ಒಂದು ಊರಿನಲ್ಲಿ ಮಹಾಜಿಪುಣ ಒಬ್ಬ ಭಿಕ್ಷುಕ ಇದ್ದನು ಬಿಕ್ಷುಕನಿಗೆ ಮಹತ್ತರ ಆಸೆ ಏನು ಎಂದರೆ ಮಹಾರಾಜರು ಬಂದಾಗ ಏನಾದರೂ ಕೇಳಿದರೆ ಹೆಚ್ಚಾಗಿ ಕೊಡುತ್ತಾರೆ ಎನ್ನುವ ಮನೋಭಾವನೆ ಇತ್ತು ಹೀಗೆಯೇ ರಾಜರೂ ಕೂಡ ಉದಾರಿ ಗುಣವುಳ್ಳ ರಾಜರೇ ಆಗಿದ್ದರು ಒಂದು ಸಾರಿ ರಾಜರು ಊರನ್ನು ನೋಡಲು ಬರುತ್ತಿದ್ದರು.
ಬಿಕ್ಷುಕನು ರಾಜರು ಬರುತ್ತಿರುವುದನ್ನು ನೋಡುತ್ತಿದ್ದ ನನ್ನ ಆಸೆ ಪೂರೈಸುತ್ತದೆ ಎಂದು ರಾಜರು ಬರುತ್ತಿರಬೇಕಾದರೆ ಅವನ ಹತ್ತಿರ ಇರುವಂತಹ ಬಟ್ಟೆಯಲ್ಲಿಯೇ ಚೆನ್ನಾಗಿರುವ ಬಟ್ಟೆಯನ್ನು ಹಾಕಿಕೊಂಡು ರಾಜನ ಮುಂದೆ ಜೋಳಿಗೆ ಹಾಕಿಕೊಂಡು ಬಂದು ರಾಜನಿಗೆ ನಮಸ್ಕರಿಸಿ ನಂತರ ಭಿಕ್ಷೆಯನ್ನು ಬೇಡಿದನು.
ರಾಜರು ರಥವನ್ನು ನಿಲ್ಲಿಸಿ ಇಳಿದು ಬಂದು ದೀರ್ಘವಾಗಿ ಭಿಕ್ಷುಕನನ್ನು ಗಮನಿಸಿದರು ನಂತರ ಭಿಕ್ಷುಕನಿಗೆ ನೀನು ನನಗೆ ಏನು ಕೊಡುತ್ತೀಯಾ ಎಂದು ರಾಜರೇ ಭಿಕ್ಷೆ ಕೊಡು ಎಂದು ಭಿಕ್ಷುಕನಿಗೆ ಬೇಡಿದರು ನೀನು ಏನು ಕೊಟ್ಟರೂ ಪರವಾಗಿಲ್ಲ ಏನಾದರೂ ಕೊಡಲೇ ಬೇಕು ಎಂದು ಕೇಳಿದರು ಭಿಕ್ಷುಕನಿಗೆ ತಿಳಿಯಿತು.
ರಾಜನು ರಾಜನಲ್ಲ ಇವನ್ನು ನನಗಿಂತ ದೊಡ್ಡ ಮಹಾನ್ ಭಿಕ್ಷುಕ ಏನು ಮಾಡುವುದು ಎಂದು ಗಲಿಬಿಲಿಯಾದನು ಏನು ತೋಚಲಿಲ್ಲ ಆಗ ಭಿಕ್ಷುಕ ಜೋಳಿಗೆಯಲ್ಲಿ ಕೈಹಾಕಿ ಬರೀ ಎಣಿಕೆ ಮಾಡಿ ಹತ್ತು ಅಕ್ಕಿ ಕಾಳುಗಳನ್ನು ಕೊಟ್ಟನು ರಾಜರು ಪ್ರಸಾದದಂತೆ ಸ್ವೀಕರಿಸಿದರು.
