ಒಬ್ಬ ಮಧ್ಯಮ ವರ್ಗದ ಮನುಷ್ಯ ಕುದುರೆ ಗಾಡಿ ಓಡಿಸಿ ತನ್ನ ಜೀವನವನ್ನು ನಡೆಸುತ್ತಿದ್ದನು. ತನ್ನ ಕುದುರೆ ಸತ್ತ ನಂತರ ಬೇರೊಂದು ಕುದುರೆ ತಂದನು ಗಾಡಿಗೆ ಕಟ್ಟಿದ ಆದರೆ ಆ ಕುದುರೆ ಮುಂದೆ ಹೋಗುವ ಬದಲು ಹಿಂದೆಯೇ ಹೋಗುತ್ತಿತ್ತು.
ಹೊಸದಾಗಿ ತಂದ ಕುದುರೆಗೆ ಹೊಡೆದನು ಬೆದರಿಸಿದನು ಏನೇ ಮಾಡಿದರೂ ಕುದುರೆ ಹಿಂದಕ್ಕೆ ಹೋಗುತ್ತಿತ್ತು ಆಗ ಒಬ್ಬರು ಹಿರಿಯರು ಕುದುರೆಗೆ ಎದುರು ಕಾಣುವಂತೆ ಸ್ವಲ್ಪ ಹುಲ್ಲನ್ನು ಕಟ್ಟು ಹುಲ್ಲಿನ ಆಸೆಗಾಗಿ ಕುದುರೆಯು ಓಡುತ್ತದೆ ಎಂದು ಉತ್ತಮ ಸಲಹೆ ನೀಡಿದರು.
ಕುದುರೆಯ ಮುಂದೆ ಹುಲ್ಲು ಕಟ್ಟಿದ ನಂತರ ಕುದುರೆಯು ಓಡಲು ಆರಂಭಿಸಿತು ಆಗ ಮತ್ತೊಂದು ಹಿರಿಯ ಅನುಭವಿ ಕುದುರೆಯು ಹೇಳಿತು ಸುಮ್ಮನೆ ಏಕೆ ಓಡುತ್ತೀಯ ಹುಲ್ಲು ನಿನಗೆ ಸಿಗುವುದಿಲ್ಲ ಎಂದಾಗ ಈಗ ಬಂದಿರುವ ಕುದುರೆ ನಿನಗೆ ಓಡಲು ಶಕ್ತಿ ಇಲ್ಲ ಅದಕ್ಕೆ ನೀನು ಹೊಟ್ಟೆ ಕಿಚ್ಚಿನಿಂದ ಹೇಳುತ್ತಿದ್ದೀಯ ಎಂದು ವ್ಯಂಗವಾಗಿ ಉತ್ತರ ನೀಡಿತು.
ಹಿರಿಯ ಕುದುರೆ ಏನು ಮಾತನಾಡದೆ ಸುಮ್ಮನಾಯ್ತು ಅದೇ ರೀತಿ ಕೆಲವು ವಿಷಯಗಳ ಹಿಂದೆ ನಿರಂತರವಾಗಿ ಓಡುವುದು ನಿಂತಿಲ್ಲ ಓಡಿಸುತ್ತಿರುವವರು ಯಾರು ಎಲ್ಲಿಗೆ ಓಡುತ್ತಿದ್ದೇವೆ ಏಕೆ ಓಡುತ್ತಿದ್ದೇವೆ ಇದರಿಂದ ಲಾಭವೇನು ಎಂದು ಕೆಲವು ಸಾರಿ ವಿಚಾಲಿಸುವುದೇ ಇಲ್ಲ ಆದರೂ ನಿರಂತರವಾಗಿ ಓಡುತ್ತಲೇ ಇದ್ದೇವೆ.
