ಒಂದು ಚಿಕ್ಕ ಸಂಸಾರ ಅದರಲ್ಲಿ ತಂದೆ ತಾಯಿ ಒಬ್ಬ ಮಗ ಇನ್ನೊಂದು ಮಗಳು ತಾಯಿಯು ಕೆಲಸ ಕ್ಕೆ. ಹೋಗುತ್ತಿರುತ್ತಾರ ತಂದೆಯೂ ಕಲಸಕ್ಕೆ ಹೋಗುತ್ತಿರುತ್ತಾರೆ ಮಗಳು ಪಿಯುಸಿ ಓದುತ್ತಿರುತ್ತಾಳ ತಂದೆಗೆ ಸ್ವಲ್ಪ ಮಗಳ ವರ್ತನೆಯ ಮೇಲೆ ಅನುಮಾನ ಏಕೆಂದರೆ ಕರೆದು ಮಾತನಾಡಿಸಿದರೆ ಆಮೇಲೆ ಸಿಗುತ್ತೇನೆ ಎಂದು ತಪ್ಪಿಸಿಕೊಳ್ಳುತ್ತಿದ್ದಳು.
ಕಣ್ಣಿಗೆ ಕಣ್ಣು ಸೇರಿಸ್ತಿ ಮಾತಾಡುತ್ತಿರುವುದಿಲ್ಲ ಮಗಳಿಗೆ ಮಾತಾಡೋಣವೆಂದರೆ ಸದಾ ಪ್ರಾಜೆಕ್ಟ್ ಹೋಂವರ್ಕ್ ಮತ್ತೆ ಸ್ಪೆಷಲ್ ಕ್ಲಾಸ್ ಇದೆ ಎಂದು ಹೇಳಿ ತಪ್ಪಿಸಿಕೊಳ್ಳುತ್ತಿದ್ದಳು ಎಸ್ ಎಸ್ ಎಲ್ ಸಿ ಮುಗಿದ ನಂತರ ಪಿಯುಸಿ ಅಂತಿಮ ಹಂತ ಈಗ ಇದೇ ಪರಿಸ್ಥಿತಿ ಎರಡು ವರ್ಷದಿಂದಲೂ ನಡೆಯುತ್ತಿದೆ.
ಪಿಯುಸಿ ಅಂದರೆ ಹದಿನೇಳು ಹದಿನೆಂಟು ವರ್ಷ ಸಹಜವಾಗಿ ಇರುತ್ತೆ ಯಾರನ್ನಾದರೂ ಪ್ರೀತಿಸುತ್ತಿದ್ದಾಳೆಯೇ ಇದೆಲ್ಲವೂ ತಾಯಿಗೆ ಗೊತ್ತಾದರೆ ಈ ರೀತಿ ಹಲವಾರು ಸಂದೇಹಗಳು ಒಂದು ಸಾರಿ ತಂದೆಗೆ ಮಗಳನ್ನು ಮಾತನಾಡಿಸಬೇಕು ಎಂದು ಮನಸ್ಸಿನಲ್ಲಿ ಕೊರೆಯುತ್ತಿರುತ್ತದೆ ನಾನು ಇವತ್ತು ಬೇಗ ಮನೆಗೆ ಹೋಗಿ ಮಾತನಾಡಲೇಬೇಕು ಎಂದು ಕೆಲಸದಿಂದ ಬೇಗ ಬರುತ್ತಾರೆ.
ತಂದೆಯವರು ಮನೆಗೆ ಬಂದು ನೋಡಿದರೆ ಟೇಬಲ್ ಮೇಲೆ ಒಂದು ಲೆಟರ್ ಕವರ್ ಇರುತ್ತದೆ ಅವನ್ನು ಓಪನ್ ಮಾಡಿದಾಗ. ಹೀಗೆ ಬರೆದಿತ್ತು ಐ ಲವ್ ಯೂ ಅಪ್ಪಾಜಿ ನನ್ನನ್ನು ಮನದಾಳದಿಂದ ಕ್ಷಮಿಸಿ ಇದು ನನ್ನ ಜೀವನದ ಪ್ರಶ್ನೆ ಅದಕ್ಕಾಗಿ ಈ ಒಂದು ಪತ್ರವನ್ನು ನಿಮಗೆ ಬರೆಯುತ್ತಿದ್ದೇನೆ ಇದರಲ್ಲಿ ನೋವು ಇದೆ, ಸಿಟ್ಟು ಇದೆ. ಮತ್ತೆ ಬೇಸರವೂ ಇದೆ.
