ಒಬ್ಬ ಚಾಣಾಕ್ಷ ರಾಜನಿದ್ದನು ರಾಜನಿಗೆ ಒಬ್ಬಳು ತ್ರಿಪುರ ಸುಂದರಿ ಮಗಳು ಇದ್ದಳು ಅವಳು ಕೂಡ ತುಂಬಾ ಬುದ್ದಿವಂತೆ ಚಾಣಾಕ್ಷತೆ, ಚುರುಕಾಗಿದ್ದಳು.
ರಾಜನು ಯೋಚನೆ ಮಾಡಿದ ಮಗಳನ್ನು ಮದುವೆ ಮಾಡಬೇಕಾದರೆ ಧೈರ್ಯವಂತ, ಬುದ್ಧಿವಂತ, ಶಕ್ತಿವಂತನಾದವನಿಗೆ ಮದುವೆ ಮಾಡಬೇಕು ಅದಕ್ಕೆ ಒಂದು ಸ್ಪರ್ಧೆಯನ್ನು ಇಟ್ಟನು ಸ್ಪರ್ಧೆ ಇಟ್ಟು ಒಂದು ದಿನಾಂಕವನ್ನು ಗೊತ್ತುಮಾಡಿ ಎಲ್ಲರನ್ನೂ ಆಮಂತ್ರ ನೀಡಿದನು.
ಸ್ಪರ್ಧೆಗೆ ಬೇಕಾದಷ್ಟು ರಾಜರು, ಯುವರಾಜರು, ಬಂದು ಪಾಲ್ಗೊಂಡರು ಸ್ಪರ್ಧೆ ಏನು ಎಂದರೆ ನದಿಯ ಈ ದಡದಿಂದ ಆ ದಡಕ್ಕೆ ಹೋಗಬೇಕು ಆದರೆ ನದಿಯಲ್ಲಿ ನೋಡುತ್ತಿದ್ದಂತೆಯೇ ಮೊಸಳೆಗಳು ಬಾಯಿ ಬಿಚ್ಚಿಕೊಂಡು ಕುಳಿತಿವೆ ಯಾರೇ ಹೋದರೂ ತಿನ್ನಬೇಕು ಎಂದು ಕಾಯುತ್ತಿವೆ. ಇದನ್ನು ದಾಟಿ ಆ ದಡ ಸೇರಿದರೆ ಅವರಿಗೆ ಮಾತ್ರ ಮದುವೆ ಮಾಡಿಕೊಡುತ್ತೇನೆ ಎಂದು ಹೇಳಿದನು.
ರಾಜನ ಈ ಮಾತು ಕೇಳಿ ಬಂದಿದ ಎಲ್ಲಾ ರಾಜರು ಯುವರಾಜರು ಯೋಚನೆಯಲ್ಲಿ ಮುಳುಗಿದರು ಹೆದರಿಕೆಯಿಂದ ಕುಸಿದರು ಎಲ್ಲರೂ ನೋಡುತ್ತಿದ್ದರು ಆದರೆ ಯಾರಿಗೂ ಧುಮುಕುವ ಈಜುವ ತಾಕತ್ತು ಬರಲಿಲ್ಲ ಅಷ್ಟರಲ್ಲಿ ಆಶ್ಚರ್ಯವಾಗಿ ಒಬ್ಬ ನದಿಗೆ ಬಿದ್ದನು ಬಿದ್ದ ನಂತರ ಶರವೇಗದಲ್ಲಿ ಈಜಿಕೊಂಡು ದಡವನ್ನು ಸೇರಿಯೇ ಬಿಟ್ಟ.
