ಒಂದು ಜೀವನ ಕೌಶಲ್ಯ ತರಬೇತಿಗೆ ಎಲ್ಲರೂ ಬಂದಿರುತ್ತಾರೆ ಅದರಲ್ಲಿ ಹಳೆ ವಿದ್ಯಾರ್ಥಿ ಕೂಡ ಬಂದಿರುತ್ತಾನೆ ಹಳೆ ವಿದ್ಯಾರ್ಥಿಯು ಅವನ ಹುಟ್ಟು ಹಬ್ಬವಾದ್ದರಿಂದ ವಿದ್ಯಾರ್ಥಿ ಒಂದು ವಾಚನ್ನು ಉಡುಗೊರೆಯಾಗಿ ಗುರುಗಳಿಗೆ ನೀಡುತ್ತಾನೆ.
ಗುರುಗಳು ತುಂಬಾ ಸಂತೋಷ ಪಡುತ್ತಾರೆ ನಂತರ ಹತ್ತು ನಿಮಿಷದ ಲಘು ಉಪಹಾರಕ್ಕೆ (ಟೀಗಾಗಿ ಸಮಯ) ನೀಡುತ್ತಾರೆ ವಾಚ್ ಟೇಬಲ್ ಮೇಲೆಯೇ ಇಟ್ಟಿರುತ್ತಾರೆ ಆದರೆ ಅದನ್ನು ಒಬ್ಬ ತರಬೇತಿಗೆ ಬಂದಿದವನು ಕದ್ದು ಬಿಡುತ್ತಾನೆ ಗುರುಗಳು ಬಂದು ನೋಡುತ್ತಾರೆ ವಾಚ್ ಇರುವುದಿಲ್ಲ ಗುರುಗಳು ಯಾರು ವಾಚನ್ನು ಕದ್ದಿರಬಹುದು ಎಂದು ಗಮನಿಸಲಿಕ್ಕೆ ಎಲ್ಲಾ ವಿದ್ಯಾರ್ಥಿಗಳನ್ನು ಎದ್ದು ನಿಂತುಕೊಳ್ಳಿ ಎಂದು ಹೇಳುತ್ತಾರೆ.
ಈಗ ಒಂದು ಚಟುವಟಿಕೆ ಇದೆ ಅದನ್ನು ಮಾಡೋಣ ಎಂದು ಎಲ್ಲರೂ ನಿಮ್ಮ ಕರ್ಚಿಪನ್ನು ತೆಗೆದುಕೊಂಡು ಕಣ್ಣಿಗೆ ಕಟ್ಟಿಕೊಳ್ಳಿ ಎಂದು ಹೇಳುತ್ತಾರೆ ಎಲ್ಲರೂ ಅದೇ ರೀತಿ ಮಾಡುತ್ತಾರೆ.
WATCH ಬಗ್ಗೆ ತಿಳಿದುಕೊಳ್ಳೋಣ ಎಂದು ಗುರುಗಳು ಹೇಳುತ್ತಾ ಹೋಗುತ್ತಾರೆ Watch your words ನಿಮ್ಮ ಮಾತುಗಳ ಮೇಲೆ ನಿಗಾ ಇರಲಿ W Watch your action ನಿಮ್ಮ ಕ್ರಿಯೆಗಳನ್ನು ನೋಡಿಕೊಳ್ಳಿ. A Watch your thoughts ನಿಮ್ಮ ಆಲೋಚನೆಗಳ ಮೇಲೆ ನಿಗಾ ಇರಲಿ ಸಕಾರಾತ್ಮಕ ಅಥವಾ ನಕಾರಾತ್ಮಕ Watch your character ನಿಮ್ಮ ಚಾರಿತ್ರ ನೋಡಿಕೊಳ್ಳಿ ಒಂದು ಸರಿ ಹೋದರೆ ಮತ್ತೆ ಬರಲಾರದು.
Watch your heart ನಿಮ್ಮ ಹೃದಯವಂತಿಕೆಯಿಂದ ಇರಿ ಯಾರು ವಾಚ್ ಕದ್ದಿರುತ್ತಾನೆ ಅವನ ಮನಸ್ಸಿನಲ್ಲಿ ಭಯ ಒತ್ತಡ ಆತಂಕ ಎಲ್ಲವೂ ಶುರುವಾಗಿರುತ್ತದೆ ಏಕೆಂದರೆ ಎಲ್ಲರೂ ನನ್ನ ಕಳ್ಳರು ಎಂದು ಹೇಳುತ್ತಾರೆ ಎಂದು ಆತಂಕದಲ್ಲಿ ಇರುತ್ತಾನೆ.
