ಕೃತಜ್ಞತೆಯನ್ನು ಸಲ್ಲಿಸುತ್ತಿವೆ

ಒಬ್ಬ ಕಠೋರ ಹೃದಯವುಳ್ಳ ರಾಜನಿದ್ದನು ಅವನು ತಪ್ಪು ಮಾಡಿದವರಿಗೆ ಶಿಕ್ಷೆಯನ್ನು ನೀಡುತ್ತಿದ್ದ ಇವನು ವಿಶೇಷ ರೀತಿಯಲ್ಲಿ ಶಿಕ್ಷೆಗಳನ್ನು ನೀಡುತ್ತಿದ್ದನು ಹತ್ತು ಭಯಂಕರ ನಾಯಿಗಳನ್ನು ಸಾಕಿದ್ದ ತನ್ನ ಮಂತ್ರಿಗಳು ಹಾಗೂ ಯಾರೇ ತಪ್ಪು ಮಾಡಿದರು ಅವರಿಗೆ ಶಿಕ್ಷೆ ಕೊಡಲು ನಾಯಿಗಳನ್ನು ಉಪಯೋಗಿಸುತ್ತಿದ್ದ.

 ಒಮ್ಮೆ ಮಂತ್ರಿಯೊಬ್ಬ ಯಾವುದೋ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಚಿಕ್ಕ ತಪ್ಪು ಘಟಿಸಿತು ಅದಕ್ಕೆ ನಿಯಮದಂತೆ ರಾಜನು ನಾಯಿಗಳಿಗೆ ಆಹಾರವಾಗಿ ಹಾಕಲು ಆಜ್ಞೆ ಕೊಟ್ಟನು ಆಗ ಮಹಾರಾಜರೇ ನಾನು 15 ವರ್ಷಗಳ ಕಾಲ ನಿಮ್ಮ ಸೇವೆಯನ್ನು ಮಾಡಿದ್ದೀನಿ.

 ನನ್ನ ಒಂದು ತಪ್ಪಿಗೆ ಕ್ಷಮೆ ಇಲ್ಲವೇ ಎಂದು ಮಂತ್ರಿ ಪರಿಪರಿಯಾಗಿ ಬೇಡಿಕೊಂಡ ಆದರೂ ರಾಜ ಒಪ್ಪಲಿಲ್ಲ ನಂತರ ಒಂದು ಸಹಾಯವಾದರೂ ಮಾಡಿ ಏನೆಂದರೆ ನನಗೆ 15 ದಿನಗಳ ನಂತರ ಶಿಕ್ಷೆಯನ್ನು ನನಗೆ ಕೊಡಿ ಅದಕ್ಕೆ ನಾನು ಸಿದ್ಧ ಎಂದು ಕೇಳಿದನು ಅದಕ್ಕೆ ರಾಜ ಆಗಲಿ ಎಂದು ಮಾತು ಕೊಟ್ಟನು.

 ನಂತರ ನೇರವಾಗಿ ನಾಯಿ ಸಾಕಿದವನ ಹತ್ತಿರ ಹೋದನು ನಾಯಿ ಸಾಕಿದವನನ್ನು ವಿನಂತಿಸಿದ ಇನ್ನೂ ಹದಿನೈದು ದಿನಗಳ ಕಾಲ ನಾನು ಈ ನಾಯಿಗಳನ್ನು ನೋಡಿಕೊಳ್ಳುತ್ತೇನೆ ಎಂದನು ಅದಕ್ಕೆ ನಾಯಿ ಸಾಕುವವನು ಒಪ್ಪಿದನು.

 ದಿನವೂ ನಾಯಿಗಳಿಗೆ ಸರಿಯಾದ ಸಮಯಕ್ಕೆ ಆಹಾರಗಳನ್ನು ಕೊಡುವುದಲ್ಲದೇ ತಾನು ನಯ ವಿನಯವಾಗಿ ಮೃದುವಾಗಿ ಮಾತಾಡುವುದು ನೋಡಿಕೊಳ್ಳುವುದು ಮತ್ತೆ ಸ್ನಾನ ಮಾಡಿಸುವುದು ಈ ರೀತಿಯ ಉಪಚಾರಗಳು ಮಾಡಿದ ನಂತರ ಹದಿನೈದು ದಿನಗಳು ಕಳೆದವು.