ನಾನು ಮನೆಯಲ್ಲಿ ಇದ್ದರೆ ನನ್ನಿಂದ ಅಪ್ಪ ಅಮ್ಮನಿಗೆ ಇಬ್ಬರಿಗೂ ಜಗಳವಾಗುತ್ತದೆ ನಾನು ನಿಮಗೆ ಧೈರ್ಯವಾಗಿ ಮುಖಕೊಟ್ಟು ಹೇಳಲು ಸಾಧ್ಯವಿಲ್ಲ ಅದಕ್ಕಾಗಿ ನನ್ನ ಮನಸ್ಸಿನಲ್ಲಿ ಇರುವುದನ್ನು ಈ ಪತ್ರದಲ್ಲಿ ಬರೆದಿದ್ದೇನೆ ನಾನು ಒಂದು ಹುಡುಗನನ್ನು ಮನಸಾರೆ ಪ್ರೀತಿಸುತ್ತಿದ್ದೇನೆ.
ನಾನು ಅವನನ್ನೇ ಮದುವೆ ಯಾಗುವುದು ನೀವು ತಿಳಿದಿರುವ ಹಾಗೆ ಅವನು ಡಾಕ್ಟರಲ್ಲ ಇಂಜಿನಿಯರ್ ಅಲ್ಲ ಅವನು ಸ್ವಲ್ಪ ಮಾತ್ರ ಓದಿದ್ದಾನೆ ಮತ್ತೆ ಸಕ್ಕತ್ತಾಗಿದ್ದಾನೆ ಒಳ್ಳೆ ಟ್ಯಾಲೆಂಟ್ ಇದೆ ಒಂದು ಸಾರಿ ಕಾಫಿಡೇಗೆ ಹೋಗಿದ್ದೇವೆ ಒಂದು ಸಾರಿ ಕೆ ಎಫ್ ಸಿ ಗೂ ಹೋಗಿ ಬಂದಿದ್ದೀವಿ ಸಿನಿಮಾಗೆ ಹೋಗಿದ್ದೇವೆ ಪಾರ್ಕಿನಲ್ಲಿ ಸುತ್ತಾಡಿದ್ದೇವೆ.
ಆ ಹುಡುಗ ಹಲವಾರು ಹುಡುಗಿಯರ ಜೊತೆ ಇದ್ದಾನೆ ಆದರೆ ನನ್ನನ್ನೇ ಪ್ರೀತಿಸುತ್ತಿದ್ದಾನೆ ಏನು ಮಾಡುವುದು ನಾನು ಅವನನ್ನು ನಂಬಿದ್ದೇನೆ ಅವನನ್ನು ಬಿಟ್ಟು ಇರಲು ಸಾಧ್ಯವಿಲ್ಲ, ಜೀವನಕ್ಕೆ ಯಾವುದೋ ಒಂದು ರೀತಿಯಲ್ಲಿ ಸಂಪಾದನೆಯಂತೂ ಮಾಡುತ್ತಿದ್ದಾನೆ.
ನಾನು ಬದುಕಿದ್ದೀನಿ ಅಂದರೆ ನನಗೂ ನನ್ನದೇ ಆದ ಆಸೆ ಆಕಾಂಕ್ಷೆಗಳು ಇದ್ದೇ ಇದೆ ಆದರೂ ನಾನು ಅದೇ ರೀತಿ ಬದುಕಬೇಕು ದಯವಿಟ್ಟು ಬೇಸರ ಮಾಡಿಕೊಳ್ಳಬೇಡಿ ನೀವು ನನ್ನನು ಗಿಣಿ ಸಾಕಿದಂತೆ ಸಾಕಿದ್ದೀರಿ, ಬೆಳಸಿದ್ದೀರಿ ಆದರೂ ನಾನು ಈ ಪ್ರೀತಿಯ ಮೋಹಕ್ಕೆ ಸಿಲುಕಿಕೊಂಡಿದ್ದೇನೆ ದಯವಿಟ್ಟು ಕ್ಷಮಿಸಿ ಅಪ್ಪಾಜಿ ನಿಮ್ಮ ಪ್ರೀತಿಯ ಮಗಳು.
