ಒಂದು ದಟ್ಟವಾದ ಅರಣ್ಯ ಅದರಲ್ಲಿ ಒಂದು ಸಿಂಹವಿತ್ತು ಅದೇ ಆ ಕಾಡಿಗೆ ರಾಜ ಆದರೆ ಅದಕ್ಕೆ ಏನೋ ಕಾರಣದಿಂದಾಗಿ ಅದರ ಬುದ್ಧಿ ಭ್ರಮಣೆಯಾಯಿತು ನಂತರ ಅದು ಚಿಕ್ಕಪ್ರಾಣಿಗಳಿಗೆ, ಸಿಕ್ಕಿದವರನ್ನು ಹಿಡಿದು ತಿನ್ನುವುದು ಪರಚುವುದು ಎಲ್ಲರಿಗೂ ಚಿತ್ರವಿಚಿತ್ರವಾಗಿ ತೊಂದರೆ ನೀಡುತ್ತಿತ್ತು.
.ಇದರಿಂದಾಗಿ ಎಲ್ಲಾ ಪ್ರಾಣಿಗಳು ಹೆದರಿದೆವು ಅದಕ್ಕೆ ಎಲ್ಲರೂ ಸೇರಿ ಒಂದು ಸಭೆ ಸೇರಿಸಿ ದಿನನಿತ್ಯ ನಮಗೆ ತೊಂದರೆ ಕೊಡುತ್ತಿದ್ದರೆ ನಾವು ಬದುಕುವುದು ಕಷ್ಟ ಎಂದು ಎಲ್ಲರೂ ಸೇರಿ ದಿನಕ್ಕೆ ಒಂದೊಂದು ಪ್ರಾಣಿಯನ್ನು ಸಿಂಹ ಗೊತ್ತು ಮಾಡಿದ ಜಾಗಕ್ಕೆ ಕಳಿಸುತ್ತೇವೆ ಎಂದು ಎಲ್ಲಾ ಪ್ರಾಣಿಗಳು ಒಪ್ಪಿದವು.
ಅದರಲ್ಲಿ ಮಧ್ಯದಲ್ಲಿ ಎದ್ದು ಒಂದು ಚತುರ ಪ್ರಾಣಿ ಹೇಳಿತು ಒಂದು ನಿಯಮವಿದೆ ಅದೇನೆಂದರೆ ಏಳು ದಿನಗಳ ಕಾಲ ಉಪವಾಸ ಇರಬೇಕು ಎಂಟನೆಯ ದಿನದಿಂದ ನಾವು ಆಹಾರವಾಗಿ ಒಂದೊಂದೇ ಪ್ರಾಣಿಯನ್ನು ಕಳಿಸುವುದು ಇದಕ್ಕೆ ಸಿಂಹವು ಒಪ್ಪಲೇ ಬೇಕಾಯಿತು.
ಸಿಂಹಕ್ಕೆ ಮೂರು ನಾಲ್ಕು ದಿನ ಕಳೆಯಲು ಏನು ಕಷ್ಟವಾಗಲಿಲ್ಲ ಆದರೆ ಐದನೇ ದಿನ ಕಷ್ಟವಾಯಿತು ಆರನೇ ದಿನ ಕಳೆಯಲು ತುಂಬಾ ಕಷ್ಟವಾಯಿತು ಏಳಲು ಸಾಧ್ಯವಾಗುತ್ತಿಲ್ಲ ಶಕ್ತಿಯಿಲ್ಲ ಆಗ ಹೇಳಿದ ಒಂದು ಚತುರ ಪ್ರಾಣಿಯು ಬಂದು ಸಿಂಹ ಹೇಗಿದೆ ಎಂದು ನೋಡಿಕೊಳ್ಳಲು ಬಂತು ಮತ್ತೆ ದೂರದಿಂದಲೇ ಹೇಳಿತು.
