ಒಂದು ಪ್ರಸಿದ್ಧ ಕಂಪೆನಿ ಇರುತ್ತದೆ ಅಲ್ಲಿ ನೂರಾರು ಜನ ಕೆಲಸ ಮಾಡಿಕೊಂಡಿರುತ್ತಾರೆ ಹಾಗೆ ಆ ಕಂಪನಿಯ ಮುಂದೆ ಒಂದು ಚಿಕ್ಕ ಹೋಟೆಲ್ ಇರುತ್ತದೆ ಅಲ್ಲಿ ಟೀ ಕಾಫಿ ಮತ್ತು ವಡೆ ಸಮೋಸವನ್ನು ಮಾರಿಕೊಂಡು ಒಬ್ಬ ವ್ಯಾಪಾರಿ ಇರುತ್ತಾನೆ.
ಆ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದವರು ಮಾಲೀಕರು ಮತ್ತೆ ಮ್ಯಾನೇಜರು ಸಹ ಆ ಹೊಟೇಲಿನಿಂದಲೇ ಸಮೋಸಾ, ವಡೆ, ಟೀ, ಕಾಫಿ, ಕೆಲವು ಸಾರಿ ತರಿಸಿಕೊಂಡು ಕೆಲವು ಸಾರಿ ಅಲ್ಲೆ ಹೋಗಿ ವಡೆ, ಪಕೋಡ, ಸಮೋಸ, ತಿಂದು ಟೀ ಅಥವಾ ಕಾಫಿ ಕುಡಿದು ಬರುತ್ತಿರುತ್ತಾರೆ.
ಒಂದು ಸಾರಿ ಮ್ಯಾನೇಜರ್ ಅವರು ಅಲ್ಲೆ ಗರ್ಮಾಗರಂ ಸಮೋಸ ತಿಂದು ಬಿಸಿಬಿಸಿಯಾದ ಟೀ ಕುಡಿದು ಬರೋಣವೆಂದು ಬಂದು ಸಮೋಸವನ್ನು ತಿನ್ನುತ್ತಾ ಸಮೋಸ ಮಾರುವವನಿಗೆ ಹೇಳುತ್ತಾರೆ ನೋಡಿ ನಾನು ನಿಮಗೆ ಒಂದು ಸಲಹೆಯನ್ನು ಹೇಳಲು ಇಷ್ಟಪಡುತ್ತೇನೆ ಏನೆಂದರೆ ನಾನು ಈ ಕಂಪೆನಿಗೆ ಸೇರಿ ಹತ್ತು ವರ್ಷಗಳು ಉರುಳಿದವು.
ಇವತ್ತು ನಾನು ಐವತ್ತು ಸಾವಿರ ಸಂಬಳವನ್ನೂ ಪಡೆಯುತ್ತಿದ್ದೇನೆ ಎಂದು ಎದೆ ಉಬ್ಬಿಸಿಕೊಂಡು ಉತ್ಸಾಹದಿಂದ ನೀವು ಕೂಡ ನನ್ನ ಹಾಗೆಯೇ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದಿದ್ದರೆ ನೀವು ಕೂಡ ನನ್ನಷ್ಟು ದುಡಿಯಬಹುದಾಗಿತ್ತಲ್ಲವೇ ಎಂದು ಸಮೋಸ ಮಾರುವವನಿಗೆ ಹೇಳುತ್ತಾರೆ.
ಆಗ ಸಮೋಸ ಮಾರುವವನು ವಿನಮ್ರವಾಗಿ ಹೇಳುತ್ತಾನೆ ಮ್ಯಾನೇಜರ್ ಅವರೇ ನೀವು ಈ ಕಂಪೆನಿಗೆ ಕೆಲಸಕ್ಕೆ ಸೇರಿದಾಗ ಉದ್ಯೋಗಿಯಾಗಿ ಸೇರಿ ನಂತರ ಸುಪರ್ ವೈಜರ್ ಆಗಿ ನಂತರ ನೀವು ಮ್ಯಾನೇಜರ್ ಆಗಿದ್ದೀರಿ ಹೌದಲ್ಲವೇ ಈಗ ನಿಮ್ಮ ಸಂಬಳ ಐವತ್ತು ಸಾವಿರ ಇದು ನಿಮಗೆ ಸರಿ ಇರಬಹುದು.
ನಾನು ಅದೇ ರೀತಿ ಹತ್ತು ವರ್ಷದ ಹಿಂದೆ ನನ್ನ ವ್ಯಾಪಾರವನ್ನು ಆರಂಭಿಸಬೇಕಾದರೆ ಒಂದು ಸೈಕಲ್ ನಲ್ಲಿ ಬಂದು ಟೀ, ಕಾಫಿ ಹಾಗೆ ಸಮೋಸ ಪಕೋಡವನ್ನು ಮಾರುತ್ತಿದ್ದೆ ನಂತರ ನಾನು ಟಿವಿಎಸ್ ಸ್ಕೂಟರ್ ನ್ನು ಖರೀದಿಸಿದ ನಂತರ ಸ್ಕೂಟರ್ ನಲ್ಲಿ ಮಾರುತಿದ್ದೆ ಈಗ ನಾನು ಒಂದು ಪ್ರಸಿದ್ಧ ಹೋಟೆಲ್ ತೆರೆದಿದ್ದೇನೆ.
ಹತ್ತು ವರ್ಷದ ಹಿಂದೆ ನಿಮ್ಮ ಸಂಬಳ ತಿಂಗಳಿಗೆ ಹತ್ತು ಸಾವಿರ ಇತ್ತು ನನ್ನ ಸಂಬಳ ತಿಂಗಳಿಗೆ ಎರಡು ಸಾವಿರ ಮಾತ್ರ ಆದರೆ ಇಂದು ನಿಮ್ಮ ಸಂಬಳ ಐವತ್ತು ಸಾವಿರ ಇದ್ದರೆ ನನ್ನ ಸಂಬಳ ಎರಡು ಲಕ್ಷ ಆಗುತ್ತಿದೆ ಮತ್ತೆ ನನ್ನ ವ್ಯಾಪಾರ ನನಗೆ ಬೇಕಾದಾಗ ನಾನು ಮಾಡಬಹುದಾಗಿದೆ.
