ಒಂದು ದೊಡ್ಡ ಕಂಪೆನಿ ಆ ಕಂಪೆನಿಯಲ್ಲಿ ಮಾಲೀಕನಿಗೆ ಕಾರು ಚಾಲಕನಾಗಿ ಕೆಲಸ ಮಾಡಿಕೊಂಡು ಇರುತ್ತಾನೆ ಅವನ ಕೆಲಸವೂ ಕೂಡ ತುಂಬಾ ಚೆನ್ನಾಗಿಯೇ ಇರುತ್ತದೆ ಕಂಪೆನಿ ಮಾಲೀಕರಿಗೆ ಎಷ್ಟು ಗೌರವ ಇರುತ್ತದೆ ಚಾಲಕನಿಗೂ ಅಷ್ಟೇ ಗೌರವವನ್ನು ಕೊಡುತ್ತಾ ಇರುತ್ತಾರೆ.
ಚಾಲಕನಿಗೆ ಅಹಂ ನಾನೇ ದೊಡ್ಡವನು ಎನ್ನುವ ಸ್ವಾರ್ಥ ಮನೋಭಾವನೆ ಪ್ರದರ್ಶಿಸುತ್ತಾನೆ ಇರುತ್ತದೆ ಮನೆಯಲ್ಲಿ ಮಾತ್ರ ಇವನದೇ ರಾದ್ಧಾಂತ ಹೇಳಿದಂತೆ ಕೇಳಬೇಕು ನಾನು ನಾನು ಎಂದು ಆಗಾಗ ಹೇಳುತ್ತಿರುತ್ತಾನೆ ಇದನ್ನು ನೋಡಿದ ಹೆಂಡತಿ ಒಂದು ಸಾರಿ ಹೇಳುತ್ತಾಳೆ.
ನಾನು ತವರು ಮನೆಗೆ ಹೋಗುತ್ತೇನೆ ಇನ್ನೂ ನಿಮ್ಮ ಜೊತೆ ನಾನು ಬದುಕಲು ಸಾಧ್ಯವಿಲ್ಲ ಏಕೆಂದರೆ ನಿಮಗೆ ಅಹಂ ಜಾಸ್ತಿ ಇದೆ ಅಹಂ ಅನ್ನು ಇಟ್ಟುಕೊಂಡು ನೀವು ಒಬ್ಬರೇ ಬದುಕಿ ಎಂದು ಹೊರಡಲು ಸಿದ್ಧವಾಗುತ್ತಾಳೆ ಇದ್ದದ್ದು ಇದ್ದ ಹಾಗೆ ಹೇಳುತ್ತಾಳೆ.
ನಿಮಗೆ ಬಿಡಲು ಕಾರಣವೇನೆಂದರೆ ನಿಮ್ಮ ದುರಹಂಕಾರವೇ ನಿಮ್ಮ ಕಂಪನಿ ಮಾಲೀಕರು ತುಂಬ ಪ್ರಸಿದ್ಧಿಯಾಗಿದ್ದಾರೆ ಅವರಿಗೆ ಅಂತಸ್ತು ಇದೆ ಅವರಿಗೆ ಹಣವೂ ಇದೆ ವರ್ಷಕ್ಕೆ ಸ್ವಲ್ಪಸ್ವಲ್ಪ ಬೆಳೆಯುತ್ತಿದ್ದಾರೆ ನೀವು ವೃತ್ತಿಯಲ್ಲಿ ಇದ್ದೀರಾ ನಿಮಗೆ ಏಕಿಷ್ಟು ಅಹಂ ಕೆಲಸ ಮಾಡಿಕೊಂಡಿದ್ದರೆ ನಾವು ಗುಲಾಮರೆ ಈ ಅಹಂ ಇಟ್ಟುಕೊಂಡರೆ ನೀವು ಹತ್ತು ವರ್ಷವಾದರೂ ಬೆಳೆಯಲಾರಿರಿ ಇನ್ನೊಬ್ಬರ ಗುಲಾಮಗಿರಿಯಲ್ಲಿ ಬದುಕುತ್ತಿದ್ದೀರಾ ಎಂದು ಹೇಳುತ್ತಾಳೆ.
