ನಿನಗಿಂತ ನಾನೇ ಶಕ್ತಿಶಾಲಿ

ಒಂದು ಸಾರಿ ಗಾಳಿಗೂ ಸೂರ್ಯನಿಗೂ ಸ್ಪರ್ಧೆ ಆರಂಭವಾಯಿತು ನಾನು ಬಲಶಾಲಿ ಎಂದು ಗಾಳಿ ಹೇಳಿತು ಸೂರ್ಯ ಮುಗುಳ್ ನಗುತ್ತಾ ಹೇಳಿತ್ತು ನಿನಗಿಂತ ನಾನೇ ಶಕ್ತಿಶಾಲಿ ಬೇಕಾದರೆ ನೀನಗೆ ಉದಾಹರಣೆ ಸಹಿತ ತೋರಿಸುವೆ ಎಂದು ಹೇಳಿತು.

ಗಾಳಿಗೆ ಹುಮ್ಮಸ್ಸು ಬಂದು ಪ್ರಯೋಗವಂತೂ ಮಾಡಲೇಬೇಕು ಹೇಗೆ ಇದನ್ನ ನೋಡುವುದು ಅದೇ ದಾರಿಯಲ್ಲಿ ಒಬ್ಬ ವ್ಯಕ್ತಿ ಬರುತ್ತಿದ್ದನು ಸೂರ್ಯ ಹೇಳಿದ ಈ ಮನುಷ್ಯನು  ಕೋಟು ಧರಿಸಿದ್ದಾನೆ ಕೋಟನ್ನು ಯಾರು ಬಿಚ್ಚುವಂತೆ ಮಾಡುತ್ತಾರೆ ಅವರೇ ಗೆದ್ದಂತೆ ಎಂದಾಗ ಗಾಳಿಯೂ ಕೂಡ ಇದಕ್ಕೆ ಸೈ ಎಂದಿತು ಮೊದಲು ಜೋರಾಗಿ ಗಾಳಿ ಬೀಸಲಾರಂಭಿಸಿತು.

ಆಗ ವ್ಯಕ್ತಿಯು ಗಾಳಿಯನ್ನು ತಾಳಲಾರದೆ ತನ್ನ ಕೋಟಿನ ನ ಗುಂಡಿಗಳನ್ನು ಹಾಕಿಕೊಂಡ ಗಾಳಿ ಇನ್ನಷ್ಟು ಜೋರಾಗಿ ಬೀಸತೊಡಗಿತು ಆಗ ಹಿಡಿದ ಕೋಟನ್ನು ತನ್ನ ಶರೀರಕ್ಕೆ ಹಾಕಿಕೊಂಡನು ಗಾಳಿ ಮತ್ತಷ್ಟು ಹೆಚ್ಚಾಯಿತು ಗಾಳಿ ಸೋತಿತು ನಂತರ ಸೂರ್ಯನ ಸರದಿ ಬಂತು  ಸೂರ್ಯ ಬಂದನು ತನ್ನ ಬಿಸಿಯನ್ನು ಮುಟ್ಟಿಸಿದ ಮನುಷ್ಯ ಕೋಟಿನ ಗುಂಡಿಗಳನ್ನು ಬಿಚ್ಚಿದ.

 ಸೂರ್ಯನಿಂದ ಮತ್ತಷ್ಟು ಬಿಸಿಲು ಹೆಚ್ಚಾಯ್ತು  ಬಿಸಿಲಿನ ತಾಪದಿಂದ ಸೆಖೆ ತಡೆಯಲಾರದೆ ಬೆವರು ಬರಲು ಶುರು ಆಯಿತು ಇನ್ನೂ ಸ್ವಲ್ಪ ಬಿಸಿಲು ಜಾಸ್ತಿಯಾದಾಗ ಮನುಷ್ಯ ತನ್ನ  ಕೋಟನ್ನೇ ತೆಗೆದು ಕೈಯಲ್ಲಿ ಹಿಡಿದುಕೊಂಡು ಒಂದು ಮರದ ನೆರಳಿನಲ್ಲಿ ಕುಳಿತನು ಈಗ ಗಾಳಿಗಿಂತ ಸೂರ್ಯನೇ ದೊಡ್ಡವನು ಎಂದು ಒಪ್ಪಿತು.

