ಕಾಡಿನಲ್ಲಿ ಒಂದು ಹುಲಿ ಆಹಾರ ಹುಡುಕುತ್ತಾ ಬರುತ್ತಿರುತ್ತದೆ ಅದೇ ಸಮಯಕ್ಕೆ ಒಂದು ಸಿಂಹ ಕೂಡ ಆ ಕಡೆಯಿಂದ ಬರುತ್ತಿರುತ್ತದೆ ನಂತರ ಹುಲಿ ನೀರು ಕುಡಿಯೋಣ ಎಂದು ಕೆರೆಯ ಬಳಿ ಹೋಗುತ್ತಿರುತ್ತದೆ ಅಲ್ಲಿ ಇಕ್ಕಟ್ಟಾದ ಜಾಗವಿದ್ದು ಒಂದು ಪ್ರಾಣಿ ಮಾತ್ರ ಹೋಗಬಹುದಾಗಿರುತ್ತದೆ.
ಮೊದಲಿಗೆ ಹುಲಿಯೇ ಎರಡು ಹೆಜ್ಜೆ ಮುಂದೆ ಬಂದಿರುತ್ತದೆ ಅಷ್ಟರಲ್ಲಿ ಸಿಂಹ ಬಂದು ನಾನು ಮೊದಲು ನೀರು ಕುಡಿಯುತ್ತೇನೆ ಎಂದು ಹೇಳುತ್ತದೆ ಹುಲಿ ನಾನು ಮೊದಲು ಬಂದಿದ್ದೇನೆ ನಾನು ನೀರನ್ನು ಕುಡಿಯುತ್ತೇನೆ.
ಆಮೇಲೆ ನೀನು ನೀರು ಕುಡಿ ಎಂದು ವಿನಯವಾಗಿ ಹೇಳುತ್ತದೆ ಸಿಂಹವು ನಾನು ಕಾಡಿನ ರಾಜ ನಾನೇ ಮೊದಲು ನೀರು ಕುಡಿಯಬೇಕು ಎಂದು ಗರ್ವದಿಂದ ಹೇಳುತ್ತದೆ ಹುಲಿ ಹೇಳುತ್ತದೆ ನೀನು ಕಾಡಿನ ರಾಜ ಆಗಿರಬಹುದು ಆದರೆ ಮೊದಲು ನಾನು ಬಂದಿದ್ದೇನೆ.
ನಿಯಮವನ್ನು ಪಾಲಿಸುವುದು ಎಲ್ಲಾ ಪ್ರಾಣಿಗಳ ಕರ್ತವ್ಯ ಎಂದು ಹುಲಿ ಹೇಳುತ್ತದೆ ಆದರೆ ಸಿಂಹವು ಒಪ್ಪುವುದಿಲ್ಲ ನಂತರ ಮಾತಿಗೆ ಮಾತು ಬೆಳೆದು ಹುಲಿ ಮತ್ತು ಸಿಂಹ ಎರಡು ಪ್ರಾಣಿಗಳಿಗೂ ಜಗಳವಾಗುತ್ತದೆ ಆಗ ಸಿಂಹಕ್ಕೆ ಮತ್ತೆ ಹುಲಿಗೆ ಸಾಕಷ್ಟು ಗಾಯಗಳಾಗುತ್ತದೆ.
ಓಡಾಡಲು ಶಕ್ತಿಯು ಇರುವುದಿಲ್ಲ ಅಷ್ಟರಮಟ್ಟಿಗೆ ಜಗಳ ಆಡಿ ಒಂದು ಕಡೆ ಕುಳಿತು ಬಿಡುತ್ತವೆ ನಂತರ ಹುಲಿ ಸಿಂಹ ಆ ಕಡೆ ಈ ಕಡೆ ನೋಡಿದಾಗ ರಣಹದ್ದುಗಳು ಯಾರಾದರೂ ಪ್ರಾಣಿಸತ್ತರೆ ತಿನ್ನೋಣ ಎಂದು ಕಾಯುತ್ತಿರುತ್ತವೆ ಆಗ ಹುಲಿ ಮತ್ತು ಸಿಂಹ ಮಾತನಾಡಿಕೊಳ್ಳುತ್ತವೆ.