ಮಗಳು ಬರೆದಿರುವುದನ್ನು ಓದಿದ ತಂದೆಯವರು ಅಲ್ಲೇ ಕುಸಿದು ಕುಳಿತರು ನಾನು ಇಷ್ಟು ವರ್ಷ ಸಾಕಿದ್ದು ವ್ಯರ್ಥವಾಯಿತೆ ಎಂದು ಚಿಂತಿಸಿದರು ನಾನು ಮಗಳಿಗಾಗಿ ಮಾಡಿದ ಎಲ್ಲಾ ಕೆಲಸಗಳು ನೆನಪಿಸಿಕೊಂಡರು
ನಂತರ ಅದೇ ಲೆಟರ್ ನಲ್ಲಿ ಕೊನೆಗೆ ಬರೆದಿತ್ತು ಪುಟ ತಿರುಗಿಸಿ ನೋಡಿ ಇನ್ನೂ ಯಾವ ಭಯಂಕರ ಸುದ್ದಿ ಇದೆಯೋ ಎಂದು ನಂತರ ಓದಿದರು ಅಪ್ಪಾಜಿ ಈವರೆಗೆ ನೀವು ಓದಿದ್ದೆಲ್ಲಾ ಬರೀ ಸುಳ್ಳು ಮತ್ತೆ ಮುಂದೆ ಅಂಕಪಟ್ಟಿ ಇದ ಅದನ್ನು ನೋಡಿ ಈ ಸಾರಿ ನನಗೆ ಸಿ ಗ್ರೇಡ್ ಬಂದಿದೆ.
ಎ ಗ್ರೇಡ್ ಬರಬೇಕಾಗಿತ್ತು ಇನ್ನೂ ಚೆನ್ನಾಗಿ ಒದಬೇಕಾಗಿತ್ತು ಕೆಲವು ಕಾರಣಾಂತರಗಳಿಂದ ನಾನು ಓದಿಲ್ಲ ಅದಕ್ಕೆ ಸಹಿ ಹಾಕಿ ಅಮ್ಮನಿಗೆ ದಯವಿಟ್ಟು ಹೇಳಬೇಡಿ ಮತ್ತೆ ದಿನನಿತ್ಯ ನೀವಿಬ್ಬರು ಜಗಳವಾಡಬೇಡಿ ನಾನು ಪಕ್ಕದಮನೆಯಲ್ಲಿ ನಾನು ನನ್ನ ಸ್ನೇಹಿತೆ ಓದುತ್ತಿದ್ದೇವೆ ನಿಮ್ಮ ಮೇಲೆ ನನಗೆ ತುಂಬಾ ನಂಬಿಕೆಯಿದೆ ನೀವು ನನಗೆ ಕೂಗಿ ನಾನು ಬರುತ್ತೇನೆ ಏ ಲವ್ ಯೂ ಅಪ್ಪಾಜಿ.
ನಿಮ್ಮ ನೆಚ್ಚಿನ ಮಗಳು ಎಂದು ಬರೆದಿತ್ತು ತಂದೆಯಾದವರು ಓದಿದ ನಂತರ ತಾನು ಆಲೋಚನೆ ಮಾಡಿಕೊಳ್ಳುವ ರೀತಿಯೇ ಬೇರೆಯಾಗಿತ್ತು ಮಕ್ಕಳಿಗೆ ಪರೀಕ್ಷೆಯಲ್ಲಿ ಕಡಿಮೆ ಅಂಕಗಳು ಬಂದಾಗ ದಯವಿಟ್ಟು ಮಕ್ಕಳನ್ನು ಬಯಬೇಡಿ ಅವಮಾನವಂತು ಮಾಡಲೇಬೇಡಿ ಮಕ್ಕಳನ್ನು ಅರ್ಥ ಮಾಡಿಕೊಳ್ಳೋಣ.
ನನ್ನ ಮರಳಿನ ಗುಡ್ಡೆ ಯಾವುದು?
ಒಂದು ಸಾರಿ ಋಷಿಗಳು ಒಂದು ಒಳ್ಳೆಯ ದಿನವನ್ನು ನೋಡಿ ಗಂಗೆಯಲ್ಲಿ ಸ್ನಾನ ಮಾಡಲು ಹೋದರು ಇವರ ಕೈಯಲ್ಲಿ ಒಂದು ನೀರು ಕುಡಿಯಲಿಕ್ಕೆ, ಒಂದು ನೀರಿನ ಚಂಬು ಸದಾ ಇರುತ್ತಿತ್ತು ಇದನ್ನು ಕಳ್ಳತನವಾಗಬಾರದು ಎಂದು ಯೋಚಿಸಿ ಎಲ್ಲಾದರೂ ಇಡಬೇಕಲ್ಲ ಎಂದು ಚಿಂತನೆ ಮಾಡಿದರು.
