ಒಂದು ಊರಿನಾಚೆ ಒಂದು ಮರವಿತ್ತು ಹಳ್ಳಿಯವನು ತನ್ನ ಕೆಲಸವನ್ನು ಮುಗಿಸಿಕೊಂಡು ಹಾಗೆ ಮನೆಗೆ ಹೋಗಬೇಕಾದರೆ ಚಳಿ ಜಾಸ್ತಿ ಯಾಯಿತು ಅದಕ್ಕೆ ಅವನು ತನ್ನ ಬ್ಯಾಗಿನಲ್ಲಿ ಇಟ್ಟಿದ್ದ ಸ್ವೇಟರ್ ಅನ್ನು ಹಾಕಿ ಕೊಂಡ ನಂತರ ಸುಮ್ಮನೆ ತಲೆ ಎತ್ತಿದರೆ ಅಲ್ಲಿ ಒಂದು ಮರದ ಮೇಲೆ ಹುಲಿ ಮಲಗಿರುವಂತೆ ಕಾಣಿಸುತ್ತಿದೆ.
ಹುಲಿ ಮಲಗಿರುವುದನ್ನು ನೋಡಿದಾಗ ಅವನಿಗೆ ಚಳಿಯ ಬದಲು ಬೆವರು ಬಂತು ಎದ್ನೋ ಬಿದ್ನೋ ಎಂದು ಓಡಿ ಬಂದನು ಊರಿನವರಿಗೆ ಹೇಳಿದನು ನೋಡಿ ಊರಿನ ಆಚೆ ಮರದಲ್ಲಿ ಹುಲಿ ಮಲಗಿದೆ ಅದಕ್ಕಾಗಿ ಬಹಳಷ್ಟು ಜನರು ಕೂಡ ಬಂದರು ನಂತರ ನೋಡಿದರೆ ಅದು ಹುಲಿ ಮಲಗಿದಂತೆ ಕಾಣುತ್ತಿದೆ ಈಗ ಏನು ಮಾಡುವುದು ಸಂಜೆ ಬೇರೆ ಯಾಗಿದೆ ಎಂದು ಎಲ್ಲರೂ ಕಾಯತೊಡಗಿದರು.
ಒಬ್ಬೊಬ್ಬರು ಒಂದೊಂದು ರೀತಿಯ ಸಲಹೆ ಹೇಳಿದರು ಒಬ್ಬರು ಬೆಂಕಿ ಹಾಕಿ ಬಿಡೋಣ ನಂತರ ಕಲ್ಲಿನಿಂದ ಹೊಡೆಯೋಣ ಎಲ್ಲರೂ ಸೇರಿ ಸದ್ದು ಮಾಡೋಣ ಏನೇ ಪ್ರಯತ್ನ ಮಾಡಿದರೂ ಹುಲಿ ಕೆಳಗೆ ಇಳಿಯುತ್ತ ತಲೆ ಇಲ್ಲ ಗುಂಡು ಹಾರಿಸಿದರೆ ಸರಿ ಹೋಗುತ್ತದೆ ಎಂದು ಹೇಳಿದರು.
ಗುಂಡು ಹಾರಿಸಿದರೂ ಕೂಡ ಹುಲಿಯು ಇಳಿಯುತ್ತಿಲ್ಲ ಇಷ್ಟೆಲ್ಲಾ ನೋಡಿದ ಮೇಲೆ ಎಲ್ಲರಿಗೂ ಒಂದು ರೀತಿಯ ವಿಚಿತ್ರ ಅನುಭವ ವಾಯಿತು ಏನಿರಬಹುದು ಈ ರೀತಿ ಮಲಗಿದೆಯಲ್ಲ ಎಂದು ಕೆಲವು ಧೈರ್ಯಶಾಲಿಗಳು ನಿಧಾನವಾಗಿ ಒಂದೊಂದೇ ಒಂದೊಂದೇ ಹೆಜ್ಜೆ ಹಾಕಿ ಮರವನ್ನು ಹತ್ತಿ ನೋಡಿದರು.
