ಮಾಲೀಕ ತನ್ನ ಮನೆಯಲ್ಲಿ ಇರುತ್ತಾನೆ ಇವನ ಮನೆ ಊರಿನ ಆಚೆ ಇದ್ದು ತೋಟ ಹೊಲ ಗದ್ದೆ ಎಲ್ಲವೂ ಹೊಂದಿರುತ್ತಾನೆ ಈ ಮಾಲೀಕ ಪ್ರಕೃತಿಯ ಪ್ರೇಮಿ ಸೂರ್ಯೋದಯ ಸೂರ್ಯಾಸ್ತ ಮತ್ತೆ ಪ್ರಕೃತಿಯ ಈ ವಿಷಯಗಳನ್ನು ಗಮನಿಸಿ ಹಾಯಾಗಿ ಬದುಕುತ್ತಿರುತ್ತಾನೆ .
ಪ್ರಾಣಿ ಪಕ್ಷಿಗಳು ಎಂದರೆ ತುಂಬಾ ಪ್ರೀತಿ ಒಂದು ಸಾರಿ ಮನೆಯಿಂದ ಆಚೆ ಬಂದು ನೋಡಿದಾಗ ಒಂದು ಚಿಕ್ಕ ಪಕ್ಷಿ ಬಿದ್ದಿರುತ್ತದೆ ಮುಂದೆ ಬಂದು ನೋಡಿದಾಗ ಅದು ವಿಲವಿಲ ಒದ್ದಾಡುತ್ತಿರುತ್ತದೆ ಅದನ್ನು ತೆಗೆದುಕೊಂಡು ಅದರ ಆರೈಕೆ ಮಾಡುತ್ತಾನೆ.
ಒಂದು ದಿನದಲ್ಲಿ ಸ್ವಲ್ಪ ಚೇತರಿಸಿಕೊಳ್ಳುತ್ತದೆ ಎರಡೇ ದಿನಕ್ಕೆ ಇನ್ನೂ ಸ್ವಲ್ಪ ಚೇತರಿಸಿ ಕೊಳ್ಳುತ್ತಿದೆ ಆದರೆ ಹಾರುವುದಿಲ್ಲ ಮಾಲಿಕ ಸೂಕ್ಷ್ಮವಾಗಿ ಗಮನಿಸಿದಾಗ ಅದರ ರೆಕ್ಕೆಗಳನ್ನು ಮತ್ತೆ ಚರ್ಮಕ್ಕೆ ಹೊಲಿದು ಬಿಟ್ಟಿರುತ್ತಾರೆ.
ಪಕ್ಷಿ ಹಾರಲು ಸಾಧ್ಯವಾಗುವುದಿಲ್ಲ ಇದನ್ನು ಸೂಕ್ಷ್ಮವಾಗಿ ಗಮನಿಸಿದ ಮಾಲೀಕ ನಿಧಾನವಾಗಿ ಆ ದಾರಗಳನ್ನು ಕತ್ತರಿಸಿ ಬಿಡುತ್ತಾನೆ ಆಗ ಗಿಳಿಯು ರೆಕ್ಕೆ ಬಡಿಯಲು ಪ್ರಾರಂಭಿಸುತ್ತದೆ ಆಗ ಮಾಲೀಕನು ತುಂಬ ಸಂತೋಷ ಪಡುತ್ತಾನೆ.
ಗಿಳಿ ಸ್ವಲ್ಪ ದೂರ ಹಾರಿ ಅಲ್ಲೇ ಇರುತ್ತದೆ ಮನೆಯವರೆಲ್ಲರೂ ತಿಳಿದುಕೊಳ್ಳುತ್ತಾರೆ ಗಿಳಿಯೋ ಹಾರಿ ಹೋಗಲಿ ಎಂದು ಯೋಚಿಸುತ್ತಾರೆ ಆದರೆ ಗಿಳಿ ತನ್ನ ಆರೋಗ್ಯ ಸರಿ ಯಾದ ಮೇಲೆ ಹಾರಿ ಹೋಗುತ್ತದೆ ಆದರೆ ದಿನಕ್ಕೆ ಒಂದು ಸಾರಿ ಮಾತ್ರ ಬಂದು ಮನೆಯವರನ್ನು ಕಂಡು ಮಾಲೀಕನ ಹೆಗಲ ಮೇಲೆ ಕುಳಿತುಕೊಂಡು ಕೆನ್ನೆ ಸವರಿಕೊಂಡು ಹೋಗುತ್ತದೆ.