ನಂತರ ಋಷಿಗಳು ಬಹಳಷ್ಟು ಯೋಚಿಸಿದ ಒಂದು ಉಪಾಯ ಹೊಳೆಯಿತು ತಮ್ಮ ಚೆಂಬನ್ನು ಮರಳಿನಲ್ಲಿ ಇಟ್ಟು ಅದಕ್ಕೆ, ಒಂದು ಆಕಾರ ಕೊಟ್ಟರು ನಾನು ಬಂದು ಸುಲಭವಾಗಿ ಗುರುತಿಸಬಹುದು ಎಂಬ ಭಾವನೆ ಇತ್ತು ಋಷಿಗಳು ಸ್ನಾನವನ್ನು ಮುಗಿಸಿ ಬಂದಾಗ ನೋಡಿದರೆ ಹಲವಾರು ಮರಳಿನ ಗುಡ್ಡೆಗಳು ಸಿದ್ಧವಾಗಿದೆ ಇದನ್ನು ನೋಡಿ ಋಷಿಗಳು ಕಕ್ಕಾಬಿಕ್ಕಿಯಾದರು.
ನನ್ನ ಮರಳಿನ ಗುಡ್ಡೆ ಯಾವುದು ಎಂದು ಗೊಂದಲದಲ್ಲಿ ಸಿಲುಕಿದರು ಋಷಿಗಳು ಮಾಡುತ್ತಿರುವುದನ್ನು ಕೆಲವರು ನೋಡಿದರೂ ಇದು ಒಂದು ಶಾಸ್ತ್ರ ಇರಬಹುದು ಎಂದು ಮಿಕ್ಕಿದವರು ಕೂಡ ಹಾಗೇ ಅನುಕರಣೆ ಮಾಡಿದರು ಇದರಂತೆಯೇ ಸ್ನಾನ ಮಾಡಲಿಕ್ಕೆ ಹೋಗಬೇಕಾದರೆ ಎಲ್ಲರೂ ಇದೇ ರೀತಿಯ ಒಂದು ಮರಳಿನ ಗುಡ್ಡಗಳು ಮಾಡಿದ್ದರು.
ನಂತರ ಋಷಿಗಳು ಬಂದು ಕೆಲವು ಗಡ್ಡೆಗಳನ್ನು ತೆಗೆದು ನೋಡಿದರು ಆದರೆ ಇವರ ಚೆಂಬು ಸಿಗಲಿಲ್ಲ. ಬೇಸರದಿಂದ ಮರಳಿದರು ಆದರೆ ಋಷಿಗಳು ಮಾಡಿದ ಈ ಒಂದು ಪದ್ಧತಿಯನ್ನು ಎಷ್ಟು ಜನ ನೋಡಿದರು ಅವರೆಲ್ಲರೂ ಪಾಲನೆ ಮಾಡುತ್ತಲೇ ಇದ್ದಾರೆ.ಹೀಗೆಯೇ ಇಂದಿಗೂ ಕೂಡ ಕೆಲವು ಪದ್ಧತಿಗಳು ಚಾಲ್ತಿಯಲ್ಲಿವೆ ಯಾವುದೇ ಪದ್ಧತಿ ಇರಲಿ ಸರಿ ಯಾವುದು ತಪ್ಪು ಯಾವುದು ಎಂದು ವಿವೇಕದಿಂದ ಯೋಚಿಸಿ ವೈಜ್ಞಾನಿಕವಾಗಿದ್ದರೆ ಬಳಸಿಕೊಳ್ಳೋಣ.
ಇತರರಿಗೆ ಕೊಟ್ಟು ಸಂತೋಷ ಪಡುತ್ತೇನೆ
ಒಬ್ಬ ವಿದ್ಯಾರ್ಥಿ ಹಳ್ಳಿಯಿಂದ ಬಂದು ಆಶ್ರಮದಲ್ಲಿ ಕಲಿತು ನಂತರ ಒಳ್ಳೆಯ ಕೆಲಸ ಮಾಡಿ ಹೆಚ್ಚು ಹಣ ಸಂಪಾದನೆ ಮಾಡುತ್ತಾನೆ ನಂತರ ಯೋಚನೆ ಮಾಡುತ್ತಾನೆ ನಾನು ಕಷ್ಟದಲ್ಲಿ ಇರುವವರಿಗೆ ವಿದ್ಯೆ, ಇಲ್ಲದವರಿಗೆ ಏನಾದರೂ ಸಹಾಯ ಮಾಡೋಣ ಎಂದು ಉತ್ಕಟ ಬಯಕೆ ಮನಸ್ಸಿನಲ್ಲಿ ಮೂಡುತ್ತದೆ.
