ಹಲವಾರು ಶತಮಾನಗಳ ಹಿಂದೆ ನಡೆದ ಕಥೆ ರಾಜ ವಿಶ್ರಾಂತಿ ಪಡೆಯುತ್ತಿದ್ದಾಗ ಯಾರೋ ವ್ಯಾಪಾರಿ ಹಣ್ಣು ಮಾರಿಕೊಂಡು ಹೋಗುವ ಶಬ್ದ ಕೇಳುತ್ತದೆ ಆಗ ರಾಜನು ತನ್ನ ಮಂತ್ರಿಯನ್ನು ಕರೆದು ಐದು ಚಿನ್ನದ ನಾಣ್ಯಗಳನ್ನು ಕೊಟ್ಟು ವ್ಯಾಪಾರಿಯಿಂದ ಹಣ್ಣುಗಳನ್ನು ಖರೀದಿ ಮಾಡಿ ಎಂದು ಕಳುಹಿಸುತ್ತಾನೆ.
ಐದು ನಾಣ್ಯದ ವ್ಯಕ್ತಿ ತನ್ನ ಕೈ ಕೆಳಗೆ ಇರುವ ವ್ಯಕ್ತಿಗೆ ನಾಲ್ಕು ನಾಣ್ಯ ಕೊಟ್ಟು ಹಣ್ಣನ್ನು ಖರೀದಿ ಮಾಡಿಕೊಂಡು ಬಾ ಎಂದು ಹೇಳುತ್ತಾನೆ ನಂತರ ನಾಲ್ಕು ನಾಣ್ಯದ ವ್ಯಕ್ತಿ ತನ್ನ ಕೈಕೆಳಗೆ ಇರುವವನನ್ನು ಮೂರು ನಾಣ್ಯ ಕೊಟ್ಟು ಹಣ್ಣುಗಳನ್ನು ಖರೀದಿ ಮಾಡಿಕೊಂಡು ಬಾ ಎಂದು ಹೇಳುತ್ತಾನೆ.
ನಂತರ ಮೂರು ನಾಣ್ಯದವನು ಮತ್ತೆ ತನ್ನ ಕೈ ಕೆಳಗಿನವನಿಗೆ ಎರಡು ನಾಣ್ಯ ಕೊಟ್ಟು ಹಣ್ಣುಗಳನ್ನು ಖರೀದಿಸಿಕೊಂಡು ಬಾ ಎಂದು ಹೇಳುತ್ತಾನೆ ನಂತರ ಎರಡು ನಾಣ್ಯದವನು ಇನ್ನೊಬ್ಬನಿಗೆ ಒಂದು ನಾಣ್ಯವನ್ನು ಕೊಟ್ಟು ಹಣ್ಣನ್ನು ಖರೀದಿ ಮಾಡಿಕೊಂಡು ಬಾ ಎಂದು ಹೇಳುತ್ತಾನೆ.
ಒಂದು ನಾಣ್ಯದ ವ್ಯಕ್ತಿ ದೀರ್ಘವಾಗಿ ಯೋಚನೆ ಮಾಡುತ್ತಾನೆ ನಂತರ ಆಚೆ ವ್ಯಾಪಾರಿ ಹಣ್ಣನ್ನು ಮಾಡಿಕೊಂಡು ಹೋಗುತ್ತಿರುತ್ತಾನೆ ವ್ಯಾಪಾರಿಗೆ ತಡೆದು ನಿಲ್ಲಿಸಿ ಸಿಟ್ಟಿನಿಂದ ಹೇಳುತ್ತಾನೆ ನೀನು ಇವತ್ತು ಇಲ್ಲಿ ಹಣ್ಣನ್ನು ಏಕೆ ಮಾರಲು ಬಂದೆ ಇದರಿಂದ ರಾಜರಿಗೆ ನಿದ್ದೆ ಭಂಗವಾಗಿದೆ ಆದ್ದರಿಂದ ನಿನ್ನನ್ನು ಬಂದಿ ಮಾಡಲು ಹೇಳಿದ್ದಾರೆ ಎಂದಾಗ ವ್ಯಾಪಾರಿ ಹೆದರಿ ಭಯಭೀತನಾದನು.
ತಕ್ಷಣ ಏನು ಮಾಡಬೇಕೆಂದು ಅರ್ಥವಾಗಲಿಲ್ಲ ನಂತರ ಬುದ್ಧಿವಂತ ವ್ಯಾಪಾರಿಯು ಕೆಲವು ಹಣ್ಣುಗಳನ್ನು ತೆಗೆದುಕೊಳ್ಳಿ ಕೇಳಿದರೆ ವ್ಯಾಪಾರಿಯು ಓಡಿ ಹೋದ ಎಂದು ಹೇಳಿ ನನ್ನನ್ನು ದಯವಿಟ್ಟು ಬಿಟ್ಟುಬಿಡಿ ಎಂದು ಅಂಗಲಾಚಿದನು ಆಗ ಮೊದಲನೇ ನಾಣ್ಯದವನು ಸಾಕಷ್ಟು ಹಣ್ಣುಗಳನ್ನು ತೆಗೆದುಕೊಂಡನು ವ್ಯಾಪಾರಿಗೆ ಕಳುಹಿಸಿದನು.