ಇನ್ನೂ ಒಂದೇ ಒಂದು ಅಂತಿಮ ದಿನ ಇದೆ ಏಳನೇ ದಿನಕ್ಕೆ ನೀನು ಚೇತರಿಸಿಕೊಂಡಿರು ನಂತರ ನಿನಗೆ ದಿನನಿತ್ಯ ಆಹಾರ ಸಿಗುತ್ತದೆ ಎಂದು ಹೇಳಿತು ಇದನ್ನು ಗಮನಿಸಿದ ಪ್ರಾಣಿಗಳು ಆ ಗುಹೆಯ ಬಾಗಿಲಿಗೆ ಚಿಕ್ಕ ಚಿಕ್ಕ ಕಲ್ಲುಗಳಿಂದ ಸಿಂಹ ಬರೆದಂತೆ ಬರದಂತೆ ಸಂಪೂರ್ಣವಾಗಿ ಮುಚ್ಚಿಬಿಟ್ಟವು.
ನಂತರ ಆ ಸಿಂಹವು ಅಲ್ಲೇ ಸತ್ತು ಹೋಯಿತು ಕೆಲವೊಂದು ಸಾರಿ ನಮಗೆ ಶಕ್ತಿ ಉಪಯೋಗಕ್ಕೆ ಬಾರದಿದ್ದರೂ ಯುಕ್ತಿ, ಸೃಜನಶೀಲತೆ ನಮಗೆ ತುಂಬಾ ಸಹಾಯವಾಗುತ್ತದೆ.
ಯಾರು ಉತ್ತಮರು?
ಒಂದು ಸಾರಿ ನಾಲ್ಕು ಪ್ರವಾಸಿಗಳು ಹಡಗಿನಲ್ಲಿ ಕುಳಿತು ಹೊರಟರು ಅವರಲ್ಲಿ ಒಬ್ಬ ಶ್ರೀಮಂತನಿದ್ದ ಇನ್ನೊಬ್ಬ ಪಂಡಿತ, ಮತ್ತೊಬ್ಬ ಶಕ್ಕಿವಂತ, ಮಗದೊಬ್ಬ ಸುಂದರನಾಗಿದ್ದ, ಪ್ರತಿಯೊಬ್ಬರೂ ನಾನೆ ಉತ್ತಮ ದರ್ಜೆಯವನು ಎಂದು ಒಳಗೊಳಗೇ ಭಾವಿಸಿದ್ದರು.
ಒಬ್ಬರನ್ನೊಬ್ಬರು ಕಡೆಗಣಿಸುತ್ತಿದ್ದರು ಅಪಹಾಸ್ಯ ಮಾಡುತ್ತಿದ್ದರು ಅಷ್ಟರಲ್ಲಿ ಹಡಗು ಸಮುದ್ರದ ಮಧ್ಯಭಾಗ ತಲುಪಿತು ಇದ್ದಕ್ಕಿದ್ದ ಹಾಗೆ ಬಿರುಗಾಳಿ ಬೀಸಿ ಹಡಗು ಪಲ್ಟಿ ಹೊಡೆಯುವಂತೆ ಆಯಿತು ಎಲ್ಲರು ಭಯಭೀರರಾದರು ನಾಲ್ವರೂ ನಮ್ಮನ್ನು ಕಾಪಾಡಿ ಎಂದು ಜಲದೇವತೆಯನ್ನು ಶ್ರದ್ಧೆ ಭಕ್ತಿಯಿಂದ ಬೇಡಿಕೊಂಡರು .
ಇವರ ಮನಸ್ಸನು ಅರಿತಿದ್ದ ಜಲದೇವತೆ ಹೇಳಿದಳು ನಿಮ್ಮಲ್ಲಿ ಯಾರು ಉತ್ತಮ ದರ್ಜೆಯವರು? ಅವರು ಉಳಿದವರನ್ನು ಕಾಪಾಡಿ ಎಂದಾಗ ಎಲ್ಲರೂ ಒಟ್ಟಾಗಿ ಹೇಳಿದರು ನಾವು ಯಾರೂ ಉತ್ತಮ ದರ್ಜೆಯವರು ಅಲ್ಲ ನಿಮಷ್ಟು ದೊಡ್ಡವರು ಅಲ್ಲ.