 ಒತ್ತಡದಲ್ಲಿ ಸಿಲುಕಿಕೊಂಡಿದ್ದಾನೆ

ಒಂದು ಬಾಲಕಿ ತುಂಬ ಬಡತನದಲ್ಲಿ ಬೆಳೆದಳು ಮನೆಯವರಿಗೆ ಇನ್ನಷ್ಟು ಕಷ್ಟ ಬಂದಾಗ ಬೇರೆಯವರ ಮನೆ ಕೆಲಸಕ್ಕೆಂದು ಹೋಗುತ್ತಿದ್ದಳು ಆ ಮಾಲೀಕನು ತುಂಬಾ ಕೋಪಿಷ್ಟ, ಗರ್ವಿಷ್ಟ, ಮಾಲೀಕನು ಹುಡುಗಿಗೆ ಅತಿ ಹೆಚ್ಚು ಕೆಲಸಗಳನ್ನು ಕೊಡುತ್ತಿದ್ದ

ಕೆಲವು ಸಾರಿ ಹೊಡೆಯುತ್ತಿದ್ದನು ಕೆಲವು ಸಾರಿ ಊಟವೇ ಕೊಡುತ್ತಿರಲಿಲ್ಲ ಕೆಲವು ಸಾರಿ, ಚಿತ್ರಹಿಂಸೆ ಕೊಡುತ್ತಿದ್ದ  ಒಂದು ಸಾರಿ ಮಾಲೀಕನು ಮನೆಗೆ ತುಂಬಾ ತಡವಾಗಿ ಬಂದನು ಸಂಜೆ ಬರುತ್ತಿದ್ದವನ್ನು ರಾತ್ರಿ ಸಮಯಕ್ಕೆ ಬಂದ ಹುಡುಗಿ ಎಚ್ಚರವಿದ್ದು ಮಾಲೀಕನಿಗೆ ಊಟ ಹಾಕಿ ನಂತರ ಮಲಗಲು ಹೋಗುತ್ತಾಳೆ.

ಬಾಲಕಿ ಪ್ರಾರ್ಥನೆ ಮಾಡುತ್ತಿರುತ್ತಾಳೆ ಆಗ ಮಾಲೀಕನಾದವನಿಗೆ ಸ್ವಲ್ಪ ಹೆದರಿಕೆಯೂ ಆಗುತ್ತದೆ ಸಂದೇಹವೂ ಬರುತ್ತದೆ ಈ ಹುಡುಗಿ ಇಷ್ಟು ಹೊತ್ತಿನಲ್ಲಿ ಏನು ಮಾಡುತ್ತಿರಬಹುದು ಯಾರ ಜೊತೆ ಮಾತನಾಡುತ್ತಿದ್ದಾಳೆ ಏನಾದರೂ ಕಳ್ಳತನಕ್ಕೆ, ಲೆಕ್ಕಾಚಾರ ಹಾಕುತ್ತಿದ್ದಾಳೆ ಎಂದು ಸಂದೇಹ ಉಂಟಾಗುತ್ತದೆ.

ನಿಧಾನವಾಗಿ ಹೋಗಿ ಹುಡುಗಿ ಏನೇನು ಮಾಡುತ್ತಾಳೋ ಅದನ್ನು ಗಮನಿಸೋಣ ಎಂದು ಮರೆಯಲ್ಲಿ ನಿಂತುಬಿಟ್ಟನು ಆ ಹುಡುಗಿ ಮಲಗುವ ಮೊದಲು ಪ್ರಾರ್ಥನೆ ಮಾಡುವುದು ಅವಳ ದಿನನಿತ್ಯದ ಕೆಲಸ ಹೇ ಭಗವಂತ ಈ ಪ್ರಪಂಚದಲ್ಲಿ ಇರುವವರಿಗೆ ಎಲ್ಲರಿಗೂ ಒಳ್ಳೆಯದೇ ಆಗಲಿ.