ನಾವು ಸುಮ್ಮನೆ ವಿನಾಕಾರಣ ಜಗಳ ಆಡಿದೆವು ಮತ್ತೆ ಜಗಳ ಆಡಿದರೆ ನಿನಗೂ ಪ್ರಯೋಜನವಿಲ್ಲ ನನಗೂ ಪ್ರಯೋಜನವಿಲ್ಲ ಮುಂದೆ ರಣಹದ್ದುಗಳು ಕಾಯುತ್ತಿವೆ ಹಾಗಾಗಿ ನಾನು ನೀನು ಸ್ನೇಹಿತರಾಗಿರೋಣ ನೀನೆ ಮೊದಲು ಹೋಗಿ ನೀರು ಕುಡಿಯು ಎಂದು ಸಿಂಹ ಹೇಳುತ್ತದೆ.
ಹುಲಿ ನೀನೆ ಹೋಗಿ ನೀರು ಕೊಡಿ ಪರವಾಗಿಲ್ಲ ಎಂದು ಹೇಳುತ್ತದೆ ಇಬ್ಬರು ಪರಸ್ಪರ ಸ್ನೇಹಿತರಾಗಿ ಇಬ್ಬರು ನೀರು ಕುಡಿದು ಅಲ್ಲಿಂದ ಹೊರಟು ಹೋಗುತ್ತವೆ ಕಾರಣವಿಲ್ಲದೆ ಸುಮ್ಮನೆ ಜಗಳವಾಡಿಕೊಂಡು ನಷ್ಟ ಮಾಡಿಕೊಂಡಿದ್ದೇನೆಯೇ.
ಹುಡುಗ ಅಳುತ್ತಿದ್ದನು
ಒಂದು ಮನೆಯಲ್ಲಿ ರಾತ್ರಿಯಾದರೂ ಯಾರು ಮಲಗುತ್ತಿಲ್ಲ ಎಲ್ಲರೂ ಒಂದೇ ಸಮನೆ ಅಳುತ್ತಿದ್ದರೆ ಆದರೆ ಒಂದು ಚಿಕ್ಕ ಹುಡುಗನಿಗೆ ಮಾತ್ರ ಏನಾಗುತ್ತಿದೆ ಎಂದು ತಿಳಿಯುತ್ತಿಲ್ಲ ಇಷ್ಟು ಮಾತ್ರ ಗೊತ್ತು ತನ್ನ ತಂಗಿಗೆ ಹಾಸ್ಪಿಟಲ್ ಗೆ ಸೇರಿಸಿದ್ದಾರೆ ಕೊನೆಗೆ ಅಪ್ಪನಾದವನು ಹಾಸ್ಪಿಟಲ್ನಿಂದ ಬಂದನು.
ತಾಯಿ ಕೇಳಿದರು ಏನಾದರೂ ಆಯಿತೇ ಎಂದಾಗ ಅಪ್ಪನಾದವನು ಒಲ್ಲದ ಮನಸ್ಸಿನಿಂದ ಸಪ್ಪೆ ಮುಖ ಮಾಡಿಕೊಂಡು ಏನೂ ಇಲ್ಲ ವೈದ್ಯರು ಹೇಳಿದರೂ ಈ ಶಸ್ತ್ರ ಚಿಕಿತ್ಸೆ ಆಗಬೇಕಾದರೆ ಡಾಕ್ಟರ್ ಬಾಬಾ ಎಂಬುವವರಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ಏಕೆಂದರೆ ಇವರು ಹತ್ತು ಸಾವಿರ ರೂಪಾಯಿಯಲ್ಲಿ ಶಸ್ತ್ರಚಿಕಿತ್ಸೆ ಮಾಡುತ್ತಾರೆ ಬೇರೆ ಹಾಸ್ಪಿಟಲ್ ನಲ್ಲಿ ಕನಿಷ್ಠ 1ಲಕ್ಷ ರೂಪಾಯಿ ಆಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು ಆಗ ಮನೆಯವರು ನಾವು ಇರುವ ವಸ್ತುಗಳೆಲ್ಲವೂ ಮಾರಿಕೊಂಡರು ಮೂವತ್ತು ಸಾವಿರವು ಕೂಡಿಸಲು ಸಾಧ್ಯವಿಲ್ಲ ಅಂದುಕೊಂಡರು.