ಯಾವಾಗ ಬೇಕಾದರೂ ನಾನು ರಜಾ ತೆಗೆದುಕೊಳ್ಳಬಹುದಾಗಿದೆ ಆದರೆ ನೀವು ರಜಾ ಹಾಕಿದರೆ ನಿಮಗೆ ಸಂಬಳವನ್ನು ಕಡಿಮೆ ಮಾಡುತ್ತಾರೆ ಮತ್ತೆ ನಿಮ್ಮ ಮಗ ನಿಮ್ಮ ಹುದ್ದೆಗೆ ಬರಲಾರನು.
ನಿಮ್ಮ ಮಗನು ಕೂಡ ನಿಮ್ಮಂತೆಯೇ ಮೊದಲು ಉದ್ಯೋಗಿಯಾಗಿ ಸೂಪರ್ ವೈಸರ್ ಆಗಿ ನಂತರ ಮ್ಯಾನೇಜರ್ ಹುದ್ದೆಗೆ ಬರಬೇಕಾಗುತ್ತದೆ ಆದರೆ ಈಗ ನನ್ನ ಮಗ ನಾನು ಪಟ್ಟ ಕಷ್ಟವನ್ನು ಪಡಬೇಕಾದ ಪರಿಸ್ಥಿತಿ ಇಲ್ಲ ಏಕೆಂದರೆ ನನ್ನ ವ್ಯಾಪಾರ ಪ್ರಸಿದ್ಧಿಯಾಗಿದೆ.
ನನ್ನ ಮಗ ಇನ್ನಷ್ಟು ದೊಡ್ಡದಾಗಿ ಮಾಡಬಹುದು ಮತ್ತೆ ನನ್ನ ಮಗ ನನ್ನ ತರ ಸೈಕಲ್ನಿಂದ ಸ್ಕೂಟರ್ ಮತ್ತೆ ಚಿಕ್ಕ ಹೋಟೆಲ್ ಆಗಿ ಮಾಡುವ ಅವಶ್ಯಕತೆಯಿಲ್ಲ ಈಗ ನೇರವಾಗಿ ಅತಿದೊಡ್ಡ ಹೋಟೆಲನ್ನೇ ಬೇಕಾದರೂ ತೆರೆಯಬಹುದಾಗಿದೆ ಅಲ್ಲಿ ಅವನೇ ಮಾಲೀಕ ನಾಗುತ್ತಾನೆ.
ನನಗಿಂತ ಇನ್ನಷ್ಟು ಚೆನ್ನಾಗಿ ಅವನು ಬೆಳೆಸಬಲ್ಲ ಎಂದು ಹೇಳುತ್ತಾನೆ, ಕೆಲಸ ಮಾಡಿಕೊಂಡಿದ್ದರೆ ನಾವು ಎಷ್ಟೇ ದುಡಿದರೂ ಗುಲಾಮರೇ ಮತ್ತು ಎಷ್ಟೇ ಕೆಲಸ ಮಾಡಿಕೊಟ್ಟರು ಮಾಲೀಕ ಮಾತ್ರ ಅಭಿವೃದ್ಧಿ ಹೊಂದುತ್ತಾನೆ.
ಆದರೆ ನಾನು ಇಷ್ಟು ವರ್ಷ ಕಷ್ಟಪಟ್ಟಿದ್ದು ನನ್ನ ಮಗ ಅಷ್ಟು ಕಷ್ಟ ಪಡಬೇಕಾಗಿಲ್ಲ ತುಂಬಾ ಸುಲಭವಾಗಿ ಅವನು ಉನ್ನತ ಮಟ್ಟಕ್ಕೆ ತಲುಪಬಹುದಾಗಿದೆ.
ಮುಂದೆ ನೀವು ಕೆಲವು ವರ್ಷಗಳಲ್ಲಿ ನಿವೃತ್ತಿ ಯಾಗುತ್ತೀರಿ ನಂತರ ನೀವು ಏನು ಮಾಡ್ತೀರಿ? ಅದೇ ನಾನು ನಿವೃತ್ತಿ ಯಾವಾಗ ಬೇಕಾದರೂ ಆಗಬಹುದು ನನಗೆ ನಾನು ಎಷ್ಟು ಬೇಕೋ ಅಷ್ಟು ಪಿಂಚಿನ್ ಪ್ಲಾನ್ ಮಾಡಿಕೊಂಡಿದ್ದೇನೆ ಎಂದು ಸಮೋಸ ಮಾರುವವನು ಹೇಳಿದನು ಆಗ ಮ್ಯಾನೇಜರ್ ಆದವರು ಏನೂ ಮಾತನಾಡದೆ ಟೀ ಕುಡಿದು ಅಲ್ಲಿಂದ ಹೋಗುತ್ತಾರೆ.
ಯಾರು ಯಾವ ರೀತಿ ಆಯ್ಕೆ ಮಾಡಿಕೊಳ್ಳುತ್ತಾರೆ ಹಾಗೆಯೇ ಆಗುತ್ತಾರೆ ನಾವು ನಮಗಾಗಿ ದುಡಿಯುತ್ತಿದ್ದೇವೆಯೇ? ಅಥವಾ ಇತರರಿಗಾಗಿ ದುಡಿಯುತ್ತಿದ್ದೇವೆ ಎಂದು ಕೊಂಚ ಯೋಚಿಸಿ ನಾವೇ ನಿರ್ಧರಿಸಿಕೊಳ್ಳೋಣ.
