ಮನುಷ್ಯನ ಆಸೆಗೆ ಮಿತಿ ಇದೆಯೇ?

ಒಂದು ವಿಶಾಲವಾದ ಮಾವಿನ ಮರ ಇತ್ತು ಅದರಲ್ಲಿ ಬಲಿತ ಪಕ್ಕ ಕೆಂಪು ಬಣ್ಣದ ಮಾವಿನ ಹಣ್ಣುಗಳು ಇದ್ದವು ಅದೇ ಮರದಲ್ಲಿ ಹಲವಾರು ಹಕ್ಕಿಗಳು, ಪಕ್ಷಿಗಳು ಕೂಡ ಇದ್ದವು ಅದರಲ್ಲಿ ಕೋಗಿಲೆಗಳು ಕೂಡ ವಾಸವಾಗಿದ್ದವು ಆ ಪಕ್ಷಿಗಳು ಎಲ್ಲವೂ ಸುಖವಾಗಿ ಜೀವಿಸುತ್ತಿದ್ದವು.

 ಒಂದು ದಿನ ಒಬ್ಬ ಮನುಷ್ಯನು ಸುಮ್ಮನೆ ಅಲ್ಲಿಗೆ ಬಂದನು ಆ ಮರವನ್ನು ನೋಡಿದ  ಆ ಮರವು ಯಾರದು ಅಲ್ಲ ಸಾರ್ವಜನಿಕರಿಗೆ ಸೇರಿದ ಜಾಗದಲ್ಲಿ ಇತ್ತು ಅದನ್ನು ನೋಡಿದ ಮನುಷ್ಯ ತುಂಬ ಸಂತೋಷಪಟ್ಟ ಏಕೆಂದರೆ ಈ ಮಾವಿನ ಹಣ್ಣುಗಳು ಸುಮ್ಮನೆ ಬಿಟ್ಟರೆ ಹಾಳಾಗಿ ಹೋಗುತ್ತವೆ.

 ಮಾವಿನ ಹಣ್ಣುಗಳು ಮಾರುಕಟ್ಟೆಗೆ ಮಾರಿದರೆ ತುಂಬ ಲಾಭ ಬರುತ್ತದೆ ಎಂದು ಯೋಚಿಸಿದವನು ಮರವನ್ನು ಹತ್ತಿ ಒಂದೊಂದೇ ಒಂದೊಂದೇ ಹಣ್ಣನ್ನು ಕೀಳಲು ಶುರುಮಾಡಿದನು ಮಾವಿನ ಮರದಲ್ಲಿ ಸಾಕಷ್ಟು ಹಣ್ಣುಗಳು ಖಾಲಿಯಾದವು ಆಗ ಮರಕ್ಕೆ ಯೋಚನೆ ಬಂತು.

 ಇವನು ಎಲ್ಲಾ ಹಣ್ಣುಗಳು ಕಿತ್ತುಕೊಳ್ಳುವವನೇ ಆದರೂ ಇವನಿಗೆ ಎಚ್ಚರಿಸೋಣ ಎಂದು ಮರ ಹೇಳಿತು ಸ್ವಲ್ಪ ಹಣ್ಣು ಬಿಡು ಏಕೆಂದರೆ ಇದರಲ್ಲಿ ಹಲವಾರು ಪಕ್ಷಿಗಳು ಹಕ್ಕಿಗಳು ಇವೆ. ಆದರೆ ಮನುಷ್ಯ ಕೇಳುತ್ತಾನೆಯೇ ಇಲ್ಲಾ ಇಲ್ಲಾ ಎಂದು ಮತ್ತೆ ಹಣ್ಣುಗಳನ್ನು ಕೇಳಲಿಕ್ಕೆ ಶುರು ಮಾಡಿದನು.

