ಹೆಂಡತಿ ಸತ್ತು ಒಂದ ವಾರದ ನಂತರ ಅಂತ್ಯ ಸಂಸ್ಕಾರಕ್ಕೆ, ಎಂದು ಬಂದಿದೆ ಸಂಬಂಧಿಕರು ದಿನಕಳೆದಂತೆ ಒಬ್ಬೊಬ್ಬರು ಮನೆಯಿಂದ ಹೋದರು ಆ ಮನೆಯಲ್ಲಿ ಕೊನೆಗೆ ಉಳಿದಿದ್ದು ಗಂಡ ಮಕ್ಕಳು ಮಾತ್ರ ಗಂಡನಾದವನಿಗೆ ಈಗ ಜೊತೆಯಲ್ಲಿ ಹೆಂಡತಿ ಇಲ್ಲವಲ್ಲ ಎಂದು ಈಗ ಅರಿವಾಗುತ್ತಿದೆ.
ಹೆಂಡತಿ ಅದವಳು ರೀ ಇಲ್ಲಿ ಬನ್ನಿ ಇಲ್ಲಿ ನೋಡಿ ಎಂದು ಆಗಾಗ ಹೇಳುತ್ತಿದ್ದಳು, ತವರು ಮನೆಗೆ ಹೋದರೂ ಕೂಡ ಹೆಚ್ಚು ದಿನ ಇರದೆ ಬೇಗ ಬರುತ್ತಿದ್ದಳು ಗಂಡನಿಗೆ ಮತ್ತು ಮಕ್ಕಳಿಗೆ ಅಡುಗೆ ಮಾಡುವ ಸಲುವಾಗಿ ನಾನು ಮತ್ತು ನನ್ನ ಮಕ್ಕಳು ಟಿವಿಯ ಮುಂದೆ ಕುಳಿತು ಸಿನಿಮಾವನ್ನು ವೀಕ್ಷಿಸುತ್ತಿದ್ದರೆ ಹೆಂಡತಿ ಮಾತ್ರ ಅಡಿಗೆ ಮಾಡುತ್ತಿದ್ದಳು.
ನೀರು ಬೇಕು, ಟೀ ಬೇಕು ಎಂದು ಕೇಳಿದರು ಆಗಾಗ ತಂದು ಕೊಡುತ್ತಿದ್ದಳು ಮತ್ತೆ ಮನೆಯಲ್ಲಿ ವಿಶ್ರಾಂತಿ ಇಲ್ಲದ ಕೆಲಸ ಮಾಡುತ್ತಿದ್ದಳು ಸಿನಮಾ ನೊಡಕ್ಕೆ, ಬಾ ಎಂದು ಕರೆದಾಗ ಬೇಡ ಹೋಗಿದ್ದು ಬನ್ನಿ ಎಂದು ಹೇಳುತ್ತಿದ್ದಳು ಕೆಲಸದಿಂದ ನಿಧಾನವಾಗಿ ಬಂದರೆ ಏಕೆ ವಿಧಾನ ಎಂದು ಪ್ರಶ್ನೆ ಮೇಲೆ ಪ್ರಶ್ನೆ ಕೇಳುತ್ತಿದ್ದಳು.
ಮಕ್ಕಳಿಗೆ ಫೀಸ್ ಕಟ್ಟಬೇಕು, ಕರೆಂಟ್ ಬಿಲ್ ಕಟ್ಟಬೇಕು, ತಂದೆ ತಾಯಿಗೆ ಮಾತ್ರೆಗಳು ತರಬೇಕು ನೆನಪಿರಲಿ ಎಂದು ಎಲ್ಲವನ್ನೂ ಆಗಾಗ ನೆನಪಿಗೆ ತರುತ್ತಿದ್ದಳು ಈಗ ಈ ರೀತಿ ಹೇಳುವವರು ಯಾರೂ ಇಲ್ಲ ಮತ್ತೆ ಕೆಲವು ಸಾರಿ ಹೆಂಡತಿಗೆ ನಾನೇ ಬಯ್ಯುತ್ತಿದೆ ಕೆಲವು ಸಾರಿ ಪಾತ್ರೆಗಳು, ಟೀ, ಲೋಟಗಳು ಹಾಗೆ ಇರುತ್ತಿದ್ದವು.
ಮನೆಯ ವಸ್ತುಗಳು ಕೆಲವು ಸಾರಿ ಚೆಲ್ಲಾಪಿಲ್ಲಿಯಾಗಿ ಇರುತ್ತಿದ್ದವು ಅದನ್ನು ಮನೆ ಕೆಲಸ ಸಂಪೂರ್ಣವಾಗಿ ಅವಳೇ ಮಾಡುತ್ತಿದ್ದಳು ಆದರೆ ಈಗ ಎಲ್ಲಾ ಕಡೆ ಚಲ್ಲಾಪಿಲ್ಲಿಯಾಗಿದೆ ಸ್ನಾನಕ್ಕೆಂದು ಹೋದಾಗ ಎಲ್ಲವೂ ನೀಟಾಗಿ ಇಡುತ್ತಿದ್ದಳು ಆದರೆ ಈಗ ನಾನೇ ಎಲ್ಲವೂ ತೆಗೆದುಕೊಂಡು ಹೋಗಬೇಕಾಯಿತು.
