ಬದುಕಿನ ದಾರಿಯೇ ತಪ್ಪಾದರೆ

ಒಂದು ಸಾರಿ ಕಾಲೇಜಿನ ಪ್ರಿನ್ಸಿಪಾಲರು ವಿದ್ಯಾರ್ಥಿ ತಪ್ಪು ಮಾಡಿದ್ದಾನೆ ಎಂದು ವಿದ್ಯಾರ್ಥಿಯ ತಂದೆಯನ್ನು ಕರೆಯುತ್ತಾರೆ ಆಗ ತಂದೆಯವರು ಮಗನ ಎಲ್ಲಾ ತಪ್ಪುಗಳನ್ನು ಕೇಳಿಸಿಕೊಂಡು ಮರು ಮಾತನಾಡದೆ ಹೋರಗೆ ಬರುತ್ತಾರೆ.

 ಮಗನಿಗೂ ಏನೂ ಹೇಳುವುದಿಲ್ಲ ನಂತರ ಕಾರಿನಲ್ಲಿ ಕುಳಿತುಕೊಂಡು ಕಾರನ್ನು ಚಾಲನೆ ಮಾಡಿಕೊಂಡು ಮನೆಗೆ ಹೋಗಬೇಕಾಗಿದ್ದ ತಿರುವು ಬಿಟ್ಟು ಮುಂದೆಯೇ ಹೋಗುತ್ತಿರುತ್ತಾರೆ ಮಗ ಹೇಳುತ್ತಾನೆ ಅಪ್ಪಾ ನಮ್ಮ ತಿರುವು ಹಿಂದೆಯೇ ಹೋಯಿತು ಎಂದು ಮಗ ಹೇಳಿದನು.

ಅಪ್ಪ ಸುಮ್ಮನೆ ಹಾಗೆಯೇ ಮುಂದೆ ಹೋಗುತ್ತಿರುತ್ತಾರೆ ಹೆಚ್ಚು ಕಡಿಮೆ ಹತ್ತು ಹದಿನೈದು ಕಿಲೋಮೀಟರ್ ಹೋದ ನಂತರ ಮಗ ಹೇಳುತ್ತಾನೆ ಅಪ್ಪಾ ನಾವು ಹೋಗುತ್ತಿರುವ ದಾರಿ ಸರಿ ಇಲ್ಲ ನಾವು ಮನೆಗೆ ಹೋಗುವುದಿಲ್ಲ ಬೇರೆ ಕಡೆ ಎಲ್ಲಿಗೋ ಹೋಗುತ್ತೇವೆ ಎಂದಾಗ ಮಗನಿಗೆ ಒಂದು ಉದಾಹರಣೆಯನ್ನು ಕೊಡುತ್ತಾರೆ.

 ನಾವು ತಪ್ಪು ದಾರಿಯಲ್ಲಿ ಬಂದಿದ್ದೇವೆ ನಿಜ ಆದರೆ ಸ್ವಲ್ಪ ಸಮಯ ವ್ಯರ್ಥವಾಯಿತು ಮತ್ತೆ ನಾವು ಸರಿ ದಾರಿಗೆ ಹೋಗಬಹುದು ಆದರೆ ಬದುಕಿನ ದಾರಿಯೇ ತಪ್ಪಾದರೆ ಮತ್ತೆ ಬರಲು ಸಾಧ್ಯವಿಲ್ಲ ಎಂದು ಎಚ್ಚರಿಸುತ್ತಾರೆ ಆಗ ಮಗನಿಗೆ ಜ್ಞಾನೋದಯವಾಯಿತು. ಮಕ್ಕಳು ತಪ್ಪು ಮಾಡಿದರೆ ಪ್ರೀತಿಯಿಂದ ಉದಾಹರಣೆ ನೀಡಿ ಮಕ್ಕಳಿಗೆ ಅರ್ಥವಾಗುವಂತೆ ಸಮಾಧಾನದಿಂದ ಮನಸ್ಸಿಗೆ ನಾಟುವಂತೆ ತಿಳಿಸೋಣ.