ನಿಸರ್ಗದಿಂದ ಏನೇನು ಕಲಿಯಬಹುದು
ಒಬ್ಬ ಮನುಷ್ಯನಿಗೆ ಬಾಯಾರಿಕೆಯಾಗುತ್ತದೆ ನೀರು ಕುಡಿಯಲೆಂದು ಸಾಗರಕ್ಕೆ ಹೋಗುತ್ತಾನೆ ನೀರನ್ನು ಕುಡಿದಾಗ ಉಪ್ಪು ಉಪ್ಪಾಗಿರುತ್ತದೆ ಹಾಗಾಗಿ ಥೂ ಎಂದು ನೀರನ್ನು ಉಗಿಯುತ್ತಾನೆ. ಸಾಗರಕ್ಕೆ ಬೈಯುತ್ತಾನೆ ಆಗ ಸಾಗರವು ವಿನಮ್ರತೆಯಿಂದ ಹೇಳಿತು. ಮನುಷ್ಯ ನೀನು ಎಲ್ಲಿ ಏನು ನೋಡಬೇಕು ಎಂದು ನಿನಗೆ ಗೊತ್ತಿದೆಯೇ ಎಂದಾಗ ಮನುಷ್ಯನು ಸೊಕ್ಕಿನಿಂದ ನನಗೆ ಎಲ್ಲವೂ ತಿಳಿದಿದೆ ಎಂದು ದುರಾಂಕಾರದಿಂದ ಹೇಳಿದ.
ಸಾಗರ ಹೇಳಿತು ನೀನು ಸಿಹಿ ನೀರು ಕುಡಿಯಬೇಕಾದರೆ ಹರಿಯುವ ನದಿಗೆ ಕೆರೆಗೆ ಜಲಾಶಯಕ್ಕೆ ಅಥವಾ ಬಾಯಿಗೆ ಹೋಗಬೇಕಾಗಿತ್ತು ಅದು ಬಿಟ್ಟು ಇಲ್ಲೇಕೆ ಬಂದೆ ಎಂದಾಗ ಮನುಷ್ಯನು ನೀನು ಏಕೆ ಇದ್ದೀಯ ಎಂದು ಸಿಟ್ಟಿನಿಂದ ಹೇಳಿದ ನಿನ್ನ ಪ್ರಯೋಜನವೇನು ಎಂದು ಕೇಳಿದನು.
ಸಾಗರವು ನಗುತ್ತಾ ಹೇಳಿತು ಸಿಹಿನೀರಿನ ನದಿಗಳಿಗೆ ಸಮುದ್ರಗಳಿಗೆ ಮೂಲ ನಾನೇ ಅಸಂಖ್ಯಾ ಜಲಚರಗಳಿಗೆ ಆಶ್ರಯ ನೀಡಿದ್ದೇನೆ ಉಪ್ಪು ನೀರಾಗಿದ್ದೇನೆ ಅಷ್ಟೇ ಆದರೆ ನನ್ನ ಆಳ ಅಗಲ ವಿಸ್ತಾರ ದೊಡ್ಡ ದೊಡ್ಡ ಅಲೆಗಳು ಅಷ್ಟೇ ಗಾಂಭೀರ್ಯವಿದೆ.
ಸಾಗರ ಎಷ್ಟೇ ತುಂಬಿರದು ತುಂಬಲಾರದು ಮತ್ತೆ ಎಷ್ಟೇ ಖಾಲಿ ಮಾಡಿದರು ಖಾಲಿಯಾಗದು ಒಂದು ಸಾರಿ ಉಕ್ಕಿದರೆ ಬೇಕಾದಷ್ಟು ಅನಾಹುತವಾಗುತ್ತದೆ. ಮಾನವ ನೀನು ಬರಿ ಎಲ್ಲದರಲ್ಲೂ ದೋಷವನ್ನೇ ಹುಡುಕುವ ಸ್ವಭಾವ ಬಿಡು ನನ್ನ ವೈಭವವನ್ನು ನೋಡಿ ಸಂತೋಷ ಪಡುವ ದೃಷ್ಟಿ ಬೆಳಸಿಕೊ ಎಂದು ಹೇಳಿತು.
