ಎರಡನ್ನು ಸಮಾನವಾಗಿ ಸ್ವೀಕರಿಸಬೇಕು

ಒಂದು ಸಾರಿ ಬಾಬಾ ಅವರು ಉಪನ್ಯಾಸ ನೀಡಲು ಕೆಲವರು ಶಿಷ್ಯರನ್ನು ಕರೆದುಕೊಂಡು ಹೋಗುತ್ತಾರೆ ಒಂದು ಊರಿನಲ್ಲಿ ಹೋದಾಗ ಒಳ್ಳೆಯ ಸತ್ಕಾರ ಮಾಡಿ ಕಳಿಸುತ್ತಾರೆ ಅದೇ ರೀತಿ ಇನ್ನೊಂದು ಹಳ್ಳಿಗೆ ಹೋದಾಗ ಅಲ್ಲಿಯ ಜನರು ಇವರನ್ನು ಕಲ್ಲುಗಳಿಂದ ಹಣ್ಣುಗಳಿಂದ ತರಕಾರಿಗಳಿಂದ ಹೊಡೆದು ಬಡೆದು ಬೈದು  ಕಳಿಸುತ್ತಾರೆ.

ಬಾಬಾ ಅವರು ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಖುಷಿಯಾಗಿ ಬರುತ್ತಿರುತ್ತಾರೆ ಆಗ ದಾರಿಯಲ್ಲಿ ಒಬ್ಬ ಶಿಷ್ಯ ಹೇಳುತ್ತಾನೆ ಬಾಬಾ ಅವರೇ ನಮಗೆ ಈ ರೀತಿ ಹಿಗ್ಗ ಮುಗ್ಗ ಹೊಡೆದಿದ್ದಾರೆ ಆದರೂ ನೀವು ನಗುತಿದ್ದೀರಲ್ಲ ಎಂದು ಹೇಳುತ್ತಾನೆ ಬಾಬಾ ಅವರು ನೋಡು ನಾವು ಊರಿಗೆ ಹೋದಾಗ ಅವರ ಬಳಿ ಏನೂ ಇತ್ತು ಅದನ್ನು ಬಾಬಾ ಅವರು ನಮಗೆ ನೀಡಿದ್ದಾರೆ.

 ಈ ಹಳ್ಳಿಗೆ ಬಂದಿದ್ದೀವಿ ಇವರ ಬಳಿ ಏನು ಇದೆ ಅದನ್ನು ನಮಗೆ ನೀಡಿದ್ದಾರೆ ಇದರಲ್ಲಿ ಅವರದ್ದು ಏನೂ ತಪ್ಪಿಲ್ಲ ಆದರೆ ನಾವು ಎರಡನ್ನು ಸಮಾನವಾಗಿ ಸ್ವೀಕರಿಸಬೇಕು ಎಂದರು ಈ ಮಾತನ್ನು ಕೇಳಿದ ಶಿಷ್ಯನಿಗೆ ತಲೆ ತಿರುಗಿದಂತಾಯಿತು.

ಕೆಲವು ಕಡೆ ಸನ್ಮಾನಿಸುತ್ತಾರೆ ಕೆಲವು ಕಡೆ ಅವಮಾನಿಸುತ್ತಾರೆ ಸನ್ಮಾನ ಅವಮಾನ ಎರಡನ್ನು ಸಮನಾಗಿ ಸ್ವೀಕರಿಸೋಣ.

 ಗೋಡೆಗೆ ಡಿಕ್ಕಿ ಹೊಡೆದು

ಒಂದು ಸಾರಿ ರಾಜನ ಆಸ್ಥಾನಕ್ಕೆ 3 ಕಳ್ಳರನ್ನು ಹಿಡಿದುಕೊಂಡು ಬಂದರು ರಾಜನಿಗೆ ಹೇಳಿದರು ಇವರು 3ಜನ ಕಳ್ಳತನವನ್ನು ಮಾಡಿದ್ದಾರೆ ಇವರಿಗೆ ಏನು ಶಿಕ್ಷೆ ನೀಡಬೇಕು ಎಂದು ಕೇಳಿದರು ರಾಜನಾದವನು 3 ಜನರನ್ನು ಗಮನಿಸಿ ಇವರಿಗೆ ವಿಶೇಷವಾದ ಕಾರಾಗೃಹ ಇದೆಯಲ್ಲ ಅಲ್ಲಿ ಕಳಿಸಿ ಎಂದು ಹೇಳಿದನು.