ಮಗುವಿನ ತಾಯಿ ಅಳುತ್ತಾ ಅಳುತ್ತಾ ಇದಕ್ಕೆ ಏನಾದರೂ ಪರಿಹಾರವಿದೆಯೇ ಎಂದು ಗಂಡನಿಗೆ ಕೇಳಿದಳು ಪವಾಡ ಏನಾದರೂ ನಡೆದರೆ ಮಗು ಬದುಕುತ್ತದೆ ಎಂದರು ಈ ಎಲ್ಲಾ ಮಾತುಗಳನ್ನು 7ವರ್ಷದ ರಾಜು ಎಂಬುವನು ಕೇಳಿಸಿಕೊಂಡನು ಆ ರಾತ್ರಿ ಯಾರೂ ನಿದ್ದೆ ಮಾಡಲಿಲ್ಲ ಮಾರನೆಯ ದಿನ ಆ ಚಿಕ್ಕ ಹುಡುಗ ತಾನು ಕೂಡಿಸಿದ್ದ ಡಬ್ಬದಲ್ಲಿ ನಾಣ್ಯಗಳನ್ನು ತೆಗೆದನು ಒಂದು ದೊಡ್ಡ ಚಿನ್ನದ ಅಂಗಡಿಗೆ ಹೋದನು.
ತನ್ನ ಜೇಬಿನಿಂದ ಎಲ್ಲಾ ನಾಣ್ಯಗಳನ್ನು ಜೋಡಿಸಿದನು ಈ ಎಲ್ಲಾ ನಾಣ್ಯಗಳನ್ನು ತೆಗೆದುಕೊಂಡು ನನಗೆ ಒಂದು ಪವಾಡ ಕೊಡಿ ಎಂದನು ಅಲ್ಲಿಯ ವ್ಯಾಪಾರಿಗೆ ಏನು ಎಂಬುದು ತಿಳಿಯಲಿಲ್ಲ ಹಾಗೆಯೇ ಚಿನ್ನದ ಅಂಗಡಿಯ ಮಾಲೀಕನು ಈ ಮಾತು ಕೇಳಿರಲೂ ಇಲ್ಲ ಆಗ ಆ ಮಗುವಿಗೆ ಪವಾಡ ಎಲ್ಲಿಯೂ ಸಿಗುವುದಿಲ್ಲ ಮತ್ತೆ ಅದು ಖರೀದಿ ಮಾಡಲು ಸಾಧ್ಯವಿಲ್ಲ ಎಂದನು.
ಪವಾಡದ ಅವಶ್ಯಕತೆ ನಿನಗೆ ಏಕೆ ಎಂದು ಮಾಲಿಕ ಕೇಳಿದ ಆಗ ರಾಜು ಆದವನು ವಿವರಣೆ ನೀಡಿದ ನನ್ನ ತಂಗಿ ಹಾಸ್ಪಿಟಲ್ ನಲ್ಲಿ ಅಡ್ಮಿಟ್ ಆಗಿದ್ದಾಳೆ ಅವಳಿಗೆ ಆಪರೇಷನ್ ಮಾಡಬೇಕಾದರೆ ಡಾಕ್ಟರ್ ಬಾಬಾ ಎಂಬುವವರು ಇದ್ದಾರೆ ಅವರು ಮಾತ್ರ ಕಡಿಮೆ ಬೆಲೆಗೆ ಆಪರೇಷನ್ ಮಾಡುತ್ತಾರೆ ಬೇರೆ ಹಾಸ್ಪಿಟಲ್ ಗೆ ಹೋದರೆ 1 ಲಕ್ಷ ಆಗಬಹುದಂತೆ ಎಂದು ಮುಗ್ಧವಾಗಿ ಹೇಳಿದನು.
ಹುಡುಗ ಅಳುತ್ತಿದ್ದನು ಈ ದೃಶ್ಯವನ್ನು ಹಲವಾರು ಜನರು ನೋಡಿದರೂ ನಂತರ ಒಬ್ಬ ಹಿರಿಯರು ಮಾತ್ರ ಬಾ ನಿನ್ನ ಮನೆ ನನಗೆ ತೋರಿಸು ಎಂದು ಹೇಳಿದರು ನಂತರ ಮನೆಯನ್ನು ತೋರಿಸಿದನು ನಂತರ ಆ ಮನೆಯವರನ್ನು ಮಾತನಾಡಿ ಮಗುವಿಗೆ ಹೇಳಿದರೂ ನೀನೇನೂ ಚಿಂತೆ ಮಾಡಬೇಡ ಪವಾಡ ಆಗುತ್ತದೆ ಎಂದು ಭರವಸೆ ನೀಡಿ ಹೊರಟರು.
