ಲಂಚವನ್ನು ತೆಗೆದುಕೊಳ್ಳುವುದಿಲ್ಲ

ಒಂದು ಸಾರಿ ಕಳ್ಳರು ಸೇರಿ ಒಂದು ಯೋಜನೆಯನ್ನು ರೂಪಿಸುತ್ತಾರೆ ಊರಿನ ದೊಡ್ಡದಾದ ಬಂಗಲೆಯಲ್ಲಿ ಹೋಗಿ ಕಳ್ಳತನ ಮಾಡೋಣ ಎಂದು ತೀರ್ಮಾನಿಸುತ್ತಾರೆ ಅದೇ ರೀತಿ ಎಲ್ಲರೂ ಹೋಗಿ ಇನ್ನೇನು ಬಾಗಿಲು ಮುರಿಯಬೇಕು ಅಷ್ಟರಲ್ಲಿ ನೋಡಿದಾಗ ನಾಯಿ ಅಲ್ಲಿಯೇ ಇರುತ್ತದೆ ಇದನ್ನು ಗಮನಿಸಿದ ಕಳ್ಳ ತನ್ನ ಬ್ಯಾಗಿನಿಂದ ಒಂದು ಮಾಂಸದ ತುಂಡು ಹಾಗೂ ಒಂದು ಮೂಳೆಯನ್ನು ಬಿಸಾಕುತ್ತಾನೆ.

 ಆ ನಾಯಿ ಹೇಳಿತು ನಾನು ಮನುಷ್ಯರ ಜಾತಿಗೆ ಸೇರಿದವನಲ್ಲ ಹಾಗೆಯೇ ನಾನು ಯಾವ ರೂಪದಲ್ಲಿಯೂ ಲಂಚವನ್ನು ತೆಗೆದುಕೊಳ್ಳುವುದಿಲ್ಲ ನನ್ನ ಯಜಮಾನನಿಗೆ ತೊಂದರೆಯಾದರೆ ಏನಾದರೂ ನಷ್ಟವಾದರೆ ನನಗೆ ಇಲ್ಲಿ ನೆಲೆ ಇರುವುದಿಲ್ಲ ನಾನು ಅನಾಥನಾಗಿ ಬಿಡುತ್ತೇನೆ ಈ ಆಸರೆಯಲ್ಲಿ ಬದುಕುತ್ತಿದ್ದೇನೆ ಎಂದರೆ ಆ ಆಸರೆಗೆ ಯಾವುದೇ ಕಾರಣಕ್ಕೂ ನಾನು ಮೋಸ ಮಾಡುವುದಿಲ್ಲ ಎಂದಾಗ ಕಳ್ಳರಿಗೆ ಅರ್ಥವಾಯಿತು.

 ನಮ್ಮ ಆಟ ನಡೆಯುವುದಿಲ್ಲ ಎಂದು ಹೊರಟು ಹೋದರು ನಾವು ಯಾವ ಆಸರೆಯಲ್ಲಿ ಬದುಕುತ್ತೇವೆ ಅದಕ್ಕೆ ಎಂದಿಗೂ ಮೋಸ, ವಂಚನೆ, ಕಳ್ಳತನ. ಮಾಡಬಾರದು ಮಾಡಿದರೆ ತಕ್ಕ ಪ್ರತಿಫಲ ಸಿಕ್ಕೆ ಸಿಗುತ್ತದೆ ಆದ್ದರಿಂದ ಆಶ್ರಯ ಕೊಟ್ಟಿದ್ದಕ್ಕೆ ನಾವು ಎಂದಿಗೂ ಕೃತಜ್ಞತರಾಗಿರೋಣ.

