ಒಂದು ಹಳ್ಳಿಯಲ್ಲಿ ಪರಿಶ್ರಮಿ ರೈತನು ಒಂದು ಪಾರಿವಾಳವನ್ನು ಸಾಕಿರುತ್ತಾನೆ ಮಳೆ ಬರುವುದಿಲ್ಲ ಆದುದರಿಂದ ರೈತನ ಯೋಚನೆ ಮಾಡುತ್ತಾನೆ ನಾನೇ ಕಷ್ಟಪಡಬೇಕಾಗುತ್ತದೆ ಆದ್ದರಿಂದ ಪಾರಿವಾಳವನ್ನು ನಾನು ರಾಜರಿಗೆ ಕೊಟ್ಟರೆ ಅಲ್ಲಾದರೂ ನನ್ನ ಪಾರಿವಾಳ ಚೆನ್ನಾಗಿ ಬದುಕಲಿ ಎಂದು ಚಿಂತಿಸಿ ನೇರವಾಗಿ ರಾಜನ ಅರಮನೆಗೆ ಹೋಗಿ ಆ ಪಾರಿವಾಳವನ್ನುಅರ್ಪಿಸುತ್ತಾನೆ.
ಸ್ವಲ್ಪ ಯೋಚನೆ ಮಾಡಿ ರಾಜನು ಇರಲಿ ಎಂದು ಆ ಪಾರಿವಾಳವನ್ನು ಇಟ್ಟುಕೊಳ್ಳುತ್ತಾನೆ ರಾಜನು ಕೂಡ ಯೋಚನೆ ಮಾಡುತ್ತಾನೆ ಇಲ್ಲಿಂದ ಬೇರೆ ಕಡೆಗೆ ಸಂದೇಶವನ್ನು ಕಳಿಸಬೇಕಾದರೆ ಪಾರಿವಾಳ ನಮಗೆ ಉಪಯುಕ್ತವೆಂದು ತಿಳಿಯುತ್ತಾನೆ.
ಪಾರಿವಾಳಕ್ಕೆ ಒಂದು ಮರದಲ್ಲಿ ಬಿಟ್ಟು ಅದಕ್ಕೆ ಬೇಕಾದ ತಿಂಡಿ ತಿನಿಸುಗಳನ್ನು ಗೋಡಂಬಿ, ದ್ರಾಕ್ಷಿ. ಎಲ್ಲವೂ ಒಳ್ಳೆಯ ಆಹಾರವನ್ನು ಕೊಡುತ್ತಾರೆ ಇದರಿಂದ ಪಾರಿವಾಳವು ದಷ್ಟಪುಷ್ಟವಾಗಿ ಬೆಳೆಯುತ್ತದೆ ನಂತರ ಅದು ಒಂದು ಕೊಂಬೆ ಮೇಲೆ ಕೂತಿದ್ದು ಬೇರೆ ಕಡೆ ಹಾರುವುದೇ ಇಲ್ಲ.
ರಾಜನಾದವನು ಸ್ವಲ್ಪ ದಿನದ ನಂತರ ಕೇಳುತ್ತಾನೆ ನಮ್ಮ ಪಾರಿವಾಳ ತುಂಬ ಚಟುವಟಿಕೆಯಾಗಿ ಇದ್ದೀಯಾ ಎಂದಾಗ ನೋಡಿಕೊಳ್ಳುವವರು ಹೇಳುತ್ತಾರೆ ಇಲ್ಲ ಆ ಪಾರಿವಾಳ ಏನೇ ಮಾಡಿದರೂ ಹಾರುವುದೇ ಇಲ್ಲ ಎಂದಾಗ ರಾಜನಾದವನು ಬೇರೆ ವೈದ್ಯರನ್ನು ಕರೆಸಿ ಅದಕ್ಕೆ ಏನು ಕಾರಣ ಇದೆ ಎಂದು ಕಂಡು ಹಿಡಿಯಿರಿ ಎಂದು ಹೇಳುತ್ತಾನೆ.
