ಒಂದು ಮನೆ ಹರಾಜಿಗೆ ಇಡುತ್ತಾರೆ ಆ ಮನೆಯಲ್ಲಿ ಇರುವ ಎಲ್ಲಾ ವಸ್ತುಗಳು ಯಾರಿಗೆ ಏನೇನು ಬೇಕು ಅದಕ್ಕೆ ಬೆಲೆ ಕೊಟ್ಟು ಖರೀದಿಸುತ್ತಾರೆ ಈ ಮನೆಯಲ್ಲಿ ಇನ್ನೂ ಏನಾದರೂ ಉಳಿದಿದೆಯೇ ಎಂದು ನೋಡಲು ಮನೆಯಲ್ಲಿ ಹೋಗಿ ಎಲ್ಲವನ್ನೂ ಪರಿಶೀಲನೆ ಮಾಡಿದಾಗ ಕೊನೆಗೆ ಒಂದು ಕೊಳಲು ಸಿಗುತ್ತದೆ.
ಕೊಳಲು ಕೂಡ ಹರಾಜು ಮಾಡಬೇಕು ಆ ಕೊಳಲನ್ನು ತೆಗೆದುಕೊಂಡು ಅದಕ್ಕೆ 5 ರೂಪಾಯಿ 10 ರೂಪಾಯಿ 20 ರೂಪಾಯಿ ಎಂದು ಕೂಗುತ್ತಾರೆ ಅಷ್ಟರಲ್ಲಿ ವಿದ್ವಾಂಸರು ಆ ಕೊಳಲನ್ನು ತೆಗೆದುಕೊಂಡು ಅದಕ್ಕೆ ಚೆನ್ನಾಗಿ ಒರೆಸಿ ನಂತರ ಅದರಲ್ಲಿ ಇಂಪಾದ ಧ್ವನಿಯನ್ನು ನುಡಿಸುತ್ತಾರೆ.
ನುಡಿಸಿದ ನಂತರ ಕೊಳಲಿಗೆ ಎಷ್ಟು ಬೆಲೆ ಎಂದು ಕೇಳಿದಾಗ ಒಬ್ಬರು ಐನೂರು ರೂಪಾಯಿ ಇನ್ನೊಬ್ಬರು ಏಳು ನೂರು ರೂಪಾಯಿ 8ನೂರು ರೂಪಾಯಿ ನಂತರ ಸಾವಿರಕ್ಕೆ ಕೊಳಲು ಹರಾಜಾಗುತ್ತದೆ ಮೊದಲು ಇದ್ದಾಗ ಅದರ ಬೆಲೆ ಕೇವಲ ಹತ್ತು ರೂಪಾಯಿಗೆ ಸೀಮಿತವಾಗಿತ್ತು.
ಈಗ ಅದೇ ಕೊಳಲು ಒಂದು ಸಾವಿರಕ್ಕೆ ನಿಗದಿ ಆಯಿತು ಸ್ವಲ್ಪ ಸಮಯದಲ್ಲಿಯೇ ಇದರ ಬೆಲೆ ಹೆಚ್ಚಾಯಿತು ಯಾವ ವಸ್ತು ಇದೆಯೋ ಅದರ ವಿಶೇಷತೆ ತಿಳಿದಾಗ ಮಾತ್ರ ಅದರ ಬೆಲೆ ಹೆಚ್ಚಾಗುತ್ತದೆ.
ಹಾಗೆ ನಮಗೂ ಕೆಲವು ಸಾರಿ ಬೆಲೆ ಇಲ್ಲದಂತೆ ನೋಡುತ್ತಿರುತ್ತಾರೆ ಯಾರು ನಮ್ಮನ್ನು ಅರ್ಥಮಾಡಿಕೊಳ್ಳುತ್ತಾರೆ ಅವರಿಗೆ ಮಾತ್ರ ನಮ್ಮ ಬೆಲೆ ಗೊತ್ತಿರುತ್ತದೆ.