ನಿನ್ನ ಮನವು ನನ್ನಂತೆ ವಿಶಾಲತೆಯಿಂದ ತುಂಬಿರಲಿ ಅದು ಸರಿ ಇಲ್ಲ ಇದು ಸರಿಯಿಲ್ಲ ಎನ್ನುವುದು ತಪ್ಪಲ್ಲವೇ ಅರ್ಥವಾಗದೆ ಇರುವುದನ್ನು ಬೈಯುವುದು ಸರಿಯಲ್ಲ. ಪ್ರತಿಯೊಂದಕ್ಕೂ ಅದರದೇ ಗುಣ, ರಹಸ್ಯ ಮಹತ್ವ ಇರುತ್ತದೆ. ನಿಸರ್ಗದ ನಿಯಮವೇ ಹೀಗೆ ಒಂದು ಪ್ರಾಣಿಗೆ ಸಾಧ್ಯವಾದುದು ಅದೇ ಬೇರೆ ಪ್ರಾಣಿಗೆ ಸಾಧ್ಯವಿಲ್ಲ ಒಂದು ಪಾಣಿ ಇದ್ದ ಹಾಗೆ ಇನ್ನೊಂದು ಪ್ರಾಣಿ ಇರುವುದಿಲ್ಲ.
ಒಂದು ವಿಷಯ ಸುಲಭವಾದುದು ಮತ್ತೊಂದು ವಿಷಯ ಕಷ್ಟವಾಗುತ್ತದೆ ಪಕ್ಷಿ ಆಕಾಶದಲ್ಲಿ ಹಾರುತ್ತದೆ ಮೀನಿಗೆ ಸಾಧ್ಯವಿಲ್ಲ. ನಾವು ಬೈಯುವುದನ್ನು ಚೆನ್ನಾಗಿ ಕಲಿತಿದ್ದೇವೆ ಆದರೆ ಅರ್ಥಮಾಡಿಕೊಳ್ಳುವುದನ್ನು ಅಷ್ಟಾಗಿ ಕಲಿತಿಲ್ಲ. ಅರ್ಥಮಾಡಿಕೊಂಡಿದೆ ಆದರೆ ನಮಗೆ ಪ್ರತಿಯೊಂದು ವಸ್ತುವಿನಿಂದ ನಾವು ಕಲಿಯಬಹುದಾಗಿದೆ ಎಂದು ಸಾಗರ ಹೇಳಿತು.
ನಿಸರ್ಗವು ನಮಗೆ ಬಹಳನ್ನು ತಿಳಿಸುತ್ತದೆ ನಾವು ಎಷ್ಟೇ ಕಲಿತರೂ ತಿಳಿದಿದ್ದರೂ ನಾವು ಸಾಗರದಿಂದ ನಮ್ಮ ಬೊಗಸೆಯಲ್ಲಿ ಎಷ್ಟು ನೀರು ಎತ್ತುವುದಕ್ಕೆ ಸಾಧ್ಯವೋ ಅಷ್ಟು ಮಾತ್ರ ಜ್ಞಾನಗಳಿಸಬಹುದು. ತಿಳಿದುಕೊಳ್ಳಬೇಕಾಗಿರುವುದು ಸಾಗರದಷ್ಟು ಇದೆ ನಿಸರ್ಗದಿಂದ ಸದಾ ಕಲಿಯುತ್ತಿರೋಣ.
ಬದುಕು ಎಂದರೇನು?