ಸ್ನಾನ ಮುಗಿಸಿ ಬಂದು ತಿಂಡಿ ಮಾಡಿ ಬೆಡ್ ರೂಮಿಗೆ ಬಂದೆ ಆಗ ನಾನು ಒಬ್ಬನೇ ಇದ್ದೆ ನೋಡಿದರೆ ನನ್ನ ಪ್ರೀತಿಯ ಹೆಂಡತಿಯ ನಗುತ್ತಿದ್ದ ಫೋಟೋ ಮಾತ್ರ ಇದೆ ಇದನ್ನು ನೋಡಿ ನಾನೇ ನೊಂದಿಕೊಂಡೆ ಈಗ ನನಗೆ ಅನಿಸುತ್ತದೆ ಕೆಲವು ಸಾರಿ ನಾನು ಅವಳನ್ನು ಬೈದಿದ್ದೇನೆ ಕೆಲವು ಸಾರಿ ಅವಳ ಮಾತು ಕೇಳಲಿಲ್ಲ. ಕೋಪ ಮಾಡಿ ಕೊಂಡಿದ್ದು ಈಗ ಯಾರ ಮೇಲೆ ಕೋಪ ಮಾಡಿಕೊಳ್ಳಲಿ ಎಂದು ಚಿಂತಿಸಿದೆ ಕಣ್ಣಲಿ ನೀರು ತಾನೇ ತಾನಾಗಿ ಬಂತು.
ಇದು ನಡೆದಿರುವ ಒಂದು ಘಟನೆ ಈ ಒಂದು ಕಥೆಯಲ್ಲಿ ಹೀರೋ ಆಗಿದ್ದವನು ಮಾಡಿದ ತಪ್ಪುಗಳೇನು?
ನಾವು ಕೂಡ ಇದೇ ರೀತಿ ಮಾಡುತ್ತಿದ್ದೇವೆಯೇ ಎಂದು ಯೋಚಿಸಿ ಸತ್ತು ಹೋದ ಮೇಲೆ ಏನು ಮಾಡುವುದಕ್ಕೆ ಸಾಧ್ಯವಿಲ್ಲ. ಆರೋಗ್ಯವಾಗಿ ಇದ್ದಾಗ ಅದರ ಬೆಲೆ ಗೊತ್ತಾಗುವುದಿಲ್ಲ ಅನಾರೋಗ್ಯ ಕಾಡಿದಾಗ ಮಾತ್ರ ಅದರ ಬೆಲೆ ಏನೆಂದು ತಿಳಿಯುತ್ತದೆ ಅದೇ ರೀತಿ ನಾವು ಕೂಡ ಇರುವಾಗಲೇ ಚೆನ್ನಾಗಿ ನೋಡಿಕೊಳ್ಳೋಣ.
ನೀನು ಸಂಪೂರ್ಣವಾಗಿ ಮರೆತು ಬಿಟ್ಟ
ಒಂದು ಊರಿನಲ್ಲಿ ಇಬ್ಬರು ರಾಜರ ಮಕ್ಕಳು ಒಂದು ಗುರುವಿನ ಆಶ್ರಮದಲ್ಲಿ ಶಿಕ್ಷಣ ಪಡೆಯುತ್ತಾರೆ ನಂತರ ಅವರು ಅವರ ಅವರ ರಾಜ್ಯಕ್ಕೆ ಹೋಗುತ್ತಾರೆ ನಂತರ ಇಬ್ಬರೂ ದೊಡ್ಡವರಾದಮೇಲೆ ರಾಜರಾಗುತ್ತಾರೆ.
ಅದರಲ್ಲಿ ಒಬ್ಬ ರಾಜನು ಮಾತ್ರ ಚೆನ್ನಾಗಿ ತನ್ನ ರಾಜ್ಯಭಾರವನ್ನು ಮಾಡುತ್ತಿರುತ್ತಾನೆ ಆದರೆ ಇನ್ನೊಬ್ಬ ರಾಜನಾದವನು ಎಲ್ಲವೂ ಕಳೆದುಕೊಂಡು ಏನೂ ಇಲ್ಲದೆ ಅಲೆಮಾರಿಯಂತೆ ಅಲಿಯುತ್ತಿರುತ್ತಾನೆ ಆಗ ನನ್ನ ಸ್ನೇಹಿತ ರಾಜನನ್ನು ನಾನು ನೋಡಬಹುದು ಎಂದು ಕಷ್ಟಪಟ್ಟು ನಡೆದು ಕೊಂಡು ಆ ರಾಜ್ಯಕ್ಕೆ ಹೋಗುತ್ತಾನೆ.
