ಸೂಕ್ಷ್ಮವಾಗಿ ಗಮನಿಸಿ ನೋಡಿ

ಒಂದು ಆಶ್ರಮದಲ್ಲಿ ಗುರು ಶಿಷ್ಯರು ಇದ್ದರು ಅದರಲ್ಲೂ ಕರಿಯ ಶಿಷ್ಯನನ್ನು ನೋಡಿದರೆ ಗುರುಗಳಿಗೆ ತುಂಬಾ ಪ್ರೀತಿ ಬೇರೆ ಶಿಷ್ಯಂದಿರುಗಳಿಗೆ ಮತ್ಸರ ಉಂಟಾಯಿತು ಕರಿಯನನ್ನು ಮಾತ್ರ ತುಂಬಾ ಪ್ರೀತಿಸುತ್ತಿದ್ದರು.

ಬೇರೆ ಶಿಷ್ಯರು ದ್ವೇಷದಿಂದ ನೋಡುತ್ತಿದ್ದರು ಕೊನೆಗೆ ಎಲ್ಲ ಶಿಷ್ಯರು ಸೇರಿ ಗುರುಗಳಿಗೆ ಕೇಳಿದರು ಗುರುಗಳೇ ಕರಿಯನನ್ನು ನೀವು ಯಾಕೆ ಹೆಚ್ಚಾಗಿ ಪ್ರೀತಿಸುತ್ತೀರಿ? ಇದಕ್ಕೆ ಕಾರಣವೇನು? ಗುರುಗಳು ನಾಳೆ ನಿಮ್ಮನ್ನು ಒಂದು ಚಟುವಟಿಕೆ ಕೊಡುತ್ತೇನೆ ಅದರಲ್ಲಿ ಯಾರು ಗೆಲ್ಲುತ್ತಾರೋ ಅವರನ್ನು ನಾನು ತುಂಬಾ ಹೆಚ್ಚಾಗಿ ಪ್ರೀತಿಸುತ್ತೇನೆ ಎಂದು ಹೇಳುತ್ತಾರೆ ಈ ಮಾತಿನಿಂದ ಎಲ್ಲಾ ಶಿಷ್ಯರು ಕುಣಿದಾಡಿದರು.

 ನಂತರ ಒಂದೊಂದು ಕೊಳೆಯಾಗಿದ ತಾಮ್ರದ ಪಾತ್ರೆಯನ್ನು ತಂದು ಎಲ್ಲರಿಗೂ ಕೊಟ್ಟು ಹೇಳುತ್ತಾರೆ ಇದನ್ನು ಸ್ವಚ್ಚವಾಗಿ ತೊಳೆದುಕೊಂಡು ಬನ್ನಿ ಎನ್ನುತ್ತಾರೆ ಹಾಗೆಯೇ ಎಲ್ಲರೂ ಕೂಡ ಸ್ವಚ್ಛವಾಗಿ ತೊಳೆದುಕೊಂಡು ಬಂದಿರುತ್ತಾರೆ ಮತ್ತೆ ಕರಿಯನ ಪಾತ್ರೆಯನ್ನು ಕೊನೆಯಲ್ಲಿ ಇಟ್ಟಿರುತ್ತಾರೆ ಗುರುಗಳು ಪ್ರತಿಯೊಂದು ಪಾತ್ರೆಯನ್ನು ಸರಿಯಾಗಿ ಪರೀಕ್ಷಿಸುತ್ತಾರೆ ಕೊನೆಗೆ ಕರಿಯನ ಪಾತ್ರೆ ಸ್ವಚ್ಛವಾಗಿದೆ ಎಂದು ಹೇಳುತ್ತಾರೆ.

 ಅದು ಹೇಗೆಂದು ಎಲ್ಲಾ ಶಿಷ್ಯರು ಗುರುವಿಗೆ ಪ್ರಶ್ನೆ ಕೇಳುತ್ತಾರೆ ಆವಾಗ ಗುರುಗಳು ಪಾತ್ರೆಯನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ ಎನ್ನುತ್ತಾರೆ ಎಲ್ಲ ಶಿಷ್ಯರೂ ಹೊರಗಡೆ ತುಂಬಾ ಚೆನ್ನಾಗಿ ತೊಳೆದು ತಂದಿರುತ್ತಾರೆ ಆದರೆ ಕರಿಯನು ಹೊರಗಡೆ ಅಷ್ಟು ಸ್ವಚ್ಚವಾಗಿ ತೊಳೆಯದಿದ್ದರೂ ಒಳಗಡೆ ತುಂಬಾ ಸ್ವಚ್ಛವಾಗಿ ತೊಳೆದಿರುತ್ತಾನೆ.

