ನಾಳೆ ನಾನು ಏನೇನು ಮಾಡಬೇಕು?

ಒಬ್ಬ ಮನುಷ್ಯ ನಿದ್ದೆಯಿಂದ ಗಾಬರಿಯಾಗಿ ಏಳುತ್ತಿದ್ದನು ಇವನಿಗೆ ಒಂದು ಕನಸು ಬೀಳುತ್ತಿತ್ತು ಕನಸು ಯಾವ ರೀತಿ ಎಂದರೆ ಮರಳು ಗಾಡಿನಲ್ಲಿ ಎಲ್ಲಿಯೂ ಹಸಿರೂ ಇಲ್ಲ ಬರಿ ಮರಳು ಕಾಣಿಸುತ್ತಿತ್ತು ಯಾವ ಕಡೆ ನೋಡಿದರೂ ಬರೀ ಮರಳೆ ಮರಳಿನಲ್ಲಿ ಒಂದು ಜೊತೆ ಚಪ್ಪಲಿಗಳ ಗುರುತು ಇದೆ.

 ಮುಂದೆ ನೋಡಿದರೆ ಎಲ್ಲಿಯೂ ಗುರುತುಗಳು ಸಿಗುತ್ತಿಲ್ಲ ಇವನಿಗೆ ಕನಸುಗಳು ಬರುತ್ತಿರುವುದರಿಂದ ಇವನ ನಿದ್ರೆ ಭಂಗವಾಗುತ್ತಿತ್ತು ತನ್ನ ಮನೆಯಲ್ಲಿ ಹೇಳಿದ ಗೆಳೆಯರಿಗೆ ಹೇಳಿದ ಆದರೂ ಇದಕ್ಕೆ ಅರ್ಥಗೊತ್ತಾಗುತ್ತಿಲ್ಲ ಕೊನೆಗೆ (ಕೌನ್ಸಿಲಿಂಗ್) ಆಪ್ತಸಲಹೆಗೆ ಹೋದನು.

 ಅಲ್ಲಿ ಮನೋಚಿಕಿತ್ಸಕರು ಇವನ ಬಗ್ಗೆ ಎಲ್ಲವೂ ವಿವರವಾಗಿ ಕೇಳಿದರು ಮನೋಚಿಕಿತ್ಸಕರು ಕೇಳಿದರು ನಿನ್ನ ಚಪ್ಪಲಿಯ ಗುರುತು ಸಿಗುತ್ತಿಲ್ಲ ವೆಂದು ನೀನು ಹೇಳ್ತಿದಿಯಾ ಅಲ್ಲವೇ ಹೌದು ಎಂದನು ಇದಕ್ಕೆ ಕಾರಣವೇನು ನಿನಗೆ ಗೊತ್ತಾಗಲಿಲ್ಲ ಅಲ್ಲವೇ ಎಂದು ಹೇಳಿದಾಗ ಹೌದು ಅದಕ್ಕಾಗಿ ನಾನು ಎಲ್ಲೆಲ್ಲೂ ಕೇಳಿ ಬಂದಿದ್ದೇನೆ ಆದರೂ ಅರ್ಥವಾಗುತ್ತಿಲ್ಲ ಎಂದನು.

ಮನು ಚಿಕಿತ್ಸೆಕರು ಹೇಳಿದರು ರಾತ್ರಿ ಮಲಗುವುದಕ್ಕಿಂತ ಮುಂಚೆ ನಾಳೆ ಏನೇನು ಕೆಲಸ ಮಾಡಬೇಕು ಎಂದು ಏನಾದರೂ ನೀವು ಪ್ಲಾನ್ ಮಾಡುತ್ತೀರೋ? ಎಂದಾಗ ಇವನು ಇಲ್ಲ ಎಂದನು ಎಲ್ಲೆಲ್ಲಿ ಹೋಗಬೇಕು ಏನೇನು ಮಾಡಬೇಕು ಎಂದು ಅದಕ್ಕೂ ಇಲ್ಲ ಎಂದನು.