ಒಬ್ಬ ವಿದ್ಯಾವಂತ ಯುವಕ ಬಾಬಾ ಅವರ ಬಳಿ ಬಂದು ತನ್ನ ಕಷ್ಟ ಗಳೆಲ್ಲವೂ ಹಂಚಿಕೊಳ್ಳುತ್ತಾನೆ ನಂತರ ಬದುಕು ಎಂದರೇನು ಎಂದು ಕೇಳುತ್ತಾನೆ. ಆಗ ಬಾಬಾ ಅವರು ಬದುಕನ್ನು ನಿಖರವಾಗಿ ಲೆಕ್ಕಾಚಾರದಂತೆ ಹೇಳಲು ಸಾಧ್ಯವಿಲ್ಲ. ಬದುಕನ್ನು ಪ್ರತಿಯೊಬ್ಬರು ಅವರ ಅಭಿಪ್ರಾಯದಂತೆ ಹೇಳುತ್ತಾರೆ ಪ್ರೀತಿ, ಶಾಂತಿ, ಹಠ, ಛಲ, ಗುರಿ, ಧರ್ಮ, ಭಕ್ತಿ, ಇತ್ಯಾದಿ.
ಹಸಿದವನು ತನ್ನ ಪಾಲಿಗೆ ಅನ್ನ ಸಿಕ್ಕರೆ ಸಾಕು ಎಂದು ಬೇಡಿಕೊಳ್ಳುತ್ತಾನೆ. ನಿರುದ್ಯೋಗಿ ನನಗೆ ಕೆಲಸ ಸಿಕ್ಕಿದರೆ ಸಾಕು ಎಂದು ಯೋಚಿಸುತ್ತಿರುತ್ತಾನೆ ಶ್ರೀಮಂತರು ತಮ್ಮ ಮೋಜಿಗಾಗಿ ಹಲವಾರು ಕಡೆ ಸುತ್ತುತ್ತಿರುತ್ತಾರೆ ಅವರವರ ಆಲೋಚನೆಯಂತೆ ಬದುಕನ್ನು ಸಮರ್ಥಿಸುತ್ತಾರೆ.
ಬದುಕೆನ್ನುವುದು ಸುಂದರವಾದ ಅನುಭವ. ಪ್ರತಿದಿನ, ಪ್ರತಿ ಗಂಟೆ, ಪ್ರತಿ ನಿಮಿಷ ಎಲ್ಲವೂ ಅಮೂಲ್ಯ. ಇವೆಲ್ಲವೂ ಹಿಂತಿರುಗಿ ಬರುವುದಿಲ್ಲ. ಒಮ್ಮೆ ಕಳೆದರೆ ಮುಗಿಯಿತು. ಆದ್ದರಿಂದಲೇ ಪ್ರತಿ ಕ್ಷಣದ ಬದುಕು ನವ ನವೀನ ಹೀಗೆಯೇ ನಮ್ಮ ಬದುಕು ಅನಿಶ್ಚಿತ ಕೂಡಾ. ಮುಂದಿನ ಕ್ಷಣ ಏನೆಂದು ಯಾರಿಗೂ ತಿಳಿಯದು. ಈ ಕ್ಷಣವೇ ಪರಮ ಪವಿತ್ರ.
ಈ ಕ್ಷಣವನ್ನು ಸಂಪೂರ್ಣ ಅನುಭವಿಸುವುದೇ ಬದುಕು. ಸಂಘರ್ಷ, ಮನಸ್ತಾಪ, ಕೋಪ, ದ್ವೇಷ ಇವುಗಳನ್ನು ಕಡಿಮೆ ಮಾಡುತ್ತಾ ಪ್ರೀತಿ, ಸೌಹಾರ್ದ, ಸಹಾಯ, ಕಾರುಣ್ಯ, ಮತ್ತು ಹಸನ್ಮುಖ ಇವುಗಳನ್ನು ನೆನಪಿನಲ್ಲಿಟ್ಟುಕೊಂಡು ಬದುಕುವುದೇ ಸಾರ್ಥಕ ಜೀವನ.