ದಯನೀಯ ಅವಸ್ಥೆಯಲ್ಲಿ
ಒಂದು ಸಾರಿ ರಾಜ ವಾಯು ವಿಹಾರಕ್ಕೆ ಬಂದನು ಆಗ ಬಾಬಾ ಅವರು ಸಿಕ್ಕಿದರು ಅವರೊಂದಿಗೆ ಮಾತನಾಡಿಕೊಂಡು ಬರುತ್ತಿದ್ದಾಗ ಒಬ್ಬ ವ್ಯಕ್ತಿ ದಯನೀಯ ಅವಸ್ಥೆಯಲ್ಲಿ ನಿಂತಿದ್ದನು ಇದನ್ನು ನೋಡಿದ ರಾಜನು ವಯಸ್ಸು ಇದ್ದರು ವ್ಯಕ್ತಿಗಳು ಬರಿ ಭಿಕ್ಷೆ ಬೇಡುತ್ತಾರೆ ಎಂದು ವ್ಯಂಗವಾಗಿ ಹೇಳಿದನು.
ಬಾಬಾ ಅವರು ಏನು ಮಾತನಾಡಲಿಲ್ಲ ರಾಜನಿಗೆ ಬಿಟ್ಟು ಬಂದ ನಂತರ ಆ ವ್ಯಕ್ತಿಗೆ ಹೋಗಿ ಮಾತನಾಡಿಸಿದರು ನೀನು ಏಕೆ ಹೀಗೆ ನಿಂತಿದ್ದೀಯ ಎಂದು ಕೇಳಿದರು ಆಗ ಆ ವ್ಯಕ್ತಿ ನನಗೆ ಸದ್ಯಕ್ಕೆ ಸಂಸಾರದ ತಾಪತ್ರೆ ತುಂಬಾ ಇದೆ ಆದುದರಿಂದ ಅಸಾಹಾಯಕನಾಗಿ ನಿಂತಿದ್ದೇನೆ ಎಂದು ಹೇಳಿದನು.
ವ್ಯಕ್ತಿಯ ಕಷ್ಟ ಅರ್ಥಮಾಡಿಕೊಂಡ ಬಾಬಾ ಅವರು ತನ್ನಲ್ಲಿದ್ದ ಸ್ವಲ್ಪ ಹಣವನ್ನು ಕೊಟ್ಟು ಹೇಳಿದರು ಇದು ನಿನ್ನ ಒಂದು ತಿಂಗಳ ಖರ್ಚಿಗೆ ಸಾಕಾಗುತ್ತದೆ ನಂತರ ನೀನು ಊರಿನ ಆಚೆ ಇರುವ ಆಲದ ಮರದ ಕೆಳಗೆ ಕುಳಿತು ದಿನನಿತ್ಯ ಬ್ರಹ್ಮ ಮುಹೂರ್ತದ ಸಮಯದಲ್ಲಿ ದಿನನಿತ್ಯ ಮಂತ್ರಗಳನ್ನು ಹೇಳಿ ಧ್ಯಾನ ಮಾಡಿ ಎಂದು ಹೇಳಿದರು.
ಆ ವ್ಯಕ್ತಿ ಶ್ರದ್ಧೆ ಭಕ್ತಿಯಿಂದ ದಿನನಿತ್ಯ ತನ್ನ ಕಾಯಕ ಮಾಡಿದನು ಇದರಿಂದ ಅವನಲ್ಲಿ ತೇಜಸ್ಸು ಓಜಸ್ಸು ಬಂತು ನಂತರ ಇತರರು ಆಕರ್ಷಿತರಾದರು ಒಂದು ತಿಂಗಳಲ್ಲಿಯೇ ಹಲವಾರು ವ್ಯಕ್ತಿಗಳು ತಾವು ಮಂತ್ರಗಳನ್ನು ಕಲಿಯಲು ಹಾಗೂ ಧ್ಯಾನ ಮಾಡಲು ಬಂದರು ಇತರರು ಹೊರಡುವಾಗ ಸ್ವಲ್ಪ ದಕ್ಷಿಣೆಯನ್ನು ಇಟ್ಟು ಹೋಗುತ್ತಿದ್ದರು.