ದುಡ್ಡಿಗಾಗಿ ಮಾತ್ರ

ಒಂದು ಊರಿನಲ್ಲಿ ಹಿರಿಯ ವೈದ್ಯರು ಇದ್ದರು ಇವರು ಎಲ್ಲರಿಗೂ ಔಷಧಿಯನ್ನು ಕೊಡುತ್ತಿದ್ದರು ಇವರದೇ ಆದ ಚಿಕಿತ್ಸಾಲಯ ಇರಲಿಲ್ಲ ವೈದ್ಯರಿಗೆ ಎಲ್ಲೇ ಕರೆದರೂ ಅಲ್ಲೆ ಹೋಗಿ ಔಷಧಿಯನ್ನು ಕೊಡುತ್ತಿದ್ದರು ವೈದ್ಯರು ಆ ಊರಿಗೆ ಪ್ರಸಿದ್ಧಿಯಾಗಿದ್ದರು.

 ಒಂದು ಸಾರಿ ಒಬ್ಬ ದೊಡ್ಡ ಸಾಹುಕಾರ ವೈದ್ಯರಿಗೆ ಅರ್ಧರಾತ್ರಿಗೆ ದೂರವಾಣಿ ಕರೆ ಮಾಡುತ್ತಾನೆ ವೈದ್ಯರೇ ದಯವಿಟ್ಟು ನನ್ನ ಹೆಂಡತಿ ತುಂಬ ಸಂಕಟಪಡುತ್ತಿದ್ದಾಳೆ ದಯವಿಟ್ಟು ಬಂದು ಔಷಧಿ ನೀಡಿ ಎಂದು ಹೇಳುತ್ತಾನೆ ಆಗ ವೈದ್ಯರು ಬೆಳಿಗ್ಗೆ ನೋಡೋಣ ಎಂದು ಹೇಳುತ್ತಾರೆ.

 ನಂತರ ಆ ಸಾಹುಕಾರ ನಾನು ನಿಮಗೆ ಹಣವನ್ನು ನೀಡುತ್ತೇನೆ ದಯವಿಟ್ಟು ಬನ್ನಿ ಎಂದು ಹೇಳುತ್ತಾನೆ ನಂತರ ವೈದ್ಯರು ಹೇಳುತ್ತಾರೆ ನಾನು ರೋಗಿಯನ್ನು ನೋಡಿಲ್ಲ ಬಹುಶಃ ಏನಾದರೂ ನಾನು ಔಷಧಿ ಕೊಟ್ಟ ನಂತರವೂ ಔಷಧಿ ಚಿಕಿತ್ಚೆ ಫಲಿಸದಿದ್ದರೆ ನಾನು ಏನು ಮಾಡಬೇಕು ಆಗ ಸಾಹುಕಾರನು ನನ್ನ ಹೆಂಡತಿಯನ್ನು ಆರೋಗ್ಯವಾಗಿ ಉಳಿಸಿದರು ಸತ್ತರು ನಿಮಗೆ ಹಣವನ್ನು ಕೊಡುತ್ತೇನೆ.

ನನ್ನ ಹೆಂಡತಿ ನೋವಿನಿಂದ ನರಳುತ್ತಿದ್ದಾರೆ ನನ್ನಿಂದ ನೋಡಲು ಸಾಧ್ಯವಾಗುವುದಿಲ್ಲ ಬೇಗ ಬನ್ನಿ ಎಂದು ವಿನಂತಿಸಿಕೊಳ್ಳುತ್ತಾನೆ. ಈ ರೀತಿ ಹೇಳುತ್ತಿದ್ದಾರೆ ಎಂದು ವೈದ್ಯರು ಚಿಕಿತ್ಸೆ ಕೊಡುವುದು ಮುಖ್ಯ ಎಂದು ಸಾಹುಕಾರನ ಮನೆಗೆ ಹೋಗಿ ಅವರ ಹೆಂಡತಿಯನ್ನು ನೋಡಿ ವೈದ್ಯರು ತಮ್ಮ ಕೈಲಾದಷ್ಟು ತಾವು ಏನೇನು ಚಿಕಿತ್ಸೆ ನೀಡಬೇಕು ಅದರಂತೆ ಎಲ್ಲಾ ರೀತಿಯ ಚಿಕಿತ್ಸೆಯನ್ನು ನೀಡಿ ಮನೆಗೆ ಬರುತ್ತಾರೆ.

