ಶಕ್ತಿ ಸಾಮರ್ಥ್ಯವನ್ನೂ ಹೆಚ್ಚಿಸಿಕೊಂಡರೆ

ಒಬ್ಬ ಮಾಲೀಕ ಇರುತ್ತಾನೆ ಅವನ ಹತ್ತಿರ ಹೋಗಿ ಯಾರಾದರೂ ಕೆಲಸ ಕೇಳಿದರೆ ಕೆಲಸ ಕೊಡುತ್ತಾನೆ ಒಬ್ಬ ಬಂದು ನನಗೆ ಕೆಲಸ ಕೊಡಿ ಎಂದು ಕೇಳುತ್ತಾನೆ ಮಾಲಿಕಾ ಎಷ್ಟು ಸಂಬಳ ಬೇಕು ಎಂದಾಗ ಅವನು ನನಗೆ ಹತ್ತು ಸಾವಿರ ಸಂಬಳ ಕೊಡಿ ಎಂದು ಕೇಳುತ್ತಾನೆ.

  ಅವನಿಗೆ ಸಣ್ಣಪುಟ್ಟ ಕೆಲಸಗಳು ಅಂದರೆ ಕಂಪನಿಯ ಕೆಲವು ಕೊಠಡಿಗಳು ಸ್ವಚ್ಛ ಮಾಡುವುದು ಅವನ ಕೆಲಸ ಇನ್ನೊಬ್ಬ ಬಂದು ನನಗೆ ಕೆಲಸ ಬೇಕು ಎಂದು ಕೇಳಿದಾಗ ಮಾಲೀಕ ನಿನಗೆಷ್ಟು ಸಂಬಂಳ ಬೇಕು ಎಂದಾಗ ಅವನು ಇಪ್ಪತ್ತೈದು ಸಾವಿರ (25,000) ಎಂದು ಕೇಳುತ್ತಾನೆ.

 ಅವನಿಗೆ ನೀನು ಎಲ್ಲರು ಕೆಲಸವನ್ನು ಮಾಡುತ್ತಿದ್ದಾರೆ ಅವರ ಮೇಲ್ವಿಚಾರಕ ಎಂದು ಕೆಲಸವನ್ನು ವಹಿಸುತ್ತಾನೆ ಹಾಗೆ ಮೂರನೆಯವನು ಬಂದು ಕೆಲಸ ಕೇಳುತ್ತಾನೆ ನಿನಗೆಷ್ಟು ಸಂಬಳ ಬೇಕು ಎಂದಾಗ ಅವನು ಐವತ್ತು ಸಾವಿರೂ ಕೊಡಿ ಎಂದು ಕೇಳುತ್ತಾನೆ.

 ಆಗ ಅವನಿಗೆ ಆ ಕಂಪೆನಿಯ ಮ್ಯಾನೇಜರ್ ಆಗಿ ನೇಮಕ ಮಾಡುತ್ತಾನೆ. ಒಂದು ತಿಂಗಳು ಆದ ನಂತರ ಎಲ್ಲರಿಗೂ ಸಂಬಳ ಕೊಡುತ್ತಾನೆ ಮೊದಲನೆಯವನಿಗೆ ಹತ್ತುಸಾವಿರ ಎರಡನೆಯವನಿಗೆ ಇಪ್ಪತ್ತೈದು ಸಾವಿರ ಮೂರನೆಯವನಿಗೆ ಐವತ್ತು ಸಾವಿರ ಆಗ ಮೊದಲನೇ ವ್ಯಕ್ತಿ ಬಂದು ಕೇಳುತ್ತಾನೆ.

 ಮಾಲಿಕರೇ ನನಗೆ ನೀವು ಹತ್ತು ಸಾವಿರ ಸಂಬಳ ಕೊಟ್ಟಿದ್ದೀರಿ ಅವನಿಗೆ ಮಾತ್ರ ಐವತ್ತು ಸಾವಿರ ಕೊಟ್ಟಿದ್ದೀರಿ ಏಕೆ ತಾರತಮ್ಯ ಎಂದು ಕೇಳುತ್ತಾನೆ ಆಗ ಮಾಲೀಕ ಹೇಳುತ್ತಾನೆ ನಿನ್ನ ಸಂಬಳ ನೀನೆ ನಿರ್ಧರಿಸಿಕೊಂಡು ಬಿಟ್ಟಿದ್ದೀಯಾ.