 ಶಿಕ್ಷೆಯ ದಿನ ಬಂದಿತು ಆಗ ಮಂತ್ರಿಯನ್ನು ನಿಗದಿಯಾದ ಸ್ಥಳದಲ್ಲೇ ನಿಲ್ಲಿಸಿ ಎಲ್ಲಾ ನಾಯಿಗಳನ್ನು ಬಿಟ್ಟರು ಆದರೆ ಆಶ್ಚರ್ಯವೇ ಆಶ್ಚರ್ಯ ಒಂದು ನಾಯಿಯೂ ಕೂಡ ಮಂತ್ರಿಗೆ ಕಚ್ಚಲಿಲ್ಲ ಮತ್ತೆ ಆ ನಾಯಿಗಳು ಕಾಲುಗಳನ್ನು ನೆಕ್ಕುತ್ತಿದ್ದವು ಇದನ್ನು ಕಂಡ ರಾಜನಿಗೆ ದಿಗ್ಗಮೆಯಾಯಿತು.

  ಏಕೆ ಈ ನಾಯಿಗಳು ಇವನನ್ನು ಕಚ್ಚುತ್ತಿಲ್ಲ ಎಂದು ಕೇಳಿದಾಗ ಮಂತ್ರಿ ಹೇಳಿದ ನೋಡಿ ರಾಜರೇ ನಾನು ಹದಿನೈದು ದಿನಗಳ ಕಾಲ ನಾಯಿಗಳಿಗೆ ಆರೈಕೆ ಮಾಡಿ ಸೇವೆ ಮಾಡಿದ್ದೇನೆ ಆ ಸೇವೆಗೆ ನಾಯಿಗಳು ಕೃತಜ್ಞತೆಯನ್ನು ಸಲ್ಲಿಸುತ್ತಿವೆ.

 ನಿಮಗೆ ನಾನು ಹದಿನೈದು ವರ್ಷಗಳಿಂದ ಸೇವೆ ಮಾಡಿದೆ ಆದರೆ ನೀವು ನನ್ನ ಒಂದು ಸಣ್ಣ ತಪ್ಪಿಗೆ ಶಿಕ್ಷೆಯನ್ನು ಕೊಟ್ಟುಬಿಟ್ಟಿರಿ ಹದಿನೈದು ವರ್ಷ ನಿಮ್ಮ ಹತ್ತಿರ ನಾನು ಕೆಲಸ ಮಾಡಿದ್ದು ವ್ಯರ್ಥವಾಯಿತು ಅಲ್ಲವೇ ಎಂದನು ಆಗ ರಾಜನಿಗೆ ತನ್ನ ತಪ್ಪಿನ ಅರಿವಾಯಿತು.

 ನಂತರ ಮಂತ್ರಿಯನ್ನು ಆ ಶಿಕ್ಷೆಯಿಂದ ಪಾರು ಮಾಡಿದ ಮತ್ತೆ ನಂತರ ಸಣ್ಣಪುಟ್ಟ ಯಾವುದೇ ತಪ್ಪುಗಳಾದರೆ ಅದನ್ನು ಪರಿಶೀಲಿಸಿ ನೋಡುವಂಥ ಜ್ಞಾನವು ಬೆಳೆಯಿತು ನಾವು ಕೂಡ ಸಣ್ಣಪುಟ್ಟ ತಪ್ಪುಗಳಿಗೆ  ಕ್ಷಮಿಸೋಣ.

