಮೋಸ ಇದೆಯೆಂದು ಹೇಳಿ ಹೊರಟುಹೋಗುತ್ತಾನೆ.

ನೀವೇ ಸೊಸೆಯನ್ನು ಹುಡುಕಿ

ಒಂದು ಮನೆಯಲ್ಲಿ ತಂದೆ-ಮಗ ಇಬ್ಬರೇ ಇರುತ್ತಾರೆ ತಾಯಿ ಯಾವುದೋ ಅಕಾಲ ಮೃತ್ಯುವಿಗೆ ತುತ್ತಾಗುತ್ತಾರೆ ಆದರೆ ತಂದೆಯಾದವರು ಬೇರೆ ಮದುವೆ ಮಾಡಿಕೊಳ್ಳುವುದಿಲ್ಲ ನನ್ನ ಮಗನೇ ಆಸ್ತಿಯೆಂದು ಅಪ್ಪ ಮಗನಿಗೆ ಚೆನ್ನಾಗಿ ಸಾಕಿ ಒಳ್ಳೆಯ ವಿದ್ಯಾವಂತನಾಗಿ ಬೆಳೆಸುತ್ತಾರೆ.

 ಓದಿದ ನಂತರ ನಂತರ ಒಳ್ಳೆಯ ಉದ್ಯೋಗ ಸಿಗುತ್ತದೆ ಮಗನಾದವನ್ನು ಮದುವೆ ಆಗಬೇಕು ಎಂದು ಕೇಳುವುದೇ ಇಲ್ಲ ಅದಕ್ಕಾಗಿ ತಂದೆಯವರು ಮಗನಿಗೆ ಹೇಳುತ್ತಾರೆ ನಾವು ದಿನನಿತ್ಯ ಇಬ್ಬರು ಅಡಿಗೆ ಮಾಡಿಕೊಳ್ಳಬೇಕು ಆದುದರಿಂದ ನೀನು ಮದುವೆ ಮಾಡಿಕೊಂಡರೆ ಈ ಕೆಲಸ ತಪ್ಪಿಸಬಹುದು ಎಂದು ಪ್ರೀತಿಯಾಗಿ ಹೇಳುತ್ತಾರೆ.

ಕಿಲಾಡಿ ಮಗನಾದವನ್ನು ಅಪ್ಪ ಇಲ್ಲಿಯವರೆಗೂ ನಾವು ಚೆನ್ನಾಗಿ ಬದುಕಿದ್ದೇವೆ ಮನೆಗೆ ಸೊಸೆ ಬಂದರೆ ನಮ್ಮ ಮನೆ ಏನಾಗುತ್ತದೆ ಗೊತ್ತಿಲ್ಲ ಆದುದರಿಂದ ನಾನು ಮದುವೆ ಆಗಲೇಬೇಕು ಎಂದರೆ ನೀವೇ ಸೊಸೆಯನ್ನು ಹುಡುಕಿ ಅವಳನ್ನು ನಾನು ಮದುವೆಯಾಗುತ್ತೇನೆ ಎಂದು ನೇರವಾಗಿ ಹೇಳಿ ಮಗ ಬಚಾವ್ ಆಗಿಬಿಡುತ್ತಾನೆ ತಂದೆ ಪೇಚಾಟದಲ್ಲಿ ಸಿಲುಕುತ್ತಾರೆ.

 ಯಾವ ರೀತಿ ಹೆಣ್ಣಿಗೆ ಹುಡುಕುವುದು ಎಂದು ಯೋಚಿಸುತ್ತಾರೆ ನಂತರ ತಂದೆಯವರಿಗೆ ಒಂದು ಉಪಾಯ ಹೊಳೆಯುತ್ತದೆ  ಅದಕ್ಕೆ ತಂದೆಯಾದವರು ಒಂದು ಎತ್ತಿನ ಗಾಡಿಯನ್ನು ತೆಗೆದುಕೊಂಡು ಅರ್ಧಗಾಡಿಯಲ್ಲಿ ಸೇಬುಗಳನ್ನು ಹಾಕಿಕೊಂಡು ಮತ್ತೆ ಅರ್ಧ ಖಾಲಿ ಬಿಟ್ಟು ಒಂದು ಹಳ್ಳಿಗೆ ಹೋಗುತ್ತಾರೆ.

