ನಾನೇ ದೂರ ನಿಂತು ಬಿಟ್ಟೆ

ಒಂದು ಸಾರಿ ಆನೆ ನದಿಯಲ್ಲಿ ಸ್ನಾನ ಮಾಡಿಕೊಂಡು ಸಂತೋಷವಾಗಿ ಬರುತ್ತಿತ್ತು ಆಗ ಅದೇ ದಾರಿಯಲ್ಲಿ ಮುಂದೆ ಒಂದು ಹಂದಿ ಕೊಳಕು ನೀರಿನಲ್ಲಿ ಈಜಾಡಿಕೊಂಡು ಬರುತ್ತಿತ್ತು ಇದನ್ನು ಗಮನಿಸಿದ ಆನೆ ನಿಧಾನವಾಗಿ ನಡೆಯಲು ಆರಂಭಿಸಿತು.

 ಹಂದಿ ಇದನ್ನು ಆನೆ ನಿಧಾನವಾಗಿ ಬರುತ್ತಿರುವುದನ್ನು ಗಮನಿಸಿ ಆನೆಯೇ ನನಗೆ ಹೆದರಿಕೊಳ್ಳುತ್ತಿದೆ ಎಂದು ಹಿಗ್ಗಿ ಹಂದಿ ಮುಂದೆ ಬರತೊಡಗಿತು ನಂತರ ರಸ್ತೆ ಇಕಟ್ಟಾಯಿತು ಆಗ ಆನೆಯೇ ಹಂದಿಗೆ ದಾರಿ ಬಿಟ್ಟಿತು ಇದನ್ನು ನೋಡಿದ ಹಂದಿಗೆ ತುಂಬಾ ಸಂತೋಷವಾಯಿತು ಹಿಗ್ಗಿ ಹಿಗ್ಗಿ ಕುಣಿಯಿತು ನಂತರ ಹಂದಿಯ ಗುಂಪಿಗೆ ಹೋಗಿ ಹೇಳಿತು.

 ಇಂದು ನನಗೆ ಆನೆಯ ಹೆದರಿ ಹೋಗಿದೆ ಎಂದು ಹಂದಿಗಳು ಸಂತೋಷಪಟ್ಟವು ನಂತರ ಈ ಮಾತು ಆನೆಯ ಗುಂಪಿಗೂ ತಿಳಿಯಿತು ಆಗ ಅದರಲ್ಲಿ ಒಂದು ಆನೆ ಹೋಗಿ ಕೇಳಿತು ನೀನು ಹಂದಿಗೆ ಹೆದರಿ ಕೊಂಡೆ ಎಂದು ಹೇಳುತ್ತಿದ್ದಾರೆ ಇದು ನಿಜವೇ ಎಂದಾಗ ಆನೆ ಹೇಳಿತು.

  ಆನೆ ನಾನೇ ಅದಕ್ಕೆ ದಾರಿ ಬಿಟ್ಟೆ ನಾನು ಮನಸ್ಸು ಮಾಡಿದ್ದೆ ಆದರೆ ಸೊಂಡಲಿನಲ್ಲಿ ಎತ್ತಿ ಬಿಸಾಕಬಹುದಾಗಿತ್ತು ಅಥವಾ ನನ್ನ ಒಂದು ಕಾಲಿನಿಂದ ಓದಿದ್ದರೆ ಅದು ಎಲ್ಲೋ ಹೋಗಿ ಬೀಳುತ್ತಿತ್ತು ಆದರೆ ನಾನು ಹಾಗೆ ಮಾಡಲಿಲ್ಲ ಏಕೆಂದರೆ ಅದು ಮೊದಲೇ ಕೊಳಕು ನೀರಿನಲ್ಲಿ ಮೈಯಲ್ಲ ಕೊಳಕು ಮಾಡಿಕೊಂಡು ಬಂದಿದೆ ಅದರ ಕೊಳಕು ನನಗೆ ಅಂಟಬಾರದು.

