ಒಂದು ಹಳ್ಳಿಯಲ್ಲಿ ಒಬ್ಬ ಮಾನವೀಯ ಗುಣವುಳ್ಳ ಸಾಹುಕಾರ ಇರುತ್ತಾನೆ ಇವನಿಗೆ ಎರಡು ಗಂಡು ಮಕ್ಕಳು ಅದರಲ್ಲಿ ಒಬ್ಬ ವಿದೇಶಕ್ಕೆ ಹೋಗಿರುತ್ತಾನೆ ಇನ್ನೊಬ್ಬ ತಂದೆಯ ಜೊತೆಯಲ್ಲಿಯೇ ಇರುತ್ತಾನೆ ಈ ಹುಡುಗನ ಕೋರಿಕೆ ಏನೆಂದರೆ ನಾನು ಈ ಸಾರಿ ಕಾಲೇಜಿನಲ್ಲಿ ಪಾಸಾದರೆ ನನಗೆ ಹೊಸ ಮಾಡೆಲ್ ನ ಒಂದು ಬೈಕ್ ಕೊಡಿಸಿ ಎಂದು ಕೇಳುತ್ತಾನೆ ತಂದೆಯವರು ಆದರೆ ಬೈಕ್ ಯಾಕೆ ಎಂದು ನಗುತ್ತಾರೆ.
ತಂದೆಯವರು ಆಗಲಿ ಎಂದು ಸುಮ್ಮನಾಗುತ್ತಾರೆ ಅದೇ ರೀತಿ ಈ ಯುವಕನ್ನು ಕಾಲೇಜಿನಲ್ಲಿ ವಾಸಾಗುತ್ತಾನೆ ನಂತರ ಸಂತೋಷದಿಂದ ಮನೆಗೆ ಬಂದು ತಂದೆಗೆ ಹೇಳುತ್ತಾನೆ ನಾನು ಈ ಸಾರಿ ಪಾಸಾಗಿದ್ದೇನೆ ಎಂದು ಉತ್ಸಾಹದಿಂದ ಎದೆ ಹುಬ್ಬಿಸಿ ಹೇಳುತ್ತಾನೆ ಇದನ್ನು ನೋಡಿದ ತಂದೆಯವರು ನಗುತ್ತಾ ಒಂದು ಪ್ಯಾಕಿಂಗ್ ಮಾಡಿದ ಒಂದು ಬಾಕ್ಸನ್ನು ಕೊಡ್ತಾರೆ.
ಇದು ನನ್ನ ಕಡೆಯಿಂದ ಎಂದು ಹೇಳುತ್ತಾರೆ ಆಗ ಮಗನು ನೋಡುತ್ತಿದ್ದಂತೆಯೇ ಕೋಪ ಬರುತ್ತದೆ ಕೋಪವನ್ನು ನುಂಗಿಕೊಂಡು ಆ ಬಾಕ್ಸನ್ನು ಓಪನ್ ಮಾಡಿ ನೋಡಿದಾಗ ಅದರಲ್ಲಿ ಒಂದು ಡೈರಿ ಬುಕ್ ಕಾಣಿಸುತ್ತದೆ ಆಗ ಕೋಪ ಗ್ರಸ್ತನಾಗಿ, ಸಿಟ್ಟಿನಿಂದ ನನಗೆ ಒಂದು ಬೈಕ್ ಕೊಡಿಸಿ ಎಂದರೆ ನಿಮಗೆ ಕೊಡಿಸಲಿಕ, ಆಗಲಿಲ್ಲ ಅದು ಬಿಟ್ಟು ನನಗೆ ಡೈರಿ ಕೊಟ್ಟಿದ್ದೀರಿ ಇದು ನನಗೆ ಬೇಕಾಗಿಲ್ಲ. ನೀವು ನನ್ನನ್ನು ಅರ್ಥವೇ ಮಾಡಿಕೊಂಡಿಲ್ಲ.
ನಮಗೆ ಇಷ್ಟೆಲ್ಲ ಐಶ್ವರ್ಯ ಇದ್ದು ನನಗೆ ಒಂದು ಬೈಕ್ ಕೊಡಿಸಲು ನಿಮಗೆ ಆಗುತ್ತಿಲ್ಲ. ನನ್ನ ಕಷ್ಟ ನಾನು ಯಾರಿಗೆ ಹೇಳಿಕೊಳ್ಳಲಿ ಎಂದು ಮನೆ ಬಿಟ್ಟು ಹೊರಗೆ ಬಂದೇ ಬಿಟ್ಟ ತಂದೆಯವರು ಮೂಕರಾದರು ತಂದೆ ಕೆಲವು ಸಾರಿ ಮಗನನ್ನು ಮಾತನಾಡಿಸೋಣ ಎಂದು ಮಾತನಾಡಲಿಕ್ಕೆ ಬಂದರು ಆದರೂ ಮಗನು ಮಾತಾಡಲಿಕ್ಕೆ ಇಷ್ಟಪಡಲಿಲ್ಲ ಹೀಗೆ ಕೆಲವು ವರ್ಷಗಳು ಉರುಳಿದವು.
ಆ ಯುವಕನು ಬೇರೆಯ ಒಂದು ಬಿಸಿನೆಸ್ ಮಾಡಿ ಮಗನು ಕೂಡ ಯಶಸ್ವಿಯಾದನು ಆದರೆ ಕೆಲವು ತೊಂದರೆ, ಕಷ್ಟದ ಸಮಯದಲ್ಲಿ, ತಂದೆ ನೀಡುತ್ತಿದ್ದ ಉಪಾಯಗಳು ತಂದೆ ಮಾಡುತ್ತಿದ್ದ ಕೆಲವು ವರ್ತನೆಗಳು, ಅನುಭವಗಳು. ಇವನನ್ನು ಹಿಡಿಸುತ್ತಿದ್ದವು ಆದರೂ ಇವನಿಗೆ ತಂದೆಯ ಬಗ್ಗೆ ಏನು ಒಂದು ರೀತಿ ತಾತ್ಸಾರ ಹೀಗೆ ಒಂದು ದಿನ ತನ್ನ ಮನೆಯಲ್ಲಿ ಕುಳಿತಿರಬೇಕಾದರೆ ಯಾರಿಂದಲೂ ಸಂದೇಶ ತಿಳಿಯಿತು.
ತಂದೆ ತೀರಿ ಹೋಗಿದ್ದಾರೆ ಎಂದಾಗ ಇವನಿಗೆ ಬೇಸರವೂ ಆಯಿತು ತಕ್ಷಣ ಹೋಗಿ ತಂದೆಯ ಎಲ್ಲಾ ಅಂತ್ಯ ಕ್ರಿಯೆಗಳನ್ನು ಮುಗಿಸಿದನು ಮತ್ತೆ ಮನೆಗೆ ಬಂದನು ಅಪ್ಪ ಎಲ್ಲಿ ಕುಳಿತಿದ್ದರು ಅಲ್ಲಿ ನೋಡಿದ ನಂತರ ಎಸೆದಿದ್ದ ಆ ಬಾಕ್ಸ್ ಅಲ್ಲೇ ಇತ್ತು ಮತ್ತೆ ಬೇರೆ ಬೇರೆ ಕಾಗದಗಳು ಕೂಡ ಇದ್ದವು.
ಮತ್ತೆ ಆ ಬಾಕ್ಸ್ ಓಪನ್ ಮಾಡಿದ ಅದರಲ್ಲಿ ಡೈರಿಯಿತ್ತು ಅದನ್ನು ಸುಮ್ಮನೆ ತಿರುಗಿಸಿ ನೋಡಿದ ಇವನ ಜನ್ಮ ದಿನವಾದ ದಿನದ ಆ ಪುಟದಲ್ಲಿ ಒಂದು ಕವರ್ ಇತ್ತು ಅದು ಇನ್ನೂ ಓಪನ್ ಮಾಡಿರಲೇ ಇಲ್ಲ ಏನಿರಬಹುದು ಎಂದು ಕುತೂಹಲದಿಂದ ನೋಡಿದರೆ ಇವನ ಹೆಸರೇ ಇತ್ತು.
ತಂದೆಯವರು ಖರೀದಿ ಮಾಡಿದ ಬೈಕಿನ ರಸೀದಿ ಇವನು ಪಾಸ್ ಆಗುವುದಕ್ಕಿಂತ ಮುಂಚಿನ ಒಂದು ದಿನವಾಗಿತ್ತು ಆಗ ತಾನೇ ತಾನಾಗಿ ಕಣ್ಣಿನಿಂದ ನೀರು ಬಂತು ತನ್ನ ಮೇಲೆ ತನಗೆ ಅಪರಾಧಿ ಭಾವನೆ ಬಂತು ನಾನು ನಿಧಾನವಾಗಿ ಪರಿಶೀಲನೆ ಮಾಡಲಿಲ್ಲ ನನ್ನ ತಂದೆಯನ್ನು ನಾನೇ ಅರ್ಥಮಾಡಿಕೊಳ್ಳಲಿಲ್ಲ ಎಂದು ಕೊರಗಿದ. ಎಷ್ಟು ಪಶ್ಚಾತ್ತಾಪ ಪಟ್ಟರು ಪ್ರಯೋಜನವಿಲ್ಲ ಇರುವಾಗಲೇ ಸರಿಯಾಗಿ ಅರ್ಥಮಾಡಿಕೊಳ್ಳೋಣ.
ಚಟಗಳನ್ನು ಬಿಡಲಾರರು.
ಮಲ್ಲಿಕ್ ಹಾಗೂ ಮಿನಾರ್ ಎಂಬುವರು ಇಬ್ಬರೂ ತುಂಬ ಆತ್ಮೀಯ ಸ್ನೇಹಿತರಾಗಿರುತ್ತಾರೆ ಇಬ್ಬರು ವ್ಯಾಪಾರ ಮಾಡಿಕೊಂಡಿರುತ್ತಾರೆ ಮಲ್ಲಿಕ್ ಆದವನು ಮಲ್ಲಿಗೆ ಹೂವು ಮಾರಿಕೊಂಡು ಜೀವನ ಸಾಗಿಸುತ್ತಿರುತ್ತಾನೆ ಮಿನಾರ್ ಎಂಬುವನು ಮೀನು ಮಾರಿಕೊಂಡು ತನ್ನ ಜೀವನ ಸಾಗಿಸುತ್ತಿರುತ್ತಾನೆ.
ಒಂದು ದಿನ ಮಿನಾರ್ ಮಲ್ಲಿಕ್ ಮನೆಗೆ ಹೋಗುತ್ತಾನೆ ದೀರ್ಘವಾಗಿ ಮಾತನಾಡುತ್ತಾರೆ ಯಾವುದೋ ವಿಷಯದ ಬಗ್ಗೆ ಚರ್ಚೆ ಮಾಡುತ್ತಾರೆ ಸಮಯ ಕಳೆದುದೆ ತಿಳಿಯುವುದಿಲ್ಲ ಹಾಗೆ ಮಾತು ಆಡುತ್ತಾ ತುಂಬಾ ಸಮಯ ಕಳೆದು ಹೋಗುತ್ತದೆ ಮಲ್ಲಿಕ್ ಹೇಳುತ್ತಾನೆ ನೀನು ಇವತ್ತು ಇಲ್ಲೇ ಮಲಗಿ ನಾಳೆ ಹೋಗು ಎಂದು ಹೇಳುತ್ತಾನೆ ಅದಕ್ಕೆ ಸಮಯವೂ ಹೆಚ್ಚಾಗಿರುವುದರಿಂದ ಮಿನಾರ್ ಒಪ್ಪಿಕೊಳ್ಳುತ್ತಾನೆ.
ಇಬ್ಬರೂ ಮತ್ತೆ ತಮ್ಮ ಕಷ್ಟ ನಷ್ಟಗಳನ್ನು ಮಾತಾನಾಡಿಕೊಂಡು ಒಳ್ಳೆಯ ಊಟ ಮಾಡಿಕೊಂಡು ಮಲಗಲಿಕ್ಕೆ ಒಂದು ಕೊಠಡಿಯನ್ನು ಕೊಡುತ್ತಾನೆ. ಆದರೆ ಮಿನಾರ್ ಗೆ ಏನೇ ಮಾಡಿದರೂ ನಿದ್ದೆ ಬರುವುದಿಲ್ಲ ನಿದ್ದೆ ಗಾಗಿ ಚಡಪಡಿಸುತ್ತಿರುತ್ತಾನೆ ಮಲ್ಲಿಕ್, ಇದನ್ನು ಗಮನಿಸಿ ಮಲ್ಲಿಕ್ ಮಿನಾರ್ ಗೆ ಹೇಳುತ್ತಾನೆ.
ನಿನಗೆ ನಿದ್ದೆ ಬರುತ್ತಿಲ್ಲ ಇದಕ್ಕೆ ಮುಖ್ಯ ಕಾರಣ ಏನೆಂದರೆ ನೀನು ತಂದಿರುವ ಮೀನಿನ ಬುಟ್ಟಿಯನ್ನು ನಿನ್ನ ತಲೆಯ ಪಕ್ಕ ಇಡು ಆಗ ನಿನಗೆ ನಿದ್ದೆ ಬರುತ್ತದೆ ಎಂದು ಹೇಳುತ್ತಾನೆ ಆಗ ಅದರಂತೆ
ಮೀನಿನ ಬುಟ್ಟಿಯನ್ನು ಇಡುತ್ತಾನೆ ನಂತರ ಸುಖವಾದ ನಿದ್ರೆ ಬರುತ್ತದೆ.
ಮೀನಿನ ವಾಸನೆ ಬಿಟ್ಟು ಇರಲಾರನು. ಕೆಲವರು ಎಷ್ಟೇ ಚೆನ್ನಾಗಿ ಏನೇ ಇದ್ದರು ಎಂತಹ ಸಂಸ್ಕಾರವಿದ್ದರೂ ಕೂಡ ಕೆಲವೊಂದಕ್ಕೆ ಜೋತು ಬಿದ್ದಿರುತ್ತಾರೆ ಅವರನ್ನು ಬದಲಿಸುವುದು ಕಷ್ಟ ಮತ್ತೆ ಹಲವರು ಯಾವುದೊ ಚಟಕ್ಕೆ ಬಲಿಯಾಗುತ್ತಾರೆ. ಕೆಲವರು ಯಾವುದೇ ಕಾರಣಕ್ಕೂ ತಮ್ಮ ಚಟಗಳನ್ನು ಬಿಡಲಾರರು ಸಾಧ್ಯವಾದಷ್ಟು ನಾವು ಚಟಗಳಿಂದ ದೂರವಿರೋಣ.
ಯಾವತ್ತಿಗೂ ಶಾಶ್ವತವಲ್ಲ
ಸೂಕ್ಷ್ಮಮನಸುಳ್ಳ ಋಷಿಗಳು ಕಾಡಿನ ಸಮೀಪದಲ್ಲಿ ವಾಸವಾಗಿರುತ್ತಾರೆ ಈ ಆಶ್ರಮದಲ್ಲಿ ಒಂದು ಸುಂದರವಾದ, ಬುದ್ಧಿವಂತೆಯಾದ ಅಪ್ಸರೆಯಂತಹ ಒಬ್ಬಳು ಮಗಳು ಇರುತ್ತಾಳೆ ಬೇರೆ ಕಡೆಯಿಂದ ಆಶ್ರಮಕ್ಕೆ ಬರುವವರಿಗೆ ಹಣ್ಣು ನೀರು * ಕೂಟ್ಟು ತಂದೆ ಮಗಳು ಎಲ್ಲರಿಗೂ ಉಪಚಾರ ಮಾಡಿಕೊಂಡು ಇರುತ್ತಾರೆ.
ಒಂದು ದಿನ ಯುವರಾಜ ಬರುತ್ತಿರಬೇಕಾದರೆ ಆಕಸ್ಮಿಕವಾಗಿ ಆಶ್ರಮ ಖಂಡಿತು ಆಶ್ರಮದ ಒಳಗೆ ಹೋದನು ಎಲ್ಲರಂತ ಇವನಿಗೂ ಉಪಚಾರವನ್ನು ಮಾಡಿದಳು ನಂತರ ಯುವರಾಜನು ಅವಳ ಸೌಂದರ್ಯಕ್ಕೆ ಮರುಳಾಗಿ ತನ್ನ ಬಾಳ ಸಂಗಾತಿಯನ್ನಾಗಿ ಮಾಡಿಕೊಳ್ಳುತ್ತೇನೆ ಎಂದು ಋಷಿಯ ಮಗಳಿಗೆ ತನ್ನ ಅನಿಸಿಕೆ ತಿಳಿಸಿದನು.
ಯುವತಿಗೆ ತುಂಬಾ ಗೊಂದಲವಾಯಿತು ಚಿಕ್ಕ ವಯಸ್ಸಿನಿಂದಲೇ ಧ್ಯಾನಮಾಡಿಕೊಂಡು ಒಳ್ಳೆಯ ಮಾರ್ಗವಾಗಿ ಇನ್ನೂ ಕೆಲವು ಸಾಧನೆಯನ್ನು ಮಾಡಬೇಕಾಗಿತ್ತು ಈಗಲೇ ಮದುವೆ ಬೇಡ ಎಂಬುದು ಅವಳ ಇಚ್ಛೆ ಆದರೆ ನೇರವಾಗಿ ಹೇಳುವ ಹಾಗಿಲ್ಲ ಯುವರಾಜನು ಕೂಡ ಯಾವುದೇ ಕಾರಣಕ್ಕೂ, ಒಪ್ಪುವ ಸ್ಥಿತಿಯಲ್ಲಿ ಇರಲಿಲ್ಲ..
ಋಷಿಯ ಮಗಳು ಒಂದು ಉಪಾಯವನ್ನು ಕಂಡುಕೊಂಡಳು ಯುವರಾಜನಿಗೆ ಹೇಳಿದಳು ನೀವು ನನ್ನನ್ನು ನಿಜವಾಗಿ ಪ್ರೀತಿಸುತ್ತಿದ್ದರೆ ಒಂದು ತಿಂಗಳು ಬಿಟ್ಟು ಬನ್ನಿ ಆಗ ಯುವರಾಜನಾದವನು ನಿನಗಾಗಿ ನಾನು ಒಂದು ತಿಂಗಳೇನು ಆರು ತಿಂಗಳು ಬೇಕಾದರೂ ಕಾಯುತ್ತೇನೆ ಎಂದು ಹೇಳಿ ಹೊರಟ.
ಋಷಿಯ ಮಗಳು ಒಂದು ತಿಂಗಳು ಸರಿಯಾಗಿ ಊಟ ಮಾಡದೆ ಹೆಚ್ಚು, ವ್ರತಗಳನ್ನು ಮಾಡಿ ಹೆಚ್ಚು ಉಪವಾಸಗಳು ಇದ್ದಳು ನಂತರ ಯುವರಾಜ ಭೇಟಿಯಾಗಲು ಬಂದ ಆ ವೇಳೆಗೆ ಋಷಿಯ ಮಗಳನ್ನು ನೋಡಿ ನನಗೆ ಈ ಹೆಣ್ಣು ಬೇಡವೆಂದು ತಿರಸ್ಕರಿಸಿದನು.
ಋಷಿಯ ಮಗಳು ಒಂದು ತಿಂಗಳು ಸರಿಯಾಗಿ ಊಟ ಮಾಡದೆ ವ್ರತ ಕೈಗೊಂಡಿದ್ದರಿಂದ ಮತ್ತೆ ತನ್ನ ದೇಹದ ಬಗ್ಗೆ ನಿರ್ಲಕ್ಷ ಮಾಡಿದ್ದರಿಂದ ರೋಗಿಯಂತೆ ಕಂಡಳು ಮುಖದ ಸೌಂದರ್ಯವು ಬಾಡಿತು. ಆದ್ದರಿಂದ ಯುವರಾಜನು ತಿರಸ್ಕರಿಸಿದ ಆಗ ಋಷಿಯ ಮಗಳಿಗೆ ಸಂತೋಷವಾಯಿತು ಇವಳ ಉಪಾಯ ಫಲಿಸಿತು. ಬಾಹ್ಯ ಸೌಂದರ್ಯ, ರೂಪ, ಯಾವತ್ತಿಗೂ ಶಾಶ್ವತವಲ್ಲ ಎನ್ನುವುದನ್ನು ಅರಿತುಕೊಳ್ಳೋಣ.
ಅದೇ ಸತ್ಯವಾಗಿಬಿಡುತ್ತದೆ.
ಒಂದೇ ಕಂಪನಿಯಲ್ಲಿ ಬಹಳಷ್ಟು ಕೆಲಸಗಾರರು ಕೆಲಸ ಮಾಡಿಕೊಂಡು ಇದ್ದರು ಒಂದು ಸಾರಿ ಹತ್ತು ಕೆಲಸಗಾರರು ಸೇರಿ ಒಂದು ಪ್ರವಾಸವನ್ನು ಕೈಗೊಂಡರು ಆ ಪ್ರವಾಸ ಬೆಟ್ಟದ ಮೇಲೆ ದರ್ಶನ ಮಾಡಿ ಬರಬೇಕು ಅವರಲ್ಲರು ದರ್ಶನಕ್ಕೆ ಹೋದರು ದರ್ಶನ ಮಾಡಿದ ನಂತರ ಬೆಟ್ಟದ ಸವಿಯನ್ನು ಸವಿಯೋಣ ಎಂದು ಅಡ್ಡ ದಾರಿಯಿಂದ ಬೆಟ್ಟದ ಕೆಳಗೆ ಬರುತ್ತಿದ್ದರು.
ಬೆಟ್ಟದ ಮೇಲಿಂದ ಬರುತ್ತಿರಬೇಕಾದರೆ ದಾರಿ ತಪ್ಪಿದರು ಆಗ ಇವರಿಗೆ ತುಂಬಾ ನೀರಿನ ದಾಹವಾಯಿತು ಆಗ ಆ ಬೆಟ್ಟದಲ್ಲಿ ಯಾವುದೇ ಕಾರಣಕ್ಕೂ ಎಲ್ಲಿಯೂ ನೀರು ಸಿಗಲಿಲ್ಲ ಅಲ್ಲಿ ಇಲ್ಲಿ ಹುಡುಕಿದಾಗ ದೂರದಲ್ಲಿ ನೋಡಿದಾಗ ನೀರು ಸ್ವಲ್ಪವೇ ಸ್ವಲ್ಪ ಇತ್ತು.
ಆಗ ಆ ನೀರನ್ನು ಹೇಗೆ ತೆಗೆಯಬೇಕು ಎಂದು ಯೋಚಿಸಿದರು ಆದರೆ ಯಾವುದೇ ಕಾರಣಕ್ಕೂ ಉಪಾಯ ಉಳಿಯಲಿಲ್ಲ. ಆಗ ಅದರಲ್ಲಿ ಒಬ್ಬ ಇದ್ದವನು ಒಂದು ಉಪಾಯವನ್ನು ಸೂಚಿಸಿದನು. ನಮ್ಮ ಟವಲುಗಳನ್ನು ಒಂದೊಂದಾಗಿ ಉದ್ದ ಮಾಡಿ ನಾವು ನಿಂತಿರುವ ಕೊಳೆ ನೀರನ್ನು ತೆಗೆದು ಕುಡಿಯುವಂಥದ್ದು.
ಮೊದಲು ಇದಕ್ಕೆ ಯಾರೂ ಒಪ್ಪಲಿಲ್ಲ ನಂತರ ಇದೇ ಸರಿ ಎಂದು ಎಲ್ಲರೂ ನಿರ್ಧಾರ ಮಾಡಿದರು ಆದರೆ ಅದರಲ್ಲಿ ಒಬ್ಬ ಮಾತ್ರ ಯಾವುದೇ ಕಾರಣಕ್ಕೂ ನಾನು ನೀರು ಕುಡಿಯುವುದಿಲ್ಲ ಎಂದು ಹೇಳಿದನ್ನು ಹಾಗೇಯೇ ನೀರು ಕುಡಿಯಲಿಲ್ಲ ನಂತರ 9 ಒಂಬತ್ತು ಜನ ನೀರು ಕುಡಿದು ದಾಹ ತೀರಿಸಿಕೊಂಡರು.
ಪ್ರವಾಸ ಮುಗಿಸಿ ತಮ್ಮ ವಾಸಸ್ಥಳಕ್ಕೆ ಬಂದರು ಕೆಲವರು ಇವರ ಪ್ರವಾಸ ಹೇಗಿತ್ತು ಎಂದು ಕೇಳಿದರು ಆಗ ಕೆಲಸಗಾರರು ತಮ್ಮ ಪ್ರವಾಸವನ್ನು ವಿವರಿಸಿದರು ಅದರಲ್ಲಿ ನಾವು ದಾರಿ ತಪ್ಪಿದಾಗ ಒಬ್ಬ ಮಾತ್ರ ನೀರು ಕುಡಿದನು ನಾವು ಒಂಬತ್ತು ಜನರು ನೀರು ಕುಡಿಯಲಿಲ್ಲ ವೆಂದು ಹೇ ಸುಳ್ಳು ಹೇಳಿದರು ಒಂದು ಸುಳ್ಳನ್ನು ಅನೇಕರು ಹೇಳಿದಾಗ ಅದೇ ಸತ್ಯ ಎಂದು ನಂಬುತ್ತಾರೆ.
ಕಡಿಮೆ ಪ್ರಮಾಣದಲ್ಲಿ
ಒಂದು ಊರಿನಲ್ಲಿ ಒಬ್ಬರು ಸುಸಂಕೃತ ಮಾಲೀಕರು ಇದ್ದರೂ ಅವರಿಗೆ ಇಬ್ಬರು ಮಕ್ಕಳು ಚೆನ್ನಾಗಿ ಓದಿ ಒಬ್ಬ ವೈದ್ಯನಾದ ಇನ್ನೊಬ್ಬ ಕಂಟ್ರಾಕ್ಟರ್ ತಮ್ಮ ತಮ್ಮ ಕೆಲಸದಲ್ಲಿ ಪ್ರಾವಿಣ್ಯತೆಯನ್ನು ಪಡೆದು ನಂತರ ಇವರದೇ ಸ್ವಂತವಾಗಿ ಆರಂಭಿಸಲು ಯೋಚಿಸಿದರು.
ತಂದೆಗೆ ಈ ವಿಷಯವನ್ನು ತಿಳಿಸಿದರು ಆಗ ತಂದೆ ಆಶೀರ್ವದಿಸಿದರು ತಂದೆಯವರು ಮುನ್ನೆಚ್ಚರಿಕೆ ಕೂಟ್ಟರು ವ್ಯಾಪಾರದಲ್ಲಿ ಯಾವುದೇ ಕಾರಣಕ್ಕೂ ಮೋಸ ವಂಚನೆ ಮಾಡುವುದು ಸರಿಯಲ್ಲ ಪ್ರಾಮಾಣಿಕವಾಗಿ ನಡೆದುಕೊಳ್ಳಿ ಸ್ವಲ್ಪ ನಿಧಾನವಾದರೂ ಉನ್ನತ ಮಟ್ಟಕ್ಕೆ ತಲುಪಬಹುದು ಎಂದು ಸಲಹೆ ನೀಡಿದರು.
ನಿಮ್ಮ ಆತ್ಮ ಸಾಕ್ಷಿಗೆ ಎಂದು ವಿರುದ್ಧವಾಗಬೇಡಿ ಎಂದು ಒತ್ತಿ ಹೇಳಿದರು. ನಂತರ ನಾಲ್ಕು, ವರ್ಷದಲ್ಲಿ ಇವರ ವ್ಯವಹಾರವು ಚೆನ್ನಾಗಿ ಸಮೃದ್ಧಿ ಆಗುತ್ತಾ ಬಂತು ಮಾಲೀಕರ ಮಕ್ಕಳು ವ್ಯವಹಾರದಲ್ಲಿ ಅಷ್ಟು ಕುಶಲತೆ ಮತ್ತು ಪ್ರಾಮಾಣಿಕತೆ ಇಲ್ಲ ಎಂಬುದು ಇತರರಿಂದ ಕೇಳಿ ಬಂತು.
ಮಕ್ಕಳನ್ನು ಪರೀಕ್ಷಿಸೋಣವೆಂದು ತಂದೆಯವರು ಒಂದು ಹಬ್ಬದ ದಿನದಂದು ತನ್ನ ಮಕ್ಕಳಿಗೆ ಕೂರಿಸಿಕೊಂಡು ನಿಮ್ಮ ವ್ಯವಹಾರ ಹೇಗೆ ನಡೆಯುತ್ತಿದೆ ಎಂದು ಕೇಳಿದರು ಆಗ ಮಕ್ಕಳು ಹೇಳಿದರು ಅಪ್ಪಾಜಿ ನಾವೇನು ತುಂಬ ಮೋಸ ಮಾಡುತ್ತಿಲ್ಲ ಅಲ್ಲಿ ಇಲ್ಲಿ ಅಲ್ಪ ಸ್ವಲ್ಪ ಮಾಡುತ್ತಿದ್ದೇವೆ ವ್ಯಾಪಾರ ಅಂದಮೇಲೆ ಅಲ್ಪಸ್ವಲ್ಪ ಇರಲೇಬೇಕು ಎಂದು ಹೇಳಿದರು.
ತಂದೆಯಾದವರು ಇಂದು ಹಬ್ಬವಾದ್ದರಿಂದ ನಾನೇ ಪಾಯಸವನ್ನು ಮಾಡುತ್ತೇನ ಪಾಯಸ ಮಾಡಿದ್ದರು ಪಾಯಸದಿಂದ ಘಮಘಮ ಸುವಾಸನೆ ಬರುತ್ತಿತ್ತು ಎಲ್ಲರಿಗೂ ಕಪ್ಪಿನಲ್ಲಿ ಪಾಯಸ ಹಾಕಿ ತಂದು ಇಟ್ಟು ಹೇಳಿದರು ಇದರಲ್ಲಿ ನಾನು ಬೇಕಾದ ಎಲ್ಲವೂ ಒಳ್ಳೆಯ ವಸ್ತುಗಳನ್ನೇ ಹಾಕಿದ್ದೀನಿ ಹಾಗೆ ಇದರಲ್ಲಿ ನಮ್ಮ ಮನೆಯಲ್ಲಿ ಬೆಕ್ಕು ಸಾಕಿದ್ದೇವೆ ಅಲ್ಲವೇ ಅದರ ಮಲವನ್ನು ಕಡಿಮೆ ಪ್ರಮಾಣದಲ್ಲಿ ಹಾಕಿ ಮಾಡಿದ್ದೇನೆ ತುಂಬಾ ಕಡಿಮೆ ಪ್ರಮಾಣದಲ್ಲಿ ಎಂದು ಹೇಳಿದರು.
ಎಲ್ಲರೂ ತಿನ್ನೋಣ ಎಂದರು ಮಕ್ಕಳ ಮುಖ ಬಿಳಚಿಕೊಂಡಿತು ಅಪ್ಪಾಜಿ, ಹೀಗೆಲ್ಲಾ ಮಾಡುತ್ತೀರಾ ಎಂದು ಪ್ರಶ್ನಿಸಿದರು ಹೊಲಸು ಹೇಗೆ ತಿನ್ನಲಿಕ್ಕೆ ಆಗುತ್ತೆ ಎಂದು ಮಕ್ಕಳು ಕೇಳಿದಾಗ ಆಗ ತಂದೆಯವರು ಸಮಾಧಾನದಿಂದ ನಿಮ್ಮ ವ್ಯವಹಾರದಲ್ಲಿ ವ್ಯಾಪಾರದಲ್ಲಿ ನೀವು ಕೂಡ ಅಲ್ಪಸ್ವಲ್ಪ ಮೋಸ ವಂಚನೆ ಮಾಡುತ್ತಿದ್ದೀರಲ್ಲ ಅದಕ್ಕೆ ನಾನು ಅಲ್ಪಸ್ವಲ್ಪವೇ ಬೆರೆಸಿದ್ದೇನೆ ಎಂದು ಉತ್ತರ ಕೊಟ್ಟರು.
ಹೊಲಸು ಸ್ವಲ್ಪ ತಿಂದರೂ ಅಷ್ಟೇ ಹೆಚ್ಚಾಗಿದ್ದರೂ ಅಷ್ಟೇ ಮೋಸ ವಂಚನೆ ಎನ್ನುವುದು ಅಷ್ಟೇ ಸ್ವಲ್ಪ ಮಾಡಿದರೂ ಮೋಸ ಹೆಚ್ಚು ಮಾಡಿದರು ಮೋಸವೇ ಎಂದು ಉದಾಹರಣೆ ಸಮೇತ ತಿಳಿಸಿದಾಗ ಮಕ್ಕಳಿಗೆ ಅರಿವಾಯಿತು.