ಕೊನೆಯಲ್ಲಿ ಮಾತ್ರ ಹೋಗಬೇಡಿ

ಒಂದು ಊರಿನಲ್ಲಿ ಪ್ರಾಮಾಣಿಕ ರೈತನು ಭತ್ತವನ್ನು ಚೆನ್ನಾಗಿ ಬೆಳೆಸುತ್ತಾನೆ ಬೆಳೆದಿರುವ ಭತ್ತವನ್ನು ನೋಡಿ ಸಂತೋಷಪಡುತ್ತಾನೆ ಈ ಸಾರಿ ಒಳ್ಳೆಯ ಬೆಳೆ ನನಗೆ ಬಂದಿದೆ ಯಾವಾಗ ಕಟಾವು ಮಾಡಬೇಕು ಎಂದು ಯೋಚಿಸುತ್ತಿರುತ್ತಾನೆ ಅಷ್ಟರಲ್ಲಿ ಒಬ್ಬ ಜೀಪಿನಿಂದ ಇಳಿದನು ಇವನು ಕೂಟು ಧರಿಸಿದ್ದನು ನಾನು ಅಧಿಕಾರಿ ನೋಡಿ ನನ್ನ ಐಡಿ ಕಾರ್ಡ್ ಎಂದು ತೋರಿಸಿ ನೀನು ಈ ಬೆಳೆದಿರುವ ಫಸಲನ್ನು ನಾನು ಪರಿಶೀಲಿಸಬೇಕಾಗಿದೆ.

ಭತ್ತದ ಬದಲು ಬೇರೆ ಮಾದಕ ವಸ್ತುಗಳು ಏನಾದರೂ ಬೆಳೆದಿರಬಹುದು ಎಂಬ ಅನುಮಾನವಿದೆ ಎಂದು ಜೋರು ಧ್ವನಿಯಲ್ಲಿ ಹೇಳಿದನು ರೈತ ಏನೂ ಮಾತನಾಡಲಿಲ್ಲ ನಂತರ ನಾನು ಬರುತ್ತೇನೆ ಪರಿಶೀಲಿಸಿ ಎಂದು ರೈತ ಹೇಳಿದನು ಆಗ ಅಧಿಕಾರಿ ಬೇಡ ನಾನೇ ಹೋಗುತ್ತೇನೆ ಎನ್ನುತ್ತಾನೆ ರೈತನು ಅಧಿಕಾರಿಯನ್ನು ಗಮನಿಸಿ ಎಲ್ಲವನ್ನು ಪರಿಶೀಲಿಸಿ ಆದರೆ ಕೊನೆಯಲ್ಲಿ ಮಾತ್ರ ಹೋಗಬೇಡಿ ಎಂದು ಹೇಳಿದ.

 ರೈತನ ಮಾತನ್ನು ಕೇಳಿದ ಅಧಿಕಾರಿ ಕೋಪಿಷ್ಟನಾಗಿ ಸಿಟ್ಟಿನಿಂದ  ರೈತನನ್ನು ನೀನು ಬೆಳೆಸಿರಬಹುದು ಅದಕ್ಕೆ ಹೀಗೆ ಹೇಳುತ್ತಿದ್ದೀಯಾ ಎಂದು ರೈತನನ್ನು ಗದರಿಸಿ ಹೋದ ಹೋಗಿದ್ದ 5ನಿಮಿಷಕ್ಕೆ ಅಲ್ಲಿಂದ ದಿಕ್ಕು ದಿಸೆ ಇಲ್ಲದೆ ಓಡಿಬಂದನು ಏಕೆ ಈ ರೀತಿ ಓಡಿ ಬರುತ್ತಿದ್ದಾನೆ ಎಂದರೆ ನಾಯಿಗಳು ಅಟ್ಟಿಸಿಕೊಂಡು ಬರುತ್ತಿದೆ.

 ಆಗ ರೈತನ ಹೇಳಿದನು ನೀವು ನನಗೆ ಐಡಿ ಕಾರ್ಡ್ ತೋರಿಸಿದರಲ್ಲ ಅದೇ ಐಡಿ ಕಾರ್ಡನ್ನು ಆ ನಾಯಿಗಳಿಗೆ ತೋರಿಸಿ ಅವು ನಿಮಗೆ ಏನೂ ಮಾಡಲಾರವು ಎಂದನು ಆಗ ರೈತನಿಗೆ ಅಂಗಲಾಚಿದನು ದಯವಿಟ್ಟು ನನ್ನನ್ನು ಕಾಪಾಡಿಕೊಳ್ಳಿ ಎಂದಾಗ ನಂತರ ರೈತನು ನಾಯಿಗಳಿಗೆ ಸನ್ನೆ ಮಾಡಿದನು.