 ಆಗ ಶಿಷ್ಯರು ಒಪ್ಪಿದರು ಆಗ ಗುರುಗಳು ಹೇಳುತ್ತಾರೆ ಪಾತ್ರೆಯ ಒಳಭಾಗವು ಸ್ವಚ್ಚವಾಗಿದ್ದರೆ ಹಾಲು, ನೀರು. ಏನು ಬೇಕಾದರೂ ಹಾಕಬಹುದು ಹೊರಗಡೆ ಸ್ವಚ್ಛವಾಗಿದ್ದರೆ ಪ್ರಯೋಜನವಿಲ್ಲ ಎಂದು ಹೇಳಿದಾಗ ಎಲ್ಲರೂ ತಮ್ಮ ತಪ್ಪನ್ನು ಅರಿತರು ಬಹಿರಂಗ ಶುದ್ಧಿಗಿಂತ ಆಂತರಿಕ ಶುದ್ಧತೆ ತುಂಬಾ ಮುಖ್ಯವಾದುದು ಎಂದು ಅರಿತರು.

ಚಿಂತೆ ವರ್ಗಾವಣೆ

ಒಂದು ಊರಿನಲ್ಲಿ ಒಬ್ಬ ಪ್ರಾಮಾಣಿಕ ವ್ಯಾಪಾರಸ್ಥ ಇರುತ್ತಾನೆ ಅವನು ಸ್ವಲ್ಪ ಸಾಲವನ್ನು ಪಡೆದಿರುತ್ತಾರೆ ಭಾನುವಾರ ಕೊಡುತ್ತೇನೆ ಎಂದು ಹೇಳಿರುತ್ತಾರೆ ವ್ಯಾಪಾರಿಯು ತನ್ನ ವ್ಯಾಪಾರಕ್ಕೆ ಹೋಗುತ್ತಾನೆ ಶನಿವಾರ ಭೀಕರ ಮಳೆ ಬಂದುದ್ದರಿಂದ ವ್ಯಾಪಾರ ಆಗುವುದಿಲ್ಲ ಆಗ ತುಂಬಾ ಚಿಂತನಾಗುತ್ತಾನೆ.

ಮನೆಗೆ ಬರುತ್ತಾನೆ ಆಗ ಹೆಂಡತಿ ಆದವಳು ಕೇಳುತ್ತಾಳೆ ಏಕೆ ತುಂಬಾ ಚಿಂತೆಯಲ್ಲಿ ಇದ್ದೀರಾ?   ಏನು ಕಾರಣ?  ಆಗ ಗಂಡ ಹೇಳುತ್ತಾನೆ ನಮ್ಮ ಪಕ್ಕದ ಮನೆಯವರಿಂದ ನಾನು   ಸಾಲ ಪಡೆದೆ ಆ ಹಣವನ್ನು ಇಂದು ನೀಡಬೇಕಾಗಿತ್ತು ಇಂದು ವ್ಯಾಪಾರ ಆಗಿಲ್ಲ ಅದಕ್ಕಾಗಿ ತುಂಬಾ ನಿರಾಶೆಯಾಗಿದೆ ಎಂದು ಚಡಪಡಿಸುತ್ತಿರುತ್ತಾನೆ.