ಸ್ವಲ್ಪ ದಿನಗಳಲ್ಲಿಯೇ ಒಳ್ಳೆಯ ಹೆಸರು ಪಡೆದನು ಯಾವ ರೀತಿ ಹೆಸರು ಪಡೆದನು ಎಂದರೆ ದೂರ ದೂರದ ಊರುಗಳಿಂದ ಬರುತ್ತಿದ್ದರು. ಕೊನೆಗೆ ಒಂದು ಸಾರಿ ರಾಜನು ಬಂದು ಈ ಸಾಧು ಅವರನ್ನು ಕಂಡು ಆಶೀರ್ವಾದ ಪಡೆದು ಬಂದನು.
ನಂತರ ಬಾಬಾ ಅವರನ್ನು ಭೇಟಿಯಾದನು ಆಗ ಬಾಬಾ ಅವರು ಹೇಳಿದರು ನೀವು ದರ್ಶನ ಮಾಡಿ ಬಂದ ವ್ಯಕ್ತಿ ಯಾರು? ನಿಮಗೆ ಗೊತ್ತೇ ಎಂದಾಗ ರಾಜ ಗೊತ್ತಿಲ್ಲ ಎನ್ನುತ್ತಾನೆ ಬಾಬಾ ಅವರು ಕೆಲವು ದಿನಗಳ ಹಿಂದೆ ನೀವು ಆ ವ್ಯಕ್ತಿಯನ್ನು ವ್ಯಂಗವಾಗಿ ಮಾತನಾಡಿದ್ದೀರಿ ಅದೇ ವ್ಯಕ್ತಿಯಿಂದ ಇಂದು ನೀವು ಆಶೀರ್ವಾದ ಪಡೆದಿದ್ದೀರಾ ಎಂದಾಗ ರಾಜನು ಆಶ್ಚರ್ಯನಾದನು.
ಕೆಲವರು ವಿದ್ಯಾವಂತರು ಬುದ್ಧಿವಂತರು ಒಳ್ಳೆಯ ಜಾಣ್ಮೆ ಇರುತ್ತದೆ ಆದರೆ ಅವರಿಗೆ ಸರಿಯಾದ ವೇದಿಕೆ ಸಿಗುವುದಿಲ್ಲ ಆದ್ದರಿಂದ ಅವರು ಶೋಚನೀಯ ಸ್ಥಿತಿಯಲ್ಲಿ ಇರುತ್ತಾರೆ ಅವರಿಗೆ ಸರಿಯಾದ ವೇದಿಕೆ ಸಿಕ್ಕಿದರೆ ಅವರು ಕೂಡ ಬೃಹತ್ತಾಗಿ ಬೆಳೆಯುತ್ತಾರೆ ಎಂದು ಬಾಬಾ ಅವರು ಹೇಳಿದರು. ಮಾಡುವ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡೋಣ.
ನಾನೇ ಮೂರ್ಖನಾದೆ
ಚಾಣಾಕ್ಷ ರಾಜಣ್ಣ ಎಂಬುವನು ಇದ್ದನು ರಾಜಣ್ಣನು ದೇಶದ ಗಡಿಯಲ್ಲಿ ವಾಸಿಸುತ್ತಿದ್ದನು ಅಂದರೆ ಇಲ್ಲಿಂದ ಸ್ವಲ್ಪ ದೂರ ಹೋದರೆ ಬೇರೆ ದೇಶಕ್ಕೆ ಹೋಗಬಹುದು ಆದರೆ ಈ ದೇಶದಿಂದ ಬೇರೆ ದೇಶಕ್ಕೆ ಹೋಗಬೇಕಾದರೆ ಒಂದು ಚಿಕ್ಕ ದಾರಿಯಿದೆ.
ಯಾವುದೇ ಕಾರಣಕ್ಕೂ ನುಗ್ಗಿ ಹೋಗುವುದಕ್ಕೆ ಆಗುವುದಿಲ್ಲ ಯಾರೇ ಹೋಗಬೇಕಾದರೂ ಅದಕ್ಕೆ ಒಂದು ಗೇಟ್ ಇದೆ ಅಲ್ಲಿ ಸೈನಿಕರು ಇರುತ್ತಾರೆ ಯಾರೇ ಹೋದರು ತಪಾಸಣೆ ಮಾಡುತ್ತಾರೆ ಕಾವಲುಗಾರರನ್ನು ದಾಟಿಕೊಂಡು ಮುಂದೆ ಹೋಗಬೇಕು ಈ ದೇಶದಿಂದ ಆ ದೇಶಕ್ಕೆ ಹೋಗಬೇಕಾದರೆ ಎಲ್ಲರಿಗೂ ಸರಿಯಾಗಿ ಪರಿಶೀಲನೆ ಮಾಡುತ್ತಾರೆ.