 ಕಳ್ಳರನ್ನು ಹಿಡಿದ ಸೈನಿಕರು 3ಕಳ್ಳರನ್ನು ವಿಶೇಷವಾದ ಕಾರಾಗೃಹ ಈ ಕಾರಾಗೃಹ ಹೇಗೆ ಇರುತ್ತದೆಯೆಂದರೆ ಮೇಲಿನಿಂದ 4ಹಂತ ಕೆಳಗೆ ಇರುತ್ತದೆ ಮೇಲೆ ಇರುವ ಹಂತದಲ್ಲಿ ಬೆಳಕು ಇರುತ್ತದೆ ಹಾಗೆ ಕೆಳಗೆ ಹೋದಂತೆ ಇನ್ನೂ ಸ್ವಲ್ಪ ಬೆಳಕು ಕಡಿಮೆಯಾಗುತ್ತದೆ.

 ಮತ್ತೆ ಇನ್ನೂ ಕೆಳಗೆ ಹೋದಂತೆ ಬೆಳಕು ಇನ್ನೂ ಕಡಿಮೆಯಾಗುತ್ತದೆ ಕೊನೆಯ ಅಂತಸ್ತಿನ ಒಳಗಡೆ ಹೋದರೆ ಏನೂ ಕಾಣುವುದಿಲ್ಲ ಬಾಗಿಲು ತೆಗೆದಾಗ ಮಾತ್ರ ಸ್ವಲ್ಪ ಕಾಣಿಸುತ್ತದೆ ಬಾಗಿಲು ಮುಚ್ಚಿದರೆ ಏನೂ ಕಾಣಿಸುವುದಿಲ್ಲ 3 ಜನರನ್ನು ಕಾರಾಗೃಹದ ಒಳಗೆ ಹಾಕಿ ಬಾಗಿಲು ಮುಚ್ಚಿ ಕೊಳ್ಳಲು ಸ್ವಲ್ಪ ಸಮಯ ಕೊಡ್ತಾರೆ.

 ನಿಮಗೆ ಏನೇನು ಬೇಕೋ ಆರಿಸಿಕೊಳ್ಳಿ ಊಟ ಕಂಬಳಿ ಎಲ್ಲವೂ ತೆಗೆದುಕೊಳ್ಳಿ ಆಮೇಲೆ ನಿಮಗೆ ಏನೂ ಕಾಣುವುದಿಲ್ಲ ಎಂದು ಎಚ್ಚರಿಕೆ ನೀಡುತ್ತಾರೆ ನಂತರ ಬಾಗಿಲು ಮುಚ್ಚಿ ಹೊರಟು ಹೋಗುತ್ತಾರೆ ಅವರು ಹೇಳಿದಂತೆ ಕಳ್ಳರು ಕಣ್ಣು ಬಿಟ್ಟರು ಏನು ಕಾಣಿಸುತ್ತಿಲ್ಲ.

ಭಯಾನಕ ಕತ್ತಲೆ ಆಹಾರ ಎಲ್ಲಿದಿಯೋ ಹಾಸಿಗೆ ಎಲ್ಲಿದೆಯೋ ನೀರು ಎಲ್ಲಿದಿಯೋ ಯಾವುದೂ ಗೊತ್ತಿಲ್ಲ ತಡಕಾಡಿದರು ಒಬ್ಬ ಹುಡುಕುವುದರಲ್ಲಿ ಗೋಡೆಗೆ ಡಿಕ್ಕಿ ಹೊಡೆದು ತಲೆಗೆ ಏಟು ಮಾಡಿಕೊಂಡನು ಇನ್ನೊಬ್ಬ ನೀರನ್ನು ತೆಗೆದುಕೊಳ್ಳಲಿಕ್ಕೆ ಹೋಗಿ ಕೈಯನ್ನು ಹಾಕಿ ನೀರು ಬೀಳಿಸಿ ಬಿಟ್ಟನು.

 ನೆಲವೆಲ್ಲ ನೀರಾಗಿ ಹೋಯಿತು ಇಬ್ಬರೂ ಆತನನ್ನು ಚೆನ್ನಾಗಿ ಬೈದರು ಇನ್ನೊಬ್ಬ ಆಕಡೆ ಈಕಡೆ ನೋಡಿ ಒಂದು ಮೂಲೆಯಲ್ಲಿ ಹಾಗೆ ಮಲಗಿ ಬಿಟ್ಟ ಹುಡುಕುತ್ತಾ ಹುಡುಕುತ್ತಾ ಇವರು ಇವರೇ ಒಬ್ಬರನೊಬ್ಬರು ಡಿಕ್ಕಿ ಹೊಡೆದು ಕೊಳ್ಳುತ್ತಿದ್ದರು ನಂತರ ಇವರಲ್ಲೇ ಜಗಳ ಶುರುವಾಯಿತು.