ಅಮ್ಮ ನೀನೆ ದೊಡ್ಡವಳು, ತಾಯಿ, ದಯಾಮಯಿ ನಮ್ಮನ್ನು ಪಾರು ಮಾಡಿ ಎಂದು ಗೋಗರೆದರು ಹಾಗಾದರೆ ನೀವು ಯಾರನ್ನೂ ದ್ವೇಷಿಸದೇ ಪರಸ್ಪರ ಪ್ರೀತಿಯಿಂದಿರಿ ಎಂದು ಹೇಳಿ ಜಲದೇವತೆಯು ಅವರನ್ನು ಸಮುದ್ರದಿಂದ ಪಾರು ಮಾಡಿದಳು.
ಒಂದು ಕಡೆ ಕೆಲಸ ಮಾಡಿಕೊಂಡು ಇರಬೇಕಾದರೆ ನಾನೇ ಎನ್ನುವುದಕ್ಕಿಂತ ಎಲ್ಲರೂ ಒಂದೇ ಎನ್ನುವ ಭಾವನೆ ಬರಬೇಕು ಪ್ರತಿಯೊಬ್ಬರಿಗೂ ಒಂದೊಂದು ಕೌಶಲ್ಯ ಇದ್ದೇ ಇರುತ್ತದೆ ಆದ್ದರಿಂದ ಎಲ್ಲರೊಂದಿಗೆ ಪರಸ್ಪರ ಹೊಂದಿಕೊಂಡು ಬಾಳೋಣ.
ಗರ್ವದಿಂದ ಜೋರಾಗಿ ಕೇಳಿದರೆ
ಒಂದು ಮಂದಿರಕ್ಕೆ ಹಲವಾರು ಭಕ್ತರು ದರ್ಶನಕ್ಕೆಂದು ಬರುತ್ತಿದ್ದರು ನಂತರ ಪ್ರಸಾದವನ್ನು ಸ್ವೀಕರಿಸಿ ಹೋಗುತ್ತಿದ್ದರು ಅಷ್ಟು ಭಕ್ತರಲ್ಲಿ ಒಬ್ಬ ಮಾತ್ರ ಪೂಜೆಗೆ ತರುವ ಸಾಮಗ್ರಿಗಳು ಹೂವುಗಳು ಸ್ವಲ್ಪ ವೈವಿಧ್ಯವಾಗಿ ಇರುತ್ತಿದ್ದವು.
ಆತ ದೇವಸ್ಥಾನಕ್ಕೆ ಬಂದರೆ ಎಲ್ಲರೂ ಇವನನ್ನು ಒಂದು ಸರಿ ನೋಡಲೇ ಬೇಕಾಗಿತ್ತು ಏಕೆಂದರೆ ಇವನ ಶೈಲಿ ವಿಚಿತ್ರವಾಗಿರುತ್ತಿತ್ತು ದರ್ಪದಿಂದ ನಮಸ್ಕಾರ ಮಾಡುತ್ತಿದ್ದ ಇದು ಎಲ್ಲರೂ ಗಮನಿಸುತ್ತಿದ್ದರು ಆದರೂ ಏನೂ ಹೇಳ್ತಿರಲಿಲ್ಲ ಇದನ್ನು ದಿನನಿತ್ಯ ಪೂಜಾರಿಯವರು ಗಮನಿಸುತ್ತಿದ್ದರು.
ಪೂಜಾರಿಯವರು ಸ್ವಲ್ಪ ದೀರ್ಘವಾಗಿ ಯೋಚಿಸಿ ಆ ಭಕ್ತನನ್ನು ಕರೆದು ನಿಮ್ಮಿಂದ ಒಂದು ಸಣ್ಣ ಉಪಕಾರವಾಗಬೇಕಾಗಿದೆ ಎಂದು ಹೇಳಿದರು ಆಗ ಆ ಮನುಷ್ಯನಿಗೆ ಎಲ್ಲಿಲ್ಲದ ಸಂತೋಷ ಏಕೆಂದರೆ ಹಲವಾರು ಭಕ್ತಾದಿಗಳು ಬರುತ್ತಾರೆ ಆದರೆ ಯಾರನ್ನು ಕೇಳಿಲ್ಲ ಪೂಜಾರಿಯವರು ನನ್ನನ್ನು ಮಾತ್ರ ಕೇಳುತ್ತಿದ್ದಾರೆ ಎಂದು ಹಿಗ್ಗಿದನು.