ಯುವಕ ಎಲ್ಲಾ ಕಡೆ ನೋಡಿ ಒಂದು ಚಿಕ್ಕ ಗ್ರಾಮವನ್ನು ಆಯ್ಕೆ ಮಾಡುತ್ತಾನೆ ನಂತರ ಅಲ್ಲಿಯ ಮುಖ್ಯಸ್ಥರಿಗೆ ಹೋಗಿ ಹೇಳುತ್ತಾನೆ ಇಲ್ಲಿಯ ಜನರಿಗೆ ನಾನು ಸಹಾಯ ಮಾಡಬೇಕೆಂದು ಯೋಚನೆ ಮಾಡಿದ್ದೇನೆ ಈ ಗ್ರಾಮದಲ್ಲಿ ಹೆಚ್ಚು ಬಡವರಿದ್ದಾರೆ ಹಾಗೆ ಅನಕ್ಷರತೆ ಜಾಸ್ತಿ ಇದೆ ಆರೋಗ್ಯದ ಕೇಂದ್ರಗಳು ಕೂಡ ಕಡಿಮೆ ಇದೆ ಎಂದು ಹೇಳುತ್ತಾನೆ.
ಈ ಮಾತುಗಳನ್ನು ಕೇಳಿದ ಆ ಮುಖ್ಯ ವ್ಯಕ್ತಿ ಆ ಗ್ರಾಮದಿಂದ ಆಚೆ ಕರೆದುಕೊಂಡು ಬಂದು ಸಮುದ್ರವನ್ನು ತೋರಿಸುತ್ತಾನೆ ನೋಡಿ ಈ ಸಮುದ್ರದಲ್ಲಿ ತುಂಬಾ ನೀರು ಇದೆ ನೀವು ಒಂದು ಬಿಂದಿಗೆ ನೀರನ್ನು ತೆಗೆದುಕೊಂಡರೆ ಸಮುದ್ರಕ್ಕೆ ನಷ್ಟವಾಗುವುದಿಲ್ಲ ಹಾಗೆ ಇಲ್ಲಿಯವರಿಗೆ ಏನೇ ಮಾಡಿದರು ಪ್ರಯೋಜನವಿಲ್ಲ ಎಂದು ನಕಾರಾತ್ಮಕವಾಗಿ ಹೇಳುತ್ತಾನೆ.
ಯುವಕ ಸಂತೋಷದಿಂದ ಉತ್ಸಾಹಕನಾಗಿ ನಾನು ಇಡೀ ಸಮುದ್ರದ ನೀರನ್ನು ತೆಗೆಯುವ ಮನಸ್ಸು ಮಾಡಿಲ್ಲ ನನಗೆ ಒಂದು ಬಿಂದಿಗೆ ನೀರು ಸಿಕ್ಕರೆ ಸಾಕು ಅಷ್ಟು ನೀರನ್ನು ಇತರರಿಗೆ ಕೊಟ್ಟು ಸಂತೋಷ ಪಡುತ್ತೇನೆ ಎಂದನು ನಂತರ ಆ ಗ್ರಾಮದಲ್ಲಿ ಒಂದು ಉಚಿತ ಆರೋಗ್ಯ ಕೇಂದ್ರ ತೆರೆದನು.
ಕೆಲವು ವರ್ಷಗಳ ನಂತರ ಒಂದು ಕಟ್ಟಡ ನಿರ್ಮಾಣ ಮಾಡಿದನು ಉಚಿತ ಶಾಲೆ ಮುಗಿದ ನಂತರ ಇತರರಿಗೆ ಹಲವಾರು ವ್ಯಕ್ತಿತ್ವ ವಿಕಸನ ತರಬೇತಿಗಳನ್ನು ಏರ್ಪಡಿಸಿದರು. ಹಾಗೆ ಸ್ವಸಹಾಯ ಗುಂಪುಗಳನ್ನು ಮುಂದುವರೆಸುತ್ತಾ ಬಂದರು.