 ಚಿಕಿತ್ಸೆ ನೀಡಿದ ನಂತರ ಸಾಹುಕಾರನು ಹೆಂಡತಿ ಬದುಕಿ ಉಳಿಯುವುದಿಲ್ಲ ವೈದ್ಯರಿಗೆ ಒಂದು ದಿನವಾದ ನಂತರ ತಿಳಿಯುತ್ತದೆ ಆಗ ವೈದ್ಯರು ಒಂದು ವಾರ ಬಿಟ್ಟು ಮಾತಿನ ಪ್ರಕಾರ ಸಾಹುಕಾರನಿಗೆ ಹಣ ನೀಡಿ ಎಂದು ಕೇಳುತ್ತಾರೆ ಆಗ ಸಾಹುಕಾರನ ನಾನು ಹಣ ಕೊಡುವ ಹಾಗಿಲ್ಲ ಎಂದು ಕಡ್ಡಿಮುರಿದಂತೆ ನೇರವಾಗಿ ಹೇಳಿ ಬಿಡುತ್ತಾನೆ.

 ವೈದ್ಯರಿಗೆ ಕೋಪ ಬರುತ್ತದೆ ಏನು ಈ ರೀತಿ ಸಾಹುಕಾರ ಹೇಳುತ್ತಿದ್ದಾನಲ್ಲ ಎಂದು ವೈದ್ಯರು ರಾಜನ ಬಳಿ ಹೋಗಿ ಹೇಳುತ್ತಾರೆ ಸಾಹುಕಾರ ಬದುಕಿ ಉಳಿಯಲಿ ಸಾಯಲಿ ಹಣ ಕೊಡುತ್ತೇನೆಂದು ಹೇಳಿದ್ದರು ಆದರೆ ಹಣ ಕೊಡಲಿಲ್ಲ ಅದಕ್ಕೆ ವೈದ್ಯರು ರಾಜನಿಗೆ ದೂರು ಸಲ್ಲಿಸುತ್ತಾರೆ ರಾಜರು  ಇಬ್ಬರನ್ನೂ ಕರೆಸುತ್ತಾರೆ ಆಗ ಮೊದಲು ಸಾಹುಕಾರನಿಗೆ ಕೇಳುತ್ತಾರೆ.

ಸಾಹುಕಾರ ಹೇಳುತ್ತಾನೆ ನಾನು ವೈದ್ಯರನ್ನು ಬರುವಂತೆ ಹೇಳಿದು ನಿಜ ನನ್ನ ಹೆಂಡತಿಗೆ ಚಿಕಿತ್ಸೆ ಕೊಟ್ಟರೆ ಬದುಕಿ ಉಳಿದರೂ ಸತ್ತು ಹೋದರು ಹಣ ಕೊಡುತ್ತೇನೆ ಎಂದು ಹೇಳಿದ್ದು ನಿಜ ಆಗ ಸಾಹುಕಾರ ಈಗ ನನ್ನ ಪ್ರಶ್ನೆಗೆ ವೈದ್ಯರು ಉತ್ತರಿಸಲಿ ಎಂದು ರಾಜರ ಹತ್ತಿರ ಅಪ್ಪಣೆ ಕೇಳುತ್ತಾನೆ.