ರಾಜರು ನಂತರ ಮಂತ್ರಿಗಳಿಗೆ ಹೇಳಿದರು ಇವನು ಎಲ್ಲಿರುತ್ತಾನೆ ಏನು ಮಾಡುತ್ತಾನೆ ಇವನ ಬಗ್ಗೆ ಮಾಹಿತಿ ಕೊಡಿ ಎಂದು ಕೇಳಿದರು ಆಗಲಿ ಎಂದು ಎಲ್ಲಾ ಮಾಹಿತಿಯನ್ನು ರಾಜನಿಗೆ ಕೊಟ್ಟರು ಕೆಲವು ದಿನಗಳು ಕಳೆದ ನಂತರ ರಾಜನ ಮಂತ್ರಿಗಳು ಭಿಕ್ಷುಕನಿಗೆ ಹುಡುಕಿಕೊಂಡು ಬಂದರು.
ಆಗ ಭಿಕ್ಷುಕ ಒಂದು ಮರದ ಕೆಳಗೆ ಕುಳಿತಿದ್ದನು ಆಗ ರಾಜನ ಮಂತ್ರಿಗಳು ಭಿಕ್ಷುಕನಿಗೆ ಹತ್ತು ಚಿನ್ನದ ನಾಣ್ಯಗಳನ್ನು ಕೊಟ್ಟರು ನಮ್ಮ ರಾಜರು ತುಂಬ ದಯಾಳು ತ್ಯಾಗಮಯಿ ಅವರು ಯಾರು ಏನು ಕೊಟ್ಟರೂ ಅವರು ಇಟ್ಟುಕೊಳ್ಳುವುದಿಲ್ಲ ಮತ್ತೆ ಹಿಂತಿರುಗಿಸುತ್ತಾರೆ.
ನೀವು ಹತ್ತು ಅಕ್ಕಿಕಾಳುಗಳನ್ನು ಕೊಟ್ಟಿದ್ದೀರಿ ಆದುದರಿಂದ ಹತ್ತು ಚಿನ್ನದ ನಾಣ್ಯಗಳನ್ನು ಕೊಟ್ಟಿದ್ದಾರೆ ಎಂದು ಭಿಕ್ಷುಕನಿಗೆ ಕೊಡುತ್ತಾರೆ ಆಗ ಭಿಕ್ಷುಕ ಯೋಚನೆ ಮಾಡುತ್ತಾನೆ ನಾನು ಒಂದು ಹಿಡಿಯಷ್ಟು ಕೊಟ್ಟಿದ್ದಿದ್ದರೆ ಅಷ್ಟೂ ಚಿನ್ನದ ನಾಣ್ಯಗಳನ್ನು ಬರುತ್ತಿದ್ದವು ಎಂದು ಪಶ್ಚಾತ್ತಾಪ ಪಡುತ್ತಾನೆ.
ತನ್ನ ಮೂರ್ಖತನ ತನಗೆ ತಿಳಿಯುತ್ತದೆ ನಮಗೆ ಸಾಧ್ಯವಾದಷ್ಟು ದಾನ ಮಾಡೋಣ ಯಾವುದೋ ರೂಪದಲ್ಲಿ ಮರಳಿ ಬಂದೆ ಬರುತ್ತದೆ.
ನೀನು ಮಾತಾಡಬೇಡ ಸುಮ್ಮನಿರು
ಒಂದು ಸಾರಿ ಒಬ್ಬ ಮನುಷ್ಯ ಪ್ರವಾಸಕ್ಕೆ ಹೊರಟಿದ್ದನು ಅವನು ದಾರಿಯಲ್ಲಿ ಹೋಗುತ್ತಿರಬೇಕಾದರೆ ಬಿಸಿಲು ಹೆಚ್ಚು ಇರುವುದರಿಂದ ಆ ಪ್ರವಾಸಿಯು ಮರದ ಕೆಳಗೆ ಮಲಗಿದನು ಗೊರಕೆ ಹೊಡೆದುಕೊಂಡು ನಿದ್ರೆ ಮಾಡುತ್ತಿದ್ದಾನೆ ಇದನ್ನು ಇನ್ನೊಂದು ಪ್ರವಾಸಿ ನೋಡಿದನು ಇವನು ಕುದುರೆಯಲ್ಲಿ ಬಂದಿದ್ದನು.
