ಒಬ್ಬ ನೀತಿವಂತ ರಾಜನಿಗೆ ಒಬ್ಬನೇ ಒಬ್ಬ ಮಗ ಇರುತ್ತಾನೆ ರಾಜ್ಯವು ಸುಭಿಕ್ಷವಾಗಿ ಚೆನ್ನಾಗಿ ನಡೆಯುತ್ತಿರುತ್ತದೆ ರಾಜ ರಾಣಿಗೆ ಅಂದರೆ ಯುವರಾಜನ ತಂದೆ ತಾಯಿಗೆ ಆರೋಗ್ಯ ಕ್ಷೀಣಿಸುತ್ತಾ ಹೋಗುತ್ತದೆ ಆಗ ಅದನ್ನು ಅರಿತ ಯುವರಾಜ ವೈದ್ಯರನ್ನೆಲ್ಲ ಕರೆಸಿ ನಮ್ಮ ತಂದೆ ತಾಯಿಗೆ ಏನಾಗಿದೆ ಎಂದು ವಿನಂತಿಸಿ ಕೇಳುತ್ತಾನೆ.
ವೈದ್ಯರೊಬ್ಬರು ಎಲ್ಲವನ್ನೂ ಪರೀಕ್ಷಿಸಿ ನಂತರ ನಿಮ್ಮ ತಂದೆ ತಾಯಿ ಆರೋಗ್ಯ ಸುಧಾರಿಸಬೇಕಾದರೆ ನೀನು ಅರಣ್ಯಕ್ಕೆ ಹೋಗಿ ಕೆಲವು ಆಯುರ್ವೇದದ ಕೆಲವು ಹಸಿರು ಎಲೆಗಳು, ಚಕ್ಕೆ, ಹೂವು ಕೆಲವು ಗಿಡಗಳು ಬೇಕು ಎಂದಾಗ ಯುವರಾಜನು ಯೋಚನಮಾಡತ್ತಾನೆ.
ವೈದ್ಯರೇ ನಾಳೆಯೇ ನಾನು ನಿಮಗೆ ತಂದುಕೊಡುತ್ತೇನೆ ಎಂದು ಒಪ್ಪಿಕೊಳ್ಳುತ್ತಾನೆ ಊರಿನ ಆಚೆ ಬಂದು ಅರಣ್ಯಕ್ಕೆ ಹೋಗಿ ತನಗೆ ಬೇಕಾದ ಎಲ್ಲವನ್ನೂ ತೆಗೆದುಕೊಂಡು ಒಂದು ಚೀಲದಲ್ಲಿ ಹಾಕಿಕೊಂಡು ಬರುತ್ತಿರುತ್ತಾನೆ ಆಗ ಅಷ್ಟರಲ್ಲಿ ಒಂದು ಸುಂದರ ಯುವತಿಯೂ ಕಾಣುತ್ತಾಳೆ.
ಆಗ ಯುವತಿಯನ್ನು ನೋಡಿ ಮನಸೋತು ಯುವರಾಜನ ಮನಸ್ಸಿನಲ್ಲಿ ಒಂದು ವಿಚಾರ ಮೂಡುತ್ತದೆ ನಾನು ಇವಳನ್ನು ಏಕೆ ಮದುವೆಯಾಗಬಾರದು ಈ ಯುವತಿ ಈ ಕಾಡಿನಲ್ಲಿ ಏಕೆ ಇದ್ದಾಳೆ ಎಂದು ಹೋಗಿ ಯುವತಿಯನ್ನು ನೇರವಾಗಿ ಮಾತಾಡಿ ವಿಚಾರಿಸುತ್ತಾನೆ ನನ್ನ ಇಚ್ಛೆ ಮದುವೆಯಾಗ ಬೇಕೆಂದಿದ್ದೇನೆ ಅದಕ್ಕೆ ನಿನ್ನ ಒಪ್ಪಿಗೆ ಏನು ಎಂದಾಗ ಯುವತಿಯೂ ಹೇಳುತ್ತಾಳೆ.
