ನಮ್ಮ ರಕ್ಷಣೆಗಾಗಿ ಸಮೀಪ ಇರೋಣ

ನಾವೆಲ್ಲರೂ ಒಂದಲ್ಲ ಒಂದು ಸಾರಿ ಬಸ್ಸಿನ ಹಿಂದಿನ ಸೀಟಿನಲ್ಲಿ ಕುಳಿತಿದ್ದೇವೆ ಅನುಭವವನ್ನು ಪಡೆದಿದ್ದೇವೆ ಇಲ್ಲದಿದ್ದರೆ ಒಂದು ಸಾರಿ ಕುಳಿತು ಅನುಭವಿಸಿ ಹಿಂದಿನ ಸೀಟಿನಲ್ಲಿ ಕುಳಿತರೆ ಹಳ್ಳ ದಿಣ್ಣೆಗಳು ಹಂವುಗಳು ಬಂದರೆ ಕೂತಿದ್ದವರು ಸ್ವಲ್ಪ ಜಂಪ್ ಮಾಡಿ ಮತ್ತೆ ಅದೇ ಸಿಟ್ಟಿನಲ್ಲಿ ಕುಳಿತುಕೊಳ್ಳುತ್ತೇವೆ.

  ತುಂಬಾ ವೇಗವಾಗಿ ಹೋಗುತ್ತಿದ್ದಾಗ ಸಡನ್)  ಆಗಿ ಬ್ರೇಕ್ ಹಾಕಿದ್ದಾಗ ಎದ್ವಾ ತದ್ವಾ ಪೆಟ್ಟಾಗಬಹುದು “ಆದ್ದರಿಂದ ಎಚ್ಚರಿಕೆಯಾಗಿ ಕುಳಿತುಕೊಳ್ಳಬೇಕು ಅದೇ ಬಸ್ಸಿನ ಡ್ರೈವರ್ ಸೀಟಿನ ಹಿಂದೆ ಅಥವಾ ಮಧ್ಯದಲ್ಲಿ ಕುಳಿತರೆ ಅಷ್ಟು ಜಂಪ್ ಆಗುವುದಿಲ್ಲ ನೆಮ್ಮದಿಯಾಗಿ ಸುಖ ಪ್ರಯಾಣ ಮಾಡಬಹುದು.

ಡ್ರೈವರ್ ನ ಸಮೀಪ ಇದ್ದವರು ನೆಮ್ಮದಿಯಾಗಿ ಇದ್ದರೆ ಅದೇ ಹಿಂದಿನ ಸೀಟಿನಲ್ಲಿ ಕುಳಿತವರು ಹೆದರಿಕೆಯಿಂದ ಎಚ್ಚರಿಕೆಯಿಂದ ಭಯದಿಂದ ಕೆಲವರು ತಮ್ಮ ನಿಲ್ದಾಣ ಬರುವವರೆಗೂ ಜೀವಭಯದಿಂದ ಭಗವಂತನನ್ನು ಪ್ರಾರ್ಥಿಸುತ್ತಲೇ ಇರುತ್ತಾರೆ ಅಲ್ಲವೇ ಹಾಗೆಯೇ ನಾವು ಗುರುಗಳ ಅಥವಾ ಭಗವಂತನ ಎಷ್ಟು ಸಮೀಪದಲ್ಲಿ ಇರುತ್ತೇವೆ ಅಷ್ಟೇ ಆರಾಮಾಗಿ ನೆಮ್ಮದಿಯಾಗಿ ಇರಬಹುದು. ಅದೇ ದೂರವಿದ್ದಷ್ಟು ಅಷ್ಟೇ ಎಚ್ಚರಿಕೆಯಿಂದ ಹೆದರಿಕೆಯಿಂದ ಇರಬೇಕು ನಮ್ಮ ರಕ್ಷಣೆಗಾಗಿ ಸಮೀಪ ಇರೋಣ.