ಮನೆ ಒಳಗೆ ಪ್ರವೇಶಿಸುತ್ತಿದ್ದಂತೆ
ಒಂದು ಸಾರಿ ಮೃದು ಸ್ವಭಾವ ರಾಜನು ಯುದ್ಧಕ್ಕೆ ಹೋಗಿ ಬರುತ್ತಿದ್ದಾಗ ಒಂದು ಚಿಕ್ಕದಾದ ಮನೆಯು ಕಾಣುತ್ತದೆ ಮನೆಯ ಒಳಗೆ ಕಾಲಿಡಿತ್ತಿದ್ದಂತೆಯೇ ರಾಜನನ್ನು ನೋಡುತ್ತಿದ್ದಂತೆಯೇ ಹಿಡಿದುಕೊಳ್ಳಿ ಕಟ್ಟಿಹಾಕಿ ಇವನ ಹತ್ತಿರ ಏನೇನಿದೆ ಎಲ್ಲವೂ ತೆಗೆದುಕೊಳ್ಳಿ ಎಂದು ಕೇಳಿತು ಇದನ್ನು ನೋಡಿದ ರಾಜನು ನಾನು ಬೇರೆ ಮನೆಗೆ ಬಂದಿದ್ದೇನೆ ಎಂದು ಹೆದರಿ ಆಚೆ ಬಂದನು.
ನಂತರ ಇನ್ನೂ ಸ್ವಲ್ಪ ದೂರದಲ್ಲಿ ಹೋದಾಗ ಅಲ್ಲಿಯೂ ಕೂಡ ಒಂದು ಒಳ್ಳೆಯ ಚಿಕ್ಕ ಮನೆ ಇತ್ತು ಇಲ್ಲಿ ಏನಾದರೂ ಕುಳಿತುಕೊಳ್ಳಬಹುದೆ ಅಥವಾ ವಿಶ್ರಮಿಸಿ ಕೊಳ್ಳಬಹುದು ಎಂದು ಯೋಚನೆ ಮಾಡಿ ನಿಧಾನವಾಗಿ ಮನೆ ಒಳಗೆ ಹೋಗುತ್ತಿದ್ದಂತೆಯೇ ಒಂದು ಗಿಳಿ ಬನ್ನಿ ಒಳಗಡೆ ಬನ್ನಿ ಕುಳಿತುಕೊಳ್ಳಿ ಅಲ್ಲಿ ನೀರಿದೆ ನೀರನ್ನು ಕುಡಿಯಿರಿ ಸ್ವಲ್ಪ ಸಮಯ ವಿಶ್ರಮಿಸಿಕೊಳ್ಳಿ ನಮ್ಮ ಗುರುಗಳು ಬರುತ್ತಾರೆ ಎಂದು ಮೃದುವಾಗಿ ಪ್ರೀತಿಯಿಂದ ಹೇಳುತ್ತಿತ್ತು.
ಪ್ರೀತಿಯ ಮಾತುಗಳನ್ನು ಕೇಳಿದ ರಾಜನಿಗೆ ಮಹಾ ಆಶ್ಚರ್ಯವಾಯಿತು ಅದಕ್ಕೆ ರಾಜನು ವಿಶ್ರಮಿಸಿದ ನಂತರ ಗುರುಗಳು ಬಂದರು ಗುರುಗಳು ಕೂಡ ರಾಜರನ್ನು ಭೋಜನವನ್ನು ನೀಡಿದರು ಆಗ ರಾಜರಿಗೆ ಒಂದು ಸಂದೇಹ ಬಂತು ಗುರುಗಳಿಗೆ ಕೇಳಿದರು ನಾನು ಬರಬೇಕಾದರೆ ಇನ್ನೊಂದು ಮನೆ ಒಳಗೆ ಪ್ರವೇಶಿಸುತ್ತಿದ್ದಂತೆ ಒಂದು ಗಿಳಿಯು ಹಿಡಿರಿ ಕಟ್ಟುಹಾಕಿ ಎಲ್ಲವೂ ಎತ್ತಿಕೊಳ್ಳಿ ಎಂದು ಹೇಳಿತು.
ಆ ಮನೆಯಿಂದ ನಾನು ಆಚೆ ಬಂದೆ ಇಲ್ಲಿ ಬಂದಾಗ ಈ ಗಿಳಿಯು ಹೇಳಿತು ವಿಶ್ರಮಿಸಿಕೊಳ್ಳಿ ಕುಳಿತುಕೊಳ್ಳಿ ನೀರು ಕುಡಿಯಿರಿ ಈ ಗಿಳಿಗೂ ಆ ಗಿಳಿಗೂ ಏನು ವ್ಯತ್ಯಾಸ ಎಂದು ಕೇಳಿದರು ಆಗ ಗುರುಗಳು ಹೇಳಿದರು ಆ ಗಿಳಿ ಈ ಗಿಳಿ ಎರಡೂ ಒಂದೇ ಗಿಳಿಗಳು ಅಣ್ಣತಮ್ಮಂದಿರು ನಾನು ಬರಬೇಕಾದರೆ ಎರಡು ಗಿಳಿಯನ್ನು ನಾನು ತಂದೆ ಇನ್ನೊಂದು ಗಿಳಿಯನ್ನು ಅಪಹರಿಸಿಕೊಂಡು ಒಂದು ಗಿಳಿಯನ್ನು ಕಳ್ಳ ಸಾಕುತ್ತಿದ್ದಾನೆ ಅದಕ್ಕೆ ಕಳ್ಳ ಏನೇನು ಹೇಳುತ್ತಿದ್ದನೋ ಅದನ್ನೇ ಅದು ಅನುಕರಣೆ ಮಾಡಿ ಹೇಳುತ್ತಿದೆ.
