ಒಂದು ಊರಿನಲ್ಲಿ ಒಬ್ಬ ಅಗಸ ಇದ್ದನು ಅಗಸನು ಒಂದು ಕತ್ತೆಯನ್ನು ಸಾಕಿದ್ದನು ಕತ್ತೆಗೆ ಸ್ವಲ್ಪ ವಯಸ್ಸಾಗಿತ್ತು ಬರಬೇಕಾದರೆ ಕಲ್ಲು ನೋಡದೆ ಎಡವಿ ಬಿದ್ದಿತು ಇದರಿಂದ ಬೆನ್ನಿನ ಮೇಲೆ ಹಾಕಿದ್ದ ಬಟ್ಟೆ ಮತ್ತೆ ಒಗೆಯ ಬೇಕಾಯಿತು.
ಅಗಸನು ಕೋಪಗೊಂಡ ಅಗಸ ಕತ್ತೆಯನ್ನು ಹೊಡೆದು ನೀನು ನನ್ನ ಮನೆಗೆ ಬರಬೇಕಾದರೆ ಕಾಡಿನಲ್ಲಿ ಇರುವ ಸಿಂಹವನ್ನು ಹಿಡಿದುಕೊಂಡು ಬರಬೇಕು ಇಲ್ಲದಿದ್ದರೆ ನಿನ್ನ ಮುಖ ತೋರಿಸಬೇಡ ಎಂದು ಹೇಳಿ ಕತ್ತೆಗೆ ಹೊರಗೆ ಕಳುಹಿಸಿದನು.
ಕತ್ತೆಯು ಅಳುತ್ತಾ ಕಾಡಿನ ಮಾರ್ಗದಲ್ಲಿ ನಿಂತಿತ್ತು ಅದೇ ಸಮಯಕ್ಕೆ ಒಂದು ಬುದ್ಧಿವಂತ ನರಿ ಬರುತ್ತಿತ್ತು ಕತ್ತೆ ಅಳುತ್ತಿರುವುದನ್ನು ನೋಡಿ ಸ್ನೇಹಿತ ನೀನು ಏಕೆ ಅಳುತ್ತಿದ್ದೀಯಾ? ಎಂದು ಪ್ರೀತಿಯಿಂದ ಕೇಳಿತು ಕತ್ತೆಯು ತನ್ನ ಕಷ್ಟವನ್ನು ಹೇಳಿತು ಅದಕ್ಕೆ ಬುದ್ಧಿವಂತ ನರಿ ನಾನು ಹೇಳಿದಂತೆ ಮಾಡು ಎಂದಾಗ ಕತ್ತೆಯು ನಾನು ಏನು ಬೇಕಾದರೂ ಮಾಡಲು ಸಿದ್ಧನಿದ್ದೇನೆ ಎಂದು ಹೇಳಿತು.
ನರಿಯು ನನ್ನ ಜೊತೆ ಸ್ವಲ್ಪ ದೂರ ಬಾ ಎಂದು ಎಂದು ಕರೆದುಕೊಂಡು ಹೋಗಿ ಕತ್ತೆಗೆ ಹೇಳಿತು ನೀನು ಸತ್ತಂತೆ ಮಲಗಿಬಿಡು ನಾನು ಹೇಳಿದಾಗ ಮಾತ್ರ ನೀನು ಏಳಬೇಕು ಎಂದು ಹೇಳಿ ಕತ್ತೆಗೆ ಮಲಗಿಸಿ ಹೋಯಿತು ಸ್ವಲ್ಪ ದೂರದಲ್ಲಿಯೇ ಸಿಂಹದ ಗುಹೆ ಇತ್ತು ಸಿಂಹಕ್ಕೂ ವಯಸ್ಸಾಗಿತ್ತು ಕಾಡಿನ ಪ್ರಾಣಿಗಳಿಗೆ ಆಗಾಗ ತೊಂದರೆ ನೀಡುತ್ತಿತ್ತು ಬೇಟೆಯಾಡುವುದು ಕಷ್ಟವಾಗಿತ್ತು ಇದನ್ನು ಅರ್ಥಮಾಡಿಕೊಂಡ ನರಿ ಸಿಂಹಕ್ಕೆ ಹೇಳಿತು.
