ಒಂದು ಊರಿನಲ್ಲಿ ಒಬ್ಬ ಮಹಾನ್ ದೊಡ್ಡ ಕಳ್ಳ ಇರುತ್ತಾನೆ ಕಳ್ಳನು ಸಮಯ ನೋಡಿ ಕಳ್ಳತನ ಮಾಡಿ ಬರುತ್ತಿರುತ್ತಾನೆ ಆದರೆ ಎಲ್ಲಾ ಕಡೆಯೂ ಕಳ್ಳನು ಬಚಾವ್ ಆಗಿ ಬಂದಿರುತ್ತಾನೆ ತಂದೆ ಕಳ್ಳ ಆಗಿರುವುದರಿಂದ ಮಗನಿಗೂ ಸಹ ಅದೇ ಕಳ್ಳತನ ತರಬೇತಿಯನ್ನು ನೀಡುತ್ತಿರುತ್ತಾನೆ ಮಗ ಇದನ್ನೆಲ್ಲಾ ನೋಡಿ ಆಶ್ಚರ್ಯನಾಗುತ್ತಾನೆ.
ತಂದೆಗೂ ವಯಸ್ಸಾಗುತ್ತದೆ ನಂತರ ಮಗನಿಗೂ ಕೂಡ ಇದೇ ತರಬೇತಿಯನ್ನು ನೀಡುತ್ತಾನೆ ಒಂದು ಮನೆಗೆ ಹೋಗಿ ತಂದೆ ಮಗ ಕಳ್ಳತನವನ್ನು ಮಾಡುತ್ತಾರೆ ತಂದೆಯಾದವನು ಎಲ್ಲವನ್ನು ಪರಿಶೀಲಿಸಿ ಕೆಲವು ವಸ್ತುಗಳನ್ನು ತೆಗೆದುಕೊಂಡು ಮಗ ಈ ಕಡೆಯಿಂದ ಬರಬೇಕಾದರೆ ತಂದೆ ಪಾರಾಗಿ ಒಂದು ತಂಬಿಗೆಯನ್ನು ಬೀಳಿಸಿ ಹಾಗೂ ಮನೆಯ ಬಾಗಿಲನ್ನು ಹಾಕಿ ಆಚೆ ಬರುತಾನೆ ಮತ್ತೆ ಅಕ್ಕ ಪಕ್ಕದವರಿಗೆ ಎಲ್ಲರಿಗೂ ಜೋರಾಗಿ ಶಬ್ದ ಮಾಡಿ ಹೊರಟು ಹೋಗುತ್ತಾನೆ.
ಮಗನಿಗೆ ಜೀವ ಹೋದಂತೆ ಆಗುತ್ತದೆ ನಾನು ಹೇಗೆ ತಪ್ಪಿಸಿಕೊಳ್ಳುವುದು ಎಂದು ಚಿಂತಿಸುತ್ತಾನೆ ನೋಡಿದರೆ ಎಲ್ಲಾ ನಿದ್ರೆಯಿಂದ ಗಾಬರಿಯಾಗಿ ಎದ್ದು ಮನುಷ್ಯರು ಕಳ್ಳ ಎಲ್ಲಿ ಎಂದು ಹುಡುಕುತ್ತಿರುತ್ತಾರೆ ಆಗ ಮಗನಾದವನು ಹೇಗೋ ಪಾರು ಮಾಡಿಕೊಂಡು ಮನೆಗೆ ಬರುತ್ತಾನೆ ಆಗ ತಂದೆಗೆ ಬಂದು ಹೇಳುತ್ತಾನೆ.
ನೀವು ನನ್ನನ್ನು ಏಕೆ ಈ ರೀತಿ ಮಾಡಿದ್ದು ಎಂದಾಗ ಮಗನಿಗೆ ಶಾಭಾಷ್ ಎನ್ನುತ್ತಾನೆ ಹೇಗೆ ಬಚಾವ್ ಆಗಿ ಬಂದೆ ಹೇಳು ಎಂದಾಗ ಮಗ ಸುಧಾರಿಸಿಕೊಂಡು ಉತ್ತರಿಸುತ್ತಾನೆ ರಾತ್ರಿ ಆಗಿದ್ದರಿಂದ ಒಬ್ಬ ವಯಸ್ಸಾದವರು ಒಂದು ದೀಪವನ್ನು ಹಚ್ಚಿಕೊಂಡು ಹುಡುಕಿದರು.
ನಾನು ಮೂಲೆಯಲ್ಲಿ ಇದ್ದೆ ನಿಧಾನವಾಗಿ ಬಾಗಿಲು ತೆಗೆದಾಗ ಆ ದೀಪವನ್ನು ಆರಿಸಿ ಆಚೆ ಬಂದೆ ಆಚೆ ಬಂದರೆ ಆಚೆ ಕೂಡ ಕೆಲವರು ಕಾಯುತ್ತಿದ್ದಾರೆ ನಂತರ ನಿಧಾನವಾಗಿ ಅವಿತುಕೊಂಡು ಒಂದು ಬಾವಿಯ ಕಡೆ ಬಂದೆ ನಂತರ ಒಂದು ದೊಡ್ಡ ಕಲ್ಲನ್ನು ಬಾವಿಯಲ್ಲಿ ಹಾಕಿದೆ.
ಎಲ್ಲರೂ ಕಳ್ಳ ಅಲ್ಲಿ ಇರಬಹುದು ಎಂದು ಓಡಿದರೂ ನಾನು ಈ ಕಡೆ ತಪ್ಪಿಸಿಕೊಂಡು ಬಂದೆ ಎನ್ನುತ್ತಾನೆ ಆಗ ತಂದೆ ಹೇಳುತ್ತಾನೆ ನೀನು ನನ್ನ ಪರೀಕ್ಷೆಯಲ್ಲಿ ಪಾಸ್ ಆಗಿದ್ದೀಯಾ. ಕಳ್ಳನ ಮಗ ಒಂದು ಮನೆಯಲ್ಲಿ ಸಿಕ್ಕಿಕೊಂಡಾಗ ಹೇಗೆ ಪಾರು ಆಗುವುದು ಎಂದು ತಿಳಿಯುವುದಿಲ್ಲ ಆಗ ಸೃಜನ ಶೀಲತೆಯಿಂದ ಕಳ್ಳನ ಮಗ ಪಾರಾಗುತ್ತಾನೆ.
ಕೆಲವು ಸಾರಿ ನಮ್ಮ ಜೀವನದಲ್ಲೂ ಕೆಲವು ಕಷ್ಟಗಳು ಬರುತ್ತವೆ ಆದ್ದರಿಂದ ನಾವು ಕೂಡ ಸೃಜನ ಶೀಲತೆಯಿಂದ ಪರಿಹರಿಸಿಕೊಳ್ಳೋಣ.
ಮಕ್ಕಳ ಸ್ವಂತಿಕೆ ಬೆಳೆಯುತ್ತಿಲ್ಲ
ಚಿಕ್ಕ ಮಕ್ಕಳು ಶಾಲೆಗೆ ಹೋಗಬೇಕು ಎಂದರೆ ತುಂಬಾ ಸಂತೋಷ ಪಡುತ್ತಾರೆ ಅದೇ ಶಾಲೆಯ ಗೇಟಿನ ಮುಂದೆ ಬಿಟ್ಟು ಬರುತ್ತಿದ್ದಂತೆಯೇ ಅಳುತ್ತಾರೆ ನಂತರ ಹೇಗೋ ಶಾಲೆಯ ಒಳಗೆ ಹೋಗುತ್ತಾರೆ.
ಮೊದಲನೆಯ ದಿನವಾದುದರಿಂದ ಮಕ್ಕಳು ಭಯ ಆತಂಕ ಎಲ್ಲವೂ ಇದ್ದೇ ಇರುತ್ತದೆ ಅದರಲ್ಲಿ ಹೆಣ್ಣು ಮಕ್ಕಳು ಯಾವುದೇ ಮಗು ಬಂದರೂ ಕೂಡ ಬರಲಿ ಎಂದು ಇಚ್ಛೆಪಟ್ಟು ತಮ್ಮ ತಮ್ಮ ಹತ್ತಿರ ಕುಳಿತುಕೊಳ್ಳುತ್ತಾರೆ.
ಅದೇ ರೀತಿ ಶಿಕ್ಷಕಿ ಕೂಡ ನೋಡಿ ನಗುತ್ತಾರೆ ಮತ್ತೆ ಶಿಕ್ಷಕಿ ಬಂದು ಎಲ್ಲರಿಗೂ ನಾನು ಹೇಳಿದಂತೆ ನೀವು ಮಾಡಬೇಕು ಎಂದು ಹೇಳಿ ಬೋರ್ಡಿನ ಮೇಲೆ ಒಂದು ಗುಲಾಬಿ ಹೂವಿನ ಚಿತ್ರವನ್ನು ಬರೆಯುತ್ತಾರೆ.
ಇದನ್ನು ನೋಡಿ ಎಲ್ಲರೂ ಅನುಕರಣೆ ಮಾಡಬೇಕು ಎಂದು ಒತ್ತಿ ಹೇಳುತ್ತಾರೆ ಎಲ್ಲಾ ಮಕ್ಕಳು ಆಗಲಿ ಎಂದು ಹೇಳುತ್ತವೆ ಈ ಹೊಸದಾಗಿ ಬಂದ ಹುಡುಗಿಗೂ ಕೂಡ ಹಾಗೆ ಹೇಳುತ್ತಾಳೆ ಹೊಸದಾಗಿ ಬಂದ ಹುಡುಗಿಗೆ ಕಡಿಮೆ ಕೇಳಿಸುತ್ತದೆ ಹಾಗಾಗಿ ಗುಲಾಬಿ ಚಿತ್ರವನ್ನು ಬರೆಯದೆ ತಾವರೆ ಹೂವಿನ ಚಿತ್ರವನ್ನು ಬರೆಯುತ್ತಾಳೆ.
ತಾವರೆ ಹೂವಿನ ಚಿತ್ರ ನೋಡಲಿಕ್ಕೂ ತುಂಬಾ ಸುಂದರವಾಗಿ ಬರೆದಿರುತ್ತಾಳೆ ಆದರೆ ಶಿಕ್ಷಕಿ ಬಂದು ನೀನು ಇದು ಬರೆದಿರುವುದು ತಪ್ಪು ಎಂದು ಹೇಳುತ್ತಾರೆ ಮತ್ತೆ ಒಂದು ಚಟುವಟಿಕೆಯನ್ನು ಕೊಡುತ್ತಾರೆ.
ಕೆಲವು ವಸ್ತುಗಳಲ್ಲಿ ಅದನ್ನು ಜೋಡಣೆ ಮಾಡಬೇಕು ಆಗಲೂ ಅಷ್ಟೆ ಈ ಹೊಸ ಹುಡುಗಿ ಒಂದು ಮನೆಯನ್ನು ಮಾಡಲು ಹೇಳಿದರೆ ಈ ಹುಡುಗಿ ಒಂದು ಬಿಲ್ಡಿಂಗ್ ಅನ್ನು ಸುಂದರವಾಗಿ ಚಿತ್ರಿಸುತ್ತಾಳೆ ಆದರೆ ಶಿಕ್ಷಕಿ ಬಂದು ಇದು ಮಾಡಿರುವುದು ಸರಿಯಿಲ್ಲ ಎಂದು ಹೇಳಿ ಹುಡುಗಿಗೆ ಕಡೆಗಣಿಸುತ್ತಾರೆ.
ಮತ್ತೆ ಹೇಳಿದಂತೆಯೇ ಮಾಡಬೇಕು ಎಂದು ತಾಕೀತು ಮಾಡುತ್ತಾರೆ ಆಗ ಆ ಹುಡುಗಿಯೂ ಏನೂ ಬರೆಯದೆ ಶಿಕ್ಷಕಿ ಏನು ಹೇಳುತ್ತಾರೆ ಅದನ್ನು ಮಾತ್ರ ಮಾಡುತ್ತಾಳೆ ಈ ಹುಡುಗಿಯೂ ಮನೆಯಲ್ಲಿಯೇ ಸಾಕಷ್ಟು ಕಲಿತಿರುವುದರಿಂದ ಇವಳು ಮಾಡಿದ ಎರಡೂ ಕೆಲಸಗಳು ತುಂಬಾ ಚೆನ್ನಾಗಿ ಮೂಡಿ ಬಂದಿರುತ್ತದೆ ನಂತರ 5ವರ್ಷಗಳ ನಂತರ ತಂದೆ ಬೇರೆ ಸ್ಕೂಲಿಗೆ ಸೇರಿಸುತ್ತಾರೆ.
ಅಲ್ಲಿಯ ಶಿಕ್ಷಕಿ ಬಂದು ಹೇಳುತ್ತಾರೆ ನೀನು ಈಗ ಏನು ಬೇಕು ಅದನ್ನು ಬರೆಯಬಹುದು ಎಂದು ಹೇಳುತ್ತಾರೆ ಆಗ ಮಗು ಹೇಳುತ್ತೆ ನೀವು ಏನು ಬರೆಯುತ್ತೀರೋ ಅದನ್ನು ಮಾತ್ರ ನಾನು ಬರೆಯುತ್ತೇನೆ ಎಂದು ಅಳುತ್ತಾಳೆ.
ಕಾರಣ ಏನು ಎಂದು ನೋಡಿದರೆ ಅನುಕರಣೆ ಮಾಡಿ ಬೆಳೆದಿರುವ ಮಕ್ಕಳು ಬರೀ ಅನುಕರಣೆಯೇ ಮಾಡುತ್ತಿದ್ದರೆ ಮಕ್ಕಳ ಸ್ವಂತಿಕೆ ಬೆಳೆಯುತ್ತಿಲ್ಲ ಮಕ್ಕಳ ನ್ಯೂನ್ಯತೆಯನ್ನು ಅರ್ಥಮಾಡಿಕೊಂಡು ಹೊಸದಾಗಿ ಸೃಜನಶೀಲವಾಗಿ ಸ್ವಂತವಾಗಿ ಬೆಳೆಯಲು ಹಲವಾರು ಅವಕಾಶಗಳಿವೆ ಮಾರ್ಗದರ್ಶನ ನೋಡೋಣ. ಶಿಕ್ಷಣ ಎಂದರೆ ಮೆದುಳಿಗೆ ತುಂಬುವುದಲ್ಲ ವಿದ್ಯಾರ್ಥಿಯಲ್ಲಿ ಅಡಗಿರುವ ಜ್ಞಾನವನ್ನು ಕೌಶಲ್ಯಗಳನ್ನು ಹೊರ ತೆಗೆಯುವುದು ಇದೇ ನಿಜವಾದ ಶಿಕ್ಷಣ.
ಕೊನೆಯವರೆಗೆ ಯಾರೂ ಇರುವುದಿಲ್ಲ
ಒಂದು ಊರಿನಲ್ಲಿ ಒಬ್ಬ ಅಗರ್ಭ ಶ್ರೀಮಂತ ಇರುತ್ತಾನೆ ಅವನು ತನ್ನ ಮಗಳಿಗೆ ಮದುವೆ ಮಾಡಬೇಕು ಎಂದು ತುಂಬ ಚೆನ್ನಾಗಿ ಊರಿಗೆಲ್ಲಾ ಅಲಂಕಾರ ಮಾಡುತ್ತಾನೆ ಆದರೆ ಆ ಶ್ರೀಮಂತನ ಮಗಳು ಮನೆಯಲ್ಲಿ ಕೆಲಸ ಮಾಡುವ ಸೇವಕನ ಜೊತೆ ಪ್ರೀತಿಸಿ ಊರಿನಿಂದ ಹೊರಟು ಹೋಗಿ ಬೇರೆ ಕಡೆ ನೆಲೆಸುತ್ತಾರೆ ನಂತರ ಒಂದು ಹೊಲದಲ್ಲಿ ಕೆಲಸ ಮಾಡಿಕೊಂಡು ಇಬ್ಬರು ಸಂಸಾರ ಮಾಡಿಕೊಂಡು ಇರುತ್ತಾರೆ ನಂತರ ಆ ಶ್ರೀಮಂತನ ಮಗಳು ಗರ್ಭವತಿಯಾಗುತ್ತಾಳೆ.
ಪ್ರಸವ ತನ್ನ ತಾಯಿಯ ಊರಿನಲ್ಲೇ ಆದರೆ ಒಳ್ಳೆಯದು ಎಂದು ಗಂಡನಿಗೆ ಹೇಳುತ್ತಾಳೆ ಗಂಡ ಹೇಳುತ್ತಾನೆ ನಾವು ಎಲ್ಲಿಂದ ಬಂದಿದ್ದೇವೆ ಮತ್ತೆ ಅಲ್ಲಿಗೆ ಹೋಗುವುದು ಬೇಡ ಎಂದು ಹೇಳುತ್ತಾನೆ ಆದರೂ ಹೆಂಡತಿ ಹಠ ಹಿಡಿಯುತ್ತಾಳೆ.
ಕೊನೆಗೆ ಗಂಡ ಆಗಲಿ ಎಂದು ಒಪ್ಪುತ್ತಾನೆ ಅದರಂತೆ ತಾಯಿಯ ಊರಿಗೆ ಪ್ರಯಾಣ ಆರಂಭಿಸುತ್ತಾರೆ ಆದರೆ ದಾರಿಯ ಮಧ್ಯದಲ್ಲಿಯೇ ಪ್ರಸವ ವೇದನೆ ಹೆಚ್ಚಾಗುತ್ತದೆ ಆಗ ಗಂಡ ದಾರಿಯಲ್ಲಿ ಕೆಲವು ವಯಸ್ಸಾದವರನ್ನು ಕರೆದು ಸಹಾಯ ಮಾಡಲಿಕ್ಕೆ ಹೇಳುತ್ತಾನೆ.
ಒಂದು ಮಗುವಿಗೆ ಜನ್ಮ ನೀಡುತ್ತಾಳೆ ನಂತರ ಅದರ ಆರೈಕೆಯನ್ನೂ ಅಲ್ಲಿಯವರೇ ಮಾಡುತ್ತಾರೆ ನಂತರ ಊರಿಗೆ ಹೋಗುವುದು ಬೇಡ ಎಂದು ಮರಳಿ ತಮ್ಮ ವಾಸಸ್ಥಾನಕ್ಕೆ ಬರುತ್ತಾರೆ ಸ್ವಲ್ಪ ದಿನಗಳ ನಂತರ ಗಂಡ ಹೋದವನು ಮತ್ತೆ ಬರುವುದೇ ಇಲ್ಲ ಏನಾಗಿರಬಹುದು ಎಂದು ನೋಡಿದಾಗ ಗಂಡನಿಗೆ ಒಂದು ಹಾವು ಕಚ್ಚಿ ಸತ್ತು ಹೋಗಿರುತ್ತಾನೆ.
ನನ್ನದು ಏನು ಗತಿ ಎಂದು ಚಿಂತೆ ಮಾಡಿಕೊಂಡು ಮಗುವನ್ನು ಎತ್ತಿಕೊಂಡು ತಾಯಿ ಊರಿಗೆ ಹೋಗುವುದೇ ಸರಿ ಎಂದು ನಿರ್ಧಾರ ಮಾಡಿ ಹೊರಡುತ್ತಾಳೆ ದಾರಿಯಲ್ಲಿ ಹೋಗುತ್ತಿರಬೇಕಾದರೆ ಒಂದು ಪ್ರಾಣಿ ಬಂದು ಅಟ್ಟಿಸಿಕೊಂಡು ಮಗುವನ್ನು ಕಿತ್ತುಕೊಂಡು ಹೊರಟುಹೋಗುತ್ತದೆ.
ಆಗ ತುಂಬಾ ಅಳುತ್ತಾಳೆ ಮತ್ತೆ ಹಾಗೆ ತನ್ನ ಊರಿಗೆ ಹೋಗಿ ಸೇರುತ್ತಾಳೆ ಊರಿಗೆ ಹೋಗುತ್ತಿತ್ತಂತೆ ತನ್ನ ತಾಯಿಯ ಮನೆಯ ಮುಂದೆ ಎಲ್ಲರೂ ನಿಂತಿರುತ್ತಾರೆ ಆಶ್ಚರ್ಯದಿಂದ ನೋಡಿದರೆ ನಿನ್ನೆ ರಾತ್ರಿಯೇ ಜೋರಾದ ಮಳೆ ಬಿದ್ದು ತಂದೆ ತಾಯಿ ಇಬ್ಬರು ಸತ್ತು ಹೋಗಿರುತ್ತಾರೆ.
ಈ ದೃಶ್ಯವನ್ನು ಕಂಡು ತಾನು ತನ್ನ ಮನಸ್ಸಿನ ಸಮತೋಲನವನ್ನು ಕಳೆದುಕೊಳ್ಳುತ್ತಾಳೆ ಹುಚ್ಚಿಯಾಗಿ ಬಿಡುತ್ತಾಳೆ ಅಳುತ್ತಾಳೆ ರೋಧಿಸುತ್ತಾಳೆ ಜೀವನ ಅಂದರೆ ಹೀಗೆ ಕೆಲವರು ಬಾಲ್ಯದಲ್ಲಿ ಸಾಯುತ್ತಾರೆ ಕೆಲವರು ಮಧ್ಯಮ ವಯಸ್ಸಿಗೆ ಬಂದು ಸಾಯುತ್ತಾರೆ.
ಕೆಲವರು ಪ್ರೌಢಾವಸ್ಥೆಗೆ ಬಂದು ಸಾಯುತ್ತಾರೆ ಕೆಲವರು ವೃದ್ಧಾಪ್ಯದವರೆಗೆ ಬದುಕಿ ಸಾಯುತ್ತಾರೆ ಕೊನೆಯವರೆಗೆ ಯಾರು ಇರುವುದಿಲ್ಲ ಆಯಸ್ಸು ಇದ್ದಷ್ಟೇ ಬದುಕುತ್ತಾರೆ.
ಮುಗಿಯಲಾರದ ಕತೆ
ಸದಾಚಾರಿ ರಾಜನು ಹಲವಾರು ವರ್ಷಗಳ ನಂತರ ಕಾಯಿಲೆಯಿಂದ ಎಚ್ಚೆತ್ತುಕೊಳ್ಳುತ್ತಾನೆ ನಂತರ ರಾಜನಿಗೆ ರಾತ್ರಿ ಯಾದ ಮೇಲೆ ನಿದ್ದೆ ಬರುತ್ತಿರಲಿಲ್ಲ ಅದಕ್ಕಾಗಿ ಎಲ್ಲಾ ವೈದ್ಯರನ್ನು ಕರೆಸಿ ತಪಾಸಣೆ ಮಾಡಿಸುತ್ತಾರೆ ಯಾವುದೂ ಅಷ್ಟು ಪ್ರಯೋಜನವಾಗಲಿಲ್ಲ ಕೊನೆಗೆ ಒಬ್ಬ ಹಕೀಮ್ ರು ಹೇಳುತ್ತಾರೆ.
ದಿನನಿತ್ಯ ರಾಜರಿಗೆ ಒಂದು ಕತೆಯನ್ನು ಹೇಳಿ ನಂತರ ಇವರಿಗೆ ಚೆನ್ನಾಗಿ ನಿದ್ರೆ ಬರುತ್ತದೆ ಎಂದು ಸಲಹೆ ನೀಡುತ್ತಾನೆ ಅದರಂತೆಯೇ ಇವರು ದಿನನಿತ್ಯ ಕತೆ ಹೇಳಲು ಆರಂಭಿಸುತ್ತಾರೆ ಆ ರಾಜನ ಸಭೆಯಲ್ಲಿ ಇರುವ ಎಲ್ಲರೂ ದಿನನಿತ್ಯವೂ ಕಥೆ ಹೇಳಿ ಹೇಳಿ ಎಲ್ಲಾ ಕಥೆಗಳೂ ಮುಗಿದು ಹೋಗಿರುತ್ತವೆ.
ಮತ್ತೆ ರಾಜನಿಗೆ ಕಥೆ ಹೇಳಬೇಕು ಎಷ್ಟೇ ಕಥೆ ಹೇಳುತ್ತಿದ್ದರು ರಾಜನು ಮಾತ್ರ ಕಥೆಗಳು ಸಾಕು ಎಂದು ಹೇಳುತ್ತಿರಲಿಲ್ಲ ಕೊನೆಗೆ ಎಲ್ಲರೂ ಸೋತರು ಮಂತ್ರಿಯಾದವನು ಯೋಚಿಸುತ್ತಾನೆ ಏನು ಮಾಡುವುದು ಎಂದು ಊರಿನ ಆಚೆ ಇರುವ ಬಾಬಾ ಅವರನ್ನು ತನ್ನ ಪರಿಸ್ಥಿತಿ ವಿವರಿಸುತ್ತಾನೆ.
ಬಾಬಾ ಅವರು ನೀವೇನೂ ಚಿಂತೆ ಮಾಡಬೇಕಾದ ಅವಶ್ಯಕತೆಯಿಲ್ಲ ನಾನು ಬಂದು ಇವತ್ತು ಕಥೆ ಹೇಳುತ್ತೇನೆ ಎಂದು ಒಪ್ಪಿಕೊಳ್ಳುತ್ತಾರೆ ಕಥೆ ಹೇಳುವುದಕ್ಕಿಂತ ಮುಂಚೆಯೇ ರಾಜನಿಗೆ ತಮ್ಮ ನಿಯಮ ತಿಳಿಸುತ್ತಾರೆ ನನಗೆ ಯಾವುದೇ ಕಾರಣಕ್ಕೂ ಶಿಕ್ಷಿಸಬಾರದು ನನಗೆ ಕಥೆ ಹೇಳಬೇಡಿ ಎಂದು ಹೇಳಬಾರದು ನೀವೇ ಬಲವಂತವಾಗಿ ನಿಲ್ಲಿಸಿ ಎನ್ನುವ ವರೆಗೂ ನಾನು ಹೇಳುತ್ತೇನೆ ಎನ್ನುತ್ತಾರೆ.
ನಂತರ ಕಥೆ ಹೇಳಲು ಆರಂಭಿಸಿದರು ಒಂದು ಅರಣ್ಯದಲ್ಲಿ ಒಬ್ಬ ಬೇಟೆಗಾರನು ಇದ್ದನು ಅವನು ಯಾವುದೇ ಮೃಗಾಗಳಿಗೆ ಹೆದರುತ್ತಿರಲಿಲ್ಲ ಆದರೆ ಅವನು ಹಕ್ಕಿಗಳಿಗೆ ಹೆದರುತ್ತಿದ್ದನು ಬೇಟೆಗಾರನು ದವಸ ಧಾನ್ಯಗಳು ಕಾಳುಗಳನ್ನು ತೆಗೆದುಕೊಂಡು ಗುಡಿಸಲಿನಲ್ಲಿ ಇಡುತ್ತಿದ್ದನು ಆದರೆ ಹಕ್ಕಿಗಳು ಮಾತ್ರ ಎಲ್ಲಾ ಕಾಳುಗಳು ತೆಗೆದುಕೊಂಡು ಹೋಗುತ್ತಿದ್ದೆವು.
ಇದರಿಂದ ಬೇಟೆಗಾರನು ಚಿಂತಿತನಾಗಿ ನಂತರ ಧಾನ್ಯಗಳಿಗೆ ಒಂದು ಕೊಠಡಿಯನ್ನು ನಿರ್ಮಿಸಿ ಯಾವುದೇ ರೀತಿಯ ದಾರಿ ಇರಬಾರದು ಅ ರೀತಿ ವ್ಯವಸ್ಥೆ ಮಾಡಿದ ಆದರೂ ಕೂಡ ಹಕ್ಕಿಗಳು ಸಣ್ಣ ಒಂದು ತೂತುಗಳನ್ನು ಮಾಡಿ ಕೊಂಡವು ನಂತರ ಹಕ್ಕಿಗಳು ಮಾಡಿದ ಕಿಂಡಿ ಎಷ್ಟು ಇತ್ತು ಎಂದರೆ ಒಂದು ಹಕ್ಕಿ ಮಾತ್ರ ಬರುವಂತೆ ಇತ್ತು ನಂತರ ಈ ರಹಸ್ಯ ಎಲ್ಲ ಹಕ್ಕಿಗಳಿಗೂ ತಿಳಿಯಿತು.
ಕಾಳುಗಳು ಈ ಕೊಠಡಿಯಲ್ಲಿದೆ ಎಂದು ಒಂದು ಹಕ್ಕಿ ಬಂತು ಕಾಳನ್ನು ಎತ್ತಿಕೊಂಡು ಹೋಯಿತು ನಂತರ ಎರಡನೆಯ ಹಕ್ಕಿ ಬಂತು ಅದು ಕಾಳು ತೆಗೆದುಕೊಂಡು ಹೋಯಿತು ನಂತರ ಮೂರನೇ ಹಕ್ಕಿಯೂ ಬಂತು ಕಾಳು ತೆಗೆದುಕೊಂಡು ಹೋಯಿತು ಮತ್ತೆ ನಾಲ್ಕನೆಯ ಹಕ್ಕಿಯೂ ಬಂತು ಕಾಳು ಎತ್ತಿಕೊಂಡು ಹೋಯಿತು ಮತ್ತೆ ಐದನೆಯ ಹಕ್ಕಿ ಬಂತು ಕಾಳು ತೆಗೆದುಕೊಂಡು ಹೋಯಿತು ರಾಜಾ ಕೇಳಿದನು.
ಇನ್ನೂ ಎಷ್ಟು ಹಕ್ಕಿಗಳು ಇವೆ ಎಂದಾಗ ರಾಜರೇ ನಾನು ಹೇಳಿರುವುದು ಐದು ಹಕ್ಕಿಗಳು ಮಾತ್ರ ಒಂದು ಸಾವಿರದಲ್ಲಿ ಇನ್ನು ಉಳಿದ ಹಕ್ಕಿಗಳು ಇವೆ ಎಂದು ಹೇಳುತ್ತಾರೆ. ಆಗ ರಾಜನಿಗೆ ತಲೆ ಚಿಟ್ಟುಹಿಡಿದು ಸಾಕು ಸಾಕು ನಿಮ್ಮ ಕಥೆ ಸಾಕು ನಿಲ್ಲಿಸಿ ನಾನು ಹೋಗಿ ಮಲಗುತ್ತೇನೆ ಎಂದು ಮಲಗುತ್ತಾನೆ.
ಪ್ರಪಂಚಕ್ಕೆ ಅಂಟಿರಬಾರದು
ಹಳ್ಳಿಯವನೊಬ್ಬ ನಗರಕ್ಕೆ ಕೆಲವು ವಸ್ತುಗಳನ್ನು ತೆಗೆದುಕೊಂಡು ಹೋಗಲು ಬಂದಿದ್ದನು ನಂತರ ನಗರದಲ್ಲಿದ್ದ ಸೌಂದರ್ಯವನ್ನು ಕಂಡು ತನ್ನನ್ನು ತಾನೇ ಮರೆತ ಅವನಿಗೆ ನಾಟಕವೆಂದರೆ ಬಲೆ ಹುಚ್ಚು ಅದಕ್ಕೆ ನಾಟಕ ನೋಡೋಣವೆಂದು ಹೋದನು.
ನಾಟಕ ನೋಡುತ್ತಾ ನೋಡುತ್ತಾ ಮೈಮರೆತನು ಇದನ್ನು ಗಮನಿಸಿದ ಕಳ್ಳರು ಇವನನ್ನೇ ಗಮನಿಸುತ್ತಿದ್ದರು ನಾಟಕದ ಪಾತ್ರಗಳು ಅಭಿನಯ ಹಾಡು ನೋಡುತ್ತಾ ಮೈ ಮರೆತು ಬಿಟ್ಟಿದ್ದ ಇದೇ ಸಂದರ್ಭ ಕಾಯುತ್ತಿದ್ದ ಕಳ್ಳರು ಅವನಲ್ಲಿ ಇದ್ದ ಹಣವನ್ನು ಕಳ್ಳತನ ಮಾಡಿದರು ನಾಟಕ ಮುಗಿದ ಮೇಲೆ ನೋಡಿದ ಹಣವೆಲ್ಲ ಕಳ್ಳತನವಾಗಿತ್ತು.
ಈ ಪ್ರಪಂಚದ ನಾಟಕ ನೋಡುವಲ್ಲಿ ಮೈಮರೆತು ನಾವು ಆಯುಷ್ಯವನ್ನು ಮುಗಿಯುವ ಮುನ್ನವಾದರೂ ಎಚ್ಚೆತ್ತುಕೊಳ್ಳಬೇಕು ಕಾಲ ಮೀರಿದರೆ ಮುಗಿಯಿತು ಕಾಲ ಹಿಂತಿರುಗಿ ಬರಲಾದರದು ಕಮಲದ ಹೂವು ಕೆಸರಿನಲ್ಲಿಯೇ ಹುಟ್ಟುತ್ತದೆ ಆದರೆ ಅದು ಎಂದಿಗೂ ಕೆಸರಿನಲ್ಲಿ ಇರುವುದಿಲ್ಲ ನೀರಿನ ಮೇಲೆಯೇ ಇರುತ್ತದೆ ಹಾಗೆ ನಾವು ಕೂಡ ಪ್ರಪಂಚದಲ್ಲಿ ಇದ್ದರೂ ಪ್ರಪಂಚಕ್ಕೆ ಅಂಟಿರಬಾರದು ಇದೇ ಬದುಕಿನ ರೀತಿ ನಾವು ಬದುಕೋಣ.