ಹಳ್ಳಿಯಲ್ಲಿ ಹೀಗೆ ಹೇಳುತ್ತಾರೆ ನಿಮ್ಮ ಮನೆಯಲ್ಲಿ ಇರುವ ಕಸವನ್ನು ತಂದು ನನ್ನ ಗಾಡಿಯಲ್ಲಿ ಇರುವ ಹಣ್ಣುಗಳನ್ನು ತೆಗೆದುಕೊಂಡು ಹೋಗಬಹುದು ಇದನ್ನು ಕೇಳಿದ ಹಳ್ಳಿಯವರು ಇವನು ಹುಚ್ಚನೇ ಇರಬೇಕು ಎಂದು ಯೋಚಿಸುತ್ತಾರೆ ಏನಾದರೂ ಆಗಲಿ ಕಸ ಕೊಟ್ಟು ಹಣ್ಣು ತೆಗೆದುಕೊಳ್ಳಬಹುದು ಎಂದು ಹೆಂಗಸರು ಗೃಹಿಣಿಯರು ಅಜ್ಜಿಯರು ಎಲ್ಲರೂ ಕಸ ಕೊಟ್ಟು ಹಣ್ಣನ್ನು ತೆಗೆದುಕೊಂಡು ಹೋಗುತ್ತಾರೆ.

 ಹೀಗೆ ಎರಡು ಹಳ್ಳಿಗೆ ಹೋಗುತ್ತಾರೆ ಆದರೂ ಇವರು ಯೋಚಿಸಿದ್ದು ಯಾವುದೇ ಯೋಜನೆ ಫಲಿಸುವುದಿಲ್ಲ ನಂತರ ಬೇರೆ ಒಂದು ಹಳ್ಳಿಗೆ ಹೋಗಿ ಕಸ ನೀಡಿ ಹಣ್ಣು ತೆಗೆದುಕೊಂಡು ಹೋಗಿ ಎಂದು ಅಲ್ಲಿಯೂ ಹೇಳುತ್ತಾರೆ ಕೆಲವರು ಬಂದು ತೆಗೆದುಕೊಂಡು ಹೋಗುತ್ತಾರೆ ನಂತರ ಒಂದು ಹೆಣ್ಣು ಹುಡುಗಿ ಸ್ವಲ್ಪಮಾತ್ರ ಕಸ ತೆಗೆದುಕೊಂಡು ಬಂದು ನಾಚಿಕೆ, ಹೆದರಿಕೆಯಿಂದ ಕೇಳುತ್ತಾಳೆ.

 ನಮ್ಮ ಮನೆಯಲ್ಲಿ ಕಸ ಇಲ್ಲ ಪಕ್ಕದ ಮನೆಯಲ್ಲಿ ಇದ್ದ ಸ್ವಲ್ಪ ಕಸವನ್ನು ಅಜ್ಜಿ ಕೊಟ್ಟು ನನಗೆ ಇದರಲ್ಲಿ ಎಷ್ಟು ಹಣ್ಣು ಬರುತ್ತದೆ ಅಷ್ಟು ಹಣ್ಣು ಪಡೆದುಕೊಂಡು ಬಾ ಎಂದು ಬಲವಂತದಿಂದ ಕಳುಹಿಸಿದ್ದಾರೆ ಆದುದರಿಂದ ಇದಕ್ಕೆ ಎಷ್ಟು ಹಣ್ಣು ಬರುತ್ತದೆ ಅಷ್ಟನ್ನು ಮಾತ್ರ ಕೊಡಿ ಎಂದು ವಿನಮ್ರವಾಗಿ ಕೇಳುತ್ತಾಳೆ.

 ಈ ವ್ಯಕ್ತಿಗೆ ನಾನು ಹುಡುಕುತ್ತಿದ್ದ ಹೆಣ್ಣು ಇದೆ ಎಂದು ಹೆಣ್ಣಿನ ತಂದೆ ಯಾರು ಎಂದು ಎಲ್ಲಾ ವಿಷಯವನ್ನು ಯುವತಿಯಿಂದ ಕೇಳಿಕೊಂಡು ನಂತರ ಯುವತಿ ತಂದೆಯವರಿಗೆ ಹೋಗಿ ಮಾತನಾಡುತ್ತಾರೆ ಆಗ ಹುಡುಗಿಯ ತಂದೆ ಒಪ್ಪುತ್ತಾರೆ.

