ಒಂದು ಊರಿನಲ್ಲಿ ಒಬ್ಬ ಕರುಣಾಮಯಿ ರಾಜ ಇದ್ದನು ಅವನು ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತಿದ್ದನು ಇದರಿಂದಾಗಿ ರಾಜನಿಗಾಗಿ ಎಲ್ಲರೂ ಗೌರವಿಸುತ್ತಿದ್ದರು. ಕೆಲವು ದಿನಗಳ ನಂತರ ರಾಜನ ಆರೋಗ್ಯ ಕೆಟ್ಟಿತ್ತು ಅದಕ್ಕಾಗಿ ಒಳ್ಳೆಯ ವೈದ್ಯರನ್ನು ಕರೆದರೂ ಆದರೂ ಪ್ರಯೋಜನವಾಗಲಿಲ್ಲ ಸಾಕಷ್ಟು ಚಿಕಿತ್ಸೆಗಳನ್ನು ಮಾಡಿದರು.
ಆದರೂ ಆರೋಗ್ಯ ಸರಿಯಾಗಲಿಲ್ಲ, ಅದಕ್ಕೆ ಊರಿನ ಎಲ್ಲಾ ಪ್ರಜೆಗಳು ಒಂದು ತೀರ್ಮಾನಕ್ಕೆ ಬಂದರು ನಾವೆಲ್ಲರೂ ನಮ್ಮ ರಾಜನ ಆರೋಗ್ಯಕ್ಕಾಗಿ ಒಂದು ದಿನ ಉಪವಾಸವಿದ್ದು ಪ್ರಾರ್ಥಿಸೋಣ ಇದಕ್ಕೆ ಎಲ್ಲರೂ ಒಪ್ಪಿದರು.
ಮಾರನೆಯ ದಿನ ಬೆಳಿಗ್ಗೆಯಿಂದ ಉಪವಾಸ ಇದ್ದರು ಆದರೆ ಅದರಲ್ಲಿ ಒಬ್ಬ ಮಹಾನ್ ಕುಡುಕ ಇದ್ದ ಅವನು ಸೀದಾ ಹೆಂಡ ಖರೀದಿ ಮಾಡಲು ಹೋದನು. ಇದನ್ನು ನೋಡಿದ ಪ್ರಜೆಗಳು ನೇರವಾಗಿ ಕುಡುಕನನ್ನು ಹಿಡಿದು ರಾಜನ ಬಳಿಗೆ ಕರೆ ತಂದರು ಕುಡುಕ ನನ್ನನ್ನು ಏಕೆ ಇಲ್ಲಿಗೆ ಕರೆದುಕೊಂಡು ಬಂದಿದ್ದೀರಾ? ಎಂದು ಕೇಳಿದನು.
ಪ್ರಜೆಗಳು ಹೇಳಿದರೂ ಇವತ್ತು ರಾಜನ ಆರೋಗ್ಯಕ್ಕಾಗಿ ನಾವು ಉಪವಾಸ ಇದ್ದು ಪ್ರಾರ್ಥನೆ ಮಾಡುತಿದ್ದೇವೆ ನಿನಗೆ ಗೊತ್ತಿಲ್ಲವೇ ಆದರೂ ನೀನು ಹೆಂಡವನ್ನು ಕುಡಿಯಲು ಹೋಗುತ್ತಿದ್ದೀಯಲ್ಲ ಎಂದಾಗ ಆ ಕುಡುಕ ಹೇಳಿದ ಅಷ್ಟೇ ತಾನೇ ಎಂದು ಕೈಕಾಲು ಮುಖ ತೊಳೆದು ಬಂದು ಕುಳಿತುಕೊಂಡು ಹೇ ಪರಮಾತ್ಮ ಇದು ಕೂಡ ನಿನ್ನ ಆತ್ಮವೇ ಈ ಆತ್ಮಕ್ಕೆ ಆರೋಗ್ಯ ದಯಪಾಲಿಸು ಎಂದು ಮನದಾಳದಿಂದ ಪ್ರಾರ್ಥನೆ ಮಾಡಿದನು.
