ನಿನಗೆ ಸ್ವಾತಂತ್ರ್ಯವಿದೆಯೇ?

ಒಂದು ಸಾರಿ ಕಾಡಿನಲ್ಲಿ ಬದುಕುತ್ತಿದ್ದ ತೋಳವು ಊರಿನ ಆಚೆ ಬಂತು ಅಲ್ಲಿ ಇಲ್ಲಿ ಆಹಾರಕ್ಕಾಗಿ ಹುಡುಕುತ್ತಿತ್ತು ನಂತರ ಒಂದು ನಾಯಿಯೂ ಕೂಡ ಅಲ್ಲಿ ಓಡಾಡುತ್ತಿತ್ತು ಆಗ ನಾಯಿಗೆ ತೋಳವು ಕೇಳಿತು ನೀನು ಆಹಾರವನ್ನು ಹುಡುಕುತ್ತಿದ್ದೀಯಾ ಎಂದು ಕೇಳಿತು ಆಗ ನಾಯಿಯೂ ಉಡಾಫೆಯಿಂದ ನಾನು ಆಹಾರ ಹುಡುಕುವ ಕಷ್ಟವೇ ನನಗೆ ಬರುವುದಿಲ್ಲ ಎಂದು ಜಂಬದಿಂದ ಹೇಳಿತು.

 ನಾನು ಇರುವ ಕಡೆಯೇ ನನಗೆ ಆಹಾರ ಸಿಗುತ್ತದೆ ಬೇಸರವಾದಾಗ ಮಾತ್ರ ನಾನು ಹೊರಗೆ ಬಂದು ಹೋಗುತ್ತೇನೆ ಇದನ್ನು ಕೇಳಿದ ತೋಳ ಆಶ್ಚರ್ಯಪಟ್ಟಿತು ಇದು ಹೇಗೆ ಸಾಧ್ಯ ಎಂದು ಕೇಳಿತು ನಾಯಿ ಹೇಳಿತು ನನಗೆ ಕುಳಿತ ಕಡೆಯೇ ಎಲ್ಲಾ ಆಹಾರವು ಸರಿಯಾಗಿ ಸಮಯಕ್ಕೆ ಬರುತ್ತದೆ.

 ನಾಯಿ ನಾನು ನನ್ನ ಮಾಲೀಕನ ಮನೆಯನ್ನು ಕಾಯುತ್ತೇನೆ ಅದಕೋಸ್ಕರ ಆತ ನನಗೆ ದಿನನಿತ್ಯ ಅನ್ನವನ್ನು ಕೊಡುತ್ತಾನೆ ಎಂದು ತೋಳನಿಗೆ ಹೇಳಿತು ಮತ್ತೆ ನಾಯಿ ಹೇಳಿತು ತೋಳ ನೀನು ಕೂಡ ಬಾ ನನ್ನ ಜೊತೆ ನಾವು ಹಾಯಾಗಿ ಇರೋಣ ಎಂದು ಹೇಳಿತು ಸ್ವಲ್ಪದೂರ ನಾಯಿಯ ಜೊತೆ ಬಂತು ನಂತರ ಇದರ ಎಲ್ಲ ವಿವರಗಳನ್ನು ಕೇಳಿತ್ತು.

ನಾಯಿಯ ಎಲ್ಲಾ ಮಾತುಗಳನ್ನು ಕೇಳಿದ ನಂತರ ತೋಳ ಹೇಳಿತು ನೋಡು ನಿನಗೆ ಸರಿಯಾಗಿ ಆಹಾರ ಸಿಗುತ್ತಿದೆ ಆದರೆ ನಿನಗೆ ಸ್ವಾತಂತ್ರ್ಯವಿದೆಯೇ? ಮತ್ತೆ ನೀನು ಕೆಲವೊಂದಷ್ಟು ಕಡೆ ಮಾತ್ರ ಓಡಾಡಬಹುದಾಗಿದೆ ಆದರೆ ನಾನು ಮಾತ್ರ ಇಡೀ ಕಾಡಿನಲ್ಲಿ ಎಲ್ಲಿ ಬೇಕಾದರೂ ಹೋಗಿ ಓಡಾಡಿಕೊಂಡು ಸ್ವತಂತ್ರವಾಗಿ ಇರಬಹುದು.ನಾನು ಸ್ವಾತಂತ್ರ್ಯವಿಲ್ಲದೆ ಇರಲಾರೆ ನನಗೆ ಸ್ವಾತಂತ್ರ್ಯವೇ ಮುಖ್ಯ ಎಂದು ಹೇಳಿ ಕಾಡಿಗೆ ಹೊರಟಿತು.