 ಮತ್ತೆ ಮಗಳಿಗೆ ಒಂದು ಸಾರಿ ನೀನು ಮದುವೆಗೆ ಒಪ್ಪಿಗೆ ಇದೆಯಾ ಎಂದು ಕೇಳಿದಾಗ ಯುವತಿಯು ಅಪ್ಪ ಹೇಳಿದಂತೆ ಆಗಲಿ ಎಂದು ಹೇಳುತ್ತಾಳೆ ನಂತರ ಮದುವೆಯಾಗುತ್ತದೆ ತಂದೆ ಮಗನಿಗೆ ಒಳ್ಳೆಯ ಸಂಸ್ಕಾರ ಕಲಿಸಿದ್ದಾರೆ ಹಾಗೆ ಮಗಳಿಗೆ ತಂದೆಯವರು ಒಳ್ಳೆಯ ಸಂಸ್ಕಾರವನ್ನು ನೀಡಿದ್ದಾರೆ . ಹಾಗೆಯೇ ಮಕ್ಕಳು ಕೂಡ ತಮ್ಮ ಹೆತ್ತವರನ್ನು ಅಷ್ಟೇ ಗೌರವಿಸುತ್ತಿದ್ದಾರೆ. ನನ್ನ ಪೋಷಕರೊಂದಿಗೆ ನಾನು ಹೇಗೆ ವರ್ತಿಸಿದ್ದೇನೆ?

ಇದೆ ನನ್ನ ಮನೆ

ಒಂದು ಸಾರಿ ಒಬ್ಬ ಖದೀಮ ಕಳ್ಳ ಬಂದು ಬೀದಿಯ ಮೊದಲನೇ ಮನೆಯಲ್ಲಿ ನುಗ್ಗಿ ಬಹಳಷ್ಟು ವಸ್ತುಗಳನ್ನು ಕಳ್ಳತನ ಮಾಡಿಕೊಳ್ಳುತ್ತಾನೆ ಇದನ್ನು ಮನೆಯವನು ನೋಡುತ್ತಾನೆ ಮಾರನೆಯ ದಿನ ಮನೆಯವನು ಕಳ್ಳನ ಮನೆಗೆ ಹೋಗಿ ಮನೆಯ ಮುಂದೆ ಆರಾಮಾಗಿ ಕುರ್ಚಿಯಲ್ಲಿ ಕುಳಿತುಕೊಂಡಿರುತ್ತಾನೆ.

 ಕಳ್ಳ ಬಂದವನು ಗಾಬರಿಯಾಗುತ್ತಾನೆ ನನ್ನ ಮನೆಯ ಮುಂದೆ ಕುಳಿತಿದ್ದಿಯಲ್ಲ ಯಾರು ನೀನು ಎಂದಾಗ ಮನೆಯವನು ಸಮಾಧಾನವಾಗಿ ಹೇಳುತ್ತಾನೆ.

 ಮಿತ್ರ ನೆನ್ನೆ ತಾನೆ ಮನೆಯನ್ನು ಬದಲಾವಣೆ ಮಾಡಿಕೊಂಡಿದ್ದೇವೆ ಇದು ನನ್ನ ಮನೆ ಅದು ನಿನ್ನ ಮನೆ ಆಗ ಕಳ್ಳ ಅರ್ಥಮಾಡಿಕೊಳ್ಳುತ್ತಾನೆ ಇವನು ನನಗಿಂತ ಬುದ್ಧಿವಂತನಾಗಿದ್ದಾನೆ ಎಂದು ತಾನು ಕದ್ದಿರುವ ಎಲ್ಲಾ ವಸ್ತುಗಳನ್ನು ಮತ್ತೆ ಅವನ ಮನೆಗೆ ತಲುಪಿಸುತ್ತಾನೆ.