ಆ ಮಲಗಿದ ಪ್ರವಾಸಿಯನ್ನು ನೋಡುತ್ತಿದ್ದಾಗ ನಿಧಾನವಾಗಿ ಒಂದು ಚಿಕ್ಕ ಹಾವಿನ ಮರಿಯು ಬಂತು ಎಲ್ಲಿ ಕಚ್ಚಿ ಬಿಡುತ್ತದೆ ಎಂದು ಹೇಳೋಣ ಎಂದರೆ ಮಲಗಿರುವವನು ಗಡಿಬಿಡಿ ಆಗುತ್ತಾನೆ ಆದ್ದರಿಂದ ಏನೂ ಮಾತನಾಡದೆ ಸುಮ್ಮನೆ ನಿಶಬ್ದತೆಯಿಂದ ನೋಡುತ್ತಲೇ ಇದ್ದನು ಪ್ರವಾಸಿಗೆ ಎಬ್ಬಿಸೋಣ ಎಂದರೆ ಹಾವು ಕಚ್ಚಿದರೆ ಸತ್ತು ಹೋಗುತ್ತಾನೆ ಎಂದು ಇದನ್ನೇ ನಿಂತು ತದೇಕಚಿತ್ತದಿಂದ ನೋಡುತ್ತಿದ್ದನು.
ನಂತರದಲ್ಲಿ ಆ ಮರಿ ಹಾವು ಆಕಡೆ ಈಕಡೆ ಸುಳಿದಾಡುತ್ತಾ ನೇರವಾಗಿ ಅವನ ಬಾಯಿಯಲ್ಲಿಯೇ ಹೋಯಿತು ಇದನ್ನು ಗಮನಿಸಿದ ಪ್ರವಾಸಿಯು ಅವನನ್ನು ಕುದುರೆ ಮೇಲೆ ಹಾಕಿಕೊಂಡು ಊರಿಗೆ ಬಂದನು ಅಲ್ಲಿ ಹೇಗಾದರೂ ವಾಂತಿ ಮಾಡಿಸಬೇಕು ಎಂದು ನೋಡಿದರೆ ಏನೂ ಸಿಗಲಿಲ್ಲ.
ನಂತರ ಕೊಳೆತ ದ್ರಾಕ್ಷಿ ಸಿಕ್ಕಿತು ಇದನ್ನು ಬಾಯಲ್ಲಿ ಹಾಕಿದ ನಂತರ ಅಷ್ಟರಲ್ಲಿ ಇತರರು ಬಂದರು ಸೋಪಿನ ನೀರನ್ನು ಉಪ್ಪಿನ ನೀರನ್ನು ತಂದರು ಇದೆಲ್ಲವನ್ನು ಬಾಯಲ್ಲಿ ಹಾಕಿದನು ಮಲಗಿದ ಪ್ರವಾಸಿಯು ಆಗ ಕಣ್ಣು ಬಿಟ್ಟು ನನಗೇನಾಗುತ್ತಿದೆ ನೀವೇನು ಮಾಡುತ್ತಿದ್ದಿರಿ ಎಂದು ಕೇಳಿದನು.
ನೀನು ಮಾತಾಡಬೇಡ ಸುಮ್ಮನಿರು ಹೇಳುತ್ತೇವೆ ಎಂದು ವಾಂತಿ ಮಾಡಿಸಿದರು ಕೊನೆಗೆ ಹಾವಿನ ಮರಿ ಕೂಡ ಬಂತು ಇದನ್ನು ನೋಡಿದ ಪ್ರವಾಸಿ ಕಕ್ಕಾಬಿಕ್ಕಿಯಾದನು ಮತ್ತೆ ಹೇಳಿದ ಆಗಲೇ ನನಗೆ ತಿಳಿಸಿದರೆ ಚೆನ್ನಾಗಿತ್ತು ಎಂದನು ಆಗ ನೋಡುತ್ತಿದ್ದ ಪ್ರವಾಸಿ ಹೇಳಿದ ಹೇಗೆ ಹೇಳಲು ಸಾಧ್ಯ ಕಚ್ಚಿಬಿಟ್ಟರೆ ಎಂದು ನಾನು ಹೇಳಲಿಲ್ಲ ಮತ್ತು ಯಾರೇ ಹೇಳುತ್ತಿದ್ದರೂ ಕೂಡ ನೀನು ನಂಬುತ್ತಿರಲಿಲ್ಲ.