 ನೀನು ಎಷ್ಟು ಕೆಲಸ ಮಾಡಬಲ್ಲೆನೂ ನಿನಗೆ ಎಷ್ಟು ಶಕ್ತಿ ಸಾಮರ್ಥ್ಯ ಇದೆಯೋ ಅಷ್ಟು ಸಂಬಳವನ್ನು ಕೇಳಿದ್ದೀಯಾ ನಿನ್ನ ಶಕ್ತಿ ಸಾಮರ್ಥ್ಯವನ್ನೂ ಹೆಚ್ಚಿಸಿಕೊಂಡರೆ ನೀನು ಕೂಡ ಅದೇ ರೀತಿ ಸಂಬಳ ಪಡೆಯಬಹುದು ಎಂದು ಹೇಳುತ್ತಾನೆ.

ಎಲ್ಲಾ ಮನುಷ್ಯರು ಮನುಷ್ಯರೇ ಆದರೆ ಕೆಲವರು ಹರಳುಗಳು ಕೆಲವರು ಕಲ್ಲುಗಳು ಅದೇ ರೀತಿ ಕಲ್ಲಿಗೆ ಬೇರೆ ಬೆಲೆ ಹರಳುಗಳಿಗೆ ಮುತ್ತು ಮಾಣಿಕ್ಯ ವಜ್ರಕ್ಕೆ ಬೆಲೆ ಹೆಚ್ಚು ಕಡಿಮೆ ಇದೆ ಎಂದು ಹೇಳಿದರು ನನ್ನನ್ನು ನಾನು ಸ್ವಯಂ ವಿಶ್ಲೇಷಣೆ ಮಾಡಿಕೊಂಡು ನನ್ನಲ್ಲಿ ಹುದುಗಿರುವ ಕೌಶಲ್ಯಗಳನ್ನು ಅರಿತು ನನ್ನ ಬೆಲೆಯನ್ನು ನಾನೇ ಹೆಚ್ಚಿಸಿಕೊಳ್ಳೋಣ.

  ಡಿಕ್ಕಿ ಹೊಡೆದೇ ಬಿಡುತ್ತಾನೆ

ಒಬ್ಬ ಕುರುಡ ಇನ್ನೊಬ್ಬ ಕುಂಟ ಇವರು ಇಬ್ಬರೂ ಆತ್ಮೀಯ ಸ್ನೇಹಿತರು ಒಂದು ಸಾರಿ ಕುರುಡ ಕುಂಟನ ಮನೆಗೆ ಹೋಗುತ್ತಾನೆ ತಮ್ಮ ಕಷ್ಟ ಸುಖವನ್ನು ವಿನಿಮಯ ಮಾಡಿಕೊಳ್ಳುತ್ತಾರೆ ಸಮಯ ಕಳೆಯುವುದು ತಿಳಿಯುವುದೇ ಇಲ್ಲ ಸಂಜೆಯಾಗುತ್ತದೆ ಸಂಜೆ ಯಾಗುತ್ತಿದ್ದಂತೆಯೇ ಮನೆಗೆ ಹೋಗಲು ಅವಸರದಿಂದ ಹೊರಡುತ್ತಾನೆ ಆಗ ಕುರುಡನಾದವನು ನನಗೆ ಲಾಟೀನು ಬೇಕು ದಾರಿಯಲ್ಲಿ ಕತ್ತಲೆ ಇದೆ ಎಂದು ಹೇಳುತ್ತಾನೆ.

 ಅದಕ್ಕೆ ಕುಂಟ ಹೇಳುತ್ತಾನೆ ನಿನಗೆ ಲ್ಯಾಟಿನ್ ಏಕೆ ಬೇಕು ನಿನಗೆ ಕಣ್ಣು ಕಾಣುವುದಿಲ್ಲ ಎಂದು ಹೇಳಿದ ಅದಕ್ಕೆ ಕುರುಡ ಹೇಳುತ್ತಾನೆ ನನಗೇನೋ ಕಣ್ಣು ಕಾಣುವುದಿಲ್ಲ ನಿಜ ಆದರೆ ಇತರರು ನನಗೆ ಬಂದು ಡಿಕ್ಕಿ ಹೊಡೆಯಬಾರದು ಎಂದನು ಆಗ ಕುಂಟನು ಸ್ನೇಹಿತ  ಹೇಳುವುದರಲ್ಲಿ ಸತ್ಯವಿದೆ ಎಂದು ಹೇಳಿದನು. ಲ್ಯಾಟಿನನ್ನು ಹುಡುಕಿಕೊಡುತ್ತಾನೆ.

