ಒಂದು ಊರಿಗೆ ಒಬ್ಬ ಚಮತ್ಕಾರಿ ಮನುಷ್ಯ ಬರುತ್ತಾನೆ ಇವನಿಗೆ ಎಲ್ಲರೂ ತುಂಬಾ ಗೌರವಿಸುತ್ತಿರುತ್ತಾರೆ ಇವನ ವೇಷ ಭೂಷಣಗಳು ಕೂಡ ಒಬ್ಬ ಸಾಧುವಿನಂತೆಯೇ ಇರುತ್ತದೆ ಹಾಗೆ ಇವನು ಸಾಧನೆ ಮಾಡಿದ್ದಾನೆ ಎಂದು ಮುಖದಲ್ಲಿ ತೋರುತ್ತಿರುತ್ತದೆ.
ಚಮತ್ಕಾರಿಯ ಪರಿಣಿತಿ ಏನೆಂದರೆ ಕಾಗೆಯಂತೆ ಕಾಕಾ ನವಿಲಿನಂತೆ ಕುಹು ಕುಹು ಶಬ್ದ ಮಾಡುವುದು ಪಕ್ಷಿಗಳಂತೆ ಹಾಡುತಿದ್ದನು ಬಹಳಷ್ಟು ಪ್ರಾಣಿಗಳಂತೆ ಕೂಗುತ್ತಿದ್ದನು ಇದರಿಂದಾಗಿ ಎಲ್ಲಾ ಜನರು ಇವನನ್ನು ಗೌರವಿಸುತ್ತಿದ್ದರು.
ಚಮತ್ಕಾರಿಗೆ ಆಗಾಗ ಕರೆದು ಇವನ ಇಂಪಾದ ಧ್ವನಿಯನ್ನು ಕೇಳಿ ಆನಂದಿಸುತ್ತಿದ್ದರು ಈ ವಿಷಯವು ಊರಿಂದ ಊರಿಗೆ ಹರಡುತ್ತಿತ್ತು ಕೊನೆಗೆ ರಾಜನ ಕಿವಿಗೂ ಇವನ ಪರಿಣಿತಿಯ ಬಗ್ಗೆ ತಿಳಿಯಿತು ರಾಜನು ಒಂದು ಸಮಾರಂಭವನ್ನು ಏರ್ಪಡಿಸಿ ರಾಜನು ಚಮತ್ಕಾರಿಗೆ ಆಹ್ವಾನಿಸಿದನು.
ಚಮತ್ಕಾರಿ ತುಂಬಾ ಸಂತೋಷ ನನ್ನ ಪರಿಣಿತಿಗೆ ರಾಜರೆ ನನ್ನನು ಆಹ್ವಾನಿಸುತ್ತಿದ್ದಾರೆ ಎಂದು ಆ ದಿನ ಸಮಾರಂಭದಲ್ಲಿ ತನ್ನ ಕಸರತ್ತುಗಳನ್ನು ವಿಶೇಷ ರೀತಿಯಲ್ಲಿ ಪ್ರದರ್ಶಿಸಿದನು ಎಲ್ಲರೂ ತುಂಬಾ ಚೆನ್ನಾಗಿ ಆನಂದಿಸಿದರು ಈ ಚಮತ್ಕಾರಿ ತುಂಬಾ ಉಬ್ಬಿಹೋದನು. ಆಗ ರಾಜರು ಇವನನ್ನು ಒಂಟಿಯಾಗಿ ಕರೆದು ಕೇಳಿದರು.
ರಾಜರು ಸಮಾಧಾನವಾಗಿ ನೀನು ಇಷ್ಟು ಚೆನ್ನಾಗಿ ಹಾಡುತ್ತೀಯ ಕೂಗುತ್ತೀಯ ಇದಕ್ಕೆ ಎಷ್ಟು ವರ್ಷದ ಸಾಧನೆ ಮಾಡಿದ್ದೀಯ ಎಂದು ರಾಜರು ಕೇಳುತ್ತಾರೆ ಆಗ ನಾನು ಹತ್ತು ವರ್ಷಗಳ ಕಾಲ ಸಾಧನೆಯನ್ನು ಮಾಡಿದ್ದೇನೆ ಆದುದರಿಂದ ನಾನು ಇಷ್ಟೆಲ್ಲ ಮಾಡಲಿಕ್ಕೆ ಸಾಧ್ಯವಾಯಿತು ಎಂದಾಗ ರಾಜನು ನಿನ್ನದೇ ವಿಶೇಷ ಸಾಧನೆ ಇದೆಯೇ ಎಂದು ಕೇಳಿದಾಗ ಯುವಕ ಇಲ್ಲ ಎನ್ನುತ್ತಾನೆ.