  ಜೊತೆಗೆ ಆತಂಕವೂ ಬಂತು

ಹಳ್ಳಿಯಲ್ಲಿ ಒಬ್ಬ ಮನುಷ್ಯ ಎತ್ತುಗಳನ್ನು ಹಸುಗಳನ್ನು ಸಾಕಿಕೊಂಡಿದ್ದನು ಇವನು ತುಂಬಾ ದೈವ ಭಕ್ತನು ಒಂದು ಸಾರಿ ಆತನ ಎತ್ತು ದಾರಿ ತಪ್ಪಿ ಸಂಜೆಗೆ ಬರಬೇಕಾದ ಎತ್ತು ಬರಲೇ ಇಲ್ಲ ಸುಮಾರು ಕಡಿಮೆ ಎಂದರೂ ಐದು ಸಾವಿರಕ್ಕೆ ಬೆಲೆ ಬಾಳುತ್ತಿತ್ತು.

 ಆದ್ದರಿಂದ ಇವನು ನಿರಾಶನಾದ ಖಿನ್ನತೆಯಿಂದ ಬಳಲಿದ ನಂತರ ಮಂದಿರಕ್ಕೆ ಹೋಗಿ ಒಂದು ಹರಕೆಯನ್ನು ಇಟ್ಟನು ನನ್ನ ಎತ್ತು ಸಿಕ್ಕರೆ ಬಂದ ಹಣದಲ್ಲಿ ಅರ್ಧ ಮಂದಿರಕ್ಕೆ ಕೊಡುತ್ತೇನೆ ಎಂದು ಹರಕೆ ಇಟ್ಟ ಪವಾಡವೆಂಬಂತೆ ಕೆಲವು ಗಂಟೆಗಳ ನಂತರ ಇವನ ಎತ್ತು ಮರಳಿ ಮನೆಗೆ ಬಂದಿತು ಆಗ ಈ ಮನುಷ್ಯನಿಗೆ ಸಂತಸವಾಯಿತು.

 ಜೊತೆಗೆ ಆತಂಕವೂ ಬಂತು ಏಕೆಂದರೆ ಇವನು ಎತ್ತಿನ ಅರ್ಧದಷ್ಟು ಹಣವನ್ನು ಮಂದಿರಕ್ಕೆ ಕೊಡ ಬೇಕಲ್ಲ ಎಂಬ ಉದ್ದೇಶಕ್ಕೆ ನಂತರ ಒಂದು ಉಪಾಯ ಮಾಡಿದನು ಎತ್ತಿನ ಜೊತೆಯಲ್ಲಿ ಕುರಿಯನ್ನು ಮಾರುವುದು (ಕಾಂಬೋ ಆಫರ್) ಇದ್ದ ಹಾಗೆ ಕುರಿಯ ಬೆಲೆ ಐದು ಸಾವಿರ ಎತ್ತಿನ ಬೆಲೆ ಬರಿ ಐವತ್ತು ರೂಪಾಯಿ ಬರೀ ಎತ್ತಾಗಲಿ ಬರೀ ಕುರಿ ಆಗಲಿ ಮಾರುವುದಿಲ್ಲ.

 ಎರಡೂ ಒಟ್ಟಿಗೆ ಖರೀದಿ ಮಾಡಬೇಕು ಇದು ಇವನ ನಿಯಮ ಕೊನೆಗೆ ಒಬ್ಬ ರೈತ ಯೋಚನೆ ಮಾಡಿ ಎರಡೂ ಅಷ್ಟೇ ಬೆಲೆ ಎಂದು ತಿಳಿದು ಅವನು ಎರಡನ್ನು ಖರೀದಿಸಿದನು ಆಗ ಬಂದ ಹಣದಲ್ಲಿ ಅಂದರೆ ಕುರಿ ಐದು ಸಾವಿರ ರೂಪಾಯಿ 

ಎತ್ತಿಗೆ ಐವತ್ತು ರೂಪಾಯಿ ಬಂದಾಗ ಅದರಲ್ಲಿ 25 ರೂಪಾಯಿ ಮಾತ್ರ ಮಂದಿರಕ್ಕೆ ಕೊಟ್ಟನು.