ಇದೇ ರೀತಿ ಹಲವಾರು ದಿನಗಳು ಗಿಳಿ ಬದುಕುತ್ತದೆ ನಂತರ ಇದ್ದಕ್ಕಿದ್ದ ಹಾಗೆ ಒಂದು ದಿನ ಗಿಳಿ ಬಂದು ತುಂಬಾ ಜಾಸ್ತಿ ರೆಕ್ಕೆ ಹೊಡೆದು ನಂತರ ಅಲ್ಲೇ ಬಿದ್ದು ಹೋಗುತ್ತದೆ ನಂತರ ನೋಡಿದರೆ ಆ ಗಿಳಿಯು ಸತ್ತು ಹೋಗಿರುತ್ತದೆ.
ಗಿಳಿ ಮಾಲೀಕ ಮಾಡಿದ ಆರೈಕೆಗೆ ಗಿಳಿ ದಿನ ನಿತ್ಯವೂ ಬಂದು ಕೃತಜ್ಞತೆಯನ್ನು ಸಲ್ಲಿಸುತ್ತಿತ್ತು ಆದರೆ ಆ ಚಿಕ್ಕ ಪಕ್ಷಿಯಲ್ಲಿ ಕೃತಜ್ಞತೆ ಇದೆ ಎಂದರೆ ನಾವು ಕೂಡ ಈ ರೀತಿಯ ಕೃತಜ್ಞತೆಯನ್ನು ಬೆಳೆಸಿಕೊಳ್ಳೋಣ ನಮಗಾಗಿ ಬಹಳಷ್ಟು ತ್ಯಾಗ ಮಾಡಿದ್ದಾರೆ ಅವರಿಗೂ ನಾವು ಕೃತಜ್ಞತೆಯನ್ನು ಸಲ್ಲಿಸೋಣ.
ರೊಟ್ಟಿ ಹಸಿ ಹಸಿಯಾಗಿಯೇ ಇತ್ತು
ಮೈಸೂರು ಅರಮನೆಗೆ ವಿಶ್ವದ ಎಲ್ಲಾ ಕಡೆಯಿಂದಲೂ ಬರುತ್ತಿರುತ್ತಾರೆ ಬಿಳಿಯರು ಕೂಡ ಅರಮನೆಯನ್ನು ನೋಡಲು ಬಂದರು ಆವಾಗ ಎಲ್ಲೆಲ್ಲಿ ಹೇಗೇಗೆ ಹೋಗಬೇಕು ಎಂದು ಅಷ್ಟಾಗಿ ಯಾರಿಗೂ ತಿಳಿದಿರುವುದಿಲ್ಲ ಆದುದರಿಂದ ಮುಂದೆ ಬರುತ್ತಿದ್ದ ಗೈಡ್ ನೀನು ನಮಗೆ ಮೈಸೂರಿನ ಸ್ಥಳಗಳನ್ನು ತೋರಿಸು ಎಂದು ಹೇಳಿದರು.
ಗೈಡ್ ಆದವನು ಅವರಿಗೆ ಅರಮನೆ ಚಾಮುಂಡಿ ಬೆಟ್ಟ ಕೆ ಆರ್ ಎಸ್ (ಬೃಂದಾವನ) ಎಲ್ಲವೂ ನೋಡಿದರು ಗೈಡ್ ಆದವನಿಗೆ ಬಿಳಿಯರು ಕೆರಳಿಸುವ ಒಂದು ಪ್ರಶ್ನೆಯನ್ನು ಕೇಳಿದರು ಎಲ್ಲಾ ಸರಿಯಾಗಿದೆ ಚೆನ್ನಾಗಿದೆ ಒಂದು ಅನುಮಾನ ಏನು ಎಂದರೆ ನಮ್ಮ ದೇಶದಲ್ಲಿ ಎಲ್ಲರೂ ಬಿಳಿಯರೇ ಇದ್ದಾರೆ.
