ಒಂದು ಹಳೆಯ ಕಾಲದ ದೇವಾಲಯವಿತ್ತು ಅಲ್ಲಿ ಹಲವಾರು ವರ್ಷಗಳಿಂದ ಪಾರಿವಾಳಗಳು ವಾಸಿಸುತ್ತಿದ್ದವು ಈಗಲೂ ಕೂಡ ನಾವು ಅದನ್ನು ನೋಡಬಹುದಾಗಿದೆ ಆ ದೇವಾಲಯದಲ್ಲಿ ವರ್ಷಕ್ಕೆ ಒಂದು ಸಾರಿ ವಿಜೃಂಭಣೆಯಿಂದ ಉತ್ಸವ ನಡೆಯುತ್ತದೆ.
ಆ ದೇವಾಲಯಕ್ಕೆ ಬಣ್ಣ ಬಳಿಯಲು, ಅಲಂಕರಿಸಲು, ಶುರು ಮಾಡುತ್ತಾರೆ ಆಗ ಅಲ್ಲಿ ಇದ್ದ ಪಾರಿವಾಳಗಳು ಸ್ವಲ್ಪ ದೂರದಲ್ಲಿ ಇದ್ದ ಚರ್ಚಿಗೆ ಹೋಗುತ್ತವೆ ಚರ್ಚಿನಲ್ಲಿರುವ ಪಾರಿವಾಳಗಳು ಪ್ರೀತಿಯಿಂದ ಬರಮಾಡಿ ಕೊಳ್ಳುತ್ತವೆ.
ಚರ್ಚಿನಲ್ಲಿ ಕೆಲವು ತಿಂಗಳುಗಳು ವಾಸವಾಗಿರುತ್ತವೆ ನಂತರ ಡಿಸೆಂಬರ್ ತಿಂಗಳು ಬಂದಾಗ ಚರ್ಚ್ ನಲ್ಲಿ ಕ್ರಿಸ್ ಮಸ್ ಹಬ್ಬವನ್ನು ತುಂಬ (ಗ್ರ್ಯಾಂಡ್ ಆಗಿ) ಅದ್ದೂರಿಯಾಗಿ ಆಚರಿಸುತ್ತಾರೆ ಆಗ ಆ ಪಾರಿವಾಳಗಳು ನಂತರ ಸ್ವಲ್ಪ ದೂರದಲ್ಲಿದ್ದ ಮಸೀದಿಗೆ ಬರುತ್ತವೆ ಮಸೀದಿಯಲ್ಲಿ ಇರುವ ಪಾರಿವಾಳಗಳು ಸಂತೋಷದಿಂದ ಸ್ವಾಗತಿಸಿ ಕೊಳುತ್ತವೆ.
ಮತ್ತೆ ಕೆಲವು ತಿಂಗಳುಗಳ ನಂತರ ರಂಜಾನ್ ಹಬ್ಬ ಬರುವುದರಿಂದ ಮತ್ತೆ ಆ ಮಸೀದಿಗೆ ಅಲಂಕರಿಸಲು ಶುರು ಮಾಡುತ್ತಾರೆ ಆಗ ಆ ಪಾರಿವಾಳಗಳು ಮತ್ತೆ ದೇವಸ್ಥಾನಕ್ಕೆ ಬರುತ್ತವೆ ಹೀಗೆ ಪಾರಿವಾಳಗಳು ಬದುಕುತ್ತಿರುತ್ತವೆ.
ಒಂದು ಸಾರಿ ಕೆಳಗೆ ಜನಗಳು ಕಚ್ಚಾಡುತ್ತಿರುತ್ತಾರೆ ಇದನ್ನು ಗಮನಿಸಿದ ಪಾರಿವಾಳದ ಮರಿಗಳು ತಾಯಿ ಪಾರಿವಾಳಕ್ಕೆ ಕೇಳುತ್ತವೆ. ಅಮ್ಮ ಇವರೆಲ್ಲರೂ ಏಕೆ ಕಚ್ಚಾಡುತ್ತಿದ್ದಾರೆ ಎಂದಾಗ ತಾಯಿ ಪಾರಿವಾಳ ಹೇಳುತ್ತದೆ ಯಾವುದಾದರೂ ಕಾರಣಕ್ಕೆ ಭಿನ್ನಾಭಿಪ್ರಾಯ ಬಂದರೆ ಹೀಗೆ ಜಗಳವಾಡೋದು ಅವರ ಕೆಲಸ ಎಂದು ತಾಯಿ ಪಾರಿವಾಳ ಹೇಳುತ್ತದೆ.