 ಕೊನೆಗೆ ನೆತ್ತಿಯಲ್ಲಿ ಒಂದೇ ಒಂದು ಆಕರ್ಷಿಕವಾದ ಮಾವಿನ ಹಣ್ಣು ಉಳಿಯಿತು ಅದನ್ನು ಕೂಡ ಕೀಳುವುದಕ್ಕೆ ಹೋಗುತ್ತಿದ್ದಾಗ ಕೊನೆಯದಾಗಿ ಮರ ಹೇಳಿತು ನೋಡು ಇದು ಒಂದು ಹಣ್ಣಾದರೂ ಬಿಡು ಎಂದು ಪರಿಪರಿಯಾಗಿ ಬೇಡಿಕೊಂಡಿತು ಎಷ್ಟು ಹೇಳಿದರೂ ಮನುಷ್ಯ ಬಿಟ್ಟಾನೆಯೇ ಮನುಷ್ಯನ ಆಸೆಗೆ ಮಿತಿ ಇದೆಯೇ ಇಲ್ಲ ಅದರಂತೆಯೇ ಆ ಮನುಷ್ಯ ತುತ್ತತುದಿಯಲ್ಲಿದ್ದ ಹಣ್ಣನು ಬಿಡುವುದು ಬೇಡ ಎಂದು ಹತ್ತಿದನು.

 ಆದರೆ ಕೈ ಎಟುಕಲಿಲ್ಲ ಇನ್ನಷ್ಟು ಮತ್ತಷ್ಟು ಮುಂದೆ ಕೈ ಚಾಚಿದ ಆದರೆ ಅದು ಮನುಷ್ಯನ ಭಾರವನ್ನು ಕೊಂಬೆ ತಾಳಲಾರದೆ ಮುರಿದುಬಿತ್ತು ಆ ಹಣ್ಣು ಕೂಡ ಕೈಯಲ್ಲೇ ಇತ್ತು ಇವನು ಕೂಡ ಎಲ್ಲಾ ಹಣ್ಣುಗಳ ಮೇಲೆ ಬಿದ್ದನು ತನ್ನ ಪ್ರಾಣವನ್ನು ಕಳೆದುಕೊಂಡನು.

  ಬೇಡಿ ತಿನ್ನುವ ಜಾತಿಯಲ್ಲ

ಅರಣ್ಯದಲ್ಲಿ ಒಂದು ಮೊಲದ ಚಿಕ್ಕ ಕುಟುಂಬ ವಾಸವಾಗಿತ್ತು ಅದರಲ್ಲಿ ತಂದೆ ತಾಯಿ 4 ಮಕ್ಕಳು ಎಲ್ಲವೂ ಇದ್ದವು ಮೊದಲು ತಂದೆ ಮೊಲ ಹೋಗಿ ತಾನು ತಿಂದು ನಂತರ ಮಕ್ಕಳಿಗಾಗಿ ತರುತ್ತಿತ್ತು ತಾಯಿ ಹೋಗಿ ತಿಂದು ನಂತರ ಮಕ್ಕಳಿಗೆ ಆಹಾರ ನೀಡುತ್ತಿತ್ತು.

ತುಂಬಾ ನೆಮ್ಮದಿಯಾಗಿ ಜೀವನ ಸಾಗಿಸುತ್ತಿದ್ದವು ಹೀಗೆ ಕೆಲವು ದಿನಗಳು ನಡೆಯಿತು ನಂತರ ಒಂದು ಸಾರಿ ತಂದೆಯಾದ ಮೊಲ ಮನೆಯಿಂದ ಹೊರಗೆ ಹೋಗಿದ್ದು ತಿರುಗಿ ಮತ್ತೆ ಬರಲಿಲ್ಲ ನಂತರದ ಕೆಲವು ದಿನದಲ್ಲಿ ತಾಯಿಯೂ ಕೂಡ ಹೋಯಿತು.

