ಸಿಕ್ಕಿದ ಅವಕಾಶವನ್ನು

ಒಂದು ಪೆಟ್ರೋಲ್ ಬಂಕಿನಲ್ಲಿ ಒಬ್ಬ ಯುವಕ ಪೆಟ್ರೋಲ್ ಬಂಕ್ ಗೆ ಬರುವ ವಾಹನಗಳಿಗೆ ಪೆಟ್ರೋಲ್ ಹಾಕುತ್ತಿರುತ್ತಾನೆ ಒಂದು ಸಾರಿ ಒಂದು ಒಳ್ಳೆಯ ಬೆಲೆಬಾಳುವ ಕಾರ್ ಬಂದು ನಿಲ್ಲುತ್ತದೆ ಈ ಕಾರನ್ನು ನೋಡಿದ ತಕ್ಷಣ ಈ ಯುವಕನಿಗೆ ರೋಮಾಂಚನವಾಗುತ್ತದೆ.

 ಏಕೆಂದರೆ ಇದು ಇವನ ಕನಸಿನ ಕಾರು ಆಗಿರುತ್ತದೆ ಈ ಕಾರನ್ನು ಹೀಗೆ ನೋಡಿ ಆನಂದಿಸುತ್ತಿರಬೇಕಾದರೆ ಕಾರಿನ ಮಾಲೀಕ ಇಳಿದು ಯುವಕನನ್ನು ಗಮನಿಸುತ್ತಾರೆ ಮತ್ತೆ ಪೆಟ್ರೋಲಿನ ಹಣವನ್ನು ಕೊಟ್ಟು ಯುವಕನಿಗೆ ಹೇಳುತ್ತಾರೆ.

 ನೀನು ಈ ರೀತಿ ಕಾರು ಖರೀದಿಸಬೇಕು ಎಂದು ಮನಸ್ಸಲ್ಲಿ ಆಸೆ ಇದೇ ಅಲ್ಲವೇ ಎಂದಾಗ ಅದಕ್ಕೆ ಯುವಕನು ಹೌದು ಎನ್ನುತ್ತಾನೆ ಅದಕ್ಕೆ ಅವರು ಒಂದು ವಿಸ್ಟಿಂಗ್ ಕಾರ್ಡನ್ನು ಕೊಟ್ಟರು ನೀನು ಕೆಲಸ ಮುಗಿದ ನಂತರ ನನ್ನನ್ನು ಬಂದು ಕಾಣು ಎಂದರು ನಂತರ ವೆಸ್ಟಿಂಗ್ ಕಾರ್ಡ್ ಅನ್ನು ನೋಡಿದ ನಂತರ ಇದು ನನಗೆ ಭರವಸೆ ಇಲ್ಲ ಎಂದು ಕಸದ ಬುಟ್ಟಿಯಲ್ಲಿ ಹಾಕಿದನು.

  ಮೂರು ವರ್ಷದ ನಂತರ ಅದೇ ರೀತಿಯ ಒಂದು ಕಾರು ಬಂದು ನಿಂತಿತು ನಂತರ ಕಾರನ್ನು ನೋಡಿದಾಗ ತುಂಬಾ ಆನಂದವಾಯಿತು ಆ ಕಾರಿನಿಂದ ಇಳಿದಿದ್ದು ಯಾರು ಎಂದರೆ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದ ತನ್ನ ಸಹದ್ಯೋಗಿ ಇದು ಹೇಗೆ ಸಾಧ್ಯವಾಯಿತು ಎಂದನು.

 ಆಗ ಆ ಸಹೋದ್ಯೋಗಿಯು ಹೇಳಿದ್ದನು ನೋಡು ಸ್ನೇಹಿತ ನೀನು ಆ ಕಾರ್ಡನ್ನು ನೋಡಿದೆ ಅದನ್ನು ಕಸದ ಬುಟ್ಟಿಗೆ ಎಸೆದೆ ನಾನು ಆ ವಿಸ್ಟಿಂಗ್ ಕಾರ್ಡ್ ಅನ್ನು ತೆಗೆದುಕೊಂಡು ಹೋಗಿ ಅವರ ಹತ್ತಿರ ಮಾತನಾಡಿದೆ ಅವರು ನನಗೆ ಬೇರೆ ಒಂದು ಕೆಲಸವನ್ನು ಕೊಟ್ಟರು.

