ಅರ್ಧ ಮೀಸೆ ಬೋಳಿಸುತ್ತಾನೆ

ಹಳ್ಳಿಯಿಂದ ಕೆಲವು ರೈತರು ಊರಿನ ಸಂತೆಗೆ ಹೋಗಿ ತಮಗೆ ಬೇಕಾದ ಹಲವಾರು ವಸ್ತುಗಳನ್ನು ಖರೀದಿಸಿಕೊಂಡು ತರುತ್ತಿರುತ್ತಾರೆ ಕಾಡಿನ ಮಾರ್ಗವಾಗಿ ಬರುತ್ತಿದ್ದಂತೆಯೇ ಇಬ್ಬರು ದರೋಡೆಕೋರರು ಅಡ್ಡ ಹಾಕುತ್ತಾರೆ ಏನೇನು ಇದೆಯೋ ಅದನ್ನು ಕೊಡಿ ಇಲ್ಲದಿದ್ದರೆ ಹೊಡೆಯುತ್ತೇವೆ ಬಡೆಯುತ್ತೇವೆ  ಕೋಪ ಬಂದರೆ ಪ್ರಾಣವೇ ತೆಗೆಯುತ್ತೇವೆ ಎಂದು ಹೆದರಿಸುತ್ತಾರೆ ಇಬ್ಬರು ಬಲಿಷ್ಠ ದರೋಡೆಕೋರರ ಕೈಯಲ್ಲಿ ಚಾಕು, ಚೂರಿ, ಚೈನು, ದೊಣ್ಣೆ ಎಲ್ಲವೂ ಇರುತ್ತದೆ.

ರೈತರು ಭಯಭೀತರಾಗುತ್ತಾರೆ ಇಬ್ಬರು ದರೋಡೆಕೋರರು ಆ ಗುಂಪನ್ನು ಒಂದು ಕಡೆ ಕೂರಿಸಿ ಒಬ್ಬೊಬ್ಬರಾಗಿ ಏನೇನು ಇದೆಯೋ ಅದನ್ನು ಪರಿಶೀಲಿಸುತ್ತಾರೆ. ಮನೆಗೆ ಬೇಕಾದ ಬೆಳೆಯಲಿಕ್ಕೆ ಬೇಕಾದ ವಸ್ತುಗಳೇ ಹೆಚ್ಚಾಗಿ ಇರುತ್ತವೆ ಇದನ್ನು ನೋಡಿದ ಒಬ್ಬ ದರೋಡೆಕೋರ ಒಬ್ಬ ರೈತನನ್ನು ಕರೆಯುತ್ತಾನೆ ಆ ರೈತ ಸ್ವಲ್ಪ ತಲೆಯ ಕೂದಲು ಉದ್ದವಾಗಿ ಬಿಟ್ಟಿರುತ್ತಾನೆ. ಅದಕ್ಕೆ ಅವನ ಕೂದಲನ್ನು ಅರ್ಧಕ್ಕೆ ಕತ್ತರಿಸುತ್ತಾನೆ ಇದನ್ನು ನೋಡಿ ಇನ್ನೊಬ್ಬ ದರೋಡೆಕೋರನು ನಗುತ್ತಾನೆ.

ಇನ್ನೊಬ್ಬ ದರೋಡೆಕೋರ ಬಂದು ಮತ್ತೊಬ್ಬ ರೈತನನ್ನು ಕರೆದು ಅರ್ಧ ಮೀಸೆ ಬೋಳಿಸುತ್ತಾನೆ ಮತ್ತೆ ಇಬ್ಬರು ದರೋಡೆಕೋರರು ನಗುತ್ತಾರೆ. ನಂತರ ಇನ್ನೊಬ್ಬ ರೈತನನ್ನು ಕರೆದು ಅರ್ಧತಲೆ ಬೋಳಿಸುತ್ತಾನೆ   ಮತ್ತೆ ನಗುತ್ತಾರೆ ಇಬ್ಬರೂ ದರೋಡೆಕರರು ಒಬ್ಬೊಬ್ಬ ರೈತನನ್ನು ಕರೆದು ವಿಚಿತ್ರವಾಗಿ ಏನಾದರೂ ಮಾಡಿ ನಗುತ್ತಿರುತ್ತಾರೆ.

  ಮತ್ತೆ ದರುಡೆಕೋರರು ಕುಣಿಯುತ್ತಿರುತ್ತಾರೆ ನಂತರ ರೈತರು ಕುಣಿಯಬೇಕು ಎಂದು ಹೆದರಿಸುತ್ತಾರೆ ಆಗ ರೈತರು ಕೂಡ ಕುಣಿಯುತ್ತಾರೆ ಹಾಡುತ್ತಿರುತ್ತಾರೆ ಅಷ್ಟರಲ್ಲಿ ಬುದ್ಧಿವಂತ ಒಬ್ಬ ರೈತನು ಹಾಡಿನ ಮೂಲಕ ದರೋಡೆಕರರು ಮರೆತು ಕುಣಿಯುತ್ತಿದ್ದಾರೆ ಸಮಯ ಸಂದರ್ಭ ನೋಡಿ ಕೈಕಾಲು ಕಟ್ಟಿ ಬಿಡೋಣ ಎಂದು ಹೇಳುತ್ತಾನೆ.

 ಆಗ ಎಲ್ಲ ರೈತರು ಅರ್ಥಮಾಡಿಕೊಂಡು ಇವರು ಕೂಡ ದರೋಡೆಕೋರರ ಜೊತೆಗೆ ಕುಣಿಯುತ್ತಿರುತ್ತಾರೆ ಹಾಡುತ್ತಿರುತ್ತಾರೆ ಸಮಯ ಸಿಕ್ಕಿದ ತಕ್ಷಣ ಇಬ್ಬರಿಗೂ ಒಂದೇ ಸಾರಿ ಹಿಡಿದು ಕೈಕಾಲು ಕಟ್ಟಿ ಬಿಡುತ್ತಾರೆ

 ನಂತರ ಎಲ್ಲ ರೈತರು ದರೋಡೆಕೋರರನ್ನು ಮರಕೆ ಕಟ್ಟಿ ಹಾಕುತ್ತಾರೆ ನಂತರ ರಾಜನಿಗೆ ಸುದ್ದಿ ಮುಟ್ಟಿಸುತ್ತಾರೆ ಅಷ್ಟರಲ್ಲಿ ಸೈನಿಕರು ಬಂದು ದರೋಡೆಕೋರರನ್ನು ಕರೆದುಕೊಂಡು ಹೋಗುತ್ತಾರೆ ರೈತರು ನೆಮ್ಮದಿಯಾಗಿ ತಮ್ಮ ಹಳ್ಳಿಗೆ ತಲುಪುತ್ತಾರೆ ಅಪಾಯದಲ್ಲಿ ಸಿಲುಕಿದಾಗ ಬುದ್ಧಿವಂತಿಕೆಯಿಂದ ಪಾರಾಗೋಣ.

ನೀವು ತಾಳ್ಮೆಯ ಸ್ವಭಾವದವರು

ಒಂದು ಕಾರ್ಯಕ್ರಮವನ್ನು ಮುಗಿಸಿ ಸುಸ್ತಾಗಿ ಹೋಟೆಲಿಗೆ ರೂಮ್ ಬುಕ್ ಮಾಡಲು ಬಂದೆವು ಅದಕ್ಕೆ ಹೋಟೆಲ್ ವ್ಯವಸ್ಥಾಪಕರು ಐದು ನಿಮಿಷ ನೀವು ಆಸೀನರಾಗಿ ರೂಮ್ ಇದ್ದರೆ ನಾನು ಹೇಳುತ್ತೇನೆ ಎಂದರು ಅಷ್ಟರಲ್ಲಿ ಒಬ್ಬ ಗಲಾಟೆ ಮನುಷ್ಯ ಬಂದು ನಾನು ರೂಮ್ ಬುಕ್ ಮಾಡಿದ್ದೆ ಎಂದು   ವ್ಯವಸ್ಥಾಪಕರನ್ನು ಹೇಳಿದನು.

 ವ್ಯವಸ್ಥಾಪಕರು ನಿಮ್ಮ ರೂಮ್ ನಂಬರ್ 10 ಸಿಂಗಲ್ ರೂಮ್ ಬುಕ್ ಆಗಿದೆ ಕೀ ತೆಗೆದುಕೊಳ್ಳಿ ಎಂದರು ಗಲಾಟೆ ಮನುಷ್ಯ ಕೋಪಗೊಂಡು ಹೇಳಿದನು ನಾನು ಡಬಲ್ ರೂಮ್ ಬುಕ್ ಮಾಡಿದ್ದೇನೆ ಸಿಂಗಲ್ ಅಲ್ಲ ಎಂದು ವಾದ ಮಾಡಿದನು ವ್ಯವಸ್ಥಾಪಕರು ಪುಸ್ತಕವನ್ನು ನೋಡಿದರು.

 ಪುಸ್ತಕದಲ್ಲಿ ಸರಿಯಾಗಿ ಬರೆದಿತ್ತು ಸಿಂಗಲ್ ರೂಮ್ ಬುಕ್ ಮಾಡಿರುವುದು ನಂತರ ಆ ವ್ಯಕ್ತಿಗೆ ಹೇಳಿದನು ಸರ್ ತಾವು ಸಿಂಗಲ್ ರೂಮ್ ಅನ್ನು ಬುಕ್ ಮಾಡಿದ್ದೀರಿ ಬೇಕಾದರೆ ನೋಡಿ ನೀವು ನನಗೆ ಮೆಸೇಜ್ ಕಳುಹಿಸಿದ್ದೀರಾ ಇಲ್ಲಿಯೂ ನೋಡಿ ಎಂದು ಅವನ ಮೊಬೈಲ್ ನಲ್ಲಿ ತೋರಿಸಿದ.

 ಗಲಾಟೆ ಮನುಷ್ಯ ಒಪ್ಪಲೆ ಇಲ್ಲ ಇಲ್ಲ ನಾನು ಮಾಡಿರುವುದೇ ಡಬಲ್ ರೂಮ್ ನನಗೆ ಬೇಕಾಗಿರುವುದೇ ಡಬಲ್ ರೂಮ್ ಕೊಡಿ ಎಂದು ಗಲಾಟೆ ಮಾಡಿದನು. ಆಗ ವ್ಯವಸ್ಥಾಪಕರು ವಿನಮ್ರವಾಗಿ ಹೇಳಿದನು ಸರ್ ನೀವು ಬುಕ್ ಮಾಡಿದ ಪ್ರಕಾರವಾಗಿ ನಾನು ಸಿಂಗಲ್ ರೂಮ್ ಮಾತ್ರ ಕೊಡಲು ಸಾಧ್ಯವಿದೆ ಏಕೆಂದರೆ ಈಗ ಎಲ್ಲಾ ರೂಮುಗಳು ಬರ್ತಿಯಾಗಿವೆ ಎಂದು ವಿನಮ್ರವಾಗಿ ಹೇಳಿದನು.

ಈ ವ್ಯಕ್ತಿ ಕೋಪ ಮಾಡಿಕೊಂಡು ವ್ಯವಸ್ಥಾಪಕರಿಗೆ ಅವ್ಯಾಚ ಶಬ್ದಗಳಿಂದ ಬಯಲು ಶುರು ಮಾಡಿದನು ನಂತರ ಹೇಳಿದನು ನಿನಗೆ ನಾನು ಈ ಕೆಲಸದಿಂದ ತೆಗೆದುಹಾಕಿಬಿಡುತ್ತೇನೆ ಎಂದು ಹೇಳಿ ಕೆಂಡಮಂಡಲವಾಗಿ ಮತ್ತೆ ನಾನು ಈ ಹೋಟೆಲ್ಗೆ ಬರುವುದಿಲ್ಲ ಎಂದು ಹೊರಟು ಹೋದನು.

 5 ನಿಮಿಷದ ನಂತರ ನೀವು ಬನ್ನಿ ಎಂದು ನಮ್ಮನ್ನು ವಿನಮ್ರವಾಗಿಯೇ ಕರೆದನು ಸರ್ ನಿಮ್ಮ ರೂಮ್ ಕೀ ಇದೆ ತೆಗೆದುಕೊಳ್ಳಿ ಮತ್ತೆ ಬನ್ನಿ ನಾನು ನಿಮಗೆ ರೂಮ್ ತೋರಿಸುತ್ತೇನೆ ಎಂದು ವಿನಮ್ರವಾಗಿಯೇ ಮಾತನಾಡಿದನು.

ಅವರ ಜೊತೆಯಲ್ಲಿ ಹೋಗಬೇಕಾದರೆ ನಾನು ಆ ವ್ಯವಸ್ಥಾಪರಿಕರಿಗೆ ಹೇಳಿದೆ ನೀವು ತುಂಬಾ ತಾಳ್ಮೆ ಸ್ವಭಾವದವರು ಭಾವನೆಯನ್ನು ನಿಯಂತ್ರಣ ಮಾಡುವ ಶಕ್ತಿ ತುಂಬಾ ಚೆನ್ನಾಗಿ ಗಳಿಸಿದ್ದೀರಾ ಏಕೆಂದರೆ ಈಗ ತಾನೇ ಆ ವ್ಯಕ್ತಿ ನಿಮಗೆ ಇಷ್ಟು ಕೀಳು ಮಟ್ಟದಲ್ಲಿ ಮಾತನಾಡಿ ಹೋಗಿದ್ದರು ನೀವು ಅದನ್ನು ಮನಸ್ಸಿನಲ್ಲಿ ಇಟ್ಟುಕೊಂಡಿಲ್ಲ ಎಂದು ಇರುವ ಸತ್ಯವನ್ನು ಹೇಳಿದೆ.

 ವ್ಯವಸ್ಥಾಪಕರು ಸರ್ ಆ ವ್ಯಕ್ತಿ ಒಳ್ಳೆಯ ವ್ಯಕ್ತಿಯೇ ಆಗಿರಬಹುದು ಆದರೆ ಅವನಿಗೆ ಬಿಸಿನೆಸ್ ನಲ್ಲಿ ತೊಂದರೆ ಆಗಿರಬಹುದು ಅಥವಾ ಮನೆಯಲ್ಲಿ ಜಗಳ ಆಗಿರಬಹುದು ಏನಾದರೂ ಕೊರತೆ ಆಗಿರಬಹುದು ಅಥವಾ ಇನ್ಯಾವುದೋ ಸಮಸ್ಯೆ ಕಾಡುತ್ತಿರಬಹುದು. ಆ ಕೋಪವೆಲ್ಲ ಇಟ್ಟುಕೊಂಡಿದ್ದನು ಎಲ್ಲೂ ಕೂಡ ಅವನಿಗೆ ಹೊರಹಾಕಲು ಸಾಧ್ಯವಾಗಲಿಲ್ಲ ನಾವು ಚಿಕ್ಕ ಕೆಲಸದಲ್ಲಿ ಇರುತ್ತೇವೆ ಆ ಎಲ್ಲಾ ಕೋಪವನ್ನು ಇಲ್ಲಿ ನಮ್ಮ ಮೇಲೆ ವ್ಯಕ್ತಪಡಿಸಿದ್ದಾರೆ ಅಷ್ಟೇ ಆ ವ್ಯಕ್ತಿ ಒಳ್ಳೆಯವನೇ ಇರಬಹುದು ಎಂದು ಹೇಳಿದನು.

ಈ ಮಾತನ್ನು ಹೇಳಿದ ನಮಗೆ ದಂಗುಬಡಿದಂತಾಯಿತು ನಂತರ ನಾವು ರೂಮಿಗೆ ಹೋದೆವು ನಂತರ ಈ ವ್ಯಕ್ತಿ ಹೇಳಿದ ಮಾತು ಆಗಾಗ ನನ್ನ ಕಿವಿಗೆ ಕೇಳುತ್ತಿತ್ತು ಈಗಲೂ ಕೆಲವು ಸಾರಿ ರೂಮಲ್ಲಿ ಇರಬೇಕಾದರೆ ಆ ವ್ಯಕ್ತಿಯ ನೆನಪು ಬಂದೆ ಬರುತ್ತದೆ ನಾವು ಏಕೆ ನಮ್ಮ ಭಾವನೆಗಳ ಮೇಲೆ ನಿಯಂತ್ರಣ ಸಾಧಿಸಬಾರದು ಆಕಾರದಿಂದ, ಬಣ್ಣದಿಂದ, ಎತ್ತರದಿಂದ, ವಿದ್ಯೆಯಿಂದ. ನಾವು ಅಳೆಯುವುದಕ್ಕೆ ತೂಕ ಮಾಡುವುದಕ್ಕೆ ಸಾಧ್ಯವಿಲ್ಲ ಆದರೆ ಅವರ ಅವರ ತಾಳ್ಮೆಯಿಂದ ಅವರನ್ನು ಅಳೆಯಬಹುದಾಗಿದೆ. ಏನೇ ಉಲ್ಟಾಪಲ್ಟಾ ಆದರೂ ತಾಳ್ಮೆಯಿಂದ ಇರೋಣ.

ಎಲ್ಲರೂ ನಮ್ಮನ್ನು ಹೆದರಿಸುತ್ತಾರೆ

ಒಂದು ದಟ್ಟವಾದ  ಕಾಡು ಅದರಲ್ಲಿ ಬಹಳಷ್ಟು ಮೊಲಗಳು ವಾಸವಾಗಿದ್ದವು ಮೊಲ ಎಂದರೆ ಎಲ್ಲರಿಗು ತಿಳಿದಿರುವ ವಂತಹದ್ದು ಪುಕ್ಕಲು ಪ್ರಾಣಿಗಳು ಮತ್ತೆ ಮೊಲಗಳ ಸ್ವಭಾವವು ಅಂತಹದ್ದೇ ಹೆದರುವ ಸ್ವಭಾವ ಅದರಲ್ಲಿ ಹಿರಿಯ ಒಂದು ಮೊಲ ಹೇಳಿತು.

 ಎಲ್ಲರೂ ನಮ್ಮನ್ನು ಹೆದರಿಸುತ್ತಾರೆ ಗದರಿಸುತ್ತಾರೆ, ಬೇಟೆಯಾಡಲು ಬಂದವರೂ ಕೂಡ ನಮ್ಮನ್ನೇ ಹಿಡಿಯುತ್ತಾರೆ ಪಂಜರದಲ್ಲಿ ಬಿಡುತ್ತಾರೆ ಪ್ರಾಣಿಗಳು ಕೂಡ ನಮ್ಮನ್ನು ನೋಡಿದರೆ ಅಟ್ಟಿಸಿಕೊಂಡು ಬರುತ್ತವೆ ನಮ್ಮನ್ನೆ ಬೇಟೆಯಾಡುತ್ತಾರೆ.

 ನಾವು ದಿನನಿತ್ಯ ಹೆದರಿಕೆಯಿಂದಲೇ ಬದುಕಬೇಕು ನಮಗೆ ಯಾವಾಗ ಸಾವು ಇದೆ ಎಂದು ತಿಳಿಯದು ದಿನನಿತ್ಯ ನಾವು ಸಾವು ಬದುಕಿನ ಸ್ಥಿತಿಯಲ್ಲಿ ಬದುಕುತ್ತಿದ್ದೇವೆ ಆದುದರಿಂದ ನಾವು ಈ ರೀತಿ ಬದುಕುವುದಕ್ಕಿಂತ ಎಲ್ಲರೂ ಸೇರಿ ಒಂದೇ ಸಾರಿ ಸಾಯೋಣ ಎಂದು ದೊಡ್ಡ ಮೊಲ ತನ್ನ ದುಃಖ ವ್ಯಕ್ತಪಡಿಸುತ್ತದೆ.

ಎಲ್ಲಾ ಮೂಲಗಳು ಯೋಚಿಸಿ ಹೌದು ಈ ಮೊಲ ಹೇಳುತ್ತಿರುವುದು ಸರಿ ಎಂದು ಎಲ್ಲಾ ಮೂಲಗಳು ಕೆರೆಗೆ ನಡಿಯಿರಿ ಒಂದೇ ಸಾರಿ ನಾವು ಸಾಯೋಣ ಎಂದು ನಿರ್ಧರಿಸಿ ಎಲ್ಲಾ ಮೂಲಗಳು ಕೆರೆಯ ಹತ್ತಿರಕ್ಕೆ ಹೋಗುತ್ತಿರುತ್ತವೆ ಇನ್ನೇನು ಸಾಯಬೇಕು ಎನ್ನುವ ಸ್ಥಿತಿಯಲ್ಲಿ ಒಂದು ಆಕಸ್ಮಿಕ ಘಟನೆ ನಡೆಯುತ್ತದೆ.

2 ಕಪ್ಪೆಗಳು ಹೆದರಿ ಗಾಬರಿಯಾಗಿ ನೀರಿನಲ್ಲಿ ಬಿದ್ದವು ಕಪ್ಪೆಗಳು ಬದುಕುವುದಕ್ಕಾಗಿ ಶಕ್ತಿ ಮೀರಿ ಈಜಿಕೊಂಡು ದಡ ಸೇರುತ್ತವೆ ಇದನ್ನು ನೋಡಿದ ಮೊಲಗಳ ರಾಜ ಹೇಳುತ್ತದೆ ನಮಗಿಂತ ಚಿಕ್ಕ ಪ್ರಾಣಿ ಅದು ಕೂಡ ಗಾಬರಿಯಾಗಿ ತನ್ನ ಪ್ರಾಣ ಉಳಿಸಿಕೊಳ್ಳಲು ಕೆರೆಯನ್ನು ಹಾರಿ ಈಗ ಬದುಕಿದೆ.

 ಇಷ್ಟು ಚಿಕ್ಕ ಪ್ರಾಣಿಗೆ ಇಷ್ಟು ಧೈರ್ಯ ಉತ್ಸಾಹ ಇರಬೇಕಾದರೆ ಕಪ್ಪೆಗಳಿಗಿಂತ ಕಡೆಯೇ ನಾವೂ ಕೂಡ ಇರುವವರೆಗೆ ಚೆನ್ನಾಗಿ ಬದುಕಿ ಸಾವು ಬಂದರೆ ಸಾಯೋಣ ಎಂದು ನಿರ್ಧರಿಸಿ ವಾಪಸ್ ಹೋಗುತ್ತವೆ ಹೀಗೆ ಪ್ರತಿಯೊಬ್ಬರಿಗೂ ಅಷ್ಟೆ ವಿಷಮ ಪರಿಸ್ಥಿತಿ ಬಂದಾಗ ಈ ರೀತಿಯ ಭಾವನೆಗಳು ಇಮ್ಮಡಿಯಾಗುತ್ತವೆ.

  ನಮಗಿಂತ ಚಿಕ್ಕ ಹಂತದಲ್ಲಿ ಇರುವವರನ್ನು ನೋಡಿದಾಗ ತಾನೇತಾನಾಗಿ ಧೈರ್ಯ ಉತ್ಸಾಹ ಬರುತ್ತದೆ ಬೇರೆಯವರ ಕಷ್ಟಗಳನ್ನು ಕಣ್ಣಾರೆ ಕಂಡಾಗ ನಮಗೆ ಬದುಕಲು ಉತ್ಸಾಹ ಬರುತ್ತದೆ ಬದುಕಿನಲ್ಲಿ ಏನೇ ಉಲ್ಟಾ ಪಲ್ಟವಾದರೂ ಧೈರ್ಯದಿಂದ ಮುನ್ನಡೆಯೋಣ.

ನಾವು ಬದುಕಲಿಕ್ಕೆ ಬಂದವರು

ಒಂದು ಊರಿನ ಆಚೆ ಒಂದು ದೊಡ್ಡ ಮರವಿತ್ತು ಆ ಮರದಲ್ಲಿ ಒಂದು ಪಕ್ಷಿ ಗೂಡು ಕಟ್ಟಿಕೊಂಡು ಚೆನ್ನಾಗಿ ಸಂತೋಷವಾಗಿ ಮರಿಗಳೊಂದಿಗೆ ವಾಸವಾಗಿತ್ತು ಮರಿಗಳು ಚಿಕ್ಕದಿರುವುದರಿಂದ ತಾಯಿಯೇ ತಂದು ಆಹಾರವನ್ನು ತಿನ್ನಿಸುತ್ತಿತ್ತು ಸಂತೋಷವಾಗಿ ಬದುಕುತ್ತಿದ್ದವು.

 ಸ್ವಲ್ಪ ದಿನಗಳ ನಂತರ ಕೋತಿ ಆ ಮರಕ್ಕೆ ಬಂದು ಕೋತಿ ಚೇಷ್ಟೆ ನೋಡಿದಿರಲ್ಲ ಹಣ್ಣು ಕೀಳುವುದು ಕೊಂಬೆಗಳನ್ನು ಅಲ್ಲಾಡಿಸುವುದು ಜೋಕಾಲಿ ಆಡುವುದು ಹೀಗೆ ಮಾಡಿದಾಗ ಚಿಕ್ಕ ಮರಿಗಳು ಮೇಲಿನಿಂದ ಬಿದ್ದು ಸತ್ತು ಹೋದವು.

ತಾಯಿಹಕ್ಕಿ ನೋಡಿ ತುಂಬಾ ದುಃಖಿಸಿತು ಸ್ವಲ್ಪ ಹೊತ್ತು ಮಾತ್ರ ನಂತರ ಇದ್ದ ಪಕ್ಷಿ ಹಾಡಲಿಕ್ಕೆ ಶುರುಮಾಡಿತು ಇನ್ನೊಂದು ಮರಿ ಉಳಿದಿತ್ತು ಅದು ಕೂಡ ಹಾಡುವುದಕ್ಕೆ ಆರಂಭಿಸಿತು ಇದನ್ನು ನೋಡಿದ ಋಷಿಗಳಿಗೆ ತುಂಬಾ ಆಶ್ಚರ್ಯವಾಯಿತು.

 ಕೆಲವು ಕ್ಷಣಗಳ ಹಿಂದೆ ದುಃಖಿಸುತ್ತಿದ್ದ ಹಕ್ಕಿ ಈಗ ಹಾಡಲು ಆರಂಭಿಸಿದೆ ಏನಿರಬಹುದು ಎಂದು ಹಕ್ಕಿಗೆ ಕೇಳುತ್ತಾರೆ ನಿನ್ನ ಕೆಲವು ಮರಿಗಳು ಸತ್ತು ಹೋಗಿದೆ ಕೆಲವು ಮರಿಗಳು ಮಾತ್ರ ಬದುಕಿದೆ ದುಃಖ ಪಡುವ ಬದಲು ಹಾಡಲಿಕ್ಕೆ ಹೇಗೆ ಸಾಧ್ಯವಾಯಿತು.

 ಆಗ ಪಕ್ಷಿ ಹೇಳುತ್ತದೆ ಹೌದು ಋಷಿಗಳೇ ನಾವು ಬದುಕಲಿಕ್ಕೆ ಬಂದವರು ದುಃಖವೇನೋ ಆಯಿತು ಆದರೆ ಅದನ್ನು ಆ ಕ್ಷಣದಲ್ಲಿ ಮರೆತು ಬಿಡಬೇಕು ಮತ್ತೆ ಸುಖ ಬಂದಾಗಲೂ ಅಷ್ಟೆ ಆ ಕ್ಷಣದಲ್ಲಿಯೇ ಮರೆತುಬಿಡಬೇಕು. ನಾವು ಈ ರೀತಿ ಬದುಕುತ್ತೇವೆ ಬದುಕು ಎಂದಾಗ ನೋವು ನಲಿವು ಏಳು ಬೀಳು ಇದ್ದಿದ್ದೆ ಈಗ ಇರುವ ಕ್ಷಣವನ್ನು ಅನುಭವಿಸಬೇಕು ಇದೆ ಸಾರ್ಥಕ ಬದುಕಿನ ಲಕ್ಷಣ ಎಂದಿತು.

ಸೇವೆ ಎಂದರೆ ಇದೇ ಇರಬೇಕು

ಒಂದು ಊರಿನಲ್ಲಿ ಸಾತ್ವಿಕ ಸ್ವಭಾವದ  ಸಾಧುಗಳು ಇದ್ದರು ಸಮಯ ಸಿಕ್ಕಿದಾಗ ಎಲ್ಲರಿಗೂ   ಒಳ್ಳೆಯ ಮಾತುಗಳನ್ನು ಹೇಳುತ್ತಿದ್ದರು   ಸಾಧು ಅವರ  ಮಾತುಗಳಿಗೆ ಎಲ್ಲರೂ ಶ್ರದ್ದೆ ಭಕ್ತಿಯಿಂದ ಕೇಳುತ್ತಿದ್ದರು.

ಅದೇ ಹಳ್ಳಿಯ ಮೂಲೆಯಲ್ಲಿ ಕೆಲವು ಕಳ್ಳರು ಇದ್ದರು ಅವರಿಗೂ ಒಳ್ಳೆಯ ಮಾತುಗಳನ್ನು ಹೇಳುತ್ತಿದ್ದರು ಕಳ್ಳರಿಗೆ ಇವರ ಮಾತಿನಿಂದ ಕೋಪ ಉಕ್ಕಿ ಬರುತ್ತಿತ್ತು  ಕಳ್ಳರು ಯೋಚನೆ ಮಾಡಿದರು ಸಾಧು ಏನಾದರೂ ತಪ್ಪು ಕಂಡು ಹಿಡಿದು  ಚೆನ್ನಾಗಿ ಹೊಡೆಯೋಣ ಎಂದು ತೀರ್ಮಾನಿಸಿದರು.

ಸಾಧು ಅವರ ತಪ್ಪು ಕಂಡು ಹಿಡಿಯಲು ಆರಂಭಿಸಿದರು ಆದರೆ ಸಾಧು ಅವರ ತಪ್ಪುಗಳು ಕಂಡುಹಿಡಿಯಲು ಸಾಧ್ಯವಾಗಲಿಲ್ಲ ಅದಕ್ಕಾಗಿ ಬೀದಿಯ ಕೊನೆಯಲ್ಲಿ ಇರುವ ಅಜ್ಜಿಗೆ ಹೇಳಿದರು ಅಜ್ಜಿ ಸಾಧು ಅವರು ದಿನನಿತ್ಯ ಇದೇ ದಾರಿಯಲ್ಲಿ ಬರುತ್ತಾರೆ  ಸಾಧು ಬರುತ್ತಿರುವುದನ್ನು ನೋಡಿ ಗೊತ್ತಿಲ್ಲದಂತೆ ನೀರು ಹಾಕಿ ಅವರು ನಿಮಗೆ ಬೈದರೆ ನಾವು ಅವರಿಗೆ ಚೆನ್ನಾಗಿ ಹೊಡೆಯುತ್ತೇವೆ ಎಂದು ಹೇಳಿದರು.

 ಅಜ್ಜಿ ಯೋಚಿಸಿದರು ಮೊದಲೇ ಕಳ್ಳರು ಹೇಳುತ್ತಿದ್ದಾರೆ  ಕಳ್ಳರು ಹೇಳಿದ ರೀತಿಯಲ್ಲಿ ಮಾಡದಿದ್ದರೆ ನನ್ನ ಮನೆಯಲ್ಲಿರುವ ಎಲ್ಲಾ ವಸ್ತುಗಳನ್ನು ದೋಚುತ್ತಾರೆ ಎಂದು ಅಜ್ಜಿಯು ಒಪ್ಪಿಕೊಂಡರು ಸಾಧು ಅವರು ಬರುತ್ತಿದ್ದಂತೆ ಮೊದಲನೆಯ ದಿನ ನೀರು ಹಾಕಿದರು ಸಾಧು ಅವರು ಏನು ಮಾತನಾಡದೆ ಹೋದರು ಮತ್ತೆ ಮಾರನೆಯ ದಿನ ಕಳ್ಳರು ಅಜ್ಜಿಗೆ ಕೊಳೆ ನೀರನ್ನು ಹಾಕಿ ಎಂದು ಹೇಳಿದರು.

 ಅಜ್ಜಿ ಕೊಳೆ ನೀರನ್ನು ಹಾಕಿದರು ಆದರೂ ಸಾಧು ಅವರು ನಗುತ್ತಾ ಹೊರಟು ಹೋದರು ಮತ್ತೆ ಕಳ್ಳರು ಕೊನೆಯದಾಗಿ ಸಾಧು ಅವರ ಮೇಲೆ ಥೂ ಎಂದು ಉಗಿಯಿರಿ ಎಂದು ಹೇಳಿದರು ಅದರಂತೆ ಅಜ್ಜಿಯವರು ಥೂ ಎಂದು ಉಗಿದರು ಆದರೂ ಸಾಧು ಅವರು ಮುಗುಳ್ನಗುತ್ತಾ ಹೋದರು ಇದೇ ರೀತಿ ಬಹಳಷ್ಟು ದಿನಗಳು ಅಜ್ಜಿಯು ಉಗಿಯುತ್ತಿದ್ದರು ಸಾಧು ಅವರು ಮಾತ್ರ ಮುಗುಳ್ನಗುತ್ತಾ ಹೋಗುತ್ತಿದ್ದರು ಇದನ್ನು ದಿನನಿತ್ಯ ನೋಡುತ್ತಿದ್ದ ಕಳ್ಳರಿಗೆ ಪೀಕಲಾಟ ಶುರುವಾಯಿತು ನಂತರ ಸಾಧು ಅವರಿಂದ ದೂರ ಇದ್ದರು.

ಕೆಲವು ದಿನ ಸಾಧುಗಳು ತಮ್ಮ ಯಾವುದೋ ಉಪನ್ಯಾಸಕ್ಕಾಗಿ ಬೇರೆಯವರಿಗೆ ಹೋಗಿದ್ದರು ಮತ್ತೆ ಅದೇ ದಾರಿ ಬರುತ್ತಿದ್ದಾಗ ಅಜ್ಜಿ ಕಾಣಲಿಲ್ಲ ಏಕೆ ಕಾಣಲಿಲ್ಲ ಎಂದು ಆ ಕಡೆ ಈ ಕಡೆ ನೋಡಿದರು ಮನೆಯ ಬಾಗಿಲಿಗೆ ಬಡಿದರು

ಆ ಮನೆಯಲ್ಲಿ ಸಾಧು ಅವರು ಹೆಜ್ಜೆ ಇಡುತ್ತಿದ್ದಂತೆಯೇ ಕೆಟ್ಟವಾಸನೆ ಬರುತ್ತಿತ್ತು ಇದನ್ನು ಸಹಿಸಿಕೊಂಡು ಮುಂದೆ ಹೋದರು ಅಲ್ಲಿ ನೋಡಿದರೆ ಅಜ್ಜಿಯು ಕಾಯಿಲೆಯಿಂದ ನರಳುತ್ತಿದ್ದಾರೆ ಸಾಧು ಅವರ ಮನಸ್ಸು ಕರಗಿತು. ಅದಕ್ಕಾಗಿ ಆ ಅಜ್ಜಿಯ ಆರೈಕೆಗಾಗಿ ಅಲ್ಲಿಯೇ ಇದ್ದು ಔಷಧಿ ಆಹಾರ ಎಲ್ಲವನ್ನೂ ಸರಿಯಾಗಿ ನೀಡಿದರು ನಂತರ ಅಜ್ಜಿಯೂ ಸ್ವಲ್ಪ ಸ್ವಲ್ಪವಾಗಿ ಗುಣವಂತರಾದರು.

 ಅಜ್ಜಿಯು ನೀನು ಯಾರೆಂದು ನನಗೆ ಗೊತ್ತಿಲ್ಲ ಆದರೆ ನನಗೆ ಒಳ್ಳೆಯದನ್ನು ಮಾಡಿದ್ದೀಯಾ ಎಂದು ಆಶೀರ್ವದಿಸಿದರು ಆಗ ಸಾಧು ಅವರು ದಿನನಿತ್ಯ ನೀವು ಉಗಿಯುತ್ತಿದ್ದರಲ್ಲ ಅವನೇ ನಾನು ಎಂದು ಹೇಳಿದರು ಅಜ್ಜಿಯು ದಯವಿಟ್ಟು ನನ್ನನ್ನು ಕ್ಷಮಿಸು ಎಂದು ಅಂಗಲಾಚಿದರು ಆಗ ಸಾಧು ಅವರು ದೊಡ್ಡವರು ಈ ರೀತಿ ಹೇಳಬಾರದು ನೀವು ಗೊತ್ತಿಲ್ಲದೇ ತಪ್ಪು ಮಾಡಿದ್ದೀರಾ ಎಂದು ಸಮಾಧಾನ ಪಡಿಸಿದರು

ಅಜ್ಜಿ ನೀನು ನನ್ನ ಹೋದ ಜನ್ಮದಲ್ಲಿ ಮಗನೇ ಆಗಿರಬೇಕು ಎಂದು ಕಣ್ಣೀರಿಟ್ಟು ಹೇಳಿದರು ಆಗ ಆ ಸಾಧು ಅವರು ಹೋದ ಜನ್ಮದಲ್ಲಿ ಇರಲಿ ಇದೇ ಜನ್ಮದಲ್ಲಿ ನಾನು ನಿಮ್ಮ ಮಗನಾಗಿ ಇರುತ್ತೀನಿ ನೀವೇನು ಚಿಂತಿಸುವ ಅವಶ್ಯಕತೆಯಿಲ್ಲ ಎಂದು ಆ ಸಾಧು ಅವರು ಹೇಳಿದರು.

 ನಂತರ ಕೆಲವು ವರ್ಷಗಳು ಅಲ್ಲೇ ಇದ್ದು ನಂತರ ಸಾಧುಗಳು ಹೊರಟರು ಸೇವೆ ಎಂದರೆ ಇದೇ ಇರಬಹುದಾ? ಸಮಯ ಸಿಕ್ಕಿದಾಗ ನಮಗೆ ಸಾಧ್ಯವಾದಷ್ಟು ಸೇವೆ ಮಾಡೋಣ.

Leave a Comment