ಮೊಲಗಳ ತಾಯಿಯು ಕೂಡ ಮತ್ತೆ ವಾಪಸ್ ಬರಲಿಲ್ಲ ನಂತರ ಚಿಕ್ಕ ಮೂಲಗಳೇ ತಾವೇ ತನ್ನ ಆಹಾರವನ್ನು ಹುಡುಕಿ ತಿಂದು ಬದುಕಬೇಕಾದ ಪರಿಸ್ಥಿತಿ ಬಂತು ನಂತರ ಎಲ್ಲಾ ತನ್ನ ತಮ್ಮಂದಿರು ಬೇರೆ ಬೇರೆಯಾಗಿ ಬದುಕ ಬೇಕಾಯಿತು ಆದರೆ ಒಂದು ಮರಿ ಮಾತ್ರ ಅದೇ ಮರದ ಕೆಳಗೆ ಬದುಕುತ್ತಿತ್ತು.

 ಆಗ ಇದೆಲ್ಲವನ್ನು ಗಮನಿಸಿದ ಗಿಳಿಯು ಹೇಳಿತು ನಿನಗೆ ಕಷ್ಟ ಜಾಸ್ತಿಯಾಗಿದೆ ಬರಬಾರದ ದುರಂತ ಬಂದಿದೆ

ಎಂದು ಮರುಗಿತು ಕುಟುಂಬದವರು ಯಾರೂ ಇಲ್ಲ ಎಂತಹ ಕಷ್ಟ ನಿನಗೆ ತಂದೆ ತಾಯಿ ಅಣ್ಣ ತಮ್ಮಂದಿರು ಯಾರೂ ಕೂಡ ನಿನ್ನಲ್ಲಿ ಇಲ್ಲ ಸ್ವಲ್ಪ ದೂರ ಊರಿಗೆ ಹೋದರೆ ಅಲ್ಲಿ ಒಂದು ಮಂದಿರವಿದೆ.

 ಅಲ್ಲಿಗೆ ರಾಜರು ಮಹಾರಾಜರು ಜನಸಾಮಾನ್ಯರು ಎಲ್ಲರೂ ಬಂದು ಅಲ್ಲಿ ಅವರವರ ಕಷ್ಟಗಳನ್ನು ಹೇಳಿಕೊಳ್ಳುತ್ತಾರೆ ಅವರಿಗೆಲ್ಲರಿಗೂ ಒಳ್ಳೆಯದಾಗುತ್ತದೆಯಂತೆ ಆದ್ದರಿಂದ ನೀನು ಕೂಡ ಹೋಗಿ ನಿನ್ನ ಕಷ್ಟಗಳನ್ನು ಹೇಳಿಕೊ ನಿನ್ನ ಬೇಡಿಕೆಯೂ ಈಡೇರಬಹುದು ಎಂದು ಹೇಳುತ್ತೆ ಆಗ ಮೊಲ ನನ್ನ ಆಪ್ತಮಿತ್ರನೇ ನಿನ್ನ ಸಲಹೆ ತುಂಬಾ ಚೆನ್ನಾಗಿದೆ ಆದರೆ ಒಂದು ಮಾತು ಹೇಳಲು ನಾನು ನಿನಗೆ ಇಷ್ಟ ಪಡುತ್ತೇನೆ.

 ನಮ್ಮ ಬದುಕು ಮನುಷ್ಯರ ಬದುಕಿನಂತೆ ಅಲ್ಲ ಬೇಡಿ ತಿನ್ನುವ ಜಾತಿಯಲ್ಲ ನಮ್ಮದು ಏನೇ ಇದ್ದರೂ ಬದುಕುವ ಜಾತಿ ನಾವು ಸಾವನ್ನು ಬದುಕಿನ ಒಂದು ಅಂಗವೆಂದೇ ಸ್ವೀಕರಿಸಿದ್ದೇವೆ ಯಾವ ಆಯುಧಗಳು ಇಲ್ಲದೆ ಕ್ರೂರ ಮೃಗಗಳೊಂದಿಗೆ ಹಲವಾರು ವರ್ಷಗಳಿಂದ ಧೈರ್ಯವಾಗಿ ಬದುಕುತ್ತ ಬಂದಿದ್ದೇವೆ ಎಂದಿತು.