ಆ ಹಿರಿಯ ವ್ಯಕ್ತಿ ಯಾರು ಎಂದರೆ ಡಾಕ್ಟರ್ ಬಾಬಾ ಅವರ ತಂದೆಯವರು ಮಗನನ್ನು ಹತ್ತಿರವಿದ್ದ ದೂರವಾಣಿಯ ಮೂಲಕ ಹೇಳಿದರಂತೆ ಆಗ ಆಂಬ್ಯುಲೆನ್ಸ್ ಕಳಿಸಿ ಆ ಮಗುವನ್ನು ಹಣವನ್ನು ತೆಗೆದುಕೊಳ್ಳದೆ ಶಸ್ತ್ರಚಿಕಿತ್ಸೆ ಮಾಡಿ ಕಳಿಸಿದರಂತೆ ಹುಡುಗನು ಪವಾಡವಾಯಿತು ಎಂದು ಸಂತಸ ಪಟ್ಟನು. ನಾನು ಚಿಕ್ಕವನಾಗಿದ್ದಾಗ ಏನಾದರೂ ಪವಾಡ ಸಂಭವಿಸಿದ್ದೇಯೇ?
ಏಕೆ ವರ್ಗಾವಣೆ ಮಾಡಿದ್ದೀರಿ?
ಒಂದು ಕಂಪನಿಗೆ ಹೊಸ ಮ್ಯಾನೇಜರ್ ಆಯ್ಕೆಯಾಗಿ ಬಂದರು ನಂತರ ಅಲ್ಲಿಯ ನಾಯಕರನ್ನು ಹಾಗೂ ಕಾರ್ಮಿಕರನ್ನು ಗಮನಿಸಿದರು ಅದರಲ್ಲಿ ಒಬ್ಬ ನಾಯಕ ಹಲವಾರು ಕಾರ್ಮಿಕರನ್ನು ತನ್ನ ಅಧೀನದಲ್ಲಿ ಇಟ್ಟುಕೊಂಡಿದ್ದನು ನಾಯಕ ಹೇಗೆ ಹೇಳುತ್ತಾನೆ ಹಾಗೆ ಕೆಲಸ ಮಾಡುತ್ತಿದ್ದರು.
ನಾಯಕನನ್ನು ಗಮನಿಸಿದ ಮ್ಯಾನೇಜರ್ ಅವರು ನಾಯಕನನ್ನು ಕರೆದು ಕುಶಲೋಪರಿ ವಿಚಾರಿಸಿ ನಿನಗೆ ಈ ಕೆಲಸ ಇಷ್ಟ ಇದೆಯೇ ನಿನಗೆ ಇಷ್ಟ ಇರುವ ಕೆಲಸ ಯಾವುದು ನಿನ್ನಲ್ಲಿ ಯಾವ ಯಾವ ಕೌಶಲ್ಯಗಳು ಇದೆ ಎಂದು ಕೇಳಿದರು ಆಗ ಅವನ ಕೌಶಲ್ಯಗಳನ್ನು ಅವನ ಇಚ್ಛೆಯನ್ನು ಆಸಕ್ತಿಯನ್ನು ಹೇಳಿದನು.
ಮ್ಯಾನೇಜರ್ ಅವರು ನಿನಗಾಗಿ ಒಂದು ಒಳ್ಳೆಯ ಕಂಪನಿ ಇದೆ ಅಲ್ಲಿ ನನ್ನ ಸ್ನೇಹಿತ ಕೆಲಸ ಮಾಡುತ್ತಿದ್ದಾನೆ ಅಲ್ಲಿ ನೀನು ಹೋಗಬಹುದು ನೀನು ಇಷ್ಟಪಟ್ಟರೆ ಇದಕ್ಕಿಂತ ಹೆಚ್ಚು ಸಂಬಳ ಅಲ್ಲಿ ಸಿಗುತ್ತದೆ ಎಂದು ಹರಿದುಂಬಿಸಿದರು ಅದಕ್ಕೆ ಆ ನಾಯಕನು ಒಪ್ಪಿದನು ನಂತರ ಬೇರೆ ಕಂಪನಿಗೆ ಹೋದನು ನಂತರ ಮಾಲೀಕರು ಬಂದರು ನಮ್ಮ ಕಂಪನಿಯ ನಾಯಕನಿಗೆ ವರ್ಗಾವಣೆ ಮಾಡಿದ್ದೀರಿ ಏಕೆ ಎಂದು ಆತಂಕದಿಂದ ಕೇಳಿದರು.