ನೀನು ಮಾಡಿದ ಸಾಧನೆ ವ್ಯರ್ಥ ಏಕೆಂದರೆ ಕೋಗಿಲೆಯನ್ನು ಕರೆದರೆ ನಿನ್ನ ಉಪಯೋಗವಿಲ್ಲ ಹಾಗೆ ನವಿಲನ್ನು ಕರೆದರೂ ಕೂಡ ನಿನ್ನ ಉಪಯೋಗವಿಲ್ಲ ಯಾವತ್ತೂ ನಾವು ಇನ್ನೊಬ್ಬರು ಮಾಡಿದಂತೆ ಸಾಧನೆ ಮಾಡುವುದು ವ್ಯರ್ಥ ನಾವು ಹುಟ್ಟಿರುವುದು ಒಬ್ಬರಾಗಿ ನಮ್ಮಂತೆ ಬೇರೆ ಯಾರು ಈ ಜಗತ್ತಿನಲ್ಲಿ ಇಲ್ಲ ನನ್ನದೇ ವಿಶೇಷ ಸಾಧನೆ ಇರಬೇಕು.
ಆಗ ನಾನು ಹುಟ್ಟಿದ್ದಕ್ಕೂ ಸಾರ್ಥಕವಾಗುತ್ತದೆ ಎಂದು ಹೇಳಿದಾಗ ಆ ಚಮತ್ಕಾರಿ ಜ್ಞಾನೋದಯವಾಯಿತು ಆಗ ಚಮತ್ಕಾರಿ ನನ್ನದೇ ಆದ ಏನಾದರೂ ಒಂದು ಸಾಧನೆ ಮಾಡುತ್ತೇನೆಂದು ರಾಜನಿಗೆ ಧನ್ಯವಾದ ಹೇಳಿ ಹೊರಟು ಹೋಗುತ್ತಾನೆ.
ನನಗೆ ನಮ್ಮದೇ ಆದ ವಿಶೇಷವಾದ ಶಕ್ತಿ ಇದೆ ನನ್ನನ್ನು ನಾನು ಅರಿತು ನಮ್ಮ ಶಕ್ತಿಯನ್ನು ಬಳಸಿ ವಿಶೇಷರಾಗೋಣ. ನನ್ನ ವಿಶೇಷ ಶಕ್ತಿ ಬಳಸಿಕೊಂಡು ಬದುಕುತ್ತಿದ್ದೇನೆಯೇ?
ತಿಂದು ನೋಡಿದಾಗ ಸ್ವಾದ ತಿಳಿಯಿತು
ಒಂದು ಉಪ್ಪಿನ ಬೆಟ್ಟ ಬೆಟ್ಟದಲ್ಲಿಎಲ್ಲಾ ಇರುವೆಗಳು ಉಪ್ಪು ತಿಂದು ಜೀವಿಸುತ್ತಿದ್ದವು ಅವರ ಜೀವನ ಹಾಗೆ ನಡೆಯುತ್ತಿತ್ತು ಕೆಲವು ಪ್ರವಾಸಿ ಬಂದ ಇರುವೆಗಳು ಮಾತ್ರ ಹೇಳುತ್ತಿದ್ದವು ಅಲ್ಲಿ ಬೆಲ್ಲದ ಬೆಟ್ಟ ಇದೆ ಅಲ್ಲಿ ಸಿಹಿ ಇರುತ್ತೆ ಎಂದು ಹೇಳುತ್ತಿದ್ದವು.
ಉಪ್ಪಿನ ಚಿಕ್ಕ ಇರುವೆಗಳು ತಂದೆತಾಯಿಗೆ ಕೇಳುತ್ತಿದ್ದವು ಅಲ್ಲಿ ಬೆಲ್ಲದ ಬೆಟ್ಟ ಇದೆಯಂತೆ ಅಲ್ಲಿ ಸಿಹಿ ಇರುತ್ತಂತೆ ನಾವು ಹೋಗೋಣವೇ ಎಂದು ಹೇಳಿದಾಗ ಹಿರಿಯ ಇರುವೆಗಳು ಹೇಳುತ್ತಿದ್ದವು ನಾವು ಕೇಳಿದ್ದೀವಿ ಆದರೆ ನಮಗೆ ಗೊತ್ತಿಲ್ಲ ತುಂಬಾ ಕಷ್ಟವಂತೆ ಎಂದು ಹೆದರಿಸಿದವು.