ಅಲ್ಲಿ ಮಲಗಿರುವುದು ನಿಜವಾದ ಹುಲಿ ಅಲ್ಲ ಅರಣ್ಯದಲ್ಲಿ ಹಾಕಿರುತ್ತಾರಲ್ಲ ನಾಮಫಲಕಗಳು ಹುಲಿ ಇದೆ ಎಚ್ಚರಿಕೆ ಎಂದು ಆ ರೀತಿಯ ಒಂದು ಪೋಸ್ಟರ್ ಸರಿಯಾಗಿ ಮರದ ಮೇಲೆ ಬಿದ್ದಿದೆ ನೋಡಲಿಕ್ಕೆ ಅದು ಹುಲಿ ಮಲಗಿದ ರೀತಿಯಲ್ಲೇ ಕಾಣಿಸುತ್ತಿದೆ ನಂತರ ಆ ಪೋಸ್ಟನ್ನು ಕೆಳಗೆ ಬೀಳಿಸಿದಾಗ ಎಲ್ಲರು ನಕ್ಕರು.
ಅಂದಿನ ರಾತ್ರಿಯ ನಿದ್ದೆ ಹೋಯಿತು ಎಲ್ಲರೂ ಮನೆಗೆ ತೆರಳಿದರು ಏನೋ ಇದೆ ಎಂದು ಭಯ ಪಡುತ್ತೇವೆ ಆಳವಾಗಿ ಚಿಂತಿಸಿ ನೋಡಿದಾಗ ನಿಜವಾಗಿಯೂ ಸಮಸ್ಯೆ ಇರುವುದಿಲ್ಲ ಇದನ್ನು ಕೂಲಂಕುಷವಾಗಿ ಅರಿತಾಗ ಮಾತ್ರ ಇದಕ್ಕೆ ಸರಿಯಾದ ಅರ್ಥಸಿಗುತ್ತದೆ ಇಲ್ಲದಿದ್ದರೆ ಹೆದರಿಕೆಯಲ್ಲಿಯೇ ಕಾಲ ಕಳೆಯಬೇಕಾಗುತ್ತದೆ. ದೂರದಿಂದ ನೋಡಿ ಗಾಬರಿಯಾಗಿ ಹತ್ತಿರ ಹೋಗಿ ನೋಡಿ ನಕ್ಕಿದ್ದೇನೆಯೇ?
ಈ ದೀಪಕ್ಕೆ ಎಣ್ಣೆ ಹಾಕಿದರೆ ಸಾಕು
ಒಬ್ಬರು ಪ್ರಖ್ಯಾತ ವಿದ್ವಾಂಸರು ಇದ್ದರು ವಿದ್ವಾಂಸರಿಗೆ ಗ್ರಂಥಗಳು ಓದುವುದು ಹವ್ಯಾಸ ಆದುದರಿಂದ ವಿದ್ವಾಂಸರು ರಾತ್ರಿಯವರೆಗೆ ಓದುತ್ತಿದ್ದರು ಸಾಕಷ್ಟು ರಾತ್ರಿಯಲ್ಲಿ ಹೆಚ್ಚಾಗಿ ಓದುತ್ತಿದ್ದರು ಹೀಗೆಯೇ ಕೆಲವು ದಿನಗಳ ನಂತರ ಇವರಿಗೆ ಒಂದು ಕನಸು ಬಿತ್ತು ಕನಸಿನಲ್ಲಿ ನೀವು ಇಷ್ಟು ಕಷ್ಟಪಟ್ಟು ಓದುವುದು ಬೇಡ ನೀವು ನನ್ನ ಜೊತೆಯಲ್ಲಿ ಬಂದರೆ ನಿಮಗೆ ಜ್ಞಾನವನ್ನು ನೀಡುತ್ತೇನೆ.
ಸುಲಭವಾಗಿ ಜ್ಞಾನ ಸಿಗುತ್ತದೆ ಇಷ್ಟು ಕಷ್ಟ ಪಡಬೇಕಾದ ಅವಶ್ಯಕತೆ ಇಲ್ಲ ಎಂದು ಹೇಳಿತು ಅದಕ್ಕೆ ವಿದ್ವಾಂಸರು ಹೇಳಿದರು ನನಗೆ ಕಷ್ಟ ಪಡದೆ ಇರುವಂತಹ ಯಾವುದೇ ರೀತಿಯ ಪ್ರತಿಫಲ ನಮಗೆ ಬೇಕಾಗಿಲ್ಲ ನಾನು ಕಷ್ಟಪಟ್ಟಿದ್ದು ಮಾತ್ರ ನಾನು ತೆಗೆದುಕೊಳ್ಳುತ್ತೇನೆ ಇಲ್ಲದಿದ್ದರೆ ಅದು ನನಗೆ ಬೇಡ ಎಂದು ಹೇಳಿದರು.