ಮ್ಯಾನೇಜರ್ ಅವರು ತಾಳ್ಮೆಯಿಂದ ಹೇಳಿದರು ಈಗ ಹೋದ ನಾಯಕನು ಹಲವಾರು ಕಾರ್ಮಿಕರಿಗೆ ತನ್ನ ಅಧೀನದಲ್ಲಿ ಇಟ್ಟುಕೊಂಡಿದ್ದನು ಅದಕ್ಕಾಗಿ ಅವನನ್ನು ಬೇರೆ ಕಂಪನಿಗೆ ಕಳುಹಿಸಿದ್ದೇನೆ ಈ ಉಳಿದ ಇಲ್ಲಿರುವ ಎಲ್ಲಾ ಕಾರ್ಮಿಕರಿಗೆ ಭರವಸೆ ಬಂದಿದೆ.
ನಮಗೆ ಕೆಲಸ ಇಲ್ಲಿ ಇಲ್ಲ ಎಂದರು ಬೇರೆ ಕಡೆ ನಮಗೆ ಕೆಲಸ ಸಿಗುತ್ತದೆ ಎನ್ನುವ ಭಾವನೆ ಇದೆ ಟಮೊಟೊ ಹಣ್ಣಿನ ಬುಟ್ಟಿಯಲ್ಲಿ ಒಂದು ಟೊಮೊಟೊ ಕೊಳೆತರೆ ಒಂದನ್ನು ತೆಗೆದು ಬಿಸಾಕಬೇಕು ಇಲ್ಲದಿದ್ದರೆ ಎಲ್ಲವೂ ಕೊಳೆತು ಹೋಗುತ್ತದೆ ಅದೇ ರೀತಿ ಒಬ್ಬನಿಗೆ ವರ್ಗಾವಣೆ ಮಾಡಿದ್ದೇನೆ.
ಇರುವ ಕಾರ್ಮಿಕರು ಬೇರೆ ಕಡೆ ಎಲ್ಲೂ ಹೋಗುವುದಿಲ್ಲ ಎಂದಾಗ ಮ್ಯಾನೇಜರ್ ಅವರ ದೀರ್ಘ ಆಲೋಚನೆಗೆ ಸೃಜನಶೀಲತೆಗೆ ಮಾಲೀಕರು ಸಂತೋಷ ಪಟ್ಟರು ನಂತರ ಎಲ್ಲಾ ಕಾರ್ಮಿಕರಿಗೆ ಭರವಸೆ ನೀಡಿದರು.
ನಿಮಗೆ ಏನಾದರೂ ಕೊಂದು ಕೊರತೆ ಕಂಡುಬಂದಲ್ಲಿ ನಮಗೆ ಹೇಳಿ ನಿಮಗೆ ವರ್ಗಾವಣೆ ಬೇಕಾದರೂ ಮಾಡುತ್ತೇವೆ ಎಂದರು ಆದರೆ ಯಾರು ಕೂಡ ವರ್ಗಾವಣೆಗೆ ಇಷ್ಟಪಡಲಿಲ್ಲ ಎಲ್ಲರೂ ಅದೇ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದರು.
ಬೇರೆ ಯಾವುದನ್ನೂ ಗಮನಿಸಲಿಲ್ಲ
ಒಂದು ಊರಿನಲ್ಲಿ ಒಬ್ಬ ಪ್ರಾಮಾಣಿಕ ಮನುಷ್ಯ ದಿನನಿತ್ಯ ಕೆಲಸ ಮಾಡಿಕೊಂಡು ಜೀವನವನ್ನು ಸಾಗಿಸುತ್ತಿದ್ದನು ನಂತರ ಅವನು ಯೋಚನೆ ಮಾಡಿದನು ಇನ್ನಷ್ಟು ನಾನು ಬೆಳೆಯಬೇಕು ಎಂದು ನಂತರ ಮತ್ತೆ ಬೇರೆ ವ್ಯವಹಾರವನ್ನು ಮಾಡಿದನು ಅದರಲ್ಲಿ ಇವನಿಗೆ ಸ್ವಲ್ಪ ನಷ್ಟವಾಯಿತು.