ನೆಲದ ಮೇಲೆ ಬಿತ್ತು 

ಒಬ್ಬರು ಮುಂದಾಲೋಚನೆಯುಳ್ಳ ವಿಜ್ಞಾನಿ ಇದ್ದರು ಇವರು ತುಂಬಾ ಪ್ರಸಿದ್ಧಿ ಪಡೆದಿದ್ದರು ವಿಜ್ಞಾನಿ ಅವರಿಗೆ ಬೃಹತ್ ಆಗಿ ಬೆಳೆದಿದ್ದೀರಾ ಇದರ ರಹಸ್ಯವೇನು ಎಂದು ಕೇಳಿದನು ಅದಕ್ಕೆ ಆ ವಿಜ್ಞಾನಿಯವರು ನಾನು ಚಿಕ್ಕವನಾಗಿದ್ದಾಗ ನಮ್ಮ ತಾಯಿ ನನಗೆ ಅಡಿಗೆ ಮನೆಯಿಂದ ಹಾಲನ್ನು ತೆಗೆದುಕೊಂಡು ಬಾ ಎಂದು ಹೇಳಿದರು.

 ನಾನು ಹಾಲು ತೆಗೆದುಕೊಳ್ಳುತ್ತಿದ್ದಂತೆಯೇ ನೆಲದ ಮೇಲೆ ಬಿತ್ತು  ನಾನು ಹೆದರಿಕೊಂಡೆ ಆಗ ಅಮ್ಮನೇ ಬಂದು ನೋಡಿದರು ಹಾಲು ಎಲ್ಲ ಚೆಲ್ಲಿ ಹೋಗಿದೆ ಆಗ ನಮ್ಮ ತಾಯಿ ನನಗೆ ಬಯ್ಯದೆ ಹಾಲಿನ ಸಮುದ್ರ ಮಾಡುತ್ತಿದ್ದೀಯಾ ಎಂದು ಹೇಳಿ ನಕ್ಕರು.

 ಬಿದ್ದ ಹಾಲಿನಲ್ಲಿ ಸ್ವಲ್ಪ ಹೊತ್ತು ಆಟ ಆಡು ಎಂದು ಹೇಳಿದರು ಹಾಗೆ ಆಟ ಆಡಿದ ನಂತರ ಏಕೆ ಇದು ಬಿದ್ದಿದ್ದು ಎಂದು ಕೇಳಿದರೂ ಗೊತ್ತಿಲ್ಲ ಎಂದೆ ಆಗ ತಾಯಿಯವರು ಅದೇ ಬಟ್ಟಲನ್ನು ಈಚೆ ನೀರು ತುಂಬಿಸಿ ಈಗ ಇದು ತೆಗೆದುಕೊಂಡು ಬೇರೆ ಕಡೆ ಇಡು ಎಂದು ಹೇಳಿದರು.

 ಮೊದಲನೇ ಸಾರಿಗೆ ಮತ್ತೆ ಬೀಳಿಸಿದೆ ಮತ್ತೆ ಪ್ರಯತ್ನ ಮಾಡು ಎಂದರು ಹಾಗೆ ಐದಾರು ಸಾರಿ ಪ್ರಯತ್ನ ಮಾಡಿದಾಗ ನನ್ನ ಕೈಯಲ್ಲಿ ಸಾಧ್ಯವಾಯಿತು ಆಗ ನನಗೆ ತಿಳಿಯಿತು ಯಾವುದೇ ಕೆಲಸ ಒಂದೇ ಸಾರಿಗೆ ಆಗುವುದಿಲ್ಲ ಪ್ರಯತ್ನ ಪಟ್ಟರೆ ಏನು ಬೇಕಾದರೂ ಮಾಡಬಹುದು ಎಂದು ಅರಿತೆನು.

 ಅದೇ ರೀತಿ ಮುಂದೆ ಸಂಶೋಧನೆಗಳನ್ನು ಮಾಡುತ್ತಾ ಬಂದೆ ಸಾಮಾನ್ಯವಾಗಿ ಚಿಕ್ಕ ಮಕ್ಕಳು ಆಗಾಗ ಕೆಲವು ಸಣ್ಣ ಪುಟ್ಟ ಕೆಲಸಗಳು ಮಾಡುವುದಿಲ್ಲ ಬೇಗ ಅರ್ಥವಾಗುವುದಿಲ್ಲ ಅದಕ್ಕೆ ಸಮಯ ಕೊಟ್ಟಿದ್ದೇ ಆದರೆ ಇಂದಲ್ಲ ನಾಳೆ ಅವರು ಚೆನ್ನಾಗಿ ಬೆಳೆದೇ ಬೆಳೆಯುತ್ತಾರೆ. ನಾನು ಗೊತ್ತಿಲ್ಲದೆ ತಪ್ಪು ಮಾಡಿದಾಗ ಸರಿಯಾಗಿ ಯಾರೂ ಮಾರ್ಗದರ್ಶನ ನೀಡಿದ್ದಾರೆ?