ಏನು ಚಮತ್ಕಾರವಾಯಿತು ಪವಾಡವಾಯಿತು ತಿಳಿಯದು ಹಾಸಿಗೆ ಮೇಲೆ ಮಲಗಿದ್ದ ರಾಜನು ನಿಧಾನವಾಗಿ ಚೇತರಿಸಿಕೊಂಡು ಎದ್ದನು ನಂತರ ನನಗಾಗಿ ಪ್ರಾರ್ಥನೆ ಮಾಡಿದವನನ್ನು ಒಳ್ಳೆಯ ಆರೋಗ್ಯ ಹಾಗೂ ಸದಾಕಾಲ ಚೆನ್ನಾಗಿರಲಿ ಎಂದು ಮನದಾಳದಿಂದ ರಾಜನು ಪ್ರಾರ್ಥಿಸಿದನು ಇದನ್ನು ನೋಡಿದ ಊರಿನ ಜನರಿಗೆ ಏನು ಅರ್ಥವಾಗಲಿಲ್ಲ ಭಗವಂತನಿಗೆ ಬೇಕಾಗಿರುವುದು ತೋರಿಕೆಯ ಭಕ್ತಿ ಅಲ್ಲ ಮುಕ್ತ ಮನಸ್ಸಿನಿಂದ ಮಾಡುವ ಪ್ರಾರ್ಥನೆ.
ನನಗೆ ಹೇಳಲು ಅಧಿಕಾರ ಇದೆ
ಒಂದು ಸಾರಿ ಪರಾಕ್ರಮಿ ರಾಜನು ತನ್ನ ಸೈನ್ಯದೊಂದಿಗೆ ಬೇರೆ ರಾಜ್ಯಕ್ಕೆ ಯುದ್ಧಕ್ಕೆ ಹೋಗಬೇಕಾದರೆ ನಿಗದಿಪಡಿಸಿದ ಒಂದು ಸ್ಥಳದಲ್ಲಿ ಎಲ್ಲರೂ ಸೇರಿ ಬಿಡಾರ ಹೂಡಿದ್ದರು ರಾಜರು ಎಲ್ಲರಿಗೂ ಒಂದೊಂದು ಕೆಲಸವನ್ನು ನೇಮಿಸಿರುತ್ತಾರೆ ಅದರಲ್ಲಿ ಮುಖ್ಯ ಸೇನಾಧಿಪತಿಗೆ ಸರಿಯಾದ ಸಮಯಕ್ಕೆ, ಕುದುರೆಗಳಿಗೆ ಹುಲ್ಲನ್ನು ತಂದುಕೊಡುವುದು ಇವರು ಇದ್ದ ಸ್ಥಳದಲ್ಲಿ ನೋಡಿದರೆ ಒಳ್ಳೆಯ ಹುಲ್ಲು ಎಲ್ಲಿಯೂ ಕಾಣುತ್ತಿಲ್ಲ.
ಬರೀ ಬೆಟ್ಟ ಗುಡ್ಡಗಳು ಮಾತ್ರ ಇದೆ ಹಾಗೆ ಸುತ್ತಲೂ ಸ್ವಲ್ಪ ಕಣ್ಣು ಹಾಯಿಸಿದಾಗ ಸ್ವಲ್ಪ ದೂರದಲ್ಲಿ ಒಂದು ಗುಡಿಸಿಲು ಇರುವಂತೆ ಕಾಣಿಸುತ್ತದೆ ಅದಕ್ಕೆ ಮುಂದೆ ಹೋಗಿ ನೋಡಿದಾಗ ಅದು ಗುಡಿಸಿಲೇ ಆಗಿತ್ತು ಆಗ ಬಾಗಿಲನ್ನು ತಟ್ಟಿದಾಗ ಒಬ್ಬ ನೀತಿವಂತ ಹಿರಿಯರು ಬಂದರು.
ಸೇನಾಧಿಪತಿ ತನ್ನ ಪರಿಚಯ ಮಾಡಿಕೊಂಡು ನಂತರ ನಮ್ಮ ಕುದುರೆಗಳಿಗೆ ಹುಲ್ಲು ಬೇಕಾಗಿದೆ ಇಲ್ಲಿ ಮುಂದೆ ಇರುವ ಹುಲ್ಲುಗಳು ನಾವು ಕೊಯ್ದುಕೊಳ್ಳುತ್ತೇವೆ ಎಂದು ಹೇಳಿದನು ಆಗ ಹಿರಿಯರು ಬನ್ನಿ ನನ್ನ ಜೊತೆಯಲ್ಲಿಯೇ ಎಂದು ಕರೆದುಕೊಂಡು ಮುಂದಕ್ಕೆ ಮುಂದಕ್ಕೆ ಹೋಗುತ್ತಲೇ ಇದ್ದಾರೆ ಸಿಪಾಯಿಗಳು ಕೂಡ ಹಿಂಬಾಲಿಸುತ್ತಿದ್ದಾರೆ.