 ಅದರಲ್ಲೂ ನಮ್ಮ ಮಾಲೀಕನಿಗೆ ವಿಶೇಷವಾಗಿ ದಯೆ ತೋರು ಆತ ತುಂಬ ದಯಾಮಯಿ ಆದರೆ ಅವನಿಗೆ ಏನೂ ಕಷ್ಟ ಬಂದಿದೆ ತುಂಬ ಆತಂಕದಲ್ಲಿ ಹಾಗೂ ಒತ್ತಡದಲ್ಲಿ ಸಿಲುಕಿಕೊಂಡಿದ್ದಾನೆ ಮಾಲೀಕನ ಕಷ್ಟವನ್ನು  ಪಾರುಮಾಡು ಮಾಲೀಕನ ಇಡೀ ಸಂಸಾರಕ್ಕೆ ಒಳ್ಳೆಯದನ್ನು ಮಾಡು ಎಂದು ಬೇಡಿಕೊಳ್ಳುತ್ತಾಳೆ ಮಾಲೀಕನು ಈ ಪ್ರಾರ್ಥನೆಯನ್ನು ಕೇಳಿ ತನ್ನ ಕೊಠಡಿಗೆ ಹೋಗಿ ಮಲಗುತ್ತಾನೆ.

 ಮಾಲಿಕನಿಗೆ ನಿದ್ದೆ ಬರುವುದೇ ಇಲ್ಲ ತಡವಾಗಿ ನಿದ್ರೆ ಬರುತ್ತದೆ ನಂತರ ವಿಚಿತ್ರ ಕನಸು ಕಾಣುತ್ತಾನೆ ಈ ಬಾಲಕಿಗೆ ನಾಮ ತುಂಬಾ ನೋವನ್ನು ಕೊಟ್ಟಿದ್ದೇನೆ ಆದರೂ ಆ ಹುಡುಗಿ ನನಗೆ ಒಳ್ಳೆಯದನ್ನೇ ಬಯಸುತ್ತಿದೆ  ಎಂದು ಬೆಳಿಗ್ಗೆ ಎದ್ದವನೇ ಬಾಲಕಿಗೆ ಕ್ಷಮೆ ಕೇಳುತ್ತಾನೆ ನಾನು ನಿನಗೆ ತುಂಬಾ ತೊಂದರೆ ನೀಡಿದ್ದೇನೆ ದಯವಿಟ್ಟು ಕ್ಷಮಿಸು ಎಂದು ಕ್ಷಮೆ ಕೇಳುತ್ತಾನೆ.

ಇಲ್ಲಿವರೆಗೆ ನಾನು ತೊಂದರೆ ಕೊಟ್ಟೆ ಇನ್ನು ಮುಂದೆ ಯಾವುದೇ ರೀತಿಯ ತೊಂದರೆ ಕೊಡುವುದಿಲ್ಲ ಗೌರವವಾಗಿ ನೀನೂ ಇರು ನಿನ್ನ ಸೇವೆ ನನಗೆ ಇರಲಿ ಎಂದು ತನ್ನ ಮನಸು ಪರಿಶುದ್ಧವಾಗಿಸಿಕೊಂಡು ನಂತರ ತನ್ನ ಸ್ವಂತ ಮಗಳಂತೆ ನೋಡಿಕೊಂಡನು ನಮಗೆ ಏನೇ ಕಷ್ಟಗಳು ಬರಲಿ ಆದರೆ ನಾವು ಸಹನೆಯಿಂದ ಇದ್ದು ನಮ್ಮ  ಮನಸ್ಸನ್ನು ಪರಿಶುದ್ಧವಾಗಿಟ್ಟುಕೊಳ್ಳೋಣ.