ಈಗ ಕಣ್ಣುಬಿಟ್ಟು ನೋಡು ಎಂದು ಚಿಕ್ಕ ಹಾವನ್ನು ತೋರಿಸುತ್ತಾನೆ ಇಲ್ಲದಿದ್ದರೆ ನಿನ್ನ ಪ್ರಾಣವೇ ಹೋಗಬೇಕಾದ ಪರಿಸ್ಥಿತಿ ಬರುತ್ತಿತ್ತು ಎಂದು ವಿವರಿಸುತ್ತಾನೆ ಕೆಲವು ಸಾರಿ ನಮಗೆ ಕಷ್ಟ ಬಂದಾಗ ನಮಗೆ ಯಾಕೆ ಈ ಕಷ್ಟ ಎಂದು ತಿಳಿದುಕೊಳ್ಳುತ್ತೇವೆ ಬೇಸರಪಟ್ಟಿಕೊಳ್ಳುತ್ತೇವೆ ಇತರರನ್ನು ದೂಷಿಸುತ್ತೇವೆ ಮತ್ತೆ ನಾವು ಒಳ್ಳೆಯ ಸ್ಥಿತಿಗೆ ಬಂದಾಗ ಮಾತ್ರ ನಾವು ಅರ್ಥಮಾಡಿಕೊಳ್ಳುತ್ತೇವೆ.
ಮಗು ರಂಪಾಟ ಮಾಡಿ ಅಳುತ್ತಿತ್ತು
ಒಂದು ರೈಲ್ವೆ ಸ್ಟೇಷನ್ನಿನಲ್ಲಿ ಒಂದು ಹೆಂಗಸು ಇಬ್ಬರು ಮಕ್ಕಳು ಬರುತ್ತಿದ್ದರು ಆ ಹೆಂಗಸಿನ ಬಳಿ ಹಲವಾರು ಲಗೇಜ್ಗಳು ಕೂಡ ಇದ್ದವು ಕಷ್ಟಪಟ್ಟು ರೈಲ್ವೆ ಸ್ಟೇಷನ್ ಹೊರಗಿನಿಂದ ಒಳಗಡೆ ಫ್ಲಾಟ್ ಫಾರಂ ನತ್ತ ಬಂದಳು ಅಷ್ಟರಲ್ಲಿ ಚಿಕ್ಕ ಮಗು ಮಗು ರಂಪಾಟ ಮಾಡಿ ಅಳುತ್ತಿತ್ತು.
ತಿನ್ನಲು ಏನಾದರೂ ಬೇಕು ಎಂದು ದೊಡ್ಡ ಮಗು ಕೇಳಿತು ಆ ಮಗು ಹೆಚ್ಚಾಗಿ ಲಗೇಜನ್ನು ಹೊರಲಾರದು ಆ ಹೆಂಗಸು ಗಾಬರಿಯಾದಳು ಮಕ್ಕಳನ್ನು ನೋಡಿಕೊಳ್ಳುವುದು ಹೇಗೆ ಮತ್ತೆ ಆ ಲಗೇಜನ್ನು ತೆಗೆದುಕೊಂಡು ಬರುವುದು ಹೇಗೆ ಎಂದು ಚಿಂತಿಸಿದಳು.
ಅಷ್ಟರಲ್ಲಿ ಒಂದು ಯುವಕಿ ಬಂದು ನೀವೇನು ಭಯಪಡಬೇಡಿ ನಾನು ಮಕ್ಕಳನ್ನು ನೋಡಿಕೊಳ್ಳುತ್ತೇನೆ ನೀವು ಹೋಗಿ ಲಗೇಜನ್ನು ತೆಗೆದುಕೊಂಡು ಬನ್ನಿ ಎಂದು ಧೈರ್ಯ ನೀಡಿದಳು ಆ ಹೆಂಗಸು ಅವಳು ಹೇಳಿದಂತೆಯೇ ತನ್ನ ಲಗೇಜನ್ನು ಹೊತ್ತು ಕೊಂಡು ತಂದಳು ಅಲ್ಲಿಯವರೆಗೆ ಈ ಹುಡುಗಿಯು ಮಕ್ಕಳನ್ನು ಚೆನ್ನಾಗಿ ಆಟವಾಡಿಸುತ್ತಿದ್ದಳು ಇದರಿಂದ ತನಗೆ ಹಾಗೂ ಮಕ್ಕಳಿಗೆ ತುಂಬಾ ಖುಷಿಯಾಯಿತು.