 ಆಗ ಹೆಂಡತಿ ಆದಗಳು ನೀವೇನು ತಲೆ ಕೆಡಿಸಿಕೊಳ್ಳಬೇಡಿ ಎಂದು ನೇರವಾಗಿ ಪಕ್ಕದ ಮನೆಯವರಿಗೆ ಹೇಳುತ್ತಾಳೆ ನನ್ನ ಗಂಡನಾದವನು ನಿಮ್ಮ ಹತ್ತಿರ ಸಾಲವನ್ನು ಪಡೆದಿದ್ದಾನೆ ಇಂದು ನಿಮಗೆ ನೀಡಬೇಕಾಗಿತ್ತು ಇಂದು ವ್ಯಾಪಾರ ಆಗಿಲ್ಲ ಆದ್ದರಿಂದ ಇಂದು ಕೊಡಬೇಕಾಗಿದ್ದ ಹಣವನ್ನು ನಿಮಗೆ ಕೊಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿ ಅವರ ಮಾತನ್ನು ಕೇಳದೆ ಮನೆಗೆ ಬಂದುಬಿಡುತ್ತಾಳೆ.

ಆಗ ಗಂಡನಿಗೆ ಹೇಳುತ್ತಾಳೆ ನೀವು ನಿಶ್ಚಿಂತೆಯಾಗಿರಿ ಆಗ ಪಕ್ಕದ ಮನೆಯವರು ಚಿಂತಿತರಾಗುತ್ತಾರೆ ಕೆಲವರು ತಮಗೆ ಇರುವ ಚಿಂತೆ ಬೇರೆಯವರಿಗೆ ವರ್ಗಾವಣೆ ಮಾಡಿಬಿಡುತ್ತಾರೆ ಆಗ ಇವರು ಸಂತೋಷವಾಗಿರುತ್ತಾರೆ ಆದರೆ ಅವರಿಗೆ ಇನ್ನಷ್ಟು ಚಿಂತೆ ಹೆಚ್ಚಾಗುತ್ತದೆ.

  ಉಡುಗೊರೆ ಕೊಡಲೇಬೇಕು

ಅರ್ಜುನ್ ಮತ್ತು ಸುನಿತಾ ಮದುವೆಯಾಗಿದ್ದಾರೆ ಇವರ ಮೊದಲ ವಿವಾಹ ವಾರ್ಷಿಕೋತ್ಸವಕ್ಕೆ ಏನೇನೋ (ಪ್ಲಾನ್ ಗಳು) ಉಪಾಯಗಳು ಹಾಕಿಕೊಂಡಿದ್ದರು ಆದರೆ ದುರಾದೃಷ್ಟವಶಾತ್ ಆ ರೀತಿ ಪ್ಲಾನ್ ಗಳು ಆಗಲಿಲ್ಲ ಇಬ್ಬರು ಕೂಡ ಪ್ರೀತಿಸಿ ಮದುವೆಯಾಗಿದ್ದರು.

ಆ ಕಡೆ ಅರ್ಜುನ್ ತಂದೆ ತಾಯಿ ಈ ಕಡೆ ಸುನಿತಾ ತಂದೆ ತಾಯಿಯವರು ಯಾರೂ ಕೂಡ ಬರಲಿಲ್ಲ ಇಬ್ಬರೇ ಒಂದು ಮನೆಯನ್ನು ಬಾಡಿಗೆಗೆ ಪಡೆದು ಸಂತೋಷದಿಂದ ಇರುತ್ತಾರೆ ಸ್ವಲ್ಪ ದಿನಗಳ ನಂತರ ಇಬ್ಬರದೂ ಮಾಡುತ್ತಿದ್ದ ಕೆಲಸವೂ ಕೂಡ ಹೋಗುತ್ತದೆ ಗಂಡನಿಗೆ ಆಗ ಬರುವ ಸಂಬಳವೂ ಬರುವುದಿಲ್ಲ ಗಂಡ ಹೆಂಡತಿಗೆ ಏನಾದರೂ ಈ ಸಾರಿ ಉಡುಗೊರೆ ಕೊಡಲೇಬೇಕು ಎಂದು ಇಚ್ಛಿಸುತ್ತಾನೆ.

 ಹಾಗೆ ಹೆಂಡತಿಯಾದವಳು ಕೂಡ ಅದೇ ರೀತಿ ನಾನು ಏನಾದರೂ ನನ್ನ ಗಂಡನಿಗೆ ಉಡುಗೊರೆ ಕೊಡಲೇಬೇಕು ಎಂದು ಇಚ್ಛಿಸುತ್ತಾಳೆ ಆದರೆ ಏನೇ ಕಷ್ಟಪಟ್ಟರು ಯಾವ ಕಡೆಯಿಂದಲೂ ಹಣ ಬರುವುದಿಲ್ಲ ಆಗ ಒಂದು ದಿನ ಮುಂಚೆ ಯೋಚಿಸುತ್ತಾರೆ.