ಆಗ ಚಿಕ್ಕ ಚಿಕ್ಕ ಪಾರಿವಾಳ ಕೇಳುತ್ತವೆ ಅಮ್ಮ ನಾವು ದೇವಸ್ಥಾನದಲ್ಲಿ ಚರ್ಚನಲ್ಲಿ ಮಸೀದಿಯಲ್ಲಿ ಎಲ್ಲಾ ಕಡೆಯೂ ಇರುತ್ತೇವೆ ಎಲ್ಲಾ ಕಡೆಯೂ ನಮಗೆ ಪಾರಿವಾಳ ವೆಂದೇ ಕರೆಯುತ್ತಾರೆ ಇವರೆಲ್ಲರೂ ಮನುಷ್ಯರು ಆದರೆ ಇವರನ್ನು ಬೇರೆ ಬೇರೆ ಹೆಸರುಗಳಿಂದ ಏಕೆ ಕರೆಯುತ್ತಾರೆ.
ಮುಸಲ್ಮಾನರು ಮಸೀದಿಗೆ ಮಾತ್ರ ಹೋಗುತ್ತಾರೆ ಹಿಂದೂ ದೇವಾಲಯಕ್ಕೆ ಮಾತ್ರ ಹೋಗುತ್ತಾರೆ ಕ್ರೈಸ್ತರು ಚರ್ಚ್ ಗೆ ಮಾತ್ರ ಹೋಗುತ್ತಾರೆ ಇವರು ಮೂರು ಜನರು ಬೇರೆ ಬೇರೆ ಧರ್ಮಕ್ಕೆ ಸೇರಿದವರು ಅವರೆಲ್ಲರೂ ಮನುಷ್ಯರೇ
ತಾಯಿ ಪಾರಿವಾಳ ಚಿಕ್ಕ ಪಾರಿವಾಳಕ್ಕೆ ಹೇಳುತ್ತದೆ ನಾವು ದೇವರ ಸಮೀಪದಲ್ಲಿ ಇದ್ದೇವೆ ಅರಿತಿದ್ದೇವೆ ಎಲ್ಲಿಯೇ ಹೋದರೂ ನಾವು ಸುಖ, ಶಾಂತಿ, ಸಂತೋಷದಿಂದ ಬದುಕುತ್ತವೆ. ಈ ಜನರು ಇನ್ನೂ ದೇವರನ್ನು ಸರಿಯಾಗಿ ಅರಿತಿಲ್ಲ ಹೀಗಾಗಿ ಇವರು ನಮ್ಮಷ್ಟು ತಿಳಿದಿಲ್ಲ ತಮ್ಮ ತಮ್ಮಲ್ಲೇ ಕೆಲವು ಸಾರಿ ಹೊಡೆದಾಡಿಕೊಂಡು ಬದುಕುತ್ತಿರುತ್ತಾರೆ ಎಂದು ಹೇಳಿತು.
ಇದು ಒಂದು ಕಥೆಯಾದರೆ ಪಾರಿವಾಳಗಳಿಗೆ ಇರುವಷ್ಟು ತಿಳುವಳಿಕೆ, ಜಾಣ್ಮೆ, ನಮಗಿಲ್ಲವಲ್ಲ ಮನುಷ್ಯರೆಲ್ಲರೂ ಮನುಷ್ಯರಾಗಿ ಇರಬೇಕು ಹಾಗೆಯೇ ವರ್ತಿಸಬೇಕು ಎನ್ನುವುದನ್ನು ನಾವು ಬೇರೆ ಪ್ರಾಣಿಗಳಿಂದ ಕಲಿಯುವುದಕ್ಕಿಂತ ಮೊದಲು ನಾವೇ ಕಲಿಯೋಣ.