ಗುರುಗಳು ಬಂದು ಆ ವಿದ್ಯಾರ್ಥಿಯ ಜೋಬಿನಿಂದ ವಾಚನ್ನು ತೆಗೆದುಕೊಂಡು ಮತ್ತೆ ಸ್ಟೇಜ್ ಗೆ ಬರುತ್ತಾರೆ ಮತ್ತೆ ತಮ್ಮ ಏನು ಪಾಠ ಮಾಡಬೇಕು ಆ ಪಾಠವನ್ನು ಮಾಡಿ ವಿದ್ಯಾರ್ಥಿಗಳನ್ನು ಕಳಿಸುತ್ತಾರೆ ವಾಚ್ ಕದ್ದವನು ನಂತರ ತುಂಬ ಗ್ರೇಟ್ ಬ್ಯುಸಿನೆಸ್ ಮ್ಯಾನ್ ಆಗುತ್ತಾನೆ.
ಅದೇ ಗುರುಗಳಿಗೆ ಹುಡುಕಿಕೊಂಡು ಬಂದು ಸಾಷ್ಟಾಂಗ ನಮಸ್ಕಾರ ಮಾಡಿ ಹೇಳುತ್ತಾನೆ ನಾನು ಆವತ್ತು ವಾಚನ್ನು ಕಳ್ಳತನ ಮಾಡಿ ಬಿಟ್ಟೆ ಆದರೂ ನೀವು ಯಾರಿಗೂ ತಿಳಿಸಲಿಲ್ಲ ಇದೇ ಕಾರಣದಿಂದ ನಾನು ಇವತ್ತು ತುಂಬಾ ಸಾಧನೆ ಮಾಡಿ ಬೆಳೆದಿದ್ದೇನೆ ಎನ್ನುತ್ತಾನೆ ಅಂದು ನೀವು ನಾನು ವಾಚ್ ಅನ್ನು ಕದ್ದಿದ್ದು ನೀನೇ ಎಂದು ಎಲ್ಲರ ಮುಂದೆ ಹೇಳಿದಿದ್ದರೆ ಅಂದು ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ನಿರ್ಧರಿಸಿದ್ದೆ ಆದರೆ ನೀವು ಯಾರಿಗೂ ಹೇಳಲಿಲ್ಲ ದಿಕ್ಕನ್ನು ಬದಲಿಸಿದ ಗುರುಗಳು ಎಂದು ಮತ್ತೊಂದು ಸಾರಿ ಹೇಳುತ್ತಾನೆ.
ನಂತರ ನಾನು ಒಳ್ಳೆಯವನಾಗಿ ಪ್ರಾಮಾಣಿಕನಾಗಿ ಬದುಕಬೇಕೆಂದು ಅಂದಿನಿಂದ ನಾನು ಇಂದಿನವರೆಗೂ ಪ್ರಾಮಾಣಿಕತೆಯಿಂದ ಬೆಳೆದು ಬಂದಿದ್ದೇನೆ ಎಂದು ಹೇಳುತ್ತಾನೆ ಗುರುಗಳಿಗೆ ಇವನು ಯಾವ ಶಿಬಿರಾರ್ಥಿ ಯಾವಾಗ ಶಿಬಿರವನ್ನು ಅಟೆಂಡ್ ಮಾಡಿದ ಎಂದು ಗೊತ್ತೇ ಇರುವುದಿಲ್ಲ ಆಗ ಗುರುಗಳು ಹೇಳುತ್ತಾರೆ.
ಆ ದಿನ ನಾನು ಯಾಕೆ ಆ ಚಟುವಟಿಕೆ ಮಾಡಿದೆಯೆಂದರೆ ಯಾರಿಗೂ ತಿಳಿಯದೆ ಇರಲಿ ಮತ್ತೆ ನನ್ನ ದೃಷ್ಟಿಯಲ್ಲಿ ಎಲ್ಲರೂ ವಿದ್ಯಾರ್ಥಿಗಳೇ ಆದರೆ ಯಾರೂ ಕೂಡ ಚಿಕ್ಕವನಾಗಬಾರದು ಎನ್ನುವುದೇ ನನ್ನ ಆಸೆ.
