ಒಂದು ಸಾರಿ ಒಬ್ಬ ಯುವಕ ಕೆಲಸಕ್ಕಾಗಿ ಹೋದನು ಅಲ್ಲಿ ಸಂದರ್ಶನ ನಡೆಯುತ್ತಿತ್ತು ಅಲ್ಲಲ್ಲಿ ಅಲ್ಲಲ್ಲಿ ಘರ್ಷಣೆಗಳು ನಡೆಯುತ್ತಲೇ ಇತ್ತು ಇವನು ಎಲ್ಲಾ ಕಡೆ ಒಂದು ಸಾರಿ ನೋಡಿದನು ಅಷ್ಟರಲ್ಲಿ ಒಬ್ಬ ಮೇಧಾವಿಯವರು ಒಳ್ಳೆಯ ಬಟ್ಟೆಯನ್ನು ಹಾಕಿಕೊಂಡು ಗೋಡೆಗೆ ಕಿವಿ ಕೊಟ್ಟು ಏಕಾಗ್ರತೆಯಿಂದ ಕೇಳುತ್ತಿದ್ದರು.
ಏನು ಕೇಳುತ್ತೀರಬಹುದು ಎಂದು ಈ ಯುವಕನಿಗೆ ಕುತೂಹಲ ಹೆಚ್ಚಾಯಿತು ಯುವಕನು ಕೂಡ ಹಾಗೆ ಅಲ್ಲಿ ಅಲ್ಲಿ ಹೋಗಿ ಕೇಳಿದನು ಕಿವಿ ಕೊಟ್ಟು ಕೇಳುತ್ತಿದ್ದರೂ ಏನೂ ಕೇಳಿಸುತ್ತಿರಲಿಲ್ಲ ಕೊನೆಗೆ ಯುವಕ ಮತ್ತೆ ಮೇಧಾವಿಯ ಬಳಿ ಬಂದ ಸಾರ್ ತಾವು ಹಲವು ಸಾರಿ ನೀವು ಕಿವಿಕೊಟ್ಟು ಕೇಳ್ತಿದಿರಾ ಏನು ಕೇಳಿಸಿತು ಎಂದನು.
ಮೇಧಾವಿಯವರು ಹೇಳಿದರು ನೀನು 5ನಿಮಿಷ ಕೇಳಿದೆಯಲ್ಲ ನಿನಗೆ ಏನು ಕೇಳಿಸಿತು ಆಗ ಯುವಕ ಹೇಳಿದನು ನನಗೆ ಏನೂ ಕೇಳಿಸಲಿಲ್ಲ ಎಂದನು ನೀನು ಬರೀ 5ನಿಮಿಷ ಮಾತ್ರ ಕೇಳಿದ್ದೀಯಾ ನಾನು ಒಂದು ಗಂಟೆಯಿಂದ ಪ್ರಯತ್ನ ಪಡುತ್ತಿದ್ದೇನೆ ನನಗೆ ಏನೂ ಕೇಳಿಸಲಿಲ್ಲ ಎಂದರು. ಈ ಮಾತಿಗೆ ಯುವಕ ಪೆಚ್ಚಾದನು.
ಇಬ್ಬರೂ ಓಡಿಬಂದು ಈ ಮೇಧಾವಿಯನ್ನು ಹಿಡಿದುಕೊಂಡರು ಬಾ ಎಂದು ಕರೆದುಕೊಂಡು ಹೋದರು ಮೇಧಾವಿ ಮಾನಸಿಕ ಆಸ್ಪತ್ರೆಯಿಂದ ತಪ್ಪಿಸಿಕೊಂಡ ವ್ಯಕ್ತಿ ಎಂದು ತಿಳಿಯಿತು ಆದರೆ ಯುವಕ ತನ್ನ ಸಂದರ್ಶನದ ಸಮಯವನ್ನು ಮೀರಿದ್ದನು ಹೀಗೆ ಕೆಲವು ಸಾರಿ ನಮ್ಮ ಬದುಕಿನಲ್ಲಿ ಅತ್ಯಂತ ಅಮೂಲ್ಯವಾದ ಕೆಲಸಕ್ಕೆ ಹೋಗಿರುತ್ತೀವಿ ಆದರೆ ಅಲ್ಲಿಯ ಕೆಲವು ಚಿಕ್ಕ ಆಕರ್ಷಣೆಗಳಿಗೆ ಬಲಿಯಾಗುತ್ತೇವೆ ಇದರಿಂದ ಇಡೀ ಜೀವನ ಪೂರ್ತಿ ಕೊರಗ ಬೇಕಾಗುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಎಚ್ಚರಿಕೆಯಿಂದ ಇರೋಣ.