 ಎರಡು ನಿಮಿಷಕ್ಕಾಗಿ ಗೋಗರೆದನು

ಒಂದು ಹಳ್ಳಿಯಲ್ಲಿ ಒಬ್ಬ ಮಹಾ ಜಿಪುಣ ಇದ್ದನು. ಆದರೆ ಅವನು ಜಿಪುಣ ಏಕೆ ಆದನು ಎಂದರೆ ಚಿಕ್ಕಂದಿನಲ್ಲಿ ಕಿತ್ತು ತಿನ್ನುವ ಬಡತನವಿತ್ತು ಆದುದರಿಂದ ಜಿಪ್ಪುಣನಿಗೆ ಹೇಗಾದರೂ ಮಾಡಿ ಹಣ ಗಳಿಸಬೇಕು ಎಂದು ಚಿಕ್ಕ ಚಿಕ್ಕ ವ್ಯಾಪಾರಗಳನ್ನು ಆರಂಭಿಸಿದ್ದನು.

ಜಿಪುಣ ಗಳಿಸಿದ ಹಣದಿಂದ ಜಿಪುಣ ಏನು ಅನುಭವಿಸುತ್ತಿರಲಿಲ್ಲ ಮತ್ತಷ್ಟು ಬೇಕು ಎಂದು ಸಾಧ್ಯವಾದಷ್ಟು ಹಣವನ್ನು ಗಳಿಸಿದ ನಂತರ ದೊಡ್ಡ ಮನೆಗಳನ್ನು ಬಿಲ್ಡಿಂಗ್ ಗಳನ್ನು ಕಟ್ಟಿಸಿದನು ಊರಿನಲ್ಲೇ ದೊಡ್ಡ ಶ್ರೀಮಂತನಾದ ಮತ್ತೆ ಯೋಚನೆ ಮಾಡಿದ ಇಷ್ಟು ದಿನ ನಾನು ಹಣವನ್ನು ದುಡಿದು ನಂತರ ನಾನು ಶ್ರೀಮಂತಿಕೆಯಿಂದ ಸುಖವಾಗಿ ಬದುಕುತ್ತೇನೆ ಎಂದು ಮನಸ್ಸಿನಲ್ಲಿ ಅಂದುಕೊಂಡನು.

ಬೆಳಿಗ್ಗೆಯಿಂದ ಸಾಕಷ್ಟು ಕೆಲಸ ಮಾಡಿ ಎಷ್ಟು ಗಳಿಕೆ ಮಾಡಿದ್ದೇನೆ ಎಂದು ಲೆಕ್ಕ ಹಾಕಿ ಮಲಗಿದ ನಂತರ ಅವನಿಗೆ ಏನೋ ಒಂದು ರೀತಿಯ ಆಯಾಸವಾಯಿತು ಯಾರೋ ಬಂದಂತೆ ಶಬ್ದವಾಯಿತು ಯಾರಿರಬಹುದು ಎಂದು ನಿಧಾನವಾಗಿ ಕಣ್ಣು ತೆರೆದು ನೋಡಿದರೆ ಜೀವ ತೆಗೆಯುವವನು ಯಮರಾಜ ಬಂದಿದ್ದಾನೆ.

ಯಮರಾಜ ಈಗ ನಿನ್ನ ಸಮಯ ಮುಗಿದಿದೆ ಬಾ ಹೋಗೋಣ ಎಂದಾಗ ಜಿಪುಣ  ಯಮನಿಗೆ ನೋಡಿ ಇಲ್ಲಿಯವರೆಗೂ ನಾನು ಅಲ್ಪಸ್ವಲ್ಪ ದುಡಿದಿದ್ದೇನೆ ಇನ್ಮೇಲೆ ಕೆಲವು ವರ್ಷಗಳು ಹಾಯಾಗಿ ಬದುಕೋಣ ಎಂದು ಇವತ್ತೇ ನಿರ್ಧರಿಸಿದೆ ಹಾಗಾಗಿ ಇನ್ನು ಕೆಲವು ವರ್ಷಗಳ ನಂತರ ಬನ್ನಿ  ಅದಕ್ಕೆ ಬೇಕಾದರೆ ನಾನು ದುಡಿದಿರುವ ಹಣದಲ್ಲಿ ಸ್ವಲ್ಪ ನಿಮಗೆ ಕೊಡುತ್ತೇನೆ ಎಂದು ಆಮಿಷ ತೋರಿಸುತ್ತಾನೆ. ಯಮ ನಾನು ನಿನ್ನನ್ನು ಕರೆದುಕೊಂಡು ಹೋಗಲಿಕ್ಕೆ  ಬಂದಿದ್ದೇನೆ ಎಂದು ಹೇಳುತ್ತಾನೆ