ನಿಮ್ಮ ದೇಶದಲ್ಲಿ ಯಾಕೆ ಹೀಗೆ ಬಿಳಿಯರು ಇದ್ದಾರೆ ಕಪ್ಪು ಇದ್ದಾರಲ್ಲ ಎಂದು ಕೇಳಿದರು ಗೈಡ್ ಆದವನು ಗೊಂದಲಕ್ಕೆ ಸಿಲುಕಿದನು ಯಾವ ಉತ್ತರ ನೀಡಬೇಕೆಂದು ಮನಸಿನಲ್ಲಿಯೇ ಆಳವಾಗಿ ಯೋಚಿಸುತ್ತಿದ್ದನು ಏನು ಹೇಳಬೇಕೆಂದು ತೋಚಲಿಲ್ಲ ತಕ್ಷಣಕ್ಕೆ ಈ ಕಡೆ ಆ ಕಡೆ ನೋಡಿದಾಗ ನೀಗ್ರೊಗಳು ಹೋಗುತ್ತಿದ್ದರು.
ತಕ್ಷಣ ಜಾಗ್ರತನಾಗಿ ಹಾಸ್ಯವಾಗಿ ದೇವರು ರೊಟ್ಟಿ ತಯಾರಿಸಬೇಕಾದರೆ ಮೊದಲು ಜಾಸ್ತಿ ಬೆಂದು ಹೋಗುತ್ತದೋ ಎಂದು ಬೇಗನೆ ತೆಗೆದುಬಿಟ್ಟರು ರೊಟ್ಟಿ ಹಸಿ ಹಸಿಯಾಗಿಯೇ ಇತ್ತು ಅದಕ್ಕಾಗಿ ಬಿಳಿಯರು ಹುಟ್ಟಿದರು ಅದೇ ರೀತಿ ಇನ್ನೊಂದು ಸಾರಿ ರೊಟ್ಟಿ ಮಾಡಬೇಕಾದರೆ ತುಂಬಾ ಹೆಚ್ಚು ಹೊತ್ತು ಬಿಟ್ಟರು ರೊಟ್ಟಿ ಜಾಸ್ತಿ ಬೆಂದು ಹೋಯ್ತು ಅದಕ್ಕೆ ನೀಗ್ರೋಗಳು ಹುಟ್ಟಿದರು. ನೋಡಿ ಮುಂದೆ ಹೋಗುತ್ತಿದ್ದಾರೆ ಎಂದು ತೋರಿಸಿದ.
2 ರೊಟ್ಟಿ ಮಾಡಿದ ಅನುಭವ ಹೆಚ್ಚಾಗಿದ್ದರಿಂದ ಮೂರನೆಯ ರೊಟ್ಟಿಯನ್ನು ತಯಾರಿಸಿದರು ಹೆಚ್ಚು ಇಲ್ಲ ಕಡಿಮೆಯೂ ಆಗಿಲ್ಲ ಈ ಕಾರಣದಿಂದಾಗಿ ಭಾರತೀಯರಾದ ನಾವು ಈ ರೀತಿ ಹುಟ್ಟಿದೆವು ಎಂದು ಹೇಳಿದನು ಬಿಳಿಯರು ಏನೂ ಮಾತನಾಡಲಿಲ್ಲ ಸಮಯಕ್ಕೆ ತಕ್ಕ ಹಾಗೆ ಹೇಳುವ ಜಾಣ್ಮೆಯು ಅದ್ಭುತ ಕಲೆ ಸಮಯಕ್ಕೆ ಸರಿಯಾಗಿ ಹೇಳುವ ಜಾಣ್ಮೆ ಬೆಳೆಸಿಕೊಳ್ಳೋಣ.
ಕೆಲಸವು ಎಷ್ಟು ಜಾಸ್ತಿ ಇದೆ
ಒಂದು ಸಾರಿ ಗಂಡನಾದವನು ಆರೋಗ್ಯ ಸರಿಯಿಲ್ಲ ಎಂದು ಮನೆಗೆ ಬರುತ್ತಾನೆ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಲು ಮನೆಯ ಮುಂದೆ ವಾಹನವನ್ನು ನಿಲ್ಲಿಸುತ್ತಾನೆ ಗೇಟು ನೋಡಿದರೆ ಮುಚ್ಚಿರುವುದಿಲ್ಲ ನಾಯಿಗಳು ದನಕರುಗಳು ಬಂದರೆ ಗಿಡವನ್ನು ತಿಂದರೆ ಏನು ಗತಿ ಎಂದು ಗೇಟನ್ನು ಮುಚ್ಚಿ ಚಿಲುಕ ಹಾಕಿಕೊಂಡು ಕೊಂಡು ಬರುತ್ತಾನೆ.