ನೀನು ಬದಲಾದರೆ
ಕಾದು ಕಾದು ಗಂಟೆಗಟ್ಟಲೆ ಸಾಲಿನಲ್ಲಿ ದೇವರ ದರ್ಶನಕ್ಕಾಗಿ ನಿಂತವನು ಬೇಜಾರಾಗಿ ದೇವರನ್ನು ಪ್ರಶ್ನೆ ಕೇಳುತ್ತಾನೆ ದೇವರೇ ಹಣ ಕೊಟ್ಟ ಭಕ್ತರಿಗೆ ಹತ್ತಿರದಿಂದ ನೋಡಲು (ದರ್ಶಿಸಲು) ಬೇರೊಂದು ಸಾಲು. ಹಣಕೊಡದ ಭಕ್ತರಿಗೆ ದೂರದ ದರ್ಶನಕ್ಕಾಗಿ ಬೇರೆ ದೊಡ್ಡ ಸಾಲು. ಇದು ಯಾವ ನ್ಯಾಯ ದೇವರೇ? ಆಗ ಶಬ್ಧ ಬರುತ್ತದೆ.
ತಂದೆತಾಯಿ ದೇವರಸಮಾನ ವಂತೆ ನೀನು ತಂದೆತಾಯಯರನ್ನು ಗೌರವಿಸುತ್ತೀದ್ದೀರಾ? ಗುರುಗಳನ್ನು ಗೌರವಿಸುತ್ತೀದ್ದೀರಾ? ಹಾಗೆ ಜನಸೇವೆಯೇ ಜನಾರ್ದನ ಸೇವೆ. ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುತ್ತೀದ್ದೀರಾ? ಎಲ್ಲೆಲ್ಲೂ ದೇವರೆ ಇದ್ದಾರಂತೆ. ನೀವು ನಂಬುತ್ತಿಲ್ಲ. ಮೂರ್ತಿಯನ್ನು ದೇವಸ್ಥಾನ, ಮಂದಿರದಲ್ಲಿರಿಸಿ, ದರ್ಶನದ ವೇಳೆಯನ್ನೂ, ದರ್ಶನದ ದರವನ್ನು, ಯಾರು ಎಷ್ಟು ಕಾಲ, ಹೇಗೆ ದರ್ಶನ ಮಾಡಬೇಕೆಂದು, ನೀವೇ ನಿರ್ಧರಿಸಿದ್ದೀರಾ.
ವಿವಿಧ ಪೂಜಾವಿಧಿ, ವಿಧಾನಗಳನ್ನೂ, ಅವುಗಳ ದರಗಳನ್ನೂಸಹ ನೀನೇ ನಿರ್ಧರಿಸಿರುವೆ. ಎಲ್ಲವನ್ನೂ ನೀವೇ ಮಾಡಿ ನನ್ನನ್ನು ಕೇಳುವುದು ಸರಿಯೇ? ಎಂದು ಶಬ್ದ ಬಂತು ನಂತರ ನಿಜವಾಗಿಯೂ ನನ್ನನ್ನು ಕಾಣುವ ಹಂಬಲವಿದ್ದರೆ ಪಶು, ಪಕ್ಷಿ, ವೃಕ್ಷಗಳಲ್ಲಿ ಕಾಣು ನಿನ್ನಲ್ಲಿ ಕಾಣು, ಇತರರಿಗೆ ಪ್ರೀತಿಯಿಂದ ಸೇವೆ, ಸಹಾಯ ಮಾಡುವುದರ ಮೂಲಕ ಎಲ್ಲರಲ್ಲೂ ದೇವರನೇ ಕಾಣುವೆ.
ತಂದೆತಾಯಿಗಳಲ್ಲಿ, ಗುರುಹಿರಿಯರಲ್ಲಿ, ಈ ಪ್ರಕೃತಿಯಲ್ಲಿ ನದಿ, ಬೆಟ್ಟ, ಗುಡ್ಡಗಳಲ್ಲಿ, ಅಕಾಶದಲ್ಲಿಕಾಣಬಹುದಾಗಿದೆ ಕೇವಲ ದೇವಸ್ಥಾನ ಮಂದಿರದಲ್ಲಿ ಮಾತ್ರ ದೇವರು ಇರುತ್ತಾರೆ ಎಂದು ಭಾವಿಸಬೇಡ ನೀನು ಬದಲಾದರೆ ಎಲ್ಲದರಲ್ಲೂ ದೇವರನ್ನು ಕಾಣಬಹುದು ಎಂದು ಕೇಳಿಸಿತು ಆ ಕಡೆ ಈ ಕಡೆ ತಿರುಗಿ ನೋಡಿದರೆ ಯಾರು ಕಾಣಿಸಲಿಲ್ಲ.