ಇದರ ವಿಶೇಷತೆ ಏನು
ಒಂದು ಆಶ್ರಮದಲ್ಲಿ ಗುರುಗಳು ಇರುತ್ತಾರೆ ಎಲ್ಲರಿಗೂ ವಿದ್ಯೆಯನ್ನು ನೀಡುತ್ತಿರುತ್ತಾರೆ ಆಶ್ರಮಕ್ಕೆ ಇಬ್ಬರು ಯುವಕರು ವಿದ್ಯೆ ಕಲಿಯಲು ಬರುತ್ತಾರೆ ಆಗ ಗುರುಗಳು ಇಬ್ಬರನ್ನು ನೋಡಿ ಒಂದು ವಸ್ತುವನ್ನು ಕೊಟ್ಟು ಇದರ ವಿಶೇಷತೆ ಏನು ಎಂದು 2 ದಿನಗಳಲ್ಲಿ ತಿಳಿದುಕೊಂಡು ಬನ್ನಿ ಎಂದು ಕಳಿಸುತ್ತಾರೆ.
2 ದಿನ ಕಳೆದ ನಂತರ ಒಬ್ಬನ ಕೈಯಲ್ಲಿ ಆ ವಸ್ತು ಇರುತ್ತದೆ ಇನ್ನೊಬ್ಬ ಮಾತ್ರ ಬರಿ ಕೈಯಲ್ಲಿಯೇ ಬರುತ್ತಾನೆ ಬರಿಗೈಯಲ್ಲಿ ಬಂದವನು ಹೇಳುತ್ತಾನೆ ಗುರುಗಳೇ ನನ್ನನ್ನು ಕ್ಷಮಿಸಬೇಕು ನಾನು ಹೋಗಬೇಕಾದರೆ ಒಂದು ಹಳ್ಳಿ ಸಿಕ್ಕಿತು ಅಲ್ಲಿ ವಯಸ್ಸಾದವರು ಕಾಯಿಲೆಯಿಂದ ನರಳುತ್ತಿದ್ದರು.
ವಯಸ್ಸಾದವರು ನೋಡಿದ ನಂತರ ಅವರ ಸಹಾಯಕ್ಕೆ ಹೋದೆ ಅವರಿಗೆ ಯಾರೂ ಇರಲಿಲ್ಲ 2 ದಿನಗಳು ಸಾಗುತ್ತಿದ್ದಂತೆಯೇ ಇತರರು ಯಾರೋ ಬಂದರು ಆರೋಗ್ಯವು ಕೂಡ ಸ್ವಲ್ಪ ಸುಧಾರಿಸಿತು ಮತ್ತೆ ನೀವು ಕೊಟ್ಟ ಆ ವಸ್ತುವು ಅವರಿಗೆ ತುಂಬ ಉಪಯೋಗವಾಯಿತು ಅದಕ್ಕೆ ನಾನು ಅವರಿಗೆ ಬಿಟ್ಟು ಬಂದೆ ಎಂದು ಹೇಳಿದನು.
ಆಗ ಗುರುಗಳು ಎರಡನೆಯವನನ್ನು ಆಯ್ಕೆಮಾಡಿಕೊಂಡರು ಸದ್ಯಕ್ಕೆ ಕಷ್ಟದಲ್ಲಿ ಯಾರು ಇರುತ್ತಾರೋ ಅವರಿಗೆ ಸಹಾಯ ಮಾಡೋಣ.
ನೀನೇ ನಿನ್ನನ್ನು ಹುಡುಕಿ ಕೊಟ್ಟಿದ್ದೀಯಾ
ಒಂದು ಆಶ್ರಮದಲ್ಲಿ ಗುರುಗಳು ಇರುತ್ತಾರೆ ಇವರೊಂದಿಗೆ ಹಲವಾರು ಶಿಷ್ಯರು ಕೂಡ ಇರುತ್ತಾರೆ ಗುರುಗಳು ಆಗಾಗ ಹೇಳುತ್ತಲೇ ಇರುತ್ತಾರೆ ಹಣ ಮತ್ತು ನಾಲಿಗೆ ಇವೆರಡೂ ಹತೋಟಿಯಲ್ಲಿ ಇಡಬೇಕು ಇಲ್ಲದಿದ್ದರೆ ಇದರಿಂದಲೇ ಕೆಡುಕು ಉದ್ಭವವಾಗುತ್ತದೆ ಆಗಾಗ ಹೇಳುತ್ತಲೇ ಇರುತ್ತಾರೆ.