ಸ್ವಲ್ಪ ಸಮಯ  ನಂತರ ಇನ್ನೊಬ್ಬ ಹೇಳಿದ ಹಲವಾರು ರೀತಿಯ ಶಿಕ್ಷೆಗಳನ್ನು ನೋಡಿದ್ದೇವೆ ಈ ರೀತಿ ಶಿಕ್ಷೆ ಬೇಡಪ್ಪ ಬೇಡ ಎಂದು ಹೇಳಿದನು ಒಬ್ಬ ಹೇಳಿದ ನಾನು ಹುಡುಕಲು ಹೋಗುವುದಿಲ್ಲ ನಾನು ಮಲಗಿ ಬಿಡುತ್ತೇನೆ ನನಗೆ ಇದು ಸಾಧ್ಯವಿಲ್ಲ ನಿರಾಶನಾಗಿ ಕುಳಿತನು.

 ಇನ್ನೊಬ್ಬ ಮನುಷ್ಯನು ಎಷ್ಟು ಹೊತ್ತು ಮಲಗಬಹುದು ಸಾಧ್ಯವಿಲ್ಲ ನಾನು ನಿಧಾನವಾಗಿ ಯಾದರೂ ಇಲ್ಲಿಯ ಪರಿಸ್ಥಿತಿಗೆ ಹೊಂದಿಕೊಂಡು ಆಹಾರವನ್ನು ಹುಡುಕುತ್ತೇನೆ ಎಂದು ವಾಸನೆಯಿಂದ ಊಟ ಎಲ್ಲಿದೆಯೆಂದು ಕಂಡುಹಿಡಿಯಲು ಮುಂದಾದನು.

 ಮೂರನೆಯವನು ಯಾವುದೇ ರೀತಿಯ ಶಬ್ದವನ್ನು ಕೂಡ ಮಾಡುತ್ತಿಲ್ಲ ಮಾತನಾಡುತ್ತಿಲ್ಲ ಸ್ವಲ್ಪ ಸಮಯ ಧ್ಯಾನ ಮಗ್ನನಾದ ನಂತರ ಮೂರನೆಯವನು ಹೇಳಿದ ನಾನು ಒಂದು ಕಡೆಯಿಂದ ಗೋಡೆಗೆ ಕೈಯಿಂದ ಕುಟ್ಟುತ್ತಾ ಕುಟ್ಟುತ್ತಾ ಬಂದು.

ಎಲ್ಲಿ ಸುಲಭವಾಗಿದೆಯೋ ಅಲ್ಲಿ ನಾನು ಗೋಡೆಗೆ ಕಿಂಡಿಯನ್ನು ಮಾಡುತ್ತೇನೆ ನನ್ನ ಹತ್ತಿರ ಒಂದು ಕಬ್ಬಿಣದ ಸರಳು (ಮೊಳೆ) ಇದೆ ಇದರಿಂದ ನಾನು ಚಿಕ್ಕ ತೂತನ್ನು ಮಾಡುತ್ತೇನೆ ಎನ್ನುತ್ತಾನೆ ಆಗ ಬೆಳಕು ಬರುತ್ತದೆ ತದನಂತರ ನಾವು ಆರಾಮಾಗಿ ಇಲ್ಲಿಯೂ ಇರಬಹುದು ಎಂದು ಹೇಳುತ್ತಾನೆ.

 ಇದೇ ರೀತಿ ನಮ್ಮ ಬದುಕಿನಲ್ಲೂ 3ರೀತಿಯ ಜನರು ನಾವು ನೋಡಬಹುದು ಕೆಲವರು ಆ ಸಮಸ್ಯೆಗಳೊಂದಿಗೆ ಅಲ್ಲಿಯೇ ಹೊಂದಿಕೊಂಡು ಆಯಸ್ಸು ಅಲ್ಲೇ ಕಳೆದು ಬಿಡುತ್ತಾರೆ ಎರಡನೇ ಯವರು ಕತ್ತಲೆಯಲ್ಲಿಯೇ ಏನಾದರೂ ಒಂದು ವ್ಯವಸ್ಥೆ ಮಾಡಿಕೊಂಡು ಅಲ್ಲಿಯೇ ಹೊಂದಾಣಿಕೆ ಮಾಡಿಕೊಂಡು ತಮ್ಮ ಆಯಸ್ಸು ಕಳೆದುಬಿಡುತ್ತಾರೆ.

