ಆಕರ್ಷಣೆಗಳಿಗೆ ಬಲಿಯಾಗಬೇಡಿ

ಒಂದು ಕಾಲದಲ್ಲಿ ಒಮ್ಮೆ ರಾಜರು ಅವರ ಅರಮನೆಯಲ್ಲಿ ಕೆಲಸ ಮಾಡಲಿಕ್ಕೆ ಯುವಕರು ಬೇಕಾಗಿರುತ್ತಾರೆ ಆದುದರಿಂದ ರಾಜರು ಅವರಿಗೆ ಗೊತ್ತಿರುವ ಗುರುಗಳಿಗೆ ಒಂದು ಪತ್ರವನ್ನು ಕಳಿಸುತ್ತಾರೆ ನನಗೆ ಯುವಕರು ಬೇಕಾಗಿದ್ದಾರೆ ಬುದ್ಧಿವಂತ ಯುವಕರನ್ನು ಕಳಿಸಿ ಎಂದು ಪತ್ರದಲ್ಲಿ ಬರೆದಿರುತ್ತಾರೆ.

ಯುವಕರಿಗೆ ಗುರುಗಳು ಐದು ಯುವಕರನ್ನು ಆಯ್ಕೆ ಮಾಡಿ ಅವರಿಗೆ ಹೇಳುತ್ತಾರೆ ನೋಡಿ ನೀವು ಹಲವಾರು ಹಳ್ಳಿಗಳನ್ನು ದಾಟಿ ಹೋಗಬೇಕು ಅಲ್ಲಿ ನಿಮಗೆ ತುಂಬಾ ಒಳ್ಳೆಯ ಸೌಕರ್ಯ ಇದೆ ಮತ್ತೆ ನೀವು ದಾರಿಯಲ್ಲಿ ಹೋಗಬೇಕಾದರೆ ನಿಮಗೆ ಬಹಳಷ್ಟು ಆಕರ್ಷಣೆಗಳು ಬರುತ್ತವೆ ಆಕರ್ಷಣೆಗಳಿಗೆ ಬಲಿಯಾಗಬೇಡಿ ನೀವು ಆಕರ್ಷಣೆಗಳನ್ನು ದಾಟಿ ಹೋಗಬೇಕು ಎಂದು ಮುನ್ನೆಚ್ಚರಿಕೆ ನೀಡುತ್ತಾರೆ.

 ಯುವಕರು ಗುರುಗಳಿಗೆ ಭ್ರಮೆ ಆದುದರಿಂದ ಗುರುಗಳು ಹೀಗೆ ಹೇಳುತ್ತಿದ್ದಾರೆ ಮತ್ತು ವಯಸ್ಸು ಬೇರೆ ಜಾಸ್ತಿ ಆಗಿದೆ ಎಂದು ಮನದಲ್ಲಿ ಅಂದುಕೊಳ್ಳುತ್ತಾರೆ ಬೆಳಿಗ್ಗೆ 5 ಯುವಕರು ಹೊರಡುತ್ತಾರೆ.

 ಸ್ವಲ್ಪ ದೂರ ನಡೆದ ಮೇಲೆ ಒಂದು ಚಿಕ್ಕ ಹಳ್ಳಿ ಸಿಗುತ್ತದೆ ಅಲ್ಲಿ ಒಂದು ದೇವಸ್ಥಾನ ಇರುತ್ತದೆ ಅಲ್ಲಿ ದರ್ಶನ ಮಾಡುತ್ತಿದ್ದಂತೆಯೇ ಆ ಹಳ್ಳಿಯ ಜನರು ಬಂದು ಬೇಡಿಕೊಳ್ಳುತ್ತಾರೆ ಇಲ್ಲಿಯ ಅರ್ಚಕರು ಸತ್ತುಹೋಗಿದ್ದಾರೆ.

ದಯವಿಟ್ಟು ನೀವು ಯಾರಾದರೊಬ್ಬರು ಇಲ್ಲಿಯೇ ಉಳಿದು ಅರ್ಚಕರಾಗಿ ಸೇವೆ ಸಲ್ಲಿಸಿದರೆ ನೀವು ಕಲಿತಿರುವ ವಿದ್ಯೆ ಎಲ್ಲರಿಗೂ ಉಪಯೋಗವಾಗುತ್ತದೆ ಮತ್ತೆ ನಿಮಗೂ ಇರಲಿಕ್ಕೆ ಸಕಲ ಸೌಲಭ್ಯ ಎಲ್ಲ ವ್ಯವಸ್ಥೆಯನ್ನು ನಾವು ಮಾಡಿಕೊಡುತ್ತೇವೆ ಎಂದು ಹೇಳುತ್ತಾರೆ.

ಒಬ್ಬ ಯುವಕ ಅಲ್ಲಿಯೇ ಉಳಿದುಕೊಳ್ಳುತ್ತಾನೆ. ನಂತರ ನಾಲ್ಕು ಯುವಕರು ಪ್ರಯಾಣ ಮುಂದುವರಿಸುತ್ತಾರೆ ನಂತರ ಇನ್ನೊಂದು ಹಳ್ಳಿ ಸಿಗುತ್ತದೆ ಅಲ್ಲಿ ಸಂಜೆ ಯಾಗುತ್ತಿರುತ್ತದೆ ಆಗ ಎಲ್ಲರೂ ಸೇರಿಕೊಂಡಿರುತ್ತಾರೆ ಏನು ಎಂದು ನೋಡಿದರೆ ಒಬ್ಬ ಮನೆಯ ಮಾಲೀಕ ಸತ್ತುಹೋಗಿರುತ್ತಾನೆ.