ಆಶ್ರಮದಲ್ಲಿದಾಗ ಒಬ್ಬ ಶಿಷ್ಯ ಬರುತ್ತಾನೆ ಅವನು ಯಾವ ರೀತಿ ಅಂದ್ರೆ ಇವನಿಗೆ ಬೇರೆ ಯಾರು ಶತ್ರುಗಳು ಬೇಕಾಗಿಲ್ಲ ಇವನ ನಾಲಿಗೆಯೇ ಇವನಿಗೆ ಶತ್ರು ಆ ರೀತಿ ಇರುತ್ತಾನೆ ಯಾರು ಏನೇ ಹೇಳಿದರೂ ಅವರಿಗೆ ಬೈಯ್ಯುವುದು ಅವಾಚ್ಯ ಶಬ್ದಗಳಿಂದ ಛೇಡಿಸುವುದು ಅಪಹಾಸ್ಯ ಮಾಡುವುದು ನಾನಾ ರೀತಿಯ ಚೇಷ್ಟಗಳು ಮಾಡುತ್ತಿರುತ್ತಾನೆ.
ಗುರುಗಳು ಅವನಿಗೆ ಸಾಧ್ಯವಾದಷ್ಟು ಎಚ್ಚರಿಕೆಗಳನ್ನು ನೀಡುತ್ತಿದ್ದರು ಇವನು ಸರಿ ಹೋಗುವುದಿಲ್ಲ ಎಂದು ಗುರುವಿಗೆ ತಿಳಿಯಿತು ಈ ಶಿಷ್ಯನನ್ನು ಯಮದೂತರು ಬಂದು ಕರೆದುಕೊಂಡು ಹೋಗುತ್ತಾರೆ ಎಂದು ತಿಳಿದರು ಎಷ್ಟೇ ಆದರೂ ಗುರುಗಳು ತನ್ನ ಶಿಷ್ಯನನ್ನು ಉಳಿಸುವುದಕ್ಕಾಗಿ ಎಲ್ಲಾ ಶಿಷ್ಯರಂತೆ ನೀನೂ ಕೂಡ ಅದೇ ಬಟ್ಟೆಯನ್ನು ಹಾಕಿಕೊಂಡು ಒಂದೇ ಕಡೆ ಇರು ಎಂದು ಹೇಳುತ್ತಾರೆ.
ಯಮದೂತರು ಬಂದು ಕಂಡುಹಿಡಿಯಲು ಕಷ್ಟವಾಗುತ್ತದೆ ಆಗ ಒಂದು ಉಪಾಯ ಮಾಡುತ್ತಾರೆ ಹೆಚ್ಚಾಗಿ ಮಾತಾನಾಡುವವರು ಯಾರು ಎಂದಾಗ ಯಾರು ಮಾತನಾಡುವುದಿಲ್ಲ ನಂತರ ಇನ್ನೊಂದು ಉಪಾಯ ಮಾಡುತ್ತಾರೆ ಎಲ್ಲರೂ ಚೆನ್ನಾಗಿ ಬಟ್ಟೆ ಹಾಕಿಕೊಂಡಿದ್ದೀರಾ ಆದರೆ ಒಂದೇ ಒಂದು ಮಾತ್ರ ಹೆಚ್ಚಾಗಿ ಕಾಣಿಸುತ್ತಿದೆ ಎಂದು ಜೋರಾಗಿ ಹೇಳಿದರು.
ಹೆಚ್ಚಾಗಿ ಮಾತನಾಡುವ ಶಿಷ್ಯನು ಜೋರಾಗಿ ಯಾವುದು ಎಂದು ಹೇಳಿದನು ಆಗ ನೀನೇ ನಿನ್ನನ್ನು ಹುಡುಕಿ ಕೊಟ್ಟಿದ್ದೀಯಾ ಇದೆ ನಿನ್ನ ತಪ್ಪು ಎಂದು ಯಮದೂತರು ಶಿಷ್ಯನನ್ನು ಎಳೆದುಕೊಂಡು ಹೋದರು ಸಮಯಕ್ಕೆ ಸಂದರ್ಭಕ್ಕೆ ತಕ್ಕಂತೆ ವರ್ತಿಸೋಣ.