ಇಷ್ಟೆಲ್ಲ ಕೇಳಿಸಿಕೊಂಡ ಮೇಲೆ ಮತ್ತೆ ನಿಮಗೆ ಏನಾದರೂ ಉಡುಗೊರೆ ಬೇಕಾದರೆ ಕೇಳಿ ನಾನು ಅದನ್ನು ನೀಡುತ್ತೇನೆ ಎಂದು ಶಬ್ದ ಬಂತು ಎಷ್ಟು ಸರಿ ಬೇಡ ಬೇಡ ಎಂದರೂ ಅದು ಮತ್ತೆ ಕೇಳುತ್ತಲೇ ಇತ್ತು.
ವಿದ್ವಾಂಸರು ಹೇಳಿದರು ನೀನು ಉಡುಗೊರೆ ಕೊಡಲೇಬೇಕು ಎಂದು ಇಷ್ಟ ಇದ್ದರೆ ಈ ದೀಪಕ್ಕೆ ಎಣ್ಣೆ ಹಾಕಿದರೆ ಸಾಕು ಇನ್ನೂ ಜಾಸ್ತಿ ಹೊತ್ತು ನಾನು ಓದಬಹುದು ಇದು ನನಗೆ ತುಂಬಾ ಸಹಾಯವಾಗುತ್ತದೆ ಎಂದು ಹೇಳಿದರು.
ನೀವು ಒಬ್ಬರೆ ಕೆಲಸ ಮಾಡಲು ಸಾಧ್ಯವಿಲ್ಲ
ಒಂದು ಕಾಲೇಜಿಗೆ ಶಿಕ್ಷಣ ನೀಡಲು ಪ್ರೊಫೆಸರ್ ಬಂದರು ಅವರು ಎಲ್ಲರನ್ನು ಮಾತನಾಡಿಸಿ ಒಂದು ಪ್ರಶ್ನೆಯನ್ನು ಕೇಳಿದರು ಈ ನಮ್ಮ ಕಾಲೇಜನ್ನು ಯಾರೂ ಕ್ಲೀನ್ ಮಾಡುತ್ತಾರೆ ಅವರ ಹೆಸರು ಏನು ಮತ್ತೆ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿರುತ್ತಾರೆ ಅವರ ಹೆಸರೇನು ಬಸ್ ಚಾಲಕರ ಹೆಸರು ಏನು? ಹೀಗೆ ಕೇಳಿದಾಗ ಎಲ್ಲರೂ ಸುಮ್ಮನಾದರು.
ಒಂದು ಹುಡುಗ ಕೇಳಿಯೇ ಬಿಟ್ಟ ಸರ್ ಇವರ ಹೆಸರು ನಮಗೆ ನೆನಪಿನಲ್ಲಿ ಏನಾದರೂ ಇದ್ದರೆ ಇದಕ್ಕೆ ಏನಾದರೂ ಅಂಕಗಳು ಸಿಗುತ್ತವೆಯೇ ಎಂದು ಕೇಳಿದನು ಆಗ ಪ್ರೊಫೆಸರವರು ಹೇಳಿದರು.
ಈ ಪ್ರಶ್ನೆಗೆ ಖಂಡಿತವಾಗಿಯೂ ಅಂಕಗಳು ಸಿಗಲಾರದು ಆದರೆ ನಿಮ್ಮ ಜೀವನಕ್ಕೆ ಇದರಿಂದ ತುಂಬಾ ಒಳ್ಳೆಯದಾಗುತ್ತದೆ ಎಂದು ವಿವರಿಸಿದರು ಇಂದಲ್ಲ ನಾಳೆ ನೀವು ಈ ಕಾಲೇಜನ್ನು ಬಿಟ್ಟು ಬೇರೆ ಎಲ್ಲಿಯೇ ಹೋದರು ಒಂದು ಸಂಸ್ಥೆಗೆ ಅಥವಾ ಕಂಪೆನಿಗೆ ಕೆಲಸಕ್ಕೆ ಹೋಗುತ್ತೀರಾ ಆಗ ನೀವು ಒಬ್ಬರೆ ಕೆಲಸ ಮಾಡಲು ಸಾಧ್ಯವಿಲ್ಲ.