 ಕೆಲವು ಕಡೆ ಕೆಲಸಗಾರರು ಕೆಲಸ ಮಾಡಿಕೊಂಡು ಇರುತ್ತಾರೆ ಅವರಿಗೆ ಒಳ್ಳೆಯ ಊಟ, ಒಳ್ಳೆಯ ಹಾಸಿಗೆ, ಇರಲಿಕ್ಕೆ ಒಳ್ಳೆಯ ಮನೆಯನ್ನು ಕೂಡ ಕೊಟ್ಟಿರುತ್ತಾರೆ. ಕೆಲಸಕ್ಕೆ ಸೇರಿದಾಗ ಮಾಲೀಕರು ಹೇಳಿದಂತೆಯೇ ಕೇಳಬೇಕು ಬಹಳಷ್ಟು ನಿಯಮಗಳು ಪಾಲನೆ  ಕಡ್ಡಾಯವಾಗಿ ಮಾಡಲೇಬೇಕು ಕೆಲಸಗಾರರಿಗೆ ತಕ್ಷಣ ತಿಳಿಯುವುದಿಲ್ಲ ನಾನು ಬಂಧನದಲ್ಲಿದ್ದೇನೆ ಎಂದು ಅರಿವಾಗುವುದಿಲ್ಲ ಭ್ರಮೆಯಲ್ಲಿ ಬದುಕುತ್ತಾರೆ.

 ಕೆಲಸ ಹೋದ ನಂತರವೇ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತಾರೆ. ಸ್ವತಂತ್ರವಾಗಿ ಬದುಕಿದಾಗ ಕಷ್ಟಗಳು ಜಾಸ್ತಿ ಆದರೆ ನಮಗೆ ಇಚ್ಛೆ ಬಂದಂತೆ ಇರಬಹುದಾಗಿದೆ ಕೆಲಸ ಮಾಡುವುದು ತಪ್ಪಲ್ಲ ಕೆಲಸದಲ್ಲಿ ಇರುವಾಗಲೇ ಸದ್ಯದಲ್ಲಿ ಇರುವ ಕೆಲಸ ಹೋದರೆ ಬೇರೆ ಏನು ಮಾಡಬಹುದು ಎಂದು ಯೋಚಿಸಿ ಅದಕ್ಕೆ ಪೂರ್ವಸಿದ್ಧತೆ ಇರಲಿ. ಮುಂದಿನ ಬದುಕು ನಮ್ಮಇಷ್ಟದಂತೆ ರೂಪಿಸಿಕೊಳ್ಳೋಣ.

ನಗುವಿನ ಹಿಂದೆ ಅಡಗಿರುವ ನೋವು

ಒಬ್ಬ ವ್ಯಕ್ತಿ ಮನೋವೈದ್ಯರ ಹತ್ತಿರ ಬಂದು ತನ್ನ ಸಮಸ್ಯೆ ದುಃಖ, ನಿರಾಶೆ, ಖಿನ್ನತೆ. ಎಲ್ಲಾ ಒಟ್ಟಿಗೆ ಸೇರಿ ಕಾಡುತ್ತಿದೆ ಎಂದು ತಳಮಳ ಹೇಳಿಕೊಂಡನು ಮನೋವೈದ್ಯರು ಬಹಳಷ್ಟು ವಿಚಾರಗಳನ್ನು ಕೇಳಿ ಅವನಿಗೆ ಹಲವಾರು ಪ್ರಶ್ನೆಗಳನ್ನು ಕೇಳಿದರು.