ಮನೋಚಿಕಿತ್ಸಕರು ಹೇಳಿದರು ನಿನ್ನ ಬದುಕಿಗೆ ಅರ್ಥ ಇಲ್ಲ ಅಂದ ಮೇಲೆ ನಿಮ್ಮ ಕನಸಿಗೆ ಹೇಗೆ ಅರ್ಥಸಿಗುತ್ತದೆ ಎಂದು ಹೇಳಿದರು ನಂತರ ಅವನಿಗೆ ತಿಳಿಯಿತು ಹೌದು ಇವರು ಹೇಳಿರುವುದರಲ್ಲಿ ಸತ್ಯಾಂಶವಿದೆ ನಾಳೆ ನಾನು ಏನೇನು ಮಾಡಬೇಕು? ಎಂದು ಮಲಗಿದನು ಚಿಂತನೆ ಮಾಡಿ ಮಲಗಿದ ನಂತರ ಕನಸು ಬೀಳಲಿಲ್ಲವಂತೆ ನಾನು ಮಲಗುವುದಕ್ಕಿಂತ ಮುಂಚೆ ನಾಳೆ ಏನೇನು ಮಾಡಬೇಕೆಂದು ಯೋಚಿಸುತ್ತೇನೆಯೇ?

 ಇಂತಹ ಪ್ರದರ್ಶನವೇ

ಸಮುದ್ರದ ತೀರದಲ್ಲಿ ಒಂದು ದಿನ ಅರ್ಚಕರು ಬೆಳಗಿನ ವಾಕಿಂಗ್ ಮಾಡೋಣವೆಂದು ಬಂದರು ಆಗ ಎಳೆಯ ಬಿಸಿಲು ತಂಪಾದ ಗಾಳಿ ಬಿಸುತ್ತಿತ್ತು ಅರ್ಚಕರು ನಡೆದುಕೊಂಡು ಬರುತ್ತಿದ್ದಂತೆಯೇ ಒಂದು ವಿಚಿತ್ರ ದೃಶ್ಯವನ್ನು ನೋಡಿದರು ಒಬ್ಬ ಯುವಕ ಒಂದು ಯುವತಿಯನ್ನು ತನ್ನ ಬೆನ್ನ ಮೇಲೆ ಕೂರಿಸಿಕೊಂಡು ಬರುತ್ತಿದ್ದಾನೆ.

 ಇದನ್ನು ನೋಡಿದ ಅರ್ಚಕರಿಗೆ ಅಸಹ್ಯವೆನಿಸಿತು ಬಲು ಸಿಟ್ಟು ಬಂತು ಎಲ್ಲರೂ ಓಡಾಡುವ ಜಾಗದಲ್ಲಿ ಇಂತಹ ಪ್ರದರ್ಶನವೇ ಎಂದು ಮನದಲ್ಲಿ ಕೋಪಿಸಿಕೊಂಡರು ನಂತರ ಆ ಯುವಕ ಯುವತಿಯನ್ನು ಕೆಳಗೆ ಇಳಿಸಿ ಸೊಂಟದಮೇಲೆ ಕೂರಿಸಿಕೊಂಡು ನಂತರ ಸ್ವಲ್ಪ ದೂರ ನಡೆದನು.

 ಮತ್ತೆ ಕೆಳಗೆ ಇಳಿದು ತರುಣಿಯ ಕಾಲುಗಳನ್ನು ಚೆನ್ನಾಗಿ ಒತ್ತಿದನು ಇದನ್ನು ನೋಡಿದ ಅರ್ಚಕರಿಗೆ ತಡೆಯಲು ಆಗಲಿಲ್ಲ ಬೆಳಿಗ್ಗೆ ಬೆಳಿಗ್ಗೆಯೇ ಇಂತಹ ಅಶ್ಲೀಲ ಪ್ರದರ್ಶನ ನೋಡಿ ರಕ್ತ ಕೊತ ಕೊತ ಕುದಿಯಿತು ಬೇರೆ ಯಾರು ನೋಡಬಾರದು ಎಂದು ನಂತರ ವಾಕಿಂಗ್ ಮಾಡುವುದನ್ನು ಬಿಟ್ಟು ಅಲ್ಲಿ ಇದ್ದ ಹಿರಿಯರಿಗೆ ಕರೆದುಕೊಂಡು ಬಂದರು.