ಆಗ ರಾಜನು ಸಂತೋಷದಿಂದ ಯುವಕನನ್ನು ಹೊಗಳಿದನು, ಕೊಂಡಾಡಿದನು. ಆಗ ರಾಜನಿಗೆ ಯುವಕ ಹೇಳುತ್ತಾನೆ ನನಗೆ ಮೊದಲು ಇದನ್ನು ತಿಳಿಸಿ ನನ್ನನ್ನು ಕೆರೆಗೆ ತಳ್ಳಿದವರು ಯಾರು ಎಂದನು ಈ ಯುವಕನು ಎಲ್ಲರಂತೆ ಸಾಮಾನ್ಯ ಮನುಷ್ಯನೇ.
ಯಾರು ಹೋಗೊತ್ತಿಲ್ಲವಾದುದರಿಂದ ಯಾರೋ ಯುವಕನನ್ನು ತಳ್ಳಿದ್ದಾರೆ ನದಿಯಲ್ಲಿ ಬಿದ್ದಿದ್ದಾನೆ ಬಿದ್ದನಂತರ ತನ್ನ ಜೀವ ಉಳಿಸಿಕೊಳ್ಳುವುದಕ್ಕಾಗಿ ದಿಕ್ಕು ದೆಸೆ ಇಲ್ಲದೆ ಈಜಿಕೊಂಡು ದಡವನ್ನು ಸೇರಿದ್ದಾನೆ ಅಷ್ಟೆ ಧೈರ್ಯ ಇಲ್ಲದೇ ಇರುವವರಿಗೆ ಈ ರೀತಿ ಮಾಡಿದಾಗ ಧೈರ್ಯ ತಾನೇ ತಾನಾಗಿ ಬರುತ್ತದೆ.
ನಾವು ಯಾರಿಗೆ ನಂಬಬೇಕು?
ಒಬ್ಬ ಮಾಲೀಕ ಇರುತ್ತಾನೆ ಅವನಿಗೆ ನೋಡಿಕೊಳ್ಳಲು ಒಬ್ಬ ಕೆಲಸದವನು ಇರುತ್ತಾನೆ ಮಾಲೀಕನ ಆರೋಗ್ಯಕ್ಕಾಗಿ ದಿನನಿತ್ಯ ಒಂದು ಲೀಟರ್ ಹಾಲು ಕುಡಿಸಬೇಕು ಇಲ್ಲದಿದ್ದರೆ ಅವನ ಆರೋಗ್ಯ ಕೆಡುತ್ತದೆ ಎಂದು ವೈದ್ಯರು ಹೇಳುತ್ತಾರೆ.
ಮಾಲೀಕನಾದವನು ದಿನ ಹಾಲು ಕುಡಿಯುತ್ತಾನೆ ಆದರೆ ಹಾಲಿನಲ್ಲಿ ನೀರು ಇರಬಹುದು ಎಂದು ಮಾಲೀಕನಿಗೆ ಅನುಮಾನ ಬರುತ್ತದೆ ಮೊದಲನೇ ಕೆಲಸದವನಿಗೆ ತೆಗೆಯುವ ಹಾಗಿಲ್ಲ ಮೊದಲನೆಯವನು 250 ಮಿ.ಲೀ ಹಾಲನ್ನು ತೆಗೆದು ನೀರನ್ನು ಬೆರೆಸುತ್ತೀದ್ದನು ಹಾಗಾಗಿ ಇನ್ನೊಬ್ಬ ಕೆಲಸದವನನ್ನು ನೇಮಕ ಮಾಡಿಕೊಳ್ಳುತ್ತಾನೆ.
ಇವನನ್ನು ಗಮನಿಸುವುದಕ್ಕೆ ಎರಡನೆಯವನು ಬುದ್ಧಿವಂತ ಬಂದ ನಂತರ ಇನ್ನೂ ನೀರು ಜಾಸ್ತಿಯಾದಂತೆ ಕಾಣಿಸುತ್ತದೆ ಇವನೂ ಕೂಡ ತನ್ನ ಭಾಗ ತೆಗೆದುಕೊಳ್ಳಬೇಕಲ್ಲ ಆದ್ದರಿಂದ ಇವನು ಕೂಡ 250 ಮಿ.ಲೀ ಹಾಲನ್ನು ತೆಗೆದು ನೀರನ್ನು ಬೆರೆಸುತ್ತಿದ್ದನು ನಂತರ ಮೂರನೇಯವನನ್ನು ಕಿಲಾಡಿ ಸೇರಿಕೊಂಡನು.