 ಅವನ ಅಂತ್ಯಕ್ರಿಯೆಗೆ 4 ಯುವಕರು ಸಹಾಯ ಮಾಡುತ್ತಾರೆ ಸತ್ತ ಮಾಲೀಕನಿಗೆ ಹೆಂಡತಿ ಇರುತ್ತಾಳೆ ಹಾಗೆ ಒಬ್ಬಳು ರೂಪವತಿಯಾದ ಮಗಳು ತಂದೆಯವರು ಸತ್ತುಹೋಗಿದ್ದರಿಂದ ತುಂಬಾ ರೋಧಿಸುತ್ತಾಳೆ ನಮಗೆ ಗತಿ ಯಾರು ಇಲ್ಲ ಎಂದು ತನ್ನ ದುಃಖವನ್ನು ವ್ಯಕ್ತಪಡಿಸುತ್ತಾಳೆ ತುಂಬಾ ಅಳುತ್ತಾ ಇರುತ್ತಾಳೆ.

 ಅಷ್ಟಾಗಿ ಯಾವ ಸಂಬಂಧಗಳೂ ಇರುವುದಿಲ್ಲ ಇದನ್ನು ನೋಡಿದ ಯುವಕನ ಮನಸು ಮಂಜಿನಂತೆ ಕರಗಿ ನೀರಾಗುತ್ತದೆ. ಆಗ ಯುವಕನು ತನ್ನ ನಿರ್ಧಾರವನ್ನು ಬದಲಿಸಿಕೊಳ್ಳುತ್ತಾನೆ ನಂತರ ಒಬ್ಬ ಯುವಕ ಹೇಳುತ್ತಾನೆ ನಾನು ಬರಲಾರೆ ಇವರಿಗೆ ಯಾರು ದಿಕ್ಕು ಇಲ್ಲ ಸರಿಯಾದ ಸಮಯದಲ್ಲಿ ಇನ್ನೊಬ್ಬರನ್ನು ನಾವು ನೆರವಾಗದಿದ್ದರೆ ನಾವು ವಿದ್ಯೆ ಪಡೆದು ಏನು ಪ್ರಯೋಜನ ಎಂದು ಹೇಳುತ್ತಾನೆ.

ಮೂರು ಯುವಕರು ತಮ್ಮ ಪ್ರಯಾಣವನ್ನು ಮುಂದುವರೆಸುತ್ತಾರೆ ಮತ್ತೆ ಸ್ವಲ್ಪ ದೂರ ಹೋದ ಮೇಲೆ ಒಂದು ರಾಜನು ವಾಯು ವಿಹಾರಕ್ಕೆ ಬಂದಿರುತ್ತಾನೆ ಇವರನ್ನು ನೋಡಿ ಒಬ್ಬ ಸುಂದರ ಗಟ್ಟಿಮುಟ್ಟಾಗಿದ್ದ ಯುವಕನನ್ನು ನೋಡಿ ಹೇಳುತ್ತಾನೆ ನನಗೆ ಒಂದು ಕನಸು ಬಿದ್ದಿತ್ತು ಯಾರೋ ಇವತ್ತು ನಮ್ಮ ಊರಿಗೆ ಬರುತ್ತಾನೆ ಅವನೇ ಸರಿಯಾದ ಕೆಲಸಗಾರ ಎಂದು ಒಬ್ಬನನ್ನು ಅರಮನೆಗೆ ಕರೆದುಕೊಂಡು ಹೋಗುತ್ತಾನೆ.

ಆಯ್ಕೆಯಾದವನು ಹೇಳುತ್ತಾನೆ ಪಾಲಿಗೆ ಬಂದದ್ದು ತಿರಸ್ಕರಿಸಬಾರದು ಈ ಅವಕಾಶವನ್ನು ನಾನು ಬಿಡಲಾರೆ ಎಂದು ಹೇಳಿ ಮಿಕ್ಕಿದವರನ್ನು ಕಳಿಸುತ್ತಾನೆ. ಈಗ ಉಳಿದಿರುವವರು ಇಬ್ಬರು ಮಾತ್ರ ಇವರೇ ಇಬ್ಬರೂ ತಮ್ಮ ಪ್ರಯಾಣವನ್ನು ಮುಂದು ವರೆಸುತ್ತಾರೆ ಇಬ್ಬರೂ ಮಾತನಾಡಿಕೊಳ್ಳುತ್ತಾರೆ ನಾವು ಹೇಗಾದರೂ ಮಾಡಿ ನಮ್ಮ ಗುರಿಯನ್ನು ಮುಟ್ಟಲೇಬೇಕು ನಮ್ಮ ಮೇಲೆ ನಮ್ಮ ಗುರುಗಳು ತುಂಬಾ ನಂಬಿಕೆ ಇಟ್ಟಿದ್ದಾರೆ ಎಂದು ಹೋಗುತ್ತಿರುತ್ತಾರೆ.