 ಸಹಾಯಕ್ಕೆ ಸ್ವಲ್ಪ ಜನರನ್ನೂ ಕೂಡ ಕರೆತಂದರು ಮೊದಲೇ ಅರ್ಚಕರು ಅರ್ಚಕರಿಗೆ ಎಲ್ಲರೂ ಗೌರವಿಸುತ್ತಾರೆ ನಂಬುತ್ತಾರೆ ನಂತರ ಇಬ್ಬರೂ ನೀರಿನಲ್ಲಿ ಕಾಲು ಹಾಕಿ ಕುಳಿತಿದ್ದರು ನಂತರ ಮರಳಿನ ಮೇಲೆ ಕೂರಿಸಿ ಕಾಲುಗಳನ್ನು ಒತ್ತುತ್ತಿದ್ದನು.

 ಒಂದು ಬಾಟಲಿನಿಂದ ಏನೋ ಕುಡಿಯುತ್ತಿದ್ದನು ಇದು ಕಣ್ಣಾರೆ ನೋಡಿದಾಗ ಆ ಯುವಕನ ಮೇಲೆ ತಡೆಯಲಾರದೆ ಮತ್ತಷ್ಟು ಕೋಪ ಬಂದು ಬಂದಿದ್ದವರು ಎಲ್ಲರೂ ಸೇರಿ ಇವನನ್ನು ಹಿಗ್ಗಾಮುಗ್ಗ ಹೊಡೆದರು  ನಂತರ ಒಬ್ಬ ಕೇಳಿದ ಬೆಳಿಗ್ಗೆ ಬೆಳಿಗ್ಗೆ ಈ ರೀತಿ ಅಶ್ಲೀಲ ಕೆಲಸ ಮಾಡುವುದು ನಿನಗೆ ಸರಿ ಎನಿಸುತ್ತಿದೆ ಎಂದು ಕೇಳಿದ ಆಗ ಯುವಕನು ದುಃಖದಿಂದ ಹೇಳಿದ ಹೇಳಿದ.

 ಹಿರಿಯರೇ ಇವಳು ನನ್ನ ತಂಗಿ ನನ್ನ ತಂಗಿಯ ಕಾಲುಗಳು ಬಿದ್ದುಹೋಗಿವೆ ನಮ್ಮನ್ನು ಊರಿನಲ್ಲಿ ಯಾರೂ ಮುಟ್ಟುವುದಿಲ್ಲ ಯಾರು ಕುದುರೆಗಾಡಿಯು ಸಹ ಕೊಡಲಿಲ್ಲ ಆದುದರಿಂದ ಇವಳನ್ನು ನಾನು ಹೊತ್ತುಕೊಂಡೆ ಬೇರೆ ವೈದ್ಯರ ಬಳಿಗೆ ಕರೆದುಕೊಂಡು ಹೋಗುತ್ತಿದ್ದೇನೆ.

 ಕಾಲನ್ನು ಅಮುಕಿದರೆ ಅವಳಿಗೆ ಸ್ವಲ್ಪ ನೋವು ಕಡಿಮೆಯಾಗುತ್ತದೆ ನಾನು ಗಂಗೆಯ ನೀರನ್ನೂ ಕುಡಿಯುತ್ತಿದ್ದೇನೆ ಎಂದು ಹೇಳಿದನು ತಪ್ಪಾಗಿದ್ದರೆ ದಯವಿಟ್ಟು ಕ್ಷಮಿಸಬೇಕು ಎಂದು ವಿನಮ್ರವಾಗಿ ಕೇಳಿಕೊಂಡನು.

 ಅಲ್ಲಿ ಬಂದಿದ್ದ ಹಿರಿಯರು ಕೂಡ ತಲೆಬಾಗಿದರು ಅದು ಅಶ್ಲೀಲತೆ ಇರಲಿಲ್ಲ ಆದರೆ ನೋಡುವವರ ದೃಷ್ಟಿಯಲ್ಲಿ, ಮನಸ್ಸಿನಲ್ಲಿ ಅಶ್ಲೀಲತೆ ತುಂಬಿ ತುಳುಕಾಡುತ್ತಿತ್ತು ಅಷ್ಟೆ ನಮ್ಮ ದೃಷ್ಟಿ ಶುದ್ಧವಾಗಿದ್ದರೆ ಶುದ್ಧವಾಗಿರುವುದನ್ನೇ ನೋಡುತ್ತೇವೆ ನಮ್ಮ ದೃಷ್ಟಿ ಪರಿಶುದ್ಧವಾಗಿಟ್ಟುಕೊಳ್ಳೋಣ. ನಾನು ಇತರರನ್ನು ನೋಡಿದಾಗ ಯಾವ ದೃಷ್ಟಿಯಿಂದ ನೋಡುತ್ತೇನೆ?