ಒಬ್ಬರೇ ಹೋದಾಗ ತುಂಬ ಕಷ್ಟ

ಒಂದು ಸಾರಿ ಒಂದು ಸಂಸಾರ ರೈಲ್ವೆ ಸ್ಟೇಷನ್ನಿನ ಬಳಿ ಬಂದರು ರೈಲು ಬರುವುದು ತುಂಬಾ ತಡವಾಗುತ್ತದೆ. ಎಂದು ಮೈಕಿನಲ್ಲಿ ಹೇಳಿದರು ಆದುದರಿಂದ ಎಲ್ಲರೂ ಆ ಕಡೆ ಈ ಕಡೆ ಹೋಗುತ್ತಿದ್ದರು ಟೀ ಕಾಫಿ ಕುಡಿಯುತ್ತಿದ್ದರು.

 ಚಿಕ್ಕ ಮಕ್ಕಳು ಏನು ಮಾಡಬೇಕು ಮಕ್ಕಳು ಸುಮ್ಮನೆ ನಿಧಾನವಾಗಿ ಆಟ ಆಡುತ್ತಿದ್ದವು. ಆಟ ಆಡುತ್ತಿದ್ದಂತೆಯೇ ನಿಧಾನವಾಗಿ ರೈಲು ಬರುವ ಹಳ್ಳಿಗಳನ್ನು ಬಿಟ್ಟು ಬೇರೆ ಪಕ್ಕದಲ್ಲಿರುವ ರೈಲು ಹಳಿಗಳ (ಕಂಬಿಗಳ) ಮೇಲೆ ನಡೆಯಲಿಕ್ಕೆ, ಪ್ರಾರಂಭಿಸಿತು ಒಂದ ಮಗು ಒಂದು ಹಳಿಯ ಮೇಲೆ ನಡೆಯಲು ಸ್ವಲ್ಪ ಕಷ್ಟ ಪಡುತ್ತಿದೆ ಪುಯತ್ನಿಸುತ್ತಿದೆ.

ಮತ್ತೆ ಮತ್ತೆ ಬೀಳುತ್ತದೆ ಆಗ ಮತ್ತೆ ಇನ್ನೊಂದು ಮಗು ಇನ್ನೊಂದು ಹಳಿಯ ಮೇಲೆ ಬಂದು ಕೈ ಹಿಡಿದುಕೊಂಡು ಇಬ್ಬರೂ ಸರಾಗವಾಗಿ ನಡೆಯುತ್ತಿದ್ದಾರೆ ಎಲ್ಲರೂ ಅವರವರ ಚಿಂತೆಯಲ್ಲಿ ಇದ್ದರೆ ಈ ಮಕ್ಕಳು ಲೀಲಾಜಾಲವಾಗಿ ಆಟವನ್ನು ಆಡುತ್ತಿದ್ದಾರೆ ಸಂತೋಷ ಪಡುತ್ತಿದ್ದಾರೆ.

 ಮತ್ತೆ ಅದೇ ರೀತಿ ಒಬ್ಬರೇ ನಡೆದಾಗ ಮತ್ತೆ ಇಬ್ಬರ ಬ್ಯಾಲೆನ್ಸ್ ತಪ್ಪುತ್ತಿದೆ ಆದರೆ ಅದೇ ಇಬ್ಬರು ಕೈಹಿಡಿದು ನಡೆದಾಗ ಮಕ್ಕಳ  ಬ್ಯಾಲೆನ್ಸ್ ಚೆನ್ನಾಗಿದೆ ನಮ್ಮ ಬದುಕು ಕೂಡ ಅಷ್ಟೆ ಕೆಲವು ಸಾರಿ ನಾವು ಒಬ್ಬರೇ ಹೋದಾಗ  ಕಷ್ಟ ಪಡಬೇಕಾಗುತ್ತದೆ ಅದೇ ಇತರರ ಜೊತೆಯಲ್ಲಿ ಹೋದಾಗ ನಮಗೆ ತುಂಬ ಸುಲಭವಾಗಿ ನಮ್ಮ ಮಾರ್ಗವನ್ನು ತಲುಪಬಹುದು. 