 ಕೆಲವರು ಮಾತ್ರ ಕತ್ತಲೆ ಇದ್ದರೂ ಶಾಶ್ವತವಾಗಿ ಕತ್ತಲೆಯನ್ನು ತೊಲಗಿಸಿ ಬೆಳಕನ್ನು ಬರುವಂತೆ ಮಾಡಿ ತಮಗೆ ಹೇಗೆ ಬೇಕೋ ಹಾಗೆ ಬದುಕುತ್ತಾರೆ.

ನಮ್ಮ ಬದುಕಿನಲ್ಲಿ ಎಂತಹ ಭಯಂಕರ ಕತ್ತಲೆ ಬರಲಿ ಬೆಳಕಿನ ಕಡೆಗೆ ಸಾಗೋಣ.

ಭಯಂಕರ ಕಾಟ ಕೊಡುತ್ತಿದ್ದವು

 

ಒಂದು ಊರಿನ ಆಚೆ ಒಂದು ನದಿ ಹರಿಯುತ್ತಿತ್ತು ಅದು ದೊಡ್ಡ ನದಿ ಆಗಿದ್ದು ಮಳೆ ಬರುವ ಸಂದರ್ಭದಲ್ಲಿ ಇನ್ನೂ ಜಾಸ್ತಿಯಾಗಿ ನೀರು ರಭಸದಿಂದ ಹರಿಯುತ್ತಿತ್ತು ಇದರಿಂದಾಗಿ ಹಲವಾರು ಪಕ್ಷಿಗಳು ಬಂದು ಸೇರಿದವು ನಂತರ ಕೆಲವು ರಾಕ್ಷಸ ಪಕ್ಷಿಗಳು ಬಂದು ಅಲ್ಲಿ ಸೇರಿಕೊಂಡವು.

 ಊರಿನವರು ಬಟ್ಟೆ ತೊಳೆಯಲಿಕ್ಕೆ, ಹಸುಗಳು ಎತ್ತುಗಳು ನೀರು ಕುಡಿಯಲಿಕ್ಕೆ, ಹೋದರೆ ಭಯಂಕರ ಕಾಟ ಕೊಡುತ್ತಿದ್ದವು ದಿನನಿತ್ಯ ರಾಕ್ಷಸ ಪಕ್ಷಿಗಳ ಕಾಟವು ಹೆಚ್ಚಾಗ ತೊಡಗಿತು ಊರಿನ ಕೆಲವು ಮನುಷ್ಯರು ಕೂಡ ಹೋಗಿ ಹೆದರಿಸಿದರು ಆದರೂ ಪ್ರಯೋಜನವಾಗಲಿಲ್ಲ.

  ಈ ಸಮಸ್ಯೆ ಹೇಗೆ ಬಗೆಹರಿಸಬೇಕೆಂದು ಚಿಂತಿಸುತ್ತಿದ್ದರು ಅಷ್ಟರಲ್ಲಿ ಇದನ್ನು ತಿಳಿದ ಬಾಬಾ ಅವರು ಆ ಊರಿಗೆ ಬಂದರು ಇರುವ ಸಮಸ್ಯೆಯನ್ನು ಕೂಲಂಕುಷವಾಗಿ ಅರ್ಥಮಾಡಿಕೊಂಡು ಬಾಬಾ ಅವರು ಹೇಳಿದರು.

 ನಾನು ಹೇಳಿದಂತೆ ನೀವು ಮಾಡಿದರೆ ಈ ಸಮಸ್ಯೆಯಿಂದ ಪಾರಾಗಬಹುದು ಎಂದು ಅದಕ್ಕೆ ಎಲ್ಲರೂ ಒಪ್ಪಿದರು ಆಗ ಬಾಬಾ ಅವರು ಸಲಹೆ ನೀಡಿದರು ನಾಳೆ ಬೆಳಿಗ್ಗೆ ಎಲ್ಲರೂ 6ಗಂಟೆಗೆ ನದಿಯ ಬಳಿ  ಎಲ್ಲರೂ ಸೇರಿ ಹೋಗೋಣ ಯಾರೂ ಮಾತನಾಡಬಾರದು ನಾನು ಹೇಳಿದ ನಂತರ ನೀವೆಲ್ಲರೂ ಶಕ್ತಿಮೀರಿ ಕೂಗಬೇಕು.