ಇಪ್ಪತ್ತು ನಿಮಿಷವಾದ ಮೇಲೆ ಒಂದು ಹುಲ್ಲಿನ ಮೈದಾನವನ್ನು ತೋರಿಸಿ ಇದರಲ್ಲಿ ನಿಮಗೆ ಎಷ್ಟು ಬೇಕೋ ಅಷ್ಟು ಹುಲ್ಲನ್ನು ಕೊಯ್ದುಕೊಳ್ಳಿ ಎಂದರು ನಂತರ ಸೈನಿಕರು ಅವರಿಗೆಷ್ಟು ಬೇಕು ಅಷ್ಟು ಹುಲ್ಲನ್ನು ಕೊಯ್ದುಕೊಂಡರು ಕುದುರೆ ಮೇಲೆ ಹಾಕಿ ಸಿಪಾಯಿಗಳಿಗೆ ಕಳಿಸಿದನು.
ಆಗ ಸೇನಾಧಿಪತಿಯು ವಿನಮ್ರವಾಗಿ ಹಿರಿಯರೇ ನೀವು ನಮ್ಮನ್ನು ಇಷ್ಟು ದೂರ ಕರೆದುಕೊಂಡು ಬಂದಿದ್ದೀರಿ ನಾವು ಬರುವ ಹಾದಿಯಲ್ಲಿ ಬೇಕಾದಷ್ಟು ಹುಲ್ಲಿನ ಮೈದಾನಗಳು ಇತ್ತಲ್ಲವೇ ಮತ್ತು ಅಲ್ಲಿ ಇನ್ನೂ ಚೆನ್ನಾಗಿರುವ ಹುಲ್ಲು ಇತ್ತಲ್ಲವೇ ಅದೇ ನೀವು ನಮಗೆ ಹೇಳಿದಿದ್ದರೆ ನಾವು ಹುಲ್ಲನ್ನು ಕೊಯ್ದುಕೊಳ್ಳುತ್ತಿದ್ದೆವು ಎಂದು ಹೇಳಿದನು.
ಹಿರಿಯ ವ್ಯಕ್ತಿ ನೀವು ಹೇಳುತ್ತಿರುವುದು ನಿಜ ಆದರೆ ಅದು ನನ್ನ ಮೈದಾನ ಅಲ್ಲ ಅದು ಕುಯ್ಯುವುದಕ್ಕೆ ನಾನು ಹೇಗೆ ಹೇಳಲಿ ಈಗ ಇಲ್ಲಿ ನನಗೆ ಹೇಳಲು ಅಧಿಕಾರ ಇದೆ ಇದು ನನ್ನ ಜಮೀನು ಎಂದು ಹೇಳಿದರು ಇದನ್ನು ಹೇಳಿದ ನಂತರ ಸೇನಾಧಿಪತಿಯು ಆಶ್ಚರ್ಯಚಕಿತನಾದ ಕೆಲವು ವ್ಯಕ್ತಿಗಳು ನೋಡಲು ಸಾಮಾನ್ಯವಾಗಿರುತ್ತಾರೆ ಆದರೆ ಅಸಾಮಾನ್ಯವಾಗಿ ಉದಾತ್ತ ಗುಣಗಳು ಇರುತ್ತವೆ.
ಮೂಲ ಸ್ವಭಾವವನ್ನು ಬಿಡಲಾರರು
ಒಂದು ಕೆರೆಯಲ್ಲಿ ಹಲವು ಕಪ್ಪೆಗಳು ವಾಸವಾಗಿದ್ದವು ಆ ಕರೆಯು ಬಿಸಿಲು ಕಾಲವಾದ್ದರಿಂದ ಕೆರೆಯ ನೀರಲ್ಲ ಬತ್ತಿ ಹೋಗಿತ್ತು ಮತ್ತೆ ಆ ನೀರಿನಿಂದ ದುರ್ವಾಸನೆ ಬರಲು ಶುರುವಾಯ್ತು ಏಕೆಂದರೆ ಚಿಕ್ಕ ಚಿಕ್ಕ ಹುಳುಗಳು ಅಲ್ಲೆ ಇರುವುದರಿಂದ ಅದರಲ್ಲಿ ಕೆಲವು ಬುದ್ಧಿವಂತ ಕಪ್ಪೆಗಳು ಈ ಸ್ಥಳ ನಮಗೆ ಸೂಕ್ತವಲ್ಲವೆಂದು ಹೊರಟು ಹೋದವು.