ಒಬ್ಬರೇ ಹೋದಾಗ ತುಂಬ ಕಷ್ಟ

ಒಂದು ಶಾಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮುಖ್ಯೋಪಾಧ್ಯಾಯರೇ ಮಾತನಾಡಿದರು ನಮ್ಮ ಪಕ್ಕದ ರಾಜ್ಯದಲ್ಲಿ ಪ್ರಕೃತಿ ವಿಕೋಪದಿಂದಾಗಿ ಜನರು ಮನೆ ಮಠ ವಸ್ತುಗಳು ಎಲ್ಲವೂ ಕಳೆದುಕೊಂಡು ನಿರಾಶ್ರಿತರಾಗಿ ಬಂದಿದ್ದಾರೆ.

ನಿರಾಶ್ರಿತರಿಗಾಗಿ ನಾವು ಏನಾದರೂ ಮಾಡಬೇಕು ಅದಕ್ಕಾಗಿ ನಾವು ನಮ್ಮ ಕೈಲಾದಷ್ಟು ಸಹಾಯವನ್ನು ಮಾಡೋಣ ಎಂದು ತೀರ್ಮಾನ ಮಾಡಿದ್ದೇವೆ ಆದ್ದರಿಂದ ಹತ್ತು ರುಪಾಯಿಯ ಟಿಕೇಟನ್ನು ಪ್ರಿಂಟ್ ಮಾಡಿಸಿ ನಿಮ್ಮ ಕೈಗೆ ನೀಡುತ್ತೇವೆ ಹೆಚ್ಚು ಯಾರು ಟಿಕೆಟನ್ನು ಮಾರಾಟ ಮಾಡುತ್ತೀರಿ ಅವರಿಗೆ ಬಹುಮಾನ ಪ್ರಶಸ್ತಿ ಪ್ರಮಾಣಪತ್ರವನ್ನು ನೀಡುತ್ತೇವೆ ಎಂದು ಹೇಳಿದರು.

 ಎಲ್ಲಾ ವಿದ್ಯಾರ್ಥಿಗಳು ಅವರಿಗೆ ಎಷ್ಟು ಸಾಧ್ಯವೋ ಅಷ್ಟು ಹಣ ಸಂಗ್ರಹಣೆ ಮಾಡಿ ಕೊಟ್ಟರು ಆದರೆ ಅದರಲ್ಲಿ ಒಬ್ಬ ವಿದ್ಯಾರ್ಥಿ ಮಾತ್ರ ಕೊಟ್ಟಿದ್ದ ಟಿಕೆಟ್ ಅನ್ನು ಮಾರನೇ ದಿನವೇ ಮುಗಿಸಿ ಮತ್ತೆ 4 ಬುಕ್ಕನ್ನು ಕೇಳಿದನು ಟಿಕೆಟುಗಳನ್ನು ಮತ್ತೆ ಹಿಂತಿರುಗಿಸಿ ಮತ್ತೆ 5 ಟಿಕೆಟುಬುಕ್ಕನ್ನು ಕೇಳಿದನು.