ನಾನು ಇಲ್ಲಿ ಏನೇನು ಹೇಳಿದ್ದೀನೋ ಅದನ್ನೇ ಅನುಕರಣೆ ಮಾಡಿ ಹೇಳುತ್ತದೆ ಎಂದು ಹೇಳಿದರು ಹೌದಲ್ಲವೇ ನಾವು ಮನೆಯಲ್ಲಿ ನಾವು ಹೇಗೆ ಇರುತ್ತೀವಿ ಅನ್ನುವುದು ಮುಖ್ಯ ನಮ್ಮಂತೆಯೇ ನಮ್ಮ ಮಕ್ಕಳು ನಮ್ಮನ್ನು ಅನುಕರಣೆ ಮಾಡುತ್ತಿರುತ್ತಾರೆ ಸಾಧ್ಯವಾದಷ್ಟು ಸಕರಾತ್ಮಕ ವರ್ತನೆಗಳಿಂದ ವರ್ತಿಸೋಣ.
ಇದೇ ವೇಗದಲ್ಲಿ ಹೋದರೆ
ಹಳ್ಳಿಯಲ್ಲಿ ಒಂದು ಗುರುಕುಲ ಇರುತ್ತದೆ ಅಲ್ಲಿ ಹಲವಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡಿಕೊಂಡು ಇರ್ತಾರೆ ಈ ಆಶ್ರಮವನ್ನು ನೋಡಲು ಹಲವಾರು ಭಕ್ತಾದಿಗಳು ಇತರರು ಬಂದು ಹೋಗುತ್ತಿರುತ್ತಾರೆ ಅದರಲ್ಲಿ ಒಬ್ಬ ವಿದ್ಯಾರ್ಥಿ ಬಂದು ಗುರುಗಳಿಗೆ ಒಂದು ಪ್ರಶ್ನೆಯನ್ನು ಕೇಳುತ್ತಾನೆ ಬುದ್ಧಿ ಎಂದರೆ ಏನು? ಜ್ಞಾನ ಎಂದರೆ ಏನು? ಇದನ್ನು ನಾವು ಹೇಗೆ ಉದಾಹರಣೆ ಮೂಲಕ ತಿಳಿಯಬಹುದು ಎಂದು ಕೇಳುತ್ತಾನೆ ಗುರುಗಳು ಇವರ ಪ್ರಶ್ನೆಯನ್ನು ಕೇಳಿ ತುಸು ನಕ್ಕು ಆಚೆ ಒಂದು ದೊಡ್ಡ ಮರವಿದೆ ಆ ಮರದ ಕೆಳಗೆ ಹಿರಿಯರು ಕುಳಿತುಕೊಂಡಿದ್ದಾರೆ ಅವರಿಗೆ ನೀನು ಪಕ್ಕದ ಊರಿಗೆ ಹೋಗಬೇಕಾದರೆ ಎಷ್ಟು ಸಮಯ ಬೇಕಾಗುತ್ತದೆ ಎಂದು ಕೇಳಿಕೊಂಡು ಬಾ ಎಂದು ಕಳಿಸುತ್ತಾರೆ.
ಗುರುಗಳು ಹೇಳಿದಂತೆ ವಿದ್ಯಾರ್ಥಿ ಆಚೆ ಹೋಗಿ ನೋಡಿದಾಗ ಮರದ ಕೆಳಗೆ ಒಬ್ಬ ಹಿರಿಯರು ಕುಳಿತುಕೊಂಡಿದ್ದಾರೆ ಅವರಿಗೆ ಹೋಗಿ ವಿದ್ಯಾರ್ಥಿ ಕೇಳುತ್ತಾನೆ ಪಕ್ಕದ ಊರಿಗೆ ಹೋಗಲು ಎಷ್ಟು ಸಮಯ ಸಮಯವಾಗುತ್ತದೆ ಎಂದು ಕೇಳಿದರೆ ಹಿರಿಯರು ಮಾತನಾಡುವುದಿಲ್ಲ.
ಸ್ವಲ್ಪ ಸಮಯದ ನಂತರ ಮತ್ತೊಂದು ಒಂದು ಸಾರಿ ಕೇಳುತ್ತಾನೆ ಇದೇ ಪ್ರಶ್ನೆ ಮತ್ತೆ ಕೇಳುತ್ತಾನೆ ಮಾತನಾಡುವುದಿಲ್ಲ ಬಹಳಷ್ಟು ಸಾರಿಯೂ ಇದೇ ಪ್ರಶ್ನೆಯನ್ನು ಕೇಳಿದಾಗ ಆ ಹಿರಿಯ ವ್ಯಕ್ತಿ ಈ ವಿದ್ಯಾರ್ಥಿಯನ್ನು ಬರಿ ನೋಡುತ್ತಾರೆ ಅಷ್ಟೆ ನಂತರ ಆವಿದ್ಯಾರ್ಥಿ ಹಿರಿಯರಿಗೆ ಕೇಳುವುದರಿಂದ ಏನೂ ಪ್ರಯೋಜನವಿಲ್ಲ ಎಂದು ಮನಸ್ಸಿನಲ್ಲಿ ಬಯ್ಯುತ್ತಾ ಹೋಗುತ್ತಾನೆ.
ಆಗ ಹಿರಿಯರು ಕರೆದು ನೀನು ಕೇಳಿದ ಊರಿಗೆ ಹೋಗಲು ಹದಿನೈದು ನಿಮಿಷಗಳು ಆಗುತ್ತದೆ ಎಂದು ಹೇಳುತ್ತಾರೆ ಆಗ ಆ ವಿದ್ಯಾರ್ಥಿ ಹೇಳುತ್ತಾನೆ ಹಿರಿಯರೇ ನೀವು ಇಷ್ಟು ದೂರ ಹೋದ ಮೇಲೆ ನನಗೆ ಇಷ್ಟು ಸಮಯದಲ್ಲಿ ನಾನು ತಲುಪಬಹುದು ಎಂದು ಹೇಗೆ ಹೇಳಿದ್ದೀರಿ ಎಂದಾಗ ಈಗ ನನಗೆ ತಿಳಿದಿದೆ.