ಇತರರು ನಿಮ್ಮ ಜೊತೆಯಲ್ಲಿ ಇದ್ದಾಗ ಕೆಲಸವನ್ನು ಚೆನ್ನಾಗಿ ಮಾಡಬಹುದು ಎಲ್ಲರೊಂದಿಗೆ ಸಹಕಾರ ಅತ್ಯಗತ್ಯ ಆದುದರಿಂದ ನಾನು ಈ ಪ್ರಶ್ನೆಯನ್ನು ಕೇಳಿದೆ ಎಂದು ಹೇಳಿದರು.
ನೀವು ಯಾವುದೇ ಕಡೆ ಹೋದಾಗ ಅಲ್ಲಿ ನೀವು ಹೊಂದಾಣಿಕೆ ಮಾಡಿ ಕೊಳ್ಳಲಿಲ್ಲ ವೆಂದರೆ ಬಹಳ ಕಷ್ಟವಾಗುತ್ತದೆ ಎಲ್ಲರೊಂದಿಗೆಯೂ ಸಹಕಾರ ಅತ್ಯಗತ್ಯ ಅದೇ ರೀತಿ ಕೆಲವು ಆಟವನ್ನು ಆಡಬೇಕಾದರೆ ಒಬ್ಬನಾಗಿ ಆಡಲು ಸಾಧ್ಯವಿಲ್ಲ.
ಕೆಲವು ಆಟಗಳಿಗೆ ತಂಡದವರು ಎಲ್ಲರೂ ಬೇಕೇ ಬೇಕು ಆ ತಂಡದಲ್ಲಿ ಇವನೇ ಮುಖ್ಯ ಇವನೇ ಕಡಿಮೆ ಎಂದು ಹೇಳಲು ಸಾಧ್ಯವಿಲ್ಲ ತಂಡದಲ್ಲಿ ಇದ್ದಾಗ ನಾವು ಎಲ್ಲರೊಂದಿಗೆ ಹೊಂದಿಕೊಂಡು ಹೋಗಲೇಬೇಕು.
ಹೊಂದಾಣಿಕೆ ಎನ್ನುವುದು ಶಾಲೆಯಲ್ಲಿ, ಕಾಲೇಜಿನಲ್ಲಿ, ಸಂಬಂಧಗಳಲ್ಲಿ, ನೆರೆಹೊರೆಯವರಲ್ಲಿ, ಕೆಲಸದ ಕಚೇರಿಯಲ್ಲಿ. ಎಲ್ಲಾ ಕಡೆಯೂ ತುಂಬಾ ಮುಖ್ಯವಾಗುತ್ತದೆ ಎಂದು ಹೇಳಿದರು. ನಾನು ಎಲ್ಲರೊಂದಿಗೆ ಹೊಂದಿಕೊಳ್ಳುತ್ತೇನೆಯೇ?
ನನಗೆ ಸೋಲಿಸಬೇಕು
ಕಾಡಿನಲ್ಲಿ ಹಸಿದ ಸಿಂಹವು ಬೇಟೆಗಾಗಿ ಹುಡುಕುತ್ತಿತ್ತು ಅದೇ ಸಮಯಕ್ಕೆ ಆ ಕಡೆಯಿಂದ ನರಿ ಈ ಕಡೆಯಿಂದ ತೋಳ ಬಂದಿತು ಸಿಂಹವು ಎಲ್ಲಿಗೆ ಹೋಗುತ್ತಿದ್ದೀರಿ ಎಂದಾಗ ನಾವು ಬೇಟೆಯಾಡಲಿಕ್ಕೆ ಹೋಗುತ್ತಿದ್ದೇವೆ ಎಂದಾಗ ಸಿಂಹವು ಹೇಳುತ್ತದೆ.
ಇಂದು ನಾವೆಲ್ಲರೂ ಸೇರಿ ಬೇಟೆಯಾಡೋಣ ಬೇಟೆಯಾದ ನಂತರ ಮೂವರು ಸೇರಿ ಹಂಚಿಕೊಳ್ಳೋಣ ಎಂದು ಹೇಳಿದಾಗ ನರಿ ಮತ್ತು ತೋಳಕ್ಕೆ ತುಂಬಾ ಸಂತೋಷವಾಗುತ್ತದೆ.