ಕಳ್ಳಸಾಗಣೆ ಆಗಬಾರದು ಎಂದು ಪರಿಶೀಲಿಸುತ್ತಾರೆ ದಿನನಿತ್ಯದ ಕೆಲವು ವಸ್ತುಗಳು ತರಕಾರಿ ಹಾಲು ಮೊಸರು ಈ ಚಿಕ್ಕ ಚಿಕ್ಕ ವಸ್ತುಗಳು ತೆಗೆದುಕೊಂಡು ಈ ದೇಶದಿಂದ ಆದೇಶಕ್ಕೆ ಮಾರುತ್ತಿದ್ದರು ಆದರೆ ರಾಜಣ್ಣ ಎಂಬುವನು ತುಂಬಾ ಬುದ್ದಿವಂತ ಅವನು ದಿನನಿತ್ಯ ಈ ಗಡಿಗೆ ಬರುತ್ತಿದ್ದನು.
ರಾಜಣ್ಣನಿಗೆ ಹೇಗೆ ಪರಿಶೀಲನೆ ಮಾಡಿದರೂ ಕೂಡ ರಾಜಣ್ಣ ಸಿಕ್ಕಿಕೊಳ್ಳುತ್ತಿರಲಿಲ್ಲ ಆದರೆ ಇವನ ವ್ಯಾಪಾರವು ತುಂಬಾ ಚೆನ್ನಾಗಿ ನಡೆಯುತ್ತಿತ್ತು ಆದರೂ ಕಾವಲುಗಾರನಿಗೆ ಅನುಮಾನ ಇವನು ವ್ಯಾಪಾರ ಮಾಡುತ್ತಿದ್ದಾನೆ ವಿಧ ವಿಧವಾಗಿ ಪರಿಶೀಲಿಸುತ್ತಿದ್ದರು ಹೀಗೆ ಕೆಲವು ವರ್ಷಗಳು ಕಳೆದವು ಇಬ್ಬರು ಕೂಡ ನಿವೃತ್ತಿಯಾದರು.
ಆಗ ಆ ಕಾವಲುಗಾರನು ಹೇಳಿದ ನೀನು ವ್ಯಾಪಾರದಲ್ಲಿ ತುಂಬಾ ಚೆನ್ನಾಗಿ ಉನ್ನತಿಯಾಗಿದ್ದೀಯಾ ಹೇಗೆ ಸಾಧ್ಯವಾಯಿತು ಎಂದಾಗ ರಾಜಣ್ಣ ಕಾವಲುಗಾರರಿಗೆ ಹೇಳುತ್ತಾನೆ ನೀನು ದಿನ ತಪಾಸಣೆ ಮಾಡಿದ್ದೀಯಾ ಆದರೆ ಸರಿಯಾಗಿ ಮಾಡಿಲ್ಲ ನಾನು ದಿನನಿತ್ಯವೂ ಹಿತ್ತಾಳೆಯ ಪಾತ್ರೆ ಬದಲಿ ಮಾಡಿ ತೆಗೆದುಕೊಂಡು ಹೋಗುತ್ತಿದ್ದೆ ಎಂದು ಹೇಳುತ್ತಾನೆ.