ಮೊದಲನೇ ನಾಣ್ಯದವನು ಒಂದು ನಾಣ್ಯವನ್ನು ಇಟ್ಟುಕೊಂಡು ತನಗೆ ಎಷ್ಟು ಹಣ್ಣುಗಳು ಬೇಕು ಅಷ್ಟು ಹಣ್ಣು ಇಟ್ಟುಕೊಂಡು ಎರಡನೇ ನಾಣ್ಯದವನಿಗೆ ಹಣ್ಣುಗಳು ಕೊಡುತ್ತಾನೆ ಹಾಗೆಯೇ ಎರಡನೇ ನಾಣ್ಯದವನು ತನಗೆ ಎಷ್ಟು ಹಣ್ಣುಗಳು ಬೇಕು ಅಷ್ಟು ಹಣ್ಣು ಇಟ್ಟು ಮೂರನೇ ನಾಣ್ಯದವನಿಗೆ ಕೊಡುತ್ತಾನೆ ಹೀಗೆಯೇ ನಾಲ್ಕನೇ ನಾಣ್ಯದವನು ತನಗೆ ಎಷ್ಟು ಬೇಕೋ ಇಟ್ಟುಕೊಂಡು ಐದನೇ ನಾಣ್ಯದವನಿಗೆ ಕೊಡುತ್ತಾನೆ.
ಐದನೇ ನಾಣ್ಯದವನು ಐದು ಹಣ್ಣುಗಳನ್ನು ಮಾತ್ರ ರಾಜನಿಗೆ ಕೊಡುತ್ತಾನೆ ಇನ್ನು ಮಿಕ್ಕಿದ ಹಣ್ಣುಗಳು ತಾನೇ ಇಟ್ಟುಕೊಳ್ಳುತ್ತಾನೆ ರಾಜ ಹಣ್ಣನ್ನು ತಿಂದು ನೋಡುತ್ತಾನೆ. ನಂತರ ರಾಜ ಹೇಳುತ್ತಾನೆ ಹಣ್ಣಿನ ವ್ಯಾಪಾರಿಗೆ ಹೆಚ್ಚು ತೆರಿಗೆಯನ್ನು ವಿಧಿಸಿ ಎಂದು ನಿಯಮವನ್ನು ಜಾರಿಗೆ ತಂದನು
ಏಕೆಂದರೆ ಐದು ಚಿನ್ನದ ನಾಣ್ಯಗಳಿಗೆ ಬರಿ ಐದೇ ಹಣ್ಣು ಮಾತ್ರವೇ ಬಂದಿದೆ ಅಂದರೆ ಆ ವ್ಯಾಪಾರಿ ಎಷ್ಟು ದುಡಿಯುತ್ತಿರಬಹುದು ಎಂದು ಯೋಚನೆ ಮಾಡಿ ಹೆಚ್ಚು ತೆರಿಗೆಯನ್ನು ವಿಧಿಸುತ್ತಾನೆ. ರಾಜನ ದೃಷ್ಟಿಯಿಂದ ತೆರಿಗೆ ಸರಿ ಇರಬಹುದು ವ್ಯಾಪಾರಿಗೆ ಏನು ಆಗಿದೆ ಎಂದು ರಾಜನಿಗೆ ತಿಳಿದಿಲ್ಲ ರಾಜ ಏಕೆ ತೆರಿಗೆಯನ್ನು ಹೆಚ್ಚಿಸಿದ್ದಾನೆ ಎಂದು ವ್ಯಾಪಾರಿಗೆ ತಿಳಿದಿಲ್ಲ ಮಧ್ಯಂತರದಲ್ಲಿ ಎಲ್ಲವೂ ನಡೆದುಹೋಗಿದೆ.
ಮನಸು ಎಚ್ಚರಿಸುತ್ತದೆ
ಒಂದು ಊರಿನಲ್ಲಿ ಒಬ್ಬಳು ಸಾತ್ವಿಕ ಮನಸುಳ್ಳ ಹೆಂಗಸು ಇದ್ದಳು ಇವಳು ಪ್ರತಿದಿನ ಬೆಳಗಿನ ಜಾವ ಎದ್ದು ಪೂಜೆ ಪ್ರಾರ್ಥನೆ ಮಾಡಿ ಅಡಿಗೆ ಮಾಡುತ್ತಿದ್ದಳು ದಿನನಿತ್ಯವೂ 2ಚಪಾತಿ ಮಾಡಿ ಸ್ವಲ್ಪ ಚಟ್ನಿ ಸೇರಿಸಿ ಮನೆಯ ಮುಂದೆ ಜಗುಲಿಯ ಮೇಲೆ ಇಡುತ್ತಿದ್ದಳು.