 ರಾಜನು ಆಗಲಿ ಎಂದಾಗ ವೈದ್ಯರಿಗೆ ಕೇಳುತ್ತಾನೆ ನೀವು ನನ್ನ ಹೆಂಡತಿಯನ್ನು ಬದುಕಿಸಿ ಉಳಿಸಿದ್ದೀರಾ? ವೈದ್ಯರು ಇಲ್ಲ ನಂತರ ನೀವು ನನ್ನ ಹೆಂಡತಿಯನ್ನು ಸಾಯಿಸಿದ್ದೀರಾ? ಇಲ್ಲ ಎಂದಾಗ ರಾಜರೇ ನಿಮ್ಮ ಮುಂದೆಯೇ ವೈದ್ಯರು ನಾನು ಬದುಕಿಸಲಿಲ್ಲ ಸಾಯಿಸಲು ಇಲ್ಲ ಎಂದು ಹೇಳಿದ್ದಾರೆ.

 ನಾನು ಹೇಗೆ ಇವರಿಗೆ ಹಣ ಕೊಡಲಿ ಎಂದು ಸಾಹುಕಾರನು ಹೇಳುತ್ತಾನೆ ನಂತರ ರಾಜರು ವೈದ್ಯರಿಗೆ ಯಾವ ಹಣವೂ ಬರಬೇಕಾಗಿಲ್ಲ ಎಂದು ತೀರ್ಮಾನವನ್ನು ನೀಡುತ್ತಾರೆ. ಮಾತಿನಲ್ಲಿ ಸಾಹುಕಾರನೇ ಗೆಲ್ಲುತ್ತಾನೆ. ಇದರ ಬಗ್ಗೆ ನನ್ನ ಅನಿಸಿಕೆ?

ಇರುವಷ್ಟು ದಿನ ಖುಷಿಯಾಗಿ ಬದುಕುತ್ತೇವೆ

ಒಂದು ಮಾವಿನ ಮರದ ಕೆಳಗೆ ಒಬ್ಬ ಜ್ಯೋತಿಷಿ ವಿಶ್ರಾಂತಿ ಪಡೆಯಲು ಬಂದು ಕುಳಿತನು ನಂತರ ಒಂದು ಕೋಗಿಲೆ ತನ್ನ ಇಂಪಾದ ಹಾಡನ್ನು ಹಾಡಲು ಆರಂಭಿಸಿತು ಜ್ಯೋತಿಷಿಯು ಹಾಡನ್ನು ಕೇಳಿ ತನ್ನನ್ನು ತಾನು ಮರೆತನು ನಂತರ ಜ್ಯೋತಿಷಿಯು ಕೋಗಿಲೆಗೆ ಧನ್ಯವಾದವನ್ನು ಹೇಳಿದನು.

ಕೋಗಿಲೆಯು ನನ್ನ ಕೆಲಸವನ್ನು ಮಾತ್ರ ಮಾಡಿದ್ದೇನೆ ಎಂದು ಹೇಳಿತ್ತು ಜ್ಯೋತಿಷಿ ಕೋಗಿಲೆಯನ್ನು ನೋಡಿ ಇದ್ದಕ್ಕಿದ್ದ ಹಾಗೆ ತುಂಬಾ ಖಿನ್ನನಾದನು ಕೋಗಿಲೆಯು ಕೇಳಿತು ಇಲ್ಲಿವರೆಗೆ ನೀವು ಚೆನ್ನಾಗಿ ಹಾಡನ್ನು ಆಲಿಸುತ್ತಿದ್ದೀರಿ ನಿಮ್ಮ ಮುಖದಲ್ಲಿ ತೃಪ್ತಿಯ ಭಾವನೆಯಿತ್ತುಈಗ ಏಕೆ ಖಿನ್ನರಾಗಿದ್ದೀರಿ?