 ಲೆಕ್ಕ ಬರೆಯುವ ಶಿಕ್ಷಕರಿಗೆ ಆತಂಕ ಗಾಬರಿ ಎರಡೂ ಆಯಿತು ಈ ಹುಡುಗ ಬಹುಮಾನ ಪ್ರಶಸ್ತಿ ಆಸೆಗೆ ಏನಾದ್ರೂ ಕಳ್ಳತನ ಮಾಡುತ್ತಿರಬಹುದು ಎನ್ನುವ ಸಂದೇಹವೂ ಬಂತು ಅದಕ್ಕಾಗಿ ಶಿಕ್ಷಕರು ವಿದ್ಯಾರ್ಥಿಯನ್ನು ಕರೆದು ಕೇಳಿದರು ನೀನು ಏಕೆ ಇಷ್ಟೊಂದು ಟಿಕೆಟನ್ನು ಮಾರುತ್ತಿದ್ದೀಯಾ ಎಂದರೆ ನೀನು ಬಹುಮಾನಕ್ಕಾಗಿ ಮಾರುತ್ತಿದ್ದೀಯಾ ಎಂದು ಹೇಳಿದರು.

 ಆಗ ವಿದ್ಯಾರ್ಥಿಯು ಹೇಳಿದನು ಸರ್ ಈ ವರ್ಷ ನಾನು ನಮ್ಮ ತಂದೆಯವರು ಕಣ್ಣಿನಿಂದ ಈ ಘಟನೆಯನ್ನು ನೋಡಿದ್ದೇವೆ ಪ್ರಕೃತಿ ವಿಕೋಪದಿಂದಾಗಿ ಊಟವಿಲ್ಲದೆ ಸರಿಯಾಗಿ ಬಟ್ಟೆ ವಸತಿ ಇಲ್ಲದೆ ನರಳುತ್ತಿದ್ದರು.

 ಇದನ್ನು ಕಣ್ಣಾರೆ ಕಂಡಿದ್ದೇನೆ ಆಗಲೇ ಸಹಾಯ ಮಾಡಬೇಕು ಎಂದು ಮನಸ್ಸು ಮಾಡಿದೆ ಆದರೆ ನಮ್ಮ ಹತ್ತಿರ ಅಷ್ಟು ಸಹಾಯ ಮಾಡಲಿಕ್ಕೆ ಸಾಧ್ಯವಿಲ್ಲ ಆದರೂ ಅವರಿಗೆ ಏನಾದರೂ ಮಾಡಲೇ ಬೇಕು ಎನ್ನುವ ಮನಸ್ಸು ಮಾತ್ರ ಅಂದಿನಿಂದ ಇದ್ದೇ ಇದೆ. 

ಈಗ ನನಗೆ ಈ ಅವಕಾಶ ಸಿಕ್ಕಿದೆ ಆದುದರಿಂದ ನನಗೆ ಬಹುಮಾನ ಪ್ರಶಸ್ತಿ ಪ್ರಮಾಣಪತ್ರ ಏನೂ ಬೇಡ ನನಗೆ ಬಂದ ಬಹುಮಾನವೂ ಸೇರಿಸಿ ನೀವು ಅವರಿಗೆ ಕಳಿಸಿ ಎಂದು ಹೇಳಿದನು.

 ಆಗ ಶಿಕ್ಷಕರಿಗೆ ವಿದ್ಯಾರ್ಥಿ ಹೇಳಿದ ಮಾತು ಶಿಕ್ಷಕರ ಮನಸಿಗೆ ನಾಟಿತು ಶಿಕ್ಷಕರು ಒಂದು ವಿಷಯವನ್ನು ಬೋಧಿಸಬಹುದು ಆದರೆ ವಿದ್ಯಾರ್ಥಿ ಬಹಳಷ್ಟು ವಿಷಯಗಳನ್ನು ಗ್ರಹಿಸುತ್ತಾರೆ ಕಲಿಯುವವರು ವಿದ್ಯಾರ್ಥಿಗಳಿಂದ ಕೂಡ ಕಲಿಯಬಹುದಾಗಿದೆ.