ನಂತರ ಏನು ಮಾಡಬೇಕು ಈ ದೇವಸ್ಥಾನದ ವಾರ್ಷಿಕೋತ್ಸವ ಮಾಡಬೇಕೆ ಅಥವಾ ಬೇರೆ ಇನ್ನೇನಾದರೂ ಮಾಡಬೇಕೆ ಎಂದು ಉತ್ಸಾಹ ಭರಿತನಾಗಿ ಕೇಳಿದನು.
ಪೂಜಾರಿಯವರು ಅದೇನೂ ಬೇಡ ಈ ಬಡಾವಣೆಯ ಶ್ರೀಮಂತರ ಹತ್ತಿರ ನಾನು 2 ಸಾವಿರ ರೂಪಾಯಿ ಸಾಲವನ್ನು ಕೇಳಿದೆ ಅವರು ನಾನು ಕೊಡುತ್ತೇನೆ ಎಂದಿದ್ದರು ದಯಮಾಡಿ ಅದನ್ನು ಪಡೆದುಕೊಂಡು ಬಂದು ನನಗೆ ಕೊಟ್ಟರೆ ಸಾಕು ಏಕೆಂದರೆ ಇವತ್ತು ನಾನು ಸ್ವಲ್ಪ ಹೆಚ್ಚಾಗಿ ಕೆಲಸ ಮಾಡಿದ್ದೀನಿ ಹೆಚ್ಚು ನಿಂತುಕೊಂಡಿದ್ದೇನೆ ಆದ್ದರಿಂದ ನನಗೆ ಆಯಾಸವಾಗುತ್ತಿದೆ ಎಂದು ಹೇಳಿದರು.
ಆಗ ನಾನೇ ಬೇಕಾದರೆ ಕೊಟ್ಟುಬಿಡ್ತೀನಿ ಅಲ್ಲಿ ಯಾಕೆ ಕೇಳುತ್ತೀರಿ ಎಂದು ಹೇಳಿದನು ಆ ರೀತಿಯೇನೂ ಇಲ್ಲ ಮೊದಲೇ ಅವರಿಗೆ ನಾನು ಕೇಳಿದ್ದೇನೆ ಅವರು ಕೊಡುತ್ತೇನೆ ಬಾ ಎಂದು ಕರೆದಿದ್ದಾರೆ ದಯವಿಟ್ಟು ಹಣ ತಂದು ಕೊಟ್ಟರೆ ಸಾಕು ಎಂದು ಪೂಜಾರಿಯವರು ಹೇಳಿದರು.
ಮಹಾಶಯ ಭಕ್ತ ಹೋದನು ಹನ್ನೊಂದು ಗಂಟೆಗೆ ಬರಬೇಕಾಗಿದ್ದು ಒಂದು ಗಂಟೆಯಾದರೂ ಬರಲಿಲ್ಲ ನಂತರ ಪೂಜಾರಿಯವರು ಇನ್ನೇನು ಬಾಗಿಲು ಹಾಕಿ ಹೋಗೋಣ ಎಂದು ಹೊರಡಲು ನಿಂತರು ಆಗ ಭಕ್ತ ಬಂದನು ಮತ್ತು ಮುಖ ಸಪ್ಪೆಯಾಗಿತ್ತು ಭಕ್ತನು ಹಣ ತರಲಿಲ್ಲ ನಾನು ಆ ಶ್ರೀಮಂತರ ಬಳಿ ಹೋಗಿದ್ದೆ ಪೂಜಾರಿಯವರ ಹಣ ಕೊಡಿ ಎಂದೆ ಅವರು ಒಂದು ಸಾರಿ ನನ್ನನ್ನು ಮೇಲಿನಿಂದ ಕೆಳಗೆ ನೋಡಿ ಹಣ ಇಲ್ಲ ಹೋಗು ಎಂದು ಸಿಟ್ಟಿನಿಂದ ಹೇಳಿದರು.