 ಆಗ ಜ್ಯೋತಿಷಿ ನೀನು ಇಷ್ಟು ಚೆನ್ನಾಗಿ ಹಾಡನ್ನು ಹಾಡುತ್ತೀಯಾ ಆದರೆ ಇನ್ನೂ ಒಂದು ತಿಂಗಳಲ್ಲಿ ನೀನು ಸಾಯುತ್ತೀಯ ನಿನ್ನ ಆಯಸ್ಸು ಇಷ್ಟೇ ಎಂದು ಹೇಳಿದರು ಆಗ ಕೋಗಿಲೆ ದುಃಖಪಡದೆ, ಖಿನ್ನನಾಗದೆ, ಅದು ಮತ್ತಷ್ಟು ಸಂತೋಷಪಟ್ಟು ಇನ್ನೂ ನಾನು ಒಂದು ತಿಂಗಳು ಬದುಕುತ್ತೇನೆಯೇ ಎಂದು ಸಕಾರಾತ್ಮಕವಾಗಿ ಹೇಳಿ ಸಂತೋಷ ವ್ಯಕ್ತಪಡಿಸಿತು ನಲಿಯಿತು.

 ಜ್ಯೋತಿಷಿಗೆ ಆಶ್ಚರ್ಯವಾಯಿತು ಕೋಗಿಲೆಗೆ ಸಾವಿನ ಭಯವಿಲ್ಲವೇ ಎಂದು ಕೇಳಿದರು ಆಗ ಕೋಗಿಲೆ ಹೇಳಿತು ನಾವು ಬದುಕಲು ಬಂದವರು ಇರುವಷ್ಟು ದಿನ ಆನಂದವಾಗಿ, ಸಂತೋಷವಾಗಿ, ನಲಿಯುತ್ತಾ ಖುಷಿಯಾಗಿ ಬದುಕುತ್ತೇವೆ ಸಾವು ಬಂದಾಗ ಸತ್ತರಾಯಿತು ಎಂದು ಹೇಳಿತು ಜ್ಯೋತಿಷಿಯವರಿಗೆ ಕೋಗಿಲೆ ಹೇಳಿದ  ಮಾತಿನಿಂದ ಸತ್ಯದ ಪರಿಚಯವಾಯಿತು.

ಅವಕಾಶಗಳಿಂದ ವಂಚಿತರಾಗಿದ್ದೇವೆ

ಒಂದು ಸಾರಿ ಶಿಕ್ಷಕರು ಪಾಠ ಮಾಡಲಿಕ್ಕೆ ಎಂದು ಶಾಲೆಗೆ ಹೋಗುತ್ತಾರೆ ಈ ಶಿಕ್ಷಕರು ಯಾವುದೇ ಪಾಠ ಮಾಡಬೇಕಾದರೂ ಚಟುವಟಿಕೆಯ ಮೂಲಕ ಪಾಠ ಮಾಡುತ್ತಾರೆ ಎಲ್ಲಾ ಮಕ್ಕಳಿಗೂ ಹೇಳುತ್ತಾರೆ ಒಂದು ಕಾಗದವನ್ನು ಉಂಡೆ ಮಾಡಿ ನಾನು ಇಲ್ಲಿ 2 ಬುಟ್ಟಿಯನ್ನು ಇಟ್ಟಿದ್ದೇನೆ.

 ಎಲ್ಲರೂ  ಎಸೆಯಿರಿ ಎಂದು ಹೇಳುತ್ತಾರೆ ಆಗ ಮುಂದೆ ಇರುವ ಮೊದಲನೇ ಬೆಂಚಿನವರು ಎರಡನೇ ಬೆಂಚಿನವರು ಏನೂ ಮಾತನಾಡಲ್ಲ ಆದರೆ ಮೂರನೇ ನಾಲ್ಕನೇ ಹಾಗೂ ಹಿಂದಿನ ಬೆಂಚಿನವರು ಹೇಳುತ್ತಾರೆ ಸಾರ್ ನಮಗೆ  ಬುಟ್ಟಿ ಕಾಣುತ್ತಿಲ್ಲ ಇದು ತುಂಬಾ ಅನ್ಯಾಯ ಎಂದು ಹೇಳುತ್ತಾರೆ.