 ಗಂಡನಿಗೆ ಗೊತ್ತಿಲ್ಲದೆ ಹೆಂಡತಿ ಹೆಂಡತಿಗೆ ಗೊತ್ತಿಲ್ಲದೆ ಗಂಡ ಇಬ್ಬರು ಯೋಚಿಸುತ್ತಾರೆ ಗಂಡನಾದವನು ತನ್ನ (ಬ್ರಾಸ್ ಲೈಟ್) ಕೈಸರವನ್ನು  ಅನ್ನು ಮೂದಲ ಸಾರಿಗೆ ಗಿರವಿ ಇಟ್ಟು ಒಂದು ಒಳ್ಳೆಯ ಉಡುಗೊರೆ ತರುತ್ತಾನೆ ಅದೇ ರೀತಿ ಹೆಂಡತಿಯು ಕೂಡ ತನ್ನ ಕತ್ತಿನ ಚೈನನ್ನು ಮೂದಲ ಸಾರಿಗೆ ಗಿರವಿ ಇಟ್ಟು ಹೆಂಡತಿಗಂಡನಿಗೆ ಒಂದು ಗಿಫ್ಟನ್ನು ಉಡುಗೊರೆ ತರುತ್ತಾಳೆ.

 ಮೊದಲು ಗಂಡನಾದವನು ನಾನು ಮೊದಲು ಗಿಫ್ಟನ್ನು ಕೊಡುತ್ತೇನೆ ಎನ್ನುತ್ತಾನೆ ಹೆಂಡತಿಯಾದವಳು ನಾನು ಮೊದಲು ಕೊಡುತ್ತೇನೆ ಎನ್ನುತ್ತಾಳೆ ಆಗ ಇಬ್ಬರಿಗೂ ಬೇಡ ಎಂದು ಒಂದು (ಕಾಯಿನ್)  ನಾಣ್ಯ ತೆಗೆದುಕೊಂಡು ಮೇಲಕ್ಕೆ ಎಸೆಯುತ್ತಾರೆ ನಂತರ ಕೆಳಗೆ ಬಿದ್ದಾಗ ಮೊದಲಿಗೆ (ಹೆಡ್ಡು) ರಾಜ ಬೀಳುತ್ತದೆ.

 ಅಂದರೆ ಗಂಡನದೆ ಗಂಡನು ಹೆಂಡತಿಗೆ ಇಷ್ಟವಾದ ಉಡುಗೊರೆಯನ್ನು ಕೊಡುತ್ತಾನೆ ನಂತರ ಕತ್ತಿನಲ್ಲಿ ನೋಡಿದಾಗ ಸರ ಇರುವುದಿಲ್ಲ ಹೆಂಡತಿಯಾದವಳು ಉಡುಗೊರೆಯನ್ನು ಕೊಡುತ್ತಾಳೆ ನಂತರ ಕೈಯನ್ನು ಮುಟ್ಟಿದಾಗ ಗಂಡನ ಬ್ರಾಸ್ ಲೈಟ್ ಇರುವುದಿಲ್ಲ.

 ಆಗ ಇಬ್ಬರು ಅರ್ಥಮಾಡಿಕೊಳ್ಳುತ್ತಾರೆ ಒಬ್ಬರಿಗೆ ಇನ್ನೊಬ್ಬರು ತ್ಯಾಗ ಮಾಡಿದ್ದಾರೆ ಗಂಡನಿಗೆ ನೆನಪಿನ ಕಾಣಿಕೆ ಎಂದರೆ ಬ್ರಾಸ್ ಲೈಟ್ ಹೆಂಡತಿಗೆ ಅಷ್ಟೇ ಮುಖ್ಯ ಅವಳ ಕತ್ತಿನ ಸರ ಆದರೆ ಇಬ್ಬರು ಇನ್ನೊಬ್ಬರಿಗಾಗಿ ತ್ಯಾಗ ಮಾಡುತ್ತಾರೆ ತ್ಯಾಗ ಮಾಡಿ ಬದುಕಿದಾಗ ಮಾತ್ರ ಬದುಕಿನಲ್ಲಿ ತೃಪ್ತಿ ನೆಮ್ಮದಿಯನ್ನು ಅನುಭವಿಸಬಹುದಾಗಿದೆ.