ಅವರು ಹಲವಾರು ವರ್ಷಗಳು ಅಲ್ಲೆ ಇದು ಅವರ ಜೀವನ ಉದ್ದಕ್ಕೂ ಹಲವಾರು ಸಂಘ ಸಂಸ್ಥೆಗಳನ್ನು ಕಟ್ಟಿ ಜನಸೇವೆ ಮಾಡಿದರು ಪರೋಪಕಾರ ಮಾಡಿದವರನ್ನು ನೆನೆಸಿಕೊಳ್ಳುತ್ತಾರೆ ನಾವು ಕೂಡ ಅಷ್ಟೇ ತುಂಬಾ ಹೆಚ್ಚಾಗಿ ಮಾಡುವುದರ ಬದಲು ನಮ್ಮ ನಮಗೆ ಸಾಧ್ಯವಾದಷ್ಟು ಸಹಾಯ ಮಾಡೋಣ.
ಬೃಹತ್ಕಾರವಾಗಿ ಬೆಳೆಯಬೇಕು
ಒಂದು ಕಾರ್ಯಕ್ರಮಕ್ಕೆ ಹೋಗಿದ್ದೆವು. ಅದರಲ್ಲಿ ಹಲವಾರು ರೀತಿಯ ಜನರು ಬರುತ್ತಾರೆ ವ್ಯಾಪಾರಸ್ಥರು, ಶಿಕ್ಷಕರು, ಮಾಲೀಕರು, ಸಂದರ್ಶಕರು ಎಲ್ಲರನ್ನು ಭೇಟಿಯಾದೆ ಕೊನೆಯಲ್ಲಿ ಒಬ್ಬರು ಮಾಲೀಕರು ಬಂದು ನನ್ನನ್ನು ಭೇಟಿಯಾದರು ಬಹಳ ಸಮಯ ಮಾತನಾಡಿದರು.
ಅವರು ಒಂದು ಮಾತು ಹೇಳಿದರು ಆ ಮಾತು ಇಂದಿಗೂ ಮರೆಯಲು ಸಾಧ್ಯವಿಲ್ಲ ನಾನು ವಿದ್ಯಾರ್ಥಿಗಳು ಓದುತ್ತಿರುವಾಗಲೇ ಕೊನೆಯ ವರ್ಷದಲ್ಲಿ, ಆಯ್ಕೆ ಮಾಡಲು ಹೋಗುತ್ತೇನೆ ವಿದ್ಯಾರ್ಥಿಗಳು ಸಾಮಾನ್ಯವಾಗಿ ಕಡಿಮೆ ಸಂಬಳ ಕೇಳುತ್ತಾರೆ.
ವರ್ಷದಲ್ಲಿ ಎಷ್ಟು ರಜೆ ಬರುತ್ತದೆ ಹಾಗೆ ವಿದೇಶಿ ಪ್ರವಾಸಗಳು ಎಷ್ಟು ಇವೆ ನಮಗೆ ಸೆಕ್ಯೂರಿಟಿ ಸೇಫ್ಟಿ ಇರಬೇಕು ನಾವು ರಿಟೈರ್ಡ್ ಮೆಂಟ್ ಆದಾಗ ನಮಗೆ ಎಷ್ಟು ಡಿಪಾಸಿಟ್ ಸಿಗುತ್ತದೆ ಎಂದು ಹೇಳುತ್ತಾರೆ ನಮಗೆ ಬೇಕಾಗಿರುವ ವಿದ್ಯಾರ್ಥಿಗಳು ಎಂದರೆ ನಮ್ಮ ಕಂಪನಿ ಬೃಹತ್ಕಾರವಾಗಿ ಬೆಳೆಯಬೇಕು ಹಲವಾರು ಶಾಖೆಗಳು ಆಗಬೇಕು ಎಂದು ಯಾರು ಯೋಚನೆ ಮಾಡುವುದಿಲ್ಲ ಹೆಚ್ಚು ಜವಾಬ್ದಾರಿ ತೆಗೆದುಕೊಳ್ಳಲು ಇಷ್ಟಪಡುವುದಿಲ್ಲ.