 ಕೊರಗುತ್ತಲೇ ಇರುತ್ತಾನೆ

ಒಬ್ಬ ಮನುಷ್ಯ ಸಾಮಾನ್ಯ ವರ್ಗದಲ್ಲಿ ಇದ್ದನು ಅವನು ಒಂದು ಸಣ್ಣ ಕೆಲಸ ಮಾಡಿಕೊಂಡು ಸಂಸಾರ ನಡೆಸುತ್ತಿದ್ದನು ಅವನಿಗೆ ಒಂದೇ ಒಂದು ಬಯಕೆ ಏನೆಂದರೆ ನಾನು ಒಂದು ಮನೆಯನ್ನು ಕಟ್ಟಬೇಕು ಅದಕ್ಕಾಗಿ ಹಗಲು ಇರುಳು ದುಡಿದು ಕೊನೆಗೆ ಒಂದು ಮನೆಯನ್ನು ಕಟ್ಟಿದನು.

 ನಂತರ ಹಲವಾರು ವರ್ಷಗಳು ಚೆನ್ನಾಗಿ ಬದುಕಿದನು ಅಷ್ಟು ಹೊತ್ತಿಗೆ ಇದ್ದ ಇಬ್ಬರು ಮಕ್ಕಳು ಮದುವೆಯಾದರು.

  ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಇದ್ದುದರಿಂದ ಮಕ್ಕಳಿಗೆ  ಒಳ್ಳೆಯ ಕೆಲಸಗಳು ಸಿಕ್ಕವು ಅವು ಪಟ್ಟಣದಲ್ಲಿ ಇದ್ದವು ಆದುದರಿಂದ ಮಕ್ಕಳು ಪೇಟೆಯಲ್ಲಿಯೇ ಇರುತ್ತಿದ್ದರು ತಂದೆಯಾದವನು ಮಕ್ಕಳು ಬರಲಿ ಎಂದು ಆರೋಗ್ಯ ಸರಿಯಿಲ್ಲ ಎಂದು ಕರೆಯುತ್ತಿದ್ದನು.

 ಮಕ್ಕಳಾದವರು ಹಾಗೆಯೇ ತಂದೆಯನ್ನು ನೋಡಲು ಬರುತ್ತಿದ್ದರು ಕೊನೆಕೊನೆಗೆ ಮಕ್ಕಳು ಹೇಳಿದರು ಅಪ್ಪಾ ನಾವು ಪ್ರತೀ ಸಾರಿ ಬಂದು ಹೋಗಲು ತುಂಬ ಕಷ್ಟವಾಗುತ್ತದೆ ಆದುದರಿಂದ ನೀವು ಮನೆಯನ್ನು ಮಾರಿ ಪೇಟೆಗೆ ಬನ್ನಿ ಎಂದು ಹೇಳಿದರು ಆದರೆ ತಂದೆಯಾದವರಿಗೆ ಬಹಳ ಯಾತನೆಯಾಗುತ್ತದೆ ಏಕೆಂದರೆ ಕಷ್ಟಪಟ್ಟು ಮನೆ ಕಟ್ಟಿದ್ದಾರೆ ಕೊನೆಗೆ ಹೇಳಿದರು ನಾನು ಬರುವುದಿಲ್ಲ.