 ಆಗ ನಾಯಿಗಳು ಸುಮ್ಮನಾದವು ಕೆಲವು ಸಾರಿ ಅಧಿಕಾರ ದರ್ಪ ಇದೆಯೆಂದು ಎಲ್ಲೆಲ್ಲೋ ತೋರಿಸಲಿಕ್ಕೆ ಹೋಗಿ ಇರುವ ಮರ್ಯಾದೆಯನ್ನು ಹಾಳು ಮಾಡಿಕೊಳ್ಳುತ್ತಾರೆ.

 ನಾವು ಪ್ರಕೃತಿಯ ನಿಯಮದಂತೆ

ಒಂದು ಊರಿನಲ್ಲಿ ಇದ್ದಕ್ಕಿದ್ದ ಹಾಗೆ ಸಾಂಕ್ರಾಮಿಕ ರೋಗ ಬಂದು ಎಲ್ಲರು ತೊಂದರೆ ಅನುಭವಿಸುತ್ತಿರುತ್ತಾರೆ ಆಗ ರಾಜನಾದವನು ಬೇರೆ ಊರಿನಿಂದ ವೈದ್ಯರನ್ನು ಕರೆಸಿ ಎಲ್ಲರೂ ವಾಸಿಯಾಗಬೇಕು ಎಂದು ಔಷಧಿಗಳನ್ನು ನೀಡುತ್ತಾರೆ.

 ಹಲವು ದಿನಗಳ ನಂತರ ರೋಗವು ಶಮನವಾಗುತ್ತದೆ ನಂತರ ರಾಜನು ನನ್ನ ಗುರುಗಳು ಊರಿನ ಆಚೆ ಕಾಡಿನ ನಿಸರ್ಗದಲ್ಲಿ ಇದ್ದಾರೆ ಅವರಿಗೆ ಯಾವುದೇ ರೀತಿಯ ಸಾಂಕ್ರಾಮಿಕ ರೋಗ ಬರಬಾರದು ಎಂದು ಕರಸಿದ್ಧ ವೈದ್ಯರನ್ನು ಊರಿನ ಆಚೆ ಕಳುಹಿಸುತ್ತಾರೆ.

 ಈ ವೈದ್ಯರುಗಳು ಅಲ್ಲಿಗೆ ಹೋಗುತ್ತಾರೆ ಅಲ್ಲಿ ನೋಡಿದರೆ ಯಾರಿಗೆ ರೋಗ ಬಂದಿರುವುದಿಲ್ಲ ಹಾಗೆ ಗುರುಗಳು ಊರಿಗೆ ಹೋಗಿ ಬಂದರೂ ಗುರುಗಳಿಗೆ ರೋಗ ಬರುವುದಿಲ್ಲ ಇಲ್ಲಿ ಹೇಗೆ ರೋಗ ಬರುತ್ತಿಲ್ಲ ವೆಂದು ವೈದ್ಯರು ಗುರುಗಳಿಗೆ ಕೇಳಿದರು.

ವೈದ್ಯರು ನೀವು ಎಲ್ಲರೂ ಆರೋಗ್ಯವಾಗಿ ಇದ್ದೀರಾ ಇದರ ರಹಸ್ಯವೇನು ಆಗ ಗುರುಗಳು ಹೇಳಿದರು ನಾವು ಪ್ರಕೃತಿಯ ನಿಯಮದಂತೆ ಊಟ ಮಾಡುತ್ತೇವೆ ಹಸಿವು ಆದಾಗ ಮಾತ್ರ ಊಟ ಮಾಡುತ್ತೇವೆ ಇಲ್ಲದಿದ್ದರೆ ಇಲ್ಲ ಮತ್ತೆ ದಿನನಿತ್ಯ ನಮ್ಮ ಕೆಲಸ ಕಾರ್ಯಗಳು ಇದ್ದೇ ಇರುತ್ತದೆ.