ವೈದ್ಯರು ಕೂಡ ಕಾರಣ ಏನೆಂದು ತಿಳಿಯಲು ಸಾಧ್ಯವಾಗುವುದಿಲ್ಲ ನಂತರ ಪಾರಿವಾಳ ಕೊಟ್ಟ ಆ ರೈತನಿಗೆ ಕರೆಯುತ್ತಾರೆ ಆಗ ರೈತನು ನೋಡುತ್ತಾನೆ ಕೇವಲ ಒಂದು ಗಂಟೆಯಲ್ಲಿಯೇ ಹಾರುವಂತೆ ಮಾಡಿ ಬರುತ್ತಾನೆ ಆಗ ರಾಜರು ಕೇಳುತ್ತಾರೆ ಹೇಗೆ ನೀವು ಈ ಸಮಸ್ಯೆಯನ್ನು ಪರಿಹರಿಸಿದ್ದೀರಿ ಎಂದಾಗ ರೈತನು ಹೇಳುತ್ತಾನೆ.
ರಾಜರೇ ಅಲ್ಲಿ ನಾನು ಸಾಕುತ್ತಿದ್ದಾಗ ತುಂಬಾ ಕಷ್ಟವಿತ್ತು ಇಲ್ಲಿ ನೀವು ಅದಕ್ಕೆ ಒಳ್ಳೆಯ ಆಹಾರವನ್ನು ಕೊಟ್ಟಿದ್ದೀರಾ ಆದುದರಿಂದ ಅದು ತನ್ನ ಕೆಲಸವನ್ನೇ ಮರೆತು ಹಾಯಾಗಿ ಕುಳಿತು ಬಿಟ್ಟಿದೆ.
ಅದು ಕೊಂಬೆಮೇಲೆ ಕುಳಿತಿರುವುದರಿಂದ ಆ ಕೊಂಬೆಯನ್ನು ಕತ್ತರಿಸಿ ಬಿಟ್ಟೆ ಈಗ ಆ ಪಾರಿವಾಳಕ್ಕೆ ಬೇರೆ ದಾರಿಯೇ ಇಲ್ಲ ಹಾರಲೇ ಬೇಕು ಅದಕ್ಕಾಗಿ ಹಾರಿದೆ ಇನ್ನು ಮುಂದೆ ಅದಕ್ಕೆ ಎಷ್ಟು ಬೇಕೋ ಅಷ್ಟೇ ಆಹಾರವನ್ನು ಕೊಡಿ ಎಂದು ಹೇಳಿ ಹೊರಟು ಹೋಗುತ್ತಾನೆ. ನಾನು ಸದಾ ಚಟುವಟಿಕೆಯಿಂದ ಇದ್ದೇನೆ ಯೇ?
ಹಗ್ಗವನ್ನು ಮುಖ್ಯ ದಾರಿಗೆ ಕಟ್ಟುತ್ತಾನೆ
ಒಂದು ಊರಿನಲ್ಲಿ ಒಬ್ಬ ಸುಸಂಕೃತ ರಾಜ ಇರುತ್ತಾನೆ ಆ ರಾಜ್ಯದಲ್ಲಿ ಎಲ್ಲಾ ಕಡೆಯು ಸುಭಿಕ್ಷವಾಗಿ ನಡೆಯುತ್ತಿರುತ್ತದೆ ಮಂತ್ರಿ ತುಂಬಾ ಬುದ್ಧಿವಂತನಾಗಿರುತ್ತಾನೆ ಯಾರಾದರೂ ಬುದ್ಧಿವಂತರೂ ಇದ್ದಾರೆ ಎಂದರೆ ಇತರರು ಅವನನ್ನು ಬೀಳಿಸಲಿಕ್ಕೆ ಸದಾ ಕಾಯುತ್ತಿರುತ್ತಾರೆ.