ಐ ಲವ್ ಯೂ ಡ್ಯಾಡಿ

ಒಂದು ಸಂಸಾರ ಇರುತ್ತದೆ ಅದರಲ್ಲಿ 4 ಜನ ಇರುತ್ತಾರೆ ತಂದೆತಾಯಿ 2 ಮಕ್ಕಳು ಮಗ ಹತ್ತನೇ ತರಗತಿ ಓದುತ್ತಿದ್ದು ಮಗಳು ಐದನೇ ತರಗತಿ ಓದುತ್ತಿರುತ್ತಾಳೆ ಆದರೆ ಅವರ ಮನೆಯಲ್ಲಿ ತಂದೆ ಬಂದರೆ ಮಕ್ಕಳು ನಡುಗುತ್ತಿರುತ್ತಾರೆ.

 ಯಾಕೆ ಅಂದರೆ ಆ ರೀತಿಯಲ್ಲಿ ತಂದೆಯ ನಿಯಮಗಳನ್ನು ಪಾಲಿಸಬೇಕು ತಂದೆಯಾದವನ್ನು ಹದ್ದುಬಸ್ತಿನಲ್ಲಿ ಇಟ್ಟಿರುತ್ತಾನೆ ಮಗ ಆದವನು ಆಟವಾಡಲಿಕ್ಕೆ ಹೋದಾಗ ಆಕಸ್ಮಿಕವಾಗಿ ತಗಲಿ ತಂದೆಯ ಕಾರಿಗೆ ಸ್ವಲ್ಪ (ಡ್ಯಾಮೇಜ್) ನಷ್ಟವಾಗುತ್ತದೆ.

ಕಾರ್  ಶೋರೂಮ್ ನಿಂದ ತಂದು ಕೆಲವೇ ದಿನಗಳು ಆಗಿರುತ್ತದೆ ಇದನ್ನು ನೋಡಿದ ಅಪ್ಪ ಬೆಂಕಿ ಕೆಂಡವಾಗುತ್ತಾನೆ ಮಗನಿಗೆ ರಭಸದಿಂದ ಕಿವಿಗೆ ಹೊಡೆಯುತ್ತಾನೆ ನಂತರ ಕಿವಿಯೇ ಕೇಳಿಸುವುದಿಲ್ಲ ನಂತರ ಆಸ್ಪತ್ರೆಗಳಿಗೆ ಹೋಗುತ್ತಾರೆ.

ಚಿಕಿತ್ಸೆ ಮಾಡಿಸಿದಾಗ ವೈದ್ಯರು ಕೂಲಂಕುಷವಾಗಿ ಪರೀಕ್ಷಿಸಿ ಏನಾಯಿತು ಎಂದು ಕೇಳುತ್ತಾರೆ ಆದರೆ ಮಗ ಇದ್ದವನು ಹೇಳುತ್ತಾನೆ ನಾನೇ ಬಿದ್ದುಬಿಟ್ಟೆ ಎನ್ನುತ್ತಾನೆ ಆದರೆ ಅವನು ಎಂದಿಗೂ ತಂದೆ ಹೊಡೆದರು ಎಂದು ಹೇಳುವುದಿಲ್ಲ ನಂತರ ವೈದ್ಯರು ಇವನಿಗೆ ಒಂದು ಕಿವಿ ಕೇಳಿಸುವುದಿಲ್ಲ.ಒಂದು ಕಿವಿ ಮಾತ್ರ ಕೇಳಿಸುತ್ತದೆ ಎಂದು ಹೇಳುತ್ತಾರೆ.