ಇವನ ಸ್ಥಿತಿ ಹರಕಲು ಬಟ್ಟೆ ಭಿಕ್ಷೆ ಬೇಡುವವನ ಸ್ಥಿತಿಗಿಂತ ಕಡಮೆಯಾಗಿರುತ್ತದೆ ಅರಮನೆಯ ಬಾಗಿಲ ಬಳಿ ಹೋಗಿ ನಾನು ಒಳಗಡೆ ಹೋಗಬೇಕು ರಾಜನನ್ನು ನೋಡಬೇಕು ಎಂದಾಗ ದ್ವಾರಪಾಲಕರು ಯಾರು ಕಳಿಸಲಿಲ್ಲ ಏಕೆಂದರೆ ಇವನ ಸ್ಥಿತಿ ಹಾಗೇ ಇರುತ್ತದೆ ತನ್ನನ್ನು ತಾನು ಆತ್ಮಲೋಕನ ಮಾಡಿಕೊಂಡನು.
ರಾಜನು ಮತ್ತೆ ಒಂದು ವಾರ ಕೆಲಸ ಮಾಡಿ ಆ ಸಂಪಾದನೆಯಿಂದ ಒಂದು ಒಳ್ಳೆಯ ಬಟ್ಟೆಗಳನ್ನು ಖರೀದಿ ಮಾಡಿ ನಂತರ ಆ ಒಳ್ಳೆ ಬಟ್ಟೆಯನ್ನು ಧರಿಸಿ ರಾಜನ ಆಸ್ನಾನಕ್ಕೆ ಹೋಗುತ್ತಾನೆ ಆಗ ಇವನನ್ನು ನೋಡಿದ ಸ್ನೇಹಿತ ಅಷ್ಟಾಗಿ ಏನೂ ಮಾತನಾಡುವುದಿಲ್ಲ ಅವನ ಮುಖ್ಯಮಂತ್ರಿಯನ್ನು ಕರೆದು ಹೇಳುತ್ತಾನೆ.
ಇವನಿಗೆ ಐವತ್ತು ಎತ್ತುಗಳನ್ನು ಕೊಟ್ಟು ಕಳಿಸಿ ಎಂದನು ಇವನು ಐವತ್ತು/ಎತ್ತುಗಳನ್ನು ತೆಗೆದುಕೊಂಡು ಹೋಗಿ ಸರಿಯಾಗಿ ಸಾಕಲ್ಲ ಮತ್ತೆ ಒಂದು ತಿಂಗಳ ನಂತರ ಬರುತ್ತಾನೆ ಕೆಲವು ಎತ್ತುಗಳು ಖಾಯಿಲೆಗೆ ತುತ್ತಾದವು ಕೆಲವು ಓಡಿಹೋಗಿ ಕೆಲವು ನಾನಾ ರೀತಿಯಲ್ಲಿ ನಷ್ಟವಾಗಿದೆ ಎಂದು ಮುಖ ಇಳಿಸಿಕೊಂಡು ಹೇಳುತ್ತಾನೆ.
ಇವನ ಸ್ನೇಹಿತ ರಾಜ ಮತ್ತೆ ಇವನನ್ನು ಮಾತನಾಡಿಸದೆ ಐವತ್ತು ಕುರಿಗಳನ್ನು ಕೊಟ್ಟು ಇದು ಕೊನೆಯ ಸಾರಿ ಎಂದು ಎಚ್ಚರಿಕೆ ನೀಡಿ ಕಳಿಸುತ್ತಾನೆ ನಂತರ ಇವನು ಐವತ್ತು ಕುರಿಗಳನ್ನು ತೆಗೆದುಕೊಂಡು ಬಂದು ಮತ್ತೆ ಯೋಚಿಸುತ್ತಾನೆ ಈಗಾಗಲೇ ಬಹಳಷ್ಟು ಕಳೆದುಕೊಂಡಿದ್ದೇನೆ ನನ್ನ ಸ್ನೇಹಿತನನ್ನು ಉಳಿಸಿಕೊಳ್ಳಲೇ ಬೇಕು ಎಂದು ಈಗ ಕೊಟ್ಟಿರುವ ಕುರಿಗಳನ್ನು ನಾನು ಜೋಪಾನ ಮಾಡಬೇಕು ಎಂದು ಯೋಚನೆ ಮಾಡಿ ಕಣ್ಣಲ್ಲಿ ಕಣ್ಣಿಟ್ಟು, ಪ್ರೀತಿಯಿಂದ ಮತ್ತೆ ಜವಾಬ್ದಾರಿಯಿಂದ ಕುರಿಗಳನ್ನು ಸಾಕುತ್ತಾನೆ.