 ಕಾಲಕಾಲಕ್ಕೆ ಸರಿಯಾದ ಆಹಾರವನ್ನು ತೆಗೆದುಕೊಳ್ಳುತ್ತವೆ ದಿನನಿತ್ಯ ವ್ಯಾಯಾಮ ಮಾಡುತ್ತೇವೆ ನಾಲಿಗೆ ರುಚಿ ಬಿಟ್ಟರೆ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ ನಾಲಿಗೆಯ ರುಚಿಗೆ ನಾವು ಏನೂ ತಿನ್ನುವುದಿಲ್ಲ ನಾಲಿಗೆ ರುಚಿ ಬಿಟ್ಟರೆ ಎಲ್ಲರ ಆರೋಗ್ಯವು ಚೆನ್ನಾಗಿರುತ್ತದೆ ಎಂದು ಹೇಳಿದರು. ನಾನು ಆಹಾರದಲ್ಲಿ ಸರಿಯಾದ ನಿಯಮವನ್ನು ಪಾಲಿಸುತ್ತಿದ್ದೇನೆಯೇ?

ಕೇಳಿದವರೆಲ್ಲರೂ ಗಾಬರಿಯಾದರು

ಒಂದು ಊರಿನಲ್ಲಿ ಒಬ್ಬ ನೀಚ ಬುದ್ಧಿ ಶ್ರೀಮಂತ ಇದ್ದನು ಕನಿಕರ ಎಂಬುದು ಇರಲಿಲ್ಲ ಬಡ್ಡಿಗೆ ಹಣವನ್ನು ಕೊಟ್ಟು ಹೆಚ್ಚಾಗಿ ಬಡ್ಡಿಯನ್ನು ವಸೂಲು ಮಾಡಿ ಬದುಕುವುದು ಹೆಂಡತಿ ಮಾತ್ರ ಸುಸಂಕೃತಳು.

 ಕಷ್ಟ ಎಂದರೆ ಮರುಗುತ್ತಿದ್ದಳು ದಯೆ ಕರುಣೆ ಎಲ್ಲವೂ ಇತ್ತು ಹೀಗೆ ಒಂದು ಸಾರಿ ಬರಗಾಲ ಬಂದಿತು ಸಣ್ಣಪುಟ್ಟ ರೈತರು ಚಿಕ್ಕ ಚಿಕ್ಕ ವ್ಯಾಪಾರಿಗಳು ಕಂಗಾಲಾದರು ಗಂಡನಾದರೆ ಅವರ ಆಸ್ತಿಯನ್ನು ಕಿತ್ತುಕೊಂಡು ಕಳುಹಿಸುತ್ತಿದ್ದನು ಹೆಂಡತಿ ಆ ರೀತಿ ಮಾಡದೆ ಸ್ವಲ್ಪ ಧನ ಸಹಾಯ ಮಾಡುತ್ತೇನೆ ಎಂದು ಎಲ್ಲರಿಗೂ ಸ್ವಲ್ಪ ಸ್ವಲ್ಪ ಧನ ಸಹಾಯ ಮಾಡಿದಳು.

ಈ ಹಣ ನನಗೆ ಬೇಡ ಎಂದು ಹೇಳಿದಾಗ ರೈತರು ಹೇಳಿದರು ಬೇಡ ಬೇಡ ನಾವು ನಿಮ್ಮ ಹಣವನ್ನು ಕೊಡುತ್ತೇವೆ ಬಡ್ಡಿ ಕೊಡಲಿಕ್ಕೆ ಆಗುವುದಿಲ್ಲ ನಿಧಾನವಾಗಿ ನಿಮ್ಮ ಹಣವನ್ನು ನಿಮಗೆ ನಾವು ತಲುಪಿಸುತ್ತೇವೆ ಎಂದು ಭರವಸೆ ನೀಡಿದರು ಆಗ ಹೆಂಡತಿಯಾದವಳು ಹೇಳಿದಳು.