ನಮ್ಮ ಚಿಂತನೆ ಸಕಾರಾತ್ಮಕವಾಗಿದ್ದರೆ ಆ ಕ್ಷಣದಲ್ಲಿ ಚೈತನ್ಯ ಮೂಡುತ್ತದೆ ಇಲ್ಲವಾದರೆ ನಿರಾಸೆ ನಮ್ಮದಾಗುತ್ತದೆ. ಕಷ್ಟ, ನೋವು, ನಿರಾಸೆ, ದುಃಖ ಎಲ್ಲವು ಎಲ್ಲರಿಗೂ ಇದೆ. ಆದರೆ, ಅವುಗಳ ಮಧ್ಯೆ ಸಂತೋಷದಿಂದ, ತೃಪ್ತಿಯಿಂದ ಬದುಕುವುದೇ ಬದುಕ್ಕು ಎಂದು ಹೇಳಿದರು.
ಏಕೆ ಈ ತಾರತಮ್ಮ
ಒಂದು ಹಳ್ಳಿಯಲ್ಲಿ ಇಬ್ಬರು ವ್ಯಾಪಾರಿಗಳಿದ್ದರು ಒಬ್ಬ ಪ್ರಾಣಿಗಳನ್ನು ಮಾರುವುದು ಇನ್ನೊಬ್ಬ ಚರ್ಮದ ವ್ಯಾಪಾರಿ ಪ್ರಾಣಿಗಳ ವ್ಯಾಪಾರಿಯೂ ತುಂಬಾ ಶ್ರೀಮಂತನಾಗಿರುತ್ತಾನೆ. ಚರ್ಮದ ವ್ಯಾಪಾರಿ ಸಾಧಾರಣವಾಗಿರುತ್ತಾನೆ. ಒಂದು ಸಾರಿ ಇಬ್ಬರು ವ್ಯಾಪಾರಿಗಳು ಸಂತೆಗೆ ಹೋಗುವ ದಾರಿಯಲ್ಲಿ ಒಂದು ಆಶ್ರಮ ಇರುತ್ತದೆ.
ಆಶ್ರಮದಲ್ಲಿ ಬಾಬಾ ಅವರು ಇರುತ್ತಾರೆ ಇಬ್ಬರು ವ್ಯಾಪಾರಿಗಳು ಬಾಬಾ ಅವರ ಆಶೀರ್ವಾದವನ್ನು ಪಡೆಯಬಹುದು ಹಾಗೆಯೇ ಸ್ವಲ್ಪ ವಿಶ್ರಾಂತಿ ಪಡೆದು ಹೋಗೋಣ ಎಂದು ಯೋಚಿಸಿ ಇಬ್ಬರು ಬಾಬಾ ಅವರ ಬಳಿಗೆ ಹೋಗಿ ನಮಸ್ಕರಿಸುತ್ತಾರೆ. ಬಾಬಾ ಅವರು ಇಬ್ಬರಿಗೂ ಮಾತನಾಡಿಸಿ ಬಾಬಾ ಅವರು ಊಟದ ಸಮಯವಾಗಿದೆ.
ಹಾಗಾಗಿ ಇಲ್ಲೇ ಊಟ ಮಾಡಿಕೊಂಡು ಹೋಗಿ ಎಂದು ಚರ್ಮದ ವ್ಯಾಪಾರಿಯನ್ನು ಒಳಗಡ ಕರೆದುಕೊಂಡು ಹೋಗಿ ಊಟದ ಎಲೆ ಹಾಕಿ ಒಳ್ಳೆಯ ಭೋಜನವನ್ನು ನೀಡುತ್ತಾರೆ. ಪ್ರಾಣಿಗಳ ವ್ಯಾಪಾರಿಯನ್ನು ಆಚೆಯೇ ಕೂರಿಸಿ ಅಲ್ಲಿಯೇ ಸಾಧಾರಣ ಊಟವನ್ನು ನೀಡುತ್ತಾರೆ ಪ್ರಾಣಿಗಳ ವ್ಯಾಪಾರಿ ಸಾಧಾರಣ ಊಟವನ್ನು ಮಾಡಿದ ನಂತರ ಬಾಬಾ ಅವರಿಗೆ ಕೇಳುತ್ತಾನೆ.