 ನಂತರ ಸ್ವಲ್ಪ ದಿನದ ನಂತರ ಊರಿಗೆ ಹೋಗಿದ್ದು ಬನ್ನಿ ಎಂದು ಹೇಳಿದರು ಒಂದೇ ಕಡೆ ಒಂದೇ ಊರಿನಲ್ಲಿ ಇದ್ದರೆ ಖಿನ್ನತೆ ಜಾಸ್ತಿಯಾಗಬಹುದು ಆದುದರಿಂದ ನಮಗೆ ಬೇರೆ ಊರಿಗೆ ಹೋಗಿದ್ದು ಬನ್ನಿ ಎಂದು ಸಲಹೆ ನೀಡಿದರು.

 ನಾನು ಆಗಾಗ ಬೇರೆ ಊರಿಗೂ ಕೂಡ ಹೋಗುತ್ತಿರುತ್ತೇನೆ ಎಂದನು ಮತ್ತೆ ಹಲವಾರು ಸಲಹೆಗಳು ಹೇಳಿದರು ಬಂದ ವ್ಯಕ್ತಿ, ನಾನು ಅದೆಲ್ಲವೂ ಮಾಡಿದ್ದೇನೆ ಎಂದು ಹೇಳಿದನು ನಂತರ ಈ ಊರಿಗೆ ಒಂದು ನಾಟಕ ಬಂದಿದೆ ಅಲ್ಲಿ ಹೋಗಿ ಬನ್ನಿ ಏಕೆಂದರೆ ನಾಟಕದಲ್ಲಿ ಒಬ್ಬ ತುಂಬಾ ಚೆನ್ನಾಗಿ ಹಾಸ್ಯ ಮಾಡಿ ನಗಿಸುತ್ತಿದ್ದಾನೆ ಈ ಮಾತು ಹೇಳುತ್ತಿದ್ದಂತೆಯೇ ತಲೆ ಚಚ್ಚಿಕೊಳ್ಳುತ್ತಾನೆ.

ವೈದ್ಯರೇ ಆ ಮನುಷ್ಯ ಬೇರೆ ಯಾರು ಅಲ್ಲ ನಾನೇ ಎಲ್ಲರನ್ನು ನಗಿಸುತ್ತೇನೆ ಆದರೆ ನನಗೆ ನಗಲು ಸಾಧ್ಯವಾಗುತ್ತಿಲ್ಲ ಈ ಮಾತನ್ನು ಕೇಳಿ ವೈದ್ಯರು ಪೆಚ್ಚಾದರೂ ಈ ರೀತಿ ಘಟನೆಗಳು ನಡೆಯುತ್ತಲೇ ಇರುತ್ತವೆ ಯಾರೋ ನಗುತ್ತಿದ್ದಾರೆ ಎಂದರೆ ಅದರ ಹಿಂದೆ ಬಹಳಷ್ಟು ನೋವು ಇದ್ದೇ ಇರುತ್ತದೆ.

ಕೆಲವು ಸಂದರ್ಭದಲ್ಲಿ ಯಾರು ಕೂಡ ಸಹಾಯ ಮಾಡಲು ಸಾಧ್ಯವಾಗುವುದಿಲ್ಲ ಆಪ್ತ ಸಲಹೆ ಎಂದಾಗ ಅವರಿಗೆ ಸಲಹೆ ಆಪ್ತರಾಗಿ ಇರಬೇಕು ಖಿನ್ನತೆ ಯಲ್ಲಿರುವವರಿಗೆ ಯಾವುದೇ ಸಲಹೆ ನೀಡದಿದ್ದರೂ ಪರವಾಗಿಲ್ಲ ಬರೀ ಅವರ ಮಾತುಗಳನ್ನು ಕೇಳಿದರೆ ಸಾಕು ಅವರ ಅವರ ಮನಸ್ಸಿಗೆ ಹಿತವೆನಿಸುತ್ತದೆ.