ಹ್ಯಾಪಿ ಬರ್ತ್ ಡೇ ಟೂ ಯೂ
ಒಂದು ಮನೆಯಲ್ಲಿ ತಾಯಿ ಮಗ ಸೊಸೆ ಇರುತ್ತಾರೆ ಚೆನ್ನಾಗಿ ಹೊಂದಿಕೊಂಡು ಇರುತ್ತಾರೆ ತಾಯಿಗೆ ಏನಾದರೂ (ಸ್ಪೆಷಲ್ ಗಿಫ್ಟ್) ವಿಶೇಷ ಉಡುಗೊರೆ ಕೊಡಬೇಕೆಂದು ಮಗನಿಗೆ ಆಸೆ ಇರುತ್ತದೆ ತಾಯಿಗೆ ಮಾತ್ರ ಭಯ ಆತಂಕದಿಂದ ಇರುತ್ತಾರೆ.
ತಾಯಿಯು ಏಕೆ ಭಯ ಪಡುತ್ತಾರೆ ಎಂದರೆ ನನಗೆ ಆಶ್ರಮದಲ್ಲಿ ಬಿಟ್ಟು ಬಿಡುತ್ತಾರೆ ಎನ್ನುವ ಭಯ ಮನಸ್ಸಿನಲ್ಲಿ ಅಡಗಿರುತ್ತದೆ ಮಗ ಬಂದು ಹೇಳುತ್ತಾನೆ ಅಮ್ಮಾ ನಾಳೆ ನಾವು ವೃದ್ಧಾಶ್ರಮಕ್ಕೆ ಹೋಗೋಣ ಬೆಳಿಗ್ಗೆ ತಯಾರಾಗಿರಿ ಎಂದನು ಆಗ ತಾಯಿಗಂತೂ ಕಣ್ಣೀರು ಬಂದುಬಿಡುತ್ತದೆ.
ಆದರೂ ತಾಯಿ ಅಳುವುದಿಲ್ಲ ರಾತ್ರಿಯೆಲ್ಲಾ ಸರಿಯಾಗಿ ನಿದ್ರೆ ಮಾಡಿರುವುದಿಲ್ಲ ಬೆಳಿಗ್ಗೆ ಎದ್ದ ತಕ್ಷಣ ಸ್ನಾನ ಮಾಡಿ ತಾಯಿ ತಯಾರಾಗುತ್ತಾರೆ ಅಷ್ಟರಲ್ಲಿ ಸೊಸೆ ಬಂದು ಅಮ್ಮ ಎಲ್ಲ ಪ್ಯಾಕ್ ಮಾಡಿದೆ ಅದಲ್ಲ ತೆಗೆದುಕೊಂಡು ಹೋಗೊಣವೇ ಎಂದಾಗ ತಾಯಿಗೆ ಇನ್ನೂ ಸಂಕಟವಾಗುತ್ತದೆ ಆದರೂ ಬೇರೆ ದಾರಿ ಇರಲಿಲ್ಲ ಮಗ ಬಂದು ಕೇಳುತ್ತಾನೆ.
ಅಮ್ಮ ಇನ್ನು ಅರ್ಧಗಂಟೆಯಲ್ಲಿ ವಾಹನ ಬರುತ್ತೆ ಎಲ್ಲವನ್ನೂ ರೆಡಿ ಇಟ್ಟುಕೊಂಡು ವಾಹನ ಬರುತ್ತಿದ್ದ ಹಾಗೆ ವಾಹನದಲ್ಲಿ ಹತ್ತಿ ಸೀದಾ ಆಶ್ರಮಕ್ಕೆ ಹೋಗೋಣ ಎನ್ನುತ್ತಾನೆ ಆದರೆ ಅಮ್ಮನಿಗೆ ಒಳಗೆ ತುಂಬಾನೇ ನೋವುವೇದನೆ ಯಾಗುತ್ತಿರುತ್ತದೆ.