ಇಲ್ಲಿಯ ಹೊಸ ಹಿತ್ತಾಳೆಯ ಪಾತ್ರೆಗೆ ಅಲ್ಲಿ ಒಳ್ಳೆಯ ಬೆಲೆ ಸಿಗುತ್ತದೆ ಅಲ್ಲಿಂದ ನಾನು ಬರಬೇಕಾದರೆ ಹಳೆಯ ಹಿತ್ತಾಳೆಯ ಪಾತ್ರೆ ತರುತ್ತಿದೆ ಇಲ್ಲಿಂದ ತೆಗೆದುಕೊಂಡು ಹೋಗಬೇಕಾದರೆ ನಾನು ಒಂದು ಹೊಸ ಹಿತ್ತಾಳೆಯ ಪಾತ್ರೆ ತೆಗೆದುಕೊಂಡು ಹೋಗಿ ಅಲ್ಲಿ ಮಾರುತ್ತಿದ್ದೆ ಇದರಿಂದ ನಾನು ತುಂಬಾ ಅಭಿವೃದ್ಧಿಯಾಗಿದ್ದೇನೆ ಎಂದು ಹೇಳಿದನು ಆಗ ಕಾವಲುಗಾರನು ತಲೆಯ ಮೇಲೆ ಕೈ ಇಟ್ಟುಕೊಂಡನು ನಾನೇ ಮೂರ್ಖನಾದೆ ಎಂದು ಅರ್ಥಮಾಡಿಕೊಂಡನು.
ರಾತ್ರಿ ಎಚ್ಚರವಾಗಿ ಇರುತ್ತೇನೆ
ಮಾಲೀಕನು ಒಂದು ನಾಯಿಯನ್ನು ಸಾಕಿರುತ್ತಾನೆ ಆ ನಾಯಿಯು ಮಾಲೀಕ ಕೆಲಸ ಮಾಡಬೇಕಾದರೆ ನಾಯಿಯು ಮಲಗಿರುತ್ತದೆ ಮಾಲೀಕನಿಗೆ ಕೋಪ ಬಂದು ನಾಯಿಯನ್ನು ಎಚ್ಚರಿಸುತ್ತಾನೆ.
ನಿನಗೆ ಕಣ್ಣು ಕಾಣುತ್ತಿಲ್ಲವೇ ನಾನು ಇಷ್ಟೊಂದು ಕಷ್ಟ ಪಡುತ್ತಿದ್ದೇನೆ ನೀನು ನೆಮ್ಮದಿಯಾಗಿ ಮಲಗಿದ್ದೀಯಾ ಎಂದಾಗ ನಾಯಿ ವಿನಮ್ರವಾಗಿ ಹೇಳುತ್ತದೆ.
ನೀವು ರಾತ್ರಿ ಗೊರಕೆ ಹೊಡೆದು ಮಲಗಿರಬೇಕಾದರೆ ಎಚ್ಚರವಾಗಿ ನಾನೂ ಇರುತ್ತೇನೆ ಈಗ ನಾನು ಮಲಗಿಕೊಂಡರೆ ಏನು ನಷ್ಟ ಇದೇ ರೀತಿ ಕೆಲವು ಕಾರ್ಮಿಕರು ಬೇರೆ ಸಮಯದಲ್ಲಿ ತುಂಬ ಚೆನ್ನಾಗಿ ಕಷ್ಟಪಟ್ಟು ಕೆಲಸ ಮಾಡುತ್ತಾರೆ ಕೆಲವರು ಕೆಲಸಗಾರರನ್ನು ಅರ್ಥಮಾಡಿಕೊಳ್ಳುವುದಿಲ್ಲ ಕೆಲವು ಮಾಲೀಕರು ಸುಮ್ಮನೆ ನಿಂತಿದ್ದಾಗ ಕೆಲಸಗಾರರಿಗೆ ಬೇರೆ ಬೇರೆ ಕೆಲಸಗಳು ನೀಡುತ್ತಲೇ ಇರುತ್ತಾರೆ. ನಾನು ಕೆಲಸ ಮಾಡಿದವರ ಕಷ್ಟವನ್ನು ಅರ್ಥಮಾಡಿಕೊಳ್ಳುತ್ತೇನೆಯೇ?