ಅಂದು ನನಗೆ ಗೊತ್ತಾಯಿತು ನೀನೆ ಎಂದು ಅದಕ್ಕೆ ನಾನು ವಾಚನ್ನು ತೆಗೆದುಕೊಂಡು ಹೋದೆ ಏಕೆಂದರೆ ಆ ವಿದ್ಯಾರ್ಥಿ ಮತ್ತೆ ಮನೆಗೆ ಬಂದು ವಾಚ್ ನಿಮಗೆ ಕೊಟ್ಟಿದ್ದ ಉಡುಗೊರೆ ಎಲ್ಲಿ ಎಂದು ಕೇಳಿದರೆ ನಾನು ಏನು ಹೇಳಲಿ ಅದಕ್ಕಾಗಿ ನಾನು ಬಂದು ವಾಚನ್ನು ತೆಗೆದುಕೊಂಡೆ ನನ್ನದೇ ಆಗಿದ್ದರೆ ಬಿಟ್ಟುಬಿಡುತ್ತಿದ್ದೆ ಎಂದರು.
ವಿದ್ಯಾರ್ಥಿ ಕ್ಷಮೆ ಕೇಳಿದ ತಪ್ಪು ತಿಳಿದು ಮಾಡಿದ್ದಾರೋ ತಿಳಿಯದೆ ಮಾಡಿದ್ದರು ಕ್ಷಮಿಸಿಬಿಡಿ ಒಂದು ಒಂದು ಅವಕಾಶ ನೀಡೋಣ ಆಗ ಅವರಿಗೆ ಆತ್ಮಗೌರವ ಬೆಳೆಯುತ್ತದೆ ಮತ್ತೆ ಅವರಿಗೆ ಬೆಳೆಯಲಿಕ್ಕೆ ವೇದಿಕೆ ಸಿಗುತ್ತದೆ ಮನ ಪರಿವರ್ತನೆಯಾಗುತ್ತದೆ.
ಮರದ ಸುತ್ತ ತಿರುಗುತ್ತಿದ್ದನು
ಒಂದು ಹಳ್ಳಿಯಲ್ಲಿ ಆಧ್ಯಾತ್ಮಿಕ ಮನುಷ್ಯನು ಇದ್ದನು ಅವನಿಗೆ ಬೇರೆ ಹಳ್ಳಿಗೆ ಹೋಗಿ ಕೆಲವು ವಸ್ತುಗಳನ್ನು ತರಬೇಕಾಯಿತು ಆಗ ಅವನು ನಾನು ಒಬ್ಬನೇ ಹೋದರೆ ಒಳ್ಳೆಯದಲ್ಲ ಇತರರು ಅಥವಾ ವ್ಯಾಪಾರಿಗಳು ಸಿಕ್ಕರೆ ಅವರ ಜೊತೆಯಲ್ಲೇ ಹೋಗೋಣ ಎಂದು ನಿರ್ಧರಿಸಿದ.
ಅದರಂತೆಯೇ ಒಂದು ವ್ಯಾಪಾರಿಗಳ ಗುಂಪು ಹೋಗುತ್ತಿತ್ತು ಅವರ ಜೊತೆಯಲ್ಲಿ ಇವನು ಕೂಡ ಸೇರಿಕೊಂಡನು ವ್ಯಾಪಾರಿಗಳು ಸಂಜೆಯ ವೇಳೆಗೆ ಹಿಂತಿರುಗಿ ಬೇಕಾಗಿತ್ತು ಆದರೆ ವ್ಯಾಪಾರ ಚೆನ್ನಾಗಿ ನಡೆಯಿತು ಸಂಜೆ ಆಯಿತು ಎಲ್ಲ ವ್ಯಾಪಾರಿಗಳು ಈವತ್ತು ಎಲ್ಲರೂ ಇಲ್ಲಿಯೇ ಉಳಿದು ಕೊಳ್ಳೋಣ ಎಂದು ಒಂದು ದೊಡ್ಡ ಮರವನ್ನು ಆಯ್ಕೆ ಮಾಡಿಕೊಂಡರು.
ಆದರೆ ಈ ಆಧ್ಯಾತ್ಮಿಕ ಮನುಷ್ಯನು ಏನು ಮಾಡುವುದು ಎಂದು ಚಿಂತಿತನಾದನು ಒಬ್ಬನೇ ಹೋಗುವುದು ಬೇಡ ಜೊತೆಯಲ್ಲಿ ಹೋಗೋಣ ಎಂದು ವ್ಯಾಪಾರಿಗಳ ಜೊತೆಯಲ್ಲಿ ಇದ್ದನು ರಾತ್ರಿ ಆಗುತ್ತಿದ್ದಂತೆ ಎಲ್ಲರ ವ್ಯಾಪಾರಿಗಳು ಮಲಗಿದರು.