ಬೇಸರ ಮಾಡಿಕೊಂಡು ಏನಾದರೂ ಆಗಲಿ ನಾನು ದೊಡ್ಡ ವ್ಯಕ್ತಿಯಾಗಬೇಕು ಎಂದು ಯೋಚಿಸಿ ನಂತರ ಯಾರೋ ಹೇಳಿದರು ಹಿಮಾಲಯದ ತಪ್ಪಲಿನಲ್ಲಿ ಸಾಧುಸಂತರು ಇರುತ್ತಾರೆ ಅವರನ್ನು ಭೇಟಿಯಾದರೆ ನನ್ನ ಸಮಸ್ಯೆ ಪರಿಹಾರವಾಗುತ್ತದೆ ಎಂದು ಅವನು ಕೆಲಸವನ್ನು ಬಿಟ್ಟು ನೇರವಾಗಿ ಹಿಮಾಲಯದ ತಪ್ಪಲಿನ ಕಡೆಗೆ ಹೋದನು ಹಾಗೆಯೇ ಒಬ್ಬರು ಹಿರಿಯ ಸಾಧುಗಳು ಸಿಕ್ಕರು.
ಸಾಧು ಅವರನ್ನು ತಮ್ಮ ಕಷ್ಟಗಳನ್ನು ಹೇಳಿದನು ಅಲ್ಲಿಯವರಿಗೆ ಸಂಜೆಯಾಗಿತ್ತು ಆಗ ಸಾಧು ಅವರು ನೀನು ಮುಂದೆ ಒಂದು ಹಳ್ಳಿಯಿದೆ ಹಳ್ಳಿಗೆ ಹೋಗಿ ಅಲ್ಲಿ ಧ್ಯಾನ ಮಾಡಿ ಬರಬೇಕು ಎಂದರು ಅದಕ್ಕೆ ಆಗಲಿ ಎಂದನು.
ಒಂದು ಕಂಡಿಷನ್ ಸೂರ್ಯ ಮುಳುಗಿದ ಮೇಲೆ ಹೋಗಬೇಕು ಮತ್ತೆ ಸೂರ್ಯ ಉದಯ ಆಗುವುದಕ್ಕಿಂತ ಮುಂಚೆ ಬರಬೇಕು ಎಂದು ಹೇಳಿದರು ಅದಕ್ಕೆ ಅವನು ಆಗಲಿ ಎಂದು ಸೂರ್ಯಾಸ್ತ ವನ್ನು ಕಾದು ನಂತರ ಪಕ್ಕದಲ್ಲೇ ನದಿ ಇದೆ ಅಲ್ಲಿ ಸ್ನಾನ ಮಾಡಿ ಧ್ಯಾನ ಮಾಡಿ ಬಂದನು.
ನಾನು ಬಂದಿದ್ದೇನೆ ಎಂದು ಸಾಧುವಿಗೆ ಹೇಳಿದನು ನೀವು ಹೇಳಿದಂತೆ ನಾನು ಮಾಡಿದೆ ಆದರೆ ಏನೂ ಪ್ರಯೋಜನವಿಲ್ಲ ಮತ್ತೆ ನನಗೆ 2 ದಿನ ನಷ್ಟವಾಗಿದೆ ಎಂದು ಹೇಳಿದನು ಮತ್ತೆ ನಾನು ದಾರಿಯಲ್ಲಿ ಹೋಗಬೇಕಾದರೂ ಬರಬೇಕಾದರೂ ಕಲ್ಲುಗಳು ಮಾತ್ರ ಭಯಂಕರವಾಗಿ ಚುಚ್ಚುತ್ತಿತ್ತು ಎಂದು ಹೇಳಿದನು.
ಈ ಮಾತನ್ನು ಕೇಳಿ ಸಾಧು ಅವರು ನಕ್ಕರು ಮತ್ತೆ ಹೇಳಿದರು ನಿನಗೆ ರಾತ್ರಿಯಲ್ಲಿ ಕಳಿಸಿದ್ದು ಉದ್ದೇಶ ಏನೆಂದರೆ ನಿನ್ನ ಕಾಲಿಗೆ ಚುಚ್ಚಿದ ಎಲ್ಲವೂ ಕೂಡ ಅವು ಹರಳು ವಜ್ರಗಳೇ ಆಗಿದ್ದವು ಎಂದರು ಅವು ಸ್ವಲ್ಪವೂ ಕೂಡ ತೆಗೆದುಕೊಂಡು ಬಂದಿದ್ದರೆ ನೀನು ಶ್ರೀಮಂತನಾಗುತ್ತಿದ್ದೆ ಎಂದರು.