ಇದೇ ರೀತಿಯಾಗಿ ರಾಜನಿಗೆ ಆಗಾಗ ಮಂತ್ರಿಯ ಮೇಲೆ ಚಾಡಿಯನ್ನು ಹೇಳುತ್ತಲೇ ಇರುತ್ತಾರೆ ರಾಜನು ಒಂದು ಸಲ ಯೋಚನೆ ಮಾಡುತ್ತಾನೆ ಎಲ್ಲರಿಗೂ ಅರ್ಥವಾಗಬೇಕು ಆ ರೀತಿ ಏನು ಮಾಡಬಹುದೆಂದು ಎಲ್ಲರಿಗೂ ಸಭೆಗೆ ಕರೆಯುತ್ತಾನೆ.
ಯಾರು ಯಾರು ಮಂತ್ರಿಯ ಮೇಲೆ ಚಾಡಿ ಹೇಳುತ್ತಿರುತ್ತಾರೆ ಅವರೆಲ್ಲರನ್ನು ಕರೆದು ಹೇಳುತ್ತಾನೆ ಸುಮಾರು ನೂರು ಅಡಿ ಇರುವ ಒಂದು ಹಗ್ಗವನ್ನು ಕೊಡ್ತಾನೆ ಹಗ್ಗವನ್ನು ಬಳಸಿಕೊಂಡು ನೀವು ಸಾವಿರ ಚಿನ್ನದ ನಾಣ್ಯಗಳನ್ನು ಪಡೆದು ಒಂದು ದಿನದಲ್ಲಿ ಯಾರಾದರೂ ಸರಿ ಬರಬೇಕು ಎಂದು ಹೇಳುತ್ತಾನೆ.
ಒಂದು ದಿನದಲ್ಲಿ ಹೇಗೆ ತರಬೇಕು ಏನು ಮಾಡುವುದೆಂದು ತಿಳಿದಿರುವುದಿಲ್ಲ ಅದಕ್ಕಾಗಿ ಎಲ್ಲರೂ ಸೋಲನ್ನು ಒಪ್ಪಿಕೊಳ್ಳುತ್ತಾರೆ ಅದೇ ರೀತಿ ಬುದ್ಧಿವಂತನಾದ ಮಂತ್ರಿ ಅವನಿಗೆ ಇದೇ ಹಗ್ಗವನ್ನು ಕೊಟ್ಟು ರಾಜ ಅದೇ ರೀತಿ ಹೇಳುತ್ತಾನೆ ಮಂತ್ರಿ ನಾನು ಸಾವಿರ ಚಿನ್ನದ ನಾಣ್ಯವನ್ನು ತರುತ್ತೇನೆ ಎಂದು ಹೇಳುತ್ತಾನೆ ನಂತರ ಈ ಮಂತ್ರಿಯು ಊರಿನ ಹೊರಗೆ ಹೋಗಿ ಈ ಹಗ್ಗವನ್ನು ಮುಖ್ಯದಾರಿಗೆ ಕಟ್ಟುತ್ತಾನೆ.
ಈ ಹಗ್ಗವನ್ನು ಏಕೆ ಕಟ್ಟಿದ್ದೀರಾ ಎಂದು ಕೇಳಿದಾಗ ಮಂತ್ರಿಯು ಹೇಳುತ್ತಾನೆ ನಮ್ಮ ಊರಿನಲ್ಲಿ ಇರುವ ರಸ್ತೆಗಳು ದೊಡ್ಡದಾಗಿ ಮಾಡಬೇಕಾಗಿದೆ ಬರುವ ಎಲ್ಲಾ ಗಾಡಿಗಳು ವಾಹನಗಳು ಚಿಕ್ಕಚಿಕ್ಕ ದಾರಿಯಲ್ಲೇ ಬರುತ್ತವೆ ಆದುದರಿಂದ ನಿಮ್ಮ ಕೈಲಾದಷ್ಟು ಸಹಾಯ ಮಾಡಿದರೆ ಸುಸಜ್ಜಿತವಾದ ರಸ್ತೆಯನ್ನು ನಿರ್ಮಾಣ ಮಾಡುತ್ತಾರೆ.