ಇವನು ಮಾತ್ರ ಮಲಗದೆ ಮಂತ್ರವನ್ನು ಜಪಿಸಲು ಶುರು ಮಾಡಿದನು ಹಾಗೆ ಈ ಮಂತ್ರವನ್ನು ಜಪಿಸುತ್ತಾ ಮರದ ಸುತ್ತ ತಿರುಗುತ್ತಿದ್ದನು ಎಲ್ಲಿಯವರೆಗೆ ಸುತ್ತಾಡುತ್ತಿದ್ದನು ಎಂದರೆ ಬೆಳಿಗ್ಗೆ ಆಗುವವರೆಗೂ ಕಳ್ಳರ ಗುಂಪು ಕಾಯುತ್ತಿತ್ತು ಎಲ್ಲಾ ವ್ಯಾಪಾರಿಗಳು ಮಲಗಿಕೊಂಡರೆ ಹೇಗಾದರೂ ಮಾಡಿ ಕಳ್ಳತನ ಮಾಡಬಹುದು ಎಂದು ಯೋಚಿಸಿದರು ಕಳ್ಳರ ಯೋಚನೆ ಉಲ್ಟಾಪಲ್ಟವಾಯಿತು ಈ ಮನುಷ್ಯನು ಬೆಳಿಗ್ಗೆಯವರೆಗೆ ಕಾವಲುಗಾರನಂತೆ ಸುತ್ತುತ್ತಲೇ ಇದ್ದಾನೆ.
ಕಳ್ಳರು ಆಶ್ಚರ್ಯರಾದರು ಮತ್ತೆ ನಂತರ ವ್ಯಾಪಾರಿಗಳಿಗೆ ಹೇಳಿದರು ನಿಮ್ಮಲ್ಲಿ ಇರುವ ಒಬ್ಬ ಒಳ್ಳೆಯ ಮನುಷ್ಯ ನಿಂದಾಗಿ ನೀವು ಇವತ್ತು ನಿಮ್ಮ ವಸ್ತುಗಳನ್ನು ಜೋಪಾನ ಮಾಡಿಕೊಂಡಿದ್ದೀರಿ ಇಲ್ಲದಿದ್ದರೆ ನಾವು ನಿಮ್ಮ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದೆವು ಎಂದು ಪ್ರಾಮಾಣಿಕವಾಗಿ ಹೇಳಿದರು.
ಆಗ ವ್ಯಾಪಾರಿಗಳು ಎಲ್ಲರೂ ಈ ಮನುಷ್ಯನನ್ನು ಕೇಳಿದರು ನಿನಗೆ ಹೆದರಿಕೆ ಆಗಲಿಲ್ಲವೇ ಎಂದಾಗ ಆ ವ್ಯಕ್ತಿಯು ಹೇಳಿದನು ನಾನು ತುಂಬ ದೊಡ್ಡ ಶ್ರೀಮಂತನು ಅಲ್ಲ ಮತ್ತೆ ನನ್ನ ಹತ್ತಿರ ಬೆಲೆ ಬಾಳುವ ಯಾವುದೇ ರೀತಿಯ ವಸ್ತುಗಳೂ ಇಲ್ಲ ಅದರಿಂದಾಗಿ ನನಗೆ ಹೆದರಿಕೆ ಇಲ್ಲ ಎಂದು ಹೇಳುತ್ತಾನೆ.
ಹೇಗೆ ಬಂದಿ ಮಾಡುವೆ
ಒಂದು ಕಾಡಿನಲ್ಲಿ ಚೇಷ್ಟೆ ಮಾಡುವ ಕೋತಿ ಇತ್ತು ಆಹಾರಕ್ಕೆ ಅಲೆಯುತ್ತಾ ಊರಿಗೆ ಬಂದಿದ್ದು ಊರಿನಲ್ಲಿ ಮದುವೆ ನಡೆಯುತ್ತಿತ್ತು ಆ ಸಮಾರಂಭಕ್ಕೆ ಕದ್ದು ಮುಚ್ಚಿ ಕೋತಿಯು ಓಡಾಡುತ್ತಾ ನೋಡಿತು ಅಡುಗೆ ಆಗುತ್ತಿರುವ ಕಡೆಗೆ ಬಂತು ಅಡಿಗೆ ಏನೇನು ಇದೆ ಎಂದು ನೋಡಿ ಲಾಡು ತೆಗೆದು ತಿನ್ನುತ್ತಿತ್ತು ಅಷ್ಟರಲ್ಲಿ ಯಾರೋ ಬಂದರು ಎಂದು ಹೆದರಿಕೆಯಿಂದ ಓಡಿಬಂತು ಆಗ ಬೆಂಕಿ ತೊಗಲಿತು ಕೋತಿಯು ಕಿರಿಚಿಕೊಂಡು ಆಚೆಗೆ ಬಂತು.