ನೀನು ಇದೇ ವೇಗದಲ್ಲಿ ಹೋದರೆ ಸರಿಯಾಗಿ ಹದಿನೈದು ನಿಮಿಷಕ್ಕೆ ಹೋಗಿ ಸೇರಬಹುದು ಎಂದು ಹೇಳಿದರು ಆಗ ಇವನು ಕೇಳಿದ ಪ್ರಶ್ನೆಗೆ ಉತ್ತರ ತಿಳಿಯಿತು ಹಾಗೆಯೇ ಕೆಲವೊಂದನ್ನು ನಾವು ಯಾವುದನ್ನೂ ನೋಡದೆ ಗ್ರಹಿಸದೆ ಹಿರಿಯರು ಪರಿಶೀಲನೆ ಮಾಡದೆ ಹೇಳಲಿಕ್ಕೆ ಸಾಧ್ಯವಿಲ್ಲ
ವಿದ್ಯಾರ್ಥಿ ಇದೆ ಮಾತನ್ನು ಆವಾಗಲೇ ಹೇಳಬಹುದಾಗಿತ್ತಲ್ಲಾ ಎಂದಾಗ ಹಿರಿಯರು ಹೇಳುತ್ತಾರೆ ನಿನ್ನ ನಡಿಗೆಯನ್ನು ನಾನು ನೋಡೇ ಇಲ್ಲ ನೀನು ಎಷ್ಟು ವೇಗವಾಗಿ ನಡೆಯುತ್ತಿರೋ ಎಷ್ಟು ನಿಧಾನವಾಗಿ ನಡೆಯುತ್ತಿರೋ ಎಂದು ನನಗೇ ಈಗ ತಿಳಿದಿದೆ ಜ್ಞಾನ ಎಂದರೆ ಅದರ ಬಗ್ಗೆ ಮಾಹಿತಿ ಇರುತ್ತದೆ ಬುದ್ದಿ ಎಂದರೆ ಪ್ರಾಯೋಗಿಕವಾಗಿ ಎಷ್ಟು ಸಮಯಕ್ಕೆ ತಲುಪಬಹುದು ಎಂದು ನಿಖರವಾಗಿ ಹೇಳಬಹುದಾಗಿದೆ ಎಂದು ಹೇಳಿದರು. ವಿದ್ಯಾರ್ಥಿಯು ಉದಾಹರಣೆಯೊಂದಿಗೆ ಅರ್ಥ ಮಾಡಿಕೊಂಡನು.
ನನ್ನ ನಿಜ ಸ್ಥಿತಿ
ಒಂದು ಊರಿನ ಆಚೆ ನೀತಿವಂತ ಗುರುಗಳು ಒಂದು ವಿಶಾಲವಾದ ಆಶ್ರಮ ಕಟ್ಟಿಕೊಂಡು ಇರುತ್ತಾರೆ ಅಲ್ಲಿ ಹಲವಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡಿಕೊಂಡು ಇರುತ್ತಾರೆ ಹಾಗೆ ಕೆಲವು ಭಕ್ತಾದಿಗಳು ಕೂಡ ಆಗಾಗ ಬರುತ್ತಿರುತ್ತಾರೆ ಕಾಲ ಕಳೆದಂತೆ ಗುರುಗಳಿಗೂ ವಯಸ್ಸಾಗುತ್ತ ಬರುತ್ತದೆ.
ಆಶ್ರಮದಲ್ಲಿ ಇದ್ದ ಕೆಲವು ಶಿಷ್ಯರು ನಮಗೆ ಕೊನೆಯತನಕ ನೆನಪಿರುವಂತಹ ಯಾವುದಾದರೂ ಒಂದು ಸಂದೇಶವನ್ನು ಕೊಡಿ ಎಂದು ಕೇಳುತ್ತಾರೆ ಆಗ ಗುರುಗಳು ಮುಗುಳ್ನಗುತ್ತಾ ನಾನು ಈಗ ಕೊಡುವುದಿಲ್ಲ ನಾನು ಸತ್ತ ನಂತರ ನಿಮಗೆ ಸಂದೇಶಗಳನ್ನು ಕೊಡುತ್ತೀನಿ ಎಂದು ಹೇಳುತ್ತಾರೆ.
ಕೆಲವು ತಿಂಗಳುಗಳ ನಂತರ ಗುರುಗಳು ಸ್ವರ್ಗಸ್ತರಾಗುತ್ತಾರೆ ನಂತರ ಎಲ್ಲಾ ಶಿಷ್ಯರು ಹೇಳುತ್ತಾರೆ ಏನಾದರೂ ಸಂದೇಶ ನಮಗೆ ಬಿಟ್ಟು ಹೋಗಿರುತ್ತಾರೆ ಅದನ್ನು ನಾವು ಪಡೆಯೋಣ ಎಂದು ನಂತರ ಎಲ್ಲ ಕಡೆಯೂ ಹುಡುಕುತ್ತಾರೆ ಎಲ್ಲೂ ಸಿಗುವುದಿಲ್ಲ ನಂತರ ಕೈಯನ್ನು ನೋಡಿದಾಗ ಮುಷ್ಟಿಯಲ್ಲಿ ಏನೋ ಇರುತ್ತದೆ ಅದನ್ನು ಬಿಚ್ಚಿ ನೋಡಿದಾಗ ಎಡಗೈಯಲ್ಲಿ ಒಂದು ಚೀಟಿ ಬಲಗೈಯಲ್ಲಿ ಒಂದು ಚೀಟಿ ಇರುತ್ತದೆ.