ಮಕ್ಕಳು ಶಾಲೆಗೆ ಹೋಗಿರುತ್ತಾರೆ ಮನೆಯ ಹಾಲ್ ನಲ್ಲಿ ಬಂದಾಗ ಫ್ಯಾನು ತಿರುಗುತ್ತಿರುತ್ತದೆ ಮತ್ತೆ ಲೈಟು ಉರಿಯುತ್ತಿರುತ್ತದೆ ಮನೆ ನೋಡಿದರೆ ಸ್ವಚ್ಛವಾಗಿರುವುದಿಲ್ಲ ಅಲ್ಲಲ್ಲಿ ಪೇಪರ್ ಬಿದ್ದಿರುತ್ತದೆ ತುಂಬ ಕೊಳೆಯಾಗಿರುತ್ತವೆ ನಂತರ ಫ್ಯಾನ್ ಟಿವಿ ಸ್ವಿಚ್ ಆಫ್ ಮಾಡಿ ಬರುತ್ತಾನೆ.
ಅಡುಗೆ ಮನೆಗೆ ಹೋದಾಗ ಅಲ್ಲಿ ನೋಡುವುದಕ್ಕೆ ಆಗುವುದಿಲ್ಲ ಅಷ್ಟು ಪಾತ್ರೆಗಳು ಎಲ್ಲವೂ ಹಾಗೆಯೇ ಇರುತ್ತದೆ ನಲ್ಲಿಯಲ್ಲಿ ನೀರು ಹೋಗುತ್ತಲೇ ಇರುತ್ತದೆ ನಲ್ಲಿ ತಿರುಗಿಸಿ ನೀರು ಬರದಂತೆ ಮಾಡಿದನು.
ನನ್ನ ಕರ್ಮ ಎಂದು ನನ್ನ ಪತ್ನಿಗೆ ಸ್ವಲ್ಪವೂ ಜವಾಬ್ದಾರಿ ಇಲ್ಲ ಎಂದು ಕೋಪಿಸಿಕೊಳ್ಳುತ್ತಾನೆ ನನ್ನ ಪತ್ನಿ ಎಲ್ಲಿ ಹೋಗಿದ್ದಾಳೆ ಎಂದು ನೋಡಲು ಆಕಡೆ ಈಕಡೆ ಹುಡುಕುತ್ತಾನೆ ಆಚೆ ಆರಾಮಾಗಿ ಕುಳಿತು ಕೊಂಡು ಪೇಪರ್ ಓದುತ್ತಿರುತ್ತಾಳೆ.
ಗಂಡನಿಗೆ ಭಯಂಕರ ಸಿಟ್ಟು ಬರುತ್ತದೆ ಬಹಳ ಕೆಲಸ ಇದೆಯಲ್ಲಎಂದು ಹೇಳುತ್ತಾನೆ ಆಗ ಹೆಂಡತಿ ಯಾದವಳು ನಗುತ್ತಾ ಹೇಳುತ್ತಾಳೆ ನೀವು ಹೇಳುತ್ತೀರಲ್ಲ ಮನೆಕೆಲಸ ಏನು ದೊಡ್ಡದು ಎಂದು ಈಗ ನೋಡಿ ನಿಮಗೆ ಗೊತ್ತಾಗಿದೆ ಅಲ್ಲವೇ ಎಂದು ಹೇಳುತ್ತಾಳೆ ಗಂಡನಾದವನು ಸುಮ್ಮನಾಗುತ್ತಾನೆ.