 ಆನೆಗೆ 2ದೊಡ್ಡ ಕಿವಿಗಳು ಇರುತ್ತದೆ ಬಾಯಿ ಒಂದೇ ಇರುತ್ತದೆ ಅದೇ ರೀತಿ ಕೆಲವರು ಸಮಸ್ಯೆಗಳನ್ನು ಹೇಳುತ್ತಿದ್ದಾಗ ಬರೀ ಅವರ ಸಮಸ್ಯೆ ಕೇಳಬೇಕು ಅಷ್ಟೇ ಸಮಾಧಾನ ಸಹಾನುಭೂತಿಯಿಂದ ವರ್ತಿಸಿದರೆ ಸಾಕು ಅವರ ನೋವು ತಾನಾಗಿ ಕಡಿಮೆಯಾಗುತ್ತದೆ ನಮಗೆ ಸಮಯ ಸಿಕ್ಕಿದಾಗ ಇಷ್ಟಾದರೂ ಮಾಡೋಣ.

 ನನ್ನ ಪರಿಶ್ರಮದೇ ಆಗಿರಬೇಕು

ಒಂದು ಊರಿನಲ್ಲಿ ಒಂದು ಸುಸಂಸ್ಕೃತ ಸಂಸಾರ ವಿರುತ್ತದೆ ಅದು ದೊಡ್ಡ ಸಂಸಾರ ಗಂಡ ಹೆಂಡತಿ ಮಕ್ಕಳು ಮೊಮ್ಮಕ್ಕಳು ಎಲ್ಲರೂ ಒಟ್ಟಿಗೆ ಇರುತ್ತಾರೆ ತುಂಬಿದ ಸಂಸಾರ ಆದರೆ ಅಜ್ಜಿ ಎಲ್ಲರೂ ಊಟದ ಮಾಡಿದ ನಂತರ ಊಟ ಮಾಡುತ್ತಾರೆ ಇದು ಅಜ್ಜಿಯ ಪದ್ಧತಿ.

ಅಜ್ಜಿಗೆ  ನೀವು ಬೇಗ ಊಟ ಮಾಡಿ ಎಂದರೂ ಕೇಳುವುದಿಲ್ಲ ಎಲ್ಲರಿಗೂ ಬಡಿಸಿದ  ನಂತರ ಊಟಕ್ಕೆ ಕುಳಿತುಕೊಳ್ಳುತ್ತಾರೆ ನಂತರ  ಅಜ್ಜಿಯವರು ತಟ್ಟೆಯಲ್ಲಿ ಹಾಕಿ ಕೊಂಡ ಅನ್ನದಲ್ಲಿ ಸ್ವಲ್ಪ ಭಾಗವನ್ನು ಮಾತ್ರ ಮಿಕ್ಕಿಸಿ ಅದನ್ನು ಬೇರೆಯವರಿಗೆ ದಾನ ಮಾಡುತ್ತಾರೆ.

ಗಮನಿಸಿದ ಗಂಡ ಮಕ್ಕಳು ಎಲ್ಲರೂ ಕೇಳುತ್ತಾರೆ ನೀವು ನಿಮ್ಮ ತಟ್ಟೆಯಿಂದ ಏಕೆ ಸ್ವಲ್ಪ ಅನ್ನವನ್ನು ಮಿಕ್ಕಿಸಿ ಕೊಡುತ್ತೀರಿ ಪಾತ್ರೆಯಲ್ಲಿ ಇದೆಯಲ್ಲ ಅದೇ ಅನ್ನವನ್ನು ಕೊಡಬಹುದಲ್ಲ ಎಂದು ಹೇಳುತ್ತಾರೆ.