ಯಾರಾದರೂ ಇದನ್ನು ತಿನ್ನಲಿ ಎನ್ನುವ ಭಾವನೆಯಿಂದ ದಿನನಿತ್ಯವೂ ಎರಡೆರಡು ಚಪಾತಿಗಳನ್ನು ಇಡುತ್ತಿದ್ದರೆ ಬುಡುಬುಡುಕೆ ಆದವನು ದಿನನಿತ್ಯ ಬಂದು ಆ 2ಚಪಾತಿಗಳನ್ನು ತೆಗೆದುಕೊಂಡು ಹೋಗಿ ತಿನ್ನುತ್ತಿದ್ದನು ಹೋಗಬೇಕಾದಾಗ ಒಂದು ಮಾತನ್ನು ಹೇಳಿ ಹೋಗುತ್ತಿದ್ದನು.
ನೀವು ಎಷ್ಟು ಒಳ್ಳೆಯದನ್ನು ಮಾಡುತ್ತೀರೋ ಅದು ಮರಳಿ ಬರುತ್ತದೆ ಈ ಹೆಂಗಸಿಗೆ ಕಾಡುತ್ತಿರುವ ಚಿಂತೆ ಒಂದೇ ಮಗ ಬೇರೆ ಊರಿನಲ್ಲಿ ಕೆಲಸ ಮಾಡುತ್ತಿರುತ್ತಾನೆ ಇವಳಿಗೆ ಒಂದೇ ಯೋಚನೆ ನನ್ನ ಮಗ ನನ್ನ ಜೊತೆಯಲ್ಲಿ ಇರಲಿ ಎಂದು ಪ್ರಾರ್ಥನೆ ಮಾಡುತ್ತಿರುತ್ತಾಳೆ.
ಹಲವಾರು ದಿನಗಳು ಇದೇ ರೀತಿ ಪ್ರಾರ್ಥನೆ ಮಾಡುತ್ತಿರುತ್ತಾಳೆ ಆದರೂ ತನ್ನ ಮಗ ಮರಳಿ ಬರುತ್ತಿರುವವುದಿಲ್ಲ ಹೀಗೆ ಒಂದು ಸಾರಿ ದಿನನಿತ್ಯ ನಾನು ಒಳ್ಳೆಯದನ್ನೇ ಮಾಡುತ್ತಿದ್ದೇನೆ ಆದರೂ ನನಗೆ ಒಳ್ಳೆಯದು ಆಗುತ್ತಿಲ್ಲವಲ್ಲ ಎಂದು ಚಿಂತಿಸಿ ಅಂದು 2ಚಪಾತಿ ಗಳಲ್ಲಿ ವಿಷವನ್ನು ಬೆರೆಸಿ ಇಟ್ಟು ಬಿಡುತ್ತಾಳೆ.
ಮತ್ತೆ ಹೋಗಿ ಪ್ರಾರ್ಥನೆಗೆ ಕುಳಿತುಕೊಂಡಾಗ ಅವಳ ಸುಪ್ತ ಮನಸ್ಸು ಹೇಳುತ್ತದೆ ಇವತ್ತು ನೀನು ತಪ್ಪು ಮಾಡುತ್ತಿದ್ದೀಯಾ ಯಾಕೆ ಈ ಚಪಾತಿಯನ್ನು ಕೊಡಬೇಕು ಬೇಡ ಎಂದು ಮನಸ್ಸು ಎಚ್ಚರಿಸುತ್ತದೆ ನಂತರ ಧ್ಯಾನ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ ನಂತರ ಆಚೆ ಬಂದು ಆ 2 ರೊಟ್ಟಿಗಳನ್ನು ತೆಗೆದುಕೊಂಡು ಹೋಗಿ ಒಲೆಯಲ್ಲಿ ಹಾಕಿ ಸುಟ್ಟುಬಿಡುತ್ತಾಳೆ.
ಒಳ್ಳೆಯ 2 ಚಪಾತಿಗಳನ್ನು ತಯಾರಿಸಿ ಆಚೆ ಇಟ್ಟು ಬಿಡುತ್ತಾಳೆ ಎಂದಿನಂತೆ ಆ ಬುಡುಬುಡುಕೆ ಅವನು ಬಂದು 2 ಚಪಾತಿಗಳನ್ನು ತೆಗೆದುಕೊಂಡು ಹೋಗಿ ನಿನಗೆ ಒಳ್ಳೆಯದೇ ಆಗುತ್ತದೆ ಎಂದು ಹೇಳಿ ಹೋದನು ಆ ಹೆಂಗಸಿಗೆ ತುಂಬಾ ಬೇಸರವಾಗಿ ಅಳುತ್ತಾ ಕುಳಿತಿದ್ದಳು ಆ ಸಮಯದಲ್ಲಿ ಬಾಗಿಲ ಬಳಿ ಒಂದು ಶಬ್ದವಾಗುತ್ತದೆ ಕಣ್ಣು ತೆರೆದು ನೋಡಿದರೆ ತನ್ನ ಮಗ ಬರುತ್ತಾನೆ.