ಕೆಲವು ತಿಂಗಳಲ್ಲೇ ಅದನ್ನು ಸಾಕಿ ಜೋಪಾನ ಮಾಡಿ ಐವತ್ತು ಇದ್ದಿದ್ದು ಐನೂರವರೆಗೆ ಹೆಚ್ಚಿಸುತ್ತಾನೆ ತನ್ನ ಸ್ನೇಹಿತ ರಾಜನ ಬಳಿಗೆ ಹೋಗುತ್ತಾನೆ ಆಗ ಧೈರ್ಯದಿಂದ, ಸಂತೋಷದಿಂದ, ಎದೆಉಬ್ಬಿಸಿ ಆತ್ಮವಿಶ್ವಾಸದಿಂದ, ಹೇಳುತ್ತಾನೆ ಈಗ ನಾನು ನನ್ನ ತಪ್ಪನ್ನು ಅರ್ಥಮಾಡಿಕೊಂಡಿದ್ದೇನೆ ಎಂದಾಗ ತನ್ನ ಸ್ನೇಹಿತ ಬಂದು ಅವನನ್ನು ಅಪ್ಪಿಕೊಂಡು ಹೇಳುತ್ತಾನೆ.
ಸ್ನೇಹಿತ ನಾನು ತಪ್ಪು ಮಾಡಿಬಿಟ್ಟೆ ದಯವಿಟ್ಟು ನನ್ನನ್ನು ಕ್ಷಮಿಸು ನಾನು ಮೊದಲನೇ ಸರಿ ಕೊಟ್ಟಿದ್ದನ್ನು ನೋಡಿಕೊಳ್ಳಲಿಲ್ಲ ಅದು ನನ್ನ ತಪ್ಪು ಈ ಸಾರಿ ನನಗೆ ಜವಾಬ್ದಾರಿ ಬಂದು ನಾನು ಇದನು ಹೆಚ್ಚಿಗೆ ಮಾಡಿದ್ರೇನೆ ಎಂದು ಹೇಳುತ್ತಾನೆ.
ಆಗ ಸ್ನೇಹಿತ ಹೇಳುತ್ತಾನೆ ಸ್ನೇಹಿತ ಇಂದು ನಿನಗೆ ಬುದ್ದಿ ಬಂದಿದೆ ಏಕೆಂದರೆ ನೀನು ನಿನ್ನ ರಾಜ್ಯವನ್ನು ಕಳೆದುಕೊಂಡಿದ್ದು ಯಾಕೆಂದರೆ ನೀನು ಭೋಗಜೀವನ ನಡೆಸಿದ ನಿನ್ನ ಜವಾಬ್ದಾರಿ ಮರತೆ , ಪರಿಶ್ರಮ ಪಡಲಿಲ್ಲ, ನಿನ್ನ ಕರ್ತವ್ಯವನ್ನು ನೀನು ಸಂಪೂರ್ಣವಾಗಿ ಮರೆತು ಬಿಟ್ಟಿ.
ಇದರಿಂದ ನೀನು ರಾಜ್ಯವನ್ನಲ್ಲ ಕಳೆದುಕೊಂಡೆ ಈಗ ನಾನು ನಾನು ನಿನಗೆ ಮುಖ್ಯ ಮಂತ್ರಿಯ ಕೆಲಸ ಕೂಡುತ್ತೇನೆ ಎಂದು ಸ್ನೇಹಿತನಿಗೆ ಮುಖ್ಯ ಮಂತ್ರಿಯಾಗಿ ನೇಮಿಸಿ ಕೊಳ್ಳುತ್ತಾನೆ ನಂತರ ಇವನು ಕೆಲವು ವರ್ಷಗಳು ಕೆಲಸ ಮಾಡಿ ತನ್ನ ಸ್ನೇಹಿತನ ರಾಜ್ಯವನ್ನು ಇನ್ನೂ ವಿಸ್ತರಿಸುತ್ತಾನೆ.
ನಂತರ ಸ್ನೇಹಿತನಿಗೆ ಹೇಳುತ್ತಾನೆ ಸ್ನೇಹಿತ ಒಂದು ಸರಿ ನನಗೆ ನಿನ್ನ ಸೈನ್ಯದಿಂದ ನನಗೆ ಸಹಾಯ ಮಾಡು ನನ್ನ ರಾಜ್ಯವನ್ನು ನಾನು ಗೆದ್ದು ಕೊಳ್ಳುತ್ತೇನೆ ಎಂದನು ನಂತರ ಸ್ನೇಹಿತನ ಸಹಾಯದಿಂದ ತನ್ನ ರಾಜ್ಯವನ್ನು ಗೆದ್ದು ರಾಜನಾಗಿ ಬಾಳುತ್ತಾನೆ.