ಬಾಬಾ ಅವರೇ ನಾನು ವ್ಯಾಪಾರಿಯೆ ಅವನು ವ್ಯಾಪಾರಿಯೆ ಅವನಿಗೆ ಒಳಗಡೆ ಕರೆದುಕೊಂಡು ಹೋಗಿ ಒಳ್ಳೆಯ ಭೋಜನವನ್ನು ನೀಡಿದ್ದೀರಿ ನನಗೆ ಆಚೆ ಕೂರಿಸಿ ಸಾಮಾನ್ಯ ಭೋಜನವನ್ನು ನೀಡಿದ್ದೀರಿ ಏಕೆ ಈ ತಾರತಮ್ಮ ದಯವಿಟ್ಟು ತಿಳಿಸಿ ಎಂದು ಪ್ರಾಣಿಗಳ ವ್ಯಾಪಾರಿ ಕೇಳಿದನು.
ಆಗ ಬಾಬಾ ಅವರು ನಗುತ್ತಾ ಚರ್ಮದ ವ್ಯಾಪಾರಿಯೂ ನನ್ನ ಹಳ್ಳಿಯಲ್ಲಿ ಯಾವುದೇ ಪ್ರಾಣಿಗಳು ಸಾಯದಿರಲಿ ಪ್ರಾಣಿಗಳು ಸಾಯದಿದ್ದರೆ ಚರ್ಮಗಳು ಕಡಿಮೆ ಯಾಗುತ್ತವೆ ಆಗ ನನ್ನಲ್ಲಿ ಇರುವಂತಹ ಚರ್ಮಗಳಿಗೆ ಬೇಡಿಕೆ ಹೆಚ್ಚಾಗುತ್ತದೆ ಎಂದು ಯೋಚಿಸುತ್ತಾನೆ.
ನೀನು ಬೇಗ ಪ್ರಾಣಿಗಳು ಸತ್ತರ ಪ್ರಾಣಿ ಖರೀದಿ ಮಾಡಲು ನನ್ನ ಹತ್ತಿರ ಬರುತ್ತಾರೆ ಎಂದು ನೀನು ದಿನನಿತ್ಯ ಪ್ರಾರ್ಥನೆ ಮಾಡುತ್ತೀಯಾ ಅದಕ್ಕಾಗಿ ನಿನಗೆ ಸಾಧಾರಣ ಊಟ ಚರ್ಮದ ವ್ಯಾವಾರಿಗೆ ಒಳ್ಳೆಯ ಆತಿತ್ಯ ನೀಡಿದ್ದೇನೆ ಎಂದು ಹೇಳುತ್ತಾರೆ.
ನಾಟಕವೇ ಬೇರೆ ಜೀವನವೇ ಬೇರೆ
ಒಂದು ಊರಿನಲ್ಲಿ ಪ್ರತಿ ವರ್ಷವೂ ನಾಟಕ ನಡೆಯುತ್ತಿತ್ತು. ಆ ನಾಟಕ ನೋಡಲು ತುಂಬಾ ದೊಡ್ಡ ದೊಡ್ಡ ವ್ಯಕ್ತಿಗಳು ಬರುತ್ತಿದ್ದರು ನಾಟಕದವರು ತಮ್ಮ ಪಾತ್ರವನ್ನು ತುಂಬಾ ಚೆನ್ನಾಗಿ ಹಾಸ್ಯಮಯವಾಗಿ ಅಭಿನಯಿಸುತ್ತಿದ್ದರು.