ಮಗನನ್ನು ನೋಡಿದರೆ ಬಟ್ಟೆಗಳೆಲ್ಲ ತುಂಬ ಹೊಳೆಯಾಗಿ ಹರಿದು ಹೋಗಿರುತ್ತದೆ ಮತ್ತೆ ಊಟ ಮಾಡಿ 2 ದಿನ ಆಗಿರುತ್ತದೆ ನಂತರ ಹುಡುಗ ತನ್ನ ಕಥೆಯನ್ನು ಹೇಳುತ್ತಾನೆ. ಅಮ್ಮಾ ನಿನ್ನನ್ನು ನೋಡಲು ಬೆಳಿಗ್ಗೆ ಬೇಗ ಬೇಗ ಬರುತ್ತಿದೆ ಬರುತ್ತಿರಬೇಕಾದರೆ ದಾರಿಯಲ್ಲಿ ಚಿಕ್ಕ ಕಲ್ಲಿಗೆ ತಾಗಿ ಬಿದ್ದುಬಿಟ್ಟೆ ನಂತರ ತುಂಬ ಆಯಾಸವಾಯಿತು ಊಟ ಮಾಡಿರಲಿಲ್ಲ ನಾನು ಸುಸ್ತಾಗಿ ಅಲ್ಲೇ ಕುಳಿತು ಕುಳಿತುಕೊಂಡೆ.
ಅಷ್ಟರಲ್ಲಿ ಯಾರೋ ಒಬ್ಬ ಬಡ ಹುಡುಗ ಬಂದು ನನಗೆ ಒಂದು ಚಪಾತಿಯನ್ನು ಕೊಟ್ಟು ಇದನ್ನು ನೀನು ತಿನ್ನು ಎಂದು ಹೇಳಿ ಸ್ವಲ್ಪ ನೀರನ್ನು ಕೊಟ್ಟು ಹೊರಟನು. ಹೆಂಗಸು ತಕ್ಷಣ ಆಶ್ಚರ್ಯ ಚಕಿತಳಾದಳು ಬೆಳಿಗ್ಗೆ ನಾನು ಅಪ್ಪಿತಪ್ಪಿ ಏನಾದರೂ ವಿಷದ ಚಪಾತಿ ಕೊಟ್ಟಿದ್ದಿದ್ದರೆ ಮಗ ತಿಂದು ಸತ್ತು ಹೋಗುತ್ತಿದ್ದನು ಆ ಒಂದು ಕ್ಷಣದಲ್ಲಿ ನನಗೆ ನಕರಾತ್ಮಕ ಭಾವನೆ ಬಂದಿತ್ತು ಎಂದು ತನ್ನನ್ನು ತಾನು ಪ್ರಾಯಶ್ಚಿತ ಪಡುತ್ತಾಳೆ.
ಆಕಳು ತನ್ನ ತಾಯಿಯನ್ನು ಹುಡುಕಿಕೊಂಡು ಬರುವಂತೆ ನಾವು ಮಾಡಿದ ಕರ್ಮಗಳು ನಮ್ಮನ್ನು ಹುಡುಕಿಕೊಂಡು ಬಂದೆ ಬರುತ್ತವೆ.
ಅನುಸಾರವಾಗಿ ಬೆಲೆ ಕಟ್ಟುತ್ತಾರೆ
ಒಂದು ಆಶ್ರಮದಲ್ಲಿ ಅಲ್ಲಿ ಗುರುಗಳು ಇರುತ್ತಾರೆ ಅಲ್ಲಿಗೆ ಒಬ್ಬ ಮನುಷ್ಯನು ಬಂದು ನಾನು ಇಲ್ಲಿಯೇ ಇರುತ್ತೇನೆ ಏನು ಬೇಕಾದರೂ ಕೆಲಸ ಮಾಡಿಕೊಂಡು ಇರುತ್ತೇನೆ ಎಂದು ಹೇಳುತ್ತಾನೆ ಆಗ ಗುರುಗಳು ಅವನಿಗೆ ಒಂದು ವಜ್ರವನ್ನು ಕೊಟ್ಟು ಮುಂದಿನ ಊರಿಗೆ ಹೋಗಿ ಇದರ ಬೆಲೆ ಎಷ್ಟು ಎಂದು ತಿಳಿದುಕೊಂಡು ಬಾ ಎಂದು ಹೇಳಿದರು.
ಆಗ ಈ ವಜ್ರವನ್ನು ತೆಗೆದುಕೊಂಡು ಹೋಗಿ ಕುಂಬಳಕಾಯಿ ಮಾರುವವನಿಗೆ ತೋರಿಸಿದ ಈ ವಜ್ರ ಕೊಟ್ಟರೆ ನೀನು ಏನು ಕೊಡುತ್ತೀರಾ ಎಂದಾಗ ವ್ಯಾಪಾರಿ ನಾನು 2 ಕುಂಬಳಕಾಯಿಯನ್ನು ಕೊಡುತ್ತೇನೆ ಎಂದನು.