 ಅಷ್ಟರಲ್ಲಿ ಒಂದು ಗುಂಪು ಧಡೂತಿ ಆಸಾಮಿಗಳು ಬಂದು ಇಬ್ಬರು ಯುವಕರನ್ನು ನೋಡಿ ಹೇಳುತ್ತಾರೆ ನೀವು ಇಲ್ಲಿಗೆ ಬಂದಿರುವುದು ನಮ್ಮ ಪುಣ್ಯ ನಮ್ಮ ಹಳ್ಳಿಯಲ್ಲಿ ಅರ್ದಂಬರ್ಧ ವಿದ್ಯೆ ಕಲಿತು ಯಾರೋ ನಮ್ಮನ್ನು ಗೊತ್ತಿಲ್ಲದ ದಾರಿಗೆ ಕರೆದುಕೊಂಡು ಹೋಗುತ್ತಿದ್ದಾರೆ.

 ಏನೇ ಹೇಳಿದರೂ ಅದಕ್ಕೆ ಸರಿಯಾದ ಉತ್ತರವನ್ನೂ ನೀಡುತ್ತಿಲ್ಲ ನೀವು ಒಳ್ಳೆ ಬುದ್ದಿವಂತರು ಜ್ಞಾನವಂತರು ನೀವು ಇಲ್ಲಿ ಇದ್ದರೆ ನಮ್ಮ ಹಳ್ಳಿಯು ಅಭಿವೃದ್ಧಿಯಾಗುತ್ತದೆ ನಾವು ನಿಮ್ಮನ್ನು ತುಂಬಾ ನಂಬಿದ್ದೇವೆ ದಯಮಾಡಿ ನಮಗೆ ಸರಿಯಾದ ಮಾರ್ಗದರ್ಶನ ನೀಡಿ ಎಂದು ಕಳಕಳಿಯಿಂದ ವಿನಂತಿಸಿಕೊಳ್ಳುತ್ತಾರೆ.

 ಈ ಮಾತಿಗೆ ಬೆಣ್ಣೆಯಂತೆ ಒಬ್ಬ ಕರಗಿದನು. ನೀವು ಇದಕ್ಕೆ ಒಪ್ಪಲೇ ಬೇಕು ಇಲ್ಲದಿದ್ದರೆ ನಾವು ನಿಮ್ಮನ್ನು ಬಲವಂತವಂತ ಮಾಡಬೇಕಾಗುತ್ತದೆ ಎಂದು ಹೇಳುತ್ತಾರೆ. ಇಬ್ಬರಲ್ಲಿ ಒಬ್ಬ ಯುವಕ ಹೇಳುತ್ತಾನೆ ನನಗೆ ಸುವರ್ಣ ಅವಕಾಶ ಸಿಕ್ಕಿದೆ ಎಂದು ಒಪ್ಪಿ ಅವರ ಹಿಂದೆ ಹೋಗುತ್ತಾನೆ ಕೊನೆಗೆ ಉಳಿದಿದ್ದು ಒಬ್ಬ ಯುವಕ ಮಾತ್ರ ಇವನು ಮಾತ್ರ ಹೋಗಿ ಗುರುಗಳು ಹೇಳಿರುವ ಊರಿಗೆ ತಲುಪುತ್ತಾನೆ ಉನ್ನತ ಸ್ಥಾನದಲ್ಲಿ ನಿಶ್ಚಿಂತೆಯಿಂದ ಬದುಕುತ್ತಾನೆ.

 ಗುರುಗಳು ಹೇಳಿದ್ದು ಸರಿ ಎಂದು ಕೊನೆಯ ಯುವಕನಿಗೆ ಮಾತ್ರ ಅರ್ಥವಾಗುತ್ತದೆ ದಾರಿಯಲ್ಲಿ ಹೋಗಬೇಕಾದರೆ ಆಕರ್ಷಿಸುವಂಥ ಹಲವಾರು ಸಂದರ್ಭಗಳು ಬಂದೆ ಬರುತ್ತವೆ ಎಂದು ಅರಿವಾಗುತ್ತದೆ.

 ಇದು ಕಥೆ ಯಾಗಿರಬಹುದು ನಮ್ಮ ಬದುಕಿನ ದಾರಿಯಲ್ಲೂ ಆಸೆ, ಅಧಿಕಾರ, ಹಣ, ಮೋಹ, ಗೌರವ, ಕೀರ್ತಿ, ಇವುಗಳೆಲ್ಲವೂ ನಮಗೆ ಬಂದೇ ಬರುತ್ತದೆ ಇದನ್ನು ಮೀರಿ ನಮಗೆ ಸೂಕ್ತವಾದದ್ದನ್ನು ಆಯ್ಕೆಮಾಡಿಕೊಳ್ಳೋಣ.

ದೋಣಿ ಪಲ್ಟಿ ಹೊಡೆಯಿತು

ಒಂದು ಹಳ್ಳಿಯಿಂದ ಊರಿಗೆ ಹೋಗಬೇಕಾದರೆ ನದಿಯ ಮಾರ್ಗವಾಗಿ ಹೋಗಬೇಕು ಬೇರೆ ಯಾವುದೇ ಮಾರ್ಗ ಇರುವುದಿಲ್ಲ ಹಾಗಾಗಿ ಸಂತೆಗೆ ಹೋಗಬೇಕಾದರೆ ಅಥವಾ ಊರಿಗೆ ಹೋಗಬೇಕಾದರೆ ಚಿಕ್ಕ ದೋಣಿ ಇತ್ತು ಅದರಲ್ಲೇ ಎಲ್ಲರೂ ಹೋಗಬೇಕು ದೋಣಿ ಬಂದು ನಿಂತಿತು.