ನೀವು ರಾತ್ರಿಯಾದರೂ ನಿಶ್ಚಿಂತೆಯಿಂದ ಓಡಾಡಬಹುದು ಎಂದು ಹೇಳುತ್ತಾನೆ ಆಗ ಎಲ್ಲರೂ ಯೋಚನೆ ಮಾಡಿ ತಮ್ಮ ಕೈಯಲ್ಲಿ ಸಾಧ್ಯವಾದಷ್ಟು ಎಲ್ಲರೂ ಹಣವನ್ನು ನೀಡುತ್ತಾರೆ ಈ ರೀತಿ ಮಾಡಿರುವುದರಿಂದ ಈ ಮಂತ್ರಿಗೆ 5ಸಾವಿರ ಚಿನ್ನದ ನಾಣ್ಯಗಳನ್ನು ತೆಗೆದುಕೊಂಡು ಬಂದು ಕೊಡುತ್ತಾನೆ.
ಮಂತ್ರಿಯು ಕೇವಲ ಅರ್ಧ ದಿನವೂ ತೆಗೆದುಕೊಳ್ಳುವುದಿಲ್ಲ ನಂತರ ಆ ಬಂದ ಹಣದಲ್ಲಿ ಊರಿನ ಒಳ್ಳೆಯ ದಾರಿಗಾಗಿಯೇ ಉಪಯೋಗಿಸುತ್ತಾರೆ ಆಗ ಈ ಮಂತ್ರಿ ಬುದ್ಧಿವಂತನೆಂದು ಎಲ್ಲರೂ ಒಪ್ಪಿಕೊಳ್ಳುತ್ತಾರೆ ಸಮಯಕ್ಕೆ ತಕ್ಕ ಹಾಗೆ ಬುದ್ಧಿವಂತಿಕೆ ಉಪಯೋಗಿಸೋಣ.
ನ್ಯಾಯ ಎಲ್ಲರಿಗೂ ಒಂದೇ
ಒಂದು ಊರಿನಲ್ಲಿ ರಾಜನಿಗೆ ಒಬ್ಬ ಅಯೋಗ್ಯ ಮಗನಿರುತ್ತಾನೆ ಈ ಮಗನಿಗೆ ಕೆಲವು ವರ್ಷಗಳ ನಂತರ ಯುವರಾಜ ಮಾಡಬೇಕೆಂದು ಎಲ್ಲರೂ ತೀರ್ಮಾನ ಮಾಡಿರುತ್ತಾರೆ ನಂತರ ಯುವರಾಜ ನೋಡಿದರೆ ಎಲ್ಲಾ ಕೆಟ್ಟ ಕೆಲಸಗಳೇ ಮಾಡುತ್ತಿರುತ್ತಾನೆ.
ತನಗೆ ಅಧಿಕಾರ ಇದೆ ಎಂದು ಎಲ್ಲರಿಗೂ ದರ್ಪ ತೋರಿಸುತ್ತಾನೆ ಊರಿನಲ್ಲಿ ಆಚೆ ಇರುವ ಬಡವರಿಗೆ ತೊಂದರೆ ಕೊಡುವುದು ಸಾಧುಸಂತರಿಗೆ ಕಷ್ಟಕೊಡುವುದು ಹೀಗೆಲ್ಲ ಮಾಡುತ್ತಿರುತ್ತಾನೆ ಮೊದಮೊದಲು ಎಲ್ಲರೂ ತಪ್ಪುಗಳನ್ನು ಯುವರಾಜ ಎಂದು ಕ್ಷಮಿಸಿಬಿಡುತ್ತಾರೆ.
ಯುವರಾಜನ ತಪ್ಪುಗಳು ಮಿತಿಮೀರಿ ಮಾಡುತ್ತ ಹೋಗುತ್ತಾನೆ ಆಗ ಊರಿನವರು ಬಂದು ರಾಜನನ್ನು ಹೇಳುತ್ತಾರೆ ರಾಜನು ರಾಣಿಗೆ ಮಗ ತುಂಬಾ ತಪ್ಪು ಮಾಡುತ್ತಿದ್ದಾನೆ ಇತರರಿಗೆ ಬಹಳಷ್ಟು ತೊಂದರೆ ನೀಡುತ್ತಿದ್ದಾನೆ ಅವನಿಗೆ ಶಿಕ್ಷೆ ಆಗಲೇಬೇಕು ಎಂದು ರಾಣಿಗೆ ಹೇಳುತ್ತಾನೆ.