 ಮಕ್ಕಳು ನೀವು ಅಲ್ಲಿಯೇ ಇರಿ ಎಂದು ಹೇಳಿದರು ತಂದೆ ಆಗಾಗ ನೋಡಿಕೊಂಡು ಬರುತ್ತಾರೆ ಈ ಮನುಷ್ಯನಲ್ಲಿ ಮಾತ್ರ ಮಕ್ಕಳು ಇಲ್ಲಿ ಇಲ್ಲವಲ್ಲ ಎಂದು ಕೊರಗುತ್ತಲೇ ಇರುತ್ತಾನೆ.

 ಯಾವುದೇ ಪಕ್ಷಿಗಳು ಸಾಯುವತನಕ ತನ್ನ ಮರಿಗಳನ್ನು ಇಟ್ಟುಕೊಳ್ಳುವುದಿಲ್ಲ ಎಲ್ಲಿಯವರೆಗೆ ಹಾರಲಿಕ್ಕೆ ಬರುತ್ತದೆ ಅಲ್ಲಿಯವರೆಗೆ ತಮ್ಮ ಹತ್ತಿರ ಇಟ್ಟುಕೊಳ್ಳುತ್ತಾರೆ ನಂತರ ಸ್ವತಂತ್ರವಾಗಿ ಬದುಕಲಿ ಎಂದು ಮಾರ್ಗದರ್ಶನ ಮಾಡುತ್ತವೆ ಇರುವವರೆಗೆ ಸ್ವತಂತ್ರವಾಗಿ ಬದುಕುತ್ತವೆ. ಬದುಕಿನ ಸತ್ಯವನ್ನು ಅರ್ಥಮಾಡಿಕೊಳ್ಳೋಣ.

ಒಡಹುಟ್ಟಿದ ತಮ್ಮ ಮತ್ತೆ ಸಿಗಲಾರನು

ಒಂದು ಊರಿನಲ್ಲಿ ಆಗಾಗ ಕಳ್ಳತನ ಆಗುತ್ತಿರುತ್ತದೆ ಕೊನೆಗೆ ರಾಜನನ್ನು ಸುದ್ದಿ ತಿಳಿಸುತ್ತಾರೆ ಆಗ ರಾಜನು ಕೆಲವು ಸಿಪಾಯಿಗಳನ್ನು ಕಳಿಸಿ ಕಳ್ಳರನ್ನು ಹಿಡಿದು ಕೊಂಡು ಬನ್ನಿ ಎಂದು ಆಜ್ಞೆ ನೀಡುತ್ತಾನೆ ಸಿಪಾಯಿಗಳು ಆ ಊರು ಸುತ್ತಿದರೂ ಯಾವುದೇ ಕಳ್ಳರು ಸಿಗುವುದಿಲ್ಲ .

 ಸಿಪಾಯಿಗಳು ಏನು ಮಾಡುವುದು ಎಂದು ಚಿಂತೆಯಲ್ಲಿ ಮುಳುಗಿದರು ಹಾಗೆ ಊರಿನಿಂದ ಬರುತ್ತಿರಬೇಕಾದರೆ 3ರೈತರು ಒಂದು ಹೊಲದಲ್ಲಿ ಕೆಲಸ ಮಾಡಿಕೊಂಡು ಇರುತ್ತಾರೆ ಇವರೇ ಆ ಕಳ್ಳರು ಎಂದು ರಾಜನನ್ನು ತಂದು ಒಪ್ಪಿಸಿ ಸಿಪಾಯಿಗಳು ತಪ್ಪಿಸಿಕೊಳ್ಳುತ್ತಾರೆ ಆದರೆ ರಾಜನಾದವನು ಕೂಡ ಕಳ್ಳರು ಅಥವಾ ರೈತರು ಎಂದು ಗಮನಿಸದೆ ಪರಿಶೀಲನೆ ಮಾಡದೆ ರೈತರನ್ನು ಜೈಲಿಗೆ ತಳ್ಳಿ ಬಿಡುತ್ತಾನೆ.

