ವಿಷವನ್ನು ಅಮೃತದಂತೆ ಕುಡಿದರು

ಒಂದು ಊರಿನಲ್ಲಿ ಬಾಬಾ ಅವರು ಇದ್ದರು ಇವರು ಪರಮ ಜ್ಞಾನಿಗಳು ಇವರು ಇವರದೇ ಆದ ಒಂದು ಆಶ್ರಮವನ್ನು ನಡೆಸುತ್ತಿದ್ದರು ಈ ಆಶ್ರಮದಲ್ಲಿ ಹಲವಾರು ಶಿಷ್ಯರು ಇದ್ದರೂ ಅದರಲ್ಲಿ ಒಬ್ಬ ಶಿಷ್ಯನಿಗೆ ಮಾತ್ರ ತುಂಬಾ ಪ್ರೀತಿ ಜಾಸ್ತಿ ಇತ್ತು ಇವನು ಹಲವಾರು ವರ್ಷಗಳಿಂದ ಕೆಲಸ ಮಾಡಿಕೊಂಡು ಇದ್ದನು.

 ಯಾರದೋ ತಪ್ಪಿನಿಂದಾಗಿ ಈ ಪ್ರೀತಿಯ ಶಿಷ್ಯನಿಗೆ ತುಂಬ ದೊಡ್ಡ ಅವಮಾನವಾಯಿತು ಆಗ ಅವನ ಮನಸಿನ ಸೀಮಿತ ಕಳೆದುಕೊಂಡಿತು ಆಗ ಯಾವ ಬಾಬಾ ಅವರು ಅವನಿಗೆ ವಿದ್ಯೆಯನ್ನು ಕಲಿಸಿದರು ಅದೇ  ಬಾಬಾ ಅವರಿಗೆ ವಿಷವನ್ನು ಹಾಕಿದನು ಆದರೆ ಬಾಬಾ ಅವರಿಗೆ ಅದು ಗೊತ್ತಿಲ್ಲದ ಕಾರಣ ವಿಷವನ್ನು ಅಮೃತದಂತೆ ಕುಡಿದರು.

 ಕೆಲವೇ ಕ್ಷಣಗಳಲ್ಲಿ ತಲೆ ತಿರುಗಿದಂತಾಗಿ ಕುಸಿದು ಬಿದ್ದರು ಬಾಬಾ ಅವರಿಗೆ ಏನಾಗಿದೆ ಎಂದು ಬೇರೆ ಶಿಷ್ಯರು ಬಂದು ನೋಡಿದರೂ ಮತ್ತೆ ತಕ್ಷಣ ವೈದ್ಯರಿಗೆ ಕರೆದರೂ ವೈದ್ಯರು ಹೇಳಿದರು ವಿಷ ತಿಂದಿದ್ದಾರೆ ಅಷ್ಟರಲ್ಲಿ ಬೇರೆ ಶಿಷ್ಯರು ವಿಷ ಕೊಟ್ಟಿದ್ದ ಶಿಷ್ಯನಿಗೆ ಹುಡುಕಿ ಧರ ಧರ ಎಳೆದು ಕೊಂಡು ಬಂದು ಒಂದು ಮರಕ್ಕೆ, ಕಟ್ಟಿ ಹಾಕಿದರು.

ಆಗ ಎಲ್ಲ ಶಿಷ್ಯರೂ ಹೇಳಿದರು ನಿನಗಾಗಿ ಪ್ರಾಣಕ್ಕಿಂತ ಹೆಚ್ಚಾಗಿ ಪ್ರಿತಿಸುತ್ತಿದ್ದರೂ ನೀನು ಅಷ್ಟು ಕಷ್ಟದಲ್ಲಿ ಇದ್ದಾಗ ಇವರು ನಿನಗೆ ಆಸರೆಯನ್ನು ಕೊಟ್ಟಿದ್ದಾರೆ ಅವರಿಗೆ ನೀನು ಇಂಥ ದ್ರೋಹ ಮಾಡಿದ್ದೀಯಾ ಪಾಪಿ ಎಂದು ಹಿಗ್ಗ ಮುಗ್ಗ ಹೊಡೆದರು.