  ದಿಕ್ಕು ದೆಸೆ ಇಲ್ಲದೆ ಓಡುತ್ತಿದ್ದವು

ಒಂದು ದೊಡ್ಡ ಅರಣ್ಯದಲ್ಲಿ ಅನೇಕ ಪ್ರಾಣಿ ಪಕ್ಷಿಗಳು ವಾಸಿಸುತ್ತಿದ್ದವು ಒಂದು ಸಾರಿ ಆ ದೊಡ್ಡ ಅರಣ್ಯಕ್ಕೆ ತುಂಬಾ ಬಿಸಿಲು ಇದ್ದು ಭಯಂಕರ ಬೆಂಕಿ ಹಚ್ಚಿ ಕೊಂಡಿತು ಆಗ ಕಾಡಿಗೆ ಕಾಡೇ ಹತ್ತಿ ಉರಿಯುತ್ತಿರಬೇಕಾದರೆ ಪ್ರಾಣಿಗಳು ಪಕ್ಷಿಗಳು ಎಲ್ಲವೂ ಪ್ರಾಣ ಉಳಿಸಿಕೊಳ್ಳಲು ದಿಕ್ಕು ದೆಸೆ ಇಲ್ಲದೆ ಓಡುತ್ತಿದ್ದವು.

 ಎಲ್ಲಾ ಪ್ರಾಣಿ ಪಕ್ಷಿಗಳಿಗೆ ಏನು ಮಾಡಬೇಕೆಂದು ತೋಚಲಿಲ್ಲ ಅದೇ ಅರಣ್ಯದಲ್ಲಿ ಒಂದು ಪುಟ್ಟ ಗುಬ್ಬಚ್ಚಿಯೂ ಸಹ ವಾಸಿಸುತ್ತಿತು ಅದು ಅರಣ್ಯಕ್ಕೆ ಬೆಂಕಿ ಬಿದ್ದಿದ್ದನ್ನು ನೋಡಿ ಮತ್ತೆ ಪ್ರಾಣಿಗಳು ಜೀವ ಉಳಿಸಿ ಕೊಳ್ಳಲು ಪಡುತ್ತಿರುವ ಕಷ್ಟವನ್ನು ನೋಡಿ ಮರುಗಿ ಮನದಲ್ಲಿ ನೊಂದು ನಾನು ಏನು ಸಹಾಯ ಮಾಡಬಹುದು ಎಂದು ಆಲೋಚಿಸಿತು.

 ನಾನು ಸುಮ್ಮನೆ ಬರೀ ಯೋಚನೆ ಮಾಡಿಕೊಂಡಿದ್ದರೆ ಏನೂ ಪ್ರಯೋಜನವಿಲ್ಲವೆಂದು ಗುಬ್ಬಚ್ಚಿ ಸ್ಪಲ್ಪ ದೂರದಲ್ಲಿ ಹರಿಯುತ್ತಿದ್ದ ನದಿಯ ಹತ್ತಿರ ಹೋಗಿ ತನ್ನ ಕೊಕ್ಕಿನಲ್ಲಿ ನೀರು ತುಂಬಿಕೊಂಡು ಬಂದು ಬೆಂಕಿಯ ಮೇಲೆ ಹಾಕುತ್ತಿತ್ತು ಈ ಕೆಲಸ ನಿರಂತರವಾಗಿ ಮಾಡುತ್ತಿತ್ತು.

 ಇದನ್ನು ಗಮನಿಸಿದ ಒಂದು ಗೂಬೆಯೂ ಇದನ್ನು ನೋಡಿ ಹೇಳಿತು ಅಯ್ಯೋ ಪೆದ್ದು ಹಕ್ಕಿ ನೀನು ತರುತ್ತಿರುವ ಕೊಕ್ಕಿನಲ್ಲಿ ನೀರು ಈ ದೊಡ್ಡ ಅರಣ್ಯವನ್ನು ಆರಿಸಲು ಸಾಧ್ಯವೇ ಎಂದು ಕೇಳಿತು ಆಗ ಗುಬ್ಬಚ್ಚಿ ಹೇಳಿತು ವಿನಮ್ರವಾಗಿ ನನಗೂ ಗೊತ್ತು ಈ ದೊಡ್ಡ ಅರಣ್ಯ ಆರಿಸಲು ಸಾಧ್ಯವಾಗದೆ ಇರಬಹುದು.