ನಿಮ್ಮ ಅದೃಷ್ಟ ಚೆನ್ನಾಗಿದೆ ಸ್ವಲ್ಪ ದೂರದಲ್ಲಿಯೇ ಒಂದು ಕತ್ತೆ ಸತ್ತು ಬಿದ್ದಿದೆ ನೀವು ತಿನ್ನಬಹುದಾಗಿದೆ ಎಂದು ಹೇಳಿದಾಗ ಸಿಂಹಕ್ಕೆ ಬಾಯಲ್ಲಿ ನೀರು ಬಂತು ಸಿಂಹವು ತುಂಬಾ ಹಸಿದಿತ್ತು ನಡಿ ಹೋಗೋಣ ಎಂದು ಸಿಂಹ ಹೇಳಿತು ಬಂದು ನೋಡಿದರೆ ಕತ್ತೆಯು ಮಲಗಿದೆ ಸಿಂಹ ನೋಡಿ ಹೇಳಿತು.
ಇದು ತುಂಬಾ ದೊಡ್ಡದಾಗಿದೆ ಎಂದಾಗ ನರಿಯು ನೀವೇನು ಯೋಚನೆ ಮಾಡಬೇಡಿ ಕತ್ತೆಯನ್ನು ಎಳೆದುಕೊಂಡು ಹೋಗೋಣ ನೀವು ಕತ್ತೆಯ ಹಿಂದೆ ಮಲಗಿಕೊಳ್ಳಿ ನಿಮ್ಮ ಬಾಲಕ್ಕು ಕತ್ತೆಯ ಬಾಲಕ್ಕು ನಾನು ಗಟ್ಟಿಯಾಗಿ ಕಟ್ಟಿ ಬಿಡುತ್ತೇನೆ ಎಂದು ಉಪಾಯ ಹೇಳಿತು ಈ ಉಪಾಯಕ್ಕೆ ಮೂರ್ಖ ಸಿಂಹವು ಒಪ್ಪಿತು.
ನರಿಯು ಈ ಕತ್ತೆಯ ಮತ್ತು ಸಿಂಹದ ಬಾಲಕ್ಕು ಗಟ್ಟಿಯಾಗಿ ಬೇಲಿಯಿಂದ ಕಟ್ಟುಹಾಕಿತು ನಂತರ ಕತ್ತೆಯ ಕಿವಿಯ ಹತ್ತಿರ ಬಂದು ನಿನ್ನ ಮಾಲೀಕ ನಿನ್ನನ್ನು ಕರೆಯುತ್ತಿದ್ದಾನೆ ತಕ್ಷಣ ಹೋಗು ಎಂದು ಹೇಳಿತು ಕತ್ತೆಯು ಎದ್ದಿದ ತಕ್ಷಣ ಶರವೇಗದಲ್ಲಿ ದಿಕ್ಕು ದೆಸೆ ಇಲ್ಲದೆ ಯದ್ವಾತದ್ವ ಮಾಲೀಕನ ಮನೆಗೆ ಓಡಿತು.
ಕತ್ತೆಯ ಬಾಲಕ್ಕೆ ಸಿಂಹವನ್ನು ಕಟ್ಟಿದ್ದರಿಂದ ಸಿಂಹದ ಹಿಡಿತ ತಪ್ಪಿತು ಕತ್ತೆ ಓಡುತ್ತಿದ್ದಂತೆಯೇ ಸಿಂಹಕ್ಕೆ ಎಳೆದುಕೊಂಡು ಹೋಗುತ್ತಿರುವುದಿಂದ ರಕ್ತ ಬಂದಿತು ದಾರಿ ಯುದ್ದಕ್ಕೂ ಇಡೀ ಶರೀರಕ್ಕೆ ಏಟು ಬೀಳುತ್ತಿತ್ತು ಇದರಿಂದ ಸಿಂಹವು ದಾರಿಯಲ್ಲೇ ಸತ್ತಿತು ಕಥೆಯು ಅಗಸನ ಮುಂದೆ ನಿಂತಿತು ನೋಡಿದ ಮಾಲೀಕನು ಹರ್ಷಗೊಂಡನು ಊರಿನವರು ಆಗಸನಿಗೆ ತುಂಬಾ ಗೌರವಿಸಿದರು ಕತ್ತೆಗೂ ತುಂಬಾ ಸಂತೋಷವಾಯಿತು ನರಿ ಮಾಡಿದ ಉಪಾಯಕ್ಕೆ ಮನಸ್ಸಿನಲ್ಲಿಯೇ ಕೃತಜ್ಞತೆ ಸಲ್ಲಿಸಿತು.