 ಅಪ್ಪನಿಗೆ ತುಂಬ ಬೇಸರವಾಗುತ್ತದೆ ಆಗ ಮಗ ಐ ಲವ್ ಯೂ ಡ್ಯಾಡಿ ಎಂದು ಹೇಳುತ್ತಾನೆ ನಂತರ ಆ ಕಾರಿಗೆ (ಇನ್ಶೂರೆನ್ಸ್) ವಿಮೆ ಇರುವುದರಿಂದ ಡ್ಯಾಮೇಜ್ ಆದ ಕಾರಿನ ಭಾಗವನ್ನು ಹೊಸದಾಗಿ ಬದಲಾವಣೆಯಾಗುತ್ತದೆ.

 ಮಗುವಿನ ಒಂದು ಕಿವಿ ಕೇಳಿಸುವುದಿಲ್ಲ ಅದೇ ಸ್ವಲ್ಪ ಯೋಚಿಸುತ್ತಿದ್ದರೆ ತನ್ನ ಮಗ ಜೀವನಪೂರ್ತಿ ನರಳಬೇಕಾದ ತೊಂದರೆ ಬರುತ್ತಿರಲಿಲ್ಲ ಅಲ್ಲದೆ ಮಕ್ಕಳು ದೊಡ್ಡವರಾದ ಮೇಲೆ ಅವರನ್ನು ಪ್ರೀತಿಯಿಂದ ತಿದ್ದಬೇಕು ನಾವು ವಸ್ತುಗಳನ್ನು ಉಪಯೋಗಿಸಬೇಕು ಮನುಷ್ಯನನ್ನು ಪ್ರೀತಿಸಬೇಕು ನಮ್ಮ ಮಕ್ಕಳನ್ನು ಪ್ರೀತಿಸೋಣ.

  ಆನೆಗೂ ಇರುವೆಗೂ ಸ್ಪರ್ಧೆ

ಕಾಡಿನಲ್ಲಿ ಒಂದು ದೊಡ್ಡ ಆನೆಗೆ ಇರುತ್ತದೆ ಆನೆ ತಾನು ಎಲ್ಲರಿಗಿಂತ ಶಕ್ತಿ ಇದೆ ಎಂದು ಅಹಂ ಇತ್ತು ಚಿಕ್ಕ ಚಿಕ್ಕ ಪ್ರಾಣಿಗಳನ್ನು ಆಗಾಗ ಹಿಂಸೆ ಮಾಡುತ್ತಿತ್ತು ಹೀಗೆ ಒಂದು ಸಾರಿ ಆನೆ ದಾರಿಯಲ್ಲಿ ಬರುತ್ತಿದ್ದಾಗ ಎದುರಿಗೆ ಇರುವೆಯ ಗೂಡು ಇತ್ತು.

 ಅಲ್ಲಿ ನೂರಾರು ಇರುವೆಗಳು ಆಹಾರವನ್ನು ತೆಗೆದುಕೊಂಡು ಹೋಗುತ್ತಿದ್ದವು ಅದನ್ನು ನೋಡಿದ ಆನೆ ನನಗೆ ಜಾಗ ಬಿಡಿ ಇಲ್ಲದಿದ್ದರೆ ನಿಮ್ಮನ್ನು ಒಂದೇ ಕಾಲಿನಿಂದ ತುಳಿದು ಬಿಡುತ್ತೇನೆ ಎಂದು ಗರ್ವದಿಂದ ಹೇಳಿತು.

 ಆಗ ಚಿಕ್ಕ ಇರುವೆ ನೀನು ಬಲಶಾಲಿ ಎಂದು ಎಲ್ಲರಿಗೂ ತಿಳಿದ ವಿಷಯ ಆದರೆ ನಾವೂ ನಿನಗೆ ಏನೂ ತೊಂದರೆ ಕೊಟ್ಟಿದ್ದೇವೆ ಎಂದು ಕೇಳಿತು ಆನೆಯು ಹೇಳಿತ್ತು ಇಷ್ಟು ಸಣ್ಣ ಪ್ರಾಣಿಯಾದ ನೀನು ನನ್ನನ್ನು ಪ್ರಶ್ನಿಸುವ ಶಕ್ತಿ ಇದೆಯೇ ಎಂದು ಹೇಳಿತ್ತು.