 ಕೊಳಕರ ಸಹವಾಸ ನಮಗೆ ಬೇಡ ಕೊಳಕರರಿಂದ ದೂರ ಇರುವುದೇ ಒಳ್ಳೆಯದು ಎಂದು ಯೋಚನೆ ಮಾಡಿ ನಾನೇ ದೂರ ನಿಂತು ಬಿಟ್ಟೆ ಎಂದು ಹೇಳಿತು. ಆಗ ಎಲ್ಲಾ ಆನೆಗಳು ಇದು ಮಾಡಿದ್ದು ಸರಿ ಎಂದು ಅರ್ಥಮಾಡಿಕೊಂಡವು ಕೆಲವರನ್ನು ನೋಡಿದ ಕೂಡಲೇ ನಮಗೆ ಅರ್ಥವಾಗುತ್ತದೆ ಅವರಿಂದ ದೂರವಿರೋಣ.

 ಮೋಹ ಹೆಚ್ಚಾದರೆ

ಒಬ್ಬ ವ್ಯಕ್ತಿ ಆಫೀಸಿನಲ್ಲಿ ಮ್ಯಾನೇಜರ್ ಪೋಸ್ಟ್ ನಲ್ಲಿ ಕೆಲಸ ಮಾಡಿಕೊಂಡು ಇರುತ್ತಾರೆ ಇವನ ಕೆಲಸ ಏನೆಂದರೆ ಕಂಪೆನಿಯ ಎಲ್ಲ ಜವಾಬ್ದಾರಿಯನ್ನು ನೋಡಿಕೊಳ್ಳುವುದು ಹಾಗೆಯೇ ಯಾರನ್ನಾದರೂ ಕರೆಯಬೇಕಾದರೆ ಕರೆಗಂಟೆ ಒತ್ತಿದರೆ ಸಾಕು ಇತರರು ಬಂದು ಇವನ ಮುಂದೆ ಕೈಕಟ್ಟಿಕೊಂಡು ಕೇಳುತ್ತಾರೆ.

 ಏನು ಕೆಲಸ ಆಗಬೇಕು ಎಂದು ಕೇಳುತ್ತಾರೆ ಇದೇ ರೀತಿ ಹಲವಾರು ವರ್ಷಗಳು ನಡೆಯುತ್ತದೆ ಆದರೆ ನಾಳೆ ನಿವೃತ್ತಿ ಇದೆ ಎಂದಾಗ ಹಲವಾರು ಬಾರಿ ಕರೆ ಗಂಟೆಯನ್ನು ಒತ್ತುತ್ತಾರೆ ಆಗ ಅದೇ ರೀತಿ ಎಲ್ಲರೂ ಬರುತ್ತಾರೆ ಮತ್ತೆ ನಿಲ್ಲುತ್ತಾರೆ.

 ಏಕೆ ಇವತ್ತು ನೀವು ಹಲವಾರು ಬಾರಿ ಕರೆಗಂಟೆಯನ್ನು ಒತ್ತುತ್ತಿದ್ದೀರಿ ಎಂದು ಕೇಳುತ್ತಾರೆ ಆಗ ಮ್ಯಾನೇಜರ್ ಅಳುತ್ತಾ ಹೇಳುತ್ತಾನೆ ಇವತ್ತು ನನ್ನ ಕೊನೆಯ ದಿನ ಇಷ್ಟು ದಿನಗಳು ನೀವು ನಾನು ಗಂಟೆಯನ್ನು ಬಾರಿಸಿದರೆ ಬಂದು ನಿಂತು ಕೊಳ್ಳುತ್ತಿದ್ದೀರಿ ನಾಳೆ ನಾನು ಗಂಟೆ ಬಾರಿಸಲು ಸಾಧ್ಯವಿಲ್ಲ ಏನು ಮಾಡುವುದು ಎಂದು ಆತಂಕವಾಗುತ್ತಿದೆ ಎಂದು ತನ್ನ ಮನಸ್ಸಿನ ತಳಮಳ ಹೇಳುತ್ತಾರೆ.