 ಇಷ್ಟೆಲ್ಲಾ ಆಗುವವರೆಗೆ ನಿಧಾನವಾಗಿ ಆ ಬಾಬಾ ಅವರು ಕಣ್ಣುಬಿಟ್ಟರು ಕಣ್ಣುಬಿಟ್ಟು ನೋಡಿದರೆ ಶಿಷ್ಯನಿಗೆ ಮರಕ್ಕೆ ಕಟ್ಟಿ ಹಾಕಿದರೆ ಬಾಬಾ ಅವರಿಗೆ ಕೇಳುತ್ತಾರೆ ಇವನಿಗೆ ಏನು ಶಿಕ್ಷೆ ಕೊಡಬೇಕು ಹೇಳಿ ಇವನು ನಿಮಗೆ ವಿಷವನ್ನು ಹಾಕಿದ್ದಾನೆ.

ಬಾಬಾ ಅವರು ಅವನು ನಮಗೆ ವಿಷ ಕುಡಿಸಿರಬಹುದು ಆದರೆ ನಾನು ಅವನಿಗೆ ವಿಷ ಕುಡಿಸಲು ಸಾದ್ಯವೇ ನಾಯಿ ಕಚ್ಚುತ್ತದೆ ಹಾಗೆಂದು ನಾಯಿಗೆ ಕಚ್ಚಲಿಕ್ಕೆ ಸಾಧ್ಯವೇ ಬೇಡ ನಾನು ಈ ಪ್ರಪಂಚಕ್ಕೆ ಬಂದದ್ದು. ಎಲ್ಲರಿಗೂ ಒಳ್ಳೆಯದಾಗಲಿ ಎನ್ನುವ ಉದ್ದೇಶದಿಂದ ನಾನು ಎಲ್ಲರನ್ನು ಒಳ್ಳೆಯದೆ ಬಯಸುವುದು ನನ್ನ ಸ್ವಭಾವ ನಾನು ಇತರರಿಗೆ ಕರುಣೆ ಮಾತ್ರ ತೋರಿಸಬಲ್ಲೆ ಎಂದು ಹೇಳುತ್ತಿದ್ದಂತೆಯೇ ಸ್ವರ್ಗಸ್ಥರಾದರು.

  ಉರಿದ ಬೀಜಗಳು

ಒಂದು ಸಾರಿ ಚಾಣಾಕ್ಷ ರಾಜನು ತನ್ನ ಸಭೆಗೆ ಹಲವಾರು ಮಕ್ಕಳನ್ನು ಕರೆದು ನಾನು ಒಂದು ಪರೀಕ್ಷೆಯನ್ನು ಇಡುತ್ತೇನೆ ಈ ಪರೀಕ್ಷೆಯಲ್ಲಿ ಗೆದ್ದವರನ್ನು ನಾನು ಬಹುಮಾನ ನೀಡುತ್ತೇನೆ ಎಂದು ಹೇಳುತ್ತಾನೆ ಆಗ ಅದಕ್ಕೆ ಎಲ್ಲಾ ಹುಡುಗರು ಕುಣಿದು ಕುಪ್ಪಳಿಸುತ್ತಾರೆ.

ರಾಜನು ಎಲ್ಲಾ ಹುಡುಗರಿಗೂ ನಾಲ್ಕು ನಾಲ್ಕು ಬೀಜಗಳನ್ನು ಕೊಟ್ಟು ಇದನ್ನು ಒಂದು ತಿಂಗಳ ನಂತರ ಗಿಡ ಬೆಳಸಿಕೊಂಡು ಬನ್ನಿ ಎಂದು ಕಳುಹಿಸುತ್ತಾನೆ ಒಂದು ತಿಂಗಳ ನಂತರ ಹಲವಾರು ಮಕ್ಕಳು ಹಲವಾರು ರೀತಿಯಲ್ಲಿ ಚಿಕ್ಕ ಗಿಡಗಳಾಗಿ ಬೆಳೆಸಿಕೊಂಡು ಬರುತ್ತಾರೆ.