ಹೆಂಡತಿ ಹೇಳಿದ ಮಾತನ್ನು ಒಂದು ಕ್ಷಣ ನಿಧಾನವಾಗಿ ಯೋಚನೆ ಮಾಡಿದಾಗ ಇದು ಸತ್ಯ ಅನಿಸುತ್ತದೆ ನಂತರ ಚಾಲಕ ತನ್ನ ವರ್ತನೆಯನ್ನು ಬದಲಾಯಿಸಿಕೊಳ್ಳುತ್ತಾನೆ ಚಾಲಕ ನಾನು ಮತ್ತಷ್ಟು ಬೆಳೆಯಬೇಕೆಂದು ಶ್ರದ್ಧೆ ಭಕ್ತಿಯಿಂದ ಕೆಲಸಗಳನ್ನು ನಿಭಾಯಿಸುತ್ತಾನೆ ಸೂಕ್ಷ್ಮವಾಗಿ ಅರಿತ ಮಾಲೀಕರು ಚಾಲಕನಿಗೆ ಬೇರೆಯ ಒಂದು ಜವಾಬ್ದಾರಿಯನ್ನು ಕೊಡುತ್ತಾರೆ.
ಅದೇ ರೀತಿ ಉನ್ನತ ಮಟ್ಟಕ್ಕೆ ಇವನು ಕೂಡ ಬೆಳೆಯುತ್ತಾನೆ ನಂತರ ತನ್ನದೇ ಆದ ಒಂದು ಟ್ರಾವೆಲ್ಸ್ ತೆರೆಯುತ್ತಾನೆ ಈ ಚಾಲಕ ನಂತೆಯೇ ನಾವು ಕೂಡ ಇದ್ದೇವೆಯೇ ಹತ್ತು ವರ್ಷಗಳ ಹಿಂದೆಯೂ ನಾವು ಹಾಗೆ ಇದ್ದೀವಿ ಇನ್ನೂ ಹತ್ತು ವರ್ಷಗಳ ಮುಂದೆ ಹೇಗೆ ಇರಬೇಕು ನನ್ನ ಅಭಿವೃದ್ಧಿಯ ಬಗ್ಗೆ ನಾವೇ ಸ್ವಯಂ ವಿಶ್ಲೇಷಣೆ ಮಾಡಿಕೊಳ್ಳೋಣ.
ಆನೆಯನ್ನು ತಳ್ಳಿಬಿಡಿ
ನೀಚ ಬುದ್ಧಿ ರಾಜ ಇರುತ್ತಾನೆ ರಾಜನಿಗೆ ಬೇರೆ ರಾಜ್ಯದವರು ಒಂದು ಅದ್ಭುತವಾದ ಲಕ್ಷಣವಾದ ಒಂದು ಆನೆಯನ್ನು ಉಡುಗೊರೆಯಾಗಿ ನೀಡುತ್ತಾರೆ ಈ ಆನೆಯು ಕೂಡ ನೋಡಲಿಕ್ಕೆ ತುಂಬ ಸುಂದರವಾಗಿ ಇರುತ್ತೆ ಮತ್ತೆ ಒಮ್ಮೆ ನೋಡಿದರೆ ಮತ್ತೊಂದು ಸಾರಿ ನೋಡಬೇಕು ಎನ್ನುವ ಹಾಗೆ ಇರುತ್ತದೆ.
ಈ ಆನೆಯು ತುಂಬಾ ಪ್ರಸಿದ್ಧವಾಗುತ್ತಾ ಹೋಗುತ್ತದೆ ಇದನ್ನು ನೋಡಿ ಕೊಳ್ಳುವ ಮಾವುತನಿಗೂ ವಿಶೇಷ ಎನಿಸುತ್ತದೆ ಯಾವುದೇ ಕಾರ್ಯಕ್ರಮಕ್ಕೆ ಹೋದಾಗ ಆನೆಯು ತನ್ನ ಖ್ಯಾತಿಯನ್ನು ಪಡೆದುಕೊಂಡು ಬರುತ್ತಿತ್ತು.