ಒಬ್ಬ ಸೇವಕನಾದವನು ಏಕೆ ಚಿಂತೆ ಮಾಡುತ್ತೀರಿ ನಾವು ಮಾಲೀಕರಿಗೆ ಹೇಳಿ ಒಂದು ಕರೆಗಂಟೆಯನ್ನು ಬೀಳ್ಕೊಡುಗೆ ಸಮಾರಂಭದಲ್ಲಿ ಕೊಡುತ್ತೇವೆ ಮತ್ತೆ ಅದೇ ಕರೆಗಂಟೆಯನ್ನು ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳಿ ಆಗ ನಿಮ್ಮ ಮನೆಯವರ ಎಲ್ಲರೂ ಓಡೋಡಿ ಬಂದು ನಿಮ್ಮ ಸಹಾಯಕ್ಕೆ ನಿಲ್ಲುತ್ತಾರೆ ಎಂದು ಹೇಳುತ್ತಾನೆ ಮಾರನೆಯ ದಿನ ಮನೆಯಲ್ಲಿ ಎಲ್ಲರೂ ಇದ್ದಾಗ ಕರೆಗಂಟೆ ಬಾರಿಸಲು ಕೈಯೇ ಮುಂದೆ ಬರುವುದಿಲ್ಲ ಏನೋ ಆತಂಕ ಏನೋ ವೇದನೆ ಏನೋ ಕಳವಳ ಮನಸ್ಸಿನಲ್ಲಿ ತುಂಬಿ ಕೊಂಡಿರುತ್ತಾರೆ.

 ಕೊನೆಗೆ ಕಷ್ಟಪಟ್ಟು ಒಂದು ಸಾರಿ ಕರೆಗಂಟೆಯನ್ನು ಒತ್ತುತ್ತಾರೆ ಎಲ್ಲರೂ ಓಡೋಡಿ ಬರುತ್ತಾರೆ ಹೀಗೆ ಮತ್ತೆ ಮತ್ತೆ ಕರೆಗಂಟೆಯನ್ನು ಒತ್ತುತ್ತಾರೆ ಆಫೀಸಿನಲ್ಲಿ ಬರುವಂತೆ ಮನೆಯಲ್ಲಿ ಬರುತ್ತಾರೆಯೇ ಇಲ್ಲವಲ್ಲ ಇದನ್ನೆಲ್ಲಾ ಯೋಚನೆ ಮಾಡಿ ಕೊನೆಗೆ ಕೊನೆಯ ಒಂದು ಸಾರಿ ಕರೆಗಂಟೆ ಒತ್ತಿ ಹೃದಯಾ ಘಾತದಿಂದ ಸತ್ತು ಹೋಗುತ್ತಾರೆ.

 ನಂತರ ಹೆಂಡತಿ ಮಕ್ಕಳು ಎಲ್ಲರೂ ಬಂದು ನೋಡಿದಾಗ ಸತ್ತಿರುತ್ತಾರೆ ಇವರು ಸತ್ತಿದ್ದು ಮೋಹದಿಂದ ಮೋಹ ಇರಬೇಕು ಮೋಹಹೆಚ್ಚಾದರೆ ತುಂಬಾ ನರಕಯಾತನೆ ಅನುಭವಿಸಬೇಕಾಗುತ್ತದೆ.  ನಾನು ಯಾವುದಾದರೂ ಮೋಹಕ್ಕೆ ಸಿಲುಕಿಕೊಂಡಿದ್ದೇನೆಯೇ?

 ಸಹನೆ ನಿನ್ನ ಆರೋಗ್ಯಕ್ಕೆ ಒಳ್ಳೆಯದು

ಒಂದು ಊರಿನ ರಸ್ತೆಯಲ್ಲಿ ಒಂದು ಹಾವು ವಾಸವಾಗಿರುತ್ತದೆ ಅದು ಭಯಂಕರವಾಗಿ ವಿಷ ಕಾರುತ್ತಿರುತ್ತದೆ ಮತ್ತೆ ರಸ್ತೆಯಲ್ಲಿ ಹೋದವರನ್ನು ಬಸ್ ಬುಸ್ ಎಂದು ಹೆಡೆಯಿಂದ  ಹೆದರಿಸುತ್ತಿರುತ್ತದೆ ಆದುದರಿಂದ ಆ ರಸ್ತೆಯಲ್ಲಿ ಹೋಗಲು ಊರಿನ ಜನರು ಎಲ್ಲರೂ ಹೆದರುತ್ತಿದ್ದರು.