ಕೆಲಸವನ್ನು ಶ್ರದ್ಧೆ ಭಕ್ತಿಯಿಂದ ಮಾಡಿದ ನಂತರ ನಾನು ಈ ಕಾರನ್ನು ಖರೀದಿಸಿದ್ದೇನೆ ಕಾರಿನ ಮಾಲೀಕನಾಗಿದ್ದೇನೆ ನಿನಗೆ ಸಿಕ್ಕಿದ ಅವಕಾಶವನ್ನು ನೀನು ಬಳಸಿಕೊಳ್ಳಲಿಲ್ಲ ಸಿಕ್ಕಿದ ಅವಕಾಶ ಬಳಸಿಕೊಳ್ಳಬೇಕು ಇನ್ನು ಮುಂದೆಯಾದರೂ ಬಳಸಿಕೋ ಎಂದು ಹೇಳಿ ಹೊರಟನು ಅವಕಾಶ ಎನ್ನುವುದು ಎಲ್ಲರಿಗೂ ಸಿಕ್ಕೇ ಸಿಗುತ್ತದೆ ಕೆಲವರು ಅದನ್ನು ಬಳಸಿಕೊಳ್ಳುತ್ತಾರೆ.

 ಕೆಲವರು  ಅವಕಾಶಗಳನ್ನು ಬಿಸಾಕುತ್ತಾರೆ ಯಾವುದೇ ಅವಕಾಶ ಬಂದಾಗ ಸರಿಯಾಗಿ ವಿಮರ್ಶಿಸಿ ಸಿಕ್ಕ ಅವಕಾಶವನ್ನು ಬಳಸಿಕೊಳ್ಳೋಣ.

ವಿಶ್ವವಿದ್ಯಾಲಯದಲ್ಲಿ ಓದಿಲ್ಲ

ಒಬ್ಬ ಯುವಕ ಪಿಹೆಚ್ ಡಿ (phD) ಪಾಸ್ ಮಾಡಿದ್ದು ತಮ್ಮ ಸಂಬಂಧಿಕರ ಮನೆ ಹಳ್ಳಿಯಲ್ಲಿ ಇರುತ್ತದೆ  ಹಳ್ಳಿಗೆ ಬರುತ್ತಾನೆ ಆ ಹಳ್ಳಿಯ ವಾತಾವರಣ ತುಂಬಾ ಚೆನ್ನಾಗಿರುತ್ತದೆ ಎಲ್ಲಾ ಕಡೆ ಹಸಿರಿನಿಂದ ಆಕರ್ಷಿಸುತ್ತದೆ ಸಂಬಂಧಿಕರು ಈ ಯುವಕನಿಗೆ ಕಡಲೆಕಾಯಿ ಎಣ್ಣೆ ತರಲು ಹೇಳುತ್ತಾರೆ.

ಇಂದು ಕಡಲೆಕಾಯಿ ಎಣ್ಣೆಯು ಪ್ಲಾಸ್ಟಿಕ್ ಚೀಲಗಳಲ್ಲಿ ಸಿಗುತ್ತದೆ ಹಳ್ಳಿಯ ವಾತಾವರಣ ಇರುವುದರಿಂದ ಅಲ್ಲಿ ಗಾಣ ಇರುತ್ತದೆ ಗಾಣದಿಂದಲೇ ನೇರವಾಗಿ ಖರೀದಿಸುತ್ತಾರೆ ಗಾಣದ ಹತ್ತಿರ ಹೋಗುತ್ತಾನೆ ಗಾಣದ ಹತ್ತಿರ ಯಾರೂ ಇರಲ್ಲ ನಂತರ ಒಬ್ಬ ವಯಸ್ಸಾದವರು ಬರುತ್ತಾರೆ ಏನು ಬೇಕು ಎಂದು ಕೇಳುತ್ತಾರೆ.