ಕೆಲವು ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಪಟಾಕಿ ಹಾರಿಸಬಹುದು ನಗಾರಿ ಶಕ್ತಿ ಮೀರಿ ಕೂಗಬಹುದು ಗಂಟೆ, ತಮಟೆ, ಜಾಗಟೆ, ತುತ್ತೂರಿ, ಡೋಲು ಬಾರಿಸಬಹುದು ಅಂದರೆ ಶಬ್ದ ಬರುವಂತಹ ಯಾವುದೇ ವಸ್ತುಗಳಿಂದ ನೀವು ಒಂದೇ ಸಾರಿಗೆ ನಿಮ್ಮ ಶಕ್ತಿ ಮೀರಿ ಶಬ್ದ ಬರುವಂತೆ ಮಾಡಬೇಕು ಎಂದಾಗ ಇದಕ್ಕೆ ಎಲ್ಲರೂ ಒಪ್ಪಿದರು.

 ಮಾರನೇ ದಿನ 6ಗಂಟೆಗೆ ಸರಿಯಾಗಿ ಎಲ್ಲರೂ ಸಿದ್ಧರಾದರು ಬಾಬಾ ಅವರು ಕೈ ಸನ್ನೆ ಮಾಡಿದರು ತಕ್ಷಣ ಎಲ್ಲರೂ ಕೂಗಿದರೂ ಸಾಧ್ಯವಾದಷ್ಟು ಜೋರಾಗಿ ಶಬ್ದ ಮಾಡಿದರು ಇದ್ದಕ್ಕಿದ್ದಂತೆ ಭಯಂಕರವಾಗಿ ಶಬ್ದ ಬಂತು ಚಿಕ್ಕ ಚಿಕ್ಕ ಹುಡುಗರು ಪಟಾಕಿ ಬಾಂಬ್ ಸಿಡಿಸಿದರು.

ಸಾವಿರಾರು ಜನ ಶಬ್ದ ಮಾಡಿದ್ದರಿಂದ ಆ ರಾಕ್ಷಸ ಪಕ್ಷಿಗಳು ಎಂದೂ ಈ ರೀತಿಯ ಶಬ್ದ ಕೇಳಿರಲಿಲ್ಲ ಭಯಂಕರ ಶಬ್ದ ಕೇಳಿದ್ದರಿಂದ ದಿಕ್ಕು ದೆಸೆ ಇಲ್ಲದೆ ಆ ರಾಕ್ಷಸ ಪಕ್ಷಿಗಳು ಹೊರಟು ಹೋದವು ಮತ್ತೆ ಎಂದಿಗೂ ಆ ಊರಿಗೆ ತಲೆಹಾಕಲಿಲ್ಲ ಎಲ್ಲಾ ಊರಿನವರು ಸಂತಸಪಟ್ಟರು.

 ಈ ಒಂದು ಸಮಸ್ಯೆ 4 ಜನ ಆಗಲಿ 8ಜನ ಆಗಲಿ 20 ಜನರಿಂದ ಸಾಧ್ಯವಾಗಿರಲಿಲ್ಲ ಇಡೀ ಊರೇ ಒಗ್ಗಟ್ಟಿನಿಂದ ಮಾಡಿದಾಗ ಈ ಕೆಲಸ ತುಂಬಾ ಸುಲಭವಾಯಿತು.

ಉರುಳಿಸುವ ಪ್ರಯತ್ನ ಮಾಡಲಿಲ್ಲ

 

ಒಂದು ಸಾರಿ ಚಾಣಾಕ್ಷ ರಾಜನು ಮುಖ್ಯ ರಸ್ತೆಯ ಮದ್ಯದಲ್ಲಿ ಒಂದು ದೊಡ್ಡ ಕಲ್ಲನ್ನು ಹಾಕಿಸಿದ ಆ ಕಲ್ಲು ಎಷ್ಟು ದೊಡ್ಡದು ಇತ್ತು ಎಂದರೆ ಆ ರಸ್ತೆಯಿಂದ ಯಾರು ಹಾದು ಹೋಗಲು ಸಾಧ್ಯವಿರಲಿಲ್ಲ  ಆ ರೀತಿ ಕಲ್ಲು ಅಡ್ಡ ಇತ್ತು ರಾಜನ ಉದ್ದೇಶ ಏನೆಂದರೆ ನನ್ನ ಪ್ರಜೆಗಳು ಏನು ಮಾಡುತ್ತಾರೆ ಪರೀಕ್ಷಿಸೋಣವೆಂದು ಈ ರೀತಿ ಮಾಡಿದನು.