ನಾನೇ ಒಂದು ಶಾಖೆಯನ್ನು ನೋಡಿಕೊಳ್ಳುತ್ತೇನೆ ಎಂದು ಹೇಳುವವರು ಸಿಗುವುದೇ ತುಂಬಾ ಅಪರೂಪ ಎಂದು ಹೇಳಿದರು ಇವರು ಹೇಳಿದ್ದು ನಿಜವೇ ಎಂದು ನಾನು ಕರಿಯರ್ ಗೈಡೆನ್ಸ್ ತರಬೇತಿ ಶಿಬಿರ ನಡೆಸುವಾಗ ಹಲವಾರು ವಿದ್ಯಾರ್ಥಿಗೆ ಪ್ರಶ್ನೆಗಳು ಕೇಳಿದಾಗ ಮಾಲೀಕರು ಹೇಳಿದಂತೆಯೇ ವಿದ್ಯಾರ್ಥಿಗಳು
ಉತ್ತರ ನೀಡುತ್ತಾರೆ.
ಒಂದು ಫ್ಯಾಕ್ಟರಿ ಆಗಿರಬಹುದು ಕಂಪನಿ ಯಾಗಿರಬಹುದು ಏಕೆ ಕೆಲಸಕ್ಕೆ ತೆಗೆದುಕೊಳ್ಳುತ್ತಾರೆ ಎಂದರೆ ಆ ಕಂಪನಿ ಅಥವಾ ಫ್ಯಾಕ್ಟರಿ ಹೆಚ್ಚಾಗಿ ಬೆಳೆಯಬೇಕು ಆಗ ತಾನೇ ಹೆಚ್ಚಾಗಿ ಸಂಬಳಗಳು ಕೊಡುತ್ತಾರೆ ಇದನ್ನು ಯೋಚನೆ ಮಾಡುವುದೇ ಇಲ್ಲ ತುಂಬಾ ಕಡಿಮೆ ಮಂದಿ ಯೋಚನೆ ಮಾಡುತ್ತಾರೆ.
ಯಾರು ದೀರ್ಘವಾಗಿ ಬೃಹತ್ಕಾರವಾಗಿ ಆಲೋಚನೆ ಮಾಡುತ್ತಾರೆ ಅವರು ಮಾತ್ರ ಬೆಳೆಯುತ್ತಾರೆ ನಾವು ಧೀರ್ಘವಾಗಿ ಬೃಹತ್ಕಾರವಾಗಿ ಆಲೋಚನೆ ಮಾಡೋಣ.
ಚಿಕ್ಕ ಚಿಕ್ಕ ತಪ್ಪನ್ನು ಮಾಡಬಾರದು
ಒಂದು ಊರಿನ ಹೊರಗೆ ಒಬ್ಬರು ಋಷಿಗಳು ತಮ್ಮ ಆಶ್ರಮದಲ್ಲಿ ಇದ್ದರು ಆಶ್ರಮದಿಂದ ಕಾಡಿನ ದಾರಿಯಲ್ಲಿ ಹೋಗಬೇಕಾದರೆ ಹೂವಿನ ಸುಗಂಧ ಬರುತ್ತಿತ್ತು ಸುಗಂಧ ವಾಸನೆ ಎಲ್ಲಿಂದ ಬರುತ್ತಿದೆ ಎಂದು ಹುಡುಕಿಕೊಂಡು ಹೋದಾಗ ಅದು ತಾವರೆ ಹೂವಿನದ್ದು ಆಗಿತ್ತು ನಂತರ ಋಷಿಗಳು ತಾವರೆ ಹೂವಿನ ಹತ್ತಿರ ತಮ್ಮ ಮೂಗನ್ನು ಇಟ್ಟು ಸುವಾಸನೆ ಚೆನ್ನಾಗಿ ಮೂಸಿದ್ದರು.
ಒಂದು ಶಬ್ದ ಬಂತು ಋಷಿಗಳೇ ಹೂವಿನ ಸುಗಂಧ ವಾಸನೆಯನ್ನು ನೀವು ಕಳ್ಳತನ ಮಾಡುತ್ತಿದ್ದೀರಿ ಇದು ಸರಿಯಲ್ಲ ಎಂದಾಗ ಋಷಿಯವರು ಇದನ್ನು ಕೇಳಿ ತಕ್ಷಣ ಹೆದರಿ ಆಶ್ಚರ್ಯ ಚಕಿತರಾದರು ನಾನು ಹೂವನ್ನು ‘ಕೀಳಲಿಲ್ಲ. ಮತ್ತೆ ಹೂವಿಗೆ ಯಾವುದೇ ರೀತಿಯ ನೋವನ್ನು ಸಹ ಕೊಡಲಿಲ್ಲ ನನ್ನನ್ನು ಕಳ್ಳನೆಂದು ಹೇಳುತ್ತಿದ್ದೀರಲ್ಲ ಇದು ನನಗೆ ಅರ್ಥವಾಗುತ್ತಿಲ್ಲ ಎಂದು ಋಷಿಯವರು ಹೇಳಿದರು.