ಬಣ್ಣದ ನೀರು ಇಟ್ಟಿದ್ದರು ಅದರಲ್ಲಿ ಮುಳುಗಿತು, ನಂತರ ಎದ್ದು ಓಡಿ ಬಂದಿತು ನಂತರ ಇದರ ವೇಷ ನೋಡಿದರೆ ವಿಚಿತ್ರವಾಗಿ ಕಾಣಿಸುತ್ತಿತ್ತು ಹಾಗೆ ನಿಧಾನವಾಗಿ ಬರುತ್ತಿದ್ದಾಗ ಯಾರೋ ದಾರಿಯಲ್ಲಿ ಒಂದು ಕನ್ನಡಿಯ ಪೆಟ್ಟಿಗೆಯನ್ನು ಹಿಡಿದುಕೊಂಡು ಹೋಗುತ್ತಿದ್ದರು.
ಕೋತಿಯನ್ನು ನೋಡಿದ ತಕ್ಷಣ ಪೆಟ್ಟಿಗೆಯನ್ನು ಬಿಟ್ಟು ಓಡಿ ಹೋದನು ಕೋತಿಯು ಆ ಪೆಟ್ಟಿಗೆಯನ್ನು ತೆಗೆದು ನೋಡಿತು ಅದು ಕನ್ನಡಿ ತನ್ನ ಮುಖ ನೋಡಿತು ವಿಶೇಷವಾಗಿ ಖಂಡಿತು.
ಕೋತಿಯೂ ಯೋಚನೆ ಮಾಡಿತು ನಾನು ಕಾಡಿನಲ್ಲಿರುವ ಎಲ್ಲಾ ಪ್ರಾಣಿಗಳಿಗೂ ನಾನೇ ರಾಜ ಎಂದು ಹೇಳುತ್ತೇನೆ ಎಂದು ಯೋಚಿಸಿ ಮೊದಲು ಅಳಿಲಿನ ಹತ್ತಿರ ಬಂದಿತು ಇನ್ಮುಂದೆ ನಾನೇ ರಾಜ ನನ್ನ ಮಾತು ಕೇಳಬೇಕು ಇಲ್ಲದಿದ್ದರೆ ನಾನು ನಿನ್ನನ್ನು ಈ ಪೆಟ್ಟಿಗೆಯಲ್ಲಿ ಬಂಧಿಸುತ್ತೇನೆ ಎಂದು ಪೆಟ್ಟಿಗೆ ತೆಗೆದು ತೋರಿಸಿತು.
ಪೆಟ್ಟಿಗೆಯಲ್ಲಿ ಅಳಿಲಿನ ಮುಖ ಖಂಡಿತು ಅಳಿಲು ಹೆದರಿತು ಬೆಕ್ಕಿನ ಕಡೆಗೆ ಹೋಯಿತು ಬೆಕ್ಕಿಗೆ ಹೇಳಿತು ಇನ್ನು ಮುಂದೆ ಈ ಕಾಡಿಗೆ ನಾನೇ ರಾಜ ನನ್ನ ಮಾತು ಕೇಳಬೇಕು ಇಲ್ಲದಿದ್ದರೆ ನಿನ್ನನ್ನು ಈ ಪೆಟ್ಟಿಗೆಯಲ್ಲಿ ಬಂಧಿಸುತ್ತೇನೆ ನೋಡು ಎಂದು ಹೇಳಿ ಕನ್ನಡಿ ತೋರಿಸಿತು.
ಬೆಕ್ಕು ತನ್ನ ಮುಖವನ್ನು ನೋಡಿ ಹೆದರಿಕೊಂಡಿತು ನಂತರ ಜಿಂಕೆಯ ಹತ್ತಿರ ಹೋಯಿತು ಅದಕ್ಕೂ ಇದೇ ರೀತಿ ಹೇಳಿತು ಕಾಡಿನಲ್ಲಿ ಇರುವ ಸಿಂಹ ಹುಲಿ ಚಿರತೆ ಎಲ್ಲಾ ಪ್ರಾಣಿಗಳಿಗೂ ಧೈರ್ಯದಿಂದ ಹೇಳಿಕೊಂಡು ಬಂದಿತು ನಂತರ ನರಿ ಸಿಕ್ಕಿತು ನರಿಗೂ ಇದೇ ಮಾತು ಹೇಳಿತು ಹೌದಾ ನನಗೆ ನೀನು ಬಂದಿ ಮಾಡುವೆಯ ಹೇಗೆ ಬಂದಿ ಮಾಡುವೆ ತೋರಿಸು ಎಂದಾಗ ಪೆಟ್ಟಿಗೆ ಬಿಚ್ಚಿತು ನೋಡಿದರೆ ಕನ್ನಡಿಯಲ್ಲಿ ತನ್ನ ಮುಖ ಖಂಡಿತು ಆಗ ನರಿಗೆ ಅರ್ಥವಾಯಿತು.