ನನ್ನ ತಂದೆಯನ್ನು ಕೇಳಿ ಎಂದಾಗ ತಂದೆಯನ್ನು ಭೇಟಿಯಾಗುತ್ತಾನೆ ಇರುವ ಎಲ್ಲ ವಿಚಾರವನ್ನು ತಿಳಿಸುತ್ತಾನೆ ಆಗ ಯುವತಿಯ ತಂದೆಯೂ ನೋಡಿ ಯುವರಾಜನನ್ನು ಈ ಸಂಬಂಧ ನನಗೆ ನಿಜಕ್ಕೂ ಅದೃಷ್ಟದಂತೆ ಆದರೆ ನನ್ನದು ಒಂದು (ಕಂಡಿಷನ್) ಷರತ್ತು ಇದೆ ನಾನು ಈ ಅರಣ್ಯದಲ್ಲಿಯೇ ಇರುವುದರಿಂದ ನಾನು ನಿಮ್ಮ ಅರಮನೆಗೆ ಬರಲು ಸಾಧ್ಯವಿಲ್ಲ.
ನೀವೇ ಇಲ್ಲೇ ಮದುವೆಯಾಗಿದ್ದು ಸುಖವಾಗಿ ಇರಬಹುದು ಎಂದು ಹೇಳುತ್ತಾನೆ ಆಗ ಯುವರಾಜನು ಒಪ್ಪಿ ಮದುವೆಯಾಗಿ ಸುಖವಾಗಿ ಇರುತ್ತಾನೆ. ಈಗ ಹೇಳಿ ರಾಜ ಮಾಡಿದ್ದು ಸರಿಯೋ? ತಪ್ಪೋ ತಪ್ಪು ಎನ್ನುವುದಾದರೆ ನಾವು ಕೂಡ ಕೆಲಸದ ಮೇಲೆ ಊರಿಗೆ ಹೋಗಿರುತ್ತೇವ ಅಥವಾ ಓದಲಿಕ್ಕೆ ಹೋಗಿರುತ್ತೇವೆ ಆದರೆ ನಮ್ಮ ಗುರಿಯನ್ನು ಮರೆತು ಬೇರೆಯ ಒಂದು ಚಟಗಳಲ್ಲಿ ಅಥವಾ ಇನ್ನೊಂದರಲ್ಲಿ ಬಲಿಯಾಗುತ್ತೇವೆ ಅಲ್ಲವೇ ಮೊದಲು ನಮ್ಮ ಉದ್ದೇಶ ನಮ್ಮ ಗುರಿಯನ್ನು ಪೂರ್ಣಗೊಳಿಸೋಣ.
ಆಶೀರ್ವಾದ ಇದ್ದರೆ ಸಾಕು
ಒಂದು ಹಳ್ಳಿಯ ಆಶ್ರಮದಲ್ಲಿ ಬಾಬಾ ಅವರು ಇದ್ದರು ಅವರಿಗೆ ಹಲವಾರು ಶಿಷ್ಯರು ಎಲ್ಲಾ ಶಿಷ್ಯರುಗಳಲ್ಲಿ ಇಬ್ಬರು ಮಾತ್ರ ಒಂದೇ ಸಾರಿಗೆ ಬಂದು ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿ ಮನೆಗೆ ಹೋಗಲಿಕ್ಕೆ ಸಿದ್ದರಾದರು ಆಗ ಬಾಬಾ ಅವರು ಇವರನ್ನು ಬರಮಾಡಿಕೊಂಡರು.
ಮೊದಲನೆಯವನನ್ನು ನಿನ್ನ ಮುಂದಿನ ಭವಿಷ್ಯವೇನು ಚಿಂತನೆಗಳೇನು ಎಂದು ವಿವರವಾಗಿ ಕೇಳಿದರು ನಾನು ಯಶಸ್ಸನ್ನು ಇಚ್ಛಿಸುತ್ತೇನೆ ಮತ್ತೆ ಸಮಾಜದಲ್ಲಿ ನನಗೆ ನನ್ನದೇ ಆದ ಗೌರವ ಸ್ಥಾನ ಅಧಿಕಾರ ಗಳಿಸಿಕೊಳ್ಳಬೇಕು ಎಂದು ಹೇಳುತ್ತಾನೆ.