 ರಾಜನು ಒಂದು ಮರದ ಹಿಂದೆ ಅವಿತುಕೊಂಡು ಎಲ್ಲವೂ ನೋಡುತ್ತಿದ್ದನು ಕೆಲವರು ಬಂದು ಬಂಡೆ ಕಲ್ಲನ್ನು ನೋಡಿ ಅದಕ್ಕೆ ಸಿಕ್ಕಾಪಟ್ಟೆ ಬೈದರು ಕೆಲವರು ನಮ್ಮ ಅದೃಷ್ಟವೇ ಸರಿಯಿಲ್ಲ ಇವತ್ತಿನ ಘಳಿಗೆಯೇ ಸರಿಯಿಲ್ಲ ಎಂದು ಗೊಣಗಿದರು ಕೆಲವರು ಸಂದಿಯಿಂದ ಹೋಗಲಿಕ್ಕೆ ಸಾಧ್ಯವೇ ಎಂದು ನೋಡಿ ಸಂದಿಯಿಂದ ದಾರಿ ಮಾಡಿಕೊಂಡು ಹೋದರು.

 ಕೆಲವರು ಬೆಳಿಗ್ಗೆ ಬೆಳಿಗ್ಗೆ ಇದು ಅಶುಭ ಎಂದು ಕೆಲಸಕ್ಕೆ ಹೋಗಲಿಲ್ಲ ಕೆಲವರು ಆಡಳಿತವನ್ನೇ ಕೆಟ್ಟ ಶಬ್ದಗಳಿಂದ ನಮ್ಮ ಊರಿನಲ್ಲಿ ಮಾತ್ರ ಈ ರೀತಿ ಇದೆ ಈ ರೀತಿ ಬೇರೆ ಎಲ್ಲೂ ಇಲ್ಲ ಎಂದು ಹೇಳಿ ಶಾಪ ಹಾಕಿದರು ಇನ್ನೂ ಕೆಲವರು ಇದನ್ನು ನೋಡಿದರೂ ಊರು ಸುತ್ತಿಕೊಂಡು ಹೋಗೋಣ ಎಂದು ಬೇರೆ ದಾರಿ ಹಿಡಿದು ಹೊರಟರು.

 ಕೆಲವರು ಇದೇ ವಿಚಾರವಾಗಿ ಮಾತಾಡುತ್ತಾ ಸಮಯವನ್ನು ವ್ಯರ್ಥ ಮಾಡಿದರು ಮಧ್ಯಾಹ್ನ ಆಗುತ್ತಿದ್ದಂತೆಯೇ ಜನರು ಕಡಿಮೆಯಾಗುತ್ತಾ ಹೋದರು ಏಕೆಂದರೆ ಯಾರೂ ಕೂಡ ಈ ಬಂಡೆ ಕಲ್ಲನ್ನು ಎತ್ತುವ ಪ್ರಯತ್ನ ಅಥವಾ ಪಕ್ಕಕ್ಕೆ ಉರುಳಿಸುವ ಪ್ರಯತ್ನ ಮಾಡಲಿಲ್ಲ ಎಂದು ರಾಜನಿಗೆ ಬೇಸರವಾಯಿತು.

 ಸ್ವಲ್ಪ ಸಮಯದ ನಂತರ ಒಂದು ಕುದುರೆ ಗಾಡಿಯವನು ಬಂದ ಈ ದೊಡ್ಡದಾದ ಬಂಡೆಯನ್ನೂ ನೋಡಿದ ಸ್ವಲ್ಪ ಹೊತ್ತು ಯೋಚಿಸಿದ ಮೊದಲು ಕೈಯಿಂದ ಬಂಡೆಯನ್ನು ತಳ್ಳಲು ಪ್ರಯತ್ನಿಸಿದ ಆದರೆ ಅಷ್ಟು ದೊಡ್ಡ ಬಂಡೆಕಲ್ಲು ಅಲ್ಲಾಡಿಸಲು ಸಾಧ್ಯವಾಗಲಿಲ್ಲ ಅಲ್ಲಾಡಲು ಇಲ್ಲ.