ಮಕ್ಕಳನ್ನು ಏಕೆ ಕೇಳಬಾರದು
ಒಂದು ಊರಿನಲ್ಲಿ ಜಾತ್ರೆ ಇತ್ತು ಸಂಸಾರ ಸಮೇತನಾಗಿ ಹೋಗುತ್ತಿದ್ದರು ಹೆಂಡತಿ ಮಕ್ಕಳು ಎಲ್ಲರೂ ಚಿಕ್ಕ ಹುಡುಗ ಹೋಗುತ್ತಿದ್ದಂತೆಯೇ ಎಲ್ಲಾ ಜಾತ್ರೆ ನೋಡಿ ಸಂತೋಷಪಟ್ಟನು ನಂತರ ನಂತರ ಹೋಗುತ್ತಿದ್ದಂತೆಯೇ ಚುರುಮುರಿ ಮಾರುತ್ತಿದ್ದನು.
ಅಪ್ಪ ಎಂದಾಗ ಚುರುಮುರಿ ಬೇಕು ಎಂದು ಚುರುಮರಿ ಕೊಡಿಸಿದರು ಇನ್ನೂ ಸ್ವಲ್ಪ ಮುಂದೆ ಹೋದಾಗ ಮಿಠಾಯಿ ಅಂಗಡಿ ಸಿಕ್ಕಿತು ಅಪ್ಪಾ ಎಂದಾಗ ಮಿಠಾಯಿಯನ್ನು ಕೊಡಿಸಿದರು ಇನ್ನು ಮುಂದೆ ಹೋದಾಗ ಕಡ್ಲೆ ಕಾಯಿ ಮಾರುತ್ತಿದ್ದರು ಅಪ್ಪ ಎಂದಾಗ ಕಡಲೆಕಾಯಿ ಕೊಡಿಸಿದರು.
ಅಪ್ಪ ಹೇಳುತ್ತಿದ್ದರು ನಿನಗೆ ಏನು ಬೇಕು ಎಂದು ನನಗೆ ಚೆನ್ನಾಗಿ ಗೊತ್ತಿದೆ ಇನ್ನೂ ಸ್ವಲ್ಪ ಮುಂದೆ ಹೋದಾಗ ಐಸ್ ಕ್ರೀಮ್ ಅಂಗಡಿ ಕಾಣಿಸಿತು ಅಲ್ಲಿಯೂ ಅಷ್ಟೇ ಅಪ್ಪ ಆದವರು ನನಗೆ ಗೊತ್ತು ಎಂದು ಐಸ್ಕ್ರೀಮ್ ಕೊಡಿಸಿದರು ಮುಂದೆ ಹೋದಂತೆ ಆಟದ ಸಾಮಾನುಗಳು ಕಾಣಿಸಿತು ಅಪ್ಪಾ ಎಂದಾಗ ಆಟದ ಸಾಮಾನು ಕೊಡಿಸಿದರು.
ಮತ್ತೆ ಏನು ಏನು ಎಂದು ಕೇಳುತ್ತಿದ್ದರು ಕೊನೆಗೆ ಹುಡುಗ ಹೇಳಿದ ಅಪ್ಪಾ ನನಗೆ ನಡೆಯುವುದಕ್ಕೆ ಆಗುತ್ತಿಲ್ಲ ಎಂದನು ಸಾಮಾನ್ಯವಾಗಿ ಗಂಡ ಹೆಂಡತಿಯರು ಇಬ್ಬರು ಇದೇ ರೀತಿ ಮಾಡುತ್ತಿರುತ್ತಾರೆ ಮಕ್ಕಳು ಕೇಳಿದ ತಕ್ಷಣ ಏನು ಎಂದು ಕೇಳದೆಯೇ ಮಕ್ಕಳಿಗಿಂತ ನಮಗೆ ಚೆನ್ನಾಗಿ ಗೊತ್ತು ಬೇಕೋ ಬೇಡವೋ ಎಲ್ಲವನ್ನು ಕೊಡಿಸುತ್ತಿರುತ್ತಾರೆ.