ಈ ಕೋತಿಯು ಎಲ್ಲರನ್ನೂ ಮೋಸ ಮಾಡುತ್ತಿದೆ ಎಂದು ತಿಳಿದು ಸಿಂಹ ರಾಜನಿಗೆ ಹೇಳಿತು ಕೋತಿಯು ಸುಳ್ಳು ಹೇಳಿ ಎಲ್ಲರಿಗೂ ಮೋಸ ಮಾಡುತ್ತಿದೆ ಮತ್ತೆ ಎಲ್ಲರೂ ಕೋತಿಗೆ ಹೆದರುತ್ತಿದ್ದಾರೆ ಇದಕ್ಕೆ ಏನಾದರೂ ವ್ಯವಸ್ಥೆ ಮಾಡಬೇಕು ಎಂದಾಗ ಸಿಂಹ ನರಿಗೆ ಹೇಳಿತು.
ಏನು ಮಾಡಬೇಕು ನೀನೇ ಹೇಳು ಎಂದಾಗ ಒಂದು ಸಭೆ ಸೇರಿಸೋಣ ಎಲ್ಲಾ ಪ್ರಾಣಿಗಳು ಸುತ್ತ ಕುಳಿತುಕೊಂಡು ಕೋತಿಯ ಪೆಟ್ಟಿಗೆಯನ್ನು ಕಿತ್ತುಕೊಂಡರೆ ಸಾಕು ಅದು ಸಾಧಾರಣ ಕೋತಿಯಾಗುತ್ತದೆ ನಂತರ ಎಲ್ಲಾ ಪ್ರಾಣಿಗಳು ಸಭೆ ಸೇರಿದವು ಸಿಂಹ ನಿಧಾನವಾಗಿ ಕೋತಿಯ ಹಿಂದೆ ಹೋಗಿ ಗರ್ಜಿಸಿತು.
ಕೋತಿಯು ಹೆದರಿ ಪೆಟ್ಟಿಗೆಯನ್ನು ಬಿಟ್ಟು ಓಡಿಹೋಯಿತು ನಂತರ ನರಿಯು ಆ ಪೆಟ್ಟಿಗೆಯನ್ನು ನೀರಿನಲ್ಲಿ ಎಸೆಯಿದು ನಂತರ ಎಲ್ಲಾ ಪ್ರಾಣಿಗಳಿಗೂ ಕೋತಿಯ ಕುತಂತ್ರ ತಿಳಿಯಿತು ನಂತರ ಕೋತಿಗೆ ಅರಣ್ಯದಿಂದ ಬೇರೆ ಕಡೆಗೆ ಓಡಿಸಿದರು.
ಜೋಪಾನವಾಗಿ ಇಡಬೇಕಾಗಿತ್ತು
ಒಂದು ಸಾರಿ ದೊಡ್ಡ ಶ್ರೀಮಂತನು ಬೆಲೆ ಬಾಳುವ ಒಂದು ಆಭರಣವನ್ನು ಒಂದು ಗಿರವಿ ಅಂಗಡಿಯಲ್ಲಿ ಅಂಗಡಿಯಲ್ಲಿ ಸಾಲ ಬೇಕು ಎಂದು ಬರುತ್ತಾನೆ ಎಷ್ಟು ಬೇಕು ಎಂದು ಕೇಳಿದಾಗ ನನಗೆ ಬರೀ 10 ಸಾವಿರ ಸಾಕು ಎಂದು ಕೇಳುತ್ತಾನೆ.
ಗಿರವಿ ಅಂಗಡಿಯವರು ಆಗಲಿ ಎಂದು ಒಂದು ಅರ್ಜಿಯನ್ನು ತುಂಬಿಸಿ ಇದಕ್ಕೆ ಬೇಕಾದುದು ಏನಾದರೂ ಇರಬೇಕಲ್ಲ ಎಂದು ಹೇಳಿದಾಗ ವಜ್ರದ ಆಭರಣವನ್ನು ಇಡುತ್ತಾನೆ.