 ನನ್ನ ಗಂಡ ಸತ್ತಾಗ ಈ ಹಣವನ್ನು ವಾಪಸ್ಸು ಮಾಡಿ ಎಂದು ಹೇಳಿದಳು ಕೇಳಿದವರೆಲ್ಲರೂ ಗಾಬರಿಯಾದರು ಹೆಂಡತಿ ಏಕೆ ಈ ರೀತಿ ಹೇಳುತ್ತಿದ್ದಾಳೆ ಎಂದು ಆಲೋಚಿಸಿದರು ನಮಗೆ ಇಷ್ಟು ಕಷ್ಟ ಕೊಡುತ್ತಿದ್ದಾನೆ ಹೆಂಡತಿಗೂ ಕಷ್ಟಕೊಡುತ್ತಿರಬಹುದು ಆದುದರಿಂದ ಆಕೆ ಆ ರೀತಿ ಆಲೋಚನೆ ಇರಬಹುದು ಎಂದು ತಿಳಿದರು.

 ಈ ಮಾತು ಹರಡುತ್ತಾ ಹರಡುತ್ತಾ ಎಲ್ಲರಿಗೂ ತಿಳಿದು ನಂತರ ಗಂಡನಿಗೂ ತಿಳಿಯಿತು ಗಂಡನಿಗೆ ತಿಳಿದನಂತರ ಹೆಂಡತಿಗೆ ಬಂದು ಕೇಳಿದನು ನೀನು ನಾನು ಸತ್ತ ಮೇಲೆ ಹಣ ಕೊಡಿ ಎಂದು ಹೇಳಿದ್ದೀಯಾ ಎಂದು ಏರು ಧ್ವನಿಯಲ್ಲಿ ಕೇಳಿದನು ಆಗ ಹೆಂಡತಿಯಾದವಳು ವಿನಯದಿಂದ ಹೇಳಿದಳು.

 ಇಲ್ಲಿಯವರೆಗೆ ನಿಮಗೆ ಯಾರೂ ಅಷ್ಟಾಗಿ ಗೌರವ ಕೊಡುವುದಿಲ್ಲ ನಿಮಗೆ ತಿಳಿದಿದೆ ಇರಲಿ ಬಿಡು ಎಂದು ಗಂಡ ಹೇಳಿದನು ಹೆಂಡತಿ ನಾನು ಗಂಡ ಸತ್ತಮೇಲೆ ಕೊಡಿ ಎಂದು ಹೇಳಿದ್ದೀನಿ ಆದರೆ ಇದರ ರಹಸ್ಯ ಇವರೆಲ್ಲರೂ ಹಣ ಕೊಡಬೇಕು ಅಂದರೆ ನೀವು ಚೆನ್ನಾಗಿದ್ದರೆ ಅವರು ಹಣ ಕೊಡುವ ಅವಶ್ಯಕತೆಯಿಲ್ಲ ಅದಕ್ಕಾಗಿ ನಿಮಗೆ ಚೆನ್ನಾಗಿರಲಿ ಎಂದು ಹಾರೈಸುತ್ತಾರೆ ಎಂದು ಹೇಳಿದಳು.

ಹೆಂಡತಿಯ ಮಾತು ಗಂಡನಿಗೆ ಅರ್ಥವಾಯಿತು ನಂತರ ಇವನು ಹೊರಗೆ ಹೋದಾಗ ಇವನಿಗೆ ಒಳ್ಳೆಯ ರೀತಿಯಲ್ಲೇ ಮಾತನಾಡುತ್ತಿದ್ದರು ನಂತರ ಇವನು ಕೂಡ ಒಳ್ಳೆಯನಾದನು ನಂತರ ಬಹಳಷ್ಟು ಊರಿನ ಜನರಿಗೆ ಸಹಾಯ ಮಾಡಿದನು.

 ನನ್ನಿಂದ ಇದು ಸಾಧ್ಯವೇ?

 

ಸಮುದ್ರದ ಮೂಲೆಯಲ್ಲಿ ಒಂದು ಎತ್ತರವಾದ ಕಟ್ಟಡ ಇತ್ತು ಅಲ್ಲಿ ಒಬ್ಬ ಹಿರಿಯ ಮನುಷ್ಯ ನಿಧಾನವಾಗಿ ಬಂದು ಒಂದು ಮೇಣದ ಬತ್ತಿ ಹಚ್ಚಿ ನಂತರ ಅದು ಚೆನ್ನಾಗಿ ಉರಿ ಬರುತ್ತಿರುವುದನ್ನು ನೋಡಿ ನಂತರ ಗಾಳಿಗೆ ಆರದಿರಲಿ ಎಂದು ಒಂದು ಕೈಯಿಂದ ಮರೆ ಮಾಡಿಕೊಂಡು ನಿಧಾನವಾಗಿ ಮೆಟ್ಟಿಲುಗಳನ್ನು ಹತ್ತಲು ಶುರು ಮಾಡಿದನು.