ಒಬ್ಬರೇ ಇದ್ದಾಗ ಬೇಟೆಯಾಡುವುದು ಕಷ್ಟವಾಗುತ್ತದೆ ನಾವು ಮೂರು ಸೇರಿದರೆ ತುಂಬಾ ಸುಲಭವಾಗಿ ಬೇಟೆಯಾಡಬಹುದು ಎಂದು ಮೂರು ಪ್ರಾಣಿಗಳು ಸ್ವಲ್ಪ ಸಮಯದಲ್ಲಿಯೇ ಒಂದು ಪ್ರಾಣಿಯನ್ನು ಬೇಟೆಯಾಡುತ್ತವೆ ನಂತರ ಮೂರು ಭಾಗವನ್ನು ನರಿ ಮತ್ತು ತೋಳ ಮುಂದಾಗುತ್ತವೆ.
ಆಗ ಸಿಂಹ ಹೇಳುತ್ತದೆ ಮೊದಲನೆಯ ಭಾಗ ನನಗೆ ಎರಡನೆಯ ಭಾಗ ನನ್ನ ಮನೆಗೆ ಮೂರನೆಯ ಭಾಗ ಬೇಕಾದರೆ ನನಗೆ ಸೋಲಿಸಬೇಕು ಎಂದಾಗ ನರಿ ತೋಳ ಎರಡು ಪ್ರಾಣಿಗಳು ತಮ್ಮ ಮುಖ ನೋಡಿಕೊಂಡು ಅಲ್ಲಿಂದ ಬೇಟೆಗಾಗಿ ಹೋಗುತ್ತವೆ.
ಕೆಲವು ದೊಡ್ಡ ಮನುಷ್ಯರು ತಮ್ಮ ಅವಶ್ಯಕತೆಯ ಅನುಸಾರವಾಗಿ ಉಪಯೋಗಿಸಿಕೊಳ್ಳುತ್ತಾರೆ ಭಾಗ ಕೊಡಬೇಕಾದಾಗ ಕೆಲವರು ಹೆದರಿಸಿ ಕಳುಹಿಸುವವರು ಇದ್ದಾರೆ ಆದ್ದರಿಂದ ದೊಡ್ಡವರಿಗೆ ಸಹಾಯ ಮಾಡಬೇಕಾದರೆ ಯೋಚನೆ ಮಾಡಿ ಸಹಾಯ ಮಾಡಬೇಕು ಇಲ್ಲದಿದ್ದರೆ ನರಿ ತೋಳಕ್ಕೆ ಆದ ಗತಿಯೇ ನಮಗೂ ಆಗುತ್ತದೆ. ನನ್ನನ್ನು ಯಾರಾದರೂ ಉಪಯೋಗಿಸಿಕೊಂಡಿದ್ದಾರೆಯೇ?
ಸಾಕ್ಷಿ ಬೇಕೇ ಬೇಕು
ಒಬ್ಬ ಮನುಷ್ಯ ಆಸ್ಪತ್ರೆಯಲ್ಲಿ ಹಲವಾರು ದಿನಗಳಿಂದ ಆರೋಗ್ಯ ಸರಿಯಿಲ್ಲದೆ ದಾಖಲಾಗಿದ್ದನು ದಿನೇದಿನೇ ಇವನ ಆರೋಗ್ಯ ಕ್ಷೀಣಿಸುತ್ತಲೇ ಇತ್ತು ಕೊನೆಗೆ ಒಂದು ದಿನ ಸತ್ತು ಹೋದ ನಂತರ ಆಸ್ಪತ್ರೆಯವರು ಸತ್ತಿದ್ದಾನೆ ಎಂದು ಮರಣ ಪ್ರಮಾಣ ಪತ್ರ ನೀಡಿದರು.