 ಮೊದಲಿಗೆ ಗುಲಾಬಿ ಹೂವು ಮಾರುವವನು ಬಂದು ಕುಳಿತುಕೊಂಡನು ನಂತರ ಭವಿಷ್ಯ ಹೇಳುವವನು ಗಿಳಿಯನ್ನು ಚಿಕ್ಕಪಂಚದಲ್ಲಿ ಹಿಡಿದುಕೊಂಡು ಬಂದನು ನಂತರ ಆಚಾರ್ಯರು ಬಂದು ಕುಳಿತರು ನಂತರ ಒಬ್ಬ ಶ್ರೀಮಂತ ಬಂದು ಕುಳಿತನು ನಂತರ ಒಬ್ಬ ಕೋತಿ ಆಡಿಸುವವನು ಬಂದು ಕುಳಿತನು.

 ತದನಂತರ ಸೊಪ್ಪು ಮಾರುವವನು ಸೊಪ್ಪನ್ನು ಚೀಲದಲ್ಲಿ ಹಾಕಿಕೊಂಡು ಬಂದು ಕುಳಿತನು ನಂತರ ಹಾವಾಡಿಗನು ಬಂದು ಕುಳಿತನು ಅವನ ಹತ್ತಿರ ಮೂರು ಹಾವಿನ ಬುಟ್ಟಿಗಳು ಇದ್ದವು ನಂತರ ಶಿಕ್ಷಕರು ಬಂದು ಕುಳಿತರು.

 ದೋಣಿ ಮುಂದೆ ಸಾಗಲು ಆರಂಭಿಸಿತು ಅಷ್ಟರಲ್ಲಿ ದೂರದಿಂದ ಯುವಕ ಓಡಿಬಂದನು ನಾನು ಬರುತ್ತೇನೆ ನಿಲ್ಲಿಸಿ ಎಂದನು ದೋಣಿ ನಿಲ್ಲಿಸಿದನು ಆಗ ಶಿಕ್ಷಕರು ಹುಡುಗನನ್ನು ನೋಡಿ ನಾವಿಕನಿಗೆ ಹೇಳಿದರು ಈ ಹುಡುಗ ಯುವಕವನ್ನು ಅಲ್ಲ ಚಿಕ್ಕ ಹುಡುಗನು ಅಲ್ಲ ಮಧ್ಯಂತರದಲ್ಲಿದ್ದಾನೆ ದಯವಿಟ್ಟು ಇವನನ್ನು ಕೂರಿಸಿ ಕೊಳ್ಳುವುದು ಒಳ್ಳೆಯದಲ್ಲ ನಡೆಯಿರಿ ಎಂದು ನಾವಿಕನಿಗೆ ಹೇಳಿದರು.

 ನಾವಿಕನು ಕೇಳಲಿಲ್ಲ ಬರುವ ಸಂಪಾದನೆ ಬಿಡಲು ಸಾಧ್ಯವೇ ಎಂದು ಹೇಳಿದನು ಹುಡುಗನು ಒಂದು ಕಡೆ ಕುಳಿತನು ದೋಣಿ ಮುಂದೆ ಮುಂದೆ ಸಾಗಿತು ಸ್ವಲ್ಪ ದೂರದಲ್ಲಿಯೇ ದಡ ಕಾಣುತ್ತಿತ್ತು ಇನ್ನೇನು ಹೋಗಿ ದಡ ಸೇರಬೇಕಿತ್ತು ಅಷ್ಟರಲ್ಲಿ ಹುಡುಗ ಸುಮ್ಮನೆ ಕೂರದೆ ಗುಲಾಬಿಯ ಹೂವನ್ನು ತೆಗೆದುಕೊಂಡು ನೋಡುತ್ತಿದ್ದನು.

ಹೂವು ಮಾರುವವನು ನೋಡಲಿಲ್ಲ ಮುಂದೆ ಕೋತಿಯೂ ನಗುತ್ತಿತ್ತು ಹುಡುಗ ಕೋತಿಯನ್ನು ಅಣಕಿಸಿದನು ಕೋತಿ ಗುರ್ ಎಂದಿತು ಅದಕ್ಕೆ ಹುಡುಗನು ಕೈಯಲ್ಲಿದ ಹೂವನ್ನು ಕೋತಿಯ ಮೇಲೆ ಎಸೆದನು ಕೋತಿಯು ಗಾಬರಿಯಾಗಿ ಹಾವಿನ ಬುಟ್ಟಿಯನ್ನು ತೆಗೆಯಿತು ಹಾವುಗಳು  ಬುಸ್ ಬುಸ್ ಎಂದು ಈಚೆ ಬಂದವು.

ಆಗ ಎಲ್ಲರೂ ಗಾಬರಿಯಾಗಿ ದೋಣಿ ಪಲ್ಟಿ ಹೊಡೆಯಿತು ಎಲ್ಲರೂ ನೀರಿನಲ್ಲಿ ಮುಳುಗಿದರು ಸ್ವಲ್ಪ ದೂರ ಇರುವುದರಿಂದ ನೀರಿನಲ್ಲಿ ನಡೆದುಕೊಂಡು ಬಂದು ದಡಕ್ಕೆ ಸೇರಿದರು ಆಗ ಶಿಕ್ಷಕರು ನಾವಿಕನನ್ನು ಹೇಳಿದರು ನಾವಿಕ ಏನು ಮಾತನಾಡದೆ ಸುಮ್ಮನಾದನು.