ಮತ್ತೆ ಎಲ್ಲಾ ಉಪ್ಪಿನ ಇರುವೆಗಳು ನಕಾರಾತ್ಮಕವಾದ ಮಾತುಗಳನ್ನು ಹೇಳುತ್ತಿದ್ದವು ಇದನ್ನು ಕೇಳುತ್ತಿದ್ದ ಚಿಕ್ಕ ಇರುವೆಗಳಿಗೆ ಅನಿಸಿದ್ದು ಯಾಕೆ ನಾವು ದಾಟಿ ಹೋಗಬಾರದು? ನಾವು ಹೋಗಲೇಬೇಕು ಎಂದು ಕೆಲವು ಧೈರ್ಯವಂತ ಇರುವೆಗಳು ನಿರ್ಧರಿಸಿದವು.
ಹಿರಿಯ ಇರುವೆಗಳಿಗೆ ಅಪ್ಪಣೆ ಕೇಳಿದಾಗ ತುಂಬ ಕಡಿಮೆ ಇರುವೆಗಳು ಮಾತ್ರ ಒಪ್ಪಿಗೆ ಕೊಟ್ಟವು ನಂತರ ಒಪ್ಪಿಗೆ ಪಡೆದುಕೊಂಡು ಇರುವೆಗಳು ಹೊಸ ಪ್ರಯಾಣವನ್ನು ಮುಂದುವರೆಸಿದವು.
ಹಿರಿಯ ಇರುವೆಗಳು ತಿನ್ನಲಿಕ್ಕೆ ಉಪ್ಪಿನಲ್ಲಿ ಮಾಡಿದಂತಹ ಎಲ್ಲಾ ರೀತಿಯ ಅಡುಗೆಗಳನ್ನು (ಬುತ್ತಿಯನ್ನು) ಕೊಟ್ಟು ಕಳುಹಿಸಿದವು ಮತ್ತೆ ಇರುವ ಗಳಿಗೆ ಹೇಳಿದವು ನೀವು ನಮ್ಮ ನೆನಪಿಗೆ ನೀವು ಏನೇ ತಿಂದರೂ ಈ ಬುತ್ತಿಯನ್ನು ನೀವು ಕೊನೆಗೆ ತಿನ್ನಲೇ ಬೇಕು ಎಂದು ಪ್ರಮಾಣ ಮಾಡಿ ಕಳಿಸಿದವು.
ಉಪ್ಪಿನ ಇರುವೆಗಳು ಬಹಳಷ್ಟು ಕಷ್ಟಪಟ್ಟು ಧೈರ್ಯವಂತ ಇರುವೆಗಳು ಬೆಲ್ಲದ ಬೆಟ್ಟಕ್ಕೆ ಬಂದವು ಅಲ್ಲಿ ಬೆಲ್ಲದ ಬೆಟ್ಟ ನೋಡಿ ಸೌಂದರ್ಯಕ್ಕೆ ನಿಬ್ಬೆರೆಗಾದವು ಬೆಲ್ಲತಿಂದು ನೋಡಿದಾಗ ಅಲ್ಪಸ್ವಲ್ಪ ಚೆನ್ನಾಗಿ ಕಾಣುತ್ತಿತ್ತು ನಂತರ ಹೇಳುತ್ತಿದ್ದವು ನೀವೇನೋ ಎಲ್ಲಾ ಸಿಹಿ ಇದೆ ಎಂದು ಹೇಳುತ್ತಿದ್ದೀರಾ ನಮಗೆ ಮಾತ್ರ ಇದು ಉಪ್ಪುಪ್ಪು ಇದೆ ಎಂದಾಗ ಬೆಲ್ಲದ ಇರುವೆಗಳು ಹೇಳಿದವು.