ಒಂದು ಹೆಂಗಸು ಸ್ವಲ್ಪ ಹೊತ್ತು ಅಳುತ್ತ ಇದ್ದಳು ನಂತರ ಹೋಗುತ್ತಾಳೆ ಈ ಹೆಂಗಸು ಏಕೆ ಅಳುತ್ತಿದ್ದಾಳೆ ಎಂದೂ ಯಾರಿಗೂ ಅರ್ಥವಾಗಲ್ಲ ಆಗ ರಾಜನಾದವನು ಆ ಹೆಂಗಸಿಗೆ ಸಭೆಗೆ ಬರುವಂತೆ ಹೇಳುತ್ತಾನೆ ಹೆಂಗಸು ಬರುತ್ತಾಳೆ.

ಹೆಂಗಸಿಗೆ ನೀನು ಏಕೆ ಸ್ವಲ್ಪ ಹೊತ್ತು ಅಳುತ್ತಾ ಮನೆಗೆ ಹೋಗುತ್ತಿದ್ದೀಯಾ ಎಂದು ಹೇಳಿದಾಗ ನೀವು ಮೂವರು ನಿರಪರಾಧಿಗಳನ್ನು ಬಂದಿ ಮಾಡಿದ್ದೀರಿ ಅವರು ಯಾವುದೇ ತಪ್ಪು ಮಾಡಿಲ್ಲ ಅವರನ್ನು ನೀವು ಬಿಡುಗಡೆ ಗೊಳಿಸಬೇಕು ಅವರಲ್ಲಿ ಒಬ್ಬ ನನ್ನ ಗಂಡ ಇನ್ನೊಬ್ಬ ನನ್ನ ಮಗ ಮತ್ತೊಬ್ಬ ನನ್ನ ತಮ್ಮ ಎಂದು ಕೇಳಿಕೊಳ್ಳುತ್ತಾಳೆ.

 ರಾಜನಾದವನು ಹೇಳುತ್ತಾನೆ ನಾನು ಸದ್ಯಕ್ಕೆ ಮೂವರಿಗೆ ಬಿಡುಗಡೆ ಮಾಡಲು ಸಾಧ್ಯವಿಲ್ಲ ಒಬ್ಬನನ್ನು ಬಿಡುಗಡೆ ಮಾಡುತ್ತೇನೆ ಯಾರನ್ನು ಬಿಡುಗಡೆ ಮಾಡಲಿ ಎಂದು ಕೇಳುತ್ತಾನೆ ಆಗ ಆ ಹೆಂಗಸು ಸ್ವಲ್ಪ ಹೊತ್ತು ಯೋಚಿಸಿ ನನ್ನ ತಮ್ಮನನ್ನು ಬಿಡುಗಡೆಗೊಳಿಸಿ ಎಂದು ರಾಜನಿಗೆ ಹೇಳುತ್ತಾಳೆ ಈ ಮಾತು ಕೇಳಿ ರಾಜನಿಗೆ ಆಶ್ಚರ್ಯವಾಗುತ್ತದೆ.

 ನಿನ್ನ ಗಂಡ ನಿನ್ನ ಮಗನನ್ನು ಏಕೆ ನೀನು ಬಿಡುಗಡೆಗೆ ಕೇಳಲಿಲ್ಲ ಎಂದು ಕೇಳುತ್ತಾನೆ ಆಗ ಆ ಹೆಂಗಸು ಹೇಳುತ್ತಾಳೆ ನೋಡಿ ರಾಜರೇ ನನಗೆ ಬೇರೊಬ್ಬ ಗಂಡ ಸಿಗಬಹುದು ಬೇರೊಬ್ಬ ಮಗ ಸಿಗಬಹುದು ಆದರೆ ನನ್ನ ಒಡಹುಟ್ಟಿದ ತಮ್ಮ ಮತ್ತೆ ಸಿಗಲಾರನು ಆದುದರಿಂದ ಮೊದಲು ತಮ್ಮನನ್ನು ಬಿಡುಗಡೆ ಮಾಡಿ ಎಂದು ಕೇಳಿಕೊಳ್ಳುತ್ತಾಳೆ.  ಈ ಚಾಣಾಕ್ಷ ಬುದ್ಧಿಗೆ ಒಪ್ಪಿ ರಾಜನು ಮೂವರಿಗೂ ಬಿಡುಗಡೆ ಮಾಡಿ ಕಳುಹಿಸುತ್ತಾನೆ.