ಆ ಶಬ್ದವು ಮತ್ತೆ ಬರಲಿಲ್ಲ ಋಷಿ ಏನಾದರೂ ಆಗಲಿ ಶಬ್ದ ಬಂದಿದೆ ಎಂದು ಬೇಸರಿಸಿಕೊಂಡು ಸ್ವಲ್ಪದೂರ ಬಂದರು ನಂತರ ಸ್ವಲ್ಪ ಹೊತ್ತಿನಲ್ಲೇ ಇನ್ನೊಬ್ಬ ವ್ಯಕ್ತಿ ಬಂದು ಅಲ್ಲಿದ್ದ ಎಲ್ಲಾ ತಾವರ ಹೂವುಗಳನ್ನು ಮತ್ತು ಎಲೆಗಳನ್ನು ಕಿತ್ತು ಕೊಂಡನು ಅವನ ಕೆಲಸವೇ ಅದು ಹೂವುಗಳನ್ನು ಕಿತ್ತು ಹಳ್ಳಿಯಲ್ಲಿ ವ್ಯಾಪಾರ ಮಾಡುವುದು ನಂತರ ಋಷಿಯವರಿಗೆ ಇದು ತುಂಬಾ ಬೇಸರವನ್ನುಂಟು ಮಾಡಿತು ಕೂಡಲೇ ಋಷಿಯವರು ಹೇಳಿದರು.
ನಾನು ಹೂವಿಗೆ ಕೀಳಲಿಲ್ಲ. ಯಾವುದೇ ರೀತಿಯ ನೋವನ್ನು ಕೊಡಲಿಲ್ಲ ಬರೀ ಸುಗಂಧವನ್ನು ಮೂಸಿದೆ ಅಷ್ಟೆ ನನ್ನನ್ನು ನೀನು ಕಳ್ಳ ಕಳ್ಳ ಎಂದು ಅಪವಾದ ಹೊರಿಸಿದ್ದೀರಿ ಇರಲಿ ಇವನು ಹೂವುಗಳನ್ನು ಕಿತ್ತು ಎಲೆಗಳನ್ನು ಕಿತ್ತುಕೊಂಡು ಹೋಗುತ್ತಿದ್ದಾನೆ ಇದು ನ್ಯಾಯವೇ ಎಂದು ಕೇಳುತ್ತಾರೆ.
ಆಗ ಮತ್ತೆ ಶಬ್ದ ಬರುತ್ತದೆ ವಿನಮ್ರವಾಗಿ ದಯೆ, ಸಹನೆ, ಕರುಣೆಯು ಋಷಿಗಳ ಆಯುಧಗಳು, ಆಭರಣಗಳು, ಚಿಕ್ಕ ಚಿಕ್ಕ ತಪ್ಪನ್ನು ಕೂಡ ಮಾಡಬಾರದು ಎನ್ನುವ ನನ್ನ ಮನೋಭಾವನೆ ಏಕೆಂದರೆ ನೀವು ಹೆಚ್ಚು ತಿಳಿದಿದ್ದೀರಿ ನಿಮ್ಮನ್ನು ಹೇಳಬಹುದೇ ಹೊರತು ಇತರರನ್ನು ನಾವು ಹೇಳಲಿಕ್ಕೆ ಸಾಧ್ಯವಿಲ್ಲ ಎಂದು ಶಬ್ದ ಬಂತು.
ಚಿಕ್ಕವರು ಸಾಮಾನ್ಯರು ಏನು ಬೇಕಾದರೂ ತಪ್ಪುಗಳು ಮಾಡಬಹುದಾಗಿದೆ ಆದರೆ ನಾವು ಬೆಳೆದಂತೆ ಚಿಕ್ಕ ಚಿಕ್ಕ ತಪ್ಪುಗಳನ್ನು ಮಾಡದೆ ಸದ್ಗತಿಯ ಹಾದಿಯಲ್ಲಿ ಮುನ್ನಡೆಯೋಣ.