ತುಂಬ ಬೃಹತ್ತಾಗಿ ಬೆಳೆಯುತ್ತದೆ
ಒಂದು ಸಾರಿ ದೇಶಕ್ಕೆ ಬರಗಾಲ ಬರುತ್ತದೆ ಆಗ ಊಟಕ್ಕಾಗಿ ಹಲವು ಮಕ್ಕಳು ತುಂಬಾ ಕಷ್ಟ ಪಡುತ್ತಿರುತ್ತಾರೆ ಇದನ್ನು ನೋಡಿದ ಒಂದು ಹುಡುಗಿ ಯೋಚನೆ ಮಾಡುತ್ತದೆ ನಾವು ಏಕೆ ಸಹಾಯ ಮಾಡಬಾರದು ಸಹಾಯ ಎಂದರೆ ಉಳಿದಿರುವ ಅನ್ನವನ್ನು ಬೇರೆಯವರಿಗೆ ಕೊಡುವಂತದ್ದು ತನ್ನ ಯೋಚನೆಯನ್ನು ತನ್ನ ತಂದೆ ತಾಯಿಗೆ ತಿಳಿಸುತ್ತಾಳೆ.
ಯಾರೂ ಅಷ್ಟಾಗಿ ಒಪ್ಪುವುದಿಲ್ಲ ಆದರೆ ಅದರಲ್ಲಿ ಅಜ್ಜ ಮಾತ್ರ ಒಪ್ಪುತ್ತಾರೆ ಆಗ ಅಜ್ಜರು ಹೇಳುತ್ತಾರೆ ನೀನು ಹೇಳುತ್ತಿರುವುದು ಒಳ್ಳೆಯದೆ ಆದರೆ ನೀನು ಬೇರೆ ದೇಶಕ್ಕೆ ಕಳುಹಿಸುವ ಬದಲು ನಮ್ಮ ಗ್ರಾಮದಲ್ಲಿ ಆಹಾರಕ್ಕಾಗಿ ಕಷ್ಟಪಡುತ್ತಿದ್ದಾರೆ ಅವರನ್ನೇಕೆ ನೀನು ಕಳಿಸಬಾರದು ಎಂದು ಹೇಳುತ್ತಾರೆ.
ಹುಡುಗಿಗೆ ಸರಿಯಾದ ಸಲಹೆ ಎಂದು ಅರ್ಥ ಮಾಡಿಕೊಳ್ಳುತ್ತದೆ ನಂತರ ಆ ಹುಡುಗಿ ತನ್ನ ಮನೆಯಲ್ಲಿ ಇದ್ದ ಹೆಚ್ಚು ಆಹಾರವನ್ನು ಮಿಕ್ಕಿದ ಆಹಾರವನ್ನು ಹಸಿದವರಿಗೆ ಕೊಡೋಣ ಎಂದು ಒಂದು ಕಡೆ ಶೇಖರಣೆ ಮಾಡಿ ಇಡುತ್ತಾಳೆ ನಂತರ ಒಂದು ಬೋರ್ಡನ್ನು ಬರೆಸುತ್ತಾಳೆ.
ಉಳಿದಿರುವ ಅನ್ನವನ್ನು ತಂದು ಈ ಸ್ಥಳಕ್ಕೆ ನೀಡಿದರೆ ಅನ್ನವನ್ನು ನಾನು ಹಸಿದ ಮಕ್ಕಳಿಗೆ ಕೊಡುತ್ತೇನೆ ಈ ಬೋರ್ಡ್ ಅನ್ನು ನೋಡಿದ ಕೆಲವರು ನಗುತ್ತಾರೆ ಮತ್ತೆ ಕೆಲವರು ಸಹಾಯ ಮಾಡುತ್ತಾರೆ ಕೆಲವರು ಮಿಕ್ಕಿದ ಅನ್ನವನ್ನು ಊಟದ ಪ್ಯಾಕೆಟ್ ಗಳಾಗಿ ನೀಡುತ್ತಾರೆ ನಂತರ ಬಂದ ಅನ್ನವನ್ನು ಎಲ್ಲರಿಗೂ ಹಂಚುತ್ತಾರೆ.
ಬಹಳಷ್ಟು ಮಕ್ಕಳ ಉಪವಾಸ ತಪ್ಪುತ್ತದೆ ನಂತರ ಬಟ್ಟೆಗಳು ಪುಸ್ತಕಗಳು ಅವರಿಗೆ ಹೆಚ್ಚಾಗಿ ಇದ್ದ ವಸ್ತುಗಳೆಲ್ಲವೂ ಬರತೊಡಗುತ್ತವೆ ಅದೇ ರೀತಿ ಈ ವಸ್ತುಗಳನ್ನು ಬೇರೆಯವರಿಗೆ ಕೊಡುತ್ತಿರುತ್ತಾರೆ ಮೊದಲು ಚಿಕ್ಕದಾಗಿ ಮಾಡಿದ್ದ ಈ ಒಂದು ಸಣ್ಣ ಕಾರ್ಯ ಮುಂದೆ ಬೆಳೆಯುತ್ತಾ ಬೆಳೆಯುತ್ತಾ ತುಂಬ ಬೃಹತ್ತಾಗಿ ಬೆಳೆಯುತ್ತದೆ.