ನೀವು ಇಲ್ಲಿ ಬೆಲ್ಲವನ್ನು ತಿಂದು ಕೊನೆಗೆ ನೀವು ಹಿರಿಯರು ಕೊಟ್ಟ ಉಪ್ಪಿನ ಪದಾರ್ಥಗಳನ್ನು ತಿನ್ನುತ್ತಿದ್ದೀರಾ ಉಪ್ಪಿನ ತಿಂಡಿಗಳನ್ನು ನಿಲ್ಲಿಸಿ ಬರೀ ಸಿಹಿಯನ್ನು ತಿಂದು ನೋಡಿ ಆಮೇಲೆ ಹೇಳಿ ಎಂದಾಗ ಇರುವೆಗಳು ಬೆಲ್ಲವನ್ನು ಮಾತ್ರ ತಿಂದು ನೋಡಿದಾಗ ಬೆಲ್ಲದ ಸ್ವಾದ ತಿಳಿಯಿತು.
ಧೈರ್ಯವಂತ ಇರುವೆಗಳು ಕೂಡ ಸಂತೋಷವಾಗಿ ಎಲ್ಲರೊಂದಿಗೆ ಬೆರೆತುಕೊಂಡವು ಹಾಗೆಯೇ ನಮ್ಮ ಬದುಕಿನಲ್ಲಿಯೂ ಕೂಡ ಕೆಲವು ವಿಷಯಗಳು, ವಿಚಾರಗಳು, ಮೂಢನಂಬಿಕೆಗಳು ಹಿರಿಯರು ಹೇಳಿದರು ಎಂದು ಅದಕ್ಕೆ ಜೋತು ಬಿದ್ದಿರುತ್ತೇವೆ ಅವರು ಹೇಳಿದ್ದು ತಪ್ಪಲ್ಲ ಆ ಕಾಲಕ್ಕೆ ಸರಿ ಇರಬಹುದು ಇಂದಿಗೆ ಅದು ಸರಿಯಾಗಿದೆಯೇ ಎಂದು ವಿವೇಕದಿಂದ ಯೋಚಿಸಿ ಮುನ್ನಡೆಯೋಣ.
ನಾನು ಕೂಡ ದೊಡ್ಡವನಲ್ಲ
ಶಿಸ್ತುನ ರಾಜನು ತನ್ನ ರಾಜ್ಯವನ್ನು ವಿಸ್ತರಣೆ ಮಾಡುವುದಕ್ಕಾಗಿ ಬೇರೆ ರಾಜ್ಯದ ಮೇಲೆ ದಂಡೆತ್ತಿ ಹೋಗಬೇಕು ಎಂದು ತೀರ್ಮಾನ ಮಾಡಿ ಊರಿನಿಂದ ಆಚೆ ಹೋಗಿ ಆ ರಾಜ್ಯದ ಚಲನ ವಲನಗಳನ್ನು ಗಮನಿಸಿ ಬರುವುದಕ್ಕೆ ರಾಜನೂ ಕೂಡ ತನ್ನ ಮಂತ್ರಿ ಮತ್ತು ತನ್ನ ಸೈನಿಕರೊಂದಿಗೆ ಯುದ್ಧಕ್ಕೆ ಏರ್ಪಾಟು ಮಾಡುತ್ತಿರುತ್ತಾರೆ.
ಊಟದ ಸಮಯವಾಗುತ್ತದೆ ಆಗ ಅಡಿಗೆ ಸ್ವಲ್ಪತಡ ಆಗಬಹುದು ಏಕೆಂದರೆ ಉಪ್ಪು ಇಲ್ಲ ಎಂದು ಸೇನಾಧಿಪತಿ ರಾಜನಿಗೆ ಹೇಳಿದನು ಆಗ ರಾಜನು ಒಂದು ಸೈನಿಕನನ್ನು ಕರೆದು ಹಣ ಕೊಟ್ಟು ಪಕ್ಕದ ಊರಿನಲ್ಲಿ ಹಣ ಕೊಟ್ಟು ಉಪ್ಪನ್ನು ಖರೀದಿ ಮಾಡಿ ಬನ್ನಿ ಎಂದು ಆಜ್ಞೆ ಮಾಡಿದನು.