ಅದೇ ಸ್ಥಿತಿ ಕೊನೆಗೆ ಇನ್ನೊಬ್ಬನನ್ನು ನೇಮಿಸಿಕೊಳ್ಳುತ್ತಾನೆ ಅಂದರೆ ನಾಲ್ಕನೆಯವನು 3 ಕೆಲಸದವರು ಸ್ವಲ್ಪ ಸ್ವಲ್ಪ ಹಾಲು ತೆಗೆದುಕೊಳ್ಳುತ್ತಿದ್ದರು ಆದರೆ ನಾಲ್ಕನೆಯವನು ಮಹಾ ಚತುರನಾಗಿದ್ದನು ಅವನಿಗೂ ಕೂಡ ಹಾಲು ಬೇಕೇ ಬೇಕಲ್ಲ ಈಗ ಏನು ಮಾಡುವುದು ಎಂದು ಯೋಚಿಸಿ ನಾಲಕ್ಕೂ ಮಂದಿ ಕುಳಿತುಕೊಂಡು ಒಂದು ಉಪಾಯವನ್ನು ಹೂಡುತ್ತಾರೆ.
ಏನೆಂದರೆ ಮಾಲೀಕ ಮಲಗಿದ ಸಮಯದಲ್ಲಿ ಹಾಲಿನ ಕೆನೆಯನ್ನು ಮಾಲೀಕನ ಮೀಸೆಗೆ ಅಂಟಿಸಿ ಬಿಡುತ್ತಿದ್ದರು ಎದ್ದು ಹಾಲು ಕೇಳಿದರೆ ಸ್ವಾಮಿಯವರೇ ನೀವು ಹಾಲು ಕುಡಿದು ಬಿಟ್ಟಿದ್ದೀರಿ ನೋಡಿ ಎಂದು ಕನ್ನಡಿ ಮುಂದೆ ಹಾಲಿನ ಕೆನೆಯನ್ನು ಅವನ ಮೀಸೆಗೆ ಅಂಟಿದ್ದು ತೋರಿಸುತ್ತಿದ್ದರು ಮಾಲೀಕನು ಗಲಿಬಿಲಿಯಾದನು ಬಹಳಷ್ಟು ಸಾರಿ ನಾವು ಯಾರನ್ನು ನಂಬಬೇಕು ಎನ್ನುವುದರಲ್ಲಿ ಸೋಲುತ್ತೇವೆ.
ನಂತರ ನಾನು ಆಟ ಆಡುತ್ತೇನೆ
ಒಬ್ಬ ತಂದೆ ಅವನ ಕೆಲಸಗಳನ್ನು ಮಾಡಿಕೊಂಡು ಮನೆಗೆ ಬರುತ್ತಾರೆ ಆಗ ಮಗ ಬಂದು ತಂದೆಯನ್ನು ನನ್ನ ಜೊತೆ ಆಟ ಆಡಿ ಎಂದು ಬೇಡಿಕೊಳ್ಳುತ್ತಾನೆ ಅಪ್ಪ ನನ್ನ ಜೊತೆ ಆಟ ಆಡೋಣ ಎಂದಾಗ ಇವತ್ತು ನಾಳೆ ಇವತ್ತು ನಾಳೆ ಎಂದು ತಂದೆಯಾದವರು ಹೇಳುತ್ತಲೇ ಇರುತ್ತಾರೆ.