ಒಬ್ಬೊಬ್ಬರು ಒಂದೊಂದು ರೀತಿಯ  ಬಹಳಷ್ಟು ವಿಧವಾದ ಗಿಡಗಳನ್ನು ಬೆಳೆಸಿಕೊಂಡು ಬರುತ್ತಾರೆ ಒಂದೊಂದು ಗಿಡವು ಒಂದೊಂದು ರೀತಿಯಾಗಿದ್ದು ಬೇರೆ ಬೇರೆ ಹೂವುಗಳಿಂದ ಬೆಳೆಸಿರುತ್ತಾರೆ. ರಂಗು ರಂಗಿನ ಹೂವಿನ ಗಿಡಗಳೆಲ್ಲವೂ ನೋಡಿ ರಾಜನಿಗೆ ತುಂಬಾ ಸಂತೋಷವಾಗುತ್ತದೆ ಆದರೆ ಕೊನೆಯಲ್ಲಿ ಒಬ್ಬ ಹುಡುಗ ಬರಿ ಕ್ಕೆ ಬಂದಿರುತ್ತಾನೆ ನೀನು ಏಕೆ ಗಿಡವನ್ನು ತರಲಿಲ್ಲ ಎಂದು ರಾಜನು ಕೇಳಿದಾಗ ಆಗ ಹುಡುಗ ಹೇಳುತ್ತಾನೆ.

ರಾಜರೆ ನೀವು ಹುರಿದ ಬೀಜಗಳನ್ನು ಕೊಟ್ಟಿದ್ದೀರಾ ಅದರಲ್ಲಿ ಯಾವುದೇ ಗಿಡ ಬೆಳೆಯುವುದಿಲ್ಲ ಎಂದು ಧೈರ್ಯವಾಗಿ ಹೇಳುತ್ತಾನೆ ಆಗ ಅದೇ ಹುಡುಗನನ್ನು ರಾಜರು ಬಹುಮಾನ ಕೊಡುತ್ತಾರೆ ಬೇರೆಯವರು  ತನಗೆ ಬಹುಮಾನ ಸಿಗಲಿ ಎಂದು ಬೇರೆ ಬೇರೆ ಬೀಜಗಳನ್ನು ಹಾಕಿ ಚಿಕ್ಕ ಚಿಕ್ಕ ಗಿಡಗಳನ್ನು ಬೆಳೆಸಿಕೊಂಡು ಬಂದಿರುತ್ತಾರೆ.

ನಂತರ ಎಲ್ಲರಿಗೂ ತಾವು ಮಾಡಿದ್ದು ತಪ್ಪು ಎಂದು ಅರಿವಾಗುತ್ತದೆ ಕೆಲವು ಸಾರಿ ಗೊತ್ತು ಗೊತ್ತಿಲ್ಲದೆ ಯಾವುದೋ ಆಸೆಗಾಗಿ ಇಲ್ಲದೆ ಇರುವುದನ್ನು ಮಾಡಲಿಕ್ಕೆ ಹೋಗಿ ಇರುವ ಹೆಸರನ್ನು ಕಳೆದುಕೊಳ್ಳುತ್ತಾರೆ ಹಾಗಾಗಿ ಯಾವುದೇ ಕೆಲಸ ಮಾಡಿದರು ವಿವೇಕದಿಂದ ವಿವೇಚನೆಯಿಂದ ಪ್ರಾಮಾಣಿಕತೆಯಿಂದ ಮಾಡೋಣ.

ಕೆಲಸ ನಿಂತು ಹೋಗಬಹುದು

ಒಂದು ಸಂಸ್ಥೆಯಲ್ಲಿ ಆನಂದಚಾರಿ ಹಾಗೂ ಕೆಲವರು ಸದಸ್ಯರು ಸೇರಿ ಕಾರ್ಯನಿರ್ವಹಿಸಿರುತ್ತಾರೆ ಒಂದು ಸಾರಿ ಒಂದು ಯೋಜನೆಯನ್ನು ಎಲ್ಲವೂ ಸರಿ ಹಮ್ಮಿಕೊಳ್ಳುತ್ತಾರೆ ಈ ದಿನ ಎಲ್ಲರೂ ಸೇರಿ ಕೆಲಸ ಮಾಡೋಣ ಎಂದಾಗ ಎಲ್ಲರೂ ಆಗಲಿ ಎಂದು ಹೇಳಿರುತ್ತಾರೆ.