ಹತ್ತಿರದಲ್ಲಿ ಇದ್ದ ಸೇನಾಧಿಪತಿ ಉಪ್ಪು ತಾನೆ ರಾಜರು ಹೇಳಿದ್ದಾರೆ ಎಂದರೆ ಸಾಕು ಕೊಡುತ್ತಾರೆ ಅದಕ್ಕೆ ಹಣ ಏಕೆ ಕೊಡಬೇಕು ಎಂದು ಹೇಳಿದನು ಅದಕ್ಕೆ ರಾಜ ಹೇಳಿದನು ನನ್ನ ಅಧಿಕಾರವನ್ನು ನಾನೇ ಉಪಯೋಗಿಸಬೇಕು ದುರುಪಯೋಗ ಮಾಡಿಕೊಳ್ಳಬಾರದು ನಾನು ಬರೀ ಉಪ್ಪು ತೆಗೆದುಕೊಂಡು ಬನ್ನಿ ಎಂದು ಕಳಿಸಿದರೆ ನಂತರ ನನ್ನ ಸೈನಿಕರು ತಮಗೆ ಏನು ಬೇಕೋ ಅದೆಲ್ಲವನ್ನೂ ಹಣ ಕೊಡದೆ ತರುತ್ತಾರೆ.
ಆದುದರಿಂದ ಯಾರೇ ಆಗಲಿ ನಾನು ಕೂಡ ದೊಡ್ಡವನಲ್ಲ ಅವರು ಕೂಡ ಹಣ ಕೊಟ್ಟೆ ತಂದಿರುತ್ತಾರೆ ಅವರಿಗೂ ಮೋಸವಾಗುವುದು ಬೇಡ ನಾನೇ ಈ ರೀತಿ ತಪ್ಪು ಮಾಡಿದರೆ ಹೇಗೆ ಮೊದಲೇ ನಾನೇ ನಿಯಮಗಳನ್ನು ಪಾಲನೆ ಮಾಡಬೇಕು ಎಂದನು.
ಅಲೆಗಳು ಮಾತ್ರ ನಿಲ್ಲುತ್ತಲೇ ಇಲ್ಲ
ಬಾಬಾ ಅವರ ಹತ್ತಿರ ಕೆಲವು ಶಿಷ್ಯರು ಪಾಠವನ್ನು ಕಲಿಯುತ್ತಿರುತ್ತಾರೆ ಆಗ ಮೊದಲು ಬಾಬಾ ಅವರು ಒಂದು ಶಿಷ್ಯನನ್ನು ಕಳಿಸುತ್ತಾರೆ ನೀನು ಸಮುದ್ರದಲ್ಲಿ ಹೋಗಿ ಸ್ನಾನವನ್ನು ಮುಗಿಸಿಕೊಂಡು ಬಂದ ನಂತರ ಕೆಲವು ಕೆಲಸಗಳು ಮುಗಿಸೋಣ ಎಂದಾಗ ಶಿಷ್ಯ ಹೋದನು ಮಧ್ಯಾಹ್ನ ಆದರೂ ಬರಲೇ ಇಲ್ಲ.
ಕೊನೆಗೆ ಬಾಬಾ ಅವರು ಏಕೆ ಶಿಷ್ಯ ಬರಲಿಲ್ಲ ಎಂದು ಹುಡುಕಿಕೊಂಡು ಬರುತ್ತಾರೆ ಆದರೆ ಶಿಷ್ಯನು ಕಾಯುತ್ತಾ ಕುಳಿತಿರುತ್ತಾನೆ ಬಾಬಾ ಅವರು ಏಕೆ ಸ್ನಾನ ಮಾಡಿಲ್ಲ ಎಂದು ಕೇಳಿದಾಗ ಶಿಷ್ಯ ಹೇಳುತ್ತಾನೆ ಬಾಬಾ ಅವರೇ ನಾನು ಸ್ನಾನ ಮಾಡಲು ತಯಾರಾಗಿದ್ದೇನೆ ಆದರೆ ಅಲೆಗಳು ಮಾತ್ರ ನಿಲ್ಲುತ್ತಲೇ ಇಲ್ಲ ಅಲೆಗಳು ಬರುತ್ತಲೇ ಇದೆ ಹೇಗೆ ನಾನು ಸ್ನಾನ ಮಾಡುವುದು ಎಂದು ಕೇಳುತ್ತಾನೆ.