 ಮೊಲದ ಆತ್ಮ ವಿಶ್ವಾಸಕ್ಕೆ ಗಿಳಿಯು ಸಂತೋಷಪಟ್ಟಿತು. ಬದುಕನ್ನು ಇರುವಂತೆ ಸ್ವೀಕರಿಸುವ ಮನೋಭಾವನೆ ಬರಬೇಕು ಯಾವುದೇ ಕಷ್ಟಗಳು ಬಂದರೂ ಎದುರಿಸುವ ಮನೋಬಲಹೆಚ್ಚಿಸಿಕೊಳ್ಳೋಣ.

ಒಂದು ಹೆಸರು ಮಾತ್ರ ಉಳಿಸಿ ಕೊಂಡಳು

ಶಿಕ್ಷಕರು ತರಬೇತಿ ನೀಡಲು ಹೋದರು ಶಿಕ್ಷಕರು ಸಾಮಾನ್ಯವಾಗಿ ಚಟುವಟಿಕೆಯಿಂದ ಪಾಠ ಕಲಿಸುವವರು ಅವರು ಹೇಳಿದರು ಸ್ವಯಂ ಪ್ರೇರಿತವಾಗಿ ಯಾರು ಬೇಕಾದರೂ ಬನ್ನಿ ಎಂದಾಗ ಒಬ್ಬಳು ಹೆಂಗಸು ಮಾತ್ರ ಬಂದಳು.

ಅವಳಿಗೆ ಶಿಕ್ಷಕರು ಹೇಳಿದರು ನಿಮಗೆ ಮುಖ್ಯ ಎನಿಸುವ ಮೂವತ್ತು ಜನರ ಹೆಸರನ್ನು ಬರೆಯಿರಿ ಎಂದು ಹೇಳಿದರು ಅವಳು ತನ್ನ ಮನೆಯವರು, ಕುಟುಂಬದವರು, ಸಂಬಂಧಿಕರು, ನೆರೆಹೊರೆಯವರು, ಸಹೋದ್ಯೋಗಿಗಳು, ಎಲ್ಲರ ಹೆಸರು ಬರೆದಳು.

 ಆಗ ಅವಳಿಗೆ ಹೇಳಿದರು ಹತ್ತು ಹೆಸರನ್ನು ಅಳಿಸು ಎಂದಾಗ ಅದಕ್ಕೆ ಅವಳು ಹತ್ತು ಹೆಸರನ್ನು ಸುಲಭವಾಗಿ ಅಳಿಸಿದಳು ನಂತರ ಹತ್ತು ಹೆಸರನ್ನು ಅಳಿಸಲು ಹೇಳಿದರು ನಂತರ ಐದು ಹೆಸರನ್ನು ಅಳಿಸಲು ಹೇಳಿದರು ಆಗ ಆಕೆ ಸ್ವಲ್ಪ ಯೋಚಿಸಿದಳು ಅಳಿಸಿದಳು ಆಕೆಗೆ ಉಳಿದಿದ್ದು 1 ತಾಯಿ 2 ತಂದೆ ತನ್ನ 3 ಗಂಡ 2ಮಕ್ಕಳು ಮಾತ್ರ ಮತ್ತೆ ಎರಡನ್ನು ಅಳಿಸಿ ಎಂದಾಗ ಕಷ್ಟಪಟ್ಟು ತಂದೆ ತಾಯಿಯರ ಹೆಸರನ್ನು ಅಳಿಸಿದಳು.