ನಂತರ ಸೇಬು ಮಾರುವವನ ಹತ್ತಿರ ಹೋದ ಅವನು ಹೇಳಿದ ನಾನು ಹತ್ತು ಸೇಬುಗಳನ್ನು ಕೊಡುತ್ತೇನೆ ಎಂದನು ತುಪ್ಪವನ್ನು ಮಾರುತ್ತಿದ್ದವನಿಗೆ ಕೇಳಿದಾಗ ನಾನು 4 ಮಡಿಕೆ ತುಪ್ಪವನ್ನು ಕೊಡಬಲ್ಲೆ ಎಂದು ಹೇಳಿದನು.
ನಂತರ ಚಿನ್ನದ ಅಂಗಡಿಗೆ ಹೋದ ಅವನಿಗೂ ಇದನ್ನು ಕೊಟ್ಟಾಗ ಅಂಗಡಿಯವನು ಇದಕ್ಕೆ ನಾನು ಸಾವಿರ ರೂಪಾಯಿ ಕೊಡುತ್ತೇನೆ ಎಂದನು ನಂತರ ಇದಕ್ಕೆ ಇನ್ನೂ ಬೆಲೆ ಇರಬಹುದು ಎಂದು ಕಲ್ಲಿನ ವ್ಯಾಪಾರಿ ಅಂದರೆ ರತ್ನದ ವ್ಯಾಪಾರಿ ಬಳಿಗೆ ಹೋದಾಗ ಅವನು ಕೂಲಂಕುಷವಾಗಿ ಪರಿಶೀಲಿಸಿ ಇದಕ್ಕೆ ಒಂದು ಲಕ್ಷ ರೂಪಾಯಿ ಕೊಡಬಹುದು ಎಂದು ಹೇಳಿದನು.
ಎಲ್ಲರ ಬಳಿ ವಿಚಾರಿಸಿಕೊಂಡು ಬಾಬಾ ಅವರ ಬಳಿ ಬಂದಾಗ ಬಾಬಾ ಅವರು ಹೇಳಿದರು ಅವರು ಎಲ್ಲರೂ ತಮ್ಮ ಯೋಗ್ಯತೆಗೆ ಅನುಸಾರವಾಗಿ ಬೆಲೆ ಕಟ್ಟುತ್ತಾರೆ ನಾವು ಬೇರೆಯವರ ಮಹತ್ವವನ್ನು ಅರಿಯಬೇಕಾದರೆ ಮೊದಲು ನಮ್ಮ ಮಹತ್ವ ನಮಗೆ ಗೊತ್ತಿರಬೇಕು ಎಂದು ಗುರುಗಳು ಹೇಳಿದರು.
ರಕ್ತ ಕೆಳಗೆ ಬೀಳಬಾರದು
ಒಂದು ಊರಿನಲ್ಲಿ ಒಬ್ಬ ದುರಾಚಾರಿ ಶ್ರೀಮಂತ ಇರುತ್ತಾನೆ ಏನೇ ಕಷ್ಟ ಬಂದರೂ ಶ್ರೀಮಂತನ ಹತ್ತಿರ ಹೋಗಿ ಸಾಲ ಕೇಳಿ ಪಡೆಯುತ್ತಾರೆ ಅದೇ ಊರಿನಲ್ಲಿ ಒಬ್ಬ ಪಂಡಿತರು ಇರುತ್ತಾರೆ ಪಂಡಿತರು ಇತರರಿಗೆ ಸಾಧ್ಯವಾದಷ್ಟು ಸಹಾಯ ಮಾಡುತ್ತಿರುತ್ತಾರೆ.
ಪಂಡಿತರಿಗೆ ಊರಿನಲ್ಲಿ ಎಲ್ಲರೂ ಗೌರವಿಸುತ್ತಾರೆ ಪಂಡಿತರಿಗೆ ತುರ್ತು ಸಮಯ ಬರುತ್ತದೆ ಅದಕ್ಕೆ ಹಣದ ಅವಶ್ಯಕತೆ ಇರುತ್ತದೆ ಆಗ ಬಹಳಷ್ಟು ಕಡೆ ಹಣಕ್ಕಾಗಿ ಓಡಾಡುತ್ತಾರೆ ಎಲ್ಲಿಯೂ ಸಿಗುವುದಿಲ್ಲ ಕಡೆಗೆ ಶ್ರೀಮಂತನ ಬಳಿ ಬರುತ್ತಾರೆ ಶ್ರೀಮಂತನಿಗೂ ಇದೆ ಬೇಕಾಗಿರುತ್ತದೆ ಒಂದು ಸಾವಿರ ರೂಪಾಯಿ ಸಾಲವನ್ನು ನೀಡಿ ನಾನು ನಿಮಗೆ ಮುಂದಿನ ತಿಂಗಳಲ್ಲಿ ಬಡ್ಡಿ ಸಮೇತ ತೀರಿಸುತ್ತೇನೆ ಎಂದು ಹೇಳುತ್ತಾರೆ.