 ಶಿಕ್ಷಕರು ನಾನು ಹೇಳಿದಷ್ಟು ನೀವು ಮಾಡಬೇಕು ಎಂದು ಹೇಳುತ್ತಾರೆ ಆಗ ಎಲ್ಲರೂ ಅದೇ ರೀತಿ ಕಾಗದದ ಉಂಡೆ ಮಾಡಿ ಎಸೆಯುತ್ತಾರೆ ಸರಿಯಾಗಿ ಎಸೆಯುವವರು ಯಾರು ಎಂದರೆ ಮುಂದೆ ಮೊದಲನೇ ಅಥವಾ ಎರಡನೇ ಬೆಂಚಿನವರು ಎಸೆಯುತ್ತಾರೆ.

ಹಿಂದಿನವರು ಯಾವುದೇ ಕಾರಣಕ್ಕೂ ಎಸೆಯಲು ಸಾಧ್ಯವಾಗುವುದಿಲ್ಲ ನಂತರ ಆಟವನ್ನು ಮುಗಿಸಿ ಎಲ್ಲರಿಗೂ ಪ್ರಶ್ನೆ ಕೇಳುತ್ತಾರೆ ಈ ಆಟ ಆಡಿದ್ದು ನಿಮಗೆ ಏನು ಅರ್ಥವಾಯಿತು ಎಂದಾಗ ಹಿಂದೆ ಇದ್ದ ಬೆಂಚಿನ ಮಕ್ಕಳು ಹೇಳುತ್ತಾರೆ ಸಾರ್ ಎಲ್ಲರಿಗೂ ಸಮನಾದ ಸರಿಯಾದ ಅವಕಾಶ ಇರಬೇಕು ಇಲ್ಲದಿದ್ದರೆ ಅದು ಸ್ಪರ್ಧೆ ಆಗುವುದಿಲ್ಲ ಎಂದು ಹೇಳುತ್ತಾರೆ ಆಗ ಮುಂದೆ ಇದ್ದ ಬೆಂಚಿನವರು ಹೇಳುತ್ತಾರೆ.

 ಸಾರ್ ನಾವು ಮುಂದೆ ಕುಳಿತು ಕೊಂಡಿದ್ದರಿಂದ ನಮಗೆ ಇದು ತುಂಬಾ ಅನುಕೂಲವಾಗುತ್ತದೆ ನಾವು ಗೆದ್ದೇ ಗೆಲ್ಲುತ್ತೇವೆ ಆದರೆ ಹಿಂದಿನವರು ಹೇಗೆ ಗೆಲ್ಲುತ್ತಾರೆ ಆಗ ಹಿಂದೆ ಬಿಂಚಿನ ವಿದ್ಯಾರ್ಥಿಗಳು ಅವಕಾಶಗಳಿಂದ ವಂಚಿತರಾಗಿದ್ದೇವೆ ಎಂದು ಹೇಳುತ್ತಾರೆ ಇಂದಿನ ಪಾಠ ಇದೆ ನಮ್ಮ ಸಮಾಜದಲ್ಲಿ ಹಲವಾರು ಶತ ಶತಮಾನಗಳಿಂದ ನಡೆದು ಬರುತ್ತಿದೆ.

 ಮುಂದಿನ ಸಾಲಿನಲ್ಲಿ ಕುಳಿತಿರುವವರು ಮಾತ್ರ ಗುರಿಯನ್ನು ತಲುಪುತ್ತಿದ್ದಾರೆ ಗುರಿಯೂ ಕಣ್ಣಿನ ಮುಂದೆ ಇದೆ ಗುರಿ ತಲುಪುವುದು ಕೂಡ ತುಂಬ ಸುಲಭವಾಗಿದೆ ಆದರೆ ಹಿಂದೆ ಇರುವವರು ಶತಶತಮಾನಗಳಿಂದ ಹಿಂದೆಯೇ ಉಳಿದು ಬಿಟ್ಟಿದ್ದಾರೆ.