ಯುವಕ ಒಂದು ಲೀಟರ್ ಕಡಲೆಕಾಯಿ ಎಣ್ಣೆ ಕೊಡಿ ಎಂದು ಕೇಳುತ್ತಾನೆ ಅಷ್ಟರಲ್ಲಿ ವಯಸ್ಸಾದವರು ಒಳಗಡೆ ನೋಡಿ ಶಬ್ದ ಮಾಡುತ್ತಾರೆ ಈ ಯುವಕನಿಗೆ ಆಶ್ಚರ್ಯ ಹಿರಿಯರು ಈ ರೀತಿ ವಿಚಿತ್ರ ಶಬ್ದಗಳನ್ನು ಮಾಡುತ್ತಿದ್ದರಲ್ಲ ಇವರಿಗೆ ಏನಾದರೂ ಕಾಯಿಲೆ ಇದೆಯೋ ಎಂದು ಸ್ವಾಮಿ ನೀವು ಈ ಶಬ್ದ ಮಾಡಿದ್ದಿರಲ್ಲ ಏಕೆ ಎನ್ನುತ್ತಾನೆ?

 ವಯಸ್ಸಾದವರು ನಾನು ಇಲ್ಲಿ ಎಣ್ಣೆ ಹಾಕುತ್ತಿದ್ದೇನೆ ಅಲ್ಲಿ ಗಾಣಕ್ಕೆ ಕಟ್ಟಿರುವ ಎತ್ತುಗಳು ನಿಂತುಕೊಂಡಿದೆ ಆದುದರಿಂದ ನಾನು ಶಬ್ದ ಮಾಡಿದೆ ಎತ್ತುಗಳು ಈಗ ಓಡಾಡುತ್ತಿವೆ ಎಂದು ಹೇಳುತ್ತಾರೆ.

 ಅದು ಸರಿ ಆ ಎತ್ತುಗಳು ತಿರುಗುತ್ತಿವೆ ಇಲ್ಲವೇ ಎಂದು ನೀವು ಹೇಗೆ ಕಂಡುಹಿಡಿಯುತ್ತೀರಿ? ನೀವು ಇಲ್ಲಿದ್ದೀರಿ? ಎತ್ತುಗಳು ಹಿಂದೆ ಇದೆಯಲ್ಲ ಎಂದು ಮತ್ತೆ ಪ್ರಶ್ನೆ ಕೇಳುತ್ತಾನೆ ಆಗ ವಯಸ್ಸಾದವರು ಅದಕ್ಕೂ ವಿನಯವಾಗಿ ಉತ್ತರಿಸುತ್ತಾರೆ.

 ನೋಡಿ ನಾನು ಎತ್ತಿನ ಕತ್ತಿಗೆ ಗಂಟೆಗಳು ಕಟ್ಟಿದ್ದೇನೆ ಅವು ಓಡಾಡುತ್ತಿದ್ದರೆ ನನಗೆ ಇಲ್ಲಿ ಶಬ್ದ ಬರುತ್ತದೆ ಎಂದು ಹೇಳುತ್ತಾರೆ ಈ ಯುವಕ ಸುಮ್ಮನಿರದೆ ಇನ್ನೊಂದು ವಿಚಿತ್ರವಾದ ಪ್ರಶ್ನೆಯನ್ನು ಕೇಳೇಬಿಡುತ್ತಾನೆ ಸರಿ ಸ್ವಾಮಿ ನೀವು ಆ ಎತ್ತುಗಳಿಗೆ ಗಂಟೆಯನ್ನು ಕಟ್ಟಿದ್ದೀರಿ ಓಡಾಡುತ್ತಿದ್ದರೆ ಶಬ್ದವೂ ಬರುತ್ತದೆ.

ಇದು ಸರಿ ಅದೇ ಎತ್ತುಗಳು ಅಲ್ಲೇ ನಿಂತು ಕತ್ತನ್ನು ಅಲ್ಲಾಡಿಸುತ್ತಿದ್ದರೆ ನೀವು ಹೇಗೆ ಅರ್ಥ ಮಾಡಿಕೊಳ್ಳುವಿರಿ ಹೇಗೆ ಕಂಡು ಹಿಡಿಯುತ್ತೀರಿ ಎಂದು ಕೇಳುತ್ತಾನೆ?

ವಯಸ್ಸಾದವರು ಯುವಕನು ಗಮನಿಸಿ ನನ್ನ ಎತ್ತುಗಳು ಯಾವುದೇ ವಿಶ್ವವಿದ್ಯಾಲಯದಲ್ಲಿ ಓದಿಲ್ಲ ಓದಿದ್ದವರು ಮಾತ್ರ ಈ ರೀತಿ ಕೆಲಸ ಮಾಡುತ್ತಾರೆ ಎಂದು ಹೇಳುತ್ತಾರೆ ಯುವಕನಿಗೆ ತಕ್ಕ ಉತ್ತರ ಸಿಗುತ್ತದೆ. ನಾನು ತರ್ಕಬದ್ಧ ಪ್ರಶ್ನೆಯನ್ನು ಕೇಳಿ ಸರಿಯಾದ ಉತ್ತರವನ್ನು ಪಡೆದಿದ್ದೇನೆಯೇ?