ನೀನು ತುಂಬಾ ಆತುರದಲ್ಲಿ ಇದ್ದೆ ಬೇರೆ ಯಾವುದನ್ನೂ ಗಮನಿಸಲಿಲ್ಲ ಮತ್ತೆ ಪ್ರಯತ್ನಿಸಲೂ ಇಲ್ಲ ಎಂದು ಹೇಳಿ ಕಳಿಸಿದರು. ನನ್ನ ಸುತ್ತಮುತ್ತವೇ ಹಲವಾರು ಅವಕಾಶಗಳು ಇದ್ದು ಸೂಕ್ಷ್ಮವಾಗಿ ಗಮನಿಸದೆ ನಂತರ ಪಶ್ಚತಾಪ ಪಟ್ಟಿದ್ದೇನೆಯೇ?
ಬೀಳುವುದು ಖಚಿತ
ನಾವು ಒಂದು ಸಾರಿ ಅಪಾರ್ಟ್ಮೆಂಟ್ಗೆ ಕಾರಿನಲ್ಲಿ ಹೋಗುತ್ತಿದ್ದಾಗ ಅಪಾರ್ಟ್ಮೆಂಟ್ ತುಂಬಾ ಸುಂದರವಾಗಿದೆ ಆದರೆ ಆಚೆಯ ರಸ್ತೆಗಳು ಹದಗೆಟ್ಟಿದೆ ದಾರಿಯಲ್ಲಿ ಬಹಳಷ್ಟು ಹಳ್ಳಗಳು ಇವೆ ಆದ್ದರಿಂದ ನಿಧಾನವಾಗಿ ಹೋಗುತ್ತಿದ್ದೆವು ಯಾರಾದರೂ ಗೊತ್ತಿಲ್ಲದೆ ವೇಗವಾಗಿ ಬಂದರೆ ಯದ್ವ ತದ್ವ ಬೀಳುವುದು ಖಚಿತ ಆದ್ದರಿಂದ ಕಾರಿನಲ್ಲಿ ನಿಧಾನವಾಗಿ ಪ್ರಯಾಣಿಸುತ್ತಿದ್ದವು.
ರಸ್ತೆಯಲ್ಲಿ ಹೋಗುತ್ತಿದ್ದಾಗ ಒಬ್ಬರನ್ನು ಮೀರಿಸಿ ಒಬ್ಬರು ವೇಗವಾಗಿ ಹೋಗುವುದು ಸಹಜ ಒಬ್ಬ ಯುವಕ ಬೈಕಿನಲ್ಲಿ ವೇಗವಾಗಿ ಹೋದನು ಹೀಗೆ ಹೋದರೆ ಬೀಳುವುದು ಖಚಿತ ಎಂದುಕೊಂಡೆವು ಸ್ವಲ್ಪ ಮುಂದೆ ಹೋಗಿ ನೋಡಿದರೆ ಯುವಕ ಬ್ಯಾಲೆನ್ಸ್ ತಪ್ಪಿ ಬಿದ್ದಿದ್ದನು ಅದೃಷ್ಟವಶಾತ್ ಏನು ಆಗಿರಲಿಲ್ಲ ಅಪಾರ್ಟ್ಮೆಂಟ್ ಮುಂದೆ ನಿಂತಿರುವ ಸೆಕ್ಯೂರಿಟಿ ಗಾರ್ಡ್ ಗೆ ಹೇಳಿದವು.
ಒಂದು ಸೂಚನಾ ಫಲಕವನ್ನು ಇಡಬಹುದಲ್ಲ ಎಂದಾಗ ಸೆಕ್ಯೂರಿಟಿ ಗಾರ್ಡ್ ನೀವು ತಲೆಕೆಡಿಸಿಕೊಳ್ಳಬೇಡಿ ಸಾಯುವವರು ಸಾಯುತ್ತಾರೆ ಅವರ ಜವಾಬ್ದಾರಿ ಅವರಿಗೆ ಇರಬೇಕು ಅವರೇ ನೋಡಿಕೊಂಡು ಚಾಲನೆ ಮಾಡಬೇಕು ಎಂದು ಹೇಳಿದನು.