 ಅವರಿಗೆ ಗುರಿಯೂ ಕೂಡ ಸರಿಯಾಗಿ ಕಾಣುತ್ತಿಲ್ಲ ಕೆಲವರಿಗೆ ಗುರಿ ಇದೆಯೋ ಇಲ್ಲವೋ ಎಂದು ಗೊತ್ತಿಲ್ಲ ಎಲ್ಲರೂ ಗುರಿ ತಲುಪಬೇಕು ಎಂದು ಆಸೆ ಇದ್ದರೆ ಸ್ಪರ್ಧೆ ಸಮಾನವಾಗಿ ಇರಬೇಕು ಆದುದರಿಂದ ನಿಮಗೆ ಅವಕಾಶ ಬಂದಾಗ ಸರಿಯಾದ ಗುರಿಯನ್ನು ತಲುಪಲು ಸಹಾಯ ಮಾಡಿ ಎಂದು ಹೇಳುತ್ತಾರೆ.

 ತಾಳ್ಮೆಯ ಪರೀಕ್ಷೆ

ಊರಿನ ಆಚೆ ಬಾಬಾ ಅವರು ಇರುತ್ತಾರೆ ಬಾಬಾ ಅವರು ತುಂಬಾ ತಾಳ್ಮೆಗೆ ಹೆಸರು ವಾಸಿಯಾದವರು ಏನೇ ಆದರೂ ತಮ್ಮ ತಾಳ್ಮೆಯನ್ನು ಕಳೆದುಕೊಳ್ಳದೆ ಇರುವವರು ಒಂದು ಸಾರಿ ಬಾಬಾ ಅವರು ಸ್ನಾನ ಮಾಡಲೆಂದು ಹೋಗುತ್ತಾರೆ.

 ನದಿಗೆ ಹೋಗಿ ಸ್ನಾನ ಮಾಡಿ ಬರಬೇಕಾದರೆ ಒಬ್ಬ ಯುವಕ ಬಾಬಾ ಅವರ ಮೇಲೆ ಥೂ ಥೂ ಎಂದು ಉಗಿಯುತ್ತಾನೆ ಬಾಬಾ ಅವರು ಸ್ವಲ್ಪವೂ ಬೇಸರ ಮಾಡಿಕೊಳ್ಳದೆ ಮತ್ತೆ ಸ್ನಾನ ಮುಗಿಸಿ ಬರುತ್ತಾರೆ ಮತ್ತೆ ಆ ಯುವಕ ಹಾಗೆ ಉಗಿಯುತ್ತಾನೆ ಆದರೂ ಬಾಬಾ ಅವರು ಕೋಪ ಮಾಡಿಕೊಳ್ಳುವುದಿಲ್ಲ ಮತ್ತೆ ಸ್ನಾನ ಮಾಡಲು ಹೋಗುತ್ತಾರೆ.

 ಇದೇ ರೀತಿ ಹಲವಾರು ಬಾರಿ ಆಗುತ್ತದೆ ಆದರೂ ಬಾಬಾ ಅವರು ಯಾವುದೇ ಕಾರಣಕ್ಕೂ ತಲೆ ಕೆಡಿಸಿಕೊಳ್ಳದೆ ನಿಶ್ಚಿಂತೆಯಾಗಿ ಹೋಗುತ್ತಿರುತ್ತಾರೆ ಬರುತ್ತಿರುತ್ತಾರೆ ಕೊನೆಗೆ ಯುವಕನು ಬಂದು ಕಾಲಿಗೆ ಬಿದ್ದು ನಮಸ್ಕಾರ ಮಾಡಿ ಹೇಳುತ್ತಾನೆ.