ಆ ದಿನ ಬಂದಾಗ ಆನಂದಚಾರಿಯವರು ಮನೆಯ ಬೀದಿಯ ಕೊನೆಯಲ್ಲಿ ಟ್ಯಾಕ್ಸಿಗಾಗಿ ಇವರೇ ಕಾಯುತ್ತಿರುತ್ತಾರೆ ಎಲ್ಲಾ ಸ್ನೇಹಿತರು ಬಂದು ಇವರ ಕಾರ್ಯವನ್ನು ಮುಗಿಸಿಕೊಳ್ಳುತ್ತಾರೆ ಮತ್ತೆ ಬರಬೇಕಾದರೆ ಮನೆಯ ಹತ್ತಿರ ಹೋಗುತ್ತಿರುತ್ತಾರೆ ಆಗ ಆನಂದ ಚಾರಿಯವರು ಮನೆ ಇರುವ ಬೀದಿಯ ಮೂಲೆಯಲ್ಲಿ ನಿಲ್ಲಿಸಿ ಎಂದು ವಿನಂತಿಸಿಕೊಳ್ಳುತ್ತಾರೆ.

ಸ್ನೇಹಿತರು ಹೇಳುತ್ತಾರೆ ಮನೆ ಹತ್ತಿರ ಬಿಡುತ್ತೇವೆ ಎಂದಾಗ ಬೇಡ ಬೇಡ ಎಂದು ಗೌರವದಿಂದ ನಿರಾಕರಿಸುತ್ತಾರ ನಂತರ ಗೊತ್ತಾಗುತ್ತದೆ ಅವರು ಆಚೆ ಬಂದಿದ್ದು ಏಕೆಂದರೆ ತಮ್ಮ ತಾಯಿ ವಿಧಿವಶವಾಗಿರುತ್ತಾರೆ.

ಇತರರು ಸ್ನೇಹಿತರು ಬಂದರೆ ಅವರಿಗೂ ಸಮಯವಾಗಬಹುದು ಮತ್ತು ನಮ್ಮೆಲ್ಲರ ಕೆಲಸ ನಿಂತು ಹೋಗಬಹುದು ಎಂಬ ಉದ್ದೇಶದಿಂದ ಆನಂದಚಾರಿಯವರು ಈ ರೀತಿ ಮಾಡಿರುತ್ತಾರೆ ನಂತರ ಅಂತ ಕ್ರಿಯೆ ಮುಗಿಸುತ್ತಾರೆ.

 ನಿಮಗೆ ಅರ್ಥವಾಗುತ್ತಿಲ್ಲ?

ಇದೊಂದು ನಡೆದ ಘಟನೆ ನೀವು ನೋಡಿರಬಹುದು ಹಲವಾರು ಆಸ್ಪತ್ರೆಗಳಲ್ಲಿ ಕಾಲೇಜು ಶಾಲೆಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಡುತ್ತಾರ ಕೆಲವು ಸಾರಿ ಕ್ಯಾಂಪುಗಳನ್ನು ಮಾಡಿ ಶಸ್ತ್ರ, ಚಿಕಿತ್ಸೆಗೆ ನೋಂದಣಿ ಮಾಡುತ್ತಿರುತ್ತಾರೆ.

 ಒಂದು ಕಡೆ ಪೆಂಡಾಲ್ ಕಟ್ಟಿಕೊಂಡು ಯಾರು ಬೇಕೋ ಅವರು ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಹೆಸರನ್ನು ನೋಂದಾಯಿಸಿಕೊಳ್ಳಿ ಎಂದು ಶಿಬಿರವನ್ನು ಏರ್ಪಡಿಸಿರುತ್ತಾರೆ ಇದನ್ನು ನೋಡಿದ ಯಾರೋ ಒಬ್ಬರು ಕುರುಡ ಭಿಕ್ಷುಕನಿಗೆ  ಉತ್ಸಾಹದಿಂದ ಹೇಳುತ್ತಾರೆ ಮುಂದೆ ನಿನಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ನಡೆಯುತ್ತಿದೆ.