ಕಷ್ಟದಲ್ಲಿ ಇರುವವರು ನಮ್ಮವರು

ಕಾಂಜಲ್ ಶ್ರೀಮಂತ ಹಣ್ಣು ಮಾರುವವನ ಅಂಗಡಿಗೆ ಹೋಗುತ್ತಾನೆ ಹಣ್ಣಿನ ವ್ಯಾಪಾರಿಗೆ ಹೇಳುತ್ತಾನೆ ನಾಳೆ ನನಗೆ 50 ಸೇಬು 50 ಬಾಳೆಹಣ್ಣು 50 ಕಿತ್ತಳೆ ಹಣ್ಣು 5 ಕೆಜಿ ದ್ರಾಕ್ಷಿ ಇವೆಲ್ಲವೂ ನನಗೆ ನಾಳೆ ಬೇಕು ನಮ್ಮ ಮನೆಯಲ್ಲಿ ಶ್ರೀಮಂತರಿಗೆ ಊಟದ ಔತಣವನ್ನು ನೀಡಬೇಕೆಂದು ಯೋಚಿಸಿದ್ದೇನೆ ಅದಕ್ಕಾಗಿ ನೀವು ಈಗಲೇ ಹಣವನ್ನು ಮುಂಗಡವಾಗಿ ತೆಗೆದುಕೊಳ್ಳಿ ಎಂದು ಹೇಳುತ್ತಾನೆ.

ಹಣ್ಣು ಮಾರುವ ವ್ಯಾಪಾರಿಯೂ ನಿಮ್ಮ ಹಣವನ್ನು ಮುಂದೆ ಒಬ್ಬರು ವಯಸ್ಸಾದ ವ್ಯಕ್ತಿ ಬಹಳ ಹೊತ್ತಿನಿಂದ ಅಲ್ಲಿ ಕುಳಿತಿದ್ದಾರೆ ಅವರಿಗೆ ನೋಡಿದರೆ ಅನಿಸುತ್ತದೆ ಏನೋ ಕಷ್ಟ ಇರಬೇಕು ಆದ್ದರಿಂದ ಆ ಹಣವನ್ನು ಅವರಿಗೆ ಕೊಡಿ ನಾಳೆ ಬಂದು ನಿಮಗೆ ಏನು ಬೇಕೋ ಅದನ್ನು ಪಡೆದುಕೊಂಡು ಹೋಗಿ ಎಂದು ಹೇಳುತ್ತಾನೆ.

 ಈ ಮಾತನ್ನು ಕೇಳಿದ ಶ್ರೀಮಂತನಿಗೆ ಆಶ್ಚರ್ಯವಾಗುತ್ತದೆ ತಕ್ಷಣ ಶ್ರೀಮಂತನು ಕೇಳುತ್ತಾನೆ ಅಲ್ಲಿ ಕೂತಿರುವ ವ್ಯಕ್ತಿ ನಿಮ್ಮ ಕಡೆಯವರೇ ಎಂದಾಗ ಹಣ್ಣಿನ ವ್ಯಾಪಾರಿ ಹೇಳುತ್ತಾನೆ ಕಷ್ಟದಲ್ಲಿ ಇರುವವರು ನಮ್ಮವರು ಏಕೆಂದರೆ ಕಷ್ಟದಲ್ಲಿ ಇರುವವರು ಹಸಿದಿರುವವರು ನಮಗೆ ತುಂಬಾ ಬೇಗನೆ ಅರ್ಥವಾಗುತ್ತದೆ.

ಶ್ರೀಮಂತನು ಆ ಹಣವನ್ನು ಆ ವ್ಯಕ್ತಿಗೆ ಕೊಡಲು ಹೋಗಬೇಕಾದಾಗ ಯೋಚನೆ ಮಾಡುತ್ತಾನೆ ಈಗ ನಾನು ನೀಡುತ್ತಿರುವುದು ಆ ವ್ಯಾಪಾರಿಯ ಹಣ ಒಬ್ಬ ಸಾಮಾನ್ಯ ವ್ಯಾಪಾರಿ ಇಷ್ಟು ದಯೆ ತೋರುತ್ತಿದ್ದಾನೆ  ಎಂದರೆ ನಾನು ಏಕೆ ಇದೇ ರೀತಿ ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಬಾರದು ಎಂದು ಜ್ಞಾನೋದಯವಾಗುತ್ತದೆ.

 ಶ್ರೀಮಂತರಿಗೆ ನೀಡುವ ಔತಣದ ಬದಲು ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುತ್ತಾನೆ ಯಾರಿಗೆ ಯಾವಾಗ ಜ್ಞಾನೋದಯವಾಗುತ್ತದೆ ತಿಳಿಯದು. ಅವಶ್ಯಕತೆ ಇರುವವರಿಗೆ ಸಹಾಯ ಮಾಡೋಣ.

Leave a Comment