 ನಿನಗೆ ತಾಕತ್ತಿದ್ದರೆ ನೀನು ಮಾಡಿ ತೋರಿಸು

ಒಂದು ಕೆರೆಯ ದಡದಲ್ಲಿ ಒಂದು ಚಿಕ್ಕ ಪಕ್ಷಿ ತನ್ನ ಮೊಟ್ಟೆಗಳನ್ನು ಜೋಪಾನ ಮಾಡಿ ಮರದ ಕೆಳಗೆ ಜೋಪಾನವಾಗಿ ಇಡುತ್ತಿತ್ತು ಇದನ್ನು ನೋಡಿಕೊಳ್ಳಲು ಕೆರೆಗೆ ಹೇಳಿತು ಕೆರೆ ಆ ಮೊಟ್ಟೆಗಳನ್ನು ತೆಗೆದುಕೊಂಡಿತು ಕೆಲವು ದಿನಗಳ ನಂತರ ಮೊಟ್ಟೆಗಳು ನೋಡಿದರೆ ಯಾವುದೇ ಮೊಟ್ಟೆಗಳು ಇರಲಿಲ್ಲ.

ಚಿಕ್ಕಪಕ್ಷಿ ಕೆರೆಗೆ ಹೇಳಿತು ನೀನು ನೋಡಿಕೊಳ್ಳಬೇಕು ಎಂದು ಹೇಳಿದೆ ಮಾತಿಗೆ ತಪ್ಪಿದ್ದೀಯಾ ನೀನೇ ಮೊಟ್ಟೆಗಳನ್ನು ತೆಗೆದುಕೊಂಡಿದ್ದೀಯಾ ದಯಮಾಡಿ ನನ್ನ ಮೊಟ್ಟೆಗಳನ್ನು ಕೊಟ್ಟುಬಿಡು ಅಂಗಲಾಚಿತು ಕೇಳಿತು ಆಗ ನದಿಯು ಅಹಂಕಾರದಿಂದ  ಹೇಳಿತು ನೀನು ಅಲ್ಲಿ ಇಟ್ಟಿದ್ದೆ ತಪ್ಪು ಈಗ ನಿನಗೆ ಯಾವ ಮೊಟ್ಟೆಗಳು ಸಿಗುವುದಿಲ್ಲ ಹೋಗು ಎಂದು  ಹಾಸ್ಯದಿಂದ ಅಣಿಕಿಸಿತು.

  ಚಿಕ್ಕಪಕ್ಷಿಯು ಹೇಳಿತು ನಾನು ಮನಸ್ಸು ಮಾಡಿದರೆ ನದಿಯ ಪೂರ್ತಿ ನೀರನ್ನು ಒಣಗಿಸಿ ಬಿಡುತ್ತೇನೆ ಎಂದು ಹೇಳಿತು ಆಗ ನಿನಗೆ ತಾಕತ್ತಿದ್ದರೆ ನೀನು ಮಾಡಿ ತೋರಿಸು ಎಂದು ನದಿ ಹೇಳಿತು ಆಗ ಚಿಕ್ಕಪಕ್ಷಿಯು ನಿಧಾನವಾಗಿ ತನ್ನ ಚುಂಚಿನಿಂದ ಕೆಲವು ನೀರಿನ ಹನಿಗಳನ್ನು ತೆಗೆದು ಆಚೆ ಹಾಕಲು ಆರಂಭಿಸಿತು.

 ಇದನ್ನು ನೋಡಿದ ಕೆಲವು ಪಕ್ಷಿಗಳು ಕೇಳಿದವು ಏನು ಮಾಡುತ್ತಿದ್ದೀಯಾ ಎಂದಾಗ ಪಕ್ಷಿ ಹೇಳಿತು ನನ್ನ ಕಷ್ಟ ನನಗೆ ಮಾತ್ರ ಅರ್ಥವಾಗುತ್ತದೆ ಇತರರಿಗೆ ಅರ್ಥವಾಗುವುದಿಲ್ಲ ನಂತರ ತನ್ನ ಕಷ್ಟ ಹೇಳಿಕೊಂಡಿತು ಎಲ್ಲಾ ನೀರನ್ನು ಬತ್ತಿಸಬೇಕು ಎಂದು ನಾನು ಶಪಥ ಮಾಡಿದ್ದೇನೆಎಂದು ತಿಳಿಸಿತು.