 ಅಲ್ಲಿ ಹೋಗಿ ನಿನ್ನ ಚಿಕಿತ್ಸೆ ಮಾಡಿಸಿಕೋ ಎಂದಾಗ ಭಿಕ್ಷುಕ ಕುರುಡ ಕ್ಯಾಂಪ್ ಗೆ ಬರುತ್ತಾನೆ ಆಗ ವೈದ್ಯರು ಇವನನ್ನು ಪರೀಕ್ಷಿಸಿ ನಿಮಗೆ ಕಣ್ಣು ಮೊದಲಿನಿಂದಲೇ ಕಾಣುತ್ತಿಲ್ಲ ಆದುದರಿಂದ ನಾವು ಆದಷ್ಟು ಪ್ರಯತ್ನ ಪಡುತ್ತೇವೆ ಎಂದು ಭರವಸೆ ನೀಡುತ್ತಾರೆ.

 ನೀವು ಯಾವುದೇ ಕಾರಣಕ್ಕೂ ನೀವು ದುಡ್ಡು ಕಟ್ಟಬೇಕಾಗಿ ಇರುವುದಿಲ್ಲ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಕೊಳ್ಳಿ ಎಂದು ವೈದ್ಯರು ಹೇಳುತ್ತಾರೆ ಆಗ ಕುರಡನ್ನು ಹೇಳುತ್ತಾನೆ ಈ ಚಿಕಿತ್ಸೆಯಿಂದ ನನಗೆ ದೃಷ್ಟಿ  ಬರುವುದು ಗ್ಯಾರಂಟಿ ಇಲ್ಲ ಎಂದಾಗ ನನಗೆ ಶಸ್ತ್ರಚಿಕಿತ್ಸೆ ಯಾಕೆ ಬೇಕು ಮತ್ತೆ ಆ ಕುರುಡ ಕೇಳುತ್ತಾನೆ.

 ಈ ಶಸ್ತ್ರ ಚಿಕಿತ್ಸೆಗೆ ಅಂದಾಜು ಎಷ್ಟು ಹಣ ಖರ್ಚಾಗಬಹುದು ಎಂದಾಗ ಮುಖ್ಯಸ್ತರು  ಹೆಚ್ಚು  ಕಡಿಮ  ಎರಡು ಸಾವಿರ ಖರ್ಚಾಗುವ ಸಾಧ್ಯತೆ ಇದೆ ತಕ್ಷಣ ಭಿಕ್ಷುಕನು ಹೇಳಿದ ನನಗೆ ಕಣ್ಣು ಸರಿಪಡಿಸಲು ಖರ್ಚು ಮಾಡುವ ಹಣ ನನಗೆ ನೇರವಾಗಿ ಕೊಟ್ಟುಬಿಡಿ ನಾನು ಇದರಿಂದ ಆರು ತಿಂಗಳು ನೆಮ್ಮದಿಯಾಗಿ ಊಟ ಮಾಡಿಕೊಂಡು ಬದುಕಬಹುದಾಗಿದೆ  ನಿಮಗೆ ಪುಣ್ಯವೂ  ಸಿಗುತ್ತದೆ ಎಂದನು.

ವೈದ್ಯರು ನೀವು ಬರೀ ಹೊಟ್ಟೆಯ ಬಗ್ಗೆಯೇ ಯೋಚಿಸುತ್ತೀರಾ ನಿಮಗೆ ಕಣ್ಣು ಬಂದರೆ ಪ್ರಪಂಚವನ್ನು ನೋಡಿ ಆನಂದಿಸಬಹುದು ನೀವು ಉನ್ನತ ವ್ಯಕ್ತಿ ಯಾಗುತ್ತೀರಿ ಎಂದು ಹೇಳಿದರು. ಆಗ ಕುರುಡ ಹೇಳುತ್ತಾನೆ ಜೀವನವೆಲ್ಲ ನಾನು ಕುರುಡನಾಗಿಯೇ ಕಳೆದಿದ್ದೇನೆ ನನಗೆ ಯಾವುದು ಉತ್ತಮ ಯಾವುದು ಕಳಪೆ ಎರಡು ಗೊತ್ತಿಲ್ಲ ಆದರೆ ನನಗೆ ಗೊತ್ತಿರುವುದು ಇಷ್ಟೆ ಕಣ್ಣಿಲ್ಲದಿದ್ದರೂ ಮನುಷ್ಯರು ಬದುಕುತ್ತಾರೆ ಆದರೆ ಹಸಿವು ತಡೆದುಕೊಂಡು ಅನ್ನವಿಲ್ಲದೆ ಬದುಕಲು ಸಾಧ್ಯವಿಲ್ಲ.