 ನಂತರ ಕುರುಡನು ಲ್ಯಾಟಿನನ್ನು ತೆಗೆದುಕೊಂಡು ಹೋಗುತ್ತಿರುತ್ತಾನೆ ದಾರಿಯಲ್ಲಿ ಹೋಗುತ್ತಿರಬೇಕಾದರೆ ಬೇರೆಯವನೋಬ್ಬ ಬಂದು ಕುರುಡನಿಗೆ ಡಿಕ್ಕಿ ಹೊಡೆದೇ ಬಿಡುತ್ತಾನೆ ಆಗ ಕುರುಡ ಕೇಳುತ್ತಾನೆ ನಾನು ಹುಟ್ಟುಕುರುಡ ನನಗಂತೂ ಕಣ್ಣು ಕಾಣುವುದಿಲ್ಲ.

 ನಾನು ಲಾಟೀನು ಹಿಡಿದಿದ್ದರು ನೀನು ಬಂದು ಡಿಕ್ಕಿ ಹೊಡೆದಿದ್ದೀಯಾ ನಿನಗೆ ಕಣ್ಣು ಕಾಣುದಿಲ್ಲವೇ ಎಂದು ಸ್ವಲ್ಪ ಗದರಿಸಿ ಹೇಳಿದ ಅದಕ್ಕೆ ಆಗ ಡಿಕ್ಕಿ ಹೊಡೆದವನು ವಿನಮ್ರವಾಗಿ ನೀವು ಲ್ಯಾಟಿನನ್ನು ಹಿಡಿದಿದ್ದೀರಿ ಸರಿ ಆದರೆ ಅದರಲ್ಲಿ ದೀಪವೇ ಹಚ್ಚಿ ಇಲ್ಲವಲ್ಲ ನನಗೆ ಹೇಗೆ ಗೊತ್ತಾಗುತ್ತದೆ ಎಂದು ಕೇಳಿದನು.

 ಆಗ ಕುರುಡ ಸುಮ್ಮನಾದನು ಇಂತಹ ಪರಿಸ್ಥಿತಿಗಳು ನಾವು ಎಲ್ಲೆಲ್ಲೂ ನೋಡುತ್ತಿದ್ದೇವೆ ಲ್ಯಾಟಿನ್ ಇದೆ ಆದರೆ ದೀಪವೇ ಹಚ್ಚಿಕೊಂಡಿಲ್ಲ ಕೆಲವರಲ್ಲಿ ನಾವು ನೋಡಿದಾಗ ಬೇಕಾದಷ್ಟು ಪ್ರಮಾಣಪತ್ರಗಳು, ಪ್ರಶಸ್ತಿಗಳು ಬಹಳಷ್ಟು ಇರುತ್ತದೆ ಆದರೆ ಅವರಿಗೆ ಆ ಅರ್ಹತೆ ಇದೆಯೇ ಎನ್ನುವುದು ಮುಖ್ಯ ಕೆಲವರಿಗೆ ಇರಲ್ಲ ನಮಗೆ ಏನು ಪ್ರಮಾಣಪತ್ರವಿದೆ ಅದಕ್ಕೆ ತಕ್ಕಂತೆ ಪರಿಣಿತಿ ಪಡೆದಿರೋಣ.

ದಾರಿ ಸಿಕ್ಕೇ ಸಿಗುತ್ತದೆ


ಒಂದು ಹಳ್ಳಿಯಲ್ಲಿ ಒಂದು ಸಂಸಾರ ವಾಸ ಮಾಡಿಕೊಂಡಿದ್ದು ಅದರಲ್ಲಿ ತಂದೆ ತಾಯಿ ಇಬ್ಬರು ಮಕ್ಕಳು ಇದ್ದರು ತಂದೆ ತಾಯಿ ತಮ್ಮ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದರು ಮಕ್ಕಳು ಭಾನುವಾರದಂದು ಹೆಚ್ಚು ಆಟ ಆಡುತ್ತಿದ್ದರು.

ಒಂದು ಭಾನುವಾರ ಕಣ್ಮುಚ್ಚಾಲೆ ಆಟ ಆಡುತ್ತ ಆಡುತ್ತ ಹಳ್ಳಿಯಿಂದ ಸ್ವಲ್ಪ ದೂರಕ್ಕೆ ಬಂದರು ಕತ್ತಲೆ ಆಗುತ್ತಿದೆ ಆಗ ಬೇಗ ಹೋಗೋಣ ಎಂದು ಇಬ್ಬರು ಅಣ್ಣ ತಂಗಿ ಬೇಗ ಬೇಗ ದಾರಿ ಮರೆತು ವಿರುದ್ಧ ದಿಕ್ಕಿಗೆ ಹೋಗುತ್ತಿದ್ದರು.