ಪಕ್ಷಿಗಳು ಒಂದೊಂದಾಗಿ ಬಂದು ಸೇರಿದವು ಸ್ವಲ್ಪ ಸ್ವಲ್ಪವೇ ನೀರನ್ನು ತೆಗೆದು ಕೊನೆಗೆ ಕೆರೆಯ ನೀರನ್ನು ಇನ್ನು ಸ್ವಲ್ಪದಲ್ಲಿಯೇ ಸಂಪೂರ್ಣವಾಗಿ ಕಡಿಮೆಯಾಗಬೇಕು ಈ ಮಟ್ಟಕ್ಕೆ ಬಂತು ಆಗ ಇತರರು ಬುದ್ಧಿ ಹೇಳಿದಾಗ ನದಿಯು ಪಕ್ಷಿಯ ಮೊಟ್ಟೆಗಳನ್ನು ಹಿಂತಿರುಗಿಸಿತು ನಂತರ ನದಿ ತನ್ನ ತಪ್ಪನ್ನು ಅರಿತುಕೊಂಡಿತು.

ಸೂಕ್ಷ್ಮವಾಗಿ ಗಮನಿಸಿದ್ದೀಯಾ?

ಸಿನಿಮಾ ರಂಗದಲ್ಲಿ ಹೆಚ್ಚು ಸಿನಿಮಾಗಳು ಹೆಸರು ಮಾಡಿದೆ ಅದರಲ್ಲಿ ಟೆನ್ ಕಮಾಂಡ್ ಮೆಂಟ್ಸ್ ಈ ಸಿನೆಮಾವು ಕೂಡ ಲೋಕದಲ್ಲೇ ಹೆಸರೂ ವಾಸಿಯಾಗಿದೆ ಇದಕ್ಕೆ ನಿರ್ದೇಶನ ನೀಡಿದವರು ಡೆಮಿಲ್ಲೆ ಇವರು ನೋಡುವುದಕ್ಕೆ ತುಂಬಾ ಕೋಪಿಷ್ಟ ಮತ್ತೆ ಡೆಮಿಲ್ಲೆ ವಿರುದ್ಧವಾಗಿ ಯಾರೂ ಮಾತನಾಡುತ್ತಿರಲಿಲ್ಲ.

 ಡೆಮಿಲ್ಲೆ ಏನು ಹೇಳುತ್ತಾರೋ ಅದನ್ನು ಪಾಲಿಸುತ್ತಿದ್ದರು ಅಷ್ಟೆ ಆದರೆ ಇವರ ವೃತ್ತಿ ಒಂದು ಚಿಕ್ಕ ಚಿಕ್ಕ ಅಂಶಗಳನ್ನು ಸಹ ಸೂಕ್ಷ್ಮವಾಗಿ ಗಮನಿಸುತ್ತಿದ್ದರು ಟೆನ್ ಕಮಾಂಡ್ ಮೆಂಟ್ಸ್ ನಲ್ಲಿ ಒಂದು (ಸೀನ್) ದೃಶ್ಯ ಇದೆ ಸಹಸ್ರಾರು ಜನರು ಸಮುದ್ರ ತೀರಕ್ಕೆ ಹೋಗಿರುತ್ತಾರೆ.

 ಆಗ ಸಮುದ್ರ 2 ಭಾಗವಾಗುತ್ತದೆ ಎಲ್ಲರೂ ಈ ಕಡೆಯಿಂದ ಆ ಕಡೆಗೆ ನಡೆದುಕೊಂಡು ಹೋಗುತ್ತಾರೆ ಈ ಒಂದು ಸೀನು ತುಂಬ ರೋಮಾಂಚನಕಾರಿಯಾಗಿದೆ ಇದು ರಿಲೇ ಹೇಗೆ ಬರುತ್ತದೆ ಎಂದು ಕುಳಿತುಕೊಂಡು ವೀಕ್ಷಿಸುತ್ತಿದ್ದರು ಅದರಲ್ಲಿ ಇದ್ದಕ್ಕಿದ್ದ ಹಾಗೆ ಲೈಟ್ ಹಿಡಿವ ಒಬ್ಬ ಹುಡುಗ ತಪ್ಪು ಇದೆ ಎಂದು ಜೋರಾಗಿ ಕೂಗಿದನು.