ಒಂದು ಕಪ್ಪೆ ಮಾತ್ರ ಅಲ್ವೇ ವಾಸವಾಗಿತ್ತು ಅದಕ್ಕೆ ಅಲ್ಲಿಯ ವಾತಾವರಣಕ್ಕೆ ಹೊಂದಿಕೊಂಡೆ ತನ್ನ ಬದುಕು ಮುಂದುವರೆಸುತ್ತಿತ್ತು ಒಂದು ಸಾರಿ ಒಂದು ಕೊಕ್ಕರೆಯು ಬಂತು ಕಪ್ಪೆಯ ಈ ಅವಸ್ಥೆಯನ್ನು ಕಂಡು ಮರುಗಿತು ಮತ್ತು ಕಪ್ಪೆಗೆ ಹೇಳಿತು ಈ ಕೆಟ್ಟುಹೋಗಿರುವ ನೀರಿನಲ್ಲಿ ದುರ್ವಾಸನೆ ಬರುತ್ತಿರುವ ನೀರಿನಲ್ಲಿ ಏಕೆ, ಇದ್ದೀಯಾ ಎಂದು ಹೇಳಿತು.
ಕಪ್ಪೆಯು ಹೇಳಿತು ನನಗೆ ಇಲ್ಲಿಯೇ ಸ್ವರ್ಗಕ್ಕಿಂತ ಹೆಚ್ಚಾಗಿ ನಾನು ಬದುಕುತ್ತಿದ್ದೇನೆ ಎಂದು ಹೇಳಿತು ಅದಕ್ಕೆ ಕೊಕ್ಕರೆಯು ಹೇಳಿತು ನೀನು ಒಂದು ಸಾರಿ ಬಂದು ನೋಡು ದೊಡ್ಡ ದೊಡ್ಡ ನದಿಗಳು ಇದೆ ನೀರು ಹರಿದು ಶುದ್ಧವಾಗಿದೆ ಹೂವುಗಳು ಗಿಡಗಳು ಎಲ್ಲವೂ ಚೆನ್ನಾಗಿದೆ.
ಇಷ್ಟು ಹೇಳಿದ ಮೇಲೂ ಕಪ್ಪೆಯೂ ಒಂದು ಆ ನದಿಗಳಲ್ಲಿ ತಿನ್ನಲು ಇದೇ ರೀತಿಯ ಹುಳುಗಳು ಇದೆಯಾ ಎಂದು ಕೇಳಿತು? ಇಲ್ಲಾ ಎಂದಾಗ ನಾನು ನಿನ್ನ ನದಿಗಳಿಗೆ ಬರಲು ಸಾಧ್ಯವಿಲ್ಲ ಎಂದಿತ್ತು ಇದನ್ನು ಕೇಳುತ್ತಿದ್ದ ಗಿಳಿಯು ಕೊಕ್ಕರೆಗೆ ಹೇಳಿತು ಈ ಕಪ್ಪೆಯ ಸ್ವಭಾವ ನನಗೆ ಗೊತ್ತು ಇದು ಎಂದೂ ಕೊಳೆತು ನಾರುವ ನೀರನ್ನು ಬಿಟ್ಟು ಆಚೆಗೆ ಬರುವುದಿಲ್ಲ.
ಕಪ್ಪೆಗೆ ಇದೇ ಜೀವನ ಎಂದಿತು ನಂತರ ಏನೂ ಮಾತನಾಡದೆ ಕೊಕ್ಕರೆಯು ಹಾರಿ ಹೋಯಿತು. ಕೆಲವರು ಮನುಷ್ಯರಲ್ಲಿಯೂ ಕೂಡ ಹೀಗೇ ಇದ್ದಾರೆ ಅವರನ್ನು ಎಷ್ಟೇ ಏನೇ ಹೇಳಿದರೂ ಅವರು ತಮ್ಮ ಮೂಲ ಸ್ವಭಾವವನ್ನು ಬಿಡಲಾರರು ಆದ್ದರಿಂದ ನಮ್ಮ ಅಮೂಲ್ಯ ಸಮಯವನ್ನು ನಮ್ಮ ಉನ್ನತಿಗಾಗಿ ಬಳಸಿಕೊಳ್ಳೋಣ.