ಬಂಡೆಯ ಒಂದು ಸುತ್ತು ಸುತ್ತಿದನು ಅಲ್ಲಿ ಇದ್ದ ಕೆಲವರನ್ನು ಸಹಾಯಕ್ಕೆ ಕರೆದ ಕೆಲವರು ಹೇಳಿದರು ಇದು ನಾವು ಮಾಡುವ ಕೆಲಸವಲ್ಲ ಇದು ಆಡಳಿತದವರು ಮಾಡುವ ಕೆಲಸ ನಾವೇಕೆ ಮಾಡಬೇಕು ಎಂದು ಹೊರಟರು ಅದರಲ್ಲಿ ಕೆಲವರು ಸಹಾಯ ಮಾಡಲಿಕ್ಕೆ ಬಂದರು.

 ಕುದುರೆ ಗಾಡಿಯಲ್ಲಿದ್ದ ದೊಡ್ಡದಾದ ಹಗ್ಗವನ್ನು ತೆಗೆದು ಕಲ್ಲಿಗೆ ಕಟ್ಟಿದ ಮತ್ತೆ ಇನ್ನೂ 4ಕುದುರೆ ಗಳನ್ನು ಕರೆಸಿ ಅದಕ್ಕೆಲ್ಲ ಕ್ಕೂ ಹಗ್ಗ ಕಟ್ಟಿದನು ಮತ್ತು ಇನ್ನೂ ಹಲವಾರು ಜನರನ್ನು ಕರೆದು ಎಲ್ಲರ ಸಹಾಯದಿಂದ ಹಿಂದೆಯಿಂದ ಕಲ್ಲನ್ನು ತಳ್ಳಿದರು ಮುಂದೆ ಕುದುರೆಗಳು ಎಳೆದವು ಇದರಿಂದಾಗಿ ಕಲ್ಲು ಪಕ್ಕಕ್ಕೆ ಉರುಳಿತು.

 ಬಂಡೆಯ ಕೆಳಗೆ  ನೋಡಿದರೆ ಒಂದು ಚೀಲವಿದೆ ಅದರಲ್ಲಿ ಸರಿಯಾಗಿ ಎಣಿಸಿದರೆ ನೂರು ಚಿನ್ನದ ನಾಣ್ಯಗಳು ಸಿಕ್ಕಿತು ಈ ಸುದ್ದಿ ಎಲ್ಲರಿಗೂ ತಿಳಿಯಿತು ಆಗ ಕೆಲವರು ನಮಗೆ ಸೇರಿದ್ದು ನಮಗೆ ಸೇರಿದ್ದು ಎಂದು ಓಡೋಡಿ ಬಂದರು.

 ಬಂಡೆ ಮೊದಲು ನಾನು ನೋಡಿದ್ದು ಇನ್ನೂ ಕೆಲವರು ಕುದುರೆ ಗಾಡಿಯವನಿಗೆ ನಾಲ್ಕೈದು ನಾಣ್ಯಗಳನ್ನು ಕೊಟ್ಟು ಕಳಿಸೋಣವೆಂದು ಕೆಲವರು ಬೇಡ ಬೇಡ ಇದು ನಮ್ಮ ಊರಿನಲ್ಲಿ ಸಿಕ್ಕಿದ್ದು ನಮ್ಮ ಊರಿಗೆ ಇರಬೇಕು ನಂತರ ವಾದಗಳು ವಿವಾದಗಳು ಚರ್ಚೆಗಳು ಹಲವಾರು ರೀತಿಯಲ್ಲಿ ನಡೆದವು.

 ಕುದುರೆ ಗಾಡಿಯವನು ದಾರಿ ಸರಿಯಾದ ನಂತರ ಯಾವುದನ್ನು ಕಿವಿಗೆ ಹಾಕಿಕೊಳ್ಳಲೇ ಇಲ್ಲ ನಂತರ ಕುದುರೆ ಗಾಡಿಯವನು ಹೊರಟುಹೋದ ನಂತರ ರಾಜನು ಬಂದು ಹೇಳಿದನು ಈ ಚಿನ್ನದ ನಾಣ್ಯಗಳನ್ನು ನಾನೇ ಇಟ್ಟಿದ್ದು ಊರಿನ ಜನಗಳ ವರ್ತನೆ ಹೇಗಿದೆ ಎಂಬುದನ್ನು ಕಂಡುಹಿಡಿಯಲಿಕ್ಕೆ ಈ ಕೆಲಸ ಮಾಡಿದ್ದು ಎಂದನು ಅದರಲ್ಲಿ ಅರ್ಧ ಚಿನ್ನದ ನಾಣ್ಯವನ್ನು ಕುದುರೆ ಗಾಡಿ ಅವನಿಗೆ ಕೊಟ್ಟು ಇನ್ನೂ ಮಿಕ್ಕಿದ್ದುಯಾರು ಯಾರು ಕಷ್ಟಪಟ್ಟರೂ ಅವರಿಗೆ ಕೊಟ್ಟನು.