 ಮತ್ತೆ ಎರಡನ್ನೂ ಅಳಿಸಿ ಅಂದಾಗ ಅವಳು ಕಷ್ಟಪಟ್ಟು ಕಣ್ಣೀರಿಡುತ್ತಾ 2 ಮಕ್ಕಳ ಹೆಸರನ್ನು ಅಳಿಸಿದಳು ಆಗ ಉಳಿದಿದ್ದು ಒಂದೇ ಒಂದು ಹೆಸರು ಗಂಡನದು ಒಂದು ಹೆಸರು ಮಾತ್ರ ಉಳಿಸಿ ಕೊಂಡಳು ಅದನ್ನು ಅಳಿಸಲು ಅವಳಿಗೆ ಕೈ ಮೇಲೆ ಬರಲಿಲ್ಲ ಇಲ್ಲಿಗೆ ಶಿಬಿರ ಮುಗಿದಿರಬೇಕು ಎಂದು ಅನಿಸಿತು.

 ಆದರೆ ಅದೇ ಅರಂಭ ಆಗ ಶಿಕ್ಷಕರು ಕೇಳಿದರೂ ಹೆಸರುಗಳನ್ನು ಅಳಿಸಬೇಕಾದರೆ ಹೇಗೆ ಅನಿಸಿತು ಎಂದಾಗ ನನ್ನ ತಂದೆ ತಾಯಿ ನನ್ನನ್ನು ಹೆತ್ತು ಹೊತ್ತು ಸಾಕಿದ್ದಾರೆ ಅವರಿಗೆ ಅವರ ಜೀವನವಿದೆ ಅದಕ್ಕೆ ಕಷ್ಟಪಟ್ಟು ತಂದೆತಾಯಿಯರ ಹೆಸರನ್ನು ಅಳಿಸಿದೆ.

  ಮತ್ತೆ ನನ್ನ ಮಕ್ಕಳು ಅವರು ಕೂಡ ಮದುವೆಯಾಗಿ ಬೇರೆ ಬೇರೆಯಾಗಿ ಬದುಕುತ್ತಾರೆ ಅವರಿಗೂ ಒಂದು ಮಾರ್ಗವಿದೆ ಅದಕ್ಕೆ ಅಳಿಸಿದೆ ನಂತರ ನನ್ನ ಕೊನೆಯವರೆಗೆ ಇರುವವರು ನಮ್ಮ ಪತಿ ಎಂದು ಹೇಳಿದಳು.

  ಸಂತೋಷ ಇಲ್ಲದೆ, ಸ್ವಾತಂತ್ರ್ಯವಿಲ್ಲದೆ

ಒಂದು ಕಾಗೆ ಸಂತೋಷದಿಂದ ಬದುಕುತ್ತಿತ್ತು ಒಮ್ಮೆ ನೀರು ಕುಡಿಯಲು ಬೇರೆ ಕಡೆ ಹೋಯಿತು ಆ ಕೆರೆಯ ಬಳಿ ಹೋದಾಗ ಬಿಳಿಯ ಹಂಸವು ಕಂಡಿತು ಆಗ ಕಾಗೆಯು ನಾನು ಕಪ್ಪಗಿದ್ದೇನೆ ನನಗಿಂತ ಹಂಸ ಬಿಳಿಯಾಗಿ ಸುಂದರವಾಗಿದೆ. ಇದು ಅತ್ಯಂತ ಸುಖಿಯಾಗಿ ಇರುವ ಪಕ್ಷಿಯಾಗಿದೆ ಎಂದು ಕಾಗೆಯು ತಿಳಿದುಕೊಂಡಿತು.

 ನಂತರ ಹಂಸದ ಹತ್ತಿರ ಹೋಗಿ ಹೇಳಿತು ನಂತರ ಒಂದು ಗಿಣಿಯನ್ನು ನೋಡಿತು ಗಿಣಿಗೆ ನೋಡಿದಾಗ ಹಂಸ ಅಷ್ಟರಲ್ಲೇ ಎಂದು ಮನಸಲಿ ಅಂದುಕೊಂಡಿತು.