ಜಿಪುಣನಿಗೆ ಹೃದಯ ಹಿಂಡಿದಂತಾಯಿತು ಅಯ್ಯೋ ನಾನು ಇಷ್ಟು ದಿನ ಕಷ್ಟಪಟ್ಟು ಏನು ಮುಂದೆ ಸುಖವಾಗಿ ಬದುಕಬೇಕೆಂದು ಲೆಕ್ಕಾಚಾರ ಹಾಕಿದ್ದೇನೆ ಎಂದು ಯಮರಾಜನಿಗೆ ಪರಿಪರಿಯಾಗಿ ಐದು ವರ್ಷ ಅವಕಾಶ ಕೊಡಿ ಬದುಕಿ ಸಾಯುತ್ತೇನೆ ಎಂದು ಬೇಡಿಕೊಳ್ಳುತ್ತಾನೆ.

ಯಮರಾಜ ಒಪ್ಪುವುದಿಲ್ಲ ಜಿಪುಣ ಮನೆ ಕೊಡುತ್ತೇನೆ ಹಣ ಕೊಡುತ್ತೇನೆ ಬರೀ ಮೂರು ವರ್ಷ ಬದುಕುತ್ತೇನೆ ಒಂದು ವರ್ಷ ಬದುಕುತ್ತೇನೆ ಆರು ತಿಂಗಳ ಬದುಕುತ್ತೇನೆ ಕೊನೆಗೆ ಒಂದು ತಿಂಗಳು ಬದುಕುತ್ತೇನೆ ಎಂದು ಚೌಕಾಸಿ ಮಾಡಿದರು ಯಮರಾಜ ಒಪ್ಪುತ್ತಿಲ್ಲ.

 ಯಮರಾಜ ನಿನ್ನ ಇಡೀ ಸಂಪತ್ತು ಕೊಟ್ಟರು ನನಗೆ ಬೇಕಾಗಿಲ್ಲ ನಿನ್ನ ಸಂಪತ್ತು ಇಟ್ಟುಕೊಂಡು ನಾನೇನು ಮಾಡಲಿ ನನ್ನ ಕೆಲಸ ನಾನು ಮಾಡಬೇಕು ಎಂದು ಹೇಳಿದಾಗ ಜಿಪುಣನಿಗೆ ನಾನು ಏನೇ ಹೇಳಿದರೂ ಯಮ ಕೇಳುವವನಲ್ಲ ಎಂದು ಕೊನೆಗೆ ಬರೀ ನನಗೆ ಎರಡೇ ಎರಡು ನಿಮಿಷ ನನಗಾಗಿ ನೀಡಿ ಎಂದು ಗೋಗರೆದನು.

ಮಹಾ ಜಿಪುಣನಿಗೆ ಕರುಣಿಸಿ ಆಗ ಯಮರಾಜನು ಆಗಲಿ ಎಂದು ಹೇಳಿದನು. ನಾನು ಸಾಯುತ್ತಿರುವುದು ಖಚಿತ ಇತರರಿಗೆ ಏನು ಸಂದೇಶ ಬರೆಯಲಿ ಎಂದು ಚಿಂತಿಸಿದ ಏನು ಕೂಡ ಕಣ್ಣಿನ ಮುಂದೆ ಕಾಣಲಿಲ್ಲ ಆಗ ತನ್ನ ಬೆರಳನ್ನೇ ಕೊಯ್ದುಕೊಂಡು ರಕ್ತದಲ್ಲಿ ಗೋಡೆಯ ಮೇಲೆ ಬರೆದ ನಾನು ಇವತ್ತು ಕೋಟಿಗಷ್ಟು ಗಳಿಸಿದ್ದೇನೆ ನನ್ನ ಮೃತ್ಯುವನ್ನು ನಾನು ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಇರುವ ಬದುಕಿನ ಪ್ರತಿ ಕ್ಷಣಗಳನ್ನು ಆನಂದಿಸಿ ಆನಂದಿಸಿದ ಕ್ಷಣಗಳು ಮಾತ್ರ ನಮ್ಮನ್ನು ತೃಪ್ತಿ ತರುತ್ತದೆ ಎಂದು ಬರೆದು ಮುಗಿಸುತ್ತಿದ್ದಂತೆಯೇ ಸತ್ತುಹೋದನು.