 ಆಗ ಇರುವೆಯೂ ಸಣ್ಣ ಪ್ರಾಣಿ ಆದರೆ ಏನೋ ನನಗೂ ಬುದ್ಧಿ ಇದೆ ನನಗೂ ನನ್ನದೇ ಆದ ಸಾಮರ್ಥ್ಯವಿದೆ ಎಂದು ಹೇಳಿತ್ತು ಹಾಗಾದರೆ ಒಂದು ಸ್ಪರ್ಧೆಯನ್ನು ಇಡೋಣ ಯಾರು ಗೆಲ್ಲುತ್ತಾರೆ ನೋಡೋಣ ಎಂದು ಇರುವೆ ಹೇಳಿತು ಆನೆ ಜಂಬದಿಂದ ಹೇಳಿತು.

 ಸ್ಪರ್ಧೆ ನಡೆಯಲಿ ಎಂದು ಅಹಂಕಾರದಿಂದ ಹೇಳಿತು ಯಾರು ಮೊದಲು ದಡ ಸೇರುತ್ತಾರೆ ನೋಡೋಣ ಎಂದಾಗ ಸ್ಪರ್ಧೆ ಮಾರನೆಯ ದಿನ ಆರಂಭವಾಯಿತು ಆನೆಗೂ ಇರುವೆಗೂ ಸ್ಪರ್ಧೆ ಎಂದು ಎಲ್ಲಾ ಕಾಡಿನ ಪ್ರಾಣಿಗಳು ಪಕ್ಷಿಗಳು ಸೇರಿದವು ಆನೆ ಸ್ವಲ್ಪದೂರ ಓಡಿದಾಗ ಅನಂತರ ಕೆಳಗೆ ನೋಡಿದರೆ ತನ್ನ ಪಕ್ಕದಲ್ಲೇ ಇರುವೆ ಬರುತ್ತಿದ್ದನ್ನು ನೋಡಿ ನೀನು ಇಲ್ಲೇ ಇದೆಯಾ ಎಂದು ಮತ್ತೆ ಓಡಲು ಪ್ರಾರಂಭ ಮಾಡಿತು.

 ಮತ್ತೆ ಮುಂದೆ ಸ್ವಲ್ಪ ದೂರ ಹೋಗಿ ನೋಡಿದರೆ ಮತ್ತೆ ಇರುವೆ ಹೋಗುತ್ತಿದೆ ಕೊನೆಗೆ ಓಡಿ ಓಡಿ ಆನೆಗೆ ಸಾಕಾಯಿತು ಹಾಗೆ ನೋಡಿದರೆ ಮತ್ತೆ ಇರುವೆ ಕಾಣುತ್ತಲೇ ಇದೆ ಕೊನೆಗೆ ಆನೆ ಮೂರ್ಛೆ ಬಿದ್ದಿತು ಇಲ್ಲಿ ಸತ್ಯವಾಗಿ ನಡೆದದ್ದು ಏನು ಎಂದರೆ ಆನೆ ಪ್ರತೀ ಬಾರಿ ನೋಡಿದಾಗಲೂ ನೋಡಿದ್ದು ಸ್ಪರ್ಧೆಗೆ ಬರುತ್ತೀನಿ ಎಂದು ಹೇಳಿದ ಇರುವೆ ಅಲ್ಲಾ ಅದರ ಸ್ನೇಹಿತರಾದ ಬೇರೆ ಬೇರೆ ಇರುವೆಗಳು.

 ಆನೆಗೆ ತುಂಬಾ ಅಹಂಕಾರ ಇದ್ದುದರಿಂದ ಸಣ್ಣ ಇರುವೆಯನ್ನು ಸರಿಯಾಗಿ ಗಮನಿಸಲಿಲ್ಲ ಗಮನಿಸುವ ಸ್ಥಿತಿಯಲ್ಲಿ ಇರಲಿಲ್ಲ ಕೆಲವು ಸಾರಿ ಕೆಲವೊಂದು ಕೆಲಸ ಕಾರ್ಯಗಳನ್ನು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ ಗಮನಿಸದಿದ್ದರೆ ನಾವೇ ಪಶ್ಚಾತ್ತಾಪ ಪಡಬೇಕಾಗುತ್ತದೆ ಸಾಧ್ಯವಾದಷ್ಟು ಎಚ್ಚರಿಕೆಯಿಂದ ಇರೋಣ.

Leave a Comment