ಆಗ ಕಠೋರ ಹೃದಯ ಶ್ರೀಮಂತ ನೀವು ಸಾಲ ಮರುಪಾವತಿ ಮಾಡದಿದ್ದರೆ ನಿಮ್ಮ ಕೈಯನ್ನು ಕತ್ತರಿಸಿ ಕೊಡಬೇಕಾಗುತ್ತದೆ ಇದು ನನ್ನ ನಿಯಮ ಹಾಗಿದ್ದರೆ ಸಾಲ ಪಡೆಯಿರಿ ಇಲ್ಲದಿದ್ದರೆ ಬೇಡ ಎಂದು ಹೇಳುತ್ತಾನೆ ಪಂಡಿತರು ಯೋಚನೆ ಮಾಡುತ್ತಾರೆ.
ತುರ್ತು ಸಮಯ ಇರುವುದರಿಂದ ನನಗೆ ಸಾಲ ಕೊಡಿ ಎಂದು ಸಾಲವನ್ನು ಪಡೆದು ತಮ್ಮ ಕೆಲಸವನ್ನು ಮುಗಿಸುತ್ತಾರೆ ಕಾರಣಾಂತರದಿಂದ ಪಂಡಿತರಿಗೆ ಸಾಲ ತೀರಿಸಲು ಸಾಧ್ಯವಾಗುವುದಿಲ್ಲ ಆಗ ಶ್ರೀಮಂತನು ಬಂದು ನಿನ್ನ ಕೈಯನ್ನು ಕತ್ತರಿಸಿ ಕೊಡಿ ಎಂದು ಕೇಳುತ್ತಾನೆ.
ಪಂಡಿತರು ತುಂಬಾ ಗಾಬರಿಯಾಗುತ್ತಾರೆ ಈಗ ಏನು ಮಾಡಬೇಕು ಎಂದು ಚಿಂತೆ ಮಾಡುತ್ತಾರೆ ನಂತರ ನಡೆದ ವಿಷಯವನ್ನು ರಾಜನಿಗೆ ತಿಳಿಸುತ್ತಾರೆ ಆಗ ರಾಜ ಇಬ್ಬರನ್ನು ಕರೆಸುತ್ತಾನೆ ಎಲ್ಲಾ ವಿಷಯವನ್ನು ಕೇಳಿ ಶ್ರೀಮಂತರ ದುರ್ಬುದ್ಧಿಯನ್ನು ಕಲ್ಲು ಹೃದಯ ಅರ್ಥಮಾಡಿಕೊಂಡು ರಾಜ ಶ್ರೀಮಂತನಿಗೆ ಹೇಳುತ್ತಾನೆ.
ನೀನು ಪಂಡಿತರ ಕೈಯನ್ನು ಕತ್ತರಿಸ ಬಹುದು ಆದರೆ ಒಂದು ಸ್ವಲ್ಪವೂ ರಕ್ತ ಕೆಳಗೆ ಬೀಳಬಾರದು ಹಾಗೇನಾದರೂ ರಕ್ತ ಬಿದ್ದರೆ ನಿನಗೆ ಮರಣದಂಡನೆ ನೀಡುತ್ತೇನೆ ಎಂದು ಹೇಳುತ್ತಾರೆ ಆಗ ಶ್ರೀಮಂತನು ತನ್ನ ದುರ್ಬುದ್ಧಿಯನ್ನು ಅರ್ಥಮಾಡಿ ಕೊಳ್ಳುತ್ತಾನೆ ಮಾಡಿದ ತಪ್ಪಿಗಾಗಿ ಒಂದು ತಿಂಗಳ ಶಿಕ್ಷೆಯನ್ನು ನೀಡುತ್ತಾರೆ ವಿಧಿ ಇಲ್ಲದೆ ಮಾಡಿದ ತಪ್ಪಿಗೆ ಶಿಕ್ಷೆಯನ್ನು ಶ್ರೀಮಂತ ಅನುಭವಿಸುತ್ತಾನೆ.
ಕಷ್ಟ ಪಟ್ಟಿದ್ದೆ ಉಳಿಯುವುದಿಲ್ಲ
ಒಂದು ಊರಿನಲ್ಲಿ ಮೂವರು ಸ್ನೇಹಿತರು ಇದ್ದರು ಆ ಊರಿನಲ್ಲಿ ಮಳೆ ಧಾರಾಕಾರವಾಗಿ ಬಂತು ಬೆಳೆದಿದ್ದ ಬೆಳೆಗಳೆಲ್ಲವೂ ನಾಶವಾದವು ಕೆಲವು ಮನೆಗಳು ಬಿದ್ದವು ಆದುದರಿಂದ ಎಲ್ಲರಿಗೂ ಎಷ್ಟು ನಷ್ಟವಾಯಿತು ಆಗ ಒಬ್ಬ ಹಿರಿಯ ವ್ಯಕ್ತಿ ಹೇಳಿದರು ಮೂವರು ಸ್ನೇಹಿತರಿಗೆ ನಮ್ಮ ದೊಡ್ಡ ಊರಿನ ರಾಜರು ತುಂಬಾ ಕರುಣೆಯುಳ್ಳವರು ರಾಜರನ್ನು ಬರಗಾಲ ಬಂದು ನಷ್ಟವಾಗಿದೆ ಎಂದು ಪರಿಹಾರ ಕೇಳಿ ಪಡೆಯಬಹುದು ಎಂದು ಸಲಹೆ ನೀಡುತ್ತಾರೆ.