 ಸ್ವಲ್ಪ ದೂರ ಹೋದ ನಂತರ ಆಗ ಅವರಿಗೆ ಅನಿಸಿತು ನಾವು ಬೇರೆ ಯಾವುದೂ ದಾರಿಗೆ ಹೋಗುತ್ತಿದ್ದೇವೆ ನಾವು ದಾರಿ ಮರೆತಿದ್ದೇವೆ ಏನು ಮಾಡುವುದು ಎಂದಾಗ ತಂಗಿಯಾದವಳು ಹೇಳಿದಳು ನಾವು ಪ್ರಾರ್ಥನೆ ಮಾಡಿದರೆ ನಮಗೆ ಯಾವುದಾದರೂ ಒಂದು ದಾರಿ ಸಿಕ್ಕೇ ಸಿಗುತ್ತದೆ ಎಂದು ಮರದ ಕೆಳಗೆ ಕುಳಿತುಕೊಂಡು ಪರಿಶುದ್ಧ ಮನಸ್ಸಿನಿಂದ  ಪ್ರಾರ್ಥನೆ ಮಾಡಲು ಆರಂಭಿಸಿದರು.

 ನಮಗೆ ನಮ್ಮ ಮನೆಯ ದಾರಿ ಯಾವುದು ಎಂದು ತಿಳಿದರೆ ಸಾಕು ಎಂದು ಮನದಾಳದಿಂದ ಪ್ರಾರ್ಥನೆ ಮಾಡುತ್ತಿದ್ದರು ಸ್ವಲ್ಪ ಸಮಯದ ನಂತರ ಗಂಟೆಯ ಶಬ್ದ ಬಂತು ಏನಿರಬಹುದು ಎಂದು ಕಣ್ಣು ಬಿಟ್ಟು ನೋಡಿದಾಗ ಪಕ್ಕದ ಮನೆಯ ಹಸು ಆ ಹಸುವನ್ನು ನೋಡಿ ತುಂಬಾ ಸಂತೋಷಪಟ್ಟರು.

 ಹಸುವಿಗೆ ಹಿಂಬಾಲಿಸಿದರು ಮನೆಗೆ ಬಂದು ಸೇರಿಕೊಂಡರು ಅಚಲವಾದ ನಂಬಿಕೆ ಇದ್ದರೆ ನಮ್ಮ ದಾರಿ ನಮಗೆ ಸಿಕ್ಕೇ ಸಿಗುತ್ತದೆ.

  ತುಂಬಾ ಶಕ್ತಿಶಾಲಿಯಾಗಿದ್ದಾನೆ




ಒಂದು ಊರಿನಲ್ಲಿ ಒಬ್ಬ ಚಣಾಕ್ಷ ರಾಜ ಇದ್ದನು ಅವನು ಒಂದು ದೊಡ್ಡ ಯಾತ್ರೆಯನ್ನು ಕೈಗೊಂಡನು ಇದಕ್ಕಾಗಿ ಎಲ್ಲರಿಂದ ಆಶೀರ್ವಾದ ಪಡೆದು ಮುನ್ನಡೆದ ಆಗ ಅವನ ಆಪ್ತಮಿತ್ರ ಬಂದು ಒಂದು ಸಲಹೆಯನ್ನು ನೀಡಿದ.

 ಸಲಹೆ ಏನೆಂದರೆ ನೀನು ಹೋಗುವ ದಾರಿಯಲ್ಲಿ ಒಂದು ಕುಳ್ಳ ವ್ಯಕ್ತಿ ಸಿಗುತ್ತಾನೆ ಅವನನ್ನು ನೀನು ಸೋಲಿಸಿಯೇ ಹೋಗಬೇಕು ಎಂದು ಹೇಳಿದ ರಾಜನು ಆಗಲಿಯೆಂದು ಮುಂದೆ ಹೋಗುತ್ತಿದ್ದಂತೆ ಒಬ್ಬ ಕುಳ್ಳ ವ್ಯಕ್ತಿ ಬಂದು ಅವನು ಇದ್ದಿದ್ದು ಎರಡು ಅಡಿಗಳು ಮಾತ್ರ ಅವನು ಹೇಳಿದ ನನ್ನ ಜೊತೆ ಯುದ್ಧ ಮಾಡು ಎಂದಾಗ ರಾಜನು ಸುಲಭವಾಗಿ ಅವನನ್ನು ಸೋಲಿಸಿ ಜೀವದಾನ ಮಾಡಿ ಕಳಿಸಿದ.