ಎರಡನೆಯವನು ಬಾಬಾ ಅವರೇ ನಾನು ನನ್ನ ಯಶಸ್ಸು ಮತ್ತು ಗುರಿಯನ್ನು ನನ್ನ ಸ್ವಂತ ಪರಿಶ್ರಮದಿಂದ ಸಾಧನೆ ಮಾಡಿ ನನ್ನ ಯಶಸ್ಸು ನಾನೇ ಪಡೆಯುತ್ತೇನೆ. ಬರೀ ನನಗೆ ನಿಮ್ಮ ಆಶೀರ್ವಾದ ಇದ್ದರೆ ಸಾಕು ಎಂದು ಕೇಳಿಕೊಂಡನು ಆಗ ಬಾಬಾ ಅವರು ಮೊದಲನೇ ಯುವಕನಿಗೆ ಹಲವಾರು ಚಿನ್ನದ ನಾಣ್ಯಗಳನ್ನು ನೀಡಿದರು.
ಎರಡನೆಯವನಿಗೆ ಬರೀ ಒಂದು ಬೆಳ್ಳಿಯ ನಾಣ್ಯವನ್ನು ನೀಡಿದರು ನಾಣ್ಯವನ್ನು ಪಡೆದು ಇಬ್ಬರೂ ಸಂತೋಷದಿಂದ ಹೊರಬಂದರು ಇದನ್ನು ನೋಡುತ್ತಿದ್ದ ಹಿರಿಯ ಶಿಷ್ಯನಿಗೆ ಗಲಿಬಿಲಿಯಾಯಿತು ಬಾಬಾ ಅವರನ್ನು ನಮಸ್ಕರಿಸಿ ಬಾಬಾ ಅವರೇ ನನಗೆ ಒಂದು ಸಂದೇಹವಿದೆ ಒಬ್ಬನಿಗೆ ಬೆಳ್ಳಿ ನಾಣ್ಯ ಇನ್ನೊಬ್ಬನಿಗೆ ಚಿನ್ನದ ಹಲವಾರು ನಾಣ್ಯಗಳನ್ನು ಕೊಟ್ಟಿದ್ದೀರಿ ಇದರ ರಹಸ್ಯವೇನು ಎಂದು ಕೇಳಿದನು.
ಗುರುಗಳು ಮುಗುಳ್ ನಗುತ್ತಾ ಹೇಳಿದರು ನಿನಗೆ ಗೊತ್ತಿರುವ ಹಾಗೆ ಮೊದಲನೆಯವನಿಗೆ ಯಶಸ್ಸು, ಅಧಿಕಾರ, ಗೌರವಬೇಕು ತನ್ನ ಸಾಧನೆಗೆ ಬೇರೆಯವರನ್ನು ಅವಲಂಬಿತನಾಗಿ ಬದುಕುವವನು ಹೀಗಾಗಿ ಅವನಿಗೆ ಚಿನ್ನದ ನಾಣ್ಯಗಳನ್ನು ಕೊಟ್ಟೆ. ಎರಡನೆಯವನು ತನ್ನ ಸ್ವಂತ ಪರಿಶ್ರಮದಿಂದ ಯಶಸ್ಸು, ಕೀರ್ತಿ, ಸಂಪಾದನೆ ಮಾಡುತ್ತೇನೆ ಎಂದು ದೃಢವಾಗಿ ಹೇಳಿದ್ದಾನೆ.
ಎರಡನೆಯವನಿಗೆ ಹಣದ ಅವಶ್ಯಕತೆ ಇಲ್ಲವೇ ಇಲ್ಲ ಅವನು ಸ್ವಂತವಾಗಿ ಏನನ್ನೂ ಬೇಕಾದರೂ ಮಾಡುವ ಆತ್ಮವಿಶ್ವಾಸ, ಏನನ್ನು ಬೇಕಾದರೂ ಮಾಡುವ ಶಕ್ತಿ ಇದೆ ಬರೀ ಅವನ ಖರ್ಚಿಗೆ ಮಾತ್ರ ನಾನು ನೀಡಿದೆ ಎಂದರು ನಮ್ಮ ಭವಿಷ್ಯ ನಮ್ಮ ಕೈಯಲ್ಲಿ ಇದೆ ಹೇಗೆ ಬೇಕಾದರೂ ರೂಪಿಸಿಕೊಳ್ಳಬಹುದಾಗಿದೆ.
