ಎಲ್ಲಿ ದೋಷವಿದೆ ತೊರಿಸಿ

ಒಂದು ಊರಿನಲ್ಲಿ ಅದ್ಭುತವಾಗಿ ಮೂರ್ತಿಗಳನ್ನು ತಯಾರಿಸುವ ಪ್ರಖ್ಯಾತ ಕಲೆಗಾರನಿದ್ದನು ಎಂತಹ ಕಲೆಗಾರ ನೆಂದರೆ ಒಬ್ಬ ವ್ಯಕ್ತಿಯನ್ನು ಕೂರಿಸಿ ಒಂದು ಮೂರ್ತಿ ಮಾಡಿದರೆ ಮೂರ್ತಿ ಯಾವುದು ಮನುಷ್ಯ ಯಾರು ಎಂದು ಗುರುತಿಸುವುದು ಕಷ್ಟ ಅಂತಹ ಮಹಾನ್ ಕಲೆಗಾರ.

ಕಲೆಗಾರನ ಹೆಸರು ಊರಲೆಲ್ಲ ಹರಡಿತು ನಂತರ ರಾಜನಿಗೂ ತಿಳಿಯಿತು ಆಗ ರಾಜನು ಕಲೆಗಾರನನ್ನು ಆಮಂತ್ರಿಸಿದ ನನ್ನ ಅರಮನೆಗೆ ಬಂದು ಒಂದು ಮೂರ್ತಿಯನ್ನು ತಯಾರು ಮಾಡಿ ಎಂದಾಗ ಕಲೆಗಾರನು ಹೇಳಿಕಳಿಸಿದ.

 ನಾನು ಅರಮನೆಗ ಬರುವುದಿಲ್ಲ ನನ್ನದು ಒಂದು (ಕಂಡಿಷನ್) ನಿಯಮ ಇದೆ ರಾಜರೇ ಬಂದು ನನ್ನನ್ನು ಗುರುತಿಸಿದರೆ ಮಾತ್ರ ನಾನು ಅರಮನೆಗೆ ಬಂದು ಮೂರ್ತಿಯನ್ನು ತಯಾರಿಸುತ್ತೇನೆ ಎಂದನು ಅದರಂತೆ ರಾಜನು ನಾನು ಒಂದು ವಾರ ಬಿಟ್ಟು ಬರುತ್ತೇನೆ ಎಂದು ಹೇಳಿದನು.

ರಾಜನು ಒಂದು ವಾರದ ನಂತರ ಬಂದನು ಆಗ ಕಲೆಗಾರ ಇವನಂತೆಯೇ 9 ಮೂರ್ತಿಗಳನ್ನು ಮಾಡಿ ಒಂದರ ನಂತರ ಒಂದು ಸಾಲಾಗಿ ಇಟ್ಟಿದ್ದನು ಯಾವುದರಲ್ಲಿಯೂ ಕೂಡ ದೋಷವನ್ನೂ ಹುಡುಕಲು ಸಾಧ್ಯವಿಲ್ಲ ಜೀವ ತುಂಬಿರುವಂತಹ ಮೂರ್ತಿಗಳನ್ನು ಮಾಡಿ ಇಟ್ಟಿದ್ದನು ಕಲೆಗಾರನ್ನು ಕೂಡ ಮೂರ್ತಿಯಾಗಿ ಒಂದು ಕಡೆ ಕುಳಿತು ಬಿಟ್ಟನ್ನು.

 ರಾಜ ಮನೆಗೆ ಬಂದು ನೋಡಿದರೆ ಇವನಂತೆಯೇ 9 ಮೂರ್ತಿಗಳು ಇದೆ ಇದನ್ನು ನೋಡಿದ ರಾಜನು ಕಕ್ಕಾಬಿಕ್ಕಿಯಾಗುತ್ತಾನೆ ನಂತರ ರಾಜನು ಎರಡು ನಿಮಿಷ ಯೋಚಿಸಿ ಒಂದು ಉಪಾಯವನ್ನು ಹುಡುಕುತ್ತಾನೆ ಇಂತಹ ಒಳ್ಳೆಯ ಕಲೆಗಾರನನ್ನು ನಾನು ಎಲ್ಲೂ ನೋಡಲಿಲ್ಲ.

 ಇವನು ವಿಶ್ವದ ಕಲೆಗಾರನೇ ಎಂದು ಒಂದು ಸಾರಿ ಹೇಳಿದ ಆಗ ಕಲೆಗಾರ ನಿಧಾನವಾಗಿ ಎದೆ ಉಬ್ಬಿಸಿ ಮುಗುಳ್ನಕ್ಕನು ಆಗಲೇ ರಾಜ ಕಂಡುಹಿಡಿದು ಬಿಟ್ಟ ನಂತರ ಸ್ವಲ್ಪ ಮುಂದೆ ಹೋಗಿ ಒಂದು ಮೂರ್ತಿಯನ್ನು ನೋಡಿ ಆ ಮೂರ್ತಿಗೆ ಹೇಳಿದನು.

 ಈ ಮೂರ್ತಿಯಂತೂ ಚೆನ್ನಾಗಿ ಕೆತ್ತಿಲ್ಲ, ಸರಿಯಾಗಿ ಮೂಡಿ ಬಂದಿಲ್ಲ ಇವನಿಗೆ ಮೂರ್ತಿಯೇ ಕೆತ್ತಲು ಬರುವುದಿಲ್ಲ ಇವನ್ಯಾವನೋ ಎಂದು ತೆಗಳಲಿಕ್ಕೆ ಶುರು ಮಾಡಿದನು ತೆಗಳುತ್ತಿದ್ದಂತೆಯೇ ಕಲೆಗಾರನಿಗೆ ಕೋಪ ಬಂದು ಸಿಟ್ಟಿನಿಂದ ಎದ್ದುನಿಂತನು ಎಲ್ಲಿ ದೋಷವಿದೆ ತೊರಿಸಿ ಎಂದನು.

 ಆಗ ರಾಜನು ವಿನಮ್ರತೆಯಿಂದ ಹೇಳಿದನು ಯಾವುದೇ ದೋಷವಿಲ್ಲ ಆದರೆ ನಿನ್ನಲ್ಲೇ ದೋಷವಿದೆ ಏಕೆಂದರೆ ನಾನು ಹೊಗಳಿದಾಗ ನೀನೂ ಮುಗುಳ್ ನಗುತ್ತಿದೆ ಆಗಲೇ ಗುರುತಿಸದೆ ತೆಗಳಿಕೆಗೆ ಎದ್ದು ನಿಂತೆ ಇದೆ ನಿನ್ನ ದೋಷ ಎಂದು ಹೇಳಿ ಅರಮನೆಗೆ ಕರೆದುಕೊಂಡು ಹೋದನು. ನಾವು ಅಷ್ಟೇ ಹೊಗಳಿಕೆ ತೆಗಳಿಕೆ ಎರಡನ್ನು ಸಮಾವಾಗಿ ಸ್ವೀಕರಿಸೋಣ.

ಬಾಗಿಲಿಗೆ ಬೀಗವೇ ಹಾಕಿರಲಿಲ್ಲ

ಮ್ಯಾಜಿಕ್ ಮ್ಯಾನ್ ಎಂಬುವನು ಒಬ್ಬ ಅಸಮಾನ್ಯ ಚಾಣಾಕ್ಷ ಇವನ ಚಾಣಾಕ್ಷತೆ ಯಾವುದೇ ಬೀಗ ಹಾಕಿದ್ದರೂ ಬೀಗದ ಕೀ ಇಲ್ಲದೆಯೇ ಸುಲಭವಾಗಿ ತೆರವು ಗೊಳಿಸುತ್ತಿದ್ದನು ಎಂತಹ ಕಠಿಣ ಬೀಗ ಇದ್ದರು ನಿರಾಯಾಸವಾಗಿ ತೆಗೆದು ಬಿಡುತ್ತಿದ್ದನು.

 ಇವನದು ಇದೇ ಪ್ರದರ್ಶನ ಇದೆ ಚಮತ್ಕಾರ ಇವನು ಈ ರೀತಿ ಮಾಡಿ ಹೊಟ್ಟೆಪಾಡಿಗಾಗಿ ದುಡಿಯುತ್ತಿದ್ದನು ಇವನದು ಎರಡು (ಕಂಡಿಷನ್) ನಿಯಮ ಇತ್ತು ಒಂದು ಅವನದೇ ಆದ ಒಂದು ಕೋಟು ಧರಿಸುತ್ತಿದ್ದನು.

 ಮತ್ತೆ ಎರಡನೆಯದಾಗಿ ಅವನು ಬೀಗ ತೆರವು ಮಾಡುತ್ತಿರಬೇಕಾದರೆ ಯಾರು ಮುಂದೆ ಇರಬಾರದು ಕದ್ದುಮುಚ್ಚಿ ನೋಡುವ ಹಾಗೂ ಇಲ್ಲ ಒಂದು ಸಾರಿ ಒಬ್ಬ ಚತುರ  ರಾಜ ಯಾವುದೇ ಕಾರಣಕ್ಕೂ ತೆರೆಯಲಾಗದ ಒಂದು ಬೀಗವನ್ನು ತಯಾರಿಸಿದೆ ಎಂದು ಸುದ್ದಿ ಹಬ್ಬಿಸಿ ಈ ಬೀಗವನ್ನು ಯಾರು ಬೇಕಾದರೂ ತೆರೆಯಬಹುದು ಎಂದು ಪ್ರಕಟಣೆ ಹೊರಡಿಸಿದೆ.

 ಯಾರೇ ಬಂದರೂ ಈ ಬೀಗ ತೆರವು ಮಾಡುತ್ತಿರಲಿಲ್ಲ ವಿಶೇಷ ತಜ್ಞರು ಕೂಡ ಬೀಗವನ್ನು ತೆರವು ಮಾಡಲು ಸಾಧ್ಯವಾಗಲಿಲ್ಲ ಬೇರೆ ಬೇರೆ ಕಡೆಯಿಂದ ಎಲ್ಲರೂ ಬಂದರು ಆದರೂ ಯಾರೂ ಕೂಡ ಬೀಗವನು ತೆರೆಯಲೇ ಇಲ್ಲ ಆಗ ಈ ಮ್ಯಾಜಿಕ್ ಮ್ಯಾನ್ ಹೋಗಿ ನಾನು ತೆರವು ಗೊಳಿಸುತ್ತೇನೆ ಎಂದು ಹೇಳಿದನು.

 ಆಗ ಇವನಿಗೆ ಕೋಣೆಯ ಒಳಗೆ ಹಾಕಿ ಭದ್ರಪಡಿಸಿ ಬೀಗ ಹಾಕಲಾಯಿತು ಇವನಿಗೆ ಒಂದು ಗಂಟೆ ಸಮಯ ಗೊತ್ತು ಮಾಡಿದರು ಇವನು ಕೆಲವು ತನ್ನ ಕೋಟಿನಲ್ಲಿ ಆಯುಧಗಳು ಇಟ್ಟುಕೊಂಡಿದ್ದನು ಅದೆಲ್ಲವೂ ಅವನು ಉಪಯೋಗಿಸಿದನು ಆದರೂ ಬೀಗ ತೆರೆಯಲೇ ಇಲ್ಲ ಎಲ್ಲಾ ರೀತಿಯ ಇವನ ಪ್ರಯತ್ನಗಳು ವಿಫಲವಾದವು ಇದರಿಂದ ನಿರಾಶನಾದನು.

 ಕೊನೆಗೆ ನಾನು ಸೋತೆ ಎಂದು ಮ್ಯಾಜಿಕ್ ಮ್ಯಾನ್ ಒಪ್ಪಿಕೊಂಡನು ರಾಜನು ಬಂದು ಬಾಗಿಲು ತಳ್ಳಿದ ಅದು ಬಾಗಿಲು ತೆರೆದೇ ಇತ್ತು ಮ್ಯಾಜಿಕ್ ಮ್ಯಾನ್ ಗೆ ಆಶ್ಚರ್ಯವಾಯಿತು ಏನೆಂದರೆ ರಾಜನ್ನು ಬಾಗಿಲಿಗೆ ಬೀಗ ಹಾಕಿರಲೇ ಇಲ್ಲ ಕೇವಲ ಗಟ್ಟಿಯಾಗಿ ಮುಚ್ಚಿದನು ಅಷ್ಟೆ ರಾಜನಾದವನು ಬೀಗ ತೆರವು ಗೊಳಿಸುವವನ ಚಮತ್ಕಾರವನ್ನು ಸೋಲಿಸಲೇಬೇಕೆಂದು ಈ ಬೀಗವನ್ನು ಹಾಕಿರಲಿಲ್ಲ.

  ಮ್ಯಾಜಿಕ್ ಮ್ಯಾನ್ ಆದವನು ಬೀಗವನ್ನು ತೆರೆಯುವ ಪ್ರಯತ್ನವನ್ನು ಮಾಡಿದ ಆದರೆ ಬಾಗಿಲಿಗೆ ಬೀಗ ಹಾಕಿದೆಯೇ ಇಲ್ಲವೇ ಎಂದು ಪರೀಕ್ಷಿಸಲಿಲ್ಲ ಯಾವುದೇ ಸಮಸ್ಯೆ ಆಗಲಿ ಬಹಳಷ್ಟು ಸಾರಿ ಸೋಲಲು ಅರ್ಥಮಾಡಿಕೊಳ್ಳದೆ ಇರುವುದೇ ಮುಖ್ಯ ಕಾರಣವಾಗಿದೆ. ಮೊದಲು ನಾವು ಯಾವುದೇ ಸಮಸ್ಯೆ ಆಗಲಿ ಗಮನಿಸಬೇಕು (ಅಬ್ಸರ್ವೆಷನ್) ಯಾವುದೇ ಸಮಸ್ಯೆ ಆಗಲಿ  ಅರ್ಥ ಮಾಡಿಕೊಂಡು ನಂತರ ಪರಿಹಾರಕ್ಕೆ ಮುಂದಾಗೋಣ.

   ನಾಯಿ ಎರಡು ಕಾಲಿನಿಂದ ನಡೆಯುತ್ತಿದೆ

ಒಂದು ಹಳ್ಳಿಯಲ್ಲಿ ಒಂದು ನಾಯಿಗೆ ತುಂಬಾ ಕಡಿಮೆ ಆಹಾರ ಸಿಗುತ್ತಿರುತ್ತದೆ ಆಗ ನಾಯಿ ಯೋಚನೆಮಾಡಿ ಊರಿಂದ ಆಚೆ ಬಂದು ಎರಡೂ ಕಾಲಿನಿಂದ ನಡೆಯಲು ಆರಂಭಿಸುತ್ತದೆ ಇದನ್ನು ನೋಡಿದ ಎಲ್ಲರಿಗೂ ಆಶ್ಚರ್ಯ ಆಗತ್ತದೆ.

 ಹಳ್ಳಿಯವರು ಹುಚ್ಚನಾಯಿ ಎಂದು ಹೇಳುತ್ತಾರೆ ಆಹಾರ ಕಡಿಮೆ ಸಿಗುತ್ತಿರುವುದರಿಂದ ಹಲವಾರು ದಿನ ನಾಯಿ ಎರಡು ಕಾಲಿನಿಂದಲೇ ನಡೆಯುತ್ತಿರುತ್ತದೆ ಕೆಲವು ದಿನಗಳ ನಂತರ ನೋಡಿದಾಗ ನಾಯಿಯು ಮೊಲವನ್ನು ಹಿಡಿದು ತರುತ್ತದೆ ಆಗ ಜನರಿಗೆ ತಿಳಿಯುತ್ತದೆ.

 ನಾಯಿ ಎರಡು ಕಾಲಿನಿಂದ ನಡೆಯುತ್ತಿದ್ದುದು ಏಕೆಂದರೆ ಮೊಲವನ್ನು ಹಿಡಿಯಲಿಕ್ಕೆ ಎರಡು ಕಾಲಿನಿಂದ ನಡೆಯುವ ಅಭ್ಯಾಸ ಮಾಡಿದೆ ಆಗ ಜನರಿಗೆ ಅರ್ಥವಾಗುತ್ತದೆ ಸಾಧನೆ ಮಾಡುವವರಿಗೆ ಬಹಳಷ್ಟು ಜನರು ಹುಚ್ಚರಂತೆ ಭಾವಿಸಿರುತ್ತಾರೆ.

 ಸಾಧನೆ ಮಾಡಿದ ನಂತರವೇ ಅವರಿಗೆ ಗೌರವ ಮನ್ನಣೆ ಸಿಗುತ್ತದೆ ಅವಮಾನ ಆದ ನಂತರವೇ ಸನ್ಮಾನ ಸಿಗುತ್ತದೆ ಅದಕ್ಕೆ ತಾಳ್ಮೆ ಇರಲೇಬೇಕು ನಾವು ಟ್ರಾಫಿಕ್ ಸಿಗ್ನಲ್ ನಲ್ಲಿ ಸಿಗ್ನಲ್ ಗಳು ನೋಡಿದಾಗ  ನಮ್ಮ ಮನಸ್ಥಿತಿ ಹೇಗಿರುತ್ತದೆ ಎಂದು ಅದರಲ್ಲೇ ನಮ್ಮ ತಾಳ್ಮೆಯನ್ನು ಪರೀಕ್ಷಿಸಿಕೊಳ್ಳಬಹುದು.

 ನಾವು ಹೋಗುತ್ತಿದ್ದಾಗ ಪ್ರತೀ ಬಾರಿಯೂ (ರೆಡ್ ಸಿಗ್ನಲ್) ಕೆಂಪು ದೀಪ ಉರಿಯುತ್ತದೆ  ಅದಕ್ಕೆ ನಮಗೆ ತಾಳ್ಮೆ ಇಲ್ಲ ಇನ್ನು ನಾವು ಸಾಧನೆ ಹೇಗೆ ಮಾಡುತ್ತೇವೆ? ನನ್ನ ಸಾಧನೆಗೆ ತಾಳ್ಮೆ ಬೆಳೆಸಿಕೊಳ್ಳೋಣ.

ಏನೇನೋ ಬದಲಾಗಿ ಬಿಟ್ಟಿರುತ್ತದೆ

ಒಂದು ಕಾಲದಲ್ಲಿ ಒಂದು ಹಳ್ಳಿಯಲ್ಲಿ ಇಬ್ಬರು ಅಣ್ಣ ತಮ್ಮಂದಿರು ಇದ್ದರೂ ಅವರು ಕಾಡಿನಿಂದ ಹುಲ್ಲು ತರಲು ಹೋದರು ಆ ಕಾಡಿನಲ್ಲಿ ಇವರು ಹೋಗುತ್ತಿದ್ದಂತೆ ಕೆಲವು ಹೂವುಗಳು ಚೆನ್ನಾಗಿ ಅರಳಿದವು ಹೂವುಗಳಿಂದ ಸುವಾಸನೆಯಿಂದ ಕೂಡಿತ್ತು ರಂಗು ರಂಗಿನ ಚಿಟ್ಟೆಗಳು ಹಾರಾಡುತ್ತಿದ್ದವು ಅಲ್ಲಿಯ ಸೌಂದರ್ಯಕ್ಕೆ ಅಣ್ಣ ತಮ್ಮಂದಿರು ಬೆರಗಾದರು.

ಮುಂದೆ ಹೋಗುತ್ತಿದ್ದಂತೆ ಅವರಿಗೆ ಒಂದು ಸುರಂಗದಂತೆ ಕಾಣಿಸಿತು ಸುರಂಗವನ್ನು ದಾಟಿಕೊಂಡು ಹೋದಾಗ ಅಲ್ಲಿ ಯಕ್ಷಿಣಿಯರು ಕುಳಿತು ಚದುರಂಗದ ಆಟವನ್ನು ಆಡುತ್ತಿದ್ದರು ಈ ಅಣ್ಣ ತಮ್ಮಂದಿರು ಆಟ ಆಡುತ್ತಿದ್ದುದನ್ನು ನೋಡುತ್ತಿದ್ದರು.

 ಯಕ್ಷಿಣಿಯರಿಗೆ ತಿಳಿಯದಂತೆ ನೋಡುತ್ತಿದ್ದರು ಎಷ್ಟು ಸಮಯ ಕಳೆಯಿತು ಎಂದು ಅಣ್ಣ ತಮ್ಮಂದಿರಿಗೆ ಗೊತ್ತಾಗಲಿಲ್ಲ ಯಕ್ಷಿಣಿಯರು ಆಟ ಮುಗಿಸಿ ತಲೆ ಎತ್ತಿ ನೋಡಿದಾಗ ಈ ಎರಡು ಹುಡುಗರು ಕಂಡರು ಎಷ್ಟು ಸಮಯದಿಂದ ನೀವು ಕುಳಿತಿದ್ದೀರಿ ಎಂದು ಕೇಳಿದಾಗ ನಿಮ್ಮ ಎರಡೂ ಆಟ ನೋಡಿದ್ದೇವೆ ಎಂದು ಹೇಳಿದರು.

 ಆಗ ಯಕ್ಷಣಿಯರು ಹೇಳಿದರು ಒಂದು ಆಟ ಐವತ್ತು ವರ್ಷಕ್ಕೆ ಸಮ ಎಂದರು ಆ ಯಕ್ಷಿಣಿಯರು ನೀವು ಈಗ ಇಲ್ಲೇ ಇದ್ದು ಬಿಡಿ ಎಂದು ಹೇಳಿದರು ಆಗ ಇಬ್ಬರೂ ಅಣ್ಣತಮ್ಮಂದಿರು ಹೇಳಿದರು ಇಲ್ಲ ಇಲ್ಲ ನಾವು ಹಳ್ಳಿಗೆ ಹೋಗಲೇಬೇಕು ಎಂದು ಹೇಳಿದರು.

 ಅದರಲ್ಲಿ ಒಂದು ಯಕ್ಷಿಣಿ ದೇವತೆ ಹೇಳಿತು ನಿಮಗೇನಾದರೂ ಹಳ್ಳಿಯಲ್ಲಿ ಸೇರಿಸದಿದ್ದರೆ ನೀವು ಮತ್ತೆ ಇಲ್ಲಿಗೆ ಬನ್ನಿ ನಮ್ಮನ್ನು ಕರಿಯಿರಿ ನಾವು ನಿಮ್ಮನ್ನು ಕರೆದುಕೊಳ್ಳುತ್ತೇವೆ ಎಂದು ಹೇಳಿದರು ಇವರು ಅಣ್ಣ ತಮ್ಮಂದಿರು ಹಳ್ಳಿಗೆ ಬಂದರು ಹಳ್ಳಿ ನೋಡಿದರೆ ಭವ್ಯವಾದ ಕಟ್ಟಡಗಳು ಅದು ಹಳ್ಳಿಯ ರೂಪವೇ ಬದಲಾಗಿ ನಗರವಾಗಿದೆ.

 ಯಾವ ಮನೆ ಎಂದು ಗುರುತಿಸಲು ಸಾಧ್ಯವಾಗುತ್ತಿಲ್ಲ ಅಷ್ಟು ಅಭಿವೃದ್ಧಿಯಾಗಿದೆ ಆಗ ಅಲ್ಲಿ ಒಬ್ಬ ಹಿರಿಯ ವ್ಯಕ್ತಿ ಇದ್ದರು ಅವರಿಗೆ ಕೇಳಿದರು ನಮ್ಮ ರಾಜಣ್ಣ ನವರ ಮನೆ ಯಾವುದು ಎಂದಾಗ ಹಿರಿಯರು  ಯಾವ ರಾಜಣ್ಣ ಎಂದು ಕೇಳಿದಾಗ ಹಾಲು ಮಾರುತ್ತಿದ್ದರು ಎಂದು ಅಣ್ಣ ತಮ್ಮ ಹೇಳುತ್ತಾರೆ.

 ಆಗ ಹಿರಿಯರು ರಾಜಣ್ಣ ಸತ್ತು ಹೋಗಿ ಹಲವಾರು ವರ್ಷಗಳಾಗಿದೆ ಎಂದರು ಇವರು ಅಣ್ಣ ತಮ್ಮಂದಿರು ಯಾರಿಗೆ ಏನು ಹೇಳಿದರೂ ಇವರ ಗುರುತು ಸಿಗುತ್ತಿಲ್ಲ ಆದರೆ ಹಳ್ಳಿಯವರು ಹೇಳುತ್ತಿರುವ ಪ್ರಕಾರ ನೂರು ವರ್ಷ ಕಳೆದಿದೆ ಯಾರೂ ಗುರುತಿಸದ ಕಾರಣಕ್ಕೆ ಮತ್ತೆ ಅವರು ಕಾಡಿಗೆ ಹೋದರು.

 ಇದು ಒಂದು ಕಥೆ ಆದರೆ ಕೆಲವರು ಹೆಂಡತಿ ಮಕ್ಕಳನ್ನು ಬಿಟ್ಟು ದುಡಿಯುವುದು ಕ್ಕೋಸ್ಕರ ಬೇರೆ ದೇಶಕ್ಕೆ ಹೋಗುತ್ತಾರೆ ಬರುವವರೆಗೆ ಏನೇನೋ ಬದಲಾಗಿ ಬಿಟ್ಟಿರುತ್ತದೆ ಯಾವುದಾದರೂ ಚಟಕ್ಕೆ ಬಲಿಯಾದರು ಅಷ್ಟೆ ಮತ್ತೆ ಆ ಚಟದಿಂದ ಬರಲು ಭಯಂಕರ ಕಷ್ಟವಾಗುತ್ತದೆ.

 ಮತ್ತೆ ಕೆಲವರ ಅಭ್ಯಾಸ ಸಿನೆಮಾ ನೋಡುವುದು, ಟಿವಿ ನೋಡುವುದು, ಕೆಲವು ಆಟಗಳನ್ನು ಆಡುವುದು ಆದರೆ ಇದರಲ್ಲಿ ಎಷ್ಟು ಸಮಯ ವ್ಯರ್ಥವಾಗುತ್ತಿದೆ ಎಂದು ತಿಳಿಯದು ಸಮಯ ಯಾರಿಗೂ ಕಾಯುವುದಿಲ್ಲ ಇರುವ ಸಮಯವನ್ನು ಸದುಪಯೋಗಿ ಪಡಿಸಿಕೊಳ್ಳೋಣ.

  ಹಸಿರು ಕನ್ನಡಕ

ಒಬ್ಬ ತುಂಬ ದೊಡ್ಡ ಶ್ರೀಮಂತ ಇರುತ್ತಾನೆ ಅತಿಹೆಚ್ಚು ಸಂಪಾದನೆ ಮಾಡಿ ಐಶ್ವರ್ಯವಂತನಾಗುತ್ತಾನೆ ಹಾಗೆ ಅವನಿಗೆ ಸ್ವಾರ್ಥ, ಅಹಂಕಾರವು ಹೆಚ್ಚಾಗಿರುತ್ತದೆ ದುಡ್ಡು ಇದ್ದರೆ ಏನು ಬೇಕಾದರೂ ಮಾಡಬಹುದು. ಎನ್ನುವ  ಮನೋಭಾವನೆ ತುಂಬಿಕೊಂಡಿರುತ್ತದೆ.

 ಕೆಲವು ದಿನಗಳ ನಂತರ ಶ್ರೀಮಂತನಿಗೆ ಕಣ್ಣಿನಲ್ಲಿ ಏನೋ ದೋಷವಿರುತ್ತದೆ ಆ ದೋಷವನ್ನು ಸರಿಪಡಿಸಲು ಬೇಕಾದಷ್ಟು ವೈದ್ಯರನ್ನು ಕಾಣುತ್ತಾನೆ ಆದರೂ ಅದು ಸರಿ ಪಡಿಸಲು ಸಾಧ್ಯವಾಗುವುದಿಲ್ಲ.

 ದೇಶ ವಿದೇಶಗಳಿಗೆ ಹೋಗಿ ಬರುತ್ತಾನೆ ಆದರೆ ಕಣ್ಣು ಸರಿಯಾಗುವುದಿಲ್ಲ ಒಬ್ಬ ಹಿರಿಯ ವೈದ್ಯರು ಕೂಲಂಕುಷವಾಗಿ ಪರೀಕ್ಷಿಸಿ ನಂತರ ಹೇಳಿದರು ನಿಮ್ಮ ಕಣ್ಣಿಗೆ ದೋಷವಾಗಿದೆ.

 ನೀವು ಬರೀ ಹಸಿರು ಮಾತ್ರ ನೋಡಬೇಕು ಆಗ ನಿಮ್ಮ ಕಾಯಿಲೆಯು ಕಡಿಮೆಯಾಗುತ್ತದೆ ಎಂದು ಸಲಹೆ ನೀಡುತ್ತಾರೆ ಇದು ಬಿಟ್ಟರೆ ಬೇರೆ ದಾರಿಯೇ ಇರುವುದಿಲ್ಲ ಹಾಗಾಗಿ ಆ ಶ್ರೀಮಂತನು ತನ್ನ ಮನೆಯಲ್ಲಿ ಮನೆಗೆ ಗೋಡೆಗಳಿಗೆ ಆಚೆ ಎಲ್ಲವೂ ಹಸಿರು ಬಣ್ಣವನ್ನು ಬಳಿಯುತ್ತಾನೆ.

 ನಂತರ ಇವನು ಉರಿಗೂ ಹೋಗುವುದರಿಂದ ಇವರ ಸಂಬಂಧಿಕರ ಮನೆಗೆ ಹೋಗುವುದರಿಂದ ಎಲ್ಲಾ ಕಡೆಯೂ ಹಸಿರು ಬಣ್ಣವೇ ತುಂಬಿರುತ್ತದೆ ಒಬ್ಬರು ಅದೇ ಊರಿಗೆ ಸಂತರು ಬರುತ್ತಾರೆ ಎಲ್ಲಾ ಕಡೆ ಹಸಿರು ಇರುವುದನ್ನು ನೋಡಿ ಆಶ್ಚರ್ಯವಾಗುತ್ತದೆ.

ಹಸಿರು ಇರುವುದಕ್ಕೆ ಕಾರಣವೇನು ಎಂದು ಕೇಳಿದಾಗ ಈ ಶ್ರೀಮಂತನು ಈ ರೀತಿ ಮಾಡುತ್ತಿದ್ದಾನೆ ಎಂಬುದು ತಿಳಿಯುತ್ತದೆ ನಂತರ ಹೋಗಿ ಆ ಶ್ರೀಮಂತನಿಗೆ ಮಾತಾನಾಡುತ್ತಾರೆ ಊರೆಲ್ಲಾ ಹಸಿರು ಬಣ್ಣದಿಂದ ತುಂಬಿದೆ ಇದಕ್ಕೆ ಕಾರಣವೇನು ಎಂದಾಗ ತನ್ನ ವಿಸ್ತಾರವಾದ ಕಥೆಯನ್ನು ಹೇಳುತ್ತಾನೆ. 

ಸಂತರು  ಇಷ್ಟು ಮಾಡುವ ಬದಲು ನೀವು ಹಸಿರು ಕನ್ನಡಕವನ್ನು ಧರಿಸಿ ಓಡಾಡಿದ್ದರೆ ಸಾಕಾಗಿತ್ತು ಎಂದು ಹೇಳುತ್ತಾರೆ ಆಗ ಶ್ರೀಮಂತನು ಹಸಿರು ಕನ್ನಡಕವನ್ನು ಹಾಕುತ್ತಾನೆ ಇಲ್ಲಿ ನಾವು ಎರಡನ್ನು ಅರ್ಥಮಾಡಿಕೊಳ್ಳಬಹುದು ಕೆಲವು ಸಾರಿ ಸಮಸ್ಯೆ ತುಂಬಾ ದೊಡ್ಡದಾಗಿರುತ್ತದೆ.

ಅದರ ಪರಿಹಾರ ತುಂಬ ಚಿಕ್ಕದಾಗಿರುತ್ತದೆ ಎಷ್ಟೇ ದೊಡ್ಡ ಕಾಯಿಲೆ ಬಂದರೂ ಅದಕ್ಕೆ ಮಾತ್ರೆಗಳು ಮಾತ್ರ ಚಿಕ್ಕದಾಗಿ ಇರುತ್ತವೆ.

Leave a Comment