 ಮಾರನೆಯ ದಿನ ಮತ್ತೆ ಒಂದು ಅಡಿ ಜಾಸ್ತಿ ಬೆಳೆದು ಮೂರು ಅಡಿಯಷ್ಟು ಆಗಿ ಬಂದ ಮತ್ತೆ ಸೋಲಿಸು ಎಂದ ಅದೇ ರೀತಿ ರಾಜನು ನಿರಾಯಾಸವಾಗಿ ಸೋಲಿಸಿದ ಹೀಗೆ ದಿನ ಯುದ್ಧ ಮಾಡುವುದು ಅವನನ್ನು ಸೋಲಿಸಿ ಕಳಿಸುವುದು.

 ಆದರೆ ಆ ಕುಳ್ಳನಿದ್ದವನು ದಿನನಿತ್ಯ ಸ್ವಲ್ಪಸ್ವಲ್ಪವಾಗಿ ಸ್ವಲ್ಪಸ್ವಲ್ಪವಾಗಿ ಬೆಳೆದು ಬಂದನು ಒಂದು ವಾರದ ನಂತರ ನೋಡಿದರೆ ಆ ವ್ಯಕ್ತಿಯು ರಾಜನಿಗಿಂತ ಬಲಿಷ್ಠವಾಗಿ ಸ್ವಲ್ಪ ಎತ್ತರವಾಗಿ ಇದ್ದನು ಇದನ್ನು ಗಮನಿಸಿದ ರಾಜನು ಸೂಕ್ಷ್ಮವಾಗಿ ಯೋಚಿಸಿದ ಏಕೆಂದರೆ ನನಗಿಂತ ತುಂಬಾ ಶಕ್ತಿಶಾಲಿಯಾಗಿದ್ದಾನೆ.

 ಇವನನ್ನು ಹೀಗೆ ಬಿಟ್ಟರೆ ಮುಂದೆ ನನಗೆ ತೊಂದರೆ ಎಂದು ತನ್ನ ಚಾಣಾಕ್ಷ ಬುದ್ಧಿಯಿಂದ ಅವನನ್ನು ಬಹಳ ಕಷ್ಟಪಟ್ಟು ಸೋಲಿಸಿ ಕೊಂದನು ಆದ್ದರಿಂದ ರಾಜನಿಗೂ ಕೆಲವು ನೋವುಗಳು, ತೊಂದರೆಗೆ ಒಳಗಾದನು ಯಾಕೆಂದರೆ ರಾಜನಿಗೂ ಕೂಡ ಕೆಲವು ಗಾಯಗಳೂ ಆಗಿದ್ದವು ಆಗ ರಾಜನಿಗೆ ಅರ್ಥವಾಯಿತು.

 ಯಾವುದೇ ಸಮಸ್ಯೆಯನ್ನು ಚಿಕ್ಕದಿರುವಾಗಲೇ ಅದನ್ನು ನಾಶ ಪಡಿಸಬೇಕು ಇಲ್ಲದಿದ್ದರೆ ಮುಂದೆ ಅದೇ ಮರದಂತೆ ಬೃಹತ್ ಆಕಾರವಾಗಿ ಬೆಳೆದು ನಮ್ಮನ್ನು ಕಷ್ಟಕ್ಕೆ ಒಳಪಡಿಸುತ್ತದೆ ಇದು ಕಥೆಯಾಗಿರಬಹುದು ಆದರೆ ನಾವು ನಮ್ಮ ಬದುಕಿನಲ್ಲಿ ಬರುವ ಸಣ್ಣ ಸಣ್ಣ ಸಮಸ್ಯೆಗಳನ್ನು ಉಡಾಫೆ ಮಾಡದೆ ವಿವೇಚನೆಯಿಂದ ಕಡಿಮೆ ಮಾಡಿಕೊಳ್ಳೋಣ.