ಆತ್ಮಸಾಕ್ಷಿಗೆ ವಿರುದ್ಧವಾಗಿ
ಒಂದು ಶಾಲೆಯ ಕಾರ್ಯಕ್ರಮಕ್ಕೆ ಹೋಗಿದ್ದೆ ಆಗ ಪ್ರಾಂಶುಪಾಲರು ದೂರದಿಂದ ಒಂದು ಹುಡುಗನನ್ನು ತೋರಿಸಿ ಹೇಳಿದರು ಈ ಹುಡುಗ ಪ್ರತಿವರ್ಷದಲ್ಲಿಯೂ ಒಳ್ಳೆಯ ಅಂಕಗಳನ್ನು ಪಡೆದು ಉತ್ತೀರ್ಣನಾಗಿದ್ದಾನೆ ಆದರೆ ಈ ಸಾರಿ ಅರ್ಧವಾರ್ಷಿಕ ಪರೀಕ್ಷೆಯಲ್ಲಿ ತುಂಬಾ ಕಡಿಮೆ ಅಂಕ ಪಡೆದಿದ್ದ ಆದುದರಿಂದ ನಾನು ಆ ವಿದ್ಯಾರ್ಥಿಯನ್ನು ಬಂದು ಮಾತನಾಡಲು ಹೇಳಿದೆ ನನ್ನ ಕಚೇರಿಗೆ ಬಂದು ಹುಡುಗನಿಗೆ ಮೊದಲು ಕುಶಲೊಪರಿ ವಿಚಾರಿಸಿ ನಂತರ ಕೇಳಿದೆ.
ನೀನು ಇಲ್ಲಿಯವರೆಗೂ ಒಳ್ಳೆಯ ಅಂಕಗಳನ್ನು ಪಡೆದಿದ್ದೀಯಾ ಆದರೆ ಈ ಅರ್ಥವಾರ್ಷಿಕ ಪರೀಕ್ಷೆಯಲ್ಲಿ ಅಂಕಗಳು ಏಕೆ ಕಡಿಮೆ ಪಡೆದಿದ್ದೀಯಾ ಎಂದಾಗ ಹುಡುಗನು ತನ್ನ ಕತ್ತನ್ನು ತಗ್ಗಿಸಿಕೊಂಡು ಮುಚ್ಚುಮರೆ ಇಲ್ಲದೆ ಪ್ರಾಮಾಣಿಕವಾಗಿ ಹೇಳಿದನು ನೀವು ನನ್ನನ್ನು ಈ ಶಾಲೆಯಿಂದ ಕಳಿಸಬಾರದು ಮತ್ತೆ ನಮ್ಮ ತಂದೆ ತಾಯಿಗೆ ಹೇಳಬಾರದು ಮತ್ತೆ ವಿದ್ಯಾರ್ಥಿಗಳಿಗೆ ಹೇಳಬಾರದು ಆಗ ನಾನು ಹೇಳುತ್ತೇನೆ ಎಂದು ಹೇಳಿದ.
ನಾನು ಆಗಲಿ ಎಂದು ಭರವಸೆ ನೀಡಿದೆ ಆಗ ಅವನು ಈ ಸಾರಿ ಅರ್ಧವಾರ್ಷಿಕ ಪರೀಕ್ಷೆ ಬರಿಯಬೇಕಾದರೆ ನಾನು ಹೆಚ್ಚಾಗಿ ಓದಿರಲಿಲ್ಲ ಹೆಚ್ಚು ಅಂಕಗಳು ಬರಬೇಕು ಎಂದು ನಾನು ಒಂದು ಚೀಟಿಯನ್ನು ಇಟ್ಟುಕೊಂಡಿದ್ದೆ ಆಗ ನೀವು ನೋಡಿದ್ದೀರಿ ಎಂದು ಗಾಬರಿಯಾಗಿ ಆ ಚೀಟಿಯನ್ನು ಎಸೆದು ಎಷ್ಟು ಗೊತ್ತಿದೆ ಅಷ್ಟು ಮಾತ್ರ ಬರೆದೆ ಆದುದರಿಂದ ನನಗೆ ಅಂಕಗಳು ಕಡಿಮೆ ಬಂದಿದೆ ಎಂದನು.
ಪ್ರಾಂಶುಪಾಲರು ನೀನು ಈ ಶಾಲೆಗೆ ಏಕೆ ಬಂದಿದ್ದೀಯಾ ವಿದ್ಯೆ ಕಲಿಯಲು ಪ್ರಪಂಚದ ಜ್ಞಾನ ಹೆಚ್ಚಿಸಿಕೊಳ್ಳಲು ಹೌದಲ್ಲವೇ ಹಾಗಾದರೆ ನೀನು ನಕಲು ಏಕೆ ಮಾಡುತ್ತೀಯಾ ಮತ್ತೆ ಇಂದು ನೀನು ಒಳ್ಳೆಯ ವಿದ್ಯಾರ್ಥಿ ಆಗಿದ್ದೀಯ ಏಕೆಂದರೆ ನಿನ್ನ ಆತ್ಮಸಾಕ್ಷಿಯಾಗಿ ನಡೆದುಕೊಂಡಿದ್ದೀಯಾ.