ಪತ್ನಿ ಇವತ್ತು ನಮ್ಮ ಆರೋಗ್ಯ ಸ್ವಲ್ಪ ಸರಿಯಾಗಿರಲಿಲ್ಲ ಅದಕ್ಕೆ ನಿಧಾನವಾಗಿ ಮಾಡೋಣ ಎಂದು ಎಂದು ಕುಳಿತುಕೊಂಡಿದ್ದೆ ಎಂದು ಹೇಳುತ್ತಾಳೆ ಆಗ ಗಂಡನಿಗೆ ತಿಳಿಯುತ್ತದೆ ಮನೆಯ ಕೆಲಸವು ಎಷ್ಟು ಜಾಸ್ತಿ ಇದೆ ಎಂದು ಅರ್ಥವಾಗುತ್ತದೆ ಮನೆಯ ಕೆಲಸವೂ ಅಷ್ಟೇ ಹೆಚ್ಚಾಗಿ ಇರುತ್ತದೆ ಇದನ್ನು ಕೆಲವು ಗಂಡಸರು ಮಾತ್ರ ಅರ್ಥ ಮಾಡಿಕೊಳ್ಳುತ್ತಾರೆ.
ಪತ್ನಿಯು ತುಂಬಾ ಹೆಚ್ಚಾಗಿ ಕೆಲಸ ಮಾಡುತ್ತಾಳೆ ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಕೆಲಸ ಮಾಡುತ್ತಲೇ ಇರುತ್ತಾಳೆ. ಪ್ರೀತಿಯಿಂದ ನೋಡಿಕೊಂಡು ಸಾಧ್ಯವಾದಷ್ಟು ಸಹಕರಿಸೋಣ.
ಮೆದುಳು ಪ್ರಕೃತಿಗೆ ವಿರುದ್ಧವಾಗಿ ರಚನೆಯಾಗಿದೆ
ಒಂದು ತಾಯಿ ಮಗು ಚೆನ್ನಾಗಿ ಓದಲಿ ಎಂದು ಒಂದು ಶಾಲೆಗೆ ಸೇರಿಸುತ್ತಾರೆ ಆ ಶಾಲೆಯ ಶಿಕ್ಷಕರು ಈ ಮಗುವಿಗೆ ಕಲಿಸಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ ಮತ್ತೆ ವೈದ್ಯರು ಕೂಡ ಪರೀಕ್ಷೆ ಮಾಡಿದ್ದಾರೆ ಮೆದುಳು ಪ್ರಕೃತಿಗೆ ವಿರುದ್ಧವಾಗಿ ರಚನೆಯಾಗಿದೆ ಆದುದರಿಂದ ಮುಂದೆ ಇವನು ಏನಾಗುತ್ತಾನೆ ಎಂದು ಯಾರಿಗೂ ತಿಳಿಯುವುದಿಲ್ಲ ಎಂದು ಹೇಳುತ್ತಾರೆ.
ಆ ತಾಯಿ ತನ್ನ ಮಗನನ್ನು ತುಂಬ ಪ್ರಸಿದ್ಧ ಮನುಷ್ಯನಾಗಿ ಮಾಡೇ ಮಾಡುತ್ತೇನೆ ಎಂದು ದೃಢ ನಿರ್ಧಾರ ದೊಂದಿಗೆ ಅವನಿಗೆ ಮನೆಯಲ್ಲೇ ಪಾಠ ಕಲಿಸಲು ಆರಂಭಿಸುತ್ತಾಳೆ ಆ ತಾಯಿಯು ತನ್ನ ಸತತ ಪ್ರಯತ್ನದಿಂದ ಕಠಿಣ ಪರಿಶ್ರಮಪಟ್ಟು ಮಗುವನ್ನು ತ್ಯಾಗದಿಂದ ಬಲಿದಾನ ಕೊಟ್ಟು ಚೆನ್ನಾಗಿ ಬೆಳೆಸುತ್ತಾಳೆ.
ನಂತರ ದೊಡ್ಡವನಾಗಿ ಹಲವಾರು ಸಂಶೋಧನೆಗಳನ್ನು ಮಾಡುತ್ತಾನೆ ಈ ಮಗು ಯಾರು ಎಂದರೆ ಇವನೇ ಥಾಮಸ್ ಆಲ್ವ ಎಡಿಸನ್ ಎಡಿಸನ್ ರವರು ಒಂದು ಮಾತನ್ನು ಹೇಳುತ್ತಾರೆ ನನ್ನ ವಯಸ್ಸನ್ನು ನಾನು ಇಷ್ಟು ವರ್ಷವಾಯಿತು ಎಂದು ಯೋಚಿಸುವುದಿಲ್ಲ.