ಈ ನಾಟಕ ರಾಜಕೀಯಕ್ಕೆ ಸಂಬಂಧಪಟ್ಟಿರುತ್ತದೆ ಇನ್ನೇನು ನಾಟಕ ಆರಂಭವಾಗಬೇಕು ಆದರೆ ನಾಟಕದಲ್ಲಿನ ಮುಖ್ಯ ಪಾತ್ರಧಾರಿ ಮುಖ್ಯಮಂತ್ರಿಯ ಪಾತ್ರ ಮಾಡುವವನು ಕಾರಣಾಂತರದಿಂದ ಬರಲಿಲ್ಲ. ಆಗ ನಾಟಕದವರು ಚಿಂತೆಯಲ್ಲಿ ಮುಳುಗಿದರು ಏನು ಮಾಡಬೇಕೆಂದು ತೋಚಲಿಲ್ಲ ನಂತರ ಅದೇ ನಾಟಕದಲ್ಲಿ ಇದ್ದ ಕಿರಿಯ ನಟ ಅವನು ಎಲ್ಲವನ್ನು ಗ್ರಹಿಸುತ್ತಿದ್ದನು ಹಾಗಾಗಿ ಕಿರಿಯ ನಟನನ್ನು ಪಾತ್ರ ಮಾಡಲು ಹೇಳಿದರು.
ಕಿರಿಯ ನಟನು ಬಹಳಷ್ಟು ಸಾರಿ ನಾಟಕ ಗಮನಿಸಿದ್ದನು ಕಿರಿಯ ನಟನಿಗೆ ಸುವರ್ಣ ಅವಕಾಶ ಸಿಕ್ಕಿತು ಮುಖ್ಯಮಂತ್ರಿಯ ಪಾತ್ರವನ್ನು ತುಂಬಾ ಉತ್ಸಾಹದಿಂದ ಅಭಿನಯಿಸಿದನು. ಇವನ ಅಭಿನಯಕ್ಕೆ ಬಹಳಷ್ಟು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದರು.
ನಾಟಕ ಮುಗಿದ ಮೇಲೆ ಕಿರಿಯ ನಟ ಅಂದರೆ ಮುಖ್ಯಮಂತ್ರಿ ಪಾತ್ರ ಮಾಡಿದವನು ಸಪ್ಪಗೆ ಇದ್ದನು ಇದನ್ನು ನೋಡಿದ ನಾಟಕದ ಮಾಲೀಕರು ಯಾಕಪ್ಪ ನೀನು ಸಪ್ಪಗೆ ಇದ್ದೀಯ ಎಂದು ಕೇಳಿದಾಗ ನಾನು ಇನ್ನೂ ನಾಟಕದ ನಶೆಯಲ್ಲಿ ಇದ್ದೇನೆ ನನ್ನ ಪಾತ್ರ ನಾಟಕದಲ್ಲಿ ನಾನು ಚಿಟಿಕೆ ಹಾಕಿದರೆ ಸಾಕು ಎಲ್ಲರೂ ಓಡೋಡಿ ಬರುತ್ತಿದ್ದರು.
ಈಗ ನಾನು ಎಲ್ಲರ ಮಾತು ಕೇಳಬೇಕಾಗಿದೆ ಎಂದು ಇರುವ ಸತ್ಯವನ್ನು ಹೇಳಿದ. ಆಗ ನಾಟಕದ ಮಾಲೀಕರು ಪ್ರೀತಿಯಿಂದ ನಾಟಕವೇ ಬೇರೆ ಜೀವನವೇ ಬೇರೆ ನಾಟಕ ಎಷ್ಟೇ ವಿಸ್ತಾರವಾಗಿದ್ದರು ಅದು ಮುಗಿಯುತ್ತದೆ ಆದರೆ ಜೀವನ ಯಾವುದೇ ಕಾರಣಕ್ಕೂ ನಾವು ಇರುವವರಿಗೆ ಮುಗಿಯುವುದಿಲ್ಲ ನಮ್ಮ ಪಾತ್ರವನ್ನು ಅಭಿನಯಿಸುತ್ತಲೆ ಇರಬೇಕು ಎಂದು ಹೇಳಿದರು.