ಆದರೂ ಬಾಯ್ಬಿಟ್ಟು ಹೇಳುವ ಹಾಗಿಲ್ಲ ವಾಹನ ಬರುತ್ತದೆ ಅಮ್ಮ ಮಗ ಸೊಸೆ ಮಕ್ಕಳು ಎಲ್ಲರೂ ವಾಹನದಲ್ಲಿ ಕುಳಿತು ಆಶ್ರಮಕ್ಕೆ ಬರುತ್ತಿದ್ದಂತೆ ಎಲ್ಲರೂ ಇವರನ್ನು ಅಭಿನಂದಿಸುತ್ತಾರೆ.
ಒಳಗಡೆ ಹೋಗುತ್ತಿದ್ದಂತೆಯೇ ಎಲ್ಲಾ ಆಶ್ರಮದವರು ಹ್ಯಾಪಿ ಬರ್ತ್ ಡೇ ಟೂ ಯೂ ಎಂದು ಎಲ್ಲರೂ ಚಪ್ಪಾಳೆ ತಟ್ಟಿ ಬರಮಾಡಿಕೊಳ್ಳುತ್ತಾರೆ. ಆಗ ಅಮ್ಮನಿಗೆ ನಿಜಕ್ಕೂ ತುಂಬಾ ಸಂತೋಷವಾಗುತ್ತದೆ ಆಗ ಅಮ್ಮನಿಗೆ ಹೇಳುತ್ತಾನೆ.
ನಾನು ಹೇಳಲಿಲ್ಲವೇ ನಿಮಗೆ ಈ ಸಾರಿ ನಾನು ಶಾಕ್ ಕೊಡುತ್ತೇನೆಂದು ಹೇಳಿ ಎಲ್ಲರ ಜೊತೆ ಊಟ ಮಾಡಿಕೊಂಡು ನಂತರ ಮನೆಗೆ ಬರುತ್ತಾರೆ ಆಗ ಅಮ್ಮನಿಗೆ ನಾನು ಸಾಕಿದ್ದಕ್ಕೂ ಸಾರ್ಥಕವಾಯಿತು ಎಂದು ಮನದಾಳದಿಂದ ಆಶೀರ್ವದಿಸುತ್ತಾರೆ ಆಶೀರ್ವಾದಗಳಲ್ಲಿ ಶ್ರೇಷ್ಠವಾದ ಆಶೀರ್ವಾದ ತಾಯಿಯ ಆಶೀರ್ವಾದ ನಾವೆಲ್ಲರೂ ಪಡೆಯೋಣ.
ಗೇಲಿ ಮಾಡಿದರು
ದಶರಥ ಮಾಂಜಿಯವರು ಇವರು ಬಿಹಾರದ ಗಯಾ ಜಿಲ್ಲೆಯ ಗೆಹ್ಲೋರ್ ಹಳ್ಳಿಯವರು ತನ್ನ ಪತ್ನಿಗೆ ನೀರು ತರುವಾಗ ಬಿದ್ದು ಗಾಯಗೊಂಡಿದ್ದಳು ಆ ಗಾಯದಿಂದಾಗಿ ತಕ್ಷಣ ಆಸ್ಪತ್ರೆಗೆ ಸೇರಿಸಬೇಕಾಯಿತು ಆದರೆ ಆಸ್ಪತ್ರೆ ಅಲ್ಲೆಲ್ಲೂ ಇರಲಿಲ್ಲ.
ದೊಡ್ಡ ಆಸ್ಪತ್ರೆ ಇದೆ ಎಂದರೆ ಅದು ಗಯಾದಲ್ಲಿ ಅಲ್ಲಿಗೆ ಹೋಗಬೇಕಾದರೆ 75 ಕಿ.ಮೀ. ದೂರ ಗೆಹ್ಲೋರ್ ಪರ್ವತವನ್ನು ಹತ್ತಿ ಇಳಿದು ಹೋಗಬೇಕಾಗಿತ್ತು ಆದುದರಿಂದ ಪತ್ನಿಗೆ ಚಿಕಿತ್ಸೆ ಕೊಡಲು ಸಾಧ್ಯವಾಗಲಿಲ್ಲ ಆದ್ದರಿಂದ ತನಗಾದ ನೋವು ಕಷ್ಟಗಳು ಇತರಿರಿಗೆ ಆಗಬಾರದು ಎಂದು ಎಂದು ಮನದಲ್ಲಿ ನಿರ್ಧರಿಸಿದರು.