ಹೆಣಗಳಿಗಾಗಿ ಕಾಯುತ್ತಿದ್ದಳು

ಒಂದು ಊರಿನ ಕೊನೆಯಲ್ಲಿ ಒಂದು ಸಂಸಾರ ಇತ್ತು ಆ ಮನೆಯ ಪಕ್ಕದಲ್ಲಿ ಸ್ಮಶಾನ ಆ ಮನೆಯಲ್ಲಿ 4 ಜನರ ಗಂಡ ಹೆಂಡತಿ 2 ಮಕ್ಕಳು ಒಂದು ಹೆಣ್ಣು ಮಗುವಿಗೆ 7ವರ್ಷ ಚಿಕ್ಕ ಮಗು 3ವರ್ಷ ಆ ಮನೆಯವರಿಗೆ ತುಂಬಾ ಬಡತನ ತಂದೆಯ ಕೆಲಸ ಏನೆಂದರೆ ಸ್ಮಶಾನವನ್ನು ಕಾಯುವುದು.

ಯಾವುದಾದರೂ ಹೆಣ ಬಂದರೆ ಅವನ ಕೆಲಸ ಆರಂಭವಾಗುತ್ತದೆ ಹೆಣದ ಅಂತ್ಯಕ್ರಿಯೆ ಮಾಡಬೇಕಾದರೆ ಇವನೇ ಎಲ್ಲವನು ಮಾಡಿ ಮುಗಿಸಬೇಕಾಗಿತ್ತು ಎಲ್ಲಾ ಕೆಲಸವನ್ನು ಇವನಿಗೆ ಕೊಡುತ್ತಿದ್ದರು ಇದರಿಂದ ಇವನಿಗೆ ಸ್ವಲ್ಪ ಹಣವೂ ಕೂಡ ಬರುತ್ತಿತ್ತು ಈ ಹಣದಿಂದಲೇ ಈ ಸಂಸಾರ ನಡೆಯುತ್ತಿತ್ತು.

 ಹೆಣಗಳು ಜಾಸ್ತಿ ಬಂದರೆ ಇವರಿಗೆ ಹಣ ಹೆಚ್ಚು ಬರುತ್ತಿತ್ತು ಅದೇ ಹೆಣಗಳು ಬರಲಿಲ್ಲ ಎಂದಾಗ ಇವರ ಜೀವನ ತುಂಬಾ ದುಸ್ತರ ವಾಗುತ್ತಿತ್ತು ಆಗ ತಿನ್ನಲು ಕೂಡ ಏನೂ ಸಿಗುತ್ತಿರಲಿಲ್ಲ ಈ ರೀತಿಯಾಗಿ ಸಂಸಾರ ನಡೆಯುತ್ತಿತ್ತು ಆಗ ಚಿಕ್ಕ ಹುಡುಗಿಯಾದರಿಂದ ಅವಳು ದಿನನಿತ್ಯವೂ ಹೆಣಗಳಿಗಾಗಿ ಕಾಯುತ್ತಿದ್ದಳು.

 ಯಾವುದಾದರೂ ಹೆಣ ಬಂದರೆ ಸಾಕು ತುಂಬ ಸಂತೋಷ ಪಡುತ್ತಿದ್ದಳು, ಹಿಗ್ಗುತ್ತಿದ್ದಳು. ಹೆಣದ ಹಿಂದೆ ಬರುತ್ತಿದ್ದ ಜನರು ಯಾವ ದುಖಃದಲ್ಲಿ ಇದ್ದಾರೆ ಎಂದು ಈ ಹುಡುಗಿಗೆ ಅರ್ಥವಾಗುತ್ತಿರಲಿಲ್ಲ ಏಕೆಂದರೆ ಈ ಹುಡುಗಿಗೆ ಅಷ್ಟು ಬುದ್ಧಿ ಇಲ್ಲ ಹೀಗೆ ಒಂದು ಸಾರಿ ಯಾವುದೋ ಶರೀರ ಬರುತ್ತಿದೆ ಈ ದೃಶ್ಯವನ್ನು ನೋಡಿ ಸಂತೋಷಪಟ್ಟಳು.

ಮನೆಯಲ್ಲಿ ನೋಡಿದರೆ ತಂದೆ ಇರಲಿಲ್ಲ ಓಡಿ ಹೋಗಿ ಅಮ್ಮನಿಗೆ ಒಳ್ಳೆಯ ಸಮಾಚಾರ ತಿಳಿಸಿದಳು ಅಮ್ಮ ಬರಲಿ ಬಿಡು ಸ್ವಲ್ಪ ಹೊತ್ತಿನಲ್ಲಿಯೇ ಅಪ್ಪ ಬರುತ್ತಾರೆ ಎಂದು ಹೇಳಿದಳು ತಂದ ಹೆಣವನ್ನು ಇಳಿಸಿದರು ಹುಡುಗಿ ಸಂತೋಷದಿಂದ ಓಡಿ ಬಂದು ನೋಡಿದರೆ ಅದು ತನ್ನ ಸ್ವಂತ ತಂದೆಯ ಶರೀರ ಆಗಿತ್ತು ಹುಡುಗಿಯ ಮುಖದ ಮೇಲಿದ್ದ ನಗೆಯೂ ಹೋಗಿ ದುಃಖ ಇಮ್ಮಡಿಯಾಯಿತು.