 ಏನು ತಪ್ಪು ಎಂದು ಯಾರಿಗೂ ತಿಳಿಯಲಿಲ್ಲ ಶೀಘ್ರ ಕೋಪಿ ನಿರ್ದೇಶಕನಿಗೆ ಭಯಂಕರವಾಗಿ ಸಿಟ್ಟು ಬಂತು ಯಾರು ಹೇಳಿದ್ದು ಎಂದು ಜೋರಾಗಿ ಕೇಳಿದರು ಹುಡುಗ ಇದ್ದವನು ನಾನೇ ಎಂದು ಎದೆ ಉಬ್ಬಿಸಿಕೊಂಡು ಹೇಳಿದ ಇತರರು ಎಲ್ಲರೂ ಗಡಗಡ ನಡುಗಿದರು ಏಕೆಂದರೆ ಡೆಮಿಲ್ಲೆ ಎದುರು ಮಾತನಾಡುವವರೇ ಇಲ್ಲ ಅಂತಹದರಲ್ಲಿ ಈ ಹುಡುಗ ಈ ರೀತಿ ಹೇಳಿದ್ದಾನೆ.

 ಹುಡುಗ ಸರ್ ದಯಮಾಡಿ ಹಿಂದಿನ ಒಂದು ಸನ್ನಿವೇಶವನ್ನು ನೋಡಿ ಅಲ್ಲಿ ಒಂದು ಚಿಕ್ಕ ತಪ್ಪು ಇದೆ ಎಂದು ಹೇಳಿದನು ಡೆಮಿಲ್ಲೆ ತಪ್ಪು ಎಲ್ಲಿದೆ ಎಂದು ಜೋರಾಗಿ ಕೇಳಿದರು ಆಗ ಹುಡುಗನು ದಯವಿಟ್ಟು ಸಹನೆಯಿಂದ ನೋಡಿ ಒಬ್ಬ ವ್ಯಕ್ತಿಯ ತೋಳಿನ ಮೇಲೆ ಸ್ಪಷ್ಟವಾಗಿ ಚುಚ್ಚುಮದ್ದಿನ ಗುರುತು ಕಾಣಿಸುತ್ತಿದೆ.

 ನಮ್ಮ ಸಿನಿಮಾದ ಕಥೆಯು ಬಹಳಷ್ಟು ವರ್ಷ ಹಿಂದೆ ನಡೆದಿರುವಂತದ್ದು ಚುಚ್ಚುಮದ್ದು ಈಗ ಶುರುವಾಗಿದೆ ಎಂದು ಹೇಳಿದನು ಇದನ್ನು ಕೇಳಿದ ಮೇಲೆ ಡೆಮಿಲ್ಲೆ ಅವರಿಗೆ ಅಪಾರ ಸಂತೋಷವಾಯಿತು ನನಗಿಂತ ಸೂಕ್ಷ್ಮವಾಗಿಗಮನಿಸಿದ್ದೀಯಾ?ಎಂದು ತುಂಬಾ ಮೆಚ್ಚಿಕೊಂಡರು.

 ನಂತರ ಇವನನ್ನೇ ಸಹಾಯಕ ನಿರ್ದೇಶಕನಾಗಿ ನೇಮಕ ಮಾಡಿಕೊಂಡರು ನಾವು ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಸೂಕ್ಷ್ಮವಾಗಿ ಗಮನಿಸಬೇಕು ಆಗ ಮಾತ್ರ ಅದರಲ್ಲಿರುವ ಒಳ್ಳೆಯದು ಕೆಟ್ಟದ್ದು ಎರಡೂ ತಿಳಿಯುತ್ತದೆ ನಂತರ ಸರಿ ಮಾಡಲು ಸಾಧ್ಯವಿಲ್ಲ ಕೆಲಸವಾದ ನಂತರ ಸೂಕ್ಷ್ಮವಾಗಿ ಒಂದು ಸಾರಿ ಗಮನಿಸುವ ಅಭ್ಯಾಸ ಮಾಡಿಕೊಳ್ಳೋಣ. ನಾನು ಸೂಕ್ಷ್ಮವಾಗಿ ಗಮನಿಸಿ ಹಿರಿಯರಿಂದ ಶಬ್ಬಾಶ್ ಎಂದು ಹೊಗಳಿಸಿಕೊಂಡಿದ್ದೇನೆಯೇ?