ವಿದ್ಯಾಭ್ಯಾಸದಲ್ಲೂ ಕೂಡ ಅಷ್ಟೇ ವಿದ್ಯಾರ್ಥಿಗೆ ಅಥವಾ ವಿದ್ಯಾರ್ಥಿನಿಗೆ ಆ ವಿಷಯ ಇಷ್ಟವಿದೆಯೋ ಇಲ್ಲವೋ ಎಂದು ಕೇಳುವುದೇ ಇಲ್ಲ ತಂದೆ ತಾಯಿಯವರೇ ನಮಗೆ ಚೆನ್ನಾಗಿ ಗೊತ್ತು ಎಂದು ಹೇಳುತ್ತಾರೆ ಮಕ್ಕಳನ್ನು ಏಕೆ ಕೇಳಬಾರದು ನಿನಗೆ ಯಾವುದು ಇಷ್ಟ ಯಾವುದು ನಿಮ್ಮ ಆಯ್ಕೆ ಯಾವುದು ಎಂದು ಕೇಳಿ ಇಷ್ಟವಾದುದು ಕೊಟ್ಟರೆ ಮಕ್ಕಳಿಗೆ ಸಂತೋಷವಾಗುತ್ತದೆ.
ಇಷ್ಟಪಟ್ಟಿದ್ದು ಕೊಡಿಸಿದರೆ ತುಂಬಾ ಖುಷಿಯಾಗಿರುತ್ತಾರೆ ಮಕ್ಕಳ ಭವಿಷ್ಯದಬಗ್ಗೆ ನಾವೇ ತೀರ್ಮಾನ ಮಾಡಬಾರದು ಮಕ್ಕಳ ಮನದಲ್ಲಿ ಏನಿದೆ ಎಂದು ತಿಳಿದು ಕೊಂಡು ಸರಿಯಾದ ಮಾರ್ಗದರ್ಶನ ನೀಡೋಣ.
ತುಂಬಾ ಸುಂದರವಾದ ದಿನ
ಒಂದು ಸಾರಿ ರಸ್ತೆಯ ಮೇಲೆ ಒಬ್ಬ ಕುರುಡ ಭಿಕ್ಷುಕ ಕಪ್ಪು ಕನ್ನಡಕ ಹಾಕಿ ಭಿಕ್ಷೆ ಬೇಡುತ್ತಿದ್ದನು ಪಕ್ಕದಲ್ಲಿ ಇನ್ನೊಬ್ಬ ಚಿಕ್ಕ ಹುಡುಗ ಅವರ ಜೊತೆಗೆ ಇದ್ದನು ಒಂದು ಫಲಕ ಇತ್ತು ಆ ಫಲಕದಲ್ಲಿ ಹೀಗೆ ಬರೆದಿತ್ತು ನನಗೆ ಕಣ್ಣಿಲ್ಲ ದಾನ ಮಾಡಿ ಎಂದು ಮುಂದೆ ತಟ್ಟೆ ಇಟ್ಟಿದ್ದನು.
ಇದರಲ್ಲಿ ಬಂದವರೆಲ್ಲರೂ ಹಣ ಹಾಕಿ ಹೋಗುತ್ತಿದ್ದರು ಈ ಬರೆದಿರುವ ಫಲಕವನ್ನು ಒಬ್ಬ ಕಿಲಾಡಿ ನೋಡಿ ಸ್ವಲ್ಪ ಬದಲಾಯಿಸುತ್ತೇನೆ ಇನ್ನೂ ಹೆಚ್ಚು ಭಿಕ್ಷೆ ಬೀಳುತ್ತದೆ ಎಂದು ಹೇಳಿದನು ಅದಕ್ಕೆ ಭಿಕ್ಷುಕ ಒಪ್ಪಿದನು.
ಕಿಲಾಡಿ ಬರೆದಿದ್ದು ಇಷ್ಟೆ ಈ ದಿನ ತುಂಬಾ ಸುಂದರವಾದ ದಿನ ನೀವು ಭಾಗ್ಯವಂತರು ಈ ಪ್ರಪಂಚವನ್ನು ನೋಡಬಹುದು ನಾನು ನೋಡಲಿಕ್ಕೆ ಸಾಧ್ಯವಿಲ್ಲ ಏನಾದರೂ ಸ್ವಲ್ಪ ದಾನ ಮಾಡಿ ಎಂದು ಬರೆದಿತ್ತು ಇದನ್ನು ಓದಿದ ಜನರಿಗೆ ಹೃದಯ ಹಿಂಡುವಂತಿತ್ತು.