ಹೇಗಾಯಿತು ಎಂದರೆ ರಾಜ ಬರುತ್ತಿದ್ದಾನೆ ಎಂದರೆ ಅಷ್ಟು ಜನರು ಬರುತ್ತಿರಲಿಲ್ಲ ಆದರೆ ಆನೆ ಬರುತ್ತಿದೆ ಎಂದರೆ ಬಹಳಷ್ಟು ಜನ ಬರುತ್ತಿದ್ದರು ಆ ಮಟ್ಟಿಗೆ ಆನೆಯ ಪ್ರಸಿದ್ದಿ ಪಡೆಯಿತು ನಂತರ ಎಲ್ಲರೂ ಕೂಡ ರಾಜನಿಗಿಂತ ಆನೆಯೇ ತುಂಬಾ ಚೆನ್ನಾಗಿದೆ ಎಂದು ಹೇಳಲು ಆರಂಭಿಸಿದರು.
ಈ ಮಾತುಗಳನ್ನು ಕೇಳಿದ ರಾಜನಿಗೆ ತಲೆ ತಿರುಗಿತು ಬಹಳಷ್ಟು ಸಹಿಸಿಕೊಂಡನು ನಂತರ ಯೋಚನೆ ಮಾಡಿದ ಆನೆಯನ್ನು ನೋಡಿಕೊಳ್ಳವ ಮಾವುತನಿಗೆ ಕರೆದ ಈ ಆನೆ ನಿಜವಾಗಲೂ ವಿಶೇಷವೆ ಮಾವುತ ಕೂಡ ಹೇಳುತ್ತಾನೆ ನಾನು ಕೂಡ ಈ ರೀತಿಯ ಆನೆ ಇಲ್ಲಿವರೆಗೂ ನೋಡಿಲ್ಲ ಮತ್ತೆ ನಮ್ಮ ತಂದೆಯವರು ಕೂಡ ಈ ರೀತಿಯ ಆನೆ ನಾನು ಮೊದಲ ಬಾರಿಗೆ ನೋಡಿದ್ದು ಎಂದು ಹೇಳಿದರು ಎಂದನು.
ಈ ಮಾತು ಕೇಳಿದ ನಂತರ ರಾಜನಿಗೆ ಮತ್ತಷ್ಟು ತೀವ್ರವಾದ ಸಿಟ್ಟು ಬಂತು ಬೇರೆ ಆನೆ ಗಳಿಗಿಂತ ಈ ಆನೆ ಹೇಳಿದಂತೆ ಮಾಡುತ್ತದೆ ಅಲ್ಲವೇ ಎಂದು ರಾಜನು ಕೇಳಿದನು ಅದಕ್ಕೆ ಮಾವುತ ಹೌದು ಎಂದನು ಹಾಗಾದರೆ ನೀನು ಹೇಳಿದಂತೆ ಮಾಡುತ್ತದೆ ಹೌದು ಎಂದಾಗ ನಾಳೆ ಬೆಟ್ಟದ ಮೇಲೆ ಆನೆಯನ್ನು ಕರೆದುಕೊಂಡು ಹೋಗೋಣ ಎಂದಾಗ ಮಾವುತನಿಗೆ ರಾಜನ ಷಡ್ಯಂತ್ರ ತಿಳಿತು.