ಬದಲಾಗಿ ನಾನು ಎಷ್ಟು ಕೆಲಸ ಕಾರ್ಯಗಳನ್ನು ಮಾಡಿದ್ದೇನೆ ಎಂದು ಲೆಕ್ಕ ಮಾಡುತ್ತೇನೆ ಎಂದು ಹೇಳುತ್ತಾರೆ ನನಗೆ ಎಷ್ಟು ವಯಸ್ಸಾಗಿದೆ ಎನ್ನುವುದು ಮುಖ್ಯವಲ್ಲ ಇಲ್ಲಿಯವರೆಗೆ ಎಷ್ಟು ಕಲಿತಿದ್ದೇನೆ ಎಷ್ಟು ಸಾಧಿಸಿದ್ದೇನೆ ಎನ್ನುವುದು ಮುಖ್ಯವಾಗುತ್ತದೆ. ನಾನು ಏನೇನು ಸಾಧನೆ ಮಾಡಿದ್ದೇನೆ?
ತಾಳ್ಮೆ ಕಳೆದುಕೊಳ್ಳುವವನು ನಾನಲ್ಲ
ಮೂರ್ಖ ಯುವಕ ಇದ್ದನು ಯುವಕನಿಗೆ ನಾನು ಕೂಡ ದೊಡ್ಡ ಜ್ಞಾನಿಯೆ ಎಂದು ತೋರಿಸಿಕೊಳ್ಳಬೇಕು ಎನ್ನುವ ಚಪಲ ಇತ್ತು ಅದಕ್ಕಾಗಿ ಊರಿನ ಆಚೆ ಇರುವ ಒಂದು ಆಶ್ರಮಕ್ಕೆ ಹೋಗಿ ಅಲ್ಲಿ ಇರುವ ಬಾಬಾ ಅವರನ್ನು ಭೇಟಿಯಾದನು.
ನಂತರ ಹೇಳಿದನು ನಾನು ಕೂಡ ತುಂಬಾ ಸಾಧನೆ ಮಾಡಿದ್ದೇನೆ ನೀವು ನನಗೆ ಎಷ್ಟೇ ಬೈದರೂ ಕೆಟ್ಟ ಮಾತುಗಳಿಂದ ನಿಂದಿಸಿದರು ನಾನು ತಾಳ್ಮೆ ಕಳೆದುಕೊಳ್ಳುವುದಿಲ್ಲ ಅದು ಬೇಕಾದರೆ ನೀವು ಪರೀಕ್ಷಿಸಬಹುದು ಎಂದು ಸವಾಲು ಹಾಕಿದನು.
ಆಗ ಬಾಬಾ ಅವರು ನಗುತ್ತಾ ನಿನ್ನ ತಾಳ್ಮೆ ಪರೀಕ್ಷೆ ಮಾಡಲು ನನಗೆ ಇಷ್ಟವಿಲ್ಲ ಹಾಗೆ ನಿನ್ನ ಪರೀಕ್ಷೆಗಾಗಿ ನನ್ನ ನಾಲಿಗೆಯನ್ನು ಏಕೆ ಹೊಲಸು ಮಾಡಿಕೊಳ್ಳಲಿ ಮತ್ತೆ ಸಾಕಷ್ಟು ಜನರು ತಮ್ಮ ನಾಲಿಗೆಯ ಮೇಲೆ ಹಿಡಿತ ಇರುವುದಿಲ್ಲ ಚಾಡಿ ಹೇಳುವುದಕ್ಕೆ ಹುಚ್ಚು ಹುಚ್ಚಾಗಿ ಮಾತನಾಡುತ್ತಾರೆ.
ನಾಲಿಗೆಯನ್ನು ಹೆಚ್ಚಾಗಿ ಬಳಸುತ್ತಾರೆ ಅದರ ಬದಲಾಗಿ ಸಾಕಷ್ಟು ಮೌನವಾಗಿ ಇರಬೇಕು ಎಂದು ಹೇಳಿದರು ನಾವು ಯಾವ ರೀತಿ ಮಾತನಾಡುತ್ತೇವೆ? ನಾವು ಯಾರಿಗೂ ನೋವಾಗದಂತೆ ಎಚ್ಚರಿಕೆಯಿಂದ ಮಾತನಾಡೋಣ. ನನ್ನ ನಾಲಿಗೆಯ ಮೇಲೆ ನನಗೆ ಹಿಡಿತ ಇದೆಯೇ?