ಒಂದು ಶಾಲೆಯಲ್ಲಿ ಸಹಾನುಭೂತಿಯುಳ್ಳ ಶಿಕ್ಷಕರು ಪಾಠ ಮಾಡಿಕೊಂಡು ಇರುತ್ತಾರೆ ಅವರು ಅಚ್ಚುಮೆಚ್ಚಿನ ಶಿಕ್ಷಕರು ಏಕೆಂದರೆ ವಿದ್ಯಾರ್ಥಿಗಳ ಕಷ್ಟಗಳಿಗೆ ಸ್ಪಂದಿಸುತ್ತಾರೆ ಹೀಗಾಗಿ ವಿದ್ಯಾರ್ಥಿಗಳಿಗೆ ಏನೇ ಕಷ್ಟ ಬಂದರೂ ಹೇಳಿಕೊಳ್ಳುತ್ತಿರುತ್ತಾರೆ.
ಶಾಲೆಯಲ್ಲಿ ಇರುವ ವಿದ್ಯಾರ್ಥಿಗಳಿಗೆ ಶಿಕ್ಷಕರ ಮಾತಿನಿಂದ ಸಮಾಧಾನ ವಾಗುತ್ತಿರುತ್ತದೆ. ಒಬ್ಬ ವಿದ್ಯಾರ್ಥಿ ಮಾತ್ರ ದಿನನಿತ್ಯ ಬಂದು ಒಂದೇ ಸಮಸ್ಯೆಯನ್ನು ಹೇಳುತ್ತಿದ್ದನು. ಶಿಕ್ಷಕರು ವಿದ್ಯಾರ್ಥಿಗೆ ಬೇಸರವಾಗದೆ ಇರಲಿ ಎಂದು ದಿನನಿತ್ಯ ಸಮಸ್ಯೆ ಕೇಳುತ್ತಿದ್ದರು ಕೆಲವು ದಿನಗಳ ನಂತರ ಶಿಕ್ಷಕರು ವಿದ್ಯಾರ್ಥಿಗೆ ಹೇಳಿದರು.
ಇನ್ನೂ ಮೂರು ದಿನ ನಾನು ಶಾಲೆಗೆ ರಜೆ ಹಾಕುತ್ತೇನೆ ಆದ್ದರಿಂದ ನೀನು ತರಗತಿಯಿಂದ ಎಲ್ಲರೂ ಹೋದ ನಂತರ ನಿನ್ನ ಸಮಸ್ಯೆಯನ್ನು ಕಪ್ಪು ಹಲಗೆ ಮೇಲೆ ಬರೆದು ಹಾಗೆಯೇ ಬೆಳಗ್ಗೆ ಬೇಗನೆ ಬಂದು ಅ ಸಮಸ್ಯೆಯನ್ನು ಅಳಿಸಿಬಿಡು ಎಂದು ಹೇಳಿದರು. ಹಾಗೆಯೇ ಶಿಕ್ಷಕರು ರಜೆ ಮುಗಿಸಿಕೊಂಡು ಬಂದರು ಯಥಾ ಪ್ರಕಾರ ವಿದ್ಯಾರ್ಥಿ ಸಂಜೆ ಬಂದು ಶಿಕ್ಷಕರಿಗೆ ಧನ್ಯವಾದಗಳು ಹೇಳಿದನು.
ಶಿಕ್ಷಕರು ಮತ್ತೆ ಸಮಸ್ಯೆ ಹೇಳಬಹುದು ಎಂದು ಯೋಚನೆ ಮಾಡಿದ್ದರು ಆಗ ವಿದ್ಯಾರ್ಥಿ ಹೇಳಿದನು ಮೇಷ್ಟ್ರೇ ನೀವು ಹೋದ ನಂತರ ನಾನು ನನ್ನ ಸಮಸ್ಯೆಗಳನ್ನು ಕಪ್ಪು ಹಲಗೆಯ ಮೇಲೆ ಬರೆದೆ ಅದು ನನ್ನದೇ ಸಮಸ್ಯೆಗಳು ಹಾಗಾಗಿ ಮಾರನೆಯ ದಿನ ಬಂದು ಸಮಸ್ಯೆಯನ್ನು ಅಳಿಸಿದೆ ಆಗ ನನಗೆ ಅರ್ಥವಾಯಿತು.
ನನ್ನ ಸಮಸ್ಯೆ, ನಾನೇ ಅಳಿಸಬೇಕೆ ಹೊರತು ಇತರರು ನನ್ನ ಸಮಸ್ಯೆ ಅಳಿಸಲಾರರು ಎಂದು ಅರಿತುಕೊಂಡೆ ಎಂದನು. ಈ ಮಾತನ್ನು ಕೇಳಿದ ನಂತರ ಶಿಕ್ಷಕರು ಒಂದು ಹೊಸ ಪಾಠವನ್ನು ಕಲಿತರು ನಮ್ಮ ಸಮಸ್ಯೆ, ನಾನೇ ಪರಿಹರಿಸಿಕೊಳ್ಳೋಣ.
ಸುಮಧುರ ವಾಸನೆ
ಒಂದು ಸಾರಿ ಒಬ್ಬ ಗುಣವಂತ ಯುವಕ ತನ್ನ ಅಜ್ಜಿಯ ಮನೆಗೆ ಹೋಗಿದ್ದನು ಆಗ ಅಜ್ಜಿಯು ಸಂತೋಷದಿಂದ ಬರಮಾಡಿಕೊಂಡರು ನಂತರ ಇರುವ ಜೀವನದ ಕಷ್ಟ ನಷ್ಟಗಳನ್ನು ಹೇಳಿಕೊಂಡ ಆಗ ಅಜ್ಜಿಯು ಏನೂ ಮಾತನಾಡದೆ ಅದು ಹಳ್ಳಿ ಅದುದ್ದರಿಂದ ಮೂರು ಒಲೆಗಳು ಇದ್ದವು ಅದರಲ್ಲಿ, 3 ಪಾತೆಗಳನ್ನು ಇಟ್ಟು ನೀರನ್ನು ಬಿಸಿ ಮಾಡಲು ಹೇಳಿದರು. ಯುವಕನಿಗೆ ಗಲಿಬಿಲಿಯಾಯಿತು.
ಒಂದರಲ್ಲಿ ಬೂದುಕುಂಬಳಕಾಯಿ ಹಾಕಿದರೂ ಎರಡನೆ ಪಾತ್ರೆಯಲ್ಲಿ ಮೊಟ್ಟೆಯನ್ನು ಹಾಕಿದರೂ ಮೂರನೇ ಪಾತ್ರೆಯಲ್ಲಿ ಟೀ ಪುಡಿ ಹಾಕಿದರು ಕೆಲವು ನಿಮಿಷಗಳು ಏನೂ ಮಾತಾಡಲಿಲ್ಲ. ಅಜ್ಜಿ ಏನು ಮಾಡುತ್ತಿದ್ದಾರೆ ಎಂದು ಯುವಕನಿಗೆ ಅರ್ಥವಾಗಲಿಲ್ಲ ನಂತರ ಅಜ್ಜಿ ಪಾತ್ರೆಯಿಂದ ಬೂದು ಕುಂಬಳಕಾಯಿ ಹೊರತೆಗೆದರು.
ತುಂಬಾ ಮೃದುವಾಗಿತ್ತು ಎರಡನೆಯದು ಮೊಟ್ಟೆ ತುಂಬಾ ಗಟ್ಟಿಯಾಗಿತು ಮೂರನೆಯದು ಟೀ ವಾಸನೆಯೂ ಮೂಗಿಗೆ ಬರುತ್ತಿತ್ತು ಆಗ ಅಜ್ಜಿ ಹೇಳಿದರು ನೋಡು ಈ ಮೂರೂ ವಸ್ತುಗಳು ನೀರಿನಲ್ಲಿ ಬೆಂದು ಹೋಗಿವೆ ಕಷ್ಟಪಟ್ಟಿದೆ ಆದರೆ ಇದರ ಪರಿಣಾಮ ಮಾತ್ರ ಬೇರೆ ಬೇರೆ ಎಂದು ಹೇಳಿದರು.
ಬೂದುಕುಂಬಳಕಾಯಿ ಗಟ್ಟಿಯಾಗಿ ಇದ್ದಿದ್ದು ಬೆಂದು ಮೃದುವಾಗಿದೆ ಎಣ್ಣೆಯಂತೆ ಇರುವ ಮೊಟ್ಟೆ ಗಟ್ಟಿಯಾಗಿದೆ ಟೀ ಪುಡಿ ಬೆಂದು ಸುಮಧುರ ವಾಸನ ತಂದಿದೆ ಹಾಗೆಯೇ ಮಾನವರು ಕೂಡ ಅಷ್ಟೇ ಕೆಲವರು ಕಷ್ಟಕ್ಕೆ ಕುಗ್ಗಿಬಿಡುತ್ತಾರೆ.
ಕೆಲವರು ಶಕ್ತಿ ಕಳೆದುಕೊಳ್ಳುತ್ತಾರೆ ಇನ್ನೂ ಕೆಲವರು ದೃಢ ಮನಸ್ಸಿನಿಂದ ಕಷ್ಟಗಳು ಬಂದರು ಮೃದುವಾಗದೆ ಗಟ್ಟಿಯೂ ಆಗದೆ ಸಮತೋಲನದಲ್ಲಿ ಇರುತ್ತಾರೆ ಎಂದು ಅಜ್ಜಿಯು ಚಟುವಟಿಕೆಯ ಮುಖಾಂತರ ಹೇಳಿದರು ನಮಗೂ ಎಂತಹ ಸಂಕಷ್ಟದ ಪರಿಸ್ಥಿತಿ ಬಂದರು ಸಮತೋಲನದಲ್ಲಿ ಇರೋಣ.
ಹಣದಲ್ಲಿ ಸರಿಯಾದ ಜ್ಞಾನ ಇರಲೇಬೇಕು
ನಾನು ಸಾಫ್ಟ್ ಸ್ಕಿಲ್ ತರಬೇತಿಗೆ ಸೇರಿದೆ ತರಬೇತಿ ಮುಗಿದ ನಂತರ ಹಲವಾರು ವ್ಯಕ್ತಿಗಳ ಪರಿಚಯವಾಯಿತು. ಲಕ್ಷ್ಮಣ್ ಗೌಡರು ನಮಗೆ ತುಂಬಾ ಆತ್ಮೀಯರಾದರು ನಂತರ ಅವರ ಜೊತೆ ಒಡನಾಟ ಹೆಚ್ಚಾಯಿತು. ಒಂದು ಸಾರಿ ಅವರ ಮನೆಗೆ ಹೋಗಿದ್ದೆ ಅವರು ಒಂದು ಒಳ್ಳೆಯ ವಾತಾವರಣ ಇರುವ ಆ ಮನೆಯ ಸುತ್ತಮುತ್ತ ತರಕಾರಿಯ ಗಿಡಗಳು ತೆಂಗಿನ ಮರ ಮಾವಿನ ಮರಗಳು ಇದ್ದವು.
ತನ್ನ ಎರಡು ಮಕ್ಕಳನ್ನು ಮದುವೆ ಮಾಡಿದ್ದರು ಹಾಗೆಯೇ ಅವರಿಗಾಗಿ ಹಣವನ್ನು ಬ್ಯಾಂಕಿನಲ್ಲಿ ಇಟ್ಟಿದ್ದರು ಇದು ನೋಡಿ ತುಂಬಾ ಸಂತೋಷವಾಯಿತು ನಂತರ ನೀವು ಬದುಕುತ್ತಿರುವ ರೀತಿ ತುಂಬಾ ಚೆನ್ನಾಗಿದೆ ಎಂದು ನನಗೆ ಕಂಡ ಸತ್ಯವನ್ನು ಹೇಳಿದೆ.
ಆಗ ಅವರು ನನಗೆ ಒಂದು ಮಾತು ಹೇಳಿದರು ಮನುಷ್ಯರಿಗೆ ಹಣದಲ್ಲಿ ಜ್ಞಾನ ಇರಲೇಬೇಕು. ನಾನು ಕೆಲಸಕ್ಕೆ ಸೇರಿದ ಮೊದಲನೇ ಸಂಬಳದಿಂದ 10% ಹಣವನ್ನು ಕೂಡಿಡುತ್ತಾ ಬಂದಿದ್ದೇನೆ ಇದು ಇಂದಿಗೆ ಸಾಕಷ್ಟು ಹಣವಾಗಿದೆ ಎಂದು ಹೇಳಿದರು.
ಹಣ ಎಲ್ಲರೂ ಸಂಪಾದನೆ ಮಾಡುತ್ತಾರೆ ಆದರೆ ಹೇಗೆ ಇಡಬೇಕು ಎಂಬುದರಲ್ಲಿ ಸೋಲುತ್ತಾರೆ ಎಂದು ತಿಳಿಸಿದರು. ಈಗಲೂ ಕೂಡ ಹಣದ ವಿಚಾರ ಬಂದಾಗ ಅವರ ಮಾತು ನನಗೆ ನೆನಪಿಗೆ ಬರುತ್ತದೆ.
ಮನುಷ್ಯರ ಸ್ವಭಾವವೇ ಹೀಗೆ
ನದಿಯಲ್ಲಿ ಮೀನು ವಾಸಿಸುತ್ತಿತ್ತು ನದಿಯ ಪಕ್ಕದಲ್ಲಿದ್ದ ಮರದಲ್ಲಿ ನವಿಲೊಂದು ಬದುಕುತ್ತಿತ್ತು ಇಬ್ಬರಲ್ಲೂ ಗೆಳೆತನವಾಯಿತು. ಗೆಳೆತನ ಬೆಳೆಯುತ್ತಾ ಹೋದಂತೆ ಆತ್ಮೀಯವಾದವು ಒಂದು ಸಾರಿ ಬೇಟೆಗಾರರ ತಂಡ ಅಲ್ಲಿಗೆ ಬಂದಿತು.
ನೀರಿನಲ್ಲಿದ್ದ ಮೀನಿನೊಂದಿಗೆ ಮಾತನಾಡುತ್ತಿದ್ದ ನವಿಲನ್ನು ಬೇಟೆಗಾರ ನೋಡಿಬಿಟ್ಟ ನವಿಲನ್ನು ಹಿಡಿದುಕೊಂಡನು. ಮೀನು ಮೆಲ್ಲಗೆ ಹೊರಗೆ ಬಂದು ಬೇಟೆಗಾರನೇ ಇದುವರೆಗೂ ಯಾರೂ ಕಂಡಿರದ ಅಮೂಲ್ಯವಾದ ರತ್ನವನು, ನಾನು ತಂದು ಕೊಡುತ್ತೇನೆ ನನ್ನ ಗೆಳೆಯನನ್ನು ಬಿಟ್ಟು ಬಿಡು ಎಂದು ಪ್ರೀತಿಯಿಂದ ಕೇಳಿತು.
ಬೇಟೆಗಾರ ಒಪ್ಪಿದ ಮೀನು ನೀರಿನಾಳಕ್ಕೆ ಹೋಗಿ ಒಂದು ರತ್ನವನ್ನು ಕಚ್ಚಿ ತಂದು ಬೇಟೆಗಾರನ ಕೈಗೆ ಕೊಟ್ಟಿತು. ಬೇಟೆಗಾರ ನೋಡಿದವನೇ ಕಣ್ಣರಳಿಸಿದ ಇಂಥ ಸುಂದರ ಮುತ್ತನ್ನು ಅವನೆಂದೂ ನೋಡಿರಲಿಲ್ಲ. ಅದರ ಬೆಲೆ ಅಂದಾಜಿಸಿದ ನಂತರ ನವಿಲನ್ನು ಬಿಟ್ಟನು ನವಿಲು ಮತ್ತೆ ಮರದ ಮೇಲಕ್ಕೆ ಹಾರಿತು.
ಮರುದಿನ ಬೇಟೆಗಾರ ಪುನಃ ಬಂದ ಮೀನಿಗೆ ಕೂಡಲೇ ಗೊತ್ತಾಯಿತು ಮೀನನ್ನು ನೋಡಿದವನೇ ಒಂದು ರತ್ನಕ್ಕೆ ಅಷ್ಟೇನೂ ಬೆಲೆ ಇಲ್ಲವಂತೆ ಎರಡಕ್ಕೆ ಬೆಲೆ ಎಂದು ಚಿನ್ನದ ಕೆಲಸ ಮಾಡುವವನು ಹೇಳಿದ. ಅದುದ್ದರಿಂದ ನೀನು ಇದೇ ರೀತಿಯ ಇನ್ನೊಂದು ರತ್ನವನ್ನು ತಂದು ಕೊಟ್ಟರೆ ನಿನ್ನ ಗೆಳೆಯನ ತಂಟೆಗೆ ನಾನು ಬರುವುದಿಲ್ಲ ಎಂದನು.
ಬುದ್ಧಿವಂತ ಮೀನು, ತಕ್ಷಣವೇ ಅಂಥದ್ದೇ ಇನ್ನೊಂದು ರತ್ನವನ್ನು ಹುಡುಕಬೇಕಾದರೆ ನಿನ್ನ ಕೈಲಿರುವುದನ್ನು ನನಗೆ ಕೊಡಬೇಕು ನಾನು ಅಂಥದೇ ಹುಡುಕಿ ತರುತ್ತೇನೆ ಎಂದು ಹೇಳಿ ರತ್ನವನ್ನು ಕೇಳಿತು. ಮೂರ್ಖ ಭೇಟೆಗಾರ ಹಾಗೆಯೇ ಮೀನಿಗೆ ನೀಡಿದ ಮೀನು ರತ್ನವನ್ನು ಕಚ್ಚಿಕೊಂಡು ನೀರಿನೊಳಗೆ ಹೋಯಿತು.
ಅಲ್ಲಿಂದಲೇ ತಲೆಯೆತ್ತಿ ಬೇಟೆಗಾರನೇ ನನ್ನ ಗೆಳೆಯ ನಿನ್ನ ಕೈಗೆಟುಕದಷ್ಟು ದೂರ ನಿನ್ನೆಯೇ ನಾನು ಕಳಿಸಿದ್ದೇನೆ. ನೀನು ಪುನಃ ಬಂದೆ ಬರುತ್ತೀಯ ಎಂದು ನನಗೆ ಅರಿವು ಇತ್ತು ಮನುಷ್ಯರ ಸ್ವಭಾವವೇ ಹೀಗೆ ತೃಪ್ತಿ ಎಂಬುದೇ ಇಲ್ಲವಲ್ಲ ಆಸೆ ಇರಬೇಕೆ ವಿನಹ ದುರಾಸೆ ಒಳ್ಳೆಯದಲ್ಲ.
ಇದು ಇದ್ದರೆ ಅದು ಆದು ಇದ್ದರೆ ಮತ್ತೊಂದು, ಹೀಗೆ ಬೇಕುಗಳ ಸಂತೆಯಲ್ಲಿ ಕಳೆದು ಹೋಗುತ್ತೀರಿ ಆದ್ದರಿಂದಲೇ ನೀವು ದುಃಖಿಗಳು ತೃಪ್ತಿಯೇ ಸುಖದ ಮೊದಲ ಹೆಜ್ಜೆ ಆದರೆ ನಿಮಗೆ ಇದರ ಅರಿವು ಇಲ್ಲವೇ ಇಲ್ಲ. ಅತಿಯಾಸೆಯಿಂದ ನಿನಗೆ ಸಿಕ್ಕಿದ್ದನ್ನೂ ಕಳೆದುಕೊಂಡೆ ಹೋಗು ಎನ್ನುತ್ತ ನೀರಿನಲ್ಲಿ ಮುಳುಗಿತು.
ಮೀನು ಹೇಳಿದ ಮಾತಿಗೂ ನಮ್ಮ ಜೀವನಕ್ಕೂ ಬಹಳವೇ ಸೌಮ್ಯತೆ ಇದೇ ಅಲ್ಲವೇ? ನಾವೆಲ್ಲರೂ ನಮ್ಮ ಜೀವನದಲ್ಲಿ ಆಕಸ್ಮಿಕವಾಗಿ ಸಿಕ್ಕಿದ್ದನ್ನು ಅನುಭವಿಸದೆ ಮತ್ತಷ್ಟು ಬೇಕು ಎಂಬ ದುರಾಸೆಯಿಂದ ಇರುವುದನ್ನು ಕಳೆದುಕೊಳ್ಳುತ್ತೇವೆ ನಂತರ ಪಶ್ಚಾತಾಪ ಪಡುತ್ತೇವೆ ನಮ್ಮ ಪಾಲಿಗೆ ಬಂದಿದ್ದನ್ನು ಸ್ವೀಕರಿಸಿ ಅನುಭವಿಸೋಣ.
ನಾವು ಸೂಜಿಯೋ ಅಥವಾ ಕತ್ತರಿಯೋ?
ಬಟ್ಟೆ ಹೊಲಿಯುವವರ ಬಳಿ ಅತಿ ಮುಖ್ಯವಾದ ಎರಡು ಆಯುಧಗಳಿರಲೇಬೇಕು. ಒಂದು ಸೂಜಿ ಮತ್ತೊಂದು ಕತ್ತರಿ ಇವು ಒಂದೇ ಕಡೆ ಇದ್ದರೂ ಇವೆರಡರ ಸ್ವಭಾವಗಳು ಮಾತ್ರ ಬೇರೆ ಬೇರೆ ಕತ್ತರಿ ಬಟ್ಟೆಯನ್ನು ಕತ್ತರಿಸಿ ಹಲವಾರು ತುಂಡುಗಳನ್ನಾಗಿ ಮಾಡಿದರೆ ಸೂಜಿ ಮಾತ್ರ ಚಿಕ್ಕಚಿಕ್ಕ ತುಂಡುಗಳನ್ನು ಒಂದಾಗಿ ಜೋಡಿಸುತ್ತದೆ.
ಕತ್ತರಿಗೆ ಹೋಲಿಸಿದರೆ ಸೂಜಿ ಅತಿ ಚಿಕ್ಕ ವಸ್ತು ಹಲವರು ಕತ್ತರಿಯಂತೆ ತಮಗೆ ಬೇಡವಾದುದನ್ನು ಕತ್ತರಿಸಿ ಬೇರ್ಪಡಿಸುತ್ತಾರೆ, ಅದು ಸಮಾಜವಾಗಬಹುದು, ಸಂಸ್ಥೆಯಾಗಬಹುದು. ಸಂಸಾರವೇ ಆಗಬಹುದು. ಸ್ನೇಹವೂ ಆಗಬಹುದು, ಸಂಬಂಧಗಳು ಆಗಬಹುದು.
ಕತ್ತರಿಯ ಹರಿತಕ್ಕೆ ಒಳಗಾದವರು ದುಃಖಿಸುತ್ತಲೇ ಮತ್ತೆ ಮತ್ತೆ ತುಂಡಾಗುತ್ತಲೇ ಇರುತ್ತಾರೆ ಆದರೆ ಸೂಜಿ ಚಿಕ್ಕದಾದರೂ ಕೆಲಸ ನಿಧಾನವಾದರೂ ತುಂಡಾದುದನ್ನು ಹೊಲಿದು ಬಟ್ಟೆ ಸರಿಪಡಿಸುವಂತೆ ಜೋಡಿಸುವಂತೆ, ಬಾಬಾ ಅವರು, ಸಜ್ಜನರು, ಗುರುಗಳು, ಹಿರಿಯರು, ಸಂತರು, ಬೇರ್ಪಡಿಸಿದವರನ್ನು ಒಂದುಗೂಡಿಸಲು ಪ್ರಯತ್ನಿಸುತ್ತಲೇ ಇರುತ್ತಾರೆ.ನಾವು ಸೂಜಿಯ ಕತ್ತರಿಯೋ ಆಯ್ಕೆ ನಮ್ಮದೇ.