ನನ್ನ ಗಂಡ ಯುವಕನಂತೆ ಕಾಣಲಿ

ಒಂದು ಊರಿನಲ್ಲಿ ತಂದೆ- ತಾಯಿಯರ  ಆಸೆಯಂತೆ ಮಗನಿಗೆ ಹೆಣ್ಣನ್ನು ಹುಡುಕಿ ಮದುವೆ ಮಾಡುತ್ತಾರೆ ಮದುವೆ ಆದ ಸ್ವಲ್ಪ ದಿನಗಳಿಂದಲೇ ಅತ್ತೆ ಮಾವನವರಿಗೆ ಸೇವೆ ಮಾಡುವುದಿಲ್ಲ ನಂತರ ಗಂಡನಿಗೂ ಸರಿಯಾಗಿ ನೋಡಿ ಕೊಳ್ಳಲು ಇಷ್ಟಪಡುವುದಿಲ್ಲ.

ಮನೆಯಲ್ಲಿ ಕಿರಿಕಿರಿ ಜಗಳಗಳು ಆರಂಭವಾಗುತ್ತದೆ ಹೆಂಡತಿಗೆ ಬಹಳಷ್ಟು ಸಾರಿ ಹೇಳುತ್ತಾನೆ ನಾವು ತಂದೆ ತಾಯಿಯರಿಗೆ ನೋಡಿಕೊಳ್ಳಬೇಕು ಅವರು ನನಗೆ ಚಿಕ್ಕ ಮಗುವಿನಿಂದ ಸಾಕಿದ್ದಾರೆ ಎಂದು ಗಂಡ ಹೇಳುತ್ತಾನೆ ಹೆಂಡತಿಗೆ ಏನೇ ಹೇಳಿದರು ಅರ್ಥವಾಗುವುದಿಲ್ಲ ಕೊನೆಗೆ ಹೆಂಡತಿ ಹೇಳುತ್ತಾಳೆ.

ನನಗೆ ಬೇರೆ ಇಟ್ಟರೆ ಮಾತ್ರ ನಾನು ಇರುತ್ತೇನೆ ಇಲ್ಲದಿದ್ದರೆ ನಾನು ತವರು ಮನೆಗೆ ಹೋಗುತ್ತೇನೆ ಎಂದು ಹಠ ಮಾಡುತ್ತಾಳೆ ಗಂಡನಾದವನು ತುಂಬಾ ಗೊಂದಲದಲ್ಲಿ ಸಿಲುಕುತ್ತಾನೆ.

ನಂತರ ಹೆಂಡತಿಯ ಕಾಟ ತಡೆಯಲಾರದೆ ಹೆಂಡತಿಗಾಗಿ ಒಂದು ಬೇರೆ ಮನೆ ಮಾಡುತ್ತಾನೆ ಆದರೂ ಹೆಂಡತಿ ಗಂಡನಿಗೆ ಕಿರುಕುಳ ನೀಡುತ್ತಲೇ ಇರುತ್ತಾಳೆ ನಂತರ ಗಂಡನಿಗೆ ಬೇಸರವಾಗಿ ಇನ್ನೊಂದು ಮದುವೆ ಆಗುತ್ತಾನೆ ಆ ಹೆಂಡತಿಯನ್ನು ತನ್ನ ತಂದೆ ತಾಯಿಯ ಮನೆಯಲ್ಲಿಯೇ ಇರಿಸುತ್ತಾನೆ ಕಿರಿಯ ಹೆಂಡತಿಯು ಅತ್ತೆ ಮಾವನಿಗೆ ಹಾಗೂ ಗಂಡನಿಗೆ ಚೆನ್ನಾಗಿ ನೋಡಿಕೊಳ್ಳುತ್ತಿರುತ್ತಾಳೆ.