  ಅಜ್ಜಿ ಮುಗುಳ್ನಗುತ್ತಾ ನೋಡಿ ಇದೆಲ್ಲವೂ ನೀವು ದುಡಿಮೆ ಮಾಡಿದ್ದರಿಂದ ಬಂದಿದೆ ದಾನ ಕೊಡಬೇಕಾದರೆ ಅದು ನನ್ನ ಪರಿಶ್ರಮದೇ ಆಗಿರಬೇಕು ನನ್ನದು ಎನ್ನುವುದು ಏನಿದೆ ಆದುದರಿಂದ ನನ್ನ ಪಾಲಿನ ಅನ್ನದಲ್ಲಿ ನಾನು ಸ್ವಲ್ಪವನ್ನು ಮಿಕ್ಕಿಸಿ ದಾನ ಮಾಡುತ್ತಿದ್ದೇನೆ ಎನ್ನುತ್ತಾರೆ.

 ಹೆಚ್ಚಾಗಿ ಉಳಿದಿದ್ದು ಕೊಟ್ಟರೆ ಅದು ದಾನವಾಗುವುದಿಲ್ಲ ನನ್ನ ಅವಶ್ಯಕತೆಗೆ ಏನು ಉಪಯೋಗಿಸುತ್ತಿದ್ದೇವೆಯೋ ಅದರಲ್ಲಿ ಸ್ವಲ್ಪ ಕೊಡುವುದು ದಾನ ಎಂದು ವಿವರಿಸುತ್ತಾರೆ.

ತಂಗಳು ಅನ್ನವನ್ನೇ ಕೊಡುತ್ತಾರೆ

ಒಂದು ಊರಿನಲ್ಲಿ ತೀರ ಬಡ ಸಂಸಾರ ಇರುತ್ತದೆ ಬಂದಷ್ಟರಲ್ಲಿ ತಮ್ಮ ಜೀವನವನ್ನು ಸಾಗಿಸುತ್ತಿರುತ್ತಾರೆ. ಒಂದು ಸಾರಿ ಹಿರಿಯ ವ್ಯಕ್ತಿ ಇವರ ಮನೆ ಮುಂದೆ ಬಂದು ಏನಾದರೂ ತಿನ್ನಲಿಕ್ಕೆ ಕೊಡಿ ಎಂದು ಪರಿಪರಿಯಾಗಿ ಬೇಡಿಕೊಳ್ಳುತ್ತಾನೆ ಈ ಮಾತುಗಳಿಗೆ ಮನಸು ಬೆಣ್ಣೆಯಂತೆ ಕರಗುತ್ತದೆ. ಇವರು ದಾನ ಮಾಡುವ ಸ್ವಭಾವದವರು ಆಗ ಇವರ ಮನೆಯಲ್ಲಿ ಎರಡು ರೊಟ್ಟಿಗಳು ಮಾತ್ರ ಇರುತ್ತದೆ.

 ಸ್ವಲ್ಪ ಸಮಯ ವಿಶ್ರಮಿಸಿಕೊಳ್ಳಿ ಎಂದು ಹೇಳಿ ನಂತರ ತಮ್ಮ ಅಂಗಳದಲ್ಲಿ ಬೆಳೆದಿದ್ದ ಸೊಪ್ಪನ್ನು ತಂದು ಅದಕ್ಕೆ ಉಪ್ಪು ಕಾರ ಸೇರಿಸಿ ಒಗ್ಗರಣೆ ಮಾಡಿ ಕೊಡುತ್ತಾರೆ ಆ ಹಿರಿಯ ವ್ಯಕ್ತಿ ತಿಂದು ತೃಪ್ತಿಪಟ್ಟು ಇವರು ಸಿರಿವಂತರಾಗಲಿ ಎಂದು ಆಶೀರ್ವಾದ ಮಾಡಿ ಹೊರಡುತ್ತಾರೆ.

ಹಿರಿಯರು ಆಶೀರ್ವದಿಸಿದ ನಂತರ ಇವರು ಸಿರಿವಂತರಾಗುತ್ತಾರೆ ಕೆಲವು ವರ್ಷಗಳು ಕಳೆದ ನಂತರ ಅದೇ ಹಿರಿಯ ವ್ಯಕ್ತಿ ಇವರ ಮನೆಯ ಹತ್ತಿರ ಬಂದು ಮತ್ತೆ ಏನಾದರೂ ಇದ್ದರೆ ತಿನ್ನಲಿಕ್ಕೆ ಕೊಡಿ ಎಂದು ಕೇಳುತ್ತಾನೆ ಚಿಕ್ಕ ಹುಡುಗ ನೋಡಿದವನು ಅಮ್ಮನಿಗೆ ಸಂತೋಷದಿಂದ ಹೇಳುತ್ತಾನೆ.