ಏನಿದು ಮೂರ್ಖತನದ ಪ್ರಶ್ನೆ
ಒಬ್ಬ ಕುರುಪಿ ರಾಜನಿದ್ದನು ಅವನಿಗೆ ಆಸೆಗಿಂತ ದುರಾಸೆ ಕ್ರೌರ್ಯವೂ ಹೆಚ್ಚಾಗಿತ್ತು ಮತ್ತೆ ದೇಶವೇ ನನ್ನ ಅಧೀನದಲ್ಲಿ ಇರಬೇಕೆಂದು ದಯೆ ಇಲ್ಲದೆ ತಪ್ಪು ಮಾಡಿದವರು ನಿರ್ದಾಕ್ಷಣವಾಗಿ ಕೊಲ್ಲುತ್ತಿದ್ದನು.
ಈ ವಿಷಯ ತಿಳಿದ ಬಾಬಾ ಅವರು ರಾಜನನ್ನು ಒಳ್ಳೆಯ ದಾರಿಗೆ ತರಬೇಕೆಂದು ನಿರ್ಧರಿಸಿ ರಾಜನ ಆಸ್ನಾನಕ್ಕೆ ಹೋಗಿ ವಿಶ್ವದಲ್ಲಿರುವ ರಾಜನಿಗೆ ಜಯವಾಗಲಿ ಎಂದು ಬಾಬಾ ಅವರು ಜೋರಾಗಿ ಮೂರು ಸಾರಿ ಹೇಳಿದರು. ಮಹಾರಾಜನು ಗರ್ವದಿಂದ ಏನು ಬೇಕು ಕೇಳಿ ಎಂದು ಹೇಳಿದಾಗ ನನಗೆ ಚಿಕ್ಕ ಮೂರು ಕೋರಿಕೆಗಳನ್ನು ಪೂರೈಸಿ ಎಂದರು.
ರಾಜಾ ನಗುತ್ತಾ ಮೂರು ಏನು ಎಷ್ಟು ಬೇಕೋ ಅಷ್ಟು ಕೇಳಿ ನಾನು ಪೂರೈಸುತ್ತೇನೆ ಎಂದು ಅಹಂಕಾರದ ದಿಂದ ಹೇಳಿದನು ತಾವು ತಂದಿದ್ದ ಒಂದು ದೊಡ್ಡದಾದ ಚಾಪೆಯನ್ನು ಹಾಸಿ ಈ ಚಾಪೆ ಎಷ್ಟು ಪೂರ್ತಿಯಾಗಿ ಮಲಗಿಕೊಳ್ಳಿ ಸ್ವಲ್ಪವೂ ಜಾಗ ಬಿಡದಂತೆ ಎಂದರು.
ಆಗ ರಾಜನು ಇಷ್ಟು ದೊಡ್ಡ ಚಾಪೆ ನಾನು ಹೇಗೆ ಮಲಗಲಿ ಮಲಗಲು ಸಾಧ್ಯವಿಲ್ಲ ಎಂದನು ಒಂದು ದೊಡ್ಡ ಪಾತ್ರೆಯನ್ನು ತಂದು ರಾಜನ ಮುಂದಿಟ್ಟು ಅದರಲ್ಲಿ ಒಳ್ಳೆಯ ಎಲ್ಲಾ ರೀತಿಯ ಭೋಜನಗಳನ್ನು ಇಟ್ಟು ನೀವು ಒಬ್ಬರೇ ತಿಂದು ಸಂತೃಪ್ತರಾಗಬೇಕು ಎಂದು ಕೋರಿಕೆ ಇಟ್ಟರು ಆಗ ರಾಜನು ನಾನೊಬ್ಬನೇ ಹೇಗೆ ತಿನ್ನುವುದು ನಾನು ರಾಕ್ಷಸನೆ ಎಂದನು.
ಮೂರನೆಯದು ಮಣ್ಣಿನ ಮಡಿಕೆಯನ್ನು ಪುಡಿಪುಡಿ ಮಾಡಿ ಎಂದನು ರಾಜ ತನ್ನ ಶೌರ್ಯವನ್ನು ತೋರಿಸಿ ಮಡಕೆಯನ್ನು ಪುಡಿಪುಡಿ ಮಾಡಿದನು ಆಗ ಬಾಬಾ ಅವರು ವಿನಮ್ರವಾಗಿ ಪುಡಿ ಪುಡಿ ಮಾಡಿದ ಮಡಿಕೆಯನ್ನು ಮೊದಲಿನಂತೆಯೇ ಜೋಡಿಸಿ ಎಂದು ಹೇಳಿದರು.