ನನ್ನನ್ನೇ ಬುದ್ಧಿ ಕಲಿಸುತ್ತಿದ್ದಾನೆ

ಒಂದು ಊರಿನಲ್ಲಿ ಒಬ್ಬ ದೊಡ್ಡ ಶ್ರೀಮಂತನು ಇದ್ದನು ಅವನು ಶ್ರೀಮಂತನಾಗುವುದಕ್ಕೆ ಬಹಳಷ್ಟು ಕಷ್ಟಪಟ್ಟಿದ್ದನ್ನು ಚಿಕ್ಕ ವ್ಯಾಪಾರದಿಂದ ನಂತರ ದೊಡ್ಡ ವ್ಯಾಪಾರಕ್ಕೆ ಕೈಹಾಕಿ ತುಂಬ ದೊಡ್ಡ ಶ್ರೀಮಂತನಾದನು ಆದರೆ ಮಕ್ಕಳು ಮಾತ್ರ ತುಂಬಾ ಚೆನ್ನಾಗಿ ಬೆಳೆದವು.

ತಂದೆಯಾದವನಿಗೆ ನನ್ನ ಮಕ್ಕಳಿಗೆ ಬಡತನ ಗೊತ್ತಾಗಲಿ ಎನ್ನುವ ಆಸೆ ಅದಕ್ಕಾಗಿ ಶ್ರೀಮಂತ ಯೋಚನೆ ಮಾಡಿ ಶ್ರೀಮಂತನ   ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಒಬ್ಬ ಸಾಮಾನ್ಯ ಮನುಷ್ಯನು ಹಳ್ಳಿಯಲ್ಲಿ ಇದ್ದನು ಒಂದು ವಾರ ಇಲ್ಲೇ ಇರಲಿ ಎಂದು ಹೇಳಿ ತನ್ನ ಮಗನಿಗೆ ಬಿಟ್ಟು ಹೋದನು.

 ನಿಮ್ಮ ಮಗ ಇರುತ್ತೀನಿ ಅನ್ನುವುದಾದರೆ ನನಗೇನು ಅಭ್ಯಂತರವಿಲ್ಲ ಮತ್ತೆ ಶ್ರೀಮಂತ ಇವನಿಗೆ ಬಡತನ ಏನೆಂದು ತಿಳಿಯಬೇಕು ಆದುದರಿಂದ ಮಗನನ್ನು ಅತಿಥಿಯಂತೆ ನೀವು ನೋಡಬೇಡಿ ಎಂದು ಹೇಳಿದನು ಇರಲಿ ನೀವು ಹೋಗಿದ್ದು ಬನ್ನಿ ಎಂದು ಶ್ರೀಮಂತನಿಗೆ ಕಳುಹಿಸಿದ.

ಒಂದು ವಾರದ ನಂತರ ಶ್ರೀಮಂತನು ಬಂದನು ಮಗನನ್ನು ಕರೆದುಕೊಂಡು ಹೋಗುತ್ತಿರ ಬೇಕಾದರೆ ಹೇಗಿತ್ತು ಈ ಒಂದು ವಾರ ಎಂದು ಕೇಳಿದನು ಆಗ ಮಗನು ಹೇಳಿದನು.

 ಇದು ನನ್ನ ಜೀವನದಲ್ಲಿ ಮರೆಯಲಾಗದ ಅನುಭವ ಎಂದನು ಆಗ ತಂದೆಯಾದವನು ಮತ್ತೆ ಬಡತನ ಏನೆಂದು ತಿಳಿಯಿತೇ ಎಂದು ಕೇಳಿದನು ಹೌದು ಚೆನ್ನಾಗಿ ತಿಳಿಯಿತು ಎಂದನು ನಾವೇ ಬಡವರು ಎಂದನು ಶ್ರೀಮಂತ ಕುಸಿದನು ಅರ್ಥವಾಗಲಿಲ್ಲ ಹೇಗೆ ಬಡವರು ಎಂದು ವಿವರಿಸು ಎಂದು ಕೇಳಿದನು.