 ಆದರೆ ಕೆಲವೊಂದು ಕ್ರಿಮಿ, ಕೀಟಗಳ. ಆದರೂ ನನ್ನಿಂದ ಬದುಕಬಹುದಲ್ಲವೇ ಹಾಗೆ ನಾನು ಕೈಕಟ್ಟಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಮತ್ತೆ ನಾನು ಬರೀ ನಕರಾತ್ಮಕ ವಾಗಿ ಚಿಂತಿಸುವ ಬದಲು ನಾನು ಸಕರಾತ್ಮಕವಾಗಿ ಮಾಡಿದಾಗ ನನಗಂತೂ ನಾನು ಮಾಡಿದ ಕಾಯಕದಿಂದ ನನಗೆ ತೃಪ್ತಿ ಸಿಗುತ್ತದೆ.

 ಎಂದು ಆ ಗುಬ್ಬಚ್ಚಿ ಹೇಳಿತು. ಇದ್ದಕ್ಕಿದ್ದ ಹಾಗೆ ಸಮಸ್ಯೆ ಬಂದಾಗ ನಕಾರಾತ್ಮಕವಾಗಿ ಯೋಚಿಸುವ ಬದಲು ಸಕಾರಾತ್ಮಕವಾಗಿ ಆಲೋಚಿಸೋಣ ಧೈರ್ಯದಿಂದ ನಮಗೆ ಸಾಧ್ಯವಾದಷ್ಟು ಸಹಾಯ ಮಾಡೋಣ.

    ಕಿರಿಚಿದರು ಪ್ರಯೋಜನ ಆಗಲಿಲ್ಲ

ಒಬ್ಬ ಯುವಕ ಬಾಬಾ ಅವರ ಬಳಿ ಬಂದು ಬಾಬಾ ಅವರೇ ನನಗೆ ನನ್ನ ಮೇಲೆ (ಕಂಟ್ರೋಲ್) ನಿಯಂತ್ರಣ ಸಿಗುತ್ತಿಲ್ಲ ಈ ನಡುವೆ ಕೋಪ ಹೆಚ್ಚಾಗಿ ಬರುತ್ತಿದೆ ಎಂದು ತನ್ನ ಕಷ್ಟಗಳನ್ನು ಹೇಳಿಕೊಂಡನು ಆಗ ಬಾಬಾ ಅವರು ಒಂದು ಘಟನೆಯನ್ನು ವಿವರಿಸಿದರು ಒಂದು ನದಿಯಲ್ಲಿ ಒಂದು ದೋಣಿ ತನ್ನ ಪಾಡಿಗೆ ತಾನು ಇರುತ್ತದೆ.

 ಬೇರೆ ದೋಣಿಯಲ್ಲಿ ಕುಳಿತ ನಾವಿಕ ತನ್ನ ಮಾರ್ಗ ಯಾವುದಿದೆಯೋ ಅದರಂತೆ ತನ್ನ ಮಾರ್ಗದಲ್ಲಿ ಸಾಗುತ್ತಿದ್ದಾನೆ ಆದರೆ ಇನ್ನೊಂದು ದೋಣಿ ಹಿಡಿತವಿಲ್ಲದೆ ತಮ್ಮ ಕಡೆಗೆ ಬರುತ್ತಿದೆ ಆಗ ಈ ದೋಣಿಯಲ್ಲಿ ಕುಳಿತಿದ್ದ ಎಲ್ಲರೂ ಕಿರುಚುತ್ತಿದ್ದಾರೆ.

 ಆ ಕಡೆಗೆ ತಿರುಗಿಸಿ ಮಾರ್ಗವನ್ನು ಬದಲಿಸಿ, ಇಲ್ಲದಿದ್ದರೆ ದೋಣಿ ಮುಳುಗಬಹುದು ಎಂದು ಹೇಳುತ್ತಾರೆ ಆದರೂ ಆ ದೋಣಿ ನೇರವಾಗಿ ಬರುತ್ತಲೇ ಇದೆ ನಂತರ ಗಮನಿಸಿದರೆ ತಿಳಿಯಿತು ಆ ದೋಣಿಯಲ್ಲಿ ಯಾರು ಇಲ್ಲವೇ ಇಲ್ಲ ಆಗ ಇವರು ಕಿರಿಚಿದರು ಪ್ರಯೋಜನ ಆಗಲಿಲ್ಲ.