ಒಂದು ಚೀಟಿಯಲ್ಲಿ ಈ ಜಗತ್ತೇ ನಿನಗಾಗಿ ನಿರ್ಮಿಸಲಾಗಿದೆ ಎರಡನೇ ಚೀಟಿಯಲ್ಲಿ ನೀನು ಏನೂ ಇಲ್ಲ ಎಂದು ಬರೆದಿತ್ತು 2 ಚೀಟಿಗಳನ್ನು ನೋಡಿದಾಗ ಗೊಂದಲವಾಯಿತು ಶಿಷ್ಯರಿಗೆ ಏನು ಮಾಡುವುದು ಎಂದು ಅರ್ಥವಾಗಲಿಲ್ಲ ಒಂದರಲ್ಲಿ ಈ ಜಗತ್ತೇ ನಿನಗಾಗಿ ನಿರ್ಮಿಸಲಾಗಿದೆ.
ಮತ್ತೊಂದು ಚೀಟಿಯಲ್ಲಿ ಏನೂ ಇಲ್ಲ ನಂತರ ಆ ಎರಡೂ ಚೀಟಿಗಳನ್ನು ತಿರುಗಿಸಿ ನೋಡಿದಾಗ ಅದರಲ್ಲಿ ಹೀಗೆ ಬರೆದಿತ್ತು ಏನೂ ಇಲ್ಲ ಎಂಬುದರ ಅರ್ಥ ಏನಿದಿಯೋ ಅದೇ ಸತ್ಯ ಇನ್ನೊಂದು ಚೀಟಿಯ ಹಿಂದೆ ಹೀಗೆ ಬರೆದಿತ್ತು ಏನು ಬೇಕಾದರೂ ಸಾಧಿಸಬಹುದು.
ಏನೂ ಇಲ್ಲ ಎನ್ನುವುದು ಸತ್ಯ ಸಂಗತಿ ಅದರಲ್ಲಿ ಯಾವುದೇ ರೀತಿಯ ವಿಶೇಷತೆ ಇಲ್ಲ ಆದರೆ ಇನ್ನೊಂದು ಚೀಟಿಯಲ್ಲಿರುವುದು ನೀನು ಏನು ಬೇಕಾದರೂ ಸಾಧಿಸಬಹುದಾಗಿದೆ ಎಂದು ನಿನ್ನ ಪ್ರಯತ್ನದಿಂದ, ಅಭ್ಯಾಸದಿಂದ, ಛಲದಿಂದ ಏನು ಬೇಕಾದರೂ ಸಾಧಿಸಬಹುದು ಎಂದು ಬರೆದಿತ್ತು.
ನಾವು ಕೂಡ ಅಷ್ಟೇ ಏನೂ ಇಲ್ಲ ಎಂದು ಕುಳಿತರೆ ಏನು ಮಾಡಲಿಕ್ಕೂ ಸಾಧ್ಯವಿಲ್ಲ ಹಾಗೆ ಸಾಧ್ಯವಾಗುತ್ತದೆ ಎಂದು ಪ್ರಯತ್ನಿಸಿದರೆ ಏನು ಬೇಕಾದರೂ ಸಾಧನೆ ಮಾಡಬಹುದಾಗಿದೆ ಸರಿಯಾದ ಸಾಧನೆಯನ್ನು ಆಯ್ಕೆಮಾಡಿ ಯಶಸ್ವಿಯಾಗೋಣ.
ಹಳೆಯದನ್ನು ಮರೆತರೆ
ಒಂದೂರಿನಲ್ಲಿ ಒಂದು ಯುವಕ ಇರುತ್ತಾನೆ ಅವನು ಊರಿನ ಆಚೆ ಪಾಳು ಜಾಗಗಳಲ್ಲಿ ಧ್ಯಾನ ಸಕ್ತನಾಗಿ ಕುಳಿತಿರುತ್ತಾನೆ ಮತ್ತೆ ಭಿಕ್ಷೆ ಬೇಡುವುದಿಲ್ಲ ಏನೋ ಕಾಡಿನಿಂದ ತಂದು ಮಾರಿ ಅಲೆಮಾರಿ ಜೀವನದ ತರ ಎಲ್ಲೋ ಹೋಗಿ ಎಲ್ಲೋ ಬಂದು ನಂತರ ಊರಿನ ಆಚೆ ಯಾವುದಾದರೂ ಮರವಿದ್ದರೆ ಆ ಮರದ ಕೆಳಗೆ ಕುಳಿತು ದೀರ್ಘವಾಗಿ ಯಾವಾಗಲೂ ಯೋಚಿಸುತ್ತಿರುತ್ತಾನೆ.
ಯಾರಾದರೂ ಬಲವಂತವಾಗಿ ಏನನ್ನಾದರೂ ಕೊಟ್ಟರೆ ಯುವಕ ತಿನ್ನುತ್ತಾನೆ ಆದರೆ ಯಾವುದೇ ಕಾರಣಕ್ಕೂ ಯಾರ ಹತ್ತಿರವೂ ಬೇಡುವವನಲ್ಲ ಇವನನ್ನು ನೋಡಿದ ಊರಿನವರು ತುಂಬ ಗೌರವದಿಂದ ಕಾಣುತ್ತಾರೆ ಮತ್ತೆ ಸಮಯ ಸಿಕ್ಕಾಗಲೆಲ್ಲ ಊರಿಗೆ ಒಳ್ಳೆಯದನ್ನು ಮಾಡುತ್ತಿದ್ದನು.
ಒಂದು ಸಾರಿ ರಾಜನು ಊರಿನ ಸಂಚಾರ ಮಾಡುತ್ತಿದ್ದಾಗ ಈ ಯುವಕನು ಅಲ್ಲೆ ದೀರ್ಘವಾಗಿ ಧ್ಯಾನಮಗ್ನನಾಗಿ ಕುಳಿತಿದ್ದನು ಇದನ್ನು ನೋಡಿದ ರಾಜನು ಮಂತ್ರಿಗೆ ಕೇಳುತ್ತಾನೆ ಇವನು ಯಾರು ಆಗ ಇವನ ಬಗ್ಗೆ ಇರುವ ವಿಷಯಗಳನ್ನು ವಿವರಿಸುತ್ತಾರೆ.