ಪ್ರಯತ್ನ ಕೈಮೀರಿದಾಗ
ಒಂದು ಊರಿನಲ್ಲಿ ದೇವರನ್ನು ನಂಬದೇ ಇರುವ ಒಬ್ಬ ನಾಸ್ತಿಕ ಇದ್ದನು ಆದರೆ ಅವನ ಕೆಲಸ ಮಾತ್ರ ಜನಸೇವೆ ಮಾಡುವಂತದ್ದು ಇದರಿಂದಾಗಿ ಇವನು ಊರಿಗೆ ಪ್ರಸಿದ್ಧನಾಗಿದ್ದನು ಇವನು ಮಾತ್ರ ದೇವಸ್ಥಾನ ಮಂದಿರ ಪ್ರಾರ್ಥನೆ ಈ ವಿಚಾರದಲ್ಲಿ ಇವನು ಒಪ್ಪುತ್ತಿರಲಿಲ್ಲ.
ನಾಸ್ತಿಕನ ಮನೆಯಲ್ಲಿ ಮಾತ್ರ ಎಲ್ಲರೂ ಆಸ್ತಿಕರು ಭಗವಂತನನ್ನು ನಂಬುತ್ತಿದ್ದರು ಉಪವಾಸ ಪ್ರಾರ್ಥನೆ ಮಾಡುತ್ತಿದ್ದರು . ನಾಸ್ತಿಕನು ಒಂದು ಔಷಧದ ಅಂಗಡಿ ಇಟ್ಟಿದ್ದನು ಚೆನ್ನಾಗಿ ವ್ಯಾಪಾರವು ಆಗುತ್ತಿತ್ತು ಒಂದು ಸಾರಿ ಜೋರಾಗಿ ಭೀಕರವಾಗಿ ಮಳೆ ಬರುತ್ತಿತ್ತು ಆಗಾಗ ಗುಡುಗು ಸಿಡಿಲಿನ ಶಬ್ದ ಕೇಳಿಸುತ್ತಿತ್ತು.
ಸ್ವಲ್ಪ ಸಮಯದ ನಂತರ ಕರೆಂಟ್ ಹೋಯಿತು ಆ ವೇಳೆಯಲ್ಲಿ ಅವಸರವಾಗಿ ಒಬ್ಬ ಬಾಲಕ ಬಂದು ತನ್ನ ತಾಯಿಗೆ ಒಂದು ಔಷಧಿಯನ್ನು ಕೊಡಿ ಎಂದು ಒಂದು ಚೀಟಿಯನ್ನು ತೋರಿಸಿದ ಅಂಗಡಿಯಲ್ಲಿ ಕರೆಂಟ್ ಇಲ್ಲದ ಕಾರಣ ಹೇಗೋ ತಡಕಾಡಿ ಹುಡುಕಿ ಒಂದು ಬಾಟಲನ್ನು ಕೊಟ್ಟು ಕಳುಹಿಸಿದ.
ಕರೆಂಟ್ ಬಂತು ಆಮೇಲೆ ಯಾವ ಔಷಧಿ ಕೊಟ್ಟಿದ್ದೇನೆ ಎಂದು ಪರಿಶೀಲನೆ ಮಾಡಿಕೊಳ್ಳೋಣ ಎಂದು ನಾಸ್ತಿಕನು ಪರಿಶೀಲನೆ ಮಾಡಿದಾಗ ದಿಗಿಲಾಯಿತು ಏಕೆಂದರೆ ಇವನು ಕೊಟ್ಟಿರುವ ಔಷಧಿ ಮನುಷ್ಯರಿಗೆ ನೀಡುವಂತಹ ಔಷದಿಯಲ್ಲ ಅದೊಂದು ಕ್ರಿಮಿನಾಶಕ ಔಷಧಿ ಆಗ ನಾಸ್ತಿಕ ನನ್ನ ಬೇಜವಾಬ್ದಾರಿಯಿಂದ ಒಂದು ಔಷಧಿಯನ್ನು ಕೊಟ್ಟೆನೆಲ್ಲ ಎಂದು ಕೊರಗಿದನು.
ನನ್ನಿಂದ ಒಂದು ಪ್ರಾಣ ಹೋಗಬಹುದಲ್ಲ ಒಂದು ಕುಟುಂಬ ಅನಾಥವಾಗಬಹುದು ಎಂದು ಮನಸ್ಸಿನಲ್ಲಿ ನೊಂದುಕೊಂಡನು ನಂತರ ತನ್ನ ಮನೆಯವರು ಎಲ್ಲಾ ಸಮಯದಲ್ಲೂ ಹೇಳುತ್ತಿದ್ದರು ‘ಮನುಷ್ಯನ ಪ್ರಯತ್ನ ಕೈ ಮೀರಿದಾಗ ದೇವರು ನಮಗೆ ಸಹಾಯ ಮಾಡುತ್ತಾನ ದೇವರನ್ನು ನಂಬಬೇಕು ಪ್ರಾರ್ಥನೆ ಮಾಡಬೇಕು ಎಂದು ಹೇಳಿದ್ದು ನೆನಪಿಗೆ ಬಂತು.