 ಆಗ ಮಗ ಹೇಳಿದನು ನಮಗೆ ಒಂದು ಮನೆ ಸೀಮಿತ ಅದಕ್ಕೆ ಒಂದು ಕಾಂಪೌಂಡ್ ಹಾಕಿರುತ್ತೇವೆ ಆದರೆ ಇಲ್ಲಿ ಒಂದೇ ಮನೆ ಇದೆ ಇಲ್ಲಿ ಹಲವಾರು ಮನೆಗಳಿವೆ ಯಾವ ಮನೆಗೆ ಬೇಕಾದರೂ ಹೋಗಿ ಏನು ಬೇಕಾದರೂ ತಿನ್ನಬಹುದು ಹೇಗೆ ಬೇಕಾದರೂ ಇರಬಹುದು ಯಾವುದೇ ನಿಯಮಗಳು ಶರತ್ತುಗಳು ಇಲ್ಲ.

 ಯಾವುದೇ ರೀತಿಯ ಭೇದ ಭಾವವಿಲ್ಲ ಎಲ್ಲರೂ ಒಂದೇ ಯಾವುದೇ ರೀತಿಯ ಕಾಂಪೌಂಡ್ ಇಲ್ಲವೇ ಇಲ್ಲ ಆದರೆ ಇಲ್ಲಿ ಒಂದು ದೊಡ್ಡ ಕೆರೆಯೂ ಇದೆ ನಮ್ಮ ಮನೆಯಲ್ಲಿ ಎರಡು ನಾಯಿ ಇದೆ ಆದರೆ ಇಲ್ಲಿ ಬೇಕಾದಷ್ಟು ನಾಯಿಗಳು ಇವೆ ಇಲ್ಲಿ ಕೋಳಿಗಳು ಕುರಿ ಆಡು ಎಲ್ಲವೂ ಸ್ವತಂತ್ರವಾಗಿ ಇವೆ.

 ನಮ್ಮ ಮನೆಯಲ್ಲಿ ಇಲ್ಲ ರಾತ್ರಿ ಆಚೆ ಬಂದು ಮಲಗಿದಾಗ ಆಕಾಶದಲ್ಲಿ ಹಲವಾರು ತಾರೆಗಳು ಮಿನುಗುತ್ತಿವೆ ನಮ್ಮ ಮನೆಯಲ್ಲಿ ಕೆಲವುಗಳಿಗೆ  ಮಾತ್ರ ಮಿತಿ ಮತ್ತೆ ಹಸಿವು ಆದಾಗ ಮಾತ್ರ ಊಟ ಮಾಡುತ್ತಾರೆ ಊಟವಂತೂ ತುಂಬಾ ರುಚಿಯಾಗಿರುತ್ತದೆ ವರ್ಣಿಸಲಾರೆ.

 ನಮ್ಮ ಮನೆಗಳಲ್ಲಿ ಹಸಿವು ಇಲ್ಲದಿದ್ದರೂ ಊಟ ಮಾಡುತ್ತೇವೆ ಅಷ್ಟು ರುಚಿ ಇಲ್ಲ ಎಂದನು ಇಷ್ಟಕ್ಕೆ ತಂದೆ ನಾನು ಇವನನ್ನು ಬುದ್ಧಿ ಕಲಿಸಲು ಕಳಿಸಿದ್ದೆ ಆದರೆ ಇವನ್ನು ನನ್ನನ್ನೇ ಬುದ್ಧಿ ಕಲಿಸುತ್ತಿದ್ದಾನೆ ಎಂದು ಸುಮ್ಮನಾದನು.

 ಹಣವೇ ಎಲ್ಲವೂ ಅಲ್ಲ ನಮ್ಮ ಮನಸ್ಸು ನಿರ್ಮಲವಾಗಿದ್ದರೆ ಬಡತನದಲ್ಲಿಯೇ ಶ್ರೀಮಂತಿಕೆಯನ್ನು ಕಾಣಬಹುದಾಗಿದೆ.

Leave a Comment