ರಾಜ ಹೇಳಿದಂತೆ ಮಾಡಬೇಕು ಆಗ ಮಾರನೆ ದಿನ ರಾಜ ಮಂತ್ರಿ ಹಾಗೂ ಮಾವುತ ಆನೆಯನ್ನು ಕರೆದುಕೊಂಡು ಹೋದರು ಬೆಟ್ಟದ ತುದಿಯಲ್ಲಿ ಆನೆಗೆ ಹೇಳಿದ 2ಕಾಲಿನಲ್ಲಿ ನಿಲ್ಲಿಸು ನಿಂತಿತು ಮುಂದೆ ನಮಸ್ಕಾರ ಮಾಡು ಅದು ಕೊಡ ಮಾಡಿತು ಒಂದು ಕಾಲಿನಲ್ಲಿ ನಿಲ್ಲು ಎಂದು ಆಜ್ಞೆ ಮಾಡಿದ ಅದು ಕೂಡ ಮಾಡಿತು.
ನಂತರ ರಾಜನು ಆನೆಯನ್ನು ತಳ್ಳಿಬಿಡಿ ಎಂದು ಹೇಳಿದ ಇದನ್ನು ಕೇಳಿದ ಆನೆ ತಕ್ಷಣ ಹಿಂದೆ ಬಂದು ರಾಜನನ್ನು ಎತ್ತಿ ಅದೇ ರೀತಿ ತೆಗೆದು ಬಿಸಾಕಿತು ಅಲ್ಲಿ ಆಗ ಇದ್ದಿದ್ದು ಮಾವುತ ಮತ್ತೆ ಮಂತ್ರಿ ಮಂತ್ರಿಯು ಒಳ್ಳೆಯ ಬುದ್ಧಿವಂತ ಅದಕ್ಕೆ ಆ ಮಂತ್ರಿಯನ್ನು ತನ್ನ ಬೆನ್ನ ಮೇಲೆ ಕೂರಿಸಿಕೊಂಡು ಬಂತು ಮುಂದೆ ಅವನೇ ರಾಜನಾಗಿ ಮುಂದುವರೆದನು.
ಬೇಡದೆ ಇರುವ ಕಲ್ಲನ್ನು ತೆಗೆದು ಹಾಕಿದೆ
ಒಂದು ಸಾರಿ ಕಲಾತ್ಮಕ ಶಿಲ್ಪಿಗಾರ ಒಂದು ಊರಿನಿಂದ ಇನ್ನೊಂದು ಊರಿಗೆ ಏನೋ ಕೆಲಸಕ್ಕಾಗಿ ಹೋಗುತ್ತಿರುತ್ತಾನೆ ಊರಿನಲ್ಲಿ ಕಲ್ಲು ಮಾರುವವನು ಇರುತ್ತಾನೆ ಅಲ್ಲಿ ಹೋಗಿ ಎಲ್ಲಾ ಕಲ್ಲುಗಳನ್ನು ನೋಡಿದಾಗ ಬಹಳಷ್ಟು ವಿಧವಾದ ಕಲ್ಲುಗಳು ಇರುತ್ತವೆ ಒಂದು ಕಲ್ಲನ್ನು ನೋಡಿ ಕಲ್ಲು ಮಾಲೀಕನಿಗೆ ಹೇಳುತ್ತಾನೆ.
ಈ ಕಲ್ಲಿನ ಬೆಲೆ ಎಷ್ಟು ಎಂದು ಕೇಳುತ್ತಾನೆ ಆಗ ಆ ಕಲ್ಲು ಮಾರುವವನು ಈ ಕಲ್ಲು ಬಹಳ ಕಾಲದಿಂದ ಇಲ್ಲಿದೆ ಇಲ್ಲಿಯವರೆಗೂ ಯಾರು ಕೇಳಿಲ್ಲ ಆದುದರಿಂದ ಈ ಬಂಡೆ ಖಾಲಿಯಾದರೆ ಸಾಕು ನನಗೆ ಸಾಕಷ್ಟು ಜಾಗ ಸಿಗುತ್ತದೆ ಆದುದರಿಂದ ಈ ಕಲ್ಲನ್ನು ನೀವು ಉಚಿತವಾಗಿ ತೆಗೆದುಕೊಂಡು ಹೋಗಿ ಇದರಿಂದ ನನಗೆ ಸಹಾಯವಾಗುತ್ತದೆ ಎಂದು ಹೇಳುತ್ತಾನೆ.