ರಾಣಿ ಏನೇ ತಪ್ಪು ಮಾಡಿದರು ಇವನೇ ಮುಂದಿನ ರಾಜ ಮತ್ತೊಂದು ಸಾರಿ ಅವಕಾಶ ನೀಡಬೇಕೆಂದು ರಾಣಿ ಕೇಳಿಕೊಳ್ಳುತ್ತಾಳೆ ಅದಕ್ಕೆ ಸ್ವಲ್ಪ ದಿನಗಳ ಸಮಯವನ್ನು ರಾಜನಾದವನು ತೆಗೆದುಕೊಳ್ಳುತ್ತಾನೆ ನಂತರವೂ ಮಗನಾದವನು ತುಂಬ ತಪ್ಪುಗಳನ್ನೇ ಮಾಡುತ್ತಿರುತ್ತಾನೆ.
ಕೆಲವು ದಿನಗಳ ನಂತರ ಒಂದು ದೊಡ್ಡ ಸಭೆಯನ್ನು ಕರೆದು ಎಲ್ಲರನ್ನೂ ಕೇಳುತ್ತಾನೆ ಏನು ಮಾಡಬೇಕು ಎಂದಾಗ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಹೇಳ್ತಿರುತ್ತಾರೆ ಕೊನೆಗೆ ರಾಜನಾದವನು ಮಗನನ್ನು ಮುಂದೆ ನಿಲ್ಲಿಸಿ ಕತ್ತಿಯನ್ನು ತೆಗೆದುಕೊಂಡು ಮಗನಿಗೆ ಕತ್ತರಿಸಿಯೇ ಬಿಡುತ್ತಾನೆ ಏಕೆಂದರೆ ಇವನ ತಪ್ಪುಗಳು ನಾನು ಮೊದಲಿನಿಂದಲೇ ಗಮನಿಸಿ ಕೊಂಡು ಬರುತ್ತಿದ್ದೇನೆ.
ಯಾರಿಗೆ ರಾಜನಾಗುವ ಅರ್ಹತೆ ಇದೆಯೋ ಅವರೇ ರಾಜ್ಯಭಾರವನ್ನು ಮಾಡಬಹುದಾಗಿದೆ ನ್ಯಾಯ ಎಲ್ಲರಿಗೂ ಒಂದೇ ಎಂದು ಹೇಳುತ್ತಾನೆ.
ಸದಾ ಅದೇ ಚಿಂತೆ
ಹಲವಾರು ವರ್ಷಗಳ ನಂತರ ಇಬ್ಬರು ಸ್ನೇಹಿತೆಯರು ಒಂದು ಕಾರ್ಯಕ್ರಮಕ್ಕೆ ಬಂದಿರುತ್ತಾರೆ ಇಬ್ಬರು ಭೇಟಿಯಾದ ನಂತರ ತಮ್ಮ ಕಷ್ಟ ಸುಖಗಳನ್ನು ಮಾತನಾಡಿಕೊಳ್ಳುತ್ತಾರೆ ನಂತರ ಒಬ್ಬಳು ನಗು ಮುಖದಿಂದ ಇರುತ್ತಾಳೆ ಇವಳು ಸ್ನೇಹಿತೆಗೆ ಕೇಳುತ್ತಾಳೆ.
ಏನೋ ಸದಾ ಚಿಂತೆಯಲ್ಲಿ ಇರುವಂತೆ ಕಾಣುತ್ತಿದೆ ಏನು ಹೇಳು ಎಂದು ಕೇಳಿದಾಗ ಅವಳು ಹೇಳುತ್ತಾಳೆ ನಾನು ನನ್ನ ಮಗಳಿಗೆ ಮದುವೆ ಮಾಡಿಕೊಟ್ಟಿದ್ದೇನೆ ನನ್ನ ಮಗಳೇ ಸಾಕಷ್ಟು ಕೆಲಸಗಳನ್ನು ಮಾಡಬೇಕು ಬೆಳಿಗ್ಗೆ ಎದ್ದರೆ ರಾತ್ರಿಯವರೆಗೂ ಕೆಲಸ ಮಾಡಬೇಕು ಸ್ವತಂತ್ರವಿಲ್ಲ.