 ಗಿಳಿಯ ಸುಖಿ ಪಕ್ಷಿಯೆಂದು ತಿಳಿಯಿತು ನಂತರ ಗಿಳಿಗೆ ಕೇಳಿದಾಗ ಗಿಳಿ ಹೇಳಿತು ನನಗಿಂತ ಸುಂದರವಾದುದು ನವಿಲು ಎಂದು ಹೇಳಿತು ನಂತರ ಸುಂದರವಾದ ನವಿಲನ್ನು ಹುಡುಕಿಕೊಂಡು ಹೋಯಿತು ನವಿಲು ಸಂಗ್ರಹಾಲಯದಲ್ಲಿ ಪಂಜರದಲ್ಲಿ ಬಂಧಿಯಾಗಿತ್ತು ಅದಕ್ಕೆ ನೋಡಲು ಸಾವಿರಾರು ಜನರು ಬರುತ್ತಿದ್ದರು.

 ಕಾಗೆ ನವಿಲಿನ ಹತ್ತಿರ ಹೋಗಿ ನೀನು ಪ್ರಪಂಚದ ಅತ್ಯಂತ ಸುಂದರ ಪಕ್ಷಿ ನಿನ್ನನು ನೋಡಲು ಎಷ್ಟೊಂದು ಜನ ಬರುತ್ತಾರೆ ಹೀಗಾಗಿ ನೀನೆ ಎಲ್ಲರಿಗಿಂತ ಸುಖವಾಗಿದ್ದೀಯ ಎಂದು ನಾನು ತಿಳಿದಿದ್ದೇನೆ ತನ್ನ ಮನಸ್ಸಿನ ಭಾವನೆ ನವಿಲಿಗೆ ತಿಳಿಸಿತು ಆಗ ಅ ನವಿಲು ಕಣ್ಣೀರು ಹಾಕುತ್ತಾ ಹೇಳಿತು.

 ನಾನು ಈ ಪ್ರಪಂಚದಲ್ಲಿ ಸುಂದರ ಪಕ್ಷಿ ಏನೋ ನಿಜ ಆದರೆ ಸಂತೋಷ ಇಲ್ಲದೆ, ಸ್ವಾತಂತ್ರ್ಯವಿಲ್ಲದೆ ಬದುಕುತ್ತಿರುವ ನತದೃಷ್ಟ ಪಕ್ಷಿ ನಾನು ಎಂದು ಹೇಳಿತು ಏಕೆಂದರೆ ನನ್ನ ಸೌಂದರ್ಯವೇ ನನ್ನ ಸಂತೋಷಕ್ಕೆ ಅಡ್ಡ ಬಂದಿದೆ ಇದೇ ಕಾರಣಕ್ಕೆ ನಾನು ಈ ಪಂಜರದಲ್ಲಿ ಇರಬೇಕಾಗಿದೆ.

ಸ್ವಾತಂತ್ರ ಮತ್ತು ಸಂತೋಷ ಎರಡು ಇಲ್ಲವೇ ಇಲ್ಲ ನಾನು ಕಾಗೆ ಆಗಿದ್ದಿದ್ದರೆ ನಾನು ಸ್ವತಂತ್ರವಾಗಿ ಎಲ್ಲಿ ಬೇಕಾದರೂ ನಾನು ಹಾರಿ ಇರಬಹುದಾಗಿತ್ತು ಎಂದೆನಿಸಿತು ಆಗ ಕಾಗೆಗೆ ಅನ್ನಿಸಿತು ನಾನೇ ಸುಖಿ ಪಕ್ಷಿ ಎಂದು ತನ್ನನ್ನು ತಾನು ಅರಿಯಿತು.

ನಮ್ಮ ಬದುಕು ಕೂಡ ಇದರಂತೆಯೇ ನಾವು ನಮ್ಮನ್ನು ಇತರರೊಂದಿಗೆ ಹೋಲಿಸಿ ಕೊಂಡುಬಿಡುತ್ತೇವೆ ಅವರು ನಮಗಿಂತ ಹೆಚ್ಚು ಸುಖಿ ಎಂದುಕೊಂಡು ದುಖಃ ಪಡುತ್ತಿರುತ್ತೇವೆ ನಮ್ಮಲ್ಲಿ ಇರುವ ವಸ್ತುಗಳೊಂದಿಗೆ ನಾವು ಸುಖವಾಗಿ ಇರಬೇಕು.