ಶಿಲ್ಪಿಗಾರ ಆ ಕಲ್ಲನ್ನು ತೆಗೆದುಕೊಂಡು ಹೋಗಿ ಕಲ್ಲಿಗೆ ಸುಂದರವಾಗಿ ಕೆತ್ತಿ ಒಂದು ಮೂರ್ತಿ ಮೂರ್ತಿಯ ಆಕಾರ ನೀಡುತ್ತಾನೆ ಸುಂದರ ಮೂರ್ತಿಯಾಗುತ್ತದೆ ಆ ಮೂರ್ತಿ ಹೇಗಿರುತ್ತದೆಂದರೆ ಮೂರ್ತಿಯನ್ನು ನೋಡುತ್ತಲೇ ಇರಬೇಕು ಅನಿಸುತ್ತದೆ ಹೊಳಪು ಶಕ್ತಿ ಚೈತನ್ಯ ಇರುವಂತೆ ಕೆತ್ತುತ್ತಾನೆ ಕೊನೆಗೆ ಈ ಮೂರ್ತಿ ಒಳ್ಳೆಯ ಹೆಸರಾಗಿ ಸುದ್ದಿಯಾಗುತ್ತದೆ.
ನಂತರದ ದಿನಗಳಲ್ಲಿ ಪ್ರಸಿದ್ಧ ಕಲ್ಲಿನ ಮೂರ್ತಿ ಎಂದು ಕಲ್ಲು ಮಾರುವವನ ಕಿವಿಗೆ ಬೀಳುತ್ತದೆ ಈ ಕಲ್ಲು ಯಾವುದೂ ಇರಬಹುದು ಎಂತಹ ಕಲ್ಲು ಯಾವನು ಮಾಡಿರಬಹುದು ಎಂದು ಕಲ್ಲು ಮಾರುವವನು ಕಲ್ಲಿನ ಮೂರ್ತಿಗೆ ಹೋಗಿ ನೋಡುತ್ತಾನೆ.
ಮಾಲೀಕನಿಗೆ ತಿಳಿಯುತ್ತಿಲ್ಲ ಯಾವ ಕಲ್ಲು ಎಂದು ಗೊತ್ತಾಗುವುದಿಲ್ಲ ನಂತರ ಕೇಳುತ್ತಾನೆ ಈ ಸುಂದರ ಮೂರ್ತಿಯನ್ನು ಕೆತ್ತಿದವರು ಯಾರು ಎಂದು ಕೇಳುತ್ತಾ ನಂತರ ಶಿಲ್ಪಿಗಾರನ್ನು ಹುಡುಕಿಕೊಂಡು ಹೋಗುತ್ತಾನೆ ಆಗ ಆಗ ಆ ಶಿಲ್ಪಿಗಾರ ಹೇಳುತ್ತಾನೆ ನೀವು ಕೊಟ್ಟ ಕಲ್ಲು ಅದೇ ಮೂರ್ತಿಯಾಗಿದೆ ನೋಡಿ ಎಂದು ಹೇಳುತ್ತಾನೆ. ಕಲ್ಲು ಮಾರುವವನು ಮೂಕನಾಗುತ್ತಾನೆ.
ಶಿಲ್ಪಿಗಾರ ನಾನು ಮಾಡಿದ್ದು ಇಷ್ಟೇ ಬೇಡದೆ ಇರುವ ಕಲ್ಲನ್ನು ತೆಗೆದು ಹಾಕಿದೆ ಅಷ್ಟೇ ಎಂದನು ಅದೇ ರೀತಿ ನನ್ನಲ್ಲಿರುವ ಕೆಟ್ಟ ಗುಣಗಳನ್ನು ಒಂದೊಂದಾಗಿ ಹುಡುಕಿ ತೆಗೆಯೋಣ.