ಊರಿಗೆ ಋಷಿಗಳು ಬರುತ್ತಾರೆ ಆಗ ಊರಿನವರು ಇರುವ ಕಷ್ಟವನ್ನು ಹೇಳಿಕೊಳ್ಳುತ್ತಾರೆ ಆಗ ಋಷಿಗಳು ಹೋಗಿ ಆ ಹಾವನ್ನು ಮಾತನಾಡಿಸುತ್ತಾರೆ ನೀನು ಏಕೆ ಎಲ್ಲರಿಗೂ ತೊಂದರೆ ಕೊಡುತ್ತಿದ್ದೀಯಾ ಇನ್ನು ಮುಂದೆ ನೀನು ತೊಂದರೆ ಕೊಡಬೇಡ ಕೋಪ ಮಾಡಿಕೊಳ್ಳಬೇಡ ಹಾಗೆ ಸಹನೆಯನ್ನು ಕಲಿಯಬೇಕು.

 ಸಹನೆ ನಿನ್ನ ಆರೋಗ್ಯಕ್ಕೆ ಒಳ್ಳೆಯದು ಇಲ್ಲದಿದ್ದರೆ ನಿನ್ನನ್ನು ಎಲ್ಲರೂ ಸೇರಿ ಸಾಯಿಸಿ ಬಿಟ್ಟರೆ ಏನು ಮಾಡುತ್ತೀಯ ಎಂದು ಸಮಾಧಾನವಾಗಿ ಹೇಳುತ್ತಾರೆ ಇದನ್ನು ನಂಬಿ ಹಾವು ಯಾರಿಗೂ ತೊಂದರೆ ಕೊಡದೆ ತನ್ನ ಪಾಡಿಗೆ ತಾನು ಬದುಕುತ್ತಿರುತ್ತದೆ ಇದನ್ನು ತಿಳಿದ ಊರಿನವರು ಎಲ್ಲರೂ ಹಾವು ಇದ್ದರೂ ಹಾವನ್ನು  ನೋಡಿಕೊಂಡೇ ಹೋಗುತ್ತಿರುತ್ತಾರೆ.

 ಹಾವು ಏನು ಮಾಡುವುದಿಲ್ಲ ಅದೇ ರೀತಿ ಚಿಕ್ಕ ಚಿಕ್ಕ ಹುಡುಗರು ನಿಧಾನವಾಗಿ ನೋಡುತ್ತಾರೆ ನಂತರ ಕಲ್ಲನ್ನು ಎಸೆಯುತ್ತಾರೆ ಆಗಲು ಏನು ಮಾಡುವುದಿಲ್ಲ ಹಿಡಿದು ಎಳೆಯುತ್ತಾರೆ ಆಗಲೂ ಕಚ್ಚುವುದಿಲ್ಲ ನಂತರ ಹುಡುಗರು ಎಲ್ಲರೂ ಸೇರಿ ಆ ಹಾವನ್ನು ಇಲ್ಲಿಂದ ಅಲ್ಲಿಗೆ ಅಲ್ಲಿಂದ ಇಲ್ಲಿಗೆ ಎಸೆಯುತ್ತಿರುತ್ತಾರೆ ಈ ರೀತಿ ಮಾಡಿ ಇನ್ನೇನು ಸಾಯಬೇಕು ಆ ಸ್ಥಿತಿಯಲ್ಲಿ ಹಾವು ಇರುತ್ತದೆ.