ಆಗ ಬಾಬಾ ಅವರು ಮುಗುಳ್ನಗುತ್ತಾ ಹೇಳಿದರು ಸಮುದ್ರದ ಅಲೆಗಳು ಎಂದಿಗೂ ನಿಲ್ಲುವುದಿಲ್ಲ ಚಿಕ್ಕ ಅಲೆಗಳು ಬಂದಾಗ ಸ್ನಾನ ಮುಗಿಸಿ ಬರಬೇಕು ಹಾಗೆಯೇ ಜೀವನದಲ್ಲಿ ಅಡ್ಡಿ ಆತಂಕಗಳು ಆಗಾಗ ಬರುತ್ತಲೇ ಇರುತ್ತವೆ ಸಮಯ ನೋಡಿ ಸಾಧನೆ ಮಾಡಬೇಕು ಇವರೇ ಉತ್ತಮ ಸಾಧಕರಾಗುತ್ತಾರೆ ಎಂದು ಹೇಳಿದರು.
ಯಾರಿಗೆ ಆಸರೆ ನೀಡುತ್ತಿದ್ದೇವೆ?
ನಿಷ್ಠಾವಂತ ರಾಜನು ಮರದ ಮಂಚದ ಮೇಲೆ ಮೃದುವಾದ ಹಾಸಿಗೆಯಲ್ಲಿ ದಿನನಿತ್ಯ ಮೂಲಗುತಿದ್ದನು ರಾಜನು ಗಾಢವಾಗಿ ನಿದ್ರಿಸುತ್ತಿದ್ದಾಗ ಮಂಚದಿಂದ ನಿಧಾನವಾಗಿ ಸದ್ದಿಲ್ಲದೆ ತಿಗಣೆಯು ಬಂದು ರಾಜನ ರಕ್ತ ಹೀರಿ ಮತ್ತೆ ಮಂಚದಲ್ಲಿ ಸೇರಿಕೊಳ್ಳುತ್ತಿತ್ತು ರಾಜನಿಗೆ ತಿಗಣೆ ಬಂದು ರಕ್ತ ಹೀರುತ್ತಿರುವುದು ಗೊತ್ತಾಗುತ್ತಿರಲಿಲ್ಲ ತಿಗಣೆಯು ಸುಖವಾಗಿ ಬದುಕುತ್ತಿತ್ತು.
ಕೆಲವು ದಿನಗಳ ನಂತರ ಒಂದು ಸೊಳ್ಳೆ ಹಾಡು ಹಾಡಿಕೊಂಡು ಬಂತು ಆಗ ತಿಗಣೆ ಗಾಬರಿಯಾಯಿತು ನೀನು ಇಲ್ಲಿ ಏಕೆ ಬಂದೆ ಎಂದು ತಿಗಣೆ ಕೇಳಿತು ಸೊಳ್ಳೆ ನಾನು ಎಲ್ಲಾ ಕಡೆ ಸುತ್ತುತ್ತೇನೆ ನೀನು ನನ್ನ ಸ್ನೇಹಿತನಲ್ಲವೇ ನನ್ನ ನಿನ್ನ ಕೆಲಸ ಎರಡು ಒಂದೇ ಮನೆಗೆ ಬಂದ ಅತಿಥಿಯನ್ನು ಗೌರವಿಸಬೇಕು.
ನೀನು ತಿರಸ್ಕರಿಸಬಾರದು ಎಂದು ವೇದಾಂತ ಹೇಳಲು ಆರಂಭಿಸಿತು ಆಗ ತಿಗಣೆಗೆ ಏನು ಹೇಳಬೇಕೆಂದು ತಿಳಿಯಲಿಲ್ಲ ತಬ್ಬಿಬ್ಬಾಯಿತು ಆಗ ಸೊಳ್ಳೆ ಹೇಳಿದ್ದು ನೀನು ದಿನನಿತ್ಯ ರಾಜನ ರಕ್ತ ಹಿರುತ್ತಿದ್ದಿಯಾ ಇಂದು ನಾನು ಕೂಡ ರಕ್ತ ಹೀರುತ್ತೇನೆ ಎಂದು ಹೇಳಿತು.
ತಿಗಣೆಯೂ ನಾನು ಬಹಳಷ್ಟು ದಿನದಿಂದ ರಾಜನಿಗೆ ಏನು ತೊಂದರೆ ಆಗದಂತೆ ಬದುಕುತ್ತಿದ್ದೇನೆ ನೀನು ಶಬ್ದ ಮಾಡಿಕೊಂಡು ಬಂದರೆ ರಾಜನಿಗೆ ತಿಳಿದರೆ ನಿನ್ನಿಂದ ನನ್ನ ನೆಮ್ಮದಿಯು ಹಾಳಾಗುತ್ತದೆ ಎಂದು ಹೇಳಿತು.