ಯಾರು ಕೂಡ ಬಂದು ಸಹಾಯ ಮಾಡುವುದಿಲ್ಲ ಹಾಗೆ ಗಂಡನಾದವನು ಕೂಡ ಅಷ್ಟಾಗಿ ಕೆಲಸಗಳಿಗೆ ಸಹಕರಿಸುವುದಿಲ್ಲ ಎಂದು ತನ್ನ ಚಿಂತೆಗಳನ್ನು ಹೇಳಿಕೊಂಡಳು.
ಇವಳ ಸ್ನೇಹಿತೆ ಹೇಳಿದಳು ನನಗೇನು ಚಿಂತೆ ಇಲ್ಲ ನಾನು ತುಂಬಾ ಸುಖವಾಗಿ ಇದ್ದೇನೆ ಏಕೆಂದರೆ ನನ್ನ ಮಗಳಿಗೆ ಮದುವೆ ಮಾಡಿಕೊಟ್ಟಿದ್ದೇನೆ ನನ್ನ ಮಗಳು ಯಾವುದೇ ರೀತಿಯ ಕೆಲಸ ಮಾಡುವ ಅವಶ್ಯಕತೆ ಇಲ್ಲ ಗಂಡನಾದವನು ಕೆಲಸ ಮಾಡಿಕೊಡುತ್ತಾನೆ ಹಾಗೆ ಅತ್ತೆ ಮಾವಂದಿರು ನಾದಿನಿಯರು ನನ್ನ ಮಗಳು ಹೇಳಿದಂತೆಯೇ ಕೆಲಸ ಮಾಡುತ್ತಾರೆ ಎಂದು ನಗುನಗುತ್ತಾ ಹೇಳಿದಳು ಒಂದೇ ಸಮಸ್ಯೆ ಇದ್ದರೂ ಕೂಡ ನೋಡುವ ದೃಷ್ಟಿಕೋನ ಬದಲಾಗಿರುತ್ತದೆ.
ತನಗೆ ಬೇಕಾದಂತೆ
ಒಂದು ಹಳ್ಳಿಯಲ್ಲಿ ಒಂದು ಮಧ್ಯಮ ವರ್ಗದ ಕುಟುಂಬ ಇತ್ತು ಅವರ ಕೆಲಸ ಸಮಾರಂಭಗಳಿಗೆ ಹೋಗಿ ತಮಟೆ, ಜಾಗಟೆ, ನಾಗರಿ, ವಾದ್ಯಗಳನ್ನು ನುಡಿಸುವುದು ಯಾವುದೇ ಊರಿನಲ್ಲಿ ಸಮಾರಂಭವಾದರೂ ಇವರೇ ಅಲ್ಲಿ ಹೋಗಿ ನುಡಿಸಿ ಬರುವುದು ಇವರ ಕಾಯಕ.
ತಂದೆಯಾದವರು ಒಂದು ಸಾರಿ ತನ್ನ ಮಗನನ್ನು ಬೇರೆ ಊರಿಗೆ ಕರೆದುಕೊಂಡು ಹೋಗುತ್ತಾರೆ ಬೆಳಿಗ್ಗೆಯಿಂದ ಸಂಜೆಯವರೆಗೂ ಕಾರ್ಯಕ್ರಮ ನಡೆಯುತ್ತದೆ ಒಳ್ಳೆಯ ಸಂಭಾವನೆಯೂ ಬರುತ್ತದೆ ನಂತರ ಊರಿನಿಂದ ಹಳ್ಳಿಗೆ ಬರಬೇಕು ಬರುವ ದಾರಿಯಲ್ಲಿ ದರೋಡೆಕೋರರು ರಾತ್ರಿಯ ಸಮಯದಲ್ಲಿ ಇದ್ದೇ ಇರುತ್ತಾರೆ ಇದು ತಂದೆಗೆ ತಿಳಿದಿತ್ತು.