ಒಂದು ಸಾರಿ ನನ್ನ ಸ್ನೇಹಿತನನ್ನು ಭೇಟಿಯಾಗಲು ಹೋದೆ ಇಬ್ಬರು ಸ್ನೇಹಿತರು ಮಾತ್ರ ಇರಲಿಲ್ಲ ಬೇರೆ ಎಲ್ಲರೂ ಬಂದಿದ್ದರು ಕೊನೆಗೆ ಕಾದು ಕಾದು ಇವರು ಇವತ್ತು ಬರುವುದಿಲ್ಲ ಎಂದು ಕೊಂಡೆನು ಸರಿಯಾಗಿ ರಾತ್ರಿ 2 ಗಂಟೆಗೆ ಬಂದರು. ಏಕೆ ಇಷ್ಟು ತಡವಾಗಿ ಬಂದಿದ್ದೀರಾ? ಎಂದು ಕೇಳಿದಾಗ ನನ್ನ ಸ್ನೇಹಿತ ನನಗೆ ಸ್ವಲ್ಪ ಕೆಲಸ ಜಾಸ್ತಿ ಇತ್ತು ಎಂದನು ಕಾರಣವೇನು ಎಂದು ಕೇಳಿದಾಗ ನಡೆದ ಘಟನೆ ವಿವರಿಸಿದ.
ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಯನ್ನು ಏರ್ಪಡಿಸಿದ್ದರು ನಾವೇ ಮುಖ್ಯ ಅತಿಥಿಗಳು ವಿದ್ಯಾರ್ಥಿಗಳಿಗೆ ತರಗತಿ ಮುಗಿದ ಮೇಲೆ ಬಹಳಷ್ಟು ವಿದ್ಯಾರ್ಥಿಗಳು ನಮ್ಮಲ್ಲಿ ಬಹಳಷ್ಟು ಪ್ರಶ್ನೆಗಳಿವೆ ಅದಕ್ಕೆ ದಯಮಾಡಿ ಉತ್ತರಿಸಿ ಎಂದು ವಿನಂತಿಸಿಕೊಂಡರು ವಿದ್ಯಾರ್ಥಿಗಳು ಅನೇಕ ಉಪಯುಕ್ತ ಪ್ರಶ್ನೆಗಳನ್ನು ಕೇಳುತ್ತಿದ್ದರು ನಾವು ವಿದ್ಯಾರ್ಥಿಗಳ ಮನಸ್ಸಿಗೆ ನಾಟುವಂತೆ ಸಲಹೆ ನೀಡುತ್ತಿದ್ದೆವು ವಿದ್ಯಾರ್ಥಿಗಳು ಆಸಕ್ತಿಯಿಂದ ಕೇಳುತ್ತಿದ್ದರು. ಊಟದ ಸಮಯ ಮೀರುತಿದ್ದರು ವಿದ್ಯಾರ್ಥಿಗಳು ಮಾತ್ರ ಹಸಿವು ಇದ್ದರು ಉತ್ಸಾಹಿಗಳಾಗಿ ಕಾಯುತ್ತಿದ್ದಾರೆ ಹಾಗಾಗಿ ನಾವು ಎಲ್ಲಾ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿ ಬರಬೇಕಾಯಿತು ವಿದ್ಯಾರ್ಥಿಗಳನ್ನು ಬಿಟ್ಟು ಬರಲು ಮನಸಾಗಲಿಲ್ಲ ಎಲ್ಲಾ ವಿದ್ಯಾರ್ಥಿಗಳು ನಗುತ್ತಾ ಹೋದರು ನನಗೆ ಆತ್ಮ ತೃಪ್ತಿ ಸಿಕ್ಕಿದೆ ಎಂದರು.
ಇಷ್ಟು ರಿಸ್ಕ್ ಏಕೆ ತೆಗೆದುಕೊಂಡಿರಿ ಎಂದು ಕೇಳಿದಾಗ ನನ್ನ ಸ್ನೇಹಿತ ಹೇಳಿದ ಮಾತು ಈ ವಿದ್ಯಾರ್ಥಿಗಳು ಮುಂದೆ ಯಾವ ಹಂತದಲ್ಲಿ ಯಾವ ರೀತಿ ಅಭಿವೃದ್ಧಿಯಾಗುತ್ತಾರೋ ತಿಳಿದಿಲ್ಲ ಹಾಗಾಗಿ ನಾನು ನನ್ನ ಜವಾಬ್ದಾರಿಯನ್ನು ನಿಭಾಯಿಸಿದ್ದೇನೆ ಎಂದು ಮುಗುಳ್ನತ್ತ ಹೇಳಿದರು.