 ಸ್ವಲ್ಪ ಮೆಟ್ಟಿಲು ಹತ್ತಿದ ನಂತರ ಮೇಣದಬತ್ತಿ ಉತ್ಸಾಹದಿಂದ ಒಂದು ಪ್ರಶ್ನೆಯನ್ನು ಕೇಳಿತು ನನಗೆ ನೀವು ಎಲ್ಲಿ ಕರೆದು ಕೊಂಡು ಹೋಗುತ್ತೀರಿ ಹಿರಿಯರು ಹೇಳಿದರು ಇದು ಬೆಳಕಿನ ಅಲಂಕಾರದ ಮನೆ ಯಾರಾದರೂ ದಾರಿ ಮರೆತರೆ ನೀನು ಮಾರ್ಗದರ್ಶನ ಮಾಡುವೆ ಎಂದು ಹೇಳಿ ನಿಧಾನವಾಗಿ ಮೇಲೆ ಹತ್ತುತ್ತಿದ್ದರು.

ಸ್ವಲ್ಪ ಸಮಯದ  ನಂತರ ದೀಪವು ಇನ್ನೊಂದು ಪ್ರಶ್ನೆಯೂ ಕೇಳಿತು ನನ್ನಿಂದ ಇದು ಸಾಧ್ಯವೇ? ಎಂದಾಗ ಹಿರಿಯರು ನಿನ್ನನ್ನು ನಾನು ಎತ್ತರದ ಸ್ಥಾನದಲ್ಲಿ ಕೂರಿಸಿದಾಗ ಎಲ್ಲರೂ ಬರುವಾಗ ನಿನ್ನನ್ನು ನೋಡಿ ಬರುತ್ತಾರೆ ಇಲ್ಲದಿದ್ದರೆ ಸರಿಯಾಗಿ ದಾರಿ ಕಾಣದೆ ದಾರಿ ಮರೆಯಬಹುದು ಅಥವಾ ಏನಾದರೂ ಅನಾಹುತವಾಗುತ್ತದೆ ಎಂದು ಹೇಳುತ್ತಾರೆ.

ಮೇಣದ ಬತ್ತಿ ನಾನು ಇಷ್ಟೆಲ್ಲ ಕೆಲಸ ಮಾಡಬಲ್ಲನೆ ನನ್ನ ಬೆಳಕು ಒಂದು ತುದಿಯಿಂದ ಇನ್ನೊಂದು ತುದಿಯನ್ನು ತಲುಪುತ್ತದೆಯೇ ಎಂದು ಸಂದೇಹದಿಂದ  ಕೇಳಿತು ಆಗ ಹಿರಿಯರು ಅರ್ಥಮಾಡಿಕೊಂಡು ಮೇಣದ ಬತ್ತಿಗೆ ಹೇಳಿದರು.

ನೀನು ಚೆನ್ನಾಗಿ ಉರಿಯುತ್ತಿರು ನಿನ್ನ ಕಾಯಕ ನೀನು ಮಾಡು ಅಷ್ಟೇ ಸಾಕು ಆದರೆ ಮೇಣದ ಬತ್ತಿಗೆ ಸಂದೇಹ ಹೋಗಲೇ ಇಲ್ಲ ಹಿರಿಯರು ಕೊನೆಯ ಹಂತಕ್ಕೆ ತಲುಪಿದರು ಮೇಣದ ಬತ್ತಿಯನ್ನು ಒಂದು ಕಡೆ ಇಟ್ಟು ಬೇರೆ ಕಡೆ ಇದ್ದ ಎಲ್ಲಾ ಕನ್ನಡಿಗಳನ್ನು ಸುತ್ತ ಇಟ್ಟರು ಆಗ ಕನ್ನಡಿಯಿಂದ ಜ್ಯೋತಿಯು ಮತ್ತಷ್ಟು ಜಾಸ್ತಿಯಾಯಿತು.