ಸ್ವಲ್ಪ ಸಮಯದಲ್ಲಿಯೇ ರೈಲು ಕೂಡ ಬಂತು ಈ ಯುವಕಿಯು ಲಗೇಜನ್ನು ರೈಲಿನಲ್ಲಿ ಇಟ್ಟು ಕೊಟ್ಟಳು ನಂತರ ಆ ಮಕ್ಕಳು ಮತ್ತೆ ಈ ಹೆಂಗಸು ಟಾಟಾ ಮಾಡಿ ಹೊರಟು ಹೋದರು ನಂತರ ಹೀಗೆ ಇನ್ನೊಂದು ಸಂಸಾರ ಬಂತು ಅವರು ಕೂಡ ಲಗೇಜನ್ನು ಮಕ್ಕಳನ್ನು ಸಂಭಾಳಿಸಿಕೊಳ್ಳಲು ಕಷ್ಟಪಡುತ್ತಿದ್ದರು ಇದನ್ನು ಕೂಡ ನೋಡಿ ಆ ಯುವಕಿ ಮತ್ತೆ ಸಹಾಯ ಮಾಡಿದಳು.
ಇದನ್ನು ಗಮನಿಸುತ್ತಿದ್ದ ಒಬ್ಬ ಹಿರಿಯ ವ್ಯಕ್ತಿ ಬಂದು ಹೇಳಿದರು ನಾನು ನಿನ್ನನ್ನು ಸ್ವಲ್ಪ ಸಮಯದಿಂದ ಗಮನಿಸುತ್ತಿದ್ದೇನೆ ನೀನು ಏಕೆ ಎಲ್ಲರಿಗೂ ಸಹಾಯ ಮಾಡುತ್ತಾ ಇದ್ದೀಯಾ ಎಂದು ಕೇಳಿದರು ಆಗ ಆ ಯುವಕಿ ನನಗೆ ತಂದೆ ಇಲ್ಲ ತಂದೆ ದುಡಿಯಲಿಕ್ಕೆ ಹೋದವರು ಇಲ್ಲಿಯವರೆಗೂ ಬರಲಿಲ್ಲ.
ತಾಯಿ ಕೂಡ ಅವರನ್ನು ಹುಡುಕಿ ಬರುತ್ತೇನೆ ಎಂದು ಹೋದವರು ಅವರು ಕೂಡ ಬರಲಿಲ್ಲ ನಾನು ಒಂಟಿಯಾಗಿ ಇದ್ದೀನಿ ಆಗ ತಂದೆ ತಾಯಿಯರು ಹೇಳುತ್ತಿದ್ದರೂ ರೈಲಿನಲ್ಲಿ ಬರಬೇಕಾದರೆ ತುಂಬ ಕಷ್ಟವಂತೆ ಆದುದರಿಂದ ನಾನು ಇಲ್ಲೇ ಹತ್ತಿರದಲ್ಲಿ ನಿಲ್ದಾಣದಲ್ಲಿಯೇ ಕೆಲಸ ಮಾಡುತ್ತಿದ್ದೇನೆ.
ಸಮಯ ಸಿಕ್ಕಿದಾಗ ಬಂದು ಈ ರೀತಿ ಸೇವೆ ಮಾಡುತ್ತೇನೆ ನನಗೆ ನಿಜವಾಗಲೂ ತುಂಬಾ ಖುಷಿ ಆಗುತ್ತೆ ಎಂದು ಉತ್ತರ ನೀಡಿದಳು. ಇತರರಿಗೆ ಸ್ವಲ್ಪ ತ್ಯಾಗ ಸ್ವಲ್ಪ ಸಮಯ ಒಳ್ಳೆಯ ಮಾತು ಇಷ್ಟು ನೀಡಿದರೂ ಕೂಡ ಇಡೀ ಜೀವನ ಇರುವವರೆಗೂ ಮರೆಯುವುದಿಲ್ಲ ಸಮಯ ಸಿಕ್ಕಾಗ ನಾವು ಕೂಡ ನಮಗೆ ಎಷ್ಟು ಸಾಧ್ಯವೋ ಅಷ್ಟು ಸಹಾಯ ಮಾಡೋಣ.