 ಜೀವನದಲ್ಲಿ ಮೊಟ್ಟ ಮೊದಲನೆಯ ಬಾರಿಗೆ ಈ ದೃಶ್ಯ ನೋಡಿ ಆಕೆ ದುಃಖಪಟ್ಟಳು ಕೆಲವರು ತಮ್ಮ ಸುಖಕ್ಕಾಗಿ ಬೇರೆಯವರ ನೋವು ನಲಿವುಗಳನ್ನು ಚಿಂತಿಸುವುದೇ ಇಲ್ಲ ತಮಗೆ ಈ ಸ್ಥಿತಿ ಬಂದಾಗ ಮಾತ್ರ ಅರ್ಥಮಾಡಿಕೊಳ್ಳುತ್ತಾರೆ.

 ಈ ಹುಡುಗಿಯ ಮುಗ್ಧ ಮನಸ್ಸು ಈ ಹುಡುಗಿ ಯೋಚನೆ ಮಾಡಿದ್ದು ಇಷ್ಟೇ  ಹೆಣಗಳು ಬಂದರೆ ಹಸಿವು ನೀಗುತ್ತದೆ ಆದರೆ ಹೆಣದ ಹಿಂದೆ ಬರುತ್ತಿರುವವರ ದುಃಖ ಕಾಣುತ್ತಿರಲಿಲ್ಲ.

ಕೋಪದಿಂದ ಕೆಂಡಮಂಡಲವಾಗುತ್ತಾನೆ

ಒಂದು ಸಾರಿ ಅಜ್ಜ ಅಜ್ಜಿ ಇಬ್ಬರೂ ಸೇರಿ ದೊಡ್ಡ ವಿಶ್ವ ವಿದ್ಯಾಲಯಕ್ಕೆ ಹೋಗುತ್ತಾರೆ ಅಲ್ಲಿಯ ಅಧ್ಯಕ್ಷರನ್ನು ನೊಡಲೇ ಬೇಕು ಎಂದು ಹೇಳುತ್ತಾರೆ ಗೇಟ್ ನಲ್ಲಿ ಇದ್ದ ಸೆಕ್ಯುರಿಟಿ ಗಾರ್ಡ್ ಇವರನ್ನು ನೋಡಿ ಅಲ್ಲಿಯೇ ಕೂರಿಸುತ್ತಾನೆ ಇದನ್ನು ನೋಡಿದ ಅಧ್ಯಕ್ಷರು ಕೂಡ ಹೇಳುತ್ತಾರೆ.

 ಯಾವುದೇ ಕಾರಣಕ್ಕೂ ಅಜ್ಜ ಅಜ್ಜಿಗೆ ಒಳಗಡೆ ಬಿಡಬೇಡಿ ಎಂದು ಅಧ್ಯಕ್ಷರು ಹೇಳುತ್ತಾರೆ ಸೆಕ್ಯೂರಿಟಿ ಗಾರ್ಡ್ ಅಜ್ಜ ಅಜ್ಜಿಗೆ ಅಧ್ಯಕ್ಷರಿಗೆ ಬಿಡುವಿಲ್ಲ ಮಾತನಾಡಿಸುವುದು ಕಷ್ಟ ನೀವು ಇನ್ನೊಂದು ಸಾರಿ ಬನ್ನಿ ಎಂದು ಹೇಳಿದಾಗ ಆ ಅಜ್ಜ ಅಜ್ಜಿ ಇಲ್ಲ ನಾವು ಅವರನ್ನು ಮಾತನಾಡಿಕೊಂಡೆ ಹೋಗುತ್ತೇವೆ ಅದಕ್ಕಾಗಿ ನಾವು ಎಷ್ಟು ಹೊತ್ತು ಬೇಕಾದರೂ ಕಾಯುತ್ತೇವೆ ಎಂದು ಕಾಯುತ್ತಾರೆ.

 ಮಧ್ಯಾಹ್ನ ಆದರೂ ಅಜ್ಜ ಅಜ್ಜಿ ಕಾಯುತ್ತಲೇ ಇರುತ್ತಾರೆ ಇದನ್ನು ನೋಡಿದ ಅಧ್ಯಕ್ಷರಿಗೆ ಕೋಪ ಉಕ್ಕಿಬರುತ್ತದೆ ಆವಾಗ ಸೆಕ್ಯುರಿಟಿ ಗಾರ್ಡ್ ಸರ್ ಇವರು ಯಾವುದೇ ಕಾರಣಕ್ಕೂ ಆಚೆ ಹೋಗುತ್ತಿಲ್ಲ ನಿಮ್ಮನ್ನು ಭೇಟಿ ಮಾಡಿ ಹೋಗುತ್ತೇನೆ ಎನ್ನುತ್ತಿದ್ದಾರೆ ಎಂದಾಗ ಇರಲಿ ಕಳಿಸು ಎಂದು ಕೋಪಿಷ್ಟನಾಗಿ ಕುಳಿತುಕೊಂಡಿರುತ್ತಾನೆ ಅಜ್ಜ ಅಜ್ಜಿಯರ ಬಟ್ಟೆಯನ್ನು ನೋಡಿದರೆ ಸಹಜ ರೀತಿಯ ಬಟ್ಟೆಗಳು ಇರುತ್ತವೆ.