ನೀನು ಒಳ್ಳೆಯ ವಿದ್ಯಾರ್ಥಿ ಆಗುತ್ತೀಯಾ ಎಂದು ಹೇಳಿ ಮತ್ತೆ ಹೇಳಿದರು ಬಹುತೇಕರು ತಪ್ಪು ಮಾಡಿರುತ್ತಾರೆ ಆದರೆ ಮಾಡಿದ ತಪ್ಪಿಗೆ ಒಂದು ಕುರುಹು ಕೂಡ ಬಿಟ್ಟಿರುವುದಿಲ್ಲ ಆದರೂ ಕೂಡ ಅವರ ಮನಸ್ಸಿನಲ್ಲಿ ಮಾಡಿದ ತಪ್ಪು ಕಾಡುತ್ತಿರುತ್ತದೆ.
ಇತರರು ಬಂದಾಗ ಭಯವಾಗುತ್ತದೆ ಎಲ್ಲಿ ಸಿಕ್ಕಿ ಬೀಳುತ್ತೇನೆ ಮತ್ತೆ ಮನಸ್ಸಿನಲ್ಲಿ ತಪ್ಪು ಮಾಡಿದ ಭಯ ಇದ್ದಾಗ ತಪ್ಪು ಮಾಡಿದವರ ವರ್ತನೆ ಬದಲಾಗಿರುತ್ತದೆ. ಇದರಿಂದಾಗಿ ಸಿಕ್ಕಿ ಬೀಳುತ್ತಾರೆ ಪೊಲೀಸಿನವರು ಹೇಳುತ್ತಾರೆ ನಮ್ಮ ಮುಂದೆ ಹೋದಾಗ ಅವರ ವರ್ತನೆ ಸ್ವಲ್ಪ ಬದಲಾಗಿರುತ್ತದೆ ಆದುದರಿಂದ ನಾವು ಅವರನ್ನು ಸುಲಭವಾಗಿ ಹಿಡಿಯುತ್ತೇವೆ ಎಂದು ಹೇಳುತ್ತಾರೆ ಹಲವಾರು ವ್ಯಾಪಾರಸ್ಥರು ಕೂಡ ಹೀಗೆ ಮಾಡುತ್ತಾರೆ.
ಗ್ರಾಹಕರಿಗೆ ಕಳಪೆ ವಸ್ತುಗಳನ್ನು ಮಾರುತ್ತಾರೆ ಆದರೆ ಗ್ರಾಹಕರಿಗೆ ಅದು ತಿಳಿಯುವುದಿಲ್ಲ ವ್ಯಾಪಾರಿಗೆ ಮಾತ್ರ ನಾನು ಕಳಪೆ ವಸ್ತುವನ್ನು ಕೊಟ್ಟಿದ್ದೇನೆ ಎನ್ನುವ ಗಾಬರಿ ಇರುತ್ತದೆ ಮುಂದೆ ಒಂದು ದಿನ ಗೊತ್ತಾದಾಗ ಆ ಗ್ರಾಹಕರು ಮತ್ತೆ ಬರಲಾರರು ಯಾವುದೇ ಕೆಲಸ ಮಾಡಿದರು ಆತ್ಮ ಸಾಕ್ಷಿಯಾಗಿ ಮಾಡುವುದು ಒಳ್ಳೆಯದು ಎಂದು ಹೇಳಿದೆ ನಂತರ ಹುಡುಗ ಬದಲಾದನು ನಂತರ ಇಡೀ ಶಾಲೆಗೆ ಇವನೇ ಹೆಚ್ಚು ಅಂಕಗಳನ್ನು ಪಡೆದನು. ನಾನು ಮಾಡಿದ ತಪ್ಪು, ನಾನು ಅರ್ಥ ಮಾಡಿಕೊಂಡಿದ್ದೇನೆಯೇ?