ಆಗ ರಾಜನು ಇವನನ್ನು ನಾನು ಪರೀಕ್ಷಿಸುತ್ತೇನೆ ಎಂದು ಒಂದು ಪ್ರಶ್ನೆಯನ್ನು ಕೇಳುತ್ತಾನೆ ಯುವಕನು ದೀರ್ಘವಾಗಿ ಯೋಚಿಸಿ ಅದಕ್ಕೆ ಸರಿಯಾದ ಸಲಹೆ ನೀಡುತ್ತಾನೆ ಸಲಹೆಯಿಂದ ಸಂತಸಗೊಳ್ಳುತ್ತಾರೆ ನಂತರ ಮತ್ತೆ ಕೆಲವು ದಿನಗಳ ನಂತರ ಇನ್ನೊಂದು ಪ್ರಶ್ನೆಯನ್ನು ಯುವಕನಿಗೆ ಕೇಳಿದಾಗ ಯುವಕನು ದೀರ್ಘವಾಗಿ ಯೋಚಿಸಿ ಅದನ್ನು ಎಲ್ಲಿ ಯಾವಾಗ ಹೇಗೆ ಅದು ಆಗಲು ಕಾರಣವೇನು ಇನ್ನು ಮುಂದೆ ಏನು ಮಾಡಬೇಕಾಗಿದೆ ಹೀಗೆ ಎಲ್ಲವನ್ನು ವಿವರವಾಗಿ ಬಿಡಿಸಿ ಹೃದಯಕ್ಕೆ ತಾಗುವಂತೆ ಮನಸ್ಸಿಗೆ ಹಿಡಿಸುವಂತೆ ಹೇಳುತ್ತಾನೆ.
ರಾಜನಿಗೆ ತುಂಬ ಆಶ್ಚರ್ಯವಾಗುತ್ತದೆ ಮತ್ತೆ ಒಂದು ಉಡುಗೊರೆಯಾಗಿ ಕೆಲವು ನಾಣ್ಯಗಳನ್ನು ಕೊಡುತ್ತಾರೆ ನಂತರ ನಾಣ್ಯಗಳನ್ನು ಊರಿನವರ ಸಮಸ್ಯೆ ಪರಿಹರಿಸಲು ನೀಡುತ್ತಾನೆ ಹೀಗೆ ರಾಜನ ಗೌರವಕ್ಕೆ ಪಾತ್ರನಾಗುತ್ತಾನೆ.
ಮತ್ತೆ ಕೆಲವು ದಿನಗಳ ನಂತರ ರಾಜನೇ ಬಂದು ಈ ಯುವಕನನ್ನು ಮಾತನಾಡಿ ಯುವಕನಿಗೆ ನೀವು ದಯವಿಟ್ಟು ನಮ್ಮ ಅರಮನೆಯಲ್ಲಿ ಇದ್ದರೆ ಕೆಲವು ಒಳ್ಳೆಯ ಕೆಲಸಗಳು ಆಗುತ್ತವೆ ಎಂದು ನಾನು ಯೋಚಿಸಿದ್ದೇನೆ ಅದರಂತೆ ನೀವು ಬರಬೇಕು ಎಂದು ರಾಜರು ವಿನಂತಿಸಿಕೊಳ್ಳುತ್ತಾರೆ.
ಯುವಕನು ಯೋಚನೆಮಾಡಿ ಒಪ್ಪಿಕೊಳ್ಳುತ್ತಾನೆ ಮತ್ತೆ ಅರಮನೆಯಲ್ಲಿಯೇ ಇವನಿಗಾಗಿ ಒಂದು ಕೊಠಡಿಯನ್ನು ಏರ್ಪಾಡು ಮಾಡುತ್ತಾರೆ ಅರಮನೆ ಎಂದರೆ ಕೇಳಬೇಕೆ ವೈಭವದಿಂದ ಕೂಡಿರುತ್ತದೆ ಅಲ್ಲಿಯ ರೀತಿ ನೀತಿ ರಿವಾಜುಗಳು ಬೇರೆ ಬೇರೆ ಎಲ್ಲರ ನಡುವಳಿಕೆ ಗಮನಿಸುತ್ತಾನೆ ಅಲ್ಲಿಯ ಪರಿಸ್ಥಿತಿಗೆ ಹೇಗೆ ಇರಬೇಕು ಹಾಗೆಯೇ ಇರುತ್ತಾನೆ.
ಈ ಯುವಕ ಹೀಗೆಯೇ ಸ್ವಲ್ಪ ದಿನದಲ್ಲಿಯೇ ರಾಜನಿಂದ ಮೆಚ್ಚುಗೆ ಗಳಿಸಿರುತ್ತಾನೆ ರಾಜನಿಗಂತೂ ಯುವಕನನ್ನು ದಿನಕ್ಕೆ ಒಂದು ಸಾರಿ ನೋಡಲಿಲ್ಲ ವೆಂದರೆ ಏನೋ ಕಳೆದುಕೊಂಡಂತೆ ಚಡಪಡಿಸುತ್ತಾನೆ. ಇದನ್ನು ಗಮನಿಸಿದ ಕೆಲವರು ಹೊಟ್ಟೆಕಿಚ್ಚಿನಿಂದ ಯುವಕನ ಬಗ್ಗೆ ಚಾಡಿ ಹೇಳಲು ಆರಂಭಿಸುತ್ತಾರೆ. ಯುವಕ ನಂಬಿಕೆಗೆ ಯೋಗ್ಯನಲ್ಲ ಎಂದು ಬಹಳಷ್ಟು ವಿಧದಲ್ಲಿ ಹೇಳುತ್ತಾರೆ.