ನಂತರ ಗೆಹ್ಲೋರ್ ಪರ್ವತವನ್ನೇ ಕೊರೆದು ಗಯಾ ಗೆ ರಸ್ತೆ ಮಾಡಲಿಕ್ಕೆ ಮುಂದಾದರು ಆದರೆ ಹಳ್ಳಿಯ ಜನರೆಲ್ಲರೂ ಇವರಿಗೆ ಸಾಂತ್ವನ ಹೇಳುವ ಬದಲು ಇವನೊಬ್ಬ ದೊಡ್ಡ ಹುಚ್ಚ ಈ ಕೆಲಸ ಆಗುತ್ತದೆಯೇ ಎಂದು ಗೇಲಿ ಮಾಡಿದರು ಮತ್ತೆ ಯಾರೂ ಸಹಾಯ ಮಾಡಲಿಲ್ಲ.
ಆದರೆ ಇವರ ಒಂದು ದೃಢ ನಿರ್ಧಾರ ಮಾತ್ರ ಬದಲಾಗಲೇ ಇಲ್ಲ ಇವರ ಮುಖ್ಯ ಆಯುಧಗಳು ಎಂದರೆ ಸುತ್ತಿಗೆ ಉಳಿ ಹಾಗೂ ಕೈಯಲ್ಲಿರುವ ಉಗುರುಗಳು ಬಳಸಿಕೊಂಡು 1960 ರಲ್ಲಿ ಬೆಟ್ಟ ಅಗೆಯಲು ಶುರು ಮಾಡಿದರು.
ಸತತವಾಗಿ 22 ವರ್ಷಗಳ ಕಾಲ ತೆಗೆದುಕೊಂಡರು 36 ಅಡಿ ಅಗಲದ 366 ಅಡಿ ದೂರದ ರಸ್ತೆಯನ್ನು ನಿರ್ಮಾಣ ಮಾಡಿಯೇ ಬಿಟ್ಟರು 75 ಕಿ.ಮೀ. ಸುತ್ತಿ ಬಳಸಿ ಬರಬೇಕಾಗಿದ್ದ ಗೆಹ್ಲೋರ್ ಹಳ್ಳಿಗೆ ಕೇವಲ 4 ಕಿ.ಮೀ. ದೂರ ಸಾಗಿದರೆ ಸಾಕಾಗಿತ್ತು ಗಯಾ ಸಿಗುತ್ತಿತ್ತು.
ಈ ಸಾಧನೆಯಿಂದ ಮಾಂಜಿಯವರನ್ನು ಮೌಂಟೆನ್ ಮ್ಯಾನ್ ಎಂದು ಕರೆದರು ಮಾಂಜಿಯ ಸಾಧನೆಯನ್ನು ಕಂಡು ಬಿಹಾರದ ಸಿಎಂ ನಿತೀಶ್ ಕುಮಾರ್ ಅವರು 2006 ರಲ್ಲಿ ಜನತಾ ದರ್ಶನ ನಡೆಯುತ್ತಿದ್ದ ಸಂದರ್ಭದಲ್ಲಿ ಮಾಂಜಿಯವರು ತಮ್ಮದೇ ಆಸನದಲ್ಲಿ ಕುಳ್ಳರಿಸಿ ಗೌರವಿಸಿದರು.
ಇದಲ್ಲದೆ ಅವರಿಗೆ 5 ಎಕರೆ ಭೂಮಿಯನ್ನು ಸಹ ಉಡುಗೊರೆಯಾಗಿ ಕೊಟ್ಟರು ಮಾಂಜಿಯವರು ಈ ಭೂಮಿಯನ್ನು ಆಸ್ಪತ್ರೆಯ ನಿರ್ಮಾಣಕ್ಕೆ ದಾನ ಮಾಡಿಬಿಟ್ಟರು.