ಇದು ಹೆಚ್ಚುಕಡಿಮೆ ಹದಿನೈದು ಇಪ್ಪತ್ತು ಲಕ್ಷದ್ದು ವಜ್ರದ ಆಭರಣವಾಗಿರುತ್ತದೆ ಅಲ್ಲಿದ್ದ ಕೆಲಸಗಾರ ಅವರಿಗೇನೋ ಕಷ್ಟ ಇರಬೇಕು ಅದಕ್ಕಾಗಿ ಇಡುತ್ತಿದ್ದಾರೆ ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾನೆ ಅದರಂತೆಯೇ ಸಾಲ ಪಡೆದು ಹೊರಟು ಹೋಗುತ್ತಾನೆ.
ಎರಡು ವಾರದ ಬದಲು ಅವನು 3 ವಾರ ಆದ ಮೇಲೆ ಬರುತ್ತಾನೆ ನಂತರ ಹಣವನ್ನು ಕೊಟ್ಟಿ ಬಿಡಿಸಿಕೊಳ್ಳುತ್ತಾನೆ ಆಗ ಅಲ್ಲಿದ್ದ ಮ್ಯಾನೇಜರ್ ಸ್ವಾಮಿ ಇಷ್ಟು ಬೆಲೆ ಬಾಳುವ ವಸ್ತುಗಳು ಇದೇ ನಿಮ್ಮ ಹತ್ತಿರ ನಿಮಗೆ ಇಷ್ಟು ತೊಂದರೆಯಾಗಿದೆಯೇ ಎಂದು ಹೇಳುತ್ತಾರೆ.
ಇಲ್ಲ ನನಗೆ ಯಾವ ಕೊರತೆಯೂ ಇಲ್ಲ ತೊಂದರೆಯು ಇಲ್ಲ ಆದರೆ ಇದನ್ನು ಜೋಪಾನವಾಗಿ ಇಡಬೇಕಾಗಿತ್ತು ಅದಕ್ಕಾಗಿ ನಾನು ಇಲ್ಲಿ ಇಟ್ಟೆ ಇಷ್ಟು ಜೋಪಾನವಾಗಿ ಬೇರೆ ಯಾವ ಕಡೆ ನೋಡಿಕೊಳ್ಳುತ್ತಾರೆ ಹೇಳಿ ಅದಕ್ಕಾಗಿ ಇಟ್ಟೆ ಎಂದು ಹೇಳುತ್ತಾನೆ ಆಗ ಕೆಲಸಗಾರನಿಗೆ ಅರ್ಥವಾಯಿತು.
ಶ್ರೀಮಂತ ಸಾಲಕ್ಕಾಗಿ ಇಡಲಿಲ್ಲ ಆ ವಸ್ತು ಭದ್ರವಾಗಿ ಜೋಪಾನವಾಗಿ ಇರಬೇಕು ಎಂದು ಸಾಲ ಪಡೆದಿದ್ದನು ಎಂದು ಅರ್ಥಮಾಡಿ ಕೊಂಡನು.
ನನಗಿಂತ ನಿನಗೆ ತಿಳಿದಿದೆಯೇ?
ಒಂದು ನದಿಯ ಪಕ್ಕದಲ್ಲಿ ಒಂದು ದೊಡ್ಡದಾದ ಮರ ಇರುತ್ತದೆ ಮರದ ಕೆಳಗೆ ಇಲಿ ವಾಸಿಸಿಕೊಂಡಿರುತ್ತದೆ ಒಂದು ಪಕ್ಷಿ ಮರವನ್ನು ನೋಡಿ ಗೂಡು ಕಟ್ಟಲು ಆರಂಭಿಸುತ್ತದೆ ಇಲಿ ಪಕ್ಷಿಗೆ ಗುಡು ಕಟ್ಟುವುದನ್ನು ನೋಡಿ ಇಲಿ ಪಕ್ಷಿಗೆ ಈ ಮರದ ಮೇಲೆ ಗೂಡು ಕಟ್ಟಬೇಡ ಎಂದು ಹೇಳುತ್ತದೆ ಇದನ್ನು ಕೇಳಿದ ಪಕ್ಷಿಗೆ ಕೋಪ ಬಂತು ಏಕೆ ಕಟ್ಟಬಾರದು ಎಂದು ಕೇಳಿತು.
ಮರದಲ್ಲಿ ಎಲ್ಲೇ ಗೂಡು ಕಟ್ಟಿದರು ನಷ್ಟ ಆಗುತ್ತದೆ ಆದುದರಿಂದ ನಿನಗೆ ಹೇಳುತ್ತಿದ್ದೇನೆ ಬೇರೆ ಯಾವುದಾದರೂ ಮರದಲ್ಲಿ ನಿನ್ನ ಗೂಡನ್ನು ಕಟ್ಟಿಕೊಂಡರೆ ಒಳ್ಳೆಯದು ಎಂದು ಕೊಂಕು ನುಡಿಯಿಂದ ಹೇಳಿತು.