ಬೆಲೆಯೂ ಹೆಚ್ಚಾಗಿದೆ
ಒಬ್ಬ ದುರಾಸೆಯುಳ್ಳ ಮನುಷ್ಯ ಹೆಚ್ಚಾಗಿ ದುಡಿಯಬೇಕೆಂದು ಬೇರೆ ದೇಶಕ್ಕೆ ಹೋದನು ಅದೇ ರೀತಿ ಹೆಚ್ಚಾಗಿ ಹಣವನ್ನು ದುಡಿದು ಮನೆಗೆ ಏನನ್ನು ಕೊಡಬೇಕು ಕೊಡುತ್ತಿದ್ದನು ಬಿಟ್ಟು ಬೇರೆ 2 ಸೈಟುಗಳನ್ನು ಖರೀದಿಸಿದನು ಹಾಗೆಯೇ ಕೆಲವು ಷೇರುಗಳು ಕೂಡ ಖರೀದಿಸಿದನು.
ವಿದೇಶದಿಂದ ಇನ್ನೇನು ಸ್ವಲ್ಪ ದಿನದಲ್ಲಿಯೇ ಊರಿಗೆ ಬರಬೇಕು ಅಂದುಕೊಂಡನು ಆದರೆ ದುರದೃಷ್ಟ ಇವನು ಪ್ರಯಾಣ ಮಾಡಬೇಕಾದರೆ ಬೇರೆ ಕಡೆ ಹೋಗಿ ತಲುಪಿದನು ಅದೊಂದು ನಿರ್ಜನ ಪ್ರದೇಶ ಅಲ್ಲಿ ಯಾವುದೇ ರೀತಿಯಿಂದಲೂ ಬರಲು ಸಾಧ್ಯವಿಲ್ಲ.
ಉದಾಹರಣೆಗೆ ಒಂದು ಕಾಡಿನಲ್ಲಿ ಹೋಗಿ ಇದ್ದಂತೆ ತಿನ್ನಲಿಕ್ಕೆ ಇರಲಿಕ್ಕೆ ಎಲ್ಲವೂ ಸರಿಯಾಗಿದೆ ಆದರೆ ಎಲ್ಲಿದ್ದೀನಿ ಎಂದು ಅವನಿಗೆ ಗೊತ್ತಾಗುತ್ತಿಲ್ಲ ಹೀಗಿರಬೇಕಾದರೆ ಮತ್ತೆ ಅವನು ತನ್ನ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಹೋಗಬೇಕೆಂದು ಚಿಂತಿಸಿದನು ಹೇಗೋ ಕಷ್ಟಪಟ್ಟು ದಾರಿ ಕಂಡುಹಿಡಿದು ಹೋದನು.
ಅಲ್ಲಿಯವರಿಗೆ ಇವನು ಮನೆಯವರಿಗೆ ಕಂಪೆನಿಗೆ ಯಾರಿಗೂ ಕೂಡ ಸಂಪರ್ಕ ಇಲ್ಲದೆ ಇರುವುದರಿಂದ ಇವನು ಸತ್ತೇ ಹೋಗಿದ್ದಾನೆ ಎಂದು ಭಾವಿಸಿದರು ಮತ್ತೆ ತನ್ನ ಕೆಲಸದ ವಾಸಸ್ಥಾನಕ್ಕೆ ಹೋಗಿ ಬಂದನು ನಂತರ ಅಲ್ಲಿಂದ ತಾನು ಇಟ್ಟಿದ್ದ ಷೇರುಗಳು ಎಷ್ಟಾಗಿದೆಯೆಂದು ದೂರವಾಣಿ ಮೂಲಕ ಕೇಳಿದ ಇವನು ಹಾಕಿದ್ದ ಸಾವಿರ ರೂಪಾಯಿಯ ಷೇರು ಈಗ ಲಕ್ಷಗಳಲ್ಲಿ ಬೆಳೆದಿದೆ.