ಬುದ್ಧಿವಂತ ಸೊಳ್ಳೆ ಹೇಳುತ್ತದೆ ನೋಡು ನೀನು ಬಹಳಷ್ಟು ದಿನದಿಂದ ರುಚಿ ರುಚಿಯಾದ ರಕ್ತವನ್ನು ಹೀರುತ್ತಿದ್ದೀಯಾ ನಾನು ಕೂಡ ರಕ್ತವನ್ನು ಹಿರುತ್ತೇನೆ ನನಗೂ ಅವಕಾಶ ಮಾಡಿಕೊಡು ಎಂದು ಅಕ್ಕರೆಯಿಂದ ಹೇಳುತ್ತದೆ ಆಗ ತಿಗಣೆಯು ಸೊಳ್ಳೆಗೆ ಎಚ್ಚರಿಕೆ ನೀಡುತ್ತದೆ.
ರಾಜ ಮಲಗಿದ ಸ್ವಲ್ಪ ಸಮಯದ ನಂತರ ನೀನು ಬರಬೇಕು ಇಲ್ಲದಿದ್ದರೆ ನಮಗೆ ಗಂಡಾಂತರ ತಪ್ಪಿದ್ದಲ್ಲ ಎಂದು ಹೇಳಿದಾಗ ಬುದ್ಧಿವಂತ ಸೊಳ್ಳೆಯು ನಿನ್ನ ಮೇಲೆ ಆಣೆ ಮಾಡಿ ಹೇಳುತ್ತೇನೆ ನೀನು ಗಾಬರಿ ಆಗಬೇಡ ರಾಜ ಮಲಗಿದ ನಂತರ ನಾನು ಬರುತ್ತೇನೆ ಎಂದು ಹೇಳಿ ಸೊಳ್ಳೆಯು ಹೋಗುತ್ತದೆ.
ಈ ಮಾತುಗಳನ್ನು ಕೇಳಿ ತಿಗಣೆಯು ಬೆಣ್ಣೆಯಂತೆ ಕರಗಿತು ಸ್ವಲ್ಪ ಸಮಯದ ನಂತರ ರಾಜ ಬಂದು ಮಲಗಿದನು ಇದನ್ನೇ ಕಾಯುತ್ತಿದ್ದ ಸೊಳ್ಳೆ ತಕ್ಷಣ ಹಾಡು ಹಾಡಿಕೊಂಡು ಬಂದು ರಾಜನನ್ನು ಕಚ್ಚಿತು ತಕ್ಷಣ ರಾಜನು ಗಾಬರಿಯಿಂದ ಎದ್ದನು ಕಾವಲುಗಾರರನ್ನು ಕರೆದನು ಇಲ್ಲಿ ಸೊಳ್ಳೆ ಇದೆ ಅದನ್ನು ನಿರ್ಮೂಲನೆ ಮಾಡಿ ಎಂದು ಹೇಳಿದನು.
ಕಾವಲುಗಾರರು ಮಂಚ ಹಾಸಿಗೆ ದಿಂಬು ಕಂಬಳಿ ಎಲ್ಲವನ್ನು ಆಚೆ ತಂದು ಸ್ವಚ್ಛಗೊಳಿಸಿದರು ಆಗ ತಿಗಣೆಯೂ ಆಚೆಯೇ ಉಳಿಯಿತು ಸೊಳ್ಳೆ ಹೇಗೋ, ಪಾರಾಗಿ ಹೋಯಿತು ನಂತರ ರಾಜನು ಸೊಗಸಾದ ನಿದ್ರೆಗೆ ಜಾರಿದನು.
ಆಸರೆ ನೀಡಿದ ತಿಗಣೆಗೆ ಆಸರೆ ಇಲ್ಲದಂತಾಯಿತು ಕೆಲವು ಸಾರಿ ಕೆಲವರಿಗೆ ಕೆಲಸ ಕೊಡಿಸಿದಾಗ ನಮ್ಮ ಕೆಲಸವೇ ಹೋಗುವ ಸಂಭವ ಇರುತ್ತದೆ ಹಾಗಾಗಿ ಯಾರಿಗೆ ಆಸರೆ ನೀಡುತ್ತಿದ್ದೇವೆ? ಎನ್ನುವುದನ್ನು ಖಚಿತ ಪಡಿಸಿಕೊಂಡು ಆಸರೆ ನೀಡೋಣ.