ಬೆಳಕು ಹೆಚ್ಚಾಯಿತು ಎಷ್ಟೇ ದೂರದಿಂದ ನೋಡಿದರೂ ಜನರಿಗೆ ತಿಳಿಯುತ್ತಿತ್ತು ನಂತರ ಮೇಣದಬತ್ತಿಗೆ ಅರಿವಾಗುತ್ತದೆ.ನಾವೂ ಕೂಡ ಮೇಣದ ಬತ್ತಿಯಂತೆ ನಮ್ಮಲ್ಲಿರುವ ಶಕ್ತಿ ನಮಗೆ ತಿಳಿಯುವುದಿಲ್ಲ ಗುರುಗಳ ಮಾರ್ಗದರ್ಶನದಂತೆ ಮುನ್ನಡೆದರೆ ಯಶಸ್ವಿಯಾಗುತ್ತೇವೆ ಮಾಡುವ ಕೆಲಸ ಪ್ರಾಮಾಣಿಕತೆಯಿಂದ ಮಾಡೋಣ.

ಸ್ವಲ್ಪಸ್ವಲ್ಪವೇ ತಿನ್ನುತ್ತಾ ಬನ್ನಿ

 

ಚಾಣಕ್ಯ ಹಾಗೂ ಚಂದ್ರಗುಪ್ತ ಇಬ್ಬರೂ ಕೂಡ ಹೇಗಾದರೂ ಮಾಡಿ ರಾಜ್ಯವನ್ನು ಗೆಲ್ಲಲೇ ಬೇಕೆಂದು ಬಹಳಷ್ಟು ಶ್ರಮಿಸುತ್ತಿರುತ್ತಾರೆ ಬರೀ ಸೋಲುತ್ತಾ ಬರುತ್ತಿರುತ್ತಾರೆ ಒಂದು ಸಾರಿ ಯುದ್ಧ ಮಾಡಿ ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಒಂದು ಊರಿನ ಆಚೆ ಬರುತ್ತಾರೆ ಒಂದು ಮನೆ ಕಾಣಿಸುತ್ತದೆ.

 ಅಲ್ಲಿ ನಿಧಾನವಾಗಿ ಹೋಗುತ್ತಾರೆ ವಯಸ್ಸಾದ ಅಜ್ಜಿಯವರು ಅಡುಗೆಯನ್ನು ಮಾಡುತ್ತಿರುತ್ತಾರೆ ಇಬ್ಬರು ಚಾಣಕ್ಯ ಚಂದ್ರಗುಪ್ತ ವೇಷ ಮರೆಸಿ ಕೊಂಡಿರುವುದರಿಂದ ಅಜ್ಜಿಗೆ ತಿಳಿಯುವುದಿಲ್ಲ ಆದರೆ ಅಜ್ಜಿಗೆ ಅರ್ಥವಾಗುತ್ತದೆ ಇಬ್ಬರು ಹಸಿದಿದ್ದಾರೆ ಎಂದು ಗ್ರಹಿಸಿ ಅಜ್ಜಿಯು ಇಬ್ಬರಿಗೂ 2ತಟ್ಟೆಗಳನ್ನು ಇಟ್ಟು ಅನ್ನವನ್ನು ಹಾಕಿ ಅದರ ಮೇಲೆ ಸಾರು ಹಾಕುತ್ತಾರೆ.

 ಇಬ್ಬರೂ ಕೂಡ ತುಂಬಾ ಹಸಿದಿರುತ್ತಾರೆ ಹಸಿವು ತಾಳಲಾರದೆ ಮಧ್ಯದಲ್ಲಿನ ಊಟ ಮಾಡಲು ಹೋಗುತ್ತಾರೆ ಆದರೆ ಅನ್ನ ಸಾರು ಎರಡು ಈಗ ತಾನೇ ಹೊಲೆಯಿಂದ ಇಳಿಸಿರುತ್ತಾರೆ  ಬಿಸಿಬಿಸಿ ಇರುವುದರಿಂದ ನಾಲಿಗೆ ತುಟಿ ಸುಟ್ಟು ಹೋಗುತ್ತದೆ ಆದರೂ ಮಧ್ಯದಿಂದಲೇ ಊಟಮಾಡಲು ಪ್ರಯತ್ನಿಸುತ್ತಾರೆ ಆಗ ಇದನ್ನು ನೋಡಿದ ಅಜ್ಜಿ ನಗುತ್ತಾ ಹೇಳುತ್ತಾರೆ.