ಅದಕ್ಕೆ ನಾನು ಬೈದು ಕೊಳ್ಳುತ್ತ ಬಂದೆ ಎಂದನು ಆಗ ಪೂಜಾರಿಯವರು ಮುಗುಳ್ ನಗುತ್ತಾ ಕೇಳಿದರು ನೀನು ಅವರ ಮನೆಯಲ್ಲಿ ಹೇಗೆ ನಿಂತುಕೊಂಡಿದ್ದೆ? ಹೇಗೆ ನಿಲ್ಲುತ್ತಾರೆ? ದಿನಾ ನಾನು ದೇವಸ್ಥಾನದಲ್ಲಿ ನಿಲ್ಲುತ್ತೇನೆ ಹಾಗೆಯೇ ನಿಂತೆ? ಆಗ ಪೂಜಾರಿ ಅವರು ಹೇಳಿದರು.
ನನಗೆ ಬೇಕಿರುವುದು ಸಾಲ ಅದು ಅವಶ್ಯಕತೆ ಅಂದಮೇಲೆ ತಗ್ಗಿಬಗ್ಗಿ ನಯ ವಿನಯವಾಗಿ ಕೇಳಬೇಕು ಗರ್ವದಿಂದ ಜೋರಾಗಿ ಕೇಳಿದರೆ ಯಾರು ಕೊಡುತ್ತಾರೆ ಆಗ ಭಕ್ತನು ಹೇಳಿದ ನಾನು ಅವರ ಹತ್ತಿರ ಭಿಕ್ಷೆ ಕೇಳ್ತಾ ಇದೀನಾ ಇವತ್ತಲ್ಲ ನಾಳೆ ಅದನ್ನು ಅವರಿಗೆ ಬಿಸಾಕುತ್ತಿವೆಯಲ್ಲ ಎಂದು ದರ್ಪದಿಂದ ಹೇಳಿದ ಆಗ ಪೂಜಾರಿಯವರು ಹೇಳಿದರು.
ಇದೇ ನೋಡು ನಿನ್ನಲ್ಲಿರುವ ಅಹಂ ನೀನು ಪ್ರತಿ ದಿನ ದೇವಸ್ಥಾನಕ್ಕೆ ಬರಿಯ ಪೂಜೆ ಮಾಡಿ ಹೋಗುತ್ತೀಯೆ ಆದರೆ ನಿನ್ನ ಭಂಗಿ ಅಹಂಕಾರದಿಂದ ಕೂಡಿದೆ ನೀನು ದರ್ಪದಿಂದ ಬಂದು ಸಾಲ ಕೊಡಿ ಎಂದರೆ ಯಾರೂ ಕೊಡುವುದಿಲ್ಲ ಎಂದರು ಇದು ದೇವರ ಸ್ಥಾನ ಇಲ್ಲಿ ನೀನು ವಿನಯ ದಿಂದ ಇದ್ದರೆ ದೇವರಿಗೆ ಹತ್ತಿರವಾಗಬಹುದು ದೇವರು ನಮ್ಮನ್ನು ಅಳೆಯುವುದು ಹಣದಿಂದಲ್ಲ.
ನಮ್ಮ ನಯ, ವಿನಯ, ಸರಳ, ಮೃದು ಪ್ರಾಮಾಣಿಕತೆ ಭಕ್ತಿ ಸ್ವಭಾವದಿಂದ, ಇದ್ದಾಗ ಮಾತ್ರ ಎಂದರು ನನಗೆ ಸಾಲ ಬೇಕಿರಲಿಲ್ಲ ನಿನ್ನನ್ನು ಹಲವಾರು ದಿನಗಳಿಂದ ಗಮನಿಸಿ ಈ ಒಂದು ಚಿಕ್ಕ ನಾಟಕವನ್ನು ಮಾಡಬೇಕಾಯಿತು ಅಷ್ಟೆ ಎಂದರು ಭಕ್ತನು ಚಿಂತನೆ ಮಾಡಿ ಹೌದು ನಾನು ನನ್ನ ತಪ್ಪನ್ನು ಅರಿತೆ ಎಂದು ಹೇಳಿದನು ನಮ್ಮಲ್ಲಿ ಇರುವ ದೋಷಗಳನ್ನು ಇತರರು ಹೇಳುವುದಕ್ಕಿಂತ ಮುಂಚೆ ನಾವೇ ಗಮನಿಸಿ ಸರಿಪಡಿಸಿಕೊಳ್ಳೋಣ.