ಸಾಧ್ಯವಾದಷ್ಟು ಹಣ ಹಾಕುತ್ತಾ ಹೋದರು ಸಂಜೆಗೆ ನೋಡಿದರೆ ಭಿಕ್ಷೆ ಜಾಸ್ತಿಯಾಗಿತ್ತು ಅದರಲ್ಲಿ ಸ್ವಲ್ಪ ಬದಲಾವಣೆ ಮಾಡಿದ್ದು ಅಷ್ಟೇ ಕೆಲವು ಕೆಲಸಗಳಲ್ಲಿ ಸ್ವಲ್ಪ ಬದಲಾವಣೆ ಮಾಡಿದರೆ ಬಹಳಷ್ಟು ಬದಲಾವಣೆ ಕಾಣಬಹುದಾಗಿದೆ.
ನನಗೆ ಗೊಂದಲವಾಗುತ್ತಿದೆ
ಒಂದು ಊರಿನಲ್ಲಿ ಒಬ್ಬ ರೈತ ವಾಸವಾಗಿದ್ದನು ಹಲವಾರು ವರ್ಷಗಳ ನಂತರ ರೈತನ ಹೆಂಡತಿ ಗಂಡು ಮಗುವಿಗೆ ಜನ್ಮ ನೀಡಿದಳು ಇದರಿಂದಾಗಿ ಗಂಡ ಹೆಂಡತಿ ಸಂಭ್ರಮಿಸಿದರು ಹಾಗೆ ಕೆಲ ದಿನಗಳು ಕಳೆಯಿತು ನಂತರ ಮಗುವಿಗೆ ಯಾವುದೋ ಒಂದು ಕಾಯಿಲೆ ಬಂತು ಎಲ್ಲಿ ತೋರಿಸಿದರೂ ಚಿಕಿತ್ಸೆ ಫಲಕಾರಿ ಯಾಗುತ್ತಿಲ್ಲ ಇದೇ ಚಿಂತೆಯಲ್ಲಿ ಕಾಲ ಕಳೆಯುತ್ತಿದ್ದರು ಮಾರನೆಯ ದಿನ ಮಗು ಸತ್ತು ಹೋಯಿತು.
ಸ್ವಲ್ಪ ಸಮಯ ಮಲಗಿದ್ದ ರೈತ ಎದ್ದು ನೋಡಿದಾಗ ಎಲ್ಲರೂ ಶೋಕ ಪಡುತ್ತಿದ್ದಾರೆ ರೈತನು ಮಂಕಾಗಿ ನಿಂತುಬಿಟ್ಟನು ರೈತನು ಅಳಲಿಲ್ಲ ಹೆಂಡತಿಯ ರೋದನೆ ಹೇಳತೀರದು ಆಗ ಹೆಂಡತಿ ಗಂಡನಿಗೆ ಹೇಳುತ್ತಾಳೆ ನೀವು ಅಳುತ್ತಿಲ್ಲ ನಿಮ್ಮ ಹೃದಯ ಕಲ್ಲು ಹೃದಯ ಒಂದು ಹನಿ ಕಣ್ಣೀರು ಕೂಡ ಬರುತ್ತಿಲ್ಲವಲ್ಲ ಎಂದು ತನ್ನ ವೇದನೆ ವ್ಯಕ್ತಪಡಿಸುತ್ತಾಳೆ.
ಆಗ ರೈತ ನಾನು ಏಕೆ ಅಳುತ್ತಿಲ್ಲ ಅನ್ನುವುದು ನಿನಗೆ ಹೇಳುತ್ತೇನೆ ಕೇಳು ಮಗುವಿಗೆ ನೋಡಿಕೊಳ್ಳುತ್ತಿದ್ದಂತೆಯೇ ನಿದ್ರೆಗೆ ಜಾರಿದೆ ನನಗೆ ಒಂದು ಕನಸು ಬಿತ್ತು ಆ ಕನಸಿನಲ್ಲಿ ನಾನು ರಾಜ ನೀನು ರಾಣಿ ನಮಗೆ ಒಂದಲ್ಲ ಏಳು ಮಕ್ಕಳು ಇದ್ದರು ಏಳು ಮಕ್ಕಳು ಕೂಡಾ ರಾಜಕುಮಾರರು.