ಅಳುತ್ತಾ ಸಂಕಟ ಪಡುತ್ತಾ ಕೊಟ್ಟರು
ನಿಷ್ಠಾವಂತ ದಂಪತಿಗಳಿಗೆ ಒಂದು ಮಗು ಇರುತ್ತದೆ ಗಂಡನ ಕೆಲಸ ವ್ಯಾಪಾರ ಮಾಡುವುದು ಗಂಡನು ಕೆಲವು ಸಾರಿ ವ್ಯಾಪಾರಕ್ಕೆ ಹೋದರ ಎರಡು ವಾರ ಕೆಲವು ಸಾರಿ ಒಂದು ತಿಂಗಳು ಬೇರೆ ಬೇರೆ ಪಟ್ಟಣಗಳಿಗೆ ಬೇರೆ ಬೇರೆ ನಗರಗಳಿಗೆ ಹೋಗಿ ವ್ಯಾಪಾರ ಮಾಡಿಕೊಂಡು ಬರುವುದು ಗಂಡನ ಕಾಯಕವಾಗಿತ್ತು.
ವ್ಯಾಪಾರಿಯು ಕೆಲವು ವಾರಗಳ ನಂತರ ಬರುತ್ತಾನೆ ಗಂಡ ಬರುವ ಒಂದು ದಿನ ಹಿಂದೆ ತನ್ನ ಮಗು ಸತ್ತು ಹೋಗಿರುತ್ತದೆ ಅದಕ್ಕೆ ಹೆಂಡತಿಯಾದವಳು ಗಂಡನಿಗೆ ಒಂದು ಪ್ರಶ್ನೆಯನ್ನು ಕೇಳುತ್ತಾಳೆ ರೀ ನೀವು ಹೋದ ಮೇಲೆ ಮನೆಯಲ್ಲಿದ್ದ ಒಂದು ಪಾತ್ರೆಯನ್ನು ಪಕ್ಕದ ಮನೆಯವರಿಗೆ ಕೊಟ್ಟಿದ್ದೆ ನಿನ್ನೆ ನಾನು ಮತ್ತೆ ಪಡದೆ ಅದನ್ನು ಕೊಡಬೇಕಾದರೆ ಅಳುತ್ತಾ ಸಂಕಟಪಡುತ್ತಾ ಕೊಟ್ಟರು ಎಂದು ಅತ್ತುಬಿಟ್ಟಳು.
ಗಂಡನು ಇದು ಸರಿಯಲ್ಲ ಏಕೆಂದರೆ ನಮ್ಮ ಪಾತ್ರೆ ತನ್ನದೆಂದು ತಿಳಿದದ್ದು ಮೊದಲನೆಯ ತಪ್ಪು ಉಪಯೋಗಿಸಿ ಕೊಂಡ ನಂತರ ಅಳುವುದು ಯಾವ ರೀತಿಯಲ್ಲಿ ಸರಿ ಎರಡನೆಯ ತಪ್ಪು ಅವಳ ಬುದ್ಧಿ ಸರಿಯಿಲ್ಲ ಎಂದನು. ಆಗ ಹೆಂಡತಿ ತಮ್ಮ ಮಗುವು ಸತ್ತುಹೋಗಿದೆ.
ಕೆಲವು ತಿಂಗಳ ಹಿಂದೆ ದೇವರು ನಮಗೆ ಕೊಟ್ಟಿದ್ದ ವಸ್ತು ಮತ್ತೆ ಅವರೇ ಪಡೆದುಕೊಂಡಿದ್ದಾರೆ ಎಂದು ಹೇಳಿದಳು ಆಗ ಗಂಡ ಅಳುವುದು ಬಿಡುವುದು ತಿಳಿಯಲಿಲ್ಲ ಪ್ರಾಪಂಚಿಕ ವಸ್ತುಗಳ ಒಂದಲ್ಲ ಒಂದು ದಿನ ನಮ್ಮಿಂದ ಅಗಲುವುದು ಖಚಿತ ಆದ್ದರಿಂದ ಅಗಲುವಿಕೆಗೆ ಸದಾ ತಯಾರಾಗಿರೋಣ.
ವಿಚಿತ್ರವಾಗಿ ಕಂಡಿತು
ಒಂದು ಮನೆಯಲ್ಲಿ ಎರಡು ನಾಯಿಗಳನ್ನು ಸಾಕಿರುತ್ತಾರೆ ಅದರಲ್ಲಿ ಒಂದು ನಾಯಿ ಮಾತ್ರ ಯಾವಾಗಲೂ ಸಂತೋಷದಿಂದ ನಗುತ್ತಾ ನಗುತ್ತಾ ಇರುತ್ತದೆ ಏನೇ ಕೊಟ್ಟರೂ ನಗುಮುಖದಿಂದ ಸ್ವೀಕರಿಸುತ್ತದೆ ಅದೇ ರೀತಿ ಇನ್ನೊಂದು ನಾಯಿ ಇರುತ್ತದೆ.