 ದಯವಿಟ್ಟು ನನ್ನನ್ನು ಕ್ಷಮಿಸಿ ಆಗ ಯುವಕನನ್ನು ಭುಜತಟ್ಟಿ ಏಕೆ ಎಂದು ಕೇಳಿದಾಗ ನಿಮ್ಮ ತಾಳ್ಮೆಯ ಪರೀಕ್ಷೆ ಮಾಡಿದೆ ಎಂದು ಹೇಳುತ್ತಾನೆ. ಮತ್ತೆ ಇನ್ನೊಂದು ವಿಷಯ ಊರಿನಲ್ಲಿ ಇದ್ದ ಒಬ್ಬರು ನನಗೆ ಹಣವನ್ನೂ ಕೊಟ್ಟರು ನೀನು ಈ ಬಾಬಾ ಅವರಿಗೆ ಸಿಟ್ಟು ಬರುವಂತೆ ಮಾಡಿದರೆ ನಿನಗೆ ನಾನು ಹಣವನ್ನು ಕೊಡುತ್ತೇನೆ ಎಂದರು ಆ ಹಣದ ಆಸೆಗಾಗಿ ನಾನು ಹೀಗೆ ಮಾಡಿದೆ ಎಂದು ಸತ್ಯವನ್ನು ಹೇಳುತ್ತಾನೆ.

 ಆಗ ಬಾಬಾ ಅವರು ಹೇಳುತ್ತಾರೆ ನನ್ನ ತಾಳ್ಮೆ ಇರಲಿ ಆದರೆ ನೀನು ಇಷ್ಟು ಹೊತ್ತು ನೀನು ತಾಳ್ಮೆಯಿಂದ ಇದ್ದು ನನ್ನನ್ನು ಈ ರೀತಿ ಉಗಿದಿದ್ದಕ್ಕೆ ನಿನಗೆ ತಾಳ್ಮೆ ಇದೆಯಲ್ಲಾ ಅದು ನಿಜಕ್ಕೂ ನನಗಿಂತ ನಿನ್ನ ಸಾಧನೆ ದೊಡ್ಡದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮತ್ತೆ ಹೇಳುತ್ತಾರೆ ನಿನಗೆ ಹಣ ಸಿಗುತ್ತದೆ ಎಂದು ನನಗೆ ಗೊತ್ತಿದ್ದರೆ ನಾನು ಕೋಪ ಮಾಡಿಕೊಳ್ಳುತ್ತಿದೆ ನಿನಗಾದರೂ ಹಣ ಸಿಗುತ್ತಿತ್ತಲ್ಲ ಎಂದು ಹೇಳುತ್ತಾರೆ ಇಷ್ಟು ಹೊತ್ತು ಯಾಕೆ ಸಮಯ ವ್ಯರ್ಥ ಮಾಡಿಕೊಂಡೆ ಎಂದು ಹೇಳುತ್ತಾರೆ.

 ಆಗ ಬಾಬಾ ಅವರು ಹೇಳುತ್ತಾರೆ ಒಳ್ಳೆಯ ಕೆಲಸವಾಗಲಿ ದೊಡ್ಡ ಕೆಲಸವಾಗಲಿ ಯಾವುದೇ ಕೆಲಸ ಮಾಡಲು ತಾಳ್ಮೆ ಇರಲೇಬೇಕು ತಾಳ್ಮೆ ಇಲ್ಲದ ಕೆಲಸವು ಮನಸ್ಸಿನ ಶಾಂತಿಯನ್ನು ಕದಡಿ ಬಿಡುತ್ತದೆ ತಾಳ್ಮೆಯಿಂದ ಮಾಡಿದ ಕೆಲಸವು ಸಫಲವಾಗುತ್ತದೆ ಎಂದು ಹೇಳುತ್ತಾರೆ.

Leave a Comment