 ಆಗ ಗಂಡನಿಗೆ ಸ್ವಲ್ಪ ಸಮಾಧಾನವಾಗುತ್ತದೆ ಹೇಗೋ ಬದುಕು ನಡೆಯುತ್ತಿರುತ್ತದೆ ಕೆಲವು ವರ್ಷಗಳ ನಂತರ ಗಂಡನಿಗೆ ಬಿಳಿ ಕೂದಲು ಬರಲು ಆರಂಭಿಸುತ್ತದೆ ಹಿರಿಯ ಹೆಂಡತಿಯ ಮನೆಗೆ ಹೋದಾಗ ನನ್ನ ಗಂಡನು ಇನ್ನಷ್ಟು ಮುದಕನಾಗಿ ಕಾಣಲಿ ಎಂದು ಕಪ್ಪು ಕೂದಲನ್ನು ಕೀಳುತ್ತಿರುತ್ತಾರೆ.

ಅದೇ ಕಿರಿಯ ಹೆಂಡತಿಯ ಮನೆಗೆ ಹೋದಾಗ ನನ್ನ ಗಂಡ ಯುವಕನಂತೆ ಕಾಣಲಿ ಎಂದು ಬಿಳಿ ಕೂದಲನ್ನು ಕೀಳುತ್ತಿರುತ್ತಾಳೆ ಹೀಗೆ ಕೆಲವು ತಿಂಗಳುಗಳ ನಂತರ ಗಂಡನಿಗೆ ತಲೆಯಲ್ಲಿ ಕೂದಲೇ ಇರುವುದಿಲ್ಲ ಬೋಳನಾಗಿ ಕಾಣುತ್ತಿರುತ್ತಾನೆ ಆಗ ಇಬ್ಬರು ಹೆಂಡತಿಯರು ಗಂಡನಿಗೆ ಕೂದಲೆ ಇಲ್ಲವಲ್ಲ ಎಂದು ತಿರಸ್ಕರಿಸಲು ಆರಂಭಿಸುತ್ತಾರೆ ಇದು ನನ್ನ ಹಣೆಬರ ಎಂದು ಗಂಡನು ಬದುಕುತ್ತಾನೆ.

ಪ್ರತಿಧ್ವನಿಯಾಗಿ ಬರುತ್ತದೆ

 

ಒಂದು ಸಾರಿ ಸೂಕ್ಷ್ಮ ಮನಸ್ಸುಳ್ಳ ರಾಜನಾದವನು ತನ್ನ ಊರು ನೋಡಬೇಕೆಂದು ಒಂದು ಸಾರಿ ಮೆರವಣಿಗೆಯನ್ನು ಮಾಡಿಕೊಂಡು ಬರುತ್ತಿರುತ್ತಾನೆ ಹೀಗೆ ಬರುತ್ತಿರಬೇಕಾದರೆ ಒಂದು ಶ್ರೀಗಂಧದ ಅಂಗಡಿ ಕಾಣಿಸುತ್ತದೆ ಶ್ರೀಗಂಧದಲ್ಲಿ ಮಾಡಿದ ಎಲ್ಲಾ ಮೂರ್ತಿಗಳು ವಿಗ್ರಹಗಳು ಸಿಗುವಂಥ ಅಂಗಡಿ ಅಲ್ಲಿ ರಾಜ ಬಂದ ತಕ್ಷಣ ಮಂತ್ರಿಗೆ ಹೇಳುತ್ತಾನೆ.

 ಈ ಅಂಗಡಿಯವನನ್ನು ಒಂದು ವಾರದ ನಂತರ ನೇಣಿಗೆ ಹಾಕಿ ಎಂದನು ಈ ಮಾತನ್ನು ಕೇಳಿದ ಮಂತ್ರಿಗೆ ಗಾಬರಿಯಾಗುತ್ತದೆ ಆ ಅಂಗಡಿಯವನು ಏನೂ ಮಾಡಿಲ್ಲ ಅವನಿಗೆ ಏಕೆ ಈ ಶಿಕ್ಷೆ ಏನು ಇದರ ರಹಸ್ಯ ಎಂದು ಮನಸ್ಸಿನಲ್ಲಿ ಅಂದುಕೊಂಡು ಮಾರನೆಯ ದಿನ ಮಂತ್ರಿಯೂ ಬೇರೆ ವೇಷದಲ್ಲಿ ಹೋಗಿ ಗಂಧದ ಅಂಗಡಿಯವನಿಗೆ ಮಾತನಾಡಿಸುತ್ತಾನೆ.