ಎಲ್ಲರೂ ಕೂಡ ಚೆನ್ನಾಗಿ ರಾಜ್ಯವನ್ನು ಆಳುತ್ತಿದ್ದಾರೆ ನಂತರ ಬಿರುಗಾಳಿ ಬಂದು ಏಳು ಮಕ್ಕಳು ಕೂಡ ಸಾವಿಗೆ ತುತ್ತಾದರು ಎಲ್ಲರೂ ಸತ್ತರು ಕಣ್ಣುಬಿಟ್ಟು ನೋಡಿದರೆ ಈ ನಮ್ಮ ನಿಜವಾದ ಮಗ ಸತ್ತಿದ್ದಾನೆ ಈಗ ನನಗೆ ಗೊಂದಲವಾಗುತ್ತಿದೆ.
ಏಳು ಮಕ್ಕಳು ಸತ್ತಿದ್ದಕ್ಕೆ ದುಃಖಿಸಲೋ ಅಥವಾ ಈ ಒಬ್ಬ ಮಗನು ಸತ್ತಿದ್ದಕ್ಕಾಗಿ ಅಳುವುದೋ ಯಾವುದೂ ನನಗೆ ಸರಿಯಾಗಿ ಗೊತ್ತಾಗುತ್ತಿಲ್ಲ ಎಂದನು ನಮಗೆ ಯಾವುದೂ ಶಾಶ್ವತವಲ್ಲ ಎಂದು ಅರಿತನು.
ಬೈದುಕೊಂಡು ಹೋಗುತ್ತಾನೆ
ಊರಿಗೆ ಹೋಗುವ ಮುಂಚೆಯೇ ಒಂದು ದೊಡ್ಡ ಮರವಿತ್ತು ಆ ಮರದಲ್ಲಿ ಒಬ್ಬ ಹಿರಿಯರು ತತ್ವಜ್ಞಾನಿ ಕುಳಿತಿದ್ದರು ಒಬ್ಬ ನೀಚ ಬುದ್ಧಿಯುಳ್ಳ ಮನುಷ್ಯ ಬಂದು ಕೇಳಿದನು ಹಿರಿಯರೇ ನಾನು ಈ ಊರಿಗೆ ಬರಬೇಕು ಎಂದು ಯೋಚಿಸಿದ್ದೇನೆ ಈ ಊರಿನ ಜನರು ಎಂತಹವರು ಆಗ ಹಿರಿಯರು ಕೇಳಿದರು.
ನಿಮ್ಮ ಊರಿನ ಜನರು ಹೇಗಿದ್ದಾರೆ ಎಂದಾಗ ನಮ್ಮ ಊರಿನ ಜನರು ಅಹಂಕಾರಿಗಳು, ಸುಳ್ಳುಗಾರರು, ಸ್ವಾರ್ಥಿಗಳು, ಮೋಸ ಮಾಡುವುದು ಜಾಸ್ತಿ ಎಂದು ಹೇಳಿದ ಆಗ ಹಿರಿಯರು ಈ ಊರಿನ ಜನರು ಇದೇ ರೀತಿ ಇದ್ದಾರೆ ದಯವಿಟ್ಟು ನೀನು ಈ ಊರಿಗೆ ಬರಬಾರದು ಎಂದು ಹೇಳುತ್ತಾರೆ ಆ ಮನುಷ್ಯ ಈ ಊರು ಕೂಡ ಚೆನ್ನಾಗಿಲ್ಲ ಎಂದು ಬೈದುಕೊಂಡು ಹೋಗುತ್ತಾನೆ ನಂತರ ಇನ್ನೊಬ್ಬ ನೀತಿವಂತ ಮನುಷ್ಯ ಬರುತ್ತಾನೆ.