ಆಗ ಏನು ಮಾಡುವುದು ಎಂದು ಗೊತ್ತಾಗದೆ ಪರಿತಪಿಸಿದನು ನಂತರ ತನ್ನ ಅಂಗಡಿಯಲ್ಲಿ ನೇತು ಹಾಕಿದ್ದ ಒಂದು ಭಗವಂತನ ಚಿತ್ರವನ್ನು ನೋಡಿದ ಆಗ ಇವನ ಮನಸ್ಸು ಹೇಳಿತು ಏನಾದರೂ ಆಗಲಿ ದೇವರೇ ನೀನು ತುಂಬಾ ದೊಡ್ಡವನು ಏನು ಬೇಕಾದರೂ ಮಾಡಬಲ್ಲೆ ಎಂದು ಪರಿಶುದ್ಧ ಮನಸ್ಸಿನಿಂದ ಪ್ರಾರ್ಥಿಸಿದನು ಕೈ ಮುಗಿದು ದೈನ್ಯದಿಂದ ಕೇಳಿಕೊಂಡನು.
ಆ ಒಂದು ಕುಟುಂಬವನ್ನು ಉಳಿಸು ಎಂದು ಮನದಾಳದಿಂದ ಬೇಡಿಕೊಂಡನು ಸ್ವಲ್ಪ ಸಮಯದ ನಂತರ ಪವಾಡ ಎಂಬಂತೆ ಆ ಹುಡುಗ ಓಡೋಡಿ ಮತ್ತೆ ಬಂದು ಹೇಳಿದ ಸರ್ ನೀವು ಕೊಟ್ಟಿದ್ದ ಔಷಧಿ ನಾನು ಗಾಬರಿಯಲ್ಲಿ ಹೋಗಬೇಕಾದರೆ ಎಡವಿ ಬಿದ್ದು ಔಷಧಿ ಒಡೆದುಹೋಯಿತು.
ದಯವಿಟ್ಟು ನನಗೆ ಬೇರೆಯ ಒಂದು ಔಷಧಿಯನ್ನು ಕೂಡಿ ಹಣ ಸ್ವಲ್ಪ ಕಡಿಮೆ ಇದೆ ನಾನು ನಾಳೆ ತಂದುಕೊಡುತ್ತೇನೆ ಎಂದು ಧನ್ಯದಿಂದ ಕೇಳಿದನು. ಆಗ ಹಣ ನನಗೆ ಬೇಡ ಕೈಜಾರಿ ಹೋಗಿರುವುದರಿಂದ ಅದಕ್ಕೆ ನಾನು ದುಡ್ಡು ತೆಗೆದುಕೊಳ್ಳುವುದಿಲ್ಲ. ಈ ಔಷಧಿಯನ್ನು ತೆಗೆದುಕೊಂಡು ಹೋಗು ಎಂದು ಉಚಿತವಾಗಿ ಕೊಟ್ಟು ಕಳುಹಿಸಿದ ಆಗ ಮನಸ್ಸಿಗೆ ಸಂತೃಪ್ತಿಯಾಯಿತು.
ನಾಸ್ತಿಕನಾಗಿದ್ದರೂ ಪರಿಶುದ್ಧ ಮನಸ್ಸಿನಿಂದ ಮೊದಲನೇ ಬಾರಿಗೆ ನಂಬಿಕೆ ಇಟ್ಟು ಪ್ರಾರ್ಥನೆ ಮಾಡಿದ ಅದು ನೆರವೇರಿತು ಮೊಟ್ಟ ಮೊದಲು ನಂಬಿಕೆ ಇರಬೇಕು ನಂಬಿಕೆ ಇದ್ದರೆ ಅಸಾಧ್ಯವಾದುದು ಕೂಡ ಸಾಧ್ಯವಾಗುತ್ತದೆ.
ಅಚ್ಚರಿ ಕಾದಿತ್ತು
ಒಂದು ಊರಿನಲ್ಲಿ ಒಬ್ಬ ಪ್ರಾಮಾಣಿಕ ರಾಜನಿದ್ದನು ರಾಜ್ಯವು ತುಂಬ ಸುಭಿಕ್ಷವಾಗಿ ನಡೆಯುತ್ತಿತ್ತು ಹೀಗೆ ನಡೆಯುತ್ತಿರಬೇಕಾದರೆ ನೆರೆಯ ರಾಜ್ಯದವರು ಒಂದು ಉಡುಗೊರೆಯನ್ನು ಕೊಟ್ಟು ಕಳುಹಿಸಿದನು ಉಡುಗೊರೆ ಏನು ಎಂದು ತೆಗೆದು ನೋಡಿದರೆ ಅಚ್ಚರಿ ಕಾದಿತ್ತು ಒಂದು ಮಡಕೆ ಇತ್ತು ಆ ಮಡಕೆಯಲ್ಲಿ ಒಂದು ಚೀಟಿ ಇತ್ತು.