ಅದು ಯಾವಾಗಲೂ ಮುಖ ಸಿಂಡರಿಸಿಕೊಂಡು, ಸಿಟ್ಟು ಮಾಡಿಕೊಂಡು, ಕೋಪ ಮಾಡಿಕೊಂಡು, ಯಾವಾಗಲೂ ಬೇಸರದಿಂದ, ಇರುತ್ತದೆ ಊರಿನ ಆಚೆ ಒಂದು ವಸ್ತು ಪ್ರದರ್ಶನವನ್ನು ಇಟ್ಟಿರುತ್ತಾರೆ ಅದರಲ್ಲಿ ಎಲ್ಲಾ ಕನ್ನಡಿಗಳೇ ಇರುತ್ತವೆ ಆದ್ದರಿಂದ ಏನಾದರೂ ಮಾಡಿ ಆ ವಸ್ತು ಪ್ರದರ್ಶನ ನೋಡಲೇಬೇಕೆಂದು ಎರಡೂ ನಾಯಿಗಳು ನಿರ್ಧರಿಸುತ್ತವೆ.
ಹಾಗಾಗಿ ಮೊದಲು ಈ ಆಶಾವಾದಿಯಾದ ನಾಯಿ ಯಾವಾಗಲೂ ನಗು ನಗುತ್ತಿರುವ ನಾಯಿ ಮೊದಲು ಹೋಗಿ ಆ ಕನ್ನಡಿಯ ಕೊಠಡಿಯ ಒಳಗೆ ಹೋಗುತ್ತಿದ್ದಂತೆಯೇ ತುಂಬಾ ಸಂತೋಷವಾಗುತ್ತದೆ ಏಕೆಂದರೆ ಎಲ್ಲಾ ಕನ್ನಡಿಗಳಲ್ಲೂ ಆ ನಾಯಿಯ ಮುಖ ತುಂಬಾ ಚೆನ್ನಾಗಿ ಹೂವಿನಂತೆ ಅರಳಿರುತ್ತದೆ ಅದನ್ನು ನೋಡಿ ತುಂಬಾ ಸಂತೋಷಪಟ್ಟು ಆ ನಾಯಿಯು ಹೊರಗಡೆ ಬಂದು ಅದೇ ಆನಂದದಲ್ಲಿ ಬರುತ್ತಿರುತ್ತದೆ.
ನಂತರ ಮತ್ತೊಂದು ನಾಯಿ ಹೋಗುತ್ತದೆ ಈ ನಾಯಿ ಹೋಗಿ ನೋಡಿ ಅಲ್ಲಿ ಭಯಗೊಂಡು, ಕೋಪಗೊಂಡು, ಹೆದರಿಕೊಂಡು ಬರುತ್ತದೆ ಏಕೆ ಎಂದು ಮೊದಲನೇ ನಾಯಿಯು ಕೇಳಿದಾಗ ಇಲ್ಲ ನೀನು ಹೇಳಿದಂತೆ ನಾನು ಒಳಗಡೆ ಹೋದೆ ಅಲ್ಲಿ ನನಗೆ ನೋಡಿದಾಗ ಎಲ್ಲವೂ ವಿಚಿತ್ರವಾಗಿ ಕಂಡಿತು.
ಕೋಪವಾಗಿ, ಭಯವಾಗುವಂತೆ, ನನಗೆ ಕಾಣಿಸಿತು ಹೆದರಿಕೆಯಿಂದ ಆ ನಾಯಿ ಕಚ್ಚಿ ತಿನ್ನುವಂತೆ ನನಗೆ ಅನಿಸಿತು ಅದಕ್ಕೆ ನಾನು ಓಡೋಡಿ ಬಂದೆ ಎಂದಿತು ನಾವು ಇರುವ ಸಹಜ ಸ್ಥಿತಿಯು ಕನ್ನಡಿಯಲ್ಲಿ ಪ್ರತಿಬಿಂಬಿಸುತ್ತದೆ ನಾವು ಯಾವ ರೀತಿ ಇರುತ್ತೀವಿ ಅನ್ನುವುದು ಮುಖ್ಯ ನಮ್ಮನ್ನು ನಾವೇ ಆಗಾಗ ಗಮನಿಸಿಕೊಳ್ಳೋಣ.