 ಅಯ್ಯೋ ನಿಮಗೆ ಇಷ್ಟು ಬುದ್ಧಿ ಇಲ್ಲವೇ ಚಾಣಕ್ಯ ಚಂದ್ರಗುಪ್ತ ಮಾಡುವ ರೀತಿಯಲ್ಲೇ ಮಾಡುತ್ತಿದ್ದೀರಲ್ಲ ನೇರವಾಗಿ ಮದ್ಯದ ರಾಜ್ಯಕ್ಕೆ ಹೋಗಿ ಯುದ್ಧವನ್ನು ಮಾಡುತ್ತಾರೆ ಅಲ್ಲಿ ಗೆಲ್ಲಲು ಆಗುವುದಿಲ್ಲ ಮತ್ತೆ ಮರಳಿ ಬರುತ್ತಾರೆ ಅದಕ್ಕೆ ನೀವು ಒಂದು ಕಡೆಯಿಂದ ಅನ್ನವನ್ನು ಸ್ವಲ್ಪಸ್ವಲ್ಪವೇ ತಿನ್ನುತ್ತಾ ಬನ್ನಿ ನಂತರ ಮದ್ಯದ ಅನ್ನ ತಣ್ಣಗಾಗಿರುತ್ತದೆ ಎಲ್ಲಾ ಅನ್ನವು ತಿನ್ನಬಹುದು ಎಂದು ಹೇಳುತ್ತಾರೆ.

 ಈ ಮಾತನ್ನು ಕೇಳಿ ಚಂದ್ರಗುಪ್ತ ಮತ್ತು ಚಾಣಕ್ಯ ಇಬ್ಬರು ನೋಡಿ ತಾವು ಮಾಡುತ್ತಿದ್ದ ತಪ್ಪನ್ನು ಅರ್ಥಮಾಡಿಕೊಂಡು ಊಟವಾದ ನಂತರ ಅಜ್ಜಿಗೆ ಸಾಸ್ಟಾಂಗ ನಮಸ್ಕಾರ ಮಾಡಿ ಆಶೀರ್ವಾದ ಮಾಡಿ ಎಂದು ಹೇಳುತ್ತಾರೆ ಆಗ ಅಜ್ಜಿಗೆ ಆಶ್ಚರ್ಯ ಯಾಕಪ್ಪಾ ಎಂದು ಹೇಳಿದಾಗ ಆಗ ಚಾಣಕ್ಯ ಹೇಳುತ್ತಾರೆ.

 ನಾನೇ ಚಾಣಕ್ಯ ಮತ್ತು ಚಂದ್ರಗುಪ್ತ ಈ ಪಾಠ ನನಗೆ ಈಗ ಅರ್ಥವಾಗಿದೆ ಇನ್ನು ಮುಂದೆ ನಾನು ಒಂದೊಂದೇ ರಾಜ್ಯವನ್ನು ಗೆದ್ದು ನಂತರ ದೊಡ್ಡ ರಾಜ್ಯಕ್ಕೆ ಕೈ ಹಾಕುತ್ತೇನೆ ಎಂದು ಹೊರಡುತ್ತಾರೆ ಆಗ ಅಜ್ಜಿ ಆಶ್ಚರ್ಯ ಚಕಿತಾರಾಗುತ್ತಾರೆ.

 ನಾವು ಕೂಡ ಅಷ್ಟೆ ಕೆಲವು ಸಾರಿ ಚಿಕ್ಕಚಿಕ್ಕ ಕೆಲಸಗಳನ್ನು ಮಾಡದೆ ದೊಡ್ಡ ಕೆಲಸಕ್ಕೆ ಕೈ ಹಾಕಿ ಸೋಲುತ್ತೇವೆ ಮೊದಲು ಚಿಕ್ಕ ಚಿಕ್ಕ ಕೆಲಸಗಳನ್ನು ಮಾಡಿ ನಂತರ ದೊಡ್ಡ ಕೆಲಸಕ್ಕೆ ಕೈ ಹಾಕಿದಾಗ ಯಶಸ್ಸು ಸಿಕ್ಕೆ ಸಿಗುತ್ತದೆ. ನಾನು ಮಾಡುತ್ತಿದ್ದ ತಪ್ಪನ್ನು ನಾನು ಅರ್ಥ ಮಾಡಿಕೊಂಡಿದ್ದೇನೆಯೇ?

Leave a Comment