  ಕಷ್ಟಗಳು ಬರೀ ಬೊಗಸೆಯಷ್ಟು

ಒಂದು ಸಾರಿ ಬದುಕಿನಲ್ಲಿ ನಿರಾಶಗೊಂಡ ಮನುಷ್ಯನೊಬ್ಬನು ಒಂದು ಆಶ್ರಮಕ್ಕೆ ಬಂದು ಬಾಬಾ ಅವರಿಗೆ ಹೇಳಿದ ನನ್ನ ಜೀವನದಲ್ಲಿ ದುಃಖ, ದುಗುಡ, ದುಮ್ಮಾನ, ಬೇಸರಗಳು, ತುಂಬ ಹೆಚ್ಚಾಗಿದೆ ಈ ದುಃಖದಿಂದ ಹೇಗೆ ನಾನು ಪಾರಾಗಬಹುದು ಎಂದು ಕೇಳಿದನು.

ಆಗ ಬಾಬಾ ಅವರು ಒಂದು ಬಕೆಟ್ ನೀರನ್ನು ತರಲು ಹೇಳಿ ಅದರಲ್ಲಿ ಒಂದು ಬೊಗಸೆ ಉಪ್ಪನ್ನು ಹಾಕಿದರು ನಂತರ ಆ ನೀರನ್ನು ಕುಡಿದು ರುಚಿ ಹೇಗಿದೆ ಎಂದು ತಿಳಿಸು ಎಂದರು ಆ ನೀರನ್ನು ಕುಡಿದ ಮನುಷ್ಯ ತುಂಬಾ ಉಪ್ಪಾಗಿದೆ ಎಂದನು.

 ನಂತರ ಬಾಬಾ ಅವರು ಅವನನ್ನು ಆಶ್ರಮದಿಂದ ಆಚೆ ಬಂದು ಸ್ವಲ್ಪ ದೂರದಲ್ಲಿ ಒಂದು ಕೆರೆ ಇತ್ತು ಅಲ್ಲಿಗೆ ಬಂದರು ಮತ್ತೆ ಅದೇ ರೀತಿ ಒಂದು ಬೊಗಸೆ ಉಪ್ಪನ್ನು ಕೆರೆಯಲ್ಲಿ ಹಾಕಿದರು ಅಲ್ಲಿನ ನೀರು ಕುಡಿಯುವಂತೆ ಹೇಳಿದರು ಅಲ್ಲಿಯ ನೀರು ಕುಡಿದ ವ್ಯಕ್ತಿ ಇದು ತುಂಬಾ ರುಚಿಯಾಗಿದೆ ಸಿಹಿಯಾಗಿದೆ ಎಂದು ಹೇಳಿದನು.

 ಆಗ ಬಾಬಾ ಅವರು ಹೇಳಿದರು ಬದುಕಿನಲ್ಲಿ ಕಷ್ಟಗಳು ಬರೀ ಬೊಗಸೆಯ ಪ್ರಮಾಣದಷ್ಟು ಉಪ್ಪಿನಷ್ಟು ಇದ್ದೇ ಇರುತ್ತವೆ ಆದರೆ ದುಃಖ ನಾವು ಯಾವ ರೀತಿಯಲ್ಲಿ ಸ್ವೀಕರಿಸುತ್ತೇವೆ ಎಂಬುದರ ಮೇಲೆ ನಾವು ಅರಿತುಕೊಳ್ಳಬೇಕಾಗಿದೆ.

 ನಮ್ಮ ಆಚಾರ, ವಿಚಾರಗಳು, ಜ್ಞಾನವನ್ನು ಬಕೆಟ್ ನಷ್ಟು ಸೀಮಿತವಾಗಿದ್ದರೆ ಅದು ಉಪ್ಪು ನೀರು ಇದ್ದ ಹಾಗೆ ಅದೇ ನಮ್ಮ ಜ್ಞಾನ ಕೆರೆಯಷ್ಟು ನದಿಯಷ್ಟು ವಿಸ್ತರಿಸಿಕೊಂಡರೆ ಸಿಹಿ ನೀರು ಇದ್ದ ಹಾಗೆ ನಮ್ಮಲ್ಲಿ ಸಕಾರಾತ್ಮಕ ಆಲೋಚನೆಗಳೇ ಮಟ್ಟ ಹೆಚ್ಚಾಗಿರಬೇಕು ಆಗ ಯಾವುದೇ ಕಷ್ಟ ದುಃಖಗಳು ನಮಗೆ ಪ್ರಭಾವ ಬೀರುವುದಿಲ್ಲ ಎಂದು ಚಟುವಟಿಕೆಯ ಮೂಲಕತಿಳಿಸಿದರು.

Leave a Comment