ತಂದೆ ಮಗನಿಗೆ ಹೇಳಿದರು ನಮ್ಮ ಹತ್ತಿರ ಹಣವಿದೆ ಆದುದರಿಂದ ನಾವು ತಮಟೆ ಬಾರಿಸುತ್ತಾ ಹೋಗೋಣ ಈ ಸದ್ದಿನಿಂದ ಕಳ್ಳರು ಯಾರೂ ಬರುವುದಿಲ್ಲ ಎಂದು ತಂದೆ ಮಗನಿಗೆ ಹೇಳಿದರು.
ನಾವು ಶ್ರೀಮಂತರ ಮೆರವಣಿಗೆಯಲ್ಲಿ ಹೊರಟಾಗ ನಾವು ಏನು ತಮಟೆಯನ್ನು ಬಾರಿಸುತ್ತೇವೆ ಅದನ್ನು ಮಾತ್ರ ಬಾರಿಸಬೇಕು ಬೇರೆ ಯಾವುದೂ ಕೂಡ ಬಾರಿಸಬಾರದು ಎಚ್ಚರಿಕೆ ನೀಡುತ್ತಾರೆ.
ಮಗ ಮತ್ತೆ ಪ್ರಶ್ನೆ ಮಾಡಿದ ಹೋದ ಸರಿ ಶ್ರೀಮಂತರ ಮನೆಯಲ್ಲಿ ನಾವು ನುಡಿಸಿದ್ದೇನೆ ಅದೇ ಅಲ್ಲವೇ ಬಿಟ್ಟುಬಿಟ್ಟು ಸದ್ದು ಮಾಡುವುದು ತಂದೆ ಹೌದು ಇದರಿಂದ ಕಳ್ಳರು ದೂರ ಹೋಗುತ್ತಾರೆ.
ಯಾಕೆಂದರೆ ಶ್ರೀಮಂತರ ಸಮಾರಂಭಗಳಲ್ಲಿ ಹೆಚ್ಚಿನ ಆಳುಗಳು ಇರುತ್ತಾರೆ ಆದುದರಿಂದ ಯಾವ ಕಳ್ಳರು ಬರುವುದಿಲ್ಲ ಎಂಬುದು ಅವರ ನಂಬಿಕೆ ಕಳ್ಳರು ಹತ್ತಿರ ಸುಳಿಯುವುದಿಲ್ಲ ಆಗ ಮಗನಾದವನು ಸ್ವಲ್ಪದೂರ ಇದೇ ರೀತಿ ಬಾರಿಸಿಕೊಂಡು ಹೋದ ನಂತರ ಅವನಿಗೆ ನುಡಿಸುವುದು ಸರಿ ಅನಿಸಲಿಲ್ಲ ತನಗೆ ಬೇಕಾದಂತೆ ನುಡಿಸಲು ಶುರು ಮಾಡಿದ ನಂತರ ಕಳ್ಳರಿಗೆ ತಿಳಿಯಿತು.
ಇವರು ಸಮಾರಂಭಕ್ಕೆ ಹೋಗುತ್ತಿಲ್ಲ ಬೇರೆ ಯಾರೋ ಹೋಗುತ್ತಿದ್ದರೆ ಇವರನ್ನು ದಾಳಿ ಮಾಡಿದರೆ ಹಣ ಸಿಗುತ್ತದೆ ಎಂದು ದಾಳಿ ಮಾಡಿದರು ಇರುವ ಹಣವನ್ನು ದೋಚಿಕೊಂಡು ಹೋದರು ಆಗ ತಂದೆ ಹೇಳಿದ ಮಾತು ಮಗನಿಗೆ ಅರ್ಥವಾಯಿತು ಮುಂದೆ ಮುನ್ನೆಚ್ಚರಿಕೆಯಿಂದ ಇರಬೇಕು ಎಂದು ಮಗನಿಗೆ ಅರಿವಾಯಿತು. ನಿಯಮಗಳನ್ನು ಪಾಲನೆ ಮಾಡದೆ ನಷ್ಟ ಮಾಡಿಕೊಂಡಿದ್ದೇನೆಯೇ?