ಎರಡು ಖರೀದಿಸಿದ ಮನೆಗಳು ನಗರದ ಮಧ್ಯದಲ್ಲೇ ಇರುವುದರಿಂದ ಅದರ ಬೆಲೆಯೂ ಕೋಟಿಯ ಮೇಲೆಯೇ ಇದೆ ಎಂದು ಉತ್ತರ ಬಂತು ನಂತರ ಮನೆಗೆ ಫೋನ್ ಮಾಡಿದನು ಹೆಂಡತಿ ಮಕ್ಕಳಿಗೆ ಮಾತನಾಡಿದನು.
ಮನೆಯವರಿಗೆ ಮಾತನಾಡಿದ ನಂತರ ವಿಮಾನಕ್ಕೆ ಟಿಕೆಟ್ ಬುಕ್ ಮಾಡಿದನು ಟಿಕೆಟ್ನ ಬೆಲೆ ಹೆಚ್ಚಾಗಿದೆ ಎಂದು ಕೊರಗಿದನು ಇವನು ಖರೀದಿಸಿದ್ದ ಷೇರುಗಳ ಬೆಲೆ ಹೆಚ್ಚಾಗಿದೆ ಮನೆಯ ಬೆಲೆ ಹೆಚ್ಚಾಗಿದೆ ಇವನೂ ಕೂಡ ಈಗಹೆಚ್ಚಾಗಿ ಗಳಿಸಿದ್ದಾನೆ ಅರ್ಥಮಾಡಿಕೊಳ್ಳಲಿಲ್ಲ.
ಎಲ್ಲದರ ಬೆಲೆ ಹೆಚ್ಚಾಗಿದೆ ಆದ್ದರಿಂದ ಟಿಕೆಟ್ ಬೆಲೆಯು ಹೆಚ್ಚಾಗಿದೆ ಎಂದು ಅರ್ಥ ಮಾಡಿಕೊಳ್ಳುತ್ತಿಲ್ಲ ಕಾಲಕ್ಕೆ ತಕ್ಕಂತೆ ಬೆಲೆ ಹೆಚ್ಚಾಗುತ್ತಿರುತ್ತದೆ ಎಲ್ಲಾ ಕಾಲಗಳಿಗೂ ಹೊಂದಿಕೊಳ್ಳೋಣ.
ನನ್ನ ಬಡತನ ಹೋಗಲಿಲ್ಲ
ಒಬ್ಬ ಆಸೆ ಬುರುಕ ಭಿಕ್ಷುಕ ಹಲವಾರು ವರ್ಷಗಳಿಂದ ಭಿಕ್ಷೆ ಬೇಡಿಕೊಂಡು ತನ್ನ ಜೀವನವನ್ನು ನಡೆಸುತ್ತಿದ್ದನು ಬಿಕ್ಷುಕನಿಗೆ ಒಂದು ಮಹಾ ಆಸೆ ಇತ್ತು ನಾನು ನೇರವಾಗಿ ಮಹಾರಾಜರನ್ನು ಭೇಟಿಯಾದರೆ ರಾಜರು ನನಗೆ ಹೆಚ್ಚು ಭಿಕ್ಷೆಯನ್ನು ನೀಡುತ್ತಾರೆ ಎಂಬ ವಿಚಾರ ಮನಸ್ಸಿನಲ್ಲಿ ಇತ್ತು.
ಒಂದು ಸಾರಿ ರಾಜರು ಆಕಡೆಯಿಂದ ಬರಬೇಕಾದರೆ ಈ ಭಿಕ್ಷುಕನು ನೇರವಾಗಿ ಭೇಟಿಯಾದನು ಆಗ ರಾಜರು ಇವನನ್ನು ನೋಡಿ ಇದು ಜಾದುವಿನ ಪಾತ್ರೆಯನ್ನು ಕೊಟ್ಟರು ಇದನ್ನು ಚೆನ್ನಾಗಿ ಉಪಯೋಗಿಸು ನೀನು ನನಗಿಂತ ಐಶ್ವರ್ಯವಂತ ನಾಗುತ್ತೀಯಾ ಎಂದು ಹೇಳಿದರು.