ತಾಳ್ಮೆ ಕಳೆದುಕೊಂಡು

ಒಬ್ಬ ದಯಾಳು ಶ್ರೀಮಂತನ ಮನೆಗೆ ನಾಲ್ಕು ಜನ ಕಳ್ಳರು ಸದ್ದಿಲ್ಲದೆ ಮನೆಯ ಒಳಗೆ ಪ್ರವೇಶಿಸುತ್ತಾರೆ ಇದನ್ನು ಕಂಡ ದಯಾಳು ಶ್ರೀಮಂತನು ಕಳ್ಳರನ್ನು ಕರೆದು ಊಟ ಮಾಡಿಸಿ ಇನ್ನು ಮುಂದೆ ನೀವು ಕಳ್ಳತನ ಮಾಡಬೇಡಿರಿ ಎಂದು ಕಳ್ಳರಿಗೆ ನಾಲ್ಕು ಎಕರೆ ಜಾಗವನ್ನು ಕೊಟ್ಟು ಗೊಬ್ಬರ ಬೀಜಗಳು ಉಳುಮೆ ಮಾಡಲು ಬೇಕಾದ ಎಲ್ಲಾ ವಸ್ತುಗಳನ್ನು ಕೊಟ್ಟನು ಇನ್ನು ಮುಂದೆ ನೀವು ಕಳ್ಳತನ ಮಾಡುವುದನ್ನು ನಿಲ್ಲಿಸಿ ಇದರಲ್ಲಿ ದುಡಿದು ಬದುಕಬಹುದಾಗಿದೆ ಎಂದು ಹೇಳಿದನು.

ದಯಾಳು ಶ್ರೀಮಂತನ ಮಾತಿಗೆ ಕಳ್ಳರು ಕಷ್ಟಪಟ್ಟು ಉಳುಮೆ ಮಾಡಿ ಅದಕ್ಕೆ  ನೀರು ಗೊಬ್ಬರ ಹಾಕಿದರು ಶ್ರೀಮಂತ ಹೇಳಿದಂತೆ ಶ್ರಮಪಟ್ಟರು ಕೆಲವು ದಿನಗಳ ನಂತರ ಪೈರು ಬಂತು ಕಳ್ಳರು ತುಂಬಾ  ಸಂಭಮಿಸಿದರು ನಂತರ ದಿನ ಬೆಳಿಗ್ಗೆಯಿಂದ ಸಂಜೆಯವರೆಗೆ ಬೆಳೆ ಬಂದಿದೆಯೇ ಎಂದು ಆಗಾಗ  ಬರಿ ನೋಡುವುದೇ ಇವರ ಕೆಲಸವಾಗಿತ್ತು.

ಇವತ್ತು ಬೆಳೆಯಲಿಲ್ಲ ಮತ್ತೆ ಮಾರನೇ ದಿನ ಇವತ್ತು ಬೆಳೆಯಲಿಲ್ಲ ಹೀಗೆ ಒಂದು ವಾರದ ತನಕ ಮುಂದುವರೆಯಿತು ಫಲ ಬರಲಿ ಎಂದು ನಿರೀಕ್ಷೆ ಮಾಡಿದರು ಆದರೆ ಫಲ ಅಷ್ಟು ಬೇಗ ಬರುತ್ತದೆಯೇ ಇಲ್ಲ ತದನಂತರ ತಾಳ್ಮೆ ಕಳೆದುಕೊಂಡು ಬಂದಿದ್ದ ಪೈರುಗಳನ್ನು ಕಿತ್ತುಹಾಕಿ ನಾಶ ಮಾಡಿ ಮತ್ತೆ ಕಳ್ಳತನ ಮಾಡಲು ಮುಂದಾದರು.

ಬೆಳೆ ಬರುವವರೆಗೂ ಕಾಯುತ್ತಿದ್ದರೆ ನೆಮ್ಮದಿಯಾಗಿ ಬದುಕಬಹುದಾಗಿತ್ತು ನಮ್ಮ ಸಾಧನೆಗಾಗಿ ತಾಳ್ಮೆ ಬೆಳೆಸಿಕೊಳ್ಳೋಣ.

Leave a Comment