ಆ ಚೀಟಿಯನ್ನು ತೆಗೆದು ನೋಡಿದರೆ ಅದರಲ್ಲಿ ಹೀಗೆ ಬರೆದಿತ್ತು ಈ ಮಡಕೆಯಲ್ಲಿ ಜ್ಞಾನವನ್ನು ತುಂಬಿ ಕಳುಹಿಸಿ ಇಲ್ಲದಿದ್ದರೆ ನಾನು ನಿಮ್ಮ ರಾಜ್ಯಕ್ಕೆ ಯುದ್ಧ ಮಾಡಲು ಬರುತ್ತೇವೆ ಎಂಬ ಹೇಳಿಕೆ ಸ್ಪಷ್ಟವಾಗಿ ದೊಡ್ಡ ಅಕ್ಷರಗಳಲ್ಲಿ ಬರೆದಿತ್ತು ಇದನ್ನು ನೋಡಿದ ರಾಜನಿಗೆ ಗಾಬರಿಯಾಯಿತು.
ಆಗ ರಾಜನು ಯೋಚಿಸಿದ ಇದಕ್ಕೆ ಏನು ಮಾಡುವುದು ಎಂದು ಚಿಂತಿತನಾದನು ಆಗ ಮಂತ್ರಿಯು ನಾನು ಇದಕ್ಕೆ ಉತ್ತರವನ್ನು ಕೊಡುತ್ತೇನೆ ನನಗೆ ಇದಕ್ಕಾಗಿ ಹದಿನೈದು ದಿನಗಳ ಸಮಯಬೇಕು ಎಂದು ಕೇಳಿಕೊಂಡನು ರಾಜನು ಆಗಲಿ ಎಂದು ಒಪ್ಪಿದನು ಮಂತ್ರಿಯಾದವನು ಆ ಮಡಕೆಯಲ್ಲಿ ಕುಂಬಳಕಾಯಿಯನ್ನು ಬೆಳೆಸಿದನು ಕುಂಬಳಕಾಯಿ ಮಡಕೆ ಒಳಗಡೆಯೇ ಬೆಳೆಯಿತು.
ನಂತರ ರಾಜನಿಗೆ ಹೇಳಿದನು,ಉತ್ತರವನ್ನು ನಾನು ಸಿದ್ದ ಮಾಡಿಕೊಂಡು ಬಂದಿದ್ದೇನೆ ಮಡಕೆಯಲ್ಲಿ ಕುಂಬಳಕಾಯಿ ಇದೆ ಮಡಕೆಯು ಹೊಡೆಯಬಾರದು ಒಳಗಡೆಯ ಕುಂಬಳಕಾಯಿ ಒಡೆದು ಅಥವಾ ಕತ್ತರಿಸಿ ತೆಗೆಯುವ ಹಾಗಿಲ್ಲ ಈ ರೀತಿ ನೀವು ತೆಗೆಯಬೇಕು ಎಂದು ಹೇಳಿದನು ಆಗ ರಾಜನು ಸಂತೋಷ ಪಟ್ಟನು. ಕುಂಬಳಕಾಯಿ ಮಡಿಕೆಯನ್ನು ನೆರ ರಾಜ್ಯಕ್ಕೆ ಕಳುಹಿಸಿದರು ನೆರೆರಾಜನು ಕುಂಬಳಕಾಯಿ ಮಡಿಕೆಯನ್ನು ನೋಡಿ ಬರೆದಿದ್ದನ್ನು ಓದಿ ಮೈತ್ರಿಯನ್ನು ಬೆಳೆಸಿದನು ಸಮಯಕ್ಕೆ ಸರಿಯಾಗಿ ಬುದ್ಧಿವಂತಿಕೆ ಜಾಣ್ಮೆ ಸೃಜನಶೀಲತೆಯನ್ನು ಬೆಳೆಸಿಕೊಳ್ಳೋಣ.
ಯಾವುದೂ ಬೇಡ
ಒಂದು ಆಶ್ರಮದಲ್ಲಿ ಗುರುಗಳು ಇದ್ದರು ಅವರು ಎಲ್ಲರಿಗೂ ಪಾಠವನ್ನು ಸೊಗಸಾಗಿ ಹಾಸ್ಯವಾಗಿ ಹೇಳಿ ಕೊಡುತ್ತಿದ್ದರು ಹಾಗೆಯೇ ಶಿಷ್ಯರು ಕೂಡ ಚೆನ್ನಾಗಿ ಕಲಿಯುತ್ತಿದ್ದರು ಗುರುಗಳ ಮಾತುಗಳನ್ನು ಕೇಳಲು ದೂರದೂರದಿಂದ ಬರುತ್ತಿದ್ದರು.