ಭಿಕ್ಷುಕನು ಮನೆಗೆ ಬಂದು ನೋಡಿದಾಗ ಭಿಕ್ಷುಕನು ತುಂಬ ನಿರಾಶನಾದನು ಏಕೆಂದರೆ ಬರೀ ಪಾತ್ರೆಯಾಗಿತ್ತು ಅಷ್ಟೆ ಅದನ್ನು ಹಿಡಿದು ಭಿಕ್ಷೆ ಬೇಡುವುದಕ್ಕೆ ಇರಬೇಕು ಎಂದು ಅದರಲ್ಲೇ ದಿನನಿತ್ಯ ಭಿಕ್ಷೆ ಬೇಡಿ ಬದುಕಿದನು ನಂತರ ಹಲವಾರು ತಿಂಗಳುಗಳ ನಂತರ ಮತ್ತೆ ಅದೇ ರೀತಿ ಬಿಕ್ಷುಕನು ರಾಜನಿಗೆ ಭೇಟಿಯಾದನು.
ರಾಜರು ಇನ್ನೂ ಏಕೆ ನೀನು ಭಿಕ್ಷೆ ಬೇಡುತ್ತಿದ್ದೀಯಾ ಆಗ ಬಿಕ್ಷುಕ ಇನ್ನೇನು ಮಾಡಲಿ ನೀವು ಕೊಟ್ಟಿದ್ದು ಈ ಪಾತ್ರೆ ಬರಿ ಭಿಕ್ಷೆ ಬೇಡುವುದಕ್ಕೆ ಆಗಿದೆ ಆದರೆ ನನ್ನ ಬಡತನ ಹೋಗಲಿಲ್ಲ ಎಂದು ನಿರಾಶನಾಗಿ ಹೇಳಿದ ಆಗ ರಾಜರು ಇದು ಸಾಮಾನ್ಯ ಪಾತ್ರೆಯಲ್ಲ ಈ ಪಾತ್ರೆಯಲ್ಲಿ ಕಬ್ಬಿಣವನ್ನು ಕೂಡ ಹಾಕಿದರೆ ಚಿನ್ನವಾಗಿ ಮಾರ್ಪಡುತ್ತದೆ ಅಂಥ ಪಾತ್ರೆ ನಾನು ನಿನಗೆ ಕೊಟ್ಟಿದ್ದೇನೆ ನೀನು ಏಕೆ ಸರಿಯಾಗಿ ಉಪಯೋಗಿಸಿ ಕೊಳ್ಳಲಿಲ್ಲ ಎಂದು ಹೇಳುತ್ತಾರೆ.
ಈ ಮಾತು ಕೇಳಿದ ಭಿಕ್ಷುಕನಿಗೆ ಹೃದಯ ನಿಂತಂತೆ ಆಯಿತು ಇಷ್ಟು ಮೌಲ್ಯವಾದ ಪಾತ್ರೆಯನ್ನು ನಾನು ಭಿಕ್ಷೆ ಬೇಡುವುದಕ್ಕೆ ಉಪಯೋಗಿಸಿದೆ ಈ ಪಾತ್ರೆ ನಾನು ಚಿನ್ನ ಮಾಡಿ ಉಪಯೋಗಿಸುತ್ತಿದ್ದರೆ ನಾನೂ ಕೂಡ ಐಶ್ವರ್ಯವಂತನಾಗುತ್ತಿದ್ದೆ ಎಂದು ಪಶ್ಚಾತ್ತಾಪ ಪಡುತ್ತಾನೆ.
ನಮ್ಮಲ್ಲಿಯೂ ಕೆಲವು ವಿಶೇಷವಾದ ಕೌಶಲ್ಯಗಳು ಇವೆ ಸ್ವಯಂ ವಿಶ್ಲೇಷಣೆ ಮಾಡಿ ಅಡಗಿರುವ ಪರಿಣಿತಿಯನ್ನು ಹೆಚ್ಚಿಸಿಕೊಳ್ಳೋಣ.