ದಿನದ 24 ಗಂಟೆಗಳು ಗಮನಿಸಲು ಸಾಧ್ಯವಿಲ್ಲ
ಹಲವಾರು ವರ್ಷಗಳ ಹಿಂದೆ ಒಂದು ಹಳ್ಳಿಯಲ್ಲಿ ಒಬ್ಬ ಮಹಾನ್ ಕುಡುಕ ಇದ್ದನು ಇವನು ಯಾರಿಗೂ ಮಾತನಾಡಿಸದೆ ತನ್ನಷ್ಟಕ್ಕೆ ತಾನು ಇರುತ್ತಿದ್ದನು ಆದರೆ ಬೆಳಿಗ್ಗೆ ಸಂಜೆ ಕುಡಿದು ಅಲ್ಲಿ ಇಲ್ಲಿ ಇರುತ್ತಾನೆ ಯಾರೊಂದಿಗೂ ಮಾತುಕತೆ ಇರಲಿಲ್ಲ.
ಹಾಗೆ ಈ ಕುಡುಕನನ್ನು ಯಾರು ಒಳ್ಳೆಯವನು ಎಂದು ಹೇಳುವವರಿಲ್ಲ ಹೀಗೆ ಕೆಲವು ದಿನಗಳ ನಂತರ ಈ ಮಹಾನ್ ಕುಡುಕನು ಸತ್ತು ಹೋದನು ನಂತರ ಏನೇನು ಕ್ರಿಯೆಗಳು ಮಾಡಬೇಕು ಅದನ್ನೆಲ್ಲವೂ ಮಾಡಿದರು ನಂತರ ಸ್ಮಶಾನಕ್ಕೆ ತೆಗೆದುಕೊಂಡು ಹೋದರು.
ಆದರೆ ಅಲ್ಲಿಯ ಪದ್ಧತಿ ಏನೆಂದರೆ ಸತ್ತ ವ್ಯಕ್ತಿಯು ಯಾವುದಾದರೂ ಒಳ್ಳೆಯ ಕೆಲಸ ಮಾಡಿರಬೇಕು ಆ ಒಳ್ಳೆಯ ಕೆಲಸಗಳನ್ನು ಎಲ್ಲರ ಮುಂದೆ ಹೇಳಿ ನಂತರ ಅಂತ್ಯಕ್ರಿಯೆಯನ್ನು ಮುಗಿಸಿ ಎಲ್ಲರೂ ಸ್ಮಶಾನದಿಂದ ಹೊರಗೆ ಹೋಗುತ್ತಾರೆ.
ಆದರೆ ಈ ಮಹಾನ್ ಕುಡುಕನ ಬಗ್ಗೆ ಯಾರೂ ಕೂಡ ಒಳ್ಳೆಯ ಮಾತನಾಡಲು ಮುಂದೆ ಬರುತ್ತಿಲ್ಲ ಏಕೆಂದರೆ ಯಾರು ಇವನು ಮಾಡಿರುವ ಒಳ್ಳೆಯ ಕೆಲಸಗಳು ನೋಡಿಲ್ಲ ನಂತರ ಒಳ್ಳೆಯ ಮಾತಿಗಾಗಿ ಕಾಯುತ್ತಿರುತ್ತಾರೆ.
ನಂತರ ಮೋಡ ಕವಿಯುತ್ತದೆ ಸಿಡಿಲು ಹೊಡೆಯುತ್ತದೆ ಜೋರಾಗಿ ಮಳೆ ಬರುವುದು ಖಚಿತ ಎಂದು ಹಿರಿಯ ವ್ಯಕ್ತಿ ಒಬ್ಬರು ಅರ್ಥಮಾಡಿಕೊಂಡು ಹಿರಿಯ ವ್ಯಕ್ತಿ ಯೋಚನೆ ಮಾಡಿ ಹೇಳುತ್ತಾರೆ ನಾವು ಸತ್ತು ಹೋಗಿರುವ ವ್ಯಕ್ತಿಯ ಬಗ್ಗೆ ದಿನದ 24 ಗಂಟೆಗಳು ಗಮನಿಸಲು ಸಾಧ್ಯವಿಲ್ಲ.