ಹಿರಿಯರನ್ನು ನಮಸ್ಕಾರಮಾಡಿ ಹಿರಿಯರೇ ನಾನು ಈ ಊರಿಗೆ ಬರಬೇಕೆಂದು ಇದ್ದೇನೆ ಇಲ್ಲಿಯ ಜನರು ಹೇಗಿದ್ದಾರೆ ಎಂದು ತಿಳಿಸುವಿರಾ ಎಂದು ಭಕ್ತಿಯಿಂದ ಕೇಳುತ್ತಾನೆ ಹಿರಿಯರು ಮತ್ತೆ ಅದೇ ಪ್ರಶ್ನೆ ಕೇಳುತ್ತಾರೆ ನೀವು ಈಗ ಇರುವ ಊರಿನ ಜನರು ಹೇಗಿದ್ದಾರೆ ಎಂದಾಗ ನಮ್ಮ ಊರಿನ ಜನರು ತುಂಬಾ ಒಳ್ಳೆಯವರು ಸಹಾಯ ಮಾಡುವ ಮನಸ್ಸು ಉಳ್ಳವರು ಮತ್ತು ಏನೇ ತೊಂದರೆಯಾದರೂ ಅವರೆಲ್ಲ ಬಂದು ಸಹಾಯ ಮಾಡುತ್ತಾರೆ.
ನಾನು ಕೆಲಸಕ್ಕಾಗಿ ಬೇರೆ ಊರಿಗೆ ಹೋಗಿ ಬರುತ್ತೇನೆ ಅಲ್ಪಸ್ವಲ್ಪ ಹಣವಿಲ್ಲದಿದ್ದರೂ ಇತರರೇ ಬೇಕಾದವಸ್ತು ಕೊಟ್ಟಿರುತ್ತಾರೆ ಅಂತಹ ಒಳ್ಳೆಯ ಜನರು ಎಂದು ಹೊಗಳುತ್ತಾನೆ ಆಗ ಹಿರಿಯರು ಹಾಗಾದರೆ ಈ ಊರು ಅಷ್ಟೇ ಒಳ್ಳೆಯದು ನೀನು ಇಲ್ಲಿ ಇರಬಹುದು ಎಂದು ಹೇಳುತ್ತಾರೆ ಈ ಎರಡೂ ಮಾತುಗಳನ್ನು ಕೇಳಿಸಿಕೊಂಡ ಒಬ್ಬ ಬಂದು ಹಿರಿಯರನ್ನು ಕೇಳುತ್ತಾನೆ ಹಿರಿಯರೇ ಮೊದಲನೇ ಮನುಷ್ಯನಿಗೆ ನೀವು ಈ ಊರು ಕೆಟ್ಟದ್ದು ಎಂದು ಹೇಳಿದ್ದೀರಿ.
ಎರಡನೆಯವನಿಗೆ ಒಳ್ಳೆಯದು ಎಂದು ಹೇಳಿದ್ದೀರಿ ಇದು ನನಗೆ ಸರಿಯಾಗಿ ಅರ್ಥವಾಗುತ್ತಿಲ್ಲ ನೀವೇ ತಿಳಿಸಿ ಎಂದನು ಯಾರ ಹತ್ತಿರ ಏನು ಇರುತ್ತದೋ ಅದನ್ನೇ ಅವರು ಕೊಡಬಲ್ಲರು ಹಾಗೆ ಮೊದಲನೆಯವನು ನೀಚ ಬುದ್ಧಿ ಉಳ್ಳವನು ಸರಿಯಿಲ್ಲ ಆದ್ದರಿಂದ ಎಲ್ಲರನ್ನು ಬಯ್ಯುತ್ತಿದ್ದಾನೆ.
ಎರಡನೆಯವನು ನೀತಿವಂತನು ಒಳ್ಳೆಯವನು ಎಲ್ಲರಿಗೂ ಒಳ್ಳೆಯದನ್ನೇ ಹೇಳುತ್ತಿದ್ದಾನೆ ಅವರು ಆಡುವ ಮಾತಿನಲ್ಲಿಯೇ ಅವರ ದುರ್ಗುಣಗಳು ಒಳ್ಳೆಯ ಗುಣಗಳು ಇರುತ್ತವೆ ಅಷ್ಟರಲ್ಲೇ ನಾನು ಕಂಡು ಹಿಡಿದೆ ಎಂದು ಹಿರಿಯರು ಹೇಳುತ್ತಾರೆ.