ಮಗನಿಗೆ ಅಪ್ಪನ ಜೊತೆ ಆಟವಾಡಲೇಬೇಕು ಎಂದು ಹಠ ಮಾಡುತ್ತಾನೆ ಆಗ ಬರುವ ಭಾನುವಾರ ನಿನ್ನ ಜೊತೆ ಆಟವಾಡುತ್ತೇನೆ ಎಂದು ಹೇಳುತ್ತಾರೆ ಆದರೆ ಅವತ್ತು ಕೂಡ ತಂದೆಯವರಿಗೆ ಹೆಚ್ಚು ಕೆಲಸವಿರುತ್ತದೆ ಮಗ ನೀವು ಹೇಳಿದ್ದೀರಿ ಆಟ ಆಡುತ್ತೇನೆ ಎಂದು ಕೇಳುತ್ತಾನೆ ಆಗಲಿ ಎಂದು ತಂದೆಯಾದವರು.
ಒಂದು ಉಪಾಯವನ್ನು ಯೋಚಿಸುತ್ತಾರೆ ನನ್ನ ಜೊತೆ ನೀನು ಆಟ ಆಡಬೇಕಾದರೆ ಒಂದು ಕೆಲಸವನ್ನು ನಿನಗೆ ಕೊಡ್ತೀನಿ ಮಾಡು ನಂತರ ನಾನು ಆಡುತ್ತೇನೆ ಎನ್ನುತ್ತಾರೆ ತಂದೆಯಾದವರು ಜಗತ್ತಿನ ಭೂಪಟವನ್ನು ಅನೇಕ ತುಂಡುಗಳನ್ನು ಮಾಡಿ ಅದನ್ನು ಎಲ್ಲಾ(ಮಿಕ್ಸ್ ಮಾಡಿ) ಬೆರೆಸಿ ಇದನ್ನು ನೀನು ಜೋಡಿಸು ನಂತರ ನಾನು ಆಟ ಆಡುತ್ತೇನೆ ಎಂದು ತಪ್ಪಿಸಿಕೊಳ್ಳುತ್ತಾರೆ.
ತಂದೆಯವರು ಯೋಚಿಸುತ್ತಾರೆ ಚಿತ್ರಪಟ ಎರಡು ದಿನವಾದರೂ ಮಗು ಜೋಡಿಸಲು ಸಾಧ್ಯವಿಲ್ಲ ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾರೆ ಆದರೆ ಮಗು ಕೆಲವು ನಿಮಿಷಗಳಲ್ಲೇ ಭೂಪಟವನ್ನು ಜೋಡಿಸಿ ತಂದೆಗೆ ತೋರಿಸುತ್ತದೆ ತಂದೆ ಕಕ್ಕಾಬಿಕ್ಕಿ ಯಾಗುತ್ತಾರೆ ಏನು ಹೇಳಬೇಕು ಎಂದು ತೋಚುವುದಿಲ್ಲ ನಂತರ ಸಮಾಧಾನ ಮಾಡಿಕೊಂಡು ಹೇಗೆ ಜೋಡಿಸಿದೆ ಎಂದು ಕೇಳಿದರೆ ಆಗ ಮಗ ಹೇಳುತ್ತಾನೆ.
ಉತ್ಸಾಹದಿಂದ ಅಪ್ಪಾ ನಾನು ಒಂದು ಕಡೆ ಇದನ್ನು ಇಟ್ಟಾಗ ಗೊತ್ತಾಗಲಿಲ್ಲ ಮತ್ತೆ ಎರಡು ಮೂರು ಸಾರಿ ಪ್ರಯತ್ನಿಸಿದ ನಂತರ ಇದರ ಹಿಂದೆ ಒಂದು ಮನುಷ್ಯನ ಚಿತ್ರವಿತ್ತು ಆ ಚಿತ್ರವನ್ನು ಜೋಡಿಸಿದೆ ಭೂಪಟವಾಗಿದೆ ಎಂದು ಕುಣಿಯುತ ನಲಿಯುತ ಸಂತೋಷದಿಂದ ಹೇಳಿದನು.