 ಆಗ ಋಷಿಗಳು ಬಂದು ನೋಡಿದಾಗ ಹಾವಿನ ಸ್ಥಿತಿ ಚಿಂತಾಜನಕವಾಗಿರುತ್ತದೆ ಹಾವಿನ ಸ್ಥಿತಿಯನ್ನು  ನೋಡಿ ಹೇಳುತ್ತಾರೆ ಏಕೆ ಈ ಅವಸ್ಥೆ ನಿನಗೆ ಎಂದು ಕೇಳಿದಾಗ ಹಾವು ಹೇಳುತ್ತದೆ ನೀವು ಹೇಳಿದಿರಲ್ಲ ಅದಕ್ಕೆ ನಾನು ಸಿಟ್ಟು ಕೋಪ ಮಾಡಿಕೊಳ್ಳಲಿಲ್ಲಸಹನೆ ತೋರಿಸಿದ್ದೇನೆ ಎಂದಾಗ ಋಷಿಗಳು ಹೇಳುತ್ತಾರೆ.

 ನಾನು ನಿನಗೆ ಕಚ್ಚಬೇಡ ಅಂತ ಹೇಳಿದ್ದೆ ಆದರೆ ಬುಸುಗುಟ್ಟ ಬೇಡ ಎಂದು ಹೇಳಿಲ್ಲವಲ್ಲ ಕಚ್ಚಬಾರದು ಆದ್ರೆ ಬುಸುಗುಡಬೇಕು ಯಾಕೆಂದರೆ ಇದು ನಿನ್ನ ಪ್ರಾಣ ರಕ್ಷಣೆಗೆ ಬುಸುಗುಟ್ಟಿದರೆ ನಿನ್ನ ಹತ್ತಿರ ಯಾರೂ ಬರುವುದಿಲ್ಲ ಎಂದು ಹೇಳುತ್ತಾರೆ ಕೆಲವು ಕೆಲಸಗಳು ಆಗಬೇಕು ಎಂದರೆ ಕೋಪವನ್ನು ಪ್ರದರ್ಶಿಸೋಣ ಆದರೆ ಮನಸ್ಸಿನಲ್ಲಿ ಕೋಪ ಮಾಡಿಕೊಳ್ಳದೆ ಶಾಂತಿಯಾಗಿ ಇರೋಣ.

ಬರೀ ಸೂರ್ಯ ಮಾತ್ರ ಕಾಣಿಸಬೇಕು

 

ಬಬ್ಬ ಆಕರ್ಷಕ ಕುದುರೆಗಳನ್ನು ಮಾರುವವನು ಇರುತ್ತಾನೆ ದೇಶ ದೇಶಕ್ಕೆ ವಿದೇಶಕ್ಕೆ ಹೋಗಿ ಕುದುರೆಗಳನ್ನು ಮಾರುವುದು ಒಂದು ಕುದುರೆ ಇರುತ್ತದೆ ಆ ಕುದುರೆ ಮೇಲೆ ಇವನಿಗೆ ಜಂಬ ಏಕೆಂದರೆ ಆ ಕುದುರೆ ಮೇಲೆ ಇತರರು ಯಾರೂ ಕೂಡ ಸವಾರಿ ಮಾಡಲು ಸಾಧ್ಯವಿಲ್ಲ.

 ವಿಶೇಷ ಕುದುರೆ  ಪ್ರತಿ ರಾಜ್ಯದಲ್ಲೂ ಹೋಗಿ (ಚಾಲೆಂಜನ್ನು) ಸವಾಲು ನೀಡುತ್ತಿದ್ದನು ನಿಮಗೆ ತಾಕತ್ತು ಇದ್ದರೆ ಈ ಕುದುರೆಯನ್ನು ಪಳಗಿಸಿ ಕುದುರೆಯನ್ನು ಗೆಲ್ಲಿ ನಿಮ್ಮ ರಾಜ್ಯದಲ್ಲಿ ಈ ಕುದುರೆಯನ್ನು ಪಳಗಿಸುವವರು ಯಾರು ಇಲ್ಲವೇ? ಗೆಲ್ಲುವವರು ಯಾರು ಇಲ್ಲವೇ?  ಎಂದು ದುರಹಂಕಾರದಿಂದ ಹೇಳುತ್ತಿದ್ದನು ರಾಜ್ಯದಲ್ಲಿ ಇರುವ ಕುದುರೆ ಸವಾರರು ಕೇಳುತ್ತಿದ್ದರು.