ಈ ಕ್ಷಣದಲ್ಲಿ ನಾವು ಏನು ಮಾಡುತ್ತೇವೆ ಅದೇ ಉಳಿಯುವಂತದ್ದು ಮುಂದೆ ನಾನು ಸುಖವಾಗಿರುತ್ತೇವೆ ಆನಂದಿಸುತ್ತೇನೆ ಎನ್ನುವುದು ಶುದ್ಧ ಸುಳ್ಳು, ಬದುಕಿನ ಪ್ರತಿ ಹಂತದಲ್ಲೂ ದುಡಿಯುತ್ತಲೇ ಇರುತ್ತೇವೆ ತನ್ನ ಸಂಸಾರಕ್ಕಾಗಿ ತಮ್ಮ ಪೋಷಕರಿಗಾಗಿ ತಮ್ಮ ಹೆಂಡತಿಗಾಗಿ ಮಕ್ಕಳಿಗಾಗಿ ಸ್ನೇಹಿತರಿಗಾಗಿ ಸಂಬಂಧಿಕರಿಗಾಗಿ ನನಗಾಗಿ ನಿರಂತರ ದುಡಿಯುತ್ತಲೇ ಇರುತ್ತೇವೆ ದುಡಿಯುವುದು ತಪ್ಪಲ್ಲ ನನಗೋಸ್ಕರವಾಗಿ ನಾನು ಬದುಕುವುದನ್ನು ಮರೆಯದಿರೋಣ.

ತಾನು ಸಿಕ್ಕಿ ಬೀಳಬಾರದೆಂದು

ಒಂದು ಊರಿನಲ್ಲಿ ಒಬ್ಬ ಶ್ರೀಮಂತ ವ್ಯಾಪಾರಿ ಇರುತ್ತಾನೆ ಮತ್ತೆ ಅವನ ಮನೆಯಲ್ಲಿ ಹಲವಾರು ಕೆಲಸದವರು ಕೂಡ ಇರುತ್ತಾರೆ ಒಂದು ಸಾರಿ ಕೆಲವು ಅಮೂಲ್ಯವಾದ ವಸ್ತು ಕಳ್ಳತನವಾಗಿ ಬಿಡುತ್ತದೆ ಆಗ ಕಳ್ಳ ಯಾರೆಂದು ಕಂಡು ಹಿಡಿಯುವುದು ಶ್ರೀಮಂತನಿಗೆ ಕಷ್ಟವಾಗುತ್ತದೆ ಸಾಕ್ಷಿ ಇಲ್ಲದೆ ಕಳ್ಳ ಎಂದು ಹೇಳಲು ಸಾಧ್ಯವಿಲ್ಲ ಇಂಥ ಕಷ್ಟದ ಪರಿಸ್ಥಿತಿಯಲ್ಲಿ ಏನು ಮಾಡುವುದು ಎಂದು ಯೋಚಿಸುತ್ತಾನೆ.

ಶ್ರೀಮಂತ ವ್ಯಾಪಾರಿಗೆ ಬಾಬಾ ಅವರ ನೆನಪಾಗುತ್ತದೆ ನಮ್ಮ ಊರಿನ ಆಚೆ ಆಶ್ರಮದಲ್ಲಿ ಬಾಬಾ ಅವರು ಇದ್ದಾರೆ ಅವರನ್ನು ಕರೆದರೆ ನನ್ನ ಈ ಸಮಸ್ಯೆಯನ್ನು ಪರಿಹರಿಸುತ್ತಾರೆ ಎಂದು ತಿಳಿದು ಬಾಬಾ ಅವರನ್ನು ಕರೆಯುತ್ತಾನೆ. ಬಾಬಾ ಅವರು ಮನೆಗೆ ಬಂದು ಎಲ್ಲಾ ಕೆಲಸದವರನ್ನು ಕರೆಯುತ್ತಾರೆ.