 ನನಗೆ ಈ ಗಂಧದ ಒಳ್ಳೆಯ ಕೆಲವು ಗೊಂಬೆಗಳು ಬೇಕು ಮತ್ತು ಶ್ರೀಗಂಧ ಬೇಕು ಎಂದು ಕೇಳುತ್ತಾನೆ ಅದಕ್ಕೆ ಅಂಗಡಿಯ ಮಾಲೀಕ ಗಂಧದ ವಸ್ತುಗಳು ಕೊಡುತ್ತಾನೆ ನಂತರ ನಿನ್ನ ವ್ಯಾಪಾರ ಹೇಗಿದೆ ಎಂದು ಕೇಳಿದಾಗ ಅಂಗಡಿಯವನು ಹೇಳುತ್ತಾನೆ ನನ್ನ ವ್ಯಾಪಾರ ಕುಸಿದಿದೆ.

 ಎಲ್ಲರೂ ಬರುತ್ತಾರೆ ನೋಡುತ್ತಾರೆ ಮುಟ್ಟುತ್ತಾರೆ ಮೂಸುತಾರೆ ಚೆನ್ನಾಗಿದೆ ಎಂದು ಹೇಳಿ ಹೋಗುತ್ತಾರೆ ಆದ್ದರಿಂದ ನಾನು ಯೋಚಿಸುತ್ತಿದ್ದೇನೆ ರಾಜನು ಸತ್ತರೆ ಆಗ ನನ್ನ ವ್ಯಾಪಾರ ತುಂಬಾ ಚೆನ್ನಾಗಿ ನಡೆಯುತ್ತದೆ ಎಂದು ಮನಸ್ಸಿನಲ್ಲಿರುವ ಸತ್ಯವನ್ನು ಹೇಳುತ್ತಾನೆ ಆಗ ಮಂತ್ರಿಯು ಅರಿತನು.

 ಮಾಲೀಕನಲ್ಲಿ ನಕಾರಾತ್ಮಕವಾದ ಚಿಂತನೆಯಿದೆ ಇಲ್ಲಿಗೆ ಬಂದ ತಕ್ಷಣ ರಾಜರೂ ಕೂಡ ಈ ನಕಾರಾತ್ಮಕ ಚಿಂತನೆಯಲ್ಲಿಯೇ ಅವರು ಕೂಡ ಹೇಳಿದ್ದು ಸರಿಯೇ ಎಂದು ಮಂತ್ರಿ ಅರಿಯುತ್ತಾನೆ ನಂತರ ಮಂತ್ರಿಯು ಒಂದು ದುಬಾರಿಯಾದ ಗಂಧದ ಮೂರ್ತಿಯನ್ನು ಖರೀದಿ ಮಾಡಿ ನಂತರ ತೆಗೆದುಕೊಂಡು ಹೋಗಿ ರಾಜನಿಗೆ ಗಂಧದ ಅಂಗಡಿಯವನು ಉಡುಗೊರೆಯಾಗಿ ಕೊಟ್ಟಿದ್ದಾನೆ ಎಂದು ಮಂತ್ರಿ ಹೇಳುತ್ತಾನೆ.

ರಾಜನು ಸಂತೋಷಪಟ್ಟು ಮಾಲೀಕನ ಮರಣದಂಡನೆಯನ್ನು ರದ್ದುಗೊಳಿಸುತ್ತಾನೆ ನಂತರ ಹಲವು ಚಿನ್ನದ ನಾಣ್ಯಗಳನ್ನು ಕೊಟ್ಟು ಆ ಶ್ರೀಗಂಧದ ವ್ಯಾಪಾರಿಗೆ ಕೊಟ್ಟು ಕಳಿಸುತ್ತಾನೆ ಆಗ ಶ್ರೀಗಂಧದ ವ್ಯಾಪಾರಿಯು ತುಂಬ ಸಂತೋಷ ಪಡುತ್ತಾನೆ ಸಾಕಷ್ಟು ಹಣ ನನಗೆ ಸಿಕ್ಕಿದೆ ಎಂದು ಸಕಾರಾತ್ಮಕವಾಗಿ ಶ್ರೀಗಂಧದ ವ್ಯಾಪಾರಿಯು ಒಳ್ಳೆಯ ಆಲೋಚನೆ ಮಾಡುತ್ತಾನೆ.

ನಾವು ಏನು ಆಲೋಚನೆ ಮಾಡುತ್ತೇವೆಯೋ ಅದೇ ಆಲೋಚನೆಯೂ ನಮಗೆ ಪ್ರತಿಧ್ವನಿಯಾಗಿ ಬರುತ್ತದೆ ಆದುದರಿಂದ ಒಳ್ಳೆಯ ಆಲೋಚನೆ ಮಾಡೋಣ.

ತಯಾರಾಗಿ ಇರಬೇಕು

 

ಕಾಡಿನಲ್ಲಿ ಒಂದು ಸಾರಿ ಗೇಂಡಾಮೃಗ ತನ್ನ ಕೊಂಬನ್ನು ಸರಿ ಮಾಡಿಕೊಳ್ಳುತ್ತಿತ್ತು ಶಾರ್ಪ್ ಆಗಿ ಇರಬೇಕು ಎಂದು ಅದನ್ನು ಕಲ್ಲಿಗೆ ಉಜ್ಜುತ್ತಾ ತಯಾರಿ ಮಾಡಿಕೊಳ್ಳುತ್ತಿತ್ತು ಇದನ್ನು ನೋಡಿದ ಒಂದು ನರಿ ಹೇಳಿತು.

 ಅಣ್ಣ ಸುತ್ತಮುತ್ತ ಯಾರೂ ಇಲ್ಲ ಯಾವುದೇ ರೀತಿಯ ಹೆದರಿಕೆಯಿಲ್ಲ ಬೇಟೆಗಾರನು ಇಲ್ಲ ಆದರೂ ನೀನು ಯುದ್ಧಕ್ಕೆ ತಯಾರಿ ಮಾಡುವ ರೀತಿಯಲ್ಲಿ ತಯಾರಿ ಮಾಡುತ್ತಿದ್ದೀಯಾ ಎಂದು ಕೇಳಿತು.

ಗೇಂಡಾಮೃಗ ಹೇಳಿತು ಯುದ್ಧ ಬಂದಾಗ ಶಸ್ತ್ರಾಭ್ಯಾಸ ಮಾಡುವುದು ಸರಿಯಲ್ಲ ಯುದ್ಧವಿರಲಿ ಇಲ್ಲದೇ ಇರಲಿ ನಾವು ಅದಕ್ಕೆ ಯಾವಾಗಲೂ ತಯಾರಾಗಿ ಇರಬೇಕು ಯಾವ ಸಮಯದಲ್ಲಿ ಏನು ಆಗುತ್ತದೋ ಯಾರು ತಿಳಿಯರು ಎಂದು ಹೇಳಿತು.

 ನೀನು ಹೇಳಿದ್ದು ನಿನಗೆ ಸರಿ ಎಂದು ನರಿ ಹಾಸ್ಯದಿಂದ ಹೇಳಿತು ಅಷ್ಟರಲ್ಲಿಯೇ ಒಂದು ದೊಡ್ಡ ಪ್ರಾಣಿ ಓಡಿ ಬರುತ್ತಿತ್ತು ಅಂದರೆ ಇದು ಗೇಂಡಾಮೃಗಗೆ ಹೊಂಚುಹಾಕುತ್ತಿತ್ತು ತಕ್ಷಣದಲ್ಲಿ ಗೇಂಡಾಮೃಗವು ಪ್ರಾಣಿಯನ್ನು ತಕ್ಷಣ ಗ್ರಹಿಸಿ ಪ್ರಾಣಿಗೆ ಹೊಡೆಯಿತು.

 ಗೇಂಡಾಮೃಗ ಪಾರಾಯಿತು ಅಷ್ಟರಲ್ಲಿ ನರಿ ಹೆದರಿ ಒಂದು ಪೊದೆಯೊಳಗೆ ಸೇರಿಕೊಂಡಿತು ನಂತರ ಬಂದು ನರಿ ಹೇಳಿತು ನೀನು ಹೇಳಿದ್ದು ಸರಿ ಈ ಮಾತನ್ನು ನಾನು ಕೊನೆಯವರೆಗೂ ಮರೆಯುವುದಿಲ್ಲ ಎಂದು ಹೇಳಿ ಹೊರಟು ಹೋಯಿತು.  ಮುಂದೆ ಬರುವ ಸಮಸ್ಯೆಗೆ ಪೂರ್ವ ತಯಾರಿ ಮಾಡಿಕೊಂಡಿದ್ದೇನೆಯೇ?

Leave a Comment