ಒಬ್ಬ ರಾಜ ಇವರ ಶಿಷ್ಯನಾದನು ನಂತರ ಗುರುಗಳಿಗೆ ಹೇಳಿದನು ಗುರುಗಳೇ ನೀವು ಸತ್ತರೆ ನಿಮ್ಮ ಪೆಟ್ಟಿಗೆಯಲ್ಲಿ ಬೆಳ್ಳಿ, ವಜ್ರ, ಎಲ್ಲವೂ ಇಡುತ್ತೇನೆ ಅಮೃತ ಶಿಲೆಯಿಂದ ನಿಮ್ಮ ಸಮಾಧಿಯನ್ನು ಕಟ್ಟಿಸುತ್ತೇನೆ ಎಂದನು.
ಆಗ ಗುರುಗಳು ಹೇಳಿದರು ನನಗೆ ಬೇಡಪ್ಪ ನನಗೆ ಸಹಜವಾಗಿ ಅಂತ್ಯಸಂಸ್ಕಾರ ಮಾಡಿದರೆ ಸಾಕು ಎಂದು ಗುರುಗಳು ಹೇಳಿದರು ಸತ್ತ ನಂತರ ನನಗೆ ಆಕಾಶ ಸೂರ್ಯ ಎಲ್ಲವೂ ಕಾಣಬೇಕು ಅಷ್ಟರಲ್ಲಿ ಒಬ್ಬ ಶಿಷ್ಯ ಕೇಳಿದ ಗುರುಗಳೇ ನಿಮ್ಮನ್ನು ಈ ರೀತಿ ನಾವು ಅಂತ್ಯ ಸಂಸ್ಕಾರ ಮಾಡಿದರೆ ಪ್ರಾಣಿಗಳು ಪಕ್ಷಿಗಳು ನಿಮ್ಮ ದೇಹಗಳನ್ನು ತಿನ್ನುತ್ತವೆ ಎಂದಾಗ ಗುರುಗಳು ಹೇಳಿದರು.
ನನ್ನನ್ನು ಮಣ್ಣಿನಲ್ಲಿ ಹೂತಿದ್ದರು ಕೂಡ ಅಲ್ಲಿಯೂ ಕೂಡ ನನಗೆ ಗೆದ್ದಿಲು ಇತರ ಹುಳುಗಳು ತಿಂದೇತಿನ್ನುತ್ತವೆ. ಯಾವ ಪ್ರಾಣಿಗಳು ತಿಂದರೂ ಅಷ್ಟೇ ಎಂದು ಹೇಳಿದರು ಇಷ್ಟೆಲ್ಲ ಕೇಳಿದ ರಾಜನು ಹೇಳಿದನು ನೀವು ನನಗೆ ಸಲಹೆಗಾರರಾಗಿ ಇರಿ ನಾನು ನಿಮಗೆ ಬೇಕಾದ ವ್ಯವಸ್ಥೆಯನ್ನು ಮಾಡುತ್ತೇನೆ ಎಂದು ಹೇಳಿದಾಗ ಗುರುಗಳು ನಕ್ಕು ಹೇಳಿದರು.
ಬೇಡ ನಾನು ಇಲ್ಲೇ ಚೆನ್ನಾಗಿ ಇದ್ದೇನೆ ನನಗೆ ಯಾವುದೇ ರೀತಿಯ ಅಧಿಕಾರ, ಪದವಿ, ಮರ್ಯಾದೆ, ಸನ್ಮಾನ ಬೇಡ ಕುರಿಯನ್ನು ಬಲಿ ಕೊಡುವ ಮೊದಲು ಅಕ್ಕರೆಯಿಂದ ನೋಡಿಕೊಳ್ಳುತ್ತಾರೆ ಸಂಭ್ರಮಿಸುತ್ತಾರೆ ಆದರೆ ಕುರಿಗೆ ತಿಳಿಯುವುದಿಲ್ಲ ಏಕೆ ಗೌರವಿಸಿದರು ಎಂದು ನಂತರ ಗೊತ್ತಾಗುತ್ತದೆ ಅದೇ ರೀತಿ ನನಗೆ ಯಾವುದು ಬೇಡ ಎಂದು ಗೌರವದಿಂದ ತಿರಸ್ಕರಿಸಿದರು. ಕೆಲವು ಸಾರಿ ನಮ್ಮನ್ನು ಅತಿ ಹೆಚ್ಚಾಗಿ ಗೌರವಿಸುತ್ತಾರೆ ಆಗ ಎಚ್ಚರಿಕೆಯಾಗಿ ಇರೋಣ.