ಅಜ್ಜ ಅಜ್ಜಿಯವರು ನೋಡಿ ಜೋರು ದನಿಯಲ್ಲಿ ಹೇಳುತ್ತಾನೆ ನಿಮಗೆ ಏನೋ ಆಗಬೇಕಿತ್ತು ಆಗ ಅಜ್ಜಿ ನಯವಾಗಿ ಹೇಳುತ್ತಾರೆ. ನಮಗೆ ಒಬ್ಬ ಮಗನಿದ್ದ ಅವನು ಇದೇ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ ಅವನಿಗೆ ಈ ಸಂಸ್ಥೆಯ ಬಗ್ಗೆ ತುಂಬ ಗೌರವವಿದೆ ವಿಧಿಯ ಕಾರಣದಿಂದ ಅವನು ಸತ್ತು ಹೋಗಿದ್ದಾನೆ.

 ಮಗನ ನೆನಪಿಗೆ ಏನಾದರೂ ಒಂದು ಸ್ಮಾರಕ ಕಟ್ಟಿಸೋಣ ಎಂದು ನಮ್ಮ ಒಂದು ಆಸೆ ಇದೆ ಎಂದು ಹೇಳುತ್ತಾರೆ ಇಷ್ಟು ಹೇಳಿದ ತಕ್ಷಣವೇ ಅಧ್ಯಕ್ಷನು ಕೋಪದಿಂದ ಕೆಂಡಮಂಡಲವಾಗುತ್ತಾನೆ ಇದು ವಿಶ್ವವಿದ್ಯಾಲಯ ಪ್ರತಿಯೊಬ್ಬರು ಸಾಯುತ್ತಿದ್ದರೆ ಅವರಿಗೆ ಒಂದೊಂದು ನೆನಪಿನ ಮೂರ್ತಿಯನ್ನು ಇಡುತ್ತಾ ಹೋದರೆ ಇದು ವಿಶ್ವವಿದ್ಯಾಲಯ ಇರುವುದಿಲ್ಲ ಇದೊಂದು ಸ್ಮಶಾನ ಸ್ಥಳವಾಗಿ ಬಿಡುತ್ತದೆ.

 ಅಧ್ಯಕ್ಷರ ಮಾತು ಕೇಳಿ ಅಜ್ಜಿ ವಿನಂತಿಸಿಕೊಂಡು ಹೇಳುತ್ತಾರೆ ಸ್ವಲ್ಪ ದುಡ್ಡು ಕೊಟ್ಟು ಅವನ ನೆನಪಿಗಾಗಿ ಏನಾದರೂ ಗುರುತು ಇರಲಿ ಎಂದು ಹೇಳಲು ಬಂದೆವು ಎಂದು ಹೇಳುತ್ತಾರೆ ಆಗ ತುಂಬಾ ಮೇಲುಧ್ವನಿಯಲ್ಲಿ ಹೇಳುತ್ತಾನೆ ಈ ಒಂದು ವಿಶ್ವವಿದ್ಯಾಲಯ  ಕಟ್ಟಬೇಕಾದರೆ ಎಷ್ಟು ಹಣ ಬೇಕಾಗುತ್ತದೆ ಎಂದು ನಿಮಗೆ ಗೊತ್ತಿದೆಯೇ? ಎಂದು ಪ್ರಶ್ನಿಸುತ್ತಾನೆ.

ಎಂಬತ್ತು ಲಕ್ಷಗಳಿಗೂ ಹೆಚ್ಚು ಹಣ ಈ ವಿಶ್ವವಿದ್ಯಾಲಯಕ್ಕೆ ಖರ್ಚಾಗಿದೆ ಎಂದು ಆಗಿನ ಸಂದರ್ಭಕ್ಕೆ ಹೇಳುತ್ತಾನೆ ಇದನ್ನು ಕೇಳಿದ ಅಜ್ಜ ಅಜ್ಜಿ ಒಂದು ನಿಮಿಷ ಏನು ಮಾತನಾಡದೆ ಒಬ್ಬರ ಮುಖವನ್ನು ಇನ್ನೊಬ್ಬರು ನೋಡಿಕೊಳ್ಳುತ್ತಾರೆ ಆಗ ಅಜ್ಜಿ ಮುಗುಳ್ ನಗುತ್ತಾ ಹೇಳುತ್ತಾಳೆ.

  ಕೇವಲ ಎಂಬತ್ತು ಲಕ್ಷಗಳಂತೆ ಆಗ ನಾವೇ ಯಾಕೆ ಒಂದು ವಿಶ್ವ ವಿದ್ಯಾಲಯವನ್ನು ನಿರ್ಮಾಣ ಮಾಡಬಾರದು ಎಂದು ಇಬ್ಬರು ಹೋಗುತ್ತಾರೆ ಆ ಅಜ್ಜಿ ಲೆಲ್ಯಾಂಡ್ ಸ್ಟ್ಯಾನ್ ಫರ್ಡ್ ಮತ್ತು ಸ್ಟ್ಯಾನ್ ಫರ್ಡ್ ಅಲ್ಲಿಂದ ಇಬ್ಬರು ಆಚೆ ಬರುತ್ತಾರೆ.

 ತನ್ನ ಮಗನ ಹೆಸರಿನಲ್ಲಿ ಸ್ಟ್ಯಾನ್ ಫರ್ಡ್ ಎಂಬ ವಿಶ್ವ ವಿದ್ಯಾಲಯವನ್ನು ನಿರ್ಮಾಣ ಮಾಡುತ್ತಾರೆ ಈ ವಿಶ್ವವಿದ್ಯಾಲಯ ಅಮೇರಿಕಾಗೆ ಹೆಸರುವಾಸಿಯಾಗಿದೆ ನಾವು ಕೆಲವರನ್ನು ನೋಡಿದಾಗ ಅವರ ಬಟ್ಟೆ ನೋಡಿದಾಗ ಅವರನ್ನು ಗುರುತಿಸಲು ಸಾಧ್ಯವಿಲ್ಲ ಆದುದರಿಂದ  ಅವರಾಗಿ ಹುಡುಕಿಕೊಂಡು ಬಂದಾಗ ಗೌರವಿಸೋಣ ಅತಿಥಿ ದೈವೋಭವವನ್ನು ನೆನಪಿನಲ್ಲಿ ಇಡೋಣ.