 ಅದರ ಬದಲು ಇಲ್ಲದ ವಸ್ತುಗಳ ಬೆನ್ನು ಹತ್ತಿದರೆ ನಮ್ಮ ಸಮಯವೂ ವ್ಯರ್ಥ, ಹಾಗೆ ನಮ್ಮ ಸುಖವು ವ್ಯರ್ಥ, ನಮಗೆ ಏನು ಇದೆಯೋ ಅದರಲ್ಲಿ ಸಂತೃಪ್ತಿಯಾಗಿ ಬದುಕೋಣ. 

  ನಾನೇ ಪ್ರತಿ ಸಾರಿಯು ಗೆಲ್ಲುತ್ತೇನೆ

ಒಬ್ಬ ರಾಜ ಇದ್ದನು. ಅವನು ಬುದ್ಧಿವಂತ ಶಕ್ತಿವಂತ ಪ್ರತಿಸಾರಿಯು ಯಾರೇ ಯುದ್ಧಕ್ಕೆ ಬಂದರೂ ಗೆಲ್ಲುತ್ತಿದ್ದನು.  ತನ್ನ ಸಾಮ್ರಾಜ್ಯವನ್ನು ವಿಸ್ತರಿಸುತ್ತಿದ್ದನು ಯಾವುದೇ ಯುದ್ಧ ಮಾಡಿದರು ಇವನೇ ಗೆಲ್ಲುತ್ತಿದ್ದನು.

 ಇವನ ಮನಸ್ಸಿನಲ್ಲಿ ಏನಿತ್ತು ಎಂದರೆ ಎಲ್ಲಾ ಯುದ್ಧಗಳನ್ನು ನಾನೇ ಗೆಲ್ಲುತ್ತೇನೆ ಎನ್ನುವ ಅಹಂಕಾರವಿತ್ತು ಕಾಲ ಕಳೆದಂತೆ ನಂತರ ನಿಧಾನವಾಗಿ ಪ್ರತಿಯೊಂದು ಯುದ್ಧದಲ್ಲಿ ಸೋಲಲು ಆರಂಭಿಸಿದನು ಎಷ್ಟೇ ಬುದ್ಧಿವಂತಿಕೆ ಉಪಯೋಗಿಸಿದರು ಸೋಲುತ್ತಲೇ ಬಂದನು.

 ಆದರೆ ಯುದ್ಧ ಮಾಡುವುದನ್ನು ಬಿಡಲಿಲ್ಲ ನಂತರ ರಾಜನು ಕಾಣೆಯಾದನು ನಂತರ ಗೊತ್ತಾಯಿತು ರಾಜನು ಆತ್ಮಹತ್ಯೆ ಮಾಡಿಕೊಂಡಿದ್ದನು ಇವನ ಅವನತಿಗೆ ಕಾರಣ ಏನು ಎಂದರೆ ನನ್ನ ಶಕ್ತಿ ಕೊನೆಯವರೆಗೂ ಹೀಗೆ ಇರುತ್ತದೆ ಕೊನೆಯವರೆಗೂ ನಾನೆ ಗೆಲ್ಲುತ್ತೇನೆ ಎನ್ನುವ ವಿಚಾರಗಳು ಇವನ ಮನಸ್ಸಿನಲ್ಲಿ ಅಡಗಿದ್ದವು.

ಕಾಲ ಬದಲಾವಣೆ ಸಹಜವಾಗಿ ಆಗುತ್ತದೆ. ಆದರೆ ಆ ಕಾಲಕ್ಕೆ ತಕ್ಕಂತೆ ಬದುಕುವುದನ್ನು ಕಲಿಯೋಣ.

Leave a Comment