ಎಲ್ಲರನ್ನು ಒಂದು ಸಾರಿ ಗಮನಿಸುತ್ತಾರೆ ನಂತರ ಎಲ್ಲರಿಗೂ ಹಸಿ ಕಡ್ಡಿಯ ಒಂದೊಂದು ಕೋಲನ್ನು ಕೊಡುತ್ತಾರೆ ಹಸಿ ಕಡ್ಡಿಯ ಕೋಲನ್ನು ತೆಗೆದುಕೊಂಡು ಹೋಗಿ ಮನೆಯಲ್ಲಿ ನೀರಿನಲ್ಲಿ ನೆನಹಾಕಿ ನಾಳೆ ಬರುವಾಗ ತೆಗೆದುಕೊಂಡು ಬನ್ನಿ ಯಾರು  ವಸ್ತುವನ್ನು ಕದ್ದಿದ್ದಾರೋ ಅವರ ಕೋಲು ಮಾತ್ರ ಮೂರು ಇಂಚು ಉದ್ದವಾಗಿರುತ್ತದೆ ಎಂದು ಹೇಳಿ ಎಲ್ಲರಿಗೂ ಕೋಲನ್ನು ಕೊಟ್ಟು ಕಳಿಸಿದರು.

ಕೆಲಸ ಮಾಡುತ್ತಿದ್ದವರಲ್ಲಿ ಕದ್ದವನ್ನು ಭಯಭೀತನದನು ನಂತರ ತನ್ನ ಕೋಲು ಉದ್ದ ಬೆಳೆದರೆ ನಾನೇ ಸಿಕ್ಕಿ ಬೀಳುತ್ತೇನೆ ಎಂದು ತಾನು ಸಿಕ್ಕಿ ಬೀಳಬಾರದು ಎಂದು ಏನಾದರೂ ಮಾಡಬೇಕು ಎಂದು ಯೋಚಿಸಿದಾಗ ಅವನಿಗೆ ಒಂದು ಉಪಾಯ ಮಿಂಚಿನಂತೆ ಹೊಳಿಯಿತು ಕೋಲನ್ನು ಸರಿಯಾಗಿ ಮೂರು ಇಂಚು ಕತ್ತರಿಸಿ ಮಲಗಿದ.

ಮರುದಿನ ದಿನ ಎಲ್ಲರೂ ಒಂದೇ ಕಡೆ ಬಂದು ಸೇರಿದರು ತಮ್ಮ ತಮ್ಮ ಕೋಲುಗಳನ್ನು ಬಾಬಾ ಅವರಿಗೆ ಕೊಟ್ಟರು. ಎಲ್ಲರ ಕೋಲುಗಳನ್ನು ಪರೀಕ್ಷಿಸಿದರು ಆದರೆ ಒಬ್ಬನ ಕೋಲು ಮಾತ್ರ ಮೂರು ಇಂಚು ಕತ್ತರಿಸಲಾಗಿತ್ತು. ಬಾಬಾ ಕದ್ದವನು ಇವನೇ ಎಂದು ಸುಲಭವಾಗಿ ಹಿಡಿದುಬಿಟ್ಟರು ಆಗ ಬಾಬಾ ಅವರು ವಿವರಿಸಿದರು ನಾನು ಕೊಟ್ಟ ಕೊಲಿಗೆ ಉದ್ಯವಾಗುವ ಗುಣವಿಲ್ಲ ಅದು ಇದ್ದ ಹಾಗೆಯೇ ಇರುತ್ತದೆ.

ಪರೀಕ್ಷೆ ಮಾಡಲು ನಾನು ಒಂದು ನಾಟಕ ಮಾಡಿದೆ ಅಷ್ಟೇ ಎಂದು ಹೇಳಿದರು ಯಾರು ಕಳ್ಳತನ ಮಾಡಿದ್ದರು ಅವನು ಹೆದರಿಕೆಯಿಂದ ತನ್ನ ಕೂಲನ್ನು ಕತ್ತರಿಸಿದ್ದಾನೆ ಆದ್ದರಿಂದ ಅವನು ಸಿಕ್ಕಿ ಸಿಕ್ಕಿಬಿದ್ದಿದ್ದಾನೆ ಎಂದರು ಎಷ್ಟೇ ಬುದ್ಧಿ ಎಷ್ಟೇ ಚಾಣಾಕ್ಷದಿಂದ ಕಳ್ಳತನ ಮಾಡಿದರೆ ಅಥವಾ ಮೋಸ ವಂಚನೆ ಮಾಡಿದರೆ ಒಂದಲ್ಲ ಒಂದು ದಿನ ಖಂಡಿತವಾಗಿ ಸಿಕ್ಕಿ ಬೀಳುತ್ತಾರೆ.