ನಾಟಕ ನಿಲ್ಲಿಸಲು ಸಾಧ್ಯವಿಲ್ಲ
ಒಂದು ನಾಟಕದ ಕಂಪನಿ ಯವರು ಒಂದು ಸಂಘವನ್ನು ಕಟ್ಟಿಕೊಂಡು ಎಲ್ಲಿ ಬೇಕಾದರೂ ಹೋಗಿ ನಾಟಕ ಮಾಡಿ ಬರುತ್ತಿದ್ದರು ಒಂದು ಚಿಕ್ಕ ಹಳ್ಳಿಯಲ್ಲಿ ದೊಡ್ಡ ನಾಟಕ ಮಾಡಬೇಕಾಗಿರುತ್ತದೆ ನಾಟಕಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿರುತ್ತಾರೆ.
ಮೋಡಗಳು ಮುಚ್ಚಿಕೊಂಡಿರುತ್ತದೆ ಮಳೆಬರುವ ಸಂಭವವಿರುತ್ತದೆ ಏನೋ ಕಾರಣಾಂತರದಿಂದಾಗಿ ಅಂದು ನಾಟಕಕ್ಕೆ ಜನರು ತುಂಬಾ ಕಡಿಮೆ ಬರುತ್ತಾರೆ ಎಷ್ಟು ಹೆಚ್ಚು ಜನ ಬರುತ್ತಾರೆ ಅಷ್ಟೇ ನಾಟಕದವರಿಗೆ ಕಾಣಿಕೆ ಉಡುಗೊರೆಗಳು ಸಿಗುತ್ತವೆ ನಾಟಕದವರು ಇಟ್ಟುಕೊಂಡಿದ್ದ ಆಸೆ ಎಲ್ಲವೂ ನುಚ್ಚುನೂರಾಯಿತು.
ಹೆಚ್ಚಾಗಿ ಜನರು ಬರಬಹುದು ಎಂಬ ನಂಬಿಕೆಯಿತ್ತು ಆದರೆ ಸ್ವಲ್ಪ ಜನ ಮಾತ್ರ ಬಂದಿದ್ದಾರೆ ಹಾಗೆಂದು ನಾಟಕ ನಿಲ್ಲಿಸಲು ಸಾಧ್ಯವಿಲ್ಲ ಎಂದಿನಂತೆ ಕಾರ್ಯಕ್ರಮವು ಚೆನ್ನಾಗಿಯೇ ನಡೆಸಿಕೊಟ್ಟರು ನೋಡಲು ಕಡಿಮೆ ಜನರೇ ಇದ್ದರೂ ಎಲ್ಲರಿಗೂ ಮೆಚ್ಚುಗೆ ಆಯಿತು.
ನಾಟಕ ಮಾಡಿದ ತೃಪ್ತಿ ನಮಗೆ ಸಿಗುತ್ತದೆ ಅಷ್ಟೇ ಸಾಕು ಇದರಲ್ಲೇ ನಾವು ಸಂತೋಷ ಪಡೋಣ ಎಂದು ಕೊಂಡರು ಕೊನೆಗೆ ಗಂಟುಮೂಟೆ ಕಟ್ಟಬೇಕಾದರೆ ಒಬ್ಬರು ಬಂದು ಸಾಕಷ್ಟು ಹಣವನ್ನು ಕೊಟ್ಟರು ಇವರು ನಂಬಲಿಕ್ಕೆ ಸಾಧ್ಯವಾಗಲಿಲ್ಲ ಬಂದವರು ನಿರೀಕ್ಷೆಗಿಂತ ಜಾಸ್ತಿ ಹಣ ನೀಡಿದರು ನಂತರ ಹೇಳಿದರು
ನಮ್ಮ ದೊಡ್ಡ ಊರಿನ ಮಾಲೀಕರೇ ಇವತ್ತು ನಾಟಕವನ್ನು ನೋಡಿದ್ದಾರೆ ನೀವು ನಾಳೆ ನಮ್ಮ ದೊಡ್ಡ ಊರಿನಲ್ಲಿ ನಾಟಕ ನಡೆಸಬೇಕೆಂದು ಆಹ್ವಾನವನ್ನು ನೀಡುತ್ತಾರೆ ಆಗ ಇವರಿಗೆ ತುಂಬ ಸಂತೋಷವಾಗುತ್ತದೆ.