ನಂತರ ಒಂದು ಸಂಸ್ಥೆಯಾಗಿ ಅಭಿವೃದ್ಧಿಯಾಗುತ್ತದೆ ಈಗಲೂ ಕೂಡ ಇಂಥ ಸಂಸ್ಥೆಗಳು ಬೇಕಾದಷ್ಟು ಇವೆ ಒಂದು ಚಿಕ್ಕ ಮಗು ಯೋಚನೆ ಮಾಡಿ ಇಷ್ಟು ದೊಡ್ಡ ಕಾರ್ಯವನ್ನು ಮಾಡಿದೆ ಎಂದಾದರೆ ನಾವು ಏನು ಮಾಡಬಹುದು ಎಂದು ನಾವೇ ವಿಶ್ಲೇಷಿಸಿ ನಿಖರವಾದ ಗುರಿಯನ್ನು ಇಟ್ಟುಕೊಂಡು ಗುರಿಗಾಗಿ ಶ್ರಮಿಸಿ ಬೃಹತ್ ಆಗಿ ಬೆಳೆಯೋಣ.
ಉಗಿದವನು ಇಲ್ಲ
ಊರಿನ ಆಚೆ ಒಂದು ಮರದ ಕೆಳಗೆ ಬಾಬಾ ಅವರು ಧ್ಯಾನಾಸಕ್ತರಾಗಿ ಕುಳಿತಿರುತ್ತಾರೆ ಬಾಬಾ ಅವರಲ್ಲಿ ತಾಳ್ಮೆಯ ಸ್ವಭಾವ ಹೆಚ್ಚಾಗಿರುತ್ತದೆ ಇದನ್ನು ತಿಳಿದ ಒಬ್ಬ ವ್ಯಕ್ತಿ ಕುಳಿತಿದ್ದ ಬಾಬಾ ಅವರನ್ನು ಜೋರಾಗಿ ಥೂ ಥೂ ಎಂದು ಉಗಿಯುತ್ತಾನೆ.
ಬಾಬಾ ಅವರಿಂದ ಪ್ರತಿಕ್ರಿಯೆ ಬರಲಿ ಎಂದು ಯೋಚಿಸುತ್ತಾನೆ ಆದರೆ ಬಾಬಾ ಅವರು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಮತ್ತೊಂದು ಸಾರಿ ಜೋರಾಗಿ ಥೂ ಥೂ ಎಂದು ಉಗಿದು ವ್ಯಕ್ತಿ ಹೊರಟು ಹೋಗುತ್ತಾನೆ ಮನೆಗೆ ಹೋದ ನಂತರ ಮನಸ್ಸಿನಲ್ಲಿ ಉಗಿದವನಿಗೆ ದ್ವಂದ್ವ ಶುರುವಾಗುತ್ತದೆ.
ನಾನು ಬಾಬಾ ಅವರನ್ನು ಥೂ ಥೂ ಎಂದು ಉಗಿದು ಬಿಟ್ಟಿದ್ದೇನೆ ಇದರಿಂದಾಗಿ ಮನಸ್ಸಿನ ತಳಮಳ ಚಡಪಡಿಕೆಯಿಂದ ನಿದ್ದೆ ಬರುವುದಿಲ್ಲ ಮತ್ತೆ ಮಾರನೆಯ ದಿನ ಬಂದು ಬಾಬಾ ಅವರೊಂದಿಗೆ ದಯವಿಟ್ಟು ನನ್ನನ್ನು ಕ್ಷಮಿಸಿ ನಾನು ನಿನ್ನೆ ನಿಮಗೆ ಥೂ ಥೂ ಎಂದು ಉಗಿದು ಬಿಟ್ಟಿದ್ದೇನೆ ಎಂದು ಹೇಳುತ್ತಾನೆ.
ಅದಕ್ಕೆ ಬಾಬಾ ಅವರು ನಗುತ್ತಾ ಉಗಿದವನು ಇಲ್ಲ ಉಗಿಸಿಕೊಂಡವನು ಇಲ್ಲ ಯಾರನ್ನು ಕ್ಷಮಿಸುವುದು ನಂತರ ಈಗ ನಿನ್ನ ಮನಸ್ಸು ನಿರ್ಮಲವಾಗಿದೆ ಎಂದು ಹೇಳುತ್ತಾರೆ.