 ಅಮ್ಮ ಅಂದು ಬಂದಿದ್ದ ವ್ಯಕ್ತಿಯೇ ಬಂದಿದ್ದಾರೆ ಇನ್ನು ನಮಗೆ ಒಳ್ಳೆಯದಾಗಬಹುದು ಅದಕ್ಕಾಗಿ ಅವರಿಗೆ ಪಾಯಸ, ಸಿಹಿ ತಿಂಡಿ, ಒಳ್ಳೆಯ ಅನ್ನ ಇದೆಯಲ್ಲ ಅದನ್ನೇ ಕೊಡೋಣ ಎಂದು ಹೇಳುತ್ತಾನೆ ಆದರೆ ತಾಯಿಯಾದವಳು ಸುಮ್ಮನೇ ಇರು ನಿನಗೆ ಗೊತ್ತಾಗುವುದಿಲ್ಲ ಎಂದು ಮನೆಯಲ್ಲಿ ಇದ್ದ ತಂಗಳು ಅನ್ನವನ್ನೇ ಕೊಡುತ್ತಾರೆ. ಪ್ರಸಾದಂತೆ ಸ್ವೀಕರಿಸಿ ಅನ್ನವನ್ನು ತಿಂದು ಆಶೀರ್ವದಿಸುತ್ತಾರೆ.

 ಕೆಲವರು ಏನೂ ಇಲ್ಲದಿದ್ದಾಗ ತುಂಬಾ ಸಂಸ್ಕೃತರಾಗಿ ಒಳ್ಳೆಯ ಪ್ರಾಮಾಣಿಕರಾಗಿ ದಾನ ಧರ್ಮದ ಬಗ್ಗೆ ಹೆಚ್ಚು ಆಸಕ್ತಿ ಒಲವು ಇರುತ್ತದೆ ಅದೇ ಸಿರಿತನ ಬಂದ ನಂತರ ಅವರ ವರ್ತನೆ ಬದಲಾಗುತ್ತದೆ ನಾವು ಯಾವುದೇ ಸ್ಥಿತಿಯಲ್ಲಿದ್ದರೂ ಸಮನಾಗಿ ಇರೋಣ.

ನಾನು ನಾಟಕ ಮಾಡಿದೆ

ಒಬ್ಬ ಮನುಷ್ಯ ಇದ್ದನು ಅವನು ಕೊಲೆ ಮಾಡಿದ್ದಾನೆ ಎಂದು ಅವನಿಗೆ ಮರಣ ದಂಡನೆ ಶಿಕ್ಷೆ ನೀಡಬೇಕು ಎಂದು ನ್ಯಾಯಾಲಯದಲ್ಲಿ ತೀರ್ಮಾನವಾಯಿತು ಇವನಿಗೆ ಜೈಲಿಗೆ ಕಳಿಸಲಾಯಿತು ಜೈಲಿಗೆ ಹೋದ ದಿನದಿಂದಲೇ ಇವನು ಒಂದು ಭಗವಂತನ ಫೋಟೊ ಇಟ್ಟುಕೊಂಡು ಪ್ರಾರ್ಥನೆ ಮಾಡತೊಡಗಿದ.

 ಧ್ಯಾನ, ಮಂತ್ರಗಳು. ಹೇಳತೊಡಗಿದನು ಯಾರ ಜತೆಯೂ ಮಾತನಾಡುತ್ತಿರಲಿಲ್ಲ ಸಾಧ್ಯವಾದಷ್ಟು ಮೌನಿಯಾಗಿರುತ್ತಿದ್ದನು ಸದಾ ಧ್ಯಾನದಲ್ಲಿ ಇದ್ದನು ಇದನ್ನು ನೋಡಿದ ಎಲ್ಲರಿಗೂ ಒಳ್ಳೆಯ ಮನುಷ್ಯ ಯಾರಿಗೂ ಕೇಡು ಮಾಡುವವನಲ್ಲ ಮತ್ತೆ ಸತ್ಸಂಗ ನಡೆಯಲು ಆರಂಭವಾಯಿತು.