 ಈ ಸವಾಲನ್ನು ಕೇಳಿ ಕುದುರೆ ಸವಾರರು ತಲೆ ತಗ್ಗಿಸಿ ಕೊಳ್ಳುತ್ತಿದ್ದರು ಇಂತಹ ದೇಶಕ್ಕೆ ನಾನು ಕುದುರೆಗಳನ್ನು ಮಾರಬೇಕೆ ಎಂದು ಜಂಬದಿಂದ ಹೇಳಿದನು ಇದನ್ನು ಕೇಳಿಸಿಕೊಳ್ಳುತ್ತಿದ್ದಂತೆ ಒಬ್ಬ ಹುಡುಗ ಸರಿಸುಮಾರು 14ವರ್ಷ ಅಥವಾ 15 ವರ್ಷ ಇರಬಹುದು ಆಗ ತನ್ನ ತಂದೆಯನ್ನು ಹೇಳುತ್ತಾನೆ ನಮ್ಮ ದೇಶಕ್ಕೆ ಸವಾಲನ್ನು ಎಸೆಯುತ್ತಿದ್ದಾನೆ.

 ಇಷ್ಟೊಂದು ಶೂರರು ಇದ್ದರೂ ಒಂದು ಕುದುರೆಯನ್ನು ಗೆಲ್ಲುತ್ತಿಲ್ಲವಲ್ಲ ಎಂದು ಆ ಹುಡುಗನಿಗೆ ಇದ್ದಕ್ಕಿದ್ದ ಹಾಗೆ ಶರೀರದಲ್ಲಿ ವಿದ್ಯುಚ್ಛಕ್ತಿ ಬಂತು ಆವೇಶದಿಂದ ಮಾತನಾಡಿದ್ದು ಅಷ್ಟೇ ಅಲ್ಲ ಎಲ್ಲರೂ ನೋಡುತ್ತಿದ್ದಂತೆಯೇ ಕುದುರೆಯ ಮೇಲೆ ಹಾರಿದ ಆ ಕುದುರೆ ಬೀಳಿಸಿತು ಎರಡನೇ ಸಾರಿಯೂ ಬೀಳಿಸಿತು ಮೂರನೇ ಸಾರಿಯೂ ಬೆಳೆಸಿತು.

 ಈ ಹುಡುಗ ಸೋಲುವವನಲ್ಲ ಎಷ್ಟು ಸರಿ ಬೀಳುತ್ತಿದ್ದರೂ ಮತ್ತೆ ಎದ್ದು ನಿಲ್ಲುತ್ತಿದ್ದನು ಸಮಯ ಸಂದರ್ಭ ನೋಡಿ ಬೆನ್ನಿನ ಮೇಲೆ ಲಗಾಮನ್ನು ಹಿಡಿದು ಕುಳಿತುಕೊಂಡು ಬಿಟ್ಟನು ಲಗಾಮನ್ನು ಬಿಗಿ ಮಾಡುತ್ತಿದ್ದಂತೆಯೇ ಸಾಕಿದ ಕುದುರೆಯಂತೆ ಈ ಹುಡುಗನ ಮಾತು ಕೇಳಲಾರಂಭಿಸಿತು.

ಎಲ್ಲಾ ಜನರು ಸಂತೋಷಪಟ್ಟರು ಕೊನೆಗೆ ತಂದೆಯಾದವನು ಮಗನೊಂದಿಗೆ ಅಪ್ಪಿಕೊಂಡನು ಆಗ ಅಪ್ಪ ಈ ಕುದುರೆಯನ್ನು ಹೇಗೆ ನಿನ್ನ ನಿಯಂತ್ರಣದಲ್ಲಿ ತಂದೆ ಎಂದು ಕೇಳಿದರು ಆಗ ಮಗ ಹೇಳಿದನು ಜಂಭದ ಕುದುರೆಗೆ ಅದರ ನೆರಳು ಕಾಣಿಸಬಾರದು ಅದಕ್ಕೆ ನಾನು ಕುದುರೆಯನ್ನು ಓಡಿಸಬೇಕಾದರೆ ನೆರಳು ಕುದುರೆಗೆ ಕಾಣಿಸದಂತೆ ಓಡಿಸಿದೆ.