 ಆಗ ಇವರೇ ಬುದ್ಧಿವಂತರಾಗಿ ಮಾರ್ಗವನ್ನೇ ಬದಲಿಸಿಕೊಂಡರು ಆಗ ಇವರು ಬಚಾವ್ ಆದರೂ ಇಲ್ಲದಿದ್ದರೆ ದೋಣಿ ಬಂದು ಇವರನ್ನು ಅಪಘಾತಕ್ಕೆ ಇಡು ಮಾಡುತ್ತಿತ್ತು ಹೀಗೆ ನೀನು ಕೂಡ ನಿನ್ನ ಮಾರ್ಗ ಯಾವುದು ಎಂದು ಸರಿಯಾಗಿ ಆರಿಸಿಕೋ ಇತರರು ಏನೇ ಕಷ್ಟ ಕೊಟ್ಟರು ಯಾವುದೇ ರೀತಿಯ ಕೋಪದಿಂದ ದ್ವೇಷದಿಂದ ಮಾತುಗಳನ್ನು ಆಡಿದರು ನೀನು ಕೂಗಾಡಿದರೆ ಪ್ರಯೋಜನವಿಲ್ಲ.

 ಇಲ್ಲಿ ನೀನು ಮಾತ್ರ ನಿನ್ನ ದಿಕ್ಕನ್ನು ಬದಲಿಸಬಹುದು ನಮ್ಮ ಮನಸ್ಸು ನಮ್ಮ ಕಂಟ್ರೋಲ್ ನಲ್ಲಿ ಇರಬೇಕೆ ವಿನಹ ಇತರರನ್ನು ನಾವು ಕಂಟ್ರೋಲ್ ಮಾಡಲಿಕ್ಕೆ ಸಾಧ್ಯವಿಲ್ಲ ಎಂದು ಹೇಳಿದರು ಆಗ ಯುವಕನಿಗೆ ಅರಿವಾಯಿತು.

  ಕೆರಳುವ ಪ್ರಶ್ನೆ ಕೇಳುತ್ತಾನೆ?


ಒಂದು ಚಿಕ್ಕ ಹುಡುಗ ತನ್ನ ತಂದೆಯನ್ನು ಒಂದು ಸಾರಿ ಕೆರಳುವ ಪ್ರಶ್ನೆ ಕೇಳುತ್ತಾನೆ ಪ್ರಪಂಚದಲ್ಲಿ ಮಾನವನ ಬೆಲೆ ಎಷ್ಟು? ಇಂಥಾ ಪ್ರಶ್ನೆ ಕೇಳಿದ ತಂದೆಗೆ ಸಂತೋಷವೂ ಆಯಿತು ಮತ್ತೆ ಗೊಂದಲವೂ ಆಯಿತು. ಒಂದು ನಿಮಿಷ ಸುಧಾರಿಸಿಕೊಂಡು ಮನುಷ್ಯನಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಆತನ ಬದುಕು ಅತ್ಯ ಅಮೂಲ್ಯವಾದುದು ಎಂದು ಉತ್ತರ ಕೊಟ್ಟರು.

ನಂತರ ಮಗ ಇನ್ನೊಂದು ಪ್ರಶ್ನೆ ಕೇಳಿದ ಹಾಗಾದರೆ ಮಾನವರ ಮೌಲ್ಯ ಎಷ್ಟೆಷ್ಟು ಏಕೆಂದರೆ ಒಬ್ಬರು ಬಡವರು ಒಬ್ಬರು ಅಗರ್ಭ ಶ್ರೀಮಂತರು ಭಿನ್ನವಾಗಿ ವಿಭಿನ್ನವಾಗಿ ಇದ್ದಾರೆ ಅದು ನಾವು ಹೇಗೆ ತಿಳಿಯಬಹುದು ಎಂದು ಕೇಳಿದ ಇದಕ್ಕೆ ಅವರು ಮತ್ತೆ ಒಂದು ನಿಮಿಷ ಯೋಚಿಸಿ ಕೆಲವರಿಗೆ ತುಂಬಾ ಗೌರವವಿದೆ ಕೆಲವರಿಗೆ ಗೌರವವೇ ಇಲ್ಲ ಹೀನಾಯವಾಗಿ ಇರುತ್ತಾರೆ ಏಕೆ ಎಂದು ಕೇಳಿದ.