ನಂತರ ಮೂವರು ಕೂಡ ರಾಜನ ಹತ್ತಿರ ಹೋಗುತ್ತಾರೆ ನಡೆದುಕೊಂಡು ಹೋಗಿದ್ದರಿಂದ ಸಂಜೆಯಾಗುತ್ತದೆ ಆಗ ಈ ಮೂವರನ್ನೂ ನೋಡಿ ರಾಜ ನಿಮಗೆ ಏನು ಬೇಕಾಗಿತ್ತು ಎಂದು ಕೇಳುತ್ತಾನೆ ಆಗ ಇಬ್ಬರು ನಮಗೆ ಬರಗಾಲ ಬಂದು ನಷ್ಟವಾಗಿದೆ ಆದುದರಿಂದ ಸಹಾಯ ಪಡೆದು ಹೋಗೋಣವೆಂದು ಬಂದಿದ್ದೇವೆ ಎಂದು ಹೇಳುತ್ತಾರೆ.
ರಾಜರು ಮೂವರಿಗೆ ಏನು ಬೇಕು ಹೇಳಿ ಎಂದು ಕೇಳುತ್ತಾರೆ ಮೊದಲನೆಯವನು ನಾನು ವ್ಯಾಪಾರ ಮಾಡುವವನು ನನಗೆ ಒಂದಷ್ಟು ಹಣ ಸಿಕ್ಕಿದರೆ ನಾನು ವ್ಯಾಪಾರ ಮಾಡಿಕೊಂಡು ಬದುಕುತ್ತೇನೆ ಎಂದು ಹೇಳುತ್ತಾನೆ.
ಎರಡನೇಯವನಿಗೆ ಕೇಳಿದಾಗ ಎರಡನೆಯವನು ನನ್ನ ವ್ಯಾಪಾರ ಯಾವಾಗಲೂ ಚೆನ್ನಾಗಿ ನಡೆಯುತ್ತಿರುತ್ತದೆ ನನಗೆ ಮನೆಗಾಗಿ ನನ್ನ ತಂದೆ ತಾಯಿಯ ಸಹಾಯಕ್ಕಾಗಿ ಹೆಂಡತಿ ಸಿಕ್ಕಿದ್ದರೆ ಸಾಕು ಎಂದು ಕೇಳುತ್ತಾನೆ ಮೂರನೇಯವನಿಗೆ ಕೇಳುತ್ತಾನೆ ನಿನಗೇನು ಬೇಕು ಕೇಳು ಎಂದು ಹೇಳಿದಾಗ ಮೂರನೇಯವನು ನನಗೆ ಏನೂ ಬೇಡ ಎಂದು ಹೇಳುತ್ತಾನೆ.
ರಾಜ ಮೂರನೆಯವನಿಗೆ ಅಹಂಕಾರ ಇರಬಹುದು ಎಂದು ಅರ್ಥ ಮಾಡಿಕೊಳ್ಳುತ್ತಾನೆ ರಾಜ ಆಗಲಿ ನಿಮಗೆ ಮಾರನೇ ದಿನ ಸಿಗುತ್ತದೆ ಎಂದು ಹೇಳಿ ಒಂದು ಕೊಠಡಿಯಲ್ಲಿ ಉಳಿದುಕೊಳ್ಳಲು ಅವಕಾಶ ಮಾಡಿ ಕೊಡುತ್ತಾನೆ.
ಮಾರನೆಯ ದಿನ ಸಾಲಾಗಿ ಬಂದು ನಿಂತರು ಮೂವರನ್ನು ಕರೆದು ಒಬ್ಬನನ್ನು ಒಂದು ಚೀಲ ಬೆಳ್ಳಿಯ ನಾಣ್ಯವನ್ನು ಕೊಡುತ್ತಾನೆ ಇನ್ನೊಬ್ಬನನ್ನು ಒಂದು ಸುಂದರವಾಗಿರುವ ಹೆಣ್ಣನ್ನು ಕೊಟ್ಟು ಅಲ್ಲೇ ಮದುವೆ ಮಾಡಿದರು ಮತ್ತೆ ಮೂರನೆಯವನಿಗೆ ಏನು ಬೇಕು ಎಂದು ಕೊನೆಯ ಸಲ ಕೇಳುತ್ತಾನೆ ಆದರೂ ನನಗೆ ಏನು ಬೇಡ ಎಂದು ಹೇಳಿ ಸುಮ್ಮನಾಗುತ್ತಾನೆ.