 ಕೆಲವು ಸಾರಿ ನಮಗೂ ಕೆಲವು ಕಠಿಣ ಕಷ್ಟದ ರೂಪದಲ್ಲಿ ಕೆಲಸಗಳು ಅಡ್ಡ ಬರುತ್ತವೆ ನಾವು ಅದನ್ನು ಮಾಡುವುದಿಲ್ಲ ಎಂದರೆ ಬೇರೆಯವರು ಮಾಡಿ ಅದರ ಲಾಭವನ್ನು ಗಳಿಸುತ್ತಾರೆ ನಾವೇ ಏಕೆ ಪ್ರಯತ್ನ ಮಾಡಬಾರದು. ಕೆಲವು ಸಮಸ್ಯೆಗಳು ಬಂದಾಗ ನಾವು ಒಬ್ಬೊಬ್ಬರೇ ಪರಿಹರಿಸುವುದಕ್ಕಿಂತ ಎಲ್ಲರೂ ಸೇರಿ ಸಮಸ್ಯೆಯನ್ನು ಪರಿಹರಿಸೋಣ.

ಸಮಯ ವ್ಯರ್ಥ ಮಾಡುತ್ತಿದೆ

 

ಊರಿನಿಂದ ಒಬ್ಬ ವಿದ್ಯಾವಂತ ಮನುಷ್ಯ ಬಾಬಾ ಅವರ ಆಶ್ರಮಕ್ಕೆ ಬಂದು ಬಾಬಾ ಅವರನ್ನು ನಮಸ್ಕರಿಸಿ ನಾನು ಹೇಗಾದರೂ ಮಾಡಿ ದುಡಿಯಬೇಕು ನನ್ನ ಬಡತನವನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಹೇಳಿದ ಬಾಬಾ ಅವರು ಇವನನ್ನು ನೋಡುತ್ತಿದ್ದಂತೆ ಇವನು ತುಂಬಾ ಸೋಮಾರಿ ಗುರುತಿಸಿಬಿಟ್ಟರು.

 ಬಾಬಾ ಅವರು ಬನ್ನಿ ನನ್ನ ಜೊತೆ ಎಂದು ಸುತ್ತ ಮುತ್ತ ಇದ್ದ ಮರಗಳನ್ನೂ ತೋರಿಸಿದರು ಅದರಲ್ಲಿ ಪಕ್ಷಿ ಮರಕುಟಿಗ ಉದ್ದವಾದ ಕೊಕ್ಕಿನಿಂದ ಮರವನ್ನು ಟಕ್ ಟಕ್ ಎಂದು ಕುಟ್ಟುತ್ತಾ ಇತ್ತು ಇದನ್ನು ನೋಡಿದ ಬಾಬಾ ಅವರು ಇವನಿಗೆ ಹೇಳಿದರು.

 ಆ ಪಕ್ಷಿ ಮರವೆಲ್ಲ ಸುಮ್ಮನೆ ಕುಟುಕುತ್ತಿದೆ ಸಮಯ ವ್ಯರ್ಥ ಮಾಡುತ್ತಿದೆ ಅಲ್ಲವೇ ಎಂದಾಗ ಆ ಸೋಮಾರಿ ಮನುಷ್ಯ ಹೇಳಿದ ಪಕ್ಷಿಗೆ ಗೊತ್ತಿದೆ ಒಂದಲ್ಲ ಒಂದು ಕಡೆ ಸಿಕ್ಕೇ ಸಿಗುತ್ತದೆ ಎಂದು ನಂಬಿಕೆಯಿದೆ ಎಂದು ಹೇಳಿದನು ಆಗ ಬಾಬಾ ಅದೇ ರೀತಿ ನೀನು ಕೂಡ ನಿನಗೆ ಇಷ್ಟವಾದ ಕೆಲಸಗಳಲ್ಲಿ ಪ್ರಯತ್ನಪಟ್ಟರೆ ನೀನು ಕೂಡ ಯಶಸ್ವಿಯಾಗುತ್ತಿದೆ ಎಂದು ಹೇಳಿದರು ಆಗ ಮನುಷ್ಯ ಅರ್ಥಮಾಡಿಕೊಂಡನು.

Leave a Comment