 ಸ್ವಲ್ಪ ಸಮಯದ ನಂತರ ತಂದೆಯವರು ಒಂದು ಕಬ್ಬಿಣದ ಸರಳನ್ನು ತೆಗೆದು ಕೊಂಡು ಬಂದು ಮಗನಿಗೆ ಕೇಳಿದರು ಇದರ ಬೆಲೆ ಎಷ್ಟಿರಬಹುದು ಉದಾಹರಣೆಗೆ ನೂರು ರೂಪಾಯಿ ಇರಬಹುದು ಎಂದ ಮಗ ಈ ಸರಳಿ ನಲ್ಲಿಯೇ ದೊಡ್ಡ ದೊಡ್ಡ ಮಳೆಗಳನ್ನು ತಯಾರಿಸಿದರೆ ಇದರ ಬೆಲೆ ಏನಾಗಬಹುದು? ತಂದೆ  ಕೇಳಿದರು.

 ಮಗ ಸ್ವಲ್ಪ ಯೋಚಿಸಿ ಸರಳಿ ಗಿಂತ ಸ್ವಲ್ಪ ಬೆಲೆ ಜಾಸ್ತಿ ಇರುತ್ತದೆ ಎಂದ ಮತ್ತೆ ಸಣ್ಣ ಮಳೆಗಳನ್ನು ತಯಾರಿಸಿದರೆ ಇದಕ್ಕೆ ಏನು ಬೆಲೆ ಏನೂ ಇರುತ್ತದೆ ನಂತರ ಕೇಳಿದರು ಇದೇ ಸರಳಿನಲ್ಲಿ ಕೈ ಗಡಿಯಾರಕ್ಕೆ ಬೇಕಾದ ಬಿಡಿ ಭಾಗಗಳನ್ನು ಚಿಕ್ಕದಾದ ಸ್ಪ್ರಿಂಗ್ ಗಳು, ಚಿಕ್ಕ ಮುಳ್ಳುಗಳನ್ನು ತಯಾರಿಸಿದರೆ? ಆಗ ಅದರ ಬೆಲೆ ಎಷ್ಟಾಗುತ್ತದೆ ಎಂದು ಕೇಳಿದರು.

 ಆಗ ಮಗ ಉತ್ಸಾಹದಿಂದ ಹೇಳಿದ ಅದರ ಬೆಲೆಯಂತೂ ತುಂಬಾನೇ ಜಾಸ್ತಿ ಇರುತ್ತೆ ಎಂದನು ಆಗ ಮಗನಿಗೆ ಅರ್ಥವಾಯಿತು.

ಈ ಪ್ರಶ್ನೆಯ ಉತ್ತರ ತಂದೆ ಮಗನದು ಆದರೆ ಪ್ರಪಂಚದಲ್ಲಿ ವ್ಯವಹಾರವು ಇದೇ ರೀತಿ ಇದೆ ಮಾನವ ತನ್ನನ್ನು ಯಾವ ರೀತಿಯಾಗಿ ಪರಿವರ್ತಿಸಿಕೊಳ್ಳುತ್ತಾನೆ ಅದೇ ರೀತಿ ಅವನ ಬೆಲೆಯೂ ನಿರ್ಧರಿತವಾಗುತ್ತದೆ ಮನುಷ್ಯನಿಗೆ ಜ್ಞಾನ ಅಜ್ಞಾನ ಎರಡು ತಿಳಿದಿದೆ ನಮ್ಮ ಬೆಲೆಯನ್ನು ನಾವೇ ಕಂಡುಕೊಳ್ಳೋಣ.

Leave a Comment