ಮೂವರು ಅರಮನೆಯಿಂದ ಹೊರಡುತ್ತಾರೆ ಆಗ ರಾಜನಿಗೆ ಕೋಪ ಬರುತ್ತೆ ನನಗೆ ಏನೂ ಬೇಡ ಎಂದು ಹೇಳಿ ಹಾಗೆ ಹೋಗುತ್ತಿದ್ದಾನಲ್ಲಾ ಇವನನ್ನು ಉಳಿಸುವುದು ಒಳ್ಳೆಯದಲ್ಲ ಎಂದು ಮನದಲ್ಲಿ ಚಿಂತಿಸಿ ಸೈನಿಕರನ್ನು ಕರೆದು ಹೇಳುತ್ತಾನೆ.
ಊರಿನ ಆಚೆ ಯಾರು ಬರೀ ಕೈಯಲ್ಲಿ ಹೋಗುತ್ತಿರುತ್ತಾನೆ ಅವನನ್ನು ಕೊಂದು ಬಿಡಿ ಎಂದು ಆಜ್ಞೆ ನೀಡುತ್ತಾನೆ ಹಾಗೆ ಸೈನಿಕರು ಮೊದಲನೆಯವನನ್ನು ಕೊಂದು ತರುತ್ತಾರೆ ರಾಜ ಗಾಬರಿಯಾಗುತ್ತಾನೆ ವಿವರಣೆ ಕೇಳುತ್ತಾನೆ.
ಒಂದು ಚೀಲ ಹಣವನ್ನು ತೆಗೆದುಕೊಂಡು ಹೋದವನು ಸ್ವಲ್ಪದೂರ ಹೋದಾಗ ಆಯಾಸವಾಗಿತ್ತು ಅದಕ್ಕೆ ಎರಡು ನಿಮಿಷ ನೀನು ಹಿಡಿದುಕೊ ಎಂದು ಕೊಟ್ಟಿದ್ದನು ಅಷ್ಟರಲ್ಲಿ ಇವನು ಬರೀ ಕೈ ಇದ್ದನು ಸತ್ತನು ನಂತರ ಮತ್ತೆ ಯಾರೂ ಬರೀ ಕೈ ಎಲ್ಲಿ ಇರುತ್ತಾರೋ ಅವರನ್ನು ಕೊಂದು ಬಿಡಿ ಎಂದು ಹೇಳುತ್ತಾನೆ.
ನಂತರ ಎರಡನೆಯವನನ್ನು ಕೂಡ ಕೊಂದು ತರುತ್ತಾರೆ ಆಗ ರಾಜನಿಗೆ ತಲೆ ಕೆಟ್ಟುಹೋಗುತ್ತದೆ ಮದುವೆಯಾಗಿ ಹೋಗುತ್ತಿದ್ದವನು ಹೆಂಡತಿಗೆ ನೀರು ಬೇಕಾಗಿರುತ್ತದೆ ನೀರಿಗಾಗಿ ಹೋಗಿರುತ್ತಾನೆ ಇವಳನ್ನು ನೋಡಿಕೋ ಎಂದು ಬರಿಗೈಯಲ್ಲಿ ಇರುತ್ತಾನೆ ಆದ್ದರಿಂದ ಎರಡನೆಯವನು ಸಾಯುತ್ತಾನೆ.
ನಂತರ ಮೂರನೇಯವನೇ ಮತ್ತೆ ಮದುವೆಯಾಗಿದ್ದ ಹೆಣ್ಣನ್ನು ಮತ್ತೆ ಬೆಳ್ಳಿಯ ನಾಣ್ಯವನ್ನು ತೆಗೆದುಕೊಂಡು ಅರಮನೆಗೆ ಬರುತ್ತಾನೆ ಎರಡೂ ಕೂಡ ಅರಮನೆಯಲ್ಲಿ ಇಟ್ಟು ಹೇಳುತ್ತಾನೆ ಹೆಣ್ಣು ಹೊನ್ನು ಮಣ್ಣು ಯಾವುದೇ ಆಗಲಿ ಅದು ನಮಗಾಗಿ ಒಲಿದು ಬರಬೇಕೆ ವಿನಃ ನಾವು ಒಲಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿ ಕಷ್ಟಪಟ್ಟಿದೆ ನಮಗೆ ಉಳಿಯುವುದಿಲ್ಲ ಕಷ್ಟ ಪಡದೇ ಇರುವುದು ನಮಗೆ ಉಳಿಯುವುದಿಲ್ಲ ಋಣ ಇದ್ದರೆ ಮಾತ್ರ ಸಿಗುತ್ತದೆ ಎಂದು ಹೇಳುತ್ತಾನೆ ಆಗ ರಾಜ ಅರ್ಥಮಾಡಿಕೊಳ್ಳುತ್ತಾನೆ.