ಒಂದು ಕಡೆ ಕಾಣುವುದು ಇನ್ನೊಂದು ಕಡೆ ಕಾಣುವುದಿಲ್ಲ ಒಂದು ಕಡೆ ಸಮಸ್ಯೆ ಇರಬಹುದು ಆ ಸಮಸ್ಯೆಯನ್ನು ಬೇರೆ ಕಡೆಯಿಂದ ನೋಡಿದಾಗ ತುಂಬ ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.
ಕಿರುಚಿದನು ಆದರೂ ಬಾಗಿಲು ತೆರೆಯಲಿಲ್ಲ
ಒಂದು ದೊಡ್ಡ ಐಸು ತಯಾರಿಸುವಂತಹ ಫ್ಯಾಕ್ಟರಿ ಇತ್ತು ಅಲ್ಲಿ ಬಹಳಷ್ಟು ಜನರು ಕೆಲಸ ಮಾಡಿಕೊಂಡು ಇದ್ದರು ಅದರಲ್ಲಿ ಒಬ್ಬ ಯುವಕ ಸಂಜೆ ಕೆಲಸ ಮುಗಿಸಿ ಹೊರಡಬೇಕೆನ್ನುವ ಸಮಯದಲ್ಲಿ ತನ್ನ ಅನ್ನದ ಡಬ್ಬಿಯನ್ನು ಮರೆತಿದ್ದನು
ಫ್ಯಾಕ್ಟರಿಯಿಂದ ಆಚೆ ಬಂದಾಗ ತನ್ನ ಡಬ್ಬಿಯನ್ನು ನೆನಪಿಸಿಕೊಂಡನು ನಂತರ ಡಬ್ಬಿಯನ್ನು ಮತ್ತೆ ತೆಗೆದುಕೊಳ್ಳಲು ಫ್ಯಾಕ್ಟ್ರಿಯಾ ಒಳಗೆ ಹೋದ ಅಷ್ಟರಲ್ಲಿ ಎಲ್ಲಾ ಬಾಗಿಲುಗಳು ಮುಚ್ಚಿದವು ಯುವಕನು ಕಿರುಚಿದನು ಆದರೂ ಬಾಗಿಲು ತೆರೆಯಲಿಲ್ಲ ನಂತರ ಭಯಭೀತನಾದನು ನಂತರ ಯುವಕ ಯೋಚಿಸಿದ ಇವತ್ತು ನನ್ನ ಕೊನೆಯ ದಿನ ಏಕೆಂದರೆ ಜೀರೋ ಡಿಗ್ರಿಯಿಂದ ತಾಪಮಾನ ಹೆಚ್ಚಾದಂತೆ ಹಿಮದ ಪರ್ವತದಲ್ಲಿ ಇರುವಂತೆ ಭಾಸವಾಗುತ್ತದೆ ಅದನ್ನು ತಡೆಯುವ ಶಕ್ತಿ ನನಗೆ ಇಲ್ಲ ಎಂದು ಇದೇ ಯೋಚನೆಯಲ್ಲಿ ಮುಳುಗಿದನು
ಸ್ವಲ್ಪ ಸಮಯದ ನಂತರ ವಾಚ್ ಮೆನ್ ಬಂದು ಕರೆದುಕೊಂಡು ಹೋಗಿ ತನ್ನ ಕೊಠಡಿಯಲ್ಲಿ ಕೂರಿಸಿ ನಂತರ ಕಳುಹಿಸಿದನು ಆಗ ಯುವಕ ಯೋಚಿಸಿದನು
ನಾನು ಅಲ್ಲೇ ಇದ್ದೀನಿ ಎಂದು ನಿಮಗೆ ಹೇಗೆ ಗೊತ್ತಾಯ್ತು ಎಂದು ವಾಚ್ಮನ್ಗೆ ಕೇಳಿದ ಆಗ ವಾಚ್ ಮೆನ್ ಹೇಳಿದನು ನೀವು ದಿನನಿತ್ಯ ಹೋಗಬೇಕಾದರೆ ನನ್ನನ್ನು ಮುಗುಳ್ನಗುತ್ತಾ ಕಾಫಿ ಆಯಿತೇ ಚೆನ್ನಾಗಿದ್ದೀರಾ ಎಂದು ಕೇಳುತ್ತೀರಾ ಆದುದರಿಂದ ಇವತ್ತು ನೀವು ಕಾಣಲಿಲ್ಲ ಆದ್ದರಿಂದ ನೀವು ಒಳಗೆ ಎಲ್ಲಾದರೂ ಇರಬಹುದು ಎಂದು ನಿಮ್ಮನ್ನು ಹುಡುಕಿಕೊಂಡು ಬಂದೆ ಎಂದು ಹೇಳಿದನು ಆಗ ಯುವಕನು ತುಂಬು ಹೃದಯದಿಂದ ಕೃತಜ್ಞತೆಯನ್ನು ಸಲ್ಲಿಸಿದನು.