ಯುವಕನಿಗೆ ಕೊಟ್ಟಿರುವ ಕೊಠಡಿಯಲ್ಲಿ ಹತ್ತು ನಿಮಿಷ ಬಾಗಿಲು ಹಾಕಿಕೊಂಡು ಯಾರೂ ನೋಡದಂತೆ ಬರುತ್ತಾನೆ ಇದೇ ವಿಷಯ ಇಟ್ಟುಕೊಂಡು ರಾಜನಿಗೆ ಹೇಳುತ್ತಾರೆ ದಿನನಿತ್ಯವೂ ಯುವಕನು ಅರಮನೆಯಿಂದ ಸ್ವಲ್ಪ ದೂರದಲ್ಲಿ ಹೋಗಿ ಇದ್ದು ಬರುತ್ತಾನೆ ಮತ್ತೆ ಇತರರು ನಮ್ಮ ರಾಜ್ಯದ ಆಗು ಹೋಗುಗಳು ಸಂಚು ಹೂಡುತ್ತಿದ್ದಾರೆ. ಯುವಕ ಮಾತ್ರ ಆ ಕೊಠಡಿಗೆ ಹೋಗಿ ಹತ್ತು ನಿಮಿಷ ಕುಳಿತು ಬರುತ್ತಾನೆ.
ರಾಜನು ಇದನ್ನು ನೋಡಿದ ನಂತರ ನೇರವಾಗಿ ಯುವಕನ ಕೊಠಡಿ ಹತ್ತಿರ ಹೋಗಿ ಒಂದು ಸರಿ ಗಮನಿಸುತ್ತಾನೆ ಅದರಂತೆ ಇವನು ಬಾಗಿಲನ್ನು ತೆರೆಯುತ್ತಾನೆ ಅಲ್ಲಿ ಯಾರೂ ಇರುವುದಿಲ್ಲ ಎಲ್ಲವನ್ನೂ ಪರೀಕ್ಷಿಸುತ್ತಾನೆ ಯಾರು ಇಲ್ಲವೆಂದರೆ ನಂತರ ಕೋಣೆಯ ಬಾಗಿಲು ಕತ್ತಲೆ ಇರುವ ಕಡೆ ಯುವಕನು ಹೋಗಿ ಕುಳಿತುಕೊಳ್ಳುತ್ತಾನೆ.
ರಾಜ ಗಮನಿಸುತ್ತಿಲ್ಲವೆಂದು ಯುವಕನು ತಿಳಿದಿರುತ್ತಾನೆ ಯುವಕನು ಅವನ ಕೊಠಡಿಯಲ್ಲಿ ಕುಳಿತು ಕೊಳ್ಳುತ್ತಾನೆ ಇದನ್ನು ನೋಡಿದ ರಾಜನಿಗೆ ಸಂಶಯ ಇನ್ನೂ ಹೆಚ್ಚಾಯಿತು ಏನಾದರಾಗಲಿ ಹೋಗಿ ನೋಡೋಣ ಎಂದು ಬಾಗಿಲು ತಗೆಯಿರಿ ಎಂದು ರಾಜನು ಗಡಸು ಧ್ವನಿಯಲ್ಲಿ ಹೇಳುತ್ತಾನೆ.
ಯುವಕ ಬಾಗಿಲು ತೆಗೆಯುತ್ತಾನೆ ಕೊಠಡಿಯ ಒಳಗೆ ನೋಡಿದರೆ ಕೊಠಡಿಯಲ್ಲಿ ಯುವಕನ ಒಂದು ಹಳೆಯ ಹರಿದುಹೋಗಿರುವ ಬಟ್ಟೆ ಯಾರಾದರೂ ಭಿಕ್ಷೆ ಕೊಟ್ಟರೆ ಅದರಲ್ಲಿ ತಿನ್ನುವುದಕ್ಕೆ ಪಾತ್ರೆ ಒಂದು ಕಂಬಳಿ ಒಂದು ಚೀಲ ಇರುತ್ತವೆ.
ದಿನನಿತ್ಯ ಇಲ್ಲಿ ಬಂದು ಹತ್ತು ನಿಮಿಷ ಪ್ರಾರ್ಥನೆ ಮಾಡಿ ಹೋಗುತ್ತೇನೆ ಎಂದಾಗ ರಾಜ ಹೇಳುತ್ತಾನೆ ದಿನನಿತ್ಯ ಈ ಕೊಠಡಿಗೆ ಏಕೆ ಬರುತ್ತೀಯಾ ಎಂದು ಕೇಳಿದಾಗ ಯುವಕನು ವಿವರಿಸುತ್ತಾನೆ ಮಹಾರಾಜರೇ ಇದು ನನ್ನ ನಿಜವಾದ ಮತ್ತು ಶಾಶ್ವತವಾದ ನನ್ನ ಇರುವಿಕೆ ಈಗ ನಾನು ಒಂದು ದೊಡ್ಡ ಅರಮನೆಯಲ್ಲಿ ಇದ್ದು ಎಲ್ಲ ಸುಖವನ್ನು ಅನುಭವಿಸುತ್ತಿದ್ದೇನೆ.
ನಾನು ಹಳೆಯದನ್ನು ಮರೆತರೆ ನನಗೆ ಅಧಿಕಾರದ ನಶೆ ಬರಬಹುದು ಅದಕ್ಕಾಗಿ ನಾನು ಹಳೆಯದನ್ನು ಮರೆಯಬಾರದು ಎಂದು ನನ್ನ ನಿಜ ಸ್ಥಿತಿಯನ್ನು ಅರಿತು ಕೊಂಡು ಹೋಗಲು ದಿನನಿತ್ಯ ಬರುತ್ತೇನೆ ಎಂದು ಹೇಳುತ್ತಾನೆ. ನಾವು ಎಷ್ಟೇ ಉತ್ತಮ ಸ್ಥಿತಿಗೆ ತಲುಪಿದರೂ ನಾವು ನಡೆದು ಬಂದ ದಾರಿ ಸದಾ ನೆನಪಿನಲ್ಲಿಡೋಣ.