ಇವನು ಕೂಡ ಒಳ್ಳೆಯ ಕೆಲಸ ಮಾಡಿ ಇರುತಾನೆ ಆದರೆ ನಾವು ಅದನ್ನು ನೋಡಿರುವುದಿಲ್ಲ ಹಾಗಾಗಿ ಇವನು ಕೂಡ ಒಳ್ಳೆಯ ಕೆಲಸಗಳನ್ನು ಮಾಡಿದ್ದಾನೆ ಎಂದು ಹೇಳುತ್ತಾರೆ ಈ ಮಾತಿಗೆ ಎಲ್ಲರೂ ಸಮ್ಮತಿಸುತ್ತಾರೆ ನಂತರ ಅಂತಕ್ರಿಯಮುಗಿಸಿ ಎಲ್ಲರೂ ಸ್ಮಶಾನದಿಂದ ಹೊರಗೆ ಹೋಗುತ್ತಾರೆ.
ಪವಿತ್ರವಾದ ಹೃದಯದಲ್ಲಿ
ಶಾಲೆಯ ಮುಖ್ಯ ಶಿಕ್ಷಕರಲ್ಲಿ ಒಬ್ಬರು ಪಾಠ ಮಾಡುವುದಕ್ಕಿಂತ ಮುಂಚೆ ಯಾವುದಾದರೂ ಚಟುವಟಿಕೆಯೊಂದಿಗೆ ತರಗತಿಯ್ನು ಆರಂಭಿಸುತ್ತಿದ್ದರು ಶಿಕ್ಷಕರು ಶಾಲೆಗೆ ಬಂದ ನಂತರ ಎಲ್ಲಾ ಮಕ್ಕಳಿಗೂ ಟೊಮೆಟೊವನ್ನು ತರಲು ಹೇಳಿದರು.
ಹಾಗೆ ಕೆಲವು ನಿಯಮಗಳನ್ನು ಹೇಳಿದರು ಏನೆಂದರೆ ಟೊಮೆಟೊ ಹಣ್ಣಿನ ಮೇಲೆ ಯಾರನ್ನು ದ್ವೇಷಿಸುತ್ತಾರೋ ಅವರ ಹೆಸರುಗಳನ್ನು ಟೊಮೆಟೊ ಹಣ್ಣಿನ ಮೇಲೆ ಬರೆಯುವಂತಹದ್ದು ಮತ್ತೆ ಎಷ್ಟು ಜನರನ್ನು ದ್ವೇಷಿಸುತ್ತಾರೋ ಅಷ್ಟು ಟೊಮಾಟೊ ಹಣ್ಣುಗಳನ್ನು ತರಬೇಕಾದುದು ಕಡ್ಡಾಯವಾಗಿತ್ತು.
ಅದೇ ರೀತಿ ಎಲ್ಲರೂ ಟೊಮೆಟೊಗಳನ್ನು ಬಿದಿರಿನ ಬುಟ್ಟಿಯಲ್ಲಿ ತಂದರು ಕೆಲವರು 4 ಚೀಲ, 3 ಚೀಲ, 2 ಚೀಲ, ಎಷ್ಟು, ಜನಕ್ಕೆ ದ್ವೇಷಿಸುತ್ತಿದ್ದರು ಅಷ್ಟು ಹಣ್ಣುಗಳು ತಂದರು ಮುಖ್ಯಶಿಕ್ಷಕರು ಮುಂದುವರಿಯುತ್ತಾ ಎಲ್ಲರೂ ತಾವು ತಂದ ಬಿದಿರಿನ ಬುಟ್ಟಿ ಎಲ್ಲೇ ಹೋದರೂ ಹೊತ್ತುಕೊಂಡು ಹೋಗಬೇಕು.
ದಿನಗಳು ಕಳದಂತೆ ಹಣ್ಣುಗಳು ಕೊಳೆಯ ತೊಡಗಿದವು ಅವುಗಳನ್ನು ಜೊತೆಗೆ ಎತ್ತಿಕೊಂಡು ಹೋಗುವುದು ಕಷ್ಟವಾಯಿತು ಈ ಬಗ್ಗೆ ಮಕ್ಕಳು ದೂರು ಕೊಡಲು ಆರಂಭಿಸಿದರು ಒಬ್ಬರ ನಂತರ ಒಬ್ಬರು ಸಾಲಾಗಿ ಮುಂದಾದರು.
ಅತಿ ಹೆಚ್ಚು ಟೊಮೆಟೊ ಇಟ್ಟಿರವವರ ಕಥೆಯಂತೂ ಕೇಳುವುದೇ ಬೇಡ ಚಿಂತಾ ಜನಕವಾಗಿದ್ದರು ಒಂದು ವಾರದ ಅವಧಿ ಕಳೆಯಿತು ಒಂದು ವಾರವನ್ನು ಹೇಗೆ ಕಳೆದ್ದಿದ್ದೀರಿ ಎಂದು ಮುಖ್ಯಶಿಕ್ಷಕರು ಕೇಳಿದರು ಮಕ್ಕಳೆಲ್ಲ ದುರ್ವಾಸನೆ ಹಾಗೂ ಕೊಳೆತ ಭಾರದ ಬಗ್ಗೆ ದೂರಿದರು.
ಆಗ ಮುಖ್ಯಶಿಕ್ಷಕರು ಹೇಳಿದರು ಬಿದುರಿನ ಬುಟ್ಟಿಯು ನಿಮ್ಮ ಹೃದಯ ಇದ್ದ ಹಾಗೆ ಅಲ್ಲಿ ಕೊಳೆತದನ್ನು ಇಟ್ಟರೆ ನೀವು ದ್ವೇಷಿಸುತ್ತಿರುವ ಮನುಷ್ಯರಿಗೆ ಸಮ ನಾಯಿ ಕಚ್ಚುತ್ತೆ ಎಂದು ನಾವು ಕೂಡ ನಾಯಿಗೆ ಕಚ್ಚಲು ಆಗುತ್ತದೆಯೇ ಹಾಗೆಯೇ ನೀವು ಒಂದು ವಾರ ಕೊಳೆತ ಹಣ್ಣುಗಳನ್ನು ಹೊತ್ತುಕೊಂಡು ತಿರುಗಾಡಲು ಆಗಲಿಲ್ಲ.
ಜೀವಮಾನ ಪೂರ್ತಿ ಹೇಗೆ ಹೊತ್ತುಕೊಂಡು ತಿರುಗುವುದು ಸಾಧ್ಯವಿದೆಯೇ? ಹಾಗೆಯೇ ನಿಮ್ಮ ದ್ವೇಷಿಸುವವರನ್ನು ಪವಿತ್ರವಾದ ಹೃದಯದಲ್ಲಿ ಇಟ್ಟುಕೊಂಡರೆ ನಿಮ್ಮ ಬದುಕು ಯಾವ ರೀತಿ ಇರುತ್ತದೆ?
ದ್ವೇಷವು ಹೃದಯವನ್ನು ಅನಾರೋಗ್ಯಕ್ಕೆ ದಾರಿ ಮಾಡಿಕೊಡುತ್ತದೆ ಹೃದಯ ಒಂದು ಸುಂದರ ಉದ್ಯಾನವನ ಇದ್ದಂತೆ ಯಾರ ಬಗ್ಗೆ ನಿಮಗೆ ಸಿಟ್ಟು ಕೋಪ ಇದೆಯೋ ಅವರನ್ನು ದಯವಿಟ್ಟು ಕ್ಷಮಿಸಿಬಿಡಿ ಇದರಿಂದ ನಿಮ್ಮ ಹೃದಯದಲ್ಲಿ ಒಳ್ಳೆಯ ವಿಚಾರಗಳು ಸಂಗತಿಗಳು ಬರಲು ಸಾಧ್ಯವಾಗುತ್ತದೆ ಎಂದರು ಹೃದಯದ ಉದ್ಯಾನವನದಲ್ಲಿ ಪ್ರೀತಿ ಶಾಂತಿ ಸಕಾರಾತ್ಮಕವಾದ ವಿಚಾರಗಳನ್ನು ಬೆಳೆಸೋಣ.