ನನಗೆ ಮನಶ್ಯಾಂತಿ ಬೇಕು

ಒಬ್ಬ ಮನುಷ್ಯ ನನಗೆ ಮನ ಶಾಂತಿ ಬೇಕು ಎಂದು ಹಲವಾರು ಗುರುಗಳ ಬಳಿಗೆ ಹೋದನು ಆದರೂ ಅವನಿಗೆ ಮನಶಾಂತಿ ಸಿಗಲಿಲ್ಲ ಮನಶಾಂತಿ ಗಾಗಿ ಅಲೆಮಾರಿಯಂತೆ ಅಲೆಯುತ್ತಿದ್ದನು ಕೊನೆಗೆ ಒಂದು ಹಳ್ಳಿಗೆ ಬರುವುದು  ಒಂದು ಮರದ ಕೆಳಗೆ ಬಾಬಾ ಅವರು ಕುಳಿತಿದ್ದರು ಬಾಬಾ ಅವರಿಗೆ ಹೇಳಿದನು.

ನನಗೆ ಮನಶಾಂತಿ ಬೇಕು ಆಗ ಬಾಬಾ ಅವರು ನಮ್ಮ ಊರಿನಲ್ಲಿ ಕಾಯಿಲೆಯಿಂದ ನರಳುತ್ತಿದ್ದಾರೆ ಆ ಜನರನ್ನು ಆರೈಕೆ ಮಾಡಿದರೆ ನಮ್ಮ ಮನಸ್ಸಿಗೆ ಶಾಂತಿ ಸಿಗುತ್ತದೆ ಎಂದು ಹೇಳಿದರು.

ಆಗ ಈ ವ್ಯಕ್ತಿ ಆ ಕಾಯಿಲೆ ನಮಗೆ ಅಂಟಿಕೊಳ್ಳುತ್ತದೆ ಎಂದು ಅಸಹ್ಯ ವ್ಯಕ್ತಪಡಿಸಿದನು ಆಗ ಬಾಬಾ ಅವರು ನಿನಗೆ ಮನಶಾಂತಿ ಸಿಗದೇ ಇರುವುದಕ್ಕೆ ಇದೆ ಕಾರಣ ನೀನು ಪ್ರತಿಯೊಂದು ಆಲೋಚನೆಯಲ್ಲಿಯೂ ನಕರಾತ್ಮಕವಾಗಿ ಯೋಚನೆ ಮಾಡುತ್ತೀಯ? ವ್ಯಕ್ತಿಯಾ ನೆಮ್ಮದಿ ಹಾಳಾಗುವುದೇ ಆಲೋಚನೆಯಿಂದ ನಿನ್ನ ಆಲೋಚನೆಗಳನ್ನು ಸಕಾರಾತ್ಮಕವಾಗಿ ಮಾಡಿಕೋ ಎಂದು ಹೇಳಿದರು ನಂತರ ಇವನು ಕೂಡ ಕಾಯಿಲೆ ಬಂದಿರುವವರನ್ನು ಆರೈಕೆ ಮಾಡಿದನು ನಂತರ ಇವನಿಗೆ ಮನಶಾಂತಿ ಸಿಕ್ಕಿತು.

ನನಗೆ ಹಲವಾರು ಮಾರ್ಗಗಳು ತಿಳಿದಿದೆ

ಒಂದು ಮನೆಯಲ್ಲಿ ಬೆಕ್ಕು ಮತ್ತು ಕೋಳಿ ವಾಸ ಮಾಡಿಕೊಂಡಿರುತ್ತವೆ ಕೋಳಿ ಮತ್ತು ಬೆಕ್ಕು ತನ್ನ ಕಷ್ಟ ಸುಖಗಳನ್ನು ಹಂಚಿಕೊಂಡು ಬದುಕುತ್ತಿರುತ್ತವೆ. ಪಕ್ಕದ ಮನೆಯಲ್ಲಿ ಒಂದು ನಾಯಿಯನ್ನು ತರುತ್ತಾರೆ ಅದು ಆಗಾಗ ಬೌ ಬೌ ಎಂದು ವಿಚಿತ್ರವಾಗಿ ನಾಯಿ ಬೊಗಳುತ್ತಿರುತ್ತದೆ ಹಾಗೆ ಇತರರಿಗೆ ಹೆದರಿಸುತ್ತಿರುತ್ತದೆ.

ನಾಯಿಯನ್ನು ಗಮನಿಸಿದ ಬೆಕ್ಕು ಮತ್ತೆ ಕೋಳಿ ಮಾತನಾಡಿಕೊಳ್ಳುತ್ತೇವೆ ಈಗ ನಾವು ತುಂಬಾ ಎಚ್ಚರಿಕೆಯಾಗಿ ಇರಬೇಕು ಯಾವಾಗ ಬೇಕಾದರೂ ನಾಯಿ ನಮ್ಮ ಮೇಲೆ ದಾಳಿ ಮಾಡಬಹುದು ಆಗ ಬೆಕ್ಕು ನನಗೆ ಒಂದೇ ಒಂದು ಮಾರ್ಗ ತಿಳಿದಿದೆ ಎಂದು ಬೆಕ್ಕು ಪ್ರಾಮಾಣಿಕವಾಗಿ ಹೇಳಿತು.

ಜಂಬದ ಕೋಳಿ ನನಗೆ ಹಲವಾರು ಮಾರ್ಗಗಳು ತಿಳಿದಿದೆ ನಾಯಿ ಓಡಿಸಿಕೊಂಡು ಬಂದರೆ ನಾನು ಕಾಂಪೌಂಡ್ ಹಾರಬಲ್ಲ ಮರ ಹತ್ತಬಲ್ಲೆ, ಗಿಡಗಳ ಸಂಧಿಯಲ್ಲಿ ನುಗ್ಗಬಲ್ಲೆ, ಜೋರಾಗಿ ಕೂಗಬಲ್ಲೆ, ಅಡ್ಡ ದಿಡ್ಡಿ ಓಡಬಲ್ಲೆ ಹೀಗೆ ಯಾವುದೋ ಒಂದು ಉಪಾಯದಿಂದ ನಾನು ತಪ್ಪಿಸಿಕೊಳ್ಳಬಲ್ಲೆ ಎಂದು ದುರಹಂಕಾರದಿಂದ ಹೇಳುತ್ತದೆ. ನಾಯಿಗೆ ಕಟ್ಟಿರುವುದಿಲ್ಲ ಆಗ ನಾಯಿ ಓಡಿಸಿಕೊಂಡು ಬರುತ್ತದೆ ಆಗ ಬೆಕ್ಕು ಯೋಚನೆ ಮಾಡಿ ಮರದ ಮೇಲೆ ಹತ್ತಿ ತನ್ನ ಪ್ರಾಣ ಕಾಪಾಡಿಕೊಳ್ಳುತ್ತದೆ.

 ಜಂಬದ ಕೋಳಿ ನನಗೆಲ್ಲಾ ತಿಳಿದಿದೆ ಎಂದು ತನಗೆ ಗೊತ್ತಿರುವ ಒಂದೊಂದು ಉಪಾಯವನ್ನು ಉಪಯೋಗಿಸುತ್ತದೆ ಆದರೆ ಯಾವುದು ಪ್ರಯೋಜನಕ್ಕೆ ಬರುವುದಿಲ್ಲ. ನಂತರ ನಾಯಿ ಕಚ್ಚಿ ಸಾಯಿಸುತ್ತದೆ ನಮಗೆ ಹಲವಾರು ಮಾರ್ಗಗಳು ಗೊತ್ತಿದೆ ಎನ್ನುವುದು ಮುಖ್ಯವಲ್ಲ ಯಾವುದು ಸೂಕ್ತ ಮತ್ತೆ ಯಾವುದು ಉಪಯೋಗವಾಗುತ್ತದೆ ಎನ್ನುವುದು ಮುಖ್ಯ.

Leave a Comment