ಈ ಮಾತುಗಳು ನಿಮಗೆ ಬಹುಶ: ಅರ್ಥವಾಗುವುದಿಲ್ಲ ಎಂದು ಕುರುಡ ಹೇಳುತ್ತಾನೆ ಇದನ್ನು ಗಮನಿಸುತ್ತಿದ್ದ ಮುಖ್ಯ ವೈದ್ಯರು ಬಂದು ಕುರುಡನಿಗೆ ಹೇಳುತ್ತಾರೆ ಸ್ವಾಮಿಯವರೇ ನಮಗೆ ಇರುವ ಅಧಿಕಾರ ಶಸ್ತ್ರಚಿಕಿತ್ಸೆ ಮಾಡಬಹುದೇ ಹೊರತು ನಿಮಗೆ ಈ ರೀತಿ ನಾವು ಹಣ ಕೊಡಲಿಕೆ ಸಾಧ್ಯವಿಲ್ಲ.

 ನಮ್ಮ ಆಸೆ ಒಬ್ಬರಿಗೆ ಕಣ್ಣು ಬಂದರೆ ಅವರು ಈ ಸೃಷ್ಟಿಯನ್ನು  ನೋಡುತ್ತಾರೆ  ಇದು. ನಮಗೆ ತಿಳಿದಿರುವಂತದ್ದು ಆದರೆ ನೀವು ಹೇಳುತ್ತಿರುವ ರೀತಿಯೇ ಬೇರೆ ಇದೆ ನೀವು ಹೇಳಿದ್ದು ನಮಗೆ ಅರ್ಥವಾಗುವುದಿಲ್ಲ.

 ನಾವು ಹೇಳುವುದು ನಿಮಗೆ ಅರ್ಥವಾಗುತ್ತಿಲ್ಲ ಎಂದಾಗ ಕುರುಡ ಭಿಕ್ಷುಕನು ಮುಂದೆ ಹೋಗುತ್ತಿದ್ದ ಆಗ ಮುಖ್ಯ ವೈದ್ಯರು ತನಗೆ ಇದ್ದ ಒಂದು ಊಟದ ಪೊಟ್ಟಣವನ್ನು ಕುರುಡನ ಕೈಗಿಟ್ಟು ಕಳಿಸಿದರು  ನಂತರ ಮುಖ್ಯ ವೈದ್ಯರು ಕಣ್ಣು ಕಾಣಿಸದಿದ್ದರೂ ಬದುಕಬಹುದು ಆದರೆ ಊಟವಿಲ್ಲದೆ ಬದುಕಲು ಸಾಧ್ಯವಿಲ್ಲ ಎಂದು ಯೋಚಿಸಿದರು.

 ತುಂಬ ತೃಪ್ತಿಯಾಯಿತು.

ಒಂದು ಸಾರಿ ತತ್ವಜ್ಞಾನಿ ಅರ್ಚಕರು ಊರಿನಿಂದ ಹೊರಗೆ ಹೋಗುತ್ತಿರುತ್ತಾರೆ ಆಗ ಒಂದು ಮಗು ಮತ್ತೆ ಮಹಿಳೆಯ ಶಬ್ದ ಬರುತ್ತದೆ ಅಷ್ಟರಲ್ಲಿ ಇತರರು ಕೂಡ ಬರುತ್ತಾರೆ ಹತ್ತಿರ ಹೋಗಿ ನೋಡಿದಾಗ ಆ ದಲಿತ ವರ್ಗದ ಮಹಿಳೆ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿರುತ್ತಾಳೆ.