ನಾವು ಮಾಡಬೇಕಾದ ಕೆಲಸ ಚಿಕ್ಕದಿರಲಿ ದೊಡ್ಡದಿರಲಿ ಶ್ರದ್ಧೆಯಿಂದ ಮಾಡಬೇಕು ಯಾರು ಗಮನಿಸುತ್ತಿದ್ದಾರೋ ಗಮನಿಸುತ್ತಿಲ್ಲವೋ ನಮ್ಮ ಕೆಲಸ ಮಾತ್ರ ಪರೀಕ್ಷೆಯಾಗಿರುತ್ತದೆ ನಮ್ಮ ಕಾರ್ಯ ಕೆಲಸ ಸರಿಯಾಗಿದ್ದರೆ ಅದಕ್ಕೆ ಸಿಗಬೇಕಾದ ಪ್ರತಿಫಲ ಸಿಕ್ಕೇ ಸಿಗುತ್ತದೆ.
ನಾನು ಪ್ರತಿ ಕೆಲಸವು ಶ್ರದ್ಧೆ ಭಕ್ತಿಯಿಂದ ಮಾಡುತ್ತಿದ್ದೇನೆಯೇ?
ಚಿಲ್ಲರೆ ಮಾತಿಗೆ ಕಿವಿ ಕೊಡಬಾರದು
ಒಂದು ಸಾರಿ ಹಿರಿಯರು ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿರುತ್ತಾರೆ ಟಿಕೆಟ್ ಗಾಗಿ ಹಣವನ್ನು ಕೊಡುತ್ತಾರೆ ನಂತರ ಕಂಡಕ್ಟರ್ ಹಣ ಪಡೆದು ಜೊತೆಗೆ ಚಿಲ್ಲರೆಯನ್ನು ಕೊಡುತ್ತಾನೆ ಹಿರಿಯರು ಒಂದು ಸಾರಿ ಎಣಿಸಿ ಮತ್ತೆ ಕಂಡಕ್ಟರ್ ಗೆ ಸರಿ ಇಲ್ಲ ಎಂದು ಹೇಳುತ್ತಾರೆ.
ಕಂಡಕ್ಟರ್ ಆದವನು ಮತ್ತೆ ಎಣಿಸಿ ನೋಡುತ್ತಾನೆ ಹಣ ಮತ್ತೆ ಟಿಕೆಟ್ ಎರಡೂ ಸರಿಯಾಗಿ ಇರುತ್ತದೆ ಆಗ ಆ ಮೇಧಾವಿಗೆ ಕಂಡಕ್ಟರ್ ಹೇಳುತ್ತಾನೆ ನಿಮಗೆ ನೊಬೆಲ್ ಪ್ರಶಸ್ತಿ ಬಂದಿರುವುದು ಹಾಗೂ ನೀವು ವಿಜ್ಞಾನಿ ಎಂದು ಹೆಸರು ಪಡೆದಿದ್ದೀರಿ ಏನಕ್ಕೂ ಪ್ರಯೋಜನವಿಲ್ಲ ನಿಮಗೆ ಚಿಕ್ಕ ಲೆಕ್ಕವು ಕೂಡ ಸರಿಯಾಗಿ ಬರುತ್ತಿಲ್ಲ ಎಂದು ತಿರಸ್ಕಾರದಿಂದ ಹೇಳುತ್ತಾನೆ.