 ಕಾಲಿಗೆ ಮುಳ್ಳು ಚುಚ್ಚಿದೆ

ಹುಲಿಯೂ ಕಾಡಿನಲ್ಲಿ ಹಸುವಿನಿಂದ  ಆಹಾರ ಹುಡುಕುತ್ತಿರುತ್ತದೆ ಅಂದು ಯಾವುದೇ ಬೇಟೆ ಸಿಗುವುದಿಲ್ಲ ಹಾಗೆ ಮುಂದೆ ಬರುತ್ತಿದ್ದಾಗ ಕುದುರೆಯು ಕುಂಟುತ್ತಾ ಬರುತ್ತಿರುತ್ತದೆ.

 ಆಗ ಹುಲಿಯು ಯೋಚನೆ ಮಾಡುತ್ತದೆ ಕುದುರೆಗೆ ಹಿಡಿಯುವುದು ಸುಲಭದ ಮಾತಲ್ಲ ಈಗ ಕುದುರೆ ಕುಂಟುತ್ತಿದೆ ಇದಕ್ಕೆ ಏನಾದರೂ ಉಪಾಯ ಮಾಡೋಣ ಎಂದು ಯೋಚಿಸಿ ನಿಧಾನವಾಗಿ ಕುದುರೆಯ ಮುಂದೆ ಹೋಗಿ ನಿಂತಿತು.

 ಕುದುರೆ ಅಣ್ಣ ನಿನಗೆ ಏನಾಗಿದೆ ನಡೆಯಲು ತುಂಬಾ ತೊಂದರೆಯಾಗಿದೆ ಕಾಲಿಗೆ ಮುಳ್ಳು ಚುಚ್ಚಿದೆ ನೀನೇನು ಭಯ ಪಡಬೇಡ ನಾನು ಸಸ್ಯಹಾರಿ ಆಗಿ ಬಹಳಷ್ಟು ದಿನಗಳಾಗಿದೆ ವೇದಾಂತದ ಮಾತುಗಳು ಹೇಳಲು ಆರಂಭಿಸುತ್ತದೆ ಮತ್ತೆ ಇತರರಿಗೆ ಸಹಾಯ ಮಾಡುತ್ತಾ ಇದ್ದೇನೆ ಎಂದು ಬಡಾಯಿ ಕುಚಿಕೊಂಡು.

ಚಾಣಾಕ್ಷ  ಕುದುರೆಯು ಹುಲಿಯ ಉಪಾಯವನ್ನು ಅರ್ಥಮಾಡಿಕೊಂಡಿತು ಗೌರವದಿಂದ ಹುಲಿರಾಯ ನೀನು ನನ್ನ ಕಷ್ಟಕ್ಕೆ ಸಹಾಯ ಮಾಡುತ್ತಿದ್ದೀಯಾ ನಿನಗೆ ತುಂಬಾ ಧನ್ಯವಾದಗಳು ನೋಡು ಹಿಂದಿನ ಕಾಲಿನಲ್ಲಿ ಮುಳ್ಳು ಚುಚ್ಚಿ ಕೊಂಡಿದೆ ನಾನು ಕಾಲನ್ನು ಎತ್ತುತ್ತೇನೆ.

 ದಯವಿಟ್ಟು ಕಾಲಿನ ಮುಳ್ಳನ್ನು ತೆಗೆ ಎಂದು ಬೇಡಿಕೊಂಡಿತು ಮೂರ್ಖ ಹುಲಿ ನನ್ನ ಮಾತನ್ನು ನಂಬಿದೆ ಎಂದು ನಿಧಾನವಾಗಿ ಹಿಂದೆ ಬರುತ್ತಿತ್ತು ಅಷ್ಟರಲ್ಲಿ ಕುದುರೆ ತನ್ನ ಕಾಲನ್ನು ಎತ್ತಿ ಇನ್ನೇನು ಕಾಲು ಹಿಡಿಯಬೇಕು ಅಷ್ಟರಲ್ಲಿಯೇ ಕುದುರೆಯು ಜಾಡಿಸಿ ಒದೆಯಿತು.

 ಹುಲಿಯು ನಾಲ್ಕು ಪಲ್ಟಿ ಹೊಡೆದು ದೂರ ಹೋಗಿ ಬಿದ್ದಿತು ಈ ರೀತಿ ಕುದುರೆ ಹೊಡೆಯುತ್ತದೆ ಎಂದು ಕನಸಿನಲ್ಲಿಯೂ ಯೋಚಿಸಿರಲಿಲ್ಲ ನಂತರ ಹುಲಿಯು ನನ್ನ ಉಪಾಯ ಫಲಿಸಲಿಲ್ಲ ಎಂದು ಹೋಯಿತು ಅಷ್ಟರಲ್ಲಿ ಮುಂದೆ ನೋಡಿದರೆ ಕುದುರೆಯು ಮಾಯವಾಗಿತ್ತು.

Leave a Comment