 ಏಕೆ ಬಿದ್ದಳು ಎಂದು ಗಮನಿಸಿದಾಗ ಒಂದು ನಾಗರಹಾವು ಕಚ್ಚಿ ಹಾಗೆ ಹೋಗುತ್ತಿರುವುದನ್ನು ಕಾಣುತ್ತಾರೆ ಆಗ ಎಲ್ಲರೂ ಹಾವು ಕಚ್ಚಿದೆ ಎಂದು ಹೇಳುತ್ತಾರೆ ಮತ್ತು ಇತರರು ಏನು ಮಾಡುವುದು ಚಿಕಿತ್ಸೆ ಹೇಗೆ ಮಾಡುವುದು ಎಂದು ಯೋಚಿಸುತ್ತಿರುತ್ತಾರೆ.

ಅಷ್ಟರಲ್ಲಿ ಅರ್ಚಕರು ನೋಡುತ್ತಾರೆ ಮಹಿಳೆಯ ಕಾಲಿಗೆ ಹಾವು ಕಚ್ಚಿದೆ ವಿಷವು ಮೇಲಕ್ಕೆ ಬರಬಾರದು ಎಂದು ತಮ್ಮ ಕೈಯಿಂದ ಕಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡರು ಇತರರು ಹಗ್ಗ ಕಟ್ಟಬೇಕು ಅಥವಾ ಬೇಲಿಯನ್ನು ಕಟ್ಟಬೇಕು ಎಂದು ಹೇಳುತ್ತಿದ್ದರು.

 ಆಗ ಅರ್ಚಕರಿಗೆ  ತಕ್ಷಣ ತಿಳಿದಿದ್ದು ಒಂದೇ ತಮ್ಮ ದೇಹದ ಮೇಲೆ ಹಾಕಿದ್ದ ಜನಿವಾರವನ್ನು ತೆಗೆದು ಅದರಿಂದ ಬಲವಾಗಿ ಕಟ್ಟಿದರು ನಂತರ ಹಾವು ಕಚ್ಚಿದ ಭಾಗವನ್ನು ಬೇರೆ ಆಯುಧದಿಂದ ಸೀಳಿ ವಿಷವನ್ನು ಹೊರಕ್ಕೆ ತೆಗೆದರು ನಂತರ ಆ ಮಹಿಳೆ ನಿಧಾನವಾಗಿ ಚೇತರಿಸಿಕೊಂಡಳು.

 ನಂತರ ಸುತ್ತಮುತ್ತ ಇದ್ದ ಹಳ್ಳಿಯ ಜನರೆಲ್ಲರೂ ಬಂದು ಸೇರಿದರು ಬ್ರಾಹ್ಮಣನಾಗಿ ಹುಟ್ಟಿ ಜನಿವಾರವನ್ನು ಬಿಚ್ಚಿದು ಅಲ್ಲದೆ ದಲಿತ ಮಹಿಳೆಯ ಕಾಲಿಗೆ ಕಟ್ಟಿದ್ದೀರಾ ಮತ್ತೆ ನಮ್ಮ ಸಂಸ್ಕಾರವನ್ನೆಲ್ಲ ಹಾಳು ಮಾಡಿದ್ದೀರಾ ಕೆಲವರು ಊರಿನ ಹೊರಗೆ ಹಾಕಬೇಕು ಎಂದು ಕೆಲವರು ಹೇಳಿದರು.

 ಬ್ರಾಹ್ಮಣ ಮತಕ್ಕೆ, ಹೆಸರು ಕೆಡಿಸುತ್ತಿದ್ದಾರೆ ಎಂದರು ಬೈದರು ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಿದ್ದರು ಹಳ್ಳಿಯ ಜನರು ಏನೇ ಮಾತನಾಡಿದರೂ ಅದನ್ನು ಅರ್ಚಕರು ಕಿವಿಗೆ ಹಾಕಿಕೊಳ್ಳಲೇ ಇಲ್ಲ ಅರ್ಚಕರಿಗೆ ಒಂದು ಪ್ರಾಣವನ್ನು ಕಾಪಾಡಿದ್ದೇನೆ ಎನ್ನುವುದೇ ಅವರಿಗೆ ತುಂಬ ತೃಪ್ತಿಯಾಯಿತು.

Leave a Comment