ಸತ್ತ ಮನುಷ್ಯನನ್ನು ಮನೆಗೆ ಕರೆದುಕೊಂಡು ಬಂದು ಎಲ್ಲರನ್ನು ತೋರಿಸಿ ಪೆಟ್ಟಿಗೆಯಲ್ಲಿ ಹಾಕಿದರು ಇನ್ನೇನು ಮುಚ್ಚಬೇಕು ನಂತರ ಸತ್ತ ಮನುಷ್ಯ ಎದ್ದು ಕುಳಿತನು ಎಲ್ಲರಿಗೂ ತುಂಬ ಗಾಬರಿಯಾಯಿತು ನಂತರ ಅವನನ್ನು ಹೊಡೆದು ಪೆಟ್ಟಿಗೆಯಲ್ಲಿ ಹಾಕಿ ಮತ್ತೆ ಸ್ಮಶಾನಕ್ಕೆ ಬಂದರು.
ಅಲ್ಲಿಯೂ ಕೂಡ ದಡಬಡ ದಡಬಡ ಎಂದು ಪೆಟ್ಟಿಗೆಗೆ ಹೊಡೆದನು ನಾನು ಬದುಕಿದ್ದೇನೆ ಎಂದು ಹೇಳಿದರೆ ಯಾರೂ ಕೂಡ ಕೇಳುತ್ತಿಲ್ಲ ಸಂಬಂಧಿಕರು ಕೂಡ ಹೇಳುತ್ತಿದ್ದಾರೆ ನೀನು ಸತ್ತದ್ದಕ್ಕೆ ಪ್ರಮಾಣಪತ್ರ ಇದೆ ನೀನು ಬದುಕಿ ಇರುವುದಕ್ಕೆ ಏನು ಏನು ಪ್ರಮಾಣ ಪತ್ರವಿದೆ ತೋರಿಸು ಎಂದು ಕೇಳಿದರು.
ವ್ಯಕ್ತಿ ಹೇಳಿದನು ನಾನು ಮಾತನಾಡುತ್ತಿದ್ದೇನೆ ನನ್ನ ಮಾತು ನಂಬಿ ಎಂದರೆ ಯಾರೂ ಕೂಡಾ ನಂಬಲು ತಯಾರಿಲ್ಲ ಕೊನೆಗೆ ಒಬ್ಬ ಹಿರಿಯ ನಿವೃತ್ತ ನ್ಯಾಯಾಧೀಶರನ್ನು ಕರೆದರು.
ಒಂದು ಸಮಸ್ಯೆ ಇದೆ ಪರಿಹರಿಸಿ ಎಂದಾಗ ಆ ನ್ಯಾಯಾಧೀಶರು ಕೂಡ ಬಂದು ಮನುಷ್ಯನಿಗೆ ಅದೇ ಪ್ರಶ್ನೆಯನ್ನು ಕೇಳಿದರು ನೀನು ಬದುಕಿದ್ದೀಯಾ ಎನ್ನುವುದಕ್ಕೆ ಏನು ಆಧಾರ ಇದೆ ಎಂದು ಹೇಳಿದರು ಸ್ವಾಮಿ ನಾನು ನಿಮ್ಮ ಕಣ್ಣ ಮುಂದೆಯೇ ಬದುಕಿದ್ದೇನೆ ಮಾತನಾಡುತ್ತಿದ್ದೇನೆ ಅರ್ಥಮಾಡಿಕೊಳ್ಳಿ ಎಂದನು.
ನ್ಯಾಯಾಧೀಶರು ಸಂಬಂಧಿಕರಿಗೆ ಕೇಳಿದರು ನಿಮ್ಮ ಹತ್ತಿರ ಏನಾದರೂ ಆಧಾರವಿದೆಯೇ ಎಂದಾಗ ಸತ್ತಿದ್ದಕ್ಕೆ ಮರಣ ಪ್ರಮಾಣ ಪತ್ರ ವನ್ನು (ಡೆತ್ ಸರ್ಟಿಫಿಕೇಟ್) ತೋರಿಸಿದರು ಹಾಗಾದರೆ ನೀನು ಸತ್ತು ಹೋಗಿದ್ದೀಯಾ ಎಂದು ಹೇಳಿ ಜೀವಂತವಾಗಿರುವ ವ್ಯಕ್ತಿಯನ್ನು ಹಳ್ಳದಲ್ಲಿ ಹಾಕಿ ಮಣ್ಣು ಮುಚ್ಚಿದರು. ಇದು ಹಳೆಯ ಕಥೆ ಆದರೆ ಎಲ್ಲದಕ್ಕೂ ಸಾಕ್ಷಿ ಸಿಗಬಹುದೇ?