 ಕೆಲವು ಖೈದಿಗಳು ಕೂಡ ಈ ಸತ್ಸಂಗಕ್ಕೆ ಬರತೊಡಗಿದರು ನಂತರ ಜೈಲಿನಲ್ಲಿ ಇರುವ ಮುಖ್ಯ ಅಧಿಕಾರಿಗಳು ಇತರರು ಕೂಡ ಇವನಿಗೆ ಗೌರವಿಸಲು ಆರಂಭಿಸಿದರು ಕೆಲವು ದಿನಗಳಲ್ಲಿಯೇ ಇವನು ಒಬ್ಬ ಋಷಿಯಂತೆ ಮಾರ್ಪಟ್ಟನು ಸಮಸ್ಯೆಗಳಿಗೆ ಪರಿಹಾರಕ್ಕೆ ಪ್ರಶ್ನೆ ಹೇಳಬೇಕಾದರೂ ಇವನನ್ನು ಬಂದು ಕೇಳುತ್ತಿದ್ದರು.

 ಕೆಲವರು ಕಾಲು ಮುಟ್ಟಿ ಆಶೀರ್ವಾದ ಪಡೆಯುತ್ತಿದ್ದರು ದಿನನಿತ್ಯ ಇವನ ಕೆಲಸ ಇಷ್ಟೆ ದಿನಾ ಸಂಜೆ ರಾತ್ರಿ ಜಪ ತಪ ಧ್ಯಾನ ಇಷ್ಟರಲ್ಲೇ ಜೀವನ ಸಾಗಿಸುತ್ತಿದ್ದನು ಇದನ್ನು ಎಲ್ಲರೂ ಗಮನಿಸಿದರು ನಂತರ ಇವನಿಗೆ ಶಿಕ್ಷೆ ಕಡಿಮೆ ಮಾಡಬೇಕೆಂದು ಎಲ್ಲರೂ ಒತ್ತಾಯ ಮಾಡಿದರು.

 ಒತ್ತಾಯದ ಮೇರೆಗೆ ಇವನಿಗೆ ಶಿಕ್ಷೆ ಕಡಿಮೆಯಾಯಿತು ನಂತರ ಇವನು ಯಾವುದೇ ನಿತ್ಯ, ಪ್ರಾರ್ಥನೆ, ಧ್ಯಾನ, ಜಪ, ಯಾವುದೂ ಮಾಡಲಿಲ್ಲ ನಂತರ ಕೇಳಿದರು ಏಕೆ ನೀವು ಬದಲಾಗಿ ಬಿಟ್ಟಿರಲ್ಲ ಎಂದಾಗ ನನಗೆ ಶಿಕ್ಷೆ ಕಡಿಮೆ ಆಗಲಿ ಎಂದು ನಾನು ನಾಟಕ ಮಾಡಿದೆ ಎಂದು ಹೇಳಿದನು.

 ಈಗ ನಾನು ಅದನ್ನೆಲ್ಲ ಏಕೆ ಮಾಡಲಿ ಎಂದು ಹೇಳಿದನು ಕೆಲವರು ಇದ್ದಾರೆ ಈ ರೀತಿಯ ಮುಖವಾಡ ಹಾಕಿ ಜನರಿಗೆ ಮೋಸ ಮಾಡುವವರೂ ಇದ್ದಾರೆ ಆದರೆ ಇಂತಹವರನ್ನು ಕಂಡುಹಿಡಿಯುವುದು ಬಹಳ ಕಷ್ಟ ಆದಷ್ಟು ಇಂತಹವರಿಂದ ಎಚ್ಚರಿಕೆಯಿಂದ ಇರೋಣ.

Leave a Comment