ಕುದುರೆಗೆ ನಾನು ಬರೀ ಸೂರ್ಯ ಮಾತ್ರ ಕಾಣಿಸಬೇಕು ಆ ರೀತಿಯಾಗಿ ಮಾಡಿಕೊಂಡು ಕುದುರೆಯನ್ನು ಓಡಿಸಿದೆ ಅದಕ್ಕೆ ಯಾವುದೇ ರೀತಿಯ ನೆರಳು ನೋಡಲು ಸಿಗುತ್ತಿರಲಿಲ್ಲ ಆದರೆ ನನ್ನ ಕೈಯಲ್ಲಿ ಲಗಾಮು ಇರುವುದರಿಂದ ಅದು ತುಂಬ ಸುಲಭವಾಗಿ ನಿಯಂತ್ರಣಕ್ಕೆ ಬಂತು ಕುದುರೆಯ ದೌರ್ಬಲ್ಯವನ್ನು ಕಂಡುಹಿಡಿದೆ ಎಂದು ಹೇಳಿದನು.

 ಆಗ ತಂದೆಯವರು ನೀನು ಈ ದೇಶವನ್ನು ಅಲ್ಲದೆ ನೀನು ಜಗತ್ತನ್ನೇ ಗೆಲ್ಲುವೆ ಎಂದು ಆಶೀರ್ವದಿಸುತ್ತಾರೆ ಈ ಹುಡುಗನೇ ಅಲೆಗ್ಸಾಂಡರ್.

ಎಲ್ಲರಿಗೂ ಅಗಾಧ ಶಕ್ತಿ ಇದ್ದೆ ಇದೆ ಅಂಜದೆ ಯಾವುದೇ ಸಮಸ್ಯೆ ಸವಾಲು ಎದುರಾಗಲಿ ಧೈರ್ಯದಿಂದ ಎದುರಿಸೋಣ.

 ವಿಶೇಷವಾದ ಶಕ್ತಿ ಸಾಮರ್ಥ್ಯ ಇದೆ

ಹಲವಾರು ವರ್ಷಗಳ ಹಿಂದೆ ಹೈವೇ ರೋಡ್ ನಲ್ಲಿ ಟ್ರಾಫಿಕ್ ಜಾಮ್ ಆಗಿತ್ತು ಏನಾಗಿರಬಹುದು ಎಂದು ನೋಡಿದಾಗ ರಸ್ತೆಯಲ್ಲಿ ಹೋಗುತ್ತಿದ್ದ ಲಾರಿಯು ಏನೋ ಕಾರಣದಿಂದಾಗಿ ಬೆಂಕಿ ಹತ್ತಿ ಉರಿಯುತ್ತಿದೆ ಇದನ್ನು ಗಮನಿಸಿದ ಚಾಲಕನು ಜಂಪ್ ಮಾಡಿ ತಕ್ಷಣ ಬಂದು ಪೋಲಿಸರಿಗೆ ತಿಳಿಸಿದನು.

ತುಂಬಾ ಹತ್ತಿರವೇ ಇದ್ದ ಜನರು ಇದ್ದ ನೀರು ಮತ್ತೆ ಮರಳನ್ನು ತಂದು ಅಲ್ಪಸ್ವಲ್ಪ ಎಸೆದರು ಅಷ್ಟರಲ್ಲಿ ಅಗ್ನಿ ಶಾಮಕರವರು ಬಂದರೂ ಅವರು ನೀರಿನಿಂದ ಬೆಂಕಿಯನ್ನು ಆರಿಸಿದರು ದುರಾದೃಷ್ಟವಶಾತ್ ಅಷ್ಟೇನೂ ನಷ್ಟವಾಗಲಿಲ್ಲ ಆಗ ಲಾರಿ ಡ್ರೈವರ್ ನನ್ನು ಕರೆದು ಇದರಲ್ಲಿ ಏನಿದೆ ಹೇಳು ಎಂದು ಕೇಳಿದರು.