ನಗಲು ಸಾಧ್ಯವಿಲ್ಲ
ಜಿಲ್ಲೆಯಲ್ಲಿ ಇದ್ದ ಒಬ್ಬ ನುರಿತ ಶಿಕ್ಷಕರು ಹಳ್ಳಿಗೆ ವರ್ಗಾವಣೆ ಆದರು ಅಲ್ಲಿ ಚೆನ್ನಾಗಿ ಪಾಠ ಮಾಡುತ್ತಿದ್ದರು ಮತ್ತೆ ಇತರರು ಬಂದು ಸಮಸ್ಯೆಯನ್ನು ಹೇಳಿದರೆ ಅವರಿಗೆ ಸರಿಯಾದ ಪರಿಹಾರವನ್ನು ಸೂಚಿಸುತ್ತಿದ್ದರು ಅದರಿಂದಾಗಿ ಇವರ ಹೆಸರು ಮತ್ತಷ್ಟು ಪ್ರಸಿದ್ಧಿಯಾಯಿತು.
ಆದರೆ ಒಬ್ಬ ಹಳ್ಳಿಯವನು ಪ್ರತಿದಿನ ಒಂದೇ ಸಮಸ್ಯೆಯನ್ನು ಹೇಳುತ್ತಿದ್ದನು ಶಿಕ್ಷಕರು ಕೂಡ ಅದಕ್ಕೆ ಪರಿಹಾರವನ್ನು ಸೂಚಿಸುತ್ತಿದ್ದರು ಆದರೆ ದಿನನಿತ್ಯ ಅವನು ಅದೇ ರೀತಿ ಮಾಡುತ್ತಿದ್ದನು ನಂತರ ಒಂದು ಸಾರಿ ಎಲ್ಲ ಸದಸ್ಯರು ಸೇರಿದರು.
ಆಗ ಶಿಕ್ಷಕರು ಒಂದು ಜೋಕನ್ನು ಹೇಳಿದರು ಅದಕ್ಕೆ ಎಲ್ಲರೂ ಬಾಯಿ ತುಂಬಾ ನಕ್ಕರು ಮತ್ತೆ ಅದೇ ಜೋಕನ್ನು ಹೇಳಿದರು ಆವಾಗ ಸ್ವಲ್ಪ ಜನ ಮಾತ್ರ ನಕ್ಕರು ಮತ್ತೆ ಅದೇ ಜೋಕನ್ನು ಹೇಳಿದರು ಕೆಲವರು ಮಾತ್ರ ನಕ್ಕರು ಇನ್ನೊಂದು ಸರಿ ಅದೇ ಜೋಕನ್ನು ಹೇಳಿದರು.
ಜೋಕ್ ಹೇಳಿದಾಗ ಯಾರೂ ನಗಲಿಲ್ಲ ಆಗ ಶಿಕ್ಷಕರು ಹೇಳಿದರು ಒಂದೇ ಜೋಕಿಗೆ ಹೆಚ್ಚು ಸಲ ನಗಲು ಸಾಧ್ಯವಿಲ್ಲ ಹಾಗೆಯೇ ನಿಮ್ಮ ಹಳೆಯ ಸಮಸ್ಯೆಗಳು ಹೇಳುತ್ತಿದ್ದರೆ ಚೆನ್ನಾಗಿರಲ್ಲ ಅದೇ ಸಮಸ್ಯೆ ಹೇಳಿ ಹೇಳಿ ಕೊರಗುತ್ತಿದ್ದರೆ ಪ್ರಯೋಜನವಿಲ್ಲ ಆ ಸಮಸ್ಯೆಯಿಂದ ಮೊದಲು ಹೊರ ಬರುವುದನ್ನು ಕಲಿಯೋಣ.
ಕೆಲವರು ಅದೇ ಸಮಸ್ಯೆ ಹೇಳುತ್ತಿದ್ದವರು ಎಲ್ಲರೂ ತೆಪ್ಪಗೆ ಇದ್ದುಬಿಟ್ಟರು ಅವರು ಹಳ್ಳಿಯವರು ಹಾಗೆ ಮಾಡಿದರು ನಾನು ಇದೇ ರೀತಿ ನನ್ನ ಸಮಸ್ಯೆಯನ್ನು ಎಲ್ಲರ ಬಳಿಯೂ ಹೇಳುತ್ತಿದ್ದೇನೆಯೇ?