ರಾಜನಿಗೆ ಕೋಪ ಬಂದು ಏನಿದು ಮೂರ್ಖತನದ ಪ್ರಶ್ನೆ ನಿಮ್ಮ ತಲೆ ಕೆಟ್ಟಿದೆಯೇ ಒಡೆದು ಹೋಗಿರುವ ಚೂರು ಚೂರಾಗಿರುವ ಮಡಕೆ ಹೇಗೆ ಮಡಿಕೆಯಾಗುತ್ತದೆ ಎಂದು ರಾಜನು ಕೇಳಿದನು. ಆಗ ಬಾಬಾ ಅವರು ಇಡೀ ವಿಶ್ವಕ್ಕೆ ನೀವೊಬ್ಬರೇ ರಾಜನಾಗಬೇಕೆಂದು ಯೋಚಿಸಿದಿರಿ ಇದು ದುರಾಸೆ ಅಲ್ಲವೇ ಎಲ್ಲವೂ ನಿಮ್ಮಿಂದಲೇ ಸಾಧ್ಯವಾಗುತ್ತದೆಯೇ ಎಂದು ಪ್ರಶ್ನಿಸಿದರು ಆಗ ರಾಜನಿಗೆ ಮನವರಿಕೆ ಆಯಿತು.
ಸಾಧಿಸಿದರೆ ಗುರಿ ತಲುಪುತ್ತೇವೆ
ಒಂದು ಆಶ್ರಮದಲ್ಲಿ ಸಹನುಶೀಲ ಗುರುಗಳು ಇದ್ದರು ಅವರು ಏನೇ ಪ್ರಶ್ನೆ ಕೇಳಿದರೂ ಅದಕ್ಕೆ ಸರಿಯಾದ ಉದಾಹರಣೆ ಕೊಟ್ಟು ಹೇಳುತ್ತಿದ್ದರು ಹಾಗಾಗಿ ಒಬ್ಬ ತಾಳ್ಮೆ ಇಲ್ಲದ ಯುವಕ ಗುರುಗಳ ಹತ್ತಿರ ಹೋಗಿ ಸಲಹೆ ಕೇಳಬೇಕೆಂದು ಹೋದನು ಆಗ ಅಲ್ಲಿ ಹೆಚ್ಚು ಕಡಿಮೆ ಎಂಟು ಹತ್ತು ಜನರು ಸಾಲಾಗಿ ಕಾಯುತ್ತಿದ್ದರು.
ಗುರುಗಳು ಒಬ್ಬರನ್ನು ಮಾತ್ರ ಮಾತನಾಡಿಸಿದ ನಂತರ ಮತ್ತೊಬ್ಬರಿಗೆ ಒಬ್ಬರಾದ ನಂತರ ಒಬ್ಬರನ್ನು ಮಾತನಾಡಿಸಿ ಕಳಿಸುತ್ತಿದ್ದರು ಈ ಯುವಕನಿಗೆ ಕಾಯಲು ತಾಳ್ಮೆ ಇಲ್ಲ ನಾಲೈದು ಸಾರಿ ಹೋಗುತ್ತಿದ್ದಾನೆ ನೋಡುತ್ತಿದ್ದಾನೆ ಬರುತ್ತಿದ್ದಾನೆ ಕಾದು ಕಾದು ಯಾವಾಗ ನಾನು ಗುರುಗಳನ್ನು ಕಾಣುತ್ತೇನೆ ಎಂಬ ತವಕ ತಾಳ್ಮೆ ಸಹನೆ ಇಲ್ಲವೇ ಇಲ್ಲ ಎನ್ನಬಹುದು ಕೊನೆಗೆ ಇವನ ಸರದಿ ಬರುತ್ತದೆ.