 ಆಗ ಡ್ರೈವರ್ ನನಗೆ ಗೊತ್ತಿಲ್ಲ ಸಾರ್ ಇದರಲ್ಲಿ ಏನಿರುತ್ತೋ ಏನೋ ನನಗೆ ಗೊತ್ತಾಗಲ್ಲ ನನ್ನ ಕೆಲಸ ಇಷ್ಟೇ ಲಾರಿಯನ್ನು ಕಂಪೆನಿಯಿಂದ ತೆಗೆದುಕೊಳ್ಳುತ್ತೇನೆ ಮತ್ತೆ ಎಲ್ಲಿಗೆ ಸಾಗಿಸಬೇಕು ಅಲ್ಲಿ ಸಾಗಿಸುತ್ತೇನೆ ಅಷ್ಟೇ ನನ್ನ ಕೆಲಸ.

ಒಂದು ಸಾರಿ ಬೀಗ ಹಾಕಿದ  ನಂತರ ಮತ್ತೆ ತೆರವುಗೊಳಿಸುವ ಕೆಲಸ ನನ್ನದಲ್ಲ ಆಗ ಪೋಲಿಸರು ಇದರಲ್ಲಿ ಏನಾದರೂ ಬೇರೆ ವಸ್ತುಗಳೇ ಇರಬಹುದು ಅನುಮಾನ ಬಂದು ಬೀಗ ತೆರೆವು ಗೊಳಿಸುತ್ತಾರೆ  ಲಾರಿಯಲ್ಲಿ ನೋಡಿದರೆ ಅಗ್ನಿ ಶಾಮಕದಳಕ್ಕೆ ಉಪಯೋಗಕ್ಕೆ ಬರುವಂತಹ ವಸ್ತುಗಳೇ ಇದ್ದವು.

 ಆಗ ಪೋಲಿಸಿನವರು ಹೇಳಿದರು ಈ ಕೆಲವು ವಸ್ತುಗಳನ್ನು ತೆಗೆದುಕೊಂಡು ನೀನು ತುಂಬ ಬೇಗ ಬೆಂಕಿಯನ್ನು ಆರಿಸಬಹುದಿತ್ತು ಎಂದರು ಆಗ ಚಾಲಕ ಹೇಳಿದ್ದು ಇಷ್ಟೇ ನನಗೆ ಅದೆಲ್ಲಾ ಗೊತ್ತಿಲ್ಲ ಲಾರಿಯಲ್ಲಿ ಏನಿದೆ ಎಂದು ನನಗೆ ಗೊತ್ತಿಲ್ಲ.

 ನನ್ನ ಕೆಲಸ ಅಷ್ಟೆ ಇಲ್ಲಿಂದ ಅಲ್ಲಿಗೆ ಹೋಗಿ ಆ ವಸ್ತುವನ್ನು ಕೊಡುವಂಥದು ಇಷ್ಟು ಮಾತ್ರ ನನ್ನ ಜವಾಬ್ದಾರಿ ಈ ಕೆಲಸವನ್ನು ಮಾತ್ರ ನಾನು ಮಾಡುತ್ತೇನೆ ಎಂದು ಹೇಳಿದನು.

 ಮಾಲೀಕರು ಹೇಳಿದ ಹಾಗೆ ನಾನು ಕೇಳುತ್ತೇನೆ ಅಷ್ಟೆ ಎಂದನು ಇದೇ ರೀತಿ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಂದು ವಿಶೇಷವಾದ ಶಕ್ತಿ ಸಾಮರ್ಥ್ಯ ಇದೆ ನೋಡಿ ಕೊಳ್ಳುವವರು ನಾವೇ ಆಗಬೇಕು ನಮ್ಮ ಶಕ್ತಿಗಳನ್ನು ತಿಳಿದುಕೊಂಡು ಅದನ್ನು ಉಪಯೋಗಿಸಿಕೊಂಡು ಯಶಸ್ವಿಯಾಗೋಣ.

Leave a Comment