ತೊಂದರೆ ಕೊಡಲು ಬರುತ್ತಾರೆ

ಒಂದು ಸಾರಿ ದಾರಿಯಲ್ಲಿ ಸಹನಶೀಲ  ಸಾಧುರವರು ಹೋಗುತ್ತಿದ್ದರು ಆಗ ಒಬ್ಬ ದೈತ್ಯಾಕಾರದ ವ್ಯಕ್ತಿ ಬಂದು ಇವರನ್ನು ನೋಡಿ ತಕ್ಷಣ ಒಂದು ಏಟನ್ನು ಕೆನ್ನೆಗೆ ಬಾರಿಸಿಬಿಟ್ಟ ಸಾಧು ಅವರು ಏನೂ ಗೊತ್ತಿಲ್ಲದ ತಪ್ಪು ಮಾಡಿದ್ದಾನೆಂದು ಎರಡನೇ ಕೆನ್ನೆಯನ್ನು ತೋರಿಸಿದರು.

ಎರಡನೆಯ ಕೆನ್ನೆಗೂ ಅವನು ಹೊಡೆದು ಬಿಟ್ಟ ನಂತರ ಎರಡೂ ಕೆನ್ನೆಯನ್ನು ಒರೆಸಿಕೊಂಡು ಸಾಧುರವರು ಬಲ ಬಿಟ್ಟು ಒಂದೇ ಏಟು ದೈತ್ಯಾಕಾರದ ವ್ಯಕ್ತಿಯ ಕೆನ್ನೆಗೆ ಹೊಡೆದರು ಆಗ ಆ ದೈತ್ಯಾಕಾರದ ವ್ಯಕ್ತಿ ಹೊಡೆದ ರಭಸಕ್ಕೆ ಕೆಳಗೆ ಬಿದ್ದನು ನಂತರ ಕೇಳಿದ ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸಬೇಕು ಎಂದು ಹೇಳಿದ್ದಾರೆ ಅದನ್ನು ನಾನು ಪರೀಕ್ಷಿಸಿದೆ ಎಂದನು.

 ಸಾಧು ರವರೇ ನೀವು ಏಕೆ ಈ ರೀತಿ ಮಾಡಲಿಲ್ಲ ಎಂದು ಸಾಧುವಿಗೆ ಕೇಳಿದನು ಸಾಧು ಅವರು ವಿನಯದಿಂದ ಹೇಳಿದರು ನನಗೆ ಮೂರನೇ ಕೆನ್ನೆ ಇಲ್ಲ ಮೂರನೇ ಕೆನ್ನೆ ಇರುವುದೇ ನಿಮಗೆ ಆದುದರಿಂದ ತಕ್ಷಣ ನನಗೆ ಏನು ತೋಚಲಿಲ್ಲ ಇದಕ್ಕೆ ರೀತಿ ಮಾಡಿದ್ದೇನೆ ಎಂದು ಹೇಳುತ್ತಾರೆ.

 ನಾನು ನನ್ನ ನಿಯಮವನ್ನು ಪಾಲಿಸಿದ್ದೇನೆ ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆಗೆ ತೋರಿಸಬೇಕು ಎಂದು ಅದೇ ರೀತಿ ಮಾಡಿದ್ದೇನೆ ಎಂದರು ಕೆಲವರು ನಾವು ಒಳ್ಳೆಯವರು ಎಂದರೆ ವಿನಾಕಾರಣ  ತೊಂದರೆ ಕೊಡಲು ಬರುತ್ತಾರೆ ಅವರಿಗೆ ಸರಿಯಾಗಿ ಒಂದು ಸರಿ ಪಾಠ ಕಲಿಸಿದರೆ ಮಾತ್ರ ನಮ್ಮ ತಂಟೆಗೆ ಬರುವುದಿಲ್ಲ

Leave a Comment