ನಿಮಗೆ ಪ್ರಶಸ್ತಿ ಕೊಟ್ಟವನಿಗೆ ಬುದ್ಧಿ ಇಲ್ಲ ಎನ್ನುತ್ತಾನೆ ಆಗ ಈ ಮೇಧಾವಿಗೆ ತುಂಬಾ ಬೇಸರವಾಗುತ್ತದೆ ಆಗಿದ್ದು ಆಗಿ ಹೋಯಿತು ಎಂದು ಸಂಜೆ ಕೆಲಸವನ್ನು ಮುಗಿಸಿ ಮನೆಗೆ ಬರುತ್ತಾರೆ ಮನೆಗೆ ಬಂದು ನಡೆದ ಘಟನೆ ಎಲ್ಲವನ್ನು ತನ್ನ ಹೆಂಡತಿಗೆ ಹೇಳುತ್ತಾರೆ ಆಗ ಹೆಂಡತಿ ಕೇಳುತ್ತಾಳೆ.
ನೀವು ಏಕೆ ಚಿಕ್ಕದ್ದಕ್ಕೆಲ್ಲಾ ತಲೆ ಕೆಡಿಸಿಕೊಳ್ಳುತ್ತೀರಿ ನೀವು ಚಿಲ್ಲರೆಯನ್ನು ಸರಿಯಾಗಿ ಎಣಿಸುವ ವ್ಯಕ್ತಿಯಾಗಿದ್ದರೆ ಇಷ್ಟು ದೊಡ್ಡ ಪ್ರಸಿದ್ಧಿ ಹಾಗೂ ನೋಬಲ್ ನಿಮಗೆ ಬರುತ್ತಿರಲಿಲ್ಲ ಅದಕ್ಕೆ ನಾವು ಚಿಲ್ಲರೆ ಮಾತಿಗೆ ಕಿವಿ ಕೊಡಬಾರದು.
ಬರಿ ನಾವು ಉನ್ನತ ಮಟ್ಟಕ್ಕೆ ಮಾತ್ರ ಚಿಂತನೆ ಮಾಡಬೇಕು ಎಂದು ಹೆಂಡತಿ ಹೇಳಿದರು ಈ ಮಾತು ಈ ಮೇಧಾವಿಗಳಿಗೆ ಸರಿಯೆಂದು ಹಿಡಿಸಿತು ಅಂದಿನಿಂದ ಅವರು ಚಿಕ್ಕದ್ದನ್ನು ಯೋಚನೆ ಮಾಡುವುದನ್ನೇ ಬಿಟ್ಟು ಬಿಟ್ಟರು.
ಹಾಗೆಯೇ ನಾವು ಕೂಡ ಅದೇ ರೀತಿ ಚಿಕ್ಕದ್ದನ್ನು ಯೋಚನೆ ಮಾಡುವುದನ್ನು ಬಿಡಬೇಕು ಚಿಲ್ಲರೆ ಹಿಂದೆ ಹೋದರೆ ನಮಗೆ ಚಿಲ್ಲರೆಯೇ ಸಿಗುತ್ತದೆ.
ಈ ಮೇಧಾವಿ ಯಾರು ಎಂದರೆ ಆಲ್ಬರ್ಟ್ ಐನ್ ಸ್ಟೀನ್ ರವರು ಕೆಲವರನ್ನು ನೋಡಿದಾಗ ತುಂಬ ದೊಡ್ಡ ದೊಡ್ಡ ಹುದ್ದೆಯಲ್ಲಿ ಇರುತ್ತಾರೆ ಆದರೂ ಎಲ್ಲೂ ಚಿಲ್ಲರೆ ಕೆಲಸಗಳಿಂದ ತಮ್ಮ ಮಾನ ಮರ್ಯಾದೆಯನ್ನು ಕಳೆದುಕೊಳ್ಳುತ್ತಾರೆ ಸಾಧ್ಯವಾದಷ್ಟು ಉನ್ನತ ಮಟ್ಟದಲ್ಲಿ ಆಲೋಚಿಸೋಣ.