ಪಕ್ಷಿಗೆ ಮತ್ತಷ್ಟು ಕೋಪ ಬಂದಿತು ಇಲಿಗೆ ಕೊಂಕು ನುಡಿಯಿಂದ ಹೇಳಿತು ಇಲಿ ನೀನು ಭೂಮಿ ಮೇಲೆ ಮಾತ್ರ ಇರುತ್ತೀಯ ನಿನಗೇನು ಗೊತ್ತು ನಾನು ಮೇಲೆ ಹಾರಾಡುತ್ತೇನೆ ಎಲ್ಲಾ ಮರಗಳು ಕೊಂಬೆಗಳನ್ನು ನೋಡಿದ್ದೇನೆ ಮರವು ದೊಡ್ಡದಾಗಿದೆ ನನಗಿಂತ ನಿನಗೆ ತಿಳಿದಿದೆಯೇ? ನೀನು ನಿನ್ನ ಕೆಲಸ ನೋಡಿಕೋ ಎಂದು ಇಲ್ಲಿಗೆ ಬೈದು ಕಳುಹಿಸಿತು ಇಲಿ ನನಗೆ ತಿಳಿದಿದ್ದು ನಾನು ನಿನಗೆ ಹೇಳಿದೆ ಎಂದು ಹೇಳಿ ಹೋಯಿತು.
ಕೆಲವು ದಿನಗಳ ನಂತರ ಆ ದೊಡ್ಡ ಮರವು ಉರುಳಿ ಬಿದ್ದಿತು ಆಗ ಪಕ್ಷಿಗೆ ಆಶ್ಚರ್ಯವಾಯಿತು, ಇಷ್ಟು ದೊಡ್ಡ ಮರ ಹೇಗೆ ಬಿದ್ದಿತು ಅದೃಷ್ಟಕ್ಕೆ ಮರ ಬೀಳುವ ಸಮಯದಲ್ಲಿ ಪಕ್ಷಿಯು ಆಹಾರ ತರಿಲಿಕ್ಕೆ ಎಂದು ಆಚೆ ಹೋಗಿತ್ತು ಆದರಿಂದ ಪಕ್ಷಿ ಉಳಿಯಿತು ಇಲ್ಲದಿದ್ದರೆ ಪಕ್ಷಿಗೂ ತೊಂದರೆ ಯಾಗುತ್ತಿತ್ತು.
ಪಕ್ಷಿ ಬಂದು ಇಲಿಗೆ ಕೇಳಿತು ಇಲಿ ನೀನು ಯಾವ ಭರವಸೆಯ ಮೇಲೆ ಗೂಡು ಕಟ್ಟಬೇಡ ಎಂದು ಹೇಳಿದೆ ಎಂದು ಪಕ್ಷಿ ವಿನಯದಿಂದ ಕೇಳಿತು ಆಗ ಇಲಿ ಹೇಳಿತು ನೀನು ಮೇಲಿನ ನೋಟದಿಂದ ನೋಡಿದ್ದೀಯಾ, ರಂಬೆಗಳು, ಕೊಂಬೆಗಳು ಕಾಂಡ ಎಲ್ಲವೂ ಚೆನ್ನಾಗಿದೆ ಆದರೆ ಮರದ ಬೇರುಗಳಲ್ಲಿ ಶಕ್ತಿ ಇಲ್ಲ.
ನಾನು ನೆಲ ಕೊರೆದುಕೊಂಡು ನೆಲದಲ್ಲೇ ಇರುತ್ತೇನೆ ಆದ್ದರಿಂದ ಬೇರುಗಳ ಬಗ್ಗೆ ನನಗೆ ತಿಳಿಯಿತು ಆದುದರಿಂದ ನಿನಗೆ ನಾನು ಕಟ್ಟಬೇಡ ಎಂದು ಹೇಳಿದೆ ಎಂದು ಹೇಳಿತು ಆಗ ಪಕ್ಷಿಗೆ ಅರ್ಥವಾಯಿತು ಕೆಲವು ಸಾರಿ ನಾವು ಬರೀ ಮೇಲ್ನೋಟವನ್ನು ಮಾತ್ರ ಗಮನಿಸುತ್ತೇವೆ ಒಳಗೆ ಎಷ್ಟು ಶಕ್ತಿ ಇದೆ ಎಂದು ಗ್ರಹಿಸೋಣ. ಅಲಂಕಾರಕ್ಕೆ ಆಕರ್ಷಿತನಾಗಿ ನಷ್ಟ ಮಾಡಿಕೊಂಡಿದ್ದೇನೆಯೇ?