ನಂತರ ಹೋಗಿ ಗುರುಗಳನ್ನು ನೋಡಿ ನಮಸ್ಕರಿಸಿ ಕೇಳುತ್ತಾನೆ ಗುರುಗಳೇ ನನ್ನನ್ನು ದಯಮಾಡಿ ಮಾರ್ಗದರ್ಶನ ನೀಡಿ ನನ್ನ ಪ್ರಮುಖ ಸಮಸ್ಯೆ ಏನೆಂದರೆ ನಾನು ಬೇಕಾದಷ್ಟು ಕೆಲಸಗಳನ್ನು ಮಾಡುತ್ತೇನೆ ಆದರೆ ಯಾವುದೂ ಪೂರ್ಣವಾಗದೆ ಇರುವುದೇ ನನಗೆ ಸಮಸ್ಯೆಯಾಗಿದೆ ಯಾವುದೇ ಸಾಧನೆಯನ್ನು ನಾನು ಪೂರ್ಣಗೊಳಿಸಲು ಆಗುತ್ತಿಲ್ಲ ಎಂದು ಕೇಳಿದನು.
ಗುರುಗಳು ಆಶ್ರಮದ ಆಚೆ ಬಂದು ತಮ್ಮ ಹೊಲದಲ್ಲಿ ನೀರು ಬರುತ್ತಿಲ್ಲ ಅದಕ್ಕಾಗಿ ಐದಾರು ಕಡೆ ಬಾವಿಯನ್ನು ತೋಡಿದ್ದಾರೆ ಒಂದು ಕಡೆ ಹತ್ತು ಅಡಿ ಇನ್ನೊಂದು ಕಡೆ ಇಪ್ಪತ್ತು ಅಡಿ ಮತ್ತೊಂದು ಕಡೆ ಮೂವತ್ತು ಹೀಗೆ ಸ್ವಲ್ಪ ಸ್ವಲ್ಪ ಅಗೆದು ಬಿಟ್ಟಿದ್ದಾರೆ.
ಇದನ್ನು ನೋಡಿದ ಯುವಕ ಏನು ಗುರುಗಳೇ ನೀವು ಬಲ್ಲವರು ತಿಳಿದವರು, ನೀವು ಒಂದೇ ಕಡೆ ಐವತ್ತು ಅಥವಾ ನೂರು ಅಡಿ ಆಗೆದಿದ್ದರೆ ನೀರು ಬಂದೇ ಬರುತ್ತಿತ್ತು ಎಂದು ಹೇಳಿದನು ಆಗ ಗುರುಗಳು ಶಭಾಷ್ ಎಂದರು ಹಾಗೆ ನಾವು ಹೆಚ್ಚು ಹೆಚ್ಚು ಬೇಕಾದಷ್ಟು ಹಲವಾರು ಗುರಿಗಳನ್ನು ಇಟ್ಟುಕೊಂಡರೆ ನಾವು ಅದರಲ್ಲಿ ಸಫಲವಾಗುವುದಿಲ್ಲ.
ಒಂದೇ ಕಡೆ ಒಂದೇ ಹಳ್ಳದಲ್ಲಿ ಅಗೆಯುತ್ತಾ ಹೋದರೆ ನೀರು ಖಂಡಿತ ಬಂದೇ ಬರುತ್ತದೆ ಹಾಗೆಯೇ ಸಾಧನೆಯು ಅಷ್ಟೆ ಎಂದು ತಿಳಿಸುತ್ತಾರೆ. ನಾವು ಹಲವಾರು ಗುರಿಗಳನ್ನು ಇಟ್ಟುಕೊಳ್ಳುವುದಕ್ಕಿಂತ ಒಂದೇ ಒಂದು ಗುರಿಯನ್ನು ಇಟ್ಟುಕೊಂಡು ಅದನ್ನು ಸಾಧಿಸಿದರೆ ಗುರಿ ತಲುಪುತ್ತೇವೆ ನಂತರ ಮತ್ತೆ ಬೇರೆ ಗುರಿ ಪೂರ್ಣಗೊಳಿಸೋಣ.
ತಡೆಯಲು ಸಾಧ್ಯವಿಲ್ಲ
ಸಾಮಾನ್ಯವಾಗಿ ಮಿಂಚುಹುಳುಗಳು ಬರುವುದು ಚಳಿಗಾಲದಲ್ಲಿ ಚಳಿಗಾಲ ಬಂದಾಗ ಚಳಿಗಾಗಿ ಎಲ್ಲರೂ ನಡುಗುವದು ಸಹಜ ಅದೇ ರೀತಿ ಕೋತಿಗಳು ಕೂಡ ಚಳಿಯಿಂದ ತುಂಬಾ ನಡುಗುತ್ತವೆ ಕೋತಿಗಳು ಚಳಿಯಿಂದ ಮುದುರಿಕೊಂಡು ಕುಳಿತಿರಬೇಕಾದರೆ ಮಿಂಚುಹುಳುಗಳು ಒಂದೊಂದಾಗಿ ಮಿಂಚುತ್ತಾ ಬರುತ್ತವೆ.
ಮಿಂಚು ಹುಳುಗಳು ಹಾರಾಡುವುದನ್ನು ನೋಡಿದ ಕೋತಿಗಳು ಮಿಂಚು ಹುಳುಗಳನ್ನು ಬೆಂಕಿ ಎಂದು ತಿಳಿದು ಅದಕ್ಕೆ ಬಾಯಿಯಿಂದ ಉಫ್ ಎಂದು ಊದುತ್ತಿರುತ್ತವೆ ನಂತರ ಅದಕ್ಕೆ ಕೈಯಿಂದ ಹೊಡೆಯುತ್ತವೆ ಇದರಿಂದಾಗಿ ಮಿಂಚುಹುಳುಗಳು ಸಾಯುತ್ತಿರುತ್ತವೆ ಇದನ್ನು ಗಮನಿಸಿದ ಗಿಳಿಗೆ ತುಂಬಾ ಬೇಸರವಾಗುತ್ತದೆ ಮತ್ತೆ ಹುಳುಗಳ ಮೇಲೆ ಅನುಕಂಪ ಹುಟ್ಟುತ್ತದೆ.
ಗಿಳಿಯು ಹೋಗಿ ಕೋತಿಗಳಿಗೆ ಹೇಳುತ್ತದೆ ಮಿಂಚುಹುಳುಗಳಿಗೆ ನೀವು ಸಾಯಿಸಬೇಡಿ ಅದರ ಜೀವ ಹೋಗುತ್ತದೆ ಎಂದು ಸಮಾಧಾನದಿಂದ ಹೇಳುತ್ತದೆ ಕೋತಿಗಳು ಎಂದಾದರೂ ಮಾತು ಕೇಳುತ್ತೇವೆಯೇ ಅವು ತಾವು ಮಾಡುತ್ತಿರುವುದೇ ಸರಿ ಎಂದು ಅದರಂತೆ ಅವು ಸ್ವಲ್ಪ ಹೊತ್ತು ಸುಮ್ಮನಿದ್ದು ಮತ್ತೆ ಅದೇ ರೀತಿ ಮುಂದುವರಿಸುತ್ತಿರುತ್ತವೆ.
ಗಿಳಿಯು ಬಹಳಷ್ಟು ಸಾರಿ ಹೇಳುತ್ತದೆ ಏಕೆಂದರೆ ಪ್ರಾಣ ರಕ್ಷಣೆ ಮಾಡುವುದು ನನ್ನ ಧರ್ಮವೆಂದು ತಿಳಿದಿರುತ್ತದೆ ಆದರೆ ಕೋತಿಗಳಿಗೆ ಕೇಳಿ ಕೇಳಿ ಬೇಸತ್ತು ಕೋತಿಗಳು ಒಂದು ನಿರ್ಧಾರಕ್ಕೆ ಬರುತ್ತವೆ ಗಿಳಿಗೆ ನಯವಾಗಿ ವಿನಮ್ರವಾಗಿ ಹತ್ತಿರಕ್ಕೆ ಕರೆದು ಕತ್ತು ತಿರುಗಿಸಿ ಒಂದೇ ಕ್ಷಣಕ್ಕೆ ಸಾಯಿಸಿ ಬಿಡುತ್ತದೆ.
ಕೆಲವೊಂದು ಅನ್ಯಾಯಗಳು ಆಕ್ರಮಗಳು ಮೋಸ ವಂಚನೆಗಳು ನಡೆಯುತ್ತವೆ ಅದನ್ನು ಒಂದು ಹಂತದವರೆಗೆ ಮಾತ್ರ ನಾವು ತಡೆಯಬಹುದಾಗಿದೆ ಕೆಲವೊಂದು ನಾವು ತಡೆಯಲು ಸಾಧ್ಯವಿಲ್ಲ ನಾವೇನಾದರೂ ತಡೆಯಲು ಹೋದರೆ ನಮಗೆ ತೊಂದರೆ ಆಗುತ್ತದೆ ಎಚ್ಚರಿಕೆಯಿಂದ ಇರೋಣ.