ಯಾವುದೇ ಕಾರಣಕ್ಕೂ ಕದಿಯಲಾರನ್ನು
ಜೇನು ಹುಳು ಬಹಳಷ್ಟು ಹೂವುಗಳಿಂದ ಮಕರಂದವನ್ನು ಹೀರಿ ಬಹಳ ಕಷ್ಟಪಟ್ಟು ತುಪ್ಪವನ್ನು ತಯಾರಿಸಿ ಇಡುತ್ತದೆ ಆದರೆ ಆ ತುಪ್ಪವನ್ನು ಮನುಷ್ಯ ಸುಲಭವಾಗಿ ಕಿತ್ತು ತರುತ್ತಾನೆ ಹಾಗೆಂದು ಆ ಜೇನು ಹುಳುಗಳು ಶೇಖರಿಸುವುದು ಬಿಡುವುದಿಲ್ಲ ಜೇನು ಅದರ ಕೆಲಸ ಮಾಡುತ್ತಿರುತ್ತದೆ ಜೇನುತುಪ್ಪ ತಯಾರಿಸಲು ಬೇಕಾದಷ್ಟು ಸಮಯ ಬೇಕಾಗುತ್ತದೆ.
ಆದರೆ ಜೇನುತುಪ್ಪವನ್ನು ಮನುಷ್ಯ ತೆಗೆದುಕೊಂಡು ಬರಲು ಸ್ವಲ್ಪ ಸಮಯವೇ ಸಾಕು ಇದನ್ನು ಗಮನಿಸುತ್ತಿದ್ದ ಒಂದು ಪಕ್ಷಿಯು ಹೇಳುತ್ತದೆ ಇದರಿಂದ ನಿನಗೆ ಬೇಸರವಾಗುವುದಿಲ್ಲವೇ? ಆಗ ಜೇನು ನೋಣ ಹೇಳುತ್ತದೆ.
ಮನುಷ್ಯ ನಾವು ತಯಾರಿಸಿದ ಜೇನುತುಪ್ಪವನ್ನು ಮಾತ್ರ ತೆಗೆದು ಕೊಂಡು ಹೋಗಬಲ್ಲ ಆದರೆ ಜೇನು ತಯಾರಿಸುವ ಕಲೆಯಂತೂ ಮನುಷ್ಯ ಯಾವುದೇ ಕಾರಣಕ್ಕೂ ಕದಿಯಲಾರನ್ನು ಎಂದು ಜೇನು ಹೇಳುತ್ತದೆ ಜೇನು ಹುಳುವಿನಲ್ಲಿ ಸ್ವಾರ್ಥ ತುಂಬಿದಿದ್ದರೆ ಮನುಷ್ಯನಿಗೆ ಜೇನುತುಪ